KPSC : GROUP C 28-08-2016 Paper-1 General Knowledge Questions with answers
KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ: ವಿವಿಧ ತಾಂತ್ರಿಕ/ ತಾಂತ್ರಿಕೇತರ (Degree Standard) ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 28-08-2016 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು
1. ಬಿ.ಪಿ.ಮಂಡಲ್ ಎರಡನೇ ಹಿಂದುಳಿದ ವರ್ಗಗಳ ಆಯೋಗವು ನೇಮಕವಾಗಿದ್ದು ಮತ್ತು ಅದು ತನ್ನ ವರದಿ ಸಲ್ಲಿಸಿದ್ದು.
(1) 1978 ಮತ್ತು 1980
(2) 1979 ಮತ್ತು 1980
(3) 1980 ಮತ್ತು 1981
(4) 1976 ಮತ್ತು 1980
ಸರಿ ಉತ್ತರ
ಸರಿ ಉತ್ತರ:(2) 1979 ಮತ್ತು 1980
2. ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯು ______________ ನ್ನು ಆಧರಿಸಿ ರೂಪಿತವಾಗಿದೆ.
(1) ಪರಿಸರ ಹಾಗೂ ಅಭಿವೃದ್ಧಿ ಉಪಕ್ರಮದ ಮೇಲಿನ ವಿಶ್ವಬ್ಯಾಂಕ್ ಸಮ್ಮೇಳನ, 1992.
(2) ಪರಿಸರ ಹಾಗೂ ಅಭಿವೃದ್ಧಿ ಮೇಲಿನ ವಿಶ್ವಸಂಸ್ಥೆಯ ಸಮ್ಮೇಳನ, 1992.
(3) ಸುಸ್ಥಿರ ಅಭಿವೃದ್ಧಿಯ ಮೇಲಿನ ಡಬ್ಲ್ಯೂ.ಟಿ.ಓ. ಸಮ್ಮೇಳನ, 1992
(4) ಅಭಿವೃದ್ಧಿ ಹಾಗೂ ಪರಿಸರದ ಮೇಲಿನ ಓಇಸಿಡಿ ಸಮ್ಮೇಳನ, 1992
ಸರಿ ಉತ್ತರ
ಸರಿ ಉತ್ತರ:(2) ಪರಿಸರ ಹಾಗೂ ಅಭಿವೃದ್ಧಿ ಮೇಲಿನ ವಿಶ್ವಸಂಸ್ಥೆಯ ಸಮ್ಮೇಳನ, 1992.
3. ಕೇಂದ್ರೀಯ ಶೇಖರಣಾ ಮಳಿಗೆ ನಿಗಮವು ಸ್ಥಾಪನೆಯಾದ ದಿನಾಂಕ
(1) ಮಾರ್ಚ್ 2, 1957
(2) ಜನವರಿ 14, 1965
(3) ಅಕ್ಟೋಬರ್ 2, 1965
(4) ಜನವರಿ 26, 1964
ಸರಿ ಉತ್ತರ
ಸರಿ ಉತ್ತರ:(1) ಮಾರ್ಚ್ 2, 1957
4. ಈ ಮುಂದಿನ ಯಾವ ನಿಯತಕಾಲಿಕ ಗಾಳಿಯು ಸಮುದ್ರದಿಂದ ಭೂಮಿಯ ಕಡೆಗೆ ಬೀಸಿ ಬೇಸಿಗೆ ಮುಂಗಾರನ್ನು ಉಂಟುಮಾಡುತ್ತದೆ?
(1) ಪೂರ್ವ ಪಶ್ಚಿಮ
(2) ಈಶಾನ್ಯ
(3) ನೈರುತ್ಯ
(4) ಆಗ್ನೇಯ
ಸರಿ ಉತ್ತರ
ಸರಿ ಉತ್ತರ:(3) ನೈರುತ್ಯ
5. ಕಳಸ-ಬಂಡೂರಿ ಜಲ ವಿವಾದವು ಈ ಕೆಳಗಿನ ಯಾವ ರಾಜ್ಯಗಳಿಗೆ ಸಂಬಂಧಿಸಿದೆ?
(1) ಕರ್ನಾಟಕ-ಆಂಧ್ರ ಪ್ರದೇಶ
(2) ಕರ್ನಾಟಕ-ಗೋವಾ
(3) ಕರ್ನಾಟಕ-ಕೇರಳ
(4) ಕರ್ನಾಟಕ-(ತಮಿಳುನಾಡು) (ಚೆನ್ನೈ)
ಸರಿ ಉತ್ತರ
ಸರಿ ಉತ್ತರ:(2) ಕರ್ನಾಟಕ-ಗೋವಾ
6. ನುಗು ಯೋಜನೆಯು ಇಲ್ಲಿದೆ ____
(1) ಬಿರ್ ವಾಲ್ ಹಳ್ಳಿ
(2) ಖುರದ್ ಹಳ್ಳಿ
(3) ಖಿರ್ ಹಳ್ಳಿ
(4) ಮುನೋಲಿ ಹಳ್ಳಿ
ಸರಿ ಉತ್ತರ
ಸರಿ ಉತ್ತರ:(1) ಬಿರ್ ವಾಲ್ ಹಳ್ಳಿ
7. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಈ ಕೆಳಗಿನ ಯಾವ ವರ್ಷದಿಂದ ಪ್ರಾರಂಭವಾಯಿತು?
(1) 1971
(2) 1970
(3) 1973
(4) 1974
ಸರಿ ಉತ್ತರ
ಸರಿ ಉತ್ತರ:(1) 1971
8. ಕರ್ನಾಟಕದ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?
(1) NH 17 (ರಾ.ಹೆ.17)
(2) NH 9 (ರಾ.ಹೆ.9)
(3) NH 13 (ರಾ.ಹೆ.13)
(4) NH 218 (ರಾ.ಹೆ.218)
ಸರಿ ಉತ್ತರ
ಸರಿ ಉತ್ತರ:(3) NH 13 ಸರಿ ಉತ್ತರ:(ರಾ.ಹೆ.13)
9. ಹೊಸ ಅಂದಾಜುಗಳ ಪ್ರಕಾರ ಕರ್ನಾಟಕ ರಾಜ್ಯದ ತರಗತಿ
I-X ರವರೆಗಿನ ಎಲ್ಲ ಪ್ರವರ್ಗಗಳ ವಿದ್ಯಾರ್ಥಿಗಳಲ್ಲಿ ಶಾಲೆ ತೊರೆಯುವ ಸಂಖ್ಯಾದರವು 2009-10ರಲ್ಲಿ ____________ ಆಗಿತ್ತು.
(1) 32.18
(2) 38.46
(3) 42.34
(4) 46.62
ಸರಿ ಉತ್ತರ
ಸರಿ ಉತ್ತರ:(4) 46.62
10. ಹೀಲಿಯೋಫೈಟ್ ಗಳು ಸಸ್ಯಗಳ ಸಮೂಹವಾಗಿ
(1) ಕೆಳಸ್ತರದ ಬೆಳಕಿನ ತೀವ್ರತೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
(2) ಪೂರ್ಣ ಸೌರ ಬೆಳಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ಮಾಡುತ್ತವೆ.
(3) ಪೂರ್ಣ ಸೌರ ಬೆಳಕಿನಲ್ಲಿ ಬದುಕಿರಲಾರವು.
(4) ಇವುಗಳಲ್ಲಿ ಯಾವುವೂ ಅಲ್ಲ
ಸರಿ ಉತ್ತರ
ಸರಿ ಉತ್ತರ:(2) ಪೂರ್ಣ ಸೌರ ಬೆಳಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ಮಾಡುತ್ತವೆ.
11. ಭೂಮಿಯ ಮೇಲೆ ____ ಕಿಲೋ ಮೀಟರ್ ಗಳವರೆಗೆ ಹವಾಗೋಳವು ವಿಸ್ತರಿಸಿರುವುದು.
(1) 50-80
(2) 80-100
(3) 100ಕ್ಕೂ ಹೆಚ್ಚು
(4) 8-12
ಸರಿ ಉತ್ತರ
ಸರಿ ಉತ್ತರ:(4) 8-12
12. ಹವಾಗೋಳದಲ್ಲಿನ ವಾಯುಭಾರವು ಎತ್ತರ ಹೆಚ್ಚಿದಂತೆಲ್ಲ____________
(1) ಹೆಚ್ಚಾಗುವುದು
(2) ಕಡಿಮೆಯಾಗುವುದು
(3) ಹೆಚ್ಚೂ ಕಡಿಮೆಯಾಗುವುದು
(4) ಬದಲಾಗುವುದಿಲ್ಲ
ಸರಿ ಉತ್ತರ
ಸರಿ ಉತ್ತರ:(2) ಕಡಿಮೆಯಾಗುವುದು
13. ಓಜೋನ್ ಪದರವು ಇರುವುದು
(1) ಹವಾಗೋಳದಲ್ಲಿ
(2) ಮಧ್ಯಮಂಡಲದಲ್ಲಿ
(3) ಉಷ್ಣ ಮಂಡಲದಲ್ಲಿ
(4) ಹೊರ ವಲಯದಲ್ಲಿ
ಸರಿ ಉತ್ತರ
ಸರಿ ಉತ್ತರ:ಈ ಪ್ರಶ್ನೆಗೆ GRACE MARK ನೀಡಲಾಗಿದೆ.
14. ಈ ಕೆಳಗಿನವುಗಳಲ್ಲಿ ಯಾವ ನದಿಗಳು ಮುಖ್ಯವಾಗಿ ಪಶ್ಚಿಮಕ್ಕೆ ಹರಿಯುವ ನದಿಗಳಾಗಿವೆ?
(1) ಕಾವೇರಿ, ನೇತ್ರಾವತಿ, ಭೀಮಾ, ಕೃಷ್ಣಾ
(2) ಕಾಳಿ, ನೇತ್ರಾವತಿ, ಅಘನಾಶಿನಿ, ಶರಾವತಿ
(3) ಕೃಷ್ಣಾ, ಕಾವೇರಿ, ತುಂಗಭದ್ರಾ, ಗೋದಾವರಿ
(4) ಕೃಷ್ಣಾ, ಬೇಡ್ತಿ, ನೇತ್ರಾವತಿ, ಶರಾವತಿ
ಸರಿ ಉತ್ತರ
ಸರಿ ಉತ್ತರ:(2) ಕಾಳಿ, ನೇತ್ರಾವತಿ, ಅಘನಾಶಿನಿ, ಶರಾವತಿ
15. ಕೆಳಗಿನವುಗಳಲ್ಲಿ ಯಾವುದು ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಕಾಯ್ದೆಗಳ ಧ್ವನಿತಾರ್ಥವನ್ನು ಹೊಂದಿವೆ?
1. ಸ್ಥಳೀಯ ಸರ್ಕಾರಗಳು ಸಂವಿಧಾನಾತ್ಮಕ ದರ್ಜೆಯನ್ನು ಹೊಂದಿವೆ.
2. ರಾಷ್ಟ್ರದಲ್ಲಿ ಸ್ಥಳೀಯ ಸರ್ಕಾರಗಳ ಏಕರೂಪ ಮಾದರಿಯನ್ನು ಸೃಜಿಸಲಾಗಿದೆ.
3. ಸ್ಥಳೀಯ ಸರ್ಕಾರವನ್ನೂ ಒಂದು ವಿಷಯ ಎಂಬುದಾಗಿ ಸಮವರ್ತಿ ಪಟ್ಟಿಯಡಿ ಸೇರಿಸಲಾಗಿದೆ.
4. ಸ್ಥಳೀಯ ಸರ್ಕಾರಗಳಿಗೆ ಕಾನೂನು ಮತ್ತು ನೀತಿಗಳನ್ನು ಸಿದ್ಧಪಡಿಸಲು ಹೊಸ ವಿಷಯಗಳನ್ನು ನೀಡಲಾಗಿದೆ.
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮತ್ತು 2
(2) 2 ಮತ್ತು 3
(3) 3 ಮತ್ತು 4
(4) ಇವುಗಳಲ್ಲಿ ಎಲ್ಲವೂ
ಸರಿ ಉತ್ತರ
ಸರಿ ಉತ್ತರ:ಈ ಪ್ರಶ್ನೆಗೆ GRACE MARK ನೀಡಲಾಗಿದೆ.
16. ಈ ಕೆಳಗಿನವುಗಳಲ್ಲಿ ಯಾವುದನ್ನು ಸಂವಿಧಾನದ 91ನೇ ತಿದ್ದುಪಡಿ ಕಾಯ್ದೆಯು ಸ್ವೀಕರಿಸಿದೆ?
1. ಪ್ರಧಾನಮಂತ್ರಿಯವರನ್ನು ಒಳಗೊಂಡಂತೆ ಕೇಂದ್ರ ಮಂತ್ರಿಮಂಡಲದ ಗಾತ್ರವು ಲೋಕಸಭೆಯ ಗಾತ್ರದ ಶೇ.15ರಷ್ಟನ್ನು ಮೀರಬಾರದು.
2. ಮುಖ್ಯಮಂತ್ರಿಯವರನ್ನು ಒಳಗೊಂಡಂತೆ ರಾಜ್ಯಮಂತ್ರಿ ಮಂಡಲದ ಗಾತ್ರವು ವಿಧಾನಸಭೆಯ ಗಾತ್ರದ ಶೇ.15ರಷ್ಟನ್ನು ಮೀರಬಾರದು.
3. ಕೇಂದ್ರ ಮತ್ತು ರಾಜ್ಯ ಮಂತ್ರಿಮಂಡಲದ ಗಾತ್ರವು ವಿಧಾನಮಂಡಲದ ಕೆಳಮನೆಯ ಶೇ.25ರಷ್ಟಕ್ಕಿಂತ ಕಡಿಮೆ ಇರಬಾರದು.
4. ಇವುಗಳಲ್ಲಿ ಎಲ್ಲವೂ
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮತ್ತು 2
(2) 2 ಮತ್ತು 3
(3) 3 ಮತ್ತು 4
(4) 4 ಮಾತ್ರ
ಸರಿ ಉತ್ತರ
ಸರಿ ಉತ್ತರ:(1) 1 ಮತ್ತು 2
17. ಭಾರತದಲ್ಲಿ ಚುನಾವಣೆಗಳಲ್ಲಿ ಅನುಸರಿಸುವ ಮತದಾರ ವ್ಯವಸ್ಥೆಗಳೆಂದರೆ,
1. ಬಿಡಿಯಾದ ವರ್ಗಾಯಿಸಲಾಗುವ ಮತದ ಮಾರ್ಗದ ಮೂಲಕ ಸೂಕ್ತ ಪ್ರಮಾಣಬದ್ಧ ಪ್ರಾತಿನಿಧ್ಯ.
2. ಸಾರ್ವತ್ರಿಕ ವಯಸ್ಕ ಮತದಾನ ಹಕ್ಕು ಆಧಾರಿತ ನೇರ ಚುನಾವಣೆಗಳು.
3. ಪ್ರಮಾಣಬದ್ಧ ಪ್ರಾತಿನಿಧ್ಯದ ಪಟ್ಟಿ ವ್ಯವಸ್ಥೆ.
4. ಅಪರೋಕ್ಷ ಚುನಾವಣೆಯ ಒಟ್ಟಾರೆ ವ್ಯವಸ್ಥೆ.
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1 & 2
(2) 2 & 3
(3) 3 & 4
(4) ಇವುಗಳಲ್ಲಿ ಎಲ್ಲವೂ
ಸರಿ ಉತ್ತರ
ಸರಿ ಉತ್ತರ:(1) 1 & 2
18. ಭಾರತೀಯ ಚುನಾವಣಾ ಆಯೋಗವು ಕಾಲಕಾಲಕ್ಕೆ ಚುನಾವಣೆಗಳನ್ನು ಇವುಗಳಿಗಾಗಿ ನಡೆಸುವುದು.
1. ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳು
2. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಛೇರಿಗಳು
3. ಪಾರ್ಲಿಮೆಂಟಿನ ಎರಡೂ ಸದನಗಳು
4. ರಾಜ್ಯ ಶಾಸಕಾಂಗ
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮತ್ತು 2
(2) 2 ಮತ್ತು 3
(3) 2, 3 ಮತ್ತು 4
(4) ಇವುಗಳಲ್ಲಿ ಎಲ್ಲವೂ
ಸರಿ ಉತ್ತರ
ಸರಿ ಉತ್ತರ:(3) 2, 3 ಮತ್ತು 4
19. ರಾಜ್ಯ ಹಣಕಾಸು ಆಯೋಗವು ನಿರ್ಧರಿಸುವುದು
1. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳ ಮಧ್ಯೆ ರಾಜ್ಯ ತೆರಿಗೆ ಆದಾಯದ ಮಾದರಿ ಮತ್ತು ಸ್ಥಳೀಯ ಸಂಸ್ಥೆಗಳಿಂದ ಸಹಾಯಧನ.
2. ರಾಜ್ಯ ಪಂಚವಾರ್ಷಿಕ ಯೋಜನೆಯ ರೂಪಿಸುವಿಕೆಯಲ್ಲಿ ರಾಜ್ಯ ಅಭಿವೃದ್ಧಿ ಅವಶ್ಯಕತೆಗಳು.
3. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಆಯವ್ಯಯಿಕ ಅವಶ್ಯಕತೆಗಳು.
4. ರಾಜ್ಯದ ಅವಶ್ಯಕತೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸುವುದು.
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮಾತ್ರ
(2) 2 & 3
(3) 1 & 4
(4) 4 ಮಾತ್ರ
ಸರಿ ಉತ್ತರ
ಸರಿ ಉತ್ತರ:(1) 1 ಮಾತ್ರ
20. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಗ್ಗೆ ಯಾವುದು ಸರಿ?
1. 1993ರಲ್ಲಿ ಸ್ಥಾಪಿಸಲ್ಪಟ್ಟ ಶಾಸನೋಕ್ತ ಸಂಸ್ಥೆ
2. ರಾಷ್ಟ್ರದಲ್ಲಿ ಮಾನವ ಹಕ್ಕುಗಳ ಕಾವಲುಗಾರ
3. ಇದರ ಅಧ್ಯಕ್ಷ ಮತ್ತು ಸದಸ್ಯರುಗಳು, ರಾಷ್ಟ್ರಾಧ್ಯಕ್ಷರ ವಿವೇಚನೆಯ ಮೇರೆಗೆ ನೇಮಕಗೊಳ್ಳುವರು.
4. ಅಧ್ಯಕ್ಷರ ಅವಧಿಯು 8 ವರ್ಷಗಳು ಅಥವಾ ಅವರ ವಯೋಮಿತಿ 80 ವರ್ಷ, ಇವುಗಳಲ್ಲಿ ಯಾವುದು ಮೊದಲೋ ಅದು.
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮತ್ತು 2
(2) 3 ಮತ್ತು 4
(3) ಇವುಗಳಲ್ಲಿ ಎಲ್ಲವೂ
(4) ಇವುಗಳಲ್ಲಿ ಯಾವುವೂ ಅಲ್ಲ
ಸರಿ ಉತ್ತರ
ಸರಿ ಉತ್ತರ:(1) 1 ಮತ್ತು 2
21. ಭಾರತ ಸರ್ಕಾರವು ಪಥ ಮತ್ತು ಮಾರ್ಗ ಮುಂಗಡಗಳನ್ನು ಇದರಿಂದ ಪಡೆದಿದೆ.
(1) ಅಂತರರಾಷ್ಟ್ರೀಯ ಹಣಕಾಸು ನಿಧಿ
(2) ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು
(3) ಭಾರತೀಯ ಸ್ಟೇಟ್ ಬ್ಯಾಂಕ್
(4) ಭಾರತೀಯ ರಿಸರ್ವ್ ಬ್ಯಾಂಕ್
ಸರಿ ಉತ್ತರ
ಸರಿ ಉತ್ತರ:(4) ಭಾರತೀಯ ರಿಸರ್ವ್ ಬ್ಯಾಂಕ್
22. ಭಾರತದ ಸಂದಾಯ ಪಾವತಿ ಬಾಕಿಯ ಚಾಲ್ತಿ ಅಕೌಂಟ್ ನಲ್ಲಿ ಈ ಕೆಳಗಿನ ಯಾವ ಅಂಶಗಳು ಸೇರ್ಪಡೆಯಾಗಿಲ್ಲ?
(1) ಅಲ್ಪಾವಧಿ ವಾಣಿಜ್ಯಾತ್ಮಕ ಎರವಲುಗಳು
(2) ಆಂಶಿಕವಲ್ಲದ ಸೇವೆಗಳು
(3) ವರ್ಗಾವಣೆ ಪಾವತಿಗಳು
(4) ಬಂಡವಾಳ ಆದಾಯ
ಸರಿ ಉತ್ತರ
ಸರಿ ಉತ್ತರ:(1) ಅಲ್ಪಾವಧಿ ವಾಣಿಜ್ಯಾತ್ಮಕ ಎರವಲುಗಳು
23. ಈ ಕೆಳಗಿನ ಯಾವ ಸಂವಿಧಾನ ತಿದ್ದುಪಡಿಯು ಸರಕು, ಸೇವೆಗಳ ತೆರಿಗೆ (GST)ಗೆ ಅವಕಾಶವನ್ನು ಕಲ್ಪಿಸಿದೆ?
(1) 2013ರ 120ನೇ ತಿದ್ದುಪಡಿ
(2) 2014ರ 122ನೇ ತಿದ್ದುಪಡಿ
(3) 2014ರ 123ನೇ ತಿದ್ದುಪಡಿ
(4) 2015ರ 124ನೇ ತಿದ್ದುಪಡಿ
ಸರಿ ಉತ್ತರ
ಸರಿ ಉತ್ತರ:(2) 2014ರ 122ನೇ ತಿದ್ದುಪಡಿ
24. ಭಾರತೀಯ ರಿಸರ್ವ್ ಬ್ಯಾಂಕ್ ಗೆ ಎರವಲು ನೀಡುವ ದರವನ್ನು ಹೀಗೆಂದು ಕರೆಯುತ್ತಾರೆ.
(1) ರೆಪೊ ದರ
(2) ಹಿಮ್ಮುಖ ರೆಪೊ ದರ
(3) ಕರೆ ಹಣ ದರ
(4) ಆಧಾರ (ಪ್ರಾರಂಭ) ದರ
ಸರಿ ಉತ್ತರ
ಸರಿ ಉತ್ತರ:(2) ಹಿಮ್ಮುಖ ರೆಪೊ ದರ
25. ಆದ್ಯತಾ ವಲಯ ಮುಂಗಡಗಳ ಮೇರೆಗೆ, ಆದ್ಯತಾ ವಲಯಗಳಿಗೆ ಯಾವ ಶೇಕಡಾವಾರಿನಂತೆ ಗೃಹಕೃತ್ಯ ಬ್ಯಾಂಕುಗಳ ನಿವ್ವಳ ಸಾಲವನ್ನು ಒದಗಿಸಲಾಗುತ್ತದೆ?
(1) ಶೇ.30
(2) ಶೇ.40
(3) ಶೇ.50
(4) ಶೇ.60
ಸರಿ ಉತ್ತರ
ಸರಿ ಉತ್ತರ:(2) ಶೇ.40
26. NIMZs ಎಂದರೇನು?
(1) ರಾಷ್ಟ್ರೀಯ ಬಂಡವಾಳ ಮತ್ತು ತಯಾರಿಕಾ ವಲಯಗಳು
(2) ನೋಡಲ್ ಸಂಸ್ಥೆಗಳು ಮತ್ತು ಮಾರುಕಟ್ಟೆ ವಲಯಗಳು
(3) ನೋಡಲ್ ಬಂಡವಾಳ ಮತ್ತು ಬೃಹತ್ ವಲಯಗಳು
(4) ರಾಷ್ಟ್ರೀಯ ಇನ್ ಫರ್ ಮ್ಯಾಟಿಕ್ ಗಳು (ಜ್ಞಾನಕಾರಕ) ಮತ್ತು ನಿರ್ವಹಣಾ ವಲಯಗಳು
ಸರಿ ಉತ್ತರ
ಸರಿ ಉತ್ತರ:(2) ನೋಡಲ್ ಸಂಸ್ಥೆಗಳು ಮತ್ತು ಮಾರುಕಟ್ಟೆ ವಲಯಗಳು
27. ಕರ್ನಾಟಕದ 14 ನೀತಿ ಎಂದರೇನು?
(1) ಕೈಗಾರಿಕೆ, ಮಾಹಿತಿ ಜ್ಞಾನ, ಮೂಲಭೂತ ವ್ಯವಸ್ಥೆ ಮತ್ತು ಉತ್ತೇಜನಾ ನೀತಿ
(2) ಸಂಸ್ಥೆಗಳು, ಮೂಲಭೂತ ವ್ಯವಸ್ಥೆ, ಬಂಡವಾಳ ಮತ್ತು ಉತ್ತೇಜನಾ ನೀತಿ
(3) ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ನಾವೀನ್ಯ ಮತ್ತು ಉತ್ತೇಜನಾ ನೀತಿ
(4) ಮಾಹಿತಿ ತಂತ್ರಜ್ಞಾನ, ಮೂಲಭೂತ ವ್ಯವಸ್ಥೆ, ಸಂಸ್ಥೆಗಳು ಮತ್ತು ಉತ್ತೇಜನಾ ನೀತಿ
ಸರಿ ಉತ್ತರ
ಸರಿ ಉತ್ತರ:(3) ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ನಾವೀನ್ಯ ಮತ್ತು ಉತ್ತೇಜನಾ ನೀತಿ
28. ಯಾವ ಮಾನದಂಡದ ಮೇರೆಗೆ ಸ್ಮಾರ್ಟ್ ನಗರಗಳ ನಿಯೋಗದಡಿ ಸಂಭಾವ್ಯ ಸ್ಮಾರ್ಟ್ ನಗರಗಳನ್ನು ಗುರುತಿಸಲಾಗಿದೆ?
(1) ರಾಜ್ಯದಲ್ಲಿನ ನಗರ ಜನಸಂಖ್ಯೆ ಮತ್ತು ರಾಜ್ಯದಲ್ಲಿನ ಶಾಸನೋಕ್ತ ನಗರಗಳ ಸಂಖ್ಯೆಗೆ ಸಮಾನ ತೂಕ ಮೌಲ್ಯವನ್ನು ನೀಡುವುದು.
(2) ಒಟ್ಟು ರಾಜ್ಯ ಗೃಹಕೃತ್ಯ ಉತ್ಪನ್ನಗಳು (GSDP) ಮತ್ತು ರ್ತುಗಳಿಗೆ ಅವುಗಳ ಕೊಡುಗೆಗೆ ಸಮಾನವಾಗಿ ತೂಕಮೌಲ್ಯವನ್ನು ನೀಡುವುದು.
(3) ಅವುಗಳ ತೆರಿಗೆ ಸಂಗ್ರಹಣೆ ಮತ್ತು ವಿತ್ತೀಯ ಆರೋಗ್ಯಗಳಿಗೆ ಸಮಾನ ತೂಕ ಮೌಲ್ಯವನ್ನು ನೀಡುವುದು.
(4) ತಲಾ ಆದಾಯ ಮತ್ತು ಮಾನವ ಅಭಿವೃದ್ಧಿ ಸೂಚಕ ಮೌಲ್ಯಕ್ಕೆ ಸಮಾನ ತೂಕಮೌಲ್ಯವನ್ನು ನೀಡುವುದು.
ಸರಿ ಉತ್ತರ
ಸರಿ ಉತ್ತರ:(1) ರಾಜ್ಯದಲ್ಲಿನ ನಗರ ಜನಸಂಖ್ಯೆ ಮತ್ತು ರಾಜ್ಯದಲ್ಲಿನ ಶಾಸನೋಕ್ತ ನಗರಗಳ ಸಂಖ್ಯೆಗೆ ಸಮಾನ ತೂಕ ಮೌಲ್ಯವನ್ನು ನೀಡುವುದು.
29. ಈ ಕೆಳಕಂಡವುಗಳಲ್ಲಿ ಯಾವುದು 14ನೇ ಹಣಕಾಸು ಆಯೋಗದ ಪ್ರಮುಖ ಶಿಫಾರಸ್ಸು ಆಗಿದೆ?
(1) ಕೇಂದ್ರ ವಿಭಾಗೀಯ ಒಟ್ಟಿಲುವಿನಲ್ಲಿ (pool) ರಾಜ್ಯಗಳ ಪಾಲನ್ನು (ಪ್ರಸ್ತುತದ) ಶೇ.32ರಿಂದ 42ಕ್ಕೇರಿಸಿದೆ.
(2) ವಲಯ ನಿರ್ದಿಷ್ಟ ಸಹಾಯಧನಗಳಿಗೆ ಹೊಸ ಮಾನದಂಡದ ಸಲಹೆ.
(3) ಕೇಂದ್ರ ವಿಭಾಗೀಯ ಒಟ್ಟಿಲುವಿನಲ್ಲಿ (pool) ರಾಜ್ಯಗಳ ಪಾಲನ್ನು (ಪ್ರಸ್ತುತದ) ಶೇ.32ರಿಂದ ಶೇ.25ಕ್ಕಿಳಿಸಿದೆ.
(4) ರಾಜ್ಯಗಳ ವಿತ್ತೀಯ ಜವಾಬ್ದಾರಿಯನ್ನು ಕಡಿಮೆ ಮಾಡುವ ಸಲಹೆ.
ಸರಿ ಉತ್ತರ
ಸರಿ ಉತ್ತರ:(1) ಕೇಂದ್ರ ವಿಭಾಗೀಯ ಒಟ್ಟಿಲುವಿನಲ್ಲಿ (pool) ರಾಜ್ಯಗಳ ಪಾಲನ್ನು ಸರಿ ಉತ್ತರ:(ಪ್ರಸ್ತುತದ) ಶೇ.32ರಿಂದ 42ಕ್ಕೇರಿಸಿದೆ.
30. ವಿವಿಧ ರಾಷ್ಟ್ರಗಳ ನಡುವಣ ಆರ್ಥಿಕ ಐಕ್ಯತಾ ಪ್ರಕ್ರಿಯೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಅನುಕ್ರಮಣಿಕೆ?
(1) ಸಾಮಾನ್ಯ ಮಾರುಕಟ್ಟೆ-ಮುಕ್ತ ವ್ಯಾಪಾರ ಕ್ಷೇತ್ರ- ಸುಂಕ ಒಕ್ಕೂಟ- ಆರ್ಥಿಕ ಒಕ್ಕೂಟ
(2) ಮುಕ್ತ ವ್ಯಾಪಾರ ಕ್ಷೇತ್ರ- ಸುಂಕ ಒಕ್ಕೂಟ- ಸಾಮಾನ್ಯ ಮಾರುಕಟ್ಟೆ- ಆರ್ಥಿಕ ಒಕ್ಕೂಟ
(3) ಮುಕ್ತ ವ್ಯಾಪಾರ ಕ್ಷೇತ್ರ- ಸಾಮಾನ್ಯ ಮಾರುಕಟ್ಟೆ- ಸುಂಕ ಒಕ್ಕೂಟ- ಆರ್ಥಿಕ ಒಕ್ಕೂಟ
(4) ಸಾಮಾನ್ಯ ಮಾರುಕಟ್ಟೆ- ಮುಕ್ತ ವ್ಯಾಪಾರ ಕ್ಷೇತ್ರ- ಆರ್ಥಿಕ ಒಕ್ಕೂಟ- ಸುಂಕ ಒಕ್ಕೂಟ
ಸರಿ ಉತ್ತರ
ಸರಿ ಉತ್ತರ:(2) ಮುಕ್ತ ವ್ಯಾಪಾರ ಕ್ಷೇತ್ರ- ಸುಂಕ ಒಕ್ಕೂಟ- ಸಾಮಾನ್ಯ ಮಾರುಕಟ್ಟೆ- ಆರ್ಥಿಕ ಒಕ್ಕೂಟ
31. ಈ ಕೆಳಗಿನವುಗಳಲ್ಲಿ ಯಾವುದು ನೀತಿ ಆಯೋಗದ ಅರ್ಥವನ್ನು ಸೂಚಿಸುತ್ತದೆ?
1. ಭಾರತದ ಪರಿವರ್ತನೆಯ ಕಾಳಜಿಯನ್ನು ಹೊಂದಿದ ನೀತಿಗಳನ್ನು ರೂಪಿಸುವಲ್ಲಿ ನಿಯಂತ್ರಣಗೊಳಿಸುವಲ್ಲಿ ಸರ್ಕಾರದಿಂದ ಅಧಿಕಾರವನ್ನು ಪಡೆದಿರುವ ಜನರ ಗುಂಪು
2. ಸಾಮಾಜಿಕ ಮತ್ತು ಆರ್ಥಿಕ ವಿವಾದಗಳಲ್ಲಿ ಸರ್ಕಾರಕ್ಕೆ ಸಹಾಯ ಮಾಡುವ ಒಂದು ಆಯೋಗ
3. ವಿಷಯ ತಜ್ಞರನ್ನೊಳಗೊಂಡ ಚಿಂತಕರ ಚಾವಡಿ ಯಾಗಿರುವ ಒಂದು ಸಂಸ್ಥೆ
4. ಎಲ್ಲರಿಗೂ ಒಂದೇ ಮಾಪನವನ್ನು ಅನ್ವಯಿಸುವಂತಹ ಆಯೋಗ
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1, 2, 3 ಮತ್ತು 4
(2) 2 ಮತ್ತು 4 ಮಾತ್ರ
(3) 1 ಮತ್ತು 3 ಮಾತ್ರ
(4) 1, 2 ಮತ್ತು 3 ಮಾತ್ರ
ಸರಿ ಉತ್ತರ
ಸರಿ ಉತ್ತರ:(4) 1, 2 ಮತ್ತು 3 ಮಾತ್ರ
32. ಈ ಕೆಳಗಿನವುಗಳಲ್ಲಿ ಯಾವುವು ವಿಕೇಂದ್ರೀಕರಣ ಯೋಜನೆಯ ಅರ್ಥ ಹೊಂದಿದೆ?
1. ತಮ್ಮಿಂದ ಯೋಜಿಸಲ್ಪಟ್ಟ ಯೋಜನೆಗಳಿಂದ ತಾವೇ ನೇರವಾಗಿ ಪರಿಣಾಮಕ್ಕೊಳಪಡುವಂತಹ ಒಂದು ಯೋಜನೆ ಮತ್ತು ಸಂಯುಕ್ತ ರಾಜಧಾನಿಯ ಅಪ್ಪಟ ನಿರುಪಾಧಿಕ ಅಧಿಕಾರಶಾಹಿಗೊಳಪಟ್ಟಿಲ್ಲ
2. ಯೋಜನೆಗಳು ಮೇಲಿಂದ ಹೊರಿಸಲಾಗಿಲ್ಲ ಮತ್ತು ಸಂಬಂಧಿಸಿದ ಗುಂಪುಗಳು ಅಥವಾ ಕ್ಷೇತ್ರಗಳು ಇಡೀ ಯೋಜನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ.
3. ಭಾಗವಹಿಸುವಿಕೆ, ಅರ್ಥಶಾಸ, ಆರ್ಥಿಕ ಪ್ರಜಾಪ್ರಭುತ್ವ ಮತ್ತು ಔದ್ಯಮಿಕ ಪ್ರಜಾಪ್ರಭುತ್ವ ಇವುಗಳ ಮೇಲೆ ಆಧಾರಿತವಾದ ಒಂದು ಯೋಜನೆ.
4. ಸಾಮಾಜಿಕ ಮತ್ತು ಕ್ರಾಂತಿಕಾರಿ (anarchist) ಅರ್ಥಶಾಸಗಳ ಒಂದು ಲಕ್ಷಣವಾಗಿದೆ.
5. ಇದು ಜನರ ಪ್ರಜಾಪ್ರಭುತ್ವವಾದಿ ಮಹತ್ವಾಕಾಂಕ್ಷೆ ಮತ್ತು ಭಾಗವಹಿಸುವಿಕೆಯ ಯೋಜನೆ
ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮತ್ತು 2 ಮಾತ್ರ
(2) 1, 2, 3 ಮತ್ತು 4 ಮಾತ್ರ
(3) 2, 3 ಮತ್ತು 5 ಮಾತ್ರ
(4) 1, 2, 3, 4 ಮತ್ತು 5 ಮಾತ್ರ
ಸರಿ ಉತ್ತರ
ಸರಿ ಉತ್ತರ:(4) 1, 2, 3, 4 ಮತ್ತು 5 ಮಾತ್ರ
33. ಕಾಮನ್ ವೆಲ್ತ್ ನಲ್ಲಿ ಆಯ್ಕೆಗೊಂಡ ಮೊದಲ ಮಹಿಳಾ ಸೆಕ್ರೆಟರಿ ಜನರಲ್ ಯಾರು?
(1) ಪ್ಯಾಟ್ರಿಷಿಯಾ ಸ್ಕಾಟ್ ಲೆಂಡ್
(2) ಬಿಧ್ಯಾದೇವಿ
(3) ಮೆಲಿಂಡಾ ಗೇಟ್ಸ್
(4) ಮಾರ್ಝೈ ಅಫ್ಕಂ
ಸರಿ ಉತ್ತರ
ಸರಿ ಉತ್ತರ:(1) ಪ್ಯಾಟ್ರಿಷಿಯಾ ಸ್ಕಾಟ್ಲೆಂಡ್
34. ಇವುಗಳನ್ನು ಹೊಂದಿಸಿ.
I. | ನಗಿಸುವ | 1. | ಮೀಥೇನ್ |
II. | ಶ್ರೇಷ್ಠ | 2. | ಫ್ಲೋರಿನ್ |
III. | ನೈಸರ್ಗಿಕ | 3. | ಹೀಲಿಯಂ |
IV. | ಹ್ಯಾಲೋಜನ್ | 4. | ನೈಟ್ರಸ್ |
| I | II | III | IV |
(1) | 1 | 2 | 3 | 4 |
(2) | 2 | 3 | 1 | 4 |
(3) | 4 | 1 | 3 | 2 |
(4) | 4 | 3 | 1 | 2 |
ಸರಿ ಉತ್ತರ
ಸರಿ ಉತ್ತರ:(4) 4 3 1 2
35. ಕರ್ನಾಟಕ ಸರ್ಕಾರವು ಈ ಕೆಳಗಿನ ಐತಿಹಾಸಿಕ ಸ್ಥಳಗಳಲ್ಲಿ ಯಾವುದನ್ನು ಹಂಪಿಯ ಪರಂಪರೆಯ ಸೋದರ ಪ್ರದೇಶವೆಂದು ಗುರ್ತಿಸಿದೆ.
(1) ಅಂಗ್ಕೋರ್ವಾಟ್, ಕಾಂಬೋಡಿಯಾ
(2) ಮಚುಪಿಚ್ಚು, ಪೆರು
(3) ಬೊರೊಬುದುರ್, ಇಂಡೋನೇಷ್ಯಾ
(4) ಗಿಜಾ, ಈಜಿಫ್ಟ್
ಸರಿ ಉತ್ತರ
ಸರಿ ಉತ್ತರ:(2) ಮಚುಪಿಚ್ಚು, ಪೆರು
36. 1857ರಲ್ಲಿ ಕಲ್ಕತ್ತ, ಮುಂಬಯಿ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾನಿಲಯಗಳ ಪ್ರಾರಂಭಕ್ಕೆ ಆಧಾರ
(1) ಮೆಕಾಲೆ ಯ ವಿನಟ್
(2) ವುಡ್ಸ್ ಡಿಸ್ಪ್ಯಾಚ್
(3) ವಿಲಿಯಮ್ ಜೋನ್ಸ್ ನ ವರದಿ
(4) ಥಾಮಸ್ ಮನ್ರೋ ಆಯೋಗ
ಸರಿ ಉತ್ತರ
ಸರಿ ಉತ್ತರ:(2) ವುಡ್ಸ್ ಡಿಸ್ಪ್ಯಾಚ್
37. ಅಕ್ಕೈ ಪದ್ಮಶಾಲಿಯವರಿಗೆ 2015ರ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು ಈ ಕ್ಷೇತ್ರದಲ್ಲಿ
(1) ಸಾಹಿತ್ಯ
(2) ಯಕ್ಷಗಾನ
(3) ಸಮಾಜಸೇವೆ
(4) ಕ್ರೀಡೆ
ಸರಿ ಉತ್ತರ
ಸರಿ ಉತ್ತರ:(3) ಸಮಾಜಸೇವೆ
38. ಐ.ಎನ್.ಎ.ದಿಂದ ಸ್ಥಾಪಿಸಲ್ಪಟ್ಟ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರದ ರಾಷ್ಟ್ರಗೀತೆ (ಕೋಮಿ ತರಾನಾ) ಯಾವುದು?
(1) ಸಭ್ ಸುಖ್ ಚೈನ್
(2) ಕದಂ ಕದಂ ಬಢಾಯೆ ಜಾ
(3) ವಂದೇ ಮಾತರಂ
(4) ಜನ ಗಣ ಮನ
ಸರಿ ಉತ್ತರ
ಸರಿ ಉತ್ತರ:(1) ಸಭ್ ಸುಖ್ ಚೈನ್
39. ಈ ಕೆಳಗಿನವುಗಳಲ್ಲಿ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್ ಮೆಂಟ್ ಆಕ್ಟ್ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣ ಕಾಯ್ದೆ ) 2003ರ ಮುಖ್ಯ ಅಂಶ ಅಲ್ಲದ್ದು ಯಾವುದು?
(1) 2006-07ರ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರ ಸುರಕ್ಷತೆಗಳ ಪ್ರಾಥಮಿಕ ವಿಷಯಗಳಲ್ಲಿ ಸೂಚನೆ ನೀಡಬಾರದು.
(2) ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸಾಲ ಪಡೆಯುವಂತಿಲ್ಲ. ಇದಕ್ಕೆ ವಿನಾಯ್ತಿ ಎಂದರೆ ಕ್ಯಾಷ್ ರಸೀತಿಗೆ ಮೀರಿ ಅಧಿಕ ನಗದನ್ನು ತಾತ್ಕಾಲಿಕವಾಗಿ ಮುಂಗಡದ ಮೂಲಕ ನೀಡಲು.
(3) ಪ್ರತಿವರ್ಷದ ಜಿ.ಡಿ.ಪಿ. ಯ 0.3% ಅಷ್ಟು ವಿತ್ತೀಯ ಕೊರತೆಯನ್ನು ತಗ್ಗಿಸಬೇಕು. ಕಂದಾಯ ತಗ್ಗಿಕೆಯನ್ನು 0.5% ತಗ್ಗಿಸಬೇಕು.
(4) ಕಾಯ್ದೆಯು, 2018ರ ಮಾರ್ಚ್ 31ರ ವೇಳೆಗೆ ವಿತ್ತೀಯ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಯುಕ್ತ ಕ್ರಮ ಕೈಗೊಳ್ಳುವಂತೆ ಕಡ್ಡಾಯಗೊಳಿಸಿದೆ.
ಸರಿ ಉತ್ತರ
ಸರಿ ಉತ್ತರ:(4) ಕಾಯ್ದೆಯು, 2018ರ ಮಾರ್ಚ್ 31ರ ವೇಳೆಗೆ ವಿತ್ತೀಯ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಯುಕ್ತ ಕ್ರಮ ಕೈಗೊಳ್ಳುವಂತೆ ಕಡ್ಡಾಯಗೊಳಿಸಿದೆ.
40. ಇವುಗಳನ್ನು ಹೊಂದಿಸಿ.
| ಪಟ್ಟಿ |
| ಪಟ್ಟಿ– |
i. | ದೀರ್ಘಾವಧಿ | a. | ಸೂಚಕ |
ii. | ಸಾರ್ವಜನಿಕ | b. | ಸ್ಥಾನಿಕ |
iii. | ಖಾಸಗಿ | c. | ಅನಿವಾರ್ಯ |
iv. | ನಗರ | d. | ಪರಿದೃಶ್ಯ ಕೋನ ಯೋಜನೆ |
Codes:
| a | b | c | d |
(1) | iii | iv | ii | i |
(2) | ii | iv | i | iii |
(3) | ii | iv | iii | i |
(4) | iv | iii | ii | i |
ಸರಿ ಉತ್ತರ
ಸರಿ ಉತ್ತರ:(2) 4 1 2 3
41. ಪಟ್ಟಿ Iಅನ್ನು ಪಟ್ಟಿ II ರೊಂದಿಗೆ ಹೊಂದಿಸಿ ಸರಿಯುತ್ತರ ಆಯ್ಕೆ ಮಾಡಿ.
| ಪಟ್ಟಿ |
| ಪಟ್ಟಿ– |
i. | ದೀರ್ಘಾವಧಿ | a. | ಸೂಚಕ |
ii. | ಸಾರ್ವಜನಿಕ | b. | ಸ್ಥಾನಿಕ ಯೋಜನೆ |
iii. | ಖಾಸಗಿ | c. | ಅನಿವಾರ್ಯ |
iv. | ನಗರ | d. | ಪರಿದೃಶ್ಯ |
Codes:
| a | b | c | d |
(1) | iii | iv | ii | i |
(2) | ii | iv | i | iii |
(3) | ii | iv | iii | i |
(4) | iv | iii | ii | i |
ಸರಿ ಉತ್ತರ
ಸರಿ ಉತ್ತರ:(1) iii iv ii i
42. ಭಾರತದ ಸಂವಿಧಾನದ ಕಲಮು 356ರಡಿ ಇರುವ ತುರ್ತು ಪರಿಸ್ಥಿತಿ ಅವಕಾಶಗಳು ಇದರಿಂದ ಪ್ರಭಾವಿತಗೊಂಡಿವೆ.
(1) ಸಂಯುಕ್ತ ರಾಷ್ಟ್ರ ಸಂವಿಧಾನ
(2) ಆಸ್ಟ್ರೇಲಿಯಾ ಸಂವಿಧಾನ
(3) ವೀಮರ್ ಸಂವಿಧಾನ
(4) ಐರಿಷ್ ಸಂವಿಧಾನ
ಸರಿ ಉತ್ತರ
ಸರಿ ಉತ್ತರ:(3) ವೀಮರ್ ಸಂವಿಧಾನ
43. ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಸಂತುಲಿತ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡಿ ಯೋಜನಾ ಕಾರ್ಯದ ಪ್ರಧಾನ ಅಂಶವಾಗಿಸಿ ಯೋಜನಾ ದಾಖಲೆಯಲ್ಲಿ ಒಂದು ಇಡೀ ಅಧ್ಯಾಯವನ್ನು ಮೀಸಲಾಗಿರಿಸಲಾಯಿತು?
(1) ಎರಡನೆಯ ಯೋಜನೆ
(2) ಮೂರನೆಯ ಯೋಜನೆ
(3) ನಾಲ್ಕನೆಯ ಯೋಜನೆ
(4) ಐದನೆಯ ಯೋಜನೆ
ಸರಿ ಉತ್ತರ
ಸರಿ ಉತ್ತರ:(2) ಮೂರನೆಯ ಯೋಜನೆ
44. ಕಾಶ್ಮೀರ ಕಣಿವೆ ಈ ಎರಡರ ನಡುವೆ ಇದೆ.
(1) ಪೀರ್-ಕಾರಾಕೋರಂ ಬೆಟ್ಟಸಾಲು
(3) ಝಾಸ್ಕರ್ ಮತ್ತು ಲಡಾಕ್ ಬೆಟ್ಟಸಾಲು
(4) ಸುಲೈಮಾನ್-ಕೀರ್ತರ್ ಬೆಟ್ಟಸಾಲು
ಸರಿ ಉತ್ತರ
ಸರಿ ಉತ್ತರ:(2) ಪೀರ್- ಪಂಜಾಲ್ ಮತ್ತು ಝಾಸ್ಕರ್ ಬೆಟ್ಟಸಾಲು
45. ಇವುಗಳಲ್ಲಿ ಯಾವ ಸಮುದ್ರ ಬಂದರು ಭಾರತದಲ್ಲಿ ನೈಸರ್ಗಿಕ ಬಂದರನ್ನು ಹೊಂದಿಲ್ಲ?
(1) ಮರ್ಮಗೋವಾ
(2) ಮುಂಬಯಿ
(3) ಕೊಚ್ಚಿನ್
(4) ಪಾರದೀಪ್
ಸರಿ ಉತ್ತರ
ಸರಿ ಉತ್ತರ:(4) ಪಾರದೀಪ್
46. ಈ ಕೆಳಗಿನ ಭಾರತದ ದ್ವೀಪಗಳ ಪೈಕಿ ಜ್ವಾಲಾಮುಖಿಯ ಮೂಲ ಹೊಂದಿರುವುದು ಯಾವುದು?
(1) ಕಾರ್-ನಿಕೋಬಾರ್
(2) ಬಾರೆನ್
(3) ಉತ್ತರ ಅಂಡಮಾನ್
(4) ಕಿರು ನಿಕೋಬಾರ್
ಸರಿ ಉತ್ತರ
ಸರಿ ಉತ್ತರ:(2) ಬಾರೆನ್
47. ಜನಸಂಖ್ಯೆ ಹಾಗೂ ವಿಸ್ತೀರ್ಣವನ್ನು ಗಮನಿಸಿದಾಗ ಮೂರನೇ ಅತಿದೊಡ್ಡ ರಾಷ್ಟ್ರ ಯಾವುದು?
(1) ಬ್ರೆಜಿಲ್
(2) ಅಮೇರಿಕಾ (ಯು.ಎಸ್.ಎ.)
(3) ಇಂಡೋನೇಷಿಯಾ
(4) ಪಾಕಿಸ್ತಾನ
ಸರಿ ಉತ್ತರ
ಸರಿ ಉತ್ತರ:(2) ಅಮೇರಿಕಾ(ಯು.ಎಸ್.ಎ.)
48. ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ (ಎನ್.ಡಿ.ಬಿ.)ಯ ಮುನ್ನಿನ ಹೆಸರು
(1) ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್
(2) ಆಫ್ರಿಕನ್ ಡೆವಲಪ್ ಮೆಂಟ್ ಬ್ಯಾಂಕ್
(3) ವರ್ಲ್ಡ್ ಡೆವಲಪ್ ಮೆಂಟ್ ಬ್ಯಾಂಕ್
(4) ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್
ಸರಿ ಉತ್ತರ
ಸರಿ ಉತ್ತರ:(4) ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್
49. ಪರಿಸರ, ಅರಣ್ಯ ಮತ್ತು ಹವಾಮಾನ ಪರಿವರ್ತನೆ ಸಚಿವಾಲಯವು ಗಾಢ ಸಂರಕ್ಷಣೆ ಮತ್ತು ನಿರ್ವಹಣೆಗೆ ಆಯ್ದುಕೊಂಡ ಹವಳದ ದಿಬ್ಬಗಳಾವುವು?
1. ಮನ್ನಾರ್ ಕೊಲ್ಲಿ
2. ಕಚ್ ನ ಕೊಲ್ಲಿ
3. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
4. ಗೋವಾ ಈ ಮೇಲೆ ಹೇಳಿದ ಹೇಳಿಕೆಗಳಲ್ಲಿ ಯಾವುದು ಸರಿಯಾದುದು ಎಂದು ಕೆಳಗಿನ ಸಂಕೇತಗಳ ಮೂಲಕ ತಿಳಿಸಿರಿ.
(1) 1, 2
(2) 2, 4
(3) 1, 2, 3
(4) 1, 2, 3, 4
ಸರಿ ಉತ್ತರ
ಸರಿ ಉತ್ತರ:(3) 1, 2, 3
50. 2001-2011ರ ಜನಗಣತಿಯಿಂದ ತಿಳಿದು ಬಂದ ಹಾಗೆ ಯಾವ ರಾಜ್ಯವು ಜನಸಂಖ್ಯೆಯ ಬೆಳವಣಿಗೆ ದರದಲ್ಲಿ ದಶಕದ ಗರಿಷ್ಠತೆಯನ್ನು ಸಾಧಿಸಿತು?
(1) ಬಿಹಾರ್
(2) ಉತ್ತರ ಪ್ರದೇಶ
(3) ರಾಜಸ್ಥಾನ
(4) ಅರುಣಾಚಲ ಪ್ರದೇಶ
ಸರಿ ಉತ್ತರ
ಸರಿ ಉತ್ತರ:(1) ಬಿಹಾರ್
51. ಏಷಿಯಾದ ಮೂಲ ಸೌಕರ್ಯ ಮತ್ತು ಹೂಡಿಕೆಯ ಬ್ಯಾಂಕ್ (AIIB)ಯು
1. ಚೀನಾ ನಾಯಕತ್ವದ ಬಹುಪಕ್ಷೀಯ ಏಷಿಯನ್ ಬ್ಯಾಂಕ್.
2. ಇದರ ಮುಖ್ಯ ಕಾರ್ಯಾಲಯವು ಬೀಜಿಂಗ್ ನಲ್ಲಿದೆ.
3. ಆಸ್ಟ್ರೇಲಿಯಾ AIIB ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ಮೊದಲ ದೇಶ.
4. ಭಾರತವನ್ನೊಳಗೊಂಡು 50 ರಾಷ್ಟ್ರಗಳು AIIBಯ 60 ವಿಧಿಯುಳ್ಳ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿವೆ.
ಈ ಮೇಲೆ ಹೇಳಿದ ಹೇಳಿಕೆಗಳಲ್ಲಿ ಯಾವುದು ಸರಿಯಾದುದು ಎಂದು ಕೆಳಗಿನ ಸಂಕೇತಗಳ ಮೂಲಕ ತಿಳಿಸಿರಿ.
(1) 1, 2
(2) 1,2,3
(3) 1, 2, 3, 4
(4) 2, 3,4
ಸರಿ ಉತ್ತರ
ಸರಿ ಉತ್ತರ:(3) 1, 2, 3, 4
52. ಏಪ್ರಿಲ್ 30, 2015ರಂದು ಭಾರತ ಮತ್ತು ಜಪಾನ್ ಸಹಿ ಮಾಡಿರುವ ಕ್ರಿಯಾ ಕಾರ್ಯಸೂಚಿ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿರಿ.
1. ಜಪಾನಿನ ಉದ್ಯಮ ನಗರಗಳ ಮಾದರಿಯಲ್ಲಿ ಭಾರತದ ಆಯ್ದ ನಗರಗಳ ಬೆಳವಣಿಗೆ
2. ಭಾರತಕ್ಕೆ ಜಪಾನ್ ಪರಮಾಣು ಇಂಧನ ಪೂರೈಸುವುದು.
3. ಹೂಡಿಕೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ.
4. ಭಾರತಕ್ಕೆ ಜಪಾನ್ ರೂ.5000 ಕೋಟಿಯ ಎರವಲು ನೀಡುವುದು. ಈ ಮೇಲೆ ಹೇಳಿದ ಹೇಳಿಕೆಗಳಲ್ಲಿ ಯಾವುದು ಸರಿಯಾದುದು ಎಂದು ಕೆಳಗಿನ ಸಂಕೇತಗಳ ಮೂಲಕ ಹೇಳಿರಿ.
(1) 1, 2
(2) 2, 3
(3) 3, 4
(4) 1, 3
ಸರಿ ಉತ್ತರ
ಸರಿ ಉತ್ತರ:(4) 1, 3
53. 2016ರ ಪದ್ಮ ವಿಭೂಷಣ ಪ್ರಶಸ್ತಿಯು ಇವರಿಗೆ ನೀಡಲಾಗಿದೆ.
(1) ಡಾ.ವಾಸುದೇವ ಕಲಕುಂಟೆ ಆತ್ರೆ
(2) ಪ್ರೊ.ಎಂ.ವಿ.ವೆಂಕಟೇಶ ಕುಮಾರ
(3) ಸುಭಾಷ್ಚಂದ್ರ ಸುಪಕ್ರ್
(4) ಡಾ.ಸಂತೆಶಿವರ ಭೈರಪ್ಪ
ಸರಿ ಉತ್ತರ
ಸರಿ ಉತ್ತರ:(1) ಡಾ.ವಾಸುದೇವ ಕಲಕುಂಟೆ ಆತ್ರೆ
54. ಅಂತರರಾಷ್ಟ್ರೀಯ ಕಡಲ ಸಂಸ್ಥೆಯು (IMO)
1. IMOದಲ್ಲಿ ಪ್ರಸ್ತುತ 171 ಸದಸ್ಯ ರಾಜ್ಯಗಳು ಮತ್ತು 3 ಸಹ ಸದಸ್ಯರಿದ್ದಾರೆ.
2. ಇದು ಹಡಗು ಸಾರಿಗೆ ಮತ್ತು ರವಾನೆಯ ಸಮಗ್ರ ಚೌಕಟ್ಟಿನ ಬೆಳವಣಿಗೆ ಮತ್ತು ನಿರ್ವಹಣೆಗಾಗಿ ಇದೆ.
3. ಭಾರತವು ಅಂತರರಾಷ್ಟ್ರೀಯ ಕಡಲು ಸಂಸ್ಥೆಯ (IMO) ಸಭೆಯ ಸದಸ್ಯ ಸ್ಥಾನಕ್ಕೆ ಮರು ಆಯ್ಕೆಗೊಂಡಿದೆ.
4. ಇದರ ಕೇಂದ್ರ ಸ್ಥಾನ ವಾಷಿಂಗ್ ಟನ್ ಡಿ.ಸಿ.
ಈ ಮೇಲೆ ಹೇಳಿರುವ ಹೇಳಿಕೆಗಳಲ್ಲಿ ಯಾವುದು ಸರಿ ಎಂಬುದನ್ನು ಈ ಕೆಳಗೆ ನೀಡಿರುವ ಸಂಕೇತಗಳ ಮೂಲಕ ಹೇಳಿರಿ.
(1) 1, 2
(2) 2, 3
(3) 1, 2, 3
(4) 1, 2, 3, 4
ಸರಿ ಉತ್ತರ
ಸರಿ ಉತ್ತರ:(3) 1, 2, 3
55. ನಿರ್ಮಯಾ ಯೋಜನೆಯು
1. ಬಡತನದ ರೇಖೆಗಿಂತ ಕೆಳಮಟ್ಟದ ಕುಟುಂಬದ ಮಕ್ಕಳಿಗೆ ಆರೋಗ್ಯ ವಿಮಾ ಯೋಜನೆ.
2. ಈ ಯೋಜನೆಯು ಸ್ವಲೀನತೆ, ಸೆರೆಬೆರಲ್ ಪಾಲ್ಸಿ, ಬುದ್ಧಿಮಾಂದ್ಯತೆ ಮತ್ತು ಬಹು ಅಂಗ ವಿಕಲಾಂಗ ಮಕ್ಕಳಿಗಾಗಿದೆ.
3. ಈ ಯೋಜನೆಯನ್ನು 45,000 ಲಾನುಭವಿಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.
4. 2014-15ರ ಆಯವ್ಯಯದಲ್ಲಿ ಸುಮಾರು 1.12 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ ಎಂಬುದನ್ನು ಈ ಕೆಳಗಿನ ಸಂಕೇತಗಳ ಮೂಲಕ ಹೇಳಿರಿ.
(1) 1, 2
(2) 1, 2, 3
(3) 2, 3, 4
(4) 1, 2, 3, 4
ಸರಿ ಉತ್ತರ
ಸರಿ ಉತ್ತರ:(4) 1, 2, 3, 4
56. ನನ್ನ ಮನೆ ಯೋಜನೆಯ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿಲ್ಲ?
(1) ಇದು ಬಡತನದ ರೇಖೆಗಿಂತ ಮೇಲಿನವರಿಗಾಗಿ ಇರುವ ಯೋಜನೆ.
(2) ಈ ಯೋಜನೆಯು ಕಡಿಮೆ ಆದಾಯದ ವರ್ಗದ ಕುಟುಂಬಗಳು ಕೊಂಡುಕೊಳ್ಳಬಹುದಾದ ಮನೆಯನ್ನು ನೀಡುವುದಾಗಿದೆ.
(3) ಈ ಯೋಜನೆಯು ಸಂಘಟಿತ ವಲಯದ ಕಾರ್ಮಿಕರಿಗಾಗಿದೆ.
(4) 2010-11ರಲ್ಲಿ ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗೊಳಿಸಿತು.
ಸರಿ ಉತ್ತರ
ಸರಿ ಉತ್ತರ:(3) ಈ ಯೋಜನೆಯು ಸಂಘಟಿತ ವಲಯದ ಕಾರ್ಮಿಕರಿಗಾಗಿದೆ.
57. ಸುವರ್ಣ ಗ್ರಾಮೋದಯ ಯೋಜನೆಯು
1. ತೀವ್ರ ಮತ್ತು ಸಮಗ್ರ ದೃಷ್ಟಿಕೋನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ಪಂದನಾತ್ಮಕ ಗ್ರಾಮೀಣ ಸಮುದಾಯಗಳನ್ನು ಅಭಿವೃದ್ಧಿಪಡಿಸುವುದು.
2. ವಿಶೇಷವಾಗಿ ಶಿಕ್ಷಿತ ನಿರುದ್ಯೋಗಿ ಯುವಕರಿಗಾಗಿ ಗಣನೀಯ ಪ್ರಮಾಣದಲ್ಲಿ ಕೃಷಿಯೇತರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು.
3. ಸ್ವ ಸಹಾಯ ಸಂಘಗಳು ಮತ್ತು ಸಾಂಸ್ಕೃತಿಕ ಸಂಘಗಳ ಮೂಲಕ ಸಮುದಾಯದ ಜಾಗೃತಿ ಮತ್ತು ಅಭಿವೃದ್ಧಿ ಸಾಧಿಸುವುದು.
4. ಗ್ರಾಮಗಳ ಆಯ್ಕೆಯು ರಾಜ್ಯದ ಒಟ್ಟು ಗ್ರಾಮೀಣ ಜನಸಂಖ್ಯೆಗೆ ಪ್ರತಿಯೊಂದು ತಾಲ್ಲೂಕಿನಲ್ಲಿರುವ ಜನಸಂಖ್ಯೆ ಸಂಬಂಧದ ಆಧಾರದ ಮೇಲೆ ಮಾಡಲಾಗುವುದು.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ ಎಂಬುದನ್ನು ಈ ಕೆಳಗಿನ ಸಂಕೇತಗಳ ಮೂಲಕ ಹೇಳಿರಿ.
(1) 1, 2
(2) 3, 4
(3) 1, 2, 3
(4) 1, 2, 3, 4
ಸರಿ ಉತ್ತರ
ಸರಿ ಉತ್ತರ:(4) 1, 2, 3, 4
58. ಈ ಕೆಳಗಿನವುಗಳನ್ನು ಅವುಗಳ ಉದ್ದೇಶಗಳೊಂದಿಗೆ, ಸಮಿತಿಗಳೊಂದಿಗೆ ಹೊಂದಿಸಿರಿ.
| ಪಟ್ಟಿ |
| ಪಟ್ಟಿ |
a. | ಆರ್.ವಿ.ಈಶ್ವರ್ ಸಮಿತಿ | 1. | ಗ್ರಾಮೀಣ |
b. | ಅರವಿಂದ | 2. | ಹಣಕಾಸಿನ ಸೇರ್ಪಡೆಯ ಮಾಧ್ಯಮಿಕ ಪಥ ಕುರಿತು |
c. | ಕಮಲೇಶಚಂದ್ರ | 3. | ಆದಾಯ |
d. | ದೀಪಕ | 4. | ತ್ವರಿತ |
|
| 5. | ವಿಮಾ |
ಈ
ಕೆಳಗಿನ
ಸಂಕೇತದಿಂದ
ಸರಿಯಾದ
ಉತ್ತರ
ಆಯ್ಕೆ
ಮಾಡಿರಿ.
| a | b | c | d |
(1) | 4 | 3 | 2 | 1 |
(2) | 3 | 4 | 1 | 2 |
(3) | 5 | 4 | 3 | 2 |
(4) | 2 | 1 | 5 | 3 |
ಸರಿ ಉತ್ತರ
ಸರಿ ಉತ್ತರ:(2) 3 4 1 2
59. ಕರ್ನಾಟಕ ರಾಜ್ಯದ ಸುತ್ತುವರಿದಿರುವ ಕರಾವಳಿ ಪ್ರದೇಶವು
(1) 220 ಕಿ.ಮೀ.
(2) 320 ಕಿ.ಮೀ.
(3) 400 ಕಿ.ಮೀ.
(4) 450 ಕಿ.ಮೀ.
ಸರಿ ಉತ್ತರ
ಸರಿ ಉತ್ತರ:(2) 320 ಕಿ.ಮೀ.
60. ಆಂಧ್ರ ಪ್ರದೇಶ ಸರ್ಕಾರವು ತನ್ನ ಹೊಸ ರಾಜಧಾನಿಯನ್ನು ಉದ್ದಂಡಯಾರುನಿ ಹಳ್ಳಿಯ ಹತ್ತಿರದ ಅಮರಾವತಿಯಲ್ಲಿ ನಿರ್ಮಿಸಲು ನಿರ್ಧರಿಸಿದೆ. ಈ ದಿಸೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ತಪ್ಪು?
(1) ಈ ಸ್ಥಳವು ಹಿಂದೆ ಶಾತವಾಹನರ ರಾಜಧಾನಿಯಾಗಿತ್ತು.
(2) ಈ ಸ್ಥಳವು ಕೃಷ್ಣಾ ನದಿ ದಂಡೆಯ ಮೇಲಿರುವ ನಗರ ವಿಜಯವಾಡಕ್ಕೆ ಅತಿ ಸಮೀಪದಲ್ಲಿದೆ.
(3) ಜಾಗತಿಕ ಮಟ್ಟದ ನಗರ ನಿರ್ಮಿಸಲು ಇರುವ ಸ್ಥಳ ಇದೊಂದೇ ಆಗಬಹುದು.
(4) ಈ ಸ್ಥಳವು ಹಿಂದೆ ಶಾತವಾಹನರ ರಾಜಧಾನಿಯಾಗಿತ್ತು ಮತ್ತು ಈ ಸ್ಥಳವು ಕೃಷ್ಣಾ ನದಿ ದಂಡೆಯ ಮೇಲಿರುವ ನಗರ ವಿಜಯವಾಡಕ್ಕೆ ಅತಿ ಸಮೀಪದಲ್ಲಿದೆ. ಇವೆರಡು ಮಾತ್ರ ಸರಿ ಉತ್ತರಗಳು.
ಸರಿ ಉತ್ತರ
ಸರಿ ಉತ್ತರ:(3) ಜಾಗತಿಕ ಮಟ್ಟದ ನಗರ ನಿರ್ಮಿಸಲು ಇರುವ ಸ್ಥಳ ಇದೊಂದೇ ಆಗಬಹುದು.
61. ಕೇಂದ್ರ ಸರ್ಕಾರದ ನಯಿ ಮಂಜಿಲ್ ರಾಷ್ಟ್ರೀಯ ಯೋಜನೆಯ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವ ಉತ್ತರ ತಪ್ಪಾಗಿದೆ?
(1) ಈ ಯೋಜನೆಯು ಅಲ್ಪಸಂಖ್ಯಾತ ಯುವಕರ ಶೈಕ್ಷಣಿಕ ಪ್ರವೇಶವನ್ನು ಪ್ರೋತ್ಸಾಹಿಸುತ್ತದೆ.
(2) ಅದು ಅವರ ವೃತ್ತಿ ಶಿಕ್ಷಣ/ತರಬೇತಿಗೆ ಸಹಕಾರಿಯಾಗಿದೆ.
(3) ಅದು ಅವರ ನೌಕರಿ ಪಡೆಯಲು ಸಹಕಾರಿಯಾಗಿದೆ.
(4) ಅದು ಅವರ ಮದುವೆ ಮತ್ತು ಕುಟುಂಬ ಯೋಜನೆಗೆ ಬೆಂಬಲ ನೀಡುತ್ತದೆ.
ಸರಿ ಉತ್ತರ
ಸರಿ ಉತ್ತರ:(4) ಅದು ಅವರ ಮದುವೆ ಮತ್ತು ಕುಟುಂಬ ಯೋಜನೆಗೆ ಬೆಂಬಲ ನೀಡುತ್ತದೆ.
62. ಈ ಕೆಳಗಿನವುಗಳನ್ನು ಹೊಂದಿಸಿರಿ.
| ಪಟ್ಟಿ |
| ಪಟ್ಟಿ |
i. | ಪ್ಯಾರಿಸ್ | 1. | ಯಾಕೂಬ್ |
ii. | ಭಯಂಕರವಾದ | 2. | ಎಂ.ಎಂ.ಕಲಬುರ್ಗಿ |
iii. | ಭಯೋತ್ಪಾದಕರ | 3. | ಚಾರ್ಲಿ |
iv. | ಬೆಳೆಯುತ್ತಿರುವ ಅಸಹಿಷ್ಣುತೆ | 4. | ನೇಪಾಳ |
Codes:
| i | ii | iii | iv |
(1) | 3 | 4 | 1 | 2 |
(2) | 3 | 4 | 2 | 1 |
(3) | 1 | 2 | 3 | 4 |
(4) | 4 | 3 | 2 | 1 |
ಸರಿ ಉತ್ತರ
ಸರಿ ಉತ್ತರ:(1) 3 4 1 2
63. ಈ ಕೆಳಗಿನ ಯಾರು 2015ರ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ?
(1) ಎಸ್.ಎಲ್.ಭೈರಪ್ಪ
(2) ದಿಲೀಪ್ ಕುಮಾರ್
(3) ರಘುವೀರ್ ಚೌಧರಿ
(4) ಸಲ್ಮಾನ್ ರಶ್ದಿ
ಸರಿ ಉತ್ತರ
ಸರಿ ಉತ್ತರ:(3) ರಘುವೀರ್ ಚೌಧರಿ
ನಿರ್ದೇಶನ (ಪ್ರಶ್ನೆ 64-65): ಈ ಕೆಳಗಿನ ಕಂಡಿಕೆಗಳೆರಡನ್ನು ಕಾಳಜಿಯಿಂದ ಓದಿ ಲೇಖಕರು ಮುಖ್ಯವಾಗಿ ಏನನ್ನು ಹೇಳಬಯಸುತ್ತಾರೆಂಬುದನ್ನು ನಿರ್ಧರಿಸಿ ಹಾಗೂ ಈ ವಾದದ ಮೂಲಕ ಯಾವ ಉಪಸಂಹಾರವನ್ನು ಕೈಗೊಳ್ಳಬಹುದು? ಪ್ರತಿ ಕಂಡಿಕೆಯ ನಂತರ ನಾಲ್ಕು ಹೇಳಿಕೆಗಳಿವೆ. ಅವುಗಳಲ್ಲಿಯ ಒಂದು ಹೇಳಿಕೆ ಉಳಿದ ಮೂರು ಹೇಳಿಕೆಗಳಿಗಿಂತ ಹೆಚ್ಚು ಪ್ರಸ್ತುತವಾಗಿರುತ್ತದೆ.
64. ಇಂದು ಜನರು ತಮ್ಮ ಕೆಲಸ-ಕಾರ್ಯಗಳಲ್ಲಿ ಬಹುವಾಗಿ ತೊಡಗಿದ್ದು ಅವರು ತಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳಲಾರರು. ನಮ್ಮ ಆರೋಗ್ಯ ಪೂರ್ಣವಲ್ಲದ ಜೀವನದಿಂದಾಗಿ ಸಕ್ಕರೆ ಕಾಯಿಲೆ, ಸಂಧಿವಾತ, ಹೃದಯಾಘಾತ, ರಕ್ತದ ಒತ್ತಡ ಮುಂತಾದ ರೋಗಗಳ ಹೆಚ್ಚಳವಾಗತೊಡಗಿದೆ. ಜನರು ವ್ಯಾಯಾಮಕ್ಕಾಗಿ ಹೆಚ್ಚಿನ ವೇಳೆಯನ್ನು ಪಡೆಯುತ್ತಿಲ್ಲ. ಒತ್ತಡವು ನಿರಂತರವಾಗಿ ಹೆಚ್ಚುತ್ತಿದೆ. ಸಿದ್ಧ ಆಹಾರಗಳು ತ್ವರಿತ, ಸುಲಭಕರ ಹೆಚ್ಚು ರುಚಿಕರವಾಗಿ ಇದ್ದರೂ ಆರೋಗ್ಯಕರವಾಗಿಲ್ಲ. ಧೂಮಪಾನ ಮತ್ತು ಕುಡಿತದಂತಹ ಹವ್ಯಾಸಗಳು ಅನೇಕ ದುಷ್ಪರಿಣಾಮಗಳನ್ನು ಹೊಂದಿವೆ. ನಗರದ ದೂಷಿತ ಮಾಲಿನ್ಯವು ಪೌರರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿವೆ. ಆರೋಗ್ಯಕರವಾಗಿ ಮತ್ತು ಸಂತೋಷವಾಗಿ ಬದುಕಲು ತಾವೇ ಕಾಳಜಿ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ.
(1) ಇತ್ತೀಚೆಗೆ ಪ್ರತಿಯೊಬ್ಬರೂ ಧೂಮಪಾನ ಮಾಡುತ್ತಾರೆ ಮತ್ತು ಕುಡಿಯುತ್ತಾರೆ.
(2) ಮಾಲಿನ್ಯದಿಂದ ಮಾತ್ರ ರೋಗಗಳು ಹೆಚ್ಚುತ್ತಿವೆ.
(3) ಜನರು ತುಂಬಾ ಕಾರ್ಯನಿರತರಾಗಿರುವುದರಿಂದಾಗಿ ಸಂತೋಷ ಮತ್ತು ಒತ್ತಡ ರಹಿತರಾಗಿದ್ದಾರೆ.
(4) ಇಂದಿನ ನಗರದ ವಾತಾವರಣ, ಜೀವನಶೈಲಿ ಮತ್ತು ಹವ್ಯಾಸಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ.
ಸರಿ ಉತ್ತರ
ಸರಿ ಉತ್ತರ:(4) ಇಂದಿನ ನಗರದ ವಾತಾವರಣ, ಜೀವನಶೈಲಿ ಮತ್ತು ಹವ್ಯಾಸಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ.
65. ಬೆಳಕಿನ ಹಬ್ಬವಾದ ದೀಪಾವಳಿಯು ದುಷ್ಟಶಕ್ತಿಗಳ ಮೇಲೆ ಸದ್ಭಾವಕ್ಕೆ, ಒಳ್ಳೆಯದಕ್ಕೆ ಜಯವಿದೆ ಎಂಬುದನ್ನು ಸೂಚಿಸುತ್ತದೆ. ಇಂದು ಬಹಳಷ್ಟು ಜನರು ತಮ್ಮ ಹೃದಯ ಮತ್ತು ಬುದ್ಧಿಯಿಂದ ನಕಾರಾತ್ಮಕವಾಗಿ ಚಿಂತಿಸುತ್ತಿದ್ದು, ಹೆಚ್ಚಿನ ಭ್ರಷ್ಟಾಚಾರ ಮತ್ತು ಹೆಚ್ಚಿನ ಅಪರಾಧಗಳಿಗೆ ಎಡೆಮಾಡಿಕೊಟ್ಟಿದೆ. ವೌಲ್ಯಾಧಾರಿತ ಶಿಕ್ಷಣವು ಇಂದಿನ ಅವಶ್ಯಕತೆಯಾಗಿದ್ದು, ಅದು ಜನರಲ್ಲಿಯ ಕ್ರೌರ್ಯ, ಸ್ವಾರ್ಥವನ್ನು ಕಡಿಮೆ ಮಾಡಿ, ಅವರಲ್ಲಿ ಜ್ಞಾನ, ಶಾಂತಿ, ದಯೆ, ಸತ್ಯಸಂಧತೆ, ಸರಿಯಾದ ದೃಷ್ಟಿಕೋನ, ಕಷ್ಟ ಸಹಿಷ್ಣುತೆ ಮತ್ತು ಸಹಕಾರವನ್ನು ಹೆಚ್ಚಿಸಬೇಕು. ಮಹಾತ್ಮ
ಗಾಂಧೀಜಿಯವರು ಸಹಾ ಪಾಪವನ್ನು ನಾಶ ಮಾಡಬೇಕೇ ಹೊರತು, ಪಾಪಿಗಳನ್ನಲ್ಲ ಎಂದಿದ್ದಾರೆ. ಸಮಾಜದಲ್ಲಿ ಒಳ್ಳೆಯ ಹೃದಯವಂತರಿದ್ದಲ್ಲಿ ಆರೋಗ್ಯಕರ ಸಮಾಜದ ಪ್ರಗತಿ ಇದ್ದೇ ಇರುತ್ತದೆ.
(1) ಇಂದು ಯಾರೂ ಒಳ್ಳೆಯವರಲ್ಲ.
(2) ಇಂದು ಪ್ರತಿಯೊಬ್ಬರೂ ಭ್ರಷ್ಟರು ಮತ್ತು ಅಪರಾಧಿಗಳೂ ಆಗಿದ್ದಾರೆ.
(3) ಮೌಲ್ಯಾಧಾರಿತ ಶಿಕ್ಷಣವು ಸಮಾಜವನ್ನು ಅಪರಾಧ ಮತ್ತು ಭ್ರಷ್ಟತೆಯಿಂದ ಕಾಪಾಡುತ್ತದೆ.
(4) ಎಲ್ಲರೂ ಭ್ರಷ್ಟರಾಗಿರುವುದರಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಸಾಧ್ಯವಿಲ್ಲ.
ಸರಿ ಉತ್ತರ
ಸರಿ ಉತ್ತರ:(3) ಮೌಲ್ಯಾಧಾರಿತ ಶಿಕ್ಷಣವು ಸಮಾಜವನ್ನು ಅಪರಾಧ ಮತ್ತು ಭ್ರಷ್ಟತೆಯಿಂದ ಕಾಪಾಡುತ್ತದೆ.
ನಿರ್ದೇಶನ (ಪ್ರಶ್ನೆಗಳು 66-67): ಈ ಕೆಳಗೆ ಒಂದು ಹೇಳಿಕೆಯೊಂದಿಗೆ ಅನೇಕ ಊಹೆಗಳಿವೆ. ಊಹೆಯನ್ನು ನಂಬಬಹುದು. ಈ ಹೇಳಿಕೆಯನ್ನು ಎಚ್ಚರಿಕೆಯಿಂದ ಓದಿ ಯಾವ ಊಹೆಗಳು ಈ ಹೇಳಿಕೆಗೆ ಸೂಕ್ತವೆಂಬುದನ್ನು ನಿರ್ಧರಿಸಿ.
66. ಹೇಳಿಕೆ : ಒಂದು ದಿನ ಪತ್ರಿಕೆಯ ವರದಿ ‘ಪ್ರಧಾನಿಯವರು ತಮ್ಮ ಸಂಪುಟವನ್ನು ಸದ್ಯದಲ್ಲಿ ವಿಸ್ತರಿಸುವುದಿದೆ’
ಊಹೆಗಳು :
I) ದಿನಪತ್ರಿಕೆಯು ಅಧಿಕೃತ ಮೂಲಗಳಿಂದ ಉದ್ಧರಿಸಿದೆ.
II) ದಿನಪತ್ರಿಕೆಯ ಈ ಸುದ್ದಿಗಾಗಿ ನಂಬಲರ್ಹ ಮೂಲಗಳಿವೆ.
III) ಪ್ರಧಾನಿಯವರು ತಮ್ಮ ಸಂಪುಟವನ್ನು ವಿಸ್ತರಿಸುವ ಅಧಿಕಾರ ಹೊಂದಿದ್ದಾರೆ.
(1) I ಮತ್ತು II ಪ್ರಸ್ತುತವಾಗಿವೆ
(2) II ಮತ್ತು III ಪ್ರಸ್ತುತವಾಗಿವೆ
(3) I ಮತ್ತು III ಪ್ರಸ್ತುತವಾಗಿವೆ
(4) ಎಲ್ಲವೂ ಪ್ರಸ್ತುತವಾಗಿವೆ
ಸರಿ ಉತ್ತರ
ಸರಿ ಉತ್ತರ:(2) II ಮತ್ತು III ಪ್ರಸ್ತುತವಾಗಿವೆ
67. ಹೇಳಿಕೆ: ‘ನನಗೆ ಅನ್ನಿಸಿದಂತೆ ಆಕೆ ಹುಚ್ಚಿಯಾಗಿದ್ದಾಳೆ. ಆಕೆ ಕಳೆದ ರಾತ್ರಿ ನಾಯಿಯಂತೆ ಬೊಗಳುತ್ತಿದ್ದಳು’ ಎಂದು A ಯು Bಗೆ ಮಧುಳ ಬಗ್ಗೆ ಹೇಳುತ್ತಿದ್ದಳು.
ಊಹೆಗಳು:
I) ಮಧು Aಯ ಗೆಳತಿ
II) Bಗೆ ಮಧುಳ ಬಗ್ಗೆ ಗೊತ್ತು
III) ಕೆಲವು ಜನರು ನಾಯಿಯಂತೆ ಬೊಗಳಲಾರರು.
(1) I ಮತ್ತು II ಊಹೆಗಳು ಸೂಚ್ಯವಾಗಿವೆ
(2) II ಮತ್ತು III ಊಹೆಗಳು ಸೂಚ್ಯವಾಗಿವೆ
(3) I ಮತ್ತು III ಊಹೆಗಳು ಸೂಚ್ಯವಾಗಿವೆ
(4) ಎಲ್ಲಾ ಊಹೆಗಳು ಸೂಚ್ಯವಾಗಿವೆ
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
68. ಈ ಕೆಳಗಿನವುಗಳಲ್ಲಿ ಸ್ವಾಯತ್ತ ಸಂಸ್ಥೆಗಳೊಂದಿಗೆ ಸಾರ್ವಜನಿಕ ಹೊಣೆಯ ವಲಯಗಳನ್ನು ಹೊಂದಿಸಿ.
| ಪಟ್ಟಿ |
| ಪಟ್ಟಿ |
i. | ರಾಷ್ಟ್ರೀಯ ರೋಗನಿರೋಧ ಸಂಸ್ಥೆ | 1. | ಮನೆಸರ್ |
ii. | ರಾಷ್ಟ್ರೀಯ | 2. | ಹೈದರಾಬಾದ್ |
iii. | ಡಿಎನ್ಎ | 3. | ಪುಣೆ |
iv. | ರಾಷ್ಟ್ರೀಯ | 4. | ನವದೆಹಲಿ |
Codes:
| i | ii | iii | iv |
(1) | 1 | 2 | 3 | 4 |
(2) | 1 | 3 | 2 | 4 |
(3) | 4 | 3 | 2 | 1 |
(4) | 1 | 2 | 4 | 3 |
ಸರಿ ಉತ್ತರ
ಸರಿ ಉತ್ತರ:(3) 4 3 2 1
ನಿರ್ದೇಶನ (ಪ್ರಶ್ನೆ 69): ಈ ಕೆಳಗಿನ ಹೇಳಿಕೆಯ ಜೊತೆಗೆ ಎರಡು ಉಪಸಂಹಾರಗಳಿವೆ.
69. ಹೇಳಿಕೆ: ಭಾರತದಲ್ಲಿ ತಯಾರಾದ ಎಲ್ಲ ದೂರದರ್ಶನದ ಸೆಟ್ ಗಳಲ್ಲಿ ‘ಸೋಲಾರ್’ ಎಂಬುದು ಅತಿ ಹೆಚ್ಚು ಮಾರಾಟ ಹೊಂದಿದೆ.
ಉಪಸಂಹಾರಗಳು:
I. ಭಾರತದಲ್ಲಿ ತಯಾರಾದ ಎಲ್ಲ ಟಿವಿ ಸೆಟ್ ಗಳ ಮಾರಾಟದ ಬಗ್ಗೆ ತಿಳಿದಿದೆ.
II. ಭಾರತದಲ್ಲಿ ತಯಾರಾದ ಇತರ ಯಾವುದೇ ಟಿ.ವಿ. ಸೆಟ್ ಗಳೂ ‘ಸೋಲಾರ್ ಸೆಟ್’ನಷ್ಟು ಉತ್ಪನ್ನವಾಗಿಲ್ಲ.
(1) ಉಪಸಂಹಾರ I ಹಿಂಬಾಲಿಸುತ್ತದೆ
(2) ಉಪಸಂಹಾರ II ಹಿಂಬಾಲಿಸುತ್ತದೆ
(3) ಉಪಸಂಹಾರ I ಮತ್ತು II ಹಿಂಬಾಲಿಸುತ್ತದೆ
(4) ಉಪಸಂಹಾರ I ಇಲ್ಲವೆ ಉಪಸಂಹಾರ II ಹಿಂಬಾಲಿಸುತ್ತದೆ
ಸರಿ ಉತ್ತರ
ಸರಿ ಉತ್ತರ:(1) ಉಪಸಂಹಾರ I ಹಿಂಬಾಲಿಸುತ್ತದೆ
70. ಕ್ರಮಬದ್ಧವಾಗಿ ಸಸ್ಯಪ್ರಭೇದಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಸಸ್ಯಶಾಸ್ತ್ರದ ಒಂದು ವಿಭಾಗವನ್ನು ____________ ಎಂದು ಕರೆಯುತ್ತಾರೆ.
(1) ಅನಾಟಮಿ (ಅಂಗರಚನಾಶಾಸ್ತ್ರ)
(2) ಜೆನೆಟಿಕ್ಸ್ (ಆನುವಂಶಿಕಸ್ತ್ರ)
(3) ನೊಮೆನ್ ಕ್ಲೇಚರ್ (ನಾಮಕರಣ ವ್ಯವಸ್ಥೆ )
(4) ಟ್ಯಾಕ್ಸೋನಮಿ (ಜೀವಿ ವರ್ಗೀಕರಣ ಶಾಸ್ತ್ರ)
ಸರಿ ಉತ್ತರ
ಸರಿ ಉತ್ತರ:(4) ಟ್ಯಾಕ್ಸೋನಮಿ ಸರಿ ಉತ್ತರ:(ಜೀವಿ ವರ್ಗೀಕರಣ ಶಾಸ್ತ್ರ)
71. ಒಂದು ಪ್ರದೇಶಕ್ಕೆ ಮೂಲವಲ್ಲದ ತಳಿ ಪ್ರಭೇದವನ್ನು____________ ಎನ್ನುತ್ತಾರೆ.
(1) ಎಕ್ಸೊಟಿಕ್ (ವಿಲಕ್ಷಣ)
(2) ಇಂಡಿಜಿನಸ್ (ದೇಶೀಯ)
(3) ಒಬನೊಕ್ಷಿಯಸ್ (ಜುಗುಪ್ಸೆ ಹುಟ್ಟಿಸುವ ಕಳೆ)
(4) ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ
ಸರಿ ಉತ್ತರ:(1) ಎಕ್ಸೊಟಿಕ್ (ವಿಲಕ್ಷಣ)
72. ಗುಂತರ ಗ್ರಾಸ್ ಎಂದರೆ ಯಾರು?
(1) ಲಾಸ್ ವೆಗಾಸ್ ದಲ್ಲಿ ಬಾಕ್ಸಿಂಗ್ ಸ್ಪರ್ಧೆ ಗೆದ್ದ ಅಮೆರಿಕಾದವ
(2) 2015ರಲ್ಲಿ ಮ್ಯಾನ್ ಬುಕರ್ ಪ್ರಶಸ್ತಿ ಪಡೆದ ಹಂಗೇರಿಯಾದ ಲೇಖಕ
(3) ರೊಹಿಂಗ್ಯಾ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ಮ್ಯಾನ್ಮಾರ್ ದೇಶವು ನೀಡಬೇಕೆನ್ನುತ್ತಿರುವ ಅಮೇರಿಕದ ರಾಜತಾಂತ್ರಿಕ
(4) ಏಪ್ರಿಲ್ 2015ರಲ್ಲಿ ನಿಧನರಾದ ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ಲೇಖಕ
ಸರಿ ಉತ್ತರ
ಸರಿ ಉತ್ತರ:(4) ಏಪ್ರಿಲ್ 2015ರಲ್ಲಿ ನಿಧನರಾದ ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ಲೇಖಕ
73. ಹೈಡ್ರೋನಿಯಂ ಅಯಾನು ಎಂಬುದು
(1) H⁺
(2) H₃O⁺
(3) OH⁻
(4) H⁻
ಸರಿ ಉತ್ತರ
ಸರಿ ಉತ್ತರ:(2) H3O+
74. 3 ಘಂಟೆಯಿಂದ 9 ಘಂಟೆಯವರೆಗೆ (P.M.) ಸಮಯದಲ್ಲಿ ಗಡಿಯಾರದ ಮುಳ್ಳುಗಳು ಲಂಬಕೋನದಲ್ಲಿ ಎಷ್ಟು ಬಾರಿ ಇರುತ್ತವೆ?
(1) 11
(2) 10
(3) 12
(4) 9
ಸರಿ ಉತ್ತರ
ಸರಿ ಉತ್ತರ:(2) 10
75. ರಾಮಾನುಜನ್ ರ ಮ್ಯಾಜಿಕ್ ಚೌಕದಲ್ಲಿನ ಬಿಟ್ಟು ಹೋಗಿರುವ ಸಂಖ್ಯೆಗಳನ್ನು ಆಯ್ಕೆ ಮಾಡಿ.
? | 12 | 18 | ? |
88 | 17 | 9 | 25 |
10 | 24 | 89 | 16 |
19 | 86 | 23 | 11 |
(1) 25, 87
(2) 22, 87
(3) 13, 85
(4) 22, 19
ಸರಿ ಉತ್ತರ
ಸರಿ ಉತ್ತರ:(2) 22, 87
76. ಒಂದು ವಸ್ತುವನ್ನು a ರೂ. ಮತ್ತು b ಪೈಸೆಯಂತೆ ಕೊಂಡ ನಂತರ ಅದನ್ನು b ರೂ. ಮತ್ತು a ಪೈಸೆಗೆ ಮಾರಿದಾಗ, cರೂ.ಗಳ ನಷ್ಟ ಉಂಟಾಯಿತು. ಆಗ a, b ಮತ್ತು c ಗಳ ನಡುವಿನ ಸರಿಯಾದ ಸಂಬಂಧವು
(1) a+bc=0.99
(2) ca+b=0.99
(3) ca−b=0.99
(4) a−bc=0.99
ಸರಿ ಉತ್ತರ
ಸರಿ ಉತ್ತರ:(3)ca−b=0.99
77. ರಾಜದ್ರವ (ಅಕ್ವಾರೀಜಿಯಾ) ಎಂದರೆ
(1) 1 HNO₃: 2 HCl
(2) 1 HNO₃: 3 HCl
(3) 3 HNO₃: 1 HCl
(4) 3 HNO₃: 2 HCl
ಸರಿ ಉತ್ತರ
ಸರಿ ಉತ್ತರ:(2) 1 HNO₃: 3 HCl
78. ಒಬ್ಬ ವ್ಯಕ್ತಿಯು 2001ರ ಜನವರಿಯಲ್ಲಿ ತಿಂಗಳಿಗೆ ರೂ.10000 ಮೂಲವೇತನ ಹಾಗೂ ರೂ.500 ವಾರ್ಷಿಕ ಬಡ್ತಿಯೊಂದಿಗೆ ಕೆಲಸಕ್ಕೆ ಸೇರುತ್ತಾನೆ. ಇದಲ್ಲದೆ ಆತನು ಪ್ರತಿ 4 ವರ್ಷಗಳಿಗೆ ಒಮ್ಮೆ ರೂ.1000 ಮೊಬಲಗನ್ನು ಹೆಚ್ಚುವರಿಯಾಗಿ ಪಡೆಯುತ್ತಾನೆ. ಹಾಗಿದ್ದರೆ 2010ರ ಬ್ರವರಿಯಲ್ಲಿ ಆತನ ಮೂಲ ವೇತನ ಎಷ್ಟಿತ್ತು?
(1) ರೂ.15,000
(2) ರೂ.16,000
(3) ರೂ.17,000
(4) ರೂ.16,500
ಸರಿ ಉತ್ತರ
ಸರಿ ಉತ್ತರ:(4) ರೂ.16,500
79. ಒಂದು ಮದುವೆಯ ಆರತಕ್ಷಣಾ ಸಮಾರಂಭಕ್ಕೆ 900 ಅತಿಥಿಗಳು ಆಗಮಿಸುವುದಾಗಿ ನಿರೀಕ್ಷಿಸಲಾಗಿದೆ. ಅನುಭವಿಗಳ ಆಧಾರದ ಮೇಲೆ ಹೇಳುವುದಾದರೆ, 300 ಅತಿಥಿಗಳು ಮಾಂಸಾಹಾರವನ್ನು 400 ಮಂದಿ ಸಸ್ಯಾಹಾರ ಆಹಾರವನ್ನು, 140 ಮಂದಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಸೇವಿಸುವರೆಂದು ಮತ್ತು 50 ಮಂದಿ ಅತಿಥಿಗಳು ಯಾವುದೇ ಆಹಾರ ಸೇವಿಸದೆ ನಿರ್ಗಮಿಸುವರೆಂದು ಅಂದಾಜು ಮಾಡಲಾಗಿದೆ. ಹಾಗಿದ್ದರೆ ಸಸ್ಯಾಹಾರ ಊಟ ಸೇವಿಸಿದ ಅತಿಥಿಗಳ ಶೇಕಡಾ ಪ್ರಮಾಣ ಎಷ್ಟು?
(1) 60%
(2) 44%
(3) 48%
(4) 63%
ಸರಿ ಉತ್ತರ
ಸರಿ ಉತ್ತರ:(1) 60%
80. ಈ ಕೆಳಗಿನ ಪ್ರದರ್ಶನದಲ್ಲಿ
2 | B | C | D | E | 6 |
ಪ್ರತಿಯೊಂದು ಅಕ್ಷರವೂ ಒಂದು ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಅನುಕ್ರಮವಾಗಿ ಯಾವುದೇ 3 ಸಂಖ್ಯೆಗಳ ಮೊತ್ತವು 15 ಆದಲ್ಲಿ, ಆಗ Eನ ಮೌಲ್ಯವು
(1) 0
(2) 2
(3) 7
(4) 8
ಸರಿ ಉತ್ತರ
ಸರಿ ಉತ್ತರ:(3) 7
81. ಭಾರತೀಯ ಮಹಿಳಾ ಬ್ಯಾಂಕ್ ನ ಮೊದಲ CMD ಯಾರು?
(1) ಅರ್ಚನಾ ಭಾರ್ಗವ
(2) ಚಂದಾ ಕೊಚ್ಚಾರ್
(3) ರೇಣುಕಾ ರಾಮನಾಥ್
(4) ಉಷಾ ಅನಂತ ಸುಬ್ರಮಣಿಯನ್
ಸರಿ ಉತ್ತರ
ಸರಿ ಉತ್ತರ:(4) ಉಷಾ ಅನಂತ ಸುಬ್ರಮಣಿಯನ್
82. 2013-14ರ ತಾತ್ಕಾಲಿಕ ಅಂದಾಜುಗಳ ಪ್ರಕಾರವಾಗಿ ಭಾರತದ ರಾಷ್ಟ್ರೀಯ ಆದಾಯಕ್ಕೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳ ಕೊಡುಗೆ ಎಷ್ಟು?
(1) 13.9%
(2) 20.0%
(3) 15.5%
(4) 18.5%
ಸರಿ ಉತ್ತರ
ಸರಿ ಉತ್ತರ:(1) 13.9%
83. ವಿಶ್ವ ವ್ಯಾಪಾರ ಸಂಘಟನೆ (WTO)ಯ ಬಾಲಿ ಸುತ್ತಿನಲ್ಲಿ ಭಾರತವು ಈ ಕೆಳಕಂಡ ಯಾವ ಒಪ್ಪಂದಗಳಿಗೆ ವೀಟೋ ಹಾಕಿದೆ?
(1) ಜಾಗತಿಕ ಸುಂಕಗಳ ನಿಯಮಗಳು
(2) ಸೇವಾ ನಿಯಮಗಳು
(3) ಆಸ್ತಿ ಹಕ್ಕುಗಳು
(4) ಸ್ವಾಮ್ಯ ಸನ್ನದು ನಿಯಮಗಳು
ಸರಿ ಉತ್ತರ
ಸರಿ ಉತ್ತರ:(1) ಜಾಗತಿಕ ಸುಂಕಗಳ ನಿಯಮಗಳು
84. ‘ಮರೆಯುವ ಹಕ್ಕು’ ಬಗ್ಗೆ ಈ ಕೆಳಕಂಡ ಯಾವ ದೇಶವು ಇತ್ತೀಚೆಗೆ ನಿರ್ಣಯ ಕೈಗೊಂಡಿದೆ?
(1) ಯೂರೋಪಿಯನ್ ಒಕ್ಕೂಟ
(2) ಅಮೇರಿಕಾ ಸಂಯುಕ್ತ ಸಂಸ್ಥಾನ
(3) ಯುನೈಟೆಡ್ ಕಿಂಗ್ ಡಂ
(4) ಚೀನಾ
ಸರಿ ಉತ್ತರ
ಸರಿ ಉತ್ತರ:(1) ಯೂರೋಪಿಯನ್ ಒಕ್ಕೂಟ
85. ಈ ಕೆಳಗಿನ ಯಾವ ಕದಂಬ ರಾಜಕುಮಾರಿಯ ವಿವಾಹ ಪುನ್ನಾಟ ರಾಷ್ಟ್ರವರ್ಮನ ಜೊತೆ ಆಗಿತ್ತು?
(1) ವಿಜಯ ಮಹಾದೇವಿ
(2) ವಸುಮತಿ
(3) ಪ್ರಭಾವತಿ
(4) ಜಯಬ್ಬೆ
ಸರಿ ಉತ್ತರ
ಸರಿ ಉತ್ತರ:(3) ಪ್ರಭಾವತಿ
86. ಈ ಕೆಳಗಿನ ಯಾವ ಶಾಸನದಿಂದ ವೀರಶರ್ಮನು ಮಯೂರಶರ್ಮನ ಅಜ್ಜನೆಂದು ತಿಳಿದುಬರುತ್ತದೆ?
(1) ತಾಳಗುಂದ
(2) ಗುಡ್ನಾಪುರ
(3) ಬನವಾಸಿ
(4) ಹಲಸಿ
ಸರಿ ಉತ್ತರ
ಸರಿ ಉತ್ತರ:(2) ಗುಡ್ನಾಪುರ
87. ಈ ಕೆಳಗಿನ ಯಾರು ದೇವರ ದಾಸಿಮಯ್ಯನ ಶಿಷ್ಯೆಯಾಗಿದ್ದಳು?
(1) ಸುಗ್ಗಲ ದೇವಿ
(2) ಪದ್ಮಲ ದೇವಿ
(3) ಜಕ್ಕಲ ದೇವಿ
(4) ಲಕ್ಷ್ಮ ದೇವಿ
ಸರಿ ಉತ್ತರ
ಸರಿ ಉತ್ತರ:(1) ಸುಗ್ಗಲ ದೇವಿ
88. ವಿಕ್ರಮಾಂಕೋಭ್ಯಾದಂ ನ ಕರ್ತೃ ಯಾರು?
(1) ಬಿಲ್ಹಣ
(2) ಕಲ್ಹಣ
(3) ಮೂರನೇ ಸೋಮೇಶ್ವರ
(4) ಕೇಶಿರಾಜ
ಸರಿ ಉತ್ತರ
ಸರಿ ಉತ್ತರ:(3) ಮೂರನೇ ಸೋಮೇಶ್ವರ
89. ಈ ಕೆಳಗಿನ ಪಟ್ಟಿಯಲ್ಲಿ ಹತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಕನೋಜ್ಅನ್ನು ಭೇಟಿ ಮಾಡಿದ ಅರಬ್ ಪ್ರವಾಸಿಗನನ್ನು ಹೆಸರಿಸಿ.
(1) ಅಲ್ಬೆರೂನಿ
(2) ಮಸೂದಿ
(3) ಅಲ್-ಬಹಾದುರಿ
(4) ಅಲ್ ಮದೈನಿ
ಸರಿ ಉತ್ತರ
ಸರಿ ಉತ್ತರ:(2) ಮಸೂದಿ
90. ಕೇರಳದಲ್ಲಿ ಆರಂಭವಾದ ಸಮಾಜೋಧಾರ್ಮಿಕ ಚಳುವಳಿಯು ಕರ್ನಾಟಕದಲ್ಲಿಯೂ ಹರಡಿತು ಹಾಗೂ ಅಲ್ಲಿನ ಜನರನ್ನು ಇಂದಿಗೂ ಪ್ರಭಾವಿಸಿದೆ. ಅದು ಯಾವುದು?
(1) ಜ್ಯೋತಿಬಾ ಪುಲೆಯವರ ಚಳವಳಿ
(2) ಸ್ವಾಮಿ ವಿವೇಕಾನಂದರ ಚಳವಳಿ
(3) ನಾರಾಯಣ ಗುರು ಚಳವಳಿ
(4) ಥಿಯೋಸೋಫಿಕಲ್ ಸೊಸೈಟಿ ಚಳವಳಿ
ಸರಿ ಉತ್ತರ
ಸರಿ ಉತ್ತರ:(3) ನಾರಾಯಣ ಗುರು ಚಳವಳಿ
91. ಸಮಾಜದ ಎಲ್ಲ ವರ್ಗಗಳು ಹಾಗೂ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಅಗತ್ಯವನ್ನು ಮನಗಂಡ ಮೈಸೂರು ಮಹಾರಾಜರು ಅದಕ್ಕಾಗಿ ಒಂದು ಸಮಿತಿಯನ್ನು ನಿಯೋಜಿಸಿದರು. ಅದು ಯಾವುದು?
(1) ವೆಂಕಟಸ್ವಾಮಿ ಆಯೋಗ
(2) ಜಸ್ಟಿಸ್ ಲೆಸ್ಲಿ ಮಿಲ್ಲರ್ ಸಮಿತಿ
(3) ಡಾ.ಆರ್.ನಾಗಣ್ಣ ಗೌಡ ಸಮಿತಿ
(4) ಎಲ್.ಜಿ.ಹಾವನೂರ್ ಆಯೋಗ
ಸರಿ ಉತ್ತರ
ಸರಿ ಉತ್ತರ:(2) ಜಸ್ಟಿಸ್ ಲೆಸ್ಲಿ ಮಿಲ್ಲರ್ ಸಮಿತಿ
92. 1881ರಲ್ಲಿ ಸ್ಥಾಪಿಸಲಾದ ಮೈಸೂರು ಪ್ರತಿನಿಧಿ ಸಭೆಯ ಮುಖ್ಯಉದ್ದೇಶವೆಂದರೆ ______
(1) ಮಹಾರಾಜರ ಅಧಿಕಾರವನ್ನು ನಿಯಂತ್ರಿಸುವುದು
(2) ದಿವಾನರ ಅಧಿಕಾರವನ್ನು ನಿಗ್ರಹಿಸುವುದು
(3) ಮೈಸೂರಿನ ಆರ್ಥಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು
(4) ಆಡಳಿತದ ಮೇಲಿನ ಜನಾಭಿಪ್ರಾಯವನ್ನು ಅಳೆಯುವುದು ಹಾಗೂ ಸರ್ಕಾರವನ್ನು ವಿಮರ್ಶಿಸುವುದು
ಸರಿ ಉತ್ತರ
ಸರಿ ಉತ್ತರ:(4) ಆಡಳಿತದ ಮೇಲಿನ ಜನಾಭಿಪ್ರಾಯವನ್ನು ಅಳೆಯುವುದು ಹಾಗೂ ಸರ್ಕಾರವನ್ನು ವಿಮರ್ಶಿಸುವುದು
93. ಮೈಸೂರಿನ ಆಧುನೀಕರಣವನ್ನು ಮೈಸೂರಿನ ಒಡೆಯರಲ್ಲಿ ಒಬ್ಬರು ಪ್ರಾರಂಭಿಸಿದರು ಎಂಬುದಾಗಿ ಹೇಳಲಾಗುತ್ತದೆ. ಸರಿಯಾದ ಉತ್ತರವನ್ನು ಗುರುತಿಸಿ.
(1) ಕಂಠೀರವ ನರಸರಾಜ ಒಡೆಯರ್
(2) ಚಾಮರಾಜ ಒಡೆಯರ್ V
(3) ಚಿಕ್ಕದೇವರಾಜ ಒಡೆಯರ್
(4) ದೊಡ್ಡ ಕೃಷ್ಣರಾಜ ಒಡೆಯರ್ II
ಸರಿ ಉತ್ತರ
ಸರಿ ಉತ್ತರ:(3) ಚಿಕ್ಕದೇವರಾಜ ಒಡೆಯರ್
94. ಬಾಗ್ದಾದಿನ ಖಲೀನಿಗೆ ಮೊಹಮದ್ ಬಿನ್ ಖಾಸಿಮನು
ಬಂಧಿಸಿ ಕಳುಹಿಸಿ ಕೊಟ್ಟ ಇಬ್ಬರು ರಾಜ ದಹೀರನ ಕುಮಾರಿಯರು
1. ಪರ್ಮಲ್ ದೇವಿ
2. ಭಾನುಮತಿ ದೇವಿ
3. ಸೂರಜ್ ದೇವಿ
4. ಚಂದ್ರಮತಿ ದೇವಿ
ಕೆಳಗಿನ ಸಂಖ್ಯೆಗಳನ್ನು ಆರಿಸಿ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮತ್ತು 2
(2) 1 ಮತ್ತು 3
(3) 2 ಮತ್ತು 4
(4) 1 ಮತ್ತು 4
ಸರಿ ಉತ್ತರ
ಸರಿ ಉತ್ತರ:(2) 1 ಮತ್ತು 3
95. ಸ್ವಾತಂತ್ರ್ಯ ಚಳುವಳಿಯಲ್ಲಿ ಕನ್ನಡದ ಮಹಿಳೆಯರು ಹೋರಾಡಿದರು. ಅವರಲ್ಲಿ ಒಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು. ಅವರು ಯಾರು?
(1) ಭಾಗೀರಥಮ್ಮ
(2) ಕೃಷ್ಣಾಬಾಯಿ ಪೂಜೆಕರ್
(3) ದೇವಮ್ಮ ಹರಿಜನ್
(4) ಲೀಲಾವತಿ ಮಾಗಡಿ
ಸರಿ ಉತ್ತರ
ಸರಿ ಉತ್ತರ:(4) ಲೀಲಾವತಿ ಮಾಗಡಿ
96. ಈ ಕೆಳಗೆ ತಿಳಿಸಿರುವ ದೆಹಲಿ ಸುಲ್ತಾನರಲ್ಲಿ ಮೊದಲ ಬಾರಿಗೆ ದರ್ಬಾರಿನಲ್ಲಿ ‘ಸಜದಾ’ ಮತ್ತು ‘ಪಾಯಿಬೋಸ್’ ಪದ್ಧತಿಗಳನ್ನು ಯಾರು ಪ್ರಾರಂಭಿಸಿದರು?
(1) ಇಲ್ತಮಿಷ್
(2) ಬಲ್ಬನ್
(3) ಅಲ್ಲಾವುದ್ದೀನ್ ಖಿಲ್ಜಿ
(4) ಮೊಹಮದ್ ಬಿನ್ ತುಘಲಕ್
ಸರಿ ಉತ್ತರ
ಸರಿ ಉತ್ತರ:(2) ಬಲ್ಬನ್
97. ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಭಾರತದ ಮೇಲೆ ಆಕ್ರಮಣ ಮಾಡದೇ ಹೋದ ಮಂಗೋಲಿಯನ್ ಆಕ್ರಮಣಕಾರರು ಯಾರು?
1. ಹಲಾಕು ಮತ್ತು ಚಂಗೀಸ್ ಖಾನ್
2. ಸಾಲ್ದ ಮತ್ತು ಹಲಾಕು
3. ಖುತಲ್ ಖ್ವಾಜಾ ಮತ್ತು ಚಂಗೀಸ್ ಖಾನ್
4. ಅಲ್ಲಾವುದ್ದೀನ್ ತರ್ಮಶಿರೀನ್ ಮತ್ತು ಚಂಗೀಸ್ ಖಾನ್
ಕೆಳಗಿನ ಸಂಖ್ಯೆಗಳನ್ನು ಆರಿಸಿ ಸರಿಯಾದ ಉತ್ತರವನ್ನು ಗುರುತಿಸಿ.
(1) 1 ಮತ್ತು 3
(2) 2 ಮಾತ್ರ
(3) 2 ಮತ್ತು 3
(4) 4 ಮಾತ್ರ
ಸರಿ ಉತ್ತರ
ಸರಿ ಉತ್ತರ:(4) 4 ಮಾತ್ರ
98. ಈ ಕೆಳಗಿನ ಗುಲಾಮಿ ಸಂತತಿ ಸುಲ್ತಾನರುಗಳನ್ನು ಅವರೋಹಣ ಕ್ರಮದಲ್ಲಿ ಜೋಡಿಸಿರಿ.
1. ರುಕ್ಮುದ್ದೀನ್ ಫಿರೋಜ್
2. ಅಲ್ಲಾಉದ್ದೀನ್ ಮಸೂದ್ ಷಾ
3. ನಾಸೀರುದ್ದೀನ್ ಮಹಮದ್
4. ಬೆಹ್ರಾಂ ಷಾ
ಕೆಳಗಿನ ಸಂಖ್ಯೆಗಳನ್ನು ಆರಿಸಿ ಸರಿಯಾದ ಉತ್ತರವನ್ನು ಗುರುತಿಸಿ.
(1) 1, 2, 3 ಮತ್ತು 4
(2) 1, 4, 2 ಮತ್ತು 3
(3) 2, 4, 1 ಮತ್ತು 3
(4) 3, 1, 2 ಮತ್ತು 4
ಸರಿ ಉತ್ತರ
ಸರಿ ಉತ್ತರ:(2) 1, 4, 2 ಮತ್ತು 3
99. ಪಟ್ಟಿ I ಮತ್ತು ಪಟ್ಟಿ II ನ್ನು ಹೊಂದಿಸಿ ಬರೆಯಿರಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತ ಬಳಸಿ ಸರಿಯಾದ ಉತ್ತರ ಆಯ್ಕೆ ಮಾಡಿ.
| ಪಟ್ಟಿ – I | | ಪಟ್ಟಿ |
| (ಶಿಖರಗಳು) |
| (ಶ್ರೇಣಿಗಳು) |
a. | ಗುರುಶಿಖರ | 1. | ಅಣ್ಣಾಮಲೈ |
b. | ದೊಡ್ಡ | 2. | ಅರಾವಳಿ |
c. | ಅಣ್ಣಾ | 3. | ನೀಲಗಿರಿ |
d. | ಧೂಪಗರ್ | 4. | ಸಾತ್ಪುರ |
ಸರಿಯಾದ
ಸಂಖ್ಯೆಯನ್ನು
ಜೋಡಿಸಿರಿ:
| a | b | c | d |
(1) | 2 | 1 | 3 | 4 |
(2) | 2 | 3 | 1 | 4 |
(3) | 2 | 4 | 3 | 1 |
(4) | 3 | 2 | 1 | 4 |
ಸರಿ ಉತ್ತರ
ಸರಿ ಉತ್ತರ:(2) 2 3 1 4
100. I ನೇ ಪಟ್ಟಿಯನ್ನು II ನೇ ಪಟ್ಟಿಯೊಂದಿಗೆ ಜೋಡಿಸಿರಿ.
| ಪಟ್ಟಿ |
| ಪಟ್ಟಿ |
a. | ಸಿಲ್ | i. | ದೇವಐಕ್ಯ |
b. | ಖಾನ್ | ii. | ಸೂಫಿ |
c. | ವಹದತ್–ಉಲ್–ವಜೂದ್ | iii. | ಇಸ್ಲಾಮಿಕ್ |
d. | ಬಾ–ಸಹರಾ | iv. | ಇಸ್ಲಾಮಿಕ್ |
e. | ಬೇ–ಸಹರಾ | v. | ಸೂಫಿಗಳ |
ಸರಿಯಾದ
ಸಂಖ್ಯೆಯನ್ನು
ಜೋಡಿಸಿರಿ
:
| a | b | c | d | e |
(1) | ii | v | i | iii | iv |
(2) | v | i | iii | iv | ii |
(3) | iii | v | iv | i | ii |
(4) | ii | i | iii | v | iv |
ಸರಿ ಉತ್ತರ
ಸರಿ ಉತ್ತರ:(1) ii v i iii iv
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ