10ನೇ ತರಗತಿ ಅಧ್ಯಾಯ-11 ಭಾರತದ ಋತುಗಳು ಸಮಾಜ ವಿಜ್ಞಾನ ನೋಟ್ಸ್̧, 10th Class Social Science Chapter 11 Notes Question Answer Mcq Pdf in Kannada Medium Kseeb Solution For Class 10 Social Science Chapter 11 Notes in Kannada 2024 Class 10 Social Science Chapter 11 Notes in Kannada 10th Class Social Science 11 Lesson Notes
SSLC Bharatada Rutugalu Notes in Kannada
ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 10ನೇ ತರಗತಿ ಭಾರತದ ಋತುಗಳು ಸಮಾಜ ವಿಜ್ಞಾನ ನೋಟ್ಸ್ ನ್ನು ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 10ನೇ ತರಗತಿ ಭಾರತದ ಋತುಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
I. ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ.
1. ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಸ್ಥಳ ಗಂಗಾನಗರ ಆಗಿದೆ.
2. ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈಋತ್ಯ ಮಾನ್ಸೂನ್ ಮಳೆಗಾಲ ಆಗಿದೆ.
3. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ರೊಯ್ಲಿ
4. ಭಾರತದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಸ್ಥಳ ಮಾಸಿನ್ ರಾಮ್
5. ಭಾರತದ ವ್ಯವಸಾಯವನ್ನು ಮಾನ್ಸೂನ್ ಮಳೆಯ ಜೊತೆಯಲ್ಲಿ ಆಡುವ ಜೂಟಾಟ ಎಂದು ಕರೆಯುತ್ತಾರೆ.
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಗಳನ್ನು ಬರೆಯಿರಿ.
1. ಭಾರತವು ಯಾವ ಬಗೆಯ ವಾಯುಗುಣವನ್ನು ಹೊಂದಿದೆ?
ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣ
2. ಮಾನ್ಸೂನ್ ಮಾರುತ ಎಂದರೇನು?
ನೈಋತ್ಯ ದಿಕ್ಕಿನಿಂದ ಈಶಾನ್ಯದ ಕಡೆಗೆ ಬೀಸುವ ಮಾರುತಗಳನ್ನು ಮಾನ್ಸೂನ್ ಮಾರುತಗಳು ಎನ್ನುವರು.
3. ಯಾವ ಋತುವನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು?
ನೈಋತ್ಯ ಮಾನ್ಸೂನ್ ಕಾಲ
4. ಭಾರತದ ವಾಯುಗುನದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?
- ಅಕ್ಷಾಂಶ
- ಸಮುದ್ರಮಟ್ಟದಿಂದ ಇರುವ ಎತ್ತರ
- ಸಾಗರಗಳಿಂದ ಇರುವ ದೂರ
- ಮಾರುತಗಳ ದಿಕ್ಕು
- ಪರ್ವತ ಸರಣಿಗಳು ಹಬ್ಬಿರುವ ರೀತಿ
- ಸಾಗರ ಪ್ರವಾಹಗಳು
5. ಭಾರತದ ವ್ಯವಸಾಯವು “ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ” ಚರ್ಚಿಸಿರಿ.
- ಭಾರತದ ಜನತೆಯ ಪ್ರಧಾನ ಉದ್ಯೋಗವು ವ್ಯವಸಾಯವಾಗಿರುವುದರಿಂದ ನೈಋತ್ಯ ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತದೆ.
- ಈ ಮಳೆ ವಿಫಲವಾದರೆ ಬರಗಾಲ ಬರುವುದು.
- ಅತಿ ಹೆಚ್ಚಾದಾಗ ಪ್ರವಾಹ ಉಂಟಾಗಿ ಪ್ರಾಣ ಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ.
- ಆದ್ದರಿಂದಲೇ ಭಾರತದ ವ್ಯವಸಾಯವನ್ನು ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.