Dear sslc students, 10ನೇ ತರಗತಿ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದೇ ಕೆಳಗಡೆ 10ನೇ ತರಗತಿ ವಿಜ್ಞಾನದ ಎಲ್ಲಾ ಪಾಠಗಳ ನೋಟ್ಸ್ ನ್ನು ನೀಡಿರುತ್ತೇವೆ. 10ನೇ(sslc) ತರಗತಿ ವಿದ್ಯಾರ್ಥಿಗಳ ಓದಿನ ಸಹಾಯಕ್ಕೆಂದೇ ಹಾಗೂ 10ನೇ ತರಗತಿ (SSLC exam) ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಾಯವಾಗುತ್ತದೆ. 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಈ ಕೆಳಗೆ ಡೌನ್ಲೋಡ್ ಲಿಂಕ್ ನ್ನು ಕೊಟ್ಟಿರುತ್ತೇವೆ ಇದರ ಮುಖಾಂತರ ನೇರವಾಗಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್ ನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ನೋಟ್ಸ್ ಮಾಡಬಹುದು. SSLC 10ನೇ ತರಗತಿಯ ವಿಜ್ಞಾನದ ಎಲ್ಲಾ ಪಾಠಗಳ ಪ್ರಶ್ನೆ ಉತ್ತರಗಳನ್ನು ಒಳಗೊಂಡಿದೆ.
10ನೇ ತರಗತಿ ಅಧ್ಯಾಯ -1 ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ವಿಜ್ಞಾನ ನೋಟ್ಸ್,10th Standard Science 1st Lesson Notes Question Answer Pdf Download Class 10 Science Chapter 1 Notes Pdf Class 10 Science Chapter 1 Pdf Kseeb Solution For Class 10 Science Chapter 1 Notes Rasayanika Kriyegalu Mattu Samikaranagalu Question Answer Kannada 10th Science 1st Lesson Question Answer 10th science first lesson question answer Mcq
10th Standard Science 1st Lesson Notes in Kannada
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ಪಾಠದ ಪ್ರಶ್ನೆಗಳು
1) ಮೆಗ್ನೀಸಿಯಂ ಪಟ್ಟಿಯನ್ನು ಗಾಳಯಲ್ಲಿ ಉರಿಸುವ ಮೊದಲು ಸ್ವಚ್ಛಗೊಳಿಸಬೇಕು ಏಕೆ?
ಮೆಗ್ನಿಸಿಯಂ ಗಾಳಿಯ ಜೊತೆ ವರ್ತಿಸಿ ಆಕ್ಸೆಡ್ ಪದರ ಉಂಟುಮಾಡುತ್ತದೆ . ಇದನ್ನು ಹೋಗಲಾಡಿಸಿ ವೇಗವಾಗಿ ಉರಿಯಲು .
2) ಈ ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ಸಮೀಕರಣ ಬರೆಯಿರಿ.
i ) H₂ + Cl₂ → 2 HCI
ii ) 3BaCl2 + Al2 ( SO4 )3 →3BaSO4 + 2AICI3 ,
iii ) 2Na + H20→ 2NaOH
3.ಈ ಕೆಳಗಿನ ಕ್ರಿಯೆಗಳಿಗೆ ಭೌತಸ್ಥಿತಿಗಳ ಸಂಕೇತಗಳೊಂದಿಗೆ ಸರಿದೂಗಿಸಿದ ಸಮೀಕರಣ ಬರೆಯಿರಿ.
i ) ಕ್ಯಾಲ್ಸಿಯಂ ಆಕ್ಸೆಡ್ CaO
ii ) CaO + H₂O → Ca ( OH )2
Class 10 Science Chapter 1 Question Answer
ಅಭ್ಯಾಸದ ಪ್ರಶ್ನೆಗಳಿಗೆ ಉತ್ತರಗಳು
1) ಈ ಕೆಳಗಿನ ಕ್ರಿಯೆಯ ಕುರಿತ ಹೇಳಿಕೆಗಳಲ್ಲಿ ಯಾವುವು ತಪ್ಪಾಗಿವೆ?
i ) a and b
2) Fe2 O3 + 2Al → Al2 O3 + 2Fe
ಮೇಲಿನ ಕ್ರಿಯೆಯು ಯಾವುದಕ್ಕೆ ಉದಾಹರಣೆ
d ) ಸ್ಥಾನಪಲ್ಲಟ ಕ್ರಿಯೆ ,
3. ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ?
a ) ಹೈಡೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತದೆ .
4) ಸರಿದೂಗಿಸಿದ ರಾಸಾಯನಿಕ ಸಮೀಕರಣ ಎಂದರೇನು? ರಾಸಾಯನಿಕ ಸಮೀಕರಣಗಳನ್ನು ಏಕೆ ಸರಿದೂಗಿಸಬೇಕು.?
ಪ್ರತಿವರ್ತಕ ಮತ್ತು ಉತ್ಪನ್ನಗಳಲ್ಲಿರುವ ಧಾತು / ಸಂಯುಕ್ತಗಳ ರಾಶಿ ಮತ್ತು ಆವೇಶ ಸಮನಾಗಿರುವ ಸಮೀಕರಣವೇ ಸರಿದೂಗಿಸಿದ ರಾಸಾಯನಿಕ ಸಮೀಕರಣ ,
ರಾಶಿ ಸಂರಕ್ಷಣಾ ನಿಯಮದ ಪ್ರಕಾರ ರಾಸಾಯನಿಕ ಕ್ರಿಯೆಯ ಉತ್ಪನ್ನಗಳಲ್ಲಿರುವ ಧಾತುಗಳ ಒಟ್ಟು ರಾಶಿಯು ಪ್ರತಿವರ್ತಕಗಳಲ್ಲಿರುವ ಧಾತುಗಳ ಒಟ್ಟು ರಾಶಿಗೆ ಸಮನಾಗಿರಬೇಕು.ಆದ್ದರಿಂದ ರಾಸಾಯನಿಕ ಸಮೀಕರಣವನ್ನು ಸರಿದೂಗಿಸಬೇಕು .
5) ಈ ಕೆಳಗಿನ ಹೇಳಿಕೆಯನ್ನು ರಾಸಾಯನಿಕ ಸಮೀಕರಣಗಳ ರೂಪಕ್ಕೆ ಪರಿವರ್ತಿಸಿ ನಂತರ ಅವುಗಳನ್ನು ಸರಿದೂಗಿಸಿ.
a) 3H2+N2 →2NH3
b) 2H2S + 3O2 →2H2O+2SO2
c) 3Bacl2 + Al2(SO4)3→2AlCl3 + 3BaaSO4
d) 2K+2H2O→2KOH+H2
10th Standard Science 1st Lesson Notes
6) ಈ ಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಿ.
a ) 2HNO3 + 2Ca ( OH3 )2 → 2Ca(NO3)2+2H2O
b ) 6NaOH + 3H₂SO4 →3Na2SO4+6H2O
c ) NaCl + AgNO3 →AgCl+ NaNo3
d ) BaCl₂ + H₂SO4 →BaSO4+2HCI
7) ಈ ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸಿದ ಸಮೀಕರಣ ಬರೆಯಿರಿ
a ) 2Ca ( OH )2 + 2CO2 →2CaCO3+2H2O
b ) Zn + 2 AgNO3 →Zn(NO3)2+2Ag
c ) 2Al + 3CuCl₂ →2AlCl3+3Cu
d ) BaCl₂ + K₂SO4 →BaSO4+2KCI
8) ಈ ಕೆಳಗಿನವುಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ ಮತ್ತು ಪ್ರತಿಯೊಂದು ಕ್ರಿಯೆಯ ವಿಧವನ್ನು ಗುರುತಿಸಿ
a ) 2KBr + Bal₂ →2KI+BaBr2 ದ್ವಿಸ್ಥಾನಪಲ್ಲಟ ಕ್ರಿಯೆ
b ) ZnCO3 →ZnO+CO2 ವಿಭಜನೆ ಕ್ರಿಯೆ
c ) H₂ + Cl₂ →2HCI ಸಂಯೋಗ ಕ್ರಿಯೆ
d ) Mg + 2HCI →MgCl2+HCI ಸ್ಥಾನಪಲ್ಲಟ ಕ್ರಿಯೆ
9) ಅಂತರುಷ್ಣಕ ಕ್ರಿಯೆ ಮತ್ತು ಬಹಿರುಷ್ಣಕ ಕ್ರಿಯೆಗಳು ಎಂದರೇನು? ಉದಾ ಕೊಡಿ.
ಅಂತರುಷಕ ಕ್ರಿಯೆ ಎಂದರೆ ಉಷ್ಣವನ್ನು ಹೀರಿಕೊಳ್ಳುವ ರಾಸಾಯನಿಕ ಕ್ರಿಯೆ . ಉದಾಹರಣೆಗೆ ಬೆಳ್ಳಿಯ ಕ್ಲೋರೈಡ್ ನ ಬಿಳಿ ಬಣ್ಣವು ಸೂರ್ಯನ ಬೆಳಕನ್ನು ಹೀರಿಕೊಂಡು ಬೂದು ಬಣ್ಣಕ್ಕೆ ತಿರುಗುತ್ತದೆ .
ಬಹಿರುಷ್ಣಕ ಕ್ರಿಯೆ ಎಂದರೆ ಉಷ್ಣವನ್ನು ಬಿಡುಗಡೆ ಮಾಡುವ ರಾಸಾಯನಿಕ ಕ್ರಿಯೆ.ಉದಾಹರಣೆಗೆ ಕ್ಯಾಲ್ಸಿಯಂ ಆಕ್ಸೆಡ್ ನೀರಿನೊಂದಿಗೆ ವರ್ತಿಸಿ ಉಷ್ಣ ಬಿಡುಗಡೆ ಮಾಡುತ್ತಾ ಅರಳಿದ ಸುಣ್ಣ ( ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ) ವನ್ನು ಉತ್ಪತ್ತಿ ಮಾಡುತ್ತದೆ .
10) ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎಂದು ಪರಿಗಣಿಸಲಾಗಿದೆ? ವಿವರಿಸಿ.
ಉಸಿರಾಟದ ಸಮಯದಲ್ಲಿ ಗೂಕೋಸ್ ಆಮ್ಲಜನಕದೊಂದಿಗೆ ವರ್ತಿಸಿ ಇಂಗಾಲದ ಡೈ ಆಕ್ಸೆಡ್ ಮತ್ತು ನೀರನ್ನು ಉತ್ಪತ್ತಿ ಮಾಡುವುದರ ಜೊತೆಗೆ ಶಕ್ತಿಯನ್ನು ಉಷ್ಣದ ರೂಪದಲ್ಲಿ ಬಿಡುಗಡೆ ಮಾಡುತ್ತದೆ .
C6H12O2 →CO2+H2O+ಶಕ್ತಿ
11) ವಿಭಜನ ಕ್ರಿಯಗಳು, ಸಂಯೋಗ ಕ್ರಿಯೆಗಳಿಗೆ ವಿರುದ್ಧವಾಗಿದೆ ಎನ್ನುತ್ತಾರೆ ಏಕೆ? ಈ ಕ್ರಿಯೆಗಳಿಗೆ ಸಮೀಕರಣವನ್ನು ಬರೆಯಿರಿ
ವಿಭಜನೆ ಕ್ರಿಯೆಗಳು ಸಂಯೋಗ ಕ್ರಿಯೆಯ ವಿರುದ್ಧವಾಗಿವೆ . ವಿಭಜನೆ ಕ್ರಿಯೆಯಲ್ಲಿ ಒಂದು ಸಂಯುಕ್ತವು 2 ಅಥವಾ ಹೆಚ್ಚು ಸಂಯುಕ್ತಗಳಾಗಿ ಅಥವಾ ಧಾತುಗಳಾಗಿ ವಿಭಜನೆ ಹೊಂದುತ್ತವೆ.ಪಾದರಸದ ಆಕ್ಸೆಡ್ ನು ಕಾಯಿಸಿದಾಗ ಅದು ಪಾದರಸ ಮತ್ತು ಆಮ್ಲಜನಕವಾಗಿ ವಿಭಜನೆ ಹೊಂದುತ್ತದೆ .
2HgO→ 2Hg + O₂
ಈ ಕ್ರಿಯೆಗೆ ಉಷ್ಣ ಒದಗಿಸಬೇಕಾದ ಕಾರಣ ಇದು ಅಂತರುಷ್ಟಕ ಕ್ರಿಯೆಯಾಗಿದೆ . ಹೆಚ್ಚಿನ ಎಲ್ಲಾ ರಾಸಾಯನಿಕ ವಿಭಜನೆ ಕ್ರಿಯೆಗಳು ಅಂತರುಷಕ ಕ್ರಿಯೆಗಳು , ಆದರೆ ರಾಸಾಯನಿಕ ಸಂಯೋಗ ಕ್ರಿಯೆಯಲ್ಲಿ 2 ಅಥವಾ ಹೆಚ್ಚು ಧಾತುಗಳು ಅಥವಾ ಸಂಯುಕ್ತಗಳು ಸಂಯೋಗವಾಗಿ ಒಂದೇ ಉತ್ಪನ್ನ ಉಂಟಾಗುತ್ತದೆ .
H₂ + O₂→2H2O
12) ಉಷ್ಣ, ಬೆಳಕು ಮತ್ತು ವಿದ್ಯುಚ್ಛಕ್ತಿಯ ರೂಪದಲ್ಲಿ ಶಕ್ತಿಯನ್ನು ಒದಗಿಸುವ ಮೂಲಕ ನಡೆಸುವ ವಿಭಜನ ಕ್ರಿಯೆಗಳಿಗೆ ತಲಾ ಒಂದೊಂದು ಉದಾಹರಣೆ ಕೊಡಿ
ಕ್ಯಾಲ್ಸಿಯಂ ಕಾರ್ಬೋನೇಟನ್ನು ಕಾಯಿಸಿದಾಗ ಕ್ಯಾಲ್ಸಿಯಂ ಆಕ್ಸೆಡ್ ಮತ್ತು ಕಾರ್ಬನ್ ಡೈ ಆಕ್ಸೆಡ್ ಬಿಡುಗಡೆಯಾಗುತ್ತದೆ .
CaCO3→ CaO + CO2
ಆಮ್ಲ ಮಿಶ್ರಿತ ನೀರಿನೊಂದಿಗೆ ವಿದ್ಯುತ್ ಹಾಯಿಸಿದಾಗ ಅದು ಆಮ್ಲಜನಕ ಮತ್ತು ಜಲಜನಕವಾಗಿ ವಿಭಜಿಸಲ್ಪಡುತ್ತದೆ .
2H₂O →H₂ + O₂
ಬೆಳ್ಳಿಯ ಕ್ಲೋರೈಡನ್ನು ಸೂರ್ಯನ ಬೆಳಕಿಗೆ ಒಡ್ಡಿದಾಗ ಅದು ಬೆಳ್ಳಿ ಮತ್ತು ಕ್ಲೋರಿನ್ ಅನಿಲವನ್ನು ಬಿಡುಗಡೆ ಮಾಡುತ್ತದೆ .
2AgCl → 2Ag+Cl2
13) ಸ್ಥಾನಪಲ್ಲಟ ಕ್ರಿಯೆ ಮತ್ತು ದ್ವಿಸ್ಥಾನಪಲ್ಲಟ ಕ್ರಿಯೆಗಳ ನಡುವಿನ ವ್ಯತ್ಯಾಸವೇನು? ಈ ಕ್ರಿಯೆಗಳಿಗೆ ಸಮೀಕರಣವನ್ನು ಬರೆಯಿರಿ.
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆಯಲ್ಲಿ ಒಂದು ಕ್ರಿಯಾಶೀಲ ಧಾತು ಸಂಯುಕ್ತದಲ್ಲಿರುವ ಇನ್ನೊಂದು ಧಾತುವನ್ನು ಪಲ್ಲಟಗೊಳಿಸುತ್ತದೆ . ದ್ವಿಸ್ಥಾನಪಲ್ಲಟ ಕ್ರಿಯೆಯಲ್ಲಿ ಎರಡು ಧನ ಅಯಾನುಗಳು ಮತ್ತು ಋಣ ಅಯಾನುಗಳು ತಮ್ಮ ಸಂಯುಕ್ತಗಳಿಂದ ಪಲ್ಲಟಗೊಳ್ಳುತ್ತವೆ .
ಉದಾಹರಣೆಗೆ CuSO4 + Zn ZnSO4 →ZnSO4 + Cu
Na2CO3+CaCl2 →CaCo3+Nacl
14) ಬೆಳ್ಳಿಯ ಶುದ್ದೀಕರಣ ಕ್ರಿಯೆಯು ಬೆಳ್ಳಿಯ ನೈಟ್ರೇಟ್ ದ್ರಾವಣದಿಂದ ಬೆಳ್ಳಿಯು ತಾಮ್ರದಿಂದ ಸ್ಥಾನಪಲ್ಲಟಗೊಳ್ಳುವುದನ್ನು ಒಳಗೊಂದಿದೆ, ಈ ಸಂದರ್ಭದಲ್ಲಿ ನಡೆಯುವ ಕ್ರಿಯೆಯನ್ನು ಬರೆಯಿರಿ.
Cu + 2AgNO3 → Cu ( NO3 )2 ( ಜಲೀಯ ) + 2Ag ( ಘನ )
15) ಪ್ರಕ್ಷೇಪನ ಕ್ರಿಯೆ ಎಂದರೇನು? ಉದಾಹರಣೆಗಳನ್ನು ವಿವರಿಸಿ.
ವಿಲೀನಗೊಂಡ ಅಯಾನುಗಳನ್ನು ಹೊಂದಿರುವ ಎರಡು ದ್ರಾವಣಗಳನ್ನು ಸೇರಿಸಿದಾಗ ವಿಲೀನಗೊಳ್ಳದ ಲವಣವು ಉತ್ಪತ್ತಿಯಾಗುತ್ತದೆ.ಸ್ವಲ್ಪ ಸಮಯದ ನಂತರ ತಳ ಸೇರುವ ಈ ಲವಣಕ್ಕೆ ಪ್ರಕ್ಷೇಪಣ ಎಂದೂ ಈ ಕ್ರಿಯೆಗೆ ಪ್ರಕ್ಷೇಪಣೆ ಕ್ರಿಯೆ ಎಂದು ಕರೆಯಲಾಗುತ್ತದೆ .
ಉದಾ : ಪೊಟ್ಯಾಷಿಯಂ ಕ್ಲೋರೈಡ್ ದ್ರಾವಣಕ್ಕೆ ಜಲೀಯ ಬೆಳ್ಳಿಯ ನೈಟ್ರೇಟ್ ದ್ರಾವಣವನ್ನು ಸೇರಿಸಿದಾಗ ಬೆಳ್ಳಿಯ ಕ್ಲೋರೈಡ್ ನ ಪ್ರಕ್ಷೇಪಣ ಉಂಟಾಗುವುದು .
AgNO3 + KCI→ AgCl + KNO3
16) ಆಕ್ಸಿಜನ್ ಪಡೆದುಕೊಳ್ಳುವುದು ಅಥವಾ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೆಳಗಿನ ಪ್ರತಿಯೊಂದಕ್ಕೂ ಎರೆಡೆರಡು ಉದಾ ನೀಡಿ.
a ) ಉತ್ಕರ್ಷಣ ಕ್ರಿಯೆ ಎಂದರೆ ವಸ್ತುವೊಂದು ಆಕ್ಸಿಜನ್ ಪಡೆದುಕೊಳ್ಳುವುದು ,
ಉದಾ : ತಾಮ್ರದ ಪುಡಿಯನ್ನು ಆಕ್ಸಿಜನ್ ಜೊತೆಗೆ ಕಾಯಿಸಿದಾಗ ತಾಮ್ರದ ಆಕ್ಸೆಡ್ ಉಂಟಾಗುವುದು .
2Cu + 0₂ → 2CuO
ಬಿಸಿಯಾಗಿರುವ ತಾಮ್ರದ ಆಕ್ಸೆಡ್ ಮೇಲೆ ಹೈಡೋಜನ್ ಅನಿಲವನ್ನು ಹಾಯಿಸಿದಾಗ ತಾಮ್ರ ದೊರಕುವುದು , ಹೈಡೋಜನ್ ಆಕ್ಸಿಜನ್‌ಅನ್ನು ಪಡೆದುಕೊಂಡು ನೀರಾವಿಯಾಗುತ್ತದೆ .
CuO + H₂ → Cu + H₂O
b ) ವಸ್ತುವೊಂದು ಆಕ್ಸಿಜನ್ ಕಳೆದುಕೊಂಡರೆ ಅದು ಅಪಕರ್ಷಣೆ .
ಉದಾ : ಬಿಸಿಯಾಗಿರುವ ತಾಮ್ರದ ಆಕ್ಸೆಡ್ ಮೇಲೆ ಹೈಡೋಜನ್ ಅನಿಲವನ್ನು ಹಾಯಿಸಿದಾಗ ತಾಮ್ರದ ಆಕ್ಸೆಡ್ ಆಕ್ಸಿಜನ್ ಅನ್ನು ಕಳೆದುಕೊಂಡು ತಾವು ದೊರಕುವುದು .
CuO + H₂ → Cu +H₂O
ಸತುವಿನ ಆಕ್ಸೆಡ್ ಜೊತೆ ಕಾರ್ಬನ್ ವರ್ತಿಸಿದಾಗ ಸತುವಿನ ಆಕ್ಸೆಡ್ ಅಪಕರ್ಷಣಗೊಂಡು ಸತು ಉಂಟಾಗುತ್ತದೆ.
ZnO + C → Zn + CO
17) ಹೊಳಪುಳ್ಳ ಕಂದುಬಣ್ಣದ X ಧಾತುವನ್ನು ಗಾಳಿಯಲ್ಲಿ ಕಾಸಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ, X ಧಾತು ಮತ್ತು ಉಂಟಾದ ಕಪ್ಪು ಬಣ್ಣದ ಸಂಯುಕ್ತವನ್ನು ಹೆಸರಿಸಿ.
X ಧಾತು ತಾಮ್ರ , ಕಪ್ಪು ಬಣ್ಣದ ಸಂಯುಕ್ತ ತಾಮ್ರದ ಆಕ್ಸೆಡ್ .
18) ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯುವುದೇಕೆ?
ಕಬ್ಬಿಣವು ಗಾಳಿಯಲ್ಲಿನ ಆಮ್ಲಜನಕ ಮತ್ತು ತೇವಾಂಶದ ಜೊತೆಗೆ ವರ್ತಿಸಿದಾಗ ಕಬ್ಬಿಣದ ಜಲೀಯ ಆಕ್ಸೆಡ್ ಆಗಿ ಪರಿವರ್ತನೆ ಹೊಂದಿ ತುಕ್ಕು ಹಿಡಿಯುತ್ತದೆ . ಇದನ್ನು ತಪ್ಪಿಸಲು ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯಲಾಗುತ್ತದೆ .
19) ಎಣ್ಣೆ ಮತ್ತು ಕೊಬ್ಬು ಹೊಂದಿದ ಆಹಾರ ಪದಾರ್ಥಗಳ ಮೂಲಕ ನೈಟ್ರೋಜನ್ ಅನಿಲವನ್ನು ಹಾಯಿಸುತ್ತಾರೆ ಏಕೆ?
ಎಣ್ಣೆ ಮತ್ತು ಕೊಬ್ಬು ಹೊಂದಿದ ಆಹಾರ ಪದಾರ್ಥಗಳು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ಕಮಟು ವಾಸನೆಯನ್ನು ಉಂಟುಮಾಡುತ್ತದೆ . ಇದನ್ನು ತಪ್ಪಿಸಲು ಅವುಗಳ ಜೊತೆಗೆ ವರ್ತಿಸದ ನೈಟ್ರೋಜನನ್ನು ಹಾಯಿಸಲಾಗುತ್ತದೆ .
20) ಒಂದೊಂದು ಉದಾಹರಣೆಯೊಂದಿಗೆ ಕೆಳಗಿನ ಪದಗಳನ್ನು ವಿವರಿಸಿ.
ನಶಿಸುವಿಕೆ : ಲೋಹಗಳ ಮೇಲೆ ಗಾಳಿಯಲ್ಲಿರುವ ಆಮ್ಲಜನಕ ಮತ್ತು ನೀರಾವಿ ವರ್ತಿಸಿ ಅವು ಸವೆಯುವಂತೆ ಮಾಡುವುದನ್ನು ನಶಿಸುವಿಕೆ ಎನ್ನುವರು . ನಶಿಸುವಿಕೆಯು ಸಾಮಾನ್ಯವಾಗಿ ಲೋಹಗಳ ಉತ್ಕರ್ಷಣ ಕ್ರಿಯೆಯಿಂದಾಗುತ್ತದೆ . ಉದಾಹರಣೆಗೆ ಕಬ್ಬಿಣಕ್ಕೆ ತುಕ್ಕು ಹಿಡಿಯುವುದು .
ಕಮಟುವಿಕೆ : ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡಾಗ ಅದರ ರುಚಿ ಮತ್ತು ವಾಸನೆ ಬದಲಾಗುವುದೇ ಕಮಟುವಿಕೆ . ಎಣ್ಣೆ ಪದಾರ್ಥಗಳನ್ನು ರೆಫ್ರಿಜರೇಟರನಲ್ಲಿ ಇಟ್ಟಾಗ ತಾಪದ ಇಳಿಕೆಯಿಂದ ಉತ್ಕರ್ಷಣ ಕ್ರಿಯೆ ನಿಧಾನವಾಗುತ್ತದೆ . ಇದರಿಂದ ಬೇಗನೆ ಅವು ಕೆಟ್ಟು ಹೋಗುವುದಿಲ್ಲ .
10th class science notes part 1
Lesson | ಪಾಠಗಳ ಹೆಸರು | Download link |
---|---|---|
ಅಧ್ಯಾಯ-1 | ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು | Download |
ಅಧ್ಯಾಯ-2 | ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು | Download |
ಅಧ್ಯಾಯ-3 | ಲೋಹಗಳು ಮತ್ತು ಅಲೋಹಗಳು | Download |
ಅಧ್ಯಾಯ-6 | ಜೀವ ಕ್ರಿಯೆಗಳು | Download |
ಅಧ್ಯಾಯ-7 | ನಿಯಂತ್ರಣ ಮತ್ತು ಸಹಭಾಗಿತ್ವ | Download |
ಅಧ್ಯಾಯ-12 | ವಿದ್ಯುಚ್ಛಕ್ತಿ | Download |
ಅಧ್ಯಾಯ-13 | ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು | Download |
ಅಧ್ಯಾಯ-15 | ನಮ್ಮ ಪರಿಸರ | Download |
10th class science notes part 2
ಅಧ್ಯಾಯಗಳು | ಪಾಠಗಳ ಹೆಸರು | Download link |
---|---|---|
ಅಧ್ಯಾಯ-4 | ಕಾರ್ಬನ್ ಮತ್ತು ಅದರ ಸಂಯುಕ್ತಗಳು | Download |
ಅಧ್ಯಾಯ-5 | ಧಾತುಗಳ ಆವರ್ತನೀಯ ವರ್ಗೀಕರಣ | Download |
ಅಧ್ಯಾಯ-8 | ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ | Download |
ಅಧ್ಯಾಯ-9 | ಅನುವಂಶೀಯತೆ ಮತ್ತು ಜೀವವಿಕಾಸ | Download |
ಅಧ್ಯಾಯ-10 | ಬೆಳಕು, ಪ್ರತಿಫಲನ ಮತ್ತು ವಕ್ರೀಭವನ | Download |
ಅಧ್ಯಾಯ-11 | ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು | Download |
ಅಧ್ಯಾಯ-14 | ಶಕ್ತಿಯ ಆಕರಗಳು | Download |
ಅಧ್ಯಾಯ-16 | ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ | Download |