WhatsApp Group         Join Now
Telegram Group Join Now

10th ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮಗಳು ವಿಜ್ಞಾನ ನೋಟ್ಸ್

10ನೇ ತರಗತಿ ಅಧ್ಯಾಯ – 13 ವಿಜ್ಞಾನ ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮಗಳು ನೋಟ್ಸ್ ಪ್ರಶ್ನೋತ್ತರಗಳು,10th Class Science Chapter 13 Notes Question Answer Chapter 13 Class 10 Science Notes Kseeb Solution For Class 10 Chapter 13 Notes in Kannada Magnetic Effect Of Electric Current Class 10 Notes 2024

10th Class Science Chapter 13 Question Answer in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ದಂಡಾಕಾಂತವೊಂದರ ಬಳಿ ತಂದ ದಿಕ್ಸೂಚಿಯು ಏಕೆ ಪಲ್ಲಟಗೊಳ್ಳುತ್ತದೆ ?

ದಿಕ್ಸೂಚಿಯು ಒಂದು ಸಣ್ಣ ದಂಡಾಕಾಂತದಂತೆ ವರ್ತಿಸುತ್ತದೆ . ದಂಡಾಕಾಂತವನ್ನು ದಿಕ್ಸೂಚಿಯ ಸಮೀಪಕ್ಕೆ ತಂದಾಗ ಅದರ ಕಾಂತಕ್ಷೇತ್ರವು ದಂಡಾಕಾಂತದ ಕಾಂತಕ್ಷೇತ್ರದ ಜೊತೆ ಪ್ರತಿವರ್ತಿಸುತ್ತದೆ ಆದ್ದರಿಂದ ದಿಕೂಚಿಯನ್ನು ದಂಡಾಕಾಂತದ ಬಳಿ ತಂದಾಗ ಅದು ಪಲ್ಲಟಗೊಳ್ಳುತ್ತದೆ .

2.ದಂಡಾಕಾಂತದ ಸುತ್ತ ಕಾಂತೀಯ ಬಲರೇಖೆಗಳನ್ನು ಎಳೆಯಿರಿ .

10th Class science Chapter 13

Field Lines Around for Magnet

3. ಕಾಂತೀಯ ಬಲರೇಖೆಗಳ ಗುಣಗಳನ್ನು ಪಟ್ಟಿ ಮಾಡಿರಿ .

೧. ಕಾಂತೀಯ ಬಲರೇಖೆಗಳು ಉತ್ತರ ದ್ರುವದಿಂದ ಉತ್ಸರ್ಜಿತವಾಗುತ್ತವೆ . ೨. ಅವು ದಕ್ಷಿಣ ದ್ರುವದಲ್ಲಿ ವಿಲಿನಗೊಳ್ಳುತ್ತವೆ .

೩. ಕಾಂತೀಯ ಬಲರೇಖೆಗಳು ಕಾಂತದ ಒಳಭಾಗದಲ್ಲಿ ಕಾಂತದ ದಕ್ಷಿಣ ದ್ರುವದಿಂದ ಉತ್ತರ ದ್ರುವದೆಡೆಗೆ ಇರುತ್ತವೆ.

೪.ಯಾವುದೇ ಎರಡು ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ .

4.ಎರಡು ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ ಏಕೆ ?

ಒಂದು ವೇಳೆ ಕಾಂತೀಯ ಬಲರೇಖೆಗಳು ಛೇಧಿಸಿದರೆ ಛೇಧಿಸುವ ಬಿಂದುವಿನಲ್ಲಿ ದಿಕೂಚಿಯ ಸೂಜಿಯು ಎರಡೂ ದಿಕ್ಕುಗಳತ್ತ ನಿರ್ದೇಶಿಸುತ್ತಿದೆ ಎಂದರ್ಥ.ಆದರೆ ಅದು ಸಾಧ್ಯವಿಲ್ಲ .

5.ಮೇಜಿನ ಸಮತಲದ ಮೇಲಿರುವ ಒಂದು ವೃತ್ತಾಕಾರದ ವಾಹಕ ಸುರುಳಿಯನ್ನು ಪರಿಗಣಿಸಿ ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಪ್ರದಕ್ಷಿಣಾಕಾರವಾಗಿ ಪ್ರವಹಿಸುವಂತಿರಲಿ . ಬಲಗೈ ನಿಯಮ ಅನ್ವಯಿಸಿ ಸುರುಳಿಯ ಒಳಭಾಗ ಮತ್ತು ಹೊರಭಾಗದಲ್ಲಿ ಕಾಂತಕ್ಷೇತ್ರದ ದಿಕ್ಕನ್ನು ಕಂಡುಹಿಡಿಯಿರಿ

ವೃತ್ತಾಕಾರದ ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಕೆಳಮುಖವಾಗಿ ಹರಿಯುತ್ತಿರುವಾಗ , ಕಾಂತಕ್ಷೇತ್ರದ ದಿಕ್ಕು ಹೇಗಿರುತ್ತದೆ ಎಂದರೆ ಅವು ಮೇಜಿನಿಂದ ಉತ್ಸರ್ಜಿಸಿ ಸುರುಳಿಯ ಹೊರಭಾಗದಿಂದ ಒಳಭಾಗಕ್ಕೆ ಚಲಿಸುವಂತಿರುತ್ತದೆ . ಅದೇ ರೀತಿ ವಿದ್ಯುತ್ ಪ್ರವಾಹವು ಸುರುಳಿಯಲ್ಲಿ ಮೇಲ್ಮುಖವಾಗಿ ಹರಿಯುತ್ತಿರುವಾಗ , ಕಾಂತಕ್ಷೇತ್ರದ ದಿಕ್ಕು ಹೇಗಿರುತ್ತದೆ ಎಂದರೆ ಅವು ಮೇಜಿನಿಂದ ಉತ್ಸರ್ಜಿಸಿ ಸುರುಳಿಯ ಹೊರಭಾಗದಿಂದ ಒಳಭಾಗಕ್ಕೆ ಚಲಿಸುವಂತಿರುತ್ತದೆ.ಕೆಳಗಿನ ಚಿತ್ರದಲ್ಲಿ ಇದನ್ನು ಕಾಣಬಹುದಾಗಿದೆ

10th Class science Chapter 13

6.ಕೊಟ್ಟಿರುವ ಭಾಗದಲ್ಲಿ ಕಾಂತಕ್ಷೇತ್ರವು ಏಕರೂಪವಾಗಿದೆ . ಇದನ್ನು ಪ್ರತಿನಿಧಿಸುವ ಚಿತ್ರವನ್ನು ರಚಿಸಿರಿ .

10th Class science Chapter 13

7.ಸರಿಯಾದ ಆಯ್ಕೆಯನ್ನು ಆರಿಸಿರಿ . ವಿದ್ಯುತ್ ಪ್ರವಾಹವಿರುವ ಉದ್ದವಾದ ನೇರ ಸೊಲಿನಾಯ್ಡ್ ನ ಒಳಭಾಗದಲ್ಲಿನ ಕಾಂತಕ್ಷೇತ್ರವು ,

d ) ಎಲ್ಲಾ ಬಿಂದುಗಳಲ್ಲಿ ಸಮನಾಗಿರುತ್ತದೆ .

8.ಒಂದು ಪ್ರೋಟಾನ್ ಕಾಂತಕ್ಷೇತ್ರದಲ್ಲಿ ಸ್ವತಂತ್ರವಾಗಿ ಚಲಿಸುವಾಗ ಈ ಕೆಳಗಿನ ಯಾವ ಗುಣವು ಬದಲಾಗುತ್ತದೆ? (ಒಂದಕ್ಕಿಂತ ಹೆಚ್ಚು ಉತ್ತರಗಳು ಇರಬಹುದು )

c ) ವೇಗ

d ) ಸಂವೇಗ

9.ಚಟುವಟಿಕೆ 13.7 ರಲ್ಲಿ ಸಲಾಕೆ AB ಯ ಸ್ಥಾನಪಲ್ಲಟವು ಯಾವಾಗ ಭಾಧಿತಗೊಳ್ಳುತ್ತದೆ ಎಂದು ಯೋಚಿಸುವಿರಿ?

೧ ) ಸಲಾಕೆ AB ಯಲ್ಲಿ ವಿದ್ಯುತ್ ಪ್ರವಾಹವನ್ನು ಹೆಚ್ಚಿಸಿದಾಗ

೨ ) ಪ್ರಬಲವಾದ ಕುದುರೆ ಲಾಳ ಕಾಂತವನ್ನು ಬಳಸಿದಾಗ ಮತ್ತು

೩ ) ಸಲಾಕೆ AB ಯ ಉದ್ದವನ್ನು ಹೆಚ್ಚಿಸಿದಾಗ

10. ಪಶ್ಚಿಮಕ್ಕೆ ನಿಯೋಜಿತವಾದ ಧನಾತ್ಮಕ ಕಣ ( ಆಲ್ಫಾ ಕಣ ) ವು ಕಾಂತಕ್ಷೇತ್ರದಿಂದಾಗಿ ಉತ್ತರಕ್ಕೆ ಪಲ್ಲಟಗೊಂಡಿದೆ .ಆಗ ಕಾಂತಕ್ಷೇತ್ರದ ದಿಕ್ಕು .

d ) ಮೇಲ್ಮುಖವಾಗಿರುತ್ತದೆ .

11. ಪ್ಲೆಮಿಂಗ್‌ ನ ಎಡಗೈ ನಿಯಮ ತಿಳಿಸಿ .

ನಮ್ಮ ಎಡಗೈನ ಹೆಬ್ಬೆರಳು , ಮದ್ಯದ ಬೆರಳು ಮತ್ತು ತೋರುಬೆರಳನ್ನು ಪರಸ್ಪರ ಲಂಬವಾಗಿ ಹಿಡಿದಾಗ ಹೆಬ್ಬೆರಳು ಕಾಂತಕ್ಷೇತ್ರದ ಬಲದ ದಿಕ್ಕನ್ನು ಮದ್ಯದ ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನೂ , ಮತ್ತು ತೋರು ಬೆರಳು ಕಾಂತಕ್ಷೇತ್ರದ ದಿಕ್ಕನ್ನೂ ಸೂಚಿಸುತ್ತದೆ

12.ವಿದ್ಯುತ್ ಮೋಟಾರ್ ನ ತತ್ವವನ್ನು ತಿಳಿಸಿ ,

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮದ ತತ್ವದ ಮೇಲೆ ವಿದ್ಯುತ್ ಮೋಟಾರ್ ಕಾರ್ಯ ನಿರ್ವಹಿಸುತ್ತದೆ . ವಿದ್ಯುತ್ ಪ್ರವಹಿಸುತ್ತಿರುವ ಸುರುಳಿಯು ಬಲವನ್ನು ಅನುಭವಿಸುತ್ತದೆ ಮತ್ತು ಕಾಂತಕ್ಷೇತ್ರದಲ್ಲಿರಿಸಿದಾಗ ಅದು ತಿರುಗುತ್ತದೆ .

13.ವಿದ್ಯುತ್ ಮೋಟಾರ್ ನಲ್ಲಿರುವ ಒಡಕು ಉಂಗುರಗಳ ಪಾತ್ರವೇನು ?

ವಿದ್ಯುತ್ ಮೋಟಾರ್ ಗಳಲ್ಲಿ ಒಡಕು ಉಂಗುರಗಳು ದಿಕ್ಟರಿವರ್ತಕಗಳಾಗಿ ಕಾರ್ಯನಿರ್ವಹಿಸುತ್ತವೆ . ಒಂದು ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನವೇ ದಿಕ್ಷರಿವರ್ತಕ .

14.ಸುರುಳಿಯಲ್ಲಿ ವಿದ್ಯುತ್ ಪ್ರವಾಹವನ್ನು ಪ್ರೇರೇಪಿಸುವ ಬೇರೆ ಬೇರೆ ವಿಧಾನಗಳನ್ನು ವಿವರಿಸಿ ?

೧.ಸುರುಳಿಯನ್ನು ಕಾಂತದ ಎರಡೂ ದ್ರುವಗಳ ಮದ್ಯೆ ರಭಸವಾಗಿ ಚಲಿಸುವಂತೆ ಮಾಡಿದಾಗ ,

೨. ಕಾಂತವನ್ನು ಸುರುಳಿಯ ಒಳಕ್ಕ ಹೊರಗೂ ರಭಸವಾಗಿ ಚಲಿಸುವಂತೆ ಮಾಡಿದಾಗ , ಈ ಎರಡೂ ಸಂದರ್ಭಗಳಲ್ಲಿ ಸುರಳಿಯಲ್ಲಿ ವಿದ್ಯುತ್ ಪ್ರವಾಹವು ಪ್ರೇರಿತವಾಗುತ್ತದೆ .

15. ವಿದ್ಯುತ್ ಜನಕದ ತತ್ವವನ್ನು ತಿಳಿಸಿರಿ .

ವಿದ್ಯುತ್ ಕಾಂತೀಯ ಪ್ರೇರಣೆಯ ತತ್ವದ ಆಧಾರದ ಮೇಲೆ ವಿದ್ಯುತ್‌ ಜನಕ ಕಾರ್ಯ ನಿರ್ವಹಿಸುತ್ತದೆ . ವಾಹಕವನ್ನು ಕಾಂತಕ್ಷೇತ್ರದಲ್ಲಿ ಯಾಂತ್ರಿಕ ಶಕ್ತಿಯ ಸಹಾಯದಿಂದ ತಿರುಗುವಂತೆ ಮಾಡಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ .

16.ನೇರ ವಿದ್ಯುತ್ ಪ್ರವಾಹದ ಕೆಲವು ಆಕರಗಳನ್ನು ಹೆಸರಿಸಿ .

ಶುಷ್ಕ ಕೋಶ / ಬ್ಯಾಟರಿ , ನೇರ ವಿದ್ಯುತ್‌ ಜನಕ . ( ಡಿ.ಸಿ ಜನರೇಟರ್ )

17.ಯಾವ ಆಕರಗಳು ಪರ್ಯಾಯ ವಿದ್ಯುತ್ ಪ್ರವಾಹವನ್ನು ಉತ್ಪಾದಿಸುತ್ತವೆ ?

ಪರ್ಯಾಯ ವಿದ್ಯುತ್ ಜನಕ ( ಎ.ಸಿ ಜನರೇಟರ್ ) , ವಿದ್ಯುತ್ ಸ್ಥಾವರಗಳು .

18.ಸರಿಯಾದ ಆಯ್ಕೆಯನ್ನು ಆರಿಸಿ .

ತಾಮ್ರದ ಆಯತಾಕಾರದ ಸುರುಳಿಯನ್ನು ಕಾಂತಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಪ್ರತಿ ಬಾರಿ ಬದಲಾಗುವುದು

C ) ಅರ್ಧ ಸುತ್ತಿಗೆ .

19.ವಿದ್ಯುತ್ ಮಂಡಲಗಳಲ್ಲಿ ಮತ್ತು ಉಪಕರಣಗಳಲ್ಲಿ ಸಾಮಾನ್ಯವಾಗಿ ಬಳಸುವ ಯಾವುದಾದರೂ ಎರಡು ಸುರಕ್ಷಾ ಕ್ರಮಗಳನ್ನು ಹೆಸರಿಸಿ ,

೧. ) ವಿದ್ಯುತ್ ಮಂಡಲಗಳಿಗೆ ಪ್ಯೂಸ್ ಅಳವಡಿಸುವುದು . ಇದರಿಂದ ಮಂಡಲ ಹಾಗು ವಿದ್ಯುತ್ ಉಪಕರಣಗಳಿಗೆ ಓವರ್ ಲೋಡ್ ನಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ .

೨. ) ವಿದ್ಯುತ್‌ ಆಘಾತ ತಪ್ಪಿಸಲು ಭೂ ಸಂಪರ್ಕ ತಂತಿ ( ಅರ್ತಿಂಗ್ ) ಕಡ್ಡಾಯವಾಗಿ ಅಳವಡಿಸಬೇಕು .

20. 5 A ವಿದ್ಯುತ್ ರೇಟಿಂಗ್ ಹಾಗು 2kw ವಿದ್ಯುತ್ ಸಾಮರ್ಥ್ಯ ಹೊಂದಿರುವ ಒಂದು ಸೂಕ್ಷ್ಮ ತರಂಗ ಒಲೆಯನ್ನು ಗೃಹಬಳಕೆಯ ವಿದ್ಯುತ್ ಮಂಡಲದಲ್ಲಿ ( 220V ) ಬಳಸಿದೆ . ನೀವು ಯಾವ ಪರಿಣಾಮವನ್ನು ನಿರೀಕ್ಷಿಸುಏರಿ . ? ವಿವರಿಸಿ ,

ಸೂಕ್ಷ್ಮ ತರಂಗ ಒಲೆಯು ಬಳಸಿದ ವಿದ್ಯುತ್ ಪ್ರವಾಹವನ್ನು ಕೆಳಗಿನ ಸೂತ್ರದಿಂದ ತಿಳಿದುಕೊಳ್ಳಬಹುದು . P = VXI

ಇಲ್ಲಿ | ಎಂಬುದು ವಿದ್ಯುತ್ ಪ್ರವಾಹ ,

ಸೂಕ್ಷ್ಮ ತರಂಗ ಒಲೆಯ ಸಾಮರ್ಥ್ಯ P = 2kw = 2000w

ವಿಭವಾಂತರ V = 220v I = 2000 / 220-9.09A

ಆದ್ದರಿಂದ ಸೂಕ್ಷ್ಮತರಂಗ ಒಲೆಯು 9.09A ವಿದ್ಯುತ್ ಪ್ರವಾಹವನ್ನು ಬಳಸಿದೆ.ಮಂಡಲದ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯುತ್ ಪ್ರವಾಹ ಬಳಸಿದ ಕಾರಣ ಪ್ಯೂಸ್ ಸುಟ್ಟು ಹೋಗುತ್ತದೆ ಮತ್ತು ವಿದ್ಯುತ್ ಪ್ರಹಿಸುವುದಿಲ್ಲ .

21. ಗೃಹ ವಿದ್ಯುತ್ ಮಂಡಲಗಳಲ್ಲಿ ಉಂಟಾಗುವ ಓವರ್ ಲೋಡನ್ನು ತಪ್ಪಿಸಲು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ?

೧ ) ಒಂದೇ ಸಾಕೆಟಿಗೆ ಅನೇಕ ಉಪಕರಣಗಳನ್ನು ಜೋಡಿಸಬಾರದು .

೨ ) ಅನೇಕ ಉಪಕರಣಗಳನ್ನು ಒಟ್ಟಿಗೆ ಬಳಸಬಾರದು .

೩ ) ಸರಿಯಾಗಿ ಕಾರ್ಯನಿರ್ವಹಿಸದ ಉಪಕರಣಗಳನ್ನು ಬಳಸಲೇಬಾರದು .

೪ ) ಮಂಡಲದಲ್ಲಿ ಪ್ಯೂಸ್ ಸರಿಯಾಗಿ ಜೊಡಿಸಿರಬೇಕು .

೫ ) ಅಧಿಕ ಸಾಮರ್ಥ್ಯದ ಉಪಕರಣಗಳನ್ನು ಬಳಸಬಾರದು .

ಅಭ್ಯಾಸದ ಪ್ರಶ್ನೆಗಳು

Vidyut Pravahada Kantiya Parinamagalu Notes

1.ಈ ಕೆಳಗಿನವುಗಳಲ್ಲಿ ಯಾವುದು ಉದ್ದನೆಯ ನೇರ ತಂತಿಯ ಸುತ್ತಲಿನ ಕಾಂತಕ್ಷೇತ್ರವನ್ನು ಸರಿಯಾಗಿ ವಿವರಿಸುತ್ತದೆ .

d ) ತಂತಿಯು , ಕಾಂತಕ್ಷೇತ್ರದ ಏಕಕೇಂದ್ರೀಯ ಕಾಂತೀಯ ಬಲರೇಖೆಗಳ ಕೇಂದ್ರವಾಗಿರುತ್ತದೆ

2.ವಿದ್ಯುತ್ ಕಾಂತೀಯ ಪ್ರೇರಣೆಯ ವಿದ್ಯಮಾನವು ,

c ) ಕಾಂತ ಮತ್ತು ಸುರುಳಿಯ ನಡುವಿನ ಸಾಪೇಕ್ಷ ಚಲನೆಯಿಂದ ಮಂಡಲದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹವನ್ನು ಉತ್ಪಾದಿಸುವುದು .

3.ವಿದ್ಯುತ್ ಪ್ರವಾಹವನ್ನು ಉತ್ಪಾದಿಸಲು ಬಳಸುವ ಸಾಧನವನ್ನು ಹೀಗೆನ್ನುವರು ,

a ) ವಿದ್ಯುತ್ ಜನಕ .

4. ಪರ್ಯಾಯ ವಿದ್ಯುತ್ ಜನಕ ಮತ್ತು ನೇರ ವಿದ್ಯುತನಕಗಳ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ,

d ) ಪರ್ಯಾಯ ವಿದ್ಯುತ್ ಜನಕವು ಜಾರು ಉಂಗುರಗಳನ್ನು ಹೊಂದಿದೆ ಆದರೆ ನೇರ ವಿದ್ಯುತ್ ಜನಕವು ದಿಕ್ಷರಿವರ್ತಕವನ್ನು ಹೊಂದಿದೆ .

5. ಶಾರ್ಟ್ ಸರ್ಕಿಟ್ ಸಂದರ್ಭದಲ್ಲಿ , ಮಂಡಲದಲ್ಲಿನ ವಿದ್ಯುತ್ ಪ್ರವಾಹವು .

c ) ಬಹಳ ಹೆಚ್ಚಾಗುತ್ತದೆ .

6.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿಸಿ .

a ) ವಿದ್ಯುತ್ ಮೋಟಾರ್ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ – ತಪ್ಪು

b ) ವಿದ್ಯುತ್ ಜನಕವು ವಿದ್ಯುತ್ ಕಾಂತೀಯ ಪ್ರೇರಣೆಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ . – ಸರಿ

c ) ವಿದ್ಯುತ್ ಪ್ರವಾಹವನ್ನು ಸಾಗಿಸುತ್ತಿರುವ ದೀರ್ಘ ವೃತ್ತಾಕಾರದ ಸುರುಳಿಯ ಕೇಂದ್ರಭಾಗದಲ್ಲಿರುವ ಕಾಂತಕ್ಷೇತ್ರವು ಸಮಾನಾಂತರ ರೇಖೆಗಳಾಗಿರುತ್ತವೆ – ತಪ್ಪು .

d ) ಹಸಿರು ಬಣ್ಣದ ಅವಾಹಕ ವಸ್ತುವನ್ನು ಹೊಂದಿರುವ ತಂತಿಯು ಸಾಮಾನ್ಯವಾಗಿ ವಿದ್ಯುತ್ ಪೂರೈಕೆಯ ಸಜೀವ ತಂತಿಯಾಗಿರುತ್ತದೆ . – ತಪ್ಪು .

7.ಕಾಂತಕ್ಷೇತ್ರ ವನ್ನು ಉಂಟುಮಾಡುವ ಎರಡು ವಿಧಾನಗಳನ್ನು ಪಟ್ಟಿ ಮಾಡಿ

೧.ಶಾಶ್ವತ ಕಾಂತಗಳು

೨.ವಿದ್ಯುತ್ ಕಾಂತಗಳು .

8.ಒಂದು ಸೊಲೆನಾಲ್ಡ್ ಕಾಂತದಂತೆ ಹೇಗೆ ವರ್ತಿಸುತ್ತದೆ . ? ವಿದ್ಯುತ್ ಪ್ರವಹಿಸುತ್ತಿರುವ ಸೊಲೆನಾಯ್ಕ ನ ಉತ್ತರ ದ್ರುವ ಹಾಗು ದಕ್ಷಿಣ ದ್ರುವಗಳನ್ನು ಒಂದು ದಂಡಾಕಾಂತದ ಸಹಾಯದಿಂದ ನೀವು ನಿರ್ಧದಿಸಬಹುದೇ ? ವಿವರಿಸಿ .

ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್‌ ಆಕಾರವನ್ನು ಸೊಲೆನಾಯ್ಡ್ ಎನ್ನುವರು.ಸೊಲೆನಾಲ್ಡ್ ಮೂಲಕ ವಿದ್ಯುತ್ ಪ್ರವಾಹ ಹರಿಸಿದಾಗ ಅದರ ಸುತ್ತಲೂ ಕಾಂತೀಯ ಬಲರೇಖೆಗಳು ಉತ್ಪತ್ತಿಯಾಗುತ್ತದೆ.ಈ ಕಾಂತೀಯ ಬಲರೇಖೆಗಳು ದಂಡಾಕಾಂತದ ಸುತ್ತಲೂ ಉಂಟಾಗುವ ಕಾಂತೀಯ ಬಲರೇಖೆಗಳಂತೆ ಇರುತ್ತವೆ.ವಾಸ್ತವವಾಗಿ ಸೋಲೆನಾಯ್ಕ ನ ಒಂದು ತುದಿಯು ಕಾಂತದ ಉತ್ತರ ದ್ರುವದಂತೆ ವರ್ತಿಸಿದರೆ , ಮತ್ತೊಂದು ತುದಿಯು ದಕ್ಷಿಣ ದ್ರುವದಂತೆ ವರ್ತಿಸುತ್ತದೆ.ಇದನ್ನು ಒಂದು ದಂಡಾಕಾಂತದ ಸಹಾಯದಿಂದ ಪರೀಕ್ಷಿಸಬಹುದು.ದಂಡಾಕಾಂತದ ಉತ್ತರ ದ್ರುವವನ್ನು ಸೊಲೆನಾಯ್ಡ್ ಗೆ ಸಂಪರ್ಕಿಸಿರುವ ಬ್ಯಾಟರಿಯ ಋಣ ತುದಿಯ ತಂತಿಯ ಸಮೀಪಕ್ಕೆ ತಂದಾಗ ದಂಡಾಕಾಂತವು ವಿಕರ್ಷಿಸಲ್ಪಡುತ್ತದೆ . ಏಕೆಂದರೆ ಸಜಾತಿಯ ದ್ರುವಗಳು ಪರಸ್ಪರ ವಿರ್ಷಿಸುತ್ತವೆ.ಆದ್ದರಿಂದ ಸೊಲೆನಾಯ್ಕ ನ ಈ ತುದಿಯು ಉತ್ತರ ದ್ರುವವಾಗಿರುತ್ತದೆ . ಮತ್ತೊಂದು ತುದಿಯು ದಕ್ಷಿಣ ದ್ರುವವಾಗಿರುತ್ತದೆ .

10th Class Science Chapter 13 Notes

9. ವಿದ್ಯುತ್ ಪ್ರವಹಿಸುತ್ತಿರುವ ವಾಹಕವನ್ನು ಕಾಂತಕ್ಷೇತ್ರದಲ್ಲಿರಿಸಿದಾಗ ಅದು ಯಾವಾಗ ಅಧಿಕ ಬಲವನ್ನು ಅನುಭವಿಸುತ್ತದೆ ?

ವಿದ್ಯುತ್ ಪ್ರವಾಹದ ದಿಕ್ಕು ಕಾಂತಕ್ಷೇತ್ರದ ದಿಕ್ಕಿಗೆ ಲಂಬವಾಗಿದ್ದಾಗ ಅಧಿಕ ಬಲವನ್ನು ಅನುಭವಿಸುತ್ತದೆ .

10. ನಿಮ್ಮ ಬೆನ್ನು ಒಂದು ಗೋಡೆಯನ್ನು ಆಧರಿಸಿರುವಂತೆ ನೀವು ಒಂದು ಕೊಠಡಿಯಲ್ಲಿ ಕುಳಿತಿರುವಿರೆಂದು ಭಾವಿಸಿ.ಹಿಂದಿನ ಗೋಡೆಯಿಂದ ಮುಂದಿನ ಗೋಡೆಯ ಕಡೆಗೆ ಸಮಾಂತರವಾಗಿ ಬರುತ್ತಿರುವ ಇಲೆಕ್ಟ್ರಾನ್ ಪುಂಜವು ಪ್ರಬಲ ಕಾಂತಕ್ಷೇತ್ರದಿಂದ ನಿಮ್ಮ ಬಲ ಬದಿಗೆ ವಿಚಲನೆ ಹೊಂದುತ್ತವೆ ಹಾಗಾದರೆ ಕಾಂತಕ್ಷೇತ್ರದ ದಿಕ್ಕು ಯಾವುದು?

ಕಾಂತಕ್ಷೇತ್ರದ ದಿಕ್ಕನ್ನು ಫೆಮಿಂಗನ ಎಡಗೈ ನಿಯಮದ ಮೂಲಕ ತಿಳಿಯಬಹುದುಕೊಠಡಿಯೊಳಗಿರುವ ಕಾಂತಕ್ಷೇತ್ರದ ದಿಕ್ಕು ವಿದ್ಯುತ್ ಪ್ರವಾಹದ ದಿಕ್ಕಿಗೆ ಲಂಬವಾಗಿರುತ್ತದೆ ಮತ್ತು ವಿಚಲನೆಯ ದಿಕ್ಕಿನಲ್ಲಿ ಮೇಲ್ಮುಖ ಅಥವಾ ಕೆಳಮುಖವಾಗಿರುತ್ತದೆ . ವಿದ್ಯುತ್ ಪ್ರವಾಹದ ದಿಕ್ಕು ಮುಂದಿನ ಗೋಡೆಯ ಕಡೆಯಿಂದ ಹಿಂದಿನ ಗೋಡೆಯ ಕಡೆಗೆ ಇರುತ್ತದೆ.ಯಾಕೆಂದರೆ ಋಣ ವಿದ್ಯುದಾವೇಶವುಳ್ಳ ಇಲೆಕ್ಟ್ರಾನ್ ಗಳು ಹಿಂದಿನ ಗೋಡೆಯಿಂದ ಮುಂದಿನ ಗೋಡೆಯ ಕಡೆಗೆ ಚಲಿಸುತ್ತವೆ.ಆದ್ದರಿಂದ ಫೆಮಿಂಗನ ಎಡಗೈ ನಿಯಮದ ಅನ್ವಯ ಕೊಠಡಿಯೊಳಗಿನ ಕಾಂತಕ್ಷೇತ್ರದ ದಿಕ್ಕು ಕೆಳಮುಖವಾಗಿರುತ್ತದೆ .

11.ವಿದ್ಯುತ್ ಮೋಟಾರಿನ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿಇದರ ತತ್ವ ಮತ್ತು ಕಾರ್ಯವನ್ನು ವಿವರಿಸಿ ವಿದ್ಯುತ್ ಮೋಟಾರಿನಲ್ಲಿ ಒಡಕು ಉಂಗುರಗಳ ಕಾರ್ಯವೇನು ?

North pole South pole ವಿದ್ಯುತ್ ಮೋಟಾರ್ ಒಂದು ತಿರುಗುವ ಸಾಧನವಾಗಿದ್ದು , ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ .

10th Class science Chapter 13

ಇದು ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮದ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. (ಪಠ್ಯ ಪುಸ್ತಕದಲ್ಲಿರುವ ಚಿತ್ರದಲ್ಲಿರುವಂತೆ ಸುರುಳಿ ABCD ಯಲ್ಲಿನ ವಿದ್ಯುತ್ ಪ್ರವಾಹವು ವಿದ್ಯುತ್‌ ಕೋಶದಿಂದ ವಾಹಕಕುಂಚ X ನ ಮೂಲಕ ಪ್ರವೇಶಿಸಿ ಮತ್ತು ವಾಹಕಕುಂಚ Y ನ ಮೂಲಕ ವಿದ್ಯುತ್ ಕೋಶಕ್ಕೆ ವಾಪಾಸಾಗುತ್ತದೆ. ಸುರುಳಿಯ ಒಂದು ಬಾಹು AB ಯಲ್ಲಿ ವಿದ್ಯುತ್ A ಯಿಂದ B ಗೆ ಹರಿಯುತ್ತದೆ.CD ಬಾಹುವಿನಲ್ಲಿ C ಯಿಂದ D ಗೆ ಹರಿಯುತ್ತದೆ, ಅಂದರೆ ವಿದ್ಯುತ್ AB ಬಾಹುವಿನಲ್ಲಿನ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತದೆ. ಫೆಮಿಂಗನ ಎಡಗೈ ನಿಯಮವನ್ನು ಅನ್ವಯಿಸಿದಾಗ ಕಾಂತಕ್ಷೇತ್ರದಲ್ಲಿ ವಿದ್ಯುತ್‌ ಪ್ರವಹಿಸುತ್ತಿರುವ ವಾಹಕದ ಮೇಲೆ ಉಂಟಾಗುವ ಬಲದ ದಿಕ್ಕು ತಿಳಿಯುತ್ತದೆ.

ಸುರುಳಿಯ ಒಂದು ಬಾಹು AB ಯ ಮೇಲೆ ಕಾರ್ಯನಿರ್ವಹಿಸುವ ಬಲವು ಅದನ್ನು ಕೆಳಕ್ಕೆ ತಳ್ಳುತ್ತದೆ. ಆದರೆ ಬಾಹು CD ಯ ಮೇಲೆ ಉಂಟಾಗುವ ಬಲವು ಅದನ್ನು ಮೇಲಕ್ಕೆ ತಳ್ಳುತ್ತದೆ.ಆದ್ದರಿಂದ ಸುರುಳಿ ಮತ್ತು ದಂಡ O ಗಳು ಅಕ್ಷದ ಮೇಲೆ ಮುಕ್ತವಾಗಿ ಅಪ್ರದಕ್ಷಿಣಾಕಾರವಾಗಿ ತಿರುಗುತ್ತವೆ ಅರ್ಧ ಪರಿಭ್ರಮಣೆಯ ಸಮಯದಲ್ಲಿ Q ಯು ಕುಂಚ X ನೊಂದಿಗೆ ಮತ್ತು P ಯು ಕುಂಚ Y ನೊಂದಿಗೆ ಸಂಪರ್ಕ ಹೊಂದುತ್ತದೆ.ಆದ್ದರಿಂದ ಸುರುಳಿಯಲ್ಲಿನ ವಿದ್ಯುತ್‌ ಪ್ರವಾಹ ಹಿಮ್ಮುಖಗೊಳ್ಳುತ್ತದೆ, ಮತ್ತು DCBA ಮಾರ್ಗದಲ್ಲಿ ಪ್ರವಹಿಸುತ್ತದೆ.ಹಿಮ್ಮುಖವಾದ ವಿದ್ಯುತ್ ಪ್ರವಾಹವು ಎರಡೂ ಬದಿಗಳಾದ AB ಮತ್ತು CD ಮೇಲೆ ವರ್ತಿಸುವ ಬಲದ ದಿಕ್ಕನ್ನು ಕೂಡಾ ಹಿಮ್ಮುಖಗೊಳಿಸುತ್ತದೆ.ಹೀಗೆ ಮೊದಲು ಕೆಳಕ್ಕೆ ತಳ್ಳಲ್ಪಟ್ಟ ಸುರುಳಿಯ AB ಬದಿಯು ಈಗ ಮೇಲಕ್ಕೆ ತಳ್ಳಲ್ಪಡುತ್ತದೆ.ಮತ್ತು ಮೊದಲು ಮೇಲಕ್ಕೆ ತಳ್ಳಲ್ಪಟ್ಟ CD ಬದಿಯು ಈಗ ಕೆಳಕ್ಕೆ ತಳ್ಳಲ್ಪಡುತ್ತದೆ. ಆದ್ದರಿಂದ ಸುರುಳಿ ಮತ್ತು ದಂಡವು ಅದೇ ದಿಕ್ಕಿನಲ್ಲಿ ಅರ್ಧಸುತ್ತು ಹೆಚ್ಚು ಸುತ್ತುತ್ತದೆ.ಪ್ರತಿ ಅರ್ಧಸುತ್ತಿನ ತಿರುಗುವಿಕೆಯಲ್ಲಿ ವಿದ್ಯುತ್‌ ಪ್ರವಾಹದ ದಿಕ್ಕು ಹಿಮ್ಮುಖವಾಗುವುದು ಇದು ಸುರುಳಿ ಮತ್ತು ದಂಡದ ನಿರಂತರ ಸುತ್ತುವಿಕೆಗೆ ಕಾರಣವಾಗುತ್ತದೆ. ವಿದ್ಯುತ್‌ ಮೋಟಾರಿನಲ್ಲಿ ಒಡಕು ಉಂಗುರಗಳು ದಿಕ್ಷರಿವರ್ತಕಗಳಾಗಿ ಕಾರ್ಯನಿರ್ವಹಿಸುತ್ತವೆ.

12.ವಿದ್ಯುತ್‌ ಮೋಟಾರನ್ನು ಉಪಯೋಗಿಸುವ ಕೆಲವು ಸಾಧನಗಳನ್ನು ಹೆಸರಿಸಿ.

ನೀರೆತ್ತುವ ಪಂಪ್ ಗಳು,ವಿದ್ಯುತ್ ಫ್ಯಾನ್ ಗಳು,ಮಿಕ್ಸರ್ ಗಳು,ವಾಷಿಂಗ್ ಮೆಷಿನ್ ಗಳು ಇತ್ಯಾದಿ.

13.ಅವಾಹಕ ಹೊದಿಕೆಯಿರುವ ಒಂದು ತಾಮ್ರದ ತಂತಿಯ ಸುರುಳಿಯನ್ನು ಗೆಲ್ವನೋಮೀಟರ್ ಗೆ ಸಂಪರ್ಕಿಸಲಾಗಿದೆ.ಒಂದು ದಂಡಾಕಾಂತವನ್ನು 1) ಸುರುಳಿಯ ಒಳಕ್ಕೆ ತಳ್ಳಿದಾಗ ii) ಸುರುಳಿಯ ಒಳಗಿನಿಂದ ಹಿಂತೆಗೆದುಕೊಂಡಾಗ iii) ಸುರುಳಿಯ ಒಳಗೆ ನಿಶ್ಚಲವಾಗಿ ಇರಿಸಿದಾಗ ಏನಾಗುತ್ತದೆ?

ದಂಡಾಕಾಂತವನ್ನು ಸುರುಳಿಯ ಒಳಕ್ಕೆ ತಳ್ಳಿದಾಗ ಸುರುಳಿಯಲ್ಲಿ ಪ್ರೇರಿತ ವಿದ್ಯುತ್‌ ಪ್ರವಾಹವು ಉಂಟಾಗಿ ಗೆಲ್ವಾನೋಮೀಟರ್ ವಿಚಲನೆಯನ್ನು ತೋರಿಸುತ್ತದೆ.

ದಂಡಾಕಾಂತವನ್ನು ಸುರುಳಿಯಿಂದ ಹಿಂತೆಗೆದುಕೊಂಡಾಗ ವಿರುದ್ಧ ದಿಕ್ಕಿನಲ್ಲಿ ಪ್ರೇರಿತ ವಿದ್ಯುತ್ ಪ್ರವಾಹವು ಉಂಟಾಗಿ ಗೆಲ್ವಾನೋಮೀಟರ್ ವಿರುದ್ಧ ದಿಕ್ಕಿನಲ್ಲಿ ವಿಚಲನೆ ಹೊಂದುತ್ತದೆ.

ದಂಡಾಕಾಂತವನ್ನು ಸುರುಳಿಯ ಒಳಗೆ ನಿಶ್ಚಲವಾಗಿ ಇರಿಸಿದಾಗ ಯಾವುದೇ ವಿದ್ಯುತ್ ಪ್ರವಾಹವು ಉಂಟಾಗದೇ ಇರುವ ಕಾರಣ ಗೆಲ್ವಾನೋಮೀಟರ್ ಯಾವುದೇ ವಿಚಲನೆ ತೋರಿಸುವುದಿಲ್ಲ.

14.ಎರಡು ವೃತ್ತಾಕಾರದ ಸುರುಳಿಗಳಾದ A ಮತ್ತು B ಗಳನ್ನು ಪರಸ್ಪರ ಹತ್ತಿರ ಇರಿಸಲಾಗಿದೆ..ಸುರುಳಿ A ನಲ್ಲಿನ ವಿದ್ಯುತ್ ಪ್ರವಾಹ ಬದಲಾದರೆ,ಸುರುಳಿ B ಯಲ್ಲಿ ಸ್ವಲ್ಪ ಪ್ರಮಾಣದ ವಿದ್ಯುತ್ ಪ್ರೇರಿತವಾಗುತ್ತದೆಯೇ ? ಕಾರಣ ಕೊಡಿ.

A ಸುರುಳಿಯಲ್ಲಿನ ವಿದ್ಯುತ್ ಪ್ರವಾಹ ಬದಲಾದರೆ ಅದಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದಲ್ಲಿ ಬದಲಾವಣೆ ಉಂಟಾಗುತ್ತದೆ. ಹೀಗಾಗಿ B ಸುರುಳಿಯ ಸುತ್ತಲಿನ ಕಾಂತೀಯ ಬಲರೇಖೆಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಇದರಿಂದ B ಸುರುಳಿಯಲ್ಲಿ ಪ್ರೇರಿತ ವಿದ್ಯುತ್ ಪ್ರವಾಹ ಉಂಟಾಗುತ್ತದೆ. ಇದನ್ನು ವಿದ್ಯುತ್ ಕಾಂತೀಯ ಪ್ರೇರಣೆ ಎನ್ನುವರು.

15.ಈ ಕೆಳಗಿನವುಗಳ ದಿಕ್ಕನ್ನು ನಿರ್ಧರಿಸಲು ಬಳಸುವ ನಿಯಮಗಳನ್ನು ಬರೆಯಿರಿ.

ಅ) ವಿದ್ಯುತ್‌ ಪ್ರವಹಿಸುತ್ತಿರುವ ನೇರ ವಾಹಕದ ಸುತ್ತಲೂ ಉಂಟಾದ ಕಾಂತಕ್ಷೇತ್ರ

ಮ್ಯಾಕ್ಸ್‌ವೆಲ್ ನ ಬಲಗೈ ಹೆಬ್ಬೆರಳ ನಿಯಮ.

ಆ) ವಿದ್ಯುತ್‌ ಪ್ರವಹಿಸುತ್ತಿರುವ ನೇರ ವಾಹಕ ತಂತಿಯನ್ನು ಕಾಂತಕ್ಷೇತ್ರಕ್ಕೆ ಲಂಬವಾಗಿರಿಸಿದಾಗ ಅನುಭವಿಸುವ ಬಲ.

ಪ್ಲೆಮಿಂಗ್‌ ನ ಎಡಗೈ ನಿಯಮ

ಇ) ಕಾಂತಕ್ಷೇತ್ರದಲ್ಲಿ ಸುರುಳಿಯ ತಿರುಗುವಿಕೆಯಿಂದ ಸುರುಳಿಯಲ್ಲಿ ಪ್ರೇರಿತವಾದ ವಿದ್ಯುತ್‌ ಪ್ರವಾಹ

ಪ್ಲೆಮಿಂಗ್‌ ನ ಬಲಗೈ ನಿಯಮ.

16.ವಿದ್ಯುತ್‌ ಜನಕದಲ್ಲಿ ಅಡಕವಾಗಿರುವ ತತ್ವ ಮತ್ತು ಅದರ ಕಾರ್ಯವನ್ನು ಅಂದವಾದ ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸುವುದರ ಮೂಲಕ ವಿವರಿಸಿ.ಕುಂಚಗಳ ಕಾರ್ಯವೇನು ?

10th Class science Chapter 13

ವಿದ್ಯುತ್‌ ಕಾಂತೀಯ ಪ್ರೇರಣೆಯ ವಿದ್ಯಮಾನದ ಆಧಾರದ ಮೇಲೆ,ವಿದ್ಯುತ್ ಜನಕದಲ್ಲಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ವಾಹಕವನ್ನು ಕಾಂತಕ್ಷೇತ್ರದಲ್ಲಿ ಯಾಂತ್ರಿಕ ಶಕ್ತಿಯ ಸಹಾಯದಿಂದ ತಿರುಗಿಸಲಾಗುತ್ತದೆ (ಪಠ್ಯಪುಸ್ತಕದ ಚಿತ್ರದಲ್ಲಿರುವಂತೆ) ಒಂದು ವಿದ್ಯುತ್ ಜನಕವು,ತಿರುಗುವ ಆಯತಾಕಾರದ ಸುರುಳಿ ABCD ಯನ್ನು ಸ್ಥಿರ ಕಾಂತದ ಎರಡು ದ್ರುವಗಳ ನಡುವೆ ಇರಿಸಲಾಹಿದೆ.ಸುರುಳಿಯ ಎರಡು ತುದಿಗಳನ್ನು ಎರಡು ಉಂಗುರಗಳು R1 ಮತ್ತು R2 ಗೆ ಜೋಡಿಸಲಾಗಿದೆ.ಎರಡು ಸ್ಥಿರವಾದ ವಾಹಕ ಕುಂಚಗಳಾದ B1 ಮತ್ತು B2 ಗಳನ್ನು ಪ್ರತ್ಯೇಕವಾಗಿ R1 ಮತ್ತು R2 ಗಳ ಮೇಲೆ ಕ್ರಮವಾಗಿ ಒತ್ತಿಕೊಂಡಿರುವಂತೆ ಸಂಪರ್ಕಿಸಲಾಗಿದೆ. ಎರಡು ಉಂಗುರಗಳಾದ R1 ಮತ್ತುR2 ಗಳನ್ನು ಆಂತರಿಕವಾಗಿ ದಂಡಕ್ಕೆ ಜೋಡಿಸಲಾಗಿದೆ. ಬಾಹ್ಯ ಮಂಡಲದಲ್ಲಿನ ವಿದ್ಯುತ್ ಪ್ರವಾಹವನ್ನು ಗುರುತಿಸಲು ಕುಂಚಗಳ ಹೊರ ತುದಿಗಳನ್ನು ಗ್ಯಾಲ್ವನೋಮೀಟರ್ ಗೆ ಜೋಡಿಸಲಾಗಿದೆ.

ಸ್ಥಿರ ಕಾಂತದಿಂದ ಉತ್ಪತ್ತಿಯಾದ ಕಾಂತ ಕ್ಷೇತ್ರದಲ್ಲಿ ಎರಡು ಉಂಗುರಗಳಿಗೆ ಜೋಡಿಸಲಾದ ದಂಡವನ್ನು ತಿರುಗಿಸಿದಾಗ ಬಾಹು AB ಯು ಮೇಲಕ್ಕೆ ಚಲಿಸುತ್ತದೆ.ಫೆಮಿಂಗನ ಬಲಗೈ ನಿಯಮವನ್ನು ಅನ್ವಯಿಸುವ

ಮೂಲಕ ಬಾಹುಗಳಲ್ಲಿ ಪ್ರೇರಿತ ವಿದ್ಯುತ್‌ ಪ್ರವಾಹವು AB ಮತ್ತು CD ದಿಕ್ಕಿನ ಮೂಲಕ ಪ್ರವಹಿಸಲಾರಂಭಿಸುತ್ತದೆ.ಹೀಗಾಗಿ ಪ್ರೇರಿತ ವಿದ್ಯುತ್‌ ಪ್ರವಾಹವು ABCD ದಿಕ್ಕಿನಲ್ಲಿ ಪ್ರವಹಿಸುತ್ತದೆ.ಅರ್ಧ ಸುತ್ತಿನ ನಂತರ,ಬಾಹು CD ಯು ಮೇಲ್ಮುಖವಾಗಿ ಮತ್ತು ಬಾಹು AB ಯು ಕೆಳಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ.ಈ ಪರಿಣಾಮದಿಂದ ಎರಡು ಬಾಹುಗಳಲ್ಲಿ ಪ್ರೇರಿತ ವಿದ್ಯುತ್ ಪ್ರವಾಹ ಪ್ರವಹಿಸುವ ದಿಕ್ಕು ಬದಲಾಗುತ್ತದೆ.ಹಾಗು ನಿವ್ವಳ ಪ್ರೇರಿತ ವಿದ್ಯುತ್ ಪ್ರವಾಹವು DCBA ದಿಕ್ಕಿನಲ್ಲಿ ಪ್ರವಹಿಸುತ್ತದೆ.ಈಗ ಬಾಹ್ಯ ಮಂಡಲದಲ್ಲಿ ವಿದ್ಯುತ್ ಪ್ರವಾಹವು B1 ನಿಂದ B2 ಕಡೆಗೆ ಪ್ರವಹಿಸುತ್ತದೆ.ಹೀಗಾಗಿ ಪ್ರತಿ ಅರ್ಧ ಸುತ್ತಿನ ನಂತರ ಅನುಕ್ರಮ ಬಾಹುಗಳಲ್ಲಿ ಪ್ರೇರಿತ ವಿದ್ಯುತ್‌ ಪ್ರವಾಹದ ದ್ರುವೀಯತೆಯು ಬದಲಾಗುತ್ತಿರುತ್ತದೆ. ದಿಕ್ಷರಿವರ್ತಕಕ್ಕೆ ಸಂಪರ್ಕಿಸಿದ ಕಾರ್ಬನ್ ಕುಂಚಗಳು ವಿದ್ಯುತ್‌ ಜನಕ ಉತ್ಪಾದಿಸಿದ ವಿದ್ಯುತ್ ಶಕ್ತಿಯನ್ನು ಸಂಗ್ರಹಿಸುತ್ತವೆ.

17.ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಯಾವಾಗ ಉಂಟಾಗುತ್ತದೆ ?

ಸಜೀವ ತಂತಿ ಮತ್ತು ತಟಸ್ಥ ತಂತಿಗಳು ಎರಡೂ ನೇರ ಸಂಪರ್ಕಕ್ಕೆ ಬಂದಾಗ ಮಂಡಲದಲ್ಲಿ ಓವರ್ ಲೋಡ್ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತದೆ. ಅದೇರೀತಿ ಒಂದೇ ಸಾಕೆಟಿಗೆ ಅನೇಕ ಉಪಕರಣಗಳನ್ನು ಒಟ್ಟಿಗೆ ಸಂಪರ್ಕಿಸುವುದರಿಂದಲೂ ಕೂಡಾ ಶಾರ್ಟ್ ಸರ್ಕ್ಯೂಟ್ ಉಂಟಾಹಬಹುದು.

18.ಭೂ ಸಂಪರ್ಕ ತಂತಿಯ ಕಾರ್ಯವೇನು ? ಲೋಹದ ಮೇಲೆ ಹೊಂದಿರುವ ವಿದ್ಯುತ್‌ ಉಪಕರಣಗಳನ್ನು ಭೂಸಂಪರ್ಕಗೊಳಿಸುವುದು ಅಗತ್ಯವಾಗಿದೆ ಏಕೆ ?

ಭೂ ಸಂಪರ್ಕ ತಂತಿಯ ಉಪಯೋಗವು ಪ್ರಮುಖವಾಗಿ ಲೋಹದ ಮೇಲೆ ಹೊಂದಿರುವ ವಿದ್ಯುತ್‌ ಉಪಕರಣಗಳ ಸುರಕ್ಷತೆಗಾಗಿ ಬಳಸಲಾಗುತ್ತದೆ.ಇದು ಕಡಿಮೆ ರೋಧವನ್ನು ಹೊಂದಿರುವ ವಿದ್ಯುತ್

10th Class science Chapter 13
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment