WhatsApp Group Join Now
Telegram Group Join Now

10ನೇ ತರಗತಿ ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ನೋಟ್ಸ್‌ | 10th Standard Social Science Chapter 4 Notes

10ನೇ ತರಗತಿ ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ನೋಟ್ಸ್‌,10th Class Social Science Chapter 4 Notes Kannada Kseeb Solution For Class 10 Social Science Chapter 4 Notes in Kannada Medium Karnatakadalli British Alvikeya Pratirodhagalu Hagu Mysurina Odeyaru Notes 2024 sslc social science chapter 4‌

10th social science chapter 4 Notes in Kannada

10th Standard Social Science Chapter 4 Notes

10th Class Social Science Chapter 4 Notes Question Answer

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.

1. ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಹೈದರ್ ಅಲಿ ಮತ್ತು ಬ್ರಿಟಿಷರ ನಡುವೆ ನಡೆಯಿತು.

2. ಎರಡನೆಯ ಆಂಗ್ಲೋ ಮೈಸೂರು ಯುದ್ಧವು ಮದ್ರಾಸ್ ಒಪ್ಪಂದದೊಂದಿಗೆ ಕೊನೆಗೊಂಡಿತು.

3. ಕಿತ್ತೂರು ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದಿದ್ದಳು.

4. ಕಿತ್ತೂರು ಚೆನ್ನಮ್ಮನ ಸಂಸ್ಥಾನದ ರಾಯಣ್ಣನ ಊರು ಸಂಗೊಳ್ಳಿ

5, ಸುರಪುರವು ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.

6.ಈಗಿನ ಬಾಗಲಕೋಟೆ ಜಿಲ್ಲೆಯ ಹಲಗಲಿ ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದಿದ್ದರು

7. ಅಮರ ಸುಳ್ಯ ಬಂಡಾಯವು ಮೂಲತಃ ರೈತ ಬಂಡಾಯ

10th Class Social Science Chapter 4 Mcq Questions

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ

1. ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?

  • ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು.
  • ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಆರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.
  • ಸೈನಿಕರನ್ನು ತನ್ನ ವಿಶ್ವಾಸಕ್ಕೆ ಪಡೆದುಕೊಳ್ಳುವಲ್ಲಿ ಸಫಲನಾದನು. • ಬಹುಬೇಗನೆ ನವಾಬ್ ಹೈದರಾಲಿಖಾನ್ ಎಂದೂ ಹೆಸರಾದನು.
  • ಶಸ್ತ್ರಗಳ ಉಪಯೋಗ ಮತ್ತು ಪ್ರಯೋಗಗಳಲ್ಲಿ ಖ್ಯಾತಿಗಳಿಸಿದನು.
  • ಚುರುಕಿನ ಸೈನಿಕ ಕಾರ್ಯಾಚರಣೆಗಳ ಮೂಲಕ ದಳವಾಯಿಗಳ ಬಲ ಕುಂದಿಸಿದನು ಮತ್ತು ಅರಸರಾಗಿದ್ದ ಕೃಷ್ಣರಾಜ ಒಡೆಯರವರನ್ನು ಮೂಲೆಗುಂಪಾಗಿಸಿ ಅಧಿಕಾರದ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿದನು

2. ಎರಡನೆಯ ಆಂಗ್ಲೋ-ಮೈಸೂರು ಯುದ್ಧದಿಂದ ಉಂಟಾದ ಪರಿಣಾಮಗಳಾವುವು?

ಟಿಪ್ಪು ಮಂಗಳೂರು ಮತ್ತು ಕರಾವಳಿ ತೀರಪ್ರದೇಶದ ಮೇಲೆ ಹತೋಟಿ ಸಾಧಿಸುವುದು ಸೂಕ್ತವೆಂದು ಯೋಚಿಸಿ ಮಂಗಳೂರಿನತ್ತ ಮುನ್ನಡೆದು ಬ್ರಿಟಿಷರ ಸೈನ್ಯವನ್ನು ಸೋಲಿಸಿದನು.

ಕೊನೆಗೆ 1784ರ ‘ಮಂಗಳೂರು ಒಪ್ಪಂದ’ದ ಮೂಲಕ ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.

3. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳು ಯಾವುವು?

  • ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು
  • ಮೂರು ಕೋಟಿ ರೂಪಾಯಿಗಳನ್ನು ಯುದ್ಧನಷ್ಟ ಭರ್ತಿಯಾಗಿ ಕೊಡುವುದು
  • ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು
  • ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು
  • ಇದರನ್ವಯ ಶ್ರೀರಂಗಪಟ್ಟಣದಿಂದ ಬ್ರಿಟಿಷರ ನೇತೃತ್ವದಲ್ಲಿನ ಸಂಘಟಿತ ಸೈನ್ಯ ಹಿಂತೆಗೆಯಿತು

4. ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧವು ಬ್ರಿಟಿಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು. ವಿಮರ್ಶಿಸಿ.

  • ಟಿಪ್ಪು ತನ್ನ ಸೈನ್ಯವನ್ನು ಹುರಿದುಂಬಿಸುತ ಹೋರಾಡಿ 1799ರಲ್ಲಿ ಹತನಾದನು. • ಆತನ ಮರಣ ಬ್ರಿಟಿಷರಿಗೆ ಇಡೀ ಭಾರತವೇ ತಮ್ಮ ಕೈವಶವಾದ ಸಂತೋಷವನ್ನು ತಂದಿತು.
  • ನಂತರ ಬ್ರಿಟಿಷರು ಆತನ ಹತೋಟಿಯಲ್ಲಿದ್ದ ಭೌಗೋಳಿಕ ಪ್ರದೇಶಗಳನ್ನು ಮರಾಠರು ಮತ್ತು ನಿಜಾಮನೊಂದಿಗೆ ಹಂಚಿಕೊಂಡರು.
  • ಒಂದು ಸಣ್ಣ ಭೌಗೋಳಿಕ ಪ್ರದೇಶವು ಮೈಸೂರು ಒಡೆಯರ ರಾಜವಂಶದ ಪ್ರತಿನಿಧಿಗೆವರ್ಗಾಯಿಸಲ್ಪಟ್ಟಿತ್ತು.
  • ಈ ಪ್ರದೇಶ ತರುವಾಯ ಮೈಸೂರು ಸಂಸ್ಥಾನವೆಂದು ಹೆಸರಾಯಿತು.

5. ದೋಂಡಿಯಾ ವಾಫ್ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿಶ್ಲೇಷಿಸಿ.

  • ಇವನು ಒಂದು ಸೈನ್ಯವನ್ನು ಸಂಘಟಿಸಿ ಸೈನಿಕ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದನು. ಅವನು ಟಿಪ್ಪುವಿನ ಸೈನ್ಯದಲ್ಲಿದ್ದ ಅತೃಪ್ತ ಸೈನಿಕರು, ಅಧಿಕಾರದಿಂದ ಮುಕ್ತಗೊಳಿಸಲ್ಪಟ್ಟ ಪಾಳೆಯಗಾರರು ಮೊದಲಾದವರನ್ನು ಸಂಘಟಿಸಿ ಒಂದು ಸೈನ್ಯವನ್ನು ಸುಸಜ್ಜಿತಗೊಳಿಸಿ ಬಂಡಾಯದ ಬಾವುಟವನ್ನು ಹಾರಿಸಿದನು,
  • ಶಿವಮೊಗ್ಗ ಮತ್ತು ಬಿದನೂರಿನ ಕೋಟೆಗಳನ್ನು ವಶಪಡಿಸಿಕೊಂಡನು.
  • ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲ ಪ್ರಯತ್ನಗಳನ್ನು ನಡೆಸಿದನು. • ಗವರ್ನರ್ ಜನರಲ್ ನಾಗಿದ್ದ ಲಾರ್ಡ್ ವೆಲ್ಲೆಸ್ಲಿ ಬಂಡಾಯವನ್ನು ಹತ್ತಿಕ್ಕಲು ಪ್ರಾರಂಭಿಸಿದನು.
  • ದೋಂಡಿಯಾನ ನಿಯಂತ್ರಣದಲ್ಲಿದ್ದ ಶಿವಮೊಗ್ಗ, ಹೊನ್ನಾಳಿ, ಹರಿಹರ ಮೊದಲಾದವುಗಳ ಮೇಲೆ ಆಕ್ರಮಣ ನಡೆಸಿತು.
  • ದೋಂಡಿಯಾ ತನ್ನ ನೆಲೆಯನ್ನು ಕಳೆದುಕೊಂಡನು.
  • ಶಿಕಾರಿಪುರವನ್ನು ಬ್ರಿಟಿಷರು ವಶಪಡಿಸಿಕೊಂಡ ತರುವಾಯ ದೋಂಡಿಯಾ ನಿಜಾಮನ ಹತೋಟಿಯಲ್ಲಿದ್ದ ಗುತ್ತಿಯ ಕಡೆಗೆ ಪಲಾಯನಗೈದನು.
  • ಆಗ ನಿಜಾಮನು ಗುತ್ತಿಯನ್ನು ಮುತ್ತಿದಾಗ ಅನಿವಾರ್ಯವಿಲ್ಲದೆ ದೋಂಡಿಯಾ ಮರಾಠರ ಪ್ರದೇಶಕ್ಕೆ ಓಡಿಹೋದನು. ಮರಾಠ ಸೈನ್ಯ ಅವನನ್ನು ಸೋಲಿಸಿ ಅವನ ಶಸ್ತ್ರಾಸ್ತ್ರಗಳು, ಒಂಟೆ ಮತ್ತು ಆನೆಗಳನ್ನು ವಶಪಡಿಸಿಕೊಂಡರೂ ಧೃತಿಗೆಡದ ದೋಂಡಿಯಾ ತನ್ನ ಹೋರಾಟವನ್ನು ಮುಂದುವರಿಸಿದ

6. ಸಂಗೊಳ್ಳಿ ರಾಯಣ್ಣನು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ,

  • ಕಿತ್ತೂರಿನ ಚೆನ್ನಮ್ಮನೊಂದಿಗೆ ಸಂಗೊಳ್ಳಿಯ ರಾಯಣ್ಣನ ಹೆಸರು ಅಜರಾಮರ ಮತ್ತು ಆದರ್ಶಪ್ರಾಯವೆನಿಸಿದೆ. ರಾಯಣ್ಣ ವೀರಯೋಧ, ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದನು.
  • ಈತನ ಮನೆತನದವರು ಪರಂಪರೆಯಿಂದಲೂ ಸೈನಿಕರಾಗಿ ಸೇವೆಯನ್ನು ಸಲ್ಲಿಸಿದ್ದರು.
  • ರಾಯಣ್ಣ ಕಿತ್ತೂರಿನ ಯುದ್ಧದಲ್ಲಿ ಚೆನ್ನಮ್ಮನ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದನು.
  • ಯುದ್ಧದಲ್ಲಿ ಸೆರೆಯಾಳಾಗಿ ಬಂಧಿಸಲ್ಪಟ್ಟು ತರುವಾಯ ಬಿಡುಗಡೆಗೊಂಡನು.
  • ಅವನು ಸೈನಿಕರನ್ನು ಸಂಘಟಿಸುತ್ತಾ ಸ್ವಾತಂತ್ರ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡನು.
  • ಭೌಗೋಳಿಕವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಗುಪ್ತ ಸಭೆಗಳನ್ನು ನಡೆಸುವ ಮೂಲಕ ತನ್ನ ಮುಂದಿನ ಯೋಜನೆಗಳನ್ನು ರೂಪಿಸಿಕೊಂಡನು.
  • ತಕ್ಷಣದ ಅವನ ಉದ್ದೇಶಗಳು ಯಾವುದೆಂದರೆ ಬ್ರಿಟಿಷರ ಆಡಳಿತ ಯಂತ್ರದ ಪ್ರಮುಖ ಅಂಗವಾಗಿದ್ದ ತಾಲ್ಲೂಕು ಕಛೇರಿಗಳು ಮತ್ತು ಖಜಾನೆಗಳನ್ನು ಲೂಟಿ ಮಾಡುವುದು,
  • ಮೊದಲು ನಂದಗಡ ಮತ್ತು ಖಾನಾಪುರ ತರುವಾಯ ಸಂಪಗಾವಿ ಆತನ ಕಾರ್ಯಾಚರಣೆಗಳಸ್ಥಳಗಳಾದವು
  • ರಾಯಣ್ಣನನ್ನು ಸೆರೆಹಿಡಿಯಲು ಬ್ರಿಟಿಷರು ಒಂದು ಸಂಚನ್ನು ರೂಪಿಸಿದರು.
  • ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು.
  • ಮುಖ್ಯ ಅಪರಾಧಿ ಎಂದು ಘೋಷಿಸಿ ನಂದಗಡದಲ್ಲಿ ಅವನನ್ನು ಗಲ್ಲಿಗೇರಿಸಲಾಯಿತು.

7. ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪ್ರಾಂತ್ಯದಿಂದ ಪುಟ್ಟಬಸಪ್ಪನ ಪಾತ್ರವನ್ನು ವಿವರಿಸಿ,

  • ಪುಟ್ಟಬಸಪ್ಪ ಬಂಡುಕೋರರನ್ನು ಸಂಘಟಿಸಿ ಜನರನ್ನು ಸಂತೈಸಿದನು. • ಬಂಡುಕೋರರ ಸರ್ಕಾರ ಸ್ಥಾಪನೆಯ ನಂತರ ತಂಬಾಕು ಮತ್ತು ಉಪ್ಪಿನ ಮೇಲಿನ ಸುಂಕವನ್ನು ರದ್ದು ಮಾಡಲಾಗುವುದು ಎಂದೂ ಘೋಷಿಸಲಾಯಿತು.
  • ಶ್ರೀಮಂತ ರೈತರು, ಪಾರುಪತ್ತೆಗಾರರು, ಭೂಹಿಡುವಳಿದಾರರಿಗೆ ಆಶ್ವಾಸನೆಗಳನ್ನು ನೀಡಲಾಯಿತು.
  • ಬೆಳ್ಳಾರೆಯಲ್ಲಿದ್ದ ಸರ್ಕಾರಿ ಕಛೇರಿಯನ್ನು ವಶಪಡಿಸಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದ್ದು ಬಂಡಾಯದ ಪ್ರಥಮ ಹೆಜ್ಜೆಯಾಗಿದೆ.
  • ಸುಳ್ಯ ಮತ್ತು ಆಸುಪಾಸಿನಲ್ಲಿ ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಿದ್ದ ಅಮಲ್ದಾರನೋರ್ವನ ಹತ್ಯೆ ಪುಟ್ಟಬಸಪ್ಪನ ಜನಪ್ರಿಯತೆಯನ್ನು ಹೆಚ್ಚಿಸಿತ್ತು.
  • ಇದರಿಂದಾಗಿ ಬಂಡಾಯ ವ್ಯಾಪಕ ಪ್ರಚಾರ ಮತ್ತು ಬೆಂಬಲವನ್ನು ಪಡೆದುಕೊಂಡಿತು.

8. ಸುರಪುರದ ದಂಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ

  • ಸುರಪುರ ಈಗಿನ ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ.
  • ಮೊಘಲರ ಚಕ್ರವರ್ತಿ ಔರಂಗಜೇಬನ ಕಾಲದಿಂದಲೂ ಇದು ಪ್ರಾಮುಖ್ಯತೆಯನ್ನು ಪಡೆದಿತ್ತು.
  • ನಿಜಾಮ ಮತ್ತು ಮರಾಠರ ಪೇಳ್ವೆಗಳ ಕಾಲದಲ್ಲಿ ಇದು ಒಂದು ಸಾಮಂತ ರಾಜ್ಯವಾಗಿ ಪರಿಣಮಿಸಿತು.
  • ಕಾಲಾನಂತರ ಭೌಗೋಳಿಕ ಪ್ರದೇಶಗಳ ಮೇಲಿನ ಹತೋಟಿಯು ಕುಸಿದು ಕೇವಲ ಸೀಮಿತ ಭೌಗೋಳಿಕ ಪ್ರದೇಶದ ಮೇಲೆ ತನ್ನ ರಾಜಕೀಯ ಸ್ವಾಮ್ಯವನ್ನು ಇದು ಪಡೆದುಕೊಂಡಿತು.
  • ವೆಂಕಟಪ್ಪ ನಾಯಕನ ಕಾಲದಲ್ಲಿ ಸುರಪುರ ಬ್ರಿಟಿಷ್ ವಿರೋಧಿ ಬಂಡಾಯದ ಕಿಚ್ಚನ್ನು ಗಳಿಸಿಕೊಂಡಿತು.

10th Class Social Science Chapter 4 Question Answer

ಹೆಚ್ಚುವರಿ ಪ್ರಶ್ನೆಗಳು

1.ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ಏನೆಂದು ಚಿತ್ರಿಸಲಾಗಿದೆ?

ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ.

2. ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದುಚಿತ್ರಿಸಲಾಗಿದೆ.ಏಕೆ?

ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ ಏಕೆಂದರೆ ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣ 1707ರಲ್ಲಿ ಸಂಭವಿಸಿದ್ದು.

3. ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?

ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಮದ್ರಾಸ್ ಒಪ್ಪಂದದೊಂದಿಗೆ ಕೊನೆಯಾಯಿತು.

4. ಎರಡನೆಯ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣವೇನು?

ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೆ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವಾಗಿದೆ.

5. ಎರಡನೆಯ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಹೈದರಾಲಿ ಯಾವ ಕದನದಲ್ಲಿ ಪರಾಭವಗೊಂಡನು?

ಎರಡನೆ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಪೋರ್ಟೋನೋವೆ ಯಾವ ಕದನದಲ್ಲಿ ಪರಾಭವಗೊಂಡನು.

6. ಎರಡನೆಯ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?

ಎರಡನೆ ಆಂಗ್ಲೋ ಮೈಸೂರು ಯುದ್ಧ ಮಂಗಳೂರು ಒಪ್ಪಂದದೊಂದಿಗೆ ಕೊನೆಯಾಯಿತು.

7. ಬ್ರಿಟಿಷರನ್ನು ಸತತವಾಗಿ ಕಾಡಿದ ಏಕೈಕ ಭಾರತೀಯ ರಾಜ ಯಾರು?

ಬ್ರಿಟಿಷರನ್ನು ಸತತವಾಗಿ ಕಾಡಿದ ಏಕೈಕ ಭಾರತೀಯ ರಾಜ ಟಿಪ್ಪು ಸುಲ್ತಾನ.

8. ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು?

ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣ ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ.

9. ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?

ಮೂರನೇ ಆಂಗ್ಲೋ ಮೈಸೂರು ಯುದ್ಧ ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಕೊನೆಯಾಯಿತು.

10, ವಾಫ್ ಎಂದರೇನು?

ವಾಫ್ ಎಂದರೆ ಹುಲಿ, .

11. ರಾಣಿ ಚೆನ್ನಮ್ಮಳ ದತ್ತು ಮತ್ತೆ ಯಾರು?

ರಾಣಿ ಚೆನ್ನಮ್ಮಳ ದತ್ತು ಪತ್ರ ಶಿವಲಿಂಗಪ್ಪ

12. ಇಂದಿಗೂ ಕನ್ನಡ ನಾಡಿಗೆ ಆದರ್ಶಪ್ರಾಯಳಾಗಿರುವವರು ಯಾರು?

ಇಂದಿಗೂ ಕನ್ನಡ ನಾಡಿಗೆ ಆದರ್ಶಪ್ರಾಯಳಾಗಿರುವವರು ರಾಣಿ ಚೆನ್ನಮ್ಮ

13. ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?

ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಯಿತು.

14. ಅಮರ ಸುಳ್ಯದ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು?

ಅಮರ ಸುಳ್ಯದ ಬಂಡಾಯದ ಕೇಂದ್ರ ಸ್ಥಾನಗಳು-ಸುಳ್ಯ,ಬೆಳ್ಳಾರೆ,ಸುತ್ತೂರು.

15. ಸುರಪುರ ಬಂಡಾಯದ ನಾಯಕ ಯಾರು?

ಸುರಪುರದ ಬಂಡಾಯದ ನಾಯಕ-ವೆಂಕಟಪ್ಪ ನಾಯಕ.

16. ಕೊಪ್ಪಳ ಬಂಡಾಯದ ನಾಯಕ ಯಾರು?

ಕೊಪ್ಪಳ ಬಂಡಾಯದ ನಾಯಕ ವೀರಪ್ಪ,

17. ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ಏಕೆ ಸಿಡಿದೆದ್ದರು?

ಹಲಗಲಿಯ ಬೇಡರು ತಲೆತಲಾಂತರಗಳಿಂದ ಬೇಟೆಯಾಡುವ ಉದ್ದೇಶಕ್ಕೆ ಮುಕ್ತವಾಗಿ ಬಳಸುತ್ತಿದ್ದ ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಿರಲಿಲ್ಲ. ಆದ್ದರಿಂದ ಬ್ರಿಟಿಷರ ವಿರುದ್ಧ ಸಿಡೆದೆದ್ದರು.

18. ಸುರಪುರ ಈಗಿನ ಯಾವ ಜಿಲ್ಲೆಯಲ್ಲಿದೆ?

ಸುರಪುರ ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.

Social Science Class 10 Chapter 4

19. ಮೊದಲನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳೇನು?

  • ದಕ್ಷಿಣ ಭಾರತದಲ್ಲಿ ಹೈದರಾಲಿ ಗಳಿಸುತ್ತಿದ್ದ ರಾಜಕೀಯ ಪ್ರಾಬಲ್ಯ ಬ್ರಿಟಿಷರು, ಹೈದರಾಬಾದಿನ ನಿಜಾಮ ಮತ್ತು ಮರಾಠರಲ್ಲಿ ರಾಜಕೀಯ ಅಸಹನೆ ಮೂಡಿಸಿತು.
  • ಹೀಗಾಗಿ ಬ್ರಿಟಿಷರು ತಮ್ಮ ಸಾಮ್ರಾಜ್ಯಷಾಹಿ ಧೋರಣೆಗೆ ಮುಳ್ಳಾಗಿ ಪರಿಣಮಿಸಿದ್ದ ಹೈದರಾಲಿಯನ್ನು ರಾಜಕೀಯವಾಗಿ ಹಣಿಯಲು ತಂತ್ರಗಳನ್ನು ಮಾಡಲಾರಂಭಿಸಿದರು.
  • ಮರಾಠರ ದಾಳಿಯಿಂದ ರಾಜಕೀಯ ಮತ್ತು ಆರ್ಥಿಕ ನಷ್ಟವನ್ನು ಅನುಭವಿಸಿದ ಹೈದರಾಲಿ ಮರಾಠರು ಮತ್ತು ನಿಜಾಮನನ್ನು ತನ್ನೆಡೆಗೆ ಸೆಳೆದುಕೊಳ್ಳಲು ಯತ್ನಿಸಿದನಾದರೂ ಈ ಪ್ರಯತ್ನದಲ್ಲಿ ವಿಫಲನಾದನು.
  • ಹೈದರ್ ಆಲಿಯ ವಿರುದ್ಧ ಬ್ರಿಟಿಷರು, ಮರಾಠರು ಮತ್ತು ನಿಜಾಮನೊಂದಿಗೆ ಒಪ್ಪಂದ ಮಾಡಿಕೊಂಡರು.
  • ಇದರನ್ವಯ ತಿಪಕ್ಷ ಒಕ್ಕೂಟ ರಚಿಸಲ್ಪಟ್ಟಿತು.
  • ಆದರೆ ಹೈದರಾಲಿ ತನ್ನ ಚಾಣಾಕ್ಷ ರಾಜಕೀಯ ತಂತ್ರಗಳನ್ನು ಪ್ರಯೋಗಿಸುವ ಮೂಲಕ ತನ್ನ ವಿರುದ್ಧ ರಚನೆಯಾಗಿದ್ದ ಮಿತ್ರಕೂಟವನ್ನು ಒಡೆದು ಮರಾಠರು ಮತ್ತು ನಿಜಾಮನನ್ನು ಬ್ರಿಟಿಷರ ವಿರುದ್ಧ ಎತ್ತಿಕಟ್ಟುವಲ್ಲಿ ಯಶಸ್ವಿಯಾದನು.

20, ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಕಾರಣಗಳೇನು?

  • ತಿರುವಾಂಕೂರು ಮತ್ತು ತಂಜಾವೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶಗಳು ಈ ಯುದ್ಧಕ್ಕೆ ಕಾರಣವಾದವು. ಮದರಾಸು ಒಪ್ಪಂದ ದಕ್ಷಿಣ ಭಾರತದಲ್ಲಿ ತಾತ್ಕಾಲಿಕವಾಗಿ ರಾಜಕೀಯ ಬೆಳವಣಿಗೆಗಳನ್ನು ತಡೆಹಿಡಿದಿತ್ತು.
  • ಆದರೆ ಬ್ರಿಟಿಷರು ಮದ್ರಾಸ್ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಲು ಯತ್ನಿಸಿದರು.
  • ಮರಾಠರು ಮಾಧವರಾಯನ ನೇತೃತ್ವದಲ್ಲಿ ಸೈನ್ಯವನ್ನು ಮುನ್ನಡೆಸಿ ಶ್ರೀರಂಗಪಟ್ಟಣದ ಕಡೆ ನುಗ್ಗಿದಾಗ ಹೈದರ್ ಬ್ರಿಟಿಷರ ಸಹಾಯವನ್ನು ಅಪೇಕ್ಷಿಸಿದನು.
  • ಆದರೆ ಬ್ರಿಟಿಷರು ಇದನ್ನು ತಿರಸ್ಕರಿಸಿ ಮದರಾಸು ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಂಡರು.
  • ಮಾಹೆಯು ಫ್ರೆಂಚರ ವಸಾಹತುವಾಗಿದ್ದು, ಹೈದರಾಲಿಯ ನಿಯಂತ್ರಣಕ್ಕೊಳಪಟ್ಟಿತ್ತು.
  • ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೆಯ ಮೈಸೂರು ಯುದ್ಧಕ್ಕೆ ಕಾರಣವಾಯಿತು.

21. ಟಿಪ್ಪು ಸುಲ್ತಾನನ ಸಾಧನೆಗಳನ್ನು ವಿವರಿಸಿ

  • ಬ್ರಿಟಿಷರನ್ನು ತನ್ನ ರಾಜ್ಯ ವಿಸ್ತರಣೆಯ ನೀತಿಗೆ ಅಡ್ಡಪಡಿಸುತ್ತಿರುವ ಶತ್ರುಗಳು ಎಂದು ಭಾವಿಸಿ ಅವರನ್ನು ಓಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಿದನು.
  • ತಮ್ಮ ಕುಟೀಲ ನೀತಿಯಿಂದ ಭಾರತೀಯ ರಾಜ್ಯಗಳನ್ನು ಕಬಳಿಸುತ್ತಿದ್ದ ಬ್ರಿಟಿಷರನ್ನು ಪರಮ ವೈರಿಗಳು ಎಂದು ತಿಳಿದ ಅವನು ಅವರನ್ನು ಭಾರತದಿಂದ ಓಡಿಸುವುದು ತನ್ನ ಆದ್ಯ ಕರ್ತವ್ಯವೆಂದು ತಿಳಿದಿದ್ದನು.
  • ತನ್ನ 17 ವರ್ಷಗಳ ಆಳ್ವಿಕೆಯಲ್ಲಿ ನಿರಂತರವಾಗಿ ಬ್ರಿಟಿಷರೊಂದಿಗೆ ಹೋರಾಡಿದನು.
  • ಅವನು ಬ್ರಿಟಿಷರ ಸಾಮರ್ಥ್ಯ, ತಂತ್ರ, ಕುತಂತ್ರ ಮತ್ತು ಚಾಣಾಕ್ಷ ನೀತಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದನು.
  • ಬ್ರಿಟಿಷರಿಗೆ ವ್ಯಾಪಾರದಲ್ಲಿ ನಷ್ಟವಾದಲ್ಲಿ ಅದು ಅವರ ರಾಜಕೀಯ ಸ್ವಾಮ್ಯವನ್ನು ಕುಂದಿಸುತ್ತದೆ ಎಂದೂ ಅರಿತಿದ್ದ ಅವನು ಬ್ರಿಟಿಷರನ್ನು ವಿರೋಧಿಸುತ್ತಿದ್ದವರನ್ನು ಸಂಘಟಿಸುವ ಮತ್ತು ಅವರ ನೆರವನ್ನು ಅಪೇಕ್ಷಿಸಲು ಪ್ರಯತ್ನಿಸಿದನು.
  • ಅವರಿಗೆ ವ್ಯಾಪಾರದಲ್ಲಿ ಲಾಭವಾಗದಂತೆ ನೋಡಿಕೊಳ್ಳುವ ಮೂಲಕ ವ್ಯಾಪಾರದ ಮೇಲೆ ಅವರು ಸಾಧಿಸಿದ್ದ ಏಕಸ್ವಾಮ್ಯವನ್ನು ಮುರಿಯುವ ಪ್ರಯತ್ನಗಳನ್ನು ನಡೆಸಿದನು.
  • ಇವು ಬ್ರಿಟಿಷರಲ್ಲಿ ಟಿಪ್ಪುವಿನ ವಿರುದ್ಧ ಮತ್ತಷ್ಟು ದ್ವೇಷ ಭಾವನೆಗಳನ್ನು ಮೂಡಿಸಿದವು.

22. ಮೂರನೆಯ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳು ಯಾವುವು?

ಈ ಯುದ್ಧಕ್ಕೆ ನೇರ ಕಾರಣ ಯಾವುದೆಂದರೆ ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ. ಆ ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು.

ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.

23. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳು ಯಾವುವು?

  • ಟಿಪ್ಪು ಮೂರನೆಯ ಆಂಗ್ಲೋ ಮೈಸೂರು ಯುದ್ಧದಲ್ಲಿನ ಸೋಲನ್ನು ವೈಯಕ್ತಿಕವಾಗಿ ಸ್ವೀಕರಿಸಿ ಅದನ್ನು ಒಂದು ಪ್ರಮುಖ ಸವಾಲೆಂದೇ ಪರಿಗಣಿಸಿದನು.
  • ಟಿಪ್ಪು ಬ್ರಿಟಿಷರ ಆಧೀನದಲ್ಲಿದ್ದ ಮಲೆಯಾಳಂ ಮಾತನಾಡುವ ಭೂಪ್ರದೇಶಗಳು ನ್ಯಾಯಯುತವಾಗಿ ತನಗೇ ಸೇರಬೇಕೆಂದು ವಾದಿಸಿದನು.ಆದರೆ ಬ್ರಿಟಿಷರು ಅದನ್ನು ಪುಷ್ಟಿಕರಿಸಲಿಲ್ಲ.
  • ಟಿಪ್ಪು ಭಾರತೀಯ ರಾಜರ ಒಕ್ಕೂಟವನ್ನು ತನ್ನಡೆಗೆ ಸೆಳೆಯಲು ಮಾಡುತ್ತಿದ್ದ ಪ್ರಯತ್ನಗಳು ಹಾಗೂ ತಮ್ಮ ಬದ್ಧ ವೈರಿಗಳಾದ ಫ್ರೆಂಚರೊಂದಿಗೆ ಟಿಪ್ಪು ಹೊಂದಿದ್ದ ಸಂಬಂಧಗಳು ವೆಲ್ಲೆಸ್ತಿಯಲ್ಲಿ ಟಿಪ್ಪುವಿನ ವಿಚಾರದಲ್ಲಿ ಮತ್ತಷ್ಟು ದ್ವೇಷ ಭಾವನೆಗಳನ್ನು ಬೆಳೆಸಿದವು.
  • ಟಿಪ್ಪು ಬ್ರಿಟಿಷರ ವಿರುದ್ಧವಾಗಿದ್ದ ಫ್ರೆಂಚರ ಸಹಕಾರ ಪಡೆಯಲು ಪ್ರಯತ್ನಿಸಿ ರಾಯಭಾರಿಯನ್ನು ಕಳುಹಿಸಿದ್ದನು.
  • ಇದು ಬ್ರಿಟಿಷರಿಗೆ ಅಸಮಾಧಾನವನ್ನು ತಂದಿತು.
  • ಟಿಪ್ಪು ಮತ್ತು ಫ್ರೆಂಚರ ನಡುವಿನ ಸ್ನೇಹ ಮುಂದಕ್ಕೆ ತಮ್ಮ ಅಧಿಪತ್ಯಕ್ಕೆ ಮುಳುವಾಗಬಹುದೆಂಬ ಭಾವನೆಗಳು ಬ್ರಿಟಿಷರಲ್ಲಿ ಬೆಳೆಯಿತು
  • ಹೊಸ ಷರತ್ತಗಳನ್ನು ಒಳಗೊಂಡಿರುವ ಒಂದು ಒಪ್ಪಂದವನ್ನು ಟಿಪ್ಪುವಿನ ಮೇಲೆ ಹೇರಲಾಯಿತು.
  • ಆದರೆ ಟಿಪ್ಪು ಅಮಾನವೀಯ ಮತ್ತು ಅಸಮಾನ ಷರತ್ತುಗಳನ್ನು ಒಳಗೊಂಡಿದ್ದ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದನು.

24. ಕಿತ್ತೂರಿನ ವೀರರಾಣಿ ಚೆನ್ನಮ್ಮನ ಸಾಧನೆಗಳು ಯಾವುವು?

  • ಈ ಕಾನೂನಿನ ವಿರುದ್ಧ ಸಂಘಟಿಸಲ್ಪಟ್ಟ ಸಶಸ್ತ್ರ ಬಂಡಾಯಗಳಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟ ಖ್ಯಾತಿಯನ್ನು ಗಳಿಸಿದೆ.
  • ಕಿತ್ತೂರು ಬೆಳಗಾಂ ಮತ್ತು ಧಾರವಾಡ ಜಿಲ್ಲೆಗಳ ನಡುವೆ ಇರುವ ಊರು ಕಿತ್ತೂರು ಸಂಸ್ಥಾನದ ಮಲ್ಲಸರ್ಜನ ಮರಣಾನಂತರ ಚೆನ್ನಮ್ಮ ಕಿತ್ತೂರಿನ ಆಡಳಿತ ವ್ಯವಹಾರಗಳಲ್ಲಿ ಹೆಚ್ಚು ಆಸಕ್ತಿ ವಹಿಸಿತೊಡಗಿದಳು.
  • ಆತನ ಮರಣಾನಂತರ ಹಿರಿಯ ಮಗ ಶಿವಲಿಂಗರುದ್ರ ಸರ್ಜ ಕಿತ್ತೂರಿನ ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದನು.
  • ಆದರೆ ಆತನ ದೈಹಿಕ ಪರಿಸ್ಥಿತಿಗಳಿಂದಾಗಿ ಚೆನ್ನಮ್ಮ ನಿಜವಾದ ಆಡಳಿತಗಾರಳಾಗಿ ಜವಾಬ್ದಾರಿಯನ್ನು ನಿರ್ವಹಿಸುವಂತಾಯಿತು.
  • ಶಿವಲಿಂಗರುದ್ರ ಸರ್ಜನ ಮರಣಾನಂತರ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದು ಚೆನ್ನಮ್ಮ ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದಳು.
  • ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟನಾಗಿದ್ದನು ಥ್ಯಾಕರೆ ಬಾಂಬೆಯ ಗವರ್ನರನಿಗೆ ದತ್ತಕದ ಬಗ್ಗೆ ವರದಿಯನ್ನು ಸಲ್ಲಿಸಿ ದತ್ತು ಮಕ್ಕಳಿಗೆ ಹಕ್ಕನ್ನು ನೀಡುವುದನ್ನು ನಿರಾಕರಿಸಿ ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದನು.
  • ಕಿತ್ತೂರಿನ ಖಜಾನೆ, ಕೋಟೆ ಕೊತ್ತಲಗಳ ಸುಪರ್ದಿಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಚೆನ್ನಮ್ಮ ಥ್ಯಾಕರೆಯ ಈ ಪ್ರಯತ್ನಗಳನ್ನು ವಿಫಲಗೊಳಿಸಲು ಯುದ್ಧವನ್ನು ಅನಿವಾರ್ಯವೆಂದು ಬಗೆದಳು.
  • ಬ್ರಿಟಿಷರೂ ತಮ್ಮ ಸೈನ್ಯವನ್ನು ಸಿದ್ಧಮಾಡಲು ಆರಂಭಿಸಿದರು,
  • ಕಿತ್ತೂರಿನ ಸೈನ್ಯ ಬ್ರಿಟಿಷ್ ಸೈನ್ಯದ ಮೇಲೆ ದಾಳಿಮಾಡಿತು.
  • ಈ ದಾಳಿಯಲ್ಲಿ ಥ್ಯಾಕರೆ ಗುಂಡೇಟಿಗೆ ಬಲಿಯಾದ.
  • ಲೆಫ್ಟಿನೆಂಟ್ ಕರ್ನಲ್ ಡೀಕ್‌ನ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ ಕಿತ್ತೂರಿಗೆ ಮುತ್ತಿಗೆ ಹಾಕಿತು.
  • ಬ್ರಿಟಿಷರ ಸೈನ್ಯದಿಂದ ತಪ್ಪಿಸಿಕೊಂಡ ಚೆನ್ನಮ್ಮನನ್ನು ಸೆರೆಹಿಡಿಯಲಾಯಿತು.
  • ಕಿತ್ತೂರು ಬ್ರಿಟಿಷರ ವಶವಾಯಿತು.
  • ಚೆನ್ನಮ್ಮ ಮತ್ತು ಮೊದಲಾದವರನ್ನು ಬೈಲಹೊಂಗಲ ಕೋಟೆಯ ಸೆರೆಮನೆಯಲ್ಲಿ ಇರಿಸಲಾಯಿತು.
  • ಚೆನ್ನಮ್ಮ ಮರಣ ಹೊಂದಿದರು. ಇಂದಿಗೂ ಕೂಡಾ ನಾಡಿಗೆ ಅವಳು ಆದರ್ಶ ಪ್ರಾಯಳಾಗಿದ್ದಾಳೆ.

25. ಕೊಪ್ಪಳದ ವೀರಪ್ಪನ ಸಾಧನೆಗಳನ್ನು ವಿವರಿಸಿ,

  • ವೀರಪ್ಪ ಜಮೀನ್ದಾರನಾಗಿದ್ದು ಬಂಡೆದ್ದು ಕೊಪ್ಪಳ ಮತ್ತು ಸನಿಹದ ಕೋಟೆಗಳನ್ನು ತನ್ನ ಸುಪರ್ದಿಗೆ ವಹಿಸಿಕೊಂಡನು.
  • ವೀರಪ್ಪನ ಈ ಉದ್ದೇಶದ ಮರ್ಮ ಅರಿತ ಅನೇಕ ರೈತರು ಮತ್ತು ಜಮೀನ್ದಾರರು ಆತನೊಂದಿಗೆ ಕೈ ಜೋಡಿಸಿದರು. ನಿಜಾಮರೊಂದಿಗೆ ಸಂಪರ್ಕವನ್ನು ಸಾಧಿಸಿದ ಬ್ರಿಟಿಷರು ವೀರಪ್ಪನ ನೇತೃತ್ವದಲ್ಲಿನ ಬಂಡಾಯವನ್ನು ಸದೆಬಡಿಯಲು ಸೈನ್ಯವನ್ನು ನಿಯೋಜಿಸಿದರು.
  • ಕಡಿಮೆ ಸೈನಿಕರ ಬೆಂಬಲವನ್ನು ಹೊಂದಿದ್ದ ವೀರಪ್ಪ ಸತತವಾಗಿ ಹೋರಾಟವನ್ನು ನಡೆಸಿ ಮರಣ ಹೊಂದಿದನು.
  • ತರುವಾಯ ಬ್ರಿಟಿಷರು ಕೊಪ್ಪಳದ ಕೋಟೆಯನ್ನು ವಶಪಡಿಸಿಕೊಂಡರು.

26. ಹಲಗಲಿಯ ಬೇಡರ ದಂಗೆಯನ್ನು ವಿವರಿಸಿ,

  • ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿ ಹಲಗಲಿ ಎಂಬುದು ಒಂದು ಪುಟ್ಟಗ್ರಾಮ.
  • 1857ರ ಬಂಡಾಯದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯ ಪ್ರದೇಶದಲ್ಲಿ ಶಸ್ತ್ರಗಳ ಬಳಕೆಯನ್ನು ನಿರ್ಬಂಧಿಸಿ ಕಾನೂನೊಂದನ್ನು ಜಾರಿಗೆ ತಂದರು. ಇದನ್ನು ಹಲಗಲಿಗೂ ಸಹ ಅನ್ವಯಿಸಲಾಯಿತು.
  • ಹಲಗಲಿಯ ಬೇಡರು ತಲೆತಲಾಂತರಗಳಿಂದ ಬೇಟೆಯಾಡುವ ಉದ್ದೇಶಕ್ಕೆ ಮುಕ್ತವಾಗಿ ಬಳಸುತ್ತಿದ್ದ ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಿರಲಿಲ್ಲ.
  • ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬ್ರಿಟಿಷರ ವಿರುದ್ಧ ಸಿಡಿದೆದ್ದರು.
  • ಈ ಹೋರಾಟದಲ್ಲಿ ಹಲಗಲಿಯ ಸುತ್ತಮುತ್ತಲಿನ ಪ್ರದೇಶಗಳಾದ ಮಂಟೂರು, ಬೋದಾನಿ, ಅಲಗುಂಡಿಯ ಬೇಡರು, ಹಲಗಲಿಯ ಬೇಡರೊಂದಿಗೆ ಸೇರಿಕೊಂಡರು.
  • ಇವರ ಬಂಡಾಯವನ್ನು ಹತ್ತಿಕ್ಕಲು ನವೆಂಬರ್‌ ನಲ್ಲಿ ಇಂಗ್ಲಿಷರ ಸೇನೆ ಹಲಗಲಿ ಗ್ರಾಮವನ್ನು ತಲುಪಿತು.
  • ಬಂಡಾಯವೆದ್ದ ಬೇಡರನ್ನು ನಿಷ್ಕಾರುಣ್ಯವಾಗಿ, ಅತ್ಯಂತ ದಮನಕಾರಿಯಾಗಿ ಇಂಗ್ಲಿಷರು ಹತ್ತಿಕ್ಕಿದರು.
  • ಬಂಡಾಯಗಾರರನ್ನು ಗಲ್ಲಿಗೇರಿಸುವುದರ ಮೂಲಕ ಈ ಬಂಡಾಯವು ಕೊನೆಗೊಂಡಿತು
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment