10ನೇ ತರಗತಿ ಅಧ್ಯಾಯ-5 ಧಾತುಗಳ ಆವರ್ತನೀಯ ವರ್ಗೀಕರಣ ವಿಜ್ಞಾನ ನೋಟ್ಸ್, Class 10 Science Chapter 5 Notes Question Answer Mcq Pdf in Kannada Medium 2024 Kseeb Solution For Class 10 Science Chapter 5 Notes in Kannada dhatugala avartaniya vargikarana notes class 10th science chapter 5 question answer
10th Standard Science Chapter 5 Notes in Kannada
ಪಠ್ಯದಲ್ಲಿರುವ ಪ್ರಶೋತ್ತರಗಳು
2. ಡೋಬರೈನರ್ ರವರ ವರ್ಗೀಕರಣದ ಮಿತಿಗಳು ಯಾವುವು ?
ಆ ಕಾಲದಲ್ಲಿ ತಿಳಿದಿದ್ದ ಧಾತುಗಳಲ್ಲಿ ಕೇವಲ ಮೂರು ತ್ರಿವಳಿಗಳನ್ನು ಮಾತ್ರ ಗುರುತಿಸಲು ಸಾಧ್ಯವಾಯಿತುಇತರ ಧಾತುಗಳಿಗೆ ಈ ನಿಯಮ ಅನ್ವಯವಾಗಲಿಲ್ಲ.
3. ನ್ಯೂಲ್ಯಾಂಡ್ ರ ಅಷ್ಟಕಗಳ ನಿಯಮದ ಮಿತಿಗಳಾವುವು ?
ಅಷ್ಟಕಗಳ ನಿಯಮವು ಕೇವಲ ಕ್ಯಾಲ್ಸಿಯಂ ವರೆಗೆ ಮಾತ್ರ ಅನ್ವಯಿಸುತ್ತದೆಕ್ಯಾಲ್ಸಿಯಂ ನಂತರದ ಪ್ರತಿ ಎಂಟನೆಯ ಧಾತುವಿನ ಗುಣಗಳು ಮೊದಲನೆ ಧಾತುವಿನ ಗುಣಗಳಂತೆ ಇರುವುದಿಲ್ಲ.
ನ್ಯೂಲ್ಯಾಂಡ್ ನಂತರ ಅವಿಷ್ಕಾರವಾದ ಧಾತುಗಳು ಅಷ್ಟಕಗಳ ನಿಯಮಕ್ಕೆ ಸರಿ ಹೊಂದಲಿಲ್ಲ. ಹಗುರವಾದ ಧಾತುಗಳಿಗೆ ಮಾತ್ರ ಈ ನಿಯಮವು ಅನ್ವಯವಾಗುತ್ತದೆ.
4.ಈ ಕೆಳಗಿನ ಧಾತುಗಳ ಆಕ್ಸೆಡ್ ಗಳ ಸೂತ್ರಗಳನ್ನು ಊಹಿಸಲು ಮೆಂಡಲೀವ್ ರವರ ಆವರ್ತಕ ಕೋಷ್ಟಕ ಬಳಸಿ
5. ಮೆಂಡಲೀವ್ ತನ್ನ ಆವರ್ತಕ ಕೋಷ್ಟಕದಲ್ಲಿ ಖಾಲಿ ಜಾಗವನ್ನು ಬಿಟ್ಟ ನಂತರದಲ್ಲಿ ಗ್ಯಾಲಿಯಂನ ಜೊತೆಗೆ ಇನ್ನೂ ಯಾವ ಧಾತುಗಳನ್ನು ಪತ್ತೆ ಮಾಡಲಾಯಿತು ?( ಯಾವುದಾದರೂ ಎರಡು )
ಸ್ಯಾಂಡಿಯಂ ಮತ್ತು ಜರ್ಮೇನಿಯಂ
6.ಮೆಂಡಲೀವ್ ರವರು ತಮ್ಮ ಆವರ್ತಕ ಕೋಷ್ಟಕದ ರಚನೆಗೆ ಉಪಯೋಗಿಸಿದ ಮಾನದಂಡಗಳು ಯಾವುವು ?
ಮೇಂಡಲೀವ್ ರವರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ ಜೋಡಿಸಿದರು.ಅದರ ಜೊತೆಗೆ ಒಂದೇ ರೀತಿಯ ಭೌತ ಮತ್ತು ರಾಸಾಯನಿಕ ಗುಣಗಳಿರುವ ಧಾತುಗಳು ಆವರ್ತನೀಯವಾಗಿ ಪುನರಾವರ್ತನೆಗೊಂಡವು.
7.ನೀವು ರಾಜಾನಿಲಗಳನ್ನು ಬೇರೆ ಗುಂಪಿನಲ್ಲಿಡಬೇಕೆಂದು ಏಕೆ ಯೋಚಿಸುವಿರಿ ?
ರಾಜಾನಿಲಗಳು ಜಡ ಅನಿಲಗಳಾಗಿವೆ ಮತ್ತು ಅವುಗಳ ಗುಣ ಲಕ್ಷಣಗಳು ಉಳಿದ ಎಲ್ಲಾ ಧಾತುಗಳಿಗಿಂತ ವಿಭಿನ್ನವಾಗಿರುವ ಕಾರಣ ಅವುಗಳನ್ನು ಪ್ರತ್ಯೇಕವಾಗಿಡಬೇಕು
8. ಮೆಂಡಲೀವ್ ರವರ ಆವರ್ತಕ ಕೋಷ್ಟಕದಲ್ಲಿದ್ದ ವಿವಿಧ ಅಸಂಗತತೆಗಳನ್ನು ಆಧುನಿಕ ಆವರ್ತಕ ಕೋಷ್ಟಕವು ಹೇಗೆ ತೆಗೆದು ಹಾಕಿತು ?
ಮೇಂಡಲೀವ್ ರವರ ಆವರ್ತಕ ಕೋಷ್ಟಕದಲ್ಲಿ ಹೈಡೋಜನ್ ಗೆ ಸೂಕ್ತವಾದ ಸ್ಥಾನವನ್ನು ಕಲ್ಪಿಸಿಲ್ಲ, ಮತ್ತು ಪರಮಾಣು ರಾಶಿಗಳು ಒಂದು ಧಾತುವಿನಿಂದ ಇನ್ನೊಂದು ಧಾತುವಿಗೆ ನಿಯತವಾಗಿ ಏರಿಕೆ ಕ್ರಮದಲ್ಲಿ ಕಂಡುಬರುವುದಿಲ್ಲ.ಮೋಸೆಯವರು ಧಾತುಗಳನ್ನು ವರ್ಗೀಕರಿಸುವಾಗ ಪರಮಾಣು ರಾಶಿಗಿಂತ ಪರಮಾಣು ಸಂಖ್ಯೆ ಹೆಚ್ಚು ಮೂಲಭೂತ ಲಕ್ಷಣವಾಗಿದೆ ಎಂಬುದನ್ನು ಕಂಡುಕೊಂಡರು.ಮತ್ತು ಧಾತುಗಳನ್ನು ಈ ರೀತಿ ಪರಮಾಣು ಸಂಖ್ಯೆಯ ಏರಿಕೆಯ ಕ್ರಮದಲ್ಲಿ ಬರೆದಾಗ ಅವುಗಳ ಗುಣಗಳು ಆವರ್ತನೀಯವಾಗಿ ಪುನರಾವರ್ತನೆಯಾಗುತ್ತವೆ ಎಂದು ತಿಳಿಸಿದರು. ಈ ನಿಯಮವು ಮೆಂಡಲೀವ್ ರವರ ಆವರ್ತಕ ಕೋಷ್ಟಕದಲ್ಲಿದ್ದ ಅಸಂಗತತೆಗಳನ್ನು ತೆಗೆದು ಹಾಕಿತು.
9, ಮೆಗ್ನಿಷಿಯಂ ನಂತೆಯೇ ರಾಸಾಯನಿಕ ಕ್ರಿಯೆಗಳನ್ನು ತೋರಿಸುವ ಎರಡು ಧಾತುಗಳನ್ನು ಊಹಿಸಿ ನಿಮ್ಮ ಆಯ್ಕೆಗೆ ಆಧಾರವೇನು?
ಕ್ಯಾಲ್ಸಿಯಂ (Ca)ಮತ್ತು ಸ್ನಾನ್ಸಿಯಂ (Sr), ಈ ಮೂರು ಧಾತುಗಳಲ್ಲಿ ( Mg,Ca ಮತ್ತು Sr ) ವೇಲೆನ್ಸ್ ಇಲೆಕ್ಟ್ರಾನ್ ಗಳ ಸಂಖ್ಯೆಯು 2 ಆಗಿರುತ್ತದೆ. ಧಾತುಗಳ ರಾಸಾಯನಿಕ ಗುಣಗಳು ವೇಲೆನ್ಸ್ ಇಲೆಕ್ಟ್ರಾನ್ ಗಳನ್ನು ಅವಲಂಬಿಸಿರುವ ಕಾರಣ ಈ ಮೇಲಿನ ಮೂರೂ ಧಾತುಗಳು ಒಂದೇ ರೀತಿಯ ರಾಸಾಯನಿಕ ಕ್ರಿಯೆಗಳನ್ನು ತೋರಿಸುತ್ತವೆ.
10.ಇವುಗಳನ್ನು ಹೆಸರಿಸಿ.
ಅ) ಅತ್ಯಂತ ಹೊರಕವಚದಲ್ಲಿ ಒಂದೇ ಇಲೆಕ್ಟ್ರಾನ್ ಹೊಂದಿರುವ ಮೂರು ಧಾತುಗಳು : ಲಿಥಿಯಂ (i),ಸೋಡಿಯಂ (Na) ಮತ್ತು ಪೊಟ್ಯಾಷಿಯಂ (K)
ಆ) ಅತ್ಯಂತ ಹೊರಕವಚದಲ್ಲಿ ಎರಡು ಇಲೆಕ್ಟ್ರಾನ್ ಹೊಂದಿರುವ ಎರಡು ಧಾತು : ಮೆಗ್ನಿಷಿಯಂ (Mg)ಮತ್ತು ಕ್ಯಾಲ್ಸಿಯಂ (CA),
ಇ) ಪೂರ್ತಿ ತುಂಬಿರುವ ಹೊರಕವಚವನ್ನು ಹೊಂದಿರುವ ಮೂರು ಧಾತುಗಳು : ನಿಯಾನ್ (Ne),ಆರ್ಗಾನ್ (Ar) ಕ್ರಿಪ್ಟಾನ್
11.ಅ) ಲಿಥಿಯಂ ಸೋಡಿಯಂ ಪೊಟ್ಯಾಷಿಯಂ ಇವೆಲ್ಲವೂ ಲೋಹಗಳಾಗಿದ್ದು ನೀರಿನೊಂದಿಗೆ ವರ್ತಿಸಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಈ ಧಾತುಗಳ ಪರಮಾಣುಗಳಲ್ಲಿ ಏನಾದರು ಸಾಮ್ಯತೆಗಳಿವೆಯೇ ?
ಹೌದು, ಈ ಮೂರು ಧಾತುಗಳು ತಮ್ಮ ಹೊರಕವಚದಲ್ಲಿ ಕೇವಲ ಒಂದು ಇಲೆಕ್ಟ್ರಾನ್ ಮಾತ್ರ ಹೊಂದಿವೆ
ಆ) ಹೀಲಿಯಂ ಕ್ರಿಯಾಪಟುವಲ್ಲದ ಅನಿಲವಾಗಿದೆ ಮತ್ತು ನಿಯಾನ್ ಅತ್ಯಂತ ಕಡಿಮೆ ಕ್ರಿಯಾಪಟುತ್ವ ತೋರುತ್ತದೆ ಅವುಗಳ ಅಣುಗಳಲ್ಲಿ ಏನಾದರು ಸಾಮ್ಯತೆ ಇದೆಯೇ ?
ಹೀಲಿಯಂ ಮತ್ತು ನಿಯಾನ್ ಎರಡೂ ಧಾತುಗಳ ಹೊರ ಕವಚವು ಪೂರ್ತಿಯಾಗಿ ತುಂಬಿರುವ ಇಲೆಕ್ಟ್ರಾನ್ ಗಳನ್ನು ಹೊಂದಿದೆ.
12.ಆಧುನಿಕ ಆವರ್ತಕ ಕೋಷ್ಟಕದ ಮೊದಲ ಹತ್ತು ಧಾತುಗಳಲ್ಲಿ ಲೋಹಗಳಾವುವು ?
ಲಿಥಿಯಂ (Li) ಮತ್ತು ಬೆರಿಲಿಯಂ (Be),
13.ಆಧುನಿಕ ಆವರ್ತಕ ಕೋಷ್ಟಕದಲ್ಲಿನ ಸ್ಥಾನವನ್ನು ಆಧರಿಸಿ ಕೆಳಗಿನವುಗಳಲ್ಲಿ ಯಾವ ಧಾತು ಅತೀ ಹೆಚ್ಚು ಲೋಹೀಯ ಲಕ್ಷಣ ಹೊಂದಿದೆ ಎಂದು ನೀವು ಭಾವಿಸುತ್ತೀರಿ?
ಈ ಧಾತುಗಳಲ್ಲಿ (ಬೆರಿಲಿಯಂ ) Be ಉಳಿದ ಧಾತುಗಳಿಗಿಂತ ಆವರ್ತಕ ಕೋಷ್ಟಕದ ಎಡ ಭಾಗದಲ್ಲಿ ಕಂಡುಬರುವ ಕಾರಣ ಅದು ಅತಿ ಹೆಚ್ಚು ಲೋಹೀಯ ಗುಣ ಹೊಂದಿದೆ,
ಅಭ್ಯಾಸದ ಪ್ರಶೋತ್ತರಗಳು
10th Class Science Chapter 5 Question Answer in Kannada
1. ಆವರ್ತಕ ಕೋಷ್ಟಕದ ಆವರ್ತಗಳಲ್ಲಿ ಎಡದಿಂದ ಬಲಕ್ಕೆ ಹೋದಂತೆ ತೋರುವ ಪ್ರವೃತ್ತಿಗೆ ಸಂಬಂಧಿಸಿದಂತೆ ಇರುವ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಲ್ಲ.
c) ಪರಮಾಣುಗಳು ಹೆಚ್ಚು ಸುಲಭವಾಗಿ ತಮ್ಮ ಇಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುತ್ತವೆ.
2. X ಧಾತು XCIಸೂತ್ರ ಹೊಂದಿರುವ ಕ್ಲೋರೈಡನ್ನು ಉಂಟುಮಾಡುತ್ತದೆ. ಇದೊಂದು ಘನವಾಗಿದ್ದು ಉನ್ನತ ಕರಗುವ ಬಿಂದು ಹೊಂದಿದೆ,X ಹೆಚ್ಚಾಗಿ ಆವರ್ತಕ ಕೋಷ್ಟಕದಲ್ಲಿ ಈ ಧಾತುವಿನ ವರ್ಗಕ್ಕೇ ಸೇರಿದೆ.
ಬಿ) ಎಂಜಿ
3, ಯಾವ ಧಾತುವಿನಲ್ಲಿ
ಅ) ಎರಡು ಕವಚಗಳಿದ್ದು ಎರಡೂ ಕವಚಗಳು ಇಲೆಕ್ಟ್ರಾನ್ ಗಳಿಂದ ಪೂರ್ತಿಯಾಗಿ ತುಂಬಿದೆ. – ನಿಯಾನ್ (Ne)
ಆ) ಇಲೆಕ್ಟ್ರಾನ್ ವಿನ್ಯಾಸ 2,8,2 ಆಗಿದೆ. ಮೆಗ್ನಿಷಿಯಂ (Mg),
ಇ ) ಒಟ್ಟು ಮೂರು ಕವಚಗಳಿದ್ದು ವೇಲೆನ್ಸ್ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ ಗಳಿವೆ, ಸಿಲಿಕಾನ್ (Si)
ಈ) ಒಟ್ಟು ಎರಡು ಕವಚಗಳಿದ್ದು ವೇಲೆನ್ಸ್ ಕವಚದಲ್ಲಿ ಮೂರು ಇಲೆಕ್ಟ್ರಾನ್ ಗಳಿವೆ – ಬೋರಾನ್ (B)
ಉ) ಎರಡನೇ ಕವಚದಲ್ಲಿ ಮೊದಲನೇ ಕವಚದ ಎರಡರಷ್ಟು ಇಲೆಕ್ಟ್ರಾನ್ ಗಳಿವೆ ? ಕಾರ್ಬನ್ (1)
4.ಅ) ಆವರ್ತಕ ಕೋಷ್ಟಕದಲ್ಲಿ ಬೋರಾನ್ ನ ಗುಂಪಿನಲ್ಲಿರುವ ಎಲ್ಲಾ ಧಾತುಗಳ ಯಾವ ಗುಣಗಳು ಸಾಮಾನ್ಯವಾಗಿವೆ?
ಅವು ಒಂದೇ ಸಂಖ್ಯೆಯ ವೇಲೆನ್ಸ್ ಇಲೆಕ್ಟ್ರಾನ್ ಗಳನ್ನು ಹೊಂದಿವೆ.
ಆ) ಆವರ್ತಕ ಕೋಷ್ಟಕದಲ್ಲಿ ಫ್ಲೋರಿನ್ ನ ಗುಂಪಿನಲ್ಲಿರುವ ಎಲ್ಲಾ ಧಾತುಗಳ ಯಾವ ಲಕ್ಷಣಗಳು ಸಾಮಾನ್ಯವಾಗಿವೆ ?
ಅವು ಒಂದೇ ಸಂಖ್ಯೆಯ ವೇಲೆನ್ಸ್ ಇಲೆಕ್ಟ್ರಾನ್ ಗಳನ್ನು ಹೊಂದಿವೆ.
5. ಒಂದು ಧಾತುವಿನ ಇಲೆಕ್ಟ್ರಾನ್ ವಿನ್ಯಾಸ 2,8,7,
a) ಆ ಧಾತುವಿನ ಪರಮಾಣು ಸಂಖ್ಯೆ ಎಷ್ಟು ? -17
b) ಈ ಕೆಳಗಿನ ಯಾವ ಧಾತುಗಳು ರಾಸಾಯನಿಕವಾಗಿ ಸಮಾನಾಗಿವೆ ?(ಪರಮಾಣು ಸಂಖ್ಯೆಗಳನ್ನು ಆವರಣದಲ್ಲಿ ನೀಡಲಾಗಿದೆ),
F (9) .ಯಾಕೆಂದರೆ ಇದರ ಇಲೆಕ್ಟ್ರಾನ್ ವಿನ್ಯಾಸ -2,7,
6. ಆವರ್ತಕ ಕೋಷ್ಟಕದಲ್ಲಿ A,B,C ಈ ಮೂರೂ ಧಾತುಗಳ ಸ್ಥಾನವನ್ನು ಕೆಳಗೆ ತೋರಿಸಲಾಗಿದೆ.
A) ಲೋಹವೇ ಅಥವಾ ಅಲೋಹವೇ ?
ಅಲೋಹ
b) C ಹೆಚ್ಚು ಕ್ರಿಯಾಪಟುವಾಗಿದೆಯೇ ಅಥವಾ A ಗಿಂತ ಕಡಿಮೆ ಕ್ರಿಯಾಪಟುವೇ?
C ಯು A ಗಿಂತ ಕಡಿಮೆ ಕ್ರಿಯಾಪಟುತ್ವ ಹೊಂದಿದೆ.
c) C ಯು ಗಾತ್ರದಲ್ಲಿ B ಗಿಂತ ದೊಡ್ಡದೇ ಅಥವಾ ಚಿಕ್ಕದೇ ?
C ಯು B ಗಿಂತ ಗಾತ್ರದಲ್ಲಿ ಚಿಕ್ಕದು
d) A ಧಾತುವು ಕ್ಯಾಟಯಾನು ಅಥವಾ ಆನ್‌ಅಯಾನ್ ಗಳಲ್ಲಿ ಯಾವ ಆಯಾನ್ ನ್ನು ಉಂಟು ಮಾಡುತ್ತದೆ?
ಆನ್ ಅಯಾನ್ .
7. ನೈಟ್ರೋಜನ್ ( ಪರಮಾಣು ಸಂಖ್ಯೆ 7) ಮತ್ತು ರಂಜಕ ( ಪರಮಾಣು ಸಂಖ್ಯೆ 15) ಆವರ್ತಕ ಕೋಷ್ಟಕದ 15 ನೇ ವರ್ಗಕ್ಕೆ ಸೇರಿವೆ.ಈ ಎರಡೂ ಧಾತುಗಳ ಇಲೆಕ್ಟ್ರಾನಿಕ್ ವಿನ್ಯಾಸ ಬರೆಯಿರಿ. ಇವುಗಳಲ್ಲಿ ಯಾವುದು ಹೆಚ್ಚು ವಿದ್ಯುದೃಣೀಯ ? ಏಕೆ ?
ನೈಟ್ರೋಜನ್ ರಂಜಕಕ್ಕಿಂತ ಹೆಚ್ಚು ವಿದ್ಯುದೃಣೀಯವಾಗಿದೆ, ವರ್ಗದಲ್ಲಿ ಮೇಲಿನಿಂದ ಕೆಳಗೆ ಹೋದಂತೆ ಕವಚಗಳ ಸಂಖ್ಯೆ ಹೆಚ್ಚುತ್ತದೆ.ಅತ್ಯಂತ ಹೊರ ಕವಚದಲ್ಲಿರುವ ಇಲೆಕ್ಟ್ರಾನ್ ಗಳು ನ್ಯೂಕ್ಲಿಯಸ್ ನಿಂದ ತುಂಬಾ ದೂರದಲ್ಲಿರುವುದರಿಂದ ವೇಲೆನ್ಸ್ ಇಲೆಕ್ಟ್ರಾನ್ ಗಳು ಅನುಭವಿಸುವ ಪರಿಣಾಮಕಾರಿ ನೂಕಿಯಾ ಆವೇಶ ಕಡಿಮೆಯಾಗುತ್ತದೆ.ಹಾಗಾಗಿ ಅವುಗಳನ್ನು ಸುಲಭವಾಗಿ ಕಳೆದುಕೊಳ್ಳಬಹುದು, ಮತ್ತು ವಿದ್ಯುದೃಣೀಯತೆ ಕಡಿಮೆಯಾಗುತ್ತದೆ.
8. ಒಂದು ಪರಮಾಣುವಿನ ಇಲೆಕ್ಟ್ರಾನಿಕ್ ವಿನ್ಯಾಸವು ಆಧುನಿಕ ಆವರ್ತಕ ಕೋಷ್ಟಕದಲ್ಲಿ ಅದರ ಸ್ಥಾನದೊಂದಿಗೆ ಯಾವ ರೀತಿ ಸಂಬಂಧ ಹೊಂದಿದೆ ?
ಒಂದೇ ರೀತಿಯ ಇಲೆಕ್ಟ್ರಾನ್ ವಿನ್ಯಾಸ ಹೊಂದಿರುವ ಧಾತುಗಳನ್ನು ಆಧುನಿಕ ಆವರ್ತಕ ಕೋಷ್ಟಕದಲ್ಲಿ ಒಂದೇ ವರ್ಗದಲ್ಲಿ ಇಡಲಾಗಿದೆ, ವರ್ಗದಲ್ಲಿರುವ ಧಾತುಗಳ ಮೇಲೆನ್ಸ್ ಇಲೆಕ್ಟ್ರಾನ್ ಗಳ ಸಂಖ್ಯೆಯು ಒಂದೇ ಆಗಿರುತ್ತದೆ.
9.ಆಧುನಿಕ ಆವರ್ತಕ ಕೋಷ್ಟಕದಲ್ಲಿ ಕ್ಯಾಲ್ಸಿಯಂ ( ಪರಮಾಣು ಸಂಖ್ಯೆ 20 ) 12,19, 21 ಮತ್ತು 38 ಪರಮಾಣು ಸಂಖ್ಯೆ ಹೊಂದಿರುವ ಧಾತುಗಳಿಂದ ಸುತ್ತುವರಿಯಲ್ಪಟ್ಟಿದೆ. ಇವುಗಳಲ್ಲಿ ಯಾವುವು ಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಕ್ಯಾಲ್ಸಿಯಂ ಅನ್ನು ಹೋಲುತ್ತದೆ ?
ಪರಮಾಣು ಸಂಖ್ಯೆ 12 ಹೊಂದಿರುವ ಧಾತು ಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಕ್ಯಾಲ್ಸಿಯಂ ನ್ನು ಹೋಲುತ್ತದೆ.ಏಕೆಂದರೆ ಎರಡೂ ಧಾತುಗಳಲ್ಲಿರುವ ವೇಲೆನ್ಸ್ ಇಲೆಕ್ಟ್ರಾನ್ ಗಳ ಸಂಖ್ಯೆ ಒಂದೇ ಆಗಿದೆ (2),
10.ಮೆಂಡಲೀವ್ ರವರ ಆವರ್ತಕ ಕೋಷ್ಟಕ ಮತ್ತು ಆಧುನಿಕ ಆವರ್ತಕ ಕೋಷ್ಟಕದ ಧಾತುಗಳ ಜೋಡಣೆಯನ್ನು ಹೋಲಿಕೆ ಮಾಡಿ ಮತ್ತು ವ್ಯತ್ಯಾಸಗಳನ್ನು ತಿಳಿಸಿ,