WhatsApp Group Join Now
Telegram Group Join Now

FDA-2018-samanya-kannada-Question-Paper

FDA-2018 Paper-2 General KANNADA Questions with answers


ದಿನಾಂಕ 25.02.2018 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಕನ್ನಡ ಪತ್ರಿಕೆ – II (ವಿಷಯ ಸಂಕೇತ: 282)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

ಸೂಚನೆಗಳು: ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1-9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.

ಉದಾಹರಣೆ :
ಮೀನ್ ಎಂದರೆ
 (1)ಹೊಳೆಯುವ
 (2)ಮೀಯು
 (3)ಮೇಯು
 (4)ಆಕಾಶ

ಇಲ್ಲಿ ‘‘ಹೊಳೆಯುವ’’ ಎಂಬುದು ‘‘ಮೀನ್’’ನ ಅರ್ಥವನ್ನು ಹೇಳುವ ಪದ. ಆದುದರಿಂದ (1)ನ್ನು ಗುರುತಿಸಬೇಕು.

1.ಸಾಕೂತ
 (1)ಸಹಿಸಲಸಾಧ್ಯವಾದ
 (2)ಕುತೂಹಲಕರವಾದ
 (3)ಸಾಕುಸಾಕಾದ
 (4)ಅಭಿಪ್ರಾಯ ಸಹಿತವಾದ
ಸರಿ ಉತ್ತರ

(4) ಅಭಿಪ್ರಾಯ ಸಹಿತವಾದ


2.ಬವರ
 (1)ಯುದ್ಧ
 (2)ಮಿತ್ರತ್ವ
 (3)ಕ್ಷಿಪಣಿ ಧಾಳಿ
 (4)ಶತೃತ್ವ
ಸರಿ ಉತ್ತರ

(1) ಯುದ್ಧ


3.ಪ್ರಮೋದ
 (1)ಸಂತೋಷ
 (2)ಆರಾಧನೆ
 (3)ಮದ
 (4)ಮಂದ
ಸರಿ ಉತ್ತರ

(1) ಸಂತೋಷ


4.ಮುಕುರ
 (1)ಮುಖ
 (2)ಕನ್ನಡಿ
 (3)ಕಣ್ಣು
 (4)ಮೂಗುತಿ
ಸರಿ ಉತ್ತರ

(2) ಕನ್ನಡಿ (4) ಮೂಗುತಿ


5.ತಂಡುಲ
 (1)ಹೊಲ
 (2)ಡಿಂಗರ
 (3)ಅಕ್ಕಿ
 (4)ರಾಗಿ
ಸರಿ ಉತ್ತರ

(3) ಅಕ್ಕಿ


6.ಮೇದಿನಿ
 (1)ಮರ
 (2)ಬೆಟ್ಟಗುಡ್ಡ
 (3)ಭೂಮಿ
 (4)ಮೇವು ಇರುವ ತಾಣ
ಸರಿ ಉತ್ತರ

(3) ಭೂಮಿ


7.ಆವು
 (1)ಆಡು
 (2)ಹಾವು
 (3)ಹಸು
 (4)ಎತ್ತು
ಸರಿ ಉತ್ತರ

(3) ಹಸು


8.ಉತ್ತಾರಣ ಎಂದರೆ
 (1)ಉತ್ತರ ಕ್ರಿಯೆ
 (2)ಉದ್ಧಾರಣೆ
 (3)ಉತ್ತರ ನೀಡುವಿಕೆ
 (4)ದಾಟುವಿಕೆ
ಸರಿ ಉತ್ತರ

(4) ದಾಟುವಿಕೆ


9.ಜಕಾತಿ ಎಂದರೆ
 (1)ಚಪಾತಿ
 (2)ದರ
 (3)ಸುಂಕ
 (4)ಜಗಳ
ಸರಿ ಉತ್ತರ

(3) ಸುಂಕ


ಸೂಚನೆಗಳು: ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10-17) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರ್ತಿಸಿ.

ಉದಾಹರಣೆ :
ತೆಂಕಣ
 (1)ಮೂಡಣ
 (2)ಬಡಗಣ
 (3)ಪಡುವಣ
 (4)ತೆಗಣ

ಇಲ್ಲಿ ‘‘ತೆಂಕಣ’’ ಇದಕ್ಕೆ ವಿರುದ್ಧಾರ್ಥಕ ರೂಪ‘‘ಬಡಗಣ’’ ಎಂಬುದು (2)ಅನ್ನು ಗುರುತಿಸಬಹುದು.

10.ತಿಟ್ಟು
 (1)ಮೊಗ್ಗು
 (2)ತಗ್ಗು
 (3)ನುಗ್ಗು
 (4)ಜುಟ್ಟು
ಸರಿ ಉತ್ತರ

(2) ತಗ್ಗು


11.ತುಮುಲ
 (1)ವಿರಳ
 (2)ನಿರಾಳ
 (3)ಸರಳ
 (4)ಕರಾಳ

ಸರಿ ಉತ್ತರ

(2) ನಿರಾಳ


12.ಚೇತನ
 (1)ಅನಿಕೇತನ
 (2)ಸಚೇತನ
 (3)ನಿಕೇತನ
 (4)ಅಚೇತನ
ಸರಿ ಉತ್ತರ

(4) ಅಚೇತನ


13.ಭೃತ್ಯ
 (1)ಪ್ರಜೆ
 (2)ಸೇವಕ
 (3)ಪ್ರಭು
 (4)ಯತಿ
ಸರಿ ಉತ್ತರ

(3) ಪ್ರಭು


14.ಶಾಮಕ
 (1)ಕಡಿಮೆ
 (2)ಶಾಬಕ
 (3)ಶಾರೀರಕ
 (4)ಉಲ್ಬಣಕ
ಸರಿ ಉತ್ತರ

(4) ಉಲ್ಬಣಕ


15.ಅವಸರ್ಪಿಣಿ
 (1)ಉಪಸರ್ಪಿಣಿ
 (2)ಶತಸರ್ಪಿಣಿ
 (3)ಉತ್ಸರ್ಪಿಣಿ
 (4)ಕುತ್ಸರ್ಪಿಣಿ
ಸರಿ ಉತ್ತರ

(3) ಉತ್ಸರ್ಪಿಣಿ


16.ಅಭಿಮುಖ
 (1)ಸುಮುಖ
 (2)ಷಣ್ಮುಖ
 (3)ದುರ್ಮುಖ
 (4)ವಿಮುಖ
ಸರಿ ಉತ್ತರ

(4) ವಿಮುಖ


17.ಊರ್ಧ್ವಮುಖ
 (1)ಉದ್ದಮುಖ
 (2)ಸುಮುಖ
 (3)ಅಧೋಮುಖ
 (4)ಗುಣಮುಖ
ಸರಿ ಉತ್ತರ

(3) ಅಧೋಮುಖ


ಸೂಚನೆಗಳು: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 18 – 22) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.

ಉದಾಹರಣೆ :
‘‘ಬೆಣ್ಣೆ ಹಚ್ಚು’’
 (1)ರೊಟ್ಟಿಗೆ ಬೆಣ್ಣೆ ಹಚ್ಚು
 (2)ಮೈಯುಜ್ಜುವುದು
 (3)ಹೊಗಳುವುದು
 (4)ಸೇವೆ ಮಾಡುವುದು

ಇಲ್ಲಿ ‘‘ಹೊಗಳುವುದು’’ ಸರಿಯಾದ ಅರ್ಥ ಆದುದರಿಂದ (3)ಅನ್ನು ಗುರುತಿಸಬೇಕು.

18.‘ಗುಡ್ಡಕ್ಕೆ ಕಲ್ಲು ಹೊತ್ತ ಹಾಗೆ’ ಎಂದರೆ
 (1)ಗುಡ್ಡದ ಮೇಲಿನ ಕಲ್ಲು
 (2)ಕಲ್ಲಿನಿಂದ ಕೂಡಿದ ಗುಡ್ಡ
 (3)ನಿರರ್ಥಕವಾದ ಕೆಲಸ
 (4)ಗುಡ್ಡದ ಮೇಲೆ ಕಲ್ಲನ್ನಿಡು
ಸರಿ ಉತ್ತರ

(3) ನಿರರ್ಥಕವಾದ ಕೆಲಸ


19.‘ಎತ್ತಿದ ಕೈ’
 (1)ಕೈಯನ್ನು ಸದಾ ಎತ್ತಿರುವವನು
 (2)ಕೈಯನ್ನು ಇಳಿಸದೇ ಇರುವವನು
 (3)ಪ್ರವೀಣ
 (4)ಕೈ ಇಲ್ಲದವನು
ಸರಿ ಉತ್ತರ

(3) ಪ್ರವೀಣ


20. ‘ತಲೆ ತೊಳೆದು ಕೊಳ್ಳು’
 (1)ತಲೆಯನ್ನು ಶುಚಿಗೊಳಿಸು
 (2)ತಲೆಯನ್ನು ತೆರೆದು ನಿಲ್ಲುವುದು
 (3)ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳುವುದು
 (4)ಚಿಂತಾಕ್ರಾಂತನಾಗುವುದು
ಸರಿ ಉತ್ತರ

(3) ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳುವುದು


21.ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು
 (1)ಅತ್ಯಂತ ಎಚ್ಚರದಿಂದ ಕಾಯುವುದು
 (2)ಅತ್ಯಂತ ಭಯದಿಂದಿರು
 (3)ಕಣ್ಣಿಗೆ ಎಣ್ಣೆ ಹಾಕಿಕೊಳ್ಳುವುದು
 (4)ಕಣ್ಣು ತುಂಬಿಕೊಂಡು
ಸರಿ ಉತ್ತರ

(1) ಅತ್ಯಂತ ಎಚ್ಚರದಿಂದ ಕಾಯುವುದು


22.‘ಭೂಮಿ ತೂಕದ ಮನುಷ್ಯ’ ಎಂದರೆ
 (1)ತುಂಬ ಭಾರವಾದ ಮನುಷ್ಯ
 (2)ತಾಳ್ಮೆ ಗುಣದ ಮನುಷ್ಯ
 (3)ಭೂಮಿಗೆ ಭಾರವಾದ ಮನುಷ್ಯ
 (4)ಭೂಮಿಯಷ್ಟೇ ತೂಕ ತೂಗುವ ಮನುಷ್ಯ
ಸರಿ ಉತ್ತರ

(2) ತಾಳ್ಮೆ ಗುಣದ ಮನುಷ್ಯ


ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 23-27) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.

ಉದಾಹರಣೆ :
ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು.
 (1)ಪ್ರಮಾದ
 (2)ಅಪಘಾತ
 (3)ವಿಪತ್ತು
 (4)ಆಕಸ್ಮಾತ್

ಇಲ್ಲಿ ‘‘ಅಪಘಾತ’’ ಎಂಬುದು ಸೂಕ್ತ ರೂಪವಾದುದರಿಂದ (2)ಅನ್ನು ಗುರುತಿಸಬೇಕು.

23.ಒಳ್ಳೆಯ ಸಲಹೆ, ಸೂಚನೆಗಳಿಗೆ ಅಡ್ವರ್ಸ್ ಉತ್ತರ ನೀಡಬಾರದು.
 (1)ಕೆಟ್ಟದಾಗಿ
 (2)ವ್ಯತಿರಿಕ್ತ
 (3)ಸಮಯೋಚಿತ
 (4)ನಿರ್ಲಕ್ಷಿತ
ಸರಿ ಉತ್ತರ

(2) ವ್ಯತಿರಿಕ್ತ


24.ಭಾರತವು ಸೆಕ್ಯುಲರ್ ಗಣರಾಜ್ಯವಾಗಿದೆ.
 (1)ಮತೀಯ
 (2)ಜಾತ್ಯಾತೀತ
 (3)ನಿರಂಕುಶ
 (4)ಕೋಮುವಾದಿ
ಸರಿ ಉತ್ತರ

(2) ಜಾತ್ಯಾತೀತ


25.ಮಗುವಿಗೆ ರಿಂಗ್ವರ್ಮ್ ಬಂದುದರಿಂದ ಔಷಧಿ ಕೊಡಿಸಿದರು.
 (1)ಕಡ್ಡಿ ಹುಣ್ಣು
 (2)ಹುಳುಕಡ್ಡಿ
 (3)ನಾಯಿಕೆಮ್ಮು
 (4)ಗಂಟಲು ಮಾರಿ
ಸರಿ ಉತ್ತರ

(2) ಹುಳುಕಡ್ಡಿ


26.ಬಹುತೇಕ ದೇಶಗಳ ಯುವಜನ ಇಂದು ‘ಅಥಾರಿಟೀರಿಯನಿಸಂ’ಅನ್ನು ಬಯಸುತ್ತಾರೆ. ಈ ವಾಕ್ಯದಲ್ಲಿರುವ ‘ಅಥಾರಿಟೇರಿಯನಿಸಂ’ ಎಂಬುದು
 (1)ಸರ್ವಾಧಿಕಾರವಾದ
 (2)ನಿರ್ಬಂಧಿತ ಅಧಿಕಾರವಾದ
 (3)ಸಮತಾವಾದ
 (4)ಮತೀಯ
ಸರಿ ಉತ್ತರ

(1) ಸರ್ವಾಧಿಕಾರವಾದ


27.ಸ್ವಾತಂತ್ರ್ಯ ಇರುವ ದೇಶದಲ್ಲಿ ಫ್ರಟರ್ನಿಟಿ ಹೆಚ್ಚು ಮಹತ್ವವಿರಬೇಕು.
 (1)ಸಹೋದರತ್ವ
 (2)ಸಮಾನತೆ
 (3)ಸಹಬಾಳ್ವೆ
 (4)ಸಹಕಾರ ಭಾವನೆ
ಸರಿ ಉತ್ತರ

(1) ಸಹೋದರತ್ವ


ಸೂಚನೆಗಳು: ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28-32) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದವನ್ನು ಗುರುತಿಸಿ.

ಉದಾಹರಣೆ :
 (1)ಹುಡುಗಿ
 (2)ನವಿಲು
 (3)ಗಿಳಿ
 (4)ಕಿತ್ತಳೆ

ಇಲ್ಲಿ ‘‘ಕಿತ್ತಳೆ’’ ಇತರ ಪದಗಳ ಜಾತಿಗೆ ಸೇರುವುದಿಲ್ಲ. ಆದುದರಿಂದ (4)ಅನ್ನು ಗುರುತಿಸಬೇಕು.

28.
 (1)ಅಧಿಕರಣ
 (2)ಕರ್ಮ
 (3)ಸಂಪ್ರದಾನ
 (4)ಸಂಬಂಧ
ಸರಿ ಉತ್ತರ

(4) ಸಂಬಂಧ


29.
 (1)ವಯಸ್ಸು
 (2)ಹರಯ
 (3)ಪ್ರಾಯ
 (4)ವಾರಿಗೆ
ಸರಿ ಉತ್ತರ

(4) ವಾರಿಗೆ


30.
 (1)ಸಂಕ್ರಮಣ
 (2)ಪ್ರಕ್ರಿಯೆ
 (3)ಪರಿವರ್ತನೆ
 (4)ಬದಲಾವಣೆ
ಸರಿ ಉತ್ತರ

(2) ಪ್ರಕ್ರಿಯೆ


31.
 (1)ಮತ್ತು
 (2)ಅಥವಾ
 (3)ಆದ್ದರಿಂದ
 (4)ಅದುವೇ
ಸರಿ ಉತ್ತರ

(4) ಅದುವೇ


32.
 (1)ಓಲೆಗರಿ
 (2)ತಾಳೆಗರಿ
 (3)ಭೂರ್ಜಪತ್ರ
 (4)ಪದ್ಮಪತ್ರ
ಸರಿ ಉತ್ತರ

(4) ಪದ್ಮಪತ್ರ


ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪ್ಪಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂಬ (4)ಅನ್ನು ಗುರುತಿಸಿ (ಪ್ರಶ್ನೆ ಸಂಖ್ಯೆ 33-38).

ಉದಾಹರಣೆ :
ಲೋಕಾಯುಕ್ತ ಲಂಚ ಹಗುರಣ್ಕೆ ಸಂಬಂಧಿಸಿ ಎಂಟು ಜನರ ಬಂಧನ
 (1)ಹಾಗರಣ
 (2)ಹಗರಣ
 (3)ಹಗರನ
 (4)ತಪ್ಪಿಲ್ಲ

ಇಲ್ಲಿ ಗೆರೆ ಎಳೆದ ‘‘ಹಗುರಣ’’ ತಪ್ಪಾಗಿದ್ದು ಅದರ ಸರಿಯಾದ ರೂಪವು ‘‘ಹಗರಣ’’ ಎಂದಾಗಿದೆ. ಆದ್ದರಿಂದ (2)ಅನ್ನು ಗುರುತಿಸಬೇಕು.

33.ಮುಖ್ಯಮಂತ್ರಿಗಳು ಅಂಬೇಡ್ಕರ್ ಭವನ ನಿರ್ಮಾಣದ ಶಂಕುಸ್ತಾಪನೆ ನೆರವೇರಿಸಿದರು.
 (1)ಶಂಖುಸ್ಥಾಪನೆ
 (2)ಶಂಕು ಸ್ಥಾಪನೆ
 (3)ಶಂಕು ಸ್ತಾಪನೆ
 (4)ತಪ್ಪಿಲ್ಲ
ಸರಿ ಉತ್ತರ

(2) ಶಂಕು ಸ್ಥಾಪನೆ


34.ಆಹ್ವಾನಿತ ಗಣ್ಯರ ಓತಪ್ರೋಥ ನುಡಿಗಳಿಗೆ ಸಭಿಕರು ತಲೆದೂಗಿದರು.
 (1)ಓತಪ್ರೋತ
 (2)ಓತಪ್ರೊತ
 (3)ಓತಪ್ರೂೂತ
 (4)ತಪ್ಪಿಲ್ಲ
ಸರಿ ಉತ್ತರ

(1) ಓತಪ್ರೋತ


35.ಭಾರತದ ಆರ್ಥಿಕ ಚಟುವಟಿಕೆಯಲ್ಲಿ ರೈತ ಸಮುದಾಯವೇ ಆಧಾರಸ್ಥಂಭ.
 (1)ಆದಾರಸ್ತಂಭ
 (2)ಆಧಾರಸ್ತಂಭ
 (3)ಆಧಾರ ಸ್ಥಂಬ
 (4)ತಪ್ಪಿಲ್ಲ
ಸರಿ ಉತ್ತರ

(2) ಆಧಾರಸ್ತಂಭ


36.ಜನರು ದೇವರನ್ನು ಶೋಡಷೋಪಚಾರಗಳಿಂದ ಪೂಜಿಸುತ್ತಾರೆ.
 (1)ಸೋಡಷೋಪಚಾರ
 (2)ಸೋಡಶೋಪಚಾರ
 (3)ಷೋಡಶೋಪಚಾರ
 (4)ತಪ್ಪಿಲ್ಲ
ಸರಿ ಉತ್ತರ

(3) ಷೋಡಶೋಪಚಾರ


37.ಶಿಕ್ಷಕರು ರಾಷ್ಟ್ರೀಕರಣ ಕುರಿತು ಪಾಠ ಹೇಳಿದರು.
 (1)ರಾಶ್ಟ್ರೀಕರಣ
 (2)ರಷ್ಟ್ರೀಕರಣ
 (3)ರಾಷ್ಟ್ರೀಕಾರಣ
 (4)ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


38.ದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸ್ತಬ್ಧಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
 (1)ಸ್ತಬ್ದಚಿತ್ರ
 (2)ಸ್ಥಬ್ಧಚಿತ್ರ
 (3)ಸ್ಥಬ್ದಚಿತ್ರ
 (4)ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


ಸೂಚನೆಗಳು: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 39-65)

ಉದಾಹರಣೆ :
ನಡೆಯುತ್ತಿದೆ ಎಂಬುದು ____________ ದ ಪದ.
 (1)ಭೂತಕಾಲ
 (2)ವರ್ತಮಾನ ಕಾಲ
 (3)ಭವಿಷ್ಯತ್ ಕಾಲ
 (4)ಹಿಂದಿನ ಕಾಲ

ಇಲ್ಲಿ ‘‘ವರ್ತಮಾನ ಕಾಲ’’ ಎಂಬುದು ಸರಿಯಾದ ಉತ್ತರ. ಆದುದರಿಂದ (2)ಅನ್ನು ಗುರುತಿಸಬೇಕು.

39.‘ಅರರೇ ಗಿಣಿ ರಾಮ ! ವಾಕ್ಯದ ‘ಅರರೇ’ ಎಂಬುದು ____________.
 (1)ಅನುಕರಣಾವ್ಯಯ
 (2)ಭಾವಸೂಚಕಾವ್ಯಯ
 (3)ಸಂಬಂಧ ಸೂಚಕಾವ್ಯಯ
 (4)ಸಾಮಾನ್ಯ ಅವ್ಯಯ
ಸರಿ ಉತ್ತರ

(2) ಭಾವಸೂಚಕಾವ್ಯಯ


40. ‘ಸಲುವಳಿ’ ಎಂಬ ಪದ ____________ ಗೆ ಸಂಬಂಧಿಸಿದೆ.
 (1)ತದ್ಧಿತ ವಿಶೇಷಣ
 (2)ತದ್ಧಿತ ಭಾವನಾಮ
 (3)ತದ್ದಿತ ನಾಮ
 (4)ತದ್ಧಿತಾವ್ಯಯ
ಸರಿ ಉತ್ತರ

(2) ತದ್ಧಿತ ಭಾವನಾಮ


41.ಕೆಳಗಿನವುಗಳಲ್ಲಿ ಕಂಠ್ಯ ಧ್ವನಿಯಾಗಿರುವುದು ____________.
 (1)ಕ್, ಗ್
 (2)ಟ್, ಡ್
 (3)ತ, ದ್
 (4)ಪ್, ಬ್
ಸರಿ ಉತ್ತರ

(1) ಕ್, ಗ್


42.‘ಬಾವಿ’ ಪದದ ತತ್ಸಮ ರೂಪ ____________
 (1)ವಾಪಿ
 (2)ಬಾಪಿ
 (3)ವಾಬಿ
 (4)ವಾಪು
ಸರಿ ಉತ್ತರ

(1) ವಾಪಿ


43.ಊರು ಉಪಕಾರ ಅರಿಯದು, ಹೆಣ ಶೃಂಗಾರ ಅರಿಯದು ಎಂಬುದು ____________ ಅಲಂಕಾರಕ್ಕೆ ಉದಾಹರಣೆ.
 (1)ಅರ್ಥಾಂತರ ನ್ಯಾಸಾಲಂಕಾರ
 (2)ಶ್ಲೇಷಾಲಂಕಾರ
 (3)ದೃಷ್ಟಾಂತಾಲಂಕಾರ
 (4)ರೂಪಕಾಲಂಕಾರ
ಸರಿ ಉತ್ತರ

(3) ದೃಷ್ಟಾಂತಾಲಂಕಾರ


44.ಹೊಸದು + ಕನ್ನಡ = ಹೊಸಗನ್ನಡ, ಇದು ____________ ಸಮಾಸ.
 (1)ಗಮಕ ಸಮಾಸ
 (2)ಕ್ರಿಯಾ ಸಮಾಸ
 (3)ದ್ವಿಗು ಸಮಾಸ
 (4)ಕರ್ಮಧಾರಯ ಸಮಾಸ
ಸರಿ ಉತ್ತರ

(4) ಕರ್ಮಧಾರಯ ಸಮಾಸ


45.‘ಕಿಕ್ಕಿರಿದ ಸಭೆ’ ಎಂಬುದು ____________ವಿಶೇಷಣ.
 (1)ಪರಿಮಾಣ ವಾಚಕ ವಿಶೇಷಣ
 (2)ಸಂಖ್ಯಾ ವಾಚಕ ವಿಶೇಷಣ
 (3)ಗುಣವಾಚಕ ವಿಶೇಷಣ
 (4)ನಿಶ್ಚಿತ ಸಂಖ್ಯಾ ವಾಚಕ ವಿಶೇಷಣ
ಸರಿ ಉತ್ತರ

(1) ಪರಿಮಾಣ ವಾಚಕ ವಿಶೇಷಣ


46.ದ್ವಿ + ಪದಿ = ದ್ವಿಪದಿ ಎಂಬುದು ____________
 (1)ಅಂಶಿ ಸಮಾಸ
 (2)ಕರ್ಮಧಾರೆಯ
 (3)ಗಮಕ ಸಮಾಸ
 (4)ದ್ವಿಗು ಸಮಾಸ
ಸರಿ ಉತ್ತರ

(4) ದ್ವಿಗು ಸಮಾಸ


47.‘ಆನೆ’ ಪದದಲ್ಲಿ ಇರುವ ಸ್ವರಗಳು ____________
 (1)ಒಂದು
 (2)ಎರಡು
 (3)ನಾಲ್ಕು
 (4)ಮೂರು
ಸರಿ ಉತ್ತರ

(2) ಎರಡು


48.‘ಹಾಲು ಕಂಡಲ್ಲಿ ಬೆಕ್ಕು, ಕೂಳು ಕಂಡಲ್ಲಿ ನಾಯಿ’ ಇದೊಂದು ____________
 (1)ಪಡೆನುಡಿ
 (2)ಒರಟು ನುಡಿ
 (3)ಒಗಟು ನುಡಿ
 (4)ಗಾದೆ ಮಾತು
ಸರಿ ಉತ್ತರ

(4) ಗಾದೆ ಮಾತು


49.ಗುಂಪಿನಲ್ಲಿರುವ ಬಿಡಿಸಲಾರದ ಪದ ____________
 (1)ಅಕ್ಷರ
 (2)ಅಸುರ
 (3)ಅಮರ
 (4)ಅರಸ
ಸರಿ ಉತ್ತರ

(4) ಅರಸ


50.‘ತುದಿನಾಲಗೆ’ ಈ ಸಮಾಸಪದದ ವಿಗ್ರಹವಾಕ್ಯ ____________.
 (1)ತುದಿ + ನಾಲಗೆ
 (2)ನಾಲಗೆಯ + ತುದಿ
 (3)ತುದಿಯ + ನಾಲಗೆ
 (4)ತುದಿಯದಾದ + ನಾಲಗೆ
ಸರಿ ಉತ್ತರ

(2) ನಾಲಗೆಯ + ತುದಿ


51.‘ಶುನಕ’ ಪದದ ತದ್ಭವ ರೂಪ ____________
 (1)ಸೊಣಗ
 (2)ಶೌನಕ
 (3)ಶುನಿ
 (4)ಯಾವುದೂ ಅಲ್ಲ
ಸರಿ ಉತ್ತರ

(1) ಸೊಣಗ


52.‘ನಿಲ್ಲು, ಮಿಸುಕಾಡಬೇಡ’ ಇಲ್ಲಿನ ಕ್ರಿಯಾಪದದ ಸ್ವರೂಪ ____________
 (1)ವಿದ್ಯರ್ಥಕ
 (2)ನಿಷೇಧಾರ್ಥಕ
 (3)ಸಾಮಾನ್ಯ ರೂಪ
 (4)ಸಂಬಂಧಾರ್ಥ
ಸರಿ ಉತ್ತರ

(1) ವಿದ್ಯರ್ಥಕ


53.‘ಬೆಳ್ಳಿ ಮೋಡವೆ ಎಲ್ಲ ಓಡುವೆ ನನ್ನ ಬಳಿಗೇ ನಲಿದು ಬಾ’ ಇದರ ಲಯ ____________
 (1)ಮಂದಾನಿಲ
 (2)ಭಾಮಿನಿ
 (3)ಲಲಿತ
 (4)ವಾರ್ಧಕ
ಸರಿ ಉತ್ತರ

(2) ಭಾಮಿನಿ


54.ತೃತೀಯಾ ವಿಭಕ್ತಿಯು ____________ ಕಾರಕ.
 (1)ಕರ್ಮ
 (2)ಕರಣ
 (3)ಸಂಪ್ರದಾನ
 (4)ಅಪಾದಾನ
ಸರಿ ಉತ್ತರ

(2) ಕರಣ


55.‘ರತ್ನಾಕರ’ ಪದದ ಸಮಾನಾರ್ಥಕಗಳು ____________
 (1)ತಟಾಕ, ಸರೋವರ
 (2)ಸಾಗರ, ಸಮುದ್ರ
 (3)ನದಿ, ತೊರೆ
 (4)ಸೂರ್ಯ, ಚಂದ್ರ
ಸರಿ ಉತ್ತರ

(2) ಸಾಗರ, ಸಮುದ್ರ


56.‘ತರಕ್ಷು’ ಪದದ ಸಮಾನಾರ್ಥಕ ____________
 (1)ಹುಲಿ
 (2)ಜಿಂಕೆ
 (3)ಚಿರತೆ
 (4)ಮೇಕೆ
ಸರಿ ಉತ್ತರ

(1) ಹುಲಿ


57.‘ಮಂಗಳ ಮುಖಿ’ ಎಂಬುದರ ಗುಣವಾಚಕ ____________.
 (1)ಶುಕ್ರ
 (2)ಮಂಗಳ
 (3)ಅಂಗಳ
 (4)ಲಿಂಗ
ಸರಿ ಉತ್ತರ

(2) ಮಂಗಳ


58.ದಡ್ಡಕ್ಕರ ಎಂದರೆ ಅದು ____________ ಆಗಿರುತ್ತದೆ.
 (1)ದಪ್ಪ ಅಕ್ಷರ
 (2)ಒತ್ತಕ್ಷರ
 (3)ಮಹಾಪ್ರಾಣ
 (4)ದೀರ್ಘಾಕ್ಷರ
ಸರಿ ಉತ್ತರ

(2) ಒತ್ತಕ್ಷರ


59.‘ಮಾವನ ಜನ್ಮ ದೊಡ್ಡದು ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ’. ಹೀಗೆಂದವರು ____________
 (1)ಪುರಂದರದಾಸ
 (2)ಕನಕದಾಸ
 (3)ಜಗನ್ನಾಥದಾಸ
 (4)ವಿಜಯದಾಸ
ಸರಿ ಉತ್ತರ

(1) ಪುರಂದರದಾಸ


60.____________ ಅಕ್ಕರ ಪಲ್ಲಟಕ್ಕೆ ಉದಾಹರಣೆ ಅಲ್ಲ.
 (1)ಅಸಗ
 (2)ಕಾದಗ
 (3)ಅರಲ್
 (4)ಮರಲ್
ಸರಿ ಉತ್ತರ

(2) ಕಾದಗ


61.____________ಅರ್ಥ-ಸಂಕೋಚಗೊಂಡಿರುವುದಕ್ಕೆ ಉದಾಹರಣೆ ಅಲ್ಲ.
 (1)ಅಣಕ
 (2)ಕಬ್ಬಿಣ
 (3)ಎಣ್ಣೆ
 (4)ಮೀನ್
ಸರಿ ಉತ್ತರ

(3) ಎಣ್ಣೆ


62. ‘ಶಿಖರ’ ಎಂಬುದು ____________
 (1)ನಾಮಪದ
 (2)ಕ್ರಿಯಾಪದ
 (3)ವಿಶೇಷಣ
 (4)ಧಾತು
ಸರಿ ಉತ್ತರ

(1) ನಾಮಪದ


63.ಕರ್ನಾಟಕದಲ್ಲಿ ದೊರೆ ಅಶೋಕನ ‘ಮಸ್ಕಿ’ ಶಾಸನವನ್ನು ____________ ಲಿಪಿಯಲ್ಲಿ ಬರೆಲಾಗಿದೆ.
 (1)ಸಂಸ್ಕೃತ
 (2)ತೆಲುಗು
 (3)ಕನ್ನಡ
 (4)ಬ್ರಾಹ್ಮೀ
ಸರಿ ಉತ್ತರ

(4) ಬ್ರಾಹ್ಮೀ


64.ತಂದೆಗೂ ಗುರುವಿಗೂ ಒಂದು ವರ್ಷದ ಅಂತರವುಂಟು
ತಂದೆ ತೋರುವನು ಸದ್ಗುರುವ, ಗುರುರಾಯ
ಬಂಧನವ ಕಳೆವ, ಸರ್ವಜ್ಞ ॥
ಈ ಪದ್ಯವು ____________ ಗೆ ಉತ್ತಮ ಉದಾಹರಣೆಯಾಗಿದೆ.
 (1)ಕಂದ ಪದ್ಯ
 (2)ಭಾಮಿನೀ ಷಟ್ಪದಿ
 (3)ಸಾಂಗತ್ಯ ಪದ್ಯ
 (4)ತ್ರಿಪದಿ ಪದ್ಯ
ಸರಿ ಉತ್ತರ

(4) ತ್ರಿಪದಿ ಪದ್ಯ


65.‘ಹಣ್ಣುಗಳಲ್ಲಿ ಮಾವಿನ ಹಣ್ಣೇ ಶ್ರೇಷ್ಠ’ – ಇಲ್ಲಿ ಹಣ್ಣುಗಳಲ್ಲಿ ಎಂಬುದು ____________ ವಿಭಕ್ತಿ.
 (1)ಸಂಬೋಧನಾ ವಿಭಕ್ತಿ
 (2)ಪ್ರಥಮಾ ವಿಭಕ್ತಿ
 (3)ಚತುರ್ಥಿ ವಿಭಕ್ತಿ
 (4)ಸಪ್ತಮೀ ವಿಭಕ್ತಿ
ಸರಿ ಉತ್ತರ

(4) ಸಪ್ತಮೀ ವಿಭಕ್ತಿ


ಸೂಚನೆಗಳು: ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66- 69) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.

ಉದಾಹರಣೆ :
 (1)ದಾರಿ
 (2)ಹಾದಿ
 (3)ರಸ್ತೆ
 (4)ಕಾಡು

ಈ ನಾಲ್ಕು ಪದಗಳಲ್ಲಿ ‘‘ರಸ್ತೆ’’ ಮಾತ್ರ ಅನ್ಯಭಾಷೆಯಿಂದ ಸ್ವೀಕೃತವಾದ ಪದವಾಗಿದೆ. ಆದುದರಿಂದ ಇಲ್ಲಿ (3)ಅನ್ನು ಗುರುತಿಸಬೇಕು.

66.
 (1)ದೀವಿಗೆ
 (2)ಮಲ್ಲಿಗೆ
 (3)ಬಸದಿ
 (4)ಪ್ರಣತಿ
ಸರಿ ಉತ್ತರ

(4) ಪ್ರಣತಿ


67.
 (1)ಜಮೀನು
 (2)ಕೃಷಿ
 (3)ಬೇಸಾಯ
 (4)ಆರಂಬ
ಸರಿ ಉತ್ತರ

(1) ಜಮೀನು


68.
 (1)ಕೆನ್ನೀರು
 (2)ಬೆನ್ನೀರು
 (3)ಬೆಚ್ಚಗೆ
 (4)ರೈತ
ಸರಿ ಉತ್ತರ

(4) ರೈತ


69.
 (1)ಸಾರು
 (2)ಹುಳಿ
 (3)ಚಪಾತಿ
 (4)ಹುಲ್ಲು
ಸರಿ ಉತ್ತರ

(3) ಚಪಾತಿ


ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 70 – 72) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ, ಆಗ (4)ಅನ್ನು ಗುರುತಿಸಿ.

ಉದಾಹರಣೆ :
ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು.
 (1)ಹಾಡಿದರು
 (2)ಆಲಿಸಿದರು
 (3)ಮಾಡಿಸಿದರು
 (4)ಆಲಿಸಿದರು

ಇಲ್ಲಿ ‘‘ಆಡಿದರು’’ ಎಂಬುದು ದೋಷವಾಗಿದ್ದು ‘‘ಹಾಡಿದರು’’ ಎಂದಿರಬೇಕು. ಆದುದರಿಂದ (1)ಅನ್ನು ಗುರುತಿಸಬೇಕು.

70.ರಾಮನಿಗೂ ಮತ್ತು ವಾಲಿಗೂ ಮನಸ್ಥಾಪವಿತ್ತು.
 (1)ಮನಸ್ಥ್ಯಾಪ
 (2)ಮನಸ್ತ್ಯಾಪ
 (3)ಮನಸ್ತಾಪ
 (4)ಸುಧಾರಣೆ ಬೇಕಿಲ್ಲ
ಸರಿ ಉತ್ತರ

(3) ಮನಸ್ತಾಪ


71.ಲೋಕಾಯುಕ್ತ ದಳದವರು ತಪ್ಪಿತಸ್ಥರನ್ನು ಕೂಲಂಕಶವಾಗಿ ವಿಚಾರಿಸಿದರು.
 (1)ಕೂಲಂಕುಷವಾಗಿ
 (2)ಕೂಲಂಕಷವಾಗಿ
 (3)ಕುಲಂಕಶವಾಗಿ
 (4)ಸುಧಾರಣೆ ಬೇಕಿಲ್ಲ
ಸರಿ ಉತ್ತರ

(2) ಕೂಲಂಕಷವಾಗಿ


72.ಪ್ರಾಚೀನ ಕಾಲದಲ್ಲಿ ಕರ್ನಾಟಕ ರಾಜ್ಯವನ್ನು ಅನೇಕ ಚಕ್ರಾಧಿಪತ್ಯಗಳು ಆಳಿಕೊಂಡು ಬಂದಿದ್ದವು.
 (1)ಚಕ್ರಧಿಪತ್ಯಗಳು
 (2)ಛಕ್ರಾದಿಪತ್ಯಗಳು
 (3)ಚಕ್ರಾದಿಪತ್ಯಗಳು
 (4)ಸುಧಾರಣೆ ಬೇಕಿಲ್ಲ
ಸರಿ ಉತ್ತರ

(4) ಸುಧಾರಣೆ ಬೇಕಿಲ್ಲ


ಸೂಚನೆಗಳು: ಕೆಳಗಿನವುಗಳಲ್ಲಿ (ಪ್ರಶ್ನೆ ಸಂಖ್ಯೆ 73- 77) ಗೆರೆಹಾಕಿದ ಭಾಗಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.

ಉದಾಹರಣೆ :
ಕುವೆಂಪು ಚೋಮನದುಡಿ ಎಂಬ ಕಾದಂಬರಿಯನ್ನು ರಚಿಸಿದ್ದಾರೆ.
 (1)ಬೆಟ್ಟದ ಜೀವ
 (2)ಕಾನೂರ ಹೆಗ್ಗಡತಿ
 (3)ಚಿಕ್ಕವೀರ ರಾಜೇಂದ್ರ
 (4)ದುರ್ಗಾಸ್ತಮಾನ

ಇಲ್ಲಿ ‘‘ಕಾನೂರ ಹೆಗ್ಗಡತಿ’ ಸರಿಯಾದ ಉತ್ತರ ಆದುದರಿಂದ (2)ಅನ್ನು ಗುರುತಿಸಬೇಕು.

73.‘ಯಮಳ ಪ್ರಶ್ನೆ’ ಇದು ಜಿ.ಎಸ್.ಶಿವರುದ್ರಪ್ಪನವರ ಕೃತಿ.
 (1)ಪಿ. ಲಂಕೇಶ್ರ
 (2)ಶಿವರಾಮ ಕಾರಂತರ
 (3)ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ
 (4)ಎಂ. ಗೋವಿಂದ ಪೈರ
ಸರಿ ಉತ್ತರ

(3) ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ


74.‘ಮಾತೆಂಬುದು ಜ್ಯೋತಿರ್ಲಿಂಗ’ ಎಂದು ನುಡಿದವರು ದೇವರ ದಾಸಿಮಯ್ಯ.
 (1)ಬಸವಣ್ಣ
 (2)ಸಿದ್ಧರಾಮ
 (3)ಅಲ್ಲಮಪ್ರಭುದೇವ
 (4)ಅಂಬಿಗರ ಚೌಡಯ್ಯ
ಸರಿ ಉತ್ತರ

(3) ಅಲ್ಲಮಪ್ರಭುದೇವ


75.ತ್ರಿಷಷ್ಠಿ ಲಕ್ಷಣ ಮಹಾಪುರಾಣದ ಇನ್ನೊಂದು ಹೆಸರೆಂದರೆ ಆದಿ ಪುರಾಣ.
 (1)ತಿಲಕಾಷ್ಠ ಮಹಿಷ ಬಂಧನ
 (2)ಮಹಾ ಪುರಾಣ
 (3)ಚಾವುಂಡರಾಯ ಪುರಾಣ
 (4)ಉತ್ತರ ಪುರಾಣ
ಸರಿ ಉತ್ತರ

(3) ಚಾವುಂಡರಾಯ ಪುರಾಣ


76.ಧಾರವಾಡವು ವಿದ್ಯಾನಗರಿ ಎಂದು ಪ್ರಸಿದ್ಧವಾಗಿದೆ.
 (1)ಧಾರಾ ನಗರಿ
 (2)ಮಂಜಿನನಗರಿ
 (3)ಕೆರೆಗಳ ನಗರಿ
 (4)ಕ್ರೀಡಾ ನಗರಿ
ಸರಿ ಉತ್ತರ

(1) ಧಾರಾ ನಗರಿ


77.‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕುವೆಂಪುರವರ ಆತ್ಮಕಥೆ
 (1)ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರ
 (2)ಶಿವರಾಮ ಕಾರಂತರ
 (3)ದ.ರಾ.ಬೇಂದ್ರಯವರ
 (4)ಕೆ.ವಿ. ತಿರುಮಲೇಶ್ರ
ಸರಿ ಉತ್ತರ

(2) ಶಿವರಾಮ ಕಾರಂತರ


ಸೂಚನೆಗಳು: ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆಯ 78-82) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿ.

ಉದಾಹರಣೆ :
ವಿದ್ಯಾರ್ಥಿಗಳು
P
ಜಾಸ್ತಿಯಾಗಿದೆ
Q
ಆಕರ್ಷಿತರಾಗುತ್ತಿರುವುದು
R
ದುರಭ್ಯಾಸಗಳ ಕಡೆಗೆ
S
 (1)P S R Q
 (2)Q R S P
 (3)S Q R P
 (4)Q S R P

ಇಲ್ಲಿ P S R Q ಎಂಬುದು ಸರಿಯಾದ ಜೋಡಣೆಯ ಕ್ರಮ. ಆದುದರಿಂದ ಇಲ್ಲಿ (1)ಅನ್ನು ಗುರುತಿಸಬೇಕು.

78.ಬೋಸ್ ರನ್ನು ಭೌತಶಾಸ್ತ್ರ ವಿಭಾಗವನ್ನು
P
ಪ್ರಾರಂಭವಾದಾಗ ಅದರ ಕುಲಪತಿಗಳಾಗಿದ್ದ ಡಾ. ಹರ್ಟೋಗ್
Q
1921ರಲ್ಲಿ ಢಾಕಾ ವಿವಿ
R
ಸೇರುವಂತೆ ಆಮಂತ್ರಿಸಿದರು
S
 (1)Q R P S
 (2)R Q S P
 (3)R P Q S
 (4)R Q P S
ಸರಿ ಉತ್ತರ

(4) R Q P S


79.ಅಪಾರ ಸಂಪತ್ತನ್ನು
P
ತೋರುವ ಮಾನವೀಯತೆ
Q
ಅವರನ್ನು ಬೇರೆಯವರಿಗಿಂತ ಭಿನ್ನವಾಗಿಸುತ್ತದೆ,
R
ಲೋಕ ಕಲ್ಯಾಣಕ್ಕಾಗಿ ವಿನಿಯೋಗಿಸುವಲ್ಲಿ.
S
 (1)P Q S R
 (2)P R S Q
 (3)P Q R S
 (4)P S Q R
ಸರಿ ಉತ್ತರ

(4) P S Q R


80.ಸಾಮಾಜಿಕ ಮಾಧ್ಯಮಗಳು
P
ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ
Q
ಯುವ ಜನತೆಯನ್ನು
R
ಅತಿಯಾಗಿ ಆಕರ್ಷಿಸಿರುವ ಕಾರಣ
S
 (1)P R S Q
 (2)R S P Q
 (3)R P S Q
 (4)S R P Q
ಸರಿ ಉತ್ತರ

(1) P R S Q


81.ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ
P
ಸಂವರ್ಧನೆಗಾಗಿ ಶ್ರಮಿಸು
Q
ಸಂಸ್ಕೃತಿಗಳ ಸಂರಕ್ಷಣೆ ಮತ್ತು
R
ಕನ್ನಡಸಾಹಿತ್ಯ ಪರಿಷತ್ತು ನಾಡುನುಡಿ
S
 (1)P Q R S
 (2)Q R S P
 (3)R S P Q
 (4)S R Q P
ಸರಿ ಉತ್ತರ

(4) S R Q P


82.ಕನಕದಾಸರ ಆದ್ಭುತವಾದ ಪ್ರತಿಭಾ
P
ರಾಮಧಾನ್ಯ ಚರಿತೆಯು
Q
ಮುನ್ನಡೆದುಕೊಂಡು ಹೋಗುತ್ತದೆ,
R
ಶಕ್ತಿಯಿಂದ ಪಾಂಡಿತ್ಯ ಪೂರ್ಣತೆಯಿಂದ
S
 (1)Q S P R
 (2)Q P S R
 (3)P Q S R
 (4)Q S R P
ಸರಿ ಉತ್ತರ

(2) Q P S R


83.ಕರ್ಮಧಾರಯ ಸಮಾಸದ ಭೇದವೆಂದು ಕೇಶಿರಾಜ ಹೇಳಿರುವ ಸಮಾಸ ಯಾವುದು?
 (1)ಅಂಶಿ
 (2)ಬಹುವ್ರೀಹಿ
 (3)ದ್ವಿಗು
 (4)ಗಮಕ
ಸರಿ ಉತ್ತರ

(4) ಗಮಕ


84.ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡ ಕವಿ ಯಾರು?
 (1)ಚೆನ್ನವೀರ ಕಣವಿ
 (2)ಕೆ.ಶಿವರಾಮ ಕಾರಂತ
 (3)ಕುವೆಂಪು
 (4)ಎಸ್.ಎಸ್.ಭೂಸನೂರಮಠ
ಸರಿ ಉತ್ತರ

(3) ಕುವೆಂಪು


85.ಕೃದಂತಗಳಲ್ಲಿ ಎಷ್ಟು ವಿಧಗಳಿವೆ?
 (1)ಎರಡು
 (2)ಮೂರು
 (3)ನಾಲ್ಕು
 (4)ಐದು
ಸರಿ ಉತ್ತರ

(2) ಮೂರು


86.ಕನ್ನಡದ ವರ್ಣಮಾಲೆಯಲ್ಲಿರುವ ಸಂಧ್ಯಾಕ್ಷರಗಳು ಯಾವುವು?
 (1)ಖು ಖೂ
 (2)ಐ ಔ
 (3)ಅಂ ಅಃ
 (4)ಕ್ಷ ಳ
ಸರಿ ಉತ್ತರ

(2) ಐ ಔ


ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 87 – 92) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂಬ ನಾಲ್ಕನೇ (4) ಭಾಗವನ್ನು ಗುರುತಿಸಿ.

ಉದಾಹರಣೆ :
ವಿದ್ಯಾರ್ಥಿಗಳು
(1)
ಶಾಲೆ
(2)
ಮುಗಿಸಿಕೊಂಡು ಬಂದರು.
(3)
ತಪ್ಪಿಲ್ಲ
(4)

ಇಲ್ಲಿ ಭಾಗ (2)ರಲ್ಲಿ ‘‘ಶಾಲೆಯನ್ನು’’ ಎಂದಿರಬೇಕಾಗಿತ್ತು. ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ (2)ಅನ್ನು ಗುರುತಿಸಬೇಕು.

87.ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವು
(1)
ಅಲವು ಭಾಗಗಳಲ್ಲಿ
(2)
ಹರಿದು ಹಂಚಿ ಹೋಗಿದ್ದಿತು.
(3)
ತಪ್ಪಿಲ್ಲ
(4)
ಸರಿ ಉತ್ತರ

(2)


88.ವಿದ್ಯಾರ್ಥಿಗಳು
(1)
ಗುರುಗಳಿಗೆ
(2)
ವಿದೇಯರಾಗಿದ್ದಾರೆ.
(3)
ತಪ್ಪಿಲ್ಲ
(4)
ಸರಿ ಉತ್ತರ

(3)


89.ಹೆತ್ತ ತಾಯಿ
(1)
ಹೊತ್ತ ಭೂಮಿ
(2)
ಸ್ವರ್ಗಕ್ಕೆ ಮಿಗಿಲು.
(3)
ತಪ್ಪಿಲ್ಲ
(4)
ಸರಿ ಉತ್ತರ

(3)


90.ನಿಸ್ವಾರ್ಥತೆಗಾಗಿ ಬದುಕಿದರೆ
(1)
ನಮ್ಮ ಬದುಕು
(2)
ಹಸನಾಗುತ್ತದೆ.
(3)
ತಪ್ಪಿಲ್ಲ
(4)
ಸರಿ ಉತ್ತರ

(1)


91.ಯಾವುದೇ ರಾಜ್ಯಕ್ಕೆ
(1)
ಹಲವಾರು ಮಾತೃಭಾಷೆಯುಳ್ಳ
(2)
ಜನರಿರುತ್ತಾರೆ.
(3)
ತಪ್ಪಿಲ್ಲ
(4)
ಸರಿ ಉತ್ತರ

(1)


92.ರಮೇಶನು ಸರ್ಕಾರಿ ಕೆಲಸಕ್ಕೆ
(1)
ಸೋಮವಾರ
(2)
ಪೂವಾಣ್ಹ ಸೇರಿಕೊಂಡನು.
(3)
ತಪ್ಪಿಲ್ಲ
(4)
ಸರಿ ಉತ್ತರ

(3)


93.ಈ ಕೆಳಗಿನವರಲ್ಲಿ ‘ಕನ್ನಡದ ಕಣ್ವ’ ಎಂಬ ಬಿರುದಾಂಕಿತರು ಯಾರು?
 (1)ತೀ.ನಂ.ಶ್ರೀ
 (2)ಬಿ.ಎಂ.ಶ್ರೀ
 (3)ರಂ.ಶ್ರೀ. ಮುಗಳಿ
 (4)ಮಧುರ ಚೆನ್ನ
ಸರಿ ಉತ್ತರ

(2) ಬಿ.ಎಂ.ಶ್ರೀ


94.ಶ್ರೀ ಪಾದರಾಜರ ಅಂಕಿತವೇನು?
 (1)ಗೋಪಾಲ ವಿಠಲ
 (2)ಪುರಂದರ ವಿಠಲ
 (3)ಕೃಷ್ಣ ವಿಠಲ
 (4)ರಂಗ ವಿಠಲ
ಸರಿ ಉತ್ತರ

(4) ರಂಗ ವಿಠಲ


95.ಪಟ್ಟಿ Iರಲ್ಲಿನ ಕವಿಗಳೊಂದಿಗೆ ಪಟ್ಟಿ IIರಲ್ಲಿನ ದೊರೆಗಳನ್ನು ಹೊಂದಿಸಿರಿ:
  ಪಟ್ಟಿ I (ಕವಿಗಳು) ಪಟ್ಟಿ II (ದೊರೆಗಳು)
 A.ಪಂಪ I.ತೈಲಪ
 B.ಪೊನ್ನII.ಅರಿಕೇಸರಿ
 C.ರನ್ನIII.ಸತ್ಯಾಶ್ರಯ
 D.ಚಾವುಂಡರಾಯIV.ರಾಚಮಲ್ಲ
  ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIIIIV
 (3)IIIIVIII
 (4)IIIIVIII
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


96.ಈ ಕೆಳಗಿನವರಲ್ಲಿ ವಚನ ಪಿತಾಮಹರು ಯಾರು?
 (1)ಪಂಜೆ ಮಂಗೇಶರಾಯರು
 (2)ಬೆಟಗೇರಿ ಕೃಷ್ಣಶರ್ಮರು
 (3)ಪು.ತಿ. ನರಸಿಂಹಾಚಾರ್ಯರು
 (4)ಫ.ಗು. ಹಳಕಟ್ಟಿಯವರು
ಸರಿ ಉತ್ತರ

(4) ಫ.ಗು. ಹಳಕಟ್ಟಿಯವರು


ಸೂಚನೆಗಳು: ಈ ಕೆಳಗೆ (ಪ್ರಶ್ನೆ 97-100) P Q R S ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.

ಉದಾಹರಣೆ :
P.ಪುಲಿಗೆರೆ, ಕಿಸುವೊಳಲ್, ಕೊಪ್ಪಳ ಮತ್ತು ಒಕ್ಕುಂದ ಇವೇ ಆ ನಾಲ್ಕು ನಗರಗಳು.
 Q.ಒಂಭತ್ತನೆಯ ಶತಮಾನದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು.
 R.ಆ ನಾಡಿನಲ್ಲಿನ ನಾಲ್ಕು ನಗರಗಳ ಮಧ್ಯದ ಕನ್ನಡವೇ ಕನ್ನಡದ ತಿರುಳೆಂದು ಕವಿ ಹೇಳಿದ್ದಾನೆ.
 S.ಆ ನಾಡಿನಲ್ಲಿ ವಾಸವಾಗಿದ್ದ ಜನತೆಯ ಉನ್ನತ ಸಂಸ್ಕೃತಿಯಿಂದಾಗಿ ಇಡೀ ವಿಶ್ವದಲ್ಲಿ ಕನ್ನಡ ನಾಡು ಒಂದು ವಿಶೇಷ ಸ್ಥಾನವನ್ನು ಪಡೆದಿತ್ತು.
 (1)Q S R P
 (2)S R Q P
 (3)P Q R S
 (4)R P Q S

ಇಲ್ಲಿ ಸರಿಯಾದ ಉತ್ತರ Q S R P ಆದುದರಿಂದ (1)ಅನ್ನು ಗುರುತಿಸಬೇಕು.

97.P.ಪೃಥ್ವಿ, ಗಂಧವತೀ ಎನ್ನುವ ಮಾತನ್ನು ಕರ್ನಾಟಕ ಸತ್ಯ ಮಾಡಿ ತೋರಿಸಿದೆ.
 Q.ಕನ್ನಡ ನುಡಿಯ ಕಂಪು, ಕನ್ನಡಿಗರ ಸಂಸ್ಕೃತಿಯ ಪೆಂಪು, ಭಾರತದಲ್ಲಿ ಬಹುದೂರದವರೆಗೆ ಹಬ್ಬಿಕೊಂಡಿದ್ದವು.
 R.ಇಲ್ಲಿಯ ನೆಲ ಮಾತ್ರ ಸುಗಂಧ ಸೂಸಲಿಲ್ಲ ಇಲ್ಲಿಯ ಭಾಷೆ, ಸಂಸ್ಕೃತಿಗಳು ಕೂಡಾ ಸುಗಂಧ ಸೂಸಿವೆ.
 S.ಕನ್ನಡ ನಾಡು ಪರಿಮಳಯುಕ್ತವಾದುದು. ಅದನ್ನು ಕಮ್ಮಿತ್ತು ನಾಡು, ಕಂಪು ಬೀರುವ ನಾಡು ಎಂದು ವರ್ಣಿಸಿಕೊಂಡು ಬರಲಾಗಿದೆ.
 (1)S Q R P
 (2)R S P Q
 (3)P R Q S
 (4)Q P S R
ಸರಿ ಉತ್ತರ

(1) S Q R P


98.P.ಅನ್ನವನ್ನು ತಿನ್ನುವ ತಟ್ಟೆ ಸುಂದರವಾಗಿರಬೇಕು. ಕಟ್ಟಿದ ಮನೆ ಅಲಂಕೃತವಾಗಿರಬೇಕು.
 Q.ಅಂದರೆ ಸೌಂದರ್ಯದ ಆಕಾಂಕ್ಷೆ ಆತನ ನಿತ್ಯ ಜೀವನದಲ್ಲಿ ಬೆಳೆಯಿತು.
 R.ಇವುಗಳಿಂದ ತೃಪ್ತವಾಗದ ಇನ್ನೇನನ್ನೋ ಆತನ ಮನೋಮಯ, ಪ್ರಾಣಮಯ, ಆನಂದಮಯ ಆಕಾಂಕ್ಷೆಗಳು ಬಯಸಿದವು.
 S.ಆಹಾರವನ್ನು ತಿಂದು, ಮನೆಯನ್ನು ಕಟ್ಟಿ ಬಾಳುವ ಅನ್ನಮಯ ವ್ಯಾಪಾರದಿಂದ ಮಾನವನಿಗೆ ಸಂಪೂರ್ಣ ತೃಪ್ತಿ ಲಭಿಸಲಿಲ್ಲ.
 (1)Q P R S
 (2)S R P Q
 (3)P Q S R
 (4)R S Q P
ಸರಿ ಉತ್ತರ

(2) S R P Q


99.P.ಬೇಸಾಯಕ್ಕೆ ಜೊತೆಯಾಗಿ, ಆಸರೆಯಾಗಿ ರಾಟೆಯು ಬೇಸಾಯಕ್ಕೆ ಒಂದು ಗೌರವ ಕೊಟ್ಟಿತು.
 Q.ರಾಟೆಯೇ ಜನರ ಸರ್ವಸ್ವ. ಅದು ಮಾಯವಾದಾಗಲೇ ಜನರ ಸ್ವಾತಂತ್ರ್ಯ ಮಾಯವಾಯಿತು.
 R.ಏಳು ಸಾವಿರ ಹಳ್ಳಿಗಳು ಅದರಿಂದ ಸ್ವಸಂಪೂರ್ಣವಾಗಿದ್ದವು. ರಾಟೆ ಹೋದಾಗ ಅದರೊಡನೆ ಕೋಟಿ ವಿದ್ಯೆ ಹೋದವು.
 S.ವಿಧವೆಯ ಗೆಳತಿ, ಹಸಿದವನಿಗೆ ಅನ್ನ, ಸೋಮಾರಿತನಕ್ಕೆ ಮದ್ದು ರಾಟೆ. ಗ್ರಾಮ ಜೀವನದ ತಿರುಗಾಲಿ.
 (1)Q P S R
 (2)S R Q P
 (3)R Q P S
 (4)P S R Q
ಸರಿ ಉತ್ತರ

(1) Q P S R


100.P.ಪ್ರಾಣವನ್ನು ಅಲಕ್ಷಿಸಿ ಅವರೆಲ್ಲರೂ ಹೋರಾಡಿದರು.
 Q.ಮೌಲ್ಯಾರಾಧನೆ ಎಂಬುದು ನಗೆಪಾಟಲಾಯಿತು.
 R.ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರುವುದೊಂದೇ ಎಲ್ಲರ ಗುರಿಯಾಗಿತ್ತು.
 S.ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಹಾಗೆ ಒಂದು ಗುರಿ ಇರಲಿಲ್ಲ.
 (1)Q S P R
 (2)S P Q R
 (3)R P S Q
 (4)P S Q R
ಸರಿ ಉತ್ತರ

(3) R P S Q


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment