10ನೇ ತರಗತಿ ಕನ್ನಡ ಉದಾತ್ತ ಚಿಂತನೆಗಳು ನೋಟ್ಸ್ ಪ್ರಶ್ನೋತ್ತರಗಳು,10th Standard Udatta Chintanegalu Kannada Notes Question Answer Mcq Pdf Download in Kannada Medium 2024 Kseeb Solutions For Class 10 Udatta Chintanegalu Notes Pdf Karnataka State Syllabus Udatta Chintanegalu Puraka Pata Notes Question Answer Summary
ಉದಾತ್ತ ಚಿಂತನೆಗಳು Notes Pdf
ತರಗತಿ : 10ನೇ ತರಗತಿ
ಪಠ್ಯಪೂರಕ ಅಧ್ಯಯನ-1 : ಉದಾತ್ತ ಚಿಂತನೆಗಳು
10th Class Udatta Chintanegalu Kannada Notes question Answer Pdf
೧. ಅಂಬೇಡ್ಕರ್
ಸ್ವಾತಂತ್ರ್ಯ ಎಂದರೇನು ? ಮುಕ್ತಸಮಾಜದ ವ್ಯವಸ್ಥೆಗೆ ಅದು ಏಕೆ ಆಗತ್ಯ ? ಸ್ವಾತಂತ್ರ್ಯ ಎರಡು ಬಗೆಯಾಗುತ್ತದೆ ; ಪೌರ ಸ್ವಾತಂತ್ರ್ಯ ಹಾಗೂ ರಾಜಕೀಯ ಸ್ವಾತಂತ್ರ್ಯ , ಪೌರ ಸ್ವಾತಂತ್ರ್ಯ ಈ ಅಂಶಗಳನ್ನು ಹೊಂದಿರುತ್ತದೆ . ( ೧ ) ಚಲವಲನ ಸ್ವಾತಂತ್ರ್ಯ – ಸೂಕ್ತ ನ್ಯಾಯಾಂಗ ಕ್ರಮವಿಲ್ಲದೆ ವ್ಯಕ್ತಿಯನ್ನು ಬಂಧಿಸುವಂತಿಲ್ಲದ್ದು , ( ೨ ) ವಾಕ್ ಸ್ವಾತಂತ್ರ್ಯ ( ಆಲೋಚನೆ , ಓದು , ಬರಹ , ಚರ್ಚೆ ಇವುಗಳ ಸ್ವಾತಂತ್ರ್ಯ ಇದರಲ್ಲೇ ಸೇರುತ್ತದೆ ) ; ಮತ್ತು ( ೩ ) ಕ್ರಿಯಾ ಸ್ವಾತಂತ್ರ್ಯ
ಮೊದಲನೆಯ ಬಗೆಯ ಸ್ವಾತಂತ್ರ್ಯ ಮೂಲಭೂತವಾದದ್ದು , ಮೂಲ ಸ್ವರೂಪ ಮಾತ್ರದ್ದಲ್ಲ . ಅದು ಅತ್ಯಂತ ಅಗತ್ಯವಾದದ್ದೂ ಹೌದು . ಆದರ ಮೌಲ್ಯದ ಬಗ್ಗೆ ಯಾವುದೇ ಸಂದೇಹಕ್ಕೆ ಎಡೆಯಿಲ್ಲ . ಎರಡನೆಯ ಬಗೆಯ ಸ್ವಾತಂತ್ರ್ಯವನ್ನು ಅಭಿಪ್ರಾಯ ಸ್ವಾತಂತ್ರ್ಯ ಎಂದೂ ಹೇಳಬಹುದು , ಅದು ಅನೇಕ ಕಾರಣಗಳಿಂದ ಮಹತ್ವದ್ದಾಗುತ್ತದೆ . ಬೌದ್ಧಿಕ , ನೈತಿಕ , ರಾಜಕೀಯ ಸಾಮಾಜಿಕ ಪ್ರಗತಿಗೆ ಅದು ಅತ್ಯಗತ್ಯ ಪರಿಸ್ಥಿತಿ . ಅದು ಇಲ್ಲದ ಕಡೆ ಚಲನಶೀಲತೆ ಕುಂದುತ್ತದೆ .
ಕ್ರಿಯಾ ಸ್ವಾತಂತ್ರ್ಯವೆಂದರೆ , ತನಗೆ ಇಷ್ಟ ಬಂದ ಕೆಲಸ ಮಾಡಲು ಇರುವ ವ್ಯಕ್ತಿಗೆ ಅವಕಾಶವಿರುವುದು , ಅದು ಆದು ನಿರ್ದಿಷ್ಟ ಕಾರ್ಯಗಳನ್ನು ಈ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲದ ಕಡೆ ಸ್ವಾತಂತ್ರ್ಯವೂ ಇರುವುದಿಲ್ಲ , ಶೋಷಣೆ ಎಲ್ಲಿ ಇಲ್ಲವಾಗಿದೆಯೋ ಒಂದು ವರ್ಗವು ಇನ್ನೊಂದು ವರ್ಗವನ್ನು ತುಳಿಯುತ್ತಿಲ್ಲವೋ , ಎಲ್ಲಿ ನಿರುದ್ಯೋಗವಿಲ್ಲವೋ , ಬಡತನವಿಲ್ಲವೋ , ಎಲ್ಲಿ ತನ್ನ ಕೆಲಸದ ಫಲವಾಗಿ ತನ್ನ ಕೆಲಸ , ಮನೆ , ಆಹಾರಗಳನ್ನು ಕಳೆದುಕೊಂಡು ಬಿಡುವ ಭೀತಿ ವ್ಯಕ್ತಿಗೆ ಇರುವುದಿಲ್ಲವೋ ಅಲ್ಲಿ ನಿಜವಾದ ಕ್ರಿಯಾ ಸ್ವಾತಂತ್ರ್ಯ , ಇದೆ ಎಂದು ಹೇಳಬಹುದು .
ಪರಿಣಾಮಕಾರಿಯಾದ ಸಾಮರ್ಥ್ಯವಾಗಬೇಕು . ಮಹಾಕಾವಿಕವಾಗಿ ದೃಢ ಸಾಲದು , ವಾಸ್ತವಿಕವಾಗಿ ಕೂಡ ತಾನಾಗಿ , ಎಲ್ಲ ಬಗೆಯ ರಾಜಕೀಯ ಸ್ವಾತಂತ್ರ್ಯ ಇರುವುದು ವ್ಯಕ್ತಿಗೆ ಶಾಸನಗಳನ್ನು ರಚಿಸುವುದರಲ್ಲಿ , ಸರಕಾರಗಳ ಸ್ಥಾಪನೆ , ವಿಸರ್ಜನೆಗಳಲ್ಲಿ ಪಾಲು ಇರುವ ಪಕ್ಕಿನಲ್ಲಿ , ಸರಕಾರ ಇರುವುದಾದರೂ ಜನರಿಗೆ ಜೀವನ , ಸ್ವಾತಂತ್ರ್ಯ , ಸಂತೋಷಾನ್ವೇಷಣೆಗಳನ್ನು ಒದಗಿಸಿ ಕೊಡುವ ಸಲುವಾಗಿ , ಆದ್ದರಿಂದ ಸರಕಾರವು ಯಾರನ್ನು ರಕ್ಷಿಸುವುದು ತನ್ನ ಕರ್ತವ್ಯವಾಗಿದೆಯೋ , ಆ ಜನರಿಂದಲೇ ತನ್ನ ಅಧಿಕಾರವನ್ನೂ ಬಲವನ್ನೂ ಪಡೆದುಕೊಳ್ಳಬೇಕಾಗುತ್ತದೆ . ಆಳಲ್ಪಡುವವರ ಸಮ್ಮತಿಯಿಂದಲೇ ಸರಕಾರದ ಅಸ್ತಿತ್ವ , ಅಧಿಕಾರ ಮತ್ತು ಶಕ್ತಿ ಎಂದು ಹೇಳಿದಾಗ ಇರುವ ಅರ್ಥ ಇದೇ . ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವುದು ಮಾನವ ವ್ಯಕ್ತಿತ್ವ ಮತ್ತು ಸಮಾನತೆಗಳ ತತ್ತ್ವದಿಂದ ಅನುಗಮನ ಮಾಡಿದ ತತ್ತ್ವವೇ ಸರಿ . ಏಕೆಂದರೆ ರಾಜಕೀಯವಾದ ಸಮಸ್ತ ಅಧಿಕಾರವೂ ಜನತೆಯಿಂದ ಬರುತ್ತದೆ . ತಮ್ಮ ಸಾರ್ವಜನಿಕವಾದ ಹಾಗೂ ಖಾಸಗಿಯಾದ ಜೀವನವನ್ನು ನಿರ್ದೇಶಿಸುವ , ನಿಯಂತ್ರಿಸುವ ಸಾಮರ್ಥ್ಯವನ್ನು ಅವರು ತಾವೇ ಹೊಂದಿರುತ್ತಾರೆಯೇ ಹೊರತು ಬೇರೆ ಯಾರೂ ಅಲ್ಲ . ಎಂದು ಇದರ ಅರ್ಥವಾಗುತ್ತದೆ .
ಮುಕ್ತಸಮಾಜ ವ್ಯವಸ್ಥೆಯ ಈ ಎರಡು ಮೂಲ ಸಿದ್ಧಾಂತಗಳೂ ಪರಸ್ಪರ ಸಂಬಂಧಿಸಿವೆ . ಅವುಗಳನ್ನು ಬೇರ್ಪಡಿಸುವುದು ಸಾಧ್ಯವಿಲ್ಲ , ಮೊದಲನೆಯ ಸಿದ್ಧಾಂತವನ್ನು ಒಪ್ಪಿಕೊಂಡೊಡನೆ ಎರಡನೆಯ ಸಿದ್ಧಾಂತವು ತನಗೆ ತಾನೇ ಅನುಸರಿಸಿ ಬರುತ್ತದೆ . ಮಾನವ ವ್ಯಕ್ತಿತ್ವದ ಪಾವಿತ್ರ್ಯವನ್ನು ಒಪ್ಪಿಕೊಂಡರೆ , ಸ್ವಾತಂತ್ರ್ಯ , ಸಮಾನತೆ ಮತ್ತು ಸೋದರತಗಳ ಅಗತ್ಯವನೂ , ಮಕಿತ ಏಕಾಸಕ ಶಕ ಪರಿಸ್ಥಿತಿ ಎಂದು ಒಪ್ಪಿಕೊಳಲೇಬೇಕಾಗುತ್ತದೆ .
೨. ಗಾಂಧೀಜಿ
ಅಂದವಾದ ಅಕ್ಷರ , ಒಳ್ಳೆಯ ಬರೆವಣಿಗೆ , ಶಿಕ್ಷಣದ ಅವಶ್ಯಕ ಅಂಶವಲ್ಲವೆಂಬ ಭಾವನೆ ನನಗೆ ಹೇಗೆ ಬಂತೋ ಕಾಣೆ , ಇಂಗ್ಲೆಂಡ್‌ಗೆ ಹೋಗುವವರೆಗೆ ನನ್ನಲ್ಲಿ ಇದೇ ಭಾವನೆ ಇತ್ತು . ಅನಂತರ ದಕ್ಷಿಣ ಆಫ್ರಿಕಾಕ್ಕೆ ಹೋದ ಮೇಲೆ , ಅಲ್ಲಿ ಸುಶಿಕ್ಷಿತ ಯುವಕರ ಮತ್ತು ವಕೀಲರ ಮುತ್ತು ಪೋಣಿಸಿದಂತಿದ್ದ ಸುಂದರ ಬರೆವಣಿಗೆ ನೋಡಿ , ನನಗೆ ನಾಚಿಕೆಯೂ ಪಶ್ಚಾತ್ತಾಪವೂ ಉಂಟಾಯಿತು . ಕೆಟ್ಟ ಅಕ್ಷರದ ಬರೆವಣಿಗೆ ಅಪಕ್ವ ಮತ್ತು ಅಪೂರ್ಣ ಶಿಕ್ಷಣದ ಚಿಹ್ನೆ ಎಂದು ನಾನು – ಅರಿತೆನು , ಈಚೆಗೆ ನನ್ನ ಬರಹವನ್ನು ತಿದ್ದಿಕೊಳ್ಳಬೇಕೆಂದು ಪ್ರಯತ್ನಿಸಿದೆ . ಸುಟ್ಟಮಡಕೆಗೆ ಹಸಿಮಣ್ಣನ್ನು ಮೆತ್ತಲು ಸಾಧ್ಯವೆ ? ಆ ವೇಳೆಗೆ ಕಾಲ ಮೀರಿ ಹೋಗಿತ್ತು . ಚಿಕ್ಕವಯಸ್ಸಿನಲ್ಲಿ ಅಸಡ್ಡೆ ಮಾಡಿದುದನ್ನು ತಿದ್ದಿಕೊಳ್ಳಲು ಆಗಲಿಲ್ಲ . ನನ್ನ ಉದಾಹರಣೆಯಿಂದ ಒಳ್ಳೆಯ ಬರೆವಣಿಗೆ ಉತ್ತಮ ಶಿಕ್ಷಣದ ಅವಶ್ಯವಾದ ಅಂಶವೆಂಬುದನ್ನು ಪ್ರತಿಯೊಬ್ಬ ಯುವಕನೂ , ಯುವತಿಯೂ ತಿಳಿದುಕೊಳ್ಳಲಿ .
ರಸ್ಕಿನ್‌ನ “ ಅನ್‌ಟು ದಿಸ್ ಲಾಸ್ಟ್ ” ಎಂಬ ಪುಸ್ತಕವನ್ನು ಓದಲು ಪ್ರಾರಂಭಿಸಿದುದೇ ತಡ , ಅದನ್ನು ಕೆಳಗಿಳಿಸಲು ಸಾಧ್ಯವಾಗಲಿಲ್ಲ . ಅದು ನನ್ನ ಮನಸ್ಸನ್ನು ಸೆರೆಹಿಡಿಯಿತು . ಆ ಪುಸ್ತಕದಲ್ಲಿ ಹೇಳಿದ್ದ ಧೈಯಗಳಿಗನುಸಾರವಾಗಿ ನನ್ನ ಜೀವನವನ್ನು ನನ್ನ ವಿದ್ಯಾಭ್ಯಾಸದ ಕಾಲದಲ್ಲಿ ಪಠ್ಯಪುಸ್ತಕಗಳ ಹೊರತು ಮತ್ತೇನನ್ನೂ ಓಡಲಿಲ್ಲವೆಂದು ಹೇಳಬಹುದು . ನಾನು ಜೀವನದ ಕರ್ಮರಂಗವನ್ನು ಪ್ರವೇಶಿಸಿದ ಮೇಲೆ , ಏನನ್ನೂ ಓದಲು ನನಗೆ ಸಮಯವೆ ದೊರೆಯಲಿಲ್ಲ . ಆದುದರಿಂದ ನನಗೆ ಹೆಚ್ಚಾದ ಪುಸ್ತಕ ಜ್ಞಾನವಿದೆಯೆಂದು ಹೇಳಲಾರೆ . ನನ್ನ ಮಿತವಾದ ವ್ಯಾಸಂಗ ನಾನು ಓದಿದುದನ್ನು ಚೆನ್ನಾಗಿ ಅರಗಿಸಿಕೊಳ್ಳಲು ಇವುಗಳ ಪೈಕಿ , ಬಾಳಿನಲ್ಲಿ ತತ್‌ಕ್ಷಣ ಪರಿಣಾಮಕಾರಿಯಾದ ಬದಲಾವಣೆಯನ್ನು ಮಾಡಿದುದು ‘ ಅನ್‌ಟು ದಿಸ್ ಲಾಸ್ಟ್ ‘ ಎಂಬ ಪುಸ್ತಕ , ಅನಂತರ ನಾನು ಆ ಪುಸ್ತಕವನ್ನು ಸರ್ವೋದಯವೆಂಬ ಗುಜರಾತಿ ( ಭಾಷೆ ) ಗೆ ಅನುವಾದ ಮಾಡಿದೆ .
“ ಅನ್‌ಟು ದಿಸ್ ಲಾಸ್ಟ್ ” ಗ್ರಂಥದ ಸಿದ್ಧಾಂತಗಳನ್ನು ನಾನು ಹೀಗೆ ತಿಳಿದೆ .
೧. ಎಲ್ಲರ ಒಳ್ಳೆಯದರಲ್ಲಿಯೇ ನಮ್ಮ ಒಳ್ಳೆಯದು ಅಡಗಿದೆ .
೨. ವಕೀಲನ ಕೆಲಸಕ್ಕೆ ಇರುವ ಬೆಲೆಯೇ ಕ್ಷೌರಿಕನ ಕೆಲಸಕ್ಕೂ ಇದೆ . ತಮ್ಮ ಕೆಲಸದಿಂದ ಜೀವನ ನಿರ್ವಹಿಸಲು ಎಲ್ಲರಿಗೂ ಸಮಾನವಾದ ಹಕ್ಕಿದೆ .
೩. ಶ್ರಮ ಜೀವಿಯ ಜೀವನ , ಉಳುವವನ ಅಥವ ಕೈಕಸುಬುಗಾರನ ಜೀವನವೇ ಯೋಗ್ಯ ಜೀವನ .
sslc udatta chintanegalu notes in kannada
೩. ಸ್ವಾಮಿ ವಿವೇಕಾನಂದ
ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿ , ಅವರು ವಿಷಯಗ್ರಹಣ ಮಾಡಿಕೊಳ್ಳುವರು . ಆದರೆ ಅವರಿಗೆ ಮತ್ತೊಂದು ಅವಶ್ಯಕತೆ ಇದೆ . ಅದು ಸಂಸ್ಕೃತಿ , ನೀವು ಅವರಿಗೆ ಇದನ್ನು ಕೊಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು . ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು . ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ . ಜಗತ್ತಿಗೆ ಜ್ಞಾನರಾಶಿಯನ್ನೇ ಕೊಡಬಹುದು . ಆದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ . ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು . ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು . –
ಆದರೆ ಅದರಿಂದ ಏನು ಪ್ರಯೋಜನ ? ಅವರು ಕಾಡುಜನರಂತೆ ಇರುವರು . ಅವರಲ್ಲಿ ಸಂಸ್ಕೃತಿ ಇಲ್ಲ .
ನಮ್ಮ ಶಾಸ್ತ್ರಗಳಲ್ಲಿ ಹುದುಗಿರುವ , ಮಠ ಮತ್ತು ಅರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಾಗಿರುವ ಆಧ್ಯಾತ್ಮಿಕರತ್ನಗಳನ್ನು ದೇಶ ಭಾಷೆಗಳ ಮೂಲಕ ಜನರಿಗೆ ಪ್ರಚಾರ ಮಾಡಬೇಕು . ವೇದವೇದಾಂತಗಳ ಮುಖ್ಯ ಪಲ್ಲವಿಯೇ ಶ್ರದ್ಧೆ , ಯಾವ ಶ್ರದ್ಧೆಯ ಮೂಲಕ ನಚಿಕೇತನು ಯಮರಾಜನನ್ನು ಕೂಡ ಸಂದರ್ಶಿಸಿ ಪ್ರಶ್ನೆ ಮಾಡುವುದಕ್ಕೆ ಧೈರ್ಯ ಹೊಂದಿದನೋ , ಯಾವ ಶ್ರದ್ಧೆಯ ಮೂಲಕ ಪ್ರಪಂಚ ಚಲಿಸುತ್ತಿರುವುದೋ- ಅಂತಹ ಶ್ರದ್ಧೆಯು ನಾಶವಾಗುತ್ತಿದೆ . ಇದರ ಪರಿಹಾರಕ್ಕಾಗಿ ಮೊದಲು ಆತ್ಮಜ್ಞಾನ ಪ್ರಚಾರವಾಗಬೇಕು .
ಯಾರೂ ದುರ್ಬಲರಲ್ಲ . ಆತ್ಮ ಸರ್ವಶಕ್ತ , ಸರ್ವಜ್ಞ ಏಳಿ , ಯಾರಿಗೂ ಮಣಿಯಬೇಡಿ . ನಿಮ್ಮಲ್ಲಿರುವ ಭಗವಂತನನ್ನು ವ್ಯಕ್ತಗೊಳಿಸಿ , ಅದನ್ನು ಅಲ್ಲಗಳೆಯಬೇಡಿ . ಏಳಿ , ದುರ್ಬಲತೆಯ ಪರವಶತೆಯಿಂದ ಪಾರಾಗಿ ಪಾರಾಗುವುದಕ್ಕೆ ಮಾರ್ಗ ನಿಮ್ಮ ಶಾಸ್ತ್ರಗಳಲ್ಲಿಯೇ ಇದೆ . ನಿಜವಾದ ಆತ್ಮನ ವಿಷಯವನ್ನು ನೀವು ಕೇಳಿ , ಇತರರಿಗೆ ಬೋಧಿಸಿ , ನಿದ್ರಿಸುವವರನ್ನು ಎಬ್ಬಿಸಿ . ಅವರು ಹೇಗೆ ಜಾಗೃತರಾಗುತ್ತಾರೆ ಎಂಬುದನ್ನು ನೋಡಿ , ಆಗ ಶಕ್ತಿ ಬರುವುದು . ಮಹಿಮೆ ಬರುವುದು , ಶ್ರೇಯಸ್ಸು ಬರುವುದು , ಪಾವಿತ್ರ್ಯ ಬರುವುದು . ಈಗ ನಿದ್ರಿಸುತ್ತಿರುವ ಜೀವ ಜಾಗೃತವಾಗಿ ಕಾರ್ಯೋನ್ಮುಖನಾಗುವಾಗ ಅವನಲ್ಲಿ ಎಲ್ಲ ಕಲ್ಯಾಣ ಗುಣಗಳೂ ಬರುವುವು . ನಿಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಿ , ವೇದಾಂತದ ಸಂದೇಶವನ್ನು ಪ್ರತಿ ಮನೆಗೂ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ , ಅನಂತರ ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದಿರಿ ಎಂಬ ಲವನ್ನು ಸಾಧಿಸಿದ್ದರೂ ನೀವು ಒಂದು ಇರುತ್ತದೆ .
ಈ ಆತ್ಮದ ಅನಂತ ಶಕ್ತಿಯನ್ನು ಪ್ರಪಂಚದ ಮೇಲೆ ಬೀರಿದರೆ ಹಲವು ಭೌತಿಕ ಬೆಳವಣಿಗೆಗಳಾಗುವುವು . ಆಲೋಚನಾ ಪ್ರಪಂಚದ ಮೇಲೆ ಬೀರಿದರೆ ಬುದ್ಧಿ ತನ್ನ ಪರಾಕಾಷ್ಠೆಯನ್ನು ಮುಟ್ಟುವುದು , ತನ್ನ ಮೇಲೆಯೇ ಅದನ್ನು ಬೀರಿಕೊಂಡರೆ ಮಾನವನನ್ನು ದೇವನನ್ನಾಗಿ ಮಾಡುವುದು , ಮೊದಲು ನಾವು ದೇವರಾಗೋಣ . ಅನಂತರ ಇತರರು ದೇವರಾಗಲು ಅವರಿಗೆ ಸಹಾಯ ಮಾಡೋಣ . ಆದ್ದರಿಂದ ಆರ್ಯಮಾತೆಯ ಪುತ್ರರಿರಾ ಎಚ್ಚರಗೊಳ್ಳಿ, ಎದ್ದೇಳಿ , ಸೋಮಾರಿಗಳಾಗಬೇಡಿ ; ಗುರಿಯು ದೊರಕುವವರೆಗೂ ನಿಲ್ಲಬೇಡಿ .
kseeb solutions for class 10 kannada udatta chintanegalu notes
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .
೧. ಕ್ರಿಯಾ ಸ್ವಾತಂತ್ರ್ಯ ಎಂದರೇನು ?
ಉತ್ತರ : ಕ್ರಿಯಾ ಸ್ವಾತಂತ್ರ್ಯವೆಂದರೆ, ತಮಗೆ ಇಷ್ಟ ಬಂದ ಕೆಲಸ ಮಾಡಲು ವ್ಯಕ್ತಿಗೆ ಸ್ವಾತಂತ್ರ್ಯವಿರುವುದು. ಅದು ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಇರುವ ಪರಿಣಾಮಕಾರಿಯಾದ ಸಾಮರ್ಥ್ಯವಾಗಬೇಕು. ಶೋಷಣೆ ಎಲ್ಲಿ ಇಲ್ಲವಾಗಿದೆಯೋ ಒಂದು ವರ್ಗವು ಇನ್ನೊಂದು ವರ್ಗವನು ತುಳಿಯುತ್ತಿಲ್ಲವೋ ಎಲ್ಲಿ ನಿರುದ್ಯೋಗ ಇಲ್ಲವೋ ಎಲ್ಲಿ ತನ್ನ ಕೆಲಸದ ಫಲವಾಗಿ ತನ್ನ ಕೆಲಸ, ಮನೆ , ಆಹಾರಗಳನ್ನು ಕಳೆದುಕೊಂಡು ಬಿಡುವ ಭೀತಿ ವ್ಯಕ್ತಿಗೆ ಇರುವುದಿಲ್ಲವೋ ಅಲ್ಲಿ ನಿಜವಾದ ಕ್ರಿಯಾ ಸ್ವಾತಂತ್ರ್ಯವಿದೆ ಎಂದು ಹೇಳಬಹುದು.
೨. ರಾಜಕೀಯ ಸ್ವಾತಂತ್ರ್ಯದ ಮಹತ್ವವೇನು ?
ಉತ್ತರ : ರಾಜಕೀಯ ಸ್ವಾತಂತ್ರ್ಯವಿರುವುದು ವ್ಯಕ್ತಿಗೆ ಶಾಸನಗಳನ್ನು ರಚಿಸುವುದರಲ್ಲಿ ಸರ್ಕಾರಗಳ ಸ್ಥಾಪನೆ, ವಿಸರ್ಜನೆಗಳಲ್ಲಿ ಪಾಲು ಇರುವ ಹಕ್ಕಿನಲ್ಲಿ . ಸರಕಾರವು ಇರುವುದು ಜನರಿಗೆ ಜೀವನ ಸ್ವಾತಂತ್ರ್ಯ, ಸಂತೋಷಾನ್ವೇಷಣೆಗಳನ್ನು ಒದಗಿಸಿಕೊಡುವ ಸಲುವಾಗಿ ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವರು. ಮಾನವ ವ್ಯಕ್ತಿತ್ವ ಮತ್ತು ಸಮಾನತೆಗಳ ತತ್ವದಿಂದ ಅನುಗಮನ ಮಾಡಿದ ತತ್ವ.
೩. ಅಂದವಾದ ಬರೆವಣಿಗೆಯ ಬಗ್ಗೆ ಗಾಂಧೀಜಿಯವರ ಅಭಿಪ್ರಾಯವೇನು ?
ಉತ್ತರ : ಗಾಂಧೀಜಿಯವರು ಇಂಗ್ಲೆಂಡ್ ಗೆ ಹೋಗುವವರೆಗೂ ಅಂದವಾದ ಅಕ್ಷರ, ಒಳ್ಳೆಯ ಬರವಣಿಗೆ ಶಿಕ್ಷಣದ ಅವಶ್ಯಕ ಅಂಶವಲ್ಲವೆಂದು ಭಾವಿಸಿದ್ದರು. ಅನಂತರ ದಕ್ಷಿಣ ಆಫ್ರಿಕಾ ಹೋದಮೇಲೆ ಅಲ್ಲಿ ಸುಶಿಕ್ಷಿತ ಯುವಕರ ಮತ್ತು ವಕೀಲರ ಮುತ್ತು ಪೋಣಿಸಿದಂತಿದ್ದ ಸುಂದರ ಬರವಣಿಗೆ ನೋಡಿ ಅವರಿಗೆ ನಾಚಿಕೆಯೂ ಪಶ್ಚಾತ್ತಾಪವೂ ಆಯಿತು. ಕೆಟ್ಟ ಅಕ್ಷರದ ಬರವಣಿಗೆ ಅಪೂರ್ಣ ಶಕ್ಷಣದ ಚಿಹ್ನೆ ಎಂದು ಅರಿತರು. ತನ್ನ ಬರವಣಿಗೆಯನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದರಾದರೂ ಸುಟ್ಟ ಮಡಕೆಗೆ ಹಸಿಮಣ್ಣನ್ನು ಮೆತ್ತಲು ಸಾಧ್ಯವಿಲ್ಲದ ಹಾಗೆ ಆ ವೇಳೆಗೆ ಕಾಲಮೀರಿ ಹೋಗಿತ್ತು. ಅವರ ಉದಾಹರಣರೆಯಿಂದ ಒಳ್ಳೆಯ ಬರವಣಿಗೆ ಉತ್ತಮ ಶಿಕ್ಷಣದ ಅವಶ್ಯ ಅಂಶವೆಂಬುದು ಪ್ರತಿಯೊಬ್ಬ ಯುವಕ ಯುವತಿಯರು ತಿಳಿದುಕೊಳ್ಳಲಿ ಎಂದು ಅವರು ಹೇಳಿದ್ದಾರೆ.
೪. ‘ ಅನ್‌ಟು ದಿಸ್ ಲಾಸ್ಟ್ ‘ ಕೃತಿ ಗಾಂಧೀಜಿಯವರ ಮೇಲೆ ಯಾವ ಪರಿಣಾಮ ಬೀರಿತು ?
ಉತ್ತರ : ‘ ಅನ್‌ಟು ದಿಸ್ ಲಾಸ್ಟ್ ‘ ಕೃತಿಯು ಗಾಂಧೀಜಿಯವರ ಮನಸ್ಸು ಸೆರೆ ಹಿಡಿಯಿತು. ಆ ಪುಸ್ತಕದಲ್ಲಿ ಹೇಳಿದ್ದ ಧ್ಯೇಯಗಳಿಗನುಸಾರವಾಗಿ ಅವರ ಜೀವನವನ್ನು ಬದಲಾಯಿಸಿ ಕೊಳ್ಳಬೇಕೆಂದು ಅವರು ನಿರ್ಣಯಿಸಿದರು. ಬಾಳಿನಲ್ಲಿ ತಕ್ಷಣದ ಪರಿಣಾಮಕಾರಿಯಾದ ಬದಲಾವಣೆಯನ್ನು ಮಾಡಿದುದು ‘ ಅನ್‌ಟು ದಿಸ್ ಲಾಸ್ಟ್ ‘ ಪುಸ್ತಕ. ಅದನ್ನು ಅವರು ಸರ್ವೋದಯ ಎಂಬ ಹೆಸರಿನಲ್ಲಿ ಗುಜರಾತಿ ಭಾಷೆಗೆ ಅನುವಾದ ಕೂಡ ಮಾಡಿದರು. ಎಲ್ಲರ ಒಳ್ಳೆಯದರಲ್ಲಿಯೇ ನಮ್ಮ ಒಳ್ಳೆಯದು ಅಡಗಿದೆ. ವಕೀಲನ ಕೆಲಸಕ್ಕೆ ಇರುವ ಬೆಲೆಯೇ ಕ್ಷೌರಿಕನ ಕೆಲಸಕ್ಕು ಇದೆ. ತಮ್ಮ ಕೆಲಸದಿಂದ ಜೀವನ ನರ್ವಹಿಸಲು ಎಲ್ಲರಿಗೂ ಸಮಾನವಾದ ಹಕ್ಕಿದೆ. ಶ್ರಮ ಜೀವಿಯ ಉಳುವವನ ಅಥವಾ ಕೈಕಸಬುಗಾರನ ಜೀವನವೇ ಯೋಗ್ಯ ಜೀವನ ಎಂದು ‘ ಅನ್‌ಟು ದಿಸ್ ಲಾಸ್ಟ್ ‘ ಗ್ರಂಥದ ಸಿದ್ಧಾಂತಗಳನ್ನು ಅವರು ಅರಿತರು.
೫. ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗುವುದು ಯಾವಾಗ ?
ಉತ್ತರ : ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿದರೆ ಅವರು ವಿಷಯ ಗ್ರಹಣ ಮಾಡಿಕೊಳ್ಳಬಲ್ಲರು. ಆದರೆ ಅವರಿಗೆ ಸಂಸ್ಕೃತಿಯ ಅವಶ್ಯಕತೆ ಇದೆ. ಅವರಿಗೆ ಅದನ್ನು ಕೂಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನ ರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿನ ಜ್ಞಾನರಾಶಿಯನ್ನೆ ಕೊಡಬಹುದು. ಅದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯನ್ನು ಹೊಂದಿರುವ ಜನರಿಂದ ದೇಶದ ಪ್ರಗತಿ ಸಾಧ್ಯ.
೬ , ಬಾಳಿನಲ್ಲಿ ತೃಪ್ತಿ ದೊರಕಬೇಕಾದರೆ ಏನು ಮಾಡಬೇಕೆಂಬುದು ವಿವೇಕಾನಂದರ ಅಭಿಪ್ರಾಯ ?
ಉತ್ತರ : ನಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಮ್ಮ ಮೇಲೆಯೇ ನಿಂತಿದೆ. ಎಂದು ಭಾವಿಸಿ ಕಾರ್ಯೋನ್ಮುಖರಾಗಬೇಕು. ವೇದಾಂತ ಸಂದೇಶವನ್ನು ಪ್ರತಿ ಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿ ಇರುವ ಸುಪ್ತ ಪಾವಿತ್ರ್ಯವನ್ನು ಜಾಗೃತಿಗೊಳಿಸಿರಿ. ಅನಂತರ ನಾವು ಎಷ್ಟೇ ತೃಪ್ತಿಯಾದರೂ ಇರುತ್ತದೆ. ಎಂದು ವಿವೇಕಾನಂದರೂ ಅಭಿಪ್ರಾಯಪಟ್ಟಿದ್ದಾರೆ.