KAS prelims 20-08-2017 Paper-2 General Studies Questions with answers
ಆಯೋಗವು ದಿನಾಂಕ: 20-08-2017 ರಂದು ನಡೆಸಿದ ಗೆಜೆಟೆಡ್ ಪ್ರೋಬೆಷನರ್ಸ್ ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ – II (ವಿಷಯ ಸಂಕೇತ: 262)ಕ್ಕೆ ಸಂಬಂಧಿಸಿದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.
1. | ಕರ್ನಾಟಕದ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಹತೆಯ ಮಾನದಂಡವನ್ನು ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ಅರ್ಜಿದಾರನ ವಯಸ್ಸು 60 ವರ್ಷಗಳು ಅಥವಾ ಅದಕ್ಕಿಂತಲೂ ಹೆಚ್ಚಾಗಿರಬೇಕು. | |
B. | ಪಿಂಚಣಿದಾರನ ಮತ್ತು ಆತನ / ಆಕೆಯ ಪತಿ / ಪತ್ನಿಯ ವಾರ್ಷಿಕ ಆದಾಯವು ₹25,000 ಗಳಿಗೆ ಮೀರಿರಬಾರದು. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಇವೆರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(4) A ಆಗಲೀ ಅಥವಾ B ಆಗಲೀ ಅಲ್ಲ
2. | ಈ ಹೇಳಿಕೆಗಳನ್ನು ಪರಿಗಣಿಸಿ : | |
A. | ಭಾರತವು ಮಿಸ್ಸೈಲ್ ಟೆಕ್ನಾಲಜಿ ಕಂಟ್ರೋಲ್ ರಿಜೈಮ್ ನ(ಎಮ್.ಟಿ.ಸಿ.ಆರ್.) ಒಬ್ಬ ಸದಸ್ಯ. | |
B. | ಭಾರತ ಮತ್ತು ರಷ್ಯಾಗಳು ಬ್ರಹ್ಮೋಸ್ ವ್ಯಾಪ್ತಿಯನ್ನು 600 km ಗೆ ದ್ವಿಗುಣ ಗೊಳಿಸಬೇಕು ಎಂದು ಸಮ್ಮತಿಸಿವೆ. | |
C. | ಚೀನಾವು ಎಮ್.ಟಿ.ಸಿ.ಆರ್. ನ ಒಬ್ಬ ಸದಸ್ಯ ಅಲ್ಲ. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | A ಮತ್ತು B ಮಾತ್ರ | |
(3) | B ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(4) A, B ಮತ್ತು C
3. | ಸ್ಥಿರವೇಗವಾದ 30 km/h ವೇಗದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಕುಳಿತು ರಸ್ತೆಗೆ ಸಂಬಂಧಿಸಿದಂತೆ ಪೂರ್ವಾಭಿ ಮುಖವಾಗಿ ಚಲಿಸುವಾಗ ಒಬ್ಬ ವ್ಯಕ್ತಿಯು ಚೆಂಡನ್ನು ಕೆಲವು ಮೀಟರ್ ವರೆಗೆ ಲಂಬವಾಗಿ ಮೇಲ್ಮುಖವಾಗಿ ಎಸೆಯುತ್ತಾನೆ ನಾವು ಹಾರಾಟದ ಅವಧಿಯಲ್ಲಿ ಗಾಳಿಯ ಪ್ರತಿರೋಧವನ್ನು ಸಂಪೂರ್ಣವಾಗಿ ಕಡೆಗಣಿಸಿದಲ್ಲಿ ಚೆಂಡು | |
(1) | ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಹಿಂದೆ ಬೀಳುವುದು | |
(2) | ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮುಂದೆ ಬೀಳುವುದು | |
(3) | ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮೇಲೆ ಬೀಳುವುದು | |
(4) | ಕಾರಿನ ಹೊರಗೆ ನೆಲದ ಮೇಲೆ ಬೀಳುವುದು |
ಸರಿ ಉತ್ತರ
(3) ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮೇಲೆ ಬೀಳುವುದು
4. | ಭಾರತದ ಸಸ್ಯಶಾಸ್ತ್ರೀಯ ಸಮೀಕ್ಷೆಯ (BSI) ವಿಜ್ಞಾನಿಗಳು ಜಿಂಜಿಬರ್ ನ ಹೊಸ ಪ್ರಭೇದಗಳನ್ನು (ಸಾಮಾನ್ಯವಾಗಿ ಶುಂಠಿ ಎನ್ನಲಾಗುವ) ಕಂಡು ಕೊಂಡರು ಇದನ್ನು ಜಿಂಜಿಬರ್ ಸ್ಯುಡೊಕ್ವಾರೊಸಂ ಎಂದು ಹೆಸರಿಸಲಾಗಿದ್ದು ಇದು ಜನಾಂಗಶಾಸ್ತ್ರೀಯ ವೈದ್ಯಕೀಯ ಗುಣಲಕ್ಷಣಗಳನ್ನು ಹೊಂದಿದೆ. ಈ ಹೊಸ ತಳಿಗಳನ್ನು ಕುರಿತಾದ ಸಾಂಪ್ರದಾಯಿಕ ಜ್ಞಾನವನ್ನು ಸ್ಥಳೀಯ ಮಾರ್ಗದರ್ಶಕನಿಂದ ಶೋಧದ ಅವಧಿಯಲ್ಲಿ ಹಂಚಿಕೊಳ್ಳಲಾಗಿದೆ. ಕೆಳಗಿನ ಯಾವ ಸ್ಥಳದಲ್ಲಿ ಈ ಪ್ರಭೇದಗಳು ದೊರತಿದೆ ? | |
(1) | ಕರ್ನಾಟಕ | |
(2) | ಕೇರಳ | |
(3) | ಲಕ್ಷದ್ವೀಪ | |
(4) | ಅಂಡಮಾನ್ ಮತ್ತು ನಿಕೋಬಾರ್ ದ್ವೀಪ |
ಸರಿ ಉತ್ತರ
(4) ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
5. | ಸ್ನಾಯುಗಳ ಆಯಾಸವು ಈ ಕೆಳಗಿನ ಯಾವುದರ ಶೇಖರಣೆಯಿಂದ ಉಂಟಾಗುತ್ತದೆ ? | |
(1) | ಪೈರುವಿಕ್ ಆಮ್ಲ | |
(2) | ಅಸಿಟಿಕ್ ಆಮ್ಲ | |
(3) | ಲ್ಯಾಕ್ಟಿಕ್ ಆಮ್ಲ | |
(4) | ಯೂರಿಕ್ ಆಮ್ಲ |
ಸರಿ ಉತ್ತರ
(3) ಲ್ಯಾಕ್ಟಿಕ್ ಆಮ್ಲ
6. | IUCN ಪ್ರಕಾರ ಅವುಗಳ ಸ್ಥಿತಿಯನ್ನು ಕುರಿತಂತೆ ಸರಿಯಾಗಿ ಹೊಂದಿಕೆ ಆಗದ್ದನ್ನು ಆಯ್ಕೆಮಾಡಿ. | |
(1) | ನೀಲಗಿರಿ ತಹರ್-ಗಂಡಾಂತರ ಕ್ಕೊಳಗಾಗಿರುವುದು | |
(2) | ಕಾಶ್ಮೀರ್ ಕೆಂಪು ಸಾರಂಗ-ಬೆದರಿಕೆಗೆ ಒಳಗಾಗಿರುವುದು | |
(3) | ಪಿಗ್ಮಿ ಹಾಗ್-ಗಂಭೀರವಾಗಿ ಗಂಡಾಂತರ ಕ್ಕೊಳಗಾದದ್ದು | |
(4) | ಬ್ರಾಂಬ್ಲ್ ಕೆ ಮೆಲೊಮಿಸ್-ನಿರ್ನಾಮವಾದದ್ದು |
ಸರಿ ಉತ್ತರ
(2) ಕಾಶ್ಮೀರ್ ಕೆಂಪು ಸಾರಂಗ-ಬೆದರಿಕೆಗೆ ಒಳಗಾಗಿರುವುದು
7. | 2017 ರ ಫೆಬ್ರುವರಿಯಲ್ಲಿನ ಪಿ.ಎಸ್.ಎಲ್.ವಿ. C-37 ನಿಂದಾದ 104 ಉಪಗ್ರಹಗಳ ಉಡ್ಡಯನಕ್ಕೆ ಸಂಬಂಧಿಸಿದ ಈ ಹೇಳಿಕೆಗಳನ್ನು ಪರಿಗಣಿಸಿ : | |
A. | 104 ಉಪಗ್ರಹಗಳನ್ನು ಒಂದೇ ರಾಕೆಟ್ ನಲ್ಲಿ ಉಡ್ಡಯಿಸಿದ ಮೊದಲ ದೇಶ ಭಾರತ. | |
B. | ಇದು ಭಾರತದ ಉಪಗ್ರಹಗಳನ್ನು ಇದರಲ್ಲಿ ಒಳಗೊಂಡಿದೆ. ಅವೆಂದರೆ ಭೂಪಟರಚನಕಾರ ಕಾರ್ಟೋಸ್ಯಾಟ್-2 ಉಪಗ್ರಹ ಮತ್ತು ನ್ಯಾನೋ ಉಪಗ್ರಹಗಳು ಐ.ಎನ್.ಎಸ್.-1A ಮತ್ತು ಐ.ಎನ್.ಎಸ್.-1B. | |
C. | ಆಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಎನ್ನುವುದು ಇಸ್ರೋದ ಇನ್ನೊಂದು ವಾಣಿಜ್ಯ ಅಂಗ. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು B ಮಾತ್ರ | |
(2) | A ಮತ್ತು C ಮಾತ್ರ | |
(3) | B ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(2) A ಮತ್ತು C ಮಾತ್ರ
8. | ಮಾನ್ಯ ಸಂಸತ್ತು ಸಚಿವರಾದ ಶೋಭಾ ಕರಂದ್ಲಾಜೆಯವರನ್ನು ಲೋಕಸಭೆಯ ಅಧಿಕೃತ ವೀಕ್ಷಕರಾಗಿ ಯಾವ ದೇಶದ ಚುನಾವಣೆಗೆ ಇತ್ತೀಚೆಗೆ ನಾಮನಿರ್ದೇಶನ ಮಾಡಲಾಗಿತ್ತು ? | |
(1) | ಯು.ಎಸ್.ಎ. ಅಧ್ಯಕ್ಷೀಯ ಚುನಾವಣೆಗಳು | |
(2) | ಯು.ಕೆ. ಸಾರ್ವತ್ರಿಕ ಚುನಾವಣೆಗಳು | |
(3) | ಫ್ರೆಂಚ್ ಶಾಸನಸಭೆ ಚುನಾವಣೆಗಳು | |
(4) | ಜರ್ಮನ್ ಅಧ್ಯಕ್ಷೀಯ ಚುನಾವಣೆಗಳು |
ಸರಿ ಉತ್ತರ
(2) ಯು.ಕೆ. ಸಾರ್ವತ್ರಿಕ ಚುನಾವಣೆಗಳು
9. | ಕರ್ನಾಟಕ ಸರ್ಕಾರದಿಂದ ನೀಡಲಾಗುವ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು 2016 ರಲ್ಲಿ ಗಳಿಸಿದವರು ಯಾರು ? | |
(1) | ಶ್ರೀನಾಥ | |
(2) | ಹರಿಣಿ | |
(3) | ಅದವಾನಿ ಲಕ್ಷ್ಮಿದೇವಿ | |
(4) | ಬಿ. ಸರೋಜಾ ದೇವಿ |
ಸರಿ ಉತ್ತರ
(3) ಅದವಾನಿ ಲಕ್ಷ್ಮಿದೇವಿ
10. | ಪಟ್ಟಿ I (ಅಧ್ಯಯನ ಶಿಸ್ತು) ಮತ್ತು ಪಟ್ಟಿ II (ಅಧ್ಯಯನ ವಿಷಯ) ವನ್ನು ಹೊಂದಿಸಿ : |
ಪಟ್ಟಿ I (ಅಧ್ಯಯನ ಶಿಸ್ತು) | ಪಟ್ಟಿ II (ಅಧ್ಯಯನ ವಿಷಯ) | |||
A. | ಎಂಟಮಾಲಜಿ | I. | ಶೈವಲ | |
B. | ಮೈಕಾಲಜಿ | II. | ಶಿಲೀಂಧ್ರ | |
C. | ಪೈಕಾಲಜಿ | III. | ಕೀಟಗಳು | |
D. | ಡೆಸ್ಮಾಲಜಿ | IV. | ಅಸ್ಥಿರಜ್ಜು | |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
A | B | C | D | ||
(1) | III | II | IV | I | |
(2) | III | II | I | IV | |
(3) | II | III | IV | I | |
(4) | II | III | I | IV |
ಸರಿ ಉತ್ತರ
(2) III II I IV
11. | 2016 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕನ್ನಡದಲ್ಲಿ ಗಳಿಸಿದವರಾರು ? | |
(1) | ಬೋಳ್ವಾರ್ ಮೊಹಮದ್ ಕುನ್ಹಿ | |
(2) | ಸಿ.ಎನ್. ರಾಮಚಂದ್ರನ್ | |
(3) | ಕೆ.ವಿ. ತಿರುಮಲೇಶ್ | |
(4) | ಗೋವೀಂದರಾಯ್ ಹೆಚ್. ನಾಯಕ್ |
ಸರಿ ಉತ್ತರ
(1) ಬೋಳ್ವಾರ್ ಮೊಹಮದ್ ಕುನ್ಹಿ
12. | ಈ ಕೆಳಗಿನವುಗಳಲ್ಲಿ ಯಾವುದು ಭಾರತೀಯ ವಿಮಾನ ದಳದ (ವಾಯುವಿನಿಂದ ವಾಯು ರಿಫ್ಯೂಯೆಲ್ಲರ್) ಏರ್ ಟು ಏರ್ ರಿಫ್ಯೂಯೆಲ್ಲರ್ ವಿಮಾನ ನೌಕೆ ? | |
(1) | C-17 ಗ್ಲೋಬ್ ಮಾಸ್ಟರ್ | |
(2) | ಇಲ್ಯೂಶಿನ್76 | |
(3) | ಇಲ್ಯೂಶಿನ್78 | |
(4) | C-130ಜೆ ಹರ್ಕುಲಿಸ್ |
ಸರಿ ಉತ್ತರ
(3) ಇಲ್ಯೂಶಿನ್78
13. | ಒಟ್ಟು ವಿದ್ಯುದುತ್ಪಾದನೆಯಲ್ಲಿ, ಭಾರತದಲ್ಲಿ ಥರ್ಮಲ್ (ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲ), ಹೈಡ್ರೋ, ನ್ಯೂಕ್ಲಿಯರ್ ಮತ್ತು ಪರ್ಯಾಯ ಮೂಲಗಳು (ಸೌರ, ಮಾರುತ, ಬಯೋಮಾಸ್ ಇತ್ಯಾದಿ) ಗಳಿಂದಾಗುವ ಶೇಕಡಾವಾರು ವಿದ್ಯುದುತ್ಪಾದನೆಯು ಈ ಕೆಳಗಿನ ಯಾವ ಕ್ರಮದಲ್ಲಿದೆ ? | |
(1) | ಥರ್ಮಲ್ > ಹೈಡ್ರೋ > ಪರ್ಯಾಯ ಮೂಲ > ನ್ಯೂಕ್ಲಿಯರ್ | |
(2) | ಥರ್ಮಲ್ > ಹೈಡ್ರೋ > ನ್ಯೂಕ್ಲಿಯರ್ > ಪರ್ಯಾಯ ಮೂಲ | |
(3) | ಹೈಡ್ರೋ > ಥರ್ಮಲ್ > ಪರ್ಯಾಯ ಮೂಲ > ನ್ಯೂಕ್ಲಿಯರ್ | |
(4) | ಹೈಡ್ರೋ > ಥರ್ಮಲ್ > ನ್ಯೂಕ್ಲಿಯರ್ > ಪರ್ಯಾಯ ಮೂಲ |
ಸರಿ ಉತ್ತರ
(1) ಥರ್ಮಲ್ > ಹೈಡ್ರೋ > ಪರ್ಯಾಯ ಮೂಲ > ನ್ಯೂಕ್ಲಿಯರ್
14. | 1914 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಪ್ರಥಮ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ಯಾರು ? | |
(1) | ಪ್ರಫುಲ್ಲ ಚಂದ್ರ ರಾಯ್ | |
(2) | ಜೆ.ಸಿ. ಬೋಸ್ | |
(3) | ಸರ್ ಆಶುತೋಷ್ ಮುಖರ್ಜಿ | |
(4) | ಲಿಯೋನಾರ್ಡ್ ರೋಜರ್ಸ್ |
ಸರಿ ಉತ್ತರ
(3) ಸರ್ ಆಶುತೋಷ್ ಮುಖರ್ಜಿ
15. | ಕೆಳಗಿನ ಹೈಡ್ರೋಕಾರ್ಬನ್ ಗಳನ್ನು ಪರಿಗಣಿಸಿ : | |
A. | ಮಿಥೇನ್ | |
B. | ಈಥೇನ್ | |
C. | ಪ್ರೊಪೇನ್ | |
D. | ಬ್ಯುಟೇನ್ | |
E. | ಪೆಂಟೇನ್ | |
ಅಣುತೂಕದ ಏರಿಕೆಯ ಕ್ರಮದಲ್ಲಿ ಕೆಳಗಿನ ಯಾವ ಶ್ರೇಣಿ ಸರಿಯಾಗಿದೆ | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A, B, D, C, E | |
(2) | B, A, D, C, E | |
(3) | A, B, C, D, E | |
(4) | C, B, A, D, E |
ಸರಿ ಉತ್ತರ
(3) A, B, C, D, E
16. | ಅಶಕ್ತತೆಗಳ ಪ್ರತಿಬಂಧಕ ಪರಿಹಾರಕ ಶಸ್ತ್ರ ಚಿಕಿತ್ಸೆಗಾಗಿ ‘‘ಕರ್ನಾಟಕ ರಾಜ್ಯ ಅಶಕ್ತತಾ ವೈದ್ಯಕೀಯ ಪರಿಹಾರ ಯೋಜನೆ’’ ಯ ಅರ್ಹತಾ ಮಾನದಂಡವನ್ನು ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ಗ್ರಾಮೀಣ ಪ್ರದೇಶದವರಿಗಾಗಿ ವಾರ್ಷಿಕ ಆದಾಯವು ₹ 25,000 ಮತ್ತು ನಗರ ಪ್ರದೇಶದವರಿಗಾಗಿ ₹ 50,000. | |
B. | ಅಶಕ್ತತಾ ಪ್ರಮಾಣಪತ್ರವು ವೈದ್ಯಕೀಯ ಮಂಡಳಿಯಿಂದ ಜಾರಿಯಾಗಿರಬೇಕು. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಇವೆರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(3) A ಮತ್ತು B ಇವೆರಡೂ
17. | ಭಾರತೀಯ ವಿಮಾನ ನೌಕೆ ಕುರಿತಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ? | |
A. | ತೇಜಸ್ ಎಂಬುದು ಒಂದು ಬಹುಮುಖಿಯಾದ ಹಗುರವಾದ ಕಾಳಗ ವಿಮಾನ ನೌಕೆ. | |
B. | ಸಾರಸ್ ಎಂಬುದು ಪ್ರಥಮ ದೇಶೀಯ ವಿವಿಧೋದ್ದೇಶ ನಾಗರಿಕ ವಿಮಾನ ನೌಕೆ. | |
C. | ಲಕ್ಷ್ಯ ಎಂಬುದು ಚಾಲಕರಹಿತ, ಉದ್ದಿಷ್ಟ ಗುರಿಯ ವಿಮಾನ. | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು B ಮಾತ್ರ | |
(2) | B ಮತ್ತು C ಮಾತ್ರ | |
(3) | A ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(4) A, B ಮತ್ತು C
18. | ಕರ್ನಾಟಕ ಅರಣ್ಯ ಇಲಾಖೆಯ ಯಾವ ನಿಶಾನೆ ಯೋಜನೆಗಳು ರೈತರು ತಮ್ಮದೇ ಜಮೀನಿನಲ್ಲಿ ವನ್ಯ ಗಿಡ ತಳಿಗಳನ್ನು ನೆಡಲು ಮತ್ತು ಅದನ್ನವರು 3 ವರ್ಷ ನಿರ್ವಹಿಸುವಂತೆ ಮಾಡುವ ಮೂಲಕ ರೈತರಿಗೆ ಹಣಕಾಸು ಬಹುಮಾನಗಳಿಸಲು ನೆರವಾಗುವುದು ? | |
A. | ಕೆ.ಎ.ಪಿ.ವೈ.-ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ | |
B. | ಜೆ.ಎಫ್.ಪಿ.ಎಮ್.-ಜಂಟಿ ಅರಣ್ಯ ಯೋಜನಾ ನಿರ್ವಹಣೆ | |
C. | ಆರ್.ಎಸ್.ಪಿ.ಡಿ.-ಸಾರ್ವಜನಿಕ ವಿತರಣೆಗೆ ಎಳೆಸಸಿಗಳ ಏರಿಕೆ (ಹೆಚ್ಚಳ) | |
D. | ಮರನೆಡುವಿಕೆ (ಪಟ್ಟಾ) ಯೋಜನೆ | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A, B ಮತ್ತು C ಮಾತ್ರ | |
(4) | B, C ಮತ್ತು D ಮಾತ್ರ |
ಸರಿ ಉತ್ತರ
(1) A ಮಾತ್ರ
19. | 2016 ರ ಕಿಗಲಿ ಒಪ್ಪಂದವು ಹವಾಮಾನ ಬದಲಾವಣೆಯ ಹೋರಾಟದಲ್ಲಿನ ಒಂದು ದೊಡ್ಡ ಹೆಜ್ಜೆ. ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ? | |
A. | ಹೈಡ್ರೋಫ್ಲೊರೋಕಾರ್ಬನ್ ಗಳ (ಎಚ್.ಎಫ್.ಸಿ.) ಉತ್ಪಾದನೆ ಮತ್ತು ಬಳಕೆಯ ತಗ್ಗಿಸುವಿಕೆಗಾಗಿ ಮಾಂಟ್ರಿಯಲ್ ಶಿಷ್ಟಕ್ರಮದ ತಿದ್ದುಪಡಿ. | |
B. | ಕ್ಲೋರೊಫ್ಲೊರೋಕಾರ್ಬನ್ ಗಳ (ಸಿ.ಎಫ್.ಸಿ.) ಉತ್ಪಾದನೆ ಮತ್ತು ಬಳಕೆಯ ತಗ್ಗಿಸುವಿಕೆಗಾಗಿ ಮಾಂಟ್ರಿಯಲ್ ಶಿಷ್ಟಕ್ರಮದ ತಿದ್ದುಪಡಿ. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಇವೆರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(1) A ಮಾತ್ರ
20. | ಕರ್ನಾಟಕ ರಾಜ್ಯದ ಹುಲಿಧಾಮ ಈ ಪೈಕಿ ಯಾವುದು ? | |
A. | ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ | |
B. | ದಾರೊಜಿ ವನ್ಯ ಜೀವಿಧಾಮ | |
C. | ಕಾವೇರಿ ವನ್ಯ ಜೀವಿಧಾಮ | |
D. | ಕುದುರೆಮುಖ ರಾಷ್ಟ್ರೀಯ ಉದ್ಯಾನ | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು D ಮಾತ್ರ | |
(2) | A, C ಮತ್ತು D ಮಾತ್ರ | |
(3) | A, B, C ಮತ್ತು D | |
(4) | ಈ ಮೇಲಿನ ಯಾವುವೂ ಅಲ್ಲ |
ಸರಿ ಉತ್ತರ
(4) ಈ ಮೇಲಿನ ಯಾವುವೂ ಅಲ್ಲ
21. | ಹೈಡ್ರೋಫ್ಲೊರೋಕಾರ್ಬನ್ ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿ ? | |
A. | ಹೈಡ್ರೋಫ್ಲೊರೋಕಾರ್ಬನ್ ಗಳು ಸಾವಯವ ಸಂಯುಕ್ತ ಗಳಾಗಿದ್ದು ಇವು ಫ್ಲೋರಿನ್ ಮತ್ತು ಜಲಜನಕದ ಅಣುಗಳನ್ನು ಹೊಂದಿದ್ದು, ಇವು ಸಾಮಾನ್ಯವಾಗಿ ಶೈತ್ಯಕಗಳು ಮತ್ತು ವಾತಾಯನಗಳಲ್ಲಿ ಕೋರೋಫ್ಲೊರೋಕಾರ್ಬನ್ ಗಳ ಎಡೆಯಲ್ಲಿ ಬಳಕೆ ಯಾಗುತ್ತವೆ. | |
B. | ಹೆಚ್.ಎಫ್.ಸಿ.ಗಳು ಓರೆನ್ ಪದರಕ್ಕೆ ಸಿ.ಎಫ್.ಸಿ. ಗಳು ಉಂಟುಮಾಡುವಷ್ಟು ಹೆಚ್ಚಾಗಿ ಹಾನಿಯುಂಟು ಮಾಡುವುದಿಲ್ಲ . | |
C. | ಹೆಚ್.ಎಫ್.ಸಿ. ಗಳು ಜಾಗತಿಕ ತಾಪಮಾನವನ್ನು ಉಂಟುಮಾಡುವುದಿಲ್ಲ. | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು B ಮಾತ್ರ | |
(2) | B ಮತ್ತು C ಮಾತ್ರ | |
(3) | A ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(1) A ಮತ್ತು B ಮಾತ್ರ
22. | 2017-18 ರ ಬಜೆಟ್ ಭಾಷಣದಲ್ಲಿ ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಯವರು ರಾಜ್ಯದಲ್ಲಿ ಹೊಸ ವೃಕ್ಷ ಉದ್ಯಾನಗಳನ್ನು ಈ ಯಾವ ಖ್ಯಾತ ಸಾಮಾಜಿಕ ಚೇತನದ ಹೆಸರಿನಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದರು ? | |
(1) | ಭೀಮರಾವ್ ಬಾಬಾಸಾಹೇಬ್ ಅಂಬೇಡ್ಕರ್ | |
(2) | ನಾಡಪ್ರಭು ಕೆಂಪೇಗೌಡ | |
(3) | ಬಸವಣ್ಣ | |
(4) | ಸಾಲುಮರದ ತಿಮ್ಮಕ್ಕ |
ಸರಿ ಉತ್ತರ
(4) ಸಾಲುಮರದ ತಿಮ್ಮಕ್ಕ
ಸೂಚನೆಗಳು (ಪ್ರಶ್ನೆ ಸಂಖ್ಯೆ 23 ಮತ್ತು 24) : ಕೆಳಗಿನ ಪಟ್ಟಿಯಲ್ಲಿ ಕಂಪನಿಯೊಂದು ಕೆಲವು ವರ್ಷಗಳಲ್ಲಿ ಉತ್ಪಾದನೆ ಮಾಡಿ ಮಾರಾಟ ಮಾಡಿದ ಬ್ಯಾಟರಿಗಳ ಸಂಖ್ಯೆ ನೀಡಿದೆ. ಈ ಪಟ್ಟಿಯನ್ನು ಅಧ್ಯಯನ ಮಾಡಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
23. | ಮಾರಾಟವಾದ 4AH ಬ್ಯಾಟರಿಗಳು ಮತ್ತು ಮಾರಾಟವಾದ ಒಟ್ಟು ಬ್ಯಾಟರಿಗಳ ಸಂಖ್ಯೆಗಳ ಶೇಕಡಾವಾರು ಗರಿಷ್ಠವಾಗಿದ್ದ ವರ್ಷ | |
(1) | 1994 | |
(2) | 1995 | |
(3) | 1996 | |
(4) | 1997 |
ಸರಿ ಉತ್ತರ
(4) 1997
24. | 1992 ರಿಂದ 1997 ರ ವರೆಗೂ ಯಾವ ವಿಧದ ಬ್ಯಾಟರಿಯ ಮಾರಾಟದಲ್ಲಿ ಸತತ ಕುಸಿತವಾಗಿದ್ದು ? | |
(1) | 4AH | |
(2) | 7AH | |
(3) | 32AH | |
(4) | 35AH |
ಸರಿ ಉತ್ತರ
(2) 7AH
25. | ಕರ್ನಾಟಕ ಸರ್ಕಾರವು ಇವರ ಅಧ್ಯಕ್ಷತೆಯಲ್ಲಿ 6ನೇ ರಾಜ್ಯ ವೇತನ ಆಯೋಗವನ್ನು ನೇಮಿಸಿತು | |
(1) | ಎಮ್.ಆರ್. ಶ್ರೀಧರ ಮೂರ್ತಿ | |
(2) | ಎಮ್.ಆರ್. ಸುಧಾ ಮೂರ್ತಿ | |
(3) | ಎಮ್.ಆರ್. ಶಿವ ಮೂರ್ತಿ | |
(4) | ಎಮ್.ಆರ್.ಶ್ರೀನಿವಾಸ್ ಮೂರ್ತಿ |
ಸರಿ ಉತ್ತರ
(4) ಎಮ್.ಆರ್.ಶ್ರೀನಿವಾಸ್ ಮೂರ್ತಿ
ಸೂಚನೆಗಳು (ಪ್ರಶ್ನೆ ಸಂಖ್ಯೆ 26 ಮತ್ತು 27) : ಕೆಳಗಿನ ಗ್ರಾಫ್ಗಳನ್ನು ಎಚ್ಚರಿಕೆಯಿಂದ ಅಭ್ಯಸಿಸಿ ಮತ್ತು ಅವುಗಳ ಕೆಳಗೆ ನೀಡಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಿ.
ಒಂದು ದೇಶದ ಆಮದುಗಳು ಮತ್ತು ರಫ್ತುಗಳ ಮಾಹಿತಿ
26. | ನೀಡಿರುವ ವರ್ಷಗಳಲ್ಲಾದ ಸರಾಸರಿ ಆಮದುಗಳು ಮತ್ತು ಸರಾಸರಿ ರಫ್ತುಗಳ ನಡುವೆ ಇರುವ ಅಂದಾಜು ವ್ಯತ್ಯಾಸವೇನು (2013 ರಿಂದ 2016) ? | |
(1) | 362 ಕೋಟಿ | |
(2) | 380 ಕೋಟಿ | |
(3) | 350 ಕೋಟಿ | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(1) 362 ಕೋಟಿ
27. | 2015 ರಿಂದ 2016 ರಲ್ಲಾಗಿರುವ ಅಮದುಗಳ ಶೇಕಡಾವಾರು ಅಂದಾಜು ಹೆಚ್ಚಳವೇನು ? | |
(1) | 10% | |
(2) | 15% | |
(3) | 11% | |
(4) | 13% |
ಸರಿ ಉತ್ತರ
(4) 13%
28. | ಕರ್ನಾಟಕದ ಕೆಳಕಂಡ ವಿಶಿಷ್ಟ ವ್ಯಕ್ತಿತ್ವಗಳೊಡನೆ, ಅವರ ಕ್ಷೇತ್ರ / ವೃತ್ತಿ ಮತ್ತು ಅವರ ಜನ್ಮ ಸ್ಥಳವು ಸರಿಯಾಗಿ ಹೇಳಲಾಗಿರುವುದು ? | |
(1) | ಬಿ.ಎಮ್. ಹೆಗ್ಡೆ – ದಕ್ಷಿಣ ಕನ್ನಡ – ವೈದ್ಯಕೀಯ ವಿಜ್ಞಾನಿ | |
(2) | ಬಿ.ವಿ. ಶ್ರೀಕಂಠನ್ – ಕೊಡಗು – ಕೃಷಿ ವಿಜ್ಞಾನಿ | |
(3) | ಸಿ.ಆರ್. ರಾವ್ – ಮಂಗಳೂರು – ಬಾಹ್ಯಾಕಾಶ ವಿಜ್ಞಾನಿ | |
(4) | ರಾಜಾ ರಾಮಣ್ಣ – ಶಿವಮೊಗ್ಗ – ಗಣಿತಜ್ಞ |
ಸರಿ ಉತ್ತರ
(1) ಬಿ.ಎಮ್. ಹೆಗ್ಡೆ – ದಕ್ಷಿಣ ಕನ್ನಡ – ವೈದ್ಯಕೀಯ ವಿಜ್ಞಾನಿ
29. | ₹ 960 ಗಳ ಅಂದಾಜು ವೆಚ್ಚದಲ್ಲಿ ಪಿಕ್ನಿಕ್ ಕೈಗೊಳ್ಳಲು ಒಂದು ಗುಂಪಿನ ಸ್ನೇಹಿತರು ನಿರ್ಧರಿಸುತ್ತಾರೆ. ಅದರೆ ಕೊನೆಯ ಗಳಿಗೆಯಲ್ಲಿ 4 ಮಂದಿ ಬರಲು ನಿರಾಕರಿಸುತ್ತಾರೆ. ಇದರ ಪರಿಣಾಮವಾಗಿ, ಉಳಿದವರಲ್ಲಿ ಒಬ್ಬೊಬ್ಬರೂ ₹ 40 ಗಳನ್ನು ಹೆಚ್ಚಾಗಿ ಭರಿಸಬೇಕಾಗುತ್ತದೆ. ಹಾಗಿದ್ದಲ್ಲಿ ಪಿಕ್ನಿಕ್ ಹೊರಟ ಸ್ನೇಹಿತರ ಸಂಖ್ಯೆಯು | |
(1) | 12 | |
(2) | 24 | |
(3) | 8 | |
(4) | 16 |
ಸರಿ ಉತ್ತರ
(3) 8
30. | ವಿದ್ಯಾರ್ಥಿಗಳ ಒಂದು ಸಾಲಿನಲ್ಲಿ, ರವಿಯು ಎಡಗಡೆಯಿಂದ 10 ನೆಯವನು ಮತ್ತು ರಾಮುವು ಬಲಗಡೆಯಿಂದ 8 ನೆಯವನು. ಅವರು ಪರಸ್ಪರ ತಮ್ಮ ಸ್ಥಳಗಳನ್ನು ಬದಲಾಯಿಸಿಕೊಂಡಲ್ಲಿ ರವಿಯು ಎಡಗಡೆಯಿಂದ 23 ನೆಯವನಾಗುತ್ತಾನೆ. ಹಾಗಿದ್ದಲ್ಲಿ ಸಾಲಿನಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯು | |
(1) | 31 | |
(2) | 30 | |
(3) | 29 | |
(4) | 32 |
ಸರಿ ಉತ್ತರ
(2) 30
31. | ರಾಜು ಒಬ್ಬನೇ ಒಂದು ಕೆಲಸವನ್ನು 10 ದಿನಗಳಲ್ಲಿ ಮಾಡಬಲ್ಲ ಮತ್ತು ಮಂಜು ಅದೇ ಕೆಲಸವನ್ನು ಒಬ್ಬನೇ 12 ದಿನಗಳಲ್ಲಿ ಮಾಡಬಲ್ಲ. ಈ ಕೆಲಸವನ್ನು ₹ 4,800 ಗಳಿಗಾಗಿ ಮಾಡಲು ಅವರು ಕೈಗೆತ್ತಿಕೊಂಡಿದ್ದಾರೆ. ಆನಂದನ ಸಹಾಯದಿಂದ ಕೆಲಸವನ್ನು 5 ದಿನಗಳಲ್ಲಿಯೇ ಮುಗಿಸಿದರೆ, ರಾಜು ಮತ್ತು ಆನಂದರಿಗೆ ಕ್ರಮವಾಗಿ ಪಾವತಿಸಬೇಕಾದ ಮೊತ್ತವೆಷ್ಟು ? | |
(1) | ₹ 2,000 ಮತ್ತು ₹ 400 | |
(2) | ₹ 2,400 ಮತ್ತು ₹ 400 | |
(3) | ₹ 2,400 ಮತ್ತು ₹ 2,000 | |
(4) | ₹ 2,200 ಮತ್ತು ₹ 500 |
ಸರಿ ಉತ್ತರ
(2) ₹ 2,400 ಮತ್ತು ₹ 400
ಸೂಚನೆಗಳು (ಪ್ರಶ್ನೆ ಸಂಖ್ಯೆ 32 ರಿಂದ 34) : ಈ ರೇಖಾ ನಕಾಶೆಯಲ್ಲಿ 1995-2000 ಅವಧಿಯಲ್ಲಿ ಕಂಪನಿಯೊಂದು ಗಳಿಸಿದ ವಾರ್ಷಿಕ ಶೇಕಡಾವಾರು ಲಾಭ ನೀಡಲಾಗಿದೆ. ಈ ರೇಖಾ ನಕಾಶೆಯನ್ನು ಅಭ್ಯಸಿಸಿ ಮತ್ತು ಅದರ ಆಧಾರದ ಮೇಲೆ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
32. | 1998 ರಲ್ಲಿ ಆದಾಯ ₹ 264 ಕೋಟಿ ಆದಲ್ಲಿ ಆ 1998 ನೇ ವರ್ಷದಲ್ಲಿ ಆದ ವೆಚ್ಚ ಎಷ್ಟು ? | |
(1) | ₹ 104 ಕೋಟಿ | |
(2) | ₹ 145 ಕೋಟಿ | |
(3) | ₹ 160 ಕೋಟಿ | |
(4) | ₹ 185 ಕೋಟಿ |
ಸರಿ ಉತ್ತರ
(3) ₹ 160 ಕೋಟಿ
33. | ಕೊಟ್ಟಿರುವ ವರ್ಷಗಳಲ್ಲಿ ಆದಾಯ ಮತ್ತು ವೆಚ್ಚಗಳ ಅನುಪಾತವು ಯಾವ ಕೆಳಗಿನ ವರ್ಷದ ಅವಧಿಯಲ್ಲಿ ಕನಿಷ್ಠ ಇದೆ ? | |
(1) | 1996 | |
(2) | 1997 | |
(3) | 1998 | |
(4) | 2000 |
ಸರಿ ಉತ್ತರ
(2) 1997
34. | ನೀಡಿರುವ ವರ್ಷಗಳಲ್ಲಿ (1995 ರಿಂದ 2000) ಗಳಿಸಿದ ಸರಾಸರಿ ಶೇಕಡಾವಾರು ಲಾಭ ಎಷ್ಟು ? | |
(1) | 50·66 | |
(2) | 55·83 | |
(3) | 60·17 | |
(4) | 33·5 |
ಸರಿ ಉತ್ತರ
(2) 55·83
35. | ಕುದುರೇಮುಖ ರಾಷ್ಟ್ರೀಯ ಉದ್ಯಾನದ ಸಮೀಪ, ತುಂಗಾ ನದಿಯಲ್ಲಿ ಇತ್ತೀಚೆಗೆ ಸಂಶೋಧಿಸಲ್ಪಟ್ಟ ಮೀನಿನ ಹೊಸ ಪ್ರಭೇದಗಳ ಹೆಸರು. | |
(1) | ಪೇಥಿಯಾ ಅತ್ರಾ | |
(2) | ಪೇಥಿಯಾ ಕೇನಿಯಸ್ | |
(3) | ಪೇಥಿಯಾ ಸ್ಟ್ರೆ ಟಾ | |
(4) | ಪೇಥಿಯಾ ಕ್ಯುಮಿಂಗಿ |
ಸರಿ ಉತ್ತರ
(3) ಪೇಥಿಯಾ ಸ್ಟ್ರೆ ಟಾ
36. | ಗಡಿಯಾರದ ಲೋಲಕದಲ್ಲಿ ಅಧಿಕ ಭಾರವಾದ ಬಿಂದು ರಾಶಿ ಇದ್ದು ಅದನ್ನು ರಾಶಿರಹಿತ ದಾರದಿಂದ ಕಟ್ಟಲಾಗಿದೆ. ಅದು ವೇಗವಾಗಿ ಆಂದೋಳನಗೊಂಡು ಗಡಿಯಾರ ವೇಗವಾಗಿ ಸಾಗುತ್ತಿದೆ. ಕೆಳಗಿನ ಯಾವ ಆಯ್ಕೆಯನ್ನು ಆರಿಸಿ ಆಂದೋಳನ ವೇಳೆ ತಗ್ಗಿಸ ಬಹುದು ? | |
(1) | ಗುಂಡಿನ ರಾಶಿಯನ್ನು ಹೆಚ್ಚಿಸಬೇಕು | |
(2) | ಲೋಲಕದ ಉದ್ದವನ್ನು ಹೆಚ್ಚಿಸಬೇಕು | |
(3) | ಲೋಲಕದ ಉದ್ದವನ್ನು ತಗ್ಗಿಸಬೇಕು | |
(4) | ಗುಂಡಿನ ದ್ರವ್ಯರಾಶಿ ತಗ್ಗಿಸಬೇಕು |
ಸರಿ ಉತ್ತರ
(3) ಲೋಲಕದ ಉದ್ದವನ್ನು ತಗ್ಗಿಸಬೇಕು
37. | ಕರ್ನಾಟಕದಲ್ಲಿನ ಹೆಣ್ಣುಮಕ್ಕಳ ಭಾಗ್ಯಲಕ್ಷ್ಮಿ ಯೋಜನೆ ಕುರಿತಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ ? | |
(1) | ಈ ಯೋಜನೆಯ ಗುರಿಯೆಂದರೆ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನದ ವೃದ್ಧಿ ಮತ್ತು ಸಾಮಾನ್ಯವಾಗಿ ಸಮಾಜದಲ್ಲಿ ಮತ್ತು ನಿರ್ದಿಷ್ಟವಾಗಿ ಕುಟುಂಬದಲ್ಲಿ ಹೆಣ್ಣು ಮಗುವಿನ ಸ್ಥಾನಮಾನದ ಏರಿಕೆ. | |
(2) | ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಒಂದೇ ಒಂದು ಹೆಣ್ಣು ಮಗುವಿಗೆ ಮಾತ್ರ ಯೋಜನೆಯು ಇರುವುದು. | |
(3) | ಹೆಣ್ಣು ಮಗುವು ಬಾಲ ಕಾರ್ಮಿಕಳಾಗಿರ ತಕ್ಕದ್ದಲ್ಲ. | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(2) ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಒಂದೇ ಒಂದು ಹೆಣ್ಣು ಮಗುವಿಗೆ ಮಾತ್ರ ಯೋಜನೆಯು ಇರುವುದು.
38. | ಅನ್ನ ಭಾಗ್ಯ ಯೋಜನೆಯಡಿ, 2017-18 ರ ಆಯವ್ಯಯದಲ್ಲಿ ಸಮಾಜದ ಆರ್ಥಿಕವಾಗಿ ದುರ್ಬಲವಾದ ವರ್ಗಗಳ ಬೆಂಬಲಕ್ಕಾಗಿ ಕರ್ನಾಟಕ ಸರ್ಕಾರವು ಪ್ರತಿ ವ್ಯಕ್ತಿ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದ್ದು | |
(1) | 3 ಕೆ.ಜಿ. ಗಳಿಂದ 5 ಕೆ.ಜಿ. ಗಳಿಗೆ | |
(2) | 4 ಕೆ.ಜಿ. ಗಳಿಂದ 7 ಕೆ.ಜಿ. ಗಳಿಗೆ | |
(3) | 5 ಕೆ.ಜಿ. ಗಳಿಂದ 7 ಕೆ.ಜಿ. ಗಳಿಗೆ | |
(4) | 7 ಕೆ.ಜಿ. ಗಳಿಂದ 8 ಕೆ.ಜಿ. ಗಳಿಗೆ |
ಸರಿ ಉತ್ತರ
(3) 5 ಕೆ.ಜಿ. ಗಳಿಂದ 7 ಕೆ.ಜಿ. ಗಳಿಗೆ
39. | ಪೂರ್ವಕ್ಕೆ ಮುಖ ಮಾಡಿರುವಾಗಲೇ, ವಿಲಿಯಮ್ಸನು ಆತನ ಎಡಕ್ಕೆ ತಿರುಗುತ್ತಾನೆ ಮತ್ತು 6 ಮೀ.ಗಳು ನಡೆಯುತ್ತಾನೆ. ಮತ್ತೆ ಆತನ ಎಡಕ್ಕೆ ತಿರುಗುತ್ತಾನೆ ಹಾಗೂ 6 ಮೀ.ಗಳು ನಡೆಯುತ್ತಾನೆ. ಪುನಃ ಆತನ ಬಲಗಡೆಗೆ 45° ಯಷ್ಟು ತಿರುಗುತ್ತಾನೆ ಮತ್ತು 5 ಮೀ.ಗಳಷ್ಟು ದೂರ ನಡೆಯುತ್ತಾನೆ. ಹಾಗಿದ್ದಲ್ಲಿ ಆತನು ಮುಖ ಮಾಡಿರುವ ದಿಕ್ಕು ಯಾವುದು ಮತ್ತು ಆವನ ಪ್ರಾರಂಭದ ಬಿಂದುವಿನಿಂದ ಇರುವ ದೂರವೆಷ್ಟು ? | |
(1) | ಈಶಾನ್ಯ, 5 + 6 √2 ಮೀ. | |
(2) | ವಾಯುವ್ಯ, 5 + 6 √2ಮೀ. | |
(3) | ನೈರುತ್ಯ, 17 ಮೀ. | |
(4) | ವಾಯುವ್ಯ, 17 ಮೀ. |
ಸರಿ ಉತ್ತರ
(2) ವಾಯುವ್ಯ, 5 + 6 √2ಮೀ.
40. | ‘ಗ್ರಾಫೀನ್’ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು / ಗಳು ಸರಿಯಾಗಿವೆ ? | |
A. | ಇತರ ಯಾವುದೇ ತಿಳಿದಿರುವ ವಸ್ತುವಿಗಿಂತಲೂ, ಗ್ರಾಫೀನ್ ಕೊಠಡಿಯ ಉಷ್ಣತೆಯಲ್ಲಿ ವಿದ್ಯುಚ್ಛಕ್ತಿಯನ್ನು ವೇಗವಾಗಿ ಪ್ರವಹಿಸುತ್ತದೆ. | |
B. | ಗ್ರಾಫೀನ್ ಎಂಬುದು ಕಾರ್ಬನ್ನ ಸ್ಫಟಿಕಾಕೃತಿಯ (ಹರಳು ರಚನೆಯ) ಒಂದು ಬಹುರೂಪವಾಗಿದ್ದು ಇದು ದ್ವಿ ಆಯಾಮಗಳ ಗುಣಲಕ್ಷಣ ಗಳೊಂದಿಗಿರುತ್ತದೆ. | |
C. | ಇದು ಉಷ್ಣದ ಕೆಟ್ಟ (ಉತ್ತಮವಲ್ಲದ) ವಾಹಕವಾಗಿದೆ. | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು B ಮಾತ್ರ | |
(2) | A ಮಾತ್ರ | |
(3) | B ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(1) A ಮತ್ತು B ಮಾತ್ರ
41. | ಮೆಕ್ಕೆಜೋಳ ತಂತ್ರಜ್ಞಾನ ಉದ್ಯಾನವು ಕರ್ನಾಟಕದ ಕೆಳಗಿನ ಯಾವ ಸ್ಥಳದಲ್ಲಿ ಸ್ಥಾಪನೆ ಯಾಗುವುದು ? | |
(1) | ರಾಣಿಬೆನ್ನೂರ್ | |
(2) | ಧಾರವಾಡ | |
(3) | ದಾವಣಗೆರೆ | |
(4) | ಶಹಾಪುರ |
ಸರಿ ಉತ್ತರ
(1) ರಾಣಿಬೆನ್ನೂರ್
42. | ಅಕ್ಕಿಯಲ್ಲಿನ ‘ಖೈರ ’ ಎಂಬ ರೋಗಕ್ಕೆ ಕಾರಣವಾಗುವುದು ಇದರ ಕೊರತೆಯಿಂದ | |
(1) | ಮಾಲಿಬ್ಡಿನಂ | |
(2) | ಕ್ಯಾಲ್ಸಿಯಂ | |
(3) | ಸತು | |
(4) | ರಂಜಕ |
ಸರಿ ಉತ್ತರ
(3) ಸತು
43. | ‘‘ಕರ್ನಾಟಕದ ಕೃಷಿ ಬೆಲೆ ಆಯೋಗ’’ ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ಕರ್ನಾಟಕದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ, ಮಾರುಕಟ್ಟೆ ಮತ್ತು ಬೆಲೆಗಳ ಎಲ್ಲಾ ಅಂಶಗಳನ್ನು ನೋಡಿಕೊಳ್ಳುವ ಸಲಹಾ ಕಾಯವಾಗಿದೆ. | |
B. | ಕೃಷಿಯ ಸಚಿವರು, ಆಯೋಗದ ಪದ-ನಿಮಿತ್ತ ಅಧ್ಯಕ್ಷರಾಗಿರುತ್ತಾರೆ. | |
C. | ಆಯೋಗದ ಅವಧಿಯು 5 ವರ್ಷಗಳು. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು C ಮಾತ್ರ | |
(2) | A ಮಾತ್ರ | |
(3) | B ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(2) A ಮಾತ್ರ
44. | ಈ ಕೆಳಗಿನ ಯಾವ ಸ್ಥಳದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಅರ್ಥಶಾಸ್ತ್ರದ ಶಾಲೆಗಾಗಿ ಶ್ರೀ ಪ್ರಣವ್ ಮುಖರ್ಜಿಯವರು ಅಡಿಗಲ್ಲನ್ನು ಹಾಕಿದರು ? | |
(1) | ಬೆಂಗಳೂರು | |
(2) | ಮೈಸೂರು | |
(3) | ಧಾರವಾಡ್ | |
(4) | ಮಂಗಳೂರು |
ಸರಿ ಉತ್ತರ
(1) ಬೆಂಗಳೂರು
45. | ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಅಸಂಘಟಿತ ಕೆಲಸ ಗಾರರಿಗಾಗಿ ಅಧಿಕೃತವಾಗಿ ಏಕಗವಾಕ್ಷಿ ಸೇವಾ ಕೇಂದ್ರಗಳನ್ನು (SWSCs) ಚಾಲನೆ ಗೊಳಿಸಿದೆ. ಈ ಪರಿಕಲ್ಪನೆಯನ್ನು ಕೆಳಗಿನ ಯಾವುದರೊಂದಿಗೆ ಜಂಟಿಯಾಗಿ ಅಭಿವೃದ್ಧಿಗೊಳಿಸಲ್ಪಟ್ಟಿದೆ ? | |
(1) | ಲೇಬರ್ (ಕಾರ್ಮಿಕ) ಇಲಾಖೆ ಮತ್ತು ಜರ್ಮನಿಯ ಫೆಡರಲ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ ಅಂಡ್ ಡೆವಲಪ್ಮೆಂಟ್, GIZ | |
(2) | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜರ್ಮನಿಯ ಫೆಡರಲ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ ಅಂಡ್ ಡೆವಲಪ್ಮೆಂಟ್, GIZ | |
(3) | ಕಾರ್ಮಿಕ ಇಲಾಖೆ ಮತ್ತು ಬೆಲ್ಲೋನಾ ಫೌಂಡೇಶನ್ | |
(4) | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬೆಲ್ಲೋನಾ ಫೌಂಡೇಶನ್ |
ಸರಿ ಉತ್ತರ
(1) ಲೇಬರ್ (ಕಾರ್ಮಿಕ) ಇಲಾಖೆ ಮತ್ತು ಜರ್ಮನಿಯ ಫೆಡರಲ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ ಅಂಡ್ ಡೆವಲಪ್ಮೆಂಟ್, GIZ
46. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ಭಾರತದ ಪ್ರಥಮ POPSK (ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರ) ವು ಮೈಸೂರಿನಲ್ಲಿ ತೆರೆಯಲ್ಪಟ್ಟಿತು. | |
B. | ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ್ರವರು ಭಾರತದ ಪ್ರಥಮ POPSK ಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಇವೆರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(3) A ಮತ್ತು B ಇವೆರಡೂ
47. | ನಗರಾಭಿವೃದ್ಧಿ ಸಚಿವಾಲಯದಿಂದ ನಡೆದ 2017 ರಲ್ಲಿ ಸ್ವಚ್ಛ ಸರ್ವೇಕ್ಷಣ್ ದಲ್ಲಿ ಕರ್ನಾಟಕದ ಯಾವ ನಗರವು ಅಗ್ರ 10 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಗಳಿಸಿತು ? | |
(1) | ಮೈಸೂರು | |
(2) | ಉಡುಪಿ | |
(3) | ಮಂಗಳೂರು | |
(4) | ಶಿವಮೊಗ್ಗ |
ಸರಿ ಉತ್ತರ
(1) ಮೈಸೂರು
48. | ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ, 1964 ರ ಪ್ರಕಾರ ನಗರ ಮುನಿಸಿಪಲ್ ಕೌನ್ಸಿಲ್ ನ ಅಧ್ಯಕ್ಷರ ಅಧಿಕಾರಾವಧಿಯು ಎಷ್ಟು ? | |
(1) | 18 ತಿಂಗಳುಗಳು | |
(2) | 24 ತಿಂಗಳುಗಳು | |
(3) | 30 ತಿಂಗಳುಗಳು | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(3) 30 ತಿಂಗಳುಗಳು
49. | ಕರ್ನಾಟಕ ರಾಜ್ಯದ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರು ನಿರ್ಮಾಣ ವೆಚ್ಚದ ಶೇ. ಎಷ್ಟನ್ನು ಭರಿಸಬೇಕಾಗುತ್ತದೆ ? | |
(1) | ಶೇ. 10 | |
(2) | ಶೇ. 20 | |
(3) | ಶೇ. 40 | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(2) ಶೇ. 20
50. | ‘‘ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ’’ ಪ್ರಕಾರ ಕುಡಿಯುವ ನೀರಿನಲ್ಲಿ ಅನುಮತಿಸಲಾದ ‘‘pH ಮೌಲ್ಯ’’ ದ ವ್ಯಾಪ್ತಿಯು | |
(1) | 4.5 ರಿಂದ 6.5 | |
(2) | 5.5 ರಿಂದ 7.5 | |
(3) | 6.5 ರಿಂದ 8.5 | |
(4) | 7.5 ರಿಂದ 9.5 |
ಸರಿ ಉತ್ತರ
(3) 6.5 ರಿಂದ 8.5
51. | ಕರ್ನಾಟಕದ ಕೆಳಗಿನ ಯಾವ ಉತ್ಪನ್ನಗಳು ಭೌಗೋಳಿಕ ಸೂಚಕ ಸ್ಥಾನಮಾನವನ್ನು ಹೊಂದಿದೆ? | |
A. | ಉಡುಪಿ ಮಟ್ಟುಗುಳ್ಳ ಬದನೆ | |
B. | ಗೋಕಾಕ್ ಕರದಂಟು | |
C. | ಮೈಸೂರು ಸ್ಯಾಂಡಲ್ ಸಾಬೂನು | |
D. | ಮದ್ದೂರು ವಡೆ | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A, B ಮತ್ತು C ಮಾತ್ರ | |
(2) | A, C ಮತ್ತು D ಮಾತ್ರ | |
(3) | A ಮತ್ತು C ಮಾತ್ರ | |
(4) | A, B, C ಮತ್ತು D |
ಸರಿ ಉತ್ತರ
(3) A ಮತ್ತು C ಮಾತ್ರ
52. | 31 ನೇ ಜುಲೈ, 2017 ರಂದು ಕರ್ನಾಟಕದ ಎಷ್ಟು ನಗರಗಳು (AMRUT) ಅಟಲ್ ಮಿಷನ್ ಫಾರ್ ರಿಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಷನ್ ನಲ್ಲಿ ಒಳಗೊಂಡಿವೆ? | |
(1) | 26 | |
(2) | 27 | |
(3) | 28 | |
(4) | 29 |
ಸರಿ ಉತ್ತರ
(2) 27
53. | CFL ಉತ್ಪನ್ನಗಳ ಬೇಡಿಕೆಯಲ್ಲಿನ ಭಾರಿ ಕುಸಿತ ಮತ್ತು LED ಉತ್ಪನ್ನಗಳ ಆದ್ಯತೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದ ಇತ್ತೀಚೆಗೆ ಯಾವ ಕಂಪನಿಯು ತನ್ನ ಲೈಟಿಂಗ್ ಮ್ಯಾನುಫ್ಯಾಕ್ಚರಿಂಗ್ (ಉತ್ಪಾದನಾ) ಘಟಕವನ್ನು ಮೈಸೂರಿನಲ್ಲಿ ಮುಚ್ಚಿತು ? | |
(1) | ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್ | |
(2) | ಫಿಲಿಪ್ಸ್ ಲೈಟಿಂಗ್ ಕಂಪನಿ | |
(3) | ಸಿಸ್ಕಾ ಎಲ್.ಇ.ಡಿ. ಲೈಟ್ಸ್ ಕಂಪನಿ | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(1) ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್
54. | ನಿಮಗೆ ಇತ್ತೀಚೆಗಷ್ಟೇ ಭಾರತ ಸರ್ಕಾರದ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯ ಹುದ್ದೆಗೆ ಬಡ್ತಿ ನೀಡಲಾಗಿದೆ. ಲಿಖಿತ ಪರೀಕ್ಷೆಯಲ್ಲಿನ ಅಭ್ಯರ್ಥಿಗಳ ಸಾಧನೆಯನ್ನು ಆಧರಿಸಿ ಅವರನ್ನು ‘‘ತಾಂತ್ರಿಕ ಮೇಲ್ವಿಚಾರಕರ’’ ಹುದ್ದೆಗೆ ಆಯ್ಕೆ ಮಾಡುವ ಕೆಲಸವನ್ನು ತತಕ್ಷಣವೇ ಮಾಡುವಂತೆ ನಿಮಗೆ ವಹಿಸಲಾಗಿದೆ. ಲಿಖಿತ ಪರೀಕ್ಷೆಯಲ್ಲಿನ ಸಾಧನೆಯ ಮೇರೆಗೆ ಒಟ್ಟು 3 ಹುದ್ದೆಗಳಿಗೆ ಒಟ್ಟು 15 ಅಭ್ಯರ್ಥಿಗಳ ಪಟ್ಟಿ ಮಾಡಲಾಗಿದೆ. ಈಗ ಅವರ ಶೈಕ್ಷಣಿಕ ಸಾಧನೆ, ಕಾರ್ಯಾನುಭವ ಮತ್ತು ಅವರ ನಡೆಯ ದಾಖಲೆ ಇವುಗಳ ಆದ್ಯತೆಯ ಕ್ರಮದಲ್ಲಿ ನೀವು ಇವರನ್ನು ಶಿಫಾರಸ್ ಮಾಡಬೇಕಾಗಿದೆ. ನೀವು ನಂಬಿಕೆಯ ಸಲಹೆಗಾರರೆಂದು ಭಾವಿಸಿರುವ ಒಬ್ಬ ಹಿರಿಯ ಅಧಿಕಾರಿಯು, ಮೊದಲ ಮೂರು ಆಯ್ಕೆಗಳಲ್ಲಿರುವ ಒಬ್ಬ ಅಭ್ಯರ್ಥಿಯನ್ನು ಶಿಫಾರಸ್ ಮಾಡಲು ತಿಳಿಸುತ್ತಾರೆ, ಆಗ ನೀವೇನು ಮಾಡುವಿರಿ ? | |
(1) | ಈ ವಿಷಯವನ್ನು ತತಕ್ಷಣವೇ ನಿಮ್ಮ ತಕ್ಷಣದ ಮೇಲಧಿಕಾರಿಯ ಗಮನಕ್ಕೆ ತರುತ್ತೀರಿ ಮತ್ತು ಅವರು ಮೌಖಿಕವಾಗಿ ನಿರ್ದೇಶಿಸಿದಂತೆ ಮಾಡುತ್ತೀರಿ. | |
(2) | ನಿಮ್ಮ ಸಲಹೆಗಾರರಾದ್ದರಿಂದ ನಿಮ್ನನ್ನು ಅನುಸಂಧಾನ ಮಾಡಿದ ಹಿರಿಯ ಅಧಿಕಾರಿಗಳ ಕೋರಿಕೆಯನ್ನು ಮನ್ನಿಸುತ್ತೀರಿ ಮತ್ತು ಅವರಿಗೆ ಅಧಿಕ ಆದರವನ್ನು ಹೇಳುತ್ತಾ. ಅವರು ತಿಳಿಸಿದ ಅಭ್ಯರ್ಥಿಯ ಸ್ಥಾನವನ್ನು ಲೆಕ್ಕಿಸದೇ ಅವನ/ಳ ಹೆಸರನ್ನು ಶಿಫಾರಸ್ ಮಾಡುತ್ತೀರಿ. | |
(3) | ಎಲ್ಲಾ 15 ಅಭ್ಯರ್ಥಿಗಳ ಪ್ರೊಫೈಲ್ ನ್ನು ಪರೀಕ್ಷಿಸುತ್ತೀರಿ ಹಾಗೂ ಅವರ ಮೆರಿಟ್ನ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವಿರಿ. ನಿಮ್ಮ ಬಳಿ ಆ ಹಿರಿಯ ಅಧಿಕಾರಿಗಳು ಶಿಫಾರಸ್ ಮಾಡಿದ ಅಭ್ಯರ್ಥಿಯೂ ಆಯ್ಕೆಯಾಗಬಹುದಾದ ಸಾಧ್ಯತೆಯಿದ್ದರೂ. | |
(4) | ಕಛೇರಿಯಲ್ಲಿ ಇದು ಭ್ರಷ್ಟಾಚಾರವನ್ನು ವೃದ್ಧಿಗೊಳಿಸುವುದರಿಂದ, ನಿಮ್ಮ ಹಿರಿಯ ಅಧಿಕಾರಿಗಳು ಶಿಫಾರಸ್ ಮಾಡಿದ ಅಭ್ಯರ್ಥಿಯು ಆಯ್ಕೆಯಾಗುವುದೇ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತೀರಿ ಆತನನ್ನು ಆದ್ಯತೆಯಲ್ಲಿ ಕೆಳಗಿರಿಸುತ್ತೀರಿ. |
ಸರಿ ಉತ್ತರ
(3) ಎಲ್ಲಾ 15 ಅಭ್ಯರ್ಥಿಗಳ ಪ್ರೊಫೈಲ್ ನ್ನು ಪರೀಕ್ಷಿಸುತ್ತೀರಿ ಹಾಗೂ ಅವರ ಮೆರಿಟ್ನ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವಿರಿ. ನಿಮ್ಮ ಬಳಿ ಆ ಹಿರಿಯ ಅಧಿಕಾರಿಗಳು ಶಿಫಾರಸ್ ಮಾಡಿದ ಅಭ್ಯರ್ಥಿಯೂ ಆಯ್ಕೆಯಾಗಬಹುದಾದ ಸಾಧ್ಯತೆಯಿದ್ದರೂ.
55. | ಒಂದು ತೆರಿಗೆ ಸಂಗ್ರಹಣೆ ಇಲಾಖೆಯ ಮುಖ್ಯಸ್ಥರು ತಮ್ಮ ಕೆಳಗಿನ ಸಹೋದ್ಯೋಗಿಗಳನ್ನು, ಅವರು ಮುಖ್ಯಸ್ಥರಾಗಿರುವ ವಲಯದಿಂದ ಸರ್ಕಾರಕ್ಕೆ ಉತ್ತಮ ರಾಜಸ್ವವನ್ನು ನೀಡುವ ಮತ್ತು ಈ ಹಿಂದಿನ ತೆರಿಗೆ ಸಂಗ್ರಹಣೆಯ ಎಲ್ಲಾ ದಾಖಲೆಗಳನ್ನು ಹಿಂದಿಕ್ಕುವ ಗುರಿಯತ್ತ ಪ್ರೇರೇಪಿಸಲು ಇಚ್ಛಿಸಿದ್ದಾರೆ. ಇದನ್ನು ಸಾಧಿಸಲು ಕೆಳಗಿನ ಯಾವ ಕಾರ್ಯತಂತ್ರ ಕೌಶಲ್ಯವು ಉತ್ತಮ ? | |
(1) | ಇದು ಅವರ ವೈಯಕ್ತಿಕ ಜವಾಬ್ದಾರಿ ಮತ್ತು ಅದು ಆಂತರಿಕ ತೃಪ್ತಿಯನ್ನುಂಟು ಮಾಡುತ್ತದೆಂದು ಕೆಳಗಿನ ಸಹೋದ್ಯೋಗಿಗಳಿಗೆ ಹೇಳುವುದು. | |
(2) | ಯಾರ ಸಾಧನೆಯು ಇತರರಿಗಿಂತ ಉತ್ತಮವಾಗಿರುತ್ತದೋ, ಅವರಿಗೆ ನಗದು ಬಹುಮಾನಗಳನ್ನು ನೀಡಲಾಗುವುದೆಂದು ಕೆಳಗಿನ ಸಹೋದ್ಯೋಗಿಗಳಲ್ಲಿ ತಿಳಿಸುವುದು. | |
(3) | ಯಾರ ಸಾಧನೆಯು ವಿಶೇಷವಾಗಿರುವುದೋ, ಅವರಿಗೆ ಬಡ್ತಿಯನ್ನು ನೀಡಲಾಗುವುದು ಮತ್ತು ಇತರಿರಿಗಿಲ್ಲ ಎಂಬುದಾಗಿ ಘೋಷಿಸುವುದು. | |
(4) | ತಮ್ಮ ವೈಯಕ್ತಿಕ ಗುರಿಗಳನ್ನು ಮೀರಿ ಸಾಧನೆಯನ್ನು ಮಾಡುತ್ತಾರೋ ಅವರನ್ನು ಪ್ರಶಂಸಿಸಲಾಗುವುದು ಹಾಗೂ ಅವರ ಸೇವಾ ದಾಖಲೆಗಳಲ್ಲಿ ಈ ಬಗ್ಗೆ ಸೂಕ್ತ ನಮೂದನ್ನು ಮಾಡಲಾಗುವುದು ಎಂದು ಕೆಳಗಿನ ಸಹೋದ್ಯೋಗಿಗಳಲ್ಲಿ ಹೇಳುವುದು. |
ಸರಿ ಉತ್ತರ
(4) ತಮ್ಮ ವೈಯಕ್ತಿಕ ಗುರಿಗಳನ್ನು ಮೀರಿ ಸಾಧನೆಯನ್ನು ಮಾಡುತ್ತಾರೋ ಅವರನ್ನು ಪ್ರಶಂಸಿಸಲಾಗುವುದು ಹಾಗೂ ಅವರ ಸೇವಾ ದಾಖಲೆಗಳಲ್ಲಿ ಈ ಬಗ್ಗೆ ಸೂಕ್ತ ನಮೂದನ್ನು ಮಾಡಲಾಗುವುದು ಎಂದು ಕೆಳಗಿನ ಸಹೋದ್ಯೋಗಿಗಳಲ್ಲಿ ಹೇಳುವುದು.
56. | 2017 ಪ್ರೊಕಬಡ್ಡಿ ಪಂದ್ಯಾವಳಿಗಾಗಿ, ‘‘ಬೆಂಗಳೂರು ಬುಲ್ಸ್’’ ತಂಡದ ಕ್ಯಾಪ್ಟನ್ ಆಗಿ ಕೆಳಗಿನ ಯಾರನ್ನು ಹೆಸರಿಸಲಾಗಿದೆ ? | |
(1) | ರೋಹಿತ್ ಕುಮಾರ್ | |
(2) | ರವೀಂದ್ರ್ ಪಹನ್ | |
(3) | ಅಜಯ ಕುಮಾರ್ | |
(4) | ಕುಲದೀಪ್ ಸಿಂಗ್ |
ಸರಿ ಉತ್ತರ
(1) ರೋಹಿತ್ ಕುಮಾರ್
57. | ಚಳಿಗಾಲದ ಅವಧಿಯಲ್ಲಿ ನಿರ್ವಸತಿಕರಿಗೆ ರಾತ್ರಿ-ತಂಗುದಾಣಗಳನ್ನು ಮಾಡಿ ಕೊಡುವ ಯೋಜನೆಯೊಂದನ್ನು ನೀವು ತೆಗೆದುಕೊಂಡಿದ್ದೀರಿ. ಈ ತಂಗುದಾಣಗಳ ಸ್ಥಾಪನೆಯಾದ ಒಂದು ವಾರದೊಳಗಾಗಿ ಸ್ಥಳೀಯ ನಿವಾಸಿಗಳಿಂದ ಆ ಸ್ಥಳಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ದೂರುಗಳನ್ನು ಸ್ಪೀಕರಿಸಿದ್ದು, ಆ ತಂಗುದಾಣಗಳನ್ನು ರದ್ದುಗೊಳಿಸುವ ಬಗ್ಗೆ ಬೇಡಿಕೆಯೂ ಉಂಟಾಗಿದೆ. ಈಗ ನೀವು ಕೈಗೊಳ್ಳಬಹುದಾದ ಉತ್ತಮ ಕ್ರಮವೇನು ? | |
(1) | ಪೋಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ದಾಖಲಿಸಲು ಅವರಿಗೆ ತಿಳಿಸುವುದು ಮೊದಲಿಗೆ ವಿಚಾರಣೆ ನಡೆಯಲು ಬಿಡುವುದು. | |
(2) | ಈ ವಿಷಯದ ಬಗ್ಗೆ ತತ್ಕ್ಷಣವೇ ವಿಚಾರಣೆ ಮಾಡುವ ಭರವಸೆಯನ್ನು ನಿವಾಸಿಗಳಿಗೆ ನೀಡುವುದು. | |
(3) | ಮಾನವೀಯತೆಯಿಂದ ಮಾಡಿರುವ ಪ್ರಯತ್ನಗಳನ್ನು ಪರಿಗಣಿಸುವಂತೆ ನಿವಾಸಿಗಳನ್ನು ಕೋರುವುದು. | |
(4) | ಯೋಜನೆಯನ್ನು ಮುಂದುವರಿಸುವುದು ಮತ್ತು ಅವರ ದೂರುಗಳನ್ನು ನಿರ್ಲಕ್ಷಿಸುವುದು. |
ಸರಿ ಉತ್ತರ
(2) ಈ ವಿಷಯದ ಬಗ್ಗೆ ತತ್ಕ್ಷಣವೇ ವಿಚಾರಣೆ ಮಾಡುವ ಭರವಸೆಯನ್ನು ನಿವಾಸಿಗಳಿಗೆ ನೀಡುವುದು.
58. | 2016 ನೇ ಸಾಲಿನ ದೇವರಾಜ ಅರಸ್ ಪ್ರಶಸ್ತಿಯನ್ನು ಕೆಳಗಿನ ಯಾರಿಗೆ ನೀಡಲಾಯಿತು ? | |
(1) | ಶ್ರೀ ರಘುಪತಿ | |
(2) | ಶ್ರೀ ಎಮ್.ಸಿ. ನೈನಿತಾಲ್ | |
(3) | ಶ್ರೀ ಬಿ.ಎ. ಮೊಹಿದೀನ್ | |
(4) | ಶ್ರೀ ಎಸ್.ಕೆ. ಕಾಂತ |
ಸರಿ ಉತ್ತರ
(3) ಶ್ರೀ ಬಿ.ಎ. ಮೊಹಿದೀನ್
59. | ಒಬ್ಬ ಪ್ರಭಾವೀ ವ್ಯಕ್ತಿಯ ಸೊಸೆಯು ವರದಕ್ಷಿಣೆ ಕೊರತೆಗೆ ಸಂಬಂಧಿಸಿದಂತೆ ತನ್ನ ಅತ್ತೆಮಾವಂದಿರಿಂದ ಶೋಷಣೆಗೊಳಗಾಗಿದ್ದು ಇದನ್ನು ಕುರಿತಂತೆ ಆಡಳಿತ ಪ್ರಾಧಿಕಾರವಾದ ನಿಮ್ಮಲ್ಲಿಗೆ ಬಂದಿದ್ದಾರೆ. ಆಕೆಯ ಮಾತಾಪಿತೃಗಳು ಸಾಮಾಜಿಕ ಒತ್ತಡಗಳ ಕಾರಣದಿಂದಾಗಿ ನಿಮ್ಮನ್ನು ಸಮೀಪಿಸಲಾಗುತ್ತಿಲ್ಲ. ಈಗ ನೀವು ಮಾಡುವುದು | |
(1) | ವಿವರಣೆಗಾಗಿ ವಿವಾಹ ಸಂಬಂಧಿತರನ್ನು ಕರೆಸುವುದು. | |
(2) | ಆ ಸ್ತ್ರೀಯನ್ನು ಸಂದರ್ಭಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಮಾಲೋಚಿಸುವುದು. | |
(3) | ಕಾಯುವುದು ಮತ್ತು ನಿಮ್ಮ ಬಳಿ ಆಕೆಯ ಮಾತಾಪಿತೃಗಳು ಅನುಸಂಧಾನಕ್ಕೆ ಬಂದಲ್ಲಿ ಮಾತ್ರ ಕ್ರಮ ಕೈಗೊಳ್ಳುವುದು. | |
(4) | ಪೋಲೀಸರಲ್ಲಿ ದೂರನ್ನು ಸಲ್ಲಿಸಲು ಆಕೆಗೆ ತಿಳಿಸುವುದು. |
ಸರಿ ಉತ್ತರ
(4) ಪೋಲೀಸ್ರಲ್ಲಿ ದೂರನ್ನು ಸಲ್ಲಿಸಲು ಆಕೆಗೆ ತಿಳಿಸುವುದು.
60. | ಒಂದು ಈಜು ಕೊಳವು ಒಂದೇ ತೆರನಾದ ಹರಿವಿನ ಮೂರು ಕೊಳವೆಗಳಿಂದ ಭರ್ತಿ ಮಾಡಲ್ಪಟ್ಟಿದೆ. | |
ಮೊದಲ ಎರಡು ಕೊಳವೆಗಳು ಏಕಕಾಲಿಕವಾಗಿ ಒಂದೇ ಸಮಯದಲ್ಲಿ ಈಜು ಕೊಳವನ್ನು ತುಂಬುವ ಕಾರ್ಯಚರಣೆ ಮಾಡುತ್ತಿದೆ. ಆ ಅವಧಿಯಲ್ಲಿ ಮೂರನೇ ಕೊಳವೆ ತಾನೊಂದೇ ಒಂಟಿಯಾಗಿ ಈಜು ಕೊಳವನ್ನು ತುಂಬಿಸಿದೆ. | ||
ಎರಡನೇ ಕೊಳವೆಯು ತಾನೊಂದೇ ಮೊದಲನೇ ಕೊಳವೆಗಿಂತಲೂ 5 ಘಂಟೆಗಳು ವೇಗವಾಗಿ ಮತ್ತು ಮೂರನೇ ಕೊಳವೆಗಿಂತಲೂ 4 ಘಂಟೆಗಳಷ್ಟು ನಿಧಾನವಾಗಿದ್ದು ಈಜು ಕೊಳವನ್ನು ತುಂಬಿಸುತ್ತಿದೆ. | ||
ಈಜುಕೊಳವನ್ನು ತುಂಬಿಸಲು ಮೊದಲನೇ ಕೊಳವೆಗೆ ಮಾತ್ರ ಅಗತ್ಯವಾಗಿರುವ ಸಮಯವು | ||
(1) | 8 ಘಂಟೆಗಳು | |
(2) | 12 ಘಂಟೆಗಳು | |
(3) | 15 ಘಂಟೆಗಳು | |
(4) | 18 ಘಂಟೆಗಳು |
ಸರಿ ಉತ್ತರ
(3) 15 ಘಂಟೆಗಳು
61. | ಅಜಿತ್ ಒಬ್ಬ 18 ವರ್ಷದ ವಿದ್ಯಾವಂತ, ನಿರುದ್ಯೋಗಿ ಯಾವುದೇ ಆದಾಯವಿಲ್ಲದ ಯುವಕನಾಗಿದ್ದು ದರ್ಜಿ ವೃತ್ತಿಯನ್ನು ತಿಳಿದಿದ್ದಾನೆ ಮತ್ತು ವೈದ್ಯಕೀಯ ಮಂಡಳಿಯಿಂದ ಜಾರಿಯಾದ ಶೇ. 40 ಕ್ಕಿಂತ ಅಧಿಕ ಅಶಕ್ತತೆ ಹೊಂದಿರುವ ಸಿಂಧುವಾದ ಪ್ರಮಾಣಪತ್ರವನ್ನು ಹೊಂದಿದ್ದಾನೆ. ಹುಟ್ಟಿನಿಂದ ಆತನು ಹಾಸನ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾನೆ. ಇವರು ಯಾವ ಯೋಜನೆಯಡಿ, ಬಡ್ಡಿ ರಹಿತ ಸಾಲವಾಗಿ ₹ 20,000 ಗಳ ಸಹಾಯ ಮತ್ತು ತನ್ನ ವ್ಯವಹಾರವನ್ನು ಪ್ರಾರಂಭಿಸಲು ₹ 15,000 ಗಳನ್ನು ಕಿಯಾಸ್ಕ್ ಗಾಗಿ ಪಡೆಯ ಬಹುದಾಗಿದೆ? | |
(1) | ಆಧಾರ | |
(2) | ಉದ್ಯೋಗಿ | |
(3) | ಚೇತನ | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(1) ಆಧಾರ
62. | ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನಾ ಎಂಬ ಯೋಜನೆಯು ಕೆಳಗಿನ ಯಾವುದಕ್ಕಾಗಿ ಪ್ರಾರಂಭಿಸಲ್ಪಟ್ಟಿತು ? | |
(1) | ರಸ್ತ ಅಪಘಾತಕ್ಕೆ ತುತ್ತಾದವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ | |
(2) | ಹಾನಿಗೊಳಗಾದ ಬೆಳೆಗಳಿಗಾಗಿ ರೈತರಿಗೆ ಬೆಳೆ ವಿಮೆ | |
(3) | ಶಿಶು ಶಿಕ್ಷಣಕ್ಕಾಗಿ ಪೂರಕ ಸಹಾಯ | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(1) ರಸ್ತ ಅಪಘಾತಕ್ಕೆ ತುತ್ತಾದವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ
63. | ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ಪೈರಾಲುಸೈಟ್ ಎಂಬುದು ಮ್ಯಾಂಗನೀಸ್ನ ಒಂದು ಅದಿರಾಗಿದೆ. | |
B. | ಗಾಲೆನಾ ಎಂಬುದು ಸೀಸದ ಒಂದು ಅದಿರಾಗಿದೆ. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಎರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(3) A ಮತ್ತು B ಎರಡೂ
64. | ನೀವು ಮುಂದುವರಿದ ಒಂದು FMCG ಕಂಪನಿಯೊಂದರ ಭಾಗವಾಗಿದ್ದೀರಿ. ಇತ್ತೀಚೆಗಷ್ಟೇ ಫುಡ್ ಅಥಾರಿಟಿ ಆಫ್ ಇಂಡಿಯಾದವರಿಂದ ಮೇಲಕ್ಕೆಳೆಯಲ್ಪಟ್ಟಿದ್ದೀರಿ ಮತ್ತು ನಿಮ್ಮ ಕಂಪನಿಯ ಇನ್ಸ್ಟಾಂಟ್ ನೂಡಲ್ಸ್ಗಳನ್ನು ಅವು ಹಾನಿಕಾರಕ ವಸ್ತುಗಳನ್ನು ಹೊಂದಿರುವ ಕಾರಣದಿಂದ ನಿಷೇಧಿಸಲ್ಪಟ್ಟಿದೆ. ಇದು ನಿಮ್ಮ ಕಂಪನಿಯ ಪ್ರಮುಖ ಉತ್ಪನ್ನವಾಗಿದ್ದು, ಇದರಿಂದ ನಿಮ್ಮ ಕಂಪನಿಗೆ ಅತೀವ ನಷ್ಟಕ್ಕೆ ದಾರಿಯಾಗುವುದು. ಕಂಪನಿಯು ಉತ್ಪನ್ನವನ್ನು ಬಲವಂತದಿಂದ ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಲಾಗಿದೆ. ಈ ನೂಡಲ್ಸ್ಗಳನ್ನು ಹೊಸ ಪರೀಕ್ಷೆಗೆ ಸಲ್ಲಿಸುವಂತೆ ಕಂಪನಿಗೆ ತಿಳಿಸಲಾಗಿದೆ. ನಿಮ್ಮ ಬಾಸ್, ನೀವು ಪರೀಕ್ಷಿಸುವ ಏಜೆನ್ಸಿಯನ್ನು ಅನುಸಂಧಾನ ಮಾಡಲು ತಿಳಿಸಿದ್ದಾರೆ. ಹಾಗೂ ಅವರಿಂದ ನೂಡಲ್ಸ್ಗಳನ್ನು ಅನುಮೋದಿಸಲ್ಪಡುವಂತೆ ಮಾಡಲು ತಿಳಿಸಿದ್ದಾರೆ. ಇದನ್ನು ಎಷ್ಟೇ ವೆಚ್ಚದಲ್ಲಾದರೂ ಮಾಡಿಯೇ ತೀರತಕ್ಕದ್ದೆಂದೂ ಖಚಿತಪಡಿಸಿದ್ದಾರೆ. ಆ ನೂಡಲ್ಸ್ಗಳ ಮೇಲೆ ಸಾಕಷ್ಟು ಪ್ರಮಾಣದ ಕೆಲಸ ನಡೆದಿಲ್ಲದಿರುವುದು ಮತ್ತು ಇವು ಇನ್ನೂ ಕೆಲವು ವಿವಾದಗಳನ್ನು ಹೊಂದಿರುವ ಬಗ್ಗೆ ನಿಮಗೆ ಅರಿವಿದೆ. | |
ನೀಡಿರುವ ಪ್ರಕರಣದಲ್ಲಿ ನೀವು ಕೈಗೊಳ್ಳುವ ಉತ್ತಮ ಕ್ರಮ ವೇನು ? | ||
A. | ನಿಮ್ಮ ಬಾಸ್ ಹೇಳಿರುವ ರೀತಿಯಲ್ಲಿ ನಡೆದುಕೊಳ್ಳುವಿರಿ. | |
B. | ನಿಮ್ಮ ಬಾಸ್ ಹೇಳಿರುವ ರೀತಿಯಲ್ಲಿಯೇ ನಡೆದುಕೊಳ್ಳುವಿರಿ ಆದರೆ ಈ ಬಗ್ಗೆ ಪ್ರೆಸ್ನವರಿಗೆ ಮಾಹಿತಿ ಸೋರಿಕೆ ಮಾಡುತ್ತೀರಿ. | |
C. | ನಿಮ್ಮ ಬಾಸ್ ಕೊಟ್ಟಿರುವ ಸೂಚನೆಗಳನ್ನು ಅನುಸರಿಸಲು ನಿರಾಕರಿಸುತ್ತೀರಿ. | |
D. | ನಿಮ್ಮ ಬಾಸ್ನ್ನು ಬೇರೆ ರೀತಿಯಲ್ಲಿ ವರ್ತಿಸುವಂತೆ ಮನವರಿಕೆ ಮಾಡಲು ಪ್ರಯತ್ನಿಸುತ್ತೀರಿ. | |
E. | ಈ ಕಂಪನಿಯನ್ನು ಬಿಟ್ಟು ಹೋಗಲು ಪರಿಗಣಿಸುತ್ತೀರಿ. | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು E | |
(2) | B ಮತ್ತು D | |
(3) | C ಮತ್ತು E | |
(4) | D ಮತ್ತು E |
ಸರಿ ಉತ್ತರ
(4) D ಮತ್ತು E
65. | ಪ್ರತಿ ವರ್ಷವೂ, ಅಮೇರಿಕನ್ನರು ತಮ್ಮ ಮನೆಗಳಲ್ಲಿ ಆರೋಗ್ಯಪಾಲನೆಯ ನಿರ್ವಹಣೆಗಾಗಿ ಒಂದು ಬಿಲಿಯನ್ ಗಿಂತ ಅಧಿಕ ಹರಿತ ವಸ್ತುಗಳನ್ನು ಬಳಸುತ್ತಿದ್ದಾರೆ, ಈ ಹರಿತವಸ್ತುಗಳು ಈಟಿಕೆಗಳು, ಸೂಜಿಗಳು ಮತ್ತು ಸಿರಂಜ್ ಗಳನ್ನು ಒಳಗೊಳ್ಳುತ್ತದೆ. ಇವುಗಳನ್ನು ರಂಧ್ರ ನಿರೋಧ ಧಾರಕಗಳಲ್ಲಿ ವಿಲೇವಾರಿ ಮಾಡದಿದ್ದರೆ, ಇವು ನೈರ್ಮಲ್ಯದ ಕೆಲಸಗಾರರಿಗೆ ಗಾಯವನ್ನುಂಟು ಮಾಡುತ್ತವೆ. ಹರಿತ ವಸ್ತುಗಳನ್ನು ಸುರಕ್ಷಾ ಮುಚ್ಚಳವಿರುವ ಒರಟು ಪ್ಲಾಸ್ಟಿಕ್ ಅಥವಾ ಲೋಹದ ಧಾರಕಗಳಲ್ಲಿ ವಿಲೇವಾರಿ ಮಾಡಬೇಕು. ಈ ಧಾರಕಗಳಿಗೆ ಸ್ಪಷ್ಟವಾಗಿ ಗುರ್ತು ಮಾಡಿರಬೇಕು ಮತ್ತು ಇವು ರಂಧ್ರ ನಿರೋಧಕವಾಗಿರಬೇಕು. ಈ ಕಂಡಿಕೆಯು ನೈರ್ಮಲ್ಯದ ಕೆಲಸಗಾರರು ಗಾಯಗೊಳ್ಳುವ ವಿಷಯವನ್ನು ಉತ್ತಮವಾಗಿ ಬೆಂಬಲಿಸುವುದು ಒಂದು ವೇಳೆ ಅವುಗಳನ್ನು | |
(1) | ರಂಧ್ರ ನಿರೋಧ ಧಾರಕದಲ್ಲಿ ಹರಿತ ವಸ್ತುಗಳನ್ನಿಡದಿದ್ದಾಗ. | |
(2) | ಸುರಕ್ಷಾ ಧಾರಕಗಳಲ್ಲಿಡದಿದ್ದ ಹರಿತ ವಸ್ತುಗಳ ಸಂಪರ್ಕಕ್ಕೆ ಬಂದಾಗ. | |
(3) | ತಮ ಮನೆಗಳಲ್ಲಿ ಈಟಿಕೆಗಳು, ಸೂಜಿಗಳು ಮತ್ತು ಸಿರಿಂಜು ಗಳಂತಹ ಹರಿತ ವಸ್ತುಗಳ ಬಗ್ಗೆ ಎಚ್ಚರದಿಂದಿರದಿದ್ದಾಗ. | |
(4) | ಆ ಧಾರಕಗಳಲ್ಲಿ ಹರಿತ ವಸ್ತುಗಳನ್ನು ಹೊಂದಿವೆ ಎಂಬ ಎಚ್ಚರಿಕೆ ನೀಡುವ ಗುರುತನ್ನು ಮಾಡಿಲ್ಲದಿದ್ದಾಗ ಅವರು ಅದನ್ನು ಎತ್ತಿಕೊಂಡಾಗ. |
ಸರಿ ಉತ್ತರ
(2) ಸುರಕ್ಷಾ ಧಾರಕಗಳಲ್ಲಿಡದಿದ್ದ ಹರಿತ ವಸ್ತುಗಳ ಸಂಪರ್ಕಕ್ಕೆ ಬಂದಾಗ.
66. | ಆಂಜಿಯೋಪ್ಲಾಸ್ಟಿಯು ಒಂದು ಚಿಕಿತ್ಸಾ ವಿಧಾನವಾಗಿದ್ದು ಇದು ಕರೋನರಿ ಅಪಧಮನಿಯ ಒಳಭಾಗಕ್ಕೆ ಒತ್ತಾಸೆ ನೀಡುವ ಸಾರುವೆ ಕಟ್ಟಾಗಿ ವರ್ತಿಸುವ ಸಣ್ಣ ನಳಿಕೆಯನ್ನು ಒಳಸೇರಿಸುವುದನ್ನೂ ಒಳಗೊಳ್ಳುತ್ತದೆ. ಈ ನಳಿಕೆಯನ್ನು ಹೀಗೆನ್ನುತ್ತಾರೆ | |
(1) | ಸ್ಟಂಟ್ | |
(2) | ಕ್ಯಾಥೆಟರ್ | |
(3) | ಬಲೂನ್ | |
(4) | ಅಥೆರಕ್ಟಮಿ ತಂತ್ರ |
ಸರಿ ಉತ್ತರ
(1) ಸ್ಟಂಟ್
67. | ಎಲೆಕ್ಟ್ರಾನಿಕ ಅಂಚೆ (ಇ-ಮೇಲ್) ಯ ಬಳಕೆಯು ಒಂದು ದಶಕ ದಿಂದ ವಿಸ್ತರಿಸಿ ಹರಡುತ್ತಿದೆ. ಇ-ಅಂಚೆಯು ಕಲ್ಪನೆ /ಭಾವನೆಗಳ ಹರಿವನ್ನು ಸರಳೀಕರಣಗೊಳಿಸುತ್ತದೆ, ದೂರದ ಕಛೇರಿಗಳವರನ್ನು ಜೋಡಿಸುತ್ತದೆ, ಸಭೆಗಳ ಅಗತ್ಯತೆಯನ್ನು ತೆಗೆದು ಹಾಕುತ್ತದೆ, ಉತ್ಪಾದಕತೆಯನ್ನು ಆಗಿಂದಾಗ್ಗೆ ವೃದ್ಧಿಸುತ್ತದೆ. ಅಸ್ಪಷ್ಟ ಮತ್ತು ಸೂಕ್ತವಲ್ಲದ ಸಂವಹನಗಳಿಂದ ತಪ್ಪಿಸಿಕೊಳ್ಳಲು ಇ-ಅಂಚೆಯನ್ನು ಹೇಗಿದ್ದರೂ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ ಇ-ಮೇಲ್ ಸಂದೇಶಗಳು ಸಂಕ್ಷಿಪ್ತವಾಗಿರಬೇಕು ಮತ್ತು ಒಂದು ವಿಷಯಕ್ಕೆ ಮಿತಿಗೊಳಿಸಲ್ಪಟ್ಟಿರ ಬೇಕು. ಸಂಕೀರ್ಣ ವಿಷಯಗಳ ಬಗ್ಗೆ ತಿಳಿಸಬೇಕಾದಾಗ, ಫೋನ್ ಕರೆಗಳೇ ಉತ್ತಮ. ಈ ಕಂಡಿಕೆಯ ಮುಖ್ಯ ಅಂಶವೆಂದರೆ ಇ-ಅಂಚೆಯು | |
(1) | ದೂರದ ಕಛೇರಿಗಳ ಜನರನ್ನು ಸಂಪರ್ಕಿಸಲು ಸದಾ ಇದು ಸುಲಭ ಮಾರ್ಗವಲ್ಲ. | |
(2) | ಮೊದಲಿಗೆ ಇದು ಒಂದು ದಶಕದ ಹಿಂದೆಯೇ ಆರಂಭವಾಗಿರುವುದರಿಂದ ಗಣನಾತ್ಮಕವಾಗಿ ಬದಲಾಗಿದೆ. | |
(3) | ಇದನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದಾಗ ಜನರು ನಿರುತ್ಪಾದಕರಾಗಲು ಕಾರಣವಾಗುತ್ತದೆ. | |
(4) | ಇದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದಲ್ಲಿ ಮಾತ್ರ ಕೆಲವು ನಿರ್ದಿಷ್ಟಬಗೆಯ ಸಂದೇಶಗಳಲ್ಲಿ ಪರಿಣಾಮಕಾರಿಯಾಗಿರುತ್ತದೆ. |
ಸರಿ ಉತ್ತರ
(4) ಇದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದಲ್ಲಿ ಮಾತ್ರ ಕೆಲವು ನಿರ್ದಿಷ್ಟಬಗೆಯ ಸಂದೇಶಗಳಲ್ಲಿ ಪರಿಣಾಮಕಾರಿಯಾಗಿರುತ್ತದೆ.
68. | ಕರ್ನಾಟಕದ ಗೌರವಾನ್ವಿತ ಮುಖ್ಯ ಮಂತ್ರಿಗಳಿಂದ 7 ನೇ ಮಾರ್ಚ್, 2017 ರಂದು ವಿಸ್ತಾರವಾದ ಜಾಲಾಧಾರಿತ ತಡೆಹಲಗೆ (ಡಾಶ್ ಬೋರ್ಡ್) ಯನ್ನು ಕರ್ನಾಟಕ ರಾಜ್ಯ ಸರ್ಕಾರದ ಸಾಧನೆಯನ್ನು ಪ್ರದರ್ಶಿಸಲಿಕ್ಕಾಗಿ ಪ್ರಾರಂಭಿಸಿಲ್ಪಟ್ಟಿತು. ಆಳ್ವಿಕೆಯಲ್ಲಿನ ದಕ್ಷತೆಯನ್ನು ಸುಧಾರಿಸುವ ಮತ್ತು ಸರ್ಕಾರದ ಪ್ರಗತಿಯ ಜಾಡನ್ನು ನಾಗರಿಕರು ತಿಳಿಯುವಂತೆ ಮಾಡುವ ಗುರಿಯನ್ನು ಹೊಂದಿದ್ದು ಆ ಜಾಲಾಧಾರಿತ ತಡೆಹಲಗೆಯ ಹೆಸರೇನು ? | |
(1) | ಪ್ರತಿಬಿಂಬ | |
(2) | ಸೇವಾ ಸಿಂಧು | |
(3) | ಪರಿಕ್ರಮ | |
(4) | ಪ್ರತಿಬದ್ಧತೆ |
ಸರಿ ಉತ್ತರ
(1) ಪ್ರತಿಬಿಂಬ
69. | ಎಲ್ಲರಿಗೂ ತಿಳಿದಿರುವಂತೆ ವಿಶ್ವಕ್ಕೆ ತುರ್ತಾಗಿ ಅಗತ್ಯವಿರುವುದು ಆಹಾರದ ಸಮರ್ಪಕ ಹಂಚಿಕೆ, ಇದರಿಂದ ಪ್ರತಿಯೊಬ್ಬರೂ ಸಾಕಷ್ಟು ಪಡೆಯಬಹುದು. ಅದರಷ್ಟೇ ತುರ್ತು ಎಂದರೆ ಔಷಧದ ಸಮರ್ಪಕ ಹಂಚಿಕೆ. ವೈದ್ಯಕೀಯ ಪರಿಣತಿ ಮತ್ತು ವೈದ್ಯಕೀಯ ಪೂರೈಕೆಗಳು ಇಡೀ ವಿಶ್ವಾದ್ಯಂತ ಮರು ಹಂಚಿಕೆಯಾಗುವ ಆವಶ್ಯಕತೆ ಇದೆ. ಇದರಿಂದ ಏಳಿಗೆ ಹೊಂದು ತ್ತಿರುವ ರಾಷ್ಟ್ರಗಳ ಜನರು ಸೂಕ್ತ ವೈದ್ಯಕೀಯ ರಕ್ಷಣೆಯನ್ನು ಹೊಂದಬಹುದು. ಈ ಮೇಲಿನ ಕಂಡಿಕೆಯು ಬೆಂಬಲಿಸುವ ಹೇಳಿಕೆ ಯೆಂದರೆ | |
(1) | ವಿಶ್ವದ ಬಹುತೇಕ ಜನರು ವೈದ್ಯಕೀಯ ರಕ್ಷಣೆಯನ್ನು ಹೊಂದಿಲ್ಲ . | |
(2) | ಕಳೆದ ಕೆಲವು ವರ್ಷಗಳಿಂದೀಚೆಗೆ ಏಳಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವೈದ್ಯಕೀಯ ಸಂಪನ್ಮೂಲಗಳು ಕುಗ್ಗುತ್ತಲಿವೆ. | |
(3) | ವೈದ್ಯಕೀಯ ರಕ್ಷಣೆಯ ಅಗತ್ಯವುಳ್ಳಂತವರಿಗೆ ವೈದ್ಯರು ಸಾಕಷ್ಟು ಸಮಯವನ್ನಾಗಲೀ ಮತ್ತು ಹಣವನ್ನಾಗಲೀ ನೀಡುತ್ತಿಲ್ಲ . | |
(4) | ಏಳಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಹಲವು ಜನರು ಸೂಕ್ತ ವೈದ್ಯಕೀಯ ರಕ್ಷಣೆಯನ್ನು ಪಡೆಯುತ್ತಿಲ್ಲ. |
ಸರಿ ಉತ್ತರ
(4) ಏಳಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಹಲವು ಜನರು ಸೂಕ್ತ ವೈದ್ಯಕೀಯ ರಕ್ಷಣೆಯನ್ನು ಪಡೆಯುತ್ತಿಲ್ಲ.
70. | ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆಯು ಸ್ತ್ರೀಯರು ಆದಾಯ ತರುವ ಉತ್ಪಾದಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿ ಕೊಳ್ಳುವಂತೆ ಉತ್ತೇಜಿಸಿ ಸಹಾಯ ಮಾಡುತ್ತದೆ ಮತ್ತು ಯೋಜನೆಗಳಿಗಾಗಿ ಸಬ್ಸಿಡಿಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಒಟ್ಟು ಯೋಜನಾವೆಚ್ಚದ ಗರಿಷ್ಠ ಮಿತಿಯು ಎಷ್ಟಿದ್ದಲ್ಲಿ ಈ ಯೋಜನೆ ಯಡಿ ಸಬ್ಸಿಡಿಗೆ ಪರಿಗಣಿಸಲ್ಪಡುತ್ತದೆ ? | |
(1) | ₹ 75,000 | |
(2) | ₹ 1,00,000 | |
(3) | ₹ 1,25,000 | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(2) ₹ 1,00,000
71. | 11 ನೇ ಏರೋ ಇಂಡಿಯಾ ಪ್ರದರ್ಶನದ ಆವೃತ್ತಿಯು ಬೆಂಗಳೂರಿನ ಯಲಹಂಕದ ವಿಮಾನಯಾನ ನಿಲ್ದಾಣದಲ್ಲಿ 2017 ರ ಫೆಬ್ರುವರಿಯಲ್ಲಿ ನಡೆದಿದ್ದು, ಇದರ ಉದ್ಘಾಟನೆ ಯಾರಿಂದ ಆಯತು ? | |
(1) | ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿ | |
(2) | ಆಗಿನ ರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ಪ್ರಣಬ್ ಮುಖರ್ಜಿ | |
(3) | ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್ | |
(4) | ಮೇಲಿನ ಯಾರೂ ಅಲ್ಲ |
ಸರಿ ಉತ್ತರ
(3) ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್
72. | ಅಣುಶಕ್ತಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ / ಗಳು ಸರಿಯಾಗಿವೆ ? | |
A. | 1974 ರ ಮೇ 18 ರಂದು ರಾಜಸ್ಥಾನದ ಪೋಖ್ರಾನ್ ಎಂಬಲ್ಲಿ ಭಾರತವು ಪ್ರಥಮ ನ್ಯೂಕ್ಲಿಯರ್ ಆಸ್ಫೋಟವನ್ನು ನಡೆಸಿತು. | |
B. | ನ್ಯೂಕ್ಲಿಯರ್ ರಿಯಾಕ್ಟರ್ನಲ್ಲಿ ಕ್ಯಾಡ್ಮಿಯಮ್ ನ್ನು ಇಂಧನವಾಗಿ ಬಳಸಲಾಯಿತು. | |
C. | ಥರ್ಮಲ ನ್ಯೂಟ್ರಾನ್ ನ ಶಕ್ತಿಯು 0·025 eV ಗಿಂತಲೂ ಮೇಲ್ಪಟ್ಟಿದ್ದು. | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮತ್ತು C ಮಾತ್ರ | |
(2) | B ಮತ್ತು C ಮಾತ್ರ | |
(3) | A ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(1) A ಮತ್ತು C ಮಾತ್ರ
73. | ನೀರಿನ ಗಡಸುತನಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ತಾತ್ಕಾಲಿಕ ಗಡಸುತನಕ್ಕೆ ಕಾರಣವಾಗುವುದು ನೀರಿನಲ್ಲಿ ಕರಗಿರುವ ಕ್ಯಾಲ್ಸಿಯಂ ಬೈಕಾರ್ಬೊನೇಟ್ ಮತ್ತು ಮೆಗ್ನೀಷಿಯಂ ಬೈಕಾರ್ಬೊನೇಟ್ಗಳು. | |
B. | ಶಾಸ್ವತ ಗಡಸುತನಕ್ಕೆ ಕಾರಣವಾಗುವುದು ನೀರಿನಲ್ಲಿ ಕರಗಿರುವ ಕ್ಯಾಲ್ಸಿಯಂ ಸಲ್ಫೇಟ್ / ಕ್ಯಾಲ್ಸಿಯಂ ಕ್ಲೋರೈಡ್ ಮತ್ತು ಅಥವಾ ಮೆಗ್ನೀಷಿಯಂ ಸಲ್ಫೇಟ್ / ಮೇಗ್ನೀಷಿಯಂ ಕ್ಲೋರೈಡ್. | |
C. | ಶಾಶ್ವತ ಗಡಸುತನವನ್ನು ಹೋಗಲಾಡಿಸುವ ವಿಧಾನಗಳಲ್ಲೊಂದು ನೀರನ್ನು ಕುದಿಸುವುದು. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | A ಮತ್ತು B ಮಾತ್ರ | |
(3) | B ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(2) A ಮತ್ತು B ಮಾತ್ರ
74. | ಕೆಳಗಿನ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳನ್ನು ನೀಡಲಾಗಿದ್ದು, ಇವುಗಳನ್ನು ಹೊಂದಿಕೊಂಡಂತೆ ನಾಲ್ಕು ತೀರ್ಮಾನಗಳಿವೆ. ಅವು ತಿಳಿದಿರುವ ಸಂಗತಿಗಳೊಂದಿಗೆ ಅನುರೂಪವಾಗಿರದಿದ್ದರೂ, ಹೇಳಿಕೆಗಳನ್ನು ನೀವು ಸತ್ಯ ಎಂತಲೇ ಪರಿಗಣಿಸಬೇಕಾಗುತ್ತದೆ. ನೀಡಿರುವ ಹೇಳಿಕೆಗಳಿಗೆ ತಾರ್ಕಿಕವಾಗಿ ಅವುಗಳನ್ನು ಅನುಸರಿಸುವ ತೀರ್ಮಾನಗಳ ಯಾವುವು ? | |
ಹೇಳಿಕೆಗಳು : | ||
I. | ಕೆಲವು ಮನುಷ್ಯರು ಮೇಕೆಗಳು. | |
II. | ಎಲ್ಲಾ ಮೇಕೆಗಳು ಗುಳ್ಳೆನರಿಗಳು. | |
ತೀರ್ಮಾನಗಳು : | ||
A. | ಕೆಲವು ಮನುಷ್ಯರು ಗುಳ್ಳೆನರಿಗಳು. | |
B. | ಕೆಲವು ಗುಳ್ಳೆನರಿಗಳು ಮನುಷ್ಯರು. | |
C. | ಎಲ್ಲಾ ಗುಳ್ಳೆನರಿಗಳು ಮೇಕೆಗಳು. | |
D. | ಕೆಲವು ಮೇಕೆಗಳು ಮನುಷ್ಯರು. | |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||
(1) | A ಮತ್ತು B ಮಾತ್ರ | |
(2) | C ಮತ್ತು D ಮಾತ್ರ | |
(3) | A, B ಮತ್ತು D ಮಾತ್ರ | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(3) A, B ಮತ್ತು D ಮಾತ್ರ
75. | ಪ್ರವಾಸೀ ಭಾರತೀಯ ದಿವಸದ 14 ನೇ ಆವೃತ್ತಿಯು ಬೆಂಗಳೂರಿನಲ್ಲಿ ಜನವರಿ 2017 ರಲ್ಲಿ ನಡೆಯಿತು. ಪ್ರವಾಸೀ ಭಾರತೀಯ ದಿವಸದ ಮುಖ್ಯ ಆಶಯವೆಂದರೆ | |
(1) | ಚದರಿಕೆಯಲ್ಲಿ (ಡಯಾಸ್ಪೋರದಲ್ಲಿ) ತೊಡಗಿರುವುದು-ಭಾರತೀಯ ಬೆಳವಣಿಗೆಯ ಕಥೆ | |
(2) | ಭಾರತೀಯ ಚದರಿಕೆಯೊಂದಿಗೆ (ಡಯಾಸ್ಪೋರ) ತೊಡಗುವಿಕೆಯ ನಿರ್ಧಾರ | |
(3) | ಒಂದು ಭಾರತ-ಬದಿಯ ಪೀಳಿಗೆಗಳ ಜೋಡಣೆ | |
(4) | ಭಾರತೀಯ ಚದರಿಕೆ-ಭವಿಷ್ಯತ್ತಿನ ಹಂಚಿಕೊಳ್ಳುವಿಕೆ |
ಸರಿ ಉತ್ತರ
(2) ಭಾರತೀಯ ಚದರಿಕೆಯೊಂದಿಗೆ (ಡಯಾಸ್ಪೋರ) ತೊಡಗುವಿಕೆಯ ನಿರ್ಧಾರ
ಸರಿ ಉತ್ತರ
(3) 8
77. | ಅಶೋಕ್ ಮತ್ತು ಕಂಪನಿಯು ತಮ್ಮ ಕಂಪನಿಯ ಪ್ರತಿರೂಪವನ್ನು ಆಧುನಿಕೀಕರಣಗೊಳಿಸಲು ನಿರ್ಧರಿಸಿದ್ದಾರೆ. ಸಂಸ್ಥೆಯ ಒಂದು ಭಾಗವಾಗಿ ರೂಪಿಸಲಿಕ್ಕಾಗಿ ಕಂಪನಿಯ ಹೆಸರನ್ನು ಬದಲಾಯಿಸಲಿಚ್ಛಿಸಿದ್ದಾರೆ, ಇದಕ್ಕಾಗಿ 4 ಪ್ರಥಮಾಕ್ಷರಿಗಳ (ಅಕ್ರಾನಿಮ್ಸ್ ) ಸಣ್ಣ ಪಟ್ಟಿ ಮಾಡಿದ್ದಾರೆ. ಕಂಪನಿಯ ಚೀಫ್ ಎಕ್ಷಿಕ್ಯೂಟಿವ್ ಆಫೀಸರ್ ಇವರು ಪಾರದರ್ಶಕ ಗಾಜಿನ ಬಾಗಿಲ ಮೇಲೆ ಲಂಬವಾಗಿ ಮೇಲಿನಿಂದ ಕೆಳಗೆ ಬಣ್ಣ ಲೇಪಿಸಿದಾಗ, ಒಳಭಾಗ ಮತ್ತು ಹೊರಭಾಗ ಎರಡೂ ಕಡೆಯಿಂದ ಓದಿದಾಗಲೂ ಒಂದೇ ಇರುವಂತಹ ಹೆಸರನ್ನು ಆಯ್ಕೆ ಮಾಡಲು ಸೂಚಿಸಿದ್ದಾರೆ. ಕೆಳಗಿನ ಯಾವ ಹೆಸರುಗಳನ್ನು ಅವರು ಆರಿಸಬಹುದು ? | |
(1) | WEEM | |
(2) | TIME | |
(3) | NONA | |
(4) | MITA |
ಸರಿ ಉತ್ತರ
(4) MITA
78. | ಪಟ್ಟಿ I ಯಲ್ಲಿನ ಸಮಾವೇಶಗಳನ್ನು ಅವುಗಳ ಕಾರ್ಯಸೂಚಿ (ಪಟ್ಟಿ II) ಯೊಡನೆ ಹೊಂದಿಸಿರಿ : |
ಪಟ್ಟಿ I (ಸಮಾವೇಶಗಳು) | ಪಟ್ಟಿ II (ಕಾರ್ಯಸೂಚಿ) | |||
A. | ಬೇಸೆಲ್ ಸಮಾವೇಶ, 1989 | I. | ಓಜೋನ್ ಪದರದ ಸಂರಕ್ಷಣೆ | |
B. | ವಿಯನ್ನಾ ಸಮಾವೇಶ, 1985 | II. | ಅಪಾಯಕಾರಿ ತ್ಯಾಜ್ಯಗಳು ಮತ್ತು ಅವುಗಳ ವಿಲೇವಾರಿಯ ಟ್ರಾನ್ಸ್ ಬೌಂಡರಿ (ಎಲ್ಲೆಯಾಚೆಗಿನ) ಚಲನವಲನಗಳ ನಿಯಂತ್ರಣ | |
C. | ಸ್ಟಾಕ್ ಹೋಂ ಸಮಾವೇಶ, 2001 | III. | ಬಾಲ್ಟಿಕ್ ಸಮುದ್ರ ತೀರದ ನೌಕಾ ಪರಿಸರದ ಸಂರಕ್ಷಣೆ | |
D. | ನವ ಹೆಲ್ಸಿಂಕಿ ಸಮಾವೇಶ, 1992 | IV. | ಅವಿಚ್ಛಿನ್ನ ಸಾವಯವ ಮಾಲಿನ್ಯ ಕಾರಿಗಳಿಂದ ಪರಿಸರ ಮತ್ತು ಮಾನವ ಆರೋಗ್ಯದ ಸಂರಕ್ಷಣೆ ಮಾಡುವುದು | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
A | B | C | D | ||
(1) | I | II | IV | III | |
(2) | II | I | IV | III | |
(3) | II | I | III | IV | |
(4) | I | II | III | IV |
ಸರಿ ಉತ್ತರ
(2) II I IV III
79. | ವಾಯುಮಂಡಲದ ಅಧಿಕ ಭಾಗವನ್ನು 10 ಕಿ.ಮೀ. ಮತ್ತು 50 ಕಿ.ಮೀ.ಗಳ ನಡುವಣ ಎತ್ತರದವರೆಗೆ ಓರೆನ್ ಪದರವು ಅಡಕಗೊಳಿಸಿಕೊಂಡಿದ್ದು ವಾಯುಮಂಡಲದ ಓರೆನ್ ಪದರದ ದಪ್ಪವನ್ನು ಅಳೆಯಲು ಕೆಳಗಿನ ಯಾವುದು ಮಾಪಕವಾಗಿದೆ ? | |
(1) | ಡಾಬ್ಸನ್ ಏಕಮಾನ | |
(2) | ಕ್ಯಾಂಡೆಲ್ಲಾ ಏಕಮಾನ | |
(3) | ಮೆಲ್ಸನ್ ಏಕಮಾನ | |
(4) | ಸಿಲ್ವರ್ಟ್ ಏಕಮಾನ |
ಸರಿ ಉತ್ತರ
(1) ಡಾಬ್ಸನ್ ಏಕಮಾನ
80. | ಕೋಮು ಸಾಮರಸ್ಯದ ಲಕ್ಷಣವಾಗಿ, ಕರ್ನಾಟಕದ ಒಂದು ಖ್ಯಾತ ದೇವಾಲಯವು ತನ್ನ ಆವರಣದಲ್ಲಿ ಮುಸ್ಲಿಮರು ರಂಜಾನ್ ಉಪವಾಸ ಮುರಿಯಲು ಇಫ್ತಾರ್ ಕೂಟವನ್ನು ವ್ಯವಸ್ಥೆಗೊಳಿಸಿತು. ಈ ಕೆಳಗಿನವುಗಳಲ್ಲಿ ಇದನ್ನು ಕೈಗೊಂಡ ದೇವಾಲಯವೆಂದರೆ ? | |
(1) | ಶ್ರೀ ಕೃಷ್ಣ ದೇವಾಲಯ, ಉಡುಪಿ | |
(2) | ಶ್ರೀ ಮಂಗಳಾ ದೇವಿ ದೇವಾಲಯ, ಮಂಗಳೂರು | |
(3) | ಶ್ರೀ ಮೂಕಾಂಬಿಕಾ ದೇವಾಲಯ, ಕೊಲ್ಲೂರು | |
(4) | ಇಸ್ಕಾನ್ ದೇವಾಲಯ, ಬೆಂಗಳೂರು |
ಸರಿ ಉತ್ತರ
(1) ಶ್ರೀ ಕೃಷ್ಣ ದೇವಾಲಯ, ಉಡುಪಿ
81. | ಒಂದು ಹರಿತ ಚಾಕುವಿಗಿಂತ ಒಂದು ಮೊಂಡು ಚಾಕುವಿನಿಂದ ತರಕಾರಿಯನ್ನು ಕತ್ತರಿಸುವುದು ಸಾಪೇಕ್ಷವಾಗಿ ಕಠಿಣ ಏಕೆಂದರೆ, ಅದೇ ಬಲಕ್ಕಾಗಿ | |
(1) | ಮೊಂಡು ಚಾಕುವಿನ ಸಂದರ್ಭದಲ್ಲಿ, ಚಾಕುವಿನ ಅಂಚಿನಡಿಯ ಪ್ರದೇಶವು ಕಡಿಮೆ ಇರುವುದು | |
(2) | ಮೊಂಡು ಚಾಕುವಿನ ಸಂದರ್ಭದಲ್ಲಿ, ತರಕಾರಿಯ ಮೇಲೆ ಪ್ರಯೋಗಿಸಿದ ಒತ್ತಡವು ಕಡಿಮೆ ಇರುವುದು | |
(3) | ಹರಿತ ಚಾಕುವಿನ ಸಂದರ್ಭದಲ್ಲಿ, ಪ್ರಯೋಗಿಸಿದ ಒತ್ತಡವು ಕಡಿಮೆ ಇರುವುದು | |
(4) | ಮೊಂಡು ಚಾಕುವಿನ ಸಂದರ್ಭದಲ್ಲಿ, ಪ್ರಯೋಗಿಸಿದ ಒತ್ತಡವು ಹೆಚ್ಚಾಗಿರುವುದು |
ಸರಿ ಉತ್ತರ
(2) ಮೊಂಡು ಚಾಕುವಿನ ಸಂದರ್ಭದಲ್ಲಿ, ತರಕಾರಿಯ ಮೇಲೆ ಪ್ರಯೋಗಿಸಿದ ಒತ್ತಡವು ಕಡಿಮೆ ಇರುವುದು
ಸರಿ ಉತ್ತರ
(4) B ಪ್ರದೇಶದ ಜಿ.ಡಿ.ಪಿ.ಯ ಬೆಳವಣಿಗೆ ದರವು ಸದಾ A ಪ್ರದೇಶಕ್ಕಿಂತ ಅಧಿಕವಾಗಿದೆ.
83. | ಕರ್ನಾಟಕದ ಕೆಳಗಿನ ಯಾವ ನಗರಗಳಲ್ಲಿ US ಏರ್ಕ್ರಾಫ್ಟ್ ತಯಾರಕ ಬೋಯಿಂಗ್ ಇವರು ತಮ್ಮ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರದ ವಿಧ್ಯುಕ್ತ ಚಾಲನೆಯನ್ನು ಕೈಗೊಳ್ಳುವ ಬಗ್ಗೆ 2017 ರ ಜನವರಿಯಲ್ಲಿ ಪ್ರಕಟಿಸಿದ್ದರು ? | |
(1) | ಬೆಂಗಳೂರು | |
(2) | ಬೆಳಗಾಂ | |
(3) | ಮೈಸೂರು | |
(4) | ಮಂಗಳೂರು |
ಸರಿ ಉತ್ತರ
(1) ಬೆಂಗಳೂರು
84. | ಕೆಳಗಿನವುಗಳನ್ನು ಪರಿಗಣಿಸಿ : | |
A. | ‘‘ಮದಿಪು’’ ಚಲನ ಚಿತ್ರವು ‘‘ತುಳುವಿನ ಅತ್ಯುತ್ತಮ ಫೀಚರ್ ಫಿಲ್ಮ್ ’’ ಎಂದು 64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಆಯ್ಕೆಯಾಯಿತು. | |
B. | ‘‘ಮದಿಪು’’ ಚಲನ ಚಿತ್ರದ ನಿರ್ದೇಶಕರು ಚೇತನ್ ಮುಂದಡಿ. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಇವೆರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(3) A ಮತ್ತು B ಇವೆರಡೂ
85. | ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ‘‘ಬಾಹುಬಲಿ 2’’ ಚಿತ್ರದ ಬಿಡುಗಡೆಯ ವಿರುದ್ಧವಾಗಿ ಪ್ರತಿಭಟನೆಗಳು ನಡೆದವು. | |
A. | ಈ ಚಿತ್ರದ ನಟನೊಬ್ಬ 9 ವರ್ಷಗಳ ಹಿಂದೆ ಕಾವೇರಿ ವಿಷಯ ಕುರಿತಂತೆ ವಿವಾದಾತ್ಮಕ ವಿಮರ್ಶೆಯನ್ನು ಮಾಡಿದ್ದ ಕಾರಣವಾಗಿ ಈ ಪ್ರತಿಭಟನೆಗಳು. | |
B. | ಚಲನ ಚಿತ್ರದಲ್ಲಿ ಆ ಪ್ರಕರಣದ ನಟನು ಕಟ್ಟಪ್ಪನ ಪಾತ್ರವನ್ನು ವಹಿಸಿದ್ದು. | |
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಇವೆರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(3) A ಮತ್ತು B ಇವೆರಡೂ
86. | ಪಟ್ಟಿ I ರಲ್ಲಿನ ರಾಸಾಯನಿಕಗಳೊಂದಿಗೆ ಮತ್ತು ಪಟ್ಟಿ II ರಲ್ಲಿನ ಅವುಗಳ ಉಪಯೋಗಗಳನ್ನು ಹೊಂದಿಸಿರಿ : |
ಪಟ್ಟಿ I (ರಾಸಾಯನಿಕಗಳು) | ಪಟ್ಟಿ II (ಉಪಯೋಗಗಳು) | |||
A. | ಕಾರ್ಬನ್ ಟೆಟ್ರಾಕ್ಲೋರೈಡ್ | I. | ಸೋಂಕು ನಿವಾರಣೆ | |
B. | ಅಯೊಡೊಫೊರ್ಮ್ | II. | ಬೆಂಕಿಯನ್ನು ನಂದಿಸುವುದು | |
C. | ಅಸಿಟೋನ್ | III. | ಜೋಡಣೆ (ವೆಲ್ಡಿಂಗ್) | |
D. | ಅಸಿಟಲಿನ್ | IV. | ಉಗುರು ಬಣ್ಣ ತೆಗೆಯುವುದು | |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
A | B | C | D | ||
(1) | I | III | IV | II | |
(2) | II | I | IV | III | |
(3) | II | I | III | IV | |
(4) | III | I | IV | II |
ಸರಿ ಉತ್ತರ
(2) II I IV III
87. | ಒಂದು ಪರಮಾಣುವಿನ ನ್ಯೂಕ್ಲಿಯಸ್ ಕೆಳಗಿನ ಯಾವುದನ್ನು ಹೊಂದಿರುತ್ತದೆ ? | |
(1) | ಪ್ರೋಟಾನ್ಗಳು ಮತ್ತು ನ್ಯೂಟ್ರಾನುಗಳು | |
(2) | ಪ್ರೋಟಾನ್ಗಳು ಮತ್ತು ಎಲೆಕ್ಟ್ರಾನುಗಳು | |
(3) | ನ್ಯೂಟ್ರಾನುಗಳು ಮತ್ತು ಎಲೆಕ್ಟ್ರಾನುಗಳು | |
(4) | ನ್ಯೂಟ್ರಾನುಗಳು ಮಾತ್ರ |
ಸರಿ ಉತ್ತರ
(1) ಪ್ರೋಟಾನ್ಗಳು ಮತ್ತು ನ್ಯೂಟ್ರಾನುಗಳು
88. | ಒಂದು ಕಂಪನಿಯು ಕರ್ನಾಟಕದ ವಿದ್ಯುತ್ ನಿಗಮದ ಶೇ. 25 ರಷ್ಟು ಉತ್ಪಾದನೆಯನ್ನು ಮಾಡುವ ವಿಷಮ 1035 MW ಶರಾವತಿ ಜಲವಿದ್ಯುತ್ ಸ್ಥಾವರವನ್ನು ನವೀಕರಿಸಿತು ಮತ್ತು ಪುನರ್ ಸ್ಥಾಪಿಸಿತು. ಇದು ಕೇವಲ 6 ತಿಂಗಳಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸಿದ್ದಕ್ಕಾಗಿ ಇಂಡಿಯಾ ಸ್ಮಾರ್ಟ್ ಗ್ರಿಡ್ ಫೌಂಡೇಶನ್ ಪ್ರಶಸ್ತಿಯನ್ನು ಪಡೆಯಿತು. ಕೆಳಗಿನವುಗಳಲ್ಲಿ ಆ ಕಂಪನಿಯನ್ನು ಗುರ್ತಿಸಿ | |
(1) | ಸ್ಟರ್ಲೈಟ್ ಇಂಡಸ್ಟ್ರೀಸ್ | |
(2) | ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL) | |
(3) | ಸುಝ್ಲಾನ್ ಎನರ್ಜಿ | |
(4) | ಎ.ಬಿ.ಬಿ. ಇಂಡಿಯಾ |
ಸರಿ ಉತ್ತರ
(4) ಎ.ಬಿ.ಬಿ. ಇಂಡಿಯಾ
89. | ಕಾವೇರಿ ನದಿ ನೀರಿನ ವಿವಾದದ ಕುರಿತಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ ? | |
(1) | ಕಾವೇರಿ ನದಿಯ ಓಟದ ಗತಿ ಮತ್ತು ಜಲಾನಯನ ಪ್ರದೇಶವು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿದೆ. | |
(2) | ಕಾವೇರಿ ವಿವಾದವು ವಾಸ್ತವವಾಗಿ 1807 ರಲ್ಲಿ ಪ್ರಾರಂಭಗೊಂಡಿದ್ದು, ಪೂರ್ವದ ಮೈಸೂರು ರಾಜ್ಯವು ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದಾಗ ಮದ್ರಾಸ್ ಪ್ರೆಸಿಡೆನ್ಸಿಯ ರೈತರು, ಆಕ್ಷೇಪಣೆಗಳನ್ನೆತ್ತಿದಾಗ. | |
(3) | ಕಾವೇರಿ ನದಿಯ ಕೆಳಗಣ ಓಟದ ಗತಿಯು ಬಹುತೇಕ ತಮಿಳುನಾಡಿನ ತಂಜಾವೂರು ಜಿಲ್ಲೆಯ ಬದಿಯಲ್ಲಾಗಿದೆ. | |
(4) | ಕಾವೇರಿ ನೀರಿನ ವಿವಾದ ಮಂಡಳಿಯು ಅದರ ಅಂತಿಮ ತೀರ್ಪನ್ನು 5ನೇ ಫೆಬ್ರುವರಿ, 2015 ರಲ್ಲಿ ಪ್ರಕಟಿಸಿತು. |
ಸರಿ ಉತ್ತರ
(4) ಕಾವೇರಿ ನೀರಿನ ವಿವಾದ ಮಂಡಳಿಯು ಅದರ ಅಂತಿಮ ತೀರ್ಪನ್ನು 5ನೇ ಫೆಬ್ರುವರಿ, 2015 ರಲ್ಲಿ ಪ್ರಕಟಿಸಿತು.
90. | ಸಮತಲ ಕನ್ನಡಿಯಲ್ಲಿ ದೊರೆಯುವ ಪ್ರತಿಬಿಂಬವು | |
(1) | ಸತ್ಯ (ನೈಜ) | |
(2) | ವಾಸ್ತವಾಭಾಸ | |
(3) | ವಾಸ್ತವಾಭಾಸ ಅಥವಾ ನೈಜ – ವಸ್ತುವಿನ ಸ್ಥಿತಿಯನ್ನು ಅವಲಂಬಿಸಿ | |
(4) | ಕರಾರುವಾಕ್ಕಾಗಿ ಹೇಳಲಾಗದು |
ಸರಿ ಉತ್ತರ
(2) ವಾಸ್ತವಾಭಾಸ
91. | ನಿತಿನ್ನ ವಯಸ್ಸೇನು ? | |
A. | 8 ವರ್ಷಗಳ ಹಿಂದೆ ನಿತಿನ್ನ ವಯಸ್ಸು ಈಗಿರುವ ವಯಸ್ಸಿನ ಅರ್ಧದಷ್ಟಿತ್ತು. | |
B. | ಈಗಿನಿಂದ 4 ವರ್ಷಗಳಲ್ಲಿ ನಿತಿನ್ನು 6 ವರ್ಷಗಳ ಹಿಂದೆ ಹೊಂದಿದ್ದ ವಯಸ್ಸಿನ 2 ರಷ್ಟು ವಯಸ್ಸಿನ ವನಾಗುತ್ತಾನೆ. | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನಾರಿಸಿ : | ||
(1) | A ಹೇಳಿಕೆಯೊಂದೇ ಸಾಕು ಆದರೆ B ಹೇಳಿಕೆಯೊಂದೇ ಕೇಳಿರುವ ಪ್ರಶ್ನೆಗೆ ಉತ್ತರಿಸಲು ಸಾಕಾಗುವುದಿಲ್ಲ. | |
(2) | A ಮತ್ತು B ಎರಡೂ ಹೇಳಿಕೆಗಳು ಒಟ್ಟಿಗೆ ಪ್ರಶ್ನೆಗೆ ಉತ್ತರಿಸಲು ಸಾಕಾಗುತ್ತವೆ ಆದರೆ ಯಾವುದೇ ಒಂದು ಪ್ರತ್ಯೇಕ ಹೇಳಿಕೆಯು ಸಾಕಾಗುವುದಿಲ್ಲ. | |
(3) | B ಹೇಳಿಕೆಯೊಂದೇ ಸಾಕಾಗುತ್ತದೆ ಆದರೆ A ಹೇಳಿಕೆಯೊಂದರಿಂದಲೇ ಕೇಳಿರುವ ಪ್ರಶ್ನೆಗೆ ಉತ್ತರಿಸಲು ಸಹಾಯಕವಾಗುವುದಿಲ್ಲ. | |
(4) | ಪ್ರಶ್ನೆಗೆ ಉತ್ತರಿಸಲು ಪ್ರತಿಯೊಂದು ಹೇಳಿಕೆಯೂ ತಾನೊಂದೇ ಸಾಕಾಗುತ್ತದೆ. |
ಸರಿ ಉತ್ತರ
(4) ಪ್ರಶ್ನೆಗೆ ಉತ್ತರಿಸಲು ಪ್ರತಿಯೊಂದು ಹೇಳಿಕೆಯೂ ತಾನೊಂದೇ ಸಾಕಾಗುತ್ತದೆ.
92. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ಚೀನಾ ಮತ್ತು ಇಟಲಿಯ ಲಂಬಾಂತರ ಅರಣ್ಯಗಳನ್ನು ಅನುಕರಿಸುವ ರೀತಿಯಲ್ಲಿ ಬೆಂಗಳೂರು ತನ್ನ ಮೊದಲ ಲಂಬಾಂತರ ಸಾವಯವ ಉದ್ಯಾನವನ್ನು ಹೊಸೂರು ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಒವರ್ ನ ಕಂಬಗಳಲ್ಲೊಂದರ ಮೇಲೆ ಪಡೆದಿದೆ. | |
B. | ಭಾರತದಲ್ಲಿ ಇಂತಹ ಉದ್ಯಾನಗಳಲ್ಲಿ ಇದು ಮೊದಲನೆಯದಾಗಿದೆ. | |
C. | NGO (ಸರ್ಕಾರೇತರ ಸಂಘಟನಕಾರ) ಜೀವನ್ರವರು ಈ ಯೋಜನೆಯ ಹಿಂದಿದ್ದಾರೆ. ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | |
(1) | A ಮಾತ್ರ | |
(2) | A ಮತ್ತು B ಮಾತ್ರ | |
(3) | B ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(2) A ಮತ್ತು B ಮಾತ್ರ
ಸೂಚನೆಗಳು (ಪ್ರಶ್ನೆ ಸಂಖ್ಯೆ 93 ಮತ್ತು 94) : ಕೆಳಗಿನ ಪೈ ನಕ್ಷೆಯು ಒಂದು ನಗರದಲ್ಲಿನ ವಿವಿಧ 7 ಸಂಸ್ಥೆಗಳಲ್ಲಿನ ಪದವಿ ಮತ್ತು ಸ್ನಾತಕೋತ್ತರ ಮಟ್ಟಗಳ ವಿದ್ಯಾರ್ಥಿಗಳ ಹಂಚಿಕೆಯನ್ನು ತೋರಿಸುತ್ತಿದೆ.
7 ಸಂಸ್ಥೆಗಳಲ್ಲಿನ ಪದವಿ ಮತ್ತು ಸ್ನಾತಕೋತ್ತರ ಮಟ್ಟಗಳ ವಿದ್ಯಾರ್ಥಿಗಳ ಹಂಚಿಕೆ
93. | S ಸಂಸ್ಥೆಯಿಂದ ಅಭ್ಯಸಿಸುತ್ತಿರುವ ಸ್ನಾತಕೋತ್ತರ ಮತ್ತು ಪದವಿ ಮಟ್ಟದಲ್ಲಿನ ವಿದ್ಯಾರ್ಥಿಗಳ ನಡುವಣ ಅನುಪಾತ ಕ್ರಮವಾಗಿ ಎಷ್ಟು ? | |
(1) | 14 : 19 | |
(2) | 19 : 21 | |
(3) | 17 : 21 | |
(4) | 19 : 14 |
ಸರಿ ಉತ್ತರ
(4) 19 : 14
94. | S ಸಂಸ್ಥೆಯಲ್ಲಿ ಅಭ್ಯಸಿಸುತ್ತಿರುವ ಸ್ನಾತಕೋತ್ತರ ಮಟ್ಟದ ವಿದ್ಯಾರ್ಥಿಗಳ ಸಂಖ್ಯೆ ಮತ್ತು Q ಸಂಸ್ಥೆಯಲ್ಲಿ ಅಭ್ಯಸಿಸುತ್ತಿರುವ ಪದವಿ ಮಟ್ಟದ ವಿದ್ಯಾರ್ಥಿಗಳ ಸಂಖ್ಯೆಯ ನಡುವಣ ಅನುಪಾತ ಎಷ್ಟು ? | |
(1) | 13 : 19 | |
(2) | 19 : 13 | |
(3) | 21 : 13 | |
(4) | 13 : 18 |
ಸರಿ ಉತ್ತರ
(2) 19 : 13
95. | ಜಲ ಮತ್ತು ವಾಯು ಮಾಲಿನ್ಯ ಕುರಿತಂತೆ ಸಂಶೋಧನೆ ನಡೆಸಲು ಮತ್ತು ನಿಜಾವಧಿ ನದಿ ನೀರು ಮತ್ತು ವಾಯುವಿನ ಗುಣಾತ್ಮಕ ತಂತ್ರಜ್ಞಾನ ಮೇಲ್ವಿಚಾರಣೆ ಮಾಡಲು ವಿಜ್ಞಾನ ಮತ್ತು ತ್ರಂತ್ರಜ್ಞಾನ ಇಲಾಖೆಯೊಂದಿಗೆ ಯಾವ ಕಂಪನಿಯು ತನ್ನ ಕೈ ಜೋಡಿಸಿತು ? | |
(1) | ಇಂಟೆಲ್ | |
(2) | ಮೈಕ್ರೋಸಾಫ್ಟ್ | |
(3) | ಐ.ಬಿ.ಎಮ್. | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(1) ಇಂಟೆಲ್
96. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
A. | ಕರ್ನಾಟಕ ಸರ್ಕಾರ ‘ರಾಜ್ಯ’ ಧ್ವಜವನ್ನು ವಿನ್ಯಸಿಸಲು ಮತ್ತು ಅದರ ಕಾನೂನುಬದ್ಧತೆಯ ಮೇಲೆ ವರದಿಯನ್ನು ನೀಡಲು ಒಂಬತ್ತು ಸದಸ್ಯರ ತಂಡವನ್ನು ರಚಿಸಿತು. | |
B. | ಜಮ್ಮು ಮತ್ತು ಕಾಶ್ಮೀರವು ತನ್ನದೇ ಧ್ವಜವನ್ನು ಹೊಂದಿರುವ ಒಂದೇ ರಾಜವಾಗಿದ್ದು, ಇದು ಸಂವಿಧಾನದ 370 ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಪಡೆದಿದೆ. | |
D ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | B ಮಾತ್ರ | |
(3) | A ಮತ್ತು B ಇವೆರಡೂ | |
(4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(3) A ಮತ್ತು B ಇವೆರಡೂ
ಸೂಚನೆ : ಈ ಮುಂದಿನ ಉದ್ಧೃತ ಭಾಗವನ್ನು ಓದಿ ಮತ್ತು ಉದ್ಧೃತ ಭಾಗದ ನಂತರ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ 97 ರಿಂದ 100) ಉತ್ತರಿಸಿ. ಈ ಪ್ರಶ್ನೆಗಳಿಗೆ ನಿಮ್ಮ ಉತ್ತರವು ಉದ್ಧೃತ ಭಾಗವನ್ನು ಆಧರಿಸಿರಬೇಕು.
ಉದ್ಧೃತ ಭಾಗ
ವಿಶ್ವವು ಕುತೂಹಲವನ್ನು ಅದು ನಿರರ್ಥಕವೆಂದು ಅಥವಾ ಬರಿಯ ನಿರರ್ಥಕ ಕುತೂಹಲವೆಂದು ಅದನ್ನು ಕರೆದಿದ್ದಾರೆ. ಕುತೂಹಲಿ ವ್ಯಕ್ತಿಗಳು ಅಪರೂಪಕ್ಕೆ ನಿರರ್ಥಕವಾದರೂ, ತಂದೆತಾಯಿಗಳು ತಮ್ಮ ಮಕ್ಕಳಲ್ಲಿನ ಕುತೂಹಲವನ್ನು ಉತ್ತಮವಾಗಿ ತಣಿಸಲು ಕಾರಣವೇನೆಂದರೆ ಅವು ಜೀವನವನ್ನು ಕಷ್ಟಮಯ ಗೊಳಿಸುವುದು ಪ್ರತಿನಿತ್ಯವೂ ಉತ್ತರಿಸಲಾಗದ. ಎಂದರೆ ಯಾವುದು ಬೆಂಕಿಯನ್ನು ಬಿಸಿಗೊಳಿಸುತ್ತದೆ ಅಥವಾ ಹುಲ್ಲು ಏಕೆ ಬೆಳೆಯುತ್ತದೆ ಎಂಬಿತ್ಯಾದಿಗಳ ಮೇಲಿನ ಪ್ರಶ್ನೆಗಳ ತಂತುವನ್ನು ದಿನನಿತ್ಯವೂ ಎದುರಿಸುವುದರಿಂದ ಮಕ್ಕಳ ಕುತೂಹಲವು ತಂದೆತಾಯಿಗಳ ಶಿಸ್ತನ್ನು ಉಳಿಸಿ ನಮ್ಮ ವಿಶ್ವವಿದ್ಯಾನಿಲಯಕ್ಕೆ ಸೇರಲು ಆಹ್ವಾನಿಸುವುದು. ವಿಶ್ವವಿದ್ಯಾನಿಲಯದಿಂದ, ಅವರು ತಮ್ಮ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ ಮತ್ತು ಉತ್ತರಗಳನ್ನು ಹೊರಕಿಸಿ ಕೊಳ್ಳಲು ಪ್ರಯತ್ನಿಸುತ್ತಾರೆ. ಒಬ್ಬ ಪಂಡಿತನ ದೃಷ್ಟಿಯಲ್ಲಿ ವಿಶ್ವವಿದ್ಯಾಲಯವು ಇರುವುದು ಅದಕ್ಕಾಗಿ, ಪಂಡಿತರು ಕೇಳುವ ಕೆಲವು ಪ್ರಶ್ನೆಗಳು ಪ್ರಪಂಚಕ್ಕೆ ಗಣನೆಗೆ ಬಾರದ್ದನ್ನು ಕೇಳುವ, ಏಕಾಂಗಿಯಾಗಿ ಉತ್ತರಿಸುವಂತಹುದು, ಗಳಿಗೆಗೊಮ್ಮೆ ಅವರು ಕೇಳುವ ಪ್ರಶ್ನೆಗಳು ಮತ್ತು ನಿಮಗಾಗಿಯೇ ವಿಶೇಷವಾದದ್ದು ಮತ್ತು ವರ್ಷಗಳ ವರೆಗೆ ವಿವರಣೆಯಿಲ್ಲದೆ ನಾನು ಅರ್ಥ ಮಾಡಿಕೊಳ್ಳಬೇಕು ಒಂದು ವೇಳೆ ಪ್ರಪಂಚವು ಅವರಲ್ಲೊಬ್ಬರನ್ನು ಆ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಏಕೆ ತಿಳಿಯ ಬೇಕಾಗಿದೆ ಎಂದು ವಿಚಾರಿಸಿದಲ್ಲಿ ಅವನು ವಿಶೇಷವಾಗಿ ವಿಜ್ಞಾನಿ ಯಾಗಿದ್ದಲ್ಲಿ ಹೇಳಬಲ್ಲ, ಉತ್ತರವು ಅಸ್ಪಷ್ಟ ಮಾರ್ಗವಾಗಿದ್ದು ಒಂದು ಹೊಸ ಯಂತ್ರ ಅಥವಾ ಆಯುಧ ಅಥವಾ ಉಪಕರಣವನ್ನುಂಟು ಮಾಡುವುದು. ಅವನು ಅದೇ ರೀತಿಯಲ್ಲಿ ಮಾತನಾಡುತ್ತಾನೆ ಏಕೆಂದರೆ ಪ್ರಪಂಚವು ಅವನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಉಪಯುಕ್ತತೆಯನ್ನು ಗೌರವಿಸುತ್ತದೆ.
ಆದರೆ ವಿಶ್ವವಿದ್ಯಾನಿಲಯದ ಭಾಗವಾದ ನಿಮಗಾಗಿ, ಆತನು ಸರಳವಾಗಿ ಉತ್ತರವನ್ನು ತಿಳಿಯಲು ಬಯಸುತ್ತಾನೆಂದು ಹೇಳಬಲ್ಲ. ಏಕೆಂದರೆ ಅದರ ಬಗ್ಗೆ ಅವನಿಗೆ ತಿಳಿದಿಲ್ಲ, ಬೆಟ್ಟ ಹತ್ತುವವನು 1 ಬೆಟ್ಟಹತ್ತಲು ಬಯಸುವ ಮಾರ್ಗವೆಂದರೆ, ಸರಳವಾಗಿದೆ ಏಕೆಂದರೆ ಅದು ಅಲ್ಲಿರುವುದು. ಇದೇ ರೀತಿ ಒಬ್ಬ ಇತಿಹಾಸಕಾರನು ಹೊರಗಿನವನಿಂದ ಏತಕ್ಕಾಗಿ ಇತಿಹಾಸದ ಅಧ್ಯಯನ ಮಾಡುವನೆಂದು ಕೇಳಲ್ಪಟ್ಟಿಲ್ಲ , ವಾದದಿಂದ ಹೊರಬೀಳುವ ಅಂಶವೆಂದರೆ ಅವನು ಅಂತಹ ಸನ್ನಿವೇಶಗಳ ವರದಿಯನ್ನು ಗೌರವಿಸುವುದನ್ನು ಕಲಿತಿದ್ದಾನೆ ಮತ್ತು ಪೂರ್ವದ ಜ್ಞಾನವನ್ನು ಕುರಿತು ಸ್ವಲ್ಪ ಮಟ್ಟಿಗೆ ತಿಳಿಯುವುದರಿಂದ ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಮತ್ತು ಭವಿಷ್ಯತ್ತನ್ನು ರೂಪಿಸುತ್ತದೆ ಎಂಬುದಾಗಿ. ನೀವು ಇತಿಹಾಸಕಾರನು ಹಳೆಯದನ್ನು ಏಕೆ ಅಭ್ಯಸಿಸುತ್ತಾನೆಂದು ನಿಜವಾಗಿಯೂ ತಿಳಿಯ ಬೇಕಾದಲ್ಲಿ, ಉತ್ತರವು ಬಹಳ ಸರಳ, ಘಟಿಸಿದಂತಹುದು ಮತ್ತು ಅದೇನೆಂದು ತಿಳಿಯುವುದನ್ನು ಅವನು ಇಚ್ಛಿಸುವುದು. ಹೀಗೆಂದ ಮಾತ್ರಕ್ಕೆ ಇವೆಲ್ಲದರ ಅರ್ಥವು, ಪಂಡಿತರು ತಮ್ಮ ಪ್ರಶ್ನೆಗಳಿಗಾಗಿ ಉತ್ತರಗಳನ್ನು ಹುಡುಕುವುದು ಪರಿಣಾಮಗಳನ್ನು ಹೊಂದಿಲ್ಲ ಎಂದಲ್ಲ ಅವರು ಅಗಾಧವಾದ ಪರಿಣಾಮಗಳನ್ನು ಹೊಂದಿರಬಹುದು ಆದರೆ ಇವುಗಳ ವಿರಳತೆಯು ಪ್ರಶ್ನೆ ಕೇಳಲು ಕಾರಣವನ್ನು ರೂಪಿಸುವುದು ಅಥವಾ ಉತ್ತರಗಳ ಬೆಂಬತ್ತುವುದು. ಪಂಡಿತರು ಪ್ರಶ್ನೆಗಳಿಗೆ ಉತ್ತರಿಸುವ ದಿಸೆಯಲ್ಲಿ ಕಾರ್ಯ ನಿರತರಾಗುವುದು ಫಲಿತಾಂಶಗಳ ನಿಮಿತ್ತವಾಗಿ ಸಾವಿರಾರು ಮಂದಿ ಪ್ರಸ್ತುತ ಕಾರ್ಯನಿರತರಾಗುವುದು ಸತ್ಯವೇಸರಿ. ಉದಾ : ಕ್ಯಾನ್ಸರ್ನ್ನು ಗುಣಪಡಿಸಲಿಕ್ಕಾಗಿ ಶೋಧ ಅಥವಾ ಹುಡುಕಾಟ, ಆದರೆ ಇದು ಪಂಡಿತರ ಪ್ರಾಥಮಿಕ ಕೆಲಸವಲ್ಲ ಕುತೂಹಲದ ತೃಪ್ತಿಗಾಗಿ ಸಾಮಾನ್ಯವಾಗಿ ಪರಿಣಾಮಗಳಿಗಾಗಿ ಅಧೀನವಾಗಿರುವುದು.
97. | ಸಾಮಾನ್ಯ ಜನರು ಪರಿಗಣಿಸುವ ಕೆಲವು ಪ್ರಶ್ನೆಗಳು ಪಂಡಿತರು ಅಮುಖ್ಯವಾದುದನ್ನು ಕೇಳುವುದುಹೀಗಾಗಿ | |
(1) | ಅವರು ತುಂಬಾ ಸೋಮಾರಿಗಳು ಮತ್ತು ನಿರರ್ಥಕರು | |
(2) | ಅವರು ನಾವೀನ್ಯ ಉಳ್ಳವರು | |
(3) | ಅವರ ಗ್ರಹಿಕೆಗೆ ಮೀರಿದ್ದಾಗಿವೆ | |
(4) | ಸಮಯದ ಸಂಪೂರ್ಣ ನಿರುಪಯೋಗವೆಂದು ಪರಿಗಣಿತ ವಾಗಿರುವುದು |
ಸರಿ ಉತ್ತರ
(3) ಅವರ ಗ್ರಹಿಕೆಗೆ ಮೀರಿದ್ದಾಗಿವೆ
98. | ಒಬ್ಬ ಇತಿಹಾಸಕಾರನನ್ನು ಹೊರಗಿನವನು ಏಕೆ ಆತ ಇತಿಹಾಸವನ್ನು ಅಧ್ಯಯನ ಮಾಡಿದ್ದಾನೆಂದು ಕೇಳಲ್ಪಟ್ಟಲ್ಲಿ , ಉದ್ಧೃತ ಭಾಗದ ಮೇರೆಗೆ ಅವನಿಂದ ಬರಬಹುದಾದ ಉತ್ತರವೇನು ? | |
(1) | ಆತನು ಇತಿಹಾಸವನ್ನು ಅಭ್ಯಸಿಸಲು ಕಾರಣವೆಂದರೆ ಹಿಂದಿನ ಜ್ಞಾನದಿಂದ ವರ್ತಮಾನವನ್ನು ಅರ್ಥಮಾಡಿಕೊಳ್ಳಬಹುದಾಗಿದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬಹುದು. | |
(2) | ಆತನು ಇತಿಹಾಸವನ್ನು ಓದಿದ್ದೇಕೆಂದರೆ ವರ್ತಮಾನವನ್ನರ್ಥ ಮಾಡಿ ಕೊಳ್ಳುವುದು ಮತ್ತು ತಾನು ವಾಸಿಸುವ ಪ್ರಪಂಚವನ್ನು ಉತ್ತಮ ಮತ್ತು ಶಾಂತಿಯುತಗೊಳಿಸಿಕೊಳ್ಳುವುದು. | |
(3) | ಆತನು ಇತಿಹಾಸವನ್ನು ಅಭ್ಯಸಿಸಿದ್ದೇಕೆಂದರೆ ಆ ಸಮಯದಲ್ಲಿ ಕೆಲಘಟನೆಗಳು ನಡೆದಿರುವುದು ಮತ್ತು ನಡೆದಿರುವುದೇನೆಂಬುದನ್ನು ಅವನು ತಿಳಿಯ ಬಯಸುವುದು. | |
(4) | ಅವನು ಇತಿಹಾಸವನ್ನು ಓದಿದ್ದು, ಅದರಿಂದ ದೊರೆಯುವ ವೈಯಕ್ತಿಕ ಸ್ವತೃಪ್ತಿಗಾಗಿ ಮತ್ತು ತಿಳಿಯುವ ಹಂಬಲದಿಂದಾಗಿ. |
ಸರಿ ಉತ್ತರ
(1) ಆತನು ಇತಿಹಾಸವನ್ನು ಅಭ್ಯಸಿಸಲು ಕಾರಣವೆಂದರೆ ಹಿಂದಿನ ಜ್ಞಾನದಿಂದ ವರ್ತಮಾನವನ್ನು ಅರ್ಥಮಾಡಿಕೊಳ್ಳಬಹುದಾಗಿದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
99. | ಉದ್ಧೃತ ಭಾಗದ ಮೇರೆಗೆ ಕೆಳಗಿನ ಯಾವ ಹೇಳಿಕೆಯು / ಗಳು ಸರಿಯಾಗಿದೆ ? | |
A. | ಪಂಡಿತರು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದರ ಪ್ರಾಥಮಿಕ ಉದ್ದೇಶವೆಂದರೆ ಅದರಿಂದ ಒಂದು ಅನುಕೂಲಕರ ಫಲಿತಾಂಶವನ್ನು ಸಾಧಿಸುವುದು. | |
B. | ಪಂಡಿತರ ಪ್ರಾಥಮಿಕ ಉದ್ದೇಶವೆಂದರೆ ಉತ್ತರಗಳನ್ನು ಹುಡುಕುವುದರ ಹಿಂದೆ ಅವರ ಕುತೂಹಲದ ತೃಪ್ತಿಯಾಗುವಿಕೆ ಮತ್ತು ಫಲಿತಾಂಶವೇನಿದ್ದರೂ ನಂತರದ್ದು ಹಾಗೂ ಆ ತೃಪ್ತಿಗೆ ಅಧೀನವಾಗಿರುವುದು. | |
C. | ಪಂಡಿತರ ಕಣ್ಣುಗಳಿಗೆ, ವಿಶ್ವವಿದ್ಯಾನಿಲಯವು ಕುತೂಹಲವನ್ನು ತಣಿಸುವ ಸ್ಥಳವಾಗಿದ್ದು, ಅವರು ಅಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಇರಬಹುದು ಮತ್ತು ಉತ್ತರಗಳನ್ನು ಪಡೆಯಲು ಪ್ರಯತ್ನಿಸಬಹುದು. | |
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
(1) | A ಮಾತ್ರ | |
(2) | A ಮತ್ತು B ಮಾತ್ರ | |
(3) | B ಮತ್ತು C ಮಾತ್ರ | |
(4) | A, B ಮತ್ತು C |
ಸರಿ ಉತ್ತರ
(3) B ಮತ್ತು C ಮಾತ್ರ
100. | ಉದ್ಧೃತಭಾಗದ ಮೇರೆಗೆ, ಮಕ್ಕಳು ಅವರ ತಂದೆತಾಯಿಗಳಿಗೆ ಜೀವನವನ್ನು ಕಷ್ಟಮಯವಾಗಿಸುವುದು | |
(1) | ಅವರ ಸತತ ಕುತೂಹಲದಿಂದಾಗಿ | |
(2) | ಅವರ ಕುತೂಹಲದ ಕಾರಣದ ಫಲಿತಾಂಶದಿಂದಾದ ನಿಲುಗಡೆಯಿಲ್ಲದ ಪ್ರಶ್ನೆಗಳ ಸುರಿಮಳೆಯಿಂದಾಗಿ | |
(3) | ಅಪ್ರಸ್ತುತ ಮತ್ತು ಅತಾರ್ಕಿಕ ಪ್ರಶ್ನೆಗಳನ್ನು ಕೇಳುವುದರಿಂದಾಗಿ | |
(4) | ಅವರ ಕೋಮಲ ವಯಸ್ಸಿನಲ್ಲಿ ತತ್ವಶಾಸ್ತ್ರೀಯ ಪ್ರಶ್ನೆಗಳನ್ನು ಮುಂದಿಡುವುದರಿಂದಾಗಿ |
ಸರಿ ಉತ್ತರ
(2) ಅವರ ಕುತೂಹಲದ ಕಾರಣದ ಫಲಿತಾಂಶದಿಂದಾದ ನಿಲುಗಡೆಯಿಲ್ಲದ ಪ್ರಶ್ನೆಗಳ ಸುರಿಮಳೆಯಿಂದಾಗಿ
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ