WhatsApp Group Join Now
Telegram Group Join Now

Bhagya Shilpigalu Kannada Notes

10ನೇ ತರಗತಿ ಭಾಗ್ಯಶಿಲ್ಪಿಗಳು‌ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ 10th Class Bhagya Shilpigalu Kannada Notes Question Answer Summary Pdf Download 2024 Kannada Medium Karnataka Kseeb Solutions For Class 10 Kannada Chapter 4 Notes Bhagya Shilpigalu Kannada Question and Answer 10th Standard Kannada 4th Chapter Notes SSLC Kannada 4th Lesson Notes 10th Kannada Bhagya Shilpigalu Notes Pdf Summery Mcq Download ಭಾಗ್ಯಶಿಲ್ಪಿಗಳು ನಾಲ್ವಡಿ ಕೃಷ್ಣರಾಜ ಒಡೆಯರು. ಸರ್ ಎಂ ವಿಶ್ವೇಶ್ವರಯ್ಯ Kannada Notes

ಗದ್ಯಪಾಠ ೦4

ಭಾಗ್ಯಶಿಲ್ಪಿಗಳು : ಸರ್ ಎಂ. ವಿಶ್ವೇಶ್ವರಯ್ಯ ನಾಲ್ವಡಿ ಕೃಷ್ಣರಾಜ ಒಡೆಯರು.

ಕವಿ – ಕಾವ್ಯ ಪರಿಚಯ

ಡಿ.ಎಸ್.ಜಯಪ್ಪಗೌಡ

ಡಿ.ಎಸ್. ಜಯಪ್ಪಗೌಡ ಇವರು  1947ರಲ್ಲಿ ಚಿಕ್ಕಮಂಗಳೂರು  ಜಿಲ್ಲೆಯ ಮೂಡಿಗೆರೆ ತಾಲೂಕಿನ
ದಾರದಹಳ್ಳಿಯಲ್ಲಿ ಜನಿಸಿದರು. ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಇವರ ಪೂರ್ಣ
ಹೆಸರು. ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು, ಮೈಸೂರು
ಒಡೆಯರು. ಜನಪದ ಆಟಗಳು, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಇವರ
ಪ್ರಮುಖ ಕೃತಿಗಳಿಗೆ  . ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ
ಪ್ರಶಸ್ತಿಗಳು  ಲಭಿಸಿದೆ. ಧಾರವಾಡ ಕರ್ನಾಟಕ ಸಂಘದ ಬಹುಮಾನಕ್ಕೆ  ಭಾಜನರಾಗಿದ್ದಾರೆ.

1. ‘ದುರದೃಷ್ಟ’ ಪದದ ವಿರುದ್ಧಾರ್ಥಕ ರೂಪ.
ಅ] ಅಪದೃಷ್ಟ. ಆ] ಅದೃಷ್ಟ ಇ] ನತದೃಷ್ಟ. ಈ] ದುಷ್ಟ

2. ‘ಹರಿಕಾರ’ ಪ ದದ ಅರ್ಥ.
ಅ] ಮುಂದಾಳು. ಆ] ಬ್ರಹ್ಮ  ಇ] ಸರದಾರ. ಈ] ವಿಷ್ಣು.

3. ‘ಪುಣ್ಯ’ ಪದದ ವಿರುದ್ಧಾರ್ಥಕ ರೂಪ.
ಅ] ಸತ್ಯ ಆ] ಪಾಪ. ಇ] ಪುಣ್ಯಾ. ಈ] ಚಿತ್ರ

4. ‘ವಂಶ’ ಪದದ ತದ್ಭವ ರೂಪ  ರೂಪ.
ಅ] ಹಂಸ. ಆ]ಸಂಸ. ಇ] ವಂಸ. ಈ] ಅಂಚು.

5. ‘ನೇತಾರ’ ಪದದ ಅರ್ಥ.
ಅ]ನಾಯಕ. ಆ] ಸರದಾರ. ಇ] ತಾರೆ ಈ] ನೇತಾಜಿ

6. ‘ಇಲಾಖೆ’ ಇದು ಈ ಭಾಷೆಯ ಶಬ್ದ.
ಅ] ಕನ್ನಡ. ಆ] ಅರಬ್ಬಿ. ಇ] ಇಂಗ್ಲೀಷ್ ಈ] ಪರ್ಷಿಯನ್.

7. ‘ಮನ್ವಂತರ’ ಇದು ಈ ಸಂಧಿಗೆ ಉದಾಹಗಳು
ಅ] ಗುಣ ಸಂಧಿ. ಆ] ಧೀರ್ಘ ಸಂಧಿ. ಇ] ಯಣ್ ಸಂಧಿ. ಈ] ವೃದ್ಧಿ ಸಂಧಿ.

8. ‘ದಿವಾನ’ ಇದು ಈ ಭಾಷೆಯಿಂದ ಬಂದ ಶಬ್ದವಾಗಿದೆ.
ಆ] ಇಂಗ್ಲೀಷ್. ಆ] ಪರ್ಷಿಯನ್. ಇ] ಗ್ರೀಕ್. ಈ] ಪೋರ್ಚುಗೀಸ್.

9. ‘ಬೆಟ್ಟದಾವರೆ’ ಇದು ಈ ಸಮಾಸಕ್ಕೆ ಉದಾಹಗಳು
ಅ] ದ್ವಿಗು ಆ] ತತ್ಪುಷ. ಇ] ದ್ವಂದ್ವ. ಈ] ಬಹುವ್ರೀಹಿ.

10. ‘ಗ್ರಾಮ’ ಪದದ ತದ್ಭವ ರೂಪ
ಅ] ಗಮ. ಆ] ಹಳ್ಳಿ ಇ] ಗಾಮ ಈ] ಗಾವ

11. “ಶತಮಾನೋತ್ಸವ’ ಈ ಪದವನ್ನ  ಬಿಡಿಸಿ ಬರೆಯಿರಿ.
ಅ] ಶತ + ಮಾನೋತ್ಸವ. ಆ] ಶತ+ಹುತ್ಸವ. ಇ] ಶತ+ಉತ್ಸವ. ಈ] ಶತಮಾನ+ಉತ್ಸವ.

12. ‘ಜ್ಞಾನೇಶ್ವರ’ ಇದು ಈ ಸಂಧಿಗೆ .
ಅ] ಯಣ್ ಆ]ಸವರ್ಣಧೀರ್ಘ ಇ] ಆಗಮ ಈ] ಗುಣ.

13. ‘ಮನ್ವಂತರ’ ಬಿಡಿಸಿ ಬರೆಯಿರಿ.
ಅ] ಮನು+ಅಂತರ. ಆ] ಮಾನವ+ಅಂತರ  ಇ] ಮನುಷ್ಯ+ಅಂತರ ಈ] ಯಾವುದು ಅಲ್ಲ.

14. ‘ಒಂದು ಒಂದು’ ಇದು
ಅ]ಜೋಡುನುಡಿ.ಆ] ನುಡಿಗಟ್ಟು. ಇ] ದ್ವಿರುಕ್ತಿ  ಈ] ಅವ್ಯಯ.

15. ‘ವದು ’ ಇದು ಈ ಸಂಧಿಗೆ ಸೇರುತ್ತದೆ.
ಅ] ಗುಣ ಸಂಧಿ. ಆ] ಸವರ್ಣಧೀರ್ಘ ಸಂಧಿ. ಇ] ಯಣ್ ಸಂಧಿ. ಈ] ವೃದ್ಧಿ ಸಂಧಿ.

16. ‘ಅರಮನೆ’ ಬಿಡಿಸಿ ಬರೆದಾಗ,
ಅ] ಅವನ+ಮನೆ ಆ] ಅರ+ಮನೆ ಇ] ಅರಸನ+ಮನೆ ಈ] ಅರ¸+ ಮನೆಯ

17. ‘ಹೊಸಗನ್ನಡ’ ಇದು
ಅ] ಕರ್ಮಧಾರಯ ಆ] ದ್ವಿಗು ಇ] ಅಂಶಿ ಈ] ಕ್ರಿಯಾ.

18. ‘ಹಿಂದಲೆ
ಅ]ಕರ್ಮಧಾರಯ ಆ] ಗಮಕ ಇ] ಅಂಶಿ ಈ] ಕ್ರಿಯಾ.

19. ‘ಕಂಗೆಡು ’
ಅ] ತತ್ಪುರುಷ  ಆ] ದ್ವಿಗು ಇ] ಅಂಶಿ ಈ] ಕ್ರಿಯಾ.

20. ಕರ್ಮಧಾರೆಯಾ ಸಮಾಸ ಉದಾ:
ಅ] ಮೇಲ್ವಾತು ಆ] ಕಂಗೆಡು ಇ] ಚಕ್ರಪಾಣಿ ಈ] ಇಮ್ಮಾವು

21. ಈ ಬೆಕ್ಕು ಬಿಡಿಸಿ ಬರೆದಾಗ.
ಅ] ಇದು+ಬೆಕ್ಕು ಆ] ಈ+ಬೆಕ್ಕು ಇ] ಇ+ಬೆಕ್ಕು ಈ] ಒಂದು+ಬೆಕ್ಕು

22. ಮುಕ್ಕಣ್ಣ ಈ ಸಮಾಸ  ಉದಾ
ಅ] ತತ್ಪುರುಷ  ಆ] ಬಹುವ್ರೀಸಮಾಸ ಇ] ಅಂಶಿ ಈ] ದ್ವಿಗು ಸಮಾಸ

23.ತಲೆ ಯಲ್ಲಿ  + ನೋವು ಕೂಡಿಸಿ ಬರೆದಾಗ
ಅ] ತಲೆ + ನೋವು ಆ] ತಲೆಯಲ್ಲಿ+ನೋವು ಇ] ತಲೇ ಯಿಂದ +ನೋವು ಈ] ತಲೆಮೇಲೆ+ನೋವು

24. ಒಟ್ಟು ಸಮಾಸ ಪ್ರಕಾರಳು
ಅ] ೮ ಆ] ೯ ಇ] ೭ ಈ] ೪

25. ಇಮ್ಮಾವು  ಈ ಸಮಾಸಕ್ಕೆ ಉದಾ
ಅ] ತತ್ಪುರುಷ  ಆ] ಕರ್ಮಧಾರಯ ಸಮಾಸ ಇ] ಅಂಶಿ ಈ] ದ್ವಿಗು ಸಮಾಸ

26. ‘ಅಜಮಾಯಿಷಿ’ ಇದು ಈ ಭಾಷೆಯ ಶಬ್ದ.
ಅ] ಪಾರ್ಸಿ ಆ] ಅರಬ್ಬಿ. ಇ] ಇಂಗ್ಲೀಷ್ ಈ] ಪರ್ಷಿಯನ್.

ಉತ್ತರಗಳು

1]ಆ 2]ಅ 3]ಆ 4] ಇ 5]ಅ 6]ಆ 7]ಈ 8] ಆ 9]ಆ 10]ಆ 11]ಈ 12] ಈ 13]ಆ 14]ಇ 15]ಅ 16]ಇ 17]ಅ 18]ಇ 19]ಈ
20]ಅ 21]ಅ 22] ಆ 23]ಆ 24]ಅ 25] ಆ 26]. ಅ

ಮೊದಲೆರೆಡು ಪದಗಳಿಗಿರುವ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

1.ಸುಸಂಗತ : ಯೋಗ್ಯವಾದ :: ಪುಸ್ತಕ : __________
2. ರತ್ನ : ರತುನ :: ವರ್ಷ : _______________
3. ಪರಮೋಚ್ಯ : ಗುಣಸಂಧಿ :: ದಿನಾಚರಣೆ : _________
4. ಸ್ಥಾನ : ತಾಣ :: ಕಾರ್ಯ : _________
5. ಉಂಬಳಿಯಾಗಿ :: ಉಂಬಳಿ+ಆಗಿ : ನೂರಾರು : _________
6. ಒಂದು+ಒಂದು : ಲೋಪ ಸಂಧಿ :: ಪೀಠ+ಉಪಕgಣ________
7. ಪಟ್ಟಣ : ಪತ್ತನ :: ಯಸ : _________

8. ಬೆಟ್ಟದಾವರೆ : ತತ್ಪುರುಷ :: ಮುಕ್ಕಣ್ಣು
9. ಅಂಗೈ: ಕೈಯ + ಅಡಿ :: ಹಿಂದಲೆ :
10. ಗಿರಿವನದುರ್ಗಗಳು  : ದ್ವಂದ್ವ :: ಮೈಮುಚ್ಚು :
11. ಯಶ :ಜಶ :: ಪಟ್ಟಣ :
12. ಸಪ್ತಸ್ವರಗಳು  : ದ್ವಿಗು :: ಚಕ್ರಪಾಣಿ :
13. ಡಿಪ್ಲೋಮಾ : ಇಂಗ್ಲೀಷ್ :: ಮನ್ವಂತರ :

ಉತ್ತರಗಳು

1.ಹೊತ್ತಿಗೆ, 2.ವರುಷ, 3.ಸವರ್ಣಧೀರ್ಘ ಸಂಧಿ, 4.ಕಜ್ಜ, 5.ನೂರು+ಆರು, 6.ಗುಣಸಂಧಿ, 7.ಜಸ, 8.ದ್ವಿಗು ಸಮಾಸ, 9.ತಲೆಯ + ಹಿಂದು ,
10.ಕ್ರಿಯಾಸಮಾಸ, 11.ಪತ್ತನ 12. ಬಹುವ್ರಿ. 13. ಸಂಸ್ಕೃತ ಪದ

ಪಾಠದ ಆಶಯ ಭಾವ

ಹುಟ್ಟಿದವರೆಲ್ಲರಿಗೂ ಸಾಧಕರಾಗುವುದಕ್ಕೆ ಅವಕಾಶವಿದ್ದರೂ ಎಲ್ಲರೂ ಸಾಧಕರಾಗುವುದಿಲ್ಲ. ಸಾಧಕರಾಗುವುದಕ್ಕೆ  ಅಪಾರವಾದ ಸಾಮಾಜಿಕಹೊಣೆಗಾರಿಕೆ, ಪರಿಶ್ರಮ ,ಭವಿಷ್ಯಚಿಂತನೆ, ಛಲವಂತಿಕೆ ಬೇಕಾಗುತ್ತದೆ. ಸಾಧನೆ  ಪಥದಲ್ಲಿ  ಎದುರಾಗುವ ಅಡ್ಡಿಆತಂಕಗಳನ್ನೂ ನಿವಾರಿಸಿಕೊಳ್ಳಬೇಕು. ಇಂತಹ ಅಪರೂಪದ ಸಾಧಕರನ್ನು ಸಮಾಜ ನಿತ್ಯ ಸ್ಮರಿಸುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಡಳಿತಾತ್ಮಕ ,ವೈಜ್ಞಾನಿಕವಾಗಿ ಸಾಧನೆ  ಮಾಡಿಕನ್ನಡನಾಡಿನ  ಅಭಿವೃದ್ಧಿಗಾಗಿ ಸೇವೆಯ ಸಲ್ಲಿಸಿರುವ ವ್ಯಕ್ತಿಗಳ ಜೀವನ ಮತ್ತು ಸಾಧನೆಯನ್ನು ಪರಿಚಯ ಮಾಡಿಕೊಡುವುದು ಇಲ್ಲಿನ ಆಶಯ.ಪರಿಶ್ರಮ  , ಪ್ರತಿಭೆ, ನಿಷ್ಠೆಯಿದ್ದರೆ, ಧ್ಯೇಯವನ್ನ  ಸಾಧಿಸುತ್ತೇನೆಂಬ ದೃಢಸಂಕಲ್ಪವಿದ್ದರೆ ಸವಾಲುಗಳನ್ನು ಎದುರಿಸಿ  ಪಡೆಯಬಹುದು.ಬಡತನದ ಬವಣೆಯಾಗಲಿ, ಯಾವುದೇ ತಾರತಮ್ಯವಾಗಲಿ ಅದನ್ನು ನಿರ್ಬಂಧಿ¸ . ವ್ಯಕ್ತಿತ್ವದ ವಿಕಾಸಕ್ಕೆ ಅಡ್ಡಿಯಾಗಲಾರವು. ವ್ಯಕ್ತಿಯುಸಮಾಜಮುಖಿಯಾಗಿ ಲಭಿಸಿದ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಾಗ ಜನರಿನಲ್ಲಿ ಶಾಶ್ವತ ಸ್ಥಾನ ಪಡೆಯಬಹುದೆಂಬುದ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಅವರು  ಸಾಕ್ಷಿಯಾಗಿದ್ದಾರೆ. ಉತ್ಕರ್ಷದ ಆಕಾಂಕ್ಷೆ ಇದ್ದವರಿಗೆ ಜೀವಂತಆದರ್ಶ ವ್ಯಕ್ತಿತ್ವದ ಪರಿಚಯ ಮಾದರಿಯಾಗಬಲ್ಲದು. ಬಹುಮುಖಿತ್ವದ ಅನುಭವಾಗಬಲ್ಲದು.

ಅಭ್ಯಾಸ ಪ್ರಶ್ನೋತ್ತರಗಳು 

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು  ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?

ನಾಲ್ವಡಿ ಕೃಷ್ಣರಾಜ ಒಡೆಯರು ಕ್ರಿ. ಶ. ೧೮೯೫ ರಲ್ಲಿ ಪಟ್ಟಾಭಿಷಿಕ್ತರಾದರು.

2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು.

3. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ  ಜಲ ವಿದ್ಯುತ್ ಯೋಜನೆ ಯಾವುದು?

ಶಿವನಸಮುದ್ರ ಜಲವಿದ್ಯುತ್ ಯೋಜನೆ ಏಷ್ಯಾ ಖಂಡದಲ್ಲೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್‌ಯೋಜನೆಯಾಗಿದೆ.

4. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವಯಿಗೆ  ಅವರಿಗೆ ಯಾವ ಪದವಿಯನ್ನ ನೀಡಿ ಗೌರವಿಸಿತು?

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.

5. ವಿಶ್ವೇಶ್ವರಯ್ಯನವರು   ಅವರನ್ನ  ದಿವಾನರಾಗಿ ನೇಮಿಸಿದವರು ಯಾರು?

ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು.

6. ವಿಶ್ವೇಶ್ವನವರ  ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?

ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ‘ಎಂಜಿನಿಎಂಜಿನಿರ‍್ಸ್ ದಿನಾಚರಣೆ’ಯನ್ನು ಮಾಡಲಾಗುತ್ತಿದೆ.

ಹೆಚ್ಚುವರಿ ಪ್ರಶ್ನೋತ್ತರಗಳು

7. ನಾಲ್ವಡಿ ಕೃಷ್ಣರಾಜ ಒಡೆಯರು ಬಾಲಕರಾಗಿದ್ದಾಗ ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದವರು ಯಾರು ?

ನಾಲ್ವಡಿ ಕೃಷ್ಣರಾಜ ಒಡೆಯರು ಬಾಲಕರಾಗಿದ್ದಾಗ ಮಹಾರಾಣಿ ವಾಣಿ ವಿಲಾಸಮ್ಮನವರು ರೀಜೆಂಟರಾಗಿ ಆಡಳಿತ
ನಿರ್ವಹಣೆ ಮಾಡಿದರು.

8. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ನ್ಯಾಯ ವಿಧಾಯಕ ಸಭೆಯನ್ನೂ  ಸಹ ಸ್ಥಾಪಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರು ೧೯೦೭ ರಲ್ಲಿ ನ್ಯಾಯ ವಿಧಾಯಕ ಸಭೆಯನ್ನೂ ಸಹ ಸ್ಥಾಪಿಸಿದರು.

9. ಕನ್ನಾಂಬಾಡಿ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?

ಕನ್ನಾಂಬಾಡಿ ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

10. “ಕೈಗಾರಿಕೀಕರಣ ಇಲ್ಲವೆ ಅವನತಿ ” ಎಂಬ ಘೋಷಣೆ ಮಾಡಿದರು  ಯಾರು ?

“ಕೈಗಾರಿಕೀಕರಣ ಇಲ್ಲವೆ ಅವನತಿ” ಎಂಬ ಘೋಷಣೆ ಮಾಡಿದರು ಸರ್.ಎಂ. ವಿಶ್ವೇಶ್ವರಯ್ಯನವರು.

11. ಸರ್.ಎಂ. ವಿಶ್ವೇಶ್ವಯ್ಯನವರ  ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಯಾವ ಪ್ರಶಸ್ತಿಯನ್ನು ನೀಡಿತು ?

ಸರ್.ಎಂ. ವಿಶ್ವೇಶ್ವರಯ್ಯನವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ದೇಶದ ಅತ್ಯುನ್ನತ ‘ಭಾರತ ರತ್ನ’ಪ
ಪ್ರಶಸ್ತಿಯನ್ನು ನೀಡಿತು.

12. ಜಲಾಶಯಗಳಿಗೆ ಸ್ವಯಂಚಾಲಿತ ಬಾಗಿಲುಗಳ ಅನ್ವೇಷ್ವಣೆ ಮಾಡಿದವರು  ಯಾರು ?

ಜಲಾಶಯಗಳಿಗೆ ಸ್ವಯಂಚಾಲಿತ ಬಾಗಿಲುಗಳ ಅನ್ವೇಷ್ವಣೆ ಮಾಡಿದವರು ಸರ್.ಎಂ. ವಿಶ್ವೇಶ್ವರಯ್ಯನವರು.

13. ವಿಶ್ವೇಶ್ವರಯ್ಯನವರ  ಪೂರ್ವಜರು ಎಲ್ಲಿಯವರು ?

ವಿಶ್ವೇಶ್ವರಯ್ಯನವರ ಪೂರ್ವಜರು ಮೂಲತಃ ಕರ್ನೂಲು ಜಿಲ್ಲೆ ಗಿಡ್ಡಲೂರು ತಾಲೂಕಿನ ‘ಮೋಕ್ಷಗೊಂಡA’ ಅಗ್ರಹಾರಕ್ಕೆ ಸೇರಿದವರು.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?

ನಾಲ್ವಡಿ ಕೃಷ್ಣರಾಜ ಒಡೆಯರು ಕಾಲದಲ್ಲಿ1. ಗ್ರಾಮ ನಿರ್ಮಲೀಕರಣ 2. ವೈದ್ಯ ಸಹಾಯ 3. ವಿದ್ಯಾ ಪ್ರಚಾರ
4. ನೀರಿನ ಸೌಕರ್ಯ 5. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳ್ನ್ನು  ಸ್ವಯಂ ಆಡಳಿತ ಕ್ಷೇತ್ರಗಳಾದಗ  .

2. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ೧೯೦೦ರಲ್ಲಿ ಶಿವನ¸ªಸಮುದ್ರದ ಬಳಿ ಕಾವೇರಿ ನದಿ ನೀರಿನಿಂದ ಪ್ರಾರಂಭಿಸಿದ ಶಿವನ ಸಮುದ್ರ ಜಲವಿದ್ಯುತ್ಯೋಜನೆ, ೧೯೦೭ರಲ್ಲಿ ವಾಣಿ ವಿಲಾಸ ಸಾಗರ ಆಣೆಕಟ್ಟು (ಮಾರಿ ಕಣಿವೆ ) ಮತ್ತು ೧೯೧೧ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಾಂಬಾಡಿಯಲ್ಲಿ
ಕೃಷ್ಣರಾಜ  ಸಾಗರ ಆಣೆಕಟ್ಟು ನಿರ್ಮಾಣ ಮುಂತಾದ ವಿದ್ಯುತ್ ಮತ್ತು ನೀರಾವರಿ ಯೋಜನೆಗಳು  ಕಾರ‍್ಯರೂಪಕ್ಕೆ ಬಂದವು.

3. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ ?

ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು “ ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ  ಪರಿಹಾರ, ಶಿಕ್ಷಣವು ಸಂಜೀವಿನಿ , ಶಿಕ್ಷಣಕ್ಕಾಗಿಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ  ಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ”ಎಂದಎAದು ಹೇಳಿದ್ದಾರೆ.

4. ನೆಹರೂ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ ?

ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗ್ಗೆ “ದುರದೃಷ್ಟವಶಾತ್ ಭಾರತೀಯರಾದ ನಾವು  ಮಾತನಾಡುವವರು ಮತ್ತು ನುಡಿದಂತೆನಡೆಯಲಾರದ ಸಂಭಾಷಣೆಗೆ  ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”. ಎಂದು ಹೇಳಿದ್ದಾರೆ.

5.ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?

ವಿಶ್ವೇಶ್ವರಯ್ಯನವರು  ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಲು ೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು.. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಸ್ಥಾಪಿಸಿದರು.. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು . ರೈತರಿಗೆ ಹಾಗೂ ಕರಕುಶಲಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲುಸಹಕಾರಿ ಕ್ಷೇತ್ರವನ್ನು ಬಲವರ್ಧನೆ ಗಳಿಸಿದರು.ಪ್ರಾಂತೀಯ ಸಹಕಾರಿ ಬ್ಯಾಂಕ್‌ಗಳು  ಸ್ಥಾಪಿಸಿದರು. ರಾಜ್ಯದ ಆಸ್ತಿಯನ್ನು ಹೆಚ್ಚಿಸಿ, ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವನ್ನು  ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊAಡರು  .

ಹೆಚ್ಚುವರಿ ಪ್ರಶ್ನೋತ್ತರಗಳು

6. ವಿಶ್ವೇಶ್ವರಯ್ಯನವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ?

ವಿಶ್ವೇಶ್ವರಯ್ಯನವರು  ‘ರಿಕನ್‌ಸ್ಟಕ್ಟಿಂಗ್ ಇಂಡಿಯಾ’, ‘ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ’ ಹಾಗೂ ‘ವೆ
ಮೆಮೋರೀಸ್  ಆಫ್ ಮೈವರ್ಕಿಂಗ್ ಲೈಫ್(ಆತ್ಮಚರಿತ್ರೆ )’, ‘ನೆನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ’
ಕೃತಿಗಳನ್ನು  ಬರೆದು ಸಾಹಿತ್ಯ ಕ್ಷೇತ್ರಕ್ಕೆ  ಕೊಡುಗೆ ನೀಡಿದ್ದಾರೆ.

7. ವಿಶ್ವೇಶ್ರ‍್ಯನವರು ಈಸಿ ಮತ್ತು ಮೂಸಿ ನದಿಗಳ ಸಮಸ್ಯೆಯನ್ನು ಹೇಗೆ ಬಗೆಹರಿಸಿದರು ? ಅಥವಾ ವಿಶ್ವೇಶ್ವರಯ್ಯನವರು ಹೈದರ್‌ಬಾದ್ ನಗರಕ್ಕೆ ಸಲ್ಲಿಸಿದ ಸೇವೆ ಏನು ?

ಹೈದರಾಬಾದ್ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು.
ಎರಡು ನದಿಗಳಿಗೂಪ್ರಕ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು ಬಗೆರಿಸಿದಸಿದರು. ಹೈದರಾಬಾದ್ ನಗರವನ್ನು  ಭಾರತದ ಸುಯೋಜಿತ ನಗರಗಳ ಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದರು.

8. ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದಲ್ಲಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.

ವಿಶ್ವೇಶ್ವರಯ್ಯನವರು  ೧೮೮೪ ರಲ್ಲಿ ಮುಂಬೈ ಪ್ರಾಂತ್ಯದ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು. ಖಾನ್‌ದೇಶ ಮತ್ತು ನಾಸಿಕ್ ಜಿಲ್ಲೆಗಗಳಲ್ಲಿ  ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಗು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ವಿ ಗಳಿಸಿದರು. ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನ  ಯಶಸ್ವಿಯಾಗಿ ಪೂರೈಸಿದರು. ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನ  ಅಳವಡಿಸಿದ್ದಾರೆ  .ಮುಂದೆ ನಾಲ್ಕು  ಕಾಲ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕಗೊಂಡರು. ಈ ಹುದ್ದೆಗೆ ನೇಮಕವಾದ ಪ್ರಥಮ ಭಾರತೀಯರು ಎಂಬುದು ಗಮನಾರ್ಹ ಅಂಶವಾಗಿದೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ‘ಮಾದರಿ ಮೈಸೂರು ರಾಜ್ಯ’ ಹೇಗಾಯಿತು?

ನಾಲ್ವಡಿ ಕೃಷ್ಣರಾಜ  ಒಡೆಯರು ೧೯೦೨ ರಲ್ಲಿ ಮೈಸೂರು ರಾಜ್ಯದ ನೇರ ಉಸ್ತುವಾರಿ ವಹಿಸಿಕೊಂಡರು. ಆಗ ದಿವಾನರಾಗಿದ್ದ ಸರ್. ಕೆ. ಶೇಷಾದ್ರಿ ಅಯ್ಯರ್‌ರವರು  ಸಹಕಾರದೊಡನೆ ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು. ೧೯೨೩ರಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದರು  ಪ್ರಜಾಪ್ರತಿನಿಧಿ  ಶಾಸನಬದ್ಧ ಸಂಸ್ಥೆಯನ್ನಾಗಿ ಮಾರ್ಪಡಿಸಿದರು. ೧೯೦೭ ರಲ್ಲಿ ನ್ಯಾಯ ವಿಧಾಯಕ ಸಭೆಯನ್ನೂ ಸಹ ಸ್ಥಾಪಿಸಿದರು. ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ಸಹ ವಿರ್ಮಶಿಸುವ ಅಧಿಕಾರ ಆಸಕ್ತಿ ಇದ್ದಿತು. ೧. ಗ್ರಾಮ ನಿರ್ಮಲೀಕರಣ ೨. ವೈದ್ಯ ಸಹಾಯ ೩. ವಿದ್ಯಾ ಪ್ರಚಾರ ೪. ನೀರಿನ ಸೌಕರ್ಯ ೫. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳಲ್ಲಿ  ಸ್ವಯಂ ಆಡಳಿತ ಕ್ಷೇತ್ರಗಳದವು. ಸಾಹಿತ್ಯ , ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತು ನೀಡಿದರು. ನಾಡಿನಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಬೆಂಗಳೊರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್,ಮೈಸೂರು ಬ್ಯಾಂಕಿನ ಸ್ಥಾಪನೆ ಮಾಡಲಾಯಿತು. ಉಚಿತ ಆಸ್ಪತ್ರೆಯ ಕಾರ್ಯಾರಂಭ ಮಾಡಿದರು  . ೧೯೦೬ರಲ್ಲಿ ಸಹಕಾರ ಸಂಘವನ್ನುಸ್ಥಾಪಿಸಲಾಯಿತು. ರೈಲು ಯೋಜನೆಯನ್ನು  ಜಾರಿಗೆ ತಂದರು.ಅಲ್ಲದೆ ಒಡೆಯರ ಕಾಲದಲ್ಲಿ ಶಿವನ ಸಮುದ್ರ  ಜಲವಿದ್ಯುತ್ ಯೋಜನೆ, ವಾಣಿ ವಿಲಾಸ ಸಾಗರ ಆಣೆಕಟ್ಟು ಮತ್ತು ಕನ್ನಾಂಬಾಡಿಯಲ್ಲಿ ಕೃಷ್ಣರಾಜಸಾಗರ ಆಣೆಕಟ್ಟು ನಿರ್ಮಾಣ ಮಾಡಿದ್ದರಿಂದ ವಿದ್ಯುತ್ ಮತ್ತು ನೀರಾವರಿ ಯೋಜನೆಯನ್ನು ಕರ‍್ಯರೂಪಕ್ಕೆ ಬಂದರು  . ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಉಚಿತ ಮತ್ತು ಕಡ್ಡಾಯವಾಗಿ ಪ್ರಾರಂಭಾವಯಿತು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾವನ್ನಾಗಿ ರೂಪಿಸಿದರು.ಇವರ ಕಾಲದಲ್ಲಿ ಇಡೀ ¨ ಯಾವ ಸಂಸ್ಥಾದಲ್ಲಿ  ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡುದರಿಂದ , ಮೈಸೂರು ಮಾದರಿ ಮೈಸೂರು ರಾಜ್ಯ’ ಎಂಬ ಕೀರ್ತಿಗೆಗೆ  ಪ್ರಾಪ್ತವಾಯಿತು.

2. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು. ದಿವಾನರಾದ ನಂತರ ಆಡಳಿತದಲ್ಲಿ ಹೊಸ ಮಾದರಿಯನ್ನು  ಅನುಷ್ಠಾನಗೊಳಿಸಿ  ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ದಕ್ಷತೆ ಮತ್ತುಪ್ರಾಮಾಣಿಕತೆಗೆ ಒತ್ತು ನೀಡಿದರು. ನ್ಯಾಯಾಂಗ ಮತ್ತು ಕಾರ್ಯಾಂಗವನ್ನು  ಅಧಿಕಾರವನ್ನು ಪ್ರತ್ಯಾರ್ಪ್ರತ್ಯೇಕಗೊಳಿಸುತ್ತದೆ . ಶಿಕ್ಷಣದ ವಿವಿಧ ಯೋಜನೆಗಳನ್ನು
ರೂಪಿಸಿದರು. ೧೯೧೩ ರಲ್ಲಿ ಪ್ರ‍್ರಾಥಮಿಕ ಶಿಕ್ಷಣ ನಿಬಂಧವನ್ನು  ಜಾರಿಗೆ ತಂದರು. ಮೈಸೂರು ಸಂಸ್ಥಾನದ ಪ್ರತ್ಯೇಕವಾದ  ಪ್ರೌಢಶಿಕ್ಷಣದ ಅಂತಿಮಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು  . ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರಕಾಲದಲ್ಲಾಯಿತು. ಬೆಂಗಳೂರಿನಲ್ಲಿ 
ಮೆಕಾನಿಕನಿಕಲ್ ಎಂಜಿನಿಯರಿಂಗ್  ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನೂ ಪ್ರಾರಂಭಿಸಿದರು  .ಕನ್ನಡ ಸಾಹಿತ್ಯ ಪರಿಷತ್ತನ್ನು ’ ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ . ವಿಶ್ವೇಶ್ವರಯ್ಯ ಅವರು ಕೈಗಾರಿಕೆಗೆ ಅಗ್ರಪ್ರಾಶ ನೀಡಿದ್ದರು. “ಕೈಗಾರಿಕೀಕರಣ ಇಲ್ಲವೆ ಅವನತಿ” ಎಂಬ ಘೋಷಣೆ ಮಾಡಿದರು . ಇವರ ಕಾಲದಲ್ಲಿ ¨ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿತವಾಯಿತು. ಇದಲ್ಲದೆ ಹೆಂಚಿನ ಕಾರ್ಖಾನೆ, ಮೊಳೆ ಮತ್ತು ಗೊಬ್ಬರ ತಯಾರಿಕಾ  ಸಕ್ಕರೆ ಕಾರ್ಖಾನೆ, ಔಷದsತಯಾರಿಕಾ ಘಟಕ, ಗಂಧದ ಎಣ್ಣೆ, ಬೆಂಕಿಕಡ್ಡಿ ಹಾಗೂ ಕಾಗದದ ಕಾರ್ಖಾನೆಗಳು  ಸ್ಥಾಪಿತವಾದವು. ಸೋಪು ಹಾಗೂ ಲೋಹ ತಯಾರಿಕೆ, ಕಲೆಮತ್ತು ಕರಕುಶಲ ಡಿಪೋ, ಕೃಷ್ಣರಾಜೇಂದ್ರ  ಬಟ್ಟೆ ಗಿರಣ,ಕಾಗದ ತಿರುಳು, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ಮತ್ತು ಪೀಠೋಪಕರಣಗಳು  ತಯಾರಿಕಾಘಟಕಗಳು  -ಹೀಗೆ ನೂರಾರು ಕೈಗಾರಿಕೆಗಳು  ಪ್ರಾರಂಭಗೊಂಡವು. ೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು  ಸ್ಥಾಪಿಸಿದರು.. ಕೈಗಾರಿಕೆ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿನಿಧಿಗಳನ್ನು ಸ್ಥಾಪಿಸಿದರು.. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ಪ್ರಾಂತೀಯ ಸಹಕಾರಿ ಬ್ಯಾಂಕ್‌ಗಳನ್ನು  ಸ್ಥಾಪಿಸಿದರು. ರಾಜ್ಯದಆಸ್ತಿಯನ್ನು ಹೆಚ್ಚಿಸಿ, ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿಹೊಸ ದೃಷ್ಟಿಕೋಣವನ್ನು ಕಂಡುಕೊಂಡರು  .

3. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.

ವಿಶ್ವೇಶ್ವರಯ್ಯಅವರುಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ  ಪರಿಹಾರ,
ಶಿಕ್ಷಣವು ಸಂಜೀವಿನಿಎಂಬುದನ್ನು ಅರಿತು“ಶಿಕಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು”ಎಂದು ಹೇಳಿದ್ದಾರೆ.ಅದಕ್ಕಾಗಿ ಅವ್ರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ೧೯೧೩ ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು.ಪ್ರೌಢಶಿಕ್ಷಣ ಶಾಲೆÄ ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಇದನ್ನು ಬದಲಿಸಿ ಮೈಸೂರು ಸಂಸ್ಥಾನವೇ  ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದ
ಸ್ಥಾಪನೆ ಇವರ ಕಾಲದಲ್ಲಾಯಿತು. ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚ್ಚಿನ ಆದ್ಯತೆ ನೀಡಿದರು. ಇದಕ್ಕಾಗಿಯೇ ಬೆಂಗಳೂರು 
 ಮೆಕಾನಿಕಲ್ಎಂಜಿನಿಯರಿಂಗ್  ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು 
 ಪ್ರಾರಂಭಿಸಿದರು. ಕನ್ನಡ  ಭಾಷೆ ಮತ್ತು ಸಾಹಿತ್ಯಗಳ ಬಗ್ಗೆಸಾರ್ವಜನಿಕರಲ್ಲಿ ಉಂಟಾಗಿದ್ದ ಆಸಕ್ತಿಯನ್ನು 
‘ಕನ್ನಡ ಸಾಹಿತ್ಯಪರಿಷತ್ತನ್ನು ’ ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದಸ್ಥಾನವಿದೆ ದೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಸಾಮಾಜಿಕ ಕಾನೂನುಗಳ ಹರಿಕಾರ.”

ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದಲ್ಲಿನ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿ ಕೊಟ್ಟಿರುವ “ನಾಲ್ವಡಿ ಕೃಷ್ಣರಾಜ
ಒಡೆಯರ್” ಎಂಬ ಪಾಠಬಾs ಗದಿಂದ ಆರಿಸಲಾಗಿದೆ.
ಸಂದರ್ಭ:- ನಾಲ್ವಡಿ ಕೃಷ್ಣರಾಜ ಒಡೆಯರು ಸಮಾಜದ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಅನಿಷ್ಟ ಪದ್ಧತಿಗಲು 
 ಹೋಗಲಾಡಿಸಲು ಸಹಕಾರಿಕಾರ್ಮಿಕ ಪರಿಹಾರ ಕಾಯ್ದೆ, – ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯಿತಿಗಳ ಕಾಯ್ದೆ, ವೇಶ್ಯಾ ವೃತ್ತಿ ಕಾಯ್ದೆ;ವಿಧವಾ ಮರು ವಿವಾಹ ಕಾಯ್ದೆ ಮುಂತಾದ ಕಾನೂನುಗಳನ್ನು  ಜಾರಿಗೆ ತಂದು ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನ್ನಾಗಿರೂಪಿಸಿದ್ದರಿಂದ ‘ ಸಾಮಾಜಿಕ ಕಾನೂನುಗಳ ಹರಿಕಾರ ’ ಎಂದು ಹೆಸರಾದ.
ಸ್ವಾರಸ್ಯ:- ಸ್ವಾಸ್ಥ ಸಮಾಜಕ್ಕಾಗಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ತಂದ ಕಾನೂನುಗಳನ್ನು 
ಅವರನ್ನು “ಸಾಮಾಜಿಕ ಕಾನೂನುಗಳ ಹರಿಕಾರ” ರನ್ನಾಗಿಸಿದ್ದು ಹೆಮ್ಮೆಯ ವಿಷಯವಾಗಿದೆ.

2.“ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.”

ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು”ಎಂಬ ಕೃತಿಯಿಂದ ಆಯ್ದು ಕೊಟ್ಟಿರುವ “ಸರ್.ಎಂ.ವಿಶ್ವೇಶ್ವರಯ್ಯ”ಎಂಬ  ಪಾಠಭಾಗದಿಂದ ಆರಿಸಲಾಗಿದೆ.
ಸಂದರ್ಭ:- ವಿಶ್ವೇಶ್ವರಯ್ಯನವರ  ಮುಂಬೈ ಪ್ರಾಂತ್ಯದಲ್ಲಿ ಸಹಾಯಕ ಇಂಜಿನಿಯರಾಗಿ ಅನೇಕ ಮಾಡಿದ್ದರು. ಹಾಗೆಯೇ ಪೂನಾದಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು. ಸ್ವಯಂಚಾಲಿತ ಬಾಗಿಲುಗಳಅನ್ವೇಷ್ವಣೆ ವಿಶ್ವೇಶ್ವರಯ್ಯ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು ಎಂದು ಅವರ ಸಾಧನೆಯನ್ನು  ಹೊಗಳಿದಸಂದ¨ .
ಸ್ವಾರಸ್ಯ:- ವಿಶ್ವೇಶ್ವರಯ್ಯನವರ ಅನ್ವೇಷಣೆಗಳು ಸಾಧನೆಗಳು  ಸರಮಾಲೆಯಾಗಿ ರೂಪುಗೊಂಡಿರುವುದು ಅವರ ಭೌದ್ಧಿಕ ಯಶಸ್ಸಿನ ಕಿರೀಟದ ಗರಿಗಳಾಗಿವೆ ಎಂಬುದು ಸ್ವಾರಸ್ಯಪೂರ್ಣವಾಗಿದೆ.

3.“ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು.”

ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದಲ್ಲಿನ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿ ಕೊಟ್ಟಿರುವ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಪಾಠಬಾಗದಿಂದ ಆರಿಸಲಾಗಿದೆ.
ಸಂದರ್ಭ:- ನಾಲ್ವಡಿ ಕೃಷ್ಣರಾಜ  ಒಡೆಯರು ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿದರು. ಇಡೀ  ಖಂಡದಲ್ಲಿ  ಯಾವ ಸಂಸ್ಥಾವನ್ನು  ಕಾಣದ ಅಭಿವೃದ್ಧಿಯನ್ನುಮೈಸೂರು ರಾಜ್ಯವು ಕಂಡಿತು ಆದ್ದರಿಂದ “ವೆಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು ”ಎಂದು ಹೇಳಿದಸಂದ¨ವಾಗಿದೆ.
ಸ್ವಾರಸ್ಯ:- ಮೈಸೂರು ಸಂಸ್ಥಾದಲ್ಲಿ  ಇಡಿ ¨ಖಂಡಕ್ಕೆ  ಮಾದರಿ ಸಂಸ್ಥಾವಗಿ ಕೀರ್ತಿಯನ್ನು ಪಡೆಯಿತು ಎನ್ನುವುದರ ಹಿಂದೆ ನಾಲ್ವಡಿ ಕೃಷ್ಣರಾಜ  ಒಡೆಯರ ಆಡಳಿತದ ಸಾಮಥÄರ್ಥ್ಯವನ್ನು ಎತ್ತಿ ತೋರಿಸಿರುವುದು ಸ್ವಾರಸ್ಯಭರಿತವಾಗಿದೆ.

4. “ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.”

ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು”ಎಂಬ ಕೃತಿಯಿಂದ ಆಯ್ದು  ಕೊಟ್ಟಿರುವ “ಸರ್.ಎಂ.ವಿಶ್ವೇಶ್ವರಯ್ಯ”ಎಂಬ  ಪಾಠಭಾಗದಿಂದ ಆರಿಸಲಾಗಿದೆ.
ಸಂದರ್ಭ:- ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಭಾರತದ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್ನೆ ಅವರು ಸರ್.ಎಂ.ವಿಶ್ವೇಶ್ವರಯ್ಯ  ಅವರ ಬಗ್ಗೆ “ದದುರದೃಷ್ಟವಶಾತ್ ಭಾರತೀಯರಾದ ನಾವು  ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದರು ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”.. ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ:- ಈ ವಾಕ್ಯವು“ನುಡಿಗಿಂತ ನಡೆ ಲೇಸು”ಎಂಬ ಅರ್ಥದೊಂದಿಗೆ ವಿಶ್ವೇಶ್ವರಯ್ಯನವರ ವಾಸ್ತವ ಚಿಂತನೆ , ಕರ‍್ಯತತ್ಪರತೆ , ನಿಸ್ವಾರ್ಥ ನಡೆದುಕೊಂಡನು  ಸ್ವಾರಸ್ಯಕರವಾಗಿ  ವರ್ಣಿಸಿದೆ.

ಉ) ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ.

1. ೧೯೧೪ರಲ್ಲಿ ಶಾಲಾ ಪ್ರವೇಶಕ್ಕೆ  ಜಾತಿ ಪರಿಗಣನೆಯ ನಿಷೇಧವಾಯಿತು 

2. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು.

3. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ಸಂಡ್‌ಹರ್ಸ್ಟ್ ಅವರು ವಿಶ್ವೇಶ್ವರಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

4. ಭಾರತ ಸರಕಾರವು  ವಿಶ್ವೇಶ್ವರಯ್ಯನವರಿಗೆ ಭಾರತ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.

ಭಾಷಾ ಚಟುವಟಿಕೆ

1. ಕೊಟ್ಟಿರುವ ಪದಗಳ ತತ್ಸಮ-ತದ್ಭವ ಬರೆಯಿರಿ.

ವಂಶ – ಬಂಚಸ್ಥಾನ – ತಾಣಯಶ – ಜಸಪಟ್ಟಣ – ಪತ್ತನ ಕರ‍್ಯ – ಕಜ್ಜ

2. ನೀಡಿರುವ ಪದಗಳಲ್ಲಿ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.

ಡಿಪ್ಲೊಮಾ, ಅಜಮಾಯಿಷಿ, ದಿವಾನ, ಪ್ರೌಢ, ಶಿಕ್ಷಣ,ನಡೆಸು , ಸೋಪು, ಕಾರ್ಖಾನೆ,ಕಾಗದ ಕಚೇರಿ
ಅನ್ಯದೇಶ್ಯ ಪದಗಳು – ಡಿಪ್ಲೊಮಾ, ಅಜಮಾಯಿಷಿ, ದಿವಾನ, ಸೋಪು, ಕಾರ್ಖಾನೆ, ಕಾಗಡಾ  ಕಚೇರಿ.

ಡಿಪ್ಲೊಮಾ –ಇಂಗ್ಲೀಷ್ದಿವಾನ – ಪರ್ಶಿಯನ್(ಪಾರ್ಶಿ)ಕಾರ್ಖಾನೆ – ಹಿಂದುಸ್ಥಾನಿ
ಸೋಪು – ಇಂಗ್ಲೀಷ್ಅಜಮಾಯಿಷಿ -ಪರ್ಶಿಯನ್( ಪಾರ್ಶಿ)ಕಾಗದ – ಹಿಂದುಸ್ಥಾನಿ
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment