Sankalpa Geete Kannada Notes

ನೀವು 10ನೇ ತರಗತಿಯ ಪದ್ಯಭಾಗ 1 ಸಂಕಲ್ಪ ಗೀತೆಯ ಪ್ರಶ್ನೆ ಉತ್ತರ ಅಥವಾ ಭಾವರ್ಥ ಹುಡುಕುತಿದ್ದೀರಾ? ಹಾಗಿದ್ರೆ ಇಲ್ಲಿ ಕ್ಲಿಕ್ ಮಾಡಿ, ಯಾಕಂದ್ರೆ ಇಲ್ಲಿ 10ನೇ ತರಗತಿಯ ಸಂಕಲ್ಪ ಗೀತೆಯ ಪ್ರಶ್ನೆ ಉತ್ತರಗಳು, ಭಾವರ್ಥ, ಕವಿ ಪರಿಚಯ, ಪದಗಳ ಅರ್ಥ ವ್ಯಾಕಾರಣ ಇತ್ಯಾದಿ ಎಲ್ಲಾ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಪದ್ಯಭಾಗ 1 ಸಂಕಲ್ಪ ಗೀತೆ ನೋಟ್ಸ್.

10ನೇ ತರಗತಿ ಕನ್ನಡ
ಪದ್ಯಭಾಗ 1ಸಂಕಲ್ಪ ಗೀತೆ
ಕವಿಡಾ. ಜಿ. ಎಸ್. ಶಿವರುದ್ರಪ್ಪ

ಕವಿ – ಕಾವ್ಯ ಪರಿಚಯ

ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧರಾಗಿರುವ ಗಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ನವರು ಕ್ರಿ.ಶ.೧೯೨೬ರಲ್ಲಿ ಶಿವವಮೊಗ್ಗ ಜಿಲ್ಲೆಯ  ಶಿಕಾರಿಪುರದಲ್ಲಿ  ಜನಿಸಿದರು. ಆಧುನಿಕ ಕನ್ನಡದ  ಪ್ರಮುಖ ಕವಿಗಳಲ್ಲಿ  ಒಬ್ಬರಾದ ಶಿವರುದ್ರಪ್ಪನವರು  ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದಹೆಜ್ಜೆ,ಅನಾವರಣ. ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದ¸ ರ‍್ಯ ಸಮೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕಾವ್ಯಾರ್ಥಚಿಂತನ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶಿವರುದ್ರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪುರಸ್ಕಾರಕ್ಕೆ  ಭಾಜನರಾಗಿದ್ದಾರೆ. ರಾಷ್ಟ್ರಕವಿ  ಅಭಿಧಾನ
ಮತ್ತು ಪಂಪಪ್ರಶಸ್ತಿಗೆ  ಪಾತ್ರರಾಗಿದ್ದಾರೆ.

Sankalpa Geethe Question Answer Multiple Choice

ಸಂಕಲ್ಪ ಗೀತೆ ಬಹು ಆಯ್ಕೆ ಪ್ರಶ್ನೆಗಳು

೧. ನಾಮಪದಕ್ಕೆ ಉದಾಹರಣೆ .
ಅ] ವಸಂತ ಆ] ಕುರುಡ ಇ] ಕುಂಟ ಈ] ವಿಜ್ಞಾನಿ

೨. ‘ಪಥ’ ಪದದ ಅರ್ಥ
ಅ] ರಥ ಆ] ಶಪಥ ಇ] ದಾರಿ ಈ] ಪಂಥ.

೩. ‘ವಸಂತ ’ ಪದದ ಅರ್ಥ
ಅ] ಸಮೃದ್ಧಿ ಆ] ಹೊಸದು ಇ] ಸಂತ ಇ] ಮತ.

೪. ‘ಕತ್ತಲೆಯೊಳಗೆ  ಬಿಡಿಸಿ ಬರೆಯಿರಿ.
ಅ] ಕತ್ತಲೆ+ಒಳಗೆ ಆ] ಕತ್ತಲೆಯ+ಒಳಗೆ ಇ] ರಾತ್ರಿ+ಒಳಗೆ ಈ] ಕತ್ತಲೆಯಿಂದ+ಒಳಗೆ

೫. ‘ಸೇತುವೆ+ಆಗೋಣ’ ಇಲ್ಲಿರುವ ಸಂಧಿ
ಅ] ಆಗಮ  ಆ] ಆದೇಶ ಇ] ಸವರ್ಣಧೀರ್ಘ ಈ] ಗುಣ.

೬. ‘ಕಾಡುಮೇಡು’ ಈ ವ್ಯಾಕರಣಾಂಶಕ್ಕೆ ಉದಾಹರಣೆ .
ಅ] ದ್ವರುಕ್ತಿ  ಆ] ಜೋಡುನುಡಿ ಇ] ನುಡಿಗಟ್ಟು ಈ] ಅನುಕರಣಾವ್ಯಯ.

೭. ‘ಹಚ್ಚುವುದು’ ಇಲ್ಲಿರುವ ಧಾತು
ಅ] ಹಚ್ಚಿ ಆ] ಅಚ್ಚಿ ಇ] ಹಚ್ಚು  ಈ] ಅವುದು.

೮. ಇಲ್ಲಿರುವ ಕ್ರಿಯಾಪದ ಯಾವುದು.
ಅ] ಕಟ್ಟುವವುದು ಆ] ಬಿರುಗಾಳಿ ಇ] ಭಾವಗೀತೆ ಈ] ಭರವಸೆ

೯. “ಭರವಸೆಗಳ “ಇದು ಈ ವಿಭಕ್ತಿಯಾಗಿದೆ
ಅ] ಪ್ರಥಮಾ ಆ] ತೃತೀಯಾ ಇ] ಷಷ್ಠೀ ಈ] ಸಪ್ತಮೀ.

೧೦. ‘ಬಿರುಗಾಳಿಗೆ’ ಇದು ಈ ವಿಭಕ್ತಿ   ಪ್ರತ್ಯಯ .
ಅ] ಪ್ರಥಮಾ ಆ] ತೃತೀಯಾ ಇ] ಷಷ್ಠೀ ಈ] ಚತುರ್ಥೀ

೧೧. ‘ಅಲ್ಲಿ’ ಇಲ್ಲಿರುವ ಪ್ರತ್ಯಯ
ಅ] ಪ್ರಥಮಾ ಆ] ಚತುರ್ಥಿ ಇ] ಸಪ್ತಮೀ ಈ] ಪಂಚಮೀ.

೧೨. ದ್ವಿತೀಯಾ ವಿಭಕ್ತಿಯ ಕಾರಕಾರ್ಥ
ಅ] ಕಾರಣಾರ್ಥ ಆ] ಸಂಪ್ರದಾನ ಇ] ಕಮಾರ್ಥ ಈ] ಅಧಿಕರಣ.

೧೩. ‘ಮಾಡಲಿ’ ಇಲ್ಲಿರುವ ಕ್ರಿಯಾಪದ
ಅ] ವಿಧ್ಯರ್ಥಕ ಆ] ನಿಷೇಧಾರ್ಥಕ ಇ] ಸಂಭವನಾರ್ಥಕ ಈ] ಧಾತು

೧೪) ಮಾಡುತ್ತಾನೆ ಪದದ  ನಿಷೇಧಾರ್ಥಕ ರೂಪ.
ಎ) ಮಾಡಲಿ    ಬಿ) ಮಾಡನು
ಸಿ) ಮಾಡು        ಡಿ) ಮಾಡುವಳು

೧೫) ಅವರು ಬೆಂಗಳೂರಿಗೆ ಹೋದರು, ಇಲ್ಲಿ ಗೆರೆ ಎಳೆದಿರುವ ಪದದ ವಿದ್ಯರ್ಥಕ ರೂಪ.
ಎ) ಹೋಗಲಿ ಬಿ) ಹೋಗಿದ್ದರು ಸಿ) ಹೋಗಲಿದ್ದಾರೆ ಡಿ) ಹೋದಾನು

೧೬) ಮಕ್ಕಳು  ಶಾಲೆಗೆ ಹೋದಾರು ಇಲ್ಲಿ ಗೆರೆ ಎಳೆದಿರುವ ಪದ ವರ್ತಮಾನ ಕಾಲಕ್ಕೆ ಪರಿವರ್ತಿಸಿದಾಗ ಆಗುವ ಶಬ್ಧ .
ಎ) ಹೋಗವರು  ಬಿ) ಹೋಗಬಹುದು ಸಿ) ಹೋಗಲಿ ಡಿ) ಹೋಗುತ್ತಿದ್ದಾರೆ

೧೭) ‘ತಿನ್ನಳು’ ಈ ಪದದ  ರೂಪ ಯಾವುದು.
ಎ) ನಿಷೇದಾರ್ಥಕ ಬಿ) ಸಂಭಾವನಾರ್ಥಕ ಸಿ) ವಿಶೇಷಾರ್ಥಕ ಡಿ) ವಿದ್ಯರ್ಥಕ

೧೮) ಪರೀಕ್ಷೆಯಲ್ಲಿ ಪ್ರಶ್ನೆ ಸುಲಭವಾಗಿ ಬಂದಿದೆ. ಈ ವಾಕ್ಯದಲ್ಲಿ ಬಂದೀತು ಎಂಬುದು  ಯಾವ ವಿಧದ ಕ್ರಿಯಾರೂಪ.
ಎ) ಸಂಭಾವನಾರ್ಥಕ ಬಿ) ವಿದ್ಯರ್ಥಕ ಸಿ) ನಿಷೇಧಾರ್ಥಕ ಡಿ) ಭಾವಾತ್ಮಕ

೧೯) ‘ತಿಂದಾಳು’ ಎಂಬುದುಯಾವ  ಕ್ರೀಯಾ ರೂಪ ಪದ.
ಎ) ವಿದ್ಯರ್ಥಕ ಬಿ) ಸಂಭಾವನಾರ್ಥಕ ಸಿ) ನಿಷೇಧಾರ್ಥಕ ಡಿ) ಧಾತು ರೂಪ

೨೦) ‘ತಿನ್ನು’ ಪದದ ವಿದ್ಯರ್ಥಕ ರೂಪ.
ಎ) ತಿನ್ನಲಿ ಬಿ) ತಿಂದಾನು ಸಿ) ತಿನ್ನುತ್ತಾನೆಡಿ) ತಿಂದನು

೨೧) ‘ಮಾಡು’ ಈ ಪದದ ನಿಷೇಧಾರ್ಥಕ ರೂಪ.
ಎ) ಮಾಡನುಬಿ) ಮಾಡುವುದು ಸಿ) ಮಾಡುವೆಡಿ) ಮಾಡಿದರು

೨೨) ‘ಓದರು’ ಪದದ ಕ್ರಿಯಾಪದದ  ಈ ರೂಪದಲ್ಲಿದೆ.
ಎ) ನಿಷೇದಾರ್ಥಕ ಬಿ) ವಿದ್ಯರ್ಥಕ ಸಿ) ಸಂಭಾವನಾರ್ಥಕ ಡಿ) ಧಾತು

೨೩) ಕ್ರಿಯಾಪದಗಳ ಮೂಲ ರೂಪ.
ಎ) ಧಾತು ಬಿ) ಸಾಧಿತ ಧಾತು ಸಿ) ಸಂಭಾವನಾರ್ಥಕ ಡಿ) ನಿಷೇಧಾರ್ಥಕ

೨೪) ‘ಓದು’ಈ ಪದದ ವಿದ್ಯಾರ್ಥಕ.
ಎ) ಓದಲಿ ಬಿ) ಓದು ಸಿ) ಓದಾನು ಡಿ) ಓದಿಯಾನು

೨೫) ‘ಓದಿಯಾರು’ ಈ ಕ್ರಿಯಾಪದ ಈ ರೂಪದಲ್ಲಿದೆ.
ಎ) ನಿಷೇಧಾರ್ಥಕ ಬಿ) ಸಂಭಾವನಾರ್ಥಕ ಸಿ) ವಿದ್ಯರ್ಥಕ ಡಿ) ಆತ್ಮಾರ್ಥಕ

೨೬) ‘ನೋಡು’ ಧಾತುವಿನ ಸಂಭಾವನಾರ್ಥಕ ರೂಪವಿದು.
ಎ) ನೋಡಲಿ ಬಿ) ನೋಡಿಯಾನು ಸಿ) ನೋಡನು ಡಿ) ನೋಡುವುನು

೨೭)“ತಜ್ಞರು ಬಹಳಷ್ಟು  ಪುಸ್ತಕಗಳನ್ನು  ಓದಲಿ” ಈ ವಾಕ್ಯದಲ್ಲಿರುವ ಕ್ರಿಯಾ ಪದದ  ಈ ರೂಪದಲ್ಲಿದೆ.
ಎ) ಸಂಭಾವನಾರ್ಥಕ ಬಿ) ವಿದ್ಯರ್ಥಕ ಸಿ) ನಿಷೇಧಾರ್ಥಕ ಡಿ) ಆತ್ಮಾರ್ಥಕ

೨೮)“ನನ್ನ ಬಳಿ ಅವನ ಆಟ ನಡೆಯದು” ಈ ವಾಕ್ಯದಲ್ಲಿ ಗೆರೆ ಎಳೆದ ಪದದಸಂಭಾವನಾರ್ಥಕ ರೂಪ.
ಎ) ನಡೆದೀತು ಬಿ) ನಡೆಯಲಿ ಸಿ) ನಡೆದಾನು ಡಿ) ನಡೇಯಲಿಲ್ಲ

೨೯) “ಅವನು ತಪ್ಪು ಮಾಡಿಯಾನು” ಈ ವಾಕ್ಯದಲ್ಲಿರುವ ಕ್ರಿಯಾ ರೂಪವು 
ಎ) ಸಂಭಾವನಾರ್ಥಕ ಬಿ) ನಿಷೇಧಾರ್ಥಕ ಸಿ) ವಿದ್ಯರ್ಥಕ ಡಿ) ಆತ್ಮಾರ್ಥಕ

ಉತ್ತರಗಳು :

೧]ಅ ೨]ಇ ೩]ಅ ೪]ಆ ೫]ಅ ೬]ಆ ೭]ಇ ೮]ಅ ೯]ಇ ೧೦]ಈ ೧೧]ಇ ೧೨]ಇ ೧೩]ಅ
೧೪.ಬಿ, ೧೫.ಎ, ೧೬.ಡಿ, ೧೭.ಎ, ೧೮.ಎ, ೧೯.ಬಿ, ೨೦.ಎ,
೨೧ಎ , ೨೨.ಎ, ೨೩.ಎ, ೨೪.ಎ, ೨೫.ಬಿ, ೨೬.ಬಿ, ೨೭.ಬಿ,
೨೮.ಎ, ೨೯.ಎ,

Sankalpa geethe mcq question answers

ಸಂಕಲ್ಪ ಗೀತೆ ವಿಶೇಷ ಬಹು ಆಯ್ಕೆ ಪ್ರಶ್ನೆಗಳು

೧) ಇವುಗಳಲ್ಲಿ ಕರ್ಮಕಾರಕ ಯಾವುದು?
ಎ) ಪ್ರಥಮ  ಬಿ) ದ್ವಿತೀಯ ವಿಭಕ್ತಿ  ಸಿ) ತೃತೀಯ ವಿಭಕ್ತಿ  ಡಿ) ಚತುರ್ಥಿ

೨) ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಯಾವುದು?
ಎ)ಅಂ     ಬಿ) ಅತ್ತಣಿಂ
ಸಿ) ಒಳ್    ಡಿ) ಇಂ

೩) ಷಷ್ಠಿ ವಿಭಕ್ತಿಯು  ಕಾರಕರ್ಥ .
ಎ) ಕರ್ತೃ ಬಿ) ಕರ್ಮ ಸಿ) ಅಧಿಕರಣ  ಡಿ) ಸಂಬಂಧ

೪) ಹಳೆಗನ್ನಡ ದ್ವಿತೀಯ ವಿಭಕ್ತಿ ಪ್ರತ್ಯಯ.
ಎ) ಇಂ ಬಿ) ಅಂ ಸಿ) ಮ್ ಡಿ) ಅತ್ತಣಂ

೫) ಹಳೆಗನ್ನಡದ ತೃತೀಯ ವಿಭಕ್ತಿ.
ಎ) ಮ್ ಬಿ) ಒಳ್ ಸಿ) ಇಂ ದೆಡಿ) ಅತ್ತಣಿಂ / ಅತ್ತಣಿಂದು

೬) ‘ಬಿದ್ದುದನ್ನು  ಈ ಪದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ದ್ವಿತೀಯ ಬಿ) ತೃತೀಯ ಸಿ) ಪಂಚಮಿ ಡಿ) ಸಪ್ತಮಿ

೭) ‘ದೆಸೆಯಿಂದ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ಪಂಚಮಿ ಬಿ) ತೃತೀಯ ಸಿ) ಸಪ್ತಮಿ ಡಿ) ಚತುರ್ಥಿ

೮) ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಯಾವುದು.
ಎ) ಅಂ ಬಿ) ಮ್ ಸಿ) ಒಳ್ ಡಿ) ಅತ್ತಣಿಂ

೯) ‘ಬಿರುಗಾಳಿಗೆ ಹೊಯ್ದಾಡುವ ಹಡಗನು’. ಈ ವಾಕ್ಯದಲ್ಲಿರುವ ಚತುರ್ಥೀ ವಿಭಕ್ತಿ ಪ್ರತ್ಯಯ.
ಎ) ಬಿರುಗಾಳಿಗೆ ಬಿ) ಹಡಗು ಸಿ) ಹಡಗನು ಡಿ) ಹೊಯ್ದಾಡು

೧೦) ಹಳೆಗನ್ನಡದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು?.
ಎ) ಅಂ ಬಿ) ಮ್ ಸಿ) ಬಳ್ ಡಿ) ಅತ್ತಣಿ೦

೧೧) ‘ಜಲಕ್ಕೆ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ಪ್ರಥಮ
ಬಿ) ದ್ವಿತೀಯ
ಸಿ) ಚತುರ್ಥಿ
ಡಿ) ಪಂಚಮಿ

೧೨) ಹಳೆಗನ್ನಡದಲ್ಲಿ ಪಂಚಮಿ ವಿಭಕ್ತಿ ಪ್ರತ್ಯಯ.
ಎ) ಅತ್ತಣಿಂ ಬಿ) ಇಂದ೦ ಸಿ) ಅಂ ಡಿ) ಒಳ್

೧೩) ‘ಮಹಾಶಯನಿಗೆ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ಪ್ರಥಮ
ಬಿ) ಚತುರ್ಥಿ
ಸಿ) ಷಷ್ಠಿ
ಡಿ) ಸಪ್ತಮಿ

೧೪) ಹಳೆಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ.
ಎ) ಮ್
ಬಿ) ಅ
ಸಿ) ಇಂದ೦
ಡಿ) ಅಂ

೧೫) ‘ಹಳ್ಳದಲಿ’ ಈ ಪದದಲ್ಲಿರುವ ವಿಭಕ್ತಿ  .
ಎ) ಸಪ್ತಮಿ ಬಿ) ಷಷ್ಟಿ
ಸಿ) ದ್ವಿತೀತಯ ಡಿ) ಪ್ರಥಮ  .

ಸೂಚನೆ: ಈ ವಿಧವಾಗಿ ಪ್ರಶ್ನೆಗಳು ಬರುತ್ತವೆ. ಪ್ರತಿಯೋಂದು ಪದವನ್ನು ವಿಭಿನ್ನವಾಗಿ ಯೋಚಿಸಿ

ಉತ್ತರಗಳು :
೧.ಬಿ, ೨.ಸಿ , ೩.ಡಿ, ೪.ಬಿ, ೫.ಸಿ, ೬.ಡಿ , ೭.ಎ, ೮.ಸಿ,
೯.ಎ, ೧೦.ಡಿ, ೧೧.ಸಿ, ೧೨.ಎ, ೧೩.ಬಿ, ೧೪.ಡಿ, ೧೫.ಎ

Sankalpa geethe notes

ಮೊದಲೆರೆಡು ಪದಗಳಿಗಿರುವ ಸಂದಂತೆ  ಮೂರನೆಯ ಪದಕ್ಕೆ ಸಂಬಧಿಸಿದ ಪದ ಬರೆಯಿರಿ

೧. ಸೇತುವೆಯಾಗೋಣ : ಸೇತುವೆ+ಆಗೋಣ :: ವಸಂತವಾಗುತ್ತಾ : ________
೨. ಕತ್ತಲೆಯೊಳಗೆ : ಆಗಮ  :: ಸೇತುವೆಯಾಗೋಣ : _________
೩. ಬಿರುಗಾಳಿ : ಆದೇಶ ಸಂಧಿ :: ವಸಂತವಾಗುತ : __________
೪. ನಿಲ್ಲಿಸು : ನಿಲ್ಲು :: ನಡೆಸು  : _________
೫. ಮುಟ್ಟೋಣ : ಮಟ್ಟು :: ಕಟ್ಟು : _______
೬. ಬಿದ್ದುದನ್ನು : ದ್ವಿತೀಯಾ :: ಜಲಕ್ಕೆ : ________
೭. ಪ್ರಥಮಾ : ಕರ್ತ್ರರ್ಥ :: ಷಷ್ಠೀ : ___________
೮. ಅಪಾದಾನ : ಪಂಚಮೀ :: ಕರಣಾರ್ಥ : __________
೯. ವಿಧ್ಯರ್ಥಕ : ತಿನ್ನಲಿ :: ನಿಷೇಧಾರ್ಥಕ : _________
೧೦. ನಿಲ್ಲಿಸು : ನಿಲ್ಲು :: ನಡೆಸು   : ………………………………………
೧೧. ಮುಟ್ಟೋಣ : ಮುಟ್ಟು :: ಕಟ್ಟುವುದು : ……………………………

ಉತ್ತರಗಳು :
೧. ವಸಂತ+ಆಗುತಾ ೨. ಆಗಮ ೩. ಆಗಮ ೪. ನಡೆ ೫. ಕಟ್ಟುವುದು ೬. ಚತುರ್ಥಿ ೭. ಸಂಬಂದ  ೮. ತೃತೀಯಾ ೯. ತಿನ್ನಲು ೧೦. ನಡೆ ೧೧. ಕಟ್ಟು

Sankalpa geethe poem sslc

ಪದ್ಯದ ಆಶಯ ಭಾವ

ಜೀವನದಲ್ಲಿ  ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಅಂದಕಾರದ ಬದುಕಿಗೆ ಪ್ರೀತಿ ಎಂಬ ಹಣತೆಯನ್ನು ಹಚ್ಚಬೇಕು.
ಜೀವನದಲ್ಲಿ  ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಟೆಯಿಂದ ಕ್ರಿಯಾಶೀಲರಾದಾಗ ಯಶಸ್ಸು
ಲಭಿಸುತ್ತದೆ.ಮನುಜರ ನಡುವೆ ಇರುವ ಧರ್ಮ,ಜಾತಿ,ಪಂಗಡ ಇತ್ಯಾದಿ ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ
ವರ್ಧಿಸುತ್ತದೆ. ¨ಭಯ  ಮತ್ತುಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ್ಯದ  ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆದೂರವಾಗುತ್ತದೆ ಎಂಬುದು ಜಿ.ಎಸ್.ಶಿವರುದ್ರಪ್ಪನವರ ಆಶಯವಾಗಿದೆ.ಜಿ.ಎಸ್.ಶಿವರುದ್ರಪ್ಪ ವಿರಚಿತ ‘ಎದೆತುಂಬಿಹಾಡಿದೆನು’ ಕವನ ಸಂಕಲನದಿಂದ  ‘ಸಂಕಲ್ಪಗೀತೆ’ ಎಂಬ ಭಾವಗೀತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.“ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತ್ತಿತ್ತು ಧೀರರ ದಂಡು” ಎಂಬ ವಾಕ್ಯಹಿಂದಿನ ತಲೆಮಾರಿನ ಯುವಕರಿಗಿದ್ದ ನೆಲೆಯನ್ನು ತಿಳಿಸುತ್ತಿದೆ.ಹೋಗಬೇಕಾದ ದಾರಿ ತಲುಪಬೇಕಾದ ಗುರಿ ಸ್ವಷ್ಟವಾಗಿದ್ದರೆ ಅರ್ಧ ಯಶಸ್ಸನ್ನು ಪಡೆದಂತೆ. “ಸ್ವಾತಂತ್ರ್ಯ  ನನ್ನ ಆಜನ್ಮಸಿದ್ಧ ಹಕ್ಕು” ಎಂದತಿಲಕರು  ,ಸ್ವಾತಂತ್ರ್ಯಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದುಕೊಂಡ ರಾಷ್ಟ್ರಪಿತ ಗಾಂಧೀಜಿ ಸಾಧಕರೆನಿಸಿಕೊಂಡರು. ಇತಿಹಾಸ ದಾಖಲಿಸುವುದು,ನೆನಪಿಸುವುದು  ಇಂತಹ ಸಾದಕರನ್ನು. ಸಾಧಕನು   ತಾನು ಕಂಡ ಕನಸನ್ನು  ಅದೆಷ್ಟೇ ತೊಡಕುಗಳು ಬಂದರೊ  ಅಡ್ಡಿಆತಂಕಗಳು  ಎದುರಾದರೂ ನನಸಾಗಿಸುತ್ತಾನೆ.ಹೀಗೆ ಸಂಕಲ್ಪದತ್ತ ದೃಢನಿರ್ಧಾರದಿಂದ ಕಾರ್ಯಶೀಲರಾದರೇ ಅಸಾಧ್ಯವಾದುದು ಯಾವುದೂ ಇಲ್ಲ.ದೃಢ ಸಂಕಲ್ಪದಿಂದ ಏನೇನನ್ನು ಸಾಧಿಸಬಹುದೆಂಬುದನ್ನು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ರು ‘ಸಂಕಲ್ಪಗೀತೆ’ಎಂಬ ಭಾವಗೀತೆಯಲ್ಲಿ ಸರಳವಾಗಿ  , ಸುಂದರವಾಗಿ  ಅಭಿವ್ಯಕ್ತಿಸಿದ್ದಾರೆ

Sslc Poem 1 Sankalpa Geete Poem Summary in Kannada

ಸಂಕಲ್ಪ ಗೀತೆ ಪದ್ಯ ಸಾರಾಂಶ ಕನ್ನಡ

ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ

ಭಾವಾರ್ಥ ಸಹಿತ ಸಾರಾಂಶ :ಈ ಪದ್ಯದಲ್ಲಿ ಎರಡು ಮುಖ್ಯ ತತ್ವಗಳನ್ನು ನೋಡಬಹುದು ಅವುಗಳೆಂದರೆ
೧) ಬೆಳಕಿನ ತತ್ವ  ೨) ಪ್ರೀತಿಯ ತತ್ವ .

ಜೀವನದದಲ್ಲಿ ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಅಂದಕಾರದ ಬದುಕಿಗೆ ಪ್ರೀತಿ ಎಂಬ ಹಣತೆಯನ್ನು ಹಚ್ಚಬೇಕು.
ಜೀವನದಲ್ಲಿ ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಟೆಯಿಂದ ಕ್ರಿಯಾಶೀಲರಾದಾಗ ಯಶಸ್ಸು
ಲಭಿಸುತ್ತದೆ ಎಂಬುದನ್ನು ಕವಿ ಜಿ.ಎಸ್.ಶಿವರುದ್ರನಪ್ಪವರು  ಹೇಳುತ್ತಾರೆ.

“ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ” ಅಂದರೆ ಇಲ್ಲಿ ಜಾತೀಯತೆ, ಮತ, ಭಾಷೆ, ಬಣ್ಣ, ಅಜ್ಞಾನ, ದ್ವೇಷ,ಅಸೂಯೆ,ಮೂಢನಂಬಿಕೆಗಳೆಂಬ  ಕತ್ತಲೆಯು ನಮ್ಮ ಸುತ್ತಲೂ ಕವಿದಿರುತ್ತದೆ, ಇದರಿಂದ ನಾವು ಅಂದಕಾರದಲ್ಲಿ ಮುಳುಗಿ ನಮ್ಮ ಜೀವನ ದುಸ್ತರವಾಗಿರುತ್ತದೆ.ಆದುದರಿಂದ ಆ ಕತ್ತಲೆಯನ್ನು ಓಡಿಸಲು ಬೆಳಕಿನ (ಅರಿವಿನ) ಅವಶ್ಯಕತೆಯಿದೆ. ಬೆಳಕನ್ನು  ಬೀರಲು ಪ್ರೀತಿಯಿಂದ ಹಣತೆಯನ್ನು ಹಚ್ಚಬೇಕಾಗಿದೆ ಎಂದು ಮೊದಲನೆಯ ಬೆಳಕಿನ ತತ್ವವನ್ನು ಸ್ಪಷ್ಟಪಡಿಸಬಹುದು.ಜ್ಞಾನದ ಹಣತೆಯನ್ನು ಹಚ್ಚಿ “ಬಿರುಗಾಳಿಗೆ ಸಿಕ್ಕು ಹೊಯ್ದಾಡುವಂತಹಹಡಗನ್ನು ಎಚ್ಚರಿಕೆಯಿಂದ ಮುಂದೆ ನಡೆಸಿ, ದಡವನ್ನು ಸೇರಿಸೋಣ.” ಅಂದದರೆ ಸಂಸಾರ ಸಾಗರದಲ್ಲಿ ಅಜ್ಞಾನದಿಂದ  ಬಿರುಗಾಳಿಗೆ ಹೊಯ್ದಾಡುತ್ತಾಎತ್ತೆತ್ತಲೋ ಸಾಗುತ್ತಿರುವ ಬಾಳನೌಕೆಯನ್ನು ಎಚ್ಚರಿಕೆಯಿಂದ ಗುರಿಯತ್ತ ನಡೆಸೋಣ ಎಂದು ತಮ್ಮ  ಎರಡನೆಯ  ಪ್ರೀತಿ ತತ್ವವನ್ನುಪ್ರತಿಪಾದಿಸಿದ್ದಾರೆ. ಜೀವನದಲ್ಲಿ  ಪ್ರೀತಿ ಎಂಬುದು ಬಹಳ ಮುಖ್ಯವಾದದ್ದು. ಯಾರಲ್ಲಿ ಪ್ರೀತಿ ಇರುತ್ತದೆಯೋ ಅಂತವರು  ಎಲ್ಲರಿಗೂ ಹಿತವಾಗಿರುತ್ತಾರೆ. ಆದ್ದರಿಂದ ಪರಸ್ಪರವಾಗಿ  ವಾತ್ಸಲ್ಯದಿಂದ ಪ್ರೀತಿಸಿ ನಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಬೇಕೆಂಬ ಮೌಲ್ಯವನ್ನುಪ್ರತಿಪಾದಿಸಿದ್ದಾರೆ.

ಕಲುಷಿತವಾದೀ ನದೀ ಜಲಗಳಿಗೆ
ಮುಂಗಾರಿನ ಮಳೆಯಾಗೋಣ
ಬರಡಾಗಿರವೀ ಕಾಡು ಮೇಡುಗಳ
ವಸಂತವಾಗುತ ಮುಟ್ಟೋಣ

ಭಾವಾರ್ಥ ಸಹಿತ ಸಾರಾಂಶ :

ಆಧುನಿಕ ಮಾನವನ ಹಸ್ತಕ್ಷೇಪದಿಂದ ಕಲುಷಿತವಾದ ನದಿಗಳ ಶುದ್ಧೀಕರಣ ಮಾಡಲು ¨ಭೋರ್ಗರೆಯುವ ಮುಂಗಾರಿನ ಮಳೆಯೇ ಬೇಕು. ಅಂದರೆ ಅಲ್ಲಲ್ಲಿ ನಿಂತ ಕಲುಷಿತ ನೀರು, ಕೊಚ್ಚೆಳನ್ನು ಕೊಚ್ಚಿ ತೆಗೆದು  ಶುದ್ಧೀಕರಿಸಬಹುದು. ಹಾಗೆಯೇ ಕಲ್ಮಶಗಳಿಂದ ಕೂಡಿದ ಮನುಷ್ಯರ ಮನಸಸ್ಸುಗಳನ್ನು  ಪ್ರೀತಿಯ ಮೂಲಕ ಹಸನಗೊ  ಳಿಸೋಣ ಎಂಬ ನಿಷ್ಕಲ್ಮಷ ಭಾವನೆಗಳು  ಬೇಕು ಎಂಬುದನ್ನು ಅಭಿವ್ಯಕ್ತಪಡಿಸಿದ್ದಾರೆ.

‘ಬರಬರಡಾಗಿರವಿ ಕಾಡುಮೇಡುಗಳ ವಸಂತವಾಗುತ ಮುಟ್ಟೋಣ ಅಂದರೆ ಆಧುನೀಕರಣ,ಜಾಗತೀಕರಣ  ,ಕೈಗಾರೀಕರಣ, ಡಾಂಬರೀಕರಣ  , ಯಾಂತ್ರೀಕರಣಗಳಿAದಾಗಿ  ಕಾಡುಗಳು ನಾಶವಾಗಿ  ಹಾಳುಬಿದ್ದಿರಿವ ಪರಿಸರ ಬರಡಾದ

ಮರುಭೂಮಿಯಂತಾಗಿದೆ.ಅಲ್ಲಿ ಗಿಡಮರಗಳನ್ನೂ  ಬೆಳೆಸುತ್ತ, ಬೆಳೆಸುವ ಅವಶ್ಯಕತೆಯನ್ನು  ಜನರಲ್ಲಿ  ಜಾಗೃತಗೊಳಿಸುವ ಕಾರ್ಯವನ್ನು  ಮಾಡೋಣಎನ್ನಬಹುದು. ಅಂದರೆ ನಾಗರೀಕತೆಯ ಬರಾಟೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ,ಅಂತಹ ಹೃದಯದಲ್ಲಿ ಮೌಲ್ಯಗಳೆಂಬ ಸಸಿಗಳನ್ನು ನೆಟ್ಟು,ಪ್ರೀತಿಯ ನೀರನ್ನು ಎರೆಯುತ್ತ ಬದುಕನ್ನು ಸಮೃದ್ಧವಾಗಿಸೋಣ ಎಂದು ಬದುಕು ಹಸನುಗೊಳಿಸುವ ಮೌಲ್ಯವನ್ನು ಕವಿಜಿ.ಎಸ್.ಶಿವರುದ್ರಪ್ಪನವರು ಹೇಳಿದ್ದಾರೆ.

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ.

ಭಾವಾರ್ಥ ಸಹಿತ ಸಾರಾಂಶ :ಇಂದಿನ  ದಿನಮಾನದಲ್ಲಿ ಸಾಕಷ್ಟು ಮನುಷ್ಯರಲ್ಲಿ ಮೌಲ್ಯಗಳು  ಕುಸಿದು ಹೋಗಿವೆ.ಮೌಲ್ಯಯುತ ಬದುಕು ಕಾಣದಾಗಿದೆ.
ಆದ್ದರಿಂದಕುಸಿದು ಹೋಗಿರುವ ಮೌಲ್ಯಗಳನ್ನು  ಮತ್ತೆ ಎಬ್ಬಿಸಿ ನಿಲ್ಲಿಸಬೇಕು, ಬಡತನ, ಅಜ್ಞಾಅಜ್ಞಾನ, ಮೂಢನಂಬಿಕೆ, ಧರ್ಮ, ಭಾಷೆ, ಜಾತಿಗಳಿಂದ
ಶೋಷಣೆಗೊಳಗಾದ ಜನರನ್ನು  ಎಲ್ಲರಂತೆ ಸಮಾನವಾಗಿ ಬದುಕಲು ಆಸರೆ ನೀಡಿ ಮೇಲೆ ತರಬೇಕು . ಅವರ ಮನಸ್ಸಿನಲ್ಲಿ ಪರಸ್ಫರ  ಹೊಂದಾಣಿಕೆಯಿಂದ ಬದುಕುವ, ನಾವೆಲ್ಲರೂ ಒಂದೇ ಎಂಬ ಭಾವನೆಗಳು  ಮೂಡುವಂತೆ ಹೊಸ ¨ಭರವಸೆಗಳನ್ನು  ಕಟ್ಟಿ ಕೊಡಬೇಕು. ಹಾಗೆಯೇ ಪ್ರಸ್ತುತ ದಿನಗಳಲ್ಲಿ ಧರ್ಮಾಂಧತೆ, ಜಾತಿಯತೆಯಿಂದ ಸಹಬಾಳ್ವೆ ವಿಘಟನೆಯಾಗುತ್ತಿದೆ. ಮನುಜರ ನಡುವೆ  ಇರುವ ಧರ್ಮ ,ಜಾತಿ,ಪಂಗಡ ಇತ್ಯಾದಿ¨ಬೇಧಭಾವಗಳನ್ನು  ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ ವರ್ಧಿಸುತ್ತದೆ. ಆದ್ದರಿಂದ ಮನುಷ್ಯರ ನಡುವೆ ಜಾತಿ, ಧರ್ಮ, ಭಾಷೆ,ವರ್ಣಗಳಿಂದ ಆವೃತವಾದ ಅಡ್ಡಗೋಡೆಗಳನ್ನು ಕೆಡವಿ  ಹಾಕಬೇಕು .ಸಂಕುಚಿತ ಮನೋಭಾವನೆಯನ್ನು  ಬಿಡಬೇಕು. ಬೇಧಭಾವನೆಗಳನ್ನು  ಹೋಗಲಾಡಿಸಿ ವಿಶ್ವದ ಜನರೆಲ್ಲರನ್ನು  ಒಂದಾಗಿಸುವ ಪ್ರೀತಿಯ, ಸ್ನೇಹದ ಸೇತುವೆಯನ್ನು ನಿರ್ಮಿಸೋಣವೆಂದು ವಿಶ್ವಕುಟುಂಬದ ಪರಿಕಲ್ಪನೆಯನ್ನು,ಸಮಾನತೆಯ ಮೌಲ್ಯವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರುಹೇಳಿದ್ದಾರೆ.

ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.

ಭಾವಾರ್ಥ ಸಹಿತ ಸಾರಾಂಶ : ಭಾರದಲ್ಲಿ ವಿವಿಧ ಮತಪಂಥಗಳಿದ್ದು  ಬೇರೆಬೇರೇ ರೀತಿಯ ಆಚರಣೆ , ಸಂಪ್ರದಾಯಗಳು ಇವೆ.ಆದರೂವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಭಾರತ .ಇಂತಹ ಮತಅಂಥಗಳೆಲ್ಲವೂ ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನುನೀಡಬಲ್ಲ, ಸನ್ಮಾರ್ಗಕ್ಕೇ  ಕರೆದುಕೊಂಡು  ಹೋಗುವ ಮಾರ್ಗಗಳೆಂದು ತಿಳಿಯಬೇಕು. ಅಸಮಾನತೆ, ¨ಭಯೋತ್ಪಾದಕತೆ, ಶೋಷಣೆ ಇತ್ಯಾದಿಗಳಿಂದ¨ಭಯ -ಭೀತಿಗೊಂಡು, ನಾಳಿನ ಬದುಕಿನ ಬಗ್ಗೆ ಸಂಶಯಗೊ೦ಡು, ಮಸುಕಾದ ಕಣ್ಣುಗಳಿಗೆ ನಿರಾಸೆ ಹೊಂದಿದ ಮನಸ್ಸುಗಳಿಗೆ ಮುಂದಿನ ಬದುಕಿಗೆ, ಉತ್ತಮ ಕನಸನ್ನು  ಅವರಲ್ಲಿ ಭಿತ್ತಿ, ಧೈರ್ಯ ನೀಡಬೇಕೆಂದು,¨ಭಯ  ಮತ್ತುಅನುಮಾನ ಆವರಿಸಿರುವ ಸಮಾಜವನ್ನು  ದೃಢನಿಷ್ಠೆಯಿಂದ ಸ್ವಾಸ್ಥ್ಯದ  ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ ಎಂದು ಸಮಾನತೆಯ ತತ್ವ ಮತ್ತು ಒಳ್ಳೆ ಬದುಕಿನ ಭರವಸೆ  ಬಗ್ಗೆಜಿ.ಎಸ್.ಶಿವರುದ್ರಪ್ಪನವರು  ಅರಿವು ಮೂಡಿಸಿದ್ದಾರೆ.

Sankalpa geethe kannada question answers

ಸಂಕಲ್ಪ ಗೀತೆ ಕನ್ನಡ ನೋಟ್ಸ್ ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು  ವಾಕ್ಯಗಳಲ್ಲಿ ಉತ್ತರಿಸಿ.

೧. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು ?

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲಿ  ಮುನ್ನಡೆಸಬೇಕು.

೨. ನದೀಜಲಗಳು ಏನಾಗಿವೆ ?

ನದಿಜಲಗಳು ಕಲುಷಿತವಾಗಿದೆ.

೩. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?

ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.

೪. ಕಾಡುಮೇಡುಗಳ ಸ್ಥಿತಿ ಹೇಗಿದೆ ?

ಕಾಡುಮೇಡುಗಳ ಸ್ಥಿತಿ ಬರಡಾಗಿದೆ.

೫. ಯಾವ ಎಚ್ಚರದೊಳು ಬದುಕಬೇಕಿದೆ ?

ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕಬೇಕಿದೆ.

ಹೆಚ್ಚುವರಿ ಪ್ರಶ್ನೋತ್ತರಗಳು

೬. ಸುತ್ತಲು ಕವಿಯುವ ಕತ್ತಲೆಯೊಳಗೆ ಎಂತಹ ಹಣತೆಯನ್ನು ಹಚ್ಚಬೇಕು ?

ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯನ್ನು ಹಚ್ಚಬೇಕು.

೭. ಕವಿ ಯಾವುದನ್ನು ಕೆಡವುತ ಸೇತುವೆಯಾಗಬೇಕೆಂದು ಹೇಳಿದ್ದಾರೆ ?

ಮನುಜರ ನಡುವಿನ ಅಡ್ಡಗೋಡೆಗಳನ್ನು ಕೆಡವುತ ಸೇತುವೆಯಾಗಬೇಕೆಂದಿದ್ದಾರೆ.

೮. ಬರಡಾಗಿರುವ ಕಾಡುಮೇಡುಗಳಿಗೆ ಏನಾಗಬೇಕೆಂದು ಕವಿ ಹೇಳಿದ್ದಾರೆ ?

ಬರಡಾಗಿರುವ ಕಾಡುಮೇಡುಗಳಿಗೆ ವಸಂತವಾಗಬೇಕೆಂದು  ಕವಿ ಹೇಳಿದ್ದಾರೆ ?

ಆ) ಸಂಕಲ್ಪ ಗೀತೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ ?

ನಮ್ಮ ಜೀವನವೆಂಬ  ಹಡಗಿನ  ಸುತ್ತ ಮುತ್ತಲು  ಕವಿದಿರುವ  ಅಜ್ಞಾನಯೆಂಬ  ಕತ್ತಲೆಯನ್ನು  ಹೋಗಲಾಡಿಸಲು ಪ್ರೀತಿಎಂಬ   ಅರಿವಿನ(ತಿಳುವಳಿಕೆಯ) ಹಣತೆಯನ್ನು ಹಚ್ಚಬೇಕು . ಸಂಸಾರ ಸಾಗರದಲ್ಲಿ ಅಜ್ಞಾನದಿಂದ  ಬಿರುಗಾಳಿಗೆ ಹೊಯ್ದಾಡುತ್ತಾ ಎತ್ತೆತ್ತಲೋ ಸಾಗುತ್ತಿರುವಬಾಳನೌಕೆಯನ್ನು ಜ್ಞಾನಎಂಬ
ಹಣತೆಯ ಮೂಲಕ ಎಚ್ಚರಿಕೆಯಿಂದ ಗುರಿಯತ್ತ ಮುನ್ನಡೆಸಬೇಕಿದೆ.

೨. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?

ಮುಂಗಾರಿನ ಮಳೆಯಾದಾಗ ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ವಸಂತನಕಾಲದ ಆಗಮನ ಬರಡಾಗಿರುವ ಕಾಡು ಮೇಡುಗಳಲ್ಲಿ  ಮರಗಿಡಗಳು ಸಮೃದ್ಧವಾಗಿ ಚಿಗುರಿ ಪ್ರಕೃತಿಗೆ ನವಚೈತನ್ಯದ  ರೀತಿಯಲ್ಲಿ ಮುಟ್ಟಬೇಕಾಗಿದೆ.

೩. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?

ಶೋಷಣೆಗೂಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ಭರವಸೆಗಳನ್ನು ಮೂಡಿಸಬೇಕು. ಭಾಷೆ, ಜಾತಿ, ಮತಧರ್ಮಗಳ ಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಅವುಗಳನ್ನು ಕೆಡವಬೇಕು. ಮನುಜ ಮನುಜರ ನಡುವೆ ಪ್ರೀತಿ, ಸ್ನೇಹ,ವಿಶ್ವಾಸದ ಸೇತುವೆಯಾಗಬೇಕಿದೆ.

೪. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?

ನಾಳಿನ ಕನಸನ್ನು ಬಿತ್ತಬೇಕಾದರೆ ಮತಪಂಥಗಳೆಲ್ಲವೂ  ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾನಕ್ಕೆ  ಕರೆದುಕೊಂಡು ಹೋಗುವ ಮಾರ್ಗಗಳೆಂದು ತಿಳಿದು ಎಚರಿ್ಚ ಕೆಯಲ್ಲಿ ನಾವು ಬದುಕಬೇಕು. ¨ಭಯ ಮತ್ತು ಸಂಶಯಗಳಿಂದ ಮಸುಕಾಗಿರುವಮನದ ಕಣ್ಣಿನಲ್ಲಿ ಭವಿಷ್ಯದ, ಕನಸ್ಸನ್ನು  ಬಿತ್ತುತ್ತ ಬದುಕು ನಡೆಸಬೇಕು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

೧. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ ?

ನಮ್ಮ ಜೀವನದಲ್ಲಿ  ಧನಾತ್ಮಕ ಭಾವನೆಯನ್ನು  , ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸ  ಸಂಕಲ್ಪ ನಿಷ್ಠೆಯಿಂದ  ಕ್ರಿಯಾಶೀಲರಾದಾಗ ಯಶಸ್ಸು  ಲಭಿಸುತ್ತದೆ. ನಮ್ಮ ಜೀವನಯೆಂಬ  ಹಡಗಿನ ಸುತ್ತಮುತ್ತಲು ಕವಿದಿರುವ ಅಜ್ಞಾನಯೆಂಬ  ಕತ್ತಲೆಯನ್ನುಹೋಗಲಾಡಿಸಲು ಪ್ರೀತಿಯೆಂಬ ಅರಿವಿನ(ತಿಳುವಳಿಕೆಯ)ಹಣತೆಯನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಅಜ್ಞಾನದಿಂದ  ಬಿರುಗಾಳಿಗೆ ಹೊಯ್ದಾಡುತ್ತಾ ಎತ್ತೆತ್ತಲೋ ಸಾಗುತ್ತಿರುವ ಬಾಳನೌಕೆಯನ್ನು ಜ್ಞಾನಯೆಂಬ  ಹಣತೆಯ ಮೂಲಕ ಎಚ್ಚರಿಕೆಯಿಂದಗುರಿಯತ್ತ ಮುನ್ನಡೆಸುವ ಸಂಕಲ್ಪಕೈಗೊಳ್ಳಬೇಕು .

ವಸಂತಕಾಲದ ಆಗಮನ ಬರಡಾಗಿರುವ ಕಾಡು-ಮೇಡುಗಳಲ್ಲಿ  ಮರಗಿಡಗಳು  ಸಮೃದ್ಧವಾಗಿ ಚಿಗುರಿ ಪ್ರಕೃತಿಗೆ ನವ್ಯಚೈತನ್ಯವನ್ನು ತಂದುಕೊಡುವ ಹಾಗೇಯೇ ಕಲುಷಿತವಾಗಿರುವ ಮನಸ್ಸುಗಳನ್ನು  ಹಸನುಗೊಳಿಸಬೇಕು.ಶೋಷಣೆಗೂಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ
¨ಭರವಸೆಗಳನ್ನು ಮೂಡಿಸಬೇಕು. ಭಾಷೆ, ಜಾತಿ, ಮತಧರ್ಮಗಳ ¨ಬೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ.ಅವುಗಳನ್ನು ಕೆಡವಿ, ಮನುಜ ಮನುಜರ ನಡುವೆ ಪ್ರೀತಿ, ಸ್ನೇಹ, ವಿಶ್ವಾ¸ಸದ  ಸೇತುವೆಯಾಗುವ ಸಂಕಲ್ಪ ಕೈಗೊಳ್ಳಬೇಕು.

ಮತಪಂಥಗಳೆಲ್ಲವೂ  ಸಾಧನೆಯ  ದಾರಿಗಳು, ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾನಕ್ಕೆ ಕರೆದುಕೊಂಡುಹೋಗುವ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು. ¨ಭಯ ಮತ್ತು ಸಂಶಯಗಳಿಂದ  ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಮಾಡುವ ಸಮಾಜವನ್ನು ಸ್ವಾಸ್ಥ್ಯದ  ನೆಲೆಯಾಗಿಸುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು ಎಂಬುದು ಕವಿಜಿ.ಎಸ್. ಶಿವರುದ್ರಪ್ಪ ಅವರ ಆಶಯವಾಗಿದೆ.

೨. ಸಂಕಲ್ಪ ಮತ್ತು ಅನುಷ್ಠಾನದ  ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.

ಜಾತೀಯತೆ, ಮತ, ಭಾಷೆ, ಬಣ್ಣ, ಅಜ್ಞಾನ, ಮೂಢನಂಬಿಕೆಗಳೆಂಬ  ಕತ್ತಲೆಯು ನಮ್ಮ ಸುತ್ತಲೂ ಕವಿದಿರುತ್ತದೆ, ಆ ಕತ್ತಲೆಯನ್ನು ಓಡಿಸಲು ಪ್ರೀತಿಯೆಂಬ ಅರಿವಿನ ಹಣತೆಯನ್ನು ಹಚ್ಚಬೇಕಾಗಿದೆ.ಅಜ್ಞಾನದಿಂದ ಬಿರುಗಾಳಿಗೆ ಹೊಯ್ದಾಡುತ್ತಾ ಎತ್ತೆತ್ತಲೋ ಸಾಗುತ್ತಿರುವ ಬಾಳನೌಕೆಯನ್ನು ಎಚ್ಚರಿಕೆಯಿಂದ ಗುರಿಯತ್ತ ನಡೆಸುವ ಸಂಕಲ್ಪದ ಅನುಷ್ಠಾನವಾಗಬೇಕು. ಆಧುನಿಕ ಮಾನವನ ಹಸ್ತಕ್ಷೇಪದಿಂದ ಕಲುಷಿತವಾದ ನದಿಗಳ
ಶುದ್ಧೀಕರಣ ಮಾಡಲು ಬೊರ್ರೆಯುವ ಮುಂಗಾರಿನ ಮಳೆಯೇ ಬೇಕು. ಹಾಗೆಯೇ ಕಲ್ಮಷಗಳಿಂದ ಕೂಡಿದ ಮನುಷ್ಯರ ಮನಸ್ಸುಗಳನ್ನು  ಪ್ರೀತಿಯ ಮೂಲಕ ಹಸನಗೊಳಿಸುವ ಸಂಕಲ್ಪ ಬೇಕು. ನಾಗರೀಕತೆಯ ಬರಾಟೆಯಲ್ಲಿ ಮೌಲ್ಯಗಳು   ಕುಸಿಯುತ್ತಿವೆ. ಆದ್ದರಿಂದ ಮೌಲ್ಯಗಳೆಂಬ  ಬ ಸಸಿಗಳನ್ನು  ನೆಟ್ಟು , ಪ್ರೀತಿಯ ನೀರನ್ನು ಎರೆಯುತ್ತ ಬದುಕನ್ನು ಸಮೃದ್ಧವಾಗಿಸುವ ಸಂಕಲ್ಪದ ಅನುಷ್ಠಾನವಾಗಬೇಕು.

ಬಡತನ, ಅಜ್ಞಾನ  ಮೂಢನಂಬಿಕೆ, ಧರ್ಮ , ಭಾಷೆ, ಜಾತಿಗಳಿಂದ ಶೋಷಣೆಗೊಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ಭರವಸೆಗಳನ್ನು  ಕಟ್ಟಿ ಕೊಡಬೇಕು. ಹಾಗೆಯೇ ಮನುಷ್ಯರ ನಡುವೆ ಜಾತಿ, ಧರ್ಮ , ಭಾಷೆ, ವರ್ಣಗಳಿಂದ ಆವೃತವಾದ ಅಡ್ಡ ಗೋಡೆಗಳನ್ನು  ಕೆಡವಿಎಲ್ಲರನ್ನು ಒಂದಾಗಿಸುವ ಪ್ರೀತಿಯ, ಸ್ನೇಹ್ನದ ಸೇತುವೆಯನ್ನು ನಿರ್ಮಿಸುವ ಸಂಕಲ್ಪವನ್ನು ಅನುಷ್ಠಾನಗೋಳಿಸಬೇಕು. ಮತಗಳೆಲ್ಲವೂ ನಮ್ಮ ಉತ್ತಮ ಜೀವನಕ್ಕೆ ದಾರಿದೀಪಗಳು ಎಂಬುದನ್ನು  ಅನುಷ್ಠಾನಗೊಳಿಸಬೇಕು. ಅಸಮಾನತೆ, ಶೋಷಣೆ ಇತ್ಯಾದಿಗಳಿಂದ ¨ಭಯ-ಭೀತಿಗೊಂಡು,ನಾಳಿನ ಬದುಕಿನ ಬಗ್ಗೆ ಸಂಶಯಗೊಂಡು , ಮಸುಕಾದಕಾದ ಕಣ್ಣುಗಳಿಗೆ ಉತ್ತಮ ಕನಸನ್ನು  ಅವರಲ್ಲಿ ಬಿತ್ತಿ, ಧೈರ್ಯ ನೀಡುವ ಸಂಕಲ್ಪಗಳು ಅನುಷ್ಠಾನಗೊಂಡಾಗ ನಮ್ಮ ಸಮಾಜ ಸ್ವಾಸ್ತ್ಯವಾಗಿರುತ್ತದೆ ಎಂದು ಕವಿ ಶ್ರೀ ಜಿ. ಎಸ್.ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನವನ್ನು ಕುರಿತು ತಮ್ಮ  ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಪ್ರೀತಿಯ ಹಣತೆಯ ಹಚ್ಚೋಣ.”

ಆಯ್ಕೆ :- ಈ ವಾಕ್ಯವನ್ನು  ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕವನ ಸಂಕಲನದಿಂದ  ಆಯ್ದ ‘ಸಂಕಲ್ಪಗೀತೆ ’ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ :- ಕವಿ  ಜಿ.ಎಸ್.ಶಿವರುದ್ರಪ್ಪನವರು ಜಾತೀಯತೆ,ಮತ, ಭಾಷೆ, ಬಣ್ಣ, ಅಜ್ಞಾನ, ಅಂದಕಾರ,ಮೂಡನಂಬಿಕೆಗಳೆಂಬ ಕತ್ತಲೆಯನ್ನು ಓಡಿಸಲು ಪ್ರೀತಿಯೆಂಬ ಅರಿವಿನ ಹಣತೆಯನ್ನು ಹಚ್ಚಬೇಕಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ :- ನಮ್ಮ ಜೀವನದಲ್ಲಿ ಅಜ್ಞಾನ ಅಂದಕಾರವನ್ನು ಹೋಗಲಾಡಿಸಲು ಪ್ರೀತಿಯೆಂಬ ಅರಿವಿನ ದೀಪವನ್ನು ಬೆಳಗಿಸುವ ಸಂಕಲ್ಪ
ಮಾಡಬೇಕೆಂಬ ತಮ್ಮ  ಭಾವನೆಯನ್ನು ಕವಿ ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.

೨. “ಮುಂಗಾರಿನ ಮಳೆಯಾಗೋಣ.”

ಆಯ್ಕೆ :- ಈ ವಾಕ್ಯವನ್ನು  ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕವನ ಸಂಕಲನದಿಂದ  ಆಯ್ದ ‘ಸಂಕಲ್ಪಗೀತೆ’ಎಂಬ  ಪದ್ಯದಿಂದ ಆರಿಸಲಾಗಿದೆ.
ಸಂದರ್ಭ :- ಮಾನವರ ದುರ್ವರ್ತನೆಯಿಂದ ಕಲುಷಿತವಾಗಿರುವ ನದೀಜಲಗಳ ಶುದ್ಧೀಕರಣ ಹೇಗಾಗಬೇಕೆಂಬ ಭಾವ ಕವಿಯ ಮನದಲ್ಲಿ ಮೂಡಿದಾಗ ಮುಂಗಾರಿನ ಮಳೆಯಾಗಿ ಕಲ್ಮಶಗಳನ್ನು ಕೊಚ್ಚಿಕೊಂಡು ಹೋಗಬೇಕು , ಬರಡಾಗಿರುವ ಕಾಡು-ಮೇಡುಗಳಿಗೆ ವಸಂತವಾಗಬೇಕೆಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ :- ಮುಂಗಾರಿನ ಮಳೆ ಕಲ್ಮಶಗಳನ್ನು ಕೊಚ್ಚಿಕೊಂಡು ಹೋದಂತೆ ಹೊಸಸಂಕಲ್ಪ ಜನರ ಮನದ ಕಲ್ಮಶಗಳನ್ನು  ಕಳೆದು ಬದುಕನ್ನು  ಸಮೃದ್ಧವಾಗಿಸಬೇಕು ಎಂದು ಕವಿ ಸ್ವಾರಸ್ಯಪೂರ್ಣವಾಗಿ ತಮ್ಮ  ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.

೩. “ಹೊಸ ಭರವಸೆಗಳ ಕಟ್ಟೋಣ.”

ಆಯ್ಕೆ :- ಈ ವಾಕ್ಯವನ್ನು  ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ಎಂಬ  ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಕುಸಿದು ಹೋಗಿರುವ ಮೌಲ್ಯಗಳನ್ನು  ಮತ್ತೆ ಎಬ್ಬಿಸಿ ನಿಲ್ಲಿಸಬೇಕು. ಬಡತನ, ಅಜ್ಞಾನದ  ಮೂಢನಂಬಿಕೆ, ಧರ್ಮ, ಭಾಷೆ, ಜಾತಿಗಳಿಂದ ಶೋಷಣೆಗೊಳಗಾದ ಜನರನ್ನು  ಎಲ್ಲರಂತೆ ಸಮಾನವಾಗಿ ಬದುಕಲು ಹೊಸ ಭರವಸೆಗಳನ್ನು ಕಟ್ಟಿ ಕೊಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ :- ಮೌಲ್ಯಗಳನ್ನು ಪುನರ್ ಸ್ಥಾಪಿಸುವ, ಹಾಗೂ ಶೋಷಿತರ ಬದುಕಿಗೆ ¨ಭರವಸೆ ತುಂಬುವ ಸಂಕಲ್ಪ ಬೇಕು ಎಂಬುದನ್ನು ಕವಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.

೪. “ಹೊಸ ಎಚ್ಚರದೊಳು ಬದುಕೋಣ.”

ಆಯ್ಕೆ :- ಈ ವಾಕ್ಯವನ್ನು  ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕವನ ಸಂಕಲನದಿ೦ದ ಆಯ್ದ ‘ಸಂಕಲ್ಪಗೀತೆ ಎಂಬ  ಪದ್ಯದಿಂದ ಆರಿಸಲಾಗಿದೆ.
ಸಂದರ್ಭ  :- ಬೇರೆ ಬೇರೆ ಮತಗಳ ನಡುವಿನ ಸಂಘರ್ಷಗಳ ಪರಿಣಾಮದ ಬಗ್ಗೆ ಕವಿಯ ಮನೋಭಾವದಲ್ಲಿ ಮೂಡಿದಾಗ ಅದಕ್ಕೆ  ಪರಿಹಾರೋತ್ತರವಾಗಿಮತಗಳೆಲ್ಲವೂ  ಸಾಧನೆಯ  ದಾರಿಗಳು, ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾನಕ್ಕೆ ಕರೆದುಕೊಂಡು ಹೋಗುವ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ಸಮಾಜದಜದಲ್ಲಿ ಶಾಂತಿ ಮತ್ತು ಐಕ್ಯತೆ ನೆಲೆಸಲು ಮತಗಳು  ಸಾದನೆಯ  ದಾರಿಗಳು ಎಂಬ ಎಚ್ಚರದಲ್ಲಿ  ಬದುಕಬೇಕೆಂಬ ಮೌಲ್ಯವನ್ನು ಕವಿ ಈ ವಾಕ್ಯದಲ್ಲಿ ಎತ್ತಿ ಹಿಡಿದಿದ್ದಾರೆ.

ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

೧.‘ಸಂಕಲ್ಪ ಗೀತೆ ಪದ್ಯವನ್ನು ಎದೆತುಂಬಿ ಹಾಡಿದೆನು ಕವನ ಸಂಕಲನದಿಂದ  ಆರಿಸಿಕೊಳ್ಳಲಾಗಿದೆ.

೨. ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ .
೩. ಜಿ.ಎಸ್.ಶಿವರುದ್ರಪ್ಪನವರು  ದಾವಣಗೆರೆ ಯಲ್ಲಿ ಸಮಾವೇಶಗೊಂಡ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿದ್ದರು.

೪. ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚರದೊಳು ಬದುಕೋಣ.
೫. ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ.

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.

ನಿಲ್ಲಿಸು, ನಡೆಸು, ಹಚ್ಚುವುದು, ಮುಟ್ಟೋಣ, ಕಟ್ಟುವುದು, ಆಗೋಣ.

ನಿಲ್ಲಿಸು-ನಿಲ್ಲುನಡೆಸು – ನಡೆಹಚ್ಚುವುದು – ಹಚ್ಚುಮುಟ್ಟೋಣಮುಟ್ಟು– ಕಟ್ಟುವುದು – ಕಟ್ಟುಆಗೋಣ -ಆಗು

೨. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ, ಬಿರುಗಾಳಿಗೆ, ಜಲಕ್ಕೆ, ಬಿದ್ದುದನ್ನು, ಭರವಸೆಗಳ

ಪದಗಳುವಿಭಕ್ತಿ ಪ್ರತ್ಯಯವಿಭಕ್ತಿ ಹೆಸರು
ಪ್ರೀತಿಯಷಷ್ಠಿ
ಬಿರುಗಾಳಿಗೆಗೆಚತುರ್ಥಿ
ಜಲಕ್ಕೆಕ್ಕೆಚತುರ್ಥಿ
ಬಿದ್ದುದನ್ನುಅನ್ನುದ್ವಿತೀಯ
ಭರವಸೆಗಳಷಷ್ಠಿ

೩.ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.

ಸಂಶಯದೊಳ್, ಜಲದಿಂ, ಮರದತ್ತಣಿ೦, ರಾಯಂಗೆ

ಪದಗಳುವಿಭಕ್ತಿ ಪ್ರತ್ಯಯವಿಭಕ್ತಿ ಹೆಸರು
ಸಂಶಯದೊಳ್ಒಳ್ಸಪ್ತಮಿ
ಜಲದಿ೦ಇ೦ತೃತೀಯ
ಮರದತ್ತಣಿ೦ಅತ್ತಣಿ೦ಪ೦ಚಮಿ
ರಾಯ೦ಗೆಗೆಚತುರ್ಥಿ

೪. ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.

ಹಾಡು, ನೋಡು, ಕಟ್ಟು, ಕೇಳು, ಓಡು, ಓದು, ಬರೆ.

ಧಾತುವಿದ್ಯರ್ಥಕ ರೂಫನಿಷೇಧಾರ್ಥಕ ರೂಪಸಂಭಾವನಾರ್ಥಕ ರೂಪ
ಹಾಡು ಹಾಡಲಿ/ಹಾಡಿರಿಹಾಡನು  /ಹಾಡಳು  /ಹಾಡರು/ಹಾಡದು ಹಾಡಿಯಾನು/ಹಾಡಿಯಾರು/ಹಾಡೀತು
ನೋಡು ನೋಡಲಿ/ನೋಡಿರಿನೋಡನು/ನೋಡಳು/ನೋಡರು  /ನೋಡಿಯಾನು/ನೋಡಿಯಾಳು/ನೋಡಿಯಾರು/ನೋಡೀತು
ನೋಡದು 
ಕಟ್ಟುಕಟ್ಟಲಿ/ಕಟ್ಟಿರಿಕಟ್ಟನು/ಕಟ್ಟಳು  /ಕಟ್ಟರು/ಕಟ್ಟದುಕಟ್ಟಯಾನು/ಕಟ್ಟಿಯಾಳು/ಕಟ್ಟಿಯಾರು/
ಕಟ್ಟೀತು
ಕೇಳುಕೇಳಲಿ/ಕೇಳಿರಿಕೇಳನು/ಕೇಳಳು/ಕೇಳರು  /ಕೇಳದು ಕೇಳಿಯಾನು/ಕೇಳಿಯಾಳು/ಕೇಳಿಯಾರು/ಕೇಳೀತು
ಓಡುಓಡಲಿ/ಓಡಿರಿಓಡನು/ಓಡಳು /ಓಡರು/ಓಡದುಓಡಿಯಾನು/ಓಡಿಯಾಳು/ಓಡಿಯಾರು/ಓಡೀತು
ಓದುಓದಲಿ/ಓದಿರಿಓದನು/ಓದಲು  /ಓದರು/ಓದದುಓದಿಯಾನು/ಓದಿಯಾಳು/ಓದಿಯಾರು/ಓದಿತು
ಬರೆಬರೆಯಲಿ/ಬರೆಯಿರಿಬರೆಯನು/ಬರೆಯಳು/ಬರೆಯರು/
ಬರೆಯದು
ಬರೆದಾನು/ಬರೆದಾಳು/ಬರೆದಾರು/ಬರೆದೀತು

ಚಟುವಟಿಕೆ

೧. ಕೊಟ್ಟಿರುವ ಪದ್ಯ ಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ

ಕಲುಷಿತವಾದೀ ನದೀ ಜಲಗಳಿಗೆ
ಮುಂಗಾರಿನ ಮಳೆಯಾಗೋಣ
ಬರಡಾಗಿರವೀ ಕಾಡು ಮೇಡುಗಳ
ವಸಂತವಾಗುತ ಮುಟ್ಟೋಣ
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.
10th standard kannada notes
(ಹತ್ತನೇ ಕನ್ನಡ ಗದ್ಯ ಭಾಗ )
No.ಗದ್ಯ ಪಾಠಗಳ ಹೆಸರುPDF ವೀಕ್ಷಿಸಿ
1ಶಬರಿDownload
2ಲಂಡನ್ ನಗರDownload
3ಶುಕನಾಸನ ಉಪದೇಶDownload
4ಭಾಗ್ಯಶಿಲ್ಪಿಗಳು ( ನಾಲ್ವಡಿ ಕೃಷ್ಣರಾಜ ಒಡೆಯರು.
ಸರ್ ಎಂ ವಿಶ್ವೇಶ್ವರಯ್ಯ)
Download
5ನಿಜವಾದ ಆದರ್ಶ ಪುರುಷ ಯಾರಾಗಬೇಕು?Download
6ಎದೆಗೆ ಬಿದ್ದ ಅಕ್ಷರDownload
7ಶ್ರೇಷ್ಠ ಭಾರತೀಯ ಚಿಂತನೆಗಳುDownload
8ವೃಕ್ಷಸಾಕ್ಷಿDownload
10th class kannada poem part
(10ನೇ ಕನ್ನಡ ಪದ್ಯ ಭಾಗ )
ಪದ್ಯ ಪಾಠಗಳ ಹೆಸರುPDF ವೀಕ್ಷಿಸಿ
1ಸಂಕಲ್ಪಗೀತೆDownload
2ಹಕ್ಕಿಹಾರುತಿದೆ ನೋಡಿದಿರಾDownload
3ಹಲಗಲಿಬೇಡರುDownload
4ಕೌರವೇಂದ್ರನ ಕೊಂದೆ ನೀನುDownload
5ಹಸುರುDownload
6ಛಲಮೆನೆ ಮೆಱೆವೆಂDownload
7ವೀರಲವDownload
8ಕೆಮ್ಮನೆ ಮೀಸೆವೊತ್ತನೆDownload
1ನೇ ಕನ್ನಡ ಪಠ್ಯಪೂರಕ ಅಧ್ಯಾಯಗಳು
 ಪಠ್ಯಪೂರಕ ಪಾಠಗಳ ಹೆಸರುPDF ವೀಕ್ಷಿಸಿ
1ಉದಾತ್ತ ಚಿಂತನೆಗಳುDownload
2ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರುDownload
3ಭಗತ್ ಸಿಂಗ್Download
4ವಸಂತ ಮುಖ ತೋರಲಿಲ್ಲDownload
5ಸ್ವದೇಶಿ ಸೂತ್ರದ ಸರಳ ಹಬ್ಬDownload
6ನಾನು ಪ್ರಾಸ ಬಿಟ್ಟ ಕಥೆDownload
7ತಾಯಿ ಭಾರತಿಯ ಅಮರಪುತ್ರರುDownload
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment