10ನೇ ತರಗತಿ ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಸಮಾಜ ವಿಜ್ಞಾನ ನೋಟ್ಸ್,10th Social Science Political Chapter 6 Notes in Kannada Question Answer Pdf Kseeb Solution For Class 10 Social Science Political Chapter 6 Notes Bharatakkiruva Savalugalu Hagu Avugala Pariharopayagalu Question Answer
ರಾಜ್ಯಶಾಸ್ತ್ರ – ಅಧ್ಯಾಯ – 6
10th Social Science Political Chapter 6 Notes Question Answer
10th Class Social Science Chapter 6 Notes in Kannada
ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ
1.ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದನ್ನು ಪ್ರಾದೇಶಿಕವಾದ ಎನ್ನುತ್ತೇವೆ.
2. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯು 1953 ಇಸವಿಯಲ್ಲಿ ಆಯಿತು.
3. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಲೋಕಾಯುಕ್ತ ಸಂಸ್ಥೆ ಅಸ್ತಿತ್ವದಲ್ಲಿದೆ.
4, 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು 121 ಕೋಟಿ ದಾಟಿದೆ.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ನಿರುದ್ಯೋಗ ಎಂದರೇನು?
ನಿರುದ್ಯೋಗ ಎಂದರೆ ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿಯಾಗಿದೆ.
2. ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಬಡತನದ ದರ ಎಷ್ಟು?
ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಬಡತನದ ದರ ಶೇಕಡಾ 21.9
3. ಭ್ರಷ್ಟಾಚಾರ ಎಂದರೇನು?
ಭ್ರಷ್ಟಾಚಾರ ಎಂದರೆ ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರಕ್ರಮಕ್ಕೆ ಪ್ರಚೋದನೆ ನೀಡುವಿಕೆ ಎಂದು ಅರ್ಥ
4. ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡುವ ಉದ್ದೇಶದಿಂದ ಭಾರತ ಸಂವಿಧಾನದ 371ನೇ ವಿಧಿಗೆ ಯಾವ ತಿದ್ದುಪಡಿಗಳ ಮೂಲಕ ಸೇರ್ಪಡೆ ಮಾಡಲಾಗಿದೆ?
ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡುವ ಉದ್ದೇಶದಿಂದ ಭಾರತ ಸಂವಿಧಾನದ 371 ನೇ ವಿಧಿಗೆ A ಯಿಂದ J ವರೆಗೆ ತಿದ್ದುಪಡಿಗಳ ಮೂಲಕ ಸೇರ್ಪಡೆ ಮಾಡಲಾಗಿದೆ.
5. ಕರ್ನಾಟಕದಲ್ಲಿನ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಿದ ವಿಧಿ ಯಾವುದು?
371 (ಸಿ)
6. ಕೋಮುವಾದ ಅಥವಾ ಮತೀಯವಾದ ಎಂದರೇನು?
ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳಸಿಕೊಳ್ಳುವುದನ್ನು ಕೋಮುವಾದ ಅಥವಾ ಮತೀಯವಾದ ಎಂದು ಕರೆಯುತ್ತೇವೆ.
7. ‘ಸ್ತ್ರೀ ಶಕ್ತಿ’ ಕಾರ್ಯಕ್ರಮದ ಉದ್ದೇಶವೇನು?
ಗ್ರಾಮಾಂತರ ಮಹಿಳೆಯರ ವಿಕಾಸ
8. ಯಾವುದನ್ನು ಬಲಪ್ರಯೋಗದ ಒತ್ತಡ ತಂತ್ರಗಾರಿಕೆ ಎಂದು ಕರೆಯಲಾಗಿದೆ?
ಭಯೋತ್ಪಾದಕತೆ
9. ಮುಂಬೈಯ ತಾಜ್ ಹೋಟೆಲ್ ಮೇಲೆ ಯಾವಾಗ ದಾಳಿ ನಡೆಯಿತು?
2007 ನವೆಂಬರ್ 26
10, ಕಾರ್ಪೋರೇಟ್ ತಂತ್ರಗಾರಿಕೆ ಎಂದರೇನು?
ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವ ನಿರ್ಧಾರಿತ ಗುರಿಗಳನ್ನು ತಲುಪಲು ಕಂಪೆನಿಯು ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನಗಳನ್ನು ಕಾರ್ಪೋರೇಟ್ ತಂತ್ರಗಾರಿಕೆ ಎಂದು ಕರೆಯಲಾಗುತ್ತದೆ.
11. 2001ರ ಡಿ.ಎಂ. ನಂಜುಂಡಪ್ಪ ಸಮಿತಿಯು ಉದ್ದೇಶವೇನು?
ಪ್ರಾದೇಶಿಕ ಅಸಮತೋಲನ ನಿವಾರಣೆ
12. ಭ್ರಷ್ಟಾಚಾರ ನಿಯಂತ್ರಣದಲ್ಲಿ ಪೂರಕ ಶಕ್ತಿ ಒದಗಿಸಬಲ್ಲ ಸಂಸ್ಥೆಗಳು ಯಾವುವು?
ಲೋಕಪಾಲ ಮತ್ತು ಲೋಕಾಯುಕ್ತ
13. ನಿರುದ್ಯೋಗಕ್ಕೆ ಮುಖ್ಯ ಕಾರಣಗಳು ಯಾವುವು?
ಮಿತಿಮೀರಿದ ಜನಸಂಖ್ಯೆ ಮತ್ತು ಹೆಚ್ಚಾದ ತಂತ್ರಜ್ಞಾನದ ಬಳಕೆ
14. ಭಾರತದ ಸಾರ್ವಜನಿಕ ಜೀವನದಲ್ಲಿ ಯಾವುದು ಒಂದು ಮುಖ್ಯ ಪಿಡುಗು?
ಭಾರತದ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಒಂದು ಮುಖ್ಯ ಪಿಡುಗು ಎನಿಸಿದೆ.
15. ಭಯೋತ್ಪಾದಕತೆ ಎಂದರೇನು?
ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ ಈ ಭಯೋತ್ಪಾದಕತೆ ಎನ್ನುವರು.
16. ಕಾರ್ಪೋರೇಟ್ ತಂತ್ರಗಾರಿಕೆಯ ಮುಖ್ಯ ಉದ್ದೇಶವೇನು?
ತಂತ್ರಗಾರಿಕೆಯ ಪ್ರಮುಖ ಉದ್ದೇಶ ಲಾಭವನ್ನು ಪಡೆಯುವುದಾಗಿರುತ್ತದೆ
10th Social Science Political Chapter 6 Notes
II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ.
1. ಕೋಮುವಾದ ದೇಶದ ಐಕ್ಯತೆಗೆ ಮಾರಕ, ಹೇಗೆ?
- ಇದು ಸಾಮಾಜಿಕವಾಗಿ ಭಿನ್ನತೆ, ಪರಸ್ಪರ ಅಪನಂಬಿಕೆ ಹಾಗೂ ಭಯದ ವಾತಾರವಣವನ್ನು ಸೃಷ್ಟಿಸುತ್ತದೆ. ಕೋಮುವಾದವು ಸಮಾಜದಲ್ಲಿ ಗುಂಪುಗಾರಿಕೆ, ಆರ್ಥಿಕ ವೈಷಮ್ಯ ಮತ್ತು ರಾಜಕೀಯ ಪೈಪೋಟಿಯಲ್ಲಿ ಪ್ರಕಟವಾಗುತ್ತದೆ.
- ಭಾರತದ ಮಟ್ಟಿಗೆ ಈ ಕೋಮುವಾದ ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗಪಡಿಸುವ, ಅಪಾಯ ತಂದೊಡ್ಡುವ ಶಕ್ತಿಯಾಗಿದೆ.
- ಆದು ಸಮಾಜದ ನೆಮ್ಮದಿಯನ್ನು ಕೆಡಿಸುವುದಲ್ಲದೆ ವ್ಯಕ್ತಿಗಳ ಜೀವ ಹಾಗೂ ಸೊತ್ತುಗಳ ನಾಶಕ್ಕೂ ಕಾರಣವಾಗುತ್ತದೆ.
- ಈ ಮತೀಯವಾದ ಗುಂಪುಗಳ ಮಧ್ಯೆ ಪರಸ್ಪರ ದೋಷಾರೋಪಣೆ, ದೈಹಿಕ ಹಲ್ಲೆ ಮುಂತಾದ ಅನಗತ್ಯ ತೊಂದರೆಗಳಿಗೂ ಕಾರಣವಾಗುತ್ತದೆ.
2. ಪ್ರಾದೇಶಿಕವಾದವು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಚರ್ಚಿಸಿ.
- ಆಯಾಯ ಪ್ರದೇಶಗಳ ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಕಟ್ಟುಪಾಡುಗಳು, ಆರ್ಥಿಕ ವಿಚಾರಗಳು,
- ಸಾಂಸ್ಕೃತಿಕ ವಿಭಿನ್ನತೆಗಳು ಹಾಗೂ ಭೌಗೋಳಿಕ ಪರಿಸರ ಅಲ್ಲಿನ ಜನ ಸಮುದಾಯದಲ್ಲಿ ಪ್ರಾದೇಶಿಕ ವಾದವನ್ನು ಸಹಜವಾಗಿ ಬೆಳೆಸುತ್ತದೆ.
- ಅತಿಯಾದ ಭಾಷಾಭಿಮಾನವು ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ.
- ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ.
- ಇತ್ತೀಚೆಗೆ ಆಂಧ್ರಪ್ರದೇಶದಲ್ಲಿನ ತೆಲಂಗಾಣದ ಭಾಗದ ಪ್ರಾದೇಶಿಕವಾದ ಹೋರಾಟವನ್ನು ಗಮನಿಸಬಹುದು.
- ದೇಶದ ಇನ್ನಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕವಾದದ ಹೋರಾಟಗಳು ಕೂಡಾ ದೇಶದ ಅಭಿವೃದ್ಧಿ ತೊಡಕಾಗುವ ಸಾಧ್ಯತೆಗಳಿವೆ.
3. ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸಲು ಸರ್ಕಾರ ಕೈಗೊಂಡ ಕ್ರಮಗಳು ಯಾವುವು?
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಮಹಿಳೆಯರ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸ್ಥಾನಮಾನವನ್ನು ಉತ್ತಮ ಪಡಿಸಲಾಗುತ್ತಿದೆ.
- ಮಹಿಳಾ ಶಿಕ್ಷಣ, ಬಾಲ್ಯವಿವಾಹ ನಿಷೇಧಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಮುಂತಾದ ಕಾರ್ಯಕ್ರಮ
- ಕರ್ನಾಟಕ ಸರ್ಕಾರವು ‘ಸ್ತ್ರೀ ಶಕ್ತಿ’ ಎಂಬ ಕಾರ್ಯಕ್ರಮವನ್ನು ರೂಪಿಸಿ, ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಪ್ರಯತ್ನಿಸಿದೆ.
- ಮಹಿಳೆಯರ ಸ್ವ-ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಮತ್ತು ಸಬ್ಸಿಡಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
- ಮಹಿಳಾಮಂಡಲಗಳು, ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ಮಹಿಳಾ ಸಹಕಾರಿ ಸಂಘಗಳು
- ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಹಿಳಾ ಆಯೋಗಗಳನ್ನು ರಚಿಸಿದ್ದು ಮಹಿಳೆಯರ ದೂರು ದುಮ್ಮಾನಗಳನ್ನು ಇದು ಪರಿಶೀಲಿಸಿ ನ್ಯಾಯ ಒದಗಿಸಿಕೊಡುತ್ತಿದೆ.
- ಶಾಸಕಾಂಗ ಮತ್ತು ಸಂಸತ್ತಿನಲ್ಲಿ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ನೀಡುವಂತಹ ಪ್ರಯತ್ನ ನಡೆಯುತ್ತಿದೆ.
- ಸರ್ಕಾರಿ ಉದ್ಯೋಗಗಳಲ್ಲಿ ಕೂಡಾ ಮಹಿಳೆಯರಿಗೆ ನಿಗದಿತ ಪ್ರಮಾಣದ ಮೀಸಲಾತಿಯನ್ನು ನೀಡಲಾಗುತ್ತದೆ
4. ನಿರುದ್ಯೋಗ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುವು?
- ಜನತೆಗೆ ಉದ್ಯೋಗ ಮಾಡಲು ಅಗತ್ಯವಿರುವ ಕೌಶಲ್ಯ ಆಧಾರಿತ ಗುಣಮಟ್ಟದ ಶಿಕ್ಷಣ ನೀಡಿಕೆ, ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಮೂಲ ಬಂಡವಾಳವನ್ನು ಸಾಲದ ರೂಪದಲ್ಲಿ ನೀಡುವುದು
- ಸಾಧ್ಯವಾದಷ್ಟು ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗಗಳನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನು ಕೈಗೊಳ್ಳಲಾಗಿದೆ.
- ಆಧುನಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಿ ಉದ್ಯೋಗ ಪಡೆಯುವಂತಹ ಸಾಮರ್ಥ್ಯವನ್ನು ವೃದ್ಧಿಸಲು
- ಪೂರಕವಾದ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವುದು ಅಗತ್ಯವಾಗಿದೆ.
- ಇನ್ನೊಂದೆಡೆ ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ವೃತ್ತಿಯಲ್ಲಿ ತೊಡಗುವಂತೆ ಪ್ರೇರೇಪಿಸುವ ಸಾಮಾಜಿಕ ಬದಲಾವಣೆಯನ್ನು ಮಾಡುವ ವೃತ್ತಿ ಶಿಕ್ಷಣವನ್ನು ಕೂಡಾ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.
5. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುವು?
- ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡುವ ಉದ್ದೇಶದಿಂದ ಭಾರತ ಸಂವಿಧಾನದ 371 ನೇ ವಿಧಿಗೆ A ಯಿಂದ 3 ವರೆಗೆ ತಿದ್ದುಪಡಿಗಳ ಮೂಲಕ ಸೇರ್ಪಡೆ ಮಾಡಲಾಗಿದೆ.
- ಈ ಮೂಲಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ.
- ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ 2001ರಲ್ಲಿ ಡಿ.ಎಂ. ನಂಜುಂಡಪ್ಪ ಸಮಿತಿಯು ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಕುರಿತು ವರದಿ ನೀಡಿದೆ.
- ಇದಕ್ಕೆ ಪೂರಕವಾಗಿ ಸಂವಿಧಾನಕ್ಕೆ ವಿಧಿ 371 (ಜೆ) ಸೇರ್ಪಡೆ ಮಾಡುವುದರ ಮೂಲಕ ಕರ್ನಾಟಕದಲ್ಲಿನ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.
6. ಭಯೋತ್ಪಾದಕತೆಯಿಂದ ಉಂಟಾಗುವ ಪರಿಣಾಮಗಳಾವುವು?
- ಭಯೋತ್ಪಾದಕತೆಯು ವ್ಯಕ್ತಿಗಳಿಗೆ ಮತ್ತು ಸ್ವತ್ತುಗಳಿಗೆ ಅಪಾರ ಹಾನಿ ಉಂಟುಮಾಡುತ್ತದೆ.
- ಅದಕ್ಕಿಂತಲೂ ಹೆಚ್ಚಾಗಿ ಉಗ್ರಗಾಮಿತ್ವ ಮಾನಸಿಕ ವೇದನೆಯನ್ನು ನೀಡುತ್ತದೆ. ಸಾಮಾಜಿಕ ಸಂಸ್ಕೃತಿಗೆ, ಅದೇ ರೀತಿ ಸರ್ಕಾರಕ್ಕೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
- ಈ ಉಗ್ರಗಾಮಿತ್ವವು ಒಂದು ರಾಷ್ಟ್ರದ ನಾಗರಿಕರ ಮೇಲೆ, ಮಿಲಿಟರಿ ಪಡೆಗಳ ಮೇಲೆ, ಅಂತೆಯೇ ನಿರ್ದಿಷ್ಟ ಭಾಷಾವಾರು, ಧಾರ್ಮಿಕ, ಜನಾಂಗೀಯ, ಅಥವಾ ವರ್ಣದವರ ಮೇಲೆ ಎರಗಿ ಸಾವು ನೋವು ಉಂಟು ಮಾಡುವುದಾಗಿದೆ.
- ಉಗ್ರಗಾಮಿತ್ವವು ಭಯವನ್ನು ಹೆಚ್ಚಿಸುವ ಹಾಗೂ ಪ್ರಚಾರವನ್ನು ಪಡೆಯುವ ಉದ್ದೇಶದಿಂದ ನಡೆಯುತ್ತದೆ.
- ಅತ್ಯಧಿಕ ಸಾವುನೋವು ಉಂಟು ಮಾಡಲು ಸ್ಫೋಟಕ ವಸ್ತುಗಳನ್ನು, ವಿಷಾನಿಲವನ್ನು ಬಳಸಲು ದಾರಿ ಮಾಡಿಕೊಡುತ್ತದೆ.
7. ಭಯೋತ್ಪಾದಕತೆಯ ನಿಗ್ರಹಕ್ಕೆ ಭಾರತವು ಕೈಗೊಂಡಿರುವ ಕ್ರಮಗಳಾವುವು?
- ಭಾರತ ತನ್ನಲ್ಲಿ, ಅದೇ ರೀತಿ ಅನ್ಯರ ನೆಲದಲ್ಲಿ ಭಯೋತ್ಪಾದಕತೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತದೆ.
- ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಯೋತ್ಪಾದಕತೆಯ ನಿಗ್ರಹಕ್ಕೆ ತೀವ್ರ ಪ್ರಯತ್ನ ನಡೆಸುತ್ತಿವೆ. ತನ್ಮೂಲಕ ಜನತೆಯ ಪ್ರಾಣ ಹಾಗೂ ಆಸ್ತಿಪಾಸ್ತಿಯನ್ನು ಉಳಿಸಲು ಯತ್ನಿಸುತ್ತಿವೆ.
- ಭೀತಿವಾದಿಗಳನ್ನು ನಿಗ್ರಹಿಸಲು ವಿಶೇಷ ಪರಿಣತಿ ಪಡೆದ ಪಡೆಗಳನ್ನು ರಚಿಸಲಾಗುತ್ತಿದೆ.
- ಕೆಲವೊಮ್ಮೆ ರಕ್ಷಣಾ ಪಡೆಗಳನ್ನು ಈ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಗೆ ಬಳಸಲಾಗುತ್ತದೆ.
- ಶಾಂತಿ ಪ್ರಿಯ ರಾಷ್ಟ್ರವೆನಿಸಿದ ನಾವು ಭಯೋತ್ಪಾದಕತೆಯನ್ನು ವಿರೋಧಿಸುತ್ತೇವೆ.
8. ಕಾರ್ಪೋರೇಟ್ ತಂತ್ರಗಾರಿಕೆ ಎಂದರೇನು? ಮತ್ತು ಅದರ ಪ್ರಸ್ತುತದ ಬೆಳವಣಿಗೆಯನ್ನು ಕುರಿತು ವಿವರಿಸಿ
- ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವ ನಿರ್ಧಾರಿತ ಗುರಿಗಳನ್ನು ತಲುಪಲು ಕಂಪೆನಿಯು ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನಗಳನ್ನು ಕಾರ್ಪೋರೇಟ್ ತಂತ್ರಗಾರಿಕೆ ಎಂದು ಕರೆಯಲಾಗುತ್ತದೆ.
- ಇಂದಿನ ಕಾರ್ಪೋರೇಟ್ ತಂತ್ರಗಾರಿಕೆ ಜಾಗತೀಕರಣ ಮತ್ತು ಆಧುನೀಕರಣ ತಂತ್ರಜ್ಞಾನಗಳ ಬಳಕೆಯೊಂದಿಗೆ ಬೆಳೆಯುತ್ತಿದೆ.
- ತಂತ್ರಗಾರಿಕೆಯ ಪ್ರಮುಖ ಉದ್ದೇಶ ಲಾಭವನ್ನು ಪಡೆಯುವುದಾಗಿರುತ್ತದೆ.
- ಇದರಿಂದ ನಕಾರಾತ್ಮಕವಾದ ಬೆಳವಣಿಗೆಗಳು ವ್ಯಕ್ತಿಯ ಜೀವನ ಸಮಾಜ ಮತ್ತು ರಾಷ್ಟ್ರಗಳ ಮೇಲುಂಟಾಗುತ್ತದೆ.
- ಪ್ರಭುತ್ವ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೇಲೂ ಕಾರ್ಪೋರೇಟ್ ತಂತ್ರಗಾರಿಕೆ ತನ್ನ ಪ್ರಭಾವಗಳನ್ನು ಬೀರಿದೆ.
- ನಾಗರಿಕ ಸಮಾಜವನ್ನು ಅಭಿವೃದ್ಧಿಗೊಳಿಸಿದಲ್ಲಿ ಕಾರ್ಪೋರೇಟ್ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಬಡತನ ನಿರ್ಮೂಲನೆ, ಉತ್ತಮ ಆರೋಗ್ಯ, ಶಿಕ್ಷಣ, ವಸತಿ, ಆಹಾರ ಇತ್ಯಾದಿ ಮೂಲ ಸೇವೆಗಳನ್ನು ಬದಲಿಸಲು ಪೂರಕವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಅವಕಾಶ ಕಲ್ಪಿಸಲಾಗಿದೆ.