KPSC GROUP ‘C’ (ASSISTANT STATISTICAL OFFICER AND STATISTICAL INSPECTOR IN THE DIRECTORATE OF ECONOMICS & STATISTICS AND LABOUR INSPECTOR IN THE DEPT. OF LABOUR) ಪತ್ರಿಕೆ-1 ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆ
|
1. | ಪರಿಸರ ಮತ್ತು ಪರಿಸರ ವಿಜ್ಞಾನ ಅಂತರರಾಷ್ಟ್ರೀಯ ಫೌಂಡೇಶನ್ ಈ ಸ್ಥಳದಲ್ಲಿದೆ. |
|
| (1) | ಪಶ್ಚಿಮ ಬಂಗಾಳ |
| (2) | ನವದೆಹಲಿ |
| (3) | ಮಣಿಪುರ |
| (4) | ಗುಜರಾತ್ |
CORRECT ANSWER
(1) ಪಶ್ಚಿಮ ಬಂಗಾಳ
|
2. | ವನ್ಯಜೀವಿ ಸಂರಕ್ಷಣಾ ಅಧಿನಿಯಮವು ಯಾವ ವರ್ಷದಲ್ಲಿ ಅಂಗೀಕೃತಗೊಂಡಿತು? |
|
| (1) | 1972 |
| (2) | 1930 |
| (3) | 1929 |
| (4) | 1960 |
CORRECT ANSWER
(1) 1972
|
3. | ಕೆಳಗಿನ ಬೆಳೆಗಳನ್ನು ಪರಿಗಣಿಸಿ: |
| (1) | ಶಿರಸಿ ಸುಪಾರಿ |
| (2) | ಗುಲ್ಬರ್ಗಾ ತೊಗರಿಬೇಳೆ |
| (3) | ಬ್ಯಾಡಗಿಯ ಮೆಣಸಿನಕಾಯಿ |
| (4) | ಕೂರ್ಗ ಕಿತ್ತಳೆ |
| ಮೇಲಿನ ಯಾವುದು GI ಟ್ಯಾಗ್ ಗಳನ್ನು ಹೊಂದಿರುತ್ತವೆ? |
|
| (1) | 1 ಮತ್ತು 2 ಮಾತ್ರ |
| (2) | 2, 3 ಮತ್ತು 4 ಮಾತ್ರ |
| (3) | 3 ಮತ್ತು 4 ಮಾತ್ರ |
| (4) | 1, 2, 3 ಮತ್ತು 4 |
CORRECT ANSWER
(4) 1, 2, 3 ಮತ್ತು 4
|
4. | ಕರಗಿದ ಆಕ್ಸಿಜನ್ ಸಾರತೆಯು ಕೆಳಗಿರುವಲ್ಲಿ ಜಲ ಪರಿಣಾಮದಲ್ಲಿ ಅದರೊಳಗಿರುವ ಜೈವಿಕ ದ್ರವ್ಯ ಅಥವಾ ಪಾಸ್ಟೇಟ್ ಮತ್ತು ನೈಟ್ರೇಟ್ ದೊಡ್ಡ ಮೊತ್ತಗಳಲ್ಲಿ ಬಿಡುಗಡೆಯಾಗುವುದನ್ನು ಹೀಗೆ ಕರೆಯಲಾಗುತ್ತದೆ. |
|
| (1) | ಎಂಥ್ರೋಫಿಕೇಶನ್ / ಎಂಥ್ರೋಪಿಕರಣ |
| (2) | ಲಘುಕರಣ |
| (3) | ಆವೀ ಬಾಷ್ಪ ವಿಸರ್ಜನೆ |
| (4) | ವಿಭಜನೆ |
CORRECT ANSWER
(1) ಎಂಥ್ರೋಫಿಕೇಶನ್ / ಎಂಥ್ರೋಪಿಕರಣ
|
5. | ಕೆಳಗಿನ ಯಾವ ಅನಿಲಗಳು ಜಾಗತಿಕ ತಾಪಮಾನಕ್ಕೆ ಹೆಚ್ಚು ಕೊಡುಗೆ ನೀಡಿವೆ? |
|
| (1) | ಕಾರ್ಬನ್ ಡೈ ಆಕ್ಸೈಡ್ |
| (2) | ಮಿಥೇನ್ |
| (3) | ನೈಟ್ರಸ್ ಆಕ್ಸೈಡ್ |
| (4) | ಪೂರಿನೀಕರಿಸಿದ ಅನಿಲಗಳು |
CORRECT ANSWER
(1) ಕಾರ್ಬನ್ ಡೈ ಆಕ್ಸೈಡ್
|
6. | ಮೋನೋಟ್ರೀಲ್ ಪ್ರೋಟೋಕಾಲ್ ಇದನ್ನು ಸಂರಕ್ಷಿಸುವ ಅಂತರರಾಷ್ಟ್ರೀಯ ಸಂಧಿ/ ಕೌಲು (Treaty) ಆಗಿದೆ. |
|
| (1) | ಓಜೋನ್ ಪದರ |
| (2) | ಜೀವ ವೈವಿಧ್ಯತೆ |
| (3) | ಅರಣ್ಯ |
| (4) | ಪರಿಸರ ವ್ಯವಸ್ಥೆ / ಪರಿಸರ ವ್ಯೂಹ |
CORRECT ANSWER
(1) ಓಜೋನ್ ಪದರ
|
7. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: |
| (1) | ಕೀಟ ನಾಶಕಗಳ ಬಳಕೆ ಅವಶ್ಯಕತೆ ಆಧಾರಿತ ಮಾತ್ರ |
| (2) | ಸೂಕ್ತ ಜಲ ನಿರ್ವಹಣೆ |
| (3) | ಮರು ಅರಣ್ಯೀಕರಣ |
| (4) | ಮಾಲಿನ್ಯವನ್ನು ಕಡಿಮೆ ಮಾಡುವುದು |
| ಪರಿಸರದ ಅಪಾಯಗಳನ್ನು ತಡೆಯುವುದಕ್ಕೆ ಸಂಬಂಧಿಸಿದ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ? |
|
| (1) | 1 ಮತ್ತು 2 ಮಾತ್ರ |
| (2) | 1 ಮತ್ತು 4 ಮಾತ್ರ |
| (3) | 3 ಮತ್ತು 4 ಮಾತ್ರ |
| (4) | 1, 2, 3 ಮತ್ತು 4 |
CORRECT ANSWER
(4) 1, 2, 3 ಮತ್ತು 4
|
8. | ಹವಮಾನದ ಅಧ್ಯಯನವನ್ನು ಹೀಗೆ ಕರೆಯಲಾಗುತ್ತದೆ. |
|
| (1) | ಪವನ ಶಾಸ್ತ್ರ |
| (2) | ವಾಯುಗುಣ ವಿಜ್ಞಾನ |
| (3) | ಏರೋನಮಿ |
| (4) | ವಾಯು ವಿಜ್ಞಾನ |
CORRECT ANSWER
(1) ಪವನ ಶಾಸ್ತ್ರ
|
9. | ಯಾವ ಸಾಧನವನ್ನು ಮಾರುತ ವೇಗವನ್ನು ಅಳೆಯುವುದಕ್ಕೆ ಬಳಸಲಾಗುತ್ತದೆ? |
|
| (1) | ಬಾರೋ ಮೀಟರ್ |
| (2) | ಸ್ಪಿಡೋ ಮೀಟರ್ |
| (3) | ಏನೋಮೋ ಮೀಟರ್ |
| (4) | ಹೈಗ್ರೋಮೀಟರ್ |
CORRECT ANSWER
(3) ಏನೋಮೋ ಮೀಟರ್
|
10. | IUCNನಿಂದ ನಿರ್ವಹಿಸಲಾದ ವಿಲೋಪದ ಅಪಾಯದೊಂದಿಗೆ ದಾಖಲೆಗಳು ಅಥವಾ ಪ್ರಭೇಧಗಳ ದತ್ತಾಂಶವನ್ನು ಸಂಗ್ರಹಿಸುವುದಕ್ಕೆ ಹೀಗೆ ಕರೆಯಲಾಗುತ್ತದೆ. |
|
| (1) | ರೆಡ್ ಡೇಟಾ ಬುಕ್ |
| (2) | ವೈಟ್ ಡೇಟಾ ಬುಕ್ |
| (3) | ಗ್ರೀನ್ ಡೇಟಾ ಬುಕ್ |
| (4) | ಬ್ಲಾಕ್ ಡೇಟಾ ಬುಕ್ |
CORRECT ANSWER
(1) ರೆಡ್ ಡೇಟಾ ಬುಕ್
|
11. | ಜೀವ ವೈವಿಧ್ಯತೆಯ ನಷ್ಟದ ಪ್ರಮುಖ ಪ್ರವೃತ್ತಿಗಳು |
| (1) | ಆವಾಸ ಬದಲಾವಣೆ |
| (2) | ಅತಿಯಾದ ಶೋಷಣೆ |
| (3) | ಮಾಲಿನ್ಯ |
| (4) | ಇನ್ವ್ಯಾಸಿವ್ ಆಲಿಯನ್ ಪ್ರಭೇಧಗಳು ಮತ್ತು ವಾಯುಗುಣ ಬದಲಾವಣೆ |
|
| (1) | 1 ಮತ್ತು 2ಮಾತ್ರ |
| (2) | 1 ಮತ್ತು 4 ಮಾತ್ರ |
| (3) | 3 ಮತ್ತು 4 ಮಾತ್ರ |
| (4) | 1, 2, 3 ಮತ್ತು 4 |
CORRECT ANSWER
(4) 1, 2, 3 ಮತ್ತು 4
|
12. | ಯಾವ ಹೇಳಿಕೆ (ಗಳು) ಸ್ಪಾಟ್ ಬಿಲ್ಡ್ ಪೆಲಿಕಾನ್ (ಪೆಲಿಕಾನಸ್ ಫಿಲಿಫೈನ್ಸ್) ಜಾಗತಿಕವಾಗಿ ಪರಿಗಣಿಸುವ ಪಕ್ಷಿ ಪ್ರಬೇಧವನ್ನು ಸಂಬಂಧಿಸಿದಂತೆ ಸರಿಯಾಗಿವೆ |
| (1) | ಕರ್ನಾಟಕವು ಭಾರತದಲ್ಲಿರುವ ತಳಿ ಸ್ಥಳಗಳಲ್ಲಿ ಒಂದಾಗಿದೆ. |
| (2) | ಕೊಕ್ಕರೆ ಬೆಳ್ಳೂರು ಭಾರತದಲ್ಲಿರುವ ಒಂದೇ ತಳಿ ಅಭಿವೃದ್ಧಿ ಸ್ಥಳ |
| (3) | ಶಿವಮೊಗ್ಗವು ಸಹ ತಳಿ ಅಭಿವೃದ್ಧಿಸ್ಥಳವಾಗಿದೆ. |
| (4) | ಪಕ್ಷಿಗಳ ಹಿಕ್ಕೆ ಬೀಳುವುದು ಜನರಿಗೆ ಅತ್ಯಂತ ನಷ್ಟವುಂಟು ಮಾಡುತ್ತದೆ. |
|
| (1) | 1 ಮತ್ತು 2 ಮಾತ್ರ |
| (2) | 1 ಮತ್ತು 4 ಮಾತ್ರ |
| (3) | 3 ಮತ್ತು 4 ಮಾತ್ರ |
| (4) | 1, 2, 3 ಮತ್ತು4 |
CORRECT ANSWER
(1) 1 ಮತ್ತು 2 ಮಾತ್ರ
|
13. | ಜೀವ ವೈವಿಧ್ಯತೆಯ ಅಪಾಯ ಸ್ಥಳಗಳು(hotspots) |
| (1) | ಕೆಲವು ಪ್ರಬೇಧಗಳಿರುವಲ್ಲಿ ಪ್ರದೇಶಗಳು ಮಾತ್ರ |
| (2) | ವಿರಳ ಅನುಪಾತ ಮತ್ತು ಮೌಲ್ಯಯುತ ಜೈವ ವೈವಿದ್ಯತೆಯನ್ನು ಅಧಿಕವಾಗಿ ಒಳಗೊಂಡಿರುವ ಪ್ರದೇಶಗಳು. |
| (3) | ಪಶ್ಚಿಮ ಘಟ್ಟಗಳು ಮತ್ತು ಪೂರ್ವ ದಿಕ್ಕಿನಲ್ಲಿರುವ ಹಿಮಾಲಯಗಳು ಭಾರತದಲ್ಲಿರುವ ಅಪಾಯದ ಸ್ಥಳಗಳು |
| (4) | ಬಂಡೀಪುರ ಅಪಾಯದ ಸ್ಥಳವಾಗಿದೆ |
|
| (1) | 1 ಮತ್ತು 2 ಮಾತ್ರ |
| (2) | 2 ಮತ್ತು 3 ಮಾತ್ರ |
| (3) | 3 ಮತ್ತು 4 ಮಾತ್ರ |
| (4) | 1, 2, 3 ಮತ್ತು 4 |
CORRECT ANSWER
(2) 2 ಮತ್ತು 3 ಮಾತ್ರ
|
14. | ವಾಯುಗುಣ ಬದಲಾವಣೆಯು |
|
| (1) | ಮಾನವರಿಗೆ ಅವಶ್ಯಕ / ಉಪಯೋಗ |
| (2) | ಮಾನವರಿಗೆ ನಷ್ಟ/ ಕೇಡು |
| (3) | 1 ಮಾತ್ರ |
| (4) | 1 ಮತ್ತು 2, ಎರಡೂ ಸರಿಯಾಗಿವೆ |
CORRECT ANSWER
(4) 1 ಮತ್ತು 2, ಎರಡೂ ಸರಿಯಾಗಿವೆ
|
15. | ಜೈವಿಕ ಸ್ಮಾರಕ ಸ್ಥಳಕ್ಕೆ ಸಂಬಂಧಿಸಿದಂತೆ ಯಾವ ಒಂದು ಸರಿಯಾಗಿದೆ? |
| (1) | ಕರ್ನಾಟಕ, ದೇವನಹಳ್ಳಿಯಲ್ಲಿರುವ ನಲ್ಲೂರು ತಮರಿಂಡ್ ತೋಪು ಕರ್ನಾಟಕದಲ್ಲಿರುವ ಪಾರಂಪರಿಕ ಸ್ಥಳವಾಗಿದೆ. |
| (2) | ಶಿವಮೊಗ್ಗದಲ್ಲಿರುವ ಅಂಬರಗುಡ್ಡವು ಸಹ ಒಂದು ಪಾರಂಪರಿಕ ಸ್ಥಳವಾಗಿದೆ. |
| (3) | ಕರ್ನಾಟಕವು 10 ಜೈವಿಕ ಪಾರಂಪರಿಕ ಸ್ಥಳಗಳನ್ನು ಹೊಂದಿದೆ. |
| (4) | ಭಾರತವು 1 ಜೈವಿಕ ಪಾರಂಪರಿಕ ಸ್ಥಳವನ್ನು ಮಾತ್ರ ಹೊಂದಿದೆ |
|
| (1) | 1 ಮತ್ತು 2ಮಾತ್ರ |
| (2) | 2 ಮತ್ತು 3 ಮಾತ್ರ |
| (3) | 3 ಮತ್ತು 4 ಮಾತ್ರ |
| (4) | 1, 2, 3 ಮತ್ತು 4 |
CORRECT ANSWER
(1) 1 ಮತ್ತು 2ಮಾತ್ರ
|
16. | ‘ಒಬ್ಬ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿವೇತನದ ಹಣವನ್ನು ಒಂದು ಬ್ಯಾಂಕಿನಲ್ಲಿ ಠೇವಣಿಯಾಗಿ ಇಡುತ್ತಾನೆ. ಆ ಹಣವು 6 ವರ್ಷಗಳಲ್ಲಿ ರೂ. 860 ಹಾಗೂ 8 ವರ್ಷಗಳಲ್ಲಿ ರೂ. 980 ಆದರೆ, ವಿದ್ಯಾರ್ಥಿ ವೇತನದ ಮೊತ್ತವನ್ನು ಕಂಡುಹಿಡಿಯಿರಿ. |
|
| (1) | 450 |
| (2) | 500 |
| (3) | 600 |
| (4) | 650 |
CORRECT ANSWER
(2) 500
|
17. | ಕೆಳಗಿನ ಯಾವ ಜಾಗತಿಕ ತಾಪಮಾನದ ಕಾರಣಗಳು ವಾಯುಗುಣ ಬಿಕ್ಕಟ್ಟಿನ ಕೊಡುಗೆಗಳಾಗಿವೆ? |
| (1) | ಹಿತರಕ್ಷಣೆ |
| (2) | ತೈಲ ಕೊರೆಯುವುದು |
| (3) | ವಿದ್ಯುತ್ ಸ್ಥಾವರಗಳು |
| (4) | ಅರಣ್ಯನಾಶ |
|
| (1) | 1 ಮತ್ತು 2 ಮಾತ್ರ |
| (2) | 2 ಮತ್ತು 3 ಮಾತ್ರ |
| (3) | 3 ಮತ್ತು 4 ಮಾತ್ರ |
| (4) | 1, 2, 3 ಮತ್ತು 4 |
CORRECT ANSWER
(4) 1, 2, 3 ಮತ್ತು 4
|
18. | ಸರಿಯಾದ ಹೇಳಿಕೆ ಗುರುತಿಸಿ. |
| (A) | ಬಾದಾಮಿ ಚಾಲುಕ್ಯರ ಗಳಗನಾಥ ದೇವಾಲಯ ನಾಗರ ಶೈಲಿಯಲ್ಲಿದೆ. |
| (B) | ವಿರೂಪಾಕ್ಷ ಮಂದಿರವು ದ್ರಾವಿಡ ಶೈಲಿಯಲ್ಲಿದೆ. |
|
| (1) | A ಮತ್ತು B ಸರಿ |
| (2) | A ಮಾತ್ರ ಸರಿ |
| (3) | B ಮಾತ್ರ ಸರಿ |
| (4) | A ಮತ್ತು B ಎರಡೂ ತಪ್ಪು |
CORRECT ANSWER
(1) A ಮತ್ತು B ಸರಿ
|
19. | ಬೇಲೂರು ಚೆನ್ನಕೇಶವ ದೇವಾಲಯದ ಲಕ್ಷಣಗಳನ್ನು ಗುರುತಿಸಿ. |
| (A) | ಗೋಪುರವನ್ನು ಹೊಂದಿದ ದೇವಾಲಯ |
| (B) | ದೇವಾಲಯಕ್ಕೆ ಪಿರಮಿಡ್ ಆಕೃತಿಯ ವಿಮಾನ |
| (C) | ಜಗಲಿಯ ಮೇಲಿನ ದೇವಾಲಯ. |
|
| (1) | A ಸರಿ |
| (2) | A ಮತ್ತು B ಸರಿ |
| (3) | A, B ಮತ್ತು C ಸರಿ |
| (4) | A, B ಮತ್ತು C ತಪ್ಪು |
CORRECT ANSWER
(3) A, B ಮತ್ತು C ಸರಿ
|
20. | ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಜಾರಿಗೊಳಿಸಿದವರು. |
|
| (1) | ಸಿ. ರಂಗಾಚಾರ್ಲು |
| (2) | ಕೆ. ಶೇಷಾದ್ರಿ ಅಯ್ಯರ್ |
| (3) | ವಿ. ಪಿ. ಮಾಧವ ರಾವ್ |
| (4) | ಆಲ್ಬಿಯನ್ ಬ್ಯಾನರ್ಜಿ |
CORRECT ANSWER
(1) ಸಿ. ರಂಗಾಚಾರ್ಲು
|
21. | ಬೆಂಗಳೂರಿನಲ್ಲಿ ‘ಪೀಪಲ್ಸ್ ಎಜುಕೇಷನ್ ಸೊಸೈಟಿ’ ಗೆ ಭೂಮಿ ದಾನ ನೀಡಿದ ಮಹಾರಾಜರು |
|
| (1) | ಕೃಷ್ಣರಾಜ ಒಡೆಯರ್ III |
| (2) | ಚಾಮರಾಜ ಒಡೆಯರ್ X |
| (3) | ಕೃಷ್ಣರಾಜ ಒಡೆಯರ್ IV |
| (4) | ಜಯಚಾಮರಾಜೇಂದ್ರ ಒಡೆಯರ್ |
CORRECT ANSWER
(4) ಜಯಚಾಮರಾಜೇಂದ್ರ ಒಡೆಯರ್
|
22. | 1898 ರಲ್ಲಿ ಬೆಂಗಳೂರಿಗೆ ಪ್ಲೇಗ್ ಅಂಟು ಜಾಡ್ಯ ಎಲ್ಲಿಂದ ಬಂದಿತು? |
|
| (1) | ಮದ್ರಾಸ್ |
| (2) | ಬಾಂಬೆ |
| (3) | ಕಲ್ಕತ್ತಾ |
| (4) | ದೆಹಲಿ |
CORRECT ANSWER
(2) ಬಾಂಬೆ
|
23. | ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ: |
| (A) | ಸಿ ಒ ಪಿ-27 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಇತ್ತೀಚೆಗೆ ಶಾರ್ಮ ಎಲ್ -ಶೈಕ್ ನಲ್ಲಿ ಜರುಗಿತು. |
| (B) | ಹಿಂದಿನ ಸಿ ಒ ಪಿ- 26 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಗ್ಲಸ್ಗೋವ್ನಲ್ಇಲ ಜರುಗಿತು. |
| (C) | ಸಿ ಒ ಪಿ ಯ ವಿಸ್ತೃತ ರೂಪ – ಪಕ್ಷಗಳ ಸಮ್ಮೇಳನ (Conference of Parties) |
| (D) | ಸಿ ಒ ಪಿ ಯ ವಿಸ್ತೃತ ರೂಪ – ಪ್ಯಾರಿಸ್ ಒಪ್ಪಂದದ ಸಮ್ಮೇಳನ (Conference on Paris Agreement) |
| ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ / ವಿವರಣೆಗಳಲ್ಲಿ ಯಾವುದು ಸರಿಯಾಗಿದೆ? |
|
| (1) | A ಮತ್ತು B ಮಾತ್ರ |
| (2) | A, B ಮತ್ತು C ಮಾತ್ರ |
| (3) | A, B ಮತ್ತು D ಮಾತ್ರ |
| (4) | A ಮತ್ತು C ಮಾತ್ರ |
CORRECT ANSWER
(2) A, B ಮತ್ತು C ಮಾತ್ರ
|
24. | ‘‘ರಾಷ್ಟ್ರೀಯ ನಿಶ್ಚಿತ ನೆರವು’’ ಗೆ ಸಂಬಂಧಿಸಿದಂತೆ, ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ: |
| (A) | ಎನ್.ಡಿ.ಸಿ. ಗಳು ಪ್ಯಾರಿಸ್ ಒಪ್ಪಂದದ ಹೃದಯ ಭಾಗವಾಗಿದೆ |
| (B) | ಪ್ರತಿ ಐದು ವರ್ಷಗಳಿಗೊಮ್ಮೆ ಎನ್.ಡಿ.ಸಿ. ಗಳನ್ನು ಯು ಎನ್ ಎಫ್ ಸಿ ಸಿ ಸಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು. |
| ಈ ಮೇಲೆ ನೀಡಲಾದ ಯಾವ ವಿವರಣೆ / ಗಳು ಸರಿಯಾಗಿದೆ? |
|
| (1) | A ಮಾತ್ರ |
| (2) | B ಮಾತ್ರ |
| (3) | A ಮತ್ತು B ಎರಡೂ |
| (4) | A ಅಥವಾ B ಎರಡೂ ಅಲ್ಲ |
CORRECT ANSWER
(3) A ಮತ್ತು B ಎರಡೂ
|
25. | ಈ ಕೆಳಗಿನ ಜಿ-20 ಬಗೆಗಿನ ವಿವರಣೆ/ಗಳು ಅಲ್ಲಿ ಯಾವುದು ಸರಿ? |
| (A) | ಭಾರತವು 17 ನೇ ಜಿ 20 ಆತಿಥ್ಯವನ್ನು ರಾಜ್ಯದ ಮುಖ್ಯಸ್ಥರಿಗೆ ಮತ್ತು ರಾಜ್ಯ ಶೃಂಗಕ್ಕೆ ನೀಡುತ್ತದೆ. |
| (B) | ಜೊತೆಯಾಗಿ, ಜಿ 20 ಸದಸ್ಯರುಗಳು ವಿಶ್ವದ ಜಿ.ಡಿ.ಪಿ. ಯ ಶೇಕಡಾ 80 ಕ್ಕಿಂತ ಹೆಚ್ಚನ್ನು ಪ್ರತಿನಿಧಿಸುತ್ತಾರೆ. |
| (C) | ಇದು ಶೇಕಡಾ 75 ರಷ್ಟು ಅಂತಾರಾಷ್ಟ್ರೀಯ ವ್ಯಾಪಾರವನ್ನು ಪ್ರತಿನಿಧಿಸುತ್ತದೆ. |
| (D) | ವಿಶ್ವದ ಜನಸಂಖ್ಯೆಯ ಶೇಕಡಾ 60 ರಷ್ಟು ಜನರು ಜಿ-20 ದೇಶಗಳಲ್ಲಿ ನೆಲೆಸಿದ್ದಾರೆ. |
|
| (1) | A ಮತ್ತು C ಮಾತ್ರ |
| (2) | B, C ಮತ್ತು D ಮಾತ್ರ |
| (3) | A, C ಮತ್ತು D ಮಾತ್ರ |
| (4) | A ಮತ್ತು D ಮಾತ್ರ |
CORRECT ANSWER
(2) B, C ಮತ್ತು D ಮಾತ್ರ
|
26. | ಅರ್ಥಶಾಸ್ತದ ನೋಬಲ್ ಪ್ರಶಸ್ತಿ, 2022 ಅನ್ನು ಜಂಟಿಯಾಗಿ ಬೆನ್. ಎಸ್.ಬೆರ್ನೆನೇಕ್, ಡೌಗ್ಲೋಸ ಡಬ್ಲೂ.ಡೈಮಂಡ್ ಮತ್ತು ಪಿಲಿಪ್ ಎಚ್. ಡೈಬ್ವಿಗ್ವರಿಗೆ ಅವರ ಯಾವ ಸಂಶೋಧನೆಗಾಗಿ ನೀಡಲಾಯಿತು? |
|
| (1) | ಆರ್ಥಿಕ ಒಳಗೂಡಿಸುವಿಕೆ |
| (2) | ಬ್ಯಾಂಕ್ಗಳು ಮತ್ತು ಆರ್ಥಿಕ ಮುಗ್ಗಟ್ಟು |
| (3) | ಷೇರು ಮಾರುಕಟ್ಟೆ |
| (4) | ಅಂತರಾಷ್ಟ್ರೀಯ ವ್ಯಾಪಾರ |
CORRECT ANSWER
(2) ಬ್ಯಾಂಕ್ಗಳು ಮತ್ತು ಆರ್ಥಿಕ ಮುಗ್ಗಟ್ಟು
|
27. | 2022 ಐ ಸಿ ಸಿ ಮಹಿಳಾ ವಿಶ್ವಕಪ್ನಲ್ಲಿ ಯಾವ ದೇಶ ಎರಡನೇ ರನರ್ ಅಪ್ ಆಗಿತ್ತು? |
|
| (1) | ಭಾರತ |
| (2) | ಇಂಗ್ಲೆಂಡ್ |
| (3) | ಆಸ್ಟ್ರೇಲಿಯ |
| (4) | ಶ್ರೀಲಂಕ |
CORRECT ANSWER
(2) ಇಂಗ್ಲೆಂಡ್
|
28. | ರಷ್ಯದೊಂದಿಗಿನ ಯುದ್ಧದಲ್ಲಿ, ಈ ಮುಂದಿನ ಯಾವ ಉದ್ದೇಶ/ಗಳಿಗಾಗಿ ಉಕ್ರೇನ್ `X’ ಸ್ಪೇಸ್ ಸ್ಟಾರ್ ಲಿಂಕ್ ಟರ್ಮಿನಲ್ ಗಳನ್ನು ಬಳಸಿತ್ತು? |
| (A) | ಯುದ್ಧದಿಂದ ಬಾಧಿತವಾದ ಪ್ರದೇಶಗಳಲ್ಲಿ ಇಂಟರ್ ನೆಟ್ ಸಂಪರ್ಕವನ್ನು ಪುನರ್ವಶ ಪಡಿಸಿಕೊಳ್ಳಲು |
| (B) | ರಷ್ಯ ದಳಗಳ ವಿರುದ್ಧದ ಡ್ರೋನ್ ಆಕ್ರಮಣದ ಕಾರ್ಯಾಚರಣೆಯಲ್ಲಿ ಉಕ್ರೇನಿನ ಸಶಸ್ತ್ರದಳಗಳಿಗೆ ನೆರವು ನೀಡಲು |
|
| (1) | A ಮಾತ್ರ |
| (2) | B ಮಾತ್ರ |
| (3) | A ಮತ್ತು B ಎರಡೂ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(3) A ಮತ್ತು B ಎರಡೂ
|
29. | ಗ್ಲೋಬಲ್ ಕಾರ್ಬನ್ ಬಜೆಟ್, 2022 ರ ವರದಿಯ ಅನುಸಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ, 2022 ರಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಬನ್ ಎಮಿಷನ್ ಗೆ ಸಾಕ್ಷಿಯಾಗುವ ದೇಶ ಯಾವುದೆಂದು ನಿರೀಕ್ಷಿಸಲಾಗಿದೆ? |
|
| (1) | ಭಾರತ |
| (2) | ಚೈನ |
| (3) | ಯು ಎಸ್ ಎ |
| (4) | ಬ್ರೆಜಿಲ್ |
CORRECT ANSWER
(1) ಭಾರತ
|
30. | ಇತ್ತೀಚೆಗೆ, ಓಕ್ಟ್ಸ್ಸಕ್ (Okhotsk) ಸಮುದ್ರವು, ಈ ಕೆಳಗಿನ ಯಾವ ಕಾರಣಗಳಿಗಾಗಿ ಸುದ್ದಿಯಾಗಿತ್ತು. |
|
| (1) | ರಷ್ಯ ಮತ್ತು ಚೈನದ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ. |
| (2) | ಭಾರತ ಮತ್ತು ಜಪಾನಿನ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ. |
| (3) | ಸಮುದ್ರದಲ್ಲಿ ಕ್ವಾಡ್ ಸದಸ್ಯರ ನೌಕಾಭ್ಯಾಸವಿರುತ್ತದೆ. |
| (4) | ಮೇಲಿನ ಎಲ್ಲವೂ |
CORRECT ANSWER
(1) ರಷ್ಯ ಮತ್ತು ಚೈನದ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ.
|
31. | ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ 2 ನೇ ಯುನೈಟೆಡ್ ನೇಷನ್ ವರ್ಲ್ಡ್ ಜಿಯೋಸ್ಪೆಶಿಯಲ್ ಇನ್ಫಾರ್ಮೇಷನ್ ಕಾಂಗ್ರೆಸ್ನ ನಿಖರ ಉದ್ದೇಶವೇನು? |
|
| (1) | ‘‘ಜಾಗತಿಕ ಗ್ರಾಮದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯ ಬಾರದು’’ |
| (2) | ‘‘ವಿಶ್ವದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯಬಾರದು’’ |
| (3) | ‘‘ಗೋಳದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯಬಾರದು’’ |
| (4) | ‘‘ಜಾಗತಿಕ ಸಮುದಾಯದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯಬಾರದು’’ |
CORRECT ANSWER
(1) ‘‘ಜಾಗತಿಕ ಗ್ರಾಮದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯ ಬಾರದು’’
|
32. | ಇತ್ತೀಚೆಗೆ ಸುದ್ದಿಯಾಗಿದ್ದ ಟಿಮಾರ್-ಲೆಸ್ಟಿ (Timor-Leste) ಬಗೆಗಿನ ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ: |
| (A) | ಇದನ್ನು 11 ನೇ ಎ. ಎಸ್. ಇ. ಎ. ಎನ್. (ASEAN) ಸದಸ್ಯವನ್ನಾಗಿ ಅಂಗೀಕರಿಸಲಾಗಿದೆ |
| (B) | ಈ ದೇಶವು 20 ಚದರ ಕಿಲೋ ಮೀಟರ್ ಪ್ರದೇಶವನ್ನು ಹೊಂದಿದೆ. |
| (C) | ‘ದಿಲಿ’ ಈ ದೇಶದ ರಾಜಧಾನಿ |
| (D) | ಅಮೇರಿಕನ್ ಡಾಲರ್ (USD) ಈ ದೇಶದ ಕರೆನ್ಸಿಯಾಗಿದೆ. |
|
ಈ ಮೇಲಿನ ವಿವರಣೆಗಳಲ್ಲಿ ಯಾವುದು ಸರಿಯಾಗಿದೆ ? |
|
| (1) | C ಮಾತ್ರ |
| (2) | A ಮತ್ತು C ಮಾತ್ರ |
| (3) | A, C ಮತ್ತು D ಮಾತ್ರ |
| (4) | ಮೇಲಿನ ಎಲ್ಲವೂ |
CORRECT ANSWER
(3) A, C ಮತ್ತು D ಮಾತ್ರ
|
33. | ಈ ಕೆಳಗಿನವುಗಳಲ್ಲಿ ಯಾವ ದೇಶವು, ನವೆಂಬರ್ 08, 2022 ರಂದು ಪ್ರಾರಂಭವಾದ ಮ್ಯಾನ್ಗ್ರೊೊವ್ ಅಲಿಯನ್ಸ್ ಫಾರ್ ಕ್ರೈಮೆಟ್ (MAC) ನ ಸದಸ್ಯತ್ವ ಹೊಂದಿಲ್ಲ? |
|
| (1) | ಬಾಂಗ್ಲ ದೇಶ |
| (2) | ಭಾರತ |
| (3) | ಶ್ರೀಲಂಕ |
| (4) | ಸ್ಪೈನ್ |
CORRECT ANSWER
(1) ಬಾಂಗ್ಲ ದೇಶ
|
34. | ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಿಸಿರುವ ಜೋಡಿಗಳು ಯಾವುದು? |
| | ಜೋಡಿ I | | ಜೋಡಿ II |
| (A) | ಒರಿಯಾನ್ | | ಮಂಗಳಗ್ರಹದ ನಿಯೋಗಕ್ಕಾಗಿ ನಾಸ ಉಡಾಯಿಸಿದ ವಾಯುಯಾನ |
| (B) | ಅರ್ಥೈಮಿಸ್ I | | ಈ ಚಂದ್ರನಿಂದ ಮಂಗಳ ಗ್ರಹಕ್ಕೆ ಅನ್ವೇಷಣಾ ಸಮೀಪಿಸುವಿಕೆಗೆ ನಾಸಾದ ನಿಯೋಗದ ಅಪಾಯ ಸಂಭವವಿರುವ ವಾಯುಯಾನದ ಭಾಗ |
| (C) | ಅರ್ಥೈಮಿಸ್ II | | ಚಂದ್ರ ಗ್ರಹಕ್ಕೆ ಗಗನ ಯಾತ್ರಿಯನ್ನು ಕಳುಹಿಸಲು ನಾಸಾದ ಯೋಜಿತ ಗುರಿ |
| (D) | ಸ್ಪೇಸ್ ಲಾಂಚ್ ಸಿಸ್ಟಂ (SLS) | | ವಿಶ್ವದ ಅತ್ಯಂತ ಶಕ್ತಿಶಾಲಿ ಆಕಾಶ ಬಾಣ |
| |
|
| (1) | A ಮಾತ್ರ |
| (2) | B ಮಾತ್ರ |
| (3) | B ಮತ್ತು D ಮಾತ್ರ |
| (4) | B, C ಮತ್ತು D ಮಾತ್ರ |
CORRECT ANSWER
(4) B, C ಮತ್ತು D ಮಾತ್ರ
|
35. | ಸಸ್ಯ ಕೋಶಗಳನ್ನು ಜೀವಂತ ಮತ್ತು ಕಠಿಣವಾದ ಕೋಟ್ ಎಂದು ಕರೆಯಲಾಗುತ್ತದೆ. |
|
| (1) | ಪ್ಲಾಸ್ಮಾಮೆಂಬರೇನ್ |
| (2) | ಕೋಶ ಗೋಡೆ |
| (3) | ಲಾಮೆಲ್ಲಾ |
| (4) | ಪ್ಲಾಸ್ಮಾಲೆಮ್ಮ |
CORRECT ANSWER
(2) ಕೋಶ ಗೋಡೆ
|
36. | ಮೊದಲ ಲಸಿಕೆಯನ್ನು ಯಾರು ಅಭಿವೃದ್ಧಿ ಪಡಿಸಿದ್ದಾರೆ? |
|
| (1) | ಲೂಯಿಸ್ ಪಾಸ್ಟರ್ |
| (2) | ರಾಬರ್ಟ್ ಕೋಚ್ |
| (3) | ಕಾರ್ಲ್ ಲ್ಯಾಂಡ್ ಸ್ಟೈನರ್ |
| (4) | ಜೋಸೆಫ್ ಮಿಸ್ಟರ್ |
CORRECT ANSWER
(1) ಲೂಯಿಸ್ ಪಾಸ್ಟರ್
|
37. | ವೈರಸ್ಗಳನ್ನು ಹೀಗೆ ಪರಿಗಣಿಸಲಾಗುತ್ತದೆ. |
|
| (1) | ಪ್ರೊಕಾರ್ಯೋಟಿಕ್ |
| (2) | ಯೂಕ್ಯಾರಿಯೋಟಿಕ್ |
| (3) | ಸೆಲ್ಯುಲಾರ್ |
| (4) | ಅಸೆಲ್ಯುಲಾರ್ |
CORRECT ANSWER
(4) ಅಸೆಲ್ಯುಲಾರ್
|
38. | ಏಡ್ಸ್ ಸ್ಕ್ರೀನಿಂಗ್ ಪರೀಕ್ಷೆ |
|
| (1) | ಇಲಿಸಾ |
| (2) | ಪಿ ಸಿ ಆರ್ |
| (3) | ವೆಸ್ಟರ್ನ್ ಬ್ಲಾಟ್ |
| (4) | ಸದರನ್ ಬ್ಲಾಟ್ |
CORRECT ANSWER
(1) ಇಲಿಸಾ OR (3) ವೆಸ್ಟರ್ನ್ ಬ್ಲಾಟ್
|
39. | ಜನಸಂಖ್ಯೆಯಲ್ಲಿ, ಅನಿಯಂತ್ರಿತ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಏನು ಎಂದು ಕರೆಯಲಾಗುತ್ತದೆ? |
|
| (1) | ಸಾಗಿಸುವ ಸಾಮರ್ಥ್ಯ |
| (2) | ಬಯೊಟಿಕ್ ಸಾಮರ್ಥ್ಯ |
| (3) | ಜನನ ದರ |
| (4) | ಫಲವತ್ತತೆ ದರ |
CORRECT ANSWER
(2) ಬಯೊಟಿಕ್ ಸಾಮರ್ಥ್ಯ
|
40. | ಆಂಟಿ ವೈರಸ್ ವಸ್ತು ಯಾವುದು? |
|
| (1) | ಆಂಟಿಜೆನ್ |
| (2) | ಆಂಟಿಬಾಡಿ |
| (3) | ಇಂಟರ್ಫೆರಾನ್ |
| (4) | ಆಂಟಿಬಯೋಟಿಕ್ |
CORRECT ANSWER
(3) ಇಂಟರ್ಫೆರಾನ್
|
41. | ಸೂಕ್ಷ್ಮ ಜೀವಿಗಳ ಚಯಾಪಚಯ ಕ್ರಿಯೆಯ ಬಳಕೆಯು ಜಲಮೂಲಗಳಲ್ಲಿನ ಮಾಲಿನ್ಯಕಾರಕಗಳನ್ನು ತೆಗೆದುಹಾಕುವುದು ಏನು ಎಂದು ಕರೆಯಲಾಗುತ್ತದೆ? |
|
| (1) | ಬಯೋಮ್ಯಾಗ್ನಿಫಿಕೇಶನ್ |
| (2) | ಬಯೋರೆಮಿಡಿಯೇಶನ್ |
| (3) | ಬಯೋಮೇಥನೇಶನ್ |
| (4) | ಬಯೋರೆಡಕ್ಷನ್ |
CORRECT ANSWER
(2) ಬಯೋರೆಮಿಡಿಯೇಶನ್
|
42. | ಧ್ವನಿ ನಿರೋಧಕ ಕಟ್ಟಡಗಳ ಸಂವಿಧಾನಕ್ಕಾಗಿ ಬಳಸುವ ಪಾಚಿಗಳು ಯಾವುದು? |
|
| (1) | ಕ್ಯಾರ |
| (2) | ಡಯಾಟಮ್ |
| (3) | ಲ್ಯಾಮಿನೇರಿಯಾ |
| (4) | ಯುಲೋಥ್ರಿಕ್ಸ್ |
CORRECT ANSWER
(2) ಡಯಾಟಮ್
|
43. | ವರ್ಣತಂತುಗಳನ್ನು ಮೊದಲು ಯಾರು ವಿವರಿಸಿದ್ದಾರೆ __________ |
|
| (1) | ಡಾರ್ವಿನ್ |
| (2) | ಮೆಂಡಲ್ |
| (3) | ಸ್ಟ್ರಾಸ್ಬರ್ಗರ್ |
| (4) | ಟಾಟಮ್ |
CORRECT ANSWER
(3) ಸ್ಟ್ರಾಸ್ಬರ್ಗರ್
|
44. | ಮಣ್ಣಿನಲ್ಲಿ, ಬೇರುಗಳಿಗೆ ಲಭ್ಯವಿರುವ ನೀರು ಯಾವ ಕಾರಣಕ್ಕಾಗಿ? |
|
| (1) | ಕ್ಯಾಪಿಲ್ಲರಿ ನೀರು |
| (2) | ಹೈಗ್ರೋಸ್ಕೋಪಿಕ್ ನೀರು |
| (3) | ಗ್ರಾವಿಟೆಷನಲ್ ನೀರು |
| (4) | ರಾಸಾಯನಿಕವಾಗಿ ಬಂಧಿತ ನೀರು |
CORRECT ANSWER
(1) ಕ್ಯಾಪಿಲ್ಲರಿ ನೀರು
|
45. | ಆಮ್ಲ ಮಳೆಯು ಈ pH ನ್ನು ಹೊಂದಿರುತ್ತದೆ. |
|
| (1) | 4.5 ಗಿಂತ ಕಡಿಮೆ |
| (2) | 4.5 ಗಿಂತ ಹೆಚ್ಚು |
| (3) | 5 ಕ್ಕಿಂತ ಹೆಚ್ಚು |
| (4) | 6 ಮತ್ತು 7 ನಡುವೆ |
CORRECT ANSWER
(1) 4.5 ಗಿಂತ ಕಡಿಮೆ
|
46. | ಕವಚ ಹೂತು (Blanket bog) ಹೋಗುವುದು ಕೆಳಗಿರುವ ಮಳೆ ಪ್ರಮಾಣವನ್ನು ಪಡೆಯುವುದರಿಂದ. |
|
| (1) | ವರ್ಷಕ್ಕೆ 1000 mm / ಗಿಂತ ಹೆಚ್ಚು |
| (2) | ವರ್ಷಕ್ಕೆ 1500 mm / ಗಿಂತ ಹೆಚ್ಚು |
| (3) | ವರ್ಷಕ್ಕೆ 500 – 800 mm / ಗಿಂತ ಹೆಚ್ಚು |
| (4) | ವರ್ಷಕ್ಕೆ 2000 mm / ಗಿಂತ ಹೆಚ್ಚು |
CORRECT ANSWER
(1) ವರ್ಷಕ್ಕೆ 1000 mm / ಗಿಂತ ಹೆಚ್ಚು
|
47. | ‘ಕೇಂದ್ರೀಯ ಕೀಟನಾಶಕ ಅಧಿನಿಯಮ’ ಯಾವ ವರ್ಷದಲ್ಲಿ ಮಂಜೂರಾಯಿತು/ ಅಂಗೀಕೃತವಾಯಿತು? |
|
| (1) | 1962 |
| (2) | 1961 |
| (3) | 1972 |
| (4) | 1998 |
CORRECT ANSWER
ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.
|
48. | ಭಾರತದಲ್ಲಿ ಮಾನ್ಸೂನ್ ಉಗಮಕ್ಕೆ ಸಂಬಂದಿಸಿದಂತೆ ಕೆಳಗಿನ ಯಾವ ಪರಿಕಲ್ಪನೆಯು ಸರಿಯಾಗಿರುವುದಿಲ್ಲ. |
|
| (1) | ಉಷ್ಣಾಂಶದ ಪರಿಕಲ್ಪನೆ – ಸರ್ ಎಡ್ಮಂಡ ಹ್ಯಾಲಿ |
| (2) | ಏರೋಲಾಜಿಕಲ್ ಪರಿಕಲ್ಪನೆ – ಆರ್. ಶೆರ್ಹಾಗ್ |
| (3) | ಚಲನಾತ್ಮಕ ಪರಿಕಲ್ಪನೆ – ಎಚ್. ಪ್ಲೊಹ್ನ |
| (4) | ಸಾಂಪ್ರದಾಯಿಕ ಪರಿಕಲ್ಪನೆ – ಈ. ಪಾಲೆಮೆನ್ |
CORRECT ANSWER
(4) ಸಾಂಪ್ರದಾಯಿಕ ಪರಿಕಲ್ಪನೆ – ಈ. ಪಾಲೆಮೆನ್
|
49. | ಪಟ್ಟಿ I ಅನ್ನು ಪಟ್ಟಿ II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾದ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ: |
| | ಪಟ್ಟಿ – I | | ಪಟ್ಟಿ II |
| | ಭೂಗೋಳ ಶಾಸ್ತ್ರಜ್ಞರು | | ಸಿದ್ಧಾಂತಗಳು / ಮಾದರಿ / ಪರಿಕಲ್ಪನೆ |
| (a) | J. ಗೋಟ್ಮನ್ | (A) | ಕಾನ್ಸೆಂಟ್ರಿಕ್ ಜೋನ್ ಥಿಯರಿ |
| (b) | E. ಬರ್ಗೇಸ್ | (B) | ಪ್ರೈಮೇಟ್ ಸಿಟಿ |
| (c) | M. ಜೆಫರ್ಸನ್ | (C) | ಮಲ್ಟಿಪಲ್ ನ್ಯೂಕ್ಲಿಮಾಡೆಲ್ |
| (d) | C. ಹ್ಯಾರಿಸ್ ಮತ್ತು E. ಉಲ್ಮನ್ | (D) | ಮೆಗಲೋಪೋಲಿಸ್ |
| |
|
| | a | b | c | d |
| (1) | A | D | C | B |
| (2) | B | A | D | C |
| (3) | C | B | A | D |
| (4) | D | A | B | C |
CORRECT ANSWER
(4) D, A, B, C
|
50. | ಭೂಮಿಯ ಹೊರಪದರದಲ್ಲಿಯ ಸಮೃದ್ಧಿಯಲ್ಲಿರುವ, ಈ ಅಂಶಗಳನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಿ |
| (1) | ಸಿಲಿಕಾನ್ |
| (2) | ಕಬ್ಬಿಣ |
| (3) | ಮ್ಯಾಗ್ನೇಶಿಯಂ |
| ಸರಿಯಾದ ಉತ್ತರವನ್ನು ಕೆಳಗಿನ ಸಂಕೇತಗಳಿಂದ ಆರಿಸಿ: |
|
| (1) | 1, 2 & 3 |
| (2) | 1, 3 & 2 |
| (3) | 2, 1 & 3 |
| (4) | 2, 3 & 1 |
CORRECT ANSWER
(1) 1, 2 & 3
|
51. | ಈ ಕೆಳಗಿನವುಗಳಲ್ಲಿ ಯಾವುದು ನಿರಂತರ ಮಾರುತವಲ್ಲ? |
|
| (1) | ಮಾನ್ಸೂನ್ ಮಾರುತ |
| (2) | ಪಶ್ಚಿಮ ಮಾರುತ |
| (3) | ದ್ರವೀಯ ಮಾರುತ |
| (4) | ವಾಣಿಜ್ಯ ಮಾರುತ |
CORRECT ANSWER
(1) ಮಾನ್ಸೂನ್ ಮಾರುತ
|
52. | ಈ ಕೆಳಗಿನವುಗಳಲ್ಲಿ ಯಾವುದು ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನ ವರೆಗೆ ನೀಡಿರುವ ಪರ್ವತ ಶ್ರೇಣಿಗಳ ರಚನೆಯ ವಯಸ್ಸಿನ ಸರಿಯಾದ ಅನುಕ್ರಮವಾಗಿದೆ? |
|
| (1) | ಹಿಮಾಲಯ – ವಿಂಧ್ಯ – ಪಶ್ಚಿಮ ಘಟ್ಟಗಳು – ಡೆಕ್ಕನ್ ಟ್ರಾಪ್ |
| (2) | ಡೆಕ್ಕನ್ ಟ್ರಾಪ್ – ಪಶ್ಚಿಮ ಘಟ್ಟಗಳು- ವಿಂಧ್ಯ – ಹಿಮಾಲಯ |
| (3) | ಹಿಮಾಲಯ – ಪಶ್ಚಿಮ ಘಟ್ಟಗಳು- ವಿಂಧ್ಯ – ಡೆಕ್ಕನ್ ಟ್ರಾಪ್ |
| (4) | ವಿಂಧ್ಯ – ಹಿಮಾಲಯ – ಡೆಕ್ಕನ್ ಟ್ರಾಪ್ – ಪಶ್ಚಿಮ ಘಟ್ಟಗಳು |
CORRECT ANSWER
(1) ಹಿಮಾಲಯ – ವಿಂಧ್ಯ – ಪಶ್ಚಿಮ ಘಟ್ಟಗಳು – ಡೆಕ್ಕನ್ ಟ್ರಾಪ್
|
53. | ಕೊಪೆನ್ನರ ವಾಯುಗುಣದ ವರ್ಗೀಕರಣದಲ್ಲಿ ‘f’ ಎಂಬುದು |
|
| (1) | ಬೇಸಿಗೆ ಕಾಲದಲ್ಲಿ ಶುಷ್ಕತೆ |
| (2) | ಚಳಿಗಾಲದಲ್ಲಿ ಶುಷ್ಕತೆ |
| (3) | ಶುಷ್ಕತೆ ರಹಿತ ಋತುಮಾನ |
| (4) | ಅಲ್ಪ ಕಾಲೀಕ ಶುಷ್ಕ ಋತು |
CORRECT ANSWER
(3) ಶುಷ್ಕತೆ ರಹಿತ ಋತುಮಾನ
|
54. | ಸಾಂದ್ರತೆ, ನಿರೀಕ್ಷಿತ ಜೀವಿತಾವದಿ ಮತ್ತು ಸಾಕ್ಷರತೆಯು __________ ತೋರಿಸುತ್ತದೆ. |
|
| (1) | ಸ್ತ್ರೀ ಮತ್ತು ಪುರುಷ ಅನುಪಾತ, ಮಾನವನ ಜೀವನದ ಗುಣಮಟ್ಟ ಮತ್ತು ಅಭಿವೃದ್ಧಿಯ ಸೂಚ್ಯಾಂಕ |
| (2) | ದೇಶದ ಭೂ ಸಂಪನ್ಮೂಲದ ಮೇಲೆ ಒತ್ತಡ, ಅಭಿವೃದ್ಧಿಯ ಮತ್ತು ಮಾನವನ ಜೀವನದ ಗುಣಮಟ್ಟ |
| (3) | ಸ್ತ್ರೀ ಮತ್ತು ಪುರುಷ ಅನುಪಾತ, ಅಭಿವೃದ್ಧಿಯ ಸೂಚ್ಯಂಕ ಮತ್ತು ಜನಸಂಖ್ಯೆಯ ಅನುಪಾತ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(2) ದೇಶದ ಭೂ ಸಂಪನ್ಮೂಲದ ಮೇಲೆ ಒತ್ತಡ, ಅಭಿವೃದ್ಧಿಯ ಮತ್ತು ಮಾನವನ ಜೀವನದ ಗುಣಮಟ್ಟ
|
55. | ಸ್ಕೈಮೆಟ್ ಎಂಬುದು ಯಾವುದಕ್ಕೆ ಸಂಬಂಧಿಸಿದೆ? |
|
| (1) | ಹವಾಮಾನ ಮುನ್ಸೂಚನೆಯ ಸೌಲಭ್ಯವನ್ನು ನೀಡುವ ಖಾಸಗಿ ಕಂಪೆನಿ |
| (2) | ವಾಯು ಸಾರಿಗೆ ಸೌಲಭ್ಯವನ್ನು ಪೂರೈಸುವ ಖಾಸಗಿ ಕಂಪೆನಿ |
| (3) | ಭಾರತ ಸರ್ಕಾರದ ಸಾಫ್ಟ್ವೇರ್ ಕಂಪೆನಿ |
| (4) | ಅಂತರರಾಷ್ಟ್ರೀಯ ವಿಮಾನ ಸೌಲಭ್ಯವನ್ನು ಪೂರೈಸುವ ಬಹುರಾಷ್ಟ್ರೀಯ ಕಂಪೆನಿ |
CORRECT ANSWER
(1) ಹವಾಮಾನ ಮುನ್ಸೂಚನೆಯ ಸೌಲಭ್ಯವನ್ನು ನೀಡುವ ಖಾಸಗಿ ಕಂಪೆನಿ
|
56. | ಸಮಭಾಜಕ ವೃತ್ತದ ಸಮೀಪದ ಸಾಗರಗಳಲ್ಲಿ ಕಡಿಮೆ ಲವಣತೆಗೆ ಪ್ರಮುಖ ಕಾರಣವೆಂದರೆ |
|
| (1) | ಅತ್ಯಧಿಕ ಮಳೆ |
| (2) | ಅಧಿಕ ಆವಿಯಾಗುವಿಕೆ |
| (3) | ವಿಶಾಲವಾದ ಸಾಗರ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(1) ಅತ್ಯಧಿಕ ಮಳೆ
|
57. | X ನ್ನು ಗುರುತಿಸಿ : |
|
| (1) | ನಿವ್ವಳ ಕೃಷಿ ಯೋಗ್ಯ ಪ್ರದೇಶ |
| (2) | ನಿವ್ವಳ ಕೃಷಿ ಪ್ರದೇಶ |
| (3) | ಒಟ್ಟು ಕೃಷಿ ಜನಸಂಖ್ಯೆ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(1) ನಿವ್ವಳ ಕೃಷಿ ಯೋಗ್ಯ ಪ್ರದೇಶ
|
58. | ‘‘ಹಕ್ಕುಗಳು ಕಾನೂನುಗಳಿಂದ ರಕ್ಷಿತವಾಗಿಲ್ಲ, ಬದಲಾಗಿ ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯ ಮೂಲಕ ರಕ್ಷಿತವಾಗುತ್ತದೆ’’ ಈ ಹೇಳಿಕೆಯನ್ನು ನೀಡಿದವರು ಯಾರು? |
|
| (1) | ಡಾ . ಬಿ. ಆರ್. ಅಂಬೇಡ್ಕರ್ |
| (2) | ಕಾರ್ಲ್ ಮಾರ್ಕ್ಸ್ |
| (3) | ಜಯಪ್ರಕಾಶ್ ನಾರಾಯಣ |
| (4) | ಜವಾಹರಲಾಲ್ ನೆಹರು |
CORRECT ANSWER
(1) ಡಾ . ಬಿ. ಆರ್. ಅಂಬೇಡ್ಕರ್
|
59. | ಸಂವಿಧಾನದ ಯಾವ ಭಾಗದಲ್ಲಿ ಪೌರತ್ವದ ಬಗ್ಗೆ ವಿವರಿಸಲಾಗಿದೆ? |
|
| (1) | ಭಾಗ-12 |
| (2) | ಭಾಗ-2 |
| (3) | ಭಾಗ-23 |
| (4) | ಭಾಗ-20 |
CORRECT ANSWER
(2) ಭಾಗ-2
|
60. | ಸಂವಿಧಾನದ ಯಾವ ತಿದ್ದುಪಡಿಯು ರಾಜ್ಯಗಳಿಗೆ ತಮ್ಮದೇ ಆದ OBC ಪಟ್ಟಿ ಮಾಡಿಕೊಳ್ಳಲು ಅವಕಾಶ ನೀಡಿದೆ? |
|
| (1) | 127 |
| (2) | 117 |
| (3) | 107 |
| (4) | 97 |
CORRECT ANSWER
(1) 127
|
61. | ಭಾರತದ ಸಂಯುಕ್ತ ಮಾದರಿ ಸರ್ಕಾರದ ಪ್ರಮುಖ ಲಕ್ಷಣಗಳೆಂದರೆ |
|
| (1) | ಸಂವಿಧಾನದ ಪಾರಮ್ಯತೆ |
| (2) | ನ್ಯಾಯಾಂಗದ ಉತ್ಕೃಷ್ಟತೆ |
| (3) | ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆ |
| (4) | ಮೇಲಿನ ಎಲ್ಲವು |
CORRECT ANSWER
(4) ಮೇಲಿನ ಎಲ್ಲವು
|
62. | ಲೋಕಸಭೆಯ ಅಂಗೀಕಾರಗೊಂಡ ಹಣಕಾಸು ಮಸೂದೆಯನ್ನು ರಾಜ್ಯಸಭೆ ಎಷ್ಟು ಕಾಲಗಳ ವರೆಗೆ ಅನ್ವಯವಾಗದಂತೆ ತಡೆ ಹಿಡಿಯಬಹುದು? |
|
| (1) | ಒಂದು ತಿಂಗಳು |
| (2) | ಎರಡು ತಿಂಗಳುಗಳು |
| (3) | ಹದಿನಾಲ್ಕು ದಿವಸಗಳು |
| (4) | ಇಪ್ಪತ್ತನಾಲ್ಕು ದಿವಸಗಳು |
CORRECT ANSWER
(3) ಹದಿನಾಲ್ಕು ದಿವಸಗಳು
|
63. | ಭಾರತ ಸಂವಿಧಾನದ ಯಾವ ವಿಧಿ ರಾಷ್ಟ್ರಪತಿಯವರಿಗೆ ಸಂಸತ್ತು ಅಧಿವೇಶನದಲ್ಲಿಲ್ಲದಿದ್ದಾಗ ಸುಗ್ರೀವಾಜ್ಞೆಯನ್ನು ಹೊರಡಿಸಲು ಅಧಿಕಾರ ನೀಡಿದೆ? |
|
| (1) | ವಿಧಿ 119 |
| (2) | ವಿಧಿ121 |
| (3) | ವಿಧಿ 123 |
| (4) | ವಿಧಿ 124 |
CORRECT ANSWER
(3) ವಿಧಿ 123
|
64. | ಸಾರ್ವಜನಿಕ ಲೆಕ್ಕ ಸಮಿತಿಯ ಸದಸ್ಯರುಗಳ ಸಂಖ್ಯೆ |
|
| (1) | 15 ಲೋಕಸಭಾ ಸದಸ್ಯರು ಮತ್ತು 7 ರಾಜ್ಯಸಭೆಯ ಸದಸ್ಯರು |
| (2) | 20 ಲೋಕಸಭಾ ಸದಸ್ಯರು ಮತ್ತು 2 ರಾಜ್ಯಸಭೆಯ ಸದಸ್ಯರು |
| (3) | ಲೋಕಸಭೆಯ ಎಲ್ಲಾ ಸದಸ್ಯರು |
| (4) | 20 ರಾಜ್ಯಸಭೆಯ ಸದಸ್ಯರು ಮತ್ತು 6 ಲೋಕಸಭೆಯ ಸದಸ್ಯರು |
CORRECT ANSWER
(1) 15 ಲೋಕಸಭಾ ಸದಸ್ಯರು ಮತ್ತು 7 ರಾಜ್ಯಸಭೆಯ ಸದಸ್ಯರು
| | List – I | | List – II |
| (i) | ಕೇಶವಾನಂದ ಭಾರತಿ ಪ್ರಕರಣ | (a) | 2009 |
| (ii) | 44 ನೇ ತಿದ್ದುಪಡಿಯ ಅಧಿನಿಯಮ | (b) | 1973 |
| (iii) | ಬಲವಂತರಾಯ್ ಮೆಹತಾ ಸಮಿತಿ | (c) | 1978 |
| (iv) | ಶಿಕ್ಷಣ ಹಕ್ಕಿನ ಕಾಯಿದೆ | (d) | 1957 |
| ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ : |
| |
|
| | i | ii | iii | iv |
| (1) | c | d | b | a |
| (2) | a | b | c | d |
| (3) | d | b | a | c |
| (4) | b | c | d | a |
CORRECT ANSWER
(4) b, c, d, a
|
66. | ಭಾರತದ ರಾಷ್ಟ್ರಪತಿಯ ಮಹಾಭಿಯೋಗ ಪ್ರಕ್ರಿಯವನ್ನು ಯಾವ ವಿಧಿಯಲ್ಲಿ ವಿವರಿಸಲಾಗಿದೆ? |
|
| (1) | ವಿಧಿ 56 |
| (2) | ವಿಧಿ 61 |
| (3) | ವಿಧಿ 54 |
| (4) | ವಿಧಿ 72 |
CORRECT ANSWER
(2) ವಿಧಿ 61
|
67. | ಈ ಕೆಳಗಿನ ಯಾವ ತತ್ವಗಳು ಸಂವಿಧಾನದ ನಾಲ್ಕನೇ ಭಾಗದಲ್ಲಿ ಸೇರಿಸಲ್ಪಟ್ಟಿಲ್ಲ? |
| (a) | ಸಮಾನ ಕೆಲಸಕ್ಕೆ ಸಮಾನ ವೇತನ |
| (b) | ಸಮಾನ ನಾಗರಿಕ ಸಂಹಿತೆ |
| (c) | ಚಿಕ್ಕ ಕುಟುಂಬದ ನಿಯಮ |
| (d) | ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ |
|
| (1) | a, b ಮತ್ತು c |
| (2) | a ಮತ್ತು b |
| (3) | b ಮತ್ತು C |
| (4) | a, b, c, ಮತ್ತು d |
CORRECT ANSWER
ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.
|
68. | ಈ ಕೆಳಗಿನವರಲ್ಲಿ ಯಾರು 1857 ರ ದಂಗೆಯ ನಾಯಕರಾಗಿರಲಿಲ್ಲ? |
|
| (1) | ರಾಣಿ ಲಕ್ಷ್ಮೀ ಬಾಯಿ |
| (2) | ತಾಂತ್ಯಾ ಟೋಪೆ |
| (3) | ಖಾನ್ ಬಹದ್ದೂರ್ ಖಾನ್ |
| (4) | ಮಾನ್ ಸಿಂಗ್ |
CORRECT ANSWER
(4) ಮಾನ್ ಸಿಂಗ್
|
69. | ಸ್ವದೇಶಿ ಚಳುವಳಿ ಎಂದರೆ |
|
| (1) | ಬ್ರಿಟಿಷರ ವಿರುದ್ಧ ಘೋಷಣೆ ಕೂಗುವುದು. |
| (2) | ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ದೇಶಿವಸ್ತುಗಳನ್ನು ಬಳಸುವುದು. |
| (3) | ಖಾದಿಯನ್ನು ತೊಡುವುದು. |
| (4) | ತೆರಿಗೆಯನ್ನು ಕೊಡದಿರುವುದು. |
CORRECT ANSWER
(2) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ದೇಶಿವಸ್ತುಗಳನ್ನು ಬಳಸುವುದು.
|
70. | ಬಂಗಾಳ ವಿಭಜನೆಯನ್ನು ರದ್ದು ಪಡಿಸಿದ್ದು |
|
| (1) | 1909 |
| (2) | 1911 |
| (3) | 1915 |
| (4) | 1925 |
CORRECT ANSWER
(2) 1911
|
71. | ಒಬ್ಬಪ್ರಾಮಾಣಿಕ ಅಂಗಡಿ ಮಾಲೀಕ ತನ್ನ ಸರಕಿನ ಮೇಲೆ ಶೇ. 10 ಲಾಭ ತೆಗೆದುಕೊಳ್ಳುತ್ತಾನೆ. ಆಕಸ್ಮಿಕವಾಗಿ ಮಳೆಯ ಕಾರಣದಿಂದ ಶೇ. 20 ರಷ್ಟು ಸರಕುಗಳನ್ನು ಕಳೆದುಕೊಂಡರೆ ಅವನಿಗಾದ ಶೇಕಡ ನಷ್ಟ ಎಷ್ಟು? |
|
| (1) | 9% |
| (2) | 10% |
| (3) | 11% |
| (4) | 12% |
CORRECT ANSWER
(4) 12%
|
72. | ಕರ್ನಾಟಕದ ಜಲಿಯನವಾಲಾ ಬಾಗ್ |
|
| (1) | ವಿದುರಾಶ್ವತ್ಥ |
| (2) | ಅಂಕೋಲ |
| (3) | ನರಗುಂದ |
| (4) | ಶಿವಪುರ |
CORRECT ANSWER
(1) ವಿದುರಾಶ್ವತ್ಥ
|
73. | ಹಿಂದುಸ್ಥಾನಿ ಸೇವಾದಳದ ಸ್ಥಾಪಕರು |
|
| (1) | ನಾರಾಯಣ ಸುಬ್ಬರಾವ್ ಹರ್ಡೇಕರ್ |
| (2) | K. B. ಹೆಡ್ಗೆವಾರ್ |
| (3) | R. R. ದಿವಾಕಾರ್ |
| (4) | ಮೇಲಿನ ಯಾವುದು ಅಲ್ಲ |
CORRECT ANSWER
(1) ನಾರಾಯಣ ಸುಬ್ಬರಾವ್ ಹರ್ಡೇಕರ್
| (A) | ದೊಂಡಿವಾಘ | (1) | ಕಿತ್ತೂರು |
| (B) | ಭೀಮ್ ರಾವ್ | (2) | ನರಗುಂದ |
| (C) | ಚನ್ನಮ್ಮ | (3) | ಬಿದನೂರು |
| (D) | ಬಾಬಾ ಸಾಹೇಬ | (4) | ಮುಂಡರಗಿ |
| |
|
| (1) | A – 4, B – 3, C – 1, D – 2 |
| (2) | A – 3, B – 1, C – 4, D – 2 |
| (3) | A – 3, B – 4, C – 1, D – 2 |
| (4) | A – 3, B – 4, C – 2, D – 1 |
CORRECT ANSWER
(3) A – 3, B – 4, C – 1, D – 2
|
75. | ಭಾರತದ ‘‘ಗ್ರ್ಯಾಂಡ್ ಓಲ್ಡ್ ಮ್ಯಾನ್’’ ಎಂದು ಪರಿಚಿತರಾಗಿದ್ದವರು |
|
| (1) | ಜಸ್ಟಿಸ್ ರಾನಡೆ |
| (2) | ಮಹಾತ್ಮ ಗಾಂಧಿ |
| (3) | ರವೀಂದ್ರನಾಥ ಟಾಗೋರ್ |
| (4) | ದಾದಾಬಾಯಿ ನವರೋಜಿ |
CORRECT ANSWER
(4) ದಾದಾಬಾಯಿ ನವರೋಜಿ
|
76. | ಗಾಂಧೀಜಿ ಚಂಪಾರಣ್ ಚಳುವಳಿಯನ್ನು ಆರಂಭಿಸಿದ್ದು |
|
| (1) | ಹರಿಜನರ ಹಕ್ಕುಗಳಿಗಾಗಿ |
| (2) | ನಾಗರಿಕ ಕಾನೂನು ಭಂಗ ಚಳುವಳಿಗಾಗಿ |
| (3) | ಹಿಂದೂ ಸಮಾಜದಲ್ಲಿ ಏಕತೆಯನ್ನು ಮೂಡಿಸಲು |
| (4) | ಇಂಡಿಗೋ ಬೆಳೆಗಾರರ ಸಮಸ್ಯೆ ಬಗೆಹರಿಸಲು |
CORRECT ANSWER
(4) ಇಂಡಿಗೋ ಬೆಳೆಗಾರರ ಸಮಸ್ಯೆ ಬಗೆಹರಿಸಲು
|
77. | 1929 ರ ಲಾಹೋರ್ ಕಾಂಗ್ರೇಸ್ ಅಧಿವೇಶನದ ಪ್ರಮುಖ ಧೈಯ |
|
| (1) | ಸ್ವರಾಜ್ಯ ಪಡೆಯುವುದು |
| (2) | ಸಂಪೂರ್ಣ ಸ್ವಾತಂತ್ರ್ಯ ಪಡೆಯುವುದು |
| (3) | ಆಡಳಿತಾತ್ಮಕ ಸುಧಾರಣೆಗಳಿಗಾಗಿ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(2) ಸಂಪೂರ್ಣ ಸ್ವಾತಂತ್ರ್ಯ ಪಡೆಯುವುದು
|
78. | ಕರ್ನಾಟಕ ಹವಾಮಾನದ ಬಗ್ಗೆ ತಪ್ಪಾದ ಹೇಳಿಕೆಯನ್ನು ಗುರುತಿಸಿ |
| (A) | ಕರ್ನಾಟಕ ರಾಜ್ಯವು ವಿಶಿಷ್ಟವಾದ ಉಷ್ಣವಲಯದ ಮಾನ್ಸೂನ್ ಹವಾಮಾನದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ |
| (B) | ಬೇಸಿಗೆಯ ಸಮಯದಲ್ಲಿ ಪ್ರಚಲನ ಪ್ರವಾಹಗಳು ಗುಡುಗು ಬಿರುಗಾಳಿ, ಮಿಂಚು ಮತ್ತು ಆಲಿಕಲ್ಲುಗಳೊಂದಿಗೆ ಅತಿ ಹೆಚ್ಚು ಮಳೆಯನ್ನು ಉಂಟುಮಾಡುತ್ತದೆ |
| (C) | ಬೇಸಿಗೆಯಲ್ಲಿ ರಾಜ್ಯವು ವಾರ್ಷಿಕ ಮಳೆಯ ಶೇ. 20 ರಷ್ಟನ್ನು ಪಡೆಯುತ್ತದೆ. |
| (D) | ರಾಜ್ಯದಲ್ಲಿ ಕಾಫಿ ಹೂವುಗಳು ಮತ್ತು ಮಾವಿಗೆ, ತುಂತುರು ಮಳೆಗೆ ಪೂರ್ವ ಮಾನ್ಸೂನ್ ಕಾರಣವಾಗಿದೆ.
(E) ಚಂಡಮಾರುತ ಮತ್ತು ವಾಯುಭಾರ ಕುಸಿತಗಳು ಬೇಸಿಗೆಯಲ್ಲಿ ಮತ್ತು ಮಾನ್ಸೂನ್ ಮಾರುತಗಳು ಹಿಂದಿರುಗುವ ಕಾಲದಲ್ಲಿ ನಿರಂತರವಾಗಿ ಉಂಟಾಗುತ್ತವೆ. |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಉತ್ತರವನ್ನು ಆರಿಸಿರಿ |
|
| (1) | A ಮತ್ತು E ಸರಿಯಿಲ್ಲ |
| (2) | A, B ಮತ್ತು C ಸರಿಯಿಲ್ಲ |
| (3) | C ಮತ್ತು E ಸರಿಯಿಲ್ಲ |
| (4) | C ಮಾತ್ರ ಸರಿಯಿಲ್ಲ |
CORRECT ANSWER
(4) C ಮಾತ್ರ ಸರಿಯಿಲ್ಲ
|
79. | ಭಾರತದ ಪರ್ಯಾಯ ಪ್ರಸ್ಥಭೂಮಿಯ ಬಗ್ಗೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ? |
| (1) | ಇದು ಅತ್ಯಂತ ಇತ್ತೀಚಿನ ಭೂ ಸ್ವರೂಪ ವಿಭಾಗ |
| (2) | ಇದು ಸಂಪೂರ್ಣವಾಗಿ ಕಣಶಿಲೆಗಳಿಂದ ನಿರ್ಮಿತವಾಗಿದೆ. |
| (3) | ಇದು ಅವಶೇಷ ಬೆಟ್ಟಗಳಿಗೆ ಹೆಸರಾಗಿದೆ. |
| (4) | ಇದು ಭಾರತದ ಅತಿ ವಿಸ್ತಾರವಾದ ಭೂ ಸ್ವರೂಪ ವಿಭಾಗ |
|
| (1) | 1 ಮತ್ತು 2 |
| (2) | 2 ಮತ್ತು 3 |
| (3) | 3 ಮತ್ತು 4 |
| (4) | 1 ಮತ್ತು 4 |
CORRECT ANSWER
(3) 3 ಮತ್ತು 4
|
80. | ಈ ಕೆಳಗಿನವುಗಳಲ್ಲಿ ಸರಿಯಾದ ಶಿಲೆಗಳು ಮತ್ತು ಅವುಗಳು ಕಂಡು ಬರುವ ರಾಜ್ಯಗಳನ್ನು ಕೆಳಗಿನ ಸಂಕೇತಾಕ್ಷರಗಳಿಂದ ಆಯ್ಕೆ ಮಾಡಿ. |
| (A) | ಕಡಪ್ಪಾ ಶಿಲೆಗಳು – ಆಂಧ್ರ ಪ್ರದೇಶ ಮತ್ತು ಛತ್ತೀಸ್ಗಡ್ದಲ್ಲಿ |
| (B) | ವಿಂಧ್ಯಾ ಶಿಲೆಗಳು – ಮಧ್ಯ ಪ್ರದೇಶ ಮತ್ತು ಛತ್ತೀಸ್ಗಡ್ |
| (C) | ಗೊಂಡವಾನಾ ಶಿಲೆಗಳು – ಕೇರಳ ಮತ್ತು ತಮಿಳುನಾಡು |
| (D) | ಧಾರವಾಡ ಶಿಲೆಗಳು -ಕರ್ನಾಟಕ ಮತ್ತು ರಾಜಸ್ಥಾನ |
| ಸಂಕೇತಗಳು |
|
| (1) | A, B ಮತ್ತು C ಸರಿಯಾಗಿದೆ |
| (2) | A, C ಮತ್ತು D ಸರಿಯಾಗಿದೆ |
| (3) | A, B ಮತ್ತು D ಸರಿಯಾಗಿದೆ |
| (4) | ಮೇಲಿನ ಎಲ್ಲವೂ ಸರಿಯಾಗಿದೆ |
CORRECT ANSWER
(3) A, B ಮತ್ತು D ಸರಿಯಾಗಿದೆ
|
81. | 2011 ರ ಜನಗಣತಿಯಂತೆ ಮಹಿಳೆಯರ ಸಾಕ್ಷರತೆಯ ಆಧಾರದ ಮೇಲೆ ಈ ಕೆಳಗಿನ ರಾಜ್ಯಗಳನ್ನು ಇಳಿಕೆ ಕ್ರಮದಲ್ಲಿ ಜೋಡಿಸಿ |
|
| (1) | ಕೇರಳ, ಮಿಜೋರಾಂ, ಗೋವಾ, ತ್ರಿಪುರಾ |
| (2) | ಕೇರಳ, ತ್ರಿಪುರಾ, ಗೋವಾ, ಮಿಜೋರಾಂ |
| (3) | ಕೇರಳ, ಮಿಜೋರಾಂ, ತ್ರಿಪುರಾ, ಗೋವಾ |
| (4) | ಕೇರಳ, ಗೋವಾ, ತ್ರಿಪುರಾ, ಮಿಜೋರಾಂ |
CORRECT ANSWER
(3) ಕೇರಳ, ಮಿಜೋರಾಂ, ತ್ರಿಪುರಾ, ಗೋವಾ
|
82. | ಪಟ್ಟಿ I ಅನ್ನು ಪಟ್ಟಿ II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾದ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. |
| | ಪಟ್ಟಿ- I | | ಪಟ್ಟಿ -II |
| | ಸಿದ್ಧಾಂತಗಳು | | ಪ್ರತಿಪಾದಕರು |
| (a) | ಭೂ ಸ್ವರೂಪ ಚಕ್ರ | (A) | ವಾಲ್ಟರ್ ಪೆಂಕ್ |
| (b) | ಭೂ ಸ್ವರೂಪ ವ್ಯವಸ್ಥೆ | (B) | W. M. ಡೇವಿಸ್ |
| (c) | ಡೈನಮಿಕ್ ಇಕ್ವಿಲಿಬ್ರಿಯಂ | (C) | ಕಾರ್ಲ್ ಗಿಲ್ಬರ್ಟ್ |
| (d) | ಪೆಡಿಪ್ಲೇನೆಷನ್ ಸೈಕಲ್ | (D) | L. C. ಕಿಂಗ್ |
| |
|
| | a | b | c | d |
|
| (1) | B | A | C | D |
| (2) | A | B | C | D |
| (3) | D | A | B | C |
| (4) | C | A | D | B |
CORRECT ANSWER
(1) B, A, C, D
|
83. | ಕರ್ನಾಟಕ ಆರ್ಥಿಕ ಸಮೀಕ್ಷೆ (Economic Survey) 2021-22 ರ ಪ್ರಕಾರ, ಯಾವ ಜಿಲ್ಲೆಯು, ಜಿಲ್ಲಾವಾರು ತಲಾ ಆದಾಯದಲ್ಲಿ ಬೆಂಗಳೂರು ನಗರ ಜಿಲ್ಲೆಯ ನಂತರದ ಸ್ಥಾನದಲ್ಲಿದೆ? |
|
| (1) | ಬೆಂಗಳೂರು ಗ್ರಾಮೀಣ |
| (2) | ಶಿವಮೊಗ್ಗ |
| (3) | ಬೆಳಗಾವಿ |
| (4) | ದಕ್ಷಿಣ ಕನ್ನಡ |
CORRECT ANSWER
(4) ದಕ್ಷಿಣ ಕನ್ನಡ
|
84. | 2019-20 ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಮೊದಲ ಬಾರಿ ಅಳವಡಿಸಿಕೊಂಡು 2020 -21 ನೇ ಮುಂದುವರಿಸಿರುವ ಹೊಸ ಅಧ್ಯಾಯದ ಹೆಸರೇನು? |
|
| (1) | ಸುಸ್ಥಿರ ಅಭಿವೃದ್ಧಿ ಗುರಿಗಳು |
| (2) | ಮಾನವ ಅಭಿವೃದ್ಧಿ |
| (3) | ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ |
| (4) | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
CORRECT ANSWER
(1) ಸುಸ್ಥಿರ ಅಭಿವೃದ್ಧಿ ಗುರಿಗಳು
|
85. | ಪ್ರೇಮಾಳ ಮಗ ಆನಂದ್ . ರಾಜೀವ್ ಪ್ರೇಮಾಳ ತಮ್ಮ, ರಶ್ಮಿನೇಹಾಳ ಮಗಳು, ನೇಹಾ ರಾಜೀವನ ತಂಗಿ. ಹಾಗಾದರೆ ಆನಂದ್ ರಶ್ಮಿಗೆ ಏನಾಗುತ್ತಾನೆ? |
|
| (1) | ಚಿಕ್ಕಪ್ಪ |
| (2) | ಸೋದರ ಮಾವ |
| (3) | ಸೋದರ ಸಂಬಂಧಿ |
| (4) | ಯಾವುದೂ ಅಲ್ಲ |
CORRECT ANSWER
(3) ಸೋದರ ಸಂಬಂಧಿ
|
86. | ತಂದೆಯ ವಯಸ್ಸು ಪ್ರಸ್ತುತ ಮಗನ ವಯಸ್ಸಿನ 4 ರಷ್ಟಿದೆ. 5 ವರ್ಷಗಳ ಹಿಂದೆ ತಂದೆಯ ವಯಸ್ಸು ತನ್ನ ಮಗನ ವಯಸ್ಸಿನ 7 ರಷ್ಟಿತ್ತು. ಹಾಗಾದರೆ ತಂದೆ ಮತ್ತು ಮಗನ ಪ್ರಸ್ತುತ ವಯಸ್ಸುಗಳನ್ನು ಕಂಡುಹಿಡಿಯಿರಿ. |
|
| (1) | 7 ಮತ್ತು 28 |
| (2) | 12 ಮತ್ತು 42 |
| (3) | 10 ಮತ್ತು 40 |
| (4) | 15 ಮತ್ತು 60 |
CORRECT ANSWER
(3) 10 ಮತ್ತು 40
|
87. | ರೂ.7500 ಗಳಿಗೆ 4 % ರಂತೆ ವಾರ್ಷಿಕವಾಗಿ 2 ವರ್ಷಗಳಿಗೆ ಚಕ್ರಬಡ್ಡಿಯನ್ನು ಲೆಕ್ಕಾಚಾರ ಮಾಡಿ. |
|
| (1) | ರೂ. 615 |
| (2) | ರೂ. 612 |
| (3) | ರೂ. 621 |
| (4) | ರೂ. 600 |
CORRECT ANSWER
(2) ರೂ. 612
|
88. | ಕ್ರಿಕೆಟ್ ಮ್ಯಾಚಿನ ಮೊದಲ 15 ಓವರುಗಳಲ್ಲಿ ಪ್ರತಿ ಓವರಿಗೆ 4.6 ರನ್ನುಗಳನ್ನು ಗಳಿಸಿದ್ದರೆ, ಉಳಿದ 25 ಓವರುಗಳಲ್ಲಿ 259 ರನ್ನುಗಳ ಗುರಿ ತಲುಪಲು ಗಳಿಸಬೇಕಾದ ರನ್ನುಗಳ ದರ ಎಷ್ಟು? |
|
| (1) | 5.6 |
| (2) | 6.7 |
| (3) | 7.6 |
| (4) | 8.7 |
CORRECT ANSWER
(3) 7.6
|
89. | ಎರಡು ಸಂಖ್ಯೆಗಳ ನಡುವಿನ ವ್ಯತ್ಯಾಸ 48 ಆಗಿರುತ್ತದೆ. ಆ ಎರಡು ಸಂಖ್ಯೆಗಳು 7:3ರ ಅನುಪಾತದಲ್ಲಿದ್ದರೆ, ಆ ಸಂಖ್ಯೆಗಳನ್ನು ಕಂಡುಹಿಡಿಯಿರಿ. |
|
| (1) | 32 ಮತ್ತು 80 |
| (2) | 40 ಮತ್ತು 88 |
| (3) | 20 ಮತ್ತು 68 |
| (4) | 84 ಮತ್ತು 36 |
CORRECT ANSWER
(4) 84 ಮತ್ತು 36
|
90. | ಸಂಜಯನು ‘X’ ಜಾಗದಿಂದ ದಕ್ಷಿಣಾಭಿಮುಖವಾಗಿ ಒಂದು ಕಿಲೋಮೀಟರ್ ನಡೆದು ನಂತರ ಎಡಕ್ಕೆ ತಿರುಗಿ ಮತ್ತೆ ಒಂದು ಕಿಲೋಮೀಟರ್ ನಡೆಯುತ್ತಾನೆ. ಮತ್ತೆ ಎಡಕ್ಕೆ ತಿರುಗಿ ಒಂದು ಕಿಲೋಮೀಟರ್ ನಡೆಯುತ್ತಾನೆ. ಹಾಗಾದರೆ ಅವನು ಈಗ ಯಾವ ದಿಕ್ಕಿನ ಕಡೆಗೆ ನಡೆಯುತ್ತಿದ್ದಾನೆ ಎಂದು ಕಂಡುಹಿಡಿಯಿರಿ. |
|
| (1) | ಪೂರ್ವ |
| (2) | ಉತ್ತರ |
| (3) | ಪಶ್ಚಿಮ |
| (4) | ಈಶಾನ್ಯ |
CORRECT ANSWER
(2) ಉತ್ತರ
|
91. | ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಕರಡು ಮಸೂದೆ 2020 ಯು ಕರ್ನಾಟಕ ಭೂ ಸುಧಾರಣೆ ಕಾಯಿದೆ 1961 ರ, ಈ ಕೆಳಗಿನ ಯಾವ ಪರಿಚ್ಛೇದಗಳನ್ನು ಕೈ ಬಿಟ್ಟಿದೆ? |
|
| (1) | ಪರಿಚ್ಛೇದ 75A ಮತ್ತು 76B |
| (2) | ಪರಿಚ್ಛೇದ 79A ಮತ್ತು 79B |
| (3) | ಪರಿಚ್ಛೇದ 78A ಮತ್ತು 78C |
| (4) | ಮೇಲಿನ ಎಲ್ಲವೂ |
CORRECT ANSWER
(2) ಪರಿಚ್ಛೇದ 79A ಮತ್ತು 79B
|
92. | 1831 ರಲ್ಲಿ ಆಗಿನ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷರು ವಹಿಸಿಕೊಳ್ಳುವ ಮುನ್ನಾ ದಿನದಂದು, ಚಾಲ್ತಿಯಲ್ಲಿದ್ದ ಭೂ ವ್ಯವಸ್ಥೆಯು ಈ ಕೆಳಗಿನ ರೀತಿಯ ಹಿಡುವಳಿದಾರರನ್ನು ಒಳಗೊಂಡಿತ್ತು: |
| (A) | ಪರ್ಡೆಯು ಸ್ಥಿರವಾದ ಹಣದ ಬಾಡಿಗೆಯನ್ನು ಪಾವತಿಸಲು ರೈತರು ನೇರವಾಗಿ ಹೊಂದಿರುವ ಭೂಮಿಯಾಗಿದೆ. |
| (B) | ಬಂಜಾರ ಜಮೀನುಗಳು ಅಂದರೆ, ಸರಕಾರಕ್ಕೆ ಉತ್ಪನ್ನದ ಪಾಲು ಪಾವತಿಗಾಗಿ ಹೊಂದಿರುವ ಜಮೀನುಗಳು |
| (C) | ಶ್ರಯಾ ಬಾಡಿಗೆದಾರರ ವ್ಯವಸ್ಥೆಯನ್ನು ಮೂರರಿಂದ ನಾಲ್ಕು ವರ್ಷಗಳ ವರೆಗೆ ಕಂದಾಯ ಪಾವತಿಗಾಗಿ ರೈಟ್ಸನಿಂದ ನಡೆಸಲಾಯಿತು, ನಂತರ ಮೌಲ್ಯ ಮಾಪನವನ್ನು ವಿಧಿಸಲಾಯಿತು. |
| (D) | ಜೋಡಿ ಜಮೀನುಗಳು ಟಿಪ್ಪು ಸುಲ್ತಾನ್ ನಿಂದ ವಶಪಡಿಸಿಕೊಂಡ ಇನಾಮ್ಗಳು ಆದರೆ ಈಗ ಇನಾಮ್ ದಾರನಿಗೆ ಅನುಕೂಲಕರವಾದ ಬಾಡಿಗೆಯನ್ನು ಪಾವತಿಸಿದ ನಂತರ. |
| ಸರಿಯಾದ ಉತ್ತರವನ್ನು ಆರಿಸಿ: |
|
| (1) | A, B, C, D |
| (2) | A, B ಮತು D |
| (3) | C ಮತ್ತು D |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(1) A, B, C, D
|
93. | ಭಾರತದಲ್ಲಿ ಸಾಧಿಸಲಾದ ಹಸಿರು ಕ್ರಾಂತಿಯು ಯಾವ ದೇಶಗಳ ಯಶಸ್ಸಿನ ಮಾದರಿಯಾಗಿದೆ |
|
| (1) | ಚೈನಾ, ಕ್ಯೂಬಾ |
| (2) | ಕ್ಯೂಬಾ, ತೈವಾನ್ |
| (3) | ಮೆಕ್ಸಿಕೋ, ಅಮೇರಿಕ |
| (4) | ಮೆಕ್ಸಿಕೋ, ತೈವಾನ್ |
CORRECT ANSWER
(3) ಮೆಕ್ಸಿಕೋ, ಅಮೇರಿಕ
|
94. | ಎ, ಬಿ, ಸಿ, ಡಿ, ಇ, ಎಫ್ ಮತ್ತು ಜಿ ಕುಟುಂಬದ ಏಳು ಸದಸ್ಯರು ಎ ಯು ಬಿ ನ ತಾಯಿ, ಅವರು ಡಿ ಅವರ ಪತಿ. ಎಫ್ ರವರು ಸಿ ಅವರ ಪೋಷಕರಲ್ಲಿ ಒಬ್ಬರ ಸಹೋದರ . ಡಿ ಯು ಇ ನ ಸೊಸೆಯಾಗಿದ್ದಾರೆ ಮತ್ತು ಅವರಿಗೆ ಒಡಹುಟ್ಟಿದವರಲ್ಲ, ಎಫ್ ಮತ್ತು ಜಿ ವಿವಾಹಿತ ದಂಪತಿಗಳಾಗಿದ್ದಾರೆ, ಎ ಗೆ ಜಿ ಯು ಹೇಗೆ ಸಂಬಂಧಿಸಿದ್ದಾರೆ?, |
|
| (1) | ಸೋದರ ಸಂಬಂಧಿ |
| (2) | ನಾದಿನಿ |
| (3) | ಸಹೋದರಿ |
| (4) | ಸೊಸೆ |
CORRECT ANSWER
(4) ಸೊಸೆ
|
95. | ಕರ್ನಾಟಕ ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಎಲ್ಲಾ ಆರೋಗ್ಯ ವೃತ್ತಿ ಪರರ ಡೇಟಾ ಬೇಸ್ನ್ನು ಕಂಪೈಲ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಆನ್ಲೈನ್ ಡೇಟಾ ಬೇಸ್ ಫೋರ್ಟಲ್ನ್ನು ಅಭಿವೃದ್ಧಿ ಪಡಿಸಿದವರು |
|
| (1) | ಬೆಂಗಳೂರು ವೈದ್ಯಕೀಯ ಕಾಲೇಜು |
| (2) | ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ |
| (3) | ಆಯುಷ್ ಸಚಿವಾಲಯ |
| (4) | ಭಾರತೀಯ ವಿಜ್ಞಾನ ಸಂಸ್ಥೆ |
CORRECT ANSWER
(2) ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ
|
96. | ಕೆಳಗೆ ಕೊಟ್ಟಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿದೆ? |
| (A) | ಜಿ. ಕೆ. ವೀರೇಶ್ ಸಮಿತಿ – ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಕಾರಣವನ್ನು ತಿಳಿಯಲು ತನಿಖೆ ನಡೆಸಿದೆ. |
| (B) | ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ – ಕರ್ನಾಟಕ ಕೃಷಿ ಬೆಲೆ ಆಯೋಗ, |
| (C) | ಎಸ್. ವಿ. ರಂಗನಾಥ್, I.A.S., – ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನುಷ್ಟಾನದ ಕಾರ್ಯಪಡೆ. |
| (D) | ಶ್ರೀ . ಪ್ರಮೋದ ಹೆಗ್ಡೆ – ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ |
| ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. |
|
| (1) | A ಮತ್ತು C ಮಾತ್ರ |
| (2) | A ಮತ್ತು D ಮಾತ್ರ |
| (3) | B, C ಮತ್ತು D ಮಾತ್ರ |
| (4) | ಮೇಲಿನ ಎಲ್ಲವೂ |
CORRECT ANSWER
(4) ಮೇಲಿನ ಎಲ್ಲವೂ
|
97. | ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆಯು ಈ ಸಮಸ್ಯೆಯನ್ನು ಉದ್ದೇಶಿಸಿದೆ: |
|
| (1) | ಮಹಿಳೆಯರ ಕೌಟುಂಬಿಕ ದೌರ್ಜನ್ಯ ಮತ್ತು ಅವರ ಶಿಕ್ಷಣ |
| (2) | ಮಕ್ಕಳ ಲಿಂಗಾನುಪಾತದಲ್ಲಿ ಕುಸಿತ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಶಕ್ತಗೊಳಿಸುವುದು. |
| (3) | ಶಾಲೆ ಮತ್ತು ಕ್ಯಾಂಪಸ್ಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ. |
| (4) | ಮೇಲಿನವು ಯಾವುದೂ ಅಲ್ಲ |
CORRECT ANSWER
(2) ಮಕ್ಕಳ ಲಿಂಗಾನುಪಾತದಲ್ಲಿ ಕುಸಿತ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಶಕ್ತಗೊಳಿಸುವುದು.
|
98. | ಹಣದುಬ್ಬರಕ್ಕೆ ಸಂಬಂಧಿಸಿದ ಈ ಕೆಳಕಂಡ ಹೇಳಿಕೆ ಯಾವುದು ಸರಿ ಎಂಬುದನ್ನು ಸೂಕ್ತವಾದ ಸಂಕೇತ ಬಳಸಿ ಉತ್ತರಿಸಿ. |
| (i) | ಸಾಮಾನ್ಯ ಬೆಲೆಗಳ ಮಟ್ಟದಲ್ಲಿ ನಿರಂತರ ಏರಿಕೆ |
| (ii) | ಬೆಲೆ ಮಟ್ಟದಲ್ಲಿನ ಏರಿಕೆಯ ಜೊತೆಗೆ ಹಣದ ಮೌಲ್ಯವೂ ಏರುತ್ತದೆ. |
| (iii) | ಬೆಲೆ ಮಟ್ಟದಲ್ಲಿನ ಏರಿಕೆಯ ಜೊತೆಗೆ ಹಣದ ಮೌಲ್ಯ ಕುಸಿಯುತ್ತದೆ |
| ಸಂಕೇತಗಳು |
|
| (1) | i ಮಾತ್ರ ಸರಿ |
| (2) | i, ii ಮತ್ತು iii ಸರಿ |
| (3) | i, iii ಮಾತ್ರ ಸರಿ |
| (4) | ii ಮಾತ್ರ ಸರಿ |
CORRECT ANSWER
(3) i, iii ಮಾತ್ರ ಸರಿ
|
99. | ಸತ್ಯ ಶೋಧಕ ಸಮಾಜ ಚಳುವಳಿಯನ್ನು ಆರಂಭಿಸಿದವರು ಯಾರು? |
|
| (1) | ಸ್ವಾಮಿ ದಯಾನಂದ ಸರಸ್ವತಿ |
| (2) | ರಾಜಾರಾಮ್ ಮೋಹನ್ ರಾಯ್ |
| (3) | ಈಶ್ವರ ಚಂದ್ರ ವಿದ್ಯಾಸಾಗರ |
| (4) | ಜ್ಯೋತಿಬಾ ಫುಲೆ |
CORRECT ANSWER
(4) ಜ್ಯೋತಿಬಾ ಫುಲೆ
|
100. | ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ 2022 ರಲ್ಲಿ ಅಮೃತ ನಗರೋತ್ಥಾನ ಯೋಜನೆಯನ್ನು ಯಾವ ಸರಕಾರ ಪೂರ್ಣ ಜವಾಬ್ದಾರಿಯೊಂದಿಗೆ ಜಾರಿಗೊಳಿಸಿದೆ? |
|
| (1) | ರಾಜ್ಯ ಮತ್ತು ಕೇಂದ್ರ ಸರಕಾರ |
| (2) | ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು |
| (3) | ರಾಜ್ಯ ಸರಕಾರ |
| (4) | ಕೇಂದ್ರ ಸರಕಾರ |
CORRECT ANSWER
(2) ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು