FDA-2018 Paper-2 General KANNADA Questions with answers
ದಿನಾಂಕ 25.02.2018 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಕನ್ನಡ ಪತ್ರಿಕೆ – II (ವಿಷಯ ಸಂಕೇತ: 282)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.
ಸೂಚನೆಗಳು: ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1-9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.
ಉದಾಹರಣೆ : | ||
ಮೀನ್ ಎಂದರೆ | ||
(1) | ಹೊಳೆಯುವ | |
(2) | ಮೀಯು | |
(3) | ಮೇಯು | |
(4) | ಆಕಾಶ |
ಇಲ್ಲಿ ‘‘ಹೊಳೆಯುವ’’ ಎಂಬುದು ‘‘ಮೀನ್’’ನ ಅರ್ಥವನ್ನು ಹೇಳುವ ಪದ. ಆದುದರಿಂದ (1)ನ್ನು ಗುರುತಿಸಬೇಕು.
1. | ಸಾಕೂತ | |
(1) | ಸಹಿಸಲಸಾಧ್ಯವಾದ | |
(2) | ಕುತೂಹಲಕರವಾದ | |
(3) | ಸಾಕುಸಾಕಾದ | |
(4) | ಅಭಿಪ್ರಾಯ ಸಹಿತವಾದ |
ಸರಿ ಉತ್ತರ
(4) ಅಭಿಪ್ರಾಯ ಸಹಿತವಾದ
2. | ಬವರ | |
(1) | ಯುದ್ಧ | |
(2) | ಮಿತ್ರತ್ವ | |
(3) | ಕ್ಷಿಪಣಿ ಧಾಳಿ | |
(4) | ಶತೃತ್ವ |
ಸರಿ ಉತ್ತರ
(1) ಯುದ್ಧ
3. | ಪ್ರಮೋದ | |
(1) | ಸಂತೋಷ | |
(2) | ಆರಾಧನೆ | |
(3) | ಮದ | |
(4) | ಮಂದ |
ಸರಿ ಉತ್ತರ
(1) ಸಂತೋಷ
4. | ಮುಕುರ | |
(1) | ಮುಖ | |
(2) | ಕನ್ನಡಿ | |
(3) | ಕಣ್ಣು | |
(4) | ಮೂಗುತಿ |
ಸರಿ ಉತ್ತರ
(2) ಕನ್ನಡಿ (4) ಮೂಗುತಿ
5. | ತಂಡುಲ | |
(1) | ಹೊಲ | |
(2) | ಡಿಂಗರ | |
(3) | ಅಕ್ಕಿ | |
(4) | ರಾಗಿ |
ಸರಿ ಉತ್ತರ
(3) ಅಕ್ಕಿ
6. | ಮೇದಿನಿ | |
(1) | ಮರ | |
(2) | ಬೆಟ್ಟಗುಡ್ಡ | |
(3) | ಭೂಮಿ | |
(4) | ಮೇವು ಇರುವ ತಾಣ |
ಸರಿ ಉತ್ತರ
(3) ಭೂಮಿ
7. | ಆವು | |
(1) | ಆಡು | |
(2) | ಹಾವು | |
(3) | ಹಸು | |
(4) | ಎತ್ತು |
ಸರಿ ಉತ್ತರ
(3) ಹಸು
8. | ಉತ್ತಾರಣ ಎಂದರೆ | |
(1) | ಉತ್ತರ ಕ್ರಿಯೆ | |
(2) | ಉದ್ಧಾರಣೆ | |
(3) | ಉತ್ತರ ನೀಡುವಿಕೆ | |
(4) | ದಾಟುವಿಕೆ |
ಸರಿ ಉತ್ತರ
(4) ದಾಟುವಿಕೆ
9. | ಜಕಾತಿ ಎಂದರೆ | |
(1) | ಚಪಾತಿ | |
(2) | ದರ | |
(3) | ಸುಂಕ | |
(4) | ಜಗಳ |
ಸರಿ ಉತ್ತರ
(3) ಸುಂಕ
ಸೂಚನೆಗಳು: ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10-17) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರ್ತಿಸಿ.
ಉದಾಹರಣೆ : | ||
ತೆಂಕಣ | ||
(1) | ಮೂಡಣ | |
(2) | ಬಡಗಣ | |
(3) | ಪಡುವಣ | |
(4) | ತೆಗಣ |
ಇಲ್ಲಿ ‘‘ತೆಂಕಣ’’ ಇದಕ್ಕೆ ವಿರುದ್ಧಾರ್ಥಕ ರೂಪ‘‘ಬಡಗಣ’’ ಎಂಬುದು (2)ಅನ್ನು ಗುರುತಿಸಬಹುದು.
10. | ತಿಟ್ಟು | |
(1) | ಮೊಗ್ಗು | |
(2) | ತಗ್ಗು | |
(3) | ನುಗ್ಗು | |
(4) | ಜುಟ್ಟು |
ಸರಿ ಉತ್ತರ
(2) ತಗ್ಗು
11. | ತುಮುಲ | |
(1) | ವಿರಳ | |
(2) | ನಿರಾಳ | |
(3) | ಸರಳ | |
(4) | ಕರಾಳ |
ಸರಿ ಉತ್ತರ
(2) ನಿರಾಳ
12. | ಚೇತನ | |
(1) | ಅನಿಕೇತನ | |
(2) | ಸಚೇತನ | |
(3) | ನಿಕೇತನ | |
(4) | ಅಚೇತನ |
ಸರಿ ಉತ್ತರ
(4) ಅಚೇತನ
13. | ಭೃತ್ಯ | |
(1) | ಪ್ರಜೆ | |
(2) | ಸೇವಕ | |
(3) | ಪ್ರಭು | |
(4) | ಯತಿ |
ಸರಿ ಉತ್ತರ
(3) ಪ್ರಭು
14. | ಶಾಮಕ | |
(1) | ಕಡಿಮೆ | |
(2) | ಶಾಬಕ | |
(3) | ಶಾರೀರಕ | |
(4) | ಉಲ್ಬಣಕ |
ಸರಿ ಉತ್ತರ
(4) ಉಲ್ಬಣಕ
15. | ಅವಸರ್ಪಿಣಿ | |
(1) | ಉಪಸರ್ಪಿಣಿ | |
(2) | ಶತಸರ್ಪಿಣಿ | |
(3) | ಉತ್ಸರ್ಪಿಣಿ | |
(4) | ಕುತ್ಸರ್ಪಿಣಿ |
ಸರಿ ಉತ್ತರ
(3) ಉತ್ಸರ್ಪಿಣಿ
16. | ಅಭಿಮುಖ | |
(1) | ಸುಮುಖ | |
(2) | ಷಣ್ಮುಖ | |
(3) | ದುರ್ಮುಖ | |
(4) | ವಿಮುಖ |
ಸರಿ ಉತ್ತರ
(4) ವಿಮುಖ
17. | ಊರ್ಧ್ವಮುಖ | |
(1) | ಉದ್ದಮುಖ | |
(2) | ಸುಮುಖ | |
(3) | ಅಧೋಮುಖ | |
(4) | ಗುಣಮುಖ |
ಸರಿ ಉತ್ತರ
(3) ಅಧೋಮುಖ
ಸೂಚನೆಗಳು: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 18 – 22) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.
ಉದಾಹರಣೆ : | ||
‘‘ಬೆಣ್ಣೆ ಹಚ್ಚು’’ | ||
(1) | ರೊಟ್ಟಿಗೆ ಬೆಣ್ಣೆ ಹಚ್ಚು | |
(2) | ಮೈಯುಜ್ಜುವುದು | |
(3) | ಹೊಗಳುವುದು | |
(4) | ಸೇವೆ ಮಾಡುವುದು |
ಇಲ್ಲಿ ‘‘ಹೊಗಳುವುದು’’ ಸರಿಯಾದ ಅರ್ಥ ಆದುದರಿಂದ (3)ಅನ್ನು ಗುರುತಿಸಬೇಕು.
18. | ‘ಗುಡ್ಡಕ್ಕೆ ಕಲ್ಲು ಹೊತ್ತ ಹಾಗೆ’ ಎಂದರೆ | |
(1) | ಗುಡ್ಡದ ಮೇಲಿನ ಕಲ್ಲು | |
(2) | ಕಲ್ಲಿನಿಂದ ಕೂಡಿದ ಗುಡ್ಡ | |
(3) | ನಿರರ್ಥಕವಾದ ಕೆಲಸ | |
(4) | ಗುಡ್ಡದ ಮೇಲೆ ಕಲ್ಲನ್ನಿಡು |
ಸರಿ ಉತ್ತರ
(3) ನಿರರ್ಥಕವಾದ ಕೆಲಸ
19. | ‘ಎತ್ತಿದ ಕೈ’ | |
(1) | ಕೈಯನ್ನು ಸದಾ ಎತ್ತಿರುವವನು | |
(2) | ಕೈಯನ್ನು ಇಳಿಸದೇ ಇರುವವನು | |
(3) | ಪ್ರವೀಣ | |
(4) | ಕೈ ಇಲ್ಲದವನು |
ಸರಿ ಉತ್ತರ
(3) ಪ್ರವೀಣ
20. | ‘ತಲೆ ತೊಳೆದು ಕೊಳ್ಳು’ | |
(1) | ತಲೆಯನ್ನು ಶುಚಿಗೊಳಿಸು | |
(2) | ತಲೆಯನ್ನು ತೆರೆದು ನಿಲ್ಲುವುದು | |
(3) | ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳುವುದು | |
(4) | ಚಿಂತಾಕ್ರಾಂತನಾಗುವುದು |
ಸರಿ ಉತ್ತರ
(3) ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳುವುದು
21. | ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು | |
(1) | ಅತ್ಯಂತ ಎಚ್ಚರದಿಂದ ಕಾಯುವುದು | |
(2) | ಅತ್ಯಂತ ಭಯದಿಂದಿರು | |
(3) | ಕಣ್ಣಿಗೆ ಎಣ್ಣೆ ಹಾಕಿಕೊಳ್ಳುವುದು | |
(4) | ಕಣ್ಣು ತುಂಬಿಕೊಂಡು |
ಸರಿ ಉತ್ತರ
(1) ಅತ್ಯಂತ ಎಚ್ಚರದಿಂದ ಕಾಯುವುದು
22. | ‘ಭೂಮಿ ತೂಕದ ಮನುಷ್ಯ’ ಎಂದರೆ | |
(1) | ತುಂಬ ಭಾರವಾದ ಮನುಷ್ಯ | |
(2) | ತಾಳ್ಮೆ ಗುಣದ ಮನುಷ್ಯ | |
(3) | ಭೂಮಿಗೆ ಭಾರವಾದ ಮನುಷ್ಯ | |
(4) | ಭೂಮಿಯಷ್ಟೇ ತೂಕ ತೂಗುವ ಮನುಷ್ಯ |
ಸರಿ ಉತ್ತರ
(2) ತಾಳ್ಮೆ ಗುಣದ ಮನುಷ್ಯ
ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 23-27) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.
ಉದಾಹರಣೆ : | ||
ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು. | ||
(1) | ಪ್ರಮಾದ | |
(2) | ಅಪಘಾತ | |
(3) | ವಿಪತ್ತು | |
(4) | ಆಕಸ್ಮಾತ್ |
ಇಲ್ಲಿ ‘‘ಅಪಘಾತ’’ ಎಂಬುದು ಸೂಕ್ತ ರೂಪವಾದುದರಿಂದ (2)ಅನ್ನು ಗುರುತಿಸಬೇಕು.
23. | ಒಳ್ಳೆಯ ಸಲಹೆ, ಸೂಚನೆಗಳಿಗೆ ಅಡ್ವರ್ಸ್ ಉತ್ತರ ನೀಡಬಾರದು. | |
(1) | ಕೆಟ್ಟದಾಗಿ | |
(2) | ವ್ಯತಿರಿಕ್ತ | |
(3) | ಸಮಯೋಚಿತ | |
(4) | ನಿರ್ಲಕ್ಷಿತ |
ಸರಿ ಉತ್ತರ
(2) ವ್ಯತಿರಿಕ್ತ
24. | ಭಾರತವು ಸೆಕ್ಯುಲರ್ ಗಣರಾಜ್ಯವಾಗಿದೆ. | |
(1) | ಮತೀಯ | |
(2) | ಜಾತ್ಯಾತೀತ | |
(3) | ನಿರಂಕುಶ | |
(4) | ಕೋಮುವಾದಿ |
ಸರಿ ಉತ್ತರ
(2) ಜಾತ್ಯಾತೀತ
25. | ಮಗುವಿಗೆ ರಿಂಗ್ವರ್ಮ್ ಬಂದುದರಿಂದ ಔಷಧಿ ಕೊಡಿಸಿದರು. | |
(1) | ಕಡ್ಡಿ ಹುಣ್ಣು | |
(2) | ಹುಳುಕಡ್ಡಿ | |
(3) | ನಾಯಿಕೆಮ್ಮು | |
(4) | ಗಂಟಲು ಮಾರಿ |
ಸರಿ ಉತ್ತರ
(2) ಹುಳುಕಡ್ಡಿ
26. | ಬಹುತೇಕ ದೇಶಗಳ ಯುವಜನ ಇಂದು ‘ಅಥಾರಿಟೀರಿಯನಿಸಂ’ಅನ್ನು ಬಯಸುತ್ತಾರೆ. ಈ ವಾಕ್ಯದಲ್ಲಿರುವ ‘ಅಥಾರಿಟೇರಿಯನಿಸಂ’ ಎಂಬುದು | |
(1) | ಸರ್ವಾಧಿಕಾರವಾದ | |
(2) | ನಿರ್ಬಂಧಿತ ಅಧಿಕಾರವಾದ | |
(3) | ಸಮತಾವಾದ | |
(4) | ಮತೀಯ |
ಸರಿ ಉತ್ತರ
(1) ಸರ್ವಾಧಿಕಾರವಾದ
27. | ಸ್ವಾತಂತ್ರ್ಯ ಇರುವ ದೇಶದಲ್ಲಿ ಫ್ರಟರ್ನಿಟಿ ಹೆಚ್ಚು ಮಹತ್ವವಿರಬೇಕು. | |
(1) | ಸಹೋದರತ್ವ | |
(2) | ಸಮಾನತೆ | |
(3) | ಸಹಬಾಳ್ವೆ | |
(4) | ಸಹಕಾರ ಭಾವನೆ |
ಸರಿ ಉತ್ತರ
(1) ಸಹೋದರತ್ವ
ಸೂಚನೆಗಳು: ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28-32) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದವನ್ನು ಗುರುತಿಸಿ.
ಉದಾಹರಣೆ : | ||
(1) | ಹುಡುಗಿ | |
(2) | ನವಿಲು | |
(3) | ಗಿಳಿ | |
(4) | ಕಿತ್ತಳೆ |
ಇಲ್ಲಿ ‘‘ಕಿತ್ತಳೆ’’ ಇತರ ಪದಗಳ ಜಾತಿಗೆ ಸೇರುವುದಿಲ್ಲ. ಆದುದರಿಂದ (4)ಅನ್ನು ಗುರುತಿಸಬೇಕು.
28. | ||
(1) | ಅಧಿಕರಣ | |
(2) | ಕರ್ಮ | |
(3) | ಸಂಪ್ರದಾನ | |
(4) | ಸಂಬಂಧ |
ಸರಿ ಉತ್ತರ
(4) ಸಂಬಂಧ
29. | ||
(1) | ವಯಸ್ಸು | |
(2) | ಹರಯ | |
(3) | ಪ್ರಾಯ | |
(4) | ವಾರಿಗೆ |
ಸರಿ ಉತ್ತರ
(4) ವಾರಿಗೆ
30. | ||
(1) | ಸಂಕ್ರಮಣ | |
(2) | ಪ್ರಕ್ರಿಯೆ | |
(3) | ಪರಿವರ್ತನೆ | |
(4) | ಬದಲಾವಣೆ |
ಸರಿ ಉತ್ತರ
(2) ಪ್ರಕ್ರಿಯೆ
31. | ||
(1) | ಮತ್ತು | |
(2) | ಅಥವಾ | |
(3) | ಆದ್ದರಿಂದ | |
(4) | ಅದುವೇ |
ಸರಿ ಉತ್ತರ
(4) ಅದುವೇ
32. | ||
(1) | ಓಲೆಗರಿ | |
(2) | ತಾಳೆಗರಿ | |
(3) | ಭೂರ್ಜಪತ್ರ | |
(4) | ಪದ್ಮಪತ್ರ |
ಸರಿ ಉತ್ತರ
(4) ಪದ್ಮಪತ್ರ
ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪ್ಪಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂಬ (4)ಅನ್ನು ಗುರುತಿಸಿ (ಪ್ರಶ್ನೆ ಸಂಖ್ಯೆ 33-38).
ಉದಾಹರಣೆ : | ||
ಲೋಕಾಯುಕ್ತ ಲಂಚ ಹಗುರಣ್ಕೆ ಸಂಬಂಧಿಸಿ ಎಂಟು ಜನರ ಬಂಧನ | ||
(1) | ಹಾಗರಣ | |
(2) | ಹಗರಣ | |
(3) | ಹಗರನ | |
(4) | ತಪ್ಪಿಲ್ಲ |
ಇಲ್ಲಿ ಗೆರೆ ಎಳೆದ ‘‘ಹಗುರಣ’’ ತಪ್ಪಾಗಿದ್ದು ಅದರ ಸರಿಯಾದ ರೂಪವು ‘‘ಹಗರಣ’’ ಎಂದಾಗಿದೆ. ಆದ್ದರಿಂದ (2)ಅನ್ನು ಗುರುತಿಸಬೇಕು.
33. | ಮುಖ್ಯಮಂತ್ರಿಗಳು ಅಂಬೇಡ್ಕರ್ ಭವನ ನಿರ್ಮಾಣದ ಶಂಕುಸ್ತಾಪನೆ ನೆರವೇರಿಸಿದರು. | |
(1) | ಶಂಖುಸ್ಥಾಪನೆ | |
(2) | ಶಂಕು ಸ್ಥಾಪನೆ | |
(3) | ಶಂಕು ಸ್ತಾಪನೆ | |
(4) | ತಪ್ಪಿಲ್ಲ |
ಸರಿ ಉತ್ತರ
(2) ಶಂಕು ಸ್ಥಾಪನೆ
34. | ಆಹ್ವಾನಿತ ಗಣ್ಯರ ಓತಪ್ರೋಥ ನುಡಿಗಳಿಗೆ ಸಭಿಕರು ತಲೆದೂಗಿದರು. | |
(1) | ಓತಪ್ರೋತ | |
(2) | ಓತಪ್ರೊತ | |
(3) | ಓತಪ್ರೂೂತ | |
(4) | ತಪ್ಪಿಲ್ಲ |
ಸರಿ ಉತ್ತರ
(1) ಓತಪ್ರೋತ
35. | ಭಾರತದ ಆರ್ಥಿಕ ಚಟುವಟಿಕೆಯಲ್ಲಿ ರೈತ ಸಮುದಾಯವೇ ಆಧಾರಸ್ಥಂಭ. | |
(1) | ಆದಾರಸ್ತಂಭ | |
(2) | ಆಧಾರಸ್ತಂಭ | |
(3) | ಆಧಾರ ಸ್ಥಂಬ | |
(4) | ತಪ್ಪಿಲ್ಲ |
ಸರಿ ಉತ್ತರ
(2) ಆಧಾರಸ್ತಂಭ
36. | ಜನರು ದೇವರನ್ನು ಶೋಡಷೋಪಚಾರಗಳಿಂದ ಪೂಜಿಸುತ್ತಾರೆ. | |
(1) | ಸೋಡಷೋಪಚಾರ | |
(2) | ಸೋಡಶೋಪಚಾರ | |
(3) | ಷೋಡಶೋಪಚಾರ | |
(4) | ತಪ್ಪಿಲ್ಲ |
ಸರಿ ಉತ್ತರ
(3) ಷೋಡಶೋಪಚಾರ
37. | ಶಿಕ್ಷಕರು ರಾಷ್ಟ್ರೀಕರಣ ಕುರಿತು ಪಾಠ ಹೇಳಿದರು. | |
(1) | ರಾಶ್ಟ್ರೀಕರಣ | |
(2) | ರಷ್ಟ್ರೀಕರಣ | |
(3) | ರಾಷ್ಟ್ರೀಕಾರಣ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
38. | ದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸ್ತಬ್ಧಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. | |
(1) | ಸ್ತಬ್ದಚಿತ್ರ | |
(2) | ಸ್ಥಬ್ಧಚಿತ್ರ | |
(3) | ಸ್ಥಬ್ದಚಿತ್ರ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
ಸೂಚನೆಗಳು: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 39-65)
ಉದಾಹರಣೆ : | ||
ನಡೆಯುತ್ತಿದೆ ಎಂಬುದು ____________ ದ ಪದ. | ||
(1) | ಭೂತಕಾಲ | |
(2) | ವರ್ತಮಾನ ಕಾಲ | |
(3) | ಭವಿಷ್ಯತ್ ಕಾಲ | |
(4) | ಹಿಂದಿನ ಕಾಲ |
ಇಲ್ಲಿ ‘‘ವರ್ತಮಾನ ಕಾಲ’’ ಎಂಬುದು ಸರಿಯಾದ ಉತ್ತರ. ಆದುದರಿಂದ (2)ಅನ್ನು ಗುರುತಿಸಬೇಕು.
39. | ‘ಅರರೇ ಗಿಣಿ ರಾಮ ! ವಾಕ್ಯದ ‘ಅರರೇ’ ಎಂಬುದು ____________. | |
(1) | ಅನುಕರಣಾವ್ಯಯ | |
(2) | ಭಾವಸೂಚಕಾವ್ಯಯ | |
(3) | ಸಂಬಂಧ ಸೂಚಕಾವ್ಯಯ | |
(4) | ಸಾಮಾನ್ಯ ಅವ್ಯಯ |
ಸರಿ ಉತ್ತರ
(2) ಭಾವಸೂಚಕಾವ್ಯಯ
40. | ‘ಸಲುವಳಿ’ ಎಂಬ ಪದ ____________ ಗೆ ಸಂಬಂಧಿಸಿದೆ. | |
(1) | ತದ್ಧಿತ ವಿಶೇಷಣ | |
(2) | ತದ್ಧಿತ ಭಾವನಾಮ | |
(3) | ತದ್ದಿತ ನಾಮ | |
(4) | ತದ್ಧಿತಾವ್ಯಯ |
ಸರಿ ಉತ್ತರ
(2) ತದ್ಧಿತ ಭಾವನಾಮ
41. | ಕೆಳಗಿನವುಗಳಲ್ಲಿ ಕಂಠ್ಯ ಧ್ವನಿಯಾಗಿರುವುದು ____________. | |
(1) | ಕ್, ಗ್ | |
(2) | ಟ್, ಡ್ | |
(3) | ತ, ದ್ | |
(4) | ಪ್, ಬ್ |
ಸರಿ ಉತ್ತರ
(1) ಕ್, ಗ್
42. | ‘ಬಾವಿ’ ಪದದ ತತ್ಸಮ ರೂಪ ____________ | |
(1) | ವಾಪಿ | |
(2) | ಬಾಪಿ | |
(3) | ವಾಬಿ | |
(4) | ವಾಪು |
ಸರಿ ಉತ್ತರ
(1) ವಾಪಿ
43. | ಊರು ಉಪಕಾರ ಅರಿಯದು, ಹೆಣ ಶೃಂಗಾರ ಅರಿಯದು ಎಂಬುದು ____________ ಅಲಂಕಾರಕ್ಕೆ ಉದಾಹರಣೆ. | |
(1) | ಅರ್ಥಾಂತರ ನ್ಯಾಸಾಲಂಕಾರ | |
(2) | ಶ್ಲೇಷಾಲಂಕಾರ | |
(3) | ದೃಷ್ಟಾಂತಾಲಂಕಾರ | |
(4) | ರೂಪಕಾಲಂಕಾರ |
ಸರಿ ಉತ್ತರ
(3) ದೃಷ್ಟಾಂತಾಲಂಕಾರ
44. | ಹೊಸದು + ಕನ್ನಡ = ಹೊಸಗನ್ನಡ, ಇದು ____________ ಸಮಾಸ. | |
(1) | ಗಮಕ ಸಮಾಸ | |
(2) | ಕ್ರಿಯಾ ಸಮಾಸ | |
(3) | ದ್ವಿಗು ಸಮಾಸ | |
(4) | ಕರ್ಮಧಾರಯ ಸಮಾಸ |
ಸರಿ ಉತ್ತರ
(4) ಕರ್ಮಧಾರಯ ಸಮಾಸ
45. | ‘ಕಿಕ್ಕಿರಿದ ಸಭೆ’ ಎಂಬುದು ____________ವಿಶೇಷಣ. | |
(1) | ಪರಿಮಾಣ ವಾಚಕ ವಿಶೇಷಣ | |
(2) | ಸಂಖ್ಯಾ ವಾಚಕ ವಿಶೇಷಣ | |
(3) | ಗುಣವಾಚಕ ವಿಶೇಷಣ | |
(4) | ನಿಶ್ಚಿತ ಸಂಖ್ಯಾ ವಾಚಕ ವಿಶೇಷಣ |
ಸರಿ ಉತ್ತರ
(1) ಪರಿಮಾಣ ವಾಚಕ ವಿಶೇಷಣ
46. | ದ್ವಿ + ಪದಿ = ದ್ವಿಪದಿ ಎಂಬುದು ____________ | |
(1) | ಅಂಶಿ ಸಮಾಸ | |
(2) | ಕರ್ಮಧಾರೆಯ | |
(3) | ಗಮಕ ಸಮಾಸ | |
(4) | ದ್ವಿಗು ಸಮಾಸ |
ಸರಿ ಉತ್ತರ
(4) ದ್ವಿಗು ಸಮಾಸ
47. | ‘ಆನೆ’ ಪದದಲ್ಲಿ ಇರುವ ಸ್ವರಗಳು ____________ | |
(1) | ಒಂದು | |
(2) | ಎರಡು | |
(3) | ನಾಲ್ಕು | |
(4) | ಮೂರು |
ಸರಿ ಉತ್ತರ
(2) ಎರಡು
48. | ‘ಹಾಲು ಕಂಡಲ್ಲಿ ಬೆಕ್ಕು, ಕೂಳು ಕಂಡಲ್ಲಿ ನಾಯಿ’ ಇದೊಂದು ____________ | |
(1) | ಪಡೆನುಡಿ | |
(2) | ಒರಟು ನುಡಿ | |
(3) | ಒಗಟು ನುಡಿ | |
(4) | ಗಾದೆ ಮಾತು |
ಸರಿ ಉತ್ತರ
(4) ಗಾದೆ ಮಾತು
49. | ಗುಂಪಿನಲ್ಲಿರುವ ಬಿಡಿಸಲಾರದ ಪದ ____________ | |
(1) | ಅಕ್ಷರ | |
(2) | ಅಸುರ | |
(3) | ಅಮರ | |
(4) | ಅರಸ |
ಸರಿ ಉತ್ತರ
(4) ಅರಸ
50. | ‘ತುದಿನಾಲಗೆ’ ಈ ಸಮಾಸಪದದ ವಿಗ್ರಹವಾಕ್ಯ ____________. | |
(1) | ತುದಿ + ನಾಲಗೆ | |
(2) | ನಾಲಗೆಯ + ತುದಿ | |
(3) | ತುದಿಯ + ನಾಲಗೆ | |
(4) | ತುದಿಯದಾದ + ನಾಲಗೆ |
ಸರಿ ಉತ್ತರ
(2) ನಾಲಗೆಯ + ತುದಿ
51. | ‘ಶುನಕ’ ಪದದ ತದ್ಭವ ರೂಪ ____________ | |
(1) | ಸೊಣಗ | |
(2) | ಶೌನಕ | |
(3) | ಶುನಿ | |
(4) | ಯಾವುದೂ ಅಲ್ಲ |
ಸರಿ ಉತ್ತರ
(1) ಸೊಣಗ
52. | ‘ನಿಲ್ಲು, ಮಿಸುಕಾಡಬೇಡ’ ಇಲ್ಲಿನ ಕ್ರಿಯಾಪದದ ಸ್ವರೂಪ ____________ | |
(1) | ವಿದ್ಯರ್ಥಕ | |
(2) | ನಿಷೇಧಾರ್ಥಕ | |
(3) | ಸಾಮಾನ್ಯ ರೂಪ | |
(4) | ಸಂಬಂಧಾರ್ಥ |
ಸರಿ ಉತ್ತರ
(1) ವಿದ್ಯರ್ಥಕ
53. | ‘ಬೆಳ್ಳಿ ಮೋಡವೆ ಎಲ್ಲ ಓಡುವೆ ನನ್ನ ಬಳಿಗೇ ನಲಿದು ಬಾ’ ಇದರ ಲಯ ____________ | |
(1) | ಮಂದಾನಿಲ | |
(2) | ಭಾಮಿನಿ | |
(3) | ಲಲಿತ | |
(4) | ವಾರ್ಧಕ |
ಸರಿ ಉತ್ತರ
(2) ಭಾಮಿನಿ
54. | ತೃತೀಯಾ ವಿಭಕ್ತಿಯು ____________ ಕಾರಕ. | |
(1) | ಕರ್ಮ | |
(2) | ಕರಣ | |
(3) | ಸಂಪ್ರದಾನ | |
(4) | ಅಪಾದಾನ |
ಸರಿ ಉತ್ತರ
(2) ಕರಣ
55. | ‘ರತ್ನಾಕರ’ ಪದದ ಸಮಾನಾರ್ಥಕಗಳು ____________ | |
(1) | ತಟಾಕ, ಸರೋವರ | |
(2) | ಸಾಗರ, ಸಮುದ್ರ | |
(3) | ನದಿ, ತೊರೆ | |
(4) | ಸೂರ್ಯ, ಚಂದ್ರ |
ಸರಿ ಉತ್ತರ
(2) ಸಾಗರ, ಸಮುದ್ರ
56. | ‘ತರಕ್ಷು’ ಪದದ ಸಮಾನಾರ್ಥಕ ____________ | |
(1) | ಹುಲಿ | |
(2) | ಜಿಂಕೆ | |
(3) | ಚಿರತೆ | |
(4) | ಮೇಕೆ |
ಸರಿ ಉತ್ತರ
(1) ಹುಲಿ
57. | ‘ಮಂಗಳ ಮುಖಿ’ ಎಂಬುದರ ಗುಣವಾಚಕ ____________. | |
(1) | ಶುಕ್ರ | |
(2) | ಮಂಗಳ | |
(3) | ಅಂಗಳ | |
(4) | ಲಿಂಗ |
ಸರಿ ಉತ್ತರ
(2) ಮಂಗಳ
58. | ದಡ್ಡಕ್ಕರ ಎಂದರೆ ಅದು ____________ ಆಗಿರುತ್ತದೆ. | |
(1) | ದಪ್ಪ ಅಕ್ಷರ | |
(2) | ಒತ್ತಕ್ಷರ | |
(3) | ಮಹಾಪ್ರಾಣ | |
(4) | ದೀರ್ಘಾಕ್ಷರ |
ಸರಿ ಉತ್ತರ
(2) ಒತ್ತಕ್ಷರ
59. | ‘ಮಾವನ ಜನ್ಮ ದೊಡ್ಡದು ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ’. ಹೀಗೆಂದವರು ____________ | |
(1) | ಪುರಂದರದಾಸ | |
(2) | ಕನಕದಾಸ | |
(3) | ಜಗನ್ನಾಥದಾಸ | |
(4) | ವಿಜಯದಾಸ |
ಸರಿ ಉತ್ತರ
(1) ಪುರಂದರದಾಸ
60. | ____________ ಅಕ್ಕರ ಪಲ್ಲಟಕ್ಕೆ ಉದಾಹರಣೆ ಅಲ್ಲ. | |
(1) | ಅಸಗ | |
(2) | ಕಾದಗ | |
(3) | ಅರಲ್ | |
(4) | ಮರಲ್ |
ಸರಿ ಉತ್ತರ
(2) ಕಾದಗ
61. | ____________ಅರ್ಥ-ಸಂಕೋಚಗೊಂಡಿರುವುದಕ್ಕೆ ಉದಾಹರಣೆ ಅಲ್ಲ. | |
(1) | ಅಣಕ | |
(2) | ಕಬ್ಬಿಣ | |
(3) | ಎಣ್ಣೆ | |
(4) | ಮೀನ್ |
ಸರಿ ಉತ್ತರ
(3) ಎಣ್ಣೆ
62. | ‘ಶಿಖರ’ ಎಂಬುದು ____________ | |
(1) | ನಾಮಪದ | |
(2) | ಕ್ರಿಯಾಪದ | |
(3) | ವಿಶೇಷಣ | |
(4) | ಧಾತು |
ಸರಿ ಉತ್ತರ
(1) ನಾಮಪದ
63. | ಕರ್ನಾಟಕದಲ್ಲಿ ದೊರೆ ಅಶೋಕನ ‘ಮಸ್ಕಿ’ ಶಾಸನವನ್ನು ____________ ಲಿಪಿಯಲ್ಲಿ ಬರೆಲಾಗಿದೆ. | |
(1) | ಸಂಸ್ಕೃತ | |
(2) | ತೆಲುಗು | |
(3) | ಕನ್ನಡ | |
(4) | ಬ್ರಾಹ್ಮೀ |
ಸರಿ ಉತ್ತರ
(4) ಬ್ರಾಹ್ಮೀ
64. | ತಂದೆಗೂ ಗುರುವಿಗೂ ಒಂದು ವರ್ಷದ ಅಂತರವುಂಟು | |
ತಂದೆ ತೋರುವನು ಸದ್ಗುರುವ, ಗುರುರಾಯ | ||
ಬಂಧನವ ಕಳೆವ, ಸರ್ವಜ್ಞ ॥ | ||
ಈ ಪದ್ಯವು ____________ ಗೆ ಉತ್ತಮ ಉದಾಹರಣೆಯಾಗಿದೆ. | ||
(1) | ಕಂದ ಪದ್ಯ | |
(2) | ಭಾಮಿನೀ ಷಟ್ಪದಿ | |
(3) | ಸಾಂಗತ್ಯ ಪದ್ಯ | |
(4) | ತ್ರಿಪದಿ ಪದ್ಯ |
ಸರಿ ಉತ್ತರ
(4) ತ್ರಿಪದಿ ಪದ್ಯ
65. | ‘ಹಣ್ಣುಗಳಲ್ಲಿ ಮಾವಿನ ಹಣ್ಣೇ ಶ್ರೇಷ್ಠ’ – ಇಲ್ಲಿ ಹಣ್ಣುಗಳಲ್ಲಿ ಎಂಬುದು ____________ ವಿಭಕ್ತಿ. | |
(1) | ಸಂಬೋಧನಾ ವಿಭಕ್ತಿ | |
(2) | ಪ್ರಥಮಾ ವಿಭಕ್ತಿ | |
(3) | ಚತುರ್ಥಿ ವಿಭಕ್ತಿ | |
(4) | ಸಪ್ತಮೀ ವಿಭಕ್ತಿ |
ಸರಿ ಉತ್ತರ
(4) ಸಪ್ತಮೀ ವಿಭಕ್ತಿ
ಸೂಚನೆಗಳು: ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66- 69) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.
ಉದಾಹರಣೆ : | ||
(1) | ದಾರಿ | |
(2) | ಹಾದಿ | |
(3) | ರಸ್ತೆ | |
(4) | ಕಾಡು |
ಈ ನಾಲ್ಕು ಪದಗಳಲ್ಲಿ ‘‘ರಸ್ತೆ’’ ಮಾತ್ರ ಅನ್ಯಭಾಷೆಯಿಂದ ಸ್ವೀಕೃತವಾದ ಪದವಾಗಿದೆ. ಆದುದರಿಂದ ಇಲ್ಲಿ (3)ಅನ್ನು ಗುರುತಿಸಬೇಕು.
66. | ||
(1) | ದೀವಿಗೆ | |
(2) | ಮಲ್ಲಿಗೆ | |
(3) | ಬಸದಿ | |
(4) | ಪ್ರಣತಿ |
ಸರಿ ಉತ್ತರ
(4) ಪ್ರಣತಿ
67. | ||
(1) | ಜಮೀನು | |
(2) | ಕೃಷಿ | |
(3) | ಬೇಸಾಯ | |
(4) | ಆರಂಬ |
ಸರಿ ಉತ್ತರ
(1) ಜಮೀನು
68. | ||
(1) | ಕೆನ್ನೀರು | |
(2) | ಬೆನ್ನೀರು | |
(3) | ಬೆಚ್ಚಗೆ | |
(4) | ರೈತ |
ಸರಿ ಉತ್ತರ
(4) ರೈತ
69. | ||
(1) | ಸಾರು | |
(2) | ಹುಳಿ | |
(3) | ಚಪಾತಿ | |
(4) | ಹುಲ್ಲು |
ಸರಿ ಉತ್ತರ
(3) ಚಪಾತಿ
ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 70 – 72) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ, ಆಗ (4)ಅನ್ನು ಗುರುತಿಸಿ.
ಉದಾಹರಣೆ : | ||
ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು. | ||
(1) | ಹಾಡಿದರು | |
(2) | ಆಲಿಸಿದರು | |
(3) | ಮಾಡಿಸಿದರು | |
(4) | ಆಲಿಸಿದರು |
ಇಲ್ಲಿ ‘‘ಆಡಿದರು’’ ಎಂಬುದು ದೋಷವಾಗಿದ್ದು ‘‘ಹಾಡಿದರು’’ ಎಂದಿರಬೇಕು. ಆದುದರಿಂದ (1)ಅನ್ನು ಗುರುತಿಸಬೇಕು.
70. | ರಾಮನಿಗೂ ಮತ್ತು ವಾಲಿಗೂ ಮನಸ್ಥಾಪವಿತ್ತು. | |
(1) | ಮನಸ್ಥ್ಯಾಪ | |
(2) | ಮನಸ್ತ್ಯಾಪ | |
(3) | ಮನಸ್ತಾಪ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(3) ಮನಸ್ತಾಪ
71. | ಲೋಕಾಯುಕ್ತ ದಳದವರು ತಪ್ಪಿತಸ್ಥರನ್ನು ಕೂಲಂಕಶವಾಗಿ ವಿಚಾರಿಸಿದರು. | |
(1) | ಕೂಲಂಕುಷವಾಗಿ | |
(2) | ಕೂಲಂಕಷವಾಗಿ | |
(3) | ಕುಲಂಕಶವಾಗಿ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(2) ಕೂಲಂಕಷವಾಗಿ
72. | ಪ್ರಾಚೀನ ಕಾಲದಲ್ಲಿ ಕರ್ನಾಟಕ ರಾಜ್ಯವನ್ನು ಅನೇಕ ಚಕ್ರಾಧಿಪತ್ಯಗಳು ಆಳಿಕೊಂಡು ಬಂದಿದ್ದವು. | |
(1) | ಚಕ್ರಧಿಪತ್ಯಗಳು | |
(2) | ಛಕ್ರಾದಿಪತ್ಯಗಳು | |
(3) | ಚಕ್ರಾದಿಪತ್ಯಗಳು | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(4) ಸುಧಾರಣೆ ಬೇಕಿಲ್ಲ
ಸೂಚನೆಗಳು: ಕೆಳಗಿನವುಗಳಲ್ಲಿ (ಪ್ರಶ್ನೆ ಸಂಖ್ಯೆ 73- 77) ಗೆರೆಹಾಕಿದ ಭಾಗಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.
ಉದಾಹರಣೆ : | ||
ಕುವೆಂಪು ಚೋಮನದುಡಿ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. | ||
(1) | ಬೆಟ್ಟದ ಜೀವ | |
(2) | ಕಾನೂರ ಹೆಗ್ಗಡತಿ | |
(3) | ಚಿಕ್ಕವೀರ ರಾಜೇಂದ್ರ | |
(4) | ದುರ್ಗಾಸ್ತಮಾನ |
ಇಲ್ಲಿ ‘‘ಕಾನೂರ ಹೆಗ್ಗಡತಿ’ ಸರಿಯಾದ ಉತ್ತರ ಆದುದರಿಂದ (2)ಅನ್ನು ಗುರುತಿಸಬೇಕು.
73. | ‘ಯಮಳ ಪ್ರಶ್ನೆ’ ಇದು ಜಿ.ಎಸ್.ಶಿವರುದ್ರಪ್ಪನವರ ಕೃತಿ. | |
(1) | ಪಿ. ಲಂಕೇಶ್ರ | |
(2) | ಶಿವರಾಮ ಕಾರಂತರ | |
(3) | ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ | |
(4) | ಎಂ. ಗೋವಿಂದ ಪೈರ |
ಸರಿ ಉತ್ತರ
(3) ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ
74. | ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದು ನುಡಿದವರು ದೇವರ ದಾಸಿಮಯ್ಯ. | |
(1) | ಬಸವಣ್ಣ | |
(2) | ಸಿದ್ಧರಾಮ | |
(3) | ಅಲ್ಲಮಪ್ರಭುದೇವ | |
(4) | ಅಂಬಿಗರ ಚೌಡಯ್ಯ |
ಸರಿ ಉತ್ತರ
(3) ಅಲ್ಲಮಪ್ರಭುದೇವ
75. | ತ್ರಿಷಷ್ಠಿ ಲಕ್ಷಣ ಮಹಾಪುರಾಣದ ಇನ್ನೊಂದು ಹೆಸರೆಂದರೆ ಆದಿ ಪುರಾಣ. | |
(1) | ತಿಲಕಾಷ್ಠ ಮಹಿಷ ಬಂಧನ | |
(2) | ಮಹಾ ಪುರಾಣ | |
(3) | ಚಾವುಂಡರಾಯ ಪುರಾಣ | |
(4) | ಉತ್ತರ ಪುರಾಣ |
ಸರಿ ಉತ್ತರ
(3) ಚಾವುಂಡರಾಯ ಪುರಾಣ
76. | ಧಾರವಾಡವು ವಿದ್ಯಾನಗರಿ ಎಂದು ಪ್ರಸಿದ್ಧವಾಗಿದೆ. | |
(1) | ಧಾರಾ ನಗರಿ | |
(2) | ಮಂಜಿನನಗರಿ | |
(3) | ಕೆರೆಗಳ ನಗರಿ | |
(4) | ಕ್ರೀಡಾ ನಗರಿ |
ಸರಿ ಉತ್ತರ
(1) ಧಾರಾ ನಗರಿ
77. | ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕುವೆಂಪುರವರ ಆತ್ಮಕಥೆ | |
(1) | ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರ | |
(2) | ಶಿವರಾಮ ಕಾರಂತರ | |
(3) | ದ.ರಾ.ಬೇಂದ್ರಯವರ | |
(4) | ಕೆ.ವಿ. ತಿರುಮಲೇಶ್ರ |
ಸರಿ ಉತ್ತರ
(2) ಶಿವರಾಮ ಕಾರಂತರ
ಸೂಚನೆಗಳು: ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆಯ 78-82) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿ.
ಉದಾಹರಣೆ : | ||
ವಿದ್ಯಾರ್ಥಿಗಳು | ||
P | ||
ಜಾಸ್ತಿಯಾಗಿದೆ | ||
Q | ||
ಆಕರ್ಷಿತರಾಗುತ್ತಿರುವುದು | ||
R | ||
ದುರಭ್ಯಾಸಗಳ ಕಡೆಗೆ | ||
S | ||
(1) | P S R Q | |
(2) | Q R S P | |
(3) | S Q R P | |
(4) | Q S R P |
ಇಲ್ಲಿ P S R Q ಎಂಬುದು ಸರಿಯಾದ ಜೋಡಣೆಯ ಕ್ರಮ. ಆದುದರಿಂದ ಇಲ್ಲಿ (1)ಅನ್ನು ಗುರುತಿಸಬೇಕು.
78. | ಬೋಸ್ ರನ್ನು ಭೌತಶಾಸ್ತ್ರ ವಿಭಾಗವನ್ನು | |
P | ||
ಪ್ರಾರಂಭವಾದಾಗ ಅದರ ಕುಲಪತಿಗಳಾಗಿದ್ದ ಡಾ. ಹರ್ಟೋಗ್ | ||
Q | ||
1921ರಲ್ಲಿ ಢಾಕಾ ವಿವಿ | ||
R | ||
ಸೇರುವಂತೆ ಆಮಂತ್ರಿಸಿದರು | ||
S | ||
(1) | Q R P S | |
(2) | R Q S P | |
(3) | R P Q S | |
(4) | R Q P S |
ಸರಿ ಉತ್ತರ
(4) R Q P S
79. | ಅಪಾರ ಸಂಪತ್ತನ್ನು | |
P | ||
ತೋರುವ ಮಾನವೀಯತೆ | ||
Q | ||
ಅವರನ್ನು ಬೇರೆಯವರಿಗಿಂತ ಭಿನ್ನವಾಗಿಸುತ್ತದೆ, | ||
R | ||
ಲೋಕ ಕಲ್ಯಾಣಕ್ಕಾಗಿ ವಿನಿಯೋಗಿಸುವಲ್ಲಿ. | ||
S | ||
(1) | P Q S R | |
(2) | P R S Q | |
(3) | P Q R S | |
(4) | P S Q R |
ಸರಿ ಉತ್ತರ
(4) P S Q R
80. | ಸಾಮಾಜಿಕ ಮಾಧ್ಯಮಗಳು | |
P | ||
ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ | ||
Q | ||
ಯುವ ಜನತೆಯನ್ನು | ||
R | ||
ಅತಿಯಾಗಿ ಆಕರ್ಷಿಸಿರುವ ಕಾರಣ | ||
S | ||
(1) | P R S Q | |
(2) | R S P Q | |
(3) | R P S Q | |
(4) | S R P Q |
ಸರಿ ಉತ್ತರ
(1) P R S Q
81. | ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ | |
P | ||
ಸಂವರ್ಧನೆಗಾಗಿ ಶ್ರಮಿಸು | ||
Q | ||
ಸಂಸ್ಕೃತಿಗಳ ಸಂರಕ್ಷಣೆ ಮತ್ತು | ||
R | ||
ಕನ್ನಡಸಾಹಿತ್ಯ ಪರಿಷತ್ತು ನಾಡುನುಡಿ | ||
S | ||
(1) | P Q R S | |
(2) | Q R S P | |
(3) | R S P Q | |
(4) | S R Q P |
ಸರಿ ಉತ್ತರ
(4) S R Q P
82. | ಕನಕದಾಸರ ಆದ್ಭುತವಾದ ಪ್ರತಿಭಾ | |
P | ||
ರಾಮಧಾನ್ಯ ಚರಿತೆಯು | ||
Q | ||
ಮುನ್ನಡೆದುಕೊಂಡು ಹೋಗುತ್ತದೆ, | ||
R | ||
ಶಕ್ತಿಯಿಂದ ಪಾಂಡಿತ್ಯ ಪೂರ್ಣತೆಯಿಂದ | ||
S | ||
(1) | Q S P R | |
(2) | Q P S R | |
(3) | P Q S R | |
(4) | Q S R P |
ಸರಿ ಉತ್ತರ
(2) Q P S R
83. | ಕರ್ಮಧಾರಯ ಸಮಾಸದ ಭೇದವೆಂದು ಕೇಶಿರಾಜ ಹೇಳಿರುವ ಸಮಾಸ ಯಾವುದು? | |
(1) | ಅಂಶಿ | |
(2) | ಬಹುವ್ರೀಹಿ | |
(3) | ದ್ವಿಗು | |
(4) | ಗಮಕ |
ಸರಿ ಉತ್ತರ
(4) ಗಮಕ
84. | ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡ ಕವಿ ಯಾರು? | |
(1) | ಚೆನ್ನವೀರ ಕಣವಿ | |
(2) | ಕೆ.ಶಿವರಾಮ ಕಾರಂತ | |
(3) | ಕುವೆಂಪು | |
(4) | ಎಸ್.ಎಸ್.ಭೂಸನೂರಮಠ |
ಸರಿ ಉತ್ತರ
(3) ಕುವೆಂಪು
85. | ಕೃದಂತಗಳಲ್ಲಿ ಎಷ್ಟು ವಿಧಗಳಿವೆ? | |
(1) | ಎರಡು | |
(2) | ಮೂರು | |
(3) | ನಾಲ್ಕು | |
(4) | ಐದು |
ಸರಿ ಉತ್ತರ
(2) ಮೂರು
86. | ಕನ್ನಡದ ವರ್ಣಮಾಲೆಯಲ್ಲಿರುವ ಸಂಧ್ಯಾಕ್ಷರಗಳು ಯಾವುವು? | |
(1) | ಖು ಖೂ | |
(2) | ಐ ಔ | |
(3) | ಅಂ ಅಃ | |
(4) | ಕ್ಷ ಳ |
ಸರಿ ಉತ್ತರ
(2) ಐ ಔ
ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 87 – 92) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂಬ ನಾಲ್ಕನೇ (4) ಭಾಗವನ್ನು ಗುರುತಿಸಿ.
ಉದಾಹರಣೆ : | ||
ವಿದ್ಯಾರ್ಥಿಗಳು | ||
(1) | ||
ಶಾಲೆ | ||
(2) | ||
ಮುಗಿಸಿಕೊಂಡು ಬಂದರು. | ||
(3) | ||
ತಪ್ಪಿಲ್ಲ | ||
(4) |
ಇಲ್ಲಿ ಭಾಗ (2)ರಲ್ಲಿ ‘‘ಶಾಲೆಯನ್ನು’’ ಎಂದಿರಬೇಕಾಗಿತ್ತು. ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ (2)ಅನ್ನು ಗುರುತಿಸಬೇಕು.
87. | ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವು | |
(1) | ||
ಅಲವು ಭಾಗಗಳಲ್ಲಿ | ||
(2) | ||
ಹರಿದು ಹಂಚಿ ಹೋಗಿದ್ದಿತು. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(2)
88. | ವಿದ್ಯಾರ್ಥಿಗಳು | |
(1) | ||
ಗುರುಗಳಿಗೆ | ||
(2) | ||
ವಿದೇಯರಾಗಿದ್ದಾರೆ. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(3)
89. | ಹೆತ್ತ ತಾಯಿ | |
(1) | ||
ಹೊತ್ತ ಭೂಮಿ | ||
(2) | ||
ಸ್ವರ್ಗಕ್ಕೆ ಮಿಗಿಲು. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(3)
90. | ನಿಸ್ವಾರ್ಥತೆಗಾಗಿ ಬದುಕಿದರೆ | |
(1) | ||
ನಮ್ಮ ಬದುಕು | ||
(2) | ||
ಹಸನಾಗುತ್ತದೆ. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(1)
91. | ಯಾವುದೇ ರಾಜ್ಯಕ್ಕೆ | |
(1) | ||
ಹಲವಾರು ಮಾತೃಭಾಷೆಯುಳ್ಳ | ||
(2) | ||
ಜನರಿರುತ್ತಾರೆ. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(1)
92. | ರಮೇಶನು ಸರ್ಕಾರಿ ಕೆಲಸಕ್ಕೆ | |
(1) | ||
ಸೋಮವಾರ | ||
(2) | ||
ಪೂವಾಣ್ಹ ಸೇರಿಕೊಂಡನು. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(3)
93. | ಈ ಕೆಳಗಿನವರಲ್ಲಿ ‘ಕನ್ನಡದ ಕಣ್ವ’ ಎಂಬ ಬಿರುದಾಂಕಿತರು ಯಾರು? | |
(1) | ತೀ.ನಂ.ಶ್ರೀ | |
(2) | ಬಿ.ಎಂ.ಶ್ರೀ | |
(3) | ರಂ.ಶ್ರೀ. ಮುಗಳಿ | |
(4) | ಮಧುರ ಚೆನ್ನ |
ಸರಿ ಉತ್ತರ
(2) ಬಿ.ಎಂ.ಶ್ರೀ
94. | ಶ್ರೀ ಪಾದರಾಜರ ಅಂಕಿತವೇನು? | |
(1) | ಗೋಪಾಲ ವಿಠಲ | |
(2) | ಪುರಂದರ ವಿಠಲ | |
(3) | ಕೃಷ್ಣ ವಿಠಲ | |
(4) | ರಂಗ ವಿಠಲ |
ಸರಿ ಉತ್ತರ
(4) ರಂಗ ವಿಠಲ
95. | ಪಟ್ಟಿ Iರಲ್ಲಿನ ಕವಿಗಳೊಂದಿಗೆ ಪಟ್ಟಿ IIರಲ್ಲಿನ ದೊರೆಗಳನ್ನು ಹೊಂದಿಸಿರಿ: |
ಪಟ್ಟಿ I (ಕವಿಗಳು) | ಪಟ್ಟಿ II (ದೊರೆಗಳು) | |||
A. | ಪಂಪ | I. | ತೈಲಪ | |
B. | ಪೊನ್ನ | II. | ಅರಿಕೇಸರಿ | |
C. | ರನ್ನ | III. | ಸತ್ಯಾಶ್ರಯ | |
D. | ಚಾವುಂಡರಾಯ | IV. | ರಾಚಮಲ್ಲ | |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
A | B | C | D | ||
(1) | I | II | III | IV | |
(2) | II | I | III | IV | |
(3) | III | IV | I | II | |
(4) | III | IV | II | I |
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
96. | ಈ ಕೆಳಗಿನವರಲ್ಲಿ ವಚನ ಪಿತಾಮಹರು ಯಾರು? | |
(1) | ಪಂಜೆ ಮಂಗೇಶರಾಯರು | |
(2) | ಬೆಟಗೇರಿ ಕೃಷ್ಣಶರ್ಮರು | |
(3) | ಪು.ತಿ. ನರಸಿಂಹಾಚಾರ್ಯರು | |
(4) | ಫ.ಗು. ಹಳಕಟ್ಟಿಯವರು |
ಸರಿ ಉತ್ತರ
(4) ಫ.ಗು. ಹಳಕಟ್ಟಿಯವರು
ಸೂಚನೆಗಳು: ಈ ಕೆಳಗೆ (ಪ್ರಶ್ನೆ 97-100) P Q R S ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.
ಉದಾಹರಣೆ : | ||
P. | ಪುಲಿಗೆರೆ, ಕಿಸುವೊಳಲ್, ಕೊಪ್ಪಳ ಮತ್ತು ಒಕ್ಕುಂದ ಇವೇ ಆ ನಾಲ್ಕು ನಗರಗಳು. | |
Q. | ಒಂಭತ್ತನೆಯ ಶತಮಾನದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು. | |
R. | ಆ ನಾಡಿನಲ್ಲಿನ ನಾಲ್ಕು ನಗರಗಳ ಮಧ್ಯದ ಕನ್ನಡವೇ ಕನ್ನಡದ ತಿರುಳೆಂದು ಕವಿ ಹೇಳಿದ್ದಾನೆ. | |
S. | ಆ ನಾಡಿನಲ್ಲಿ ವಾಸವಾಗಿದ್ದ ಜನತೆಯ ಉನ್ನತ ಸಂಸ್ಕೃತಿಯಿಂದಾಗಿ ಇಡೀ ವಿಶ್ವದಲ್ಲಿ ಕನ್ನಡ ನಾಡು ಒಂದು ವಿಶೇಷ ಸ್ಥಾನವನ್ನು ಪಡೆದಿತ್ತು. | |
(1) | Q S R P | |
(2) | S R Q P | |
(3) | P Q R S | |
(4) | R P Q S |
ಇಲ್ಲಿ ಸರಿಯಾದ ಉತ್ತರ Q S R P ಆದುದರಿಂದ (1)ಅನ್ನು ಗುರುತಿಸಬೇಕು.
97. | P. | ಪೃಥ್ವಿ, ಗಂಧವತೀ ಎನ್ನುವ ಮಾತನ್ನು ಕರ್ನಾಟಕ ಸತ್ಯ ಮಾಡಿ ತೋರಿಸಿದೆ. |
Q. | ಕನ್ನಡ ನುಡಿಯ ಕಂಪು, ಕನ್ನಡಿಗರ ಸಂಸ್ಕೃತಿಯ ಪೆಂಪು, ಭಾರತದಲ್ಲಿ ಬಹುದೂರದವರೆಗೆ ಹಬ್ಬಿಕೊಂಡಿದ್ದವು. | |
R. | ಇಲ್ಲಿಯ ನೆಲ ಮಾತ್ರ ಸುಗಂಧ ಸೂಸಲಿಲ್ಲ ಇಲ್ಲಿಯ ಭಾಷೆ, ಸಂಸ್ಕೃತಿಗಳು ಕೂಡಾ ಸುಗಂಧ ಸೂಸಿವೆ. | |
S. | ಕನ್ನಡ ನಾಡು ಪರಿಮಳಯುಕ್ತವಾದುದು. ಅದನ್ನು ಕಮ್ಮಿತ್ತು ನಾಡು, ಕಂಪು ಬೀರುವ ನಾಡು ಎಂದು ವರ್ಣಿಸಿಕೊಂಡು ಬರಲಾಗಿದೆ. | |
(1) | S Q R P | |
(2) | R S P Q | |
(3) | P R Q S | |
(4) | Q P S R |
ಸರಿ ಉತ್ತರ
(1) S Q R P
98. | P. | ಅನ್ನವನ್ನು ತಿನ್ನುವ ತಟ್ಟೆ ಸುಂದರವಾಗಿರಬೇಕು. ಕಟ್ಟಿದ ಮನೆ ಅಲಂಕೃತವಾಗಿರಬೇಕು. |
Q. | ಅಂದರೆ ಸೌಂದರ್ಯದ ಆಕಾಂಕ್ಷೆ ಆತನ ನಿತ್ಯ ಜೀವನದಲ್ಲಿ ಬೆಳೆಯಿತು. | |
R. | ಇವುಗಳಿಂದ ತೃಪ್ತವಾಗದ ಇನ್ನೇನನ್ನೋ ಆತನ ಮನೋಮಯ, ಪ್ರಾಣಮಯ, ಆನಂದಮಯ ಆಕಾಂಕ್ಷೆಗಳು ಬಯಸಿದವು. | |
S. | ಆಹಾರವನ್ನು ತಿಂದು, ಮನೆಯನ್ನು ಕಟ್ಟಿ ಬಾಳುವ ಅನ್ನಮಯ ವ್ಯಾಪಾರದಿಂದ ಮಾನವನಿಗೆ ಸಂಪೂರ್ಣ ತೃಪ್ತಿ ಲಭಿಸಲಿಲ್ಲ. | |
(1) | Q P R S | |
(2) | S R P Q | |
(3) | P Q S R | |
(4) | R S Q P |
ಸರಿ ಉತ್ತರ
(2) S R P Q
99. | P. | ಬೇಸಾಯಕ್ಕೆ ಜೊತೆಯಾಗಿ, ಆಸರೆಯಾಗಿ ರಾಟೆಯು ಬೇಸಾಯಕ್ಕೆ ಒಂದು ಗೌರವ ಕೊಟ್ಟಿತು. |
Q. | ರಾಟೆಯೇ ಜನರ ಸರ್ವಸ್ವ. ಅದು ಮಾಯವಾದಾಗಲೇ ಜನರ ಸ್ವಾತಂತ್ರ್ಯ ಮಾಯವಾಯಿತು. | |
R. | ಏಳು ಸಾವಿರ ಹಳ್ಳಿಗಳು ಅದರಿಂದ ಸ್ವಸಂಪೂರ್ಣವಾಗಿದ್ದವು. ರಾಟೆ ಹೋದಾಗ ಅದರೊಡನೆ ಕೋಟಿ ವಿದ್ಯೆ ಹೋದವು. | |
S. | ವಿಧವೆಯ ಗೆಳತಿ, ಹಸಿದವನಿಗೆ ಅನ್ನ, ಸೋಮಾರಿತನಕ್ಕೆ ಮದ್ದು ರಾಟೆ. ಗ್ರಾಮ ಜೀವನದ ತಿರುಗಾಲಿ. | |
(1) | Q P S R | |
(2) | S R Q P | |
(3) | R Q P S | |
(4) | P S R Q |
ಸರಿ ಉತ್ತರ
(1) Q P S R
100. | P. | ಪ್ರಾಣವನ್ನು ಅಲಕ್ಷಿಸಿ ಅವರೆಲ್ಲರೂ ಹೋರಾಡಿದರು. |
Q. | ಮೌಲ್ಯಾರಾಧನೆ ಎಂಬುದು ನಗೆಪಾಟಲಾಯಿತು. | |
R. | ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರುವುದೊಂದೇ ಎಲ್ಲರ ಗುರಿಯಾಗಿತ್ತು. | |
S. | ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಹಾಗೆ ಒಂದು ಗುರಿ ಇರಲಿಲ್ಲ. | |
(1) | Q S P R | |
(2) | S P Q R | |
(3) | R P S Q | |
(4) | P S Q R |
ಸರಿ ಉತ್ತರ
(3) R P S Q
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ