ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ
1. | ಯಾವ ಕೇಂದ್ರ ಸರಕಾರದ ಯೋಜನೆಯು ಸರಕಾರಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಮುಕ್ತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತದೆ? | |
(ಎ) | ಬೇಟಿ ಬಚಾವೋ ಬೇಟಿ ಪಢಾವೊ | |
(ಬಿ) | ಪ್ರಧಾನ್‌ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್ | |
(ಸಿ) | ಪ್ರಧಾನ್‌ಮಂತ್ರಿ ಉಜ್ವಲ ಯೋಜನ | |
(ಡಿ) | ಪ್ರಧಾನ್‌ಮಂತ್ರಿ ಮುದ್ರಾ ಯೋಜನ |
CORRECT ANSWER
(ಬಿ) ಪ್ರಧಾನ್‌ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್
2. | 2017ರ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕನ್ನಡ ಫೀಚರ್ ಫಿಲ್ಮ್ ಎಂದು ಯಾವ ಚಲನಚಿತ್ರವು ಪ್ರಶಸ್ತಿ ಗೆದ್ದಿತು? | |
(ಎ) | ಊರ್ವಿ | |
(ಬಿ) | ಹೆಬ್ಬೆಟ್ಟು ರಾಮಕ್ಕ | |
(ಸಿ) | ನಗರಕೀರ್ತನ | |
(ಡಿ) | ಒಂದು ಮೊಟ್ಟೆಯ ಕಥೆ |
CORRECT ANSWER
(ಬಿ) ಹೆಬ್ಬೆಟ್ಟು ರಾಮಕ್ಕ
3. | 2018ರ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಮೆಂಟಿನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು? | |
(ಎ) | ನೊವಾಕ್ ಜೊಕೊವಿಕ್ | |
(ಬಿ) | ಡೊಮಿನಿಕ್ ಥೈಮ್ | |
(ಸಿ) | ರೋಜರ್ ಫೆಡರರ್ | |
(ಡಿ) | ರಫೆಲ್ ನಡಾಲ್ |
CORRECT ANSWER
(ಡಿ) ರಫೆಲ್ ನಡಾಲ್
4. | ದಿ ಇಂದ್ರಾ (INDRA) ಮಿಲಿಟರಿ ಕವಾಯತು ಭಾರತ ಮತ್ತು ______ ನಡುವೆ ನಡೆಸಲ್ಪಡುತ್ತದೆ? | |
(ಎ) | ರಷ್ಯಾ | |
(ಬಿ) | ಯು.ಎಸ್. | |
(ಸಿ) | ಯು.ಕೆ. | |
(ಡಿ) | ಜಪಾನ್ |
CORRECT ANSWER
(ಎ) ರಷ್ಯಾ
5. | 6 ಕಿ.ಮೀ. ನಡೆದ ನಂತರ ನಾನು ಬಲಕ್ಕೆ ತಿರುಗಿದೆ ಮತ್ತು 2 ಕಿ.ಮೀ. ದೂರ ಪ್ರಯಾಣಿಸಿದೆ, ಮತ್ತೆ ಎಡಕ್ಕೆ ತಿರುಗಿ 10 ಕಿ.ಮೀ. ದೂರ ಕ್ರಮಿಸಿದೆ. ಕೊನೆಯಲ್ಲಿ ನಾನು ಉತ್ತರದತ್ತ ಚಲಿಸುತ್ತಲಿದ್ದೆ. ನಾನು ಯಾವ ದಿಕ್ಕಿನಿಂದ ಪ್ರಯಾಣ ಪ್ರಾರಂಭಿಸಿದ್ದೆ? | |
(ಎ) | ಉತ್ತರ | |
(ಬಿ) | ದಕ್ಷಿಣ | |
(ಸಿ) | ನೈಋತ್ಯ | |
(ಡಿ) | ಈಶಾನ್ಯ |
CORRECT ANSWER
(ಬಿ) ದಕ್ಷಿಣ
6. | ‘ಎ’ ಯು ‘ಬಿ’ಯ ಪತಿಯಾಗಿರುತ್ತಾನೆ. ‘ಇ’ಯು ‘ಸಿ’ಯ ಮಗಳಾಗಿರುತ್ತಾಳೆ. ‘ಎ’ ಯು ‘ಸಿ’ಯ ತಂದೆಯಾಗಿರುತ್ತಾನೆ. ‘ಬಿ’ಯು ‘ಇ’ಗೆ ಹೇಗೆ ಸಂಬಂಧಿಯಾಗಿರುತ್ತಾಳೆ? | |
(ಎ) | ತಾಯಿ | |
(ಬಿ) | ಅಜ್ಜಿ | |
(ಸಿ) | ಆಂಟ್ (ಸೋದರತ್ತೆ/ಚಿಕ್ಕಮ್ಮ/ದೊಡ್ಡಮ್ಮ) | |
(ಡಿ) | ಕಸಿನ್ (ಸೋದರ ಸಂಬಂಧಿ/ರಕ್ತ ಸಂಬಂಧಿ) |
CORRECT ANSWER
(ಬಿ) ಅಜ್ಜಿ
7. | ನೀವು1 ರಿಂದ 100ರವರೆಗಿನ ಎಲ್ಲಾ ಸಂಖ್ಯೆಗಳನ್ನು ಬರೆಯುತ್ತೀರಿ ಎಂದಾದರೆ, ನೀವು ‘3’ ಸಂಖ್ಯೆಯನ್ನು ಎಷ್ಟು ಬಾರಿ ಬರೆಯುತ್ತೀರಿ? | |
(ಎ) | 18 | |
(ಬಿ) | 19 | |
(ಸಿ) | 20 | |
(ಡಿ) | 21 |
CORRECT ANSWER
(ಸಿ) 20
8. | ‘‘ಕರ್ನಾಟಕ’’ ಶಬ್ದವು ಇದರಿಂದ ನಿಷ್ಪತ್ತಿಗೊಂಡಿದೆ? | |
(ಎ) | ಕರುನಾಡು | |
(ಬಿ) | ಕಲ್ನಾಡು | |
(ಸಿ) | ಕೆಮ್ಮಣ್ಣುಗುಂಡಿ | |
(ಡಿ) | ಕರ್ಣಾಟ ದೇಶ |
CORRECT ANSWER
(ಎ) ಕರುನಾಡು
9. | ವಿಜಯನಗರ ಸಾಮ್ರಾಜ್ಯವು ಈ ಕದನದಲ್ಲಿ ಪರಾಜಿತಗೊಂಡಿತು? | |
(ಎ) | ತಾಳಿಕೋಟೆ | |
(ಬಿ) | ಮೈಸೂರು | |
(ಸಿ) | ಪಾಂಡ್ಯ | |
(ಡಿ) | ವಿಜಯನಗರ |
CORRECT ANSWER
(ಎ) ತಾಳಿಕೋಟೆ
10. | ಯಾವ ದೇಶದಲ್ಲಿ ಭಾರತೀಯ ನೌಕಾಪಡೆ ಚಂಡಮಾರುತಕ್ಕೆ ತುತ್ತಾದ ಸೊಕೋಟ್ರ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದ 38 ಭಾರತೀಯರನ್ನು ರಕ್ಷಿಸಿದೆ? | |
(ಎ) | ಯೆಮೆನ್ | |
(ಬಿ) | ಓಮನ್ | |
(ಸಿ) | ಶ್ರೀಲಂಕಾ | |
(ಡಿ) | ಬಾಂಗ್ಲಾದೇಶ |
CORRECT ANSWER
(ಎ) ಯೆಮೆನ್
11. | ಕೆಂಪು ಮತ್ತು ಹಳದಿ ಕನ್ನಡ ಧ್ವಜ ಇವರ ಕಲ್ಪನೆಯಾಗಿತ್ತು? | |
(ಎ) | ಎಂ.ಎ. ರಾಮಮೂರ್ತಿ | |
(ಬಿ) | ಯು.ಆರ್.ಅನಂತಮೂರ್ತಿ | |
(ಸಿ) | ಉಮಾಬಾಯಿ ಕುಂದಾಪುರ | |
(ಡಿ) | ಬಳ್ಳಾರಿ ಸಿದ್ದಪ್ಪ |
CORRECT ANSWER
(ಎ) ಎಂ.ಎ. ರಾಮಮೂರ್ತಿ
12. | ಭಾರತದ ಮುಖ್ಯ ನ್ಯಾಯಾಧೀಶರನ್ನು ಸೇರಿಸಿ ಸುಪ್ರೀಂ ಕೋರ್ಟಿನ ಸಂಖ್ಯಾಬಲ ಎಷ್ಟು? | |
(ಎ) | 30 | |
(ಬಿ) | 32 | |
(ಸಿ) | 31 | |
(ಡಿ) | 33 |
CORRECT ANSWER
(ಸಿ) 31
13. | 356ನೇಯ ವಿಧಿಯಡಿಯಲ್ಲಿ ರಾಜ್ಯವೊಂದರಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಬಹುದಾದ ಗರಿಷ್ಠ ಅವಧಿಯು? | |
(ಎ) | ಒಂದು ವರ್ಷ | |
(ಬಿ) | ಎರಡು ವರ್ಷಗಳು | |
(ಸಿ) | ಮೂರು ವರ್ಷಗಳು | |
(ಡಿ) | ನಾಲ್ಕು ವರ್ಷಗಳು |
CORRECT ANSWER
(ಸಿ) ಮೂರು ವರ್ಷಗಳು
14. | ಯಾವ ಸಂಸದೀಯ ಸಮಿತಿಯ ಸಮಕ್ಷಮದಲ್ಲಿ ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್‌ರವರ ವರದಿಯನ್ನು ಇರಿಸಲಾಗುತ್ತದೆ? | |
(ಎ) | ಸಾರ್ವಜನಿಕ ಲೆಕ್ಕಪತ್ರ ಸಮಿತಿ | |
(ಬಿ) | ಅಂದಾಜುಗಳ ಸಮಿತಿ | |
(ಸಿ) | ಸಾರ್ವಜನಿಕ ಅಂಡರ್‌ಟೇಕಿಂಗ್‌ಗಳ ಸಮಿತಿ | |
(ಡಿ) | ವಿಶೇಷ ಹಕ್ಕುಗಳ ಸಮಿತಿ |
CORRECT ANSWER
(ಎ) ಸಾರ್ವಜನಿಕ ಲೆಕ್ಕಪತ್ರ ಸಮಿತಿ
15. | ಟಿಬೆಟಿನ ಹೊರಗೆ ಅತಿ ದೊಡ್ಡ ಟಿಬೆಟಿನ್ನರ ವಸಾಹತು ಇಲ್ಲಿದೆ ______________ | |
(ಎ) | ಬೈಲಕುಪ್ಪೆ | |
(ಬಿ) | ಗೋಣಿಕೊಪ್ಪ | |
(ಸಿ) | ಚುಂಚಿ | |
(ಡಿ) | ಶಿರಸಿ |
CORRECT ANSWER
(ಎ) ಬೈಲಕುಪ್ಪೆ
16. | ಕರ್ನಾಟಕದ ಯಾವ ಜಿಲ್ಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮವಿದೆ? | |
(ಎ) | ಮಂಡ್ಯ | |
(ಬಿ) | ಮೈಸೂರು | |
(ಸಿ) | ಶಿವಮೊಗ್ಗ | |
(ಡಿ) | ಚಿಕ್ಕಮಗಳೂರು |
CORRECT ANSWER
(ಎ) ಮಂಡ್ಯ
17. | ‘ವೌನಿ’ ಇವರ ಕೃತಿಯಾಗಿದೆ? | |
(ಎ) | ಕುವೆಂಪು | |
(ಬಿ) | ಯು.ಆರ್.ಆನಂತಮೂರ್ತಿ | |
(ಸಿ) | ಡಿ.ವಿ.ಗುಂಡಪ್ಪ | |
(ಡಿ) | ಗಿರೀಶ್ ಕಾರ್ನಾಡ್ |
CORRECT ANSWER
(ಬಿ) ಯು.ಆರ್.ಆನಂತಮೂರ್ತಿ
18. | ಗಿರೀಶ್ ಕಾರ್ನಾಡ್ ಯಾವ ವರ್ಷದಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಿದರು? | |
(ಎ) | 1998 | |
(ಬಿ) | 1999 | |
(ಸಿ) | 2000 | |
(ಡಿ) | 1997 |
CORRECT ANSWER
(ಎ) 1998
19. | ಸಸ್ಯಗಳು ಇವಾಗಿವೆ. | |
(ಎ) | ಸ್ವಪೋಷಕಗಳು | |
(ಬಿ) | ಪರಾವಲಂಬಿಗಳು | |
(ಸಿ) | ಡಿಟಿರೋಟ್ರಾಪ್ಸ್ | |
(ಡಿ) | ಮೆಟಿರೋಟ್ರಾಫ್ಸ್ |
CORRECT ANSWER
(ಎ) ಸ್ವಪೋಷಕಗಳು
20. | ಶೂನ್ಯ ವೇಳೆಯು ಇವರ ವಿವೇಚನೆಯಲ್ಲಿರುತ್ತದೆ | |
(ಎ) | ಪ್ರಧಾನಮಂತ್ರಿ | |
(ಬಿ) | ರಾಷ್ಟ್ರಾಧ್ಯಕ್ಷರು | |
(ಸಿ) | ಸದನದ ಸದಸ್ಯರು | |
(ಡಿ) | ಸಭಾಧ್ಯಕ್ಷರು |
CORRECT ANSWER
(ಡಿ) ಸಭಾಧ್ಯಕ್ಷರು
21. | ಈ ಕೆಳಗಿನ ರಾಜ್ಯಗಳಲ್ಲಿ ಯಾವುದು ವಿಧಾನ ಪರಿಷತ್ತನ್ನು ಹೊಂದಿರುವುದಿಲ್ಲ? | |
(ಎ) | ಮಹಾರಾಷ್ಟ್ರ | |
(ಬಿ) | ಆಂಧ್ರಪ್ರದೇಶ | |
(ಸಿ) | ತಮಿಳುನಾಡು | |
(ಡಿ) | ಕರ್ನಾಟಕ |
CORRECT ANSWER
(ಸಿ) ತಮಿಳುನಾಡು
22. | ಹಣಕಾಸು ಬಿಲ್ಲೊಂದನ್ನು ಇಲ್ಲಿ ಪರಿಚಯಿಸಬಹುದು? | |
(ಎ) | ಲೋಕಸಭೆ | |
(ಬಿ) | ರಾಜ್ಯಸಭೆ | |
(ಸಿ) | ಸಂಸತ್ತಿನ ಉಭಯ ಸದನಗಳಲ್ಲೊಂದರಲ್ಲಿ | |
(ಡಿ) | ಮೇಲಿನವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಎ) ಲೋಕಸಭೆ
23. | ಭಾರತದ ಈಗಿನ ಮುಖ್ಯ ಚುನಾವಣಾ ಆಯುಕ್ತರು ಯಾರು? | |
(ಎ) | ಎಮ್.ಎಸ್.ಗಿಲ್ | |
(ಬಿ) | ಎಸ್.ವೈ. ಖುರೇಶಿ | |
(ಸಿ) | ಟಿ.ಎನ್. ಶೇಷನ್ | |
(ಡಿ) | ಓಂ ಪ್ರಕಾಶ್ ರಾವತ್ |
CORRECT ANSWER
(ಡಿ) ಓಂ ಪ್ರಕಾಶ್ ರಾವತ್
24. | ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ? | |
(ಎ) | ಪ್ರಧಾನಮಂತ್ರಿ | |
(ಬಿ) | ಭಾರತದ ಮುಖ್ಯ ನ್ಯಾಯಾಧೀಶರು | |
(ಸಿ) | ಲೋಕಸಭೆ | |
(ಡಿ) | ರಾಷ್ಟ್ರಾಧ್ಯಕ್ಷರು |
CORRECT ANSWER
(ಡಿ) ರಾಷ್ಟ್ರಾಧ್ಯಕ್ಷರು
25. | ಸಸ್ಯಗಳ ಎಲೆಗಳು ಈ ಹೆಸರಿನ ಹಸಿರು ವರ್ಣದ್ರವ್ಯವನ್ನು ಹೊಂದಿರುತ್ತದೆ? | |
(ಎ) | ಹೆಟಿರೋಫಿಲ್ | |
(ಬಿ) | ಕ್ಲೋರೋಫಿಲ್ | |
(ಸಿ) | ಗ್ರೀನೋಫಿಲ್ | |
(ಡಿ) | ಮಿಕ್ಸೋಫಿಲ್ |
CORRECT ANSWER
(ಬಿ) ಕ್ಲೋರೋಫಿಲ್
26. | ದ್ಯುತಿಸಂಶ್ಲೇಷಣೆಯ ಸಮಯದಲ್ಲಿ ಇದು ಉತ್ಪನ್ನವಾಗುತ್ತದೆ? | |
(ಎ) | ಆಮ್ಲಜನಕ | |
(ಬಿ) | ಜಲಜನಕ | |
(ಸಿ) | ಇಂಗಾಲದ ಡೈಆಕ್ಸೈಡ್ | |
(ಡಿ) | ನೀರು |
CORRECT ANSWER
(ಎ) ಆಮ್ಲಜನಕ
27. | ಕ್ರಿಮಿಕೀಟಗಳನ್ನು ಸಿಕ್ಕಿಹಾಕಿಸಿ ಭಕ್ಷಿಸುವ ಸಸ್ಯ? | |
(ಎ) | ಕಸ್ಕುಟ | |
(ಬಿ) | ಚೈನಾ ರೋಸ್ | |
(ಸಿ) | ಪಿಚರ್ ಸಸ್ಯ (ಹೂಜಿ ಗಿಡ) | |
(ಡಿ) | ಗುಲಾಬಿ |
CORRECT ANSWER
(ಸಿ) ಪಿಚರ್ ಸಸ್ಯ (ಹೂಜಿ ಗಿಡ)
28. | ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ? | |
(ಎ) | ಯಾಕ್ | |
(ಬಿ) | ಒಂಟೆ | |
(ಸಿ) | ಆಡು | |
(ಡಿ) | ವೂಲಿ ನಾಯಿ |
CORRECT ANSWER
(ಡಿ) ವೂಲಿ ನಾಯಿ
29. | ದುಗ್ಧಾಮ್ಲವು ಇದರಲ್ಲಿ ಕಂಡುಬರುತ್ತದೆ? | |
(ಎ) | ಅಕ್ಕಿ | |
(ಬಿ) | ಚಹಾ | |
(ಸಿ) | ಮೊಸರು | |
(ಡಿ) | ಕಾಫಿ |
CORRECT ANSWER
(ಸಿ) ಮೊಸರು
30. | ಕರ್ನಾಟಕದ ವಿಧಾನಪರಿಷತ್ತಿನ ಈಗಿನ ‘‘ಉಪ ಸಭಾಧ್ಯಕ್ಷರು’’ ಯಾರು? | |
(ಎ) | ಎಮ್.ಕೃಷ್ಣಾ ರೆಡ್ಡಿ | |
(ಬಿ) | ಕೆ.ಆರ್.ರಮೇಶ್‌ಕುಮಾರ್ | |
(ಸಿ) | ಡಿ.ಕೆ. ಶಿವಕುಮಾರ್ | |
(ಡಿ) | ಕೆ. ಮಹಾದೇವ |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
31. | ಯಾವ ಸಮಿತಿಯ ಶಿಫಾರಸಿನ ಮೇಲೆ ಕೇಂದ್ರ ವಿಚಕ್ಷಣಾ ಆಯೋಗ (ಸೆಂಟ್ರಲ್ ವಿಜಿಲೆನ್ಸ್ ಕಮಿಶನ್) ವನ್ನು ಸ್ಥಾಪಿಸಲಾಯಿತು? | |
(ಎ) | ನಿಟ್ಟೂರು ಶ್ರೀನಿವಾಸ ರಾವ್ ಸಮಿತಿ | |
(ಬಿ) | ತೇಜೇಂದ್ರ ಮೋಹನ್ ಭಾಸಿನ್ ಸಮಿತಿ | |
(ಸಿ) | ಕೆ.ವಿ. ಚೌಧರಿ ಸಮಿತಿ | |
(ಡಿ) | ಕೆ.ಸಂತಾನಂ ಸಮಿತಿ |
CORRECT ANSWER
(ಡಿ) ಕೆ.ಸಂತಾನಂ ಸಮಿತಿ
32. | ಭಾರತೀಯ ರಿಸರ್ವ್ ಬ್ಯಾಂಕಿನ ಈಗಿನ ಗವರ್ನರ್ ಯಾರು? | |
(ಎ) | ರಘುರಾಮ್ ರಂಜನ್ | |
(ಬಿ) | ಊರ್ಜಿತ್ ಪಟೇಲ್ | |
(ಸಿ) | ಎಸ್.ಎಸ್.ಮುಂಡ್ರ | |
(ಡಿ) | ಆನಂದ್ ಸಿಂಗ್ |
CORRECT ANSWER
(ಬಿ) ಊರ್ಜಿತ್ ಪಟೇಲ್
33. | ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಪ್ರಕೃತಿಯನ್ನು ಪ್ರೋತ್ಸಾಹಿಸಲು ಒಂದು ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾವನೆ ಮಾಡಲಾಗುತ್ತಿದೆ? | |
(ಎ) | ತುಮಕೂರು | |
(ಬಿ) | ಚಿಕ್ಕಬಳ್ಳಾಪುರ | |
(ಸಿ) | ಬೆಂಗಳೂರು | |
(ಡಿ) | ಬೆಳಗಾವಿ |
CORRECT ANSWER
(ಬಿ) ಚಿಕ್ಕಬಳ್ಳಾಪುರ
34. | ಉಳಿದ ವಿಷಯಗಳು ಸಮಾನವಾಗಿರುತ್ತಾ, ಸರಕೊಂದು ಅನೇಕ ಪರ್ಯಾಯಗಳನ್ನು ಹೊಂದಿದಲ್ಲಿ ಬೆಲೆ ಬೇಡಿಕೆ ಸ್ಥಿತಿಸ್ಥಾಪಕತ್ವ (ಇಲಾಸ್ಪಿಸಿಟಿ ಆಫ್ ಡಿಮಾಂಡ್) ಹೀಗಿರುತ್ತದೆ, | |
(ಎ) | ದೊಡ್ಡದು | |
(ಬಿ) | ಚಿಕ್ಕದು | |
(ಸಿ) | ಶೂನ್ಯ | |
(ಡಿ) | ಏಕಾಂಕ (ಯೂನಿಟಿ) |
CORRECT ANSWER
(ಎ) ದೊಡ್ಡದು
35. | ಬೇಕಿಂಗ್ ಸೋಡಾದ ರಾಸಾಯನಿಕ ಹೆಸರು? | |
(ಎ) | ಸೋಡಿಯಂ ಪೊಟ್ಯಾಸಿಯಂ ಕಾರ್ಬೋನೇಟ್ | |
(ಬಿ) | ಸೋಡಿಯಂ ಆಕ್ಸಿಜನ್ ಕಾರ್ಬೋನೇಟ್ | |
(ಸಿ) | ಸೋಡಿಯಂ ನೈಟ್ರೋಜನ್ ಕಾರ್ಬೋನೇಟ್ | |
(ಡಿ) | ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ |
CORRECT ANSWER
(ಡಿ) ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
36. | ಯಾವ ವಿಧದ ಮಣ್ಣಿನಲ್ಲಿ ಜಲಧಾರಣೆ ಸಾಮರ್ಥ್ಯ ಅತಿ ಹೆಚ್ಚು ಇದೆ? | |
(ಎ) | ಮರಳುಯುಕ್ತ ಮಣ್ಣು | |
(ಬಿ) | ಆವೆಮಣ್ಣುಯುಕ್ತ ಮಣ್ಣು | |
(ಸಿ) | ಕಳಿಮಣ್ಣುಯುಕ್ತ ಮಣ್ಣು | |
(ಡಿ) | ಹೊಯಿಗೆ ಮತ್ತು ಆವೆಮಣ್ಣುಯುಕ್ತ ಮಣ್ಣಿನ ಮಿಶ್ರಣ |
CORRECT ANSWER
(ಬಿ) ಆವೆಮಣ್ಣುಯುಕ್ತ ಮಣ್ಣು
37. | ವಿಶ್ರಾಂತ ಸ್ಥಿತಿಯಲ್ಲಿರುವ ಸಾಧಾರಣ ವಯಸ್ಕ ವ್ಯಕ್ತಿಯೋರ್ವನಲ್ಲಿ ಶ್ವಾಸೋಚ್ಛ್ವಾಸದ ಸಾಮಾನ್ಯ ವ್ಯಾಪ್ತಿಯು ನಿಮಿಷಕ್ಕೆ? | |
(ಎ) | 9 -12 | |
(ಬಿ) | 15- 18 | |
(ಸಿ) | 21-24 | |
(ಡಿ) | 30-33 |
CORRECT ANSWER
(ಬಿ) 15- 18
38. | ಸಸ್ಯವೊಂದರ ಸಂತಾನೋತ್ಪತ್ತಿ ಅಂಗ? | |
(ಎ) | ಎಲೆ | |
(ಬಿ) | ಕಾಂಡ | |
(ಸಿ) | ಬೇರು | |
(ಡಿ) | ಹೂವು |
CORRECT ANSWER
(ಡಿ) ಹೂವು
39. | ವೇಗದ ಪ್ರಾಥಮಿಕ ಘಟಕ? | |
(ಎ) | ಕಿ.ಮೀ./ನಿಮಿಷ | |
(ಬಿ) | ಮೀ./ನಿಮಿಷ | |
(ಸಿ) | ಕಿ.ಮೀ./ಗಂಟೆ | |
(ಡಿ) | ಮೀ./ಸೆಕೆಂಡು |
CORRECT ANSWER
(ಡಿ) ಮೀ./ಸೆಕೆಂಡು
40. | ಖಾರೀಫ್ ಬೆಳೆಯು, | |
(ಎ) | ಜುಲೈಯಲ್ಲಿ ಬಿತ್ತಲ್ಪಟ್ಟು ಅಕ್ಟೋಬರ್‌ನಲ್ಲಿ ಕಟಾವು ಮಾಡಲ್ಪಡುತ್ತದೆ | |
(ಬಿ) | ಅಕ್ಟೋಬರ್‌ನಲ್ಲಿ ಬಿತ್ತಲ್ಪಟ್ಟು ಮಾರ್ಚ್‌ನಲ್ಲಿ ಕಟಾವು ಮಾಡಲ್ಪಡುತ್ತದೆ | |
(ಸಿ) | ಮಾರ್ಚ್‌ನಲ್ಲಿ ಬಿತ್ತಲ್ಪಟ್ಟು ಜುಲೈಯಲ್ಲಿ ಕಟಾವು ಮಾಡಲ್ಪಡುತ್ತದೆ | |
(ಡಿ) | ಸೆಪ್ಟೆಂಬರ್‌ನಲ್ಲಿ ಬಿತ್ತಲ್ಪಟ್ಟು ಫೆಬ್ರವರಿಯಲ್ಲಿ ಕಟಾವು ಮಾಡಲ್ಪಡುತ್ತದೆ |
CORRECT ANSWER
(ಎ) ಜುಲೈಯಲ್ಲಿ ಬಿತ್ತಲ್ಪಟ್ಟು ಅಕ್ಟೋಬರ್‌ನಲ್ಲಿ ಕಟಾವು ಮಾಡಲ್ಪಡುತ್ತದೆ
41. | ಮಾವು ಹಣ್ಣಾಗುವುದಕ್ಕೆ ಲಾಭದಾಯಕವಾಗಿರುವ ಕೇರಳ ಮತ್ತು ಕರ್ನಾಟಕಗಳಲ್ಲಿನ ಮಾನ್ಸೂನ್ ಪೂರ್ವ ಸುರಿಮಳೆಗೆ ಏನೆನ್ನುತ್ತಾರೆ? | |
(ಎ) | ಈಶಾನ್ಯ ಮಳೆಮಾರುತ (ಮಾನ್ಸೂನ್) | |
(ಬಿ) | ಲೂ | |
(ಸಿ) | ಚಿನೂಕ್ | |
(ಡಿ) | ಮಾವು ಸುರಿಮಳೆ |
CORRECT ANSWER
(ಡಿ) ಮಾವು ಸುರಿಮಳೆ
42. | ಕೆಳಗೆ ನೀಡಲ್ಪಟ್ಟ ದಾಳವೊಂದರ ನಾಲ್ಕು ಸ್ಥಿತಿಗಳಿಂದ ಹಳದಿ ಬಣ್ಣಕ್ಕೆ ವಿರುದ್ಧವಾಗಿರುವ ಬಣ್ಣವನ್ನು ಕಂಡುಹಿಡಿಯಿರಿ? | |
(ಎ) | ನೇರಳೆ | |
(ಬಿ) | ಕೆಂಪು | |
(ಸಿ) | ಗುಲಾಬಿ | |
(ಡಿ) | ನೀಲಿ |
CORRECT ANSWER
(ಎ) ನೇರಳೆ
43. | ಯಾವುದೇ ಒಂದು ಸಂಜ್ಞೆ ಭಾಷೆಯಲ್ಲಿ ’MUSEUM’ ಶಬ್ದವು ‘LSPAPG’ ಸಂಕೇತಿಸಲ್ಪಟ್ಟಿರುತ್ತದೆಯಾದರೆ, ‘PALACE’ ಶಬ್ದವು ಆ ಭಾಷೆಯಲ್ಲಿ ಹೇಗೆಂದು ಸಂಕೇತಿಸಲ್ಪಟ್ಟಿರುತ್ತದೆ? | |
(ಎ) | OYIWXY | |
(ಬಿ) | OYIXYW | |
(ಸಿ) | IYXYWO | |
(ಡಿ) | YXWYOI |
CORRECT ANSWER
(ಎ) OYIWXY
44. | ಪೋಷಣೀಯ ಅಭಿವೃದ್ಧಿಯ ಅತ್ಯುತ್ತಮ ಸಾಧ್ಯ ವ್ಯಾಖ್ಯೆ ಯಾವುದು? | |
(ಎ) | ನೈಸರ್ಗಿಕ ಸಂಪನ್ಮೂಲಗಳ ಶೋಷಣೆ | |
(ಬಿ) | ಮುಂದಿನ ಪೀಳಿಗೆಯ ಅವಶ್ಯಕತೆಯನ್ನು ಪರಿಗಣಿಸದೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವುದು | |
(ಸಿ) | ಮುಂದಿನ ಪೀಳಿಗೆಯ ಅವಶ್ಯಕತೆಗಳನ್ನು ಪರಿಗಣಿಸುತ್ತಾ ನೈಸರ್ಗಿಕ ಸಂಪನ್ಮೂಲಗಳ ಪ್ರಶಸ್ತ ಬಳಕೆ | |
(ಡಿ) | ಆರ್ಥಿಕ ಬೆಳವಣಿಗೆಯ ಗರಿಷ್ಠೀಕರಣ |
CORRECT ANSWER
(ಸಿ) ಮುಂದಿನ ಪೀಳಿಗೆಯ ಅವಶ್ಯಕತೆಗಳನ್ನು ಪರಿಗಣಿಸುತ್ತಾ ನೈಸರ್ಗಿಕ ಸಂಪನ್ಮೂಲಗಳ ಪ್ರಶಸ್ತ ಬಳಕೆ
45. | ಬ್ಯಾಂಕ್‌ಗಳಿಗೆ ಸಂಕ್ಷಿಪ್ತ ಕಾಲಾವಧಿಗಳಿಗೆ ಭಾರತದ ರಿಸರ್ವ್ ಬ್ಯಾಂಕ್ ನೀಡುವ ಸಾಲಗಳ ಮೇಲಿನ ಬಡ್ಡಿ ದರವನ್ನು ಹೀಗೆನ್ನುತ್ತಾರೆ? | |
(ಎ) | ರಿಪೋ ದರ | |
(ಬಿ) | ರಿಸರ್ವ್ ರಿಪೋ ದರ | |
(ಸಿ) | ಕ್ರೆಡಿಟ್ ರಿಸರ್ವ್ ದರ | |
(ಡಿ) | ಎಸ್.ಎಲ್. ಆರ್. |
CORRECT ANSWER
(ಎ) ರಿಪೋ ದರ
46. | ಸಾಮಾನ್ಯವಾಗಿ ಬೇಡಿಕೆ ವಕ್ರರೇಖೆ (ಡಿಮ್ಯಾಂಡ್ ಕರ್ವ್) ಹೀಗಿದೆ? | |
(ಎ) | ಮೇಲ್ಮುಖ ಜಾರುವಿಕೆ | |
(ಬಿ) | ಕೆಳಮುಖ ಜಾರುವಿಕೆ | |
(ಸಿ) | U ಆಕಾರವುಳ್ಳದ್ದು | |
(ಡಿ) | ವಿಪರ್ಯಾಯ (ಇನ್ವರ್ಟೆಡ್) U ಆಕಾರವುಳ್ಳದ್ದು. |
CORRECT ANSWER
(ಬಿ) ಕೆಳಮುಖ ಜಾರುವಿಕೆ
47. | ಭಾರತದ ರಫ್ತುಗಳಲ್ಲಿ ಯಾವ ರಾಜ್ಯವು ಗರಿಷ್ಠ ಪ್ರಮಾಣದ ಪಾಲನ್ನು ಹೊಂದಿರುತ್ತದೆ? | |
(ಎ) | ಮಹಾರಾಷ್ಟ್ರ | |
(ಬಿ) | ತಮಿಳುನಾಡು | |
(ಸಿ) | ಕರ್ನಾಟಕ | |
(ಡಿ) | ಗುಜರಾತ್ |
CORRECT ANSWER
(ಎ) ಮಹಾರಾಷ್ಟ್ರ
48. | ವಸ್ತುವಿಗಿಂತ ದೊಡ್ಡದಾದ ವರ್ಚುವಲ್ ಇಮೇಜನ್ನು ______________ ಇದರಿಂದ ನಿರ್ಮಿಸಬಹುದು? | |
(ಎ) | ಪೀನ ಮಸೂರ | |
(ಬಿ) | ನಿಮ್ನ ಮಸೂರ | |
(ಸಿ) | ಪೀನ ದರ್ಪಣ | |
(ಡಿ) | ಮೇಲ್ಮೈ ಸಮತಲ ದರ್ಪಣ |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
49. | RAM ಇದನ್ನು ಸೂಚಿಸುತ್ತದೆ? | |
(ಎ) | ರ್ಯಾಂಡಂ ಅರಿತ್ಮೆಟಿಕ್ ಮೀಡಿಯಾ | |
(ಬಿ) | ರ್ಯಾಂಡಂ ಆ್ಯಕ್ಸೆಸ್ ಮೆಮೋರಿ | |
(ಸಿ) | ರೆಗ್ಯುಲರ್ ಆ್ಯಕ್ಸೆಸ್ ಮೆಮೋರಿ | |
(ಡಿ) | ರಿಮೆಂಬರ್ ಆ್ಯಕ್ಸೆಸ್ ಮೆಮೋರಿ |
CORRECT ANSWER
(ಬಿ) ರ್ಯಾಂಡಂ ಆ್ಯಕ್ಸೆಸ್ ಮೆಮೋರಿ
50. | ಪ್ಯಾಂಟಿಂಗ್ ಉಪಕರಣಗಳು ಇವುಗಳನ್ನು ಒಳಗೊಳ್ಳುತ್ತವೆ? | |
(ಎ) | ಕ್ಯಾಟ್ | |
(ಬಿ) | ಬ್ಯಾಟ್ | |
(ಸಿ) | ಸ್ಟಿಕ್ | |
(ಡಿ) | ಟ್ರ್ಯಾಕ್‌ಬಾಲ್ |
CORRECT ANSWER
(ಡಿ) ಟ್ರ್ಯಾಕ್‌ಬಾಲ್
51. | ವಿಲಕ್ಷಣ (ಅನನುರೂಪ) ವಾದದ್ದನ್ನು ಗುರುತಿಸಿರಿ? | |
(ಎ) | ಕ್ಯಾರೆಕ್ಟರ್ ಪ್ರಿಂಟರ್ | |
(ಬಿ) | ಲೈನ್ ಪ್ರಿಂಟರ್ | |
(ಸಿ) | ಪೇಜ್ ಪ್ರಿಂಟರ್ | |
(ಡಿ) | ಪ್ಯಾರಾಗ್ರ್ಯಾಫ್ ಪ್ರಿಂಟರ್ |
CORRECT ANSWER
(ಡಿ) ಪ್ಯಾರಾಗ್ರ್ಯಾಫ್ ಪ್ರಿಂಟರ್
52. | ವಿಲಕ್ಷಣ (ಅನನುರೂಪ) ವಾದದ್ದನ್ನು ಗುರುತಿಸಿರಿ? | |
(ಎ) | ಕಾಝಿರಂಗ ನ್ಯಾಷನಲ್ ಪಾರ್ಕ್ | |
(ಬಿ) | ಬಂಡೀಪುರ್ ನ್ಯಾಶನಲ್ ಪಾರ್ಕ್ | |
(ಸಿ) | ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್ | |
(ಡಿ) | ಕುದುರೆಮುಖ ನ್ಯಾಷನಲ್ ಪಾರ್ಕ್ |
CORRECT ANSWER
(ಎ) ಕಾಝಿರಂಗ ನ್ಯಾಷನಲ್ ಪಾರ್ಕ್
53. | ಹೀಗಿರುವಂತ ಭಾರತೀಯ ಉತ್ಪನ್ನಗಳಿಗೆ ‘‘ECOMARK’’ ನೀಡಲಾಗುತ್ತದೆ? | |
(ಎ) | ಪರಿಸರ ಸ್ನೇಹಿ | |
(ಬಿ) | ಕಲಬೆರಕೆಯಾಗಿರದ | |
(ಸಿ) | ಸಸ್ಯಾಹಾರಿ | |
(ಡಿ) | ಆರ್ಥಿಕವಾಗಿ ಕಾರ್ಯಸಾಧ್ಯ |
CORRECT ANSWER
(ಎ) ಪರಿಸರ ಸ್ನೇಹಿ
54. | 2022ರ ಫಿಫಾ ವಿಶ್ವಕಪ್ ಇಲ್ಲಿ ನಡೆಸಲ್ಪಡಲಿದೆ? | |
(ಎ) | ಭಾರತ | |
(ಬಿ) | ಬ್ರೆಝಿಲ್ | |
(ಸಿ) | ಕತಾರ್ | |
(ಡಿ) | ಥಾಲ್ಯಾಂಡ್ |
CORRECT ANSWER
(ಸಿ) ಕತಾರ್
55. | 15ನೆಯ ಹಣಕಾಸು ಆಯೋಗದ ಮುಖ್ಯಸ್ಥರು? | |
(ಎ) | ನೀಲಕಂಠ ಮಿಶ್ರ | |
(ಬಿ) | ರಘುರಾಮ ರಂಜನ್ | |
(ಸಿ) | ಊರ್ಜಿತ ಪಟೇಲ್ | |
(ಡಿ) | ಎನ್.ಕೆ.ಸಿಂಗ್ |
CORRECT ANSWER
(ಡಿ) ಎನ್.ಕೆ.ಸಿಂಗ್
56. | ಪ್ರಖ್ಯಾತ ‘‘ಗಾಯತ್ರಿ ಮಂತ್ರವು’’ ಯಾವ ವೇದದಲ್ಲಿ ಕಾಣಸಿಗುತ್ತದೆ? | |
(ಎ) | ಋಗ್ವೇದ | |
(ಬಿ) | ಸಾಮವೇದ | |
(ಸಿ) | ಯಜುರ್ವೇದ | |
(ಡಿ) | ಅಥರ್ವವೇದ |
CORRECT ANSWER
(ಎ) ಋಗ್ವೇದ
57. | ಕೆಳಗಿನವುಗಳಲ್ಲಿ ಯಾವ ಒಂದನ್ನು ಕಾಳಿದಾಸ ಬರೆಯಲಿಲ್ಲ? | |
(ಎ) | ರಘುವಂಶ | |
(ಬಿ) | ಕುಮಾರಸಂಭವ | |
(ಸಿ) | ರಾಮಚರಿತ ಮಾನಸ | |
(ಡಿ) | ಶಾಕುಂತಲಾ |
CORRECT ANSWER
(ಸಿ) ರಾಮಚರಿತ ಮಾನಸ
58. | ವಿಸ್ತೃತ ರೂಪದಲ್ಲಿ NIC ಎಂದರೆ? | |
(ಎ) | ನ್ಯಾಷನಲ್ ಇನ್‌ಫರ್ಮೇಶನ್ ಸೆಂಟರ್ | |
(ಬಿ) | ನ್ಯಾಷನಲ್ ಇನ್‌ಫರ್ಮ್ಯಾಟಿಕ್ಸ್ ಸೆಂಟರ್ | |
(ಸಿ) | ನ್ಯಾಷನಲ್ ಇನ್‌ವೆಸ್ಟಿಗೇಶನ್ ಸೆಂಟರ್ | |
(ಡಿ) | ನ್ಯಾಷನಲ್ ಇನ್‌ವೆಸ್ಟ್‌ಮೆಂಟ್ ಸೆಂಟರ್ |
CORRECT ANSWER
(ಬಿ) ನ್ಯಾಷನಲ್ ಇನ್‌ಫರ್ಮ್ಯಾಟಿಕ್ಸ್ ಸೆಂಟರ್
59. | ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿಯು ಇದಾಗಿದೆ? | |
(ಎ) | 3 ಮಜಲು ಪದ್ಧತಿ | |
(ಬಿ) | 4 ಮಜಲು ಪದ್ಧತಿ | |
(ಸಿ) | 2 ಮಲು ಪದ್ಧತಿ | |
(ಡಿ) | 5 ಮಜಲು ಪದ್ಧತಿ |
CORRECT ANSWER
(ಎ) 3 ಮಜಲು ಪದ್ಧತಿ
60. | ಸರ್ ಎಂ. ವಿಶ್ವೇಶ್ವರಯ್ಯನವರು ಈ ಅವಧಿಯಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದರು? | |
(ಎ) | 1932-1934 | |
(ಬಿ) | 1910-1912 | |
(ಸಿ) | 1912-1918 | |
(ಡಿ) | 1918-1922 |
CORRECT ANSWER
(ಸಿ) 1912-1918
61. | ಕರ್ನಾಟಕದ ಪಶ್ಚಿಮಕ್ಕೆ______________ ಇದು ಎಲ್ಲೆಯಾಗಿದೆ. | |
(ಎ) | ಅರೇಬಿಯನ್ ಸಮುದ್ರ | |
(ಬಿ) | ಗೋವಾ | |
(ಸಿ) | ಆಂಧ್ರಪ್ರದೇಶ | |
(ಡಿ) | ತೆಲಂಗಾಣ |
CORRECT ANSWER
(ಎ) ಅರೇಬಿಯನ್ ಸಮುದ್ರ
62. | ತಪ್ಪಿಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ ? | |
1, 4, 9, 16, 25, 36, 49, (_____) | ||
(ಎ) | 54 | |
(ಬಿ) | 64 | |
(ಸಿ) | 81 | |
(ಡಿ) | 74 |
CORRECT ANSWER
(ಬಿ) 64
63. | ‘‘Man-Eaters of Kumaon” ಪುಸ್ತಕ ಬರೆದವರು? | |
(ಎ) | ಜಿಮ್ ಕಾರ್ಬೆಟ್ | |
(ಬಿ) | ಆರ್.ಕೆ. ನಾರಾಯಣನ್ | |
(ಸಿ) | ಆರ್.ಕೆ. ಲಕ್ಷ್ಮಣ್ | |
(ಡಿ) | ಯು.ಆರ್.ಅನಂತಮೂರ್ತಿ |
CORRECT ANSWER
(ಎ) ಜಿಮ್ ಕಾರ್ಬೆಟ್
64. | ಇವರ ಆಳ್ವಿಕೆಯ ಕಾಲದಲ್ಲಿ ‘‘ದಿ ಗ್ರ್ಯಾಂಡ್ ಟ್ರಂಕ್ ರಸ್ತೆ’’ ನಿರ್ಮಿಸಲ್ಪಟ್ಟಿತು? | |
(ಎ) | ಬಾಬರ್ | |
(ಬಿ) | ಅಕ್ಬರ್ | |
(ಸಿ) | ಷೇರ್ ಷಹಾ ಸೂರಿ | |
(ಡಿ) | ಜಹಾಂಗೀರ್ |
CORRECT ANSWER
(ಸಿ) ಷೇರ್ ಷಹಾ ಸೂರಿ
65. | ಮಹಾತ್ಮಗಾಂಧಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಅಧಿವೇಶನವನ್ನು ಹೆಸರಿಸಿರಿ? | |
(ಎ) | ಕಲ್ಕತ್ತ, 1928 | |
(ಬಿ) | ಗುವಾಹಟಿ, 1926 | |
(ಸಿ) | ಕಾಕಿನಾಡ, 1923 | |
(ಡಿ) | ಬೆಳಗಾವಿ, 1924 |
CORRECT ANSWER
(ಡಿ) ಬೆಳಗಾವಿ, 1924
66. | ‘‘ಆರ್ಯ ಸಮಾಜ’’ ವು ಇವರಿಂದ ಸ್ಥಾಪಿಸಲ್ಪಟ್ಟಿತು.? | |
(ಎ) | ಈಶ್ವರ್ ಚಂದ್ರ ವಿದ್ಯಾಸಾಗರ | |
(ಬಿ) | ರಾಜಾರಾಂ ಮೋಹನ್‌ರಾಯ್ | |
(ಸಿ) | ಸ್ವಾಮಿ ದಯಾನಂದ ಸರಸ್ವತಿ | |
(ಡಿ) | ಸ್ವಾಮಿ ವಿವೇಕಾನಂದ |
CORRECT ANSWER
(ಸಿ) ಸ್ವಾಮಿ ದಯಾನಂದ ಸರಸ್ವತಿ
67. | ಕೆಳಗಿನವರಲ್ಲಿ ಯಾರು ಸಂವಿಧಾನ ಮಂಡಲಿ (ಕಾನ್ಸ್‌ಟಿಟ್ಯೂಯೆಂಟ್ ಅಸೆಂಬ್ಲಿ) ಯ ಕರಡು ಪ್ರತಿ ಸಿದ್ಧಗೊಳಿಸುವ ಸಮಿತಿಯ ಅಧ್ಯಕ್ಷರಾಗಿದ್ದರು? | |
(ಎ) | ಜವಾಹರ್ ಲಾಲ್ ನೆಹರು | |
(ಬಿ) | ಬಿ.ಆರ್. ಅಂಬೇಡ್ಕರ್ | |
(ಸಿ) | ಜೆ.ಬಿ. ಕೃಪಲಾನಿ | |
(ಡಿ) | ರಾಜೇಂದ್ರ ಪ್ರಸಾದ್ |
CORRECT ANSWER
(ಬಿ) ಬಿ.ಆರ್. ಅಂಬೇಡ್ಕರ್
68. | ಜನವರಿ 1, 2006ರಂದು ರವಿವಾರವಾಗಿತ್ತು. ಜನವರಿ 1, 2010ರ ವಾರದ ದಿನ ಯಾವುದಾಗಿತ್ತು? | |
(ಎ) | ಶುಕ್ರವಾರ | |
(ಬಿ) | ಶನಿವಾರ | |
(ಸಿ) | ರವಿವಾರ | |
(ಡಿ) | ಸೋಮವಾರ |
CORRECT ANSWER
(ಎ) ಶುಕ್ರವಾರ
69. | ಮಾಹಿತಿ ಹಕ್ಕು ಕಾಯಿದೆಯು ___________ ವರ್ಷದಲ್ಲಿ ಕಟ್ಟಳೆ (ಕಾನೂನು) ಮಾಡಲ್ಪಟ್ಟಿತು? | |
(ಎ) | 2006 | |
(ಬಿ) | 2005 | |
(ಸಿ) | 2007 | |
(ಡಿ) | 2004 |
CORRECT ANSWER
(ಬಿ) 2005
70. | ‘‘ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ದ ರಾಜಧಾನಿ’’ ಎಂದು ಯಾವ ನಗರವು ಉಲ್ಲೇಖಿಸಲ್ಪಡುತ್ತದೆ? | |
(ಎ) | ಬೆಂಗಳೂರು | |
(ಬಿ) | ಮುಂಬಯಿ | |
(ಸಿ) | ಕೋಲ್ಕತಾ | |
(ಡಿ) | ದೆಹಲಿ |
CORRECT ANSWER
(ಎ) ಬೆಂಗಳೂರು
71. | ಬೆಂಗಳೂರು ನಗರ ನಾಗರಿಕ ಆಡಳಿತದ ಉಸ್ತುವಾರಿ ಯಾರದ್ದು? | |
(ಎ) | ಬಿಡಿಎ | |
(ಬಿ) | ಬಿಬಿಎಂಪಿ | |
(ಸಿ) | ಬಿಎಂಟಿಸಿ | |
(ಡಿ) | ಬಿಸಿಪಿ |
CORRECT ANSWER
(ಬಿ) ಬಿಬಿಎಂಪಿ
72. | ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಪ್ರಖ್ಯಾತ ಗಂಗಾ ವಾಸ್ತುಶಿಲ್ಪ ಎಂದು ಪರಿಗಣಿಸಲ್ಪಟ್ಟಿದೆ? | |
(ಎ) | ಹಳೇಬೀಡು | |
(ಬಿ) | ಮಾಧವ ದೇವಾಲಯ | |
(ಸಿ) | ಗೋಮಟೇಶ್ವರ ಪ್ರತಿಮೆ | |
(ಡಿ) | ಎಲ್ಲೋರ |
CORRECT ANSWER
(ಸಿ) ಗೋಮಟೇಶ್ವರ ಪ್ರತಿಮೆ
73. | ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಇದಾಗಿರುತ್ತದೆ, | |
(ಎ) | ನೇರ ತೆರಿಗೆ | |
(ಬಿ) | ಪರೋಕ್ಷ ತೆರಿಗೆ | |
(ಸಿ) | ಎರಡರ ಮಿಶ್ರಣ | |
(ಡಿ) | ಇದು ಸರಕು ಮತ್ತು ಸೇವೆಗಳ ತೆರಿಗೆಯ ಮೇಲೆ ಅವಲಂಬಿಸುತ್ತದೆ |
CORRECT ANSWER
(ಬಿ) ಪರೋಕ್ಷ ತೆರಿಗೆ
74. | 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತನಿಖೆ ನಡೆಸಲು ಯಾವ ಸಮಿತಿಯು ಬ್ರಿಟಿಷ್ ಸರಕಾರದಿಂದ ನೇಮಿಸಲ್ಪಟ್ಟಿತ್ತು? | |
(ಎ) | ವೆಲ್‌ಬಿ ಆಯೋಗ | |
(ಬಿ) | ಹಂಟರ್ ಆಯೋಗ | |
(ಸಿ) | ಸೈಮನ್ ಆಯೋಗ | |
(ಡಿ) | ಬಟ್ಲರ್ ಸಮಿತಿ |
CORRECT ANSWER
(ಬಿ) ಹಂಟರ್ ಆಯೋಗ
75. | ಮೊಹೆಂಜೊದಾರೊದಲ್ಲಿ ಶೋಧಿಸಲ್ಪಟ್ಟ ‘‘ನೃತ್ಯ ಮಾಡುತ್ತಿರುವ ಹುಡುಗಿ’’ (ಡಾನ್ಸಿಂಗ್ ಗರ್ಲ್) ಪ್ರತಿಮೆ ಯಾವುದರಿಂದ ಮಾಡಲ್ಪಟ್ಟಿದೆ? | |
(ಎ) | ಚಿನ್ನ | |
(ಬಿ) | ತಾಮ್ರ | |
(ಸಿ) | ಬೆಳ್ಳಿ | |
(ಡಿ) | ಹಿತ್ತಾಳೆ |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
76. | ಫರಕ್ಕಾ ಅಡ್ಡಗಟ್ಟು ಯಾವ ನದಿಯ ಅಡ್ಡಕ್ಕೆ ನಿರ್ಮಿಸಲ್ಪಟ್ಟಿದೆ? | |
(ಎ) | ಗಂಗಾ | |
(ಬಿ) | ಕಾವೇರಿ | |
(ಸಿ) | ಗೋದಾವರಿ | |
(ಡಿ) | ಕೃಷ್ಣಾ |
CORRECT ANSWER
(ಎ) ಗಂಗಾ
77. | ಡೊಂಕುಡೊಂಕಾಗಿ ಹರಿಯುವ ನದಿಯೊಂದು ಮುಖ್ಯಧಾರೆಯಿಂದ ಬೇರ್ಪಡೆಗೊಂಡಾಗ ನಿರ್ಮಾಣಗೊಳ್ಳುವ ಸರೋವರವನ್ನು ಹೀಗೆನ್ನುತ್ತಾರೆ? | |
(ಎ) | ಆಕ್ಸ್-ಬೋ ಸರೋವರ | |
(ಬಿ) | ನೀರ್ಗಲ್ಲಿನ (ಗ್ಲೇಶಿಯಲ್) ಸರೋವರ | |
(ಸಿ) | ಲಗೂನ್ಸ್ (ಕೃತಕ ಕೊಳಗಳು) | |
(ಡಿ) | ಮಾನವನಿರ್ಮಿತ ಸರೋವರಗಳು |
CORRECT ANSWER
(ಎ) ಆಕ್ಸ್-ಬೋ ಸರೋವರ
78. | ವಿಶ್ವವಿಖ್ಯಾತ ಚೆನ್ನಕೇಶವ ದೇವಾಲಯವು ಇಲ್ಲಿದೆ? | |
(ಎ) | ಬೇಲೂರು | |
(ಬಿ) | ಗದಗ | |
(ಸಿ) | ತುಮಕೂರು | |
(ಡಿ) | ಗುಲ್ಬರ್ಗ |
CORRECT ANSWER
(ಎ) ಬೇಲೂರು
79. | ವಿಜಯನಗರ ಸಾಮ್ರಾಜ್ಯವು______________ ರಲ್ಲಿ ಸ್ಥಾಪಿಸಲ್ಪಟ್ಟಿತು? | |
(ಎ) | 1401 | |
(ಬಿ) | 1298 | |
(ಸಿ) | 1565 | |
(ಡಿ) | 1336 |
CORRECT ANSWER
(ಡಿ) 1336
80. | ದಕ್ಷಿಣ ಭಾರತದಲ್ಲಿ ಪ್ರಥಮ ಸ್ವತಂತ್ರ ಇಸ್ಲಾಮಿಕ್ ಸಾಮ್ರಾಜ್ಯ ಯಾವುದಾಗಿತ್ತು? | |
(ಎ) | ಬಹುಮನಿ ಸಾಮ್ರಾಜ್ಯ | |
(ಬಿ) | ಬಿಜಾಪುರ ಸಾಮ್ರಾಜ್ಯ | |
(ಸಿ) | ಶ್ರೀರಂಗಪಟ್ಟಣದ ಸುಲ್ತಾನೇಟ್ | |
(ಡಿ) | ಗುಲ್ಬರ್ಗಾ ಸುಲ್ತಾನೇಟ್ |
CORRECT ANSWER
(ಎ) ಬಹುಮನಿ ಸಾಮ್ರಾಜ್ಯ
81. | ವಿಲಕ್ಷಣ (ಅನನುರೂಪದ) ವಾದದ್ದನ್ನು ಕಂಡುಹಿಡಿಯಿರಿ? | |
3, 5, 11, 14, 17, 21 | ||
(ಎ) | 3 | |
(ಬಿ) | 5 | |
(ಸಿ) | 11 | |
(ಡಿ) | 14 |
CORRECT ANSWER
(ಡಿ) 14
82. | ಕೆಳಗಿನವುಗಳಲ್ಲಿ ಯಾವುದು ಒಂದು ಸಂವೇದನಾ ಅಂಗ ಆಗಿರುವುದಿಲ್ಲ? | |
(ಎ) | ಕಣ್ಣುಗಳು | |
(ಬಿ) | ಕಿವಿಗಳು | |
(ಸಿ) | ಮೂಗು | |
(ಡಿ) | ಕರುಳುವಾಳ (ಅಪೆಂಡಿಕ್ಸ್) |
CORRECT ANSWER
(ಡಿ) ಕರುಳುವಾಳ (ಅಪೆಂಡಿಕ್ಸ್)
83. | ಗಾಳಿಯ ವೇಗವನ್ನು ಅಳೆಯುವ ಉಪಕರಣವನ್ನು ಹೆಸರಿಸಿರಿ? | |
(ಎ) | ಹೈಗ್ರೋಮೀಟರ್ | |
(ಬಿ) | ಉಡೊಮೀಟರ್ | |
(ಸಿ) | ಬ್ಯಾರೋಮೀಟರ್ | |
(ಡಿ) | ಅನಿಮೋಮೀಟರ್ |
CORRECT ANSWER
(ಡಿ) ಅನಿಮೋಮೀಟರ್
84. | ಯಾವ ಗ್ರಹವು ಕೆಂಪು ಗ್ರಹ ಎಂದು ಸಹ ಕರೆಯಲ್ಪಡುತ್ತದೆ? | |
(ಎ) | ಗುರು ಗ್ರಹ | |
(ಬಿ) | ಬುಧ ಗ್ರಹ | |
(ಸಿ) | ಮಂಗಳ ಗ್ರಹ | |
(ಡಿ) | ಶುಕ್ರ ಗ್ರಹ |
CORRECT ANSWER
(ಸಿ) ಮಂಗಳ ಗ್ರಹ
85. | ಕೆಳಗಿನ ಬಲಗಳಲ್ಲಿ ಯಾವುದು ಗಾಳಿಯು ಸಾಮಾನ್ಯ ಪಥದಿಂದ ವಿಚಲಗೊಳ್ಳಲು ಕಾರಣೀಭೂತವಾಗುತ್ತದೆ? | |
(ಎ) | ಸಂಮರ್ಧನಕ (ಕಂಪ್ರೆಶನಲ್) ಬಲ | |
(ಬಿ) | ಅನ್ವಯಿಕ ಬಲ | |
(ಸಿ) | ಕೋರಿಯೋಲಿಸ್ ಪರಿಣಾಮ | |
(ಡಿ) | ಗುರುತ್ವಾಕರ್ಷಣ ಬಲ |
CORRECT ANSWER
(ಸಿ) ಕೋರಿಯೋಲಿಸ್ ಪರಿಣಾಮ
86. | ಕೆಳಗಿನ ಯಾವ ರಾಜ್ಯಗಳ ಮೂಲಕ ಕಾವೇರಿ ನದಿಯು ಹರಿಯುವುದಿಲ್ಲ? | |
(ಎ) | ಕೇರಳ | |
(ಬಿ) | ತಮಿಳುನಾಡು | |
(ಸಿ) | ಪುದುಚೇರಿ | |
(ಡಿ) | ಆಂಧ್ರಪ್ರದೇಶ |
CORRECT ANSWER
(ಡಿ) ಆಂಧ್ರಪ್ರದೇಶ
87. | ಕರ್ನಾಟಕದಲ್ಲಿ ಯಾವ ನದಿಯ ಮೇಲೆ ಬಾರ್ಕನ ಜಲಪಾತವಿದೆ? | |
(ಎ) | ಭದ್ರಾನದಿ | |
(ಬಿ) | ಸೀತಾ ನದಿ | |
(ಸಿ) | ಶರಾವತಿ ನದಿ | |
(ಡಿ) | ಕಬಿನಿ ನದಿ |
CORRECT ANSWER
(ಬಿ) ಸೀತಾ ನದಿ
88. | ಕೆಳಗಿನವುಗಳಲ್ಲಿ ಒಂದು ಪುಟ್ಟಣ್ಣ ಕಣಗಾಲರ ಚಲನಚಿತ್ರ ಅಲ್ಲ. | |
(ಎ) | ಬೆಳ್ಳಿಮೋಡ | |
(ಬಿ) | ಗೆಜ್ಜೆಪೂಜೆ | |
(ಸಿ) | ನಾಗರಹಾವು | |
(ಡಿ) | ಚಮಕ್ |
CORRECT ANSWER
(ಡಿ) ಚಮಕ್
89. | ಭಾರತೀಯ ಸಶಸ್ತ್ರ ಪಡೆಗಳು ಇವುಗಳನ್ನು ಹೊಂದಿವೆ ______________ ವಿಲಕ್ಷಣವಾದದ್ದನ್ನು ಕಂಡುಹಿಡಿಯಿರಿ? | |
(ಎ) | ಭಾರತೀಯ ಸೈನ್ಯ | |
(ಬಿ) | ಭಾರತೀಯ ಆಕಾಶಪಡೆ | |
(ಸಿ) | ಭಾರತೀಯ ನೌಕಾದಳ | |
(ಡಿ) | ಭಾರತೀಯ ವಾಯುಪಡೆ |
CORRECT ANSWER
(ಬಿ) ಭಾರತೀಯ ಆಕಾಶಪಡೆ
90. | ______________ ರಲ್ಲಿ ಕುವೆಂಪುರವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿತು? | |
(ಎ) | 1987 | |
(ಬಿ) | 1986 | |
(ಸಿ) | 1988 | |
(ಡಿ) | 1981 |
CORRECT ANSWER
(ಸಿ) 1988
91. | ‘ರನ್ನ ಕಂದ’ (ಕಾಂಡ) ಬರೆದವರು | |
(ಎ) | ರನ್ನ | |
(ಬಿ) | ಪಂಪ | |
(ಸಿ) | ಕುವೆಂಪು | |
(ಡಿ) | ಸಿನ್ಹ |
CORRECT ANSWER
(ಎ) ರನ್ನ
92. | 2018ರ ಕಾಮನ್‌ವೆಲ್ತ್ ಪಂದ್ಯಾವಳಿಗಳು ಯಾವ ದೇಶದಲ್ಲಿ ನಡೆಯಲ್ಪಟ್ಟವು? | |
(ಎ) | ಭಾರತ | |
(ಬಿ) | ಆಸ್ಟ್ರೇಲಿಯ | |
(ಸಿ) | ಕೆನಡ | |
(ಡಿ) | ಯುನೈಟೆಡ್ ಕಿಂಗ್‌ಡಮ್ |
CORRECT ANSWER
(ಬಿ) ಆಸ್ಟ್ರೇಲಿಯ
93. | ಚಂದ್ರಗ್ರಹಣವು ಯಾವಾಗ ಸಂಭವಿಸುತ್ತದೆ? | |
(ಎ) | ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಇರುವಾಗ | |
(ಬಿ) | ಸೂರ್ಯನು ಭೂಮಿ ಮತ್ತು ಚಂದ್ರನ ನಡುವೆ ಇರುವಾಗ | |
(ಸಿ) | ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಇರುವಾಗ | |
(ಡಿ) | ಭೂಮಿಯು ಸೂರ್ಯ ಮತ್ತು ಇತರ ಆಕಾಶಕಾಯಗಳ ನಡುವೆ ಇರುವಾಗ |
CORRECT ANSWER
(ಎ) ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಇರುವಾಗ
94. | ವಿಶ್ವದ ಅತ್ಯಂತ ದೊಡ್ಡ ಸೌರ ಪಾರ್ಕ್ ‘‘ಶಕ್ತಿ ಸ್ಥಳ’’ ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲ್ಪಡುತ್ತಿದೆ? | |
(ಎ) | ಬೆಳಗಾವಿ | |
(ಬಿ) | ಚಿತ್ರದುರ್ಗ | |
(ಸಿ) | ಕಲಬುರಗಿ | |
(ಡಿ) | ತುಮಕೂರು |
CORRECT ANSWER
(ಡಿ) ತುಮಕೂರು
95. | CISFನ ಪೂರ್ಣ ರೂಪ ಯಾವುದು? | |
(ಎ) | ಸೆಂಟ್ರಲ್ ಇಂಡಸ್ಟ್ರಿಯಲ್ ಸ್ಟ್ಯಾಟೆಜಿಕ್ ಫೋರ್ಸ್ | |
(ಬಿ) | ಸೆಂಟ್ರಲ್ ಇಂಟೆಲಿಜೆನ್ಸ್ ಸೆಕ್ಯುರಿಟಿ ಫೋರ್ಸ್ | |
(ಸಿ) | ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ | |
(ಡಿ) | ಸೆಂಟ್ರಲ್ ಇಂಟೆಲಿಜೆನ್ಸ್ ಸ್ಟ್ರಾಟೆಜಿಕ್ ಫೋರ್ಸ್ |
CORRECT ANSWER
(ಸಿ) ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್
96. | ಪ್ರತಿಷ್ಠಿತ ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಬಹುಮಾನವು ಇದಕ್ಕಾಗಿ ನೀಡಲ್ಪಡುತ್ತದೆ? | |
(ಎ) | ಭೌತಶಾಸ್ತ್ರ | |
(ಬಿ) | ಔಷಧ | |
(ಸಿ) | ಕ್ರೀಡೆ | |
(ಡಿ) | ಸಾಹಿತ್ಯ |
CORRECT ANSWER
(ಡಿ) ಸಾಹಿತ್ಯ
97. | ರಾಮಾನುಜಾಚಾರ್ಯರು ಈ ಕಾಲದಲ್ಲಿ ಜೀವಿಸಿದ್ದರು? | |
(ಎ) | ಹೊಯ್ಸಳರ ಕಾಲ | |
(ಬಿ) | ವಿಜಯನಗರ ಕಾಲ | |
(ಸಿ) | ಮೈಸೂರು ಕಾಲ | |
(ಡಿ) | ಆಧುನಿಕ ಕಾಲ |
CORRECT ANSWER
(ಎ) ಹೊಯ್ಸಳರ ಕಾಲ
98. | ಲೋಕಾಯುಕ್ತ ಬಿಲ್ ಅಸೆಂಬ್ಲಿಯಲ್ಲಿ ಇವರಿಂದ ಪರಿಚಯಿಸಲ್ಪಟ್ಟಿತು? | |
(ಎ) | ಅಬ್ದುಲ್ ಹಕೀಂ | |
(ಬಿ) | ಎನ್.ವೆಂಕಟಾಚಲ | |
(ಸಿ) | ಸಂತೋಷ್ ಹೆಗ್ಡೆ | |
(ಡಿ) | ರಾಮಕೃಷ್ಣ ಹೆಗ್ಡೆ |
CORRECT ANSWER
(ಡಿ) ರಾಮಕೃಷ್ಣ ಹೆಗ್ಡೆ
99. | ಕರ್ನಾಟಕದ ಈಗಿನ ಅರಣ್ಯ ಸಚಿವರು ಯಾರು? | |
(ಎ) | ಆರ್.ಶಂಕರ್ | |
(ಬಿ) | ಶ್ರೀಧರ್ | |
(ಸಿ) | ಶ್ರೀಮತಿ | |
(ಡಿ) | ಗಣೇಶ್ ಭಟ್ |
CORRECT ANSWER
(ಎ) ಆರ್.ಶಂಕರ್
100. | ______________ ಇದು ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಮೇಕ್-ಅಪ್ ಮತ್ತು ರಂಗವೇದಿಕೆ ತಂತ್ರಜ್ಞಾನಗಳನ್ನು ಒಟ್ಟಾಗಿಸುತ್ತದೆ. | |
(ಎ) | ಯಕ್ಷಗಾನ | |
(ಬಿ) | ಭರತನಾಟ್ಯಂ | |
(ಸಿ) | ಕೂಚಿಪುಡಿ | |
(ಡಿ) | ರಾಕ್ ಡಾನ್ಸ್ |
CORRECT ANSWER
(ಎ) ಯಕ್ಷಗಾನ