Jagatika Savalugalu Hagu Bharatada Patra Notes

10ನೇ ತರಗತಿ ಅಧ್ಯಾಯ-21 ಜಾಗತಿಕ ಸವಾಲುಗಳು ಹಾಗೂ ಭಾರತದ ಪಾತ್ರ ಸಮಾಜ ನೋಟ್ಸ್, Social Science Class 10 Chapter 21 Notes Question Answer in Kannada 2024 Kseeb Solution For Class 10 Social Science Chapter 21 Notes in Kannada Jagatika Savalugalu Hagu Bharatada Patra Notes Sslc Social Science Chapter 21 Notes in Kannada‌

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ.

1. ಮಾನವ ಹಕ್ಕುಗಳ ದಿನವನ್ನು ಡಿಸೆಂಬರ್ 10 ರಂದು ಆಚರಿಸುತ್ತೇವೆ.

2. ಭಾರತವು ನಿರಂತರವಾಗಿ ಸಾರ್ವತ್ರಿಕ ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ.

3. ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು ನೆಲ್ಸನ್ ಮಂಡೇಲ

4. ಮಾನವ ಹಕ್ಕು ಎಂಬುದು ಸರ್ವರ ಸಮಾನತೆಯನ್ನು ಒಳಗೊಂಡಿದೆ.

III ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಮಾನವ ಹಕ್ಕುಗಳ ಪರಿಕಲ್ಪನೆಯನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆ ಯಾವಾಗ ಅಂಗೀಕರಿಸಿತು?

ಮಾನವ ಹಕ್ಕುಗಳ ಪರಿಕಲ್ಪನೆಯನ್ನು 1948ರ ಡಿಸೆಂಬರ್ 10ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಂಗೀಕರಿಸಿತು

2. ಭಾರತ ಸಂವಿಧಾನದಲ್ಲಿ ಯಾವ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ?

ಭಾರತ ಸಂವಿಧಾನದಲ್ಲಿ 12 ರಿಂದ 35ರ ವರೆಗಿನ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.

3. ‘ಶಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ’ ಎಂದು ಉದ್ಧರಿಸಿದವರು ಯಾರು?

ಅಮೆರಿಕಾದ ಅಧ್ಯಕ್ಷ ಐಸನ್ ಹೋವರ್

III ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ

1. ದ್ವಿತೀಯ ಮಹಾಯುದ್ಧ ಬಳಿಕ ಎದುರಾದ ಮುಖ್ಯ ಸಮಸ್ಯೆಗಳು ಯಾವುವು?

 • ಮಾನವ ಹಕ್ಕುಗಳು
 • ಶಸ್ತ್ರಾಸ್ತ್ರಗಳ ಪೈಪೋಟಿ
 • ಆರ್ಥಿಕ ಅಸಮಾನತೆ
 • ವರ್ಣಭೇದ ನೀತಿ
 • ಭಯೋತ್ಪಾದಕತೆ

2. ಮಾನವ ಹಕ್ಕುಗಳ ಪ್ರತಿಪಾದನೆಗಾಗಿ ಭಾರತವು ನಡೆಸುತ್ತಿರುವ ಹೋರಾಟವನ್ನು ವಿವರಿಸಿ

 • ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.
 • ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ವಿಶ್ವದಾದ್ಯಂತ ಸುರಕ್ಷಿತವಾಗಿರಬೇಕೆಂಬುದನ್ನು ಭಾರತ ಸಮರ್ಥಿಸುತ್ತಾ ಬಂದಿದೆ. ಮಾನವ ಹಕ್ಕುಗಳು
 • ಮಾನವ ಹಕ್ಕುಗಳ ಶೋಷಣೆಗೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಯು ಸದಸ್ಯ ರಾಷ್ಟ್ರಗಳೊಂದಿಗೆ ಸಭೆಯೊಂದನ್ನು ನಡೆಸಿ ಪ್ರತಿಯೊಂದು ರಾಷ್ಟ್ರಗಳು ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿರಬೇಕೆಂದು ಸೂಚಿಸಿತು.
 • ಇದರ ಪರಿಣಾಮವಾಗಿ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಗಿದೆ.
 • ಇದಕ್ಕೆ ಪೂರಕವಾಗಿ ಭಾರತದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಗಿದೆ.

2. ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ಪರಿಣಾಮಗಳಾವುವು?

 • ‘ಅಣ್ವಸ್ತ್ರಯುಗದಲ್ಲಿ ನಾವು ಯುದ್ಧವನ್ನು ಕೊನೆಗಾಣಿಸಬೇಕು; ಇಲ್ಲವಾದರೆ ಯುದ್ಧ ನಮ್ಮನ್ನು ಕೊನೆಗಾಣಿಸುತ್ತದೆ’
 • ನಿಶಸ್ತ್ರೀಕರಣ ಎಂದರೆ ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ಇಲ್ಲವಾಗಿಸುವ ನೇರ ಪ್ರಕ್ರಿಯೆ.
 • ಶಸ್ತ್ರಾಸ್ತ್ರಗಳ ಸ್ಪರ್ಧೆಯಿಂದ ವಿಶ್ವದಾದ್ಯಂತ ಭಯ, ಅಸ್ಥಿರತೆ, ಚಡಪಡಿಕೆ ಹಾಗೂ ಯುದ್ಧದ ಸಂಭವ ತಲೆದೋರುತ್ತದೆ.
 • ಈ ಎಲ್ಲಾ ಅನಿಷ್ಟಗಳನ್ನು ದೂರವಿರಿಸುವ ದೃಷ್ಟಿಯಿಂದ ನಿಶಸ್ತ್ರೀಕರಣ ಪ್ರಚಲಿತ ಜಗತ್ತಿನ ಅವಶ್ಯಕತೆ ಎಂಬುದಾಗಿ ಭಾವಿಸಲ್ಪಡುತ್ತದೆ.
 • ಅದೇ ರೀತಿ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳು ಆರ್ಥಿಕವಾಗಿಯೂ ಒಂದು ಅನಗತ್ಯ ನಷ್ಟದಾಯಕ ಎಂದೂ ಭಾವಿಸಲಾಗುತ್ತದೆ.

3. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳಾವುವು? ಈ ರೀತಿ ಹಿಂದುಳಿಯುವಿಕೆಯ ಕಾರಣಗಳಾವುವು?

 • ವಿಶ್ವ ಕುಟುಂಬದ ಸದಸ್ಯರಲ್ಲಿ ಪರಸ್ಪರ ಆರ್ಥಿಕ ಅಸಮಾನತೆಯ ಒಂದು ಪ್ರಮುಖ ಸಮಸ್ಯೆಯಿದೆ.
 • ಇದು ವಸಾಹತುಶಾಹಿತ್ವ ಹಾಗೂ ಸಾಮಾಜ್ಯಶಾಹಿತ್ವದ ಒಂದು ಐತಿಹಾಸಿಕ ನೆಲೆಯ ಬಳುವಳಿ ಎಂದೂ ಭಾವಿಸಬಹುದಾಗಿದೆ.
 • ಐರೋಪ್ಯ ರಾಷ್ಟ್ರಗಳು ಆಫ್ರಿಕಾ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದವು.
 • ಈ ಸಾಮ್ರಾಜ್ಯ ಶಾಹಿತ್ವದ ಕೈಕೆಳಗೆ ಇದ್ದಂತಹ ರಾಷ್ಟ್ರಗಳು ಆರ್ಥಿಕವಾಗಿ ತೀರಾ ಹಿಂದುಳಿದವು.
 • 20ನೇ ಶತಮಾನದ ಪೂರ್ವ ಭಾಗದವರೆಗೆ ಅವರ ಪ್ರಗತಿ ತೀರಾ ಕುಂಠಿತವಾಗಿತ್ತು.
 • ಸ್ವಾತಂತ್ರ್ಯಾನಂತರ ಏಷ್ಯಾ ಹಾಗೂ ಆಫ್ರಿಕಾದ ರಾಷ್ಟ್ರಗಳು ಅಭಿವೃದ್ಧಿ ಸಾಧಿಸಲು ಪ್ರಯತ್ನಿಸಿದವು.
 • ಆದರೆ ಕೃಷಿ, ಕೈಗಾರಿಕೆ, ಸಾರಿಗೆ ಮತ್ತು ಸಂಪರ್ಕ, ವಿಜ್ಞಾನ, ಶಿಕ್ಷಣ, ಆರೋಗ್ಯ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಆರ್ಥಿಕ ಅಡಚಣೆ ತಲೆದೋರಿತ್ತು.

5. ಆರ್ಥಿಕ ಅಸಮಾನತೆಯ ನಿವಾರಣೆಗಾಗಿ ಭಾರತವು ಕೈಗೊಂಡಿರುವ ಸುಧಾರಣಾ ಕ್ರಮಗಳಾವುವು?

 • ಭಾರತ ಅಲಿಪ್ತ ನೀತಿಯನ್ನು ಜಗತ್ತಿನಲ್ಲಿ ಮುಂದುವರಿಸಿತು.
 • ಯಾವುದೇ ಷರತ್ತುಗಳಿಲ್ಲದೆ ಮುಂದುವರಿದ ದೇಶಗಳು ಬಡರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಭಾರತ ಪ್ರತಿಪಾದಿಸಿತು.
 • ತನ್ಮೂಲಕ ಹಿಂದುಳಿದ ರಾಷ್ಟ್ರಗಳ ಆತ್ಮಗೌರವವನ್ನು ಭಾರತ ಎತ್ತಿ ಹಿಡಿಯಲು ಸಹಕರಿಸಿತು.
 • ಅದರೊಂದಿಗೆ ಶ್ರೀಮಂತ ರಾಷ್ಟ್ರಗಳ ಬಂಡವಾಳವೂ ಕೂಡ ಬಡರಾಷ್ಟ್ರಗಳಿಗೆ ಹರಿದು ಬರುವಂತೆ ಯತ್ನಿಸಿತು

6. ವರ್ಣಭೇದ ನೀತಿಯು ಮಾನವತ್ವವಾದಕ್ಕೆ ವಿರೋಧವಾದುದು ಇದನ್ನು ನಿಮ್ಮ ದೃಷ್ಟಿಕೋನದಲ್ಲಿ ಸಮರ್ಥಿಸಿ,

 • ಒಂದು ಜನಾಂಗದ ಅಥವಾ ವರ್ಣದ ಜನಸಮುದಾಯ ಇನ್ನೊಂದು ಜನಾಂಗ ಅಥವಾ ವರ್ಣದ ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಕಡೆಗಣಿಸುವ ಅಥವಾ ವಿರೋಧಿಸುವ ನೀತಿಗೆ ವರ್ಣಭೇದ ನೀತಿ ಎಂದು ಕರೆಯಲಾಗುವುದು.
 • ಈ ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗುತ್ತದೆ.
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment