WhatsApp Group Join Now
Telegram Group Join Now

10th Thayi Bharatiya Amaraputraru Notes

10ನೇ ತರಗತಿ ತಾಯಿ ಭಾರತಿಯ ಅಮರಪುತ್ರರು ಕನ್ನಡ ನೋಟ್ಸ್‌ ಪ್ರಶ್ನೋತ್ತರ, 10th Standard Thayi Bharatiya Amaraputraru Kannada Notes Question Answer Pdf 2024, Kseeb Solutions for Class 10 Kannada Thayi Bharatiya Amaraputraru Notes Karnataka State Syllabus SSLC Kannada Thayi Bharatiya Amaraputraru Lesson Supplementary Notes Pdf

10th Thayi Bharatiya Amaraputraru Puraka Patada Notes Pdf

ಪ್ರವೇಶ : ಭಾರತ ಸ್ವತಂತ್ರಗೊಂಡು ಸ್ವಾತಂತ್ರ್ಯದ ಸವಿಯನ್ನು ನಾವಿಂದು ಅನುಭವಿಸುತ್ತಿದ್ದೇವೆ . ಆದರೆ ಆ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ ಮಡಿದವರು ಅಸಂಖ್ಯಾತ ದೇಶಭಕ್ತರು , ಸ್ವಾತಂತ್ರ್ಯ ತ್ಯಾಗ – ಬಲಿದಾನದ ಫಲ . ರಕ್ತತರ್ಪಣವನ್ನಾದರೂ ಕೊಟ್ಟು ತಾಯಿ ಭಾರತಿಯನ್ನು ಪರತಂತ್ರದ ಶೃಂಖಲೆಯಿಂದ ಬಿಡಿಸುವೆವೆಂದ ವೀರ ಕ್ರಾಂತಿಕಾರರ ನಿಸ್ವಾರ್ಥ ಬಲಿದಾನವನ್ನು ಸ್ಮರಿಸುವುದು ಭಾರತೀಯರೆಲ್ಲರ ಜವಾಬ್ದಾರಿ . ಅದು ೧೯೩೧ ನೇ ಇಸವಿ , ಮಾರ್ಚ್ ೨೩ ಲಾಹೋರಿನ ಸೆರೆಮನೆಯ ಮುಂದೆ ಸಾವಿರಾರು ಜನ ಸೇರಿದ್ದರು . ‘ ವಂದೇ ಮಾತರಂ ‘ , ‘ ಭಾರತ್ ಮಾತಾ ಕಿ ಜೈ ‘ ಘೋಷಣೆಗಳು ಮುಗಿಲು ಮುಟ್ಟಿದ್ದವು . ಆ ಜನಸಂದಣಿಯಲ್ಲಿ ಎಲ್ಲರಿಗಿಂತಲೂ ಮುಂದೆ ವೃದ್ಧ ತಾಯ್ತಂದೆಯರು ಅವರ ಕಂಗಳಲ್ಲಿ ಮುಂದೇನಾಗುವುದೋ ಎಂಬ ಆತಂಕ , ವ್ಯಾಪಾರದ ನೆಪದಲ್ಲಿ ಒಂದು ಭಾರತೀಯರನ್ನೇ ತಮ್ಮ ಅಡಿಯಾಳಾಗಿಸಿಕೊಂಡ ಬ್ರಿಟಿಷರು ತಮ್ಮ ಮಕ್ಕಳನ್ನು ನಿರ್ದಯ y has a co ಆದರೂ ಕಣ್ಣಲ್ಲಿ ಹನಿ ನೀರಿಲ್ಲ ! ಅಂತಹ ಧೀರತನ .

ಹ್ಹ್! ಆ ಎದೆಗಾರಿಕೆ ಬ್ರಿಟಿಷರಿಗಿರಬೇಕಲ್ಲ ? ಹೊರಗೆ ನೆರೆದ ಜನಸಂದಣಿಯನ್ನು ಕಂಡೇ ನಡುಗಿಹೋಗಿದ್ದರು . ಈ ಜನರೆಲ್ಲಿ ಸೆರೆಮನೆಯ ಗೋಡೆ ಒಡೆದು ಒಳನುಗ್ಗಿ , ಯುವ ಕ್ರಾಂತಿಕಾರಿಗಳನ್ನು ಬಿಡಿಸಿ ಕರೆದೊಯ್ಯುವರೋ ಎಂಬ ಅಂಜಿಕೆ ಅವರಿಗೆ . ಅದಕ್ಕಾಗಿಯೇ ಅವರು ನಿಗದಿತ ದಿನಕ್ಕಿಂತ ಒಂದು ದಿನ ಮೊದಲೇ ತಮ್ಮ ಅಪರಾಧಿಗಳನ್ನು ಗಲ್ಲಿಗೇರಿಸುವ ತಯಾರಿಯಲ್ಲಿದ್ದರು,

ಆ ಅಪರಾಧಿಗಳು ಮಾಡಿದ್ದ ಏನೆನ್ನುತ್ತೀರಿ ? ದೇಶದ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದ್ದು , ಆ ದನಿಯನ್ನು ಬ್ರಿಟಿಷ್ ಸರ್ಕಾರ ಕೇಳಿಸಿಕೊಳ್ಳದೆ ಕಿವುಡಾಗಿ ಕುಳಿತಿದ್ದಾಗ ಅಸೆಂಬ್ಲಿಯಲ್ಲಿ ಬಾಂಬೆಸೆದು ಸದ್ದು ಮಾಡಿದ್ದರು ಅವರು ! ಇಂಗ್ಲೆಂಡಿನಿಂದ ಬಂದು ಈ ದೇಶವನ್ನು ಲೂಟಿಗೈದಿದ್ದಲ್ಲದೇ ಭಾರತೀಯರನ್ನು ತುಚ್ಛವಾಗಿ ಕಾಣುತ್ತಾ ಶೋಷಣೆಗೆ ದೂಡಿದ್ದ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದರು ಬಿಸಿರಕ್ತದ ಆ ಯುವಕರು . ಭಿನ್ನ – ಭಿನ್ನ ಕ್ರಾಂತಿ ಚಟುವಟಿಕೆಗಳ ಮೂಲಕ ಪರಕೀಯರನ್ನು ಈ ದೇಶಬಿಟ್ಟು ಓಡಿಸುವ ಯೋಜನೆಗಳನ್ನು ರೂಪಿಸುತ್ತಿದ್ದರು . ಅವರೇ ದೇಶದಲ್ಲಿ ಕ್ರಾಂತಿದೀಪ ಮತ್ತಷ್ಟು ಜಾಜ್ವಲ್ಯಮಾನವಾಗಿ ಬೆಳಗುವಂತೆ ಮಾಡಲು ತಮ್ಮ ರಕ್ತವನ್ನೇ ಬಸಿದ ಭಗತ್ ಸಿಂಗ್ , ರಾಜಗುರು ಮತ್ತು ಸುಖದೇವರು .

ಈ ಮೂವರು ಯುವ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲು ಬ್ರಿಟಿಷರು ಕೊಟ್ಟ ಕಾರಣ ‘ ರಾಜ ದ್ರೋಹ ‘ . ಎಷ್ಟು ವಿಚಿತ್ರ ನೋಡಿ , ಬ್ರಿಟಿಷರು ಭಾರತದ ರಾಜರೇ ಆಗಿರಲಿಲ್ಲ , ಅವರೇ ಬೇರೆ ದೇಶದಿಂದ ಬಂದಿದ್ದವರು . ಭಾರತೀಯರು ತಮ್ಮ ಸ್ವಂತ ನೆಲದ ಮುಕ್ತಿಗಾಗಿ ಹೋರಾಡುವುದನ್ನೇ ಈ ಬಿಳಿಯರು ರಾಜದ್ರೋಹವೆಂದು ಕರೆದಿದ್ದರು . ಅನೇಕರನ್ನು ಇದೇ ಆಧಾರದ ಮೇಲೆ ನೇಣಿಗೇರಿಸಿದ್ದು , ಗುಂಡು ಹಾಕಿ ಕೊಂದಿದ್ದಲ್ಲದೇ

ನಡುಬೀದಿಯಲ್ಲೇ ಲಾಠಿಯಿಂದ ಬಡಿದೂ ಕೊಲ್ಲಲಾಗುತ್ತಿತ್ತು . ಬ್ರಿಟಿಷರ ಈ ಅನ್ಯಾಯ , ದರ್ಪಗಳನ್ನು ಮೆಟ್ಟಿನಿಲ್ಲಲೆಂದೇ ಈ ಸಿಡಿಲಮರಿಗಳು ಬ್ರಿಟಿಷ್ ಅಧಿಕಾರಿ ಸ್ಕಾಟ್‌ನ ಹತ್ಯೆಗೆ ಯೋಜನೆ ರೂಪಿಸಿದರು . ಪಂಜಾಬಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯರನ್ನು ಲಾಠಿಯಿಂದ ಬಡಿದು ಕೊಲ್ಲುವಲ್ಲಿ ಸ್ಮಾಟ್‌ನ ಪಾತ್ರ ಮಹತ್ವದ್ದಾಗಿತ್ತು . ಲಾಲಾಜಿ ತೀರಿಕೊಳ್ಳುವ ಮುನ್ನ ‘ ನನಗೆ ಹೊಡೆದ ಒಂದೊಂದೂ ಲಾಠಿಯ ಏಟೂ ಬ್ರಿಟಿಷರ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳು ‘ ಎಂದಿದ್ದರು . ಯೋಜನೆ ಕಾರ್ಯರೂಪಕ್ಕೆ ಬರುವ ಹೊತ್ತಿನಲ್ಲಿ ಸ್ವಲ್ಪ ಎಡವಟ್ಟಾಯ್ತು , ಸ್ಯಾಂಡರ್ಸ್‌ನನ್ನೇ ಸ್ಕಾಟ್ ಎಂದು ಭಾವಿಸಿ ಕ್ರಾಂತಿಕಾರಿಗಳು ಅವನ ಹತ್ಯೆ ಮಾಡಿ ಮುಗಿಸಿದ್ದರು . ವಾಸ್ತವವಾಗಿ ಸ್ಕಾಟ್‌ನ ಆದೇಶದಂತೆ ಲಾಲಾಜಿಯವರಿಗೆ ಲಾಠಿಯಿಂದ ಬಡಿದವನು ಇದೇ ಸ್ಯಾಂಡರ್ಸ್ , ಆ ದುರಹಂಕಾರಿಯು ಭಾರತೀಯರ ಪ್ರತೀಕಾರದ ಗುಂಡಿಗೆ ಬಲಿಯಾಗಿದ್ದ , ಈ ಒಟ್ಟಾರೆ ಯೋಜನೆಯನ್ನು ರೂಪಿಸಿದವನು ಸುಖದೇವ . ಭಗತ್ ಸಿಂಗ್‌ನೊಂದಿಗೆ ಗುಂಡು ಹಾರಿಸಿದವ ಮರಾಠಾ ಕಲಿ ರಾಜಗುರು . ಇವರೆಲ್ಲರಿಗೂ ರಕ್ಷಣೆಯಾಗಿ ನಿಂತಿದ್ದು ಆಜಾದ್ ಎಂದೇ ಖ್ಯಾತರಾದ ಚಂದ್ರಶೇಖರ್ ಆಜಾದ್ .

ಶಿವರಾಮ ಹರಿ ರಾಜಗುರು

ಭಗತ್ ಸಿಂಗ್ ಇಷ್ಟು ದೊಡ್ಡ ಕ್ರಾಂತಿಕಾರಿಯಾಗಿ ಬೆಳೆಯುವಲ್ಲಿ ಬಾಲ್ಯಜೀವನದ ಪಾತ್ರ ಬಲುದೊಡ್ಡದು . ಪಂಜಾಬಿನ ಜಲಿಯನ್‌ವಾಲಾಬಾಗ್‌ನಲ್ಲಿ ಪರಂಗಿಗಳು ನಡೆಸಿದ ಹತ್ಯಾಕಾಂಡವನ್ನು ನೇರವಾಗಿ ನೋಡಿದ್ದ ಆತ ಸ್ವಾತಂತ್ರ್ಯದ ಕಿಚ್ಚನ್ನು ತನ್ನೊಳಗೆ ಕಾಯ್ದುಕೊಂಡಿದ್ದ . ಮುಂದೆ ಅಸಹಕಾರ ಚಳವಳಿ ಅವರನ್ನು ಬಹುವ ಸೆಳೆದು ಶಾಲೆಯಲ್ಲಿರುವಾಗಲೇ ಆತ ಅವರ ಕಟ್ಟಾ ಅನುಯಾಯಿಯಾಗುವಂತೆ ಮಾಡಿತು . ಆದರೆ ಚೌರಿ ಚೌರಾದಲ್ಲಿ ನಡೆದ ಹತ್ಯಾಕಾ ಕದ ಘಟನೆಯಿಂದ ತೀವ್ರವಾಗಿ ನೊಂದ ಗಾಂಧೀಜಿ ಚಳವಳಿಯನ್ನು ಹಿಂಪಡೆದರು . ಶಾಲೆಬಿಟ್ಟು ಈ ಚಳವಳಿಗೆ ಧುಮುಕಿದ್ದ ಭಗತ್ ಸಿಂಗ್‌ಗೆ ನಿರಾಸೆಯಾಯ್ತು . ಮಹಾತ್ಮಾ ಗಾಂಧೀಜಿಯವರ ಶಾಂತಿಮಾರ್ಗದಿಂದ ಆತ ದೂರ ಸರಿದ . ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ ಗಾಂಧೀಜಿಯವರ ಸೀಟು ಗಿಟ್ಟಿಸಿ ಓದು ಮುಂದುವರೆಸಿದ .

ಕಾಲೇಜಿನ ದಿನಗಳಲ್ಲಿ ಸುಖದೇವನ ಜೊತೆಗೂಡಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬಿತ್ತುವ ಕೆಲಸ ಮಾಡುತ್ತಿದ್ದ . ಕ್ರಮೇಣ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದೆ . ಎಲ್ಲರಿಂದಲೂ ಪಂಡಿತ್‌ಜೀ ಎಂದು ಗೌರವಿಸಲ್ಪಡುತ್ತಿದ್ದ ಚಂದ್ರಶೇಖರ ಆಜಾದರ ಸಹವಾಸಕ್ಕೆ ಬಂದ ಮೇಲಂತೂ ಅವನ ಕ್ರಾಂತಿ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡವು . ಈ ಹೊತ್ತಿನಲ್ಲಿಯೇ ಕಾಕೋರಿ ಕಾಂಡ ನಡೆದು ಕ್ರಾಂತಿಕಾರಿಗಳ ಗುಂಪು ಚದುರಿಹೋಯ್ತು . ಆದರೆ ಭಗತ್ ಸಿಂಗ್ ಕೈ ಚೆಲ್ಲಲಿಲ್ಲ . ಆಜಾದರೊಡಗೂಡಿ ಕ್ರಾಂತಿಕಾರಿಗಳನ್ನು ಮತ್ತೆ ಸಂಘಟಿಸಿದ . ಅಲ್ಲಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕ್ರಾಂತಿಕಾರಿಗಳನ್ನೆಲ್ಲ ಒಂದೇ ಸಂಘಟನೆಯಡಿ ತರುವ ಪ್ರಯತ್ನ ಮಾಡಿದ . ಈ ಹೊತ್ತಿನಲ್ಲಿಯೇ ಆತ ಬಟುಕೇಶ್ವರ ದತ್ತನೊಂದಿಗೆ ಸೇರಿ ಅಸೆಂಬ್ಲಿಯಲ್ಲಿ ಬಾಂಬೆಸೆದು ಬ್ರಿಟಿಷರನ್ನೇ ನಡುಗಿಸಿಬಿಟ್ಟ , ತಾನೇ ಬ್ರಿಟಿಷರಿಗೆ ಶರಣಾಗತನಾಗಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಕ್ರಾಂತಿಕಾರಿಗಳ ಹೋರಾಟದ ಮಾರ್ಗವನ್ನು ಪೂರ್ಣವಾಗಿ ವಿವರಿಸಿದ .

ಸುಖದೇವ್

ಆತ ಪ್ರತಿಪಾದಿಸಿದ ‘ ಪೂರ್ಣ ಸ್ವರಾಜ್ಯ ‘ ಚಿಂತನೆಯು ಕಾಂಗ್ರೆಸ್ಸಿನ ತರುಣರನ್ನು ಸೆಳೆಯಿತು . ಆವರೆಗೂ ಡೊಮಿನಿಯನ್ ಸ್ಟೇಟಸ್ ಬಗ್ಗೆ ಮಾತಾಡುತ್ತಿದ್ದ ಕಾಂಗ್ರೆಸ್ , ತಾನೂ ಪೂರ್ಣ ಸ್ವರಾಜ್ಯದ ಬಗ್ಗೆ ಘೋಷಣೆ ನೀಡಲಾರಂಭಿಸಿತು . ಮುಂದೆ ಜೈಲಿನಲ್ಲಿ ಕೂಡ ಭಗತ್ ಸಿಂಗ್ ತನ್ನ ಸ್ವಾಭಿಮಾನ , ಸ್ವಾತಂತ್ರ್ಯಪ್ರಿಯತೆಯನ್ನು ಮೆರೆದ , ಬ್ರಿಟಿಷರ ಕುನೀತಿಗಳ ವಿರುದ್ಧ ಅನೇಕ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ದೇಶಬಾಂಧವರಿಗೆ ಕ್ರಾಂತಿಕಾರಿಗಳ ಬಗ್ಗೆ ಇದ್ದ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿದ .

ಭಗತ್ ಸಿಂಗ್ , ರಾಜಗುರು , ಸುಖದೇವರೆಲ್ಲ ಬ್ರಿಟಿಷರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತೆ ? ಜಯಗೋಪಾಲ ಎನ್ನುವ ದ್ರೋಹಿಯ ಕಾರಣದಿಂದ , ಈ ಬಗೆಯ ದ್ರೋಹಿಗಳೇನು ಕಡಿಮೆಯೆ ಇತಿಹಾಸದಲ್ಲಿ ? ಸಿರಾಜುದೌಲನನ್ನು ನಂಬಿಸಿ ಕೇಡು ಬಗೆದ ಮೀರ್ ಜಾಫರನಿಂದ ಹಿಡಿದು , ಚಾಪೇಕರ್ ಸಹೋದರರ ನೇಣಿಗೆ ಕಾರಣನಾದ ಗಣೇಶ್ ಶಂಕರ್ ದ್ರವಿಡನವರೆಗೂ ಯಾವತ್ತಿಗೂ ಇದ್ದರು ಇಂಥವರು . ಅಲೆಕ್ಸಾಂಡರನು ಭಾರತಕ್ಕೆ ಬಂದ ಕಾಲದಲ್ಲೇ ಪುರೂರವನಿಗೆ ದ್ರೋಹ ಬಗೆದ ಅಂಬಿಯೇ ಇರಲಿಲ್ಲವೆ ? ನಮ್ಮ ಚೆನ್ನಮ್ಮ ಕೂಡ ಸೆರೆ ಸಿಕ್ಕಿದ್ದು ದ್ರೋಹಿಗಳ ಕಾರಣದಿಂದಲೇ . ಇಲ್ಲವಾದಲ್ಲಿ ನಮ್ಮ ಹೆಮ್ಮೆಯ ನಾಡಿನ ಕದನ ಕಲಿಗಳನ್ನು ಬಂದೂಕಿನ ತುದಿಯಿಂದ ಹೆದರಿಸಿ ಸೆರೆ ಹಿಡಿಯುವಷ್ಟು ತಾಕತ್ತು ಪರದೇಶೀಯರಿಗೆಲ್ಲಿಂದ ಬರಬೇಕು !

ಅಂತೂ ನಮ್ಮ ಕ್ರಾಂತಿರತ್ನಗಳು ನಗುನಗುತ್ತ ಕುಣಿಕೆಯನ್ನು ಚುಂಬಿಸಿ ಭಾರತಮಾತೆಗೆ ಜೈಕಾರ ನೀಡುತ್ತಾ ಆತ್ಮಾಹುತಿಗೆ ಅಣಿಯಾದರು . ಸ್ವತಃ ಜೈಲರ್‌ ಕೂಡ ಇವರ ಕೆಚ್ಚು ಕಂಡು ಭಾವುಕನಾದ . ಮಾರ್ಚ್ ೨೩ ರ ಆ ದಿನ ಭಗತ್ , ರಾಜಗುರು , ಸುಖದೇವರು ತಾಯಿ ಭಾರತಿಗಾಗಿ ತಮ್ಮ ಜೀವವನ್ನೇ ಧಾರೆ ಎರೆದರು . ಹೀಗೆ ದೇಶಕ್ಕಾಗಿ ಪ್ರಾಣಾರ್ಪಣೆಗೈದಾಗ ಭಗತ್ ಸಿಂಗ್‌ನ ವಯ ೨೪ ಮಾತ್ರ ! ಚಂದ್ರಶೇಖರ್ ಆಜಾದರು ಜೈಲಿನಿಂದ ತಪ್ಪಿಸಿಕೊಳ್ಳುವ ಮಾರ್ಗದ ಕುರಿತು ಸೂಚಿಸಿ ‘ ನೇಣಿಗೇರುವುದರಿಂದ ಹೆಚ್ಚು ಪ್ರೇರಣೆ ನೀಡುವುದು ಸಾಧ್ಯ ‘ ಎಂದು ಭಗತ್ ದೃಢವಾಗಿ ದೇಶಕ್ಕಾಗಿ ಪ್ರಾಣಾರ್ಪಣೆಗೈಯ್ಯುವ ಪಾಠವನ್ನು ಈ ಹಂಗು ತೊರೆದು ಸ್ವಾತಂತ್ರ್ಯ ಪ್ರಾಪ್ತಿಯ ದೃಢವಾಗಿ ನುಡಿದಿದ್ದ . ಆತ ಹೇಳಿದಂತೆ ಲಕ್ಷ – ಲಕ್ಷ ಭಾರತೀಯರು ನಗುಮೊಗದ ತರುಣರಿಂದ ಕಲಿತುಕೊಂಡರು . ಸ್ವಾರ್ಥದ ಮಾರ್ಗದಲ್ಲಿ ಮುಂದಡಿಯಿಟ್ಟರು .

ಯುವಕರಲ್ಲಿ ಮೂಡಿದ ಪ್ರಾಣಾರ್ಪಣೆಯ ಮನ ಕೆಚ್ಚು ಮುಂದೆ ದೇಶದ ಕ್ರಾಂತಿ ಸಂಘಟನೆಯಲ್ಲಿ ಯುವಕರಲ್ಲಿ ಮೂಡಿದ ಈ ಬಲುದೊಡ್ಡ ಶಕ್ತಿ ತುಂಬಿತು . ಭಗತ್ ಸಿಂಗ್‌ನ ಬಲಿದಾನವನ್ನು ಸುಭಾಷ್ ಚಂದ್ರ ಬೋಸರು ತಮ್ಮ ಸೇನೆಯ ಪ್ರೇರಣೆಗೆಂದು ಬಳಸಿಕೊಳ್ಳುತ್ತಿದ್ದರು . ಒಂದೆಡೆ ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಚಳವಳಿ ನಡೆಯುತ್ತಿದ್ದರೆ , ಅದಕ್ಕೆ ಪೂರಕವಾಗಿ ನಡೆದ ಈ ಕ್ರಾಂತಿ ಚಳವಳಿ ಬ್ರಿಟಿಷರನ್ನು ಹೆದರಿಸಿಬಿಟ್ಟಿತ್ತು . ೧೮೫೭ ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯದ್ದೇ ಮತ್ತೊಂದು ಹೋರಾಟ ನಡೆದರೆ ತಾವು ಉಳಿಯುವುದು ಕಷ್ಟ ಎಂದು ಅವರಿಗೆ ಭಾಸವಾಗಿತ್ತು . ಕೊನೆಗೂ ನಮಗೆ ಸ್ವಾತಂತ್ರ್ಯ ದಕ್ಕಿತು .

ಆದರೆ ಭಗತ್‌ ಸಿಂಗ್‌ಗೆ ಸ್ವಾತಂತ್ರ್ಯ ಪ್ರಾಪ್ತಿಯೊಂದೇ ಮುಖ್ಯವಾಗಿರಲಿಲ್ಲ . ಸ್ವಾತಂತ್ರ್ಯ ನಂತರದ ಭಾರತ ಹೇಗಿರಬೇಕೆನ್ನುವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಗಳಿದ್ದವು . ಆತನ ಧೈಯವನ್ನು ಕಾಯ್ದುಕೊಳ್ಳಲು ನಮ್ಮ ಯುವ ಪೀಳಿಗೆ ಮನಸ್ಸು ಮಾಡುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ , ದೇಶಕ್ಕಾಗಿ ನಗು – ನಗುತ್ತಾ ನೇಣಿಗೇರಿದ ಈ ಮಹಾತ್ಮರ ಹೆಸರಲ್ಲಿ ಅವರ ಹೋರಾಟವನ್ನು ಸಾರ್ಥಕಗೊಳಿಸುವ , ದೇಶದ ಸ್ವಾಭಿಮಾನ – ಸ್ವಾವಲಂಬನಗಳನ್ನು ಕಾಯ್ದಿಡುವ ದೀಕ್ಷೆ ತೊಡೋಣ . ಭರತಮಾತೆಯ ಪದತಲಗಳಲ್ಲಿ ಅರ್ಪಣೆಯಾದ ಈ ಮೂರು ಅಮರಪುಷ್ಪಗಳ ನೆನಪನ್ನು ಹೃದಯದಲ್ಲಿ ಹಸಿರಾಗಿಟ್ಟಿರೋಣ , ಇಂಕ್ವಿಲಾಬ್ ಜಿಂದಾಬಾದ್ ! Natione

ಕೃತಿಕಾರರ ಪರಿಚಯ

ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ :

ಪ್ರಖರ ವಾಗಿ , ರಾಷ್ಟ್ರವಾದಿ ಚಿಂತಕ , ಸಾಹಿತಿ ಚಕ್ರವರ್ತಿ ಸೂಲಿಬೆಲೆಯವರು ೯ ಏಪ್ರಿಲ್ ೧೯೮೦ ರಲ್ಲಿ ಹೊನ್ನಾವರದಲ್ಲಿ ಜನಿಸಿ ತಮ್ಮ ಬಾಲ್ಯವನ್ನು ಕಳೆದುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಎಂಬ ಊರಿನಲ್ಲಿ , ಇವರ ತಂದೆ ದೇವದಾಸ್ ಸುಬ್ರಾಯ ಶೇಟ್ ಅವರು ಸೂಲಿಬೆಲೆಯ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು . ಗಣಕವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು , ಯುವಾ ಬ್ರಿಗೇಡ್ ಎಂಬ ಸಂಘಟನೆಯ ಮೂಲಕ ಇಂದಿಗೂ ಅವರು ನಿರಂತರವಾಗಿ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ನಡೆಸುತ್ತ ಬರುತ್ತಿದ್ದಾರೆ . ಕನ್ನಡದ ಹಲವು ಪ್ರಮುಖ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ . ಅವರ ಕೆಲವು ಕೃತಿಗಳು : ಮೇರಾ ಭಾರತ್ ಮಹಾನ್ , ನೆಹರೂ ಪರದೆ ಸರಿಯಿತು , ಭಾರತ ಭಕ್ತ ವಿದ್ಯಾನಂದ , ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್ , ಜಾಗೋ ಭಾರತ್ , ವಿಶ್ವಗುರು ( ಅಂಕಣಬರಹ ಸಂಪುಟಗಳು ) , ಕಾರ್ಗಿಲ್ ಕದನ ಕಥನ , ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ – ಇತ್ಯಾದಿ , ಪ್ರಸ್ತುತ ಪಾಠವನ್ನು ಅವರ “ ಜಾಗೋ ಭಾರತ್ ” ಅಂಕಣಬರಹಗಳ ಕೃತಿಯಿಂದ ಆರಿಸಿಕೊಳ್ಳಲಾಗಿದೆ,

10th Class Thayi Bharatiya Amaraputraru Question Answer

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ :

1. ಮೂವರು ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲು ಬ್ರಿಟಿಷರು ಕೊಟ್ಟ ಕಾರಣ ಏನು ?

ಉತ್ತರ : ಮೂವರು ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲು ಬ್ರಿಟಿಷರು ಕೊಟ್ಟ ಕಾರಣ ರಾಜದ್ರೋಹ. ಬ್ರಿಟಿಷರು ಭಾರತ ರಾಜರೇ ಆಗಿರಲಿಲ್ಲ. ಅವರು ಬೇರೆ ದೇಶದಿಂದ ಬಂದವರು. ಆದರೆ ಭಾರತೀಯರು ತಮ್ಮ ಸ್ವಂತ ನೆಲದ ಮುಕ್ತಿಗಾಗಿ ಹೋರಾಡುವುದನ್ನೇ ಈ ಬಿಳಿಯರು ರಾಜದ್ರೋಹವೆಂದು ಕರೆದಿದ್ದರು.

2. ಲಾಲಾ ಲಜಪತರಾಯರು ಲಾಠಿಯೇಟಿನಿಂದ ತೀರಿಕೊಳ್ಳುವ ಸಮಯದಲ್ಲಿ ಏನು ಹೇಳಿದರು ?

ಉತ್ತರ : ” ನನಗೆ ಹೊಡೆದ ಒಂದೊಂದು ಲಾಠಿಯ ಏಟೂ ಬ್ರಿಟಿಷರ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೂಳೆಗಳು ” ಎಂದು ಲಾಲಾ ಲಜಪತರಾಯರು ಲಾಠಿಯೇಟಿಯಿಂದ ತೀರಿಕೊಳ್ಳುವ ಸಮಯದಲ್ಲಿ ಹೇಳಿದರು.

3. ಪೂರ್ಣ ಸ್ವರಾಜ್ಯದ ಪರಿಕಲ್ಪನೆಯನ್ನು ಪ್ರತಿಪಾದಿಸಿದ ಕ್ರಾಂತಿಕಾರಿ ಯಾರು ?

ಉತ್ತರ : ಪೂರ್ಣ ಸ್ವರಾಜ್ಯದ ಪರಿಕಲ್ಪನೆಯನ್ನು ಪ್ರತಿಪಾದಿಸಿದ ಕ್ರಾಂತಿಕಾರಿ ಭಗತ್ ಸಿಂಗ್.

4. ಚಂದ್ರಶೇಖರ ಆಜಾದರು ಜೈಲಿನಿಂದ ತಪ್ಪಿಸಿಕೊಳ್ಳುವ ಕುರಿತು ಹೇಳಿದಾಗ ಭಗತ್ ಸಿಂಗ್ ಹೇಳಿದ ಮಾತೇನು ?

ಉತ್ತರ : ಚಂದ್ರಶೇಖರ ಆಜಾದರು ಜೈಲಿನಿಂದ ತಪ್ಪಿಸಿಕೊಳ್ಳುವ ಕುರಿತು ಹೇಳಿದಾಗ ಭಗತ್ ಸಿಂಗ್ ನೇಣಿಗೇರುವುದರಿಂದ ಹೆಚ್ಚು ಪ್ರೇರಣೆ ನೀಡುವುದು ಸಾಧ್ಯ ಎಂದು ಹೇಳಿದನು.

5. ಭಗತ್ ಸಿಂಗ್‌ನ ಸಹಚರರು ಯಾರು ?

ಉತ್ತರ : ರಾಜ್‌ ಗುರು ಸುಖದೇವ್‌ ಹಾಗೂ ಬಟುಕೇಶ್ವರ ದತ್ತಾ ಇವರು ಭಗತ್‌ ಸಿಂಗ್‌ ನ ಸಹಚರರು.

6. ಕ್ರಾಂತಿಕಾರಿಗಳ ಪ್ರಾಣಾರ್ಪಣೆ ಮುಂದಿನ ದಿನಗಳಲ್ಲಿ ಭಾರತೀಯರಿಗೆ ಯಾವ ಬಗೆಯಲ್ಲಿ ಪ್ರೇರಣೆ ಕೊಟ್ಟಿತು ?

ಉತ್ತರ : ಲಕ್ಷ-ಲಕ್ಷ ಭಾರತೀಯರು ಪ್ರಾಣಾರ್ಪಣೆಗೈಯುವ ಪಾಠವನ್ನು ಕಲಿತುಕೊಂಡರು. ಸ್ವಾರ್ಥದ ಹಂಗು ತೊರೆದು ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ಮುಂದಡಿಯಿಟ್ಟರು. ಯುವಕರಲ್ಲಿ ಮೂಡಿದ ಈ ಪ್ರಾಣಾರ್ಪಣೆಯ ಕೆಚ್ಚು ಮುಂದೆ ದೇಶದ ಕ್ರಾಂತಿ ಸಂಘಟನೆಯಲ್ಲಿ ಬಲುದೊಡ್ಡ ಶಕ್ತಿ ತುಂಬಿತು.

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment