WhatsApp Group Join Now
Telegram Group Join Now

10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ಭಗತ್‌ಸಿಂಗ್ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 10th Standard Kannada Bhagat Singh Question Answer Mcq Pdf Download in Kannada Medium Karnataka State Syllabus 2024, Kseeb Solutions For Class 10 Kannada Puraka Pata Chapter 3 Bhagat Singh Notes Bhagat Singh Notes in Kannada Pdf

Bhagat Singh Kannada Lesson Notes Pdf

ಪಠ್ಯಪೂರಕ ಅಧ್ಯಯನ -3

ಭಗತ್‌ಸಿಂಗ್

10th Kannada Medium Bhagat Singh Question Answer

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದು ನಡೆಯಿತು ? 

ಉತ್ತರ : ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಏಪ್ರಿಲ್ ೧೩ , ೧೯೧೯ ರಂದು ನಡೆಯಿತು . 

2. ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ ? 

ಉತ್ತರ : ಭಗತ್‌ಸಿಂಗ್ ತನ್ನ ಸಹೋದರಿಗೆ ಮಣ್ಣು ‘ ತ್ಯಾಗದ ಪ್ರತೀಕ ‘ ಎಂದು ತೋರಿಸುತ್ತಾನೆ .

3. ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ? 

ಉತ್ತರ : ಜಲಿಯನ್ ವಾಲಾಬಾಗ್‌ನಲ್ಲಿರುವ ಒಕ್ಕಣೆ ಹೀಗಿದೆ : “ ಏಪ್ರಿಲ್- ೧೩- ೧೯೧೯ ರಂದು ಬ್ರಿಟೀಷರ
ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ , ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ
ರಕ್ತದಿಂದ ಈ ಪ್ರದೇಶ ಪಾವನವಾಗಿದೆ . ” 

4. ಭಗತ್‌ಸಿಂಗ್‌ನ ಸಹಚರರು ಯಾರು ? 

ಉತ್ತರ : ಭಗತ್‌ಸಿಂಗ್‌ನ ಸಹಚರರು ಸುಖ್‌ದೇವ್ , ರಾಜ್‌ಗುರು ಹಾಗು ಭಟುಕೇಶ್ವರ ದತ್ತ 

5. ಭಗತ್‌ಸಿಂಗ್ ಹುತಾತ್ಮನಾದದ್ದು ಯಾವಾಗ ? 

ಉತ್ತರ : ಭಗತ್‌ಸಿಂಗ್‌ ೨೩ ಮಾರ್ಚ್ ೧೯೩೧ ರಂದು ೨೩ ನೆಯ ವಯಸ್ಸಿನಲ್ಲಿ ಹುತಾತ್ಮನಾದನು . 

ಹೆಚ್ಚುವರಿ ಪ್ರಶ್ನೆಗಳು

10th Class Kannada Bhagat Singh Question and Answer

6. ಬಾಲಕ ಭಗತ್‌ ಸಿಂಗ್‌ ಮನಸ್ಸಿನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿದ ಘಟನೆ ಯಾವುದು ? 

ಉತ್ತರ : ಬಾಲಕ ಭಗತ್‌ಸಿಂಗ್ ಮನಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಘಟನೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿತು .

 7. ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಯಾರು ? 

ಉತ್ತರ : ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ 

8. ಗುಂಡಿನ ಮಳೆಗರೆದು ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ಏನೆಂದು ಹೇಳಿಕೊಂಡನು ? ಎಂದು ಹೇಳಿಕೊಂಡನು . 

ಉತ್ತರ : ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ” ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ ” . 

9. ಬಾಲಕ ಭಗತ್‌ಸಿಂಗ್‌ ಊಟಮಾಡದೆ ಉಪವಾಸವಿದ್ದುದಕ್ಕೆ ಕಾರಣವೇನು ? 

ಉತ್ತರ : ಏಪ್ರಿಲ್ ೧೩ , ೧೯೧೯ ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ
ನಮನ ಸಲ್ಲಿಸಲು ಬಾಲಕ ಭಗತ್‌ಸಿಂಗ್ ಹೋಗಿದ್ದನು . ಆಗ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ .
ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ . ಜಲಿಯನ್ ವಾಲಾಬಾಗ್ ಘಟನೆ ಆತನ ಮನಸ್ಸಿನ ಮೇಲೆ
ತೀವ್ರವಾದ ಪರಿಣಾಮ ಬೀರಿತ್ತು . ಆದ್ದರಿಂದ ಅವನ ಸಹೋದರಿ ರಾತ್ರಿ ಎಂದಿನಂತೆ ಊಟಕ್ಕೆಬ್ಬಿಸಿದಾಗ ಅವನು ಒಲ್ಲೆನೆಂದು ಮುಖ ತಿರುಗಿಸಿದ .

 10. ಭಗತ್ ಸಿಂಗ್ ಮತ್ತು ಆತನ ಸಹಚರರಿಗೆ ಗಲ್ಲುಶಿಕ್ಷೆಯಾಗಲು ಕಾರಣವೇನು ? 

ಉತ್ತರ : ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ
ಬಾಲಕ ಭಗತ್‌ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ
ಸೇಡನ್ನು ತೀರಿಸಿಕೊಳ್ಳುತ್ತಾನೆ . ಇದರ ಫಲವಾಗಿ ಮರಣ ದಂಡನೆಗೆ ಈಡಾದನು . 

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment