KPSC : GROUP C 18-12-2016 Paper-1 General Knowledge Questions with answers
KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ: ವಿವಿಧ ತಾಂತ್ರಿಕ/ ತಾಂತ್ರಿಕೇತರ (Degree Standard) ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 18-12-2016 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು
1. ಒಂದು ಪಂಪು ತೊಟ್ಟಿಯೊಂದನ್ನು 3 ಗಂಟೆಗಳಲ್ಲಿ ತುಂಬಬಲ್ಲದು ತೊಟ್ಟಿಯ ಸೋರಿಕೆಯಿಂದಾಗಿ ಅದು ತೊಟ್ಟಿಯನ್ನು ತುಂಬಲು ನಾಲ್ಕು ಗಂಟೆ ತೆಗೆದುಕೊಂಡಿತು. ತೊಟ್ಟಿ ಭರ್ತಿಯಾಗಿದ್ದಲ್ಲಿ ಸೋರಿಕೆಯಿಂದಾಗಿ ತೊಟ್ಟಿ ಖಾಲಿಯಾಗಲು ಎಷ್ಟು ಸಮಯ ಬೇಕಾದೀತು?
(1) 12 ಗಂಟೆ
(2) 7 ಗಂಟೆ
(3) 8 ಗಂಟೆ
(4) 10 ಗಂಟೆ
ಸರಿ ಉತ್ತರ
(1) 12 ಗಂಟೆ
2. ಚಕ್ರಬಡ್ಡಿಗೆ ತೊಡಗಿಸಿದಾಗ ಒಂದು ಮೊತ್ತ 5 ವರ್ಷಗಳಲ್ಲಿ ₹6,941 ಆಗುತ್ತದೆ, ನಾಲ್ಕು ವರ್ಷಗಳಲ್ಲಿ ₹ 6,310 ಆಗುತ್ತದೆ. ಆಗ ಬಡ್ಡಿಯ ದರವು
(1) 6%
(2) 8%
(3) 10%
(4) 12%
ಸರಿ ಉತ್ತರ
(3) 10%
3. ಮೊದಲ 3 ಕಂಬಸಾಲುಗಳ ಮೊತ್ತ ಆಧರಿಸಿ A ಬೆಲೆ ಕಂಡು ಹಿಡಿಯಿರಿ.
(1) 8
(2) 9
(3) 10
(4) 11
ಸರಿ ಉತ್ತರ
(2) 9
4. ವ್ಯಕ್ತಿಯೊಬ್ಬರು ₹400 ಬೆಲೆಯ ಸಕ್ಕರೆ ಕೊಂಡರು. ಅದರ 34ಭಾಗವನ್ನು 10% ನಷ್ಟಕ್ಕೆ ಮಾರಿದರು. ಉಳಿದದ್ಧನ್ನು 10% ಲಾಭಕ್ಕೆ ಮಾರಿದರು. ಒಟ್ಟಾರೆ ಅವರಿಗೆ ಆದದ್ದು
(1) 5 % ನಷ್ಟ
(2) 4 % ನಷ್ಟ
(3) 4 % ಲಾಭ
(4) 412% ನಷ್ಟ
ಸರಿ ಉತ್ತರ
(1) 5 % ನಷ್ಟ
5. ಚೌಕದ ಬದಿಯನ್ನು ಅಳೆಯುವಾಗ 10% ಅಧಿಕವಾಗಿ ದೋಷಪೂರ್ಣ ಮಾಪನ ಮಾಡಲಾಯಿತು. ಲೆಕ್ಕಿಸಲಾದ ವಿಸ್ತೀರ್ಣದ ದೋಷದ ಶೇಕಡಾವಾರು
(1) 20%
(2) 21%
(3) 22%
(4) 10%
ಸರಿ ಉತ್ತರ
(2) 21%
6. ಎರಡು ಲೋಟಗಳಲ್ಲಿ ಅನುಕ್ರಮವಾಗಿ ಹಾಲು ಮತ್ತು ನೀರಿನ 2 : 1 ಮತ್ತು 1 : 3 ಅನುಪಾತದ ಮಿಶ್ರಣವಿದೆ. ಅವೆರಡನ್ನೂ ಇಡಿಯಾಗಿ 3ನೇ ಧಾರಕಕ್ಕೆ ಸೇರಿಸಲಾಗಿದೆ. ನೀರು ಹಾಗೂ ಹಾಲಿನ ಅನುಪಾತ ಮೂರನೇ ಧಾರಕದಲ್ಲಿ ಎಷ್ಟು?
(1) 11 : 13
(2) 11 : 12
(3) 13 : 11
(4) 12 : 11
ಸರಿ ಉತ್ತರ
(1) 11 : 13
7. ಪಾತ್ರೆಯೊಂದರಲ್ಲಿ 40 ಲೀಟರ್ ಹಾಲಿದೆ. ಈ ಧಾರಕದಿಂದ 8 ಲೀಟರ್ ಹಾಲನ್ನು ತೆಗೆದುಕೊಂಡು ಅಷ್ಟೇ ಪ್ರಮಾಣದ ನೀರು ಸೇರಿಸಲಾಯಿತು. ಈ ಪ್ರಕ್ರಿಯೆಯನ್ನು ಮತ್ತೆ ಎರಡು ಬಾರಿ ಪುನರಾವರ್ತಿಸಿದಾಗ ಅದರಲ್ಲಿರುವ ಹಾಲಿನ ಪರಿಮಾಣ
(1) 16 ಲೀಟರ್ ಗಳು
(2) 16.28 ಲೀಟರ್ ಗಳು
(3) 18.38 ಲೀಟರ್ ಗಳು
(4) 20.48 ಲೀಟರ್ ಗಳು
ಸರಿ ಉತ್ತರ
(4) 20.48 ಲೀಟರ್ ಗಳು
8. 2007ರ ಕ್ಯಾಲೆಂಡರಿನ ಹಾಗೆಯೇ ಮತ್ತೆ ಯಾವ ವರ್ಷದ ಕ್ಯಾಲೆಂಡರ್ ಇರುತ್ತದೆ?
(1) 2014
(2) 2015
(3) 2017
(4) 2018
ಸರಿ ಉತ್ತರ
(4) 2018
9. ಮೂರು ವಿಭಿನ್ನ ವೃತ್ತಗಳಲ್ಲಿ ವಾಹನ ದೀಪಗಳು 4 ಸೆಕೆಂಡು, 25 ಸೆಕೆಂಡು, 48 ಸೆಕೆಂಡುಗಳ ಅನಂತರ ಬದಲಾಗುತ್ತವೆ. ಇವು ಎಲ್ಲವೂ 2:20 am ನಲ್ಲಿ ಒಮ್ಮೆಗೆ ಬದಲಾದರೆ ಮತ್ತೆ ಇವೆಲ್ಲವೂ ಒಮ್ಮೆ ಬದಲಾಗುವುದು
(1) 2.30 a.m.
(2) 2.40 a.m.
(3) 2.50 a.m.
(4) 3.00 a.m.
ಸರಿ ಉತ್ತರ
(2) 2.40 a.m.
10. ಈಗಿನಿಂದ 10 ವರ್ಷಗಳ ನಂತರ ಅಪ್ಪ ಹಾಗೂ ಮಗನ ವಯಸ್ಸಿನ ಅನುಪಾತ 5 : 3, 10 ವರ್ಷಗಳ ಮೊದಲು 3 : 1 ಇತ್ತು. ಇಂದು ಅವರಿಬ್ಬರ ವಯಸ್ಸಿನ ಅನುಪಾತ ಎಷ್ಟು
(1) 1 : 2
(2) 2 : 3
(3) 1 : 3
(4) 3 : 5
ಸರಿ ಉತ್ತರ
(1) 1 : 2
11. ಕಾಲೇಜಿನ 110 ವಿದ್ಯಾರ್ಥಿಗಳ ಸರಾಸರಿ ತೂಕ 55 kg. ಬಾಲಕರ ಹಾಗೂ ಬಾಲಕಿಯರ ಸರಾಸರಿ ತೂಕ ಅನುಕ್ರಮವಾಗಿ 61 kg. ಮತ್ತು 50 kg. ಹಾಗಾದರೆ ಕಾಲೇಜಿನ ವಿದ್ಯಾರ್ಥಿನಿಯರ ಸಂಖ್ಯೆ
(1) 55
(2) 60
(3) 65
(4) 70
ಸರಿ ಉತ್ತರ
(2) 60
12. 18ನೇ ಇನ್ನಿಂಗ್ಸ್ ನಲ್ಲಿ ಬ್ಯಾಟ್ಸ್ಮನ್ 101 ರನ್ ಗಳಿಸುತ್ತಾನೆ. ಅದರಿಂದ ಸರಾಸರಿ 4 ಅಧಿಕವಾಗುತ್ತದೆ. 18ನೇ ಇನ್ನಿಂಗ್ಸ್ ನ ನಂತರ ಇದ್ದ ಸರಾಸರಿ
(1) 32
(2) 33
(3) 34
(4) 97
ಸರಿ ಉತ್ತರ
(2) 33
13. ಪರೀಕ್ಷೆಯೊಂದರಲ್ಲಿ 60% ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ, 60% ರಸಾಯನ ಶಾಸ್ತ್ರದಲ್ಲಿ ಪಾಸಾಗಿದ್ದಾರೆ. 50% ವಿದ್ಯಾರ್ಥಿಗಳು ಎರಡೂ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಹಾಗಾದರೆ ಎರಡೂ ಪರೀಕ್ಷೆಯಲ್ಲಿ ನಪಾಸದವರು
(1) 10%
(2) 20%
(3) 30%
(4) 50%
ಸರಿ ಉತ್ತರ
(3) 30%
14. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಅಂತಿಮವಾಗಿ ಪಿ.ವಿ.ಸಿಂಧುವನ್ನು ಸೋಲಿಸಿ ಬ್ಯಾಡ್ಮಿಂಟನ್ ಚಿನ್ನದ ಪದಕ ಪಡೆದವರು ಯಾರು?
(1) ಆಗ್ನೆಸ್ ಇಸಬೆಲ್ಲಾ
(2) ಡಮೆಲ್ ಅನುಪಮ
(3) ಕರೋಲಿನಾ ಮೆರಿನ್
(4) ಸೈನಾ ನೆಹ್ವಾಲ್
ಸರಿ ಉತ್ತರ
(3) ಕರೋಲಿನಾ ಮೆರಿನ್
15. ಜಗತ್ತಿನ ಸುದೀರ್ಘ ಆಳ್ವಿಕೆಯ ಚಕ್ರವರ್ತಿ ಭೂಮಿಬಲ್ ಅದುಲ್ಯಾದೇಜ್, 2016ರ ಅಕ್ಟೋಬರ್ ನಲ್ಲಿ ಆಸ್ಪತ್ರೆಯೊಂದರಲ್ಲಿ ಮೃತರಾದರೆಂದು ಅರಮನೆ ಮೂಲಗಳು ಪ್ರಕಟಪಡಿಸಿರುವುದು ಯಾವ ದೇಶದ್ದು?
(1) ಇಂಡೋನೇಷಿಯಾ
(2) ಮಲೇಷಿಯಾ
(3) ಮ್ಯಾನ್ಮಾರ್
(4) ಥೈಲ್ಯಾಂಡ್
ಸರಿ ಉತ್ತರ
(4) ಥೈಲ್ಯಾಂಡ್
16. 2016ರ ಅಕ್ಟೋಬರ್ ತಿಂಗಳಲ್ಲಿ 20ನೇ ಭಾರತೀಯ ಆಡಳಿತ ಅಧ್ಯಯನ ಸಂಸ್ಥೆಯನ್ನು (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್) ಕ್ಯಾಬಿನೆಟ್ ಅನುಮೋದಿಸಿದ್ದು ಅದು ಸ್ಥಾಪನೆ ಆಗಿದ್ದು
(1) ಬಿಜಾಪುರ
(2) ಗುಲ್ಬರ್ಗಾ
(3) ಮಂಡ್ಯ
(4) ಜಮ್ಮು
ಸರಿ ಉತ್ತರ
(4) ಜಮ್ಮು
17. ಆಲಿವರ್ ಹಾರ್ಟ್ ಮತ್ತು ಬೆಂಗ್ಟ್ ಹೋಮ್ ಸ್ಟ್ರೋಮ್ ರಿಗೆ 2016ರ ನೋಬೆಲ್ ಪುರಸ್ಕಾರ ಈ ಕ್ಷೇತ್ರದಲ್ಲಿ ಬಂದಿತು
(1) ರಸಾಯನಶಾಸ್ತ್ರ
(2) ಅರ್ಥಶಾಸ್ತ್ರ
(3) ಗಣಿತ
(4) ಭೌತಶಾಸ್ತ್ರ
ಸರಿ ಉತ್ತರ
(2) ಅರ್ಥಶಾಸ್ತ್ರ
18. ಹೆರಿಗೆ ಸೌಲಭ್ಯ ಕುರಿತ ಈಗಿನ ಮಸೂದೆ 2016ರ ತಿದ್ದುಪಡಿ, ಹೆರಿಗೆ ರಜೆಯನ್ನು ಹಿಂದಿನ ಸ್ಥಿತಿಗಿಂತ ಹೀಗೆ ಹೆಚ್ಚಿಸಿದೆ.
(1) 5 ವಾರಗಳಿಂದ 10 ವಾರಗಳು
(2) 6 ವಾರಗಳಿಂದ 12 ವಾರಗಳು
(3) 12 ವಾರಗಳಿಂದ 26 ವಾರಗಳು
(4) 18 ವಾರಗಳಿಂದ 26 ವಾರಗಳು
ಸರಿ ಉತ್ತರ
(3) 12 ವಾರಗಳಿಂದ 26 ವಾರಗಳು
19. ಈ 3 ಜನರ ಪೈಕಿ ಯಾರು ಮಹಿಳಾ ಹೋರಾಟಗಾರ್ತಿ ಪೈಲೆಟ್ ಅಲ್ಲ. ಇವರು 2016ರ ಜೂನ್ ನಲ್ಲಿ ಭಾರತೀಯ ವಾಯುದಳಕ್ಕೆ ಮೊದಲ ಬಾರಿಗೆ ಆಯ್ಕೆಯಾದವರು?
(1) ಅವನಿ ಚತುರ್ವೇದಿ
(2) ಅನುಪಮಾ ರಾವತ್
(3) ಭಾವನಾ ಕಾಂತ್
(4) ಮೋಹನಾ ಸಿಂಗ್
ಸರಿ ಉತ್ತರ
(2) ಅನುಪಮಾ ರಾವತ್
20. ಭಾರತದ ಸರಕುಗಳು ಮತ್ತು ಸೇವೆಗಳ ತೆರಿಗೆ (GST) ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಲ್ಲ?
(1) GST ಪರೋಕ್ಷ ತೆರಿಗೆಯಾಗುವುದು
(2) ಇದರಲ್ಲಿ ರಾಜ್ಯ GST ಮತ್ತು ಕೇಂದ್ರ GST ಎಂಬ ಎರಡು ಅಂಗಗಳಿವೆ.
(3) ರಾಜ್ಯಸಭೆ GST ಯನ್ನು 2016 ಆಗಸ್ಟ್ 3ರಂದು ಅನುಮೋದಿಸಿತು.
(4) GST ವಿನಾಯಿತಿಗೆ ಯಾವುದೇ ಹೊಸಿಲಂಚಿನ ಮಟ್ಟಿನ ವಹಿವಾಟು ನಿಗದಿಪಡಿಸಿಲ್ಲ
ಸರಿ ಉತ್ತರ
(4) GST ವಿನಾಯಿತಿಗೆ ಯಾವುದೇ ಹೊಸಿಲಂಚಿನ ಮಟ್ಟಿನ ವಹಿವಾಟು ನಿಗದಿಪಡಿಸಿಲ್ಲ
21. ಆಂಗ್ ಸಾನ್ ಸೂ ಕೀ
i. ಇವರ ಹೆಸರು ಅವರ ಮೂರು ಸಂಬಂ ಕರಿಂದ ಉತ್ಪತ್ತಿಯಾಯಿತು
ii. ಬರ್ಮೀಯ ದೀರ್ಘದೃಷ್ಟಿಯ ಸ್ತ್ರೀ ರಾಜಕಾರಣಿ
iii. ರಾಷ್ಟ್ರೀಯ ಪ್ರಜಾಪ್ರಭುತ್ವದ ಲೀಗ್ ನ ಅಧ್ಯಕ್ಷರು
vi. 2016ರ ನೋಬೆಲ್ ಪ್ರಶಸ್ತಿ ಪುರಸ್ಕೃತರು
ಸರಿಯಾದ ಉತ್ತರವನ್ನು ಆರಿಸಿ
(1) i ಮಾತ್ರ ಸರಿ
(2) i ಮತ್ತು ii ಮಾತ್ರ ಸರಿ
(3) i, ii ಮತ್ತು iii ಮಾತ್ರ ಸರಿ
(4) ಮೇಲಿನ ಎಲ್ಲವೂ ಸರಿ
ಸರಿ ಉತ್ತರ
(3) i, ii ಮತ್ತು iii ಮಾತ್ರ ಸರಿ
22. ಈ ದೇಶಗಳ ಪೈಕಿ 2013ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಗೆ ದೂರಿ ಜವಹರಲಾಲ್ ನೆಹರೂ ರಾಷ್ಟ್ರೀಯ ಸೌರ ಮಿಷನ್ ಸಬ್ಸಿಡಿಗಳನ್ನು ನೀಡಬೇಕಾದರೆ ಅದನ್ನು ತಯಾರಿಸುವ ಉಪಕರಣಗಳು ಭಾರತದಲ್ಲಿ ತಯಾರಾಗಬೇಕೆಂದೂ ಇಲ್ಲವಾದರೆ ಅದು ಜಾಗತಿಕ ವ್ಯಾಪಾರದ ಪ್ರಧಾನ ನಿಯಮೋಲ್ಲಂಘನೆ ಎಂದೂ ದೂರಿದವರು
(1) ಆಸ್ಟ್ರೇಲಿಯಾ
(2) ಚೈನಾ
(3) ಪಾಕಿಸ್ತಾನ್
(4) ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ
ಸರಿ ಉತ್ತರ
(4) ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ
23. ಇವುಗಳನ್ನು ಹೊಂದಿಸಿ:
| ವಿದ್ಯಮಾನ |
| ವರ್ಷ |
A. | ವಿಶ್ವ ರಾಷ್ಟ್ರ | I. | 1979 |
B. | Kyoto ಪ್ರೋಟೋಕಾಲ್ | II. | 1992 |
C. | ರಿಯೋ ಭೂಶೃಂಗ | III. | 1997 |
D. | ಜಿನಿವಾದ ಮೊದಲ | IV. | 2015 |
|
| V. | 2016 |
| A | B | C | D |
(1) | IV | III | II | I |
(2) | IV | III | II | V |
(3) | IV | II | III | V |
(4) | IV | V | II | III |
ಸರಿ ಉತ್ತರ
(1) IV III II I
24. ಈ ಪೈಕಿ ಯಾವ ಕರೆನ್ಸಿಯು ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ವಿಶೇಷ ಸೆಳೆತ ಹಕ್ಕಿನ ಬೆಲೆಯನ್ನು ನಿರ್ಧರಿಸುವ ಗುಂಪಿಗೆ ಸೇರದು?
(1) ಜಪಾನೀಯರ ಯೆನ್
(2) ಭಾರತದ ರೂಪಾಯಿ
(3) US ನ ಡಾಲರ್
(4) UK ಯ ಪೌಂಡ್ ಸ್ಟರ್ಲಿಂಗ್
ಸರಿ ಉತ್ತರ
(2) ಭಾರತದ ರೂಪಾಯಿ
25. ಇವುಗಳ ಸರಿಯಾದ ಕಾಲಾನುಕ್ರಮ ಸೂಚಿಸಿ :
A. ಕಮ್ಯೂನಲ್ ಪ್ರಶಸ್ತಿ
B. ಸೈಮನ್ ಕಮಿಷನ್
C. ಮೊದಲ ದುಂಡು ಮೇಜಿನ ಪರಿಷತ್ತು
D. ಗಾಂಧಿ -ಇರ್ವಿನ್ ಒಡಂಬಡಿಕೆ
(1) A, B, C, D
(2) B, A, C, D
(3) B, C, A, D
(4) B, C, D, A
ಸರಿ ಉತ್ತರ
(4) B, C, D, A
26. ಕ್ರಾಂತಿಕಾರಿ ಯುಗಾಂತರ ಪಕ್ಷದ ಮುಂದಾಳತ್ವ ವಹಿಸಿದವರು- ಈ ಪಕ್ಷವು ಸಂಪನ್ಮೂಲ ಬಳಕೆ ಮಾಡಿ ಅಂತಾರಾಷ್ಟ್ರೀಯ ಸಂಪರ್ಕದ ಮೂಲಕ ಸೂಕ್ತ ಸಮಯದಲ್ಲಿ ಸೇನಾ ಸಂಚು ಹೂಡಲು ಪ್ರಯತ್ನಿಸಿತು- ಇವರು ಯಾರು?
(1) ಜತೀಂದ್ರನಾಥ್ ಮುಖರ್ಜಿ
(2) ಸಚಿಂದ್ರನಾಥ್ ಸನ್ಯಾಲ್
(3) ರಾಸ್ ಬಿಹಾರಿ ಬೋಸ್
(4) ಮೇಲಿನ ಯಾರೂ ಅಲ್ಲ
ಸರಿ ಉತ್ತರ
(1) ಜತೀಂದ್ರನಾಥ್ ಮುಖರ್ಜಿ
27. ಕೆಲವು ಭಾರತ ರಾಷ್ಟ್ರೀಯ ಚಳುವಳಿಗಾರರು ಹಾಗೂ ಅವರ ಚಟುವಟಿಕೆಯ ಪ್ರದೇಶಗಳನ್ನು ಈ ಕೆಳಗೆ ನೀಡಿದೆ. ಸರಿಯಾದ ಜೋಡಿಯನ್ನು ಗುರುತಿಸಿ.
A. ಜಿ.ವಿ.ಜೋಷಿ – ಮುಂಬಯಿ
B. ಆನಂದಾಚಾರ್ಲು – ಮದ್ರಾಸ್
C. ಕೆ.ಟಿ.ತೆಲಾಂಗ್ – ಪೂನಾ
D. ದ್ವಾರಕಾನಾಥ ಗಂಗೂಲಿ – ಕಲ್ಕತ್ತಾ
ಸಂಕೇತಗಳ ಸಹಾಯದಿಂದ ಸರಿ ಉತ್ತರವನ್ನು ಆರಿಸಿ.
(1) A ಮತ್ತು B
(2) B ಮತ್ತು C
(3) B ಮತ್ತು D
(4) C ಮತ್ತು D
ಸರಿ ಉತ್ತರ
(3) B ಮತ್ತು D
28. ಸ್ವದೇಶಿ ಚಳುವಳಿಯ ಅಂತ್ಯದಲ್ಲಿ ಬಹುತೇಕ ನಾಯಕರು ರಾಷ್ಟ್ರೀಯ ದೃಶ್ಯದಿಂದ ಕಣ್ಮರೆ ಆದರು.
A. ಬಿ.ಜಿ.ತಿಲಕರು ಮಾಂಡ್ಲೆ ಸೆರೆಮನೆಗೆ ಹೋದರು
B. ಅರವಿಂದ ಘೋಷರು ತಾತ್ಕಾಲಿಕವಾಗಿ ರಾಜಕೀಯ ನಿವೃತ್ತಿ ಪಡೆದರು
C. ಬಿ.ಸಿ.ಪಾಲ್ ವಿದೇಶಕ್ಕೆ ಹೋದರು
D. ಲಜಪತ್ರಾಯ್ ಕ್ರಾಂತಿಕಾರಿ ಸಂಚಿನ ಪ್ರಕರಣದಲ್ಲಿದ್ದರೆಂದು ಭಾವಿಸಲಾಯಿತು
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರ ಆರಿಸಿ
(1) A ಮತ್ತು B
(2) A ಮಾತ್ರ
(3) C ಮಾತ್ರ
(4) C ಮತ್ತು D
ಸರಿ ಉತ್ತರ
(1) A ಮತ್ತು B
29. ಭಾರತಕ್ಕೆ ಕ್ಯಾಬಿನೆಟ್ ಮಿಷನ್ ಕಳುಹಿಸಲು ಕಾರಣ
A. ರಾಷ್ಟ್ರೀಯ ಸರ್ಕಾರ ರಚನೆಗಾಗಿ
B. ಅಧಿಕಾರ ವರ್ಗಾವಣೆಗೆ ಸಾಂವಿಧಾನಿಕ ವ್ಯವಸ್ಥೆಯನ್ನು ರೂಪಿಸುವುದಕ್ಕಾಗಿ
C. ಪಾಕಿಸ್ತಾನ ಕುರಿತ ಜಿನ್ನಾ ಅವರ ಬೇಡಿಕೆ ಪರಿಗಣಿಸಿ ವಿವರಗಳನ್ನು ರೂಪಿಸುವುದಕ್ಕಾಗಿ
D. ಮೇಲಿನ ಯಾವುವೂ ಅಲ್ಲ
ಸಂಕೇತದ ಸಹಾಯದಿಂದ ಸರಿ ಉತ್ತರವನ್ನು ಆರಿಸಿ :
(1) B ಮಾತ್ರ
(2) A ಮತ್ತು B
(3) C ಮಾತ್ರ
(4) D ಮಾತ್ರ
ಸರಿ ಉತ್ತರ
(2) A ಮತ್ತು B
30. ಮಿಂಟೋ-ಮಾರ್ಲೆ ಸುಧಾರಣೆಗಳನ್ನು ಪ್ರಸ್ತಾಪಿಸುತ್ತಾ ಈ ಸುಧಾರಣಾ ಅಧ್ಯಾಯಗಳು ನೇರವಾಗಿ ಅಥವಾ ಅಗತ್ಯವಾಗಿ ಭಾರತದಲ್ಲಿ ಪಾರ್ಲಿಮೆಂಟರಿ ವ್ಯವಸ್ಥೆ ತರುವುದೆಂದು ಭಾವಿಸಿದರೆ, ನಾನೇನೂ ಮಾಡುವಂತಿಲ್ಲ ಎಂದು ಹೇಳಿದವರು ಯಾರು?
(1) ಮಾರ್ಲೆ
(2) ಮಿಂಟೋ
(3) ಕ್ರೇವ್
(4) ಕರ್ಜನ್
ಸರಿ ಉತ್ತರ
(1) ಮಾರ್ಲೆ
31. ಈ ಹೇಳಿಕೆಗಳು ಕಂದಾಯದ ಒಪ್ಪಂದಗಳು, ನೆಲೆಗಳು ಮತ್ತು ಬ್ರಿಟಿಷರ ಅಡಿ ಅವು ಜಾರಿಗೆ ಬಂದ ಪ್ರದೇಶಗಳನ್ನು ತಿಳಿಸುತ್ತವೆ.
A. ಶಾಶ್ವತ ಜಮೀನ್ದಾರಿ ಪದ್ಧತಿ – ಬಂಗಾಳ, ಬಿಹಾರ, ಒರಿಸ್ಸಾ
B. ತಾತ್ಕಾಲಿಕ ಜಮೀನ್ದಾರಿ ಪದ್ಧತಿ – ಮಧ್ಯ ಭಾರತ, ಅವಧ್
C. ರೈತವಾರಿ ಪದ್ಧತಿ -ದಕ್ಷಿಣ ಬಾಂಬೆ, ನೈರುತ್ಯ ಭಾರತ
D. ಮಹಲ್ವಾರಿ ಪದ್ಧತಿ -ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್ ಮತ್ತು ದೆಹಲಿ
ಸಂಕೇತಗಳ ಸಹಾಯದಿಂದ ಸರಿ ಉತ್ತರವನ್ನು ಆರಿಸಿ :
(1) A ಮತ್ತು D
(2) A, C ಮತ್ತು D
(3) A ಮತ್ತು C
(4) A, B, C ಮತ್ತು D
ಸರಿ ಉತ್ತರ
(4) A, B, C ಮತ್ತು D
32. ವಿಖ್ಯಾತ ಲೇಖಕರು ಮತ್ತು ಅವರ ಕೃತಿಗಳನ್ನು ಈ ಕೆಳಗೆ ನೀಡಲಾಗಿದೆ.
A. ಕಾಳಿದಾಸ – ಮುದ್ರಾರಾಕ್ಷಸ
B. ವರಾಹಮಿಹಿರ – ಪಂಚ ಸಿದ್ಧಾಂತಿಕ
C. ಶೂದ್ರಕ – ಋತು ಸಂಹಾರ
D. ವಿಶಾಖದತ್ತ – ಮೃಚ್ಛಕಟಿಕ
ಕೊಟ್ಟಿರುವ ಆಯ್ಕೆಗಳಿಂದ ಸರಿಯುತ್ತರ ಆರಿಸಿ.
(1) A ಮಾತ್ರ ಸರಿ
(2) B ಮಾತ್ರ ಸರಿ
(3) B ಮತ್ತು C ಮಾತ್ರ ಸರಿ
(4) D ಮಾತ್ರ ಸರಿ
ಸರಿ ಉತ್ತರ
(2) B ಮಾತ್ರ ಸರಿ
33. ಸೂಫಿ ಕ್ರಮಗಳ ಭದ್ರಕೋಟೆಗಳನ್ನು ಈ ಕೆಳಗೆ ನೀಡಿದೆ. ತಪ್ಪಾದ ಜೋಡಿಯನ್ನು ಹುಡುಕಿ.
(1) ಚಿಸ್ತಿ – ದೆಹಲಿ ಮತ್ತು ದೋಅಬ್
(2) ಸಹ್ರವರ್ಡಿ – ಸಿಂಧ್
(3) ಔಲಿಯಾ – ಮಧ್ಯಪ್ರದೇಶ
(4) ಫಿರ್ದೌಸಿ – ಬಿಹಾರ
ಸರಿ ಉತ್ತರ
(3) ಔಲಿಯಾ – ಮಧ್ಯಪ್ರದೇಶ
34. ಇವರುಗಳಲ್ಲಿ ಪ್ರಧಾನಮಂತ್ರಿಯಾಗಿ ಆಯ್ಕೆಯಾದಾಗ ಲೋಕಸಭಾ ಸದಸ್ಯರಾಗಿಲ್ಲದೆ ಇದ್ದವರು ಯಾರು
A. ಇಂದಿರಾ ಗಾಂಧಿ
B. ಪಿ.ವಿ.ನರಸಿಂಹರಾವ್
C. ಎಚ್.ಡಿ.ದೇವೇಗೌಡ
D. ಮೊರಾರ್ಜಿ ದೇಸಾಯಿ
ಸಂಕೇತದ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ.
(1) A ಮತ್ತು C
(2) B ಮತ್ತು C
(3) B, C ಮತ್ತು D
(4) A, B, C ಮತ್ತು D
ಸರಿ ಉತ್ತರ
(2) B ಮತ್ತು C
35. ಲೋಕಸಭೆಯ ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಈ ಹೇಳಿಕೆಗಳನ್ನು ಗಮನಿಸಿ.
A. ಸಂವಿಧಾನದಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾಪವಿಲ್ಲ.
B. ಅವಿಶ್ವಾಸ ನಿರ್ಣಯ ಮಂಡನೆಗೂ ಮತ್ತು ಮತ್ತೊಂದು ಬಾರಿ ಮಂಡನೆಗೂ ಆರು ತಿಂಗಳ ಅಂತರವಿರಬೇಕು.
C. ಸದನದಲ್ಲಿ ಪ್ರಸ್ತಾಪವಾಗಬೇಕಾದರೆ ಕನಿಷ್ಠ 100 ಸದಸ್ಯರು ಅದನ್ನು ಬೆಂಬಲಿಸಬೇಕು.
D. ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು.
(1) A ಮತ್ತು B ಸರಿ
(2) A, B, C ಮತ್ತು D ಸರಿ
(3) A, B ಮತ್ತು C ಸರಿ
(4) A ಮತ್ತು D ಸರಿ
ಸರಿ ಉತ್ತರ
(4) A ಮತ್ತು D ಸರಿ
36. ಲೋಕಸಭಾ ಅವಧಿಯನ್ನು ಸಾಮಾನ್ಯ ಅವಧಿ ಐದು ವರ್ಷಗಳಿಗೂ ಮೀರಿ ವಿಸ್ತರಿಸುವುದು
(1) ಭಾರತದ ರಾಷ್ಟ್ರಪತಿಗಳು ಅವರ ನಿರ್ದೇಶನದ ಮೇರೆಗೆ
(2) ಚುನಾವಣಾ ಆಯೋಗದ ಶಿಫಾರಸ್ಸಿನ ಮೇಲೆ ರಾಷ್ಟ್ರಪತಿಗಳು
(3) ಎಲ್ಲ ತುರ್ತುಪರಿಸ್ಥಿತಿಯಲ್ಲೂ ರಾಷ್ಟ್ರಪತಿಗಳು
(4) ರಾಷ್ಟ್ರೀಯ ತುರ್ತುಪರಿಸ್ಥಿತಿಯಲ್ಲಿ ಸಂಸತ್ತು
ಸರಿ ಉತ್ತರ
(4) ರಾಷ್ಟ್ರೀಯ ತುರ್ತುಪರಿಸ್ಥಿತಿಯಲ್ಲಿ ಸಂಸತ್ತು
37. ಈ ಪೈಕಿ ಯಾವ ತಿದ್ದುಪಡಿಯು ಸರ್ವೋಚ್ಛ ನ್ಯಾಯಾಲಯದ ನ್ಯಾಯಿಕ ಮರುಪರಿಶೀಲನೆಯ ಅಧಿಕಾರ /ಸಾಮರ್ಥ್ಯವನ್ನು ಹೊಂದಿದೆ?
(1) 42ನೇ ತಿದ್ದುಪಡಿ
(2) 44 ನೇ ತಿದ್ದುಪಡಿ
(3) 29 ನೇ ತಿದ್ದುಪಡಿ
(4) ಈ ಮೇಲಿನ ಯಾವುದೂ ಅಲ್ಲ
ಸರಿ ಉತ್ತರ
(1) 42ನೇ ತಿದ್ದುಪಡಿ
38. ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನು ಅಪವರ್ತನೆ ಆಧಾರದ ಮೇಲೆ ತೆಗೆದುಹಾಕುವುದು ಇವರಿಂದ ವಿಚಾರಣೆಯಾದ ನಂತರ
(1) ರಾಷ್ಟ್ರಪತಿಗಳು ನೇಮಕ ಮಾಡಿದ ಸಮಿತಿ
(2) ಭಾರತದ ಸರ್ವೋಚ್ಛ ನ್ಯಾಯಾಲಯ
(3) ಭಾರತದ ಉಚ್ಛ ನ್ಯಾಯಾಲಯ
(4) ರಾಜ್ಯದ ರಾಜ್ಯಪಾಲರು ನೇಮಿಸಿದ ಸಮಿತಿ
ಸರಿ ಉತ್ತರ
(2) ಭಾರತದ ಸರ್ವೋಚ್ಛ ನ್ಯಾಯಾಲಯ
39. ಭಾರತದಲ್ಲಿ ಹೊಸ ರಾಜ್ಯ ಸ್ಧಾಪನೆ ಆಗಬೇಕಾದರೆ
(1) ಪಾರ್ಲಿಮೆಂಟ್ ನಲ್ಲಿ ಸರಳ ಬಹುಮತ ಬೇಕು
(2) ಪಾರ್ಲಿಮೆಂಟ್ ನ ಸರಳ ಬಹುಮತ ಹಾಗೂ ಬಹುತೇಕ ರಾಜ್ಯಗಳ ಅನುಮೋದನೆ
(3) ಪಾರ್ಲಿಮೆಂಟಿನ ಮೂರರ ಎರಡರಷ್ಟು ಬಹುಮತ
(4) ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಮೂರರ ಎರಡರಷ್ಟು ಬಹುಮತ ಹಾಗೂ ಬಹುತೇಕ ರಾಜ್ಯಗಳ ಅನುಮೋದನೆ
ಸರಿ ಉತ್ತರ
(1) ಪಾರ್ಲಿಮೆಂಟ್ ನಲ್ಲಿ ಸರಳ ಬಹುಮತ ಬೇಕು
40. ರಾಜ್ಯ ಸಭೆಯ ವಿಶೇಷ ಅಧಿಕಾರಿಗಳ ಪೈಕಿ ಯಾವುದು ತಪ್ಪಾಗಿ ಪಟ್ಟಿಯಾಗಿದೆ?
(1) ಭಾರತದ ಉಪರಾಷ್ಟ್ರಪತಿಗಳ ವಜಾಗೆ ನಿರ್ಧಾರ ರಾಜ್ಯಸಭೆ ಮಾತ್ರ ಪ್ರಯತ್ನಿಸಬಹುದು.
(2) ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸುವ ನಿರ್ಧಾರವನ್ನು ರಾಜ್ಯಸಭೆ ಮಾತ್ರ ಪ್ರಯತ್ನಿಸಬಹುದು.
(3) ಯಾವುದೇ ವಿಷಯದ ರಾಜ್ಯ ನಿಯಮಗಳಿಗೆ ಸಂಬಂಧಪಟ್ಟಂತೆ ಅದು ರಾಷ್ಟ್ರೀಯ ಹಿತಾಸಕ್ತಿಯೆಂದು ಮನವರಿಕೆಯಾಗಿ ರಾಜ್ಯಸಭೆಯಲ್ಲಿ ಮೊದಲು ಪ್ರಯತ್ನ ಆಗಬೇಕು.
(4) ಈ ಮೇಲಿನ ಯಾವುದು ಅಲ್ಲ
ಸರಿ ಉತ್ತರ
(4) ಈ ಮೇಲಿನ ಯಾವುದು ಅಲ್ಲ
41. 2016 ರಲ್ಲಿ ಭಾರತ ಅಂತರಾಷ್ಟ್ರೀಯ ವ್ಯಾಪಾರ ಸನ್ನದಿನಲ್ಲಿ (IITF) ಕೇಂದ್ರೀಕೃತ ರಾಷ್ಟ್ರ ಯಾವುದು?
(1) ದಕ್ಷಿಣ ಕೊರಿಯಾ
(2) ಬೆಲರೂಸ್
(3) ಸೈಪ್ರಸ್
(4) ಮಲೇಶಿಯಾ
ಸರಿ ಉತ್ತರ
(2) ಬೆಲರೂಸ್
42. ವಿದ್ಯಾರ್ಥಿಗಳಿಗಾಗಿ ಉದ್ಯೋಗವನ್ನು ಸೃಷ್ಟಿಸಲು ಯಾವ ಕೇಂದ್ರ ಮಂತ್ರಿಮಂಡಲದೊಂದಿಗೆ ಎಂ.ಯು.ಗೆ ಲಿಂಕ್ಡ್ಇನ್ ಸಹಿ ಮಾಡಿತು?
(1) ಕೌಶಲ ಬೆಳವಣಿಗೆ ಮತ್ತು ವಾಣಿಜ್ಯೋದ್ಯಮ ಮಂತ್ರಿಮಂಡಲ
(2) ಗೃಹ ವ್ಯವಹಾರಗಳ ಮಂತ್ರಿಮಂಡಲ
(3) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿಮಂಡಲ
(4) ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಮಂಡಲ
ಸರಿ ಉತ್ತರ
(4) ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಮಂಡಲ
43. 1875 ರಲ್ಲಿ ಮೊಹಮದನ್ ಆಂಗ್ಲೋ ಓರಿಯೆಂಟಲ್ ಕಾಲೇಜು ಸ್ಥಾಪನೆಯಾದದ್ದು ಇಲ್ಲಿ
(1) ಕಲ್ಕತ್ತಾ
(2) ಅಲೀಗಢ
(3) ದೆಹಲಿ
(4) ಆಗ್ರಾ
ಸರಿ ಉತ್ತರ
(2) ಅಲೀಗಢ
44. ರಾಬರ್ಟ್ ಕ್ಲೈವ್, ಹೊಸದಾಗಿ ಸ್ವಾಧೀನಪಡಿಸಿಕೊಂಡ ಬಂಗಾಳದ ಪ್ರಾಂತ್ಯಗಳ ಸಾಮಾನ್ಯ ಸಮೀಕ್ಷೆಯನ್ನು ವಹಿಸಿದ್ದು
(1) ವಿಲಿಯಂ ಲಾಂಬ್ಟನ್
(2) ಅಲೆಕ್ಸಾಂಡರ್ ಕನಿಂಗ್ಹ್ಯಾಮ್
(3) ಕೊಲಿನ್ ಮೆಕೆಂಜೀ
(4) ಜೇಮ್ಸ್ ರೆನ್ನೆಲ್
ಸರಿ ಉತ್ತರ
(4) ಜೇಮ್ಸ್ ರೆನ್ನೆಲ್
45. ‘ದುರ್ಗೇಶ ನಂದಿನಿ’ಯ ಲೇಖಕರು
(1) ಬಂಕಿಮಚಂದ್ರ ಚಟ್ಟೋಪಾಧ್ಯಾಯ
(2) ಶರತ್ ಚಂದ್ರ ಚಟರ್ಜಿ
(3) ಅರವಿಂದ ಘೋಷ್
(4) ರವೀಂದ್ರನಾಥ ಟ್ಯಾಗೋರ್
ಸರಿ ಉತ್ತರ
(1) ಬಂಕಿಮಚಂದ್ರ ಚಟ್ಟೋಪಾಧ್ಯಾಯ
46. ಈ ಪೈಕಿ ಯಾವ ಕಾಂಗ್ರೆಸ್ಸಿಗರು ವಿಭಜನೆಯನ್ನು ಅನಿವಾರ್ಯ ಅಗತ್ಯ ಎಂದು ಪರಿಗಣಿಸಿ ದೀರ್ಘಾವಧಿಯಲ್ಲಿ ಅದನ್ನು ಅಂತರಂಗದಲ್ಲಿ ಒಪ್ಪದವರು?
(1) ಮಹಮದ್ ಆಲಿ ಜಿನ್ನಾ
(2) ಮಹಾತ್ಮ ಗಾಂಧಿ
(3) ಸರ್ದಾರ್ ಪಟೇಲ್
(4) ಜವಹರ್ಲಾಲ್ ನೆಹರೂ
ಸರಿ ಉತ್ತರ
(2) ಮಹಾತ್ಮ ಗಾಂಧಿ
47. ಕ್ರಿಕೆಟ್ ಆಟಗಾರರನ್ನು ಅವರ ಕೃತಿಗಳನ್ನು ಹೊಂದಿಸಿ:
1. | ಕ್ರಿಕೆಟ್ ಮೈ | A. | ರಾಹುಲ್ ದ್ರಾವಿಡ್ |
2. | ರನ್ಸ್–ಎನ್ | B. | ಯುವರಾಜ್ ಸಿಂಗ್ |
3. | ಪ್ಲೇಯಿಂಗ್ ಇಟ್ | C. | ಸುನೀಲ್ ಗಾವಸ್ಕರ್ |
4. | ಟೈಮ್ಲೆಸ್ ಸ್ಟೀಲ್ | D. | ಸಚಿನ್ ತೆಂಡೂಲ್ಕರ್ |
|
| E. | ಕಪಿಲ್ ದೆೇವ್ |
ಸಂಕೇತಗಳು: | ||||
1 | 2 | 3 | 4 | |
(1) | D | C | A | E |
(2) | E | C | D | A |
(3) | B | E | C | D |
(4) | C | A | B | E |
ಸರಿ ಉತ್ತರ
(2) E C D A
48. ಈ ಪೈಕಿ ಯಾವುದು ರಾಷ್ಟ್ರೀಯ ಗುರುತಿನ ಸಂಕೇತವಲ್ಲ?
(1) ಆಲದ ಮರ
(2) ರಿವರ್ ಡಾಲಿ ನ್
(3) ಮಾವು
(4) ಆನೆ
ಸರಿ ಉತ್ತರ
(4) ಆನೆ
49. ಹಬ್ಬ ಹಾಗೂ ಅದನ್ನು ಆಚರಿಸುವ ಪ್ರದೇಶಗಳನ್ನು ಹೊಂದಿಸಿರಿ:
1. | ಫ್ಲೋಟ್ ಹಬ್ಬ | A. | ತಮಿಳುನಾಡು |
2. | ಗುಲಾಬಿ ಹಬ್ಬ | B. | ಬಿಹಾರ್ |
3. | ಪುಷ್ಕರ್ | C. | ಕೇರಳ |
4. | ಪೂರಮ್ | D. | ಚಂಡೀಗಢ |
|
| E. | ರಾಜಸ್ಥಾನ |
ಸಂಕೇತಗಳು: | ||||
| 1 | 2 | 3 | 4 |
(1) | A | D | E | C |
(2) | C | D | B | A |
(3) | E | C | A | B |
(4) | D | A | C | E |
ಸರಿ ಉತ್ತರ
(1) A D E C
50. ಶುಷ್ಕ ಮಂಜು ಎಂದರೆ
(1) ಘನೀಭವಿಸಿದ ಕಾರ್ಬನ್ ಡೈಆಕ್ಸೈಡ್
(2) ಸಾರಯುತ ಸಲ್ಫರ್ ಆಮ್ಲ
(3) ರಾಸಾಯನಿಕವಾಗಿ ಆಸವಿತ ನೀರು ಶೂನ್ಯತಾಪದಲ್ಲಿ ಘನೀಭವಿಸಿದ್ದು
(4) ತೈಲವಸ್ತು ಹಾಗೂ ಮರದ ಹೊಟ್ಟು ಇರುವ ಗಡಸು ನೀರು
ಸರಿ ಉತ್ತರ
(1) ಘನೀಭವಿಸಿದ ಕಾರ್ಬನ್ ಡೈಆಕ್ಸೈಡ್
51. ಡಿ.ಆರ್.ಡಿ.ಓ. ಸಿದ್ಧಪಡಿಸಿದ ವ್ಯವಸ್ಥೆಯ ಹೆಸರು/ಉದ್ದೇಶಗಳನ್ನು ಹೊಂದಿಸಿ.
1. ಬ್ರಹ್ಮೋಸ್ | A. | ವಿದ್ಯುನ್ಮಾನ ಯುದ್ಧ |
2. ಪಿನಾಕ | B. | ಚಾಲಕರಹಿತ ಗುರಿಯ |
3. ಲಕ್ಷ್ಯ | C. | ಬಹುಬ್ಯಾರೆಲ್ ರಾಕೆಟ್ |
4. ಸಂಗ್ರಹ | D. | ಸೂಪರ್ ಸೊನಿಕ್ |
| E. | ವಾಯುಮಂಡಲ ಮಧ್ಯ |
ಸಂಕೇತಗಳು: | ||||
| 1 | 2 | 3 | 4 |
(1) | E | A | D | E |
(2) | D | C | B | A |
(3) | D | E | A | C |
(4) | C | B | E | A |
ಸರಿ ಉತ್ತರ
(2) D C B A
52. ಈ ವ್ಯಕ್ತಿಗಳನ್ನು ಅವರ ಹೆಸರಿನಲ್ಲಿ ಕೈಗೊಳ್ಳುವ ಆಚರಣೆಯನ್ನು ಹೊಂದಿಸಿ
1. | ರಾಜೀವ್ ಗಾಂಧಿ | A. | ಪ್ರವಾಸಿ ಭಾರತೀಯ |
2. | ಸರ್ದಾರ್ ವಲ್ಲಭ್ | B. | ಸದ್ಭಾವನಾ ದಿವಸ |
3. | ಚೌಧರಿ ಚರಣ್ | C. | ರಾಷ್ಟ್ರೀಯ ಏಕತಾ |
4. | ಮಹಾತ್ಮ ಗಾಂಧಿ | D. | ಕಿಸಾನ್ ದಿವಸ |
|
| E. | ವಿಜಯ ದಿವಸ |
ಸಂಕೇತಗಳು: | ||||
| 1 | 2 | 3 | 4 |
(1) | C | E | B | D |
(2) | B | C | D | A |
(3) | E | C | A | B |
(4) | D | A | E | C |
ಸರಿ ಉತ್ತರ
(2) B C D A
53. ದೇಶಗಳನ್ನೂ, ನಾಣ್ಯಗಳನ್ನೂ ಹೊಂದಿಸಿ:
1. | ಬಾಂಗ್ಲಾದೇಶ | A. | ಕ್ಯಾಟ್ |
2. | ಡೆನ್ಮಾರ್ಕ್ | B. | ಬಹ್ತ್ |
3. | ಥೈಲ್ಯಾಂಡ್ | C. | ಕ್ರೋನರ್ |
4. | ಮ್ಯಾನ್ಮಾರ್ | D. | ಟಕಾ |
|
| E. | ಯೂರೋ |
ಸಂಕೇತಗಳು: | ||||
| 1 | 2 | 3 | 4 |
(1) | B | E | D | A |
(2) | D | C | B | A |
(3) | C | E | A | B |
(4) | A | C | D | B |
ಸರಿ ಉತ್ತರ
(2) D C B A
54. ಆಟಗಾರರು ಮತ್ತು ಕ್ರೀಡೆಗಳು ಹೊಂದಿಸಿ
1. | ಕರ್ಣಮ್ ಮಲ್ಲೇಶ್ವರಿ | A. | ಬ್ಯಾಸ್ಕೆಟ್ ಬಾಲ್ |
2. | ಸತ್ನಾಂಸಿಂಗ್ ಭಮರ | B. | ಕಬಡ್ಡಿ |
3. | ರಾಕೇಶ್ ಕುಮಾರ್ | C. | ಭಾರ ಎತ್ತುವಿಕೆ |
4. | ವಿಜೇಂದರ್ ಸಿಂಗ್ | D. | ಬಾಕ್ಸಿಂಗ್ |
|
| E. | ಟೇಬಲ್ ಟೆನ್ನಿಸ್ |
ಸಂಕೇತಗಳು: | ||||
| 1 | 2 | 3 | 4 |
(1) | D | C | E | A |
(2) | C | A | B | D |
(3) | B | E | A | D |
(4) | E | B | C | A |
ಸರಿ ಉತ್ತರ
(2) C A B D
55. ಕಿತಾಬ್-ಎ-ನವರಸ್ ಎಂಬ ಸಂಗೀತ ಗ್ರಂಥದ ಕರ್ತೃ
(1) ಇಬ್ರಾಹಿಂ ಆದಿಲ್ ಷಾ II
(2) ಯೂಸ್ ಆದಿಲ್ ಷಾ
(3) ಇಸ್ಮಾಯಿಲ್ ಆದಿಲ್ ಷಾ
(4) ಆಲಿ ಆದಿಲ್ ಷಾ
ಸರಿ ಉತ್ತರ
(1) ಇಬ್ರಾಹಿಂ ಆದಿಲ್ ಷಾ II
56. ಎಡೆಯೂರು ನಲ್ಲಿನ ತೋಟದ ಸಿದ್ಧಲಿಂಗೇಶ್ವರ ದೇವಾಲಯ ಅಲಂಕರಿಸಿರುವ ಪೆಯಿಂಟಿಂಗ್
(1) ಅಷ್ಟದಿಕ್ಪಾಲಕರು
(2) ಚತುರ್ದಿಕ್ಪಾಲಕರು
(3) ಪಂಚದಿಕ್ಪಾಲಕರು
(4) ಈ ಮೇಲಿನ ಯಾವುವೂ ಅಲ್ಲ
ಸರಿ ಉತ್ತರ
(1) ಅಷ್ಟದಿಕ್ಪಾಲಕರು
57. ಈ ಅರಸರ ಆಳ್ವಿಕೆಯಲ್ಲಿ ರಂಭಾ ಪ್ರಸಿದ್ಧ ನರ್ತಕಿ ಆಗಿದ್ದು
(1) ಬಹಮನಿಗಳು
(2) ಆದಿಲ್ ಷಾಹಿಗಳು
(3) ವಿಜಯನಗರ
(4) ಮೈಸೂರು ಒಡೆಯರು
ಸರಿ ಉತ್ತರ
(2) ಆದಿಲ್ ಷಾಹಿಗಳು
58. ವಿಜಯನಗರ ಆಳ್ವಿಕೆಯ ರಾಜರ ಸಮ್ಮುಖದಲ್ಲಿ ಈ ಹಬ್ಬದಲ್ಲಿ ನರ್ತಕಿಯರು ನರ್ತನ ಮತ್ತು ಕುಸ್ತಿ ಮಾಡುತ್ತಿದ್ದರು :
(1) ದೀಪಾವಳಿ
(2) ಮಹಾನವಮಿ
(3) ಹೋಳಿ
(4) ಯುಗಾದಿ
ಸರಿ ಉತ್ತರ
(2) ಮಹಾನವಮಿ
59. ಪಟ್ಟಿ I ಮತ್ತು ಪಟ್ಟಿ II ಯನ್ನು ಜೋಡಣೆ ಮಾಡಿ ಸಂಕೇತಾಧರಿಸಿ ಸರಿಯಾದ ಉತ್ತರ ಆರಿಸಿ
| ಪಟ್ಟಿ I (ಗ್ರಂಥಗಳು) |
| ಪಟ್ಟಿ II (ಲೇಖಕರು) |
a. | ಕನಿಷ್ಠ ಬೆಲೆ | i. | ವಾನ್ ಥ್ಯುನೆನ್ಸ್ |
b. | ಬೇಡಿಕೆಯ ಹುಡುವಿಕೆಯ | ii. | ಜೆ.ಸಿ.ವೀವರ್ಸ್ |
c. | ಬೆಳೆ ಸಂಯೋಜನಾ | iii. | ಲಾಶ್ಚ್ಸ್ |
d. | ಕೃಷಿ ಚಟುವಟಿಕೆ | iv. | ವೆಬರ್ಸ್ |
ಸಂಕೇತಗಳು: | ||||
| a | b | c | d |
(1) | iv | iii | ii | i |
(2) | iii | iv | i | ii |
(3) | i | ii | iii | iv |
(4) | ii | i | iv | iii |
ಸರಿ ಉತ್ತರ
(1) iv iii ii i
60. ಪಟ್ಟಿ I ಮತ್ತು ಪಟ್ಟಿ II ಯನ್ನು ಜೋಡಣೆ ಮಾಡಿ ಸಂಕೇತಾಧರಿಸಿ ಸರಿಯಾದ ಉತ್ತರ ಆರಿಸಿ
| ಪಟ್ಟಿ I (ಶೃಂಗಗಳು) |
| ಪಟ್ಟಿ II (ಬೆಟ್ಟಸಾಲು) |
a. | K2 ಶೃಂಗ | i. | ಅರಾವಳಿ |
b. | ಗಷೆರ್ಬ್ರಮ್ | ii. | ಕಾರಾಕೋರಮ್ |
c. | ಕೈಮೂರ್ ಬೆಟ್ಟಗಳು | iii. | ಕಾರಾಕೋರಮ್ ಲಡಾಕ್ |
d. | ಮೌಂಟ್ ಅಬು | iv. | ಬಾಗೇಲ್ ಖಂಡ್ |
ಸಂಕೇತಗಳು: | ||||
| a | b | c | d |
(1) | ii | i | iii | iv |
(2) | ii | iii | iv | i |
(3) | ii | iv | iii | i |
(4) | iii | ii | i | iv |
ಸರಿ ಉತ್ತರ
(2) ii iii iv i
61. ಈ ಪೈಕಿ ಯಾವ ಹೇಳಿಕೆ ಸರಿಯಿಲ್ಲ?
(1) ರಾಜಸ್ಥಾನವು ವಿಸ್ತೀರ್ಣದಲ್ಲಿ ಭಾರತದ ಅತಿದೊಡ್ಡ ರಾಜ್ಯ
(2) ಮಧ್ಯಪ್ರದೇಶವು ವಿಸ್ತೀರ್ಣದಲ್ಲಿ ಭಾರತದ ಎರಡನೇ ಅತಿದೊಡ್ಡ ರಾಜ್ಯ
(3) ಮಹಾರಾಷ್ಟ್ರವು ವಿಸ್ತೀರ್ಣದಲ್ಲಿ ಭಾರತದ ಮೂರನೆಯ ಅತಿದೊಡ್ಡ ರಾಜ್ಯ
(4) ಕರ್ನಾಟಕವು ವಿಸ್ತೀರ್ಣದಲ್ಲಿ ಭಾರತದ ನಾಲ್ಕನೆಯ ಅತಿದೊಡ್ಡ ರಾಜ್ಯ
ಸರಿ ಉತ್ತರ
(4) ಕರ್ನಾಟಕವು ವಿಸ್ತೀರ್ಣದಲ್ಲಿ ಭಾರತದ ನಾಲ್ಕನೆಯ ಅತಿದೊಡ್ಡ ರಾಜ್ಯ
62. ಈ ಹೇಳಿಕೆಗಳನ್ನು ಪರಿಶೀಲಿಸಿ ಸರಿಯಾದ ಉತ್ತರವನ್ನು ಸಂಕೇತ ಆಧರಿಸಿ ಹುಡುಕಿ.
1. ಭಾರತದ ಶೇಕಡಾ 50 ರಷ್ಟು ಜನಸಂಖ್ಯೆ ಶೇಕಡಾ 10 ಪ್ರದೇಶದಲ್ಲಿದ್ದಾರೆ
2. ಭಾರತದ ನಗರ ಜನಸಂಖ್ಯೆ ಸುಮಾರು ಶೇಕಡಾ 28
3. ಭಾರತದ ನಗರ ಜನಸಂಖ್ಯೆಯ ಶೇಕಡಾ 65ರಷ್ಟು ಜನರು ಒಂದನೇ ವರ್ಗದ ನಗರಗಳಲ್ಲಿ ನೆಲೆಸಿದ್ದಾರೆ.
ಸಂಕೇತಗಳು
(1) 1 ಮತ್ತು 2 ಸರಿ
(2) 2 ಮತ್ತು 3 ಸರಿ
(3) 1 ಮತ್ತು 3 ಸರಿ
(4) 1,2 ಮತ್ತು 3 ಸರಿ
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
63. ಪಟ್ಟಿ I ಮತ್ತು ಪಟ್ಟಿ II ನ್ನು ಜೋಡಣೆ ಮಾಡಿ ಸಂಕೇತ ಆಧರಿಸಿ ಸರಿಯಾದ ಉತ್ತರ ಆರಿಸಿ
| ಲಿಸ್ಟ್ I (ಅದಿರು) |
| ಲಿಸ್ಟ್ II (ಸ್ಥಳ) |
a. | ತಾಮ್ರ | 1. | ಕುದುರೆಮುಖ |
b. | ಕಬ್ಬಿಣ | 2. | ಬಲಘಾಟ್ |
c. | ಮ್ಯಾಂಗನೀಸ್ | 3. | ಕೋಡರ್ಮ |
d. | ಅಭ್ರಕ | 4. | ಖೇತ್ರಿ |
ಸಂಕೇತಗಳು: | ||||
| a | b | c | d |
(1) | 1 | 2 | 4 | 3 |
(2) | 2 | 3 | 1 | 4 |
(3) | 4 | 1 | 3 | 2 |
(4) | 4 | 1 | 2 | 3 |
ಸರಿ ಉತ್ತರ
(4) 4 1 2 3
64. ಈ ಹೇಳಿಕೆಗಳನ್ನು ಪರಿಶೀಲಿಸಿ ಸರಿಯುತ್ತರವನ್ನು ಸಂಕೇತ ಆಧರಿಸಿ ಪತ್ತೆಹಚ್ಚಿ.
1. ಭಾರತೀಯ ಪರ್ಯಾಯದ್ವೀಪ, ಗೋಂಡ್ವಾನ ಭೂಮಿಯ ಭಾಗವಾಗಿತ್ತು
2. ಗೋಂಡ್ವಾನ ಒಳಗೊಂಡ ಭಾಗಗಳು ದಕ್ಷಿಣ ಆಫ್ರಿಕ, ಆಸ್ಟ್ರೇಲಿಯಾ, ಅಂಟಾರ್ಟಿಕಾ ಮತ್ತು ಭಾರತ
3. ಗೋಂಡ್ವಾನ ಉತ್ತರಾಭಿಮುಖವಾಗಿ ಕಾರ್ಬನಿಫೆರಸ್ ಅವಧಿಯಲ್ಲಿ ತೇಲಿತು
ಸಂಕೇತಗಳು:
(1) 1 ಮತ್ತು 2 ಸರಿ
(2) 1 ಮತ್ತು 3 ಸರಿ
(3) 2 ಮತ್ತು 3 ಸರಿ
(4) 1,2 ಮತ್ತು 3 ಸರಿ
ಸರಿ ಉತ್ತರ
(1) 1 ಮತ್ತು 2 ಸರಿ
65. ಈ ಹೇಳಿಕೆಗಳನ್ನು ಪರಿಶೀಲಿಸಿ ಸರಿಯಾದ ಉತ್ತರವನ್ನು ಸಂಕೇತ ಆಧರಿಸಿ ಪತ್ತೆಹಚ್ಚಿ.
1. ಭಾರತದ ದಕ್ಷಿಣ ತುತ್ತತುದಿ ಇಂದಿರಾ ಪಾಯಿಂಟ್
2. ಭಾರತದ ಉತ್ತರ ತುತ್ತತುದಿ ಇಂದಿರಾಕಾಲ್
3. ಭಾರತದ ಪೂರ್ವ ತುತ್ತತುದಿ ವಾಲಾಂಗ್ ನಗರ (ಅರುಣಾಚಲ ಪ್ರದೇಶ)
4. ಭಾರತದ ಪಶ್ಚಿಮದ ತುತ್ತತುದಿಯು ರಝೀರಾ ಕ್ರೀಕ್ (ಕಚ್ಚ್ ನ ರಣಪ್ರದೇಶ)
(1) 1, 2 ಮತ್ತು 2 ಸರಿ
(2) 1, 2 ಮತ್ತು 4 ಸರಿ
(3) 1, 3 ಮತ್ತು 4 ಸರಿ
(4) 1, 2, 3 ಮತ್ತು 4 ಸರಿ
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
66. ಪಟ್ಟಿ I ಮತ್ತು ಪಟ್ಟಿ II ಗಳನ್ನು ಹೊಂದಿಸಿ ಸಂಕೇತ ಆಧರಿಸಿ ಸರಿಯುತ್ತರ ಪತ್ತಮಾಡಿ
| ಪಟ್ಟಿ I (ಮ್ಯಾನ್ಗ್ರೋವ್) |
| ಪಟ್ಟಿ II (ಸ್ಟೇಟ್) |
a. | ಲೋರಿಂಗಾ | 1. | ಪಶ್ಚಿಮ ಬಂಗಾಳ |
b. | ಸುಂದರಬನ್ | 2. | ಒಡಿಶಾ |
c. | ಮಹಾನದಿ ಮುಖಜ | 3. | ಕರ್ನಾಟಕ |
d. | ಕುಂದಾಪುರ | 4. | ಆಂಧ್ರ ಪ್ರದೇಶ |
ಸಂಕೇತಗಳು : | ||||
| a | b | c | d |
(1) | 1 | 2 | 4 | 3 |
(2) | 2 | 3 | 1 | 4 |
(3) | 4 | 1 | 3 | 2 |
(4) | 4 | 1 | 2 | 3 |
ಸರಿ ಉತ್ತರ
(4) 4 1 2 3
67. ಭಾರತದಲ್ಲಿನ ಈ ಮುಂದು ಕಾಣಿಸಿರುವ ಯಾವ ದೇವಾಲಯವನ್ನು ‘ಬ್ಲಾಕ್ ಪಗೋಡ’ ಎಂದು ಪರಿಗಣಿಸಲಾಗಿದೆ?
(1) ಚೆನ್ನಕೇಶವ ದೇವಾಲಯ, ಬೇಲೂರು
(2) ಜಗನ್ನಾಥ ದೇವಾಲಯ, ಪುರಿ
(3) ಕಾಮಾಕ್ಷಿ ದೆವಾಲಯ, ಕಂಚೀಪುರಂ
(4) ಸೂರ್ಯ ದೇವಾಲಯ, ಕೋನಾರ್ಕ್
ಸರಿ ಉತ್ತರ
(4) ಸೂರ್ಯ ದೇವಾಲಯ, ಕೋನಾರ್ಕ್
68. ಇವುಗಳಲ್ಲಿ ‘ಹಾರ್ನ್ ಬಿಲ್’ಗೆ ಸಂಬಂಧಿಸಿದ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುವುದು?
(1) ನಾಗಾಲ್ಯಾಂಡ್
(2) ಮಣಿಪುರ್
(3) ಮಿಜೋರಾಂ
(4) ಮೇಘಾಲಯ
ಸರಿ ಉತ್ತರ
(1) ನಾಗಾಲ್ಯಾಂಡ್
69. ಈ ಮುಂದೆ ಕಾಣಿಸಲ್ಪಟ್ಟಿರುವ ಯಾವ ರಾಸಾಯನಿಕ ವಸ್ತುವಿನಿಂದ ಕುಡಿಯುವ ನೀರು ಕಲುಷಿತವಾದಲ್ಲಿ ‘ಬ್ಲಾಕ್ ಫುಟ್’ ರೋಗಕ್ಕೆ ಕಾರಣವಾಗುವುದು?
(1) ಕ್ಯಾಲ್ಸಿಯಂ
(2) ಪಾದರಸ
(3) ಆರ್ಸೆನಿಕ್
(4) ನೈಟ್ರೇಟ್ಸ್
ಸರಿ ಉತ್ತರ
(3) ಆರ್ಸೆನಿಕ್
70. ಜಿ.ಡಿ.ಪಿ. ಮತ್ತು ಎನ್.ಡಿ.ಪಿ. ಗಳಿಗಿರುವ ವ್ಯತ್ಯಾಸವೇನು?
(1) ಸರ್ಕಾರದ ಆದಾಯ
(2) ಅಪ್ರತ್ಯಕ್ಷ ತೆರಿಗೆ ಸಬ್ಸಿಡಿ
(3) ನಿಶ್ಚಿತ ಬಂಡವಾಳದ ಬಳಕೆ
(4) ವರ್ಗಾವಣೆ ಪಾವತಿಗಳು
ಸರಿ ಉತ್ತರ
(3) ನಿಶ್ಚಿತ ಬಂಡವಾಳದ ಬಳಕೆ
71. ಆದಾಯದ ಅಸಮಾನತೆಯನ್ನು ಇದರಿಂದ ಮಾಪನ ಮಾಡಬಹುದು
(1) ಏಂಜೆಲ್ ಅನುಪಾತ
(2) ಗಿಫ್ಫೆನ್ ಅನುಪಾತ
(3) ಗಿನಿ-ಲೋರೆಂಜ್ ಅನುಪಾತ
(4) ಗೋಸೆನ್-ಲಾಫರ್ ಅನುಪಾತ
ಸರಿ ಉತ್ತರ
(3) ಗಿನಿ-ಲೋರೆಂಜ್ ಅನುಪಾತ
72. ಇತ್ತೀಚಿನ ವರ್ಷಗಳಲ್ಲಿ (2014-15) ಭಾರತದ ವ್ಯಾಪಾರದ ಪ್ರಧಾನ ಪಾಲು ಇವರೊಂದಿಗೆ
(1) ಏಷ್ಯಾ ಮತ್ತು ಏಷ್ಯನ್ ರಾಷ್ಟ್ರಗಳು
(2) ಯೂರೋಪಿಯನ್ ಒಕ್ಕೂಟ
(3) ನಾರ್ಡಿಕ್ ದೇಶಗಳು
(4) ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ
ಸರಿ ಉತ್ತರ
(1) ಏಷ್ಯಾ ಮತ್ತು ಏಷ್ಯನ್ ರಾಷ್ಟ್ರಗಳು
73. ಸರಿಯಾದ ಕಾಲಾನುಕ್ರಮಣಿಕೆಯೊಂದಿಗೆ ಆಯ್ಕೆ ಮಾಡಿ
(i) WTOನ ರಚನೆ
(ii) GATT ನ ಉರುಗ್ವೆ ದುಂಡುಮೇಜು
(iii) GATT ನ ರಚನೆ
(iv) UNCTAD ನ ರಚನೆ
ಸಂಕೇತಗಳು :
(1) (i) (iii) (ii) (iv)
(2) (iii) (iv) (ii) (i)
(3) (iii) (i) (ii) (iv)
(4) (ii) (iv) (i) (iii)
ಸರಿ ಉತ್ತರ
(2) (iii) (iv) (ii) (i)
74. ಸರಿಯಾದ ಕಾಲಾನುಕ್ರಮಣಿಕೆಯೊಂದಿಗೆ ಆಯ್ಕೆಮಾಡಿ.
(i) ರೋಲಿಂಗ್ ಯೋಜನೆಯ ಪ್ರಾರಂಭ
(ii) ಯೋಜನೆಯಿಂದ ಮಾರುಕಟ್ಟೆ ತಾಂತ್ರಿಕತೆಯೆಡೆಗೆ ವರ್ಗಾವಣೆ
(iii) ಫೆಲ್ಡ್ ಮನ್-ಮಹಲಾನೋಬಿಸ್ ಮಾದರಿ
(iv) ಯೋಜನಾ ರಜೆಯ ಘೋಷಣೆ
ಸಂಕೇತಗಳು :
(1) (i) (iii) (iv) (ii)
(2) (ii) (iv) (i) (iii)
(3) (iii) (iv) (i) (ii)
(4) (i) (iii) (ii) (iv)
ಸರಿ ಉತ್ತರ
(3) (iii) (iv) (i) (ii)
75. ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ I ನೇ ಪಟ್ಟಿಯನ್ನು IIನೇ ಪಟ್ಟಿಯೊಂದಿಗೆ ಸರಿ ಹೊಂದಿಸಿ
| ಪಟ್ಟಿ I |
| ಪಟ್ಟಿ II |
a. | ರಂಗರಾಜನ್ ಸಮಿತಿ | i. | ಮೂಲಭೂತ ಸೌಕರ್ಯಗಳ |
b. | ನರಸಿಂಹನ್ ಸಮಿತಿ | ii. | ವಿಮಾ ಸುಧಾರಣೆಗಳು |
c. | ಕೇಳ್ಕರ್ ಸಮಿತಿ | iii. | ಬಡತನ ಅಂದಾಜುಗಳು |
d. | ಮಲ್ಹೋತ್ರಾ ಸಮಿತಿ | iv. | ಹಣಕಾಸು ವಲಯದ |
ಸಂಕೇತಗಳು : | ||||
| a | b | c | d |
(1) | iii | iv | i | ii |
(2) | iii | ii | i | iv |
(3) | i | ii | iii | iv |
(4) | ii | i | iv | iii |
ಸರಿ ಉತ್ತರ
(1) iii iv i ii
76. ಕರ್ನಾಟಕ ಉದ್ಯೋಗ ಮಿತ್ರದ ಪ್ರಮುಖ ಕಾರ್ಯಗಳೆಂದರೆ
1. ಹೂಡಿಕೆಗಳ ವೃದ್ಧಿ
2. ಅನೌಪಚಾರಿಕ ಉದ್ಯೋಗಾವಕಾಶಗಳು ಸೃಷ್ಠಿ
3. ಹೂಡಿಕೆ ಪ್ರಸ್ತಾವಗಳ ಅನುಷ್ಠಾನ ಸೃಷ್ಠಿ
4. ಉದ್ಯೋಗ ಸಂಬಂಧಿ ಉತ್ತೇಜಕಗಳ ಅವಕಾಶಗಳನ್ನು ವೃದ್ಧಿಸುವುದು
ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ
(1) 1, 2 ಮತ್ತು 2
(2) 2 ಮತ್ತು 4 ಮಾತ್ರ
(3) 1 ಮತ್ತು 3 ಮಾತ್ರ
(4) 1, 2, ಮತ್ತು 4 ಮಾತ್ರ
ಸರಿ ಉತ್ತರ
(3) 1 ಮತ್ತು 3 ಮಾತ್ರ
77. ಗಂಗಾ ಕಲ್ಯಾಣ ಯೋಜನೆಯ ಗುರಿಯೆಂದರೆ ಇದನ್ನು ವೃದ್ಧಿಸುವುದಾಗಿದೆ
(1) ಮಳೆ ನೀರು ಕೊಯ್ಲು
(2) ನದಿಗಳ ಜೋಡಣೆ
(3) ಪ್ರಮುಖ ನೀರಾವರಿ ಯೋಜನೆಗಳು
(4) ಸಮದಾಯ ನೀರಾವರಿ ಯೋಜನೆಗಳು
ಸರಿ ಉತ್ತರ
(4) ಸಮದಾಯ ನೀರಾವರಿ ಯೋಜನೆಗಳು
78. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
(1) 3ನೇ ಏಪ್ರಿಲ್ 1984 ರಂದು ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾರು ಬಾಹ್ಯಾಕಾಶಕ್ಕೆ ಹೋದ ಪ್ರಥಮ ಭಾರತೀಯರು
(2) ರಾಕೇಶ್ ಶರ್ಮಾರು ಸೋಯಜ್ T-II ಬಾಹ್ಯಾಕಾಶ ಹಡಗನ್ನು ಉಡಾವಣೆ ಮಾಡಿದರು
(3) ಕಝಾಕಿಸ್ತಾನ್ (ಪ್ರಸ್ತುತ ರಷ್ಯಾ) ದಲ್ಲಿ ಬೈಕೊನೊ ಕಾಸ್ಮೊಡ್ರೋಂನಿಂದ ಬಾಹ್ಯಾಕಾಶ ಹಡಗು ಉಡಾವಣೆಯಾಯಿತು
(4) ರಾಕೇಶ್ ಶರ್ಮಾರೊಂದಿಗೆ ಅಮೆರಿಕಾದ ಇಬ್ಬರು ಅಂತರಿಕ್ಷಾಕಾಶ ಯಾತ್ರಿಗಳಿದ್ದರು.
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
79. ಭಾರತೀಯ ನಗರಗಳ ಪ್ರಾಮುಖ್ಯತೆ
| ನಗರ |
| ಪ್ರಾಮುಖ್ಯತೆ |
a. | ಆಗ್ರಾ | i. | ಅಮುಲ್ ಡೈರಿ |
b. | ಅಲಿಘರ್ | ii. | ತಾಜ್ ಮಹಲ್ |
c. | ಅಲಪಿ | iii. | ಬೀಗ ಉದ್ದಿಮೆ |
d. | ಆನಂದ್ | iv. | ನಾರು ಉದ್ದಿಮೆ |
ಸಂಕೇತಗಳು : | ||||
| A | B | C | D |
(1) | II | IV | III | I |
(2) | II | I | III | IV |
(3) | II | III | I | IV |
(4) | II | III | IV | I |
ಸರಿ ಉತ್ತರ
(4) II III IV I
80. ಈ ಕೆಳಗಿನವುಗಳ ಸರ್ ಐಸಾಕ್ ನ್ಯೂಟನ್ರ ಚಲನೆಯ ನಿಯಮಗಳು ಇವುಗಳನ್ನು ಸರಿಯಾಗಿ ಹೊಂದಿಸಿರಿ:
a. | ಮೊದಲನೇ ಚಲನೆಯ | i. | ಒಂದು ಅಸಮತೋಲಿತ |
b. | ಎರಡನೇ ಚಲನೆಯ | ii. | ಒಂದು ಕಾಯದ |
c. | ಮೂರನೇ ಚಲನೆಯ | iii. | ಪ್ರತಿಯೊಂದು ಕ್ರಿಯೆಗೂ |
ಸಂಕೇತಗಳು
ಸಹಾಯದಿಂದ ಉತ್ತರಿಸಿ:
| A | B | C |
(1) | III | I | II |
(2) | II | I | III |
(3) | I | III | II |
(4) | I | II | III |
ಸರಿ ಉತ್ತರ
(4) I II III
81. ಕೆಳಗಿನ ಮಾಪನಗಳನ್ನು ಪರಿಗಣಿಸಿರಿ
A. | ಟೆರಾ | I. | 10 |
B. | ಮೆಗಾ | II. | 10 |
C. | ನ್ಯಾನೊ | III. | 10¹² |
D. | ಎಕ್ಸಾ | IV. | 10 |
ಸಂಕೇತಗಳು: | ||||
| A | B | C | D |
(1) | III | II | IV | I |
(2) | III | IV | II | I |
(3) | III | II | I | IV |
(4) | II | III | IV | I |
ಸರಿ ಉತ್ತರ
(3) III II I IV
82. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ
A. ಭಾರತದ ಕಾನೂನು ಆಯೋಗವು ಒಂದು ಶಾಸನೋಕ್ತವಾದುದಲ್ಲ ಮತ್ತು ಸಂವಿಧಾನಾತ್ಮಕ ಸಂಸ್ಥೆಯಲ್ಲ
B. ಮೊದಲ ಆಯೋಗವು 1955ರಲ್ಲಿ ರಚಿತವಾಯಿತು
C. ಅದರ ಮುಖ್ಯಸ್ಥರೆಂದರೆ ಭಾರತದ ಮುಖ್ಯ ನ್ಯಾಯಾಧೀಶರು
ಈ ಕೆಳಗಿನವುಗಳಲ್ಲಿ ಯಾವುದು ಸರಿ?
(1) A ಮಾತ್ರ
(2) A ಮತ್ತು B ಮಾತ್ರ
(3) A ಮತ್ತು C ಮಾತ್ರ
(4) A, B ಮತ್ತು C
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
83. ಹೊಂದಿಸಿ ಬರೆಯಿರಿ
| ಎನ್.ಜಿ.ಓ. |
| ಮುಖ್ಯ ಕಾರ್ಯ |
A. | ಎಂ.ಎಸ್.ಎಫ್. | 1. | ಮಾನವ ಹಕ್ಕುಗಳು |
B. | ಆಮ್ನೆಸ್ಟಿ ಇಂಟರ್ | 2. | 3ನೇ ವಿಶ್ವ |
C. | ಗ್ರೀನ್ ಪೀಸ್ | 3. | ವೈದ್ಯಕೀಯ ಸಹಾಯ |
D. | ಫೋರ್ಡ್ ಫೌಂಡೇಶನ್ | 4. | ಪರಿಸರಾತ್ಮಕ ಕಾಳಜಿ |
ಸಂಕೇತಗಳ
ಸಹಾಯದಿಂದ ಉತ್ತರಿಸಿ :
| A | B | C | D |
(1) | 3 | 1 | 4 | 2 |
(2) | 2 | 4 | 3 | 1 |
(3) | 3 | 2 | 4 | 1 |
(4) | 2 | 1 | 3 | 4 |
ಸರಿ ಉತ್ತರ
(1) 3 1 4 2
84. ಕೆಳಗಿನ ಹೇಳಿಕೆಗಳನ್ನು ವ್ಯವಹಾರ ನಿರ್ವಹಣೆಯ ಸೂಚ್ಯಂಕ ಸುಲಭೀಕರಣಕ್ಕೆ ಸಂಬಂಧಿಸಿದಂತೆ ಪರಿಗಣಿಸಿರಿ:
A. 5 ವರ್ಷಗಳಿಗೊಮ್ಮೆ ವಿಶ್ವಬ್ಯಾಂಕು ವ್ಯವಹಾರ ನಿರ್ವಹಣೆಯ ಸೂಚ್ಯಂಕದ ಸುಲಭೀಕರಣ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ.
B. ಈ ಪಟ್ಟಿಯಲ್ಲಿ ಹೆಚ್ಚಿನ ಶ್ರೇಣಿಯನ್ನು ಪಡೆದ ರಾಷ್ಟ್ರ ಎಂದರೆ ವ್ಯವಹಾರ ಸಂಸ್ಥೆಯ ಪ್ರಾರಂಭ ಮತ್ತು ಕಾರ್ಯಾಚರಣೆಗೆ ಅದರ ನಿಯಂತ್ರಣಾತ್ಮಕ ಪರಿಸರವು ಹೆಚ್ಚು ಸಹಾಯಕಾರಿ ಮತ್ತು ಸೂಕ್ತವಾದುದು.
C. ಬ್ರಿಕ್ಸ್ ರಾಷ್ಟ್ರಗಳಲ್ಲಿಭಾರತವು ವ್ಯವಹಾರ ನಿರ್ವಹಣೆಯಲ್ಲಿ ಕನಿಷ್ಠ ಶ್ರೇಣಿಯನ್ನು ಹೊಂದಿದೆ.
ಈ ಕೆಳಗಿನವುಗಳಲ್ಲಿ ಯಾವುದು ಸರಿ
(1) A ಮಾತ್ರ B ಮಾತ್ರ
(2) B ಮತ್ತು C ಮಾತ್ರ
(3) A ಮತ್ತು C ಮಾತ್ರ
(4) A, B ಮತ್ತು C ಸರಿ
ಸರಿ ಉತ್ತರ
(2) B ಮತ್ತು C ಮಾತ್ರ
85. ಕಾನೂನು ಸಂಸ್ಥೆ ಮೊಸಾಕ್ ಪೋನ್ಸೆಕಾ ಮೂಲಕವಾಗಿ, ಇತ್ತೀಚೆಗೆ ಬಹುರಾಷ್ಟ್ರೀಯ ತೆರಿಗೆ ತಪ್ಪಿಸಿಕೊಳ್ಳುವಿಕೆಯ ಹಗರಣದಲ್ಲಿ ಸಿಲುಕಿದ ಮಧ್ಯ ಅಮೆರಿಕಾದ ರಾಷ್ಟ್ರವೆಂದರೆ
(1) ಬಹಾಮಾಸ್
(2) ಈಕ್ವೆಡಾರ್
(3) ಪನಾಮಾ
(4) ಕೇಮನ್ ದ್ವೀಪಗಳು
ಸರಿ ಉತ್ತರ
(3) ಪನಾಮಾ
86. ಆಳ್ವಿಕೆಯಲ್ಲಿನ ಬದಲಾವಣೆಗೆ ದಾರಿ ಮಾಡಿಕೊಟ್ಟ IMF ಸುಧಾರಣೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಸಿರಿ:
A. ಭಾರತ, ಚೀನಾ, ಬ್ರೆಜಿಲ್ ಮುಂತಾದ ಏಳಿಗೆ ಹೊಂದುತ್ತಿರುವ ರಾಷ್ಟ್ರಗಳ ಪ್ರಾತಿನಿಧ್ಯ ಹೆಚ್ಚಾಗಿದೆ.
B. ಚೀನಾವು IMG ಪಾಲು ಮತ್ತು ಮತ ಪಾಲಿನಲ್ಲಿ 3ನೇ ದೊಡ್ಡ ಸ್ಥಾನ ಹೊಂದಿದೆ.
C. ಕಾರ್ಯನಿರ್ವಹಣಾ ನಿರ್ದೇಶಕರ ನೇಮಕಾತಿಯನ್ನು ಮಾಡಿಕೊಳ್ಳುವುದು ನಿಂತಿದೆ.
ಯಾವ ಸುಧಾರಣೆಗಳು ಸರಿ
(1) A ಮಾತ್ರ B ಮಾತ್ರ
(2) B ಮತ್ತು C ಮಾತ್ರ
(3) A ಮತ್ತು C ಮಾತ್ರ
(4) A, B ಮತ್ತು C ಗಳು
ಸರಿ ಉತ್ತರ
(4) A, B ಮತ್ತು C ಗಳು
87. ಶರೀರ ವಿಜ್ಞಾನ ಅಥವಾ ಔಷಧಿಗಾಗಿ 2016ನೇ ಸಾಲಿನ ನೋಬೆಲ್ ಬಹುಮಾನವು ಸ್ವಯಂಭಕ್ಷಣದ ಆಧಾರವಾದ ಆಣ್ವಿಕ ತತ್ರ ರಹಸ್ಯದ 1990 ರಲ್ಲಿನ ಬಿಡಿಸುವಿಕೆಗೆ ಸಂದಿತು. ಸ್ವಯಂಭಕ್ಷಣ ಇದಕ್ಕೆ ಸಂಬಂಧಿಸಿದೆ.
(1) ಕ್ಯಾನ್ಸರ್ ನ ಗುಣಪಡಿಸುವಿಕೆ
(2) ಸಂತಾನೋತ್ಪತ್ತಿಯ ಸಾಮರ್ಥ್ಯ
(3) ಕೂದಲು ಮತ್ತು ಉಗುರುಗಳ ಬೆಳವಣಿಗೆಯ ತಂತ್ರ
(4) ದೇಹದ ಸ್ವಯಂ ನವೀಕರಣ ಸಾಮರ್ಥ್ಯ
ಸರಿ ಉತ್ತರ
(4) ದೇಹದ ಸ್ವಯಂ ನವೀಕರಣ ಸಾಮರ್ಥ್ಯ
88. ಕೆಳಗಿನವುಗಳನ್ನು ಹೊಂದಿಸಿ
| ಸಂಕೇತದ ಹೆಸರು |
| ಯೋಜನೆ |
A. | ಆಪರೇಷನ್ ಪರಾಕ್ರಮ್ | 1. | ಸೌತ್ ಸೂಡಾನ್ |
B. | ಆಪರೇಷನ್ ಸಂಕಟ್ | 2. | ನೇಪಾಳದ ಭೂಕಂಪ |
C. | ಆಪರೇಷನ್ ರಾಹತ್ | 3. | 2001ರ ಸಂಸತ್ತಿನ ಮೇಲಿನ ಧಾಳಿ |
D. | ಆಪರೇಷನ್ ಮೈತ್ರಿ | 4. | ಯೆಮೆನ್ ರಕ್ಷಣಾ |
ಸಂಕೇತಗಳು | ||||
| A | B | C | D |
(1) | 2 | 4 | 3 | 1 |
(2) | 4 | 3 | 1 | 2 |
(3) | 3 | 1 | 4 | 2 |
(4) | 3 | 2 | 1 | 4 |
ಸರಿ ಉತ್ತರ
(3) 3 1 4 2
89. ಕೆಳಗಿನವುಗಳಲ್ಲಿ ಯಾವುದು ಯುನೆಸ್ಕೋ ವಿಶ್ವ ಪರಂಪರಾ ಪಟ್ಟಿಗೆ ಸೇರಿಲ್ಲ?
(1) ಫತೇಪುರ್ ಸಿಕ್ರಿ
(2) ಆಗ್ರಾ ಕೋಟೆ
(3) ಮೈಸೂರು ಅರಮನೆ
(4) ಜಂತರ್ ಮಂತರ್
ಸರಿ ಉತ್ತರ
(3) ಮೈಸೂರು ಅರಮನೆ
90. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ :
A. 2016ರ ವಿಶ್ವ ಆರ್ಥಿಕ ಫೋರಂನ ಜಾಗತಿಕ ಲಿಂಗಾನುಪಾತ ವರದಿಯ ಮೇಲೆ, 144 ರಾಷ್ಟ್ರಗಳಲ್ಲಿ ಭಾರತವು 87ನೇ ಸ್ಥಾನವನ್ನು ಗಳಿಸಿದೆ.
B. ಭಾರತವು ಚೈನಾಗಿಂತ ಮುಂದಿದೆ.
C. ಆರ್ಥಿಕ ಸ್ತಂಭದ ಪ್ರಧಾನತೆಯಲ್ಲಿನ ಅನುರೂಪತೆ ಯೆಡೆಗೆ ಜಾಗತಿಕ ನಡಿಗೆಯು ನಾಟಕೀಯವಾಗಿ ನಿಧಾನವಾಯಿತು.
ಇವುಗಳಲ್ಲಿ ಯಾವುದು ಸರಿ?
(1) A ಮಾತ್ರ B ಮಾತ್ರ
(2) B ಮತ್ತು C ಮಾತ್ರ
(3) A ಮತ್ತು C ಮಾತ್ರ
(4) ಇವುಗಳಲ್ಲಿ ಎಲ್ಲವೂ
ಸರಿ ಉತ್ತರ
(4) ಇವುಗಳಲ್ಲಿ ಎಲ್ಲವೂ
91. ನೀರಿನ ಶಾಶ್ವತ ಗಡಸುತನ ಹೋಗಲಾಡಿಸಲು ಬಳಕೆ ಆಗದ ವಿಧಾನ
(1) ಸೋಡಿಯಂ ಕಾರ್ಬೊನೇಟ್ ಸೇರ್ಪಡೆ
(2) ಆಸವನ (ಡಿಸ್ಟಿಲೇಷನ್)
(3) ಕಾಸ್ಟಿಕ್ ಸೋಡಾ ಸೇರ್ಪಡೆ
(4) ಕುದಿಸುವಿಕೆ
ಸರಿ ಉತ್ತರ
(4) ಕುದಿಸುವಿಕೆ
92. ಮಾನವ ದೇಹವು ಅನೇಕ ರಾಸಾಯನಿಕ ಧಾತುಗಳಿಂದಾಗಿದೆ. ದೇಹದಲ್ಲಿ ಅತ್ಯಧಿಕ ಪರಿಮಾಣದಲ್ಲಿ (65%) ಇರುವ ಧಾತುವು
(1) ಕಾರ್ಬನ್
(2) ಹೈಡ್ರೋಜನ್
(3) ಆಕ್ಸಿಜನ್
(4) ನೈಟ್ರೋಜನ್
ಸರಿ ಉತ್ತರ
(3) ಆಕ್ಸಿಜನ್
93. ಈ ಪೈಕಿ ಅತ್ಯಂತ ವಿದ್ಯುತ್ ಋಣೀಯ ಧಾತು
(1) ಸೋಡಿಯಂ
(2) ಬ್ರೋಮೈನ್
(3) ಫ್ಲೊರಿನ್
(4) ಆಕ್ಸಿಜನ್
ಸರಿ ಉತ್ತರ
(3) ಫ್ಲೊರಿನ್
94. ಹಿಮೋಗ್ಲೋಬಿನ್ ನ ಕಾರ್ಯ
(1) ಆಕ್ಸಿಜನ್ ಸಾಗಣೆ
(2) ಬ್ಯಾಕ್ಟೀರಿಯಾ ನಾಶ
(3) ಅನೀಮಿಯಾ ತಡೆಗಟ್ಟುವಿಕೆ
(4) ಶಕ್ತಿ ಬಳಕೆ
ಸರಿ ಉತ್ತರ
(1) ಆಕ್ಸಿಜನ್ ಸಾಗಣೆ
95. ಈ ಕೆಳಗಿನ ಯಾವ ಸಂಯುಕ್ತಗಳಿಂದ ಮುಖ್ಯವಾಗಿ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ?
(1) ಸೋಡಿಯಂ ಕ್ಲೋರೈಡ್
(2) ಸಿಲಿಕೇಟ್ ಗಳು
(3) ಕ್ಯಾಲ್ಸಿಯಂ ಬೈಕಾರ್ಬನೇಟ್
(4) ಕಾಲ್ಸಿಯಂ ಆಕ್ಸಲೇಟ್
ಸರಿ ಉತ್ತರ
(4) ಕಾಲ್ಸಿಯಂ ಆಕ್ಸಲೇಟ್
96. ತೈಲಗಳ ಹೈಡ್ರೋಜಿನೇಷನ್ ಸಲುವಾಗಿ ಬಳಕೆ ಆಗುವ ವೇಗವರ್ಧಕ ಲೋಹ
(1) Ni
(2) Pd
(3) Pt
(4) Cu
ಸರಿ ಉತ್ತರ
(1) Ni
97. ರಾಸಾಯನಿಕಗಳು ಇಲ್ಲವೆ ಮದ್ದುಗಳಿಂದ ಸೋಂಕುಕಾರಕ ಸೂಕ್ಷ್ಮಜೀವಗಳನ್ನೇ ಆಯ್ಕೆಮಾಡಿ ನಾಶಮಾಡುವ ಅತಿಥೇಯ ಅಥವಾ ಜೀವಂತ ಅಂಗಾಂಶಗಳನ್ನು ನಾಶಪಡಿಸುವ ಪ್ರಕ್ರಿಯೆ
(1) ಕೆಮೋಥೆರಪಿ
(2) ಜೀನೆ ಥೆರಪಿ
(3) ಡ್ರಗ್ ಥೆರಪಿ
(4) ಪ್ಲಾಸ್ಟಿಕ್ ಸರ್ಜರಿ
ಸರಿ ಉತ್ತರ
(1) ಕೆಮೋಥೆರಪಿ
98. ಆಹಾರ ಪದಾರ್ಥಗಳನ್ನು ಸಿಹಿಯಾಗಿಸಲು ಈ ರಾಸಾಯನಿಕವನ್ನು ಅಡುಗೆ ತಾಪದಲ್ಲಿ ಸೇರಿಸಿದರೂ ಕ್ಯಾಲರಿ ಉಂಟಾಗದು
(1) ಸುಕ್ರೋಸ್
(2) ಗ್ಲೂಕೋಸ್
(3) ಆಸ್ಪರ್ಟೇಮ್
(4) ಸುಕ್ರೋಲೋಸ್
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
99. ನಾಲ್ಕು ಸಂಖ್ಯೆಗಳ ಮೊತ್ತ 72. ಮೊದಲ ಸಂಖ್ಯೆಗೆ 5 ಸೇರಿಸಿ, ಎರಡನೇ ಸಂಖ್ಯೆಯಿಂದ 5 ಕಳೆದರೆ, ಮೂರನೆಯ ಸಂಖ್ಯೆಯನ್ನು 5ರಿಂದ ಗುಣಿಸಿ ನಾಲ್ಕನೆಯ ಸಂಖ್ಯೆಯನ್ನು 5ರಿಂದ ಭಾಗಿಸಿದರೆ ಇವೆಲ್ಲವುಗಳ ಲಿತಾಂಶ ಒಂದೇ ಸಮ ಇರುವುದು. ಮೂಲ ಸಂಖ್ಯೆಗಳ ಅತಿದೊಡ್ಡ ಮತ್ತು ಅತಿಸಣ್ಣ ಸಂಖ್ಯೆಯ ಮೊತ್ತ ಎಷ್ಟು?
(1) 42
(2) 52
(3) 62
(4) 72
ಸರಿ ಉತ್ತರ
(2) 52
100. ಒಂದು ಸಂಖ್ಯೆಯನ್ನು 39 ರಿಂದ ಭಾಗಿಸಿದಾಗ ಉಳಿಯುವ ಶೇಷ 28. ಅದೇ ಸಂಖ್ಯೆಯನ್ನು 13ರಿಂದ ಭಾಗಿಸಿದಾಗ ಉಳಿಯುವ ಶೇಷ
(1) 1
(2) 2
(3) 3
(4) 4
ಸರಿ ಉತ್ತರ
(2) 2
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ