WhatsApp Group Join Now
Telegram Group Join Now

Bharatada Pramukha Kaigarikegalu notes

10ನೇ ತರಗತಿ ಅಧ್ಯಾಯ-28 ಭಾರತದ ಪ್ರಮುಖ ಕೈಗಾರಿಕೆಗಳು ಸಮಾಜ ವಿಜ್ಞಾನ ನೋಟ್ಸ್‌,10th Class Social Science Chapter 28 Notes Quiestion Answer Kannada 2024 Kseeb Solution For Class 10 Social Science Chapter 28 Notes in Kannada SSLC Bharatada Pramukha Kaigarikegalu Social Science Notes

10th Class Social Science Chapter 28 Notes Question Answer

ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿ

  1. ಬೆಂಗಾಲ್‌ ಐರನ್‌ ಕಂಪನಿಯು ಪಶ್ಚಿಮ ಬಂಗಾಳದ ಕುಲ್ಟಿ ಎಂಬಲ್ಲಿ ಸ್ಥಾಪಿತಗೊಂಡಿತು.
    2.ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನೇ ಜವಳಿ ಕೈಗಾರಿಕೆ ಎಂದು ಕರೆಯುವರು.
  2. ಸಕ್ಕರೆ ಕೈಗಾರಿಕೆಯ ಮುಖ್ಯ ಕಚ್ಚಾ ವಸ್ತು ಕಬ್ಬು
  3. ಭಾರತದ ಮೊದಲ ಕಾಗದದ ಕೈಗಾರಿಕೆಯು ಹೂಗ್ಲಿ ನದಿಯ ದಡದಲ್ಲಿ ಸ್ಥಾಪನೆಗೊಂಡಿತು.

ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಗಳನ್ನು ಬರೆಯಿರಿ.

  1. ಕೈಗಾರಿಕಾ ವಲಯಗಳ ಪಟ್ಟಿ ತಯಾರಿಸಿ.
    ಹೂಗ್ಲಿ ಪ್ರದೇಶ
    ಮುಂಬೈ ಪೂನಾ ಪ್ರದೇಶ
    ಅಹಮದಾಬಾದ್‌ – ವಡೋದರ ಪ್ರದೇಶ
    ದಾಮೋದರ ಕೈಗಾರಿಕಾ ಪ್ರದೇಶ
    ದಕ್ಷಿಣದ ಕೈಗಾರಿಕದಾ ಪ್ರದೇಶ
    ನ್ಯಾಷನಲ್‌ ಕ್ಯಾಪಿಟಲ್‌ ಪ್ರದೇಶ
    ವಿಶಾಖಪಟ್ಟಣ -ಗುಂಟೂರು ಪ್ರದೇಶ
    ಕೊಲ್ಲಂ- ತಿರುವನಂತಪುರ ಪ್ರದೇಶ
  2. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಇರುವ ಸ್ಥಳಗಳಾವುವು?

ಟಾಟಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಜಮ್‌ ಶೆಡ್‌ ಪುರ. ಜಾರ್ಖಂಡ್.‌
ಇಂಡಿಯನ್‌ ಐರನ್‌ ಸ್ಟೀಲ್‌ ಕಂಪನಿ ಬರ್ನಪುರ. ಪಶ್ಚಿಮ ಬಂಗಾಳ
ವಿಶ್ವೇಶ್ವರಯ್ಯ ಐರನ್‌ ಮತ್ತು ಸ್ಟೀಲ್‌ ಕಂಪನಿ ಭದ್ರಾವತಿ , ಕರ್ನಾಟಕ
ಬಿಲಾಯಿ ಐರನ್‌ ಮತ್ತು ಸ್ಟೀಲ್‌ ಕಂಪನಿ ಬಿಲಾಯಿ, ಛತ್ತೀಸ್‌ ಘಡ್‌
ಐರನ್‌ ಮತ್ತು ಸ್ಟೀಲ್‌ ಕಂಪನಿ ರೂರ್ಕೆಲಾ , ಒರಿಸ್ಸಾ
ಐರನ್‌ ಮತ್ತು ಸ್ಟೀಲ್‌ ಕಂಪನಿ ದುರ್ಗಾಪುರ ಪಶ್ಚಿಮ ಬಂಗಾಳ
ಐರನ್‌ ಮತ್ತು ಸ್ಟೀಲ್‌ ಕಂಪನಿ ಬೋಕೋರೋ , ಜಾರ್ಖಂಡ್‌
ಐರನ್‌ ಮತ್ತು ಸ್ಟೀಲ್‌ ಕಂಪನಿ ಸೇಲಂ , ತಮಿಳುನಾಡು
ಐರನ್‌ ಮತ್ತು ಸ್ಟೀಲ್‌ ಕಂಪನಿ ವಿಯಶಾಖಪಟ್ಟಣ , ಆಂಧ್ರಪ್ರದೇಶ

  1. ಗಂಗಾನದಿ ಬಯಲು ಪ್ರದೇಶದಲ್ಲಿ ಸಕ್ಕರೆ ಕೈಗಾರಿಕೆಯು ಹೆಚ್ಚು ಕೇಂದ್ರಿತವಾಗಿದೆ. ಏಕೆ?
    ಗಂಗಾನದಿ ಬಯಲು ಪ್ರದೇಶದಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಸಕ್ಕರೆ ಕೈಗಾರಿಕೆಯು ಹೆಚ್ಚು ಕೇಂದ್ರಿತವಾಗಿದೆ.
  2. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?
    ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳು:
    ಕಚ್ಛಾವಸ್ತುಗಳು
    ಶಕ್ತಿ ಸಂಪನ್ಮೂಲಗಳು
    ಮಾರುಕಟ್ಟೆ
    ಸಂಚಾರ ಸೌಲಭ್ಯ
    ಕಾರ್ಮಿಕರ ಪೂರೈಕೆ
    ಬಂದರುಗಳ ಸೌಲಭ್ಯ
    ಭೂಮಿ ದೊರೆಯುವಿಕೆ
    ತಾಂತ್ರಿಕತೆ
    ಸರ್ಕಾರದ ನೀತಿ ನಿಯಮಗಳು
  3. ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವುವು?
    ಬಿದಿರು
    ಮರದ ತಿರುಳು
    ಹುಲ್ಲು
  4. ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆಯನ್ನು ವಿವರಿಸಿ.
    ಮಹಾರಾಷ್ಟ್ರ- ಮುಂಬಯಿ , ನಾಗಪುರ,ಸೊಲ್ಲಾಪುರ
    ಗುಜರಾತ್‌ – ಸೂರತ್‌
    ತಮಿಳುನಾಡು – ಕೊಯಿಮುತ್ತೂರ, ಸೇಲಂ,
    ಕರ್ನಾಟಕ- ಬೆಂಗಳೂರು, ದಾವಣಗೆರೆ
    ಉತ್ತರಪ್ರದೇಶ- ಕಾನ್ಪುರ
    ಮಧ್ಯಪ್ರದೇಶ- ಇಂದೋರ್‌
  5. ಜೈವಿಕ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದ ಮೇಲಿನ ಪರಿಣಾಮಗಳೇನು?
    ಈ ತಂತ್ರಜ್ಞಾನದಲ್ಲಿ ಸಸ್ಯ, ಪ್ರಾಣಿಗಳಿಗೆ ಕಸಿ ಮಾಡಲಾಗುವುದು
    ಇದರಿಂದ ಹೊಸ ಹೊಸ ಬೀಜ, ಔಷಧ, ರಸಗೊಬ್ಬರ, ಜೈವಿಕ ಗೊಬ್ಬರ, ಬಳಕೆಯಾಯಿತು.
    ಇದರಿಂದ ಸೋಯಾ ಅವರೆ, ಮೆಕ್ಕೆಜೋಳ, ಹತ್ತಿ ಮೊದಲಾದವುಗಳು ಅಭಿವೃದ್ದಿಯಾದವು.
    ಇತ್ತೀಚೆಗೆ ಸಸ್ಯ ಜೈವಿಕ ತಂತ್ರಜ್ಞಾನ ಪರಿಸರ. ಜೈವಿಕ ವೈವಿಧ್ಯ, ವೈದ್ಯಕೀಯ ಜೈವಿಕ ತಂತ್ರಜ್ಞಾನವನ್ನು ಸಹ ಬಳಸಿಕೊಳ್ಳಲಾಗುತ್ತಿದೆ.

8 .ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಆದ ಬದಲಾವಣೆಗಳೇನು?
ಟೆಲಿಫೋನ್‌
ಅಂತರ್‌ ಜಾಲ ಸಂಪರ್ಕ
ರಕ್ಷಣಾ ಇಲಾಖೆ
ಯುದ್ದ ಸಾಮಾಗ್ರಿಗಳ ತಯಾರಿಕೆ
ಪರಮಾಣು ಬಾಂಬ್‌ ತಯಾರಿಕೆ
ಉಪಗ್ರಹ ಉಡಾವಣೆ
ಚಂದ್ರನ ಮೇಲೆ ಪಾದಾರ್ಪಣೆ
ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಇ- ಆಡಳಿತ

II ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ಕೈಗಾರಿಕೆ ಎಂದರೇನು?

ಕಚ್ಚಾ ವಸ್ತುಗಳನ್ನು ಹೆಚ್ಚು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಕೈಗಾರಿಕೆ ಎನ್ನುವರು

2. ‘ಕೈಗಾರಿಕಾ ಪ್ರದೇಶ’ ಎಂದರೇನು?

ಒಂದೇ ಬಗೆಯ ಅಥವಾ ವಿವಿಧ ಬಗೆಯ ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡ ಪ್ರದೇಶವನ್ನು ಕೈಗಾರಿಕಾ ಪ್ರದೇಶ’ ಎನ್ನುವರು

3. ಕಬ್ಬಿಣದ ಅದಿರು ಕರಗಿಸುವ ಮತ್ತು ಕಬ್ಬಿಣ ತಯಾರಿಸುವ ಕಲೆ ಭಾರತೀಯರಿಗೆ ಪ್ರಾಚೀನಕಾಲದಿಂದಲೂ ತಿಳಿದಿತ್ತು.ಹೇಗೆ?

ಇದಕ್ಕೆ ದೆಹಲಿಯಲ್ಲಿರುವ ಕಬ್ಬಿಣದ ಸ್ತಂಭವು ಉತ್ತಮ ಉದಾಹರಣೆಯಾಗಿದೆ.

4. ಭಾರತದಲ್ಲಿ ಮೊಟ್ಟಮೊದಲಿಗೆ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಎಲ್ಲಿ ಸ್ಥಾಪನೆಗೊಂಡಿತು?

ಪಶ್ಚಿಮ ಬಂಗಾಳದ ಕುಲ್ಟಿ

5. “ಭಾರತದ ಕಾಟನೊಪೊಲೀಸ್’ ಮತ್ತು ‘ಭಾರತದ ಮಾಂಚೆಸ್ಟರ್” ಎಂದು ಯಾವ ನಗರವನ್ನು ಕರೆಯಲಾಗಿದೆ?

ಮುಂಬಯಿ

6. ಮುಂಬಯಿಯನ್ನು “ಭಾರತದ ಕಾಟನೊಪೊಲೀಸ್’ ಮತ್ತು ‘ಭಾರತದ ಮಾಂಚೆಸ್ಟರ್’ ಎಂದು ಏಕೆ ಕರೆಯುವರು?

ಮುಂಬಯಿ ನಗರವು ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರ ಆದ್ದರಿಂದ ಮುಂಬಯಿಯನ್ನು “ಭಾರತದ ಕಾಟನೊಪೊಲೀಸ್’ ಮತ್ತು ‘ಭಾರತದ ಮಾಂಚೆಸ್ಟರ್’ ಎಂದು ಕರೆಯುವರು.

7. ದೇಶದಲ್ಲಿ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು ಎಲ್ಲಿ ಸ್ಥಾಪನೆಗೊಂಡಿತು?

ಸೆರಾಂಪುರ

8. ವಾಸ್ತವ ಯಶಸ್ವಿ ಕಾಗದ ಕಾರ್ಖಾನೆಯೊಂದು ಎಲ್ಲಿ ಸ್ಥಾಪನೆಗೊಂಡಿತು?

ಬಾಲಿಯಲ್ಲಿ

9. ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಯಾವ ನಗರವನ್ನು ಕರೆಯಲಾಗಿದೆ?

ಬೆಂಗಳೂರು

10. ಬೆಂಗಳೂರನ್ನು ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಏಕೆ ಕರೆಯುವರು?

ಭಾರತದಲ್ಲಿ ಬೆಂಗಳೂರು ಸಾಫ್ಟ್‌ವೇ‌ ಕೈಗಾರಿಕೆಯಲ್ಲಿ ಅತ್ಯಂತ ಮಹತ್ವವುಳ್ಳದ್ದು. ಆದ್ದರಿಂದ ಬೆಂಗಳೂರನ್ನು ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಕರೆಯುವರು

Class 10 Social Science Chapter 28 Notes

III ಗುಂಪುಗಳಲ್ಲಿ ಚರ್ಚಿಸಿ ಮತ್ತು ಈ ಕೆಳಕಂಡವುಗಳಿಗೆ ಉತ್ತರಿಸಿ.

1. ಕೈಗಾರಿಕೆಗಳೆಂದರೇನು? ಅವುಗಳ ಸ್ಥಾನೀಕರಣ ಅಂಶಗಳನ್ನು ತಿಳಿಸಿ,

  • ಕಚ್ಚಾ ವಸ್ತುಗಳನ್ನು ಹೆಚ್ಚು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಕೈಗಾರಿಕೆ ಎನ್ನುವರು.
  • ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳು:
  • ಕಚ್ಚಾ ವಸ್ತುಗಳ ಸರಬರಾಜು
  • ಶಕ್ತಿ ಸಂಪನ್ಮೂಲಗಳ ಪೂರೈಕೆ
  • ಸಾರಿಗೆ ಮತ್ತು ಸಂಪರ್ಕದ ವ್ಯವಸ್ಥೆ
  • ಮಾರುಕಟ್ಟೆ ಸೌಲಭ್ಯ
  • ಬಂಡವಾಳ
  • ಕಾರ್ಮಿಕರು ಮತ್ತು ನೀರು ದೊರೆಯುವಿಕೆ
  • ಸೂಕ್ತ ವಾಯುಗುಣ
  • ಸರ್ಕಾರದ ನೀತಿ ನಿಯಮಗಳು.

2. ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳ ಪಟ್ಟಿ ಮಾಡಿ,

  • ಹೂಟ್ಟೆ-ಕೊಲ್ಕತ ಪ್ರದೇಶ.
  • ಮುಂಬಯಿ-ಪುಣೆ ಪ್ರದೇಶ,
  • ಅಹ್ಮದಾಬಾದ್-ವಡೋದರ ಪ್ರದೇಶ,
  • ಮಧುರೈ ಕೊಯಮತ್ತೂರು-ಬೆಂಗಳೂರು ಪ್ರದೇಶ.
  • ಛೋಟಾನಾಗಪುರ ಪ್ರಸ್ಥಭೂಮಿ ಪ್ರದೇಶ
  • ದೆಹಲಿ-ಮೀರತ್ ಪ್ರದೇಶ,
  • ವಿಶಾಖಪಟ್ಟಣ-ಗುಂಟೂರು ಪ್ರದೇಶ,
  • ಕೊಲ್ಲಂ-ತಿರುವನಂತಪುರ ಪ್ರದೇಶ

3. ಭಾರತದಲ್ಲಿ ಅಲ್ಯೂಮಿನಿಯಂ ಕೈಗಾರಿಕೆ ಕುರಿತು ವಿವರಿಸಿ,

ಅಲ್ಯೂಮಿನಿಯಂ ಒಂದು ಪ್ರಮಖ ಕಬ್ಬಿಣೇತರ ಲೋಹ, ಇದು ಬಹುಪಯೋಗಿ, ಇದನ್ನು ವಿಮಾನ, ಸ್ವಯಂಚಾಲಿತವಾಹನ, ರೈಲುಸಾರಿಗೆ, ಹಡಗು, ಬಣ್ಣ ತಯಾರಿಕೆ, ಗೃಹಬಳಕೆ ವಸ್ತುಗಳ ತಯಾರಿಕೆ, ವಿವಿಧ ಕೈಗಾರಿಕೆಗಳಲ್ಲಿ, ವಿದ್ಯುತ್ ಕೇಬಲ್ ತಯಾರಿಕೆ ಹಾಗೂ ಇದರ ರೇಕುಗಳನ್ನು ಪ್ಯಾಕಿಂಗ್ ಮಾಡಲು, ಮೊದಲಾದ ಉದ್ದೇಶಗಳಿಗೆ ಉಪಯೋಗಿಸಲಾಗುತ್ತದೆ. ಇದನ್ನು ಉಕ್ಕು ಮತ್ತು ತಾಮ್ರಗಳ ಬದಲಿ ವಸ್ತುವಾಗಿಯೂ ಬಳಕೆ ಮಾಡಲಾಗುತ್ತಿದೆ.

4. ಭಾರತದಲ್ಲಿ ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆ ಕುರಿತು ವಿವರಿಸಿ.

  • ಭಾರತದ ವಿವಿಧ ಭಾಗಗಳಲ್ಲಿರುವ 76ಕ್ಕೂ ಹೆಚ್ಚು ನಗರ ಮತ್ತು ಪಟ್ಟಣಗಳಲ್ಲಿ ಹತ್ತಿ ಬಟ್ಟೆ ಕೈಗಾರಿಕೆಯು ಹಂಚಿಕೆಯಾಗಿದೆ.
  • ಆದರೂ ಇದು ಹೆಚ್ಚಾಗಿ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಕೇಂದ್ರೀಕರಣಗೊಂಡಿದೆ.
  • ಅವುಗಳೆಂದರೆ: ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ.
  • ಇವುಗಳಲ್ಲಿ ಮೊದಲೆರಡು ರಾಜ್ಯಗಳು ದೇಶದ ಹತ್ತಿ ಜವಳಿ ವಸ್ತುಗಳ ಉತ್ಪಾದನೆಯಲ್ಲಿ ಮುಂದಿವೆ. • ಮುಂಬಯಿ ನಗರವು ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರ

5. ಭಾರತದಲ್ಲಿ ಜ್ಞಾನಾಧಾರಿತ ಕೈಗಾರಿಕೆಗಳ ಪ್ರಾಮುಖ್ಯತೆ ಕುರಿತು ಬರೆಯಿರಿ,

  • ಜ್ಞಾನಾಧಾರಿತ ಕೈಗಾರಿಕೆಗಳ ಬೆಳವಣಿಗೆಯು ಸಾಮಾಜಿಕ-ಆರ್ಥಿಕ ಬದಲಾವಣೆಯ ಪ್ರಭಾವವುಳ್ಳ ಸಾಧನವಾಗಿರುತ್ತದೆ.
  • ಭಾರತವು ಸಾಕಷ್ಟು ಯುವ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಹೊಂದಿದೆ ಹಾಗೂ ತಾನು ಪ್ರಮುಖ ಜ್ಞಾನಾಧಾರಿತ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಲು ಉತ್ತಮ ಸಾಮರ್ಥ್ಯ ಹೊಂದಿದೆ.
  • ಹೀಗಾಗಿ ಇಂದು ದೇಶದಲ್ಲಿ ಜ್ಞಾನಾಧಾರಿತ ಕೈಗಾರಿಕೆಯು ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಉದ್ಯಮವಾಗಿದೆ

6. ಕಾಗದ ಕೈಗಾರಿಕೆಯು ಅರಣ್ಯ ಆಧಾರಿತ ಕೈಗಾರಿಕೆ.ಏಕೆ?

ಏಕೆಂದರೆ ಈ ಉದ್ಯಮಕ್ಕೆ ಬೇಕಾಗುವ ಕಚ್ಚಾ ಪದಾರ್ಥಗಳೆಂದರೆ; ಬಿದಿರು ಮತ್ತು ಮರದ ತಿರುಳುಗಳಂತಹ ಮೃದುಮರಗಳ ವಸ್ತುಗಳು, ಸಬಾಯಿ ಮತ್ತು ಬಾಭರ್‌ನಂತಹ ಹುಲ್ಲು.

7. ಸಕ್ಕರೆ ಕೈಗಾರಿಕೆಯ ಸ್ಥಾನೀಕರಣ ನಿರ್ಧರಿಸುವ ಪ್ರಮುಖಾಂಶಗಳು ಯಾವುವು?

  • ಮೂಲ ಕಚ್ಚಾ ವಸ್ತುವಾದ ಕಬ್ಬು ಸರಬರಾಜು
  • ಸುಲಭ ದರದ ಮತ್ತು ಸಮರ್ಪಕ ಸಾರಿಗೆ ಸೌಲಭ್ಯ
  • ಸರಕಾರದ ಪ್ರೋತ್ಸಾಹ
  • ವಿದ್ಯುತ್‌ ಪೂರೈಕೆ
  • ಬಂಡವಾಳ
  • ಮಾರುಕಟ್ಟೆ ಸೌಲಭ್ಯಗಳು

8. ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಸ್ಥಾನೀಕರಣಗಳು ಯಾವುವು?

  • ಮೂಲ ಕಚ್ಚಾವಸ್ತುವಾದ ಕಬ್ಬಿಣದ ಅದಿರು ಪೂರೈಕೆ.
  • ಮುಖ್ಯ ಶಕ್ತಿ ಸಂಪನ್ಮೂಲವಾದ ಕೋಕಿಂಗ್ ಕಲ್ಲಿದ್ದಲು ಹಾಗೂ ಜಲವಿದ್ಯುತ್‌ ಪೂರೈಕೆ
  • ರೈಲು ಸಾರಿಗೆ ಹಾಗೂ ಬಂದರು ಸೌಲಭ್ಯ.
  • ನೀರು ಪೂರೈಕೆ.
  • ಕಡಿಮೆ ಕೂಲಿಗೆ ದುಡಿಯುವ ನುರಿತ ಕಾರ್ಮಿಕರು
  • ಬಂಡವಾಳ ಮತ್ತು ಸ್ಥಳೀಯ ಮಾರುಕಟ್ಟೆ ಸೌಲಭ್ಯ

9. ಭಾರತದ ಖಾಸಗಿ ವಲಯದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಯಾವುವು?

  • ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ
  • ಜಿಂದಾಲ್ ವಿಜಯನಗರ ಉಕ್ಕು ಲಿ.
  • ಇಸ್ಪಾತ್ ಕಬ್ಬಿಣ ಮತ್ತು ಉಕ್ಕು ಲಿ.
  • ದುಬಾರಿ ಉಕ್ಕು ಸ್ಥಾವರ

10. ಭಾರತದ ಸರಕಾರಿ ವಲಯದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಯಾವುವು?

  • ಭಾರತೀಯ ಕಬ್ಬಿಣ ಮತ್ತು ಉಕ್ಕು ಕಂಪನಿ,
  • ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ.
  • ಹಿಂದೂಸ್ತಾನ್ ಉಕ್ಕು ಲಿಮಿಟಡ್
  • ಹಿಂದೂಸ್ತಾನ್ ಉಕ್ಕು ಲಿಮಿಟೆಡ್
  • ಹಿಂದೂಸ್ತಾನ್ ಉಕ್ಕು ಲಿಮಿಟೆಡ್ ಮತ್ತು ಬೊಕಾರೊ ಉಕ್ಕು ಸ್ಥಾವರ
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment