WhatsApp Group         Join Now
Telegram Group Join Now

30+ Anukaranavyaya kannada grammar (ದ್ವಿರುಕ್ತಿಗಳು,ಜೊಡಿನುಡಿಗಳು,ಅನುಕರಣವ್ಯಯಗಳು)

ಕನ್ನಡ ವ್ಯಾಕರಣ ಅನುಕರಣಾವ್ಯಯ ಪದಗಳು, Anukaranavyaya in Kannada, Kannada Anukaranavyayagalu, Details of Anukaranavyaya with Examples in Kannada Anukaranavyaya Padagalu Examples Anukaranavyaya Padagalu Kannada ಅನುಕರಣಾವ್ಯಯ ಪದಗಳು Examples Dvirukti in Kannada Words ದ್ವಿರುಕ್ತಿ ಮತ್ತು ಅನುಕರಣಾವ್ಯಯ Examples

ಕನ್ನಡ ವ್ಯಾಕರಣವು ದ್ವಿರುಕ್ತಿಗಳು,ಜೊಡಿನುಡಿಗಳು,ಅನುಕರಣವ್ಯಯಗಳನ್ನು ಹೊಂದಿದೆ,….

ಅನುಕರಣಾವ್ಯಯ :-

ಅನುಕರಣಾವ್ಯಯ :-
ನಮಗೆ ಕೇಳಿಸಿದಂತಹ  ಧ್ವನಿ  ಕೇಳಿಸಿದಂತೆ ಮತ್ತು ಕಾಣಿಸಿದಂತಹ   ವಸ್ತುಗಳನ್ನು , ಕಾಣಿಸಿದಂತೆ ಪುನಃ ಅನುಕರಿಸಿ ಹೇಳುವ ಪದಗಳನ್ನು ’ಅನುಕರಣಾವ್ಯಯಗಳು’ ಎಂದು ಕರೆಯುತ್ತಾರೆ.

ಕೆಲವು ಅರ್ಥವಿಲ್ಲದ ಧ್ವನಿವಿಶೇಷಗಳನ್ನು, ಪುನಃ ಉಚ್ಚರಣೆ ಮಾಡಿ ಹೇಳುತ್ತೇವೆ. ಇಂತಹ ಧ್ವನಿ ವಿಶೇಷಗಳನ್ನು ಅನುಕರಣಾವ್ಯಯ ಎಂದು ಕರೆಯಲಾಗುತ್ತದೆ.

ಅರ್ಥವಿಲ್ಲದ ಯಾವುದೇ ಧ್ವನಿಯನ್ನು ಅನುಕರಿಸುವ ಶಬ್ದಗಳು ಅನುಕರಣಾವ್ಯಯಗಳು ಆಗಿರುತ್ತವೆ

ಅನುಕರಣಾವ್ಯಯಗಳು ಉದಾ :

ಹಂದಿಯು ದಡದಡ ಓಡಿತು.
ಗಂಟೆ ಢಣಢಣ ಬಾರಿಸಿತು.
ಗುಡುಗು ಗುಡುಗುಡು ಎನ್ನುತ್ತಿತ್ತು.

ಬೆಂಕಿಯು ಧಗಧಗ ಉರಿಯಿತು.
ಕವಣೆಯ ಕಲ್ಲು ರೊಯ್ಯನೆ ಹಾರಿತು.

ಅನುಕರಣಾವ್ಯಯ ಪದಗಳು :-

ರಪರಪ,

ಜಳಜಳ,

ಗುನುಗುನು,

ಜಳಜಳ,

ಡಳಡಳ,

ಜುಳುಜುಳು,

ಢಣಢಣ,

ಜಿಗಿಜಿಗಿ,

ಸರಸರ,

ರೊಯ್ಯನೆ,

ಸುಯ್ಯನೆ,

ಪಟಪಟ,

ಸರಸರ,

ಜುಳುಜುಳು

 ದಬದಬ,

ಚುರುಚುರು,

ಧಗಧಗ,

ಗುಳುಗುಳು

 ಥರಥರ,

ಘಮಘಮ,

ಚಟಚಟ,

ಗುಡುಗುಡು,

ಮಿಣಿಮಿಣಿ

anukaranavyaya in kannada

ದ್ವಿರುಕ್ತಿ, ಜೋಡುನುಡಿ ಮತ್ತು ನುಡಿಗಟ್ಟುಗಳು

ದ್ವಿರುಕ್ತಿ: 

ದ್ವಿರುಕ್ತಿ  ಪದದ ಶಬ್ದಶಃ ಅರ್ಥ ತಿಳಿದುಕೊಳ್ಳೋಣ. ಇಲ್ಲಿ ‘ದ್ವಿ’ ಅಂದರೆ ‘ಎರಡು’, ‘ಉಕ್ತಿ’ ಎಂದರೆ ‘ಮಾತು’.
ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಎರಡು  ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.
ಉದಾಹರಣೆ: ಓಡಿಓಡಿ, ಬಿದ್ದುಬಿದ್ದು , ಮನೆಮನೆ
ದ್ವಿರುಕ್ತಿಯನ್ನು ಸಂತೋಷ, ಅವಸರ, ಸಂಭ್ರಮ, ಕೋಪ, ಅಥವಾ  ಹತಾಶೆಯನ್ನು ವ್ಯಕ್ತಪಡಿಸಲು  ಬಳಸಲಾಗುತ್ತದೆ.  ಉದಾಹರಣೆಗೆ,
ಬೇಗ ಬೇಗ ಬಾ , ಹೊತ್ತಾಯಿಿತು.
ಬನ್ನಿ ಬನ್ನಿ ! ನಿಮಗೆ ಸ್ವಾಗತ.
ಅಬ್ಬಬ್ಬಾ! ಎಷ್ಟು ರಮಣೀಯ ದೃಶ್ಯ!
ಪ್ರತಿಯೊಂದು ಅಥವಾ ಅತಿ ಹೆಚ್ಚು , ಅತಿ ಕಡಿಮೆ ಎಂದು ಹೇಳಲೂ ಕೂಡ ದ್ವಿರುಕ್ತಿಯನ್ನು ಬಳಸುತ್ತಾರೆ.

ಉದಾಹರಣೆಗೆ,
ಪುಟ್ಟಪುಟ್ಟ ಮಕ್ಕಳು ಆಟವಾಡುತಿದ್ದವು.
ಊರೂರು ಅಲೆದರೂ ಅವನಿಗೆ ಕೆಲಸ ಸಿಗಲಿಲ್ಲ.
ಕೆಲವೊಂದು ದ್ವಿರುಕ್ತಿಗಳನ್ನು  ವಿಶೇಷ ರೂಪದಲ್ಲಿ, ಉದಾಹರಣೆಗೆ ‘ಮೊದಲು ಮೊದಲು’  ಎಂದು ಹೇಳುವ ಬದಲು, ‘ಮೊಟ್ಟಮೊದಲು’ ಎಂದು ಹೇಳುತ್ತಾರೆ.

ದ್ವಿರುಕ್ತಿಯ ಉದಾಹರಣೆಗಳು:

  • ಮತ್ತೆ ಮತ್ತೆ
  • ಈಗೀಗ
  • ದೊಡ್ಡ ದೊಡ್ಡ
  • ಹಿಂದೆ ಹಿಂದೆ
  • ಮುಂದೆ ಮುಂದೆ
  • ಒಳಒಳಗೆ
  • ಬೇಡ ಬೇಡ
  • ಸಣ್ಣ ಸಣ್ಣ
  • ಮನೆ ಮನೆ
  • ಬಟ್ಟಬಯಲು
  • ನಟ್ಟನಡುವೆ
  • ನಿಲ್ಲು ನಿಲ್ಲು
  • ದೂರ ದೂರ
  • ಇರಲಿ ಇರಲಿ
  • ತುತ್ತತುದಿ
  • ಬಿಸಿ ಬಿಸಿ
  • ಅಬ್ಬಬ್ಬಾ
  • ಅಗೋ ಅಗೋ
  • ನಡೆ ನಡೆ
  • ಬೇರೆ ಬೇರೆ
  • ಬಣ್ಣಬಣ್ಣದ
  • ಹೆಚ್ಹು ಹೆಚ್ಹು
  • ಹೌದು ಹೌದು
  • ಕಟ್ಟಕಡೆ

ಜೋಡು ನುಡಿಗಳು

ಜೋಡುನುಡಿಗಳು ದ್ವಿರುಕ್ತಿಯ ಹಾಗೆಯೇ ಕಾಣುತ್ತವೆ. ಇದರಲ್ಲೂ ಎರಡು ಪದಗಳಿದ್ದು ಅವುಗಳನ್ನು ಜೊತೆಯಾಗಿಯೇ ಉಚ್ಚರಿಸುತ್ತಾರೆ. ಆದರೆ, ಜೋಡುನುಡಿಗಳ ಪೂರ್ವಪದಕ್ಕೆ ಮಾತ್ರ ಅರ್ಥವಿರುತ್ತದೆ, ಉತ್ತರಪದಕ್ಕೆ ಅರ್ಥವಿರುವುದಿಲ್ಲ.

ಉದಾಹರಣೆಗೆ: ಬಟ್ಟೆಬರೆ, ದೇವರು ದಿಂಡರು, ಸಾಲಸೋಲ, ಸುತ್ತಮುತ್ತ, ಕೋಟೆಕೊತ್ತಲು, ಕೂಲಿನಾಲಿ, ಹುಳಹುಪ್ಪಡಿ, ಶಾಲೆಮೂಲೇ, ಹಾಳುಮೂಳು, ಸಂದಿಗೊಂದಿ, ಸೊಪ್ಪುಸದೆ , ಹಣ್ಣು ಹಂಪಲು, ಇತ್ಯಾದಿ.

ನುಡಿಗಟ್ಟುಗಳು

ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಕೆಲವೊಂದು ಪದಪುಂಜಗಳನ್ನು ಬಳಸುತ್ತೇವೆ, ಮಾತಿನ ಸಂದರ್ಭದ ಮೇಲೆ ಅವುಗಳಿಗೆ ಹೊಸ ಅರ್ಥ ಬರುತ್ತದೆ. ಇಂತಹ ಪದಪುಂಜಗಳನ್ನು ನುಡಿಗಟ್ಟುಗಳು ಎನ್ನುತ್ತಾರೆ.

ಉದಾಹರಣೆಗೆ, ಕೈಕೊಡು ಇದರ ಅರ್ಥ ಕೈಯನ್ನು ಕೊಡುವುದು ಎಂದು ಅಲ್ಲ, ಮೋಸಮಾಡು ಎಂದು ಆಗಿದೆ.

ಇದೆ ರೀತಿ ಮತ್ತಷ್ಟು ಉದಾಹರಣೆಗಳು: 

ಹೊಟ್ಟೆಗೆ ಹಾಕಿಕೋ – ಕ್ಷಮಿಸು 

ಗಾಳಿಸುದ್ದಿ – ಸುಳ್ಳು ಸುದ್ದಿ 

ತಲೆಗೆ ಕಟ್ಟು – ಜವಾಬ್ದಾರಿ ಹೊರಿಸು 

ಕತ್ತಿ  ಮಸೆ – ದ್ವೇಷ ಸಾಧಿಸು 

ಅಟ್ಟಕ್ಕೇರಿಸು – ಹೊಗಳು

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment