10ನೇ ತರಗತಿ ಸಾಮಾಜಿಕ ಸ್ತರ ವಿನ್ಯಾಸ ಸಮಾಜ ವಿಜ್ಞಾನ ನೋಟ್ಸ್, 10th Standard Samajika Stara Vinyasa Social Notes Question Answer Pdf in Kannada Medium Kseeb Solution For Class 10 Chapter 8 Notes in Kannada Sslc social Science Sociology Samajika Stara Vinyasa Notes
Samajika Stara Vinyasa Question Answer in Kannada
I. ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
1. ಸಂವಿಧಾನದ 30ನೇ ವಿಧಿಯು ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.
2. ಅಸ್ಪಶ್ಯತೆಯ ಆಚರಣೆಯನ್ನು ಸಂವಿಧಾನದ 17ನೇ ವಿಧಿಯು ನಿಷೇಧಿಸಿದೆ.
3, ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯು 1995 ರಲ್ಲಿ ಜಾರಿಗೆ ಬಂದಿತು.
10th Sociology Notes in Kannada
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಭಾರತದ ಸಂವಿಧಾನದ ವಿಧಿ 39ನೇ ವಿಧಿಯ ಮಹತ್ವವೇನು?
ಭಾರತದ ಸಂವಿಧಾನದ ವಿಧಿ 39ರಲ್ಲಿ ಸರ್ಕಾರಗಳು ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಕುರಿತು ತಿಳಿಸುತ್ತದೆ.
2. ಭಾರತದ ಸಂವಿಧಾನದ 45ನೇ ವಿಧಿಯ ಮಹತ್ವವೇನು?
ಭಾರತದ 45ನೇ ವಿಧಿ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಹೇಳುತ್ತದೆ.
3. ಭಾರತದ ಸಂವಿಧಾನದ 86ನೇ ತಿದ್ದುಪಡಿಯ ಮಹತ್ವವೇನು?
6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಸಂವಿಧಾನದ ವಿಧಿ 21ಎ ನಲ್ಲಿ ತಿಳಿಸಲಾಗಿದೆ.
4. ಭಾರತದ ಸಂವಿಧಾನದ ಪರಿಚ್ಛೇದ 19 ಏನೆಂದು ಸಾರುತ್ತದೆ?
ಸಂವಿಧಾನದ ಪರಿಚ್ಛೇದ 19 ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ಸಾರುತ್ತದೆ.
5. ಭಾರತದ ಸಂವಿಧಾನದ 29ನೇ ವಿಧಿಯ ಮಹತ್ವವೇನು?
ಭಾರತದ ಸಂವಿಧಾನದ 29ನೇ ವಿಧಿ ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ ನೀಡುತ್ತದೆ.
6. ಭಾರತದ ಸಂವಿಧಾನದ 30ನೇ ವಿಧಿಯ ಮಹತ್ವವೇನು?
ಭಾರತದ ಸಂವಿಧಾನದ 30ನೇ ವಿಧಿ ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶಗಳನ್ನು ನೀಡಿದೆ.
7. ಭಾರತದ ಸಂವಿಧಾನದ 46ನೇ ವಿಧಿ ಏನೆಂದು ಹೇಳುತ್ತದೆ?
ಸಂವಿಧಾನದ 46ನೇ ವಿಧಿ ಸರ್ಕಾರಗಳು ಹಿಂದುಳಿದ ಜನರ ಅದರಲ್ಲಿಯೂ ಪರಿಶಿಷ್ಟ ಜಾತಿ/ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡಿ ಅಭಿವೃದ್ಧಿಪಡಿಸುವುದು ಸರ್ಕಾರಗಳ ಜವಾಬ್ದಾರಿಯೆಂದು ಹೇಳುತ್ತದೆ.
8. ಯಾವ ವಿಧಿಯು 6 ರಿಂದ 14 ವರ್ಷ ವಯೋಮಿತಿಯೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದನ್ನು ಮೂಲಭೂತ ಹಕ್ಕು ಎಂದು ತಿಳಿಸುತ್ತದೆ?
21ಎ ವಿಧಿಯಲ್ಲಿ 6 ರಿಂದ 14 ವರ್ಷ ವಯೋಮಿತಿಯೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದನ್ನು ಮೂಲಭೂತ ಹಕ್ಕು ಎಂದು ತಿಳಿಸುತ್ತದೆ.
9. “ಸಾಮಾಜಿಕ ಸ್ತರವಿನ್ಯಾಸ” ಎಂದರೇನು?
ಸಮಾಜದಲ್ಲಿ ಇರುವ “ಜನರನ್ನು ವಿಭಿನ್ನ ಸ್ತರಗಳಾಗಿ ವರ್ಗೀಕರಿಸುವ ವ್ಯವಸ್ಥೆಗೆ ಅಥವಾ ಅವರನ್ನು ಏಣಿ ಶ್ರೇಣಿಗಳಿಂದ ವಿಭಿನ್ನ ಸ್ಥಾನಗಳಲ್ಲಿ ವಿಭಾಗಿಸುವ ಕ್ರಮವೇ “ಸಾಮಾಜಿಕ ಸ್ತರವಿನ್ಯಾಸ”,
10, ಬ್ರಿಟಿಷ್ ಸರ್ಕಾರವು ಯಾವ ಮೂಲಕ ಭಾರತದ ಅಸ್ಪಶ್ಯ ವರ್ಗ ಹಾಗೂ ಗುಡ್ಡಗಾಡು ವರ್ಗದ ಜನರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಎಂಬುದಾಗಿ ಹೆಸರಿಸಿತು?
ಬ್ರಿಟಿಷ್ ಸರ್ಕಾರವು 1935ರಲ್ಲಿ ಕೇಂದ್ರ ಕಾಯಿದೆ ಮೂಲಕ ಭಾರತದ ಅಸ್ಪಶ್ಯ ವರ್ಗ ಹಾಗೂ ಗುಡ್ಡಗಾಡು ವರ್ಗದ ಜನರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಎಂಬುದಾಗಿ ಹೆಸರಿಸಿತು.
11. ‘ಹೊರಗಿನಿಂದ ಬಂದವರು, ಊರಿನಿಂದ ಹೊರಗಡೆ ನೆಲೆಸಿದರೆ ಅಥವಾ ಊರೊಳಗಡೆ ಇದ್ದವರನ್ನು ಕಾರಣಾಂತರಗಳಿಂದ ಊರ ಹೊರಕ್ಕೆ ತಳ್ಳಲಾಯಿತೊ ಎಂಬುದನ್ನು ವಿಶ್ಲೇಷಣೆ ಮಾಡಿದರೆ ಅಸ್ಪಶ್ಯತೆಯ ಉಗಮ ಮತ್ತು ಅಸ್ಪಶ್ಯರು ಯಾರೆಂಬುದು ಅರ್ಥವಾಗುತ್ತದೆ’. ಈ ಮಾತನ್ನು ಹೇಳಿದವರು ಯಾರು?
ಡಾ. ಬಿ.ಆರ್. ಅಂಬೇಡ್ಕರ್
12. ‘ಅಸ್ಪಶ್ಯತೆ, ಜಾತಿಯ ಅತ್ಯಂತ ತಿರಸ್ಕಾರಾರ್ಹವಾದ ಅಭಿವ್ಯಕ್ತಿ. ಇದು ಹಿಂದೂ ಸಮಾಜದ ಶರೀರವನ್ನು ಕುಷ್ಠ ರೋಗದ ಹುಣ್ಣಿನಂತೆ ಪೀಡಿಸುತ್ತದೆ’. ಈ ಮಾತನ್ನು ಹೇಳಿದವರು ಯಾರು?
ಮಹಾತ್ಮಾ ಗಾಂಧೀಜಿ
13, ‘ಮಲ ಹೊರುವ, ಸತ್ತ ಪ್ರಾಣಿಗಳನ್ನು ಸಾಗಿಸುವ, ಬೀದಿ-ಚರಂಡಿ ಗುಡಿಸುವ ಹೀನ ವೃತ್ತಿಗಳನ್ನು ಮಾಡಬೇಕಾಗಿತ್ತು.’ ಈ ಮಾತನ್ನು ಹೇಳಿದವರು ಯಾರು?
ಬಿ,ಕುಪ್ಪುಸ್ವಾಮಿ
14. ‘ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು’ ಎಂದು ಪ್ರತಿಪಾದಿಸಿದವರು ಯಾರು?
ಬಿ.ಆರ್. ಅಂಬೇಡ್ಕರ್
15. ಬಿ.ಆರ್. ಅಂಬೇಡ್ಕರ್ ಅವರು ‘ಸಂವಿಧಾನ ಶಿಲ್ಪಿ’ ಎಂಬ ಕೀರ್ತಿಗೆ ಏಕೆ ಭಾಜನರಾಗಿದ್ದಾರೆ?
ಕ್ರಾಂತಿಕಾರಿ ಚಿಂತನೆಗಳಿಂದಲೇ ಡಾ|| ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕವಾದ ಹಾಗೂ ಮಹತ್ವದ ಪಾತ್ರವನ್ನು ನಿರ್ವಹಿಸಿ ‘ಸಂವಿಧಾನ ಶಿಲ್ಪಿ’ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
16. ಸಂವಿಧಾನದ 17ನೆಯ ವಿಧಿಯ ಮಹತ್ವವೇನು?
ಸಂವಿಧಾನದ 17ನೆಯ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.
17. ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು ಯಾವಾಗ ಜಾರಿಗೊಳಿಸಿದೆ?
ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು 1955ರಲ್ಲಿ ಜಾರಿಗೊಳಿಸಿದೆ.
18, ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು ಏನೆಂದು ತಿದ್ದುಪಡಿ ಮಾಡಲಾಗಿದೆ?
‘ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ’
19. ಸಾಮಾಜಿಕ ಅಸಮಾನತೆ ಎಂದರೇನು?
ವ್ಯಕ್ತಿಗಳು ಸಮಾಜದಲ್ಲಿ ವಿವಿಧ ಲಕ್ಷಣಗಳ ಆಧಾರದಲ್ಲಿ ಲಿಂಗ, ಜಾತಿ, ವೃತ್ತಿ, ವರ್ಗ ಮತ್ತು ಜನಾಂಗ, ಇತ್ಯಾದಿ ಶ್ರೇಣೀಕರಣಗೊಂಡಿರುತ್ತಾರೆ ಎನ್ನುವುದನ್ನು ಸಾಮಾಜಿಕ ಅಸಮಾನತೆ ಎನ್ನುವರು.
Samajika Stara Vinyasa Social Notes
III ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಾಮಾಜಿಕ ಅಸಮಾನತೆಗೆ ಕಾರಣಗಳಾವುವು?
ವ್ಯಕ್ತಿಗಳು ಸಮಾಜದಲ್ಲಿ ವಿವಿಧ ಲಕ್ಷಣಗಳ ಆಧಾರದಲ್ಲಿ ಲಿಂಗ, ಜಾತಿ, ವೃತ್ತಿ, ವರ್ಗ ಮತ್ತು ಜನಾಂಗ, ಇತ್ಯಾದಿ ಶ್ರೇಣೀಕರಣಗೊಂಡಿರುತ್ತಾರೆ ಎನ್ನುವುದನ್ನು ಸಾಮಾಜಿಕ ಅಸಮಾನತೆ ಸೂಚಿಸುತ್ತದೆ.
ಅವೆಂದರೆ, ಆದಾಯದ ಮೂಲಗಳು, ಶಿಕ್ಷಣ ಮತ್ತು ವೃತ್ತಿ ಅವಕಾಶಗಳು, ಆರೋಗ್ಯ ಸೌಲಭ್ಯಗಳು ಮತ್ತು ರಾಜಕೀಯ ಪ್ರತಿನಿಧಿತ್ವ ಮತ್ತು ಭಾಗವಹಿಸುವಿಕೆ, ಅಂದರೆ ಸಾಮಾಜಿಕ ಅಸಮಾನತೆ ಎನ್ನುವುದು ಈಗಾಗಲೇ ಇರುವ ಅಸಮಾನ ಸಾಮಾಜಿಕ ಅವಕಾಶಗಳ ಪ್ರತಿಫಲ.
ಇದು ಸಾಮಾಜಿಕ ರಚನೆಯಲ್ಲಿನ ವಸ್ತುಗಳನ್ನು, ಆದಾಯವನ್ನು, ಅವಕಾಶಗಳನ್ನು, ಪುರಸ್ಕಾರಗಳನ್ನು, ಸ್ಥಾನಗಳನ್ನು ಅಸಮಾನವಾಗಿ ದೊರಕುವಂತೆ ಮಾಡುವ ಮೂಲಕ ಮುಂದುವರಿಯುತ್ತಿರುತ್ತದೆ
2. ಲಿಂಗತ್ವ ಅಸಮಾನತೆ ಹೇಗೆ ಉಂಟಾಗಿದೆ?
ವಾಸ್ತವದಲ್ಲಿ ನಮ್ಮ ಮನೋಭಾವನೆಗಳು ಹೆಚ್ಚಾಗಿ ಒಂದು ಮತ್ತೊಂದನ್ನು ಅವಲಂಬಿಸಿರುತ್ತವೆ.
ಉದಾಹರಣೆಗೆ ಶಿಕ್ಷಣದ ಮೌಲ್ಯ ಕುರಿತು ಒಬ್ಬ ವ್ಯಕ್ತಿಗೆ ಇರುವ ಚಿಂತನೆ ಅಥವಾ ಮನೋಭಾವನೆಯು ಮತ್ತೊಬ್ಬರಿಂದ ಪ್ರಭಾವಿತವಾದ್ದುದಾಗಿರಬಹುದು.
ಈ ರೀತಿಯ ಪ್ರಭಾವಗಳು ಒಂದೇ ಕುಟುಂಬದಲ್ಲಿ ಅವನ/ಅವಳ ಮೇಲೆ ಬೀರಬಹುದಾದ ಪ್ರಭಾವಗಳು ಸಮುದಾಯದಿಂದಲೇ ಒಳಗಾಗಿರಬಹುದು.
ಈ ದೃಷ್ಟಿಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಶಿಕ್ಷಣಕ್ಕೆ ಇರುವ ಪ್ರೇರಣಾ ಶಕ್ತಿಯು ಪ್ರಮುಖವಾಗಿ ಸಾಮಾಜಿಕ ಆಯಾಮ ಹೊಂದಿದೆ.
ಈ ಕಾರಣಗಳಿಂದ ಶಾಲಾ ಭಾಗವಹಿಸುವಿಕೆಯಲ್ಲಿ, ಆಹಾರ ಮತ್ತು ಆರೋಗ್ಯ ಸೌಲಭ್ಯಗಳನ್ನು ಪಡೆಯುವಲ್ಲಿ ಲಿಂಗ ಅಸಮಾನತೆಯನ್ನು ನಾವು ಕಾಣಬಹುದು.
3. ಸಾಮಾಜಿಕ ಸ್ತರ ವಿನ್ಯಾಸದ ಲಕ್ಷಣಗಳಾವುವು?
- ಸಾಮಾಜಿಕ ಸ್ತರವಿನ್ಯಾಸವು ಸಾಮಾಜಿಕವಾದದ್ದು
- ಸಾಮಾಜಿಕ ಸ್ತರವಿನ್ಯಾಸ ಸರ್ವ ವ್ಯಾಪಕವಾದದ್ದು
- ಸ್ತರವ್ಯವಸ್ಥೆ ಪುರಾತನವಾದದ್ದು
- ಸ್ತರವಿನ್ಯಾಸವು ವಿವಿಧ ರೂಪಗಳಲ್ಲಿದೆ
4. ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಚರ್ಚಿಸಿ?
- ಶೂದ್ರರಿಗಿಂತ ಕೆಳಗಿನವರಾದ ಐದನೆ ವರ್ಗವಾದ ಅಂತ್ಯಜರ(ಅಸ್ಪೃಶ್ಯರ) ಸ್ಥಿತಿ ಮನುಷ್ಯರೇ ಅಲ್ಲದೇನೊ ಎನಿಸುವಂತಿತ್ತು.
- ಅಸ್ಪೃಶ್ಯತೆಯ ಆಚರಣೆಯು ವರ್ಣವ್ಯವಸ್ಥೆಯ ಹುಟ್ಟಿನೊಂದಿಗೆ ಅಸ್ತಿತ್ವವನ್ನು ಪಡೆದುಕೊಂಡಿದೆ.
- ಸ್ಪೃಶ್ಯ ಮತ್ತು ಅಸ್ಪಶ್ಯ ಭಾವನೆ ಮುಖ್ಯವಾಗಿ ಸಾಮಾಜಿಕ, ಆರ್ಥಿಕ, ಅಸಮಾನತೆಯ ಮೂಲದಿಂದ ರೂಪಿತಗೊಂಡದ್ದು.
- ಅಸ್ಪೃಶ್ಯ ಎಂಬುದು ಮುಟ್ಟಬಾರದ, ಮುಟ್ಟಲಾಗದ ಎಂಬ ಅರ್ಥದಲ್ಲಿ ಬಳಕೆಯಾಗಿದೆ.
5. ಅಸ್ಪಶ್ಯತೆಯ ಸಮಸ್ಯೆಗಳು ಯಾವುವು?
- ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳಮಟ್ಟದ ಸ್ಥಾನ
- ಶೈಕ್ಷಣಿಕ ಅವಕಾಶಗಳಿಂದ ಹೊರಗಿಡಲಾಗಿತ್ತು
- ಆಸ್ತಿಯ ಒಡೆತನದ ಹಕ್ಕಿನ ನಿರಾಕರಣೆ
- ರಾಜಕೀಯ ಭಾಗವಹಿಸುವಿಕೆ ನಿರಾಕರಣೆ
6. ಅಸ್ಪಶ್ಯತೆ ನಿವಾರಣೆಗೆ ಕಾನೂನು ಕ್ರಮಗಳು ಯಾವುವು?
- ಸಂವಿಧಾನದ 17ನೆಯ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.
- ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು 1955ರಲ್ಲಿ ಜಾರಿಗೊಳಿಸಿದೆ.
- ಇದರಲ್ಲಿ ಕಂಡುಬಂದ ಕೆಲವು ಲೋಪ ದೋಷಗಳನ್ನು ತಿದ್ದುಪಡಿಮಾಡಿ ‘ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ’ ಎಂದು 1976ರಲ್ಲಿ ಮಾರ್ಪಾಡುಗೊಳಿಸಲಾಯಿತು.
- ಈ ಕಾಯ್ದೆಯ ಪ್ರಕಾರ ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
- ಅಲ್ಲದೆ ಸಂವಿಧಾನಾತ್ಮಕವಾಗಿ ಸಾರ್ವತ್ರಿಕ ಮತದಾನದ ಹಾಗೂ ಸಮಾನತೆಯ ಹಕ್ಕನ್ನು ದೇಶದ ಎಲ್ಲಾ ನಾಗರಿಕರಿಗೂ ನೀಡಲಾಗಿದೆ.
- ವಿಶೇಷವಾಗಿ ಪರಿಶಿಷ್ಟರನ್ನೊಳಗೊಂಡಂತೆ ಹಿಂದುಳಿದ ಉದ್ಯೋಗವಕಾಶಗಳಲ್ಲಿ ಮೀಸಲಾತಿಗಳನ್ನು ಕಲ್ಪಿಸಲಾಗಿದೆ. ಜಾತಿಯವರಿಗೆ ಶೈಕ್ಷಣಿಕ, ಮತ್ತು
- 1989ರ ಶಾಸನವು ಅಸ್ಪಶ್ಯತೆಯ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ.
7. ಸಾಮಾಜಿಕ ಸ್ತರವಿನ್ಯಾಸದ ಪ್ರಮುಖ ರೂಪಗಳು ಯಾವುವು?
- ಆದಿವಾಸಿ ಸಮಾಜ
- ಗುಲಾಮಗಿರಿ
- ಎಸ್ಟೇಟ್ಸ್ ಪದ್ಧತಿ
- ವರ್ಣವ್ಯವಸ್ಥೆ
- ಜಾತಿವ್ಯವಸ್ಥೆ