Swatantrottara Bharata Social Science Notes

10ನೇ ತರಗತಿ ಅಧ್ಯಾಯ -19 ಸ್ವಾತಂತ್ರ್ಯೋತ್ತರ ಭಾರತ ಸಮಾಜ ವಿಜ್ಞಾನ ನೋಟ್ಸ್‌‌, 10th Class Social Science Chapter 19 Notes Question Answer Mcq in Kannada Kseeb Solution For Class 10 Social Science History Chapter 19 Notes in Kannada Medium 2024 class 10 social science history chapter 19 notes std 10 Ss Ch 19 Class 10 History Chapter 19 Questions and Answers Mcq Pdf in Kannada

10th Swatantrottara Bharata Social Science Notes Question Answer

I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ,

1. ಕಂಪನಿಯ ಕೊನೆಯ ಗವರ್ನರ್ ಜನರಲ್‌ ಲಾರ್ಡ ಮೌಂಟ್ ಬ್ಯಾಟನ್ ಆಗಿದ್ದನು.

2. ಭಾರತದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್‌ ಆಗಿದ್ದರು.

3. ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು ಡಾ.ಬಾಬು ರಾಜೇಂದ್ರ ಪ್ರಸಾದ್

4. ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ 1963 ರಲ್ಲಿ ಸೇರಿತು

5. ರಾಜ್ಯ ಪುನರ್ವಿಂಗಡಣಾ ಕಾನೂನು 1956 ರಲ್ಲಿ ಜಾರಿಗೆ ಬಂದಿತು.

Sslc Social Science Chapter 19 Question Answer

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ,

1. ಬಾಂಗ್ಲಾ ವಿಮೋಚನಾ ಯುದ್ಧ ಯಾವಾಗ ನಡೆಯಿತು?

1971

2. ಮೈಸೂರು ಸರಕಾರ ಟಿಬೆಟಿಯನ್ ನಿರಾಶ್ರಿತರಿಗಾಗಿ ಸುಮಾರು 3000 ಎಕರೆಗಳ ಜಮೀನನ್ನು ಎಲ್ಲಿ ಮಂಜೂರು ಮಾಡಿತು?

ಮೈಸೂರು ಜಿಲ್ಲೆಯ ಬೈಲಕುಪ್ಪೆ

3. ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು ಯಾರು?

ಡಾ. ಬಾಬು ರಾಜೇಂದ್ರ ಪ್ರಸಾದ್

4. ಯಾವ ತಿದ್ದುಪಡಿ ತಂದು ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಎರಡು ಅಂಶಗಳನ್ನು 1976ರಲ್ಲಿ ಸೇರಿಸಲಾಯಿತು?

42ನೇ ತಿದ್ದುಪಡಿ

5. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ ಎಷ್ಟು ಸಂಸ್ಥಾನಗಳಿದ್ದವು?

562

6. ‘ಉಕ್ಕಿನ ಮನುಷ್ಯ’ ಎಂದು ಯಾರನ್ನು ಕರೆಯುವರು?

ವಲ್ಲಭಭಾಯಿ ಪಟೇಲ್

7.‌ ವಲ್ಲಭಭಾಯಿ ಪಟೇಲರನ್ನು ‘ಉಕ್ಕಿನ ಮನುಷ್ಯ’ ಎಂದು ಏಕೆ ಕರೆಯುವರು?

ಭಾರತದ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ಕಾರ್ಯಭಾರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರಿಂದ ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ’ ಎಂದು ಕರೆಯುವರು.

8. ಹೈದರಾಬಾದ್ ನಿಜಾಮನು ಭಾರತಕ್ಕೆ ಸೇರಲು ಏಕೆ ನಿರಾಕರಿಸಿದನು?

ಈತನು ಸ್ವತಂತ್ರವಾಗುಳಿಯುವ ಉದ್ದೇಶದಿಂದ ಭಾರತಕ್ಕೆ ಸೇರಲು ನಿರಾಕರಿಸಿದನು.

9. ಜುನಾಘಡ್ ನವಾಬನ ವಿರುದ್ಧ ಪ್ರಜೆಗಳು ಬೀದಿಗಳಿಯಲು ಕಾರಣವೇನು?

ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಛಿಸಿ ವಿಲೀನೀಕರಣ ಕಾನೂನಿಗೆ ಸಹಿ ಹಾಕಿದನು.

10. ಜಮ್ಮು-ಕಾಶ್ಮೀರಿನ ರಾಜನಾಗಿದ್ದವನು ಯಾರು?

ಹರಿಸಿಂಗ್

11. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯವ್ಯ ಪ್ರದೇಶವನ್ನು ಏನೆಂದು ಕರೆಯುವರು?

ಪಾಕ್ ಆಕ್ರಮಿತ ಪ್ರದೇಶ

12. ಪಾಂಡಿಚೇರಿ ಭಾರತಕ್ಕೆ ಯಾವಾಗ ಸೇರ್ಪಡೆಗೊಂಡಿತು?

1954

13. ಪಾಂಡಿಚೇರಿಯು ಯಾವಾಗ ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು?

1963

14. ವಿಶಾಲಾಂಧ್ರ ರಾಜ್ಯ ರಚಿಸಬೇಕೆಂದು 58 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದವರು ಯಾರು?

ಪೊಟ್ಟಿ ಶ್ರೀರಾಮುಲು

15. ರಾಜ್ಯ ಮನರ್ವಿಂಗಡಣಾ ಆಯೋಗವನ್ನು ಯಾವಾಗ ರಚಿಸಲಾಯಿತು?

1953

16. ರಾಜ್ಯ ಮುನರ್ವಿಂಗಡಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಯಾರು?

ಫಜಲ್ ಅಲಿ ಅಧ್ಯಕ್ಷರಾಗಿ ಕೆ.ಎಂ.ಫಣಿಕ್ಕರ್ ಮತ್ತು ಹೆಚ್‌.ಎನ್.ಕುಂಜ್ರು ಸದಸ್ಯರಾಗಿದ್ದರು

17. 1956ರ ರಾಜ್ಯ ಪುನರ್ವಿಂಗಡಣಾ ಕಾನೂನಿನ ಪ್ರಕಾರ ಅಂದು ದೇಶದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಚನೆಯಾದವು?

14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು

18. ವಿಶಾಲ ‘ಮೈಸೂರು ರಾಜ್ಯ’ವು ಯಾವಾಗ ಅಸ್ತಿತ್ವಕ್ಕೆ ಬಂದಿತು?

1956 ನವೆಂಬರ್

19, ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಯಾವಾಗ ಮರುನಾಮಕರಣ ಮಾಡಲಾಯಿತು?

1973

20. ಇಂದು ಭಾರತದಲ್ಲಿ ಒಟ್ಟು ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇವೆ?

ಇಂದು ಭಾರತದಲ್ಲಿ 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳು ಇವೆ.

21. ಕನ್ನಡ ಭಾಷಾ ಪ್ರದೇಶಗಳನ್ನು ಒಟ್ಟುಗೂಡಿಸುವ ಬೇಡಿಕೆಯಿಟ್ಟು ಯಾರ ನೇತೃತ್ವದಲ್ಲಿ ಚಳವಳಿ ನಡೆಯಿತು?

ಕನ್ನಡ ಭಾಷಾ ಪ್ರದೇಶಗಳನ್ನು ಒಟ್ಟುಗೂಡಿಸುವ ಬೇಡಿಕೆಯಿಟ್ಟು ‘ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು’ ನೇತೃತ್ವದಲ್ಲಿ ಚಳವಳಿ ನಡೆಯಿತು.

22. ಗೋವಾ ಭಾರತದ ಒಕ್ಕೂಟವನ್ನು ಯಾವಾಗ ಸೇರ್ಪಡೆಗೊಂಡಿತು?

1961

23. ಭಾರತದ ಒಕ್ಕೋಟವನ್ನು ಸೇರಲು ನಿರಾಕರಿಸಿದ ಸಂಸ್ಥಾನಗಳು ಯಾವುವು?

ಜುನಾಘಡ್, ಹೈದರಾಬಾದ್ ಮತ್ತು ಜಮ್ಮು ಕಾಶ್ಮೀರ

10th Class social Science Chapter 19 Notes

III. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಭಾರತವು ಸ್ವಾತಂತ್ರ್ಯಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾವುವು?

 • ದೇಶ ವಿಭಜನೆಯು ಹೊಸ ಸಂಕಟಗಳನ್ನು ಸೃಷ್ಟಿಸಿತು
 • ದೇಶಿ ಸಂಸ್ಥಾನಗಳ ವಿಲೀನೀಕರಣ ಬಹಳ ದೊಡ್ಡ ಸಮಸ್ಯೆಯಾಗಿತ್ತು.
 • ವಿಭಜನೆಯು ಭಾರತದ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಿತು.
 • ಭಾರತವು ತನ್ನ ಸಂವಿಧಾನವನ್ನು ಹೊಸದಾಗಿ ರೂಪಿಸಿಕೊಳ್ಳುವ ಮತ್ತೊಂದು ಸವಾಲಿತ್ತು • ಭಾರತವು ದೀರ್ಘ ಹೋರಾಟದ ಮೂಲಕ ಪಡೆದ ಸ್ವಾತಂತ್ರವನ್ನು ನೆರೆಯ ಶತ್ರುಗಳಿಂದ ಕಾಪಾಡಿಕೊಳ್ಳಬೇಕಾಗಿತ್ತು
 • ಸಮಾನತೆಯ ಆಶಯಗಳ ಅಡಿಯಲ್ಲಿ ಸಬಲೀಕರಣದ ಹೊಸ ಮಾರ್ಗವೊಂದನ್ನು ಕಂಡುಕೊಳ್ಳುವ ಅನಿವಾರ್ಯತೆ ಇತ್ತು

2. ನಿರಾಶ್ರಿತರ ಸಮಸ್ಯೆಯನ್ನು ದೇಶವು ಹೇಗೆ ಎದುರಿಸಿತು?

 • ದೇಶವಿಭಜನೆಯ ಕಾಲದಿಂದ ನಿರಾಶ್ರಿತರ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು.
 • ಅನೇಕ ಮಿಲಿಯನ್ ಜನರು ಭಾರತ ಮತ್ತು ಪಾಕಿಸ್ತಾನದ ನಡುವೆ ತಮ್ಮ ಮುಂದಿನ ಬದುಕಿನ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನಮಾಡಿದರು.
 • ತಮ್ಮ ತಮ್ಮ ಹುಟ್ಟಿ ಬೆಳೆದ ಊರುಗಳನ್ನು ಬಿಟ್ಟು ಅನೇಕರು ತಮ್ಮ ಧರ್ಮಿಯರೇ ಬಹುಸಂಖ್ಯಾತರಿರುವ ದೇಶದ ಕಡೆ ಮುಖಮಾಡಿದರು.
 • ಭಾರತಕ್ಕೆ ಬಂದ ನಿರಾಶ್ರಿತರ ಸಂಖ್ಯೆ 6 ಲಕ್ಷ ಮಿಲಿಯನ್,
 • ಪಶ್ಚಿಮ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಸಮಸ್ಯೆಗಳನ್ನು ಬಹುತೇಕ ಪರಿಹರಿಸಲಾಯಿತು.
 • ನೆಹರು ಅವರ ಕಾಲದಿಂದಲೇ ಟಿಬೆಟ್‌ ನಿಂದ ಅನೇಕ ಜನರು ನಿರಾಶ್ರಿತರಾಗಿ ಭಾರತಕ್ಕೆ ಬಂದಿದ್ದಾರೆ. ಅಂದಾಜಿನ ಪ್ರಕಾರ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಟಿಬೆಟಿಯನ್ ನಿರಾಶ್ರಿತರು ಭಾರತದಲ್ಲಿದ್ದಾರೆ.
 • ಮೈಸೂರು ಸರಕಾರ ಮೈಸೂರು ಜಿಲ್ಲೆಯ ಬೈಲಕುಪ್ಪೆ ಎಂಬಲ್ಲಿ ಟಿಬೆಟಿಯನ್ ನಿರಾಶ್ರಿತರಿಗಾಗಿ ಸುಮಾರು 3000 ಎಕರೆಗಳ ಜಮೀನನ್ನು ಮಂಜೂರು ಮಾಡಿತು

3. ಪಾಂಡಿಚೇರಿಯನ್ನು ಫ್ರೆಂಚರಿಂದ ವಿಮುಕ್ತಗೊಳಿಸಿದ ರೀತಿಯನ್ನು ವಿವರಿಸಿ

 • ಸ್ವಾತಂತ್ರ್ಯದ ನಂತರದಲ್ಲಿ ಫ್ರೆಂಚ್‌ರು ತಮ್ಮ ವಸಾಹತುಗಳಾದ ಪಾಂಡಿಚೇರಿ, ಕಾರೈಕಲ್, ಮಾಹ ಮತ್ತು ಚಂದ್ರನಗರಗಳ ಮೇಲಿನ ಹಿಡಿತವನ್ನು ಮುಂದುವರಿಸಿದ್ದರು.
 • ಇವು ಭಾರತಕ್ಕೆ ಸೇರಬೇಕೆಂದು ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ 1954ರಲ್ಲಿ ಈ ಪ್ರದೇಶಗಳು ಭಾರತಕ್ಕೆ ಸೇರ್ಪಡೆಗೊಂಡವು.
 • 1963ರಲ್ಲಿ ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು.

4. ಗೋವಾವನ್ನು ಪೋರ್ಚುಗೀಸರಿಂದ ಹೇಗೆ ಮುಕ್ತಗೊಳಿಸಲಾಯಿತು?

 • ಪೋರ್ಚುಗೀಸರ ವಸಾಹತುವಾಗಿ ಮುಂದುವರಿದ ಗೋವಾವನ್ನು, ಭಾರತಕ್ಕೆ ಸೇರಿಸಬೇಕೆಂದು ನಿರಂತರವಾದ ಚಳವಳಿ ನಡೆಯಿತು.
 • ಗೋವಾವನ್ನು ತೆರವುಗೊಳಿಸಬೇಕೆಂದು ಆದೇಶ ನೀಡಿದರೂ ಬಗ್ಗದ ಪೋರ್ಚುಗೀಸರು, ಆಫ್ರಿಕಾ ಮತ್ತು ಯುರೋಪಿನಿಂದ ಹೆಚ್ಚಿನ ಸೈನ್ಯವನ್ನು ತರಿಸಿಕೊಂಡು ಚಳವಳಿಯನ್ನು ದಮನ ಮಾಡಿ ಅಧಿಕಾರವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಿದರು.
 • ಭಾರತದ ವಿವಿಧ ಭಾಗಗಳಿಂದ ಸತ್ಯಾಗ್ರಹಿಗಳು ಬಂದು ಗೋವಾದಿಂದ ವಸಾಹತುಶಾಹಿಗಳು ತೊಲಗಬೇಕೆಂದು ವಿಮೋಚನಾ ಹೋರಾಟ ಪ್ರಾರಂಭಿಸಿದರು.
 • 1961ರಲ್ಲಿ ಭಾರತದ ಸೈನ್ಯ ಮಧ್ಯೆ ಪ್ರವೇಶಿಸಿ ಗೋವಾವನ್ನು ವಶಪಡಿಸಿಕೊಂಡಿತು.
 • ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ನಂತರ ರಾಜ್ಯವಾಯಿತು.

5. ಭಾಷಾವಾರು ಪ್ರಾಂತ್ಯಗಳ ವಿಂಗಡಣಾ ಕ್ರಮವನ್ನು ಕುರಿತು ಬರೆಯಿರಿ.

 • ದೇಶಾದ್ಯಂತ ಭಾಷಾವಾರು ರಾಜ್ಯಗಳನ್ನು ರಚಿಸಬೇಕೆಂಬ ಕೂಗು ತೀವ್ರವಾಗಿತ್ತು,
 • ವಿಶಾಲಾಂಧ್ರ ರಾಜ್ಯ ರಚಿಸಬೇಕೆಂದು ಆಂಧ್ರಮಹಾಸಭಾದ ನೇತೃತ್ವದಲ್ಲಿ ಪೊಟ್ಟಿ ಶ್ರೀರಾಮುಲು 58 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದ ನಂತರ ಈ ಬೇಡಿಕೆ ತೀವ್ರ ಸ್ವರೂಪವನ್ನು ಪಡೆಯಿತು.
 • ಇದರ ಪರಿಣಾಮವಾಗಿ ಮೊದಲ ಭಾಷಾವಾರು ರಾಜ್ಯವಾಗಿ 1953ರಲ್ಲಿ ಆಂಧ್ರಪ್ರದೇಶ ರಚನೆಯಾಯಿತು.
 • ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು.
 • ಇದರಲ್ಲಿ ಫಜಲ್ ಆಲಿ ಅಧ್ಯಕ್ಷರಾಗಿ ಕೆ.ಎಂ.ಫಣಿಕ್ಕರ್ ಮತ್ತು ಹೆಚ್.ಎನ್.ಕುಂಜ್ರು ಸದಸ್ಯರಾಗಿದ್ದರು.
 • ಈ ಆಯೋಗದ ವರದಿಯಂತೆ 1956ರಲ್ಲಿ ರಾಜ್ಯ ಪುನರ್ವಿಂಗಡಣಾ ಕಾನೂನು ಜಾರಿಗೆ ಬಂದಿತು.
 • ಈ ಕಾನೂನಿನ ಪ್ರಕಾರ ಅಂದು ದೇಶದಲ್ಲಿ 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ರಚನೆಯಾದವು.

6. ಬೇರೆಲ್ಲಾ ಸಂಸ್ಥಾನಗಳ ವಿಲೀನಕ್ಕಿಂತ ಕಾಶ್ಮೀರದ ವಿಲೀನವು ವಿಶಿಷ್ಟವಾಗಿದೆ.ಹೇಗೆ?

 • ಜಮ್ಮು-ಕಾಶ್ಮೀರಿನ ರಾಜನಾಗಿದ್ದ ಹರಿಸಿಂಗ್‌ನು ಸ್ವತಂತ್ರವಾಗುಳಿಯಲು ನಿರ್ಧರಿಸಿದ್ದನು.
 • ಜಮ್ಮು ಕಾಶ್ಮೀರವು ಭಾರತಕ್ಕೆ ಸೇರಿ ಬಿಡಬಹುದೆಂಬ ಆಂತಕದಿಂದ ಪಾಕಿಸ್ತಾನವು ಕಾಶ್ಮೀರ ಕಣಿವೆಯ ಮುಸ್ಲಿಂ ಬುಡಕಟ್ಟು ಜನರನ್ನು ದಾಳಿ ಮಾಡುವಂತೆ ಪ್ರಚೋದಿಸಿತು.
 • ಪಾಕಿಸ್ತಾನ ಸೇನೆಯ ಬೆಂಬಲಿತ ಪಠಾಣ ಬುಡಕಟ್ಟು ಜನಾಂಗವು ಭಾರತದ ಪ್ರದೇಶಕ್ಕೆ ನುಗ್ಗಲು ಪ್ರಯತ್ನಿಸಿ ಸಾಕಷ್ಟು ಪ್ರದೇಶವನ್ನು ಆಕ್ರಮಿಸಿತು.
 • ಭಾರತವು ಹರಿಸಿಂಗ್ ಭಾರತದ ಒಕ್ಕೂಟಕ್ಕೆ ಸೇರಲು ಸಮ್ಮತಿಸದೆ ಭಾರತೀಯ ಸೇನೆ ಅಲ್ಲಿಗೆ ಪ್ರವೇಶಿಸುವಂತಿರಲಿಲ್ಲ. ಆ ಸಂದರ್ಭದ ಗಂಭೀರತೆಯನ್ನು ಅರಿತ ರಾಜ ಹರಿಸಿಂಗನು ಭಾರತದಲ್ಲಿ
 • ಕಾಶ್ಮೀರವನ್ನು ವಿಲೀನಗೊಳಿಸಲು ಸಹಿಯನ್ನು ಹಾಕಿದನು.
 • ನಂತರ ಭಾರತ ಸೇನೆಯು ಪಾಕಿಸ್ತಾನ ಬೆಂಬಲಿತ ಪಡೆಯನ್ನು ಹಿಮ್ಮೆಟ್ಟಿಸಿತು. ಇದೇ ಸಂದಂರ್ಭದಲ್ಲಿ ಈ ವಿಷಯವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಲಾಯ್ತು.
 • ಆದರೆ, ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ವಶದಲ್ಲಿ ಉಳಿಯಿತು. ಇದರ ವಿರುದ್ಧ ಭಾರತವು ವಿಶ್ವಸಂಸ್ಥೆಗೆ ದೂರು ಸಲ್ಲಿಸಿತು.
 • ವಿಶ್ವಸಂಸ್ಥೆ ಕದನ ವಿರಾಮದ ಆದೇಶವನ್ನು ನೀಡಿತು.
 • ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯವ್ಯ ಪ್ರದೇಶವನ್ನು ‘ಪಾಕ್ ಆಕ್ರಮಿತ ಪ್ರದೇಶ’ವೆಂದು ಈಗಲೂ ಕರೆಯಲಾಗುತ್ತದೆ.

7. ಜುನಾಗಢ ಭಾರತದ ಒಕ್ಕೂಟವನ್ನು ಹೇಗೆ ಸೇರ್ಪಡೆಗೊಂಡಿತು?

 • ಜುನಾಗಢದ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಛಿಸಿ ವಿಲೀನೀಕರಣ ಕಾನೂನಿಗೆ ಸಹಿ ಹಾಕಿದನು.
 • ಆಗ ಪ್ರಜೆಗಳು ಆತನ ವಿರುದ್ಧ ಬೀದಿಗಿಳಿದರು.
 • ಇದನ್ನು ಎದುರಿಸಲಾಗದೆ ನವಾಬನು ರಾಜ್ಯ ಬಿಟ್ಟು ಪಲಾಯನ ಮಾಡಿದನು.
 • ಅಲ್ಲಿನ ದಿವಾನ ಭಾರತ ಸರ್ಕಾರಕ್ಕೆ ಮಾಡಿದ ಮನವಿಯನ್ನು ಆಧರಿಸಿ ಸೈನ್ಯವನ್ನು ಕಳುಹಿಸಿ, ಶಾಂತಿ ಸ್ಥಾಪನೆ ಮಾಡಲಾಯಿತು.
 • 1949ರಲ್ಲಿ ಜುನಾಘಡ್ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು.

8. ಹೈದರಾಬಾದ್ ಸಂಸ್ಥಾನವು ಭಾರತದ ಒಕ್ಕೂಟವನ್ನು ಹೇಗೆ ಸೇರ್ಪಡೆಗೊಂಡಿತು?

 • ಈ ಸಂಸ್ಥಾನವು ನಿಜಾಮನ ಅಧೀನದಲ್ಲಿತ್ತು.
 • ಈತನು ಸ್ವತಂತ್ರವಾಗುಳಿಯುವ ಉದ್ದೇಶದಿಂದ ಭಾರತಕ್ಕೆ ಸೇರಲು ನಿರಾಕರಿಸಿದನು.
 • ಇದೇ ಸಂದರ್ಭದಲ್ಲಿ ಕಮ್ಯುನಿಸ್ಟರ ನೇತೃತ್ವದಲ್ಲಿ ತೆಲಂಗಾಣ ರೈತರ ಸಶಸ್ತ್ರ ಹೋರಾಟವು ನಿಜಾಮ ಮತ್ತು ಜಮೀನ್ದಾರರ ವಿರುದ್ಧ ನಡೆಯುತ್ತಿತ್ತು.
 • ನಿಜಾಮನ ಕ್ರೂರ ಪಡೆಯಾದ ರಜಾಕರ ಬಗೆಗೆ ಜನತೆಯಲ್ಲಿ ವ್ಯಾಪಕ ಪ್ರತಿರೋಧವಿತ್ತು.
 • ಆಗ ಭಾರತ ಸರ್ಕಾರ ಸೈನ್ಯವನ್ನು ಕಳುಹಿಸಿ ನಿಜಾಮನನ್ನು ಸೋಲಿಸಿ ಹೈದರಾಬಾದ್ ಸಂಸ್ಥಾನವನ್ನು 1948ರಲ್ಲಿ ಭಾರತದೊಂದಿಗೆ ವಿಲೀನಗೊಳಿಸಲಾಯಿತು.
 • ಸರದಾರ ಪಟೇಲರು ದೃಢಮನಸ್ಸಿನಿಂದ ಈ ಬಿಕ್ಕಟ್ಟಿಗೆ ಪರಿಹಾರ ನೀಡಿದರು.
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment