WhatsApp Group Join Now
Telegram Group Join Now

Arthavyavasthe Mattu Sarakara Notes

10ನೇ ತರಗತಿ ಅಧ್ಯಾಯ-15 ಅರ್ಥವ್ಯವಸ್ಥೆ ಮತ್ತು ಸರಕಾರ ಸಮಾಜ ವಿಜ್ಞಾನ ನೋಟ್ಸ್‌, 10th Class Social Science Chapter 15 Notes Question Answer Mcq in Kannada Kseeb Solution For Class 10 Economic Chapter 15 Notes in Kannada Medium 2024 SSLC Arthavyavasthe Mattu Sarakara Notes in Kannada Class 10 Social Science Chapter 15 Notes Pdf

ತರಗತಿ : 10ನೇ ತರಗತಿ

ವಿಷಯ : ಸಮಾಜ ವಿಜ್ಞಾನ

ಪಾಠದ ಹೆಸರು : ಅರ್ಥವ್ಯವಸ್ಥೆ ಮತ್ತು ಸರಕಾರ

10th Class Social Science Chapter 15 Notes

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 10ನೇ ತರಗತಿ ಅರ್ಥವ್ಯವಸ್ಥೆ ಮತ್ತು ಸರಕಾರ ಸಮಾಜ ವಿಜ್ಞಾನ ನೋಟ್ಸ್‌ ನ್ನು ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 10ನೇ ತರಗತಿ ಅರ್ಥವ್ಯವಸ್ಥೆ ಮತ್ತು ಸರಕಾರ ಪಾಠದ ಪ್ರಶ್ನೋತ್ತರಗಳ ನೋಟ್ಸ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ.

1. 20ನೇ ಶತಮಾನದಲ್ಲಿ ಸರಕಾರಗಳು ಆರ್ಥಿಕ ಅಭಿವೃದ್ದಿಯ ತಂತ್ರವಾಗಿ ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದವು.

2. ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಸಂಸ್ಥೆ ರಾಷ್ಟೀಯ ಯೋಜನಾ ಆಯೋಗ.

3. 11ನೇ ಯ ಪಂಚವಾರ್ಷಿಕ ಯೋಜನೆಯಲ್ಲಿ ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಲಾಯಿತು.

4. ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ. ಎಂ. ಎಸ್‌ ಸ್ವಾಮಿನಾಥನ್‌

5. ಪರಿಸರ ಸ್ನೇಹಿ ಹಾಗೂ ಸುಸ್ಥಿರ ಕೃಷಿಗಾಗಿ ಸರಕಾರವು ರೈತರಿಗೆ ಸಾವಯುವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತದೆ.

6. ನೀತಿ ಆಯೋಗವು 2015 ಜನವರಿ 01 ರಂದು ಸ್ಥಾಪಿತವಾಯಿತು.

ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಆರ್ಥಿಕ ಯೋಜನೆಯ ಅರ್ಥ ತಿಳಿಸಿ.

ಸರಕಾರವು ನಿರ್ಧಿಷ್ಟ ಉದ್ದೇಶಗಳು ಒಂದಿಗೆ ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಜನರ ಸುಖವನ್ನು ಗರಿಷ್ಟ ಮಟ್ಟಕ್ಕೆ ಹೆಚ್ಚಿಸಲು ಪ್ರಜ್ಞಾಪೂರ್ವಕವಾಗಿ ಮತ್ತು ಪ್ರಕ್ರಿಯೆಯನ್ನು ಆರ್ಥಕ ಯೋಜನೆಯೆನ್ನುವರು.

2. ಭಾರತದ ಆರ್ಥಿಕ ಯೋಜನೆಯ ಪಿತ ಯಾರು?

ಭಾರತದ ಆರ್ಥಿಕ ಯೋಜನೆಯ ಪಿತ ಸರ್‌ ಎಂ ವಿಶ್ವೇಶ್ವರಯ್ಯ

3. ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆ ಯಾವುದು?

ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆ ರಾಷ್ಟ್ರೀಯ ಅಭಿವೃದ್ದಿ ಮಂಡಳಿ.

4. ಹಸಿರು ಕ್ರಾಂತಿ ಎಂದರೇನು?

ಕೃಷಿ ಉತ್ಪಾದನೆಯಲ್ಲಿ ಆಗುವ ಶೀಘ್ರ ಪ್ರಗತಿಯನ್ನು ಹಸಿರು ಕ್ರಾಂತಿ ಎನ್ನುವರು.

5. ಸುಗ್ಗಿಯ ನಂತರದ ತಂತ್ರಜ್ಞಾನ ಎಂದರೇನು?

ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ತರಲಾದ ಸುಧಾರಣೆಗಳನ್ನು ಸುಗ್ಗಿ ನಂತರದ ತಂತ್ರಜ್ಞಾನ ಎನ್ನುವರು.

6. ನೀತಿ ಆಯೋಗದ ಈಗಿನ ಅಧ್ಯಕ್ಷರು ಯಾರು?

ನೀತಿ ಆಯೋಗದ ಈಗಿನ ಅಧ್ಯಕ್ಷರು ಶ್ರೀ ನರೇದ್ರ ಮೋದಿ (ಪ್ರಧಾನ ಮಂತ್ರಿ)

ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.

1. ಕಲ್ಯಾಣ ರಾಜ್ಯಗಳಲ್ಲಿ ಸರ್ಕಾರಗಳ ಕಾರ್ಯಕ್ಷೇತ್ರ ಹೇಗೆ ವಿಸ್ತರಣೆಗೊಂಡಿದೆ.

  • ಸರ್ಕಾರಗಳ ಕಾರ್ಯಕ್ಷೇತ್ರ ವಿಸ್ತರಣೆಗೊಂಡಿದೆ.
  • ಸರಕಾರವು ಪ್ರಜೆಗಳ ಕಲ್ಯಾಣವನ್ನು ಬಯಸುತ್ತದೆ.
  • ಸರಕಾರವು ಆಹಾರ ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ , ಸಾರಿಗೆ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತದೆ.
  • ಪ್ರಜೆಗಳ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರದ ಮಧ್ಯಪ್ರವೇಶ
  • ಸರ್ಕಾರವು ಆರ್ಥಿಕ ಸ್ಥಿರತೆ ಬಯಸುತ್ತದೆ.
  • ಸರ್ಕಾರವು ಸಾಮಾಜಿಕ ನ್ಯಾಯವು ಬಯಸುತ್ತದೆ. ಸರಕಾರ ಆರ್ಥಿಕ ಸಮಾನತೆ ನಿವಾರಣೆಗೆ ಪ್ರಯತ್ನಿಸುತ್ತದೆ.
  • ಸರ್ಕಾರವು ಬಡತನ ನಿರ್ಮೂಲನೆಗೆ ಪ್ರಯತ್ನಿಸುತ್ತದೆ.

2. ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳಗಳನ್ನು ಬರೆಯಿರಿ.

ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳು

  • ಉತ್ಪಾದನೆಯನ್ನು ಗರಿಷ್ಟ ಮಟ್ಟಕ್ಕೆ ಹೆಚ್ಚಿಸುವುದು.
  • ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು.
  • ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡುವುದು.
  • ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
  • ಅರ್ಥವ್ಯವಸ್ಧೆಯನ್ನು ಆಧುನೀಕರಣಗೊಳಿಸುವುದು.
  • ಕೃಷಿ ಅಭಿವೃಧ್ದಿ
  • ಕೈಗಾರಿಕೆಗಳ ಅಭಿವೃದ್ದಿ
  • ಸಾರಿಗೆ ಸಂಪರ್ಕಗಳ ಅಭಿವೃದ್ದಿ
  • ಬಡತನ ನಿವಾರಣೆ
  • ಸರ್ವತೋಮುಖ ಬೆಳವಣಿಗೆ

3. ಪಂಚವಾರ್ಷಿಕ ಯೋಜನೆಗಳ ಸಾಧನೆಗಳನ್ನು ಪಟ್ಟಿ ಮಾಡಿರಿ?

ಪಂಚವಾರ್ಷಿಕ ಯೋಜನೆಗಳ ಸಾಧನೆಗಳು

  • ರಾಷ್ಟ್ರೀಯ ಆದಾಯದ ಹೆಚ್ಚಳ
  • ತಲಾ ಆದಾಯದ ಹೆಚ್ಚಳ
  • ಕೃಷಿ ಆಭಿವೃದ್ದಿ
  • ಕೈಗಾರಿಗೆಳ ಅಭಿವೃದ್ದಿ
  • ಸೇವಾ ವಲಯದ ಅಭಿವೃದ್ದಿ
  • ಆಹಾರ ಉತ್ಪಾದನೆಯಲ್ಲಿ ಹೆಚ್ಚಳ
  • ಉದ್ಯೋಗ ಸೃಷ್ಟಿ
  • ವಿಜ್ಞಾನ-ತಂತ್ರಜ್ಞಾನದಲ್ಲಿ ಪ್ರಗತಿ
  • ರಪ್ತು ಹೆಚ್ಚಳ
  • ಜನರ ನಿರೀಕ್ಷಿತ ಜೀವಿತಾವಧಿ ಹೆಚ್ಚಳ

4. ಹಸಿರು ಕ್ರಾಂತಿಗೆ ಪ್ರೇರಣೆಯಾದ ಅಂಶಗಳು ಯಾವುವು?

ಹಸಿರು ಕ್ರಾಂತಿಗೆ ಪ್ರೇರಣೆಯಾದ ಅಂಶಗಳು

  • ಹೆಚ್ಚು ಇಳುವರಿ ಬೀಜಗಳ ಬಳಕೆ
  • ಡಾ. ನಾರ್ಮನ್‌ ಬೋರ್ಲಾಗ್‌ ಅವರ ಪ್ರಯತ್ನದ ಫಲ
  • ಮೆಕ್ಸಿಕೋ ದೇಶದಲ್ಲಿ ನಡೆಸಿದ ಪ್ರಯೋಗದ ಫಲ
  • ಗೋಧಿಯಲ್ಲಿ ಹೆಚ್ಚು ಇಳುವರಿ ಬೀಜಗಳ ಸಂಶೋಧನೆ
  • ಮೆಕ್ಸಿಕೋ ಮತ್ತು ತೈವಾನ್‌ ದೇಶಗಳಲ್ಲಿ ಗೋಧಿಯ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿ
  • ಭಾರತದಲ್ಲಿ ಸಂಭವಿಸಿದ ಭೀಕರ ಬರಗಾಲ
  • ಆಹಾರ ಧಾನ್ಯಗಳ ಕೊರತೆ
  • ಹೆಚ್ಚು ಇಳುವರಿ ಬೀಜಗಳ ಬಳಕೆ
  • ರಾಸಾಯನಿಕ ಗೊಬ್ಬರದ ಬಳಕೆ
  • ಕ್ರಿಮಿನಾಶಕಗಳ ಬಳಕೆ
  • ನೀರಾವರಿ ಸೌಲಭ್ಯದ ವಿಸ್ತರಣೆ
  • ಭಾರತದಲ್ಲಿ ಡಾ. ಎಸ್‌ ಸ್ವಾಮಿನಾಥನ್‌ ಅವರ ಪ್ರಯತ್ನ

5. ಕೃಷಿ ವಲಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೂ ಏನು?

  • ಸಾವಯುವ ಕೃಷಿ ವಿಧಾನಕ್ಕೆ ಪ್ರೋತ್ಸಾಹ
  • ಜೈವಿಕ ಗೊಬ್ಬರ ಬಳಕೆ
  • ಜೈವಿಕ ಕ್ರಿಮಿನಾಶಕಗಳ ಬಳಕೆ
  • ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆ
  • ಸುಸ್ಥಿರ ಕೃಷಿ ವಿಶಾನ ಅಳವಡಿಕೆ
  • ಮಾರುಕಟ್ಟೆ ಸುಧಾರಣೆ

6. ನೀರಿ ಆಯೋಗದ ಧ್ಯೇಯಗಳು ಯಾವುವು?

ನೀತಿ ಆಯೋಗದ ಧ್ಯೇಯಗಳು

  • ಭಾರತ ಸರಕಾರದ ಚಿಂತಕರ ಚಾವಡಿಯಾಗಿ ಕಾರ್ಯನಿರ್ವಹಿಸುವುದು.
  • ಆರ್ಥಿಕ ಅಭಿವೃದ್ದಿಯ ನೋಡಲ್‌ ಏಜೆನ್ಸಿಯಾಗಿ ಕಾರ್ಯನಿರ್ವಹಿಸುವುದು.
  • ಕೆಳಮಟ್ಟದಿಂದ ಸಂಪನ್ಮೂಲಗಳನ್ನು ಬಳಸಿಕೊಂಡು ಆರ್ಥಿಕ ನೀರಿ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರತದ ರಾಜ್ಯ ಸರ್ಕಾರಗಳ ಒಳಗೊಳ್ಳುವಿಕೆಯಲ್ಲಿ ಭಾರತದ ರಾಜ್ಯ ಸರ್ಕಾರಗಳ ಒಳಗೊಳ್ಳುವಿಕೆಯ ಮೂಲಕ ಸಹಕಾರಿ ಫೆಡೆರಿಲಿಸಂ ನ್ನು ಉತ್ತೇಜಿಸುತ್ತದೆ.
  • ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗಳನ್ನು ಆರ್ಥಿಕ ತಂತ್ರ ಮತ್ತು ನೀತಿಯಲ್ಲಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು.
  • ಅಪಾಯದಲ್ಲಿರುವ ನಮ್ಮ ಸಮಾಜದ ವಿಭಾಗಗಳಿಗೆ ವಿಶೇಷ ಗಮನ ನೀಡುವುದು.
  • ಕಾರ್ಯಕ್ರಮಗಳ ಅನುಷ್ಟಾನಕ್ಕೆ ಗಮನ ಕೊಡುವುದು.
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment