Chapter 1 Kadadida Salilam Tilivandade Questions and Answers Pdf, Notes, Summary, 2nd PUC Kannada Textbook Answers, Karnataka State Board Solutions help you to revise complete Syllabus and score more marks in your examinations. Pdf download below given link through.
2nd PUC Kannada Textbook Sahitya Sampada chapter 1 Kadadida Salilam Tilivandade question answers, summary, notes,
2nd puc CLASS SUBJECT INFORMATION | |
POEM | ಕದಡಿದ ಸಲಿಲಂ ತಿಳಿವಂದದೆ |
CLASS | 2nd puc |
SUBJECT | Kannada |
Author | Nagachandra |
ಕದಡಿದ ಸಲಿಲಂ ತಿಳಿವಂದದೆ ಕವಿ ಪರಿಚಯ
ಹಳಗನ್ನಡ ಸಾಹಿತ್ಯವು ಹತ್ತನೆಯ ಶತಮಾನದ ಪಂಪನಿಂದ ಶಿಖರಸ್ಥಿತಿಯನ್ನು ತಲುಪಿ ಅವನು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುಂದುವರೆಯಿತು . ಈ ಪರಂಪರೆಯ ಕವಿಗಳಲ್ಲಿ ಪ್ರಮುಖನೆಂದರೆ ನಾಗಚಂದ್ರ , ‘ ಅಭಿನವ ಪಂಪ’ನೆಂದೇ ತನ್ನನ್ನು ಕರೆದುಕೊಂಡ ಈತ ಹನ್ನೊಂದನೆಯ ಶತಮಾನದ ಉತ್ತರಾರ್ಧ ಹಾಗೂ ಹನ್ನೆರಡನೆಯ ಶತಮಾನದ ಪೂರ್ವಾರ್ಧಗಳಲ್ಲಿ ಜೀವಿಸಿದ್ದನು . ವಿಜಯಪುರ ( ಇಂದಿನ ಬಿಜಾಪುರ ) ಈತನ ಸ್ಥಳ , ಅಲ್ಲಿನ ಮಲ್ಲಿಜಿನೇಂದ್ರ ಬಸದಿಯನ್ನು ತಾನು ಕಟ್ಟಿಸಿದ್ದಾಗಿ ಕವಿಯೇ ಹೇಳಿಕೊಂಡಿದ್ದಾನೆ . ಈತನ ಗುರುಗಳು ಬಾಲಚಂದ್ರ ಮೇಘಚಂದ್ರಯತಿಗಳು , ಚಾಲುಕ್ಯ ಚಕ್ರವರ್ತಿಯಾದ ನಾಲ್ವಡಿ ಸೋಮೇಶ್ವರನ ( ಕ್ರಿ.ಶ. ೧೧೦೦-೧೧೨೬ ) ಆಶ್ರಯದಲ್ಲಿ ನಾಗಚಂದ್ರ ಇದ್ದನೆಂದು ಕೆಲವು ವಿದ್ವಾಂಸರು ಹೇಳಿರುವರಾದರೂ ಅದಕ್ಕೆ ಆಧಾರಗಳಿಲ್ಲ . ‘ ಮಲ್ಲಿನಾಥ ಪುರಾಣ ‘ ಮತ್ತು ‘ ರಾಮಚಂದ್ರಚರಿತ ಪುರಾಣ ‘ ಎಂಬೆರಡು ಚಂಪೂಕಾವ್ಯಗಳನ್ನು ಈತ ರಚಿಸಿದ್ದಾನೆ . ‘ ಮಲ್ಲಿನಾಥ ಪುರಾಣ’ವು ೧೯ ನೆಯ ತೀರ್ಥಂಕರನಾದ ಮಲ್ಲಿನಾಥನ ಕತೆಯನ್ನು ಒಳಗೊಂಡಿದೆ . ‘ ರಾಮಚಂದ್ರಚರಿತ ಪುರಾಣ’ವು ‘ ಪಂಪರಾಮಾಯಣ’ವೆಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದೆ . ಇದು ನಾಗಚಂದ್ರನಿಗೆ ಕೀರ್ತಿ ತಂದಿತ್ತ ಕಾವ್ಯ ಭಾರತೀಕರ್ಣಪೂರ , ಕವಿತಾಮನೋಹರ , ಸಾಹಿತ್ಯ ವಿದ್ಯಾಧರ , ಚತುರಕವಿ , ಜನಸ್ಥಾನರತ್ನ ಪ್ರದೀಪ , ಸೂಕ್ತಿಮುಕ್ತಾವತಂಸ ಮುಂತಾದ ಬಿರುದುಗಳು ಈತನಿಗಿದ್ದವು .
ಕದಡಿದ ಸಲಿಲಂ ತಿಳಿವಂದದೆ ಕಾವ್ಯದ ಹಿನ್ನೆಲೆ :
ಸೀತೆಯನ್ನು ಅಪಹರಿಸಿದ ರಾವಣನು ಅವಳನ್ನು ತನ್ನ ಪ್ರಮದವನದಲ್ಲಿ ಇರಿಸಿರುತ್ತಾನೆ . ಮೂಲತಃ ಒಳ್ಳೆಯ ಗುಣಗಳ ಗಣಿಯಾದ ರಾವಣನು ವಿಧಿನಿಯಮ ದಂತೆ ಸೀತೆಯಲ್ಲಿ ವ್ಯಾಮೋಹವನ್ನು ತಾಳಿ ಅವಳನ್ನು ಅಪಹರಿಸಿರುತ್ತಾನೆ . ಸೀತೆ ಮಾತ್ರ ರಾವಣನಿಗೆ ಸೋಲದೆ ಸ್ಥಿರಚಿತ್ತೆಯಾಗಿದ್ದಾಳೆ . ಏನು ಮಾಡಿದರೂ ಸೀತೆಯನ್ನು ಒಲಿಸಿಕೊಳ್ಳಲು ರಾವಣನಿಗೆ ಅಸಾಧ್ಯವಾಗುತ್ತದೆ . ಇಷ್ಟರಲ್ಲಿ ರಾಮಸೈನ್ಯವು ಲಂಕೆಯನ್ನು ಮುತ್ತಿ ಯುದ್ಧಾರಂಭವಾಗುತ್ತದೆ . ರಾವಣನು ಯುದ್ಧದಲ್ಲಿ ಜಯಗಳಿಸಿಕೊಳ್ಳಲು ‘ ಬಹುರೂಪಿಣೀ ವಿದ್ಯೆ’ಯ ಮೊರೆಹೋಗುತ್ತಾನೆ . ಯುದ್ಧಕ್ಕೆ ತೆರಳುವ ಮುನ್ನ ಸೀತೆಯ ಭೇಟಿಗೆ ಪ್ರಮದವನಕ್ಕೆ ಬಂದಾಗ , ಸೀತೆ ಅವನನ್ನು ತೃಣಸಮಾನವಾಗಿ ಕಾಣುತ್ತಾಳೆ . ಮೂರ್ಛಹೋಗಿರುವ ಸೀತೆಯನ್ನು ಕಂಡಾಗ ರಾವಣನ ಮನಸ್ಸು ದುರ್ಮೊಹದಿಂದ ಬಿಡುಗಡೆಗೊಂಡು ಪರಿವರ್ತಿತವಾಗುತ್ತದೆ . ವಿರಕ್ತಿಯಿಂದ ಅವನು ಯುದ್ಧಾನಂತರ ಸೀತೆಯನ್ನು ರಾಮನಿಗೊಪ್ಪಿಸುವ ನಿರ್ಧಾರಕ್ಕೆ ಬರುತ್ತಾನೆ . ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳುವ ಸಂದರ್ಭದಿಂದ ಈ ಪದ್ಯಭಾಗವು ಆರಂಭಗೊಳ್ಳುತ್ತದೆ .
Chapter 1 Kadadida Salilam Tilivandade Questions and Answers, Notes, Summary
ಪದಗಳ ಅರ್ಥ:
ವಚನ : ಚಿತ್ತನಿರೋಧ – ಮನಸನ್ನು ನಿಗ್ರಹಿಸುವುದು .
೧. ಪೊಸಗಾರ್ – ಮುಂಗಾರಿನ ; ಮಸಕ – ಆವೇಶ , ಆರ್ಭಟಗಳು ; ಅಸಕಟಿ – ಮೀರು ; ಕೃತಾಂತ – ಯಮ ; ಕೃತಾಂತಜಿಹೈ – ಯಮನ ನಾಲಗೆ : ಪೊಡಕರಿಸು – ಅಲ್ಲಾಡು , ಸ್ಪುರಿಸು , ಕಾಣು ; ಬೆಸಸು – ಆಜ್ಞಾಪಿಸು ; ಕರಂ – ಕೈಯನ್ನು ; ಅರ್ವಿಸಿ – ವ್ಯಾಪಿಸಿ , ಹರಡಿ ; ಸನ್ನಿದ – ಸಮೀಪ , ಪ್ರತ್ಯಕ್ಷ
ವಚನ : ಸನ್ನಿಹಿತೆಯಾಗಿ – ಪ್ರತ್ಯಕ್ಷಗೊಂಡು ; ಲಕ್ಷ್ಮೀಧರ – ಲಕ್ಷ್ಮಣ ; ರಾಮಸ್ವಾಮಿ – ರಾಮ ; ಚರಮದೇಹಧಾರಿ ಕೊನೆಯ ಜನ್ಮದಲ್ಲಿರುವವ ; ಉಟೆಯಲೀಯ – ಬದುಕಲು ಬಿಡೆನು ; ಅಳಿವು – ನಾಶ ; ಏವುದು ಏತಕ್ಕೆ ? ಏನು ಪ್ರಯೋಜನ ? ಪೊಡೆವಟ್ಟು – ನಮಸ್ಕರಿಸಿ , ಮೂಜು ಸೂಟ್ ಪೊಱಮಟ್ಟು – ಹೊರಬಂದು ; ಬೀಡು – ಪಾಳೆಯ ; ಮಗುವುದುಂ – ಪ್ರವೇಶಿಸಿದರು . ಮೂರು ಭಾರಿ ; –
೨. ಆನನ – ಮುಖ ; ನಿಜವಧೂಜನ – ಅಂತಃಪುರದ ಸ್ತ್ರೀಯರು ; ಕೊಟಚಾಡು – ನಿಂದಿಸು , ಕೀಳುಮಾಡು ; ಉದ್ಘತ್ತ – ಸೊಕ್ಕಿದ , ಕೊಬ್ಬಿದ ; ವಿರೋಧಿಖೇಚರ – ರಾವಣನ ವೈರಿಗಳಾದ ಅಂಗದ , ಹನುಮಂತ ಇತ್ಯಾದಿ ಖೇಚರರು ; ಮೊಯ್ಸತ್ತ – ಏಟುತಿಂದ ; ಇಭವೈರಿ – ಸಿಂಹ ; ಮುಳಿಸು – ಕೋಪ ; ಕೆಂಗರಿ ಮೂಡಿದ ಶೃಂಗಮಾಲೆ – ಅತ್ತುಆತ್ತು ಕೆಂಪಾದ ಕಣ್ಣುಗಳನ್ನು ಹೊಂದಿದ ; ಮಯತನೂಜೆ ಮಯಪುತ್ರಿಯಾದ ಮಂಡೋದರಿ : ವಸ್ತ್ರ – ಮುಖ ; ವಕ್ತಪದ್ಮ – ತಾವರೆಯಂತಹ ಮುಖ ;
ವಚನ : ಭಂಗ – ತೊಂದರೆ ; ಭೂಭಂಗ – ಹುಬ್ಬುಗಂಟಿಕ್ಕು , ಭೂಭಕುಟ ; ಬಹುಪ್ರಕಾರದಿಂ – ಹಲವು ಬಗೆಯಿಂದ ; ಪರಿಭವಿಸು – ತಿರಸ್ಕರಿಸು , ಅವಮಾನಿಸು , ಸೋಲಿಸು ; ನಿರ್ವತಿ್ರತ – ಪೂರೈಸಿದ ; ಆರೋಗಿಸು – ಸೇವಿಸು ; ಬಹುರೂಪಿಣೀ – ಹಲವು ರೂಪಗಳನ್ನು ತಳೆಯಬಲ್ಲ ಒಂದು ವಿದ್ಯೆ , ವಿದ್ಯಾದೇವತೆ ; ವಿದ್ಯಾಪ್ರಭಾವವಂ ವಿದ್ಯೆಯ ಶಕ್ತಿಯನ್ನು , ಪ್ರಮೋದಮುದಿತಹೃದಯಿ – ಸಂತೋಷವನ್ನು ಹೃದಯದಲ್ಲಿ ತುಂಬಿಕೊಂಡವನು .
೩ ಸಮಧಿಕರಾರ್ – ಸರಿಸಾಟಿ ಯಾರು ? ಜಗತ್ತಯ – ಮೂರು ಲೋಕಗಳಲ್ಲಿ , ಇದಿರ್ಚು – ಎದುರಿಸು ; ಸಮರ – ಯುದ್ಧ : ಭುಜದಂಡ – ನೀಳ ಬಾಹುಗಳು : ಜಾನಕಿ – ಸೀತೆ ; ಮುಖಾಬ್ದ – ತಾವರೆಯಂತಹ ಮುಖ ; ಅವಲೋಕಿಸು ಕಾಣಲು , ನೋಡಲು : ಕರಮೆ – ತುಂಬ ; ಕಾತರ – ತವಕ ; ವಿಯಚ್ಚರಾಧಿಪ ( ವಿಯಚ್ಚರ + ಅಧಿಪ ) ರಾವಣ : ಪ್ರಮದವನ – ಸೀತೆಯನ್ನಿರಿಸಿದ್ದ ಉದ್ಯಾನವನ ; ಅರಲಂಬು ಪುಷ್ಪಬಾಣ ; ಕಾಮನೆಂಬಿನಂ – ಮನ್ಮಥನಂತೆ .
ವಚನ : ಭೋಂಕನೆ – ಒಮ್ಮೆಲೆ , ಕೂಡಲೆ : ಬರ್ಪ – ಬರುತ್ತಿರುವ ; ಗಂಡಗಾಡಿ – ಪೌರುಷದ ಬೆಡಗು ; ಕೆಲ ಪಕ್ಕ ; ಖಚರ ಕಾಂತೆಯರ್ – ರಾವಣನ ಪತ್ನಿಯರು .
೪. ತೃಣಕಲ್ಪ – ಹುಲ್ಲಿಗೆ ಸಮಾನ ; ಸದ್ಭಾವ – ಒಳ್ಳೆಯ ಭಾವನೆ , ಅಭಿಪ್ರಾಯ ; ಒಳಕೊಂಡಪುಣ್ಯವತಿ ಸೀತೆ .
೫. ಮೊಲ್ಲವಾರ್ತೆ – ಕೆಟ್ಟಸುದ್ದಿ ; ನಳಿನಾನನೆ ( ನಳಿನ + ಆನನೆ ) ತಾವರೆಯಂತಹ ಮುಖವುಳ್ಳವಳು , ಸೀತೆ ; ತಲ್ಲಟಮಂ – ತಲ್ಲಣವನ್ನು
ವಚನ : ಮಾನಿನಿ – ಹೆಣ್ಣು , ಸೀತೆ , ಎಲ್ಲವಂದು – ಸಮೀಪಿಸಿ ; ಮುವಕ್ಕ – ಪ್ರತಿಪಕ್ಷ : ಒಡಂಬಟ್ಟು – ಒಪ್ಪಿಕೊಂಡು ; ವಿಹ್ವಲ – ದು : ಖ ; ಚಿತ್ತ – ಮನಸ್ಸು .
೬ ಧುರ – ಯುದ್ಧ ; ಆಯುಃಪ್ರಾಣಂ – ಆಯುಷ್ಯ ಮತ್ತು ಪ್ರಾಣ : ಧರಿತ್ರಿ – ಭೂಮಿ ; ಮೈಯನೊಕ್ಕು – ಮೈ ಚೆಲ್ಲಿ
೭ ಅನುಕಂಪೆ – ಕರುಣೆ ; ಕರ್ಮಾಧೀನ ಸಮುತ್ಪನ್ನ – ಕರ್ಮವಶದಿಂದ ಉತ್ಪನ್ನವಾಗುವ ; ದುರಘ- ಕೆಟ್ಟಪಾಪ .
೮. ಕದಡಿದ – ಕಲಕಿಹೋದ ; ಸಲಿಲ – ನೀರು ; ತಿಳಿವಂದದೆ – ತಿಳಿಯಾಗುವಂತೆ ; ಉದಾತ್ತರೊಳ್ ಶ್ರೇಷ್ಠರಾದವರಲ್ಲಿ ; ಪುಟ್ಟದಲ್ಲೆ – ಹುಟ್ಟುವುದಿಲ್ಲವೇ ? ನೀಲೀರಾಗಂ – ಸ್ಥಿರವಾದ ಪ್ರೀತಿ ಅಥವಾ ಭಾವ ( ನೀಲಿಬಣ್ಣದ ಆಕಾಶದಷ್ಟು ವಿಶಾಲವಾದ ಮನಸ್ಸು ) .
೯. ಪತ್ತುವಿಡು – ಕಳಚಿಕೊಳ್ಳು ; ಪತ್ತು – ಅಂಟು , ಸೇರು , ಅಳಿಪು – ಮೋಹಕ್ಕೆ ಸಿಲುಕು ; ಮೊಲ್ಲೆನಿಪುದು ಕೆಟ್ಟದ್ದೆನಿಸುವುದು ; ಉತ್ತಮನಾಚರಿಸಿ – ಒಳ್ಳೆಯದನ್ನು ಆಚರಿಸಿ ,
ವಚನ : ಅನುರಕ್ತಿ – ಪ್ರೀತಿ , ಕರ್ಚಿಕಳೆ – ತೊಳೆದು ಹಾಕು ; ಸ್ವಕೀಯ – ತನ್ನ : ಪರಿಷಜ್ಜನ – ಆಪ್ತವರ್ಗದವರಿಗೆ
೧೦. ದಿವ್ಯಭೂಷಣವಸನಾಂಗರಾಗಮುಮನ್ – ಶ್ರೇಷ್ಠವಾದ ಆಭರಣ , ವಸ್ತ್ರ , ದೇಹ ಪ್ರೀತಿ ( ಮೈಕಾಂತಿ ) ಗಳನ್ನು ; ಒಲ್ಲದೆ ಬಯಸದೆ ; ಅಪೇಕ್ಷಿಸುವೆನೇ – ಬಯಸುವೆನೇ .
೧೧. ನೆವ – ನೆಪ ; ಕಂದರ್ಪವಿಮೋಹ – ಕಾಮಾಸಕ್ತಿ : ಅಗಲ್ಲಿದೆ ಅಗಲುವಂತೆ ಮಾಡಿದೆ ; ಪೆಂಪು – ಹಿರಿಮೆ ;
೧೨. ಆಶಾ ಆಸೆ : ದುರ್ – ಕಟ್ಟ ; ಪಟಹ – ಭೇರಿ ; ರವ – ಶಬ್ದ ,
೧೩. ಗಜ – ಬೆದರಿಸು ; ಗರ್ಜಿಸಿ ಹೆದರಿಸಿ ; ಅನುಜಾತ – ಒಡಹುಟ್ಟಿದವನು ; ಅವನೀತ – ಸೌಜನ್ಯವಂತ , ವಿಧೇಯಭಾವದ ; ಆಣಿಯಟ್ಟು – ಹೊಡೆದೋಡಿಸು , ದುರ್ವ್ಯಸನಿಕೆಟ್ಟಚಟಗಾರ ; ಅಹಿತ – ಕೆಟ್ಟದ್ದು ,
೧೪ , ಜಸ – ಯಶಸ್ಸು ; ಆಟವಂ – ನಾಶವು : ಪರಾಭವ – ಸೋಲು ; ಪತ್ತುಗೆ – ಸಂಪರ್ಕ : ಮಾನಸಿಕೆ – ಮನಃಸ್ಥಿತಿ ; ಬನ್ನ – ಛಂಗ ; ಬದ್ಧಮಪ್ಪ ಸುಗತಿ – ಸದ್ಗತಿಗೆ ಬದ್ಧವಾದ ನಡೆ ; ಸುಹೃಜ್ಜನ ಸಹೃದಯ ಜನ ; ಬೇವಸಮಂ ಚಿಂತೆ , ದು : ಖ ; ಬೆಸನಿ – ಕೆಟ್ಟ ಚಟಗಳನ್ನುಳ್ಳವ ; ವಿಷಯಾಸವ – ಇಂದ್ರಿಯಮೋಹವೆಂಬ ಮದ್ಯ ; ಮತ್ತಸಚೇತಸರ್ – ಮತ್ತರಾಗಿರುವ ಮನಸ್ಸಿನವರು .
ವಚನ : ಉದ್ವೇಗಪರ – ಆವೇಶದಿಂದ , ತಳಮಳದಿಂದ ; ಆತ್ಮಗತದೊಳೆ – ಮನಸ್ಸಿನಲ್ಲೇ , ತನಗೆ ತಾನೆ ಹೇಳಿಕೊಳ್ಳುವುದು .
೧೫. ಉಯ್ದು – ಒಯ್ದು ; ಕಡುಪಂ – ಪರಾಕ್ರಮ ; ಕಟ್ಟಾಯ – ಅಧಿಕ ಸಾಮರ್ಥ್ಯ : ಬೀಸರ – ವ್ಯರ್ಥ ; ಓಸರಿಸು ಓರೆಯಾಗಿಸು , ಬದಿಗೆ ಸರಿಸು ; ದೋರ್ಗವ್ರ – ಬಾಹುಬಲದ ಹಮ್ಮು : ಇರ್ವಲಂ – ಎರಡೂ ಸೈನ್ಯ ; ವಿರಥರ್ – ರಥವನ್ನು ಕಳೆದುಕೊಂಡವರು .
Chapter 1 Kadadida Salilam Tilivandade Questions and Answers, Notes, Summary
ಆ ) ಒಂದು ಅಂಕದ ಪ್ರಶ್ನೆಗಳು : ಒಂದು ವಾಕ್ಯದಲ್ಲಿ ಉತ್ತರಿಸಿ :
1 ) ಸೀತೆಯನ್ನು ರಾವಣ ಎಲ್ಲಿರಿಸಿದ್ದನು ?
ಸೀತೆಯನ್ನು ರಾವಣನು ಪ್ರಮದವನದಲ್ಲಿ ಇರಿಸಿದ್ದನು .
2 ) ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು ?
ರಾಮ – ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು .
3 ) ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು ?
ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ‘ ಬಹುರೂಪಿಣಿ ‘
4 ) ರಾವಣನು ಮಹಾಪೂಜೆಯನ್ನು ಎಲ್ಲಿ ಸಲ್ಲಿಸಿದನು ?
ರಾವಣನು ಜಿನಾಲಯದಲ್ಲಿ ಮಹಾಪೂಜೆಯನ್ನು ಸಲ್ಲಿಸಿದನು .
5 ) ರಾವಣನು ಯಾವ ರೀತಿ ಚಲಿಸದೆ ಇದ್ದನು ?
ರಾವಣನು ಧ್ರುಮ ಮಂಡಲದಂತೆ ಚಲಿಸದೆ ಇದ್ದನು .
6) ಮಯತನೂಜೆ ಎಂದರೆ ಯಾರು ?
ಮಯತನೂಜೆ ಎಂದರೆ ಮಯರಾಜನ ಮಗಳು ಮಂಡೋದರಿ ,
7 ) ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು ?
ರಾವಣನ ಆಗಮನವನ್ನು ಸೀತೆಗೆ ತೋರಿದವರು ಖಚರಕಾಂತೆಯರು ( ರಾಕ್ಷಸ ಪತ್ನಿಯರು ಇವರನ್ನು ವಿದ್ಯಾದರ ಸ್ತ್ರೀಯರು ಎಂಬುದಾಗಿಯೂ ಹೇಳುತ್ತಾರೆ )
8 ) ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು ?
ರಾವಣನ ದಿವ್ಯವಾದ ವಸ್ತಭೂಷಣಗಳು , ರಾಜ್ಯಲಕ್ಷ್ಮೀ ಆತನ ವಿದ್ಯೆ ಎಲ್ಲವನ್ನು ಸೀತೆ ಹುಲ್ಲಿಗೆ ಸಮಾನವೆಂದು ಭಾವಿಸಿದ್ದಳು .
9 ) ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು ?
ರಾವಣನಿಗೆ ಸೀತೆಗೆ ಸಂಬಂಧಿಸಿದ ಭಾವನೆಯ ಬಗ್ಗೆ ವೈರಾಗ್ಯ ಮೂಡಿತು .
10 ) ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು ?
ರಾಮ – ಲಕ್ಷ್ಮಣರನ್ನು ಕೊಲ್ಲಬೇಕೆಂಬ ಯೋಚನೆಯನ್ನು ಮಾಡಬೇಡವೆಂದು ಸೀತೆ ರಾವಣನನ್ನು ಬೇಡಿಕೊಂಡಳು .
11 ) ಯಾವಾಗ ಸೀತೆಯನ್ನು ರಾಮನಿಗೆ ಕೊಡುವೆನೆಂದು ರಾವಣನು ಯೋಚಿಸುತ್ತಾನೆ ?
ಯುದ್ಧ ಭೂಮಿಯಿಂದ ರಾಮ – ಲಕ್ಷ್ಮಣರನ್ನು ಕರೆತಂದು ಸೀತೆಯನ್ನು ರಾಮನಿಗೆ ಕೊಡುವೆನೆಂದು ರಾವಣನು ಯೋಚಿಸುತ್ತಾನೆ.
12 ) ಸೌಮಿತ್ರಿ ಎಂದರೆ ಯಾರು ?
ಸೌಮಿತ್ರಿ ಎಂದರೆ ಲಕ್ಷ್ಮಣ
13 ) ವಿಭೀಷಣ ಯಾರು ?
ವಿಭೀಷಣ ರಾವಣನ ತಮ್ಮ ( ಸಹೋದರ )
Chapter 1 Kadadida Salilam Tilivandade Questions and Answers
ಇ ) ಕದಡಿದ ಸಲಿಲಂ ತಿಳಿವಂದದೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )
1 ) ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ .
ರಾವಣನ ಸೊಕ್ಕಿನ ಮಾತುಗಳನ್ನು ಕೇಳಿ ಸೀತೆ ಮೂರ್ಛಿತಳಾದಳು . ಅವಳ ಈ ಸ್ಥಿತಿಯನ್ನು ಕಂಡು ರಾವಣನ ಮನಸ್ಸು ಪರಿವರ್ತನೆಗೊಂಡು ಸೀತೆಯ ಬಗ್ಗೆ ವೈರಾಗ್ಯ ಮೂಡಿತು .
2 ) ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು ?
ತನಗೆ ಬಹುರೂಪಿಣಿ ವಿದ್ಯೆಯು ಸಿದ್ಧಿಯಾಗಿದೆ . ತನಗೆ ಯಾರಿಂದಲೂ ಯಾವ ರೀತಿಯಿಂದಲೂ ತೊಂದರೆಯಾಗದು . ಎಲ್ಲರನ್ನು ನಿಮ್ಮ ಮುಂದೆ ತಂದು ನಿಲ್ಲಿಸುವೆನು . ಆತ ` ಕವಿಲ್ಲವೆಂಬುದಾಗಿ ಬಹುಪರಿಯಾಗಿ ರಾವಣನು ಅಂತಃಪುರದ ಸ್ತ್ರೀಯರನ್ನು ಸಂತೈಸಿದನು .
3 ) ಬಹುರೂಪಿಣಿ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತ್ತು ?
ಬಹುರೂಪಿಣಿ ವಿದ್ಯೆಯು ರಾಮ – ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ಉಳಿದ ಸೈನ್ಯದೊಂದಿಗೆ ಹೋರಾಡುವುದಾಗಿ ರಾವಣನಿಗೆ ಆಶ್ವಾಸನೆಯಿತ್ತಿತ್ತು .
4 ) ಸೀತೆಯ ತಲ್ಲಣಕ್ಕೆ ಕಾರಣವೇನು ?
ಬಹುರೂಪಿಣಿ ವಿದ್ಯೆಯನ್ನು ಸಿದ್ಧಿಸಿಕೊಂಡು ಸೀತೆಯಲ್ಲಿಗೆ ರಾವಣನು ಅವನ ಮನವೊಲಿಸಲು ಬರುತ್ತಿರುವುದನ್ನು ತಿಳಿದು ರಾವಣನು ಮತ್ತೇನು ಹೇಳುವನೋ ಬುದಾಗಿ ಯೋಚಿಸುತ್ತಿದ್ದಳು . ರಾವಣನು ತನ್ನಲ್ಲಿಗೆ ಬರುತ್ತಿರುವನು ಎಂಬ ಸುದ್ದಿಯೇ ಸೀತೆಯ ತಲ್ಲಣಕ್ಕೆ ಕಾರಣವಾಯಿತು .
5 ) ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು ?
ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ “ ತನಗೆ ವಿದ್ಯಾದಿದೇವತೆಯಿಂದ ಬಹುರೂಪಿಣಿ ವಿದ್ಯೆಯು ಸಿದ್ಧಿಸಿರುವುದಾಗಿಯೂ ಇನ್ನೂ ತನಗೆ ಅಸಾಧ್ಯವಾದುದೇನಿಲ್ಲ . ನೀನು ನಿನ್ನ ನೆಚ್ಚಿನ ರಾಮನ ಆಸೆಯನ್ನು ಬಿಟ್ಟು ನನಗೆ ಒಡಂಬಡು , ಸಾಮ್ರಾಜ್ಯ ಸುಖವನ್ನು ಅನುಭವಿಸು ” ಎಂದು ನುಡಿದನು .
6 ) ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ ?
ಈಗಲೇ ಸೀತೆಯನ್ನು ರಾಮನಿಗೊಪ್ಪಿಸಿದರೆ ತನ್ನ ಪರಾಕ್ರಮವೂ , ಧೈರ್ಯವೂ , ಶೌರ್ಯವೂ , ಖ್ಯಾತಿಯೂ ನಾಶವಾಗಿ ಹೋಗುತ್ತದೆ ಎಂದು ಭಾವಿಸಿ ರಾವಣನು ಸೀತೆಯನ್ನು ಈಗಲೇ ರಾಮನಿಗೊಪ್ಪಿಸಲು ಬಯಸಲಿಲ್ಲ .
7 ) ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ ?
ತನ್ನ ಬಾಹುಬಲದಿಂದ ಎರಡು ಕಡೆ ಸೇನೆಯು ಹೊಗಳುವಂತೆ ಹೋರಾಡಿ , ಕೊನೆಯಲ್ಲಿ ರಾಮಲಕ್ಷ್ಮಣರನ್ನು ರಥ ಹೀನರನ್ನಾಗಿ ಮಾಡಿ ಅವರನ್ನು ಕರೆತಂದು ತಾನೇ ರಾಮನಿಗೆ ಸೀತೆಯನ್ನು ಒಪ್ಪಿಸುತ್ತೇನೆ ಎಂದು ರಾವಣನು ಅಂತಿಮವಾಗಿ ನಿರ್ಧರಿಸಿದನು .
8 ) ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು ?
ರಾವಣನು ತನ್ನ ಆಪ್ತರನ್ನು ಕುರಿತು ಈ ರೀತಿ ಹೇಳಿದನು . ಸೀತೆಯು ತನ್ನ ಗುಣವನ್ನಾಗಲಿ , ದಿವ್ಯಾಭರಣವನ್ನಾಗಲಿ , ರಾಜ್ಯಲಕ್ಷ್ಮಿಯನ್ನಾಗಲಿ ಬಯಸದೆ ಅದನ್ನು ತನ್ನ ಕೈಯಲ್ಲಿ ಹುಲ್ಲುಕಡ್ಡಿ ಹಿಡಿದು ಅದನ್ನು ತೃಣ ಸಮಾನವೆಂದು ಭಾವಿಸಿದಳು . ಇಂತಹ ಗುಣವಂತಳಾದ ಸತಿಯನ್ನು ನಾನು ಹೇಗೆ ತಾನೆ ತನ್ನ ಪಾಪದೃಷ್ಟಿಯಿಂದ ಗುಣಹಾನಿ ಮಾಡಲಿ , ಕಾರಣವಿಲ್ಲದೆ ಕರ್ಮವಶದಿಂದ ಕಾಮಾಸಕ್ತಿಯನ್ನು ಹೊಂದಿ ತನ್ನ ವಂಶದ ಹಿರಿಮೆಯನ್ನು ಅಳಿಯುವಂತೆ ಮಾಡಿದೆ . ಪ್ರಾಣಪ್ರಿಯರಾದ ಇವರನ್ನು ಅಗಲಿಸಿ ಅವಿವೇಕಿಯಾದೆ . ಆ ಮಾನಿನಿಗೆ ದುಃಖವನ್ನು ತಂದೆ . ವಿಭೀಷಣನ ಹಿತನುಡಿಗಳನ್ನು ತಿರಸ್ಕರಿಸಿ ಅಭಿಮಾನದ ಕೇಡನ್ನು ಹಿರಿತನದ ಬವಣೆಯನ್ನು ಉತ್ತಮ ಗುಣವನ್ನು ಮರೆತೆ ಎಂಬುದಾಗಿ ಉದ್ವೇಗದಿಂದ ಹೇಳಿಕೊಂಡನು .
Chapter 1 Kadadida Salilam Tilivandade Questions and Answers in 5-6 sentence
ಈ ) ಕದಡಿದ ಸಲಿಲಂ ತಿಳಿವಂದದೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )
1 ) ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ ?
ರಾವಣನಲ್ಲಿ ಕಂಡು ಬರುವ ಪಶ್ಚಾತ್ತಾಪವನ್ನು ಕವಿ ಈ ರೀತಿ ವರ್ಣಿಸಿದ್ದಾನೆ . ರಾವಣನ ಮಾತುಗಳನ್ನು ಕೇಳಿ ಜಾನಕಿ ಮೂರ್ಛಿತೆಯಾಗಲು ರಾವಣನಲ್ಲಿ ಅನುಕಂಪ ಹುಟ್ಟಿ , ಯೋಚಿಸಲು ತನ್ನ ಕರ್ಮಾಧೀನತೆಯಿಂದ ಹುಟ್ಟಿದಂತಹ ಕೆಟ್ಟ ಪಾಪದ ಕೆಟ್ಟ ಪರಿಣಾಮವನ್ನು ತಾನೇ ಹಳಿದುಕೊಂಡನು . ‘ ಕದಡಿದ ನೀರು ತಿಳಿಯಾಗುವಂತೆ ‘ ತನ್ನಿಂದ ತಾನೇ ತಿಳಿದುಕೊಂಡು ಮನಸ್ಸು ತಿಳಿಯಾದ ರಾವಣನಿಗೆ ಸೀತೆಯ ಬಗ್ಗೆ ತಾನಿಟ್ಟಿದ ಸಂಬಂಧದ ಬಗ್ಗೆ ವೈರಾಗ್ಯ ಹುಟ್ಟಿತು . ಉದಾತ್ತ ಗುಣ ಹೊಂದಿದ ರಾವಣನಲ್ಲಿ ನೀಲಾಕಾಶದಷ್ಟು ವಿಸ್ತಾರವಾದ , ನಿಶ್ಚಲವಾದ ಪವಿತ್ರ ಪ್ರೀತಿಯಾಯಿತು . ಆತನ ಮನದಲ್ಲಿ ಮೂಡಿದ ಕಾರುಣ್ಯರಸವೇ ಸೀತೆಯ ಉಂಟಾಗಿದ್ದ ಕಾಮಾಸಕ್ತಿಯನ್ನು ತೊಡೆದು ಹಾಕಿತು . ಇದನ್ನು ಕವಿ ಈ ರೀತಿ ವರ್ಣಿಸಿದ್ದಾನೆ . ಹತ್ತಿಕೊಂಡ ಸಂಜೆಯ ಅನುರಾಗವನ್ನು ಸೂರ್ಯನು ತೊರೆಯದಿರುವನೆ , ಮನಸ್ಸಿನ ದುರಾಸೆಯಿಂದ ಎಲ್ಲಿಯಾದರೂ ಕೆಟ್ಟದ್ದನ್ನು ಆಚರಿಸಿದರೆ ಉತ್ತಮನಾದವನು ಅದನ್ನು ತೊರೆದು ಬಿಡುವನೇ ಎಂಬುದಾಗಿ ವರ್ಣಿಸಿದ್ದಾನೆ .
2 ) “ ಕದಡಿದ ಸಲಿಲಂ ತಿಳಿವಂದದೆ ” ಕಾವ್ಯಭಾಗದಲ್ಲಿ ಕಂಡುಬರುವ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ , ನಿಮ್ಮ ಮಾತುಗಳಲ್ಲಿ ಉತ್ತರಿಸಿರಿ .
“ಕದಡಿದ ಸಲಿಲಂ ತಿಳಿವಂದದೆ ” ಕಾವ್ಯ ಭಾಗದಲ್ಲಿ ಕಂಡುಬರುವ ರಾವಣನ ವ್ಯಕ್ತಿತ್ವ ಪ್ರಶಂಸನೀಯವಾಗಿದೆ . ವಾಲ್ಮೀಕಿ ರಾಮಾಯಣದ ರಾವಣ ಖಳ ನಾಯಕನಾದರೆ ಇಲ್ಲಿ ಪೂರ್ಣ ರೂಪದ ಖಳನಾಯಕನಾಗಿರದೆ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾನೆ .’ ಪ್ರಸ್ತುತ ಕಾವ್ಯ ಭಾಗದ ರಾವಣನು ಎಂತಹ ಕ್ಲಿಷ್ಟಕರ ವ್ರತವಾದರೂ ದೃಢ ಮನಸ್ಸಿನಿಂದ ಭಕ್ತಿ ಪರಾವಶನಾಗಿ ಅನನ್ಯ ಭಕ್ತಿಯಿಂದ ಅದನ್ನು ಸಾಧಿಸುತ್ತಾನೆ . ಉದಾಹರಣೆಗೆ – ಆತನು ಬಹುರೂಪಿಣಿ ವಿದ್ಯೆಯನ್ನು ಗಳಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ .
ಉದಾತ್ತ ಗುಣವುಳ್ಳ ರಾವಣ ಕರ್ಮವಶದಿಂದಾಗಿ ಕಾಮಾಸಕ್ತಿಗೆ ಒಳಗಾಗಿದ್ದಾಗಲೂ ಅವನಲ್ಲಿದ್ದ ಕಾರುಣ್ಯ ರಸ ಹೊರ ಹೊಮ್ಮುತ್ತದೆ . ಇದರ ಪರಿಣಾಮವೇ ಜಾನಕಿ ಮೂರ್ಛಿತಳಾದಾಗ ತನ್ನ ಕದಡಿದ ಮನವು ತಿಳಿಯಾಗುತ್ತದೆ . ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾನೆ . ವಿಭೀಷಣನ ಹಿತನುಡಿ ಕೇಳಬೇಕಿತ್ತು ಎಂಬ ತನ್ನ ಮನದಾಳದ ಭಾವನೆಯನ್ನು ತನ್ನ ಆಪ್ತರಲ್ಲಿ ಹಂಚಿಕೊಳ್ಳುತ್ತಾನೆ .
ರಾವಣನ ಅಂತಃಪುರದಲ್ಲಿ ಆತನ ರಾಣಿಯರು ಅವರಾಗಿಯೇ ಇಷ್ಟಪಟ್ಟು ಮೋಹಿಸಿ ಬಂದವರೇ ಹೊರತು ಯಾರ ಬಗ್ಗೆಯೂ ಮೋಹಿತನಾಗಿ ಬಲಾತ್ಕಾರದಿಂದ ಎಳೆದು ತಂದವರಲ್ಲ ಎಂಬುದಾಗಿ ಕವಿ ಬಣ್ಣಿಸಿದ್ದಾನೆ . ಇದು ಅವನ ಉದಾತ್ತ ಗುಣಕ್ಕೆ ಉದಾಹರಣೆಯಾಗಿದೆ . ಪ್ರಸ್ತುತ ಕಾವ್ಯದ ರಾವಣನು ನಳರೂಬರನ ಪತ್ನಿ ಉಪರಂಭೆಯು ತಾನಾಗಿಯೇ ಒಲಿದು ಬಂದಾಗ ಅವಳಿಗೆ ಸದುಪದೇಶ ನೀಡಿ ಕಳುಹಿಸಿದನು . ಇದು ಆತನ ಉದಾತ್ತ ಚರಿತಕ್ಕೆ ಉದಾಹರಣೆಯಾಗಿದೆ .
ಹಿಂದೆಂದೂ ಯಾರಿಗೂ ಸೋಲದ ರಾವಣ ಸೀತೆಗೆ ಮರುಳಾಗುತ್ತಾನೆ . ಅವಳನ್ನು ಅಪಹರಿಸಿದರೂ ಅಂತಃಪುರಕ್ಕೆ ಕರೆತರದೆ ಪ್ರಮದವನದಲ್ಲಿ ಸೆರೆಯಿಡುತ್ತಾನೆ . ಇದಕ್ಕೆ ಕಾರಣ ನಾಗಚಂದ್ರನೇ ವರ್ಣಿಸಿರುವಂತೆ ರಾವಣ ಮೂಲತಃ ಸದ್ಗುಣೋಪೇತನಾದ ಮಹಾಪುರುಷ , ಅಂತಹವನು ಕಾಲಕರ್ಮ ಸಂಯೋಗದಿಂದ ಅಲ್ಪ ದೌರ್ಬಲ್ಯವಶನಾಗಿ ಆ ದೌರ್ಬಲ್ಯವು ಆಕಸ್ಮಿಕವೇ ಹೊರತು ಸ್ವಭಾವ ಸಹಜವಾದುದಲ್ಲ . ವಿಧಿ ಸಂಕಲ್ಪ ಪ್ರೇರಿತವಾಗಿ ಪತನಾಭಿಮುಖನಾಗುತ್ತಾನೆ . ನಮ್ಮ ಅನುಕಂಪ ಸಹಾನುಭೂತಿಗೆ ಪಾತ್ರನಾಗುತ್ತಾನೆ .
ಅಂತಿಮವಾಗಿ ಸೀತೆಯನ್ನು ಒಪ್ಪಿಸುವ ತೀರ್ಮಾನಕ್ಕೆ ಬಂದರೂ ತನ್ನ ಸಾಹಸ , ಶೌರ್ಯ , ಪರಾಕ್ರಮಗಳಿಗೆ ಕುಂದುಂಟಾಗದಂತೆ ಕೊನೆಯಲ್ಲಿ ರಣರಂಗದಲ್ಲಿ ಎರಡು ಕಡೆಯು ಮೆಚ್ಚುವಂತೆ ಹೋರಾಡಿ ರಾಮ – ಲಕ್ಷ್ಮಣರನ್ನು ರಥಹೀನರನ್ನಾಗಿ ಮಾಡಿ ಅವರನ್ನು ಕರೆತಂದು ಶ್ರೀರಾಮನಿಗೆ ಸೀತೆಯನ್ನು ಒಪ್ಪಿಸುವ ತೀರ್ಮಾನ ಮಾಡುತ್ತಾನೆ . ಇದು ಆತನ ಸದ್ಗುಣಕ್ಕೆ ಮತ್ತೊಂದು ಉದಾಹರಣೆಯಾಗಿದೆ . ಪ್ರಸ್ತುತ ಕಾವ್ಯ ಭಾಗದಲ್ಲಿನ ರಾವಣನು “ ಪರಾಂಗನಾವಿರತಿ ‘ ಎಂಬ ವ್ರತವನ್ನು ಹಿಡಿದ ಮಹಾನ್ ಭಕ್ತ , ಸತ್ಕುಲ ಪ್ರಸೂತ, ಜಿನಭಕ್ತ, ಅಹಿಂಸಾರತ, ಮಹಾ ಪರಾಕ್ರಮಿಯಾಗಿದ್ದಾನೆ.
3 ) ಪ್ರಮದವನದಲ್ಲಿ ರಾವಣ ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ .
ಪ್ರಮದವನದಲ್ಲಿದ್ದ ಸೀತೆಯನ್ನು ಕಾಣಲು ರಾವಣನು ಬಂದು ಸೀತೆಯನ್ನು ಉದ್ದೇಶಿಸಿ ತನಗೆ ಬಹುರೂಪಿಣಿ ವಿದ್ಯೆ ಸಿದ್ದಿಯಾಗಿದೆ. ತನಗೆ ಅಸಾಧ್ಯವಾದುದು ಯಾವುದು ಇಲ್ಲ . ನಿನ್ನ ನೆಚ್ಚಿನ ರಾಮನ ಆಸೆಯನ್ನು ಬಿಟ್ಟು ತನ್ನನ್ನು ಸ್ವೀಕರಿಸಿ ಸಾಮ್ರಾಜ್ಯ ಸುಖವನ್ನು ಅನುಭವಿಸು ಎಂದನು . ಆಗ ಸೀತೆಯು ಕಳವಳಗೊಂಡು ರಾಮಚಂದ್ರನ ಆಯಸ್ಸಿನ ಪ್ರಾಣದವರೆಗೆ ಬಾರದಿರು ಎಂದು ಹೇಳುತ್ತಾ ಭೂಮಿಯ ಮೇಲೆ ಬಿದ್ದು ಮೂರ್ಛ ಹೋದಳು .
4) ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ? ವಿವರಿಸಿ .
ರಾವಣನ ಮನಃ ಪರಿವರ್ತನೆಯ ಸಂದರ್ಭವನ್ನು ಕವಿ ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾನೆ . ಜಾನಕಿ ಮೂರ್ಛಿತೆಯಾಗಲು ರಾವಣನಿಗೆ ಸೀತೆಯ ಬಗ್ಗೆ ಅನುಕಂಪ ಹುಟ್ಟಿತು . ತನ್ನ ಕರ್ಮಾಧೀನತೆಯಿಂದ ಹುಟ್ಟಿದಂತಹ ಕೆಟ್ಟ ಪಾಪದ ಕೆಟ್ಟ ಪರಿಣಾಮವನ್ನು ತಾನೇ ಕದಡಿದ ನೀರು ತಿಳಿಯಾಗುವಂತೆ ತನ್ನಿಂದ ತಾನೇ ಹಳಿದುಕೊಂಡನು . ಮನಸ್ಸು ತಿಳಿಯದ ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಹುಟ್ಟಿತು . ಕವಿಯು ರಾವಣನ ಈ ಮನಃ ಪರಿವರ್ತನೆಯ ಸಂದರ್ಭವನ್ನು ಈ ರೀತಿ ವರ್ಣಿಸಿದ್ದಾನೆ . “ ಉದಾತ್ತ ಮನೋಗುಣವುಳ್ಳವನ ಮನಸ್ಸು ನೀಲಾಕಾಶದಂತೆ ವಿಸ್ತಾರವಾದ , ಸ್ಥಿರವಾದ ಪ್ರೀತಿಯಿಂದ ಕೂಡಿರುತ್ತದೆ . ಹತ್ತಿಕೊಂಡ ಸಂಜೆಯ ಅನುರಾಗವನ್ನು ಸೂರ್ಯನು ತೊರೆಯದಿರುವನೇ ? ಮನಸ್ಸಿನ ದುರಾಸೆಯಿಂದ ಎಲ್ಲಿಯಾದರೂ ಕೆಟ್ಟದ್ದನ್ನು ಆಚರಿಸಿದರೆ ಉತ್ತಮನಾದವನು ತೊರೆದು ಬಿಡದಿರುವನೆ ? ಅಂತು ಮನಸ್ಸಿನಲ್ಲಿ ಮೂಡಿದ ಕಾರುಣ್ಯರಸವೆ ಸೀತೆಯ ಮೇಲೆ ಉಂಟಾದ ಪ್ರೀತಿಯನ್ನು ತೊಳೆದು ಕಳೆಯಿತು . ಸ್ವಭಾವದ ಪರಿಣತಿಯಲ್ಲಿ ಸ್ಥಿರವಾಗಿ ನಿಂತನು ಎಂಬುದಾಗಿ ಕವಿ ವರ್ಣಿಸಿದ್ದಾನೆ .
5 ) ರಾವಣನು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ .
ರಾಮ ಸೈನ್ಯವು ಲಂಕೆಯನ್ನು ಮುತ್ತಲು ವಿಜಯಕ್ಕಾಗಿ ರಾವಣ ಬಹುರೂಪಿಣಿ ವಿದ್ಯೆಯನ್ನು ಸಾಧಿಸಲು ಜೀನಾಲಯಕ್ಕೆ ಬಂದನು.ಜೀನಾಲಯದಲ್ಲಿ ಅನನ್ಯ ಭಕ್ತಿಯಿಂದ ಪೂಜಾಮಗ್ನನಾದನು . ಬಹುರೂಪಿಣಿಯು ಪ್ರತ್ಯಕ್ಷಳಾದಳು . ಬಹುರೂಪಿಣಿ ವಿದ್ಯೆಯು ಪ್ರತ್ಯಕ್ಷಳಾಗಿ ರಾಮ – ಲಕ್ಷ್ಮಣರನ್ನು ಮಾತ್ರ ತಾನು ಕೊಲ್ಲಲಾರೆ ಎಂದು ಹೇಳುತ್ತದೆ . ಈ ಬಹುರೂಪಿಣಿ ವಿದ್ಯೆಯನ್ನು ರಾವಣನು ಒಲಿಸಿಕೊಂಡಿರುವನು . ಇದರಂತೆ ತನಗಿಷ್ಟವಾದ ರೂಪಧರಿಸಿ ಶತ್ರುಗಳನ್ನು ಸಂಹರಿಸುವ ವರವನ್ನು ಪಡೆದಿದ್ದನು .
Chapter 1 Kadadida Salilam Tilivandade 2nd puc
೧.೫ ಕದಡಿದ ಸಲಿಲಂ ತಿಳಿವಂದದೆ ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
1. “ ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪೆಂ ”
” ನಾಗಚಂದ್ರ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಸ್ವೀಕರಿಸಿರುವ ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ರಾವಣನು ಹೇಳುವ ಮಾತಿದು . ರಾವಣನು ಸೀತಾಪಹರಣ ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ಅವಳನ್ನು ರಾಮನಿಗೆ ಹಿಂದಿರುಗಿಸುವ ನಿರ್ಧಾರಕ್ಕೆ ಬರುತ್ತಾನೆ . ಆದರೆ ಅವನು ಆ ಕೂಡಲೇ ಆಕೆಯನ್ನು ರಾಮನಿಗೊಪ್ಪಿಸದೆ , ಯುದ್ಧಮಾಡಿ , ಯುದ್ಧದಲ್ಲಿ ರಾಮನನ್ನು ಸೋಲಿಸಿ , ಸೆರೆಹಿಡಿದು ತಂದು , ಆ ನಂತರ ಅವನಿಗೆ ಸೀತೆಯನ್ನು ಒಪ್ಪಿಸಬೇಕೆಂದು ಯೋಚಿಸುತ್ತಾನೆ . ಅವನ ಆ ಯೋಚನೆಯು ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಗೊಂಡಿದೆ .
2. “ ಏನಂ ಕೇಳಪೆನೋ … ಹೊಲ್ಲವಾರ್ತೆಯನಿನ್ ”
‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಿಂದಾಯ್ದ ಈ ಮೇಲಿನ ವಾಕ್ಯವನ್ನು ಸೀತೆಯು ತನಗೆ ತಾನೆ ಹೇಳಿಕೊಳ್ಳುತ್ತಾಳೆ . ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡು ಸಂತೋಷಭರಿತನಾದ ರಾವಣನು ಸೀತೆಯ ತಾವರೆಯಂತಹ ಮುಖವನ್ನು ನೋಡಲು ವಿಶೇಷ ಕಾತರದಿಂದ ಪ್ರಮದವನಕ್ಕೆ ಆಗಮಿಸುತ್ತಾನೆ . ಅಲ್ಲಿದ್ದ ರಾಕ್ಷಸ ಸ್ತ್ರೀಯರು ಸೀತೆಗೆ ರಾವಣನು ಆಗಮಿಸುತ್ತಿರುವ ಸುದ್ದಿಯನ್ನು ಮುಟ್ಟಿಸುತ್ತಾರೆ . ಆಗ ಸೀತೆಯು ರಾಮ – ಲಕ್ಷ್ಮಣರಿಗೆ ಸಂಬಂಧಿಸಿದಂತೆ ಇನ್ನಾವ ಕೆಟ್ಟ ಸುದ್ದಿಯನ್ನು ಕೇಳಬೇಕಾಗಿದೆಯೋ ? ಎಂದು ಮನಸ್ಸಿನಲ್ಲಿಯೇ ಕಳವಳ ಗೊಳ್ಳುವ ಸಂದರ್ಭವನ್ನು ಕವಿ ಇಲ್ಲಿ ವರ್ಣಿಸಿದ್ದಾನೆ .
3 . “ ಉಳಿದವರಳಿವೆನಗೇವುದೆಂ ” ?
” ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಿಂದ ಆಯ್ದುಕೊಂಡಿರುವ ಈ ಮೇಲಿನ ವಾಕ್ಯವನ್ನು ರಾವಣನು ಬಹುರೂಪಿಣಿ ವಿದ್ಯೆಯನ್ನು ಕುರಿತು ಹೇಳುತ್ತಾನೆ . ರಾವಣನ ಎದಿರು ಪ್ರತ್ಯಕ್ಷಗೊಂಡ ದೇವತೆಯು ಯುದ್ಧದಲ್ಲಿ ರಾಮ ಲಕ್ಷ್ಮಣರನ್ನುಳಿದು ಉಳಿದವರನ್ನೆಲ್ಲಾ ಸಂಹರಿಸಲು ಸಹಾಯಮಾಡುವುದಾಗಿ ಹೇಳುತ್ತದೆ . ಆಗ ರಾವಣನು ಉಳಿದವರ ಸಾವಿನಿಂದ ನನಗೇನು ಪ್ರಯೋಜನ ? ಎಂದು ದೇವತೆಯನ್ನು ಪ್ರಶ್ನಿಸುವನು . ರಾವಣನಿಗೆ ಬೇಕಿರುವುದು ರಾಮ – ಲಕ್ಷ್ಮಣರ ಅವಸಾನ . ದೇವತೆಯಿಂದ ಈ ಕೆಲಸಕ್ಕೆ ನೆರವು ಸಿಗದಿದ್ದಾಗ ಅವನು ಅಲ್ಲಿಂದ ಕಾಲೆಗೆಯುವನು .
4. “ ಸಮಧಿಕರಾರ್ ಜಗತ್ತಯದೊಳಿನ್ನೆನಗೆ ” ?
” ನಾಗಚಂದ್ರ ಕವಿಯು ರಚಿಸಿರುವ ‘ ಪಂಪರಾಮಾಯಣ’ದಿಂದಾಯ್ದ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಲ್ಲಿನ ಈ ಮೇಲಿನ ವಾಕ್ಯವನ್ನು ರಾವಣನು ಆಡುತ್ತಾನೆ . ಬಹುರೂಪಿಣಿ ವಿದ್ಯೆಯ ಅನುಗ್ರಹವನ್ನು ಪಡೆದ ರಾವಣನು , ವಿದ್ಯೆಯನ್ನೊಮ್ಮೆ ಪರೀಕ್ಷಿಸಿ ನೋಡಿಕೊಳ್ಳುತ್ತಾನೆ . ಆನಂತರ ಅವನಲ್ಲಿ ಆತ್ಮವಿಶ್ವಾಸವು ವೃದ್ಧಿಸಿ ಹೃದಯದಲ್ಲಿ ಸಂತೋಷ ತುಂಬಿಕೊಳ್ಳುತ್ತದೆ . ಆಗ ರಾವಣನು ಮೂರುಲೋಕದಲ್ಲೂ ತನಗೆ ಸಮಬಲ ರಾದವರು ಯಾರೂ ಇಲ್ಲ . ಯುದ್ಧದಲ್ಲಿ ತನ್ನನ್ನು ಎದುರಿಸಿ ಗೆಲ್ಲುವವರಾರಿಲ್ಲವೆಂದು ಬೀಗುವ ಸಂದರ್ಭವಿದಾಗಿದೆ .
5 , “ ಅಸಾಧ್ಯಮಪ್ಪ ಮರುವಕ್ಕಮಿಲ್ಲ”
” ನಾಗಚಂದ್ರ ಕವಿಯ ‘ ಪಂಪರಾಮಾಯಣ’ದಿಂದಾಯ್ದುಕೊಂಡಿರುವ ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಲ್ಲಿನ ಈ ಮೇಲಿನ ಮಾತನ್ನು ರಾವಣನು ಸೀತೆಯನ್ನುದ್ದೇಶಿಸಿ ಆಡುತ್ತಾನೆ . ಸೀತೆಯ ಬಳಿಬಂದ ರಾವಣನು ತನಗೆ ಬಹುರೂಪಿಣಿ ವಿದ್ಯೆಯು ವಶ ವಾಗಿರುವುದರಿಂದ ಯುದ್ಧದಲ್ಲಿ ನನಗೆ ಅಸಾಧ್ಯವಾದ ಎದುರಾಳಿಗಳಿಲ್ಲ . ಆದ್ದರಿಂದ ನೀನು ರಾಮನ ಚಿಂತೆಯನ್ನು ಬಿಟ್ಟು , ತನಗೆ ಒಲಿದು , ಸಾಮ್ರಾಜ್ಯ ಸುಖವನ್ನನುಭವಿಸಿ ಕೊಂಡಿರಬೇಕೆಂದು ಸೀತೆಯನ್ನು ಕುರಿತು ಹೇಳುವ ಸಂದರ್ಭದಲ್ಲಿ ಕವಿಯು ಈ ಮೇಲಿನ ವಾಕ್ಯವನ್ನು ರಚಿಸಿದ್ದಾನೆ .
6. “ ಕದಡಿದ ಸಲಿಲಂ ತಿಳಿವಂದದೆ ”
” ಈ ವಾಕ್ಯವನ್ನು ನಾಗಚಂದ್ರನ ‘ ಪಂಪರಾಮಾಯಣ’ದಿಂದ ಆಯ್ದುಕೊಂಡಿರುವ ಇದೇ ಶೀರ್ಷಿಕೆಯ ಕಾವ್ಯಭಾಗದಿಂದ ಸ್ವೀಕರಿಸಲಾಗಿದೆ . ಸೀತೆಯು ಮೂರ್ಛತಪ್ಪಿ ನೆಲಕ್ಕುರುಳಿದ್ದನ್ನು ಕಂಡ ರಾವಣನಲ್ಲಿ ಅವಳ ಬಗ್ಗೆ ವ್ಯಾಮೋಹ ದೂರಾಗಿ ವೈರಾಗ್ಯ ಉದಯಿಸುವುದರೊಂದಿಗೆ , ಆಕೆಯ ಬಗ್ಗೆ ಅನುಕಂಪ , ಕರುಣೆ ಉಕ್ಕುತ್ತದೆ . ತನ್ನ ಅಕಾರ್ಯದ ಬಗ್ಗೆ ಮರುಕಗೊಳ್ಳುವ ರಾವಣನ ಮನಸ್ಸು ಬದಲಾಗುತ್ತದೆ . ಸೀತೆಯನ್ನು ಅಪಹರಿಸಿದಾಗ ಕದಡಿ ಹೋಗಿದ್ದ ರಾವಣನ ಮನಸ್ಸೆಂಬ ಕೊಳವು , ಈಗ ತನಗೆ ತಾನೆ ತಿಳಿಗೊಂಡು ಅವಳಲ್ಲಿನ ವ್ಯಾಮೋಹದಿಂದ ಬಿಡಿಸಿಕೊಂಡು ನಿರ್ಮಲಗೊಂಡಿತೆಂದು ಕವಿಯು ವರ್ಣಿಸಿದ್ದಾನೆ . ಇದೊಂದು ಔಚಿತ್ಯ ಪೂರ್ಣ ನಿರೂಪಣೆಯಾಗಿದೆ .
7. “ ಅಪೇಕ್ಷಿಸುವೆನೇ ಗುಣಹಾನಿಯನನ್ನ ಪಾಪದಿಂ “
” ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಇದು ರಾವಣನು ತನ್ನಲ್ಲೇ ಹೇಳಿಕೊಳ್ಳುವ ಮಾತಾಗಿದೆ . ಸೀತೆಯು ರಾವಣನಿಗೆ ಒಲಿಯಲಿಲ್ಲ . ಬದಲಿಗೆ , ಅವನ ದಿವ್ಯಭೂಷಣ ವಸ್ತ್ರಗಳನ್ನಾಗಲಿ , ಅವನ ಪ್ರೀತಿಯನ್ನಾಗಲಿ , ರಾಕ್ಷಸ ರಾಜ್ಯಲಕ್ಷ್ಮಿಯ ಒಡತಿಯಾಗುವ ವೈಭವವನ್ನಾಗಲಿ ಬಯಸದೆ ಅವುಗಳನ್ನು ತೃಣಸಮಾನವಾಗಿ ಕಂಡಳು . ಇದನ್ನರಿತ ರಾವಣನು ಸೀತೆಯನ್ನು ಪ್ರಣಯ ಪೌರುಷದಿಂದ ನಾನು ಪಾಪಗೈದು ಈಕೆಯನ್ನು ಬಯಸಬಾರದೆಂದು ತನ್ನಲ್ಲೇ ಯೋಚಿಸುವ ಸಂದರ್ಭವನ್ನು ಕವಿ ಈ ಮೇಲಿನ ವಾಕ್ಯದಲ್ಲಿ ವಿವರಿಸಿದ್ದಾನೆ .
8. “ ಉದಾತ್ತನೊಳ್ ಪುಟ್ಟದಲ್ಲೆ ನೀಲೀರಾಗ ”
” ನಾಗಚಂದ್ರ ಕವಿಯು ರಚಿಸಿರುವ ‘ ಪಂಪರಾಮಾಯಣ’ದಿಂದ ಆಯ್ದು ಕೊಂಡಿರುವ ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದ ಈ ಮೇಲಿನ ವಾಕ್ಯವನ್ನು ಕವಿಯೇ ಹೇಳಿರುವನು . ಸೀತೆಯು ಮೂರ್ಛತಪ್ಪಿ ನೆಲದ ಮೇಲೆ ಬಿದ್ದಾಗ ರಾವಣನಲ್ಲಿ ಅವಳ ಬಗ್ಗೆ ಕರುಣೆ – ಅನುಕಂಪ ಮುಂತಾದ ಭಾವಗಳು ಸ್ಪುರಿಸಿ , ವ್ಯಾಮೋಹವು ದೂರಾಗುತ್ತವೆ . ಆತನದು ದೃಢಚಿತ್ತ ಎಷ್ಟಾದರೂ ಆತ ಉದಾತ್ತ ಚರಿತನೇ ತಾನೆ ? ಎಂದು ಪ್ರಶ್ನಿಸಿರುವ ಕವಿಯು ರಾವಣನ ಮನಃಪರಿವರ್ತನೆಯು ಅವನ ಉದಾತ್ತಗುಣಕ್ಕೆ ಸಹಜವಾಗಿಯೇ ಇದೆ ಎಂದಿರುವನು .
9. “ ಕಂದರ್ಪ ವಿಮೋಹದಿಂದಗಲಿದೆ ”
” ನಾಗಚಂದ್ರ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಸ್ವೀಕರಿಸಲಾದ ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ಸೀತೆಯು ಮೂರ್ಛ ಹೋಗಿರುವುದನ್ನು ಕಂಡ ರಾವಣನು ಅವಳ ಬಗ್ಗೆ ಮರುಕದಿಂದ ಚಿಂತಿಸುತ್ತಾನೆ . ಸೀತಾಪಹರಣ ಮಾಡಿದ್ದಕ್ಕಾಗಿ ಅವನಲ್ಲಿ ಪಶ್ಚಾತ್ತಾಪ ಮೂಡಿದೆ . ಪ್ರಾಣಪ್ರಿಯರಾದ ರಾಮ – ಸೀತೆಯರನ್ನು ತಾನು ತನ್ನ ಕರ್ಮವಶದ ನೆವದಿಂದ ಕಾಮಮೋಹಿತನಾಗಿ ಅಗಲಿಸಿದೆ . ಇದರಿಂದಾಗಿ ತನ್ನ ಕುಲದ ಹಿರಿಮೆ ಅಳಿಯಿತು , ಎಂತಹ ಅವಿವೇಕಿ ತಾನೆಂದು ರಾವಣನು ಯೋಚಿಸುತ್ತಾನೆ . ಆ ಸಂದರ್ಭದಲ್ಲಿ ಈ ಮೇಲಿನ ವಾಕ್ಯ ಬಂದಿದೆ .
10. “ ಕೃತಾಂತಜಿಹೈ ಪೊಡಕರಿಸುವವೋಲ್ “
ಅಭಿನವ ಪಂಪನೆಂದೇ ಖ್ಯಾತನಾಗಿರುವ ನಾಗಚಂದ್ರ ಕವಿಯು ಬರೆದಿರುವ ‘ ರಾಮಚಂದ್ರಚರಿತಪುರಾಣ’ದಿಂದ ಸ್ವೀಕರಿಸಿರುವ ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳುವ ಸಲುವಾಗಿ ಶಾಂತಿ ಜಿನಭವನದಲ್ಲಿ ದೃಢಚಿತ್ತನಾಗಿ ಧ್ಯಾನಮಾಡುತ್ತಾನೆ . ಅವನ ಎದುರಿಗೆ ಆ ದೇವತೆಯು ಪ್ರತ್ಯಕ್ಷಗೊಂಡು ನುಡಿಯುವ ಸಂದರ್ಭವನ್ನು ಕವಿಯು ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾನೆ . ಯಮನ ನಾಲಗೆಯೇ ಸಂಚಲಿಸಿ ನುಡಿಯುವಂತಿತ್ತೆಂದು ಕವಿ ವಿವರಿಸಿದ್ದಾನೆ . ಯುದ್ಧದಲ್ಲಿ ನೆರವಾಗುವ ಬಹುರೂಪಿಣಿ ದೇವತೆಯನ್ನು ಯಮನ ನಾಲಗೆಗೆ ಹೋಲಿಸಿರುವುದು ಔಚಿತ್ಯಪೂರ್ಣವಾಗಿದೆ .
11. “ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆ ”
ʼಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಲ್ಲಿ ಈ ಮೇಲಿನ ವಾಕ್ಯ ವನ್ನು ರಾವಣನು ಸ್ವಗತದಲ್ಲಿ ಹೇಳಿಕೊಳ್ಳುತ್ತಾನೆ. ಶ್ರೀರಾಮನಿಂದ ಅಗಲಿಸಿ ಸೀತೆಯನ್ನು ಕರೆತಂದುದಕ್ಕೆ ರಾವಣನಲ್ಲಿ ಅಪಾರ ವಾದ ಮರುಕವಿದೆ . “ ರಾಮನಿಂದ ಅಗಲಿಸಿ ಇವಳನ್ನು ಹೊತ್ತು ತಂದುದರಿಂದ ಈಕೆಗೆ ತುಂಬಾ ದುಃಖವನ್ನುಂಟುಮಾಡಿದೆ ” ನೆಂದು ಆತ ಯೋಚಿಸುತ್ತಾನೆ . ಕಾಮವಶ ನಾಗಿ ತಾನು ಈ ಅಪಚಾರ ಮಾಡಿದ್ದಕ್ಕೆ ಅವನಿಗೆ ಪಶ್ಚಾತ್ತಾಪವಾಗಿದೆ .
12. “ ರಘುತನೂಜನಾಯುಃಪ್ರಾಣಂಬರೆಗಂ ಬಾರದಿರು”‘
ʼಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯಭಾಗದಲ್ಲಿ ಸೀತೆಯು ರಾವಣನನ್ನು ಉದ್ದೇಶಿಸಿ ಈ ಮೇಲಿನ ವಾಕ್ಯವನ್ನು ಆಡುತ್ತಾಳೆ. ಬಹುರೂಪಿಣಿ ವಿದ್ಯೆಯನ್ನು ಕೈವಶಮಾಡಿಕೊಂಡಿರುವ ವಿಚಾರವನ್ನು ಸೀತೆಗೆ ತಿಳಿಸಿದ ರಾವಣನು , ಸೀತೆಯು ಇನ್ನಾದರೂ ರಾಮನನ್ನು ಮರೆತು ತನಗೆ ಒಲಿದುಬಂದು ಸಾಮ್ರಾಜ್ಯ ಸುಖವನ್ನನುಭವಿಸಿಕೊಂಡು ಇರಬೇಕೆಂದು ಕೇಳಿಕೊಳ್ಳುತ್ತಾನೆ . ಸೀತೆಯು ಮನದಲ್ಲಿ ದುಃಖವನ್ನನುಭವಿಸುತ್ತಾ ರಾವಣನನ್ನು ಉದ್ದೇಶಿಸಿ “ ಯುದ್ಧದಲ್ಲಿ ಶ್ರೀರಾಮನ ಆಯುಷ್ಯ – ಪ್ರಾಣಗಳವರೆಗೂ ಬರಬಾರದೆಂದು ವಿನಂತಿಸಿಕೊಂಡು ಮೂರ್ಛತಪ್ಪಿ ನೆಲಕ್ಕೊರಗುವ ಸಂದರ್ಭವನ್ನು ಕವಿ ಇಲ್ಲಿ ಚಿತ್ರಿಸಿರುವನು .
Sir please send me 2nd puc
Kannada
English
Geography
Accounts
Business
Economic notes