Job News: 1476 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ, 12ನೇ ಪಾಸಾಗಿದ್ದರೆ ಸಾಕು, ಈಗಲೇ ಅಪ್ಲೈ ಮಾಡಿ!
WCD Anganwadi Recruitment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಹುದ್ದೆಗಳಿಗೆ ಹೊಸದಾಗಿ ಅರ್ಜಿಯನ್ನು ಕರೆಯಲಾಗಿದ್ದು ಅರ್ಹತೆ ಉಳ್ಳ ಅಭ್ಯರ್ಥಿಗಳು ಈ ಒಂದು ಹುದ್ದೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಕ್ಕೂ ಮುಂಚೆ ಈ ಒಂದು ಹುದ್ದೆಗೆ ಯಾವ ರೀತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಸಂಬಳದ ವಿವರಣೆ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ಈ ಹುದ್ದೆಯ ಪ್ರಮುಖ ದಿನಾಂಕಗಳು ಮತ್ತು ಇತರ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣ ಓದಿ.
- ಇಲಾಖೆ ಹೆಸರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ
- ಒಟ್ಟು 1,476 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.
- ಹುದ್ದೆಗಳ ಹೆಸರು: ಅಂಗನವಾಡಿ ಸಹಾಯಕರು ಮತ್ತು ಅಂಗನವಾಡಿ ಕಾರ್ಯಕರ್ತರು.
- ಉದ್ಯೋಗ ಸ್ಥಳ: ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ.
- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಹುದ್ದೆಗಳ ವಿವರ:
- ಅಂಗನವಾಡಿ ಕಾರ್ಯಕರ್ತೆಯರು: ದಕ್ಷಿಣ ಕನ್ನಡ 73, ಮಂಡ್ಯ 73, ರಾಮನಗರ 80, ರಾಯಚೂರು 125, ಉಡುಪಿ 57.
- ಅಂಗನವಾಡಿ ಸಹಾಯಕಿಯರು: ದಕ್ಷಿಣ ಕನ್ನಡ 262, ಮಂಡ್ಯ 268, ರಾಮನಗರ 136, ರಾಯಚೂರು 266, ಉಡುಪಿ 136.
ಸಂಬಳದ ವಿವರಣೆ: ಅಂಗನವಾಡಿ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ನಿಯಮದ ಪ್ರಕಾರ ಸಂಬಳ ನೀಡಲಾಗುತ್ತದೆ.
ವಯಸ್ಸಿನ ಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷವನ್ನು ಮೀರಬಾರದು.
ಅರ್ಜಿ ಶುಲ್ಕ: ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಶೈಕ್ಷಣಿಕ ಅರ್ಹತೆ:
- ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪೂರ್ಣಗೊಳಿಸಬೇಕು.
- ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪೂರ್ಣಗೊಳಿಸಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
- ದಕ್ಷಿಣ ಕನ್ನಡ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29-09-2024
- ಮಂಡ್ಯ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 20-09-2024
- ರಾಮನಗರ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29-09-2024
- ರಾಯಚೂರು ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29-09-2024
- ಉಡುಪಿ ಹುದ್ದೆಗಳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಇನ್ನೂ ತಿಳಿಸಿಲ್ಲ.
ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್: https://karnemakaone.kar.nic.in/abcd/home.aspx