10ನೇ ತರಗತಿ ಅಧ್ಯಾಯ -2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಸಮಾಜ ವಿಜ್ಞಾನ ನೋಟ್ಸ್, 10th Standard British Alvikeya Vistarane Notes Question Answer Mcq Pdf Kseeb Solution For Class 10 Social Science Chapter 2 Notes in Kannada 10th Class Social science Chapter 2 History Class 10 Chapter 2 Question Answer
British Alvikeya Vistarane Notes Question Answer
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಪ್ರಶ್ನೋತ್ತರಗಳು
I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ,
1.ಮೊದಲನೆ ಅಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ ಒಪ್ಪಂದ ಆಯಿತು. ಸಾಲಬಾಯ್
2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಲಾರ್ಡ್ ವೆಲ್ಲೆಸಿ
3. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವನು -ಲಾರ್ಡ ಡಾಲ್ಹೌಸಿ
4. ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು1848 ರಲ್ಲಿ ಜಾರಿಗೆ ತರಲಾಯಿತು
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ,
1.ಬ್ರಿಟಿಷರು ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಮೂಲಕ ಯಾವ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು?
ಬ್ರಿಟಿಷರು ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಮೂಲಕ ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು.
2. ಮೊದಲ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಡಿತು?
ಮೊದಲ ಆಂಗ್ಲೋ-ಮರಾಠ ಯುದ್ಧ ಸಾಲ್ಬಾಯ್ ಒಪ್ಪಂದದೊಂದಿಗೆ ಕೊನೆಗೊಡಿತು.
3. ಮೊದಲ ಆಂಗ್ಲೋ-ಮರಾಠ ಯುದ್ಧದ ನಂತರ ಮರಾಠರ ಪೇಶ್ವೇ ಆಗಿ ನೇಮಕಗೊಂಡವನು ಯಾರು?
ಮೊದಲ ಆಂಗ್ಲೋ-ಮರಾಠ ಯುದ್ಧದ ನಂತರ ಮರಾಠರ ಪೇಶ್ವ ಆಗಿ ನೇಮಕಗೊಂಡವನು ಮಾಧವರಾವ್.
4. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಯಾರು?
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಲಾರ್ಡ ವೆಲ್ಲೆಸ್ಲಿ
5. ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಏಕೆ ಜಾರಿಗೆ ತಂದನು?
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದನು.
6. ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಯಾವಾಗ ಜಾರಿಗೆ ತಂದನು?
ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು 1798ರಲ್ಲಿ ಜಾರಿಗೆ ತಂದನು.
7. ಬ್ರಿಟಿಷ್ ಈಸ್ಟ ಇಂಡಿಯಾ ಕಂಪೆನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಸೈನಿಕ ಒಪ್ಪಂದ ಯಾವುದು?
ಬ್ರಿಟಿಷ್ ಈಸ್ಟ ಇಂಡಿಯಾ ಕಂಪೆನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಸೈನಿಕ ಒಪ್ಪಂದ ಸಹಾಯಕ ಸೈನ್ಯ ಪದ್ಧತಿ,
8. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಯಾವುದು?
ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಹೈದರಾಬಾದ್ ಸಂಸ್ಥಾನ.
9. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ರಾಜ್ಯಗಳು ಯಾವುವು?
ಹೈದರಾಬಾದ್ ಸಂಸ್ಥಾನ,ಮೈಸೂರು,ಔದ್,ತಂಜಾವೂರು,ಮರಾಠ,ಆರ್ಕಾಟ್ ಜೂನಾ,ಬಿರಾರ್, ಗ್ವಾಲಿಯರ್.
10. ಎರಡನೇ ಆಂಗ್ಲೋ-ಮರಾಠ ಯುದ್ಧಕ್ಕೆ ಮುಖ್ಯ ಕಾರಣವೇನು?
ಎರಡನೇ ಆಂಗ್ಲೋ-ಮರಾಠ ಯುದ್ಧಕ್ಕೆ ಮುಖ್ಯ ಕಾರಣ ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ.
11. ಎರಡನೇ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
ಎರಡನೇ ಆಂಗ್ಲೋ-ಮರಾಠ ಯುದ್ಧ ಬೆಸ್ಸಿನ್ ಒಪ್ಪಂದದೊಂದಿಗೆ ಕೊನೆಗೊಂಡಿತು.
12. ಹೋಲ್ಕರ್,ಭೋಂಸ್ತೆ,ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಲು ಕಾರಣವೇನು?
ಪೇಳ್ವೆಯು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೊಳ್ಳ, ಭೋಂಸ್ತೆ,ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದರು.
13. ಸಿಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಯಾವುದು?
ಸಿಖ್ರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಲಾಹೋರ್ ಒಪ್ಪಂದ.
14. ಲಾಹೋರ್ ಮತ್ತು ಮುಲ್ತಾನ್ಗಳಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ ಪಂಜಾಬಿಗಳು ಯಾರು?
ಲಾಹೋರ್ ಮತ್ತು ಮುಲ್ತಾನ್ಗಳಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ ಪಂಜಾಬಿಗಳು ಚಟ್ಟಾರ್ ಸಿಂಗ್ ಅಟ್ಟಾರಿವಾಲ ಮತ್ತು ಮೂಲರಾಜ್,
15. ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು ಯಾರು?
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು ಲಾರ್ಡ ಡಾಲ್ ಹೌಸಿ
16. ಲಾರ್ಡ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಲು ಕಾರಣವೇನು?
ಅವನ ಯುದ್ಧಪ್ರಿಯ ನೀತಿಯಿಂದ ಕಂಪೆನಿಗೆ ಸಾಲದ ಹೊರೆ ಹೆಚ್ಚಿತು.ಇದರಿಂದ ತೀವ್ರ ಟೀಕೆಗೆ ಒಳಗಾದ ಲಾರ್ಡ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಿದನು.
17. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು?
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಲಾರ್ಡ ಡಾಲ್ಹೌಸಿ.
18. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದರೇನು?
ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ,ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ.ಇದನ್ನು ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವರು.
19. ದತ್ತು ಮಕ್ಕಳಿಗೆ ಹಕ್ಕಿಲ ಎಂಬ ನೀತಿಗೆ ಒಳಪಟ್ಟ ರಾಜ್ಯಗಳು ಯಾವುವು?
ಸತಾರ,ಜೈಪುರ,ಸಂಬಲ್ ಪುರ,ಉದಯ್ ಪುರ್.ಝಾನ್ಸಿ ನಾಗಪುರ
20. ದತ್ತು ಮಕ್ಕಳಿಗೆ ಹಕ್ಕಿಲ ಎಂಬ ನೀತಿ ಯಾವಾಗ ಜಾರಿಗೆ ಬಂದಿತು?
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ 1848ರಲ್ಲಿ ಜಾರಿಗೆ ಬಂದಿತು.
Class 10 Social Science Chapter 2 Kannada Medium
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ,
1. ಮೊದಲನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣಗಳನ್ನು ವಿವರಿಸಿ.
- ಮರಾಠರ ಬಲಿಷ್ಠ ಪೇಶ್ವ ಮಾಧವರಾವ್ ಇದೇ ಸಮಯದಲ್ಲಿ ತೀರಿಕೊಂಡದ್ದು ಮರಾಠರಿಗೆ ತುಂಬಲಾರದ ನಷ್ಟವಾಯಿತು.
- ಪೇಳ್ವೆಯ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನನ್ನು ಅವನ ಚಿಕ್ಕಪ್ಪ ರಥೋಬ(ರಘುನಾಥರಾವ್ ನು ಕೊಲೆ ಮಾಡಿದನು.
- ಇದರಿಂದ ಪೇಳ್ವೆಯ ಸ್ಥಾನಕ್ಕೆಕಲಹ ಏರ್ಪಟ್ಟಿತು. ನಾನಾ ಫಡ್ನವೀಸ್ ನೇತೃತ್ವದಲ್ಲಿ ಪೇಶ್ವ ಸ್ಥಾನಾಕಾಂಕ್ಷಿಯಾದ ರಥೋಬನ ಬದಲು ನಾರಾಯಣರಾಯನ ಮಗ ಎರಡನೇ ಮಾಧವರಾವ್ಗೆ ಮರಾಠ ಒಕ್ಕೂಟವು ಪಟ್ಟಕಟ್ಟಿತು.
- ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗದ ರಥೋಬನು ಬ್ರಿಟಿಷರ ಬೆಂಬಲ ಕೋರಿದನು.
- ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು.
- ಮರಾಠಿ ಒಕ್ಕೂಟವು ಯುದ್ಧ ಮುಂದುವರೆಸಲಾಗದೆ ಬ್ರಿಟಿಷರೊಂದಿಗೆ ಸಾಲ್ಬಾಯ್ ಒಪ್ಪಂದವನ್ನು ಮಾಡಿಕೊಂಡಿತು.
- ಎರಡನೇ ಮಾಧವರಾವನನ್ನು ಪೇಳ್ವೆಯಾಗಿ ನೇಮಿಸಲಾಯಿತು
2. ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳಾವುವು? ವಿವರಿಸಿ.
- ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ವೆಲ್ಲೆಸ್ಲಿಯು ಜಾರಿಗೆ ತಂದನು.
- ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.
- ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು. ಇಲ್ಲವೆ
- ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟುಕೊಡಬೇಕು. ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು.
- ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.
- ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್ನ ಸಮ್ಮತಿ ಬೇಕು, ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.
3. ಮೂರನೇ ಆಂಗ್ಲೋ ಮರಾಠ ಯುದ್ಧವನ್ನು ವಿವರಿಸಿ,
- ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.
- ಪೇಳ್ವೆ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸುತ್ತಿದ್ದನು.
- ಪೇಳ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.
- ನಾಗಪುರದ ಅಪ್ಪಾಸಾಹೇಬ ಮತ್ತು ಮಲ್ದಾರರಾವ್ ಹೋಸ್ಕರ್ ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು. ಅಂತಿಮವಾಗಿ ಪೇಳ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧ ಕೋರೇಗಾವ್ ಮತ್ತು
- ಅಷ್ಟಿ ಯುದ್ಧಗಳಲ್ಲಿ ಸೋತು ಶರಣಾದನು. ಬ್ರಿಟಿಷರು ಪೇಶ್ ಪದವಿಯನ್ನು ರದ್ದುಗೊಳಿಸಿ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು.
- ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪಸಿಂಹನನ್ನು ಸಣ್ಣ ರಾಜ್ಯ ಸತಾರಾದಲ್ಲಿ ಪ್ರತಿಷ್ಠಾಪಿಸಿದರು.
4.ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಹೇಗೆ ಸಹಕಾರಿಯಾಯಿತು?
- ಡಾಲ್ ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯ ಮೂಲಕ ಸಾಧಿಸಿದನು.
- ಈ ನೀತಿಯ ಪ್ರಕಾರ: ‘ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ’.
- ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು.
- ಈ ನೀತಿಗೆ ಒಳಪಟ್ಟ ರಾಜ್ಯಗಳಲ್ಲಿ ಸತಾರ, ಜೈಪುರ್, ಸಂಬಲ್ಪುರ್, ಉದಯಪುರ್, ಝಾನ್ಸಿ, ನಾಗಪುರ ಮೊದಲಾದಗಳು ಪ್ರಮುಖವಾದವುಗಳಾಗಿವೆ.
5. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?
ಸತಾರ, ಜೈಪುರ್, ಸಂಬಲ್ಪುರ್, ಉದಯಪುರ್, ಝಾನ್ಸಿ, ನಾಗಪುರ
6. ಎರಡನೇ ಆಂಗ್ಲೋ ಮರಾಠ ಯುದ್ಧವನ್ನು ವಿವರಿಸಿ,
- ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣವಾಯಿತು. ಹೋಳ್ವ ಮನೆತನದ ಯಶವಂತರಾವ್ ಒಂದು ಕಡೆಯಾದರೆ ಸಂಧಿಯಾ ಮನೆತನದ ದೌಲತ್ ರಾವ್ ಹಾಗೂ ಪೇಳ್ವೆ ಎರಡನೇ ಬಾಜಿರಾವ್ ಇನ್ನೊಂದು ಕಡೆಗಿದ್ದರು.
- ಹೋಳ್ಳ ಸೈನ್ಯವು ಸಿಂಧಿಯಾ ಮತ್ತು ಪೇಳ್ವೆಯ ಸೈನ್ಯವನ್ನು ಸೋಲಿಸಿತು.
- ಪೇಳ್ವೆ ಬ್ರಿಟಿಷರ ಸಹಾಯ ಯಾಚಿಸಿದನು. ಲಾರ್ಡ್ ವೆಲ್ಲೆಸ್ಲಿಗೆ ಮರಾತರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು.
- ಪೇಳ್ವೆಯು ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು.
- ಪೇಳ್ವೆಯು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೊಳ್ಳ, ಭೋಂಸ್ಥೆ, ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದರು
- ಮರಾಠ ಮನೆತನಗಳ ಸೇನೆಯನ್ನು ವೆಲ್ಲೆಸ್ಲಿಯು ಆನೇಕ ಯುದ್ಧಗಳಲ್ಲಿ ಮಣಿಸಿದನು.