WhatsApp Group Join Now
Telegram Group Join Now

Bharatada Aranyagalu Social Notes

10ನೇ ತರಗತಿ ಅಧ್ಯಾಯ-13 ಭಾರತದ ಅರಣ್ಯಗಳು ಸಮಾಜ ವಿಜ್ಞಾನ ನೋಟ್ಸ್‌,10th Class Social Science Chapter 13 Notes Question Answer Mcq Pdf in Kannada Medium 10th Bharatada Aranyagalu Social Notes SSLC Bharatada Aranyagalu Notes Kseeb Solution For Class For 10 Chapter 13 Notes

10th Class Social Science Chapter 13 Notes Question Answer

ತರಗತಿ : 10ನೇ ತರಗತಿ

ವಿಷಯ : ಸಮಾಜ ವಿಜ್ಞಾನ

ಪಾಠದ ಹೆಸರು : ಭಾರತದ ಅರಣ್ಯಗಳು

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 10ನೇ ತರಗತಿ ಭಾರತದ ಅರಣ್ಯಗಳು ಸಮಾಜ ವಿಜ್ಞಾನ ನೋಟ್ಸ್‌ ನ್ನು ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 10ನೇ ತರಗತಿ ಭಾರತದ ಅರಣ್ಯಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಬಿಟ್ಟಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿಮಾಡಿರಿ.

1. ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯಹರಿಧ್ವರ್ಣದ ಅರಣ್ಯಗಳು ಆಗಿದೆ.

2. ಹಿಮಾಲಯದಲ್ಲಿ ಆಲ್ಪೈನ್‌ ಅರಣ್ಯಗಳು ಕಂಡುಬರುತ್ತವೆ.

3. ಗಂಗಾನದಿ ಮುಖಜ ಭೂಮಿ ಪ್ರದೇಶವನ್ನು ಸುಂದರ್‌ ಬನ್‌ ಎಂದು ಕರೆಯುವರು.

4. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕರ್ನಾಟಕ ರಾಜ್ಯದಲ್ಲಿದೆ.

5. ಸುಂದರ್ ಬನ್‌ ಎಂದು ಕರೆಯಲು ಸುಂದರಿ ಮರಗಳು ಬೆಳೆಯಲು ಕಾರಣವಾಗಿದೆ.

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಭಾರತವು ಹೊಂದಿರುವ ಅರಣ್ಯ ಪ್ರದೇಶಗಳು ಎಷ್ಟು?

ಭಾರತವು 6.9ಲಕ್ಷ ಚದರ ಕಿಲೋ. ಮೀಟರ್‌ ಅರಣ್ಯ ಪ್ರದೇಶವನ್ನು ಹೊಂದಿದೆ.

2. ಕರ್ನಾಟಕದ ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸಿ. ?

ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು

  • ಬಂಡೀಪುರ
  • ನಾಗರಹೊಳೆ
  • ಬನ್ನೇರುಘಟ್ಟ

3. ಸ್ವಾಭಾವಿಕ ಸಸ್ಯವರ್ಗ ಎಂದರೇನು?

ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.

4. ದೇಶದಲ್ಲಿನ ಅರಣ್ಯ ಸಂರಕ್ಷಣೆಗೆ ಸಲಹೆಗಳು ಯಾವುವು?

ದೇಶದಲ್ಲಿನ ಅರಣ್ಯ ಸಂರಕ್ಷಣೆಗೆ ಸಲಹೆಗಳು

  • ಅರಣ್ಯದ ಮರಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದು.
  • ಸಸಿಗಳನ್ನು ನೆಡುವುದು. ಬೀಜಗಳನ್ನು ಹರಡುವುದು
  • ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು.
  • ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವುದು.
  • ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವುದು.
  • ಅರಣ್ಯಗಳಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವುದನ್ನು ನಿಯಂತ್ರಿಸುವುದು.

5. ಜೈವಿಕ ವೈವಿಧ್ಯ ಎಂದರೇನು?

ಭಾರತದಲ್ಲಿ ವೈವಿದ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳು ವೈವಿಧ್ಯಮಯವಾಗಿದೆ. ಆದ್ದರಿಂದ ಇದನ್ನು ಜೈವಿಕ ವೈವಿಧ್ಯತೆಯನ್ನುತ್ತಾರೆ.

6. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.

  • ವಾರ್ಷಿಕ ಸರಾಸರಿ 75ರಿಂದ 250 ಸೆಂಟಿಮೀಟರ್‌ ಮಳೆ
  • ಬೀಳುವ ಕಡೆಗಳಲ್ಲಿ ಈ ಅರಣ್ಯಗಲೂ ಕಂಡುಬರುತ್ತವೆ ಈ ಕಾಡುಗಳಲ್ಲಿ ಮರಗಳು ವಿರಳವಾಗಿಯು ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತದೆ.
  • ಬೇಸಿಗೆಯ ಆರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ.
  • ಬೆಲೆಬಾಳುವ ತೇಗ, ಗಂಧ ಸಾಲ ಮರಗಳು ಹೆಚ್ಚಾಗಿ ಕಂಡುಬರುತ್ತವೆ.
  • ಇವು ಪಶ್ಚಿಮಘಟ್ಟದ ಪೂರ್ವದ ಇಳಿಜಾರು, ಜಮ್ಮು ಮತ್ತು ಕಾಶ್ಮೀರ, ಬಂಗಾಳ, ಛತ್ತೀಸ್‌ ಗಡ್‌ , ಒರಿಸ್ಸಾ, ಬಿಹಾರ್‌ ಮತ್ತು ಜಾರ್ಖಂಡ್‌ ಗಳಲ್ಲಿ ಕಂಡುಬರುತ್ತವೆ.

7. ಅರಣ್ಯ ಸಂರಕ್ಷಣೆ ಎಂದರೇನು? ಅದರ ಪ್ರಾಮುಖ್ಯ ಮತ್ತು ವಿಧಾನಗಳನ್ನು ತಿಳಿಸಿ?

ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಹಾಗೂ ಸಂರಕ್ಷಣೆ ಎಂದು ಕರೆಯುವರು.

ಅರಣ್ಯ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ವಿಧಾನಗಳು:-

  • ಅರಣ್ಯದ ಮರಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದು, ಸಸಿಗಳನ್ನು ನೆಡುವುದು, ಬೀಜಗಳನ್ನು ಹರಡುವುದು.
  • ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು
  • ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವುದು
  • ಅರಣ್ಯಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸುವುದನ್ನು ನಿಯಂತ್ರಿಸುವುದು.
  • ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವುದು
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment