10ನೇ ತರಗತಿ ವಸಂತ ಮುಖ ತೋರಲಿಲ್ಲ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು Pdf, 10th Standard Vasantha Mukha Toralilla Kannada Notes Question Answer Mcq Pdf Download in Kannada Medium 2024 Karnataka State Syllabus Kseeb Solutions For Class 10 Kannada Vasantha Mukha Toralilla Puraka Patada Notes 10th Class Vasantha Mukha Toralilla Summary Pdf SSLC Vasanta Mukha Toralilla Supplementary in Kannada mcq
ಪಠ್ಯಪೂರಕ ಅಧ್ಯಯನ -4
ವಸಂತ ಮುಖ ತೋರಲಿಲ್ಲ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ ?
ಉತ್ತರ : ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ .
೨. ಅಮ್ಮ ಎಲ್ಲಿ ಮಲಗಿದ್ದಾಳೆ ?
ಉತ್ತರ : ಅಮ್ಮ ಗುಡಿಸಲಿನಲ್ಲಿ ಮಲಗಿದ್ದಾಳೆ .
Vasanta Mmukha Toralilla in Kannada Mcq
೩. ಯಾರಿಗೆ ವಸಂತಮುಖ ತೋರಲಿಲ್ಲ ?
ಉತ್ತರ : ಕಮ್ಮಾರ , ನೇಕಾರ , ಕುಂಬಾರ , ಕೇರಿಯ ಮಾರ ಮತ್ತು ಪುಟ್ಟಿಗೆ ವಸಂತ ಮುಖ ತೋರಲಿಲ್ಲ .
೪. ಪುಟ್ಟಿಯ ಪ್ರಶ್ನೆಗಳೇನು ?
ಉತ್ತರ : ಗುಡಿಸಲೊಳಗೆ ಬರಲು ವಸಂತ ಹೆದರಿದನೆ ? ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ ? ಇವು ಪುಟ್ಟಿಯ ಪ್ರಶ್ನೆಗಳಾಗಿವೆ .
೫. ಈ ಕವನದಲ್ಲಿ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿದೆ ?
ಉತ್ತರ : ಮಾವಿನ ಮರಗಳು ಮೈತುಂಬಿ ನಿಂತಿವೆ . ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಾಡುತ್ತಿವೆ . ಕೋಗಿಲೆಗಳು ಮನದುಂಬಿ ಇಂಪಾಗಿ ಹಾಡುತ್ತಿವೆ . ಕಡಲು ಉಕ್ಕಿ ಹರಿಯುತ್ತಿದೆ . ಮಲ್ಲಿಗೆ ಹೂವು ಮುಗುಳುನಗೆ ಬೀರಿದೆ . ಹೊಳೆಯುವ ರಂಗೋಲಿಯಲ್ಲಿ ಬಾಲರವಿ ಥಳಥಳಿಸುತ್ತಿದ್ದಾನೆ . ಈ ರೀತಿ ‘ ವಸಂತ ಮುಖ ತೋರಲಿಲ್ಲ ‘ ಕವನದಲ್ಲಿ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ.