ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPTR)ಪತ್ರಿಕೆ-2 ಜೀವ ವಿಜ್ಞಾನ ಪ್ರಶ್ನೆಪತ್ರಿಕೆ
ಸೂಚನೆ : ಪೇಪರ್-2ರಲ್ಲಿ 150 ಅಂಕಗಳಿರುತ್ತವೆ. ಇಲ್ಲಿ 50 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ. ಉಳಿದ 100 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯಬೇಕಾದ ಪ್ರಶ್ನೆಗಳನ್ನು ಇಲ್ಲಿ ನೀಡಿಲಾಗಿಲ್ಲ.
1. | ಏಕಮಾನ ಕಾಲದಲ್ಲಿ ಕಾಯವೊಂದರ ವೇಗದಲ್ಲಾಗುವ ಬದಲಾವಣೆ | |
(1) | ಶಕ್ತಿ | |
(2) | ಸ್ಥಾನಪಲ್ಲಟ | |
(3) | ವೇಗೋತ್ಕರ್ಷ | |
(4) | ಜವ |
CORRECT ANSWER
(3) ವೇಗೋತ್ಕರ್ಷ
2. | ಈ ಕೆಳಗಿನವುಗಳಲ್ಲಿ ನೈಸರ್ಗಿಕ ಕಾಂತ | |
(1) | ಕುದುರೆಲಾಳಾಕಾರದ ಕಾಂತ | |
(2) | ಮ್ಯಾಗ್ನೆಟೈಟ್ | |
(3) | ಬಾಕ್ಸೈಟ್ | |
(4) | ದಂಡಕಾಂತ |
CORRECT ANSWER
(2) ಮ್ಯಾಗ್ನೆಟೈಟ್
3. | ಓಮ್-ಮೀಟರ್ (Ωm) SI ಏಕಮಾನವನ್ನು ಹೊಂದಿರುವ ಪರಿಮಾಣ | |
(1) | ರೋಧ | |
(2) | ಸಾಮರ್ಥ್ಯ | |
(3) | ವಿಭವಾಂತರ | |
(4) | ರೋಧಶೀಲತೆ |
CORRECT ANSWER
(4) ರೋಧಶೀಲತೆ
4. | ಸೌರ ಮಂಡಲದಲ್ಲಿ ಒಳಗ್ರಹವಾಗಿರದ ಗ್ರಹ | |
(1) | ಶುಕ್ರ | |
(2) | ಮಂಗಳ | |
(3) | ಬುಧ | |
(4) | ಯುರೇನಸ್ |
CORRECT ANSWER
(4) ಯುರೇನಸ್
5. | ವಿಶ್ರಾಂತ ಸ್ಥಿತಿಯಲ್ಲಿರುವ ವಸ್ತುವೊಂದನ್ನು ನಾವು ಚಲಿಸುವಂತೆ ಮಾಡಲು ಪ್ರಯತ್ನಿಸಿದಾಗ ಉಂಟಾಗುವ ಘರ್ಷಣೆಯ ವಿಧ | |
(1) | ಉರುಳು ಘರ್ಷಣೆ | |
(2) | ಸ್ಥಾಯಿ ಘರ್ಷಣೆ | |
(3) | ಜಾರು ಘರ್ಷಣೆ | |
(4) | ದ್ರವ ಘರ್ಷಣೆ |
CORRECT ANSWER
(2) ಸ್ಥಾಯಿ ಘರ್ಷಣೆ
6. | ದ್ರವ್ಯರಾಶಿ ಮತ್ತು ಗುರುತ್ವ ವೇಗೋತ್ಕರ್ಷದ ಗುಣಲಬ್ಧ | |
(1) | ಕೆಲಸ | |
(2) | ಶಕ್ತಿ | |
(3) | ಸಂವೇಗ | |
(4) | ತೂಕ |
CORRECT ANSWER
(4) ತೂಕ
7. | ವಿದ್ಯುತ್ ಪ್ರವಾಹದ SIಏಕಮಾನ | |
(1) | ಕೂಲಮ್ | |
(2) | ವೋಲ್ಟ್ | |
(3) | ಓಮ್ | |
(4) | ಆಂಪಿಯರ್ |
CORRECT ANSWER
(4) ಆಂಪಿಯರ್
8. | ವಿದ್ಯುತ್ ಮಂಡಲವನ್ನು ಪೂರ್ಣಗೊಳಿಸಲು ಅಥವಾ ಕಡಿತಗೊಳಿಸಲು ಬಳಸುವ ಸರಳ ಸಾಧನ | |
(1) | ರೋಧಕ | |
(2) | ರಿಯೋಸ್ಟಾಟ್ | |
(3) | ಬ್ಯಾಟರಿ | |
(4) | ಸ್ವಿಚ್ |
CORRECT ANSWER
(4) ಸ್ವಿಚ್
9. | ರುದರ್‌ಫೋರ್ಡ್‌ರವರ ಆಲ್ಫಾ ಕಣಗಳ ಚದುರುವಿಕೆಯ ಪ್ರಯೋಗವು ಇದರ ಆವಿಷ್ಕಾರಕ್ಕೆ ಕಾರಣವಾಗಿದೆ | |
(1) | ನ್ಯೂಟ್ರಾನ್ | |
(2) | ಪರಮಾಣು ಬೀಜಕೇಂದ್ರ | |
(3) | ಇಲೆಕ್ಟ್ರಾನ್ | |
(4) | ಪ್ರೋಟಾನ್ |
CORRECT ANSWER
(2) ಪರಮಾಣು ಬೀಜಕೇಂದ್ರ
10. | ಅಕ್ಸಿಜನ್ ಅಣುವಿನ ಮೋಲಾರ್ ರಾಶಿ | |
(1) | 16 g | |
(2) | 2 g | |
(3) | 32 g | |
(4) | 48 g |
CORRECT ANSWER
(1) 16 g
ಅಥವಾ
(3) 32 g
11. | ಧಾತುಗಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸರಿಯಲ್ಲದ ಹೇಳಿಕೆ | |
(1) | ಮೆಂಡಲೀವ್‌ರ ಆವರ್ತ ಕೋಷ್ಟಕವು ಧಾತುಗಳ ಪರಮಾಣು ರಾಶಿಯನ್ನು ಆಧರಿಸಿದೆ | |
(2) | ಆಧುನಿಕ ಆವರ್ತ ಕೋಷ್ಟಕವು ಧಾತುಗಳ ಪರಮಾಣು ಸಂಖ್ಯೆಯನ್ನು ಆಧರಿಸಿದೆ | |
(3) | ತ್ರಿವಳಿಗಳು – ಮೂರು ಸಾದೃಶ ಧಾತುಗಳ ಗುಂಪಾಗಿದೆ | |
(4) | ನ್ಯೂಲ್ಯಾಂಡರ ಅಷ್ಟಕಗಳ ಜೋಡಣೆ ಧಾತುಗಳ ಇಲೆಕ್ಟ್ರಾನ್ ವಿನ್ಯಾಸವನ್ನು ಆಧರಿಸಿದೆ |
CORRECT ANSWER
(4) ನ್ಯೂಲ್ಯಾಂಡರ ಅಷ್ಟಕಗಳ ಜೋಡಣೆ ಧಾತುಗಳ ಇಲೆಕ್ಟ್ರಾನ್ ವಿನ್ಯಾಸವನ್ನು ಆಧರಿಸಿದೆ
12. | 2, 8, 7- ಈ ಇಲೆಕ್ಟ್ರಾನ್ ವಿನ್ಯಾಸ ಹೊಂದಿರುವ ಪರಮಾಣು ರಾಸಾಯನಿಕವಾಗಿ ಹೋಲುವುದು | |
(1) | ನೈಟ್ರೋಜನ್ (Z = 7) | |
(2) | ಫಾಸ್ಫರಸ್ (Z = 15) | |
(3) | ಪ್ಲೋರಿನ್ (Z = 9) | |
(4) | ಆರ್ಗಾನ್ (Z = 18) |
CORRECT ANSWER
(3) ಪ್ಲೋರಿನ್ (Z = 9)
13. | CaO+H2O→Ca(OH)2 | |
ಕೊಟ್ಟಿರುವ ರಾಸಾಯನಿಕ ಕ್ರಿಯೆಯು ಇದಕ್ಕೆ ಉದಾಹರಣೆಯಾಗಿದೆ | ||
(1) | ರಾಸಾಯನಿಕ ಸ್ಥಾನಪಲ್ಲಟ | |
(2) | ರಾಸಾಯನಿಕ ಸಂಯೋಗ | |
(3) | ರಾಸಾಯನಿಕ ವಿಭಜನೆ | |
(4) | ರಾಸಾಯನಿಕ ದ್ವಿಸ್ಥಾನಪಲ್ಲಟ |
CORRECT ANSWER
(2) ರಾಸಾಯನಿಕ ಸಂಯೋಗ
14. | ಮುರಿದ ಮೂಳೆಗಳಿಗೆ ಆಧಾರ ನೀಡಲು ಬಳಸುವ ರಾಸಾಯನಿಕ ಸಂಯುಕ್ತ | |
(1) | ಸೋಡಿಯಂ ಹೈಡೋಜನ್ ಕಾರ್ಬೊನೇಟ್ | |
(2) | ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್ | |
(3) | ಸೋಡಿಯಂ ಕಾರ್ಬೋನೇಟ್ | |
(4) | ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್ |
CORRECT ANSWER
(4) ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್
15. | ಸಹವೇಲೆನ್ಸಿಯ ಬಂಧ ಹೊಂದಿರುವ ಸಂಯುಕ್ತ | |
(1) | NaCl | |
(2) | CaCl2 | |
(3) | HCl | |
(4) | KCl |
CORRECT ANSWER
(3) HCl
16. | ಮೊಸರಿನಲ್ಲಿರುವ ಆಮ್ಲ | |
(1) | ಲಾಕ್ಟಿಕ್ ಆಮ್ಲ | |
(2) | ಸಿಟ್ರಿಕ್ ಆಮ್ಲ | |
(3) | ಅಸಿಟಿಕ್ ಆಮ್ಲ | |
(4) | ಟಾರ್ಟಾರಿಕ್ ಆಮ್ಲ |
CORRECT ANSWER
(1) ಲಾಕ್ಟಿಕ್ ಆಮ್ಲ
17. | ಅದಿರುಗಳ ಅಪಕರ್ಷಣೆಯಲ್ಲ ಬಳಸುವ ಕಾರ್ಬನ್ನಿನ ಬಹುರೂಪ | |
(1) | ಗ್ರಾಫೈಟ್ | |
(2) | ಕಲ್ಲಿದ್ದಿಲು | |
(3) | ಕೋಕ್ | |
(4) | ವಜ್ರ |
CORRECT ANSWER
(3) ಕೋಕ್
18. | ಇವುಗಳಲ್ಲಿ ದ್ರವ ಅಲೋಹ | |
(1) | ಕ್ಲೋರಿನ್ | |
(2) | ಬ್ರೋಮಿನ್ | |
(3) | ಪಾದರಸ | |
(4) | ಸಲ್ಫರ್ |
CORRECT ANSWER
(2) ಬ್ರೋಮಿನ್
19. | ‘ಆಲ್ಡಿಹೈಡ್’ ಕ್ರಿಯಾ ಗುಂಪನ್ನು ಹೊಂದಿರುವ ಕಾರ್ಬನ್ ಸಂಯುಕ್ತ | |
(1) | ಬ್ಯೂಟನೋನ್ | |
(2) | ಎಥನಾಲ್ | |
(3) | ಎಥನೋಯಿಕ್ ಆಮ್ಲ | |
(4) | ಪ್ರೋಪನ್ಯಾಲ್ |
CORRECT ANSWER
(4) ಪ್ರೋಪನ್ಯಾಲ್
20. | ಗಾಳಿಗೆ ತೆರೆದಿಟ್ಟಾಗ ತಾಮ್ರದ ವಸ್ತುಗಳ ಮೇಲೆ ಹಸಿರು ಪದರ ಉಂಟಾಗಲು ಕಾರಣವಾದ ಸಂಯುಕ್ತ | |
(1) | ತಾಮ್ರದ ಆಕ್ಸೈಡ್ | |
(2) | ತಾಮ್ರದ ಸಲ್ಪೈಡ್ | |
(3) | ಪ್ರತ್ಯಾಮ್ಲೀಯ ತಾಮ್ರದ ಕಾರ್ಬೊನೇಟ್ | |
(4) | ತಾಮ್ರದ ಕ್ಲೋರೈಡ್ |
CORRECT ANSWER
(3) ಪ್ರತ್ಯಾಮ್ಲೀಯ ತಾಮ್ರದ ಕಾರ್ಬೊನೇಟ್
21. | ಪ್ಯಾರಾಚೂಟ್ ತಯಾರಿಕೆಯಲ್ಲಿ ಬಳಸುವ ಪ್ರಬಲ ಸಂಶ್ಲೇಷಿತ ಎಳೆ | |
(1) | ನೈಲಾನ್ | |
(2) | ಅಕ್ರಿಲಿಕ್ | |
(3) | ರೇಯಾನ್ | |
(4) | ಪಾಲಿಸ್ಟರ್ |
CORRECT ANSWER
(1) ನೈಲಾನ್
22. | ಶುಷ್ಕ ಒಗೆತಕ್ಕೆ ದ್ರಾವಕವಾಗಿ ಬಳಸುವ ಪೆಟ್ರೋಲಿಯಂ ಉತ್ಪನ್ನ | |
(1) | ಪ್ಯಾರಾಫಿನ್ ಮೇಣ | |
(2) | ಪೆಟ್ರೋಲ್ | |
(3) | ಡೀಸೆಲ್ | |
(4) | ಸೀಮೆಎಣ್ಣೆ |
CORRECT ANSWER
(2) ಪೆಟ್ರೋಲ್
23. | ಜೀವಕೋಶದ ಆತ್ಮಹತ್ಯಾ ಸಂಚಿಗಳು | |
(1) | ಮೈಟೋಕಾಂಡ್ರಿಯ | |
(2) | ಲೈಸೋಸೋಮ್‌ಗಳು | |
(3) | ಪ್ಲಾಸ್ಟಿಡ್‌ಗಳು | |
(4) | ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ |
CORRECT ANSWER
(2) ಲೈಸೋಸೋಮ್‌ಗಳು
24. | ಕೊಬ್ಬು ಸಂಗ್ರಹಿಸುವ ಅಂಗಾಂಶ | |
(1) | ಮೃದ್ವಸ್ಥಿ | |
(2) | ಸ್ನಾಯುರಜ್ಜು | |
(3) | ಅಸ್ಥಿರಜ್ಜು | |
(4) | ಅಡಿಪೋಸ್ |
CORRECT ANSWER
(4) ಅಡಿಪೋಸ್
25. | ಸಂಪೂರ್ಣವಾಗಿ ಜೀರ್ಣಿಸಲ್ಪಟ್ಟ ಆಹಾರವು ಹೀರಲ್ಪಡುವ ಮಾನವ ಜೀರ್ಣಾಂಗವ್ಯೂಹದ ಭಾಗ | |
(1) | ಸಣ್ಣ ಕರುಳು | |
(2) | ದೊಡ್ಡ ಕರುಳು | |
(3) | ಯಕೃತ್ | |
(4) | ಅನ್ನನಾಳ |
CORRECT ANSWER
(1) ಸಣ್ಣ ಕರುಳು
26. | ಸಂಕೀರ್ಣ ಶಾಶ್ವತ ಅಂಗಾಂಶ | |
(1) | ಪೇರಂಕೈಮಾ | |
(2) | ಕೋಲಂಕೈಮಾ | |
(3) | ಕೈಲಂ | |
(4) | ಸ್ಕ್ಲೀರಂಕೈಮಾ |
CORRECT ANSWER
(3) ಕೈಲಂ
27. | ನಾಲ್ಕು ಕೋಣೆಗಳ ಹೃದಯವನ್ನು ಹೊಂದಿರುವವು | |
(1) | ಸ್ತನಿಗಳು ಮತ್ತು ಮೀನುಗಳು | |
(2) | ಪಕ್ಷಿಗಳು ಮತ್ತು ಉಭಯವಾಸಿಗಳು | |
(3) | ಸ್ತನಿಗಳು ಮತ್ತು ಪಕ್ಷಿಗಳು | |
(4) | ಪಕ್ಷಿಗಳು ಮತ್ತು ಮೀನುಗಳು |
CORRECT ANSWER
(3) ಸ್ತನಿಗಳು ಮತ್ತು ಪಕ್ಷಿಗಳು
28. | ಸಸ್ಯಗಳ ಬೆಳವಣಿಗೆಯನ್ನು ಪ್ರತಿಬಂಧಿಸುವ ಹಾರ್ಮೋನ್ | |
(1) | ಆಕ್ಸಿನ್ | |
(2) | ಸೈಟೋಕೈನಿನ್ | |
(3) | ಜಬ್ಬರ್‌ಲಿನ್ | |
(4) | ಆಬ್ಸಿಸಿಕ್ ಆಮ್ಲ |
CORRECT ANSWER
(4) ಆಬ್ಸಿಸಿಕ್ ಆಮ್ಲ
29. | ಪರಾವರ್ತಿತ ಚಾಪದ ಸರಿಯಾದ ಅನುಕ್ರಮಣಿಕೆ | |
(1) | ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ | |
(2) | ಗ್ರಾಹಕ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ, ಜ್ಞಾನವಾಹಿ ನರಕೋಶ, ಕಾರ್ಯನಿರ್ವಾಹಕ | |
(3) | ಗ್ರಾಹಕ, ಕಾರ್ಯನಿರ್ವಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ | |
(4) | ಗ್ರಾಹಕ, ಕ್ರಿಯಾವಾಹಿ ನರಕೋಶ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕಾರ್ಯನಿರ್ವಾಹಕ |
CORRECT ANSWER
(1) ಗ್ರಾಹಕ, ಜ್ಞಾನವಾಹಿ ನರಕೋಶ, ಸಂಬಂಧ ಕಲ್ಪಿಸುವ ನರಕೋಶ, ಕ್ರಿಯಾವಾಹಿ ನರಕೋಶ, ಕಾರ್ಯನಿರ್ವಾಹಕ
30. | ಪ್ಲನೇರಿಯಾದಲ್ಲಿ ಸಂತಾನೋತ್ಪತ್ತಿಯ ವಿಧ | |
(1) | ಮೊಗ್ಗುವಿಕೆ | |
(2) | ಪುನರುತ್ಪಾದನೆ | |
(3) | ದ್ವಿವಿದಳನ | |
(4) | ಬಹುವಿದಳನ |
CORRECT ANSWER
(2) ಪುನರುತ್ಪಾದನೆ
31. | ಅಸ್ಪಷ್ಟವಾದ ಸಂತಾನೋತ್ಪತ್ತಿ ಅಂಗಗಳು ಕಂಡುಬರುವ ಸಸ್ಯವರ್ಗಗಳು | |
(1) | ಥ್ಯಾಲೋಫೈಟಾ, ಅನಾವೃತ ಬೀಜ ಸಸ್ಯಗಳು, ಪುಚ್ಛಸಸ್ಯಗಳು | |
(2) | ಥ್ಯಾಲೋಫೈಟಾ, ಹಾವಸೆ ಸಸ್ಯಗಳು, ಪುಚ್ಛಸಸ್ಯಗಳು | |
(3) | ಥ್ಯಾಲೋಫೈಟಾ, ಹಾವಸೆ ಸಸ್ಯಗಳು, ಆವೃತ ಬೀಜ ಸಸ್ಯಗಳು | |
(4) | ಥ್ಯಾಲೋಫೈಟಾ, ಅನಾವೃತ ಬೀಜ ಸಸ್ಯಗಳು, ಹಾವಸೆ ಸಸ್ಯಗಳು |
CORRECT ANSWER
(2) ಥ್ಯಾಲೋಫೈಟಾ, ಹಾವಸೆ ಸಸ್ಯಗಳು, ಪುಚ್ಛಸಸ್ಯಗಳು
32. | ಓಜೋನ್ ಪದರದ ಶಿಥಿಲೀಕರಣಕ್ಕೆ ಕಾರಣವಾದುದು | |
(1) | CO2 | |
(2) | NO2 | |
(3) | CH4 | |
(4) | CFC |
CORRECT ANSWER
(4) CFC
33. | ಕಾಡು ಎಲೆಕೋಸಿನಿಂದ ಕೇಲ್‌ನ ವಿಕಾಸವು ಇದರಿಂದಾಗಿದೆ | |
(1) | ನೈಸರ್ಗಿಕ ಆಯ್ಕೆ | |
(2) | ಕೃತಕ ಆಯ್ಕೆ | |
(3) | ಭೌಗೋಳಿಕ ಪ್ರತ್ಯೇಕನ | |
(4) | ಅನುವಂಶೀಯ ದಿಕ್ಚ್ಯುತಿ |
CORRECT ANSWER
(2) ಕೃತಕ ಆಯ್ಕೆ
34. | ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳನ್ನು ಮಾತ್ರ ಒಳಗೊಂಡಿರುವ ಗುಂಪು | |
(1) | ಹುಲ್ಲು, ಹೂವುಗಳು ಮತ್ತು ಚರ್ಮ | |
(2) | ಹುಲ್ಲು, ಮರದ ತುಂಡು ಮತ್ತು ಪ್ಲಾಸ್ಟಿಕ್ ಚೀಲ | |
(3) | ಹಣ್ಣಿನ ಸಿಪ್ಪೆ, ಕೇಕ್ ಮತ್ತು ಪ್ಲಾಸ್ಟಿಕ್ | |
(4) | ಕೇಕ್, ಗಾಜಿನ ಕಡ್ಡಿ ಮತ್ತು ಹುಲ್ಲು |
CORRECT ANSWER
(1) ಹುಲ್ಲು, ಹೂವುಗಳು ಮತ್ತು ಚರ್ಮ
35. | ಲಿವರ್ ಫ್ಲೋಕ್‌ಗಳು ಈ ವಂಶಕ್ಕೆ ಸೇರುತ್ತವೆ | |
(1) | ಚಪ್ಪಟೆ ಹುಳುಗಳು (ಪ್ಲಾಟಿಹೆಲ್ಮಿಂಥಿಸ್) | |
(2) | ಸಂಧಿಪದಿಗಳು (ಆರ್ಥ್ರೋಪೊಡ) | |
(3) | ಸ್ಪಂಜು ಪ್ರಾಣಿಗಳು (ಪೊರಿಫೆರಾ) | |
(4) | ವಲಯವಂತಗಳು (ಅನೆಲಿಡಾ) |
CORRECT ANSWER
(1) ಚಪ್ಪಟೆ ಹುಳುಗಳು (ಪ್ಲಾಟಿಹೆಲ್ಮಿಂಥಿಸ್)
36. | ವೀರ್ಯಾಣುಗಳು ಉತ್ಪತ್ತಿಯಾಗುವ ಗಂಡು ಸಂತಾನೋತ್ಪತ್ತಿಯ ಭಾಗ | |
(1) | ಪ್ರೋಸ್ಟೇಟ್ ಗ್ರಂಥಿ | |
(2) | ಶಿಶ್ನ | |
(3) | ವೃಷಣ | |
(4) | ವೀರ್ಯನಾಳ |
CORRECT ANSWER
(3) ವೃಷಣ
37. | ವನ್ಯಜೀವಿಗಳ ಸಂರಕ್ಷಣೆಗಾಗಿ ಗುರುತಿಸಲಾದ ಬೃಹತ್ ಸಂರಕ್ಷಿತ ಭೂಪ್ರದೇಶ | |
(1) | ವನ್ಯಜೀವಿಧಾಮ | |
(2) | ರಾಷ್ಟ್ರೀಯ ಉದ್ಯಾನ | |
(3) | ಪ್ರಾಣಿ ಸಂಗ್ರಹಾಲಯ | |
(4) | ರಕ್ಷಿತ ಜೀವಗೋಳ |
CORRECT ANSWER
(4) ರಕ್ಷಿತ ಜೀವಗೋಳ
38. | 18 ಮತ್ತು 48 ಸಂಖ್ಯೆಗಳ ಮ.ಸಾ.ಅ. | |
(1) | 9 | |
(2) | 6 | |
(3) | 3 | |
(4) | 4 |
CORRECT ANSWER
(2) 6
39. | 1.5 kg ಮತ್ತು 600 gmಗಳ ನಡುವಿನ ಅನುಪಾತ | |
(1) | 2:3 | |
(2) | 2:5 | |
(3) | 5:3 | |
(4) | 5:2 |
CORRECT ANSWER
(4) 5:2
40. | ಕೆಳಗಿನ ಸಂಖ್ಯೆಗಳಲ್ಲಿ ಪೂರ್ಣ ವರ್ಗ ಸಂಖ್ಯೆ | |
(1) | 324 | |
(2) | 440 | |
(3) | 600 | |
(4) | 125 |
CORRECT ANSWER
(1) 324
41. | (22)3×2426 ಇದರ ಬೆಲೆ | |
(1) | 32 | |
(2) | 64 | |
(3) | 16 | |
(4) | 2 |
CORRECT ANSWER
(3) 16
42. | 7 cm ತ್ರಿಜ್ಯವಿರುವ ವೃತ್ತದ ಪರಿಧಿ | |
(1) | 14 π cm | |
(2) | 7 π cm | |
(3) | 22 cm | |
(4) | 22 π cm |
CORRECT ANSWER
(1) 14 π cm
43. | ವಕ್ರ ಮೇಲ್ಮೈಯನ್ನು ಮಾತ್ರ ಹೊಂದಿರುವ ಘನಾಕೃತಿ | |
(1) | ಅರ್ಧಗೋಳ | |
(2) | ಸಿಲಿಂಡರ್ | |
(3) | ಶಂಕು | |
(4) | ಗೋಳ |
CORRECT ANSWER
(4) ಗೋಳ
44. | ಒಂದು ಚತುರ್ಭುಜದ ನಾಲ್ಕು ಒಳಕೋನಗಳ ಮೊತ್ತ | |
(1) | 180° | |
(2) | 360° | |
(3) | 90° | |
(4) | 270° |
CORRECT ANSWER
(2) 360°
45. | ಪಾದ 12 cm ಮತ್ತು ಎತ್ತರ 4.5 cm ಇರುವ ಸಮಾಂತರ ಚತುರ್ಭುಜದ ವಿಸ್ತೀರ್ಣ | |
(1) | 16.5cm2 | |
(2) | 27cm2 | |
(3) | 54cm2 | |
(4) | 52cm2 |
CORRECT ANSWER
(3) 54cm2
46. | ಗೋಡೆಯಿಂದ 8 ಅಡಿ ದೂರದಿಂದ ಒಂದು ಏಣಿಯನು ಆ ಗೋಡೆಗೆ 15 ಅಡಿ ಎತ್ತರಕ್ಕೆ ಒರಗಿಸಿದೆ. ಆ ಏಣಿಯ ಉದ್ದ | |
(1) | 17 ಅಡಿ | |
(2) | 23 ಅಡಿ | |
(3) | 25 ಅಡಿ | |
(4) | 20 ಅಡಿ |
CORRECT ANSWER
(1) 17 ಅಡಿ
47. | ವಿಜ್ಞಾನ ಕಲಿಕೆಯಲ್ಲಿ ‘ಕ್ಷೇತ್ರ ಪ್ರವಾಸ’ವನ್ನು ಆಯೋಜಿಸುವುದರ ಮುಖ್ಯ ಉದ್ದೇಶ | |
(1) | ಪೋಷಕರಿಗೆ ಶಿಕ್ಷಣ ಗುಣಮಟ್ಟದ ಬಗ್ಗೆ ತೃಪ್ತಿಪಡಿಸುವುದು | |
(2) | ವಿದ್ಯಾರ್ಥಿಗಳಿಗೆ ಮೋಜು ಮತ್ತು ಸಂತೋಷ ಒದಗಿಸುವುದು | |
(3) | ಕಲಿಕೆಯ ಏಕತಾನತೆಯನ್ನು ಬದಲಿಸುವುದು | |
(4) | ವಿದ್ಯಾರ್ಥಿಗಳಿಗೆ ಸಕ್ರಿಯ ಕಲಿಕಾ ಅನುಭವವನ್ನು ಒದಗಿಸುವುದು |
CORRECT ANSWER
(4) ವಿದ್ಯಾರ್ಥಿಗಳಿಗೆ ಸಕ್ರಿಯ ಕಲಿಕಾ ಅನುಭವವನ್ನು ಒದಗಿಸುವುದು
48. | ಕಾಂತತ್ವ ಪಾಠಕ್ಕೆ ಸಂಬಂಧಿಸಿದಂತೆ ತಿಳುವಳಿಕೆ ಹಂತಕ್ಕೆ ಪೂರಕವಾದ ಬೋಧನಾ ಉದ್ದೇಶ, ವಿದ್ಯಾರ್ಥಿಯು | |
(1) | ಕಾಂತದ ಅರ್ಥವನ್ನು ಸ್ಮರಿಸುತ್ತಾನೆ | |
(2) | ಕಾಂತದ ವಿಧಗಳನ್ನು ವಿವರಿಸುತ್ತಾನೆ | |
(3) | ನೀಡಿರುವ ಅಯಸ್ಕಾಂತ ಚಿತ್ರದಲ್ಲಿ ಕಾಂತೀಯ ಬಲರೇಖೆಗಳನ್ನು ರಚಿಸುತ್ತಾನೆ | |
(4) | ನಿತ್ಯ ಜೀವನದಲ್ಲಿ ಕಾಂತದ ಅನ್ವಯಗಳನ್ನು ಗುರ್ತಿಸುತ್ತಾನೆ |
CORRECT ANSWER
(2) ಕಾಂತದ ವಿಧಗಳನ್ನು ವಿವರಿಸುತ್ತಾನೆ
49. | ಚಟುವಟಿಕೆ ಆಧಾರಿತ ವಿಜ್ಞಾನ ಕಲಿಕೆಯಲ್ಲಿನ ಹಂತಗಳು | |
(1) | ಯೋಜನೆ, ನಿರ್ವಹಣೆ, ಅನುಚಿಂತನೆ, ಪುನರ್‌ರಚನೆ | |
(2) | ಯೋಜನೆ, ವಿಶ್ಲೇಷಣೆ, ನಿರ್ಣಯ, ಪರಿಷ್ಕರಣೆ | |
(3) | ಯೋಜನೆ, ಪ್ರಕ್ರಿಯೆ, ನಿರ್ಣಯಿಸುವಿಕೆ, ಸ್ವೀಕೃತಿ | |
(4) | ಯೋಜನೆ, ನಿರ್ವಹಣೆ, ಪ್ರಕ್ರಿಯೆ, ಭಾಗವಹಿಸುವಿಕೆ |
CORRECT ANSWER
(1) ಯೋಜನೆ, ನಿರ್ವಹಣೆ, ಅನುಚಿಂತನೆ, ಪುನರ್ರಚನೆ
50. | ಸಾಮಾಜಿಕ ಪರಿಸರದಲ್ಲಿ ಚಟುವಟಿಕೆಯನ್ನು ಮನಃಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ ನಡೆಸುವ ತಂಡಕಾರ್ಯವನ್ನು ಒಳಗೊಂಡ ವಿಧಾನ | |
(1) | ಅನುಗಮನ | |
(2) | ಸಮಸ್ಯಾ ಪರಿಹಾರ | |
(3) | ಯೋಜನೆ | |
(4) | ನಿಗಮನ |
CORRECT ANSWER
(3) ಯೋಜನೆ