SUB-INSPECTOR OF POLICE (CIVIL) Exam Held on 05-01-2020 Questions with answers
ದಿನಾಂಕ -05-01-2020 ರಂದು ನಡೆದ ಪೂಲೀಸ್ ಸಬ್ ಇನ್ಸ್‌ಪೆಕ್ಟರ್(ಸಿವಿಲ್) ಪ್ರಶ್ನೆಪತ್ರಿಕೆ IIರ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ.
1. | ವಾತಾವರಣದ ಓಝೋನ್ ಪದರದಲ್ಲಿ ಓಝೋನ್ ಇರುವಿಕೆಯು ಏಕೆ ಅಗತ್ಯವಾಗಿದೆ? | |
(ಎ) | ಇದು ಆಮ್ಲಜನಕವನ್ನು ಒದಗಿಸುತ್ತದೆ. | |
(ಬಿ) | ಇದು ಇತರೇ ಅನಿಲಗಳನ್ನು ರಕ್ಷಿಸುತ್ತದೆ. | |
(ಸಿ) | ಇದು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ. | |
(ಡಿ) | ಹಸಿರು ಮನೆ ಪರಿಣಾಮದ ಅನಿಲಗಳನ್ನು ಹೀರಿಕೊಂಡು ನಿರ್ನಾಮ ಮಾಡುತ್ತದೆ. |
ಸರಿ ಉತ್ತರ
(ಸಿ) ಇದು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ.
2. | ‘ಬ್ರಿಟೀಷ್ ವಸ್ತುಗಳನ್ನು ಬಹಿಷ್ಕರಿಸಿ’ ಎಂಬುದು ಕೆಳಕಂಡ ಯಾವ ಚಳುವಳಿಯ ಘೋಷ ವಾಕ್ಯವಾಗಿತ್ತು ? | |
(ಎ) | ಸ್ವದೇಶಿ ಚಳುವಳಿ | |
(ಬಿ) | ಭಾರತ ಬಿಟ್ಟು ತೊಲಗಿ ಚಳುವಳಿ | |
(ಸಿ) | ಅಸಹಕಾರ ಚಳುವಳಿ | |
(ಡಿ) | ಹೋಮ್ ರೂಲ್ ಚಳುವಳಿ |
ಸರಿ ಉತ್ತರ
(ಎ) ಸ್ವದೇಶಿ ಚಳುವಳಿ
3. | ಭಾರತೀಯ ರಿಸರ್ವ್ ಬ್ಯಾಂಕ್ ಮಾಡುವ ತೆರೆದ ಮಾರುಕಟ್ಟೆ ಕಾರ್ಯಾಚರಣೆಗಳಿಂದ ಈ ಕೆಳಕಂಡ ಯಾವುದರ ಮೇಲೆ ಪರಿಣಾಮ ಬೀರುತ್ತದೆ ? | |
(1) | ಹಣದುಬ್ಬರ | |
(2) | ಬಡ್ಡಿದರ | |
(ಎ) | (1) ಮಾತ್ರ | |
(ಬಿ) | (2) ಮಾತ್ರ | |
(ಸಿ) | ಎರಡರ ಮೇಲೂ | |
(ಡಿ) | ಯಾವುದರ ಮೇಲೂ ಅಲ್ಲ |
ಸರಿ ಉತ್ತರ
(ಸಿ) ಎರಡರ ಮೇಲೂ
4. | ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದವರು ಯಾರು ? | |
(ಎ) | ವಿಶ್ವನಾಥನ್ ಆನಂದ್ | |
(ಬಿ) | ಲಿಯಾಂಡರ್ ಪೇಸ್ | |
(ಸಿ) | ಕಪಿಲ್ ದೇವ್ | |
(ಡಿ) | ಲಿಂಬಾ ರಾಮ್ |
ಸರಿ ಉತ್ತರ
(ಎ) ವಿಶ್ವನಾಥನ್ ಆನಂದ್
5. | ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ನೊಜೊಮಿ ಓಕುಹರಾ ರವರನ್ನು ಸೋಲಿಸಿ ಚಿನ್ನ ಗೆದ್ದ ಮೊದಲ ಭಾರತೀಯರು ಯಾರು? | |
(ಎ) | ಪಿ.ವಿ. ಸಿಂಧು | |
(ಬಿ) | ಸೈನಾ ನೆಹ್ವಾಲ್ | |
(ಸಿ) | ಕಿದಂಬಿ ಶ್ರೀಕಾಂತ್ | |
(ಡಿ) | ಸಾಯಿ ಪ್ರಣೀತ್ |
ಸರಿ ಉತ್ತರ
(ಎ) ಪಿ.ವಿ. ಸಿಂಧು
6. | ಮದರ್ ಥೆರೆಸಾರವರಿಗೆ ಯಾವ ವರ್ಷದಲ್ಲಿ ನೋಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು? | |
(ಎ) | 1975 | |
(ಬಿ) | 1979 | |
(ಸಿ) | 1981 | |
(ಡಿ) | 1982 |
ಸರಿ ಉತ್ತರ
(ಬಿ) 1979
7. | ‘ಜಾಗತಿಕ ಬಡತನ ನಿರ್ಮೂಲನೆ’ಗಾಗಿ ಪ್ರಯೋಗಾತ್ಮಕವಾಗಿ ಯತ್ನಿಸಿದ ಯಾವ ವ್ಯಕ್ತಿಗೆ ಅರ್ಥಶಾಸ್ತ್ರ ಕ್ಷೇತ್ರದಲ್ಲಿ 2019 ರ ನೋಬೆಲ್ ಪ್ರಶಸ್ತಿ ದೊರೆತಿದೆ ? | |
(ಎ) | ಅಭಿಜಿತ್ ಬ್ಯಾನರ್ಜಿ | |
(ಬಿ) | ಪೌಲ್ ಕ್ರುಗ್ ಮನ್ | |
(ಸಿ) | ಅಮರ್ಥ್ಯ ಸೇನ್ | |
(ಡಿ) | ರಿಚರ್ಡ್ ಥಾಲೇರ್ |
ಸರಿ ಉತ್ತರ
(ಎ) ಅಭಿಜಿತ್ ಬ್ಯಾನರ್ಜಿ
8. | ‘ICERT’ ಇದರ ವಿಸೃತ ರೂಪವೇನು? | |
(ಎ) | ಇಂಡಿಯನ್ ಸೈಬರ್ ಎಮರ್ಜೆನ್ಸಿ ರಿವ್ಯೂ ಟೀಮ್ | |
(ಬಿ) | ಇಂಡಿಯನ್ ಸೈಬರ್ ಕ್ರೈಂ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ | |
(ಸಿ) | ಇಂಡಿಯನ್ ಕಂಪ್ಯೂಟರ್ ಎಂಟರ್ ಪ್ರಿನರ್ಸ್ ರೆಸ್ಪಾನ್ಸ್ ಟೀಮ್ | |
(ಡಿ) | ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ |
ಸರಿ ಉತ್ತರ
(ಡಿ) ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್
9. | ‘ಬಿಹು’ ಎಂಬುದು ಭಾರತದ ಯಾವ ರಾಜ್ಯದ ಜಾನಪದ ನೃತ್ಯ ಪ್ರಕಾರವಾಗಿದೆ ? | |
(ಎ) | ಪಶ್ಚಿಮ ಬಂಗಾಳ | |
(ಬಿ) | ಮಣಿಪುರ | |
(ಸಿ) | ನಾಗಾಲ್ಯಾಂಡ್ | |
(ಡಿ) | ಅಸ್ಸಾಮ್ |
ಸರಿ ಉತ್ತರ
(ಡಿ) ಅಸ್ಸಾಮ್
10. | ಭಾರತದ ಸಂವಿಧಾನದಲ್ಲಿ ಯಾವ ಅನುಚ್ಛೇದವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಿತಿಗೆ ಸಂಬಂಧಪಟ್ಟಿದೆ ? | |
(ಎ) | ಅನುಚ್ಛೇದ 370 | |
(ಬಿ) | ಅನುಚ್ಛೇದ 372 | |
(ಸಿ) | ಅನುಚ್ಛೇದ 375 | |
(ಡಿ) | ಅನುಚ್ಛೇದ 377 |
ಸರಿ ಉತ್ತರ
(ಎ) ಅನುಚ್ಛೇದ 370
11. | ‘ಐಸೋಪಿಕ್ನಿಕ್’ ಎಂಬುದು ಈ ಕೆಳಕಂಡವುಗಳಲ್ಲಿ ಯಾವುದಕ್ಕೆ ಅತೀ ಹತ್ತಿರದ ಸಂಬಂಧಪಟ್ಟಿದೆ? | |
(ಎ) | ಒಂದೇ ರೀತಿಯ ವಾತಾವರಣದ ಒತ್ತಡವನ್ನು ಹೊಂದಿರುವ ಎರಡು ಸ್ಥಳಗಳು. | |
(ಬಿ) | ಒಂದೇ ರೀತಿಯ ಜಿಗುಟುತನ ಹೊಂದಿರುವ ಎರಡು ದ್ರವಗಳು. | |
(ಸಿ) | ಒಂದೇ ರೀತಿಯ ಸಾಂದ್ರತೆ ಹೊಂದಿರುವ ಎರಡು ದ್ರವಗಳು. | |
(ಡಿ) | ಒಂದೇ ರೀತಿಯ ಉಷ್ಣತೆಯನ್ನು ಹೊಂದಿರುವ ಎರಡು ಸ್ಥಳಗಳು. |
ಸರಿ ಉತ್ತರ
(ಸಿ) ಒಂದೇ ರೀತಿಯ ಸಾಂದ್ರತೆ ಹೊಂದಿರುವ ಎರಡು ದ್ರವಗಳು.
12. | ಈ ಕೆಳಕಂಡ ಹೇಳಿಕೆಗಳನ್ನು ವಿಚಾರ ಮಾಡಿ. | |
(1) | ಜಾಗತಿಕವಾಗಿ ತೈಲಗಳ ಬೆಲೆ ಹೆಚ್ಚಳವು ಭಾರತದ ‘ಚಾಲ್ತಿ ಖಾತೆ ಕೊರತೆ’ ಯನ್ನು ಹಿಗ್ಗಿಸುತ್ತದೆ. | |
(2) | ಹೆಚ್ಚಿನ ‘ಚಾಲ್ತಿ ಖಾತೆ ಕೊರತೆ’ ಯು ಕರೆನ್ಸಿಯ ಮೌಲ್ಯವನ್ನು ಕುಗ್ಗಿಸುತ್ತದೆ. ಮೇಲ್ಕಂಡ ಯಾವ ಹೇಳಿಕೆ/ಗಳು ಸರಿಯಿದೆ ? | |
(ಎ) | (1) ಮಾತ್ರ | |
(ಬಿ) | (2) ಮಾತ್ರ | |
(ಸಿ) | (1) ಮತ್ತು (2) ಎರಡೂ | |
(ಡಿ) | (1) ಅಲ್ಲ (2) ಅಲ್ಲ |
ಸರಿ ಉತ್ತರ
(ಸಿ) (1) ಮತ್ತು (2) ಎರಡೂ
13. | ಭಾರತದಲ್ಲಿ ವ್ಯಾಪಾರ ಮಾಡಲು ಪ್ರಥಮವಾಗಿ ಜಂಟಿಯಾಗಿ ವ್ಯಾಪಾರ ಕಂಪನಿಯನ್ನು ಪ್ರಾರಂಭಿಸಿದವರು | |
(ಎ) | ಡಚ್ಚರು | |
(ಬಿ) | ಪೋರ್ಚುಗೀಸರು | |
(ಸಿ) | ಡ್ಯಾನಿಷ್ (ಡೆನ್ಮಾರ್ಕ್ ನವರು) | |
(ಡಿ) | ಫ್ರೆಂಚ್ (ಫ್ರೆಂಚರು) |
ಸರಿ ಉತ್ತರ
(ಎ) ಡಚ್ಚರು
14. | ಮಹಾತ್ಮ ಗಾಂಧಿಯವರು ಬ್ರಿಟೀಷರು ತಮಗೆ ನೀಡಿದ್ದ ಯಾವ ಪದವಿಯನ್ನು ಅಸಹಕಾರ ಚಳುವಳಿಯ ವೇಳೆಯಲ್ಲಿ ಹಿಂತಿರುಗಿಸಿದರು ? | |
(ಎ) | ಹಿಂದ್ ಕೇಸರಿ | |
(ಬಿ) | ಕೈಸರ್- ಇ- ಹಿಂದ್ | |
(ಸಿ) | ರಾಯ್ ಬಹದ್ದೂರ್ | |
(ಡಿ) | ರೈಟ್ ಆನರೇಬಲ್ |
ಸರಿ ಉತ್ತರ
(ಬಿ) ಕೈಸರ್- ಇ- ಹಿಂದ್
15. | ಇಸ್ರೋದ ಉಪಗ್ರಹಗಳ ಉಡಾವಣಾ ಸ್ಥಳವು ಎಲ್ಲಿದೆ ? | |
(ಎ) | ಶ್ರೀಹರಿಕೋಟ (ಆಂಧ್ರಪ್ರದೇಶ) | |
(ಬಿ) | ಸೋಲಾಪುರ (ಮಹಾರಾಷ್ಟ್ರ) | |
(ಸಿ) | ಸೇಲಂ (ತಮಿಳುನಾಡು) | |
(ಡಿ) | ವಾರಂಗಲ್ (ಆಂಧ್ರಪ್ರದೇಶ) |
ಸರಿ ಉತ್ತರ
(ಎ) ಶ್ರೀಹರಿಕೋಟ (ಆಂಧ್ರಪ್ರದೇಶ)
16. | ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಛೇರಿ ಎಲ್ಲಿದೆ ? | |
(ಎ) | ವಿಯೆನ್ನಾ | |
(ಬಿ) | ನ್ಯೂಯಾರ್ಕ್ | |
(ಸಿ) | ಪ್ಯಾರಿಸ್ | |
(ಡಿ) | ಜ್ಯೂರಿಕ್ |
ಸರಿ ಉತ್ತರ
(ಬಿ) ನ್ಯೂಯಾರ್ಕ್
17. | ಅಳಿದಿರುವ ಪ್ರಾಣಿಗಳ ಅಧ್ಯಯನ ಮಾಡುವ ಶಾಸ್ತ್ರ? | |
(ಎ) | ಹರ್ಪೆಟೊಲಜಿ | |
(ಬಿ) | ಆರ್ನಿಥೋಲಜಿ | |
(ಸಿ) | ಜಿಯೋಲಜಿ | |
(ಡಿ) | ಪಾಲೆಂಟೋಲಜಿ |
ಸರಿ ಉತ್ತರ
(ಡಿ) ಪಾಲೆಂಟೋಲಜಿ
18. | ರಿಕ್ಟರ್ ಮಾಪಕವನ್ನು ಏನನ್ನು ಅಳೆಯಲು ಬಳಸುತ್ತಾರೆ ? | |
(ಎ) | ದ್ರವದ ಸಾಂದ್ರತೆಯನ್ನು ಅಳೆಯಲು | |
(ಬಿ) | ಭೂಕಂಪಗಳ ತೀವ್ರತೆಯನ್ನು ಅಳೆಯಲು | |
(ಸಿ) | ಗಾಳಿಯ ವೇಗವನ್ನು ಅಳೆಯಲು | |
(ಡಿ) | ವಾತಾವರಣದ ಆದರ್ರ್ತೆಯನ್ನು ಅಳೆಯಲು |
ಸರಿ ಉತ್ತರ
(ಬಿ) ಭೂಕಂಪಗಳ ತೀವ್ರತೆಯನ್ನು ಅಳೆಯಲು
19. | ವಿಜಯನಗರದ ಯಾವ ರಾಜನು ತನ್ನ ಸೈನಿಕರ ಯುದ್ಧ ಕೌಶಲ್ಯವನ್ನು ಹೆಚ್ಚಿಸಲು ಟರ್ಕಿಯ ಬಿಲ್ವಿದ್ಯೆ ನಿಪುಣರನ್ನು ನೇಮಕ ಮಾಡಿದ್ದನು ? | |
(ಎ) | ಒಂದನೇ ಬುಕ್ಕ | |
(ಬಿ) | ಒಂದನೇ ದೇವರಾಯ | |
(ಸಿ) | ಕೃಷ್ಣದೇವರಾಯ | |
(ಡಿ) | ರಾಮರಾಯ |
ಸರಿ ಉತ್ತರ
(ಬಿ) ಒಂದನೇ ದೇವರಾಯ
20. | ‘ರಾಷ್ಟ್ರೀಯ ಪೊಲೀಸ್ ಅಕಾಡೆಮಿ’ಯು ಎಲ್ಲಿದೆ ? | |
(ಎ) | ಬೆಂಗಳೂರು | |
(ಬಿ) | ಹೈದರಾಬಾದ್ | |
(ಸಿ) | ಮೌಂಟ್ ಅಬು | |
(ಡಿ) | ಡೆಹ್ರಾಡೂನ್ |
ಸರಿ ಉತ್ತರ
(ಬಿ) ಹೈದರಾಬಾದ್
21. | ಅಶೋಕನು ಯಾವ ರಾಜಮನೆತನಕ್ಕೆ ಸೇರಿದವನು ? | |
(ಎ) | ವರ್ಧನರು | |
(ಬಿ) | ಮೌರ್ಯರು | |
(ಸಿ) | ಕುಶಾನರು | |
(ಡಿ) | ಗುಪ್ತರು |
ಸರಿ ಉತ್ತರ
(ಬಿ) ಮೌರ್ಯರು
22. | ಶಿಮ್ಲಾ ಒಪ್ಪಂದವು ಈ ಕೆಳಕಂಡ ಯಾವ ವಿಷಯಕ್ಕೆ ಸಂಬಂಧಿಸಿದೆ? | |
(ಎ) | ಪ್ರವಾಸಿ ತಾಣವಾಗಿ ಶಿಮ್ಲಾ | |
(ಬಿ) | ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿಯಾಗಿ ಶಿಮ್ಲಾ | |
(ಸಿ) | ಭಾರತ ಮತ್ತು ಟಿಬೆಟ್ ನಡುವಿನ ಗಡಿ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
ಸರಿ ಉತ್ತರ
(ಸಿ) ಭಾರತ ಮತ್ತು ಟಿಬೆಟ್ ನಡುವಿನ ಗಡಿ
23. | ಭಾರತ ರತ್ನವನ್ನು ಸ್ವೀಕರಿಸಿದ ಪ್ರಥಮ ವಿದೇಶಿಯರು ಯಾರು? | |
(ಎ) | ಮಾರ್ಟಿನ್ ಲೂಥರ್ ಕಿಂಗ್ | |
(ಬಿ) | ಮದರ್ ತೆರೆಸಾ | |
(ಸಿ) | ಖಾನ್ ಅಬ್ದುಲ್ ಗಾಫಾರ್ ಖಾನ್ | |
(ಡಿ) | ಜುಬಿನ್ ಮೆಹ್ತಾ |
ಸರಿ ಉತ್ತರ
(ಸಿ) ಖಾನ್ ಅಬ್ದುಲ್ ಗಾಫಾರ್ ಖಾನ್
24. | ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಂಗಾನದಿಯ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಯಾವಾಗ ಒಪ್ಪಂದ ಏರ್ಪಟ್ಟಿತು? | |
(ಎ) | 1997 | |
(ಬಿ) | 1996 | |
(ಸಿ) | 1995 | |
(ಡಿ) | 1998 |
ಸರಿ ಉತ್ತರ
(ಬಿ) 1996
25. | ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು ? | |
(ಎ) | ಡಾ. ಕೆ.ಎಂ. ಮುನ್ಷಿ | |
(ಬಿ) | ಜವಹರಲಾಲ್ ನೆಹರು | |
(ಸಿ) | ಡಾ. ಬಿ.ಆರ್. ಅಂಬೇಡ್ಕರ್ | |
(ಡಿ) | ಡಾ. ರಾಜೇಂದ್ರ ಪ್ರಸಾದ್ |
ಸರಿ ಉತ್ತರ
(ಡಿ) ಡಾ. ರಾಜೇಂದ್ರ ಪ್ರಸಾದ್
26. | ಅಂಕಲೇಶ್ವರವು ಯಾವುದಕ್ಕೆ ಪ್ರಸಿದ್ಧಿಯಾಗಿದೆ ? | |
(ಎ) | ಕಲ್ಲಿದ್ದಲು ಗಣಿಗಾರಿಕೆ | |
(ಬಿ) | ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುವಿಕೆ | |
(ಸಿ) | ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು | |
(ಡಿ) | ಹತ್ತಿ ಜವಳಿ ಕೈಗಾರಿಕೆಗಳು |
ಸರಿ ಉತ್ತರ
(ಬಿ) ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುವಿಕೆ
27. | ಭಾರತದ ಯಾವ ಪ್ರಮುಖ ನದಿಯು ಪಶ್ಚಿಮ ಘಟ್ಟದಲ್ಲಿ ಉಗಮವಾಗುವುದಿಲ್ಲ ? | |
(ಎ) | ಕಾವೇರಿ | |
(ಬಿ) | ಗೋದಾವರಿ | |
(ಸಿ) | ಕೃಷ್ಣ | |
(ಡಿ) | ಮಹಾನದಿ |
ಸರಿ ಉತ್ತರ
(ಡಿ) ಮಹಾನದಿ
28. | ಭಾರತದಲ್ಲಿ ಅತೀ ಹೆಚ್ಚು ಕೇಸರಿಯನ್ನು ಉತ್ಪಾದಿಸುವ ರಾಜ್ಯ ಯಾವುದು ? | |
(ಎ) | ಅಸ್ಸಾಂ | |
(ಬಿ) | ಹಿಮಾಚಲ ಪ್ರದೇಶ | |
(ಸಿ) | ಜಮ್ಮು ಮತ್ತು ಕಾಶ್ಮೀರ | |
(ಡಿ) | ಮೇಘಾಲಯ |
ಸರಿ ಉತ್ತರ
(ಸಿ) ಜಮ್ಮು ಮತ್ತು ಕಾಶ್ಮೀರ
29. | ಸಂಚಿ ಸ್ತೂಪವು ಯಾವ ಸ್ಥಳದ ಬಳಿಯಿದೆ ? | |
(ಎ) | ಗಯಾ | |
(ಬಿ) | ಬೋಪಾಲ್ | |
(ಸಿ) | ವಾರಣಾಸಿ | |
(ಡಿ) | ವಿಜಯಪುರ |
ಸರಿ ಉತ್ತರ
(ಬಿ) ಬೋಪಾಲ್
30. | ಭಾರತದ ಅತೀ ಪುರಾತನ ಬಂಡೆಗಳು ಯಾವ ಸ್ಥಳದಲ್ಲಿ ಕಂಡು ಬಂದಿವೆ ? | |
(ಎ) | ಧಾರವಾಡ ಪ್ರದೇಶ, ಕರ್ನಾಟಕ | |
(ಬಿ) | ಅರಾವಳಿ ವಲಯ, ರಾಜಸ್ಥಾನ | |
(ಸಿ) | ವಿಂದ್ಯಾ ವಲಯ, ಮಧ್ಯಪ್ರದೇಶ | |
(ಡಿ) | ಶಿವಾಲಿಕ್ ವಲಯ, ಪಂಜಾಬ್ |
ಸರಿ ಉತ್ತರ
(ಎ) ಧಾರವಾಡ ಪ್ರದೇಶ, ಕರ್ನಾಟಕ
31. | ಸಹರಾ ಮರುಭೂಮಿಯು ಯಾವ ಖಂಡದಲ್ಲಿದೆ ? | |
(ಎ) | ಏಷ್ಯಾ | |
(ಬಿ) | ಆಫ್ರಿಕಾ | |
(ಸಿ) | ಆಸ್ಟ್ರೇಲಿಯಾ | |
(ಡಿ) | ಯೂರೋಪ್ |
ಸರಿ ಉತ್ತರ
(ಬಿ) ಆಫ್ರಿಕಾ
32. | ಭಾರತದಲ್ಲಿ ಧಾನ್ಯ ಬೆಳೆಯುವ ಹೆಚ್ಚಿನ ಪ್ರದೇಶವನ್ನು ಈ ಬೆಳೆಗೆ ಉಪಯೋಗಿಸಲಾಗುತ್ತದೆ | |
(ಎ) | ಬಾರ್ಲಿ ಮತ್ತು ಜೋಳ | |
(ಬಿ) | ಸಿರಿಧಾನ್ಯಗಳು | |
(ಸಿ) | ಭತ್ತ | |
(ಡಿ) | ಗೋಧಿ |
ಸರಿ ಉತ್ತರ
(ಸಿ) ಭತ್ತ
33. | ಭಾರತದಲ್ಲಿನ ಅತೀ ಪುರಾತನ ಬೆಟ್ಟ ಸಾಲುಗಳು | |
(ಎ) | ಅರಾವಳಿ ಬೆಟ್ಟ ಸಾಲುಗಳು | |
(ಬಿ) | ವಿಂದ್ಯ ಬೆಟ್ಟ ಸಾಲುಗಳು | |
(ಸಿ) | ಸಾತ್ಪುರ ಬೆಟ್ಟ ಸಾಲುಗಳು | |
(ಡಿ) | ನೀಲಗಿರಿ ಬೆಟ್ಟ ಸಾಲುಗಳು |
ಸರಿ ಉತ್ತರ
(ಎ) ಅರಾವಳಿ ಬೆಟ್ಟ ಸಾಲುಗಳು
34. | ನೈಋತ್ಯ ಮಳೆ ಮಾರುತಗಳು ಭಾರತದಲ್ಲಿ ಶೇ. ___________ ಪ್ರಮಾಣದ ಮಳೆಯನ್ನು ಸುರಿಸುತ್ತವೆ. | |
(ಎ) | 86% | |
(ಬಿ) | 50% | |
(ಸಿ) | 22% | |
(ಡಿ) | 100% |
ಸರಿ ಉತ್ತರ
(ಎ) 86%
35. | ಪ್ರಸಿದ್ದವಾದ ‘ರಾಕ್ ಗಾರ್ಡನ್’ ಯಾವ ನಗರದಲ್ಲಿದೆ ? | |
(ಎ) | ಜೈಪುರ | |
(ಬಿ) | ಲಕ್ನೋ | |
(ಸಿ) | ಶಿಮ್ಲಾ | |
(ಡಿ) | ಚಂಡೀಘಡ |
ಸರಿ ಉತ್ತರ
(ಡಿ) ಚಂಡೀಘಡ
36. | ಈ ಅಂಶವನ್ನು ಒಂದು ಜೀವಿಗೆ ನೀಡಿದಾಗ ಅದರಲ್ಲಿ ಪ್ರತಿ ನಿರೋಧಕ ಜೀವಿಗಳು ಉತ್ಪತ್ತಿಯಾಗುತ್ತವೆ. | |
(ಎ) | ಕೀವುಗಳೆಕ | |
(ಬಿ) | ಪ್ರತಿವಿಷ | |
(ಸಿ) | ಪ್ರತಿಜನಕ | |
(ಡಿ) | ಪ್ರತಿ ಜೀವಕ |
ಸರಿ ಉತ್ತರ
(ಸಿ) ಪ್ರತಿಜನಕ
37. | ಭಾರತದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಯಾವ ಕಚ್ಚಾ ವಸ್ತುವನ್ನು ಪ್ರಮುಖವಾಗಿ ಬಳಸಲಾಗುತ್ತದೆ ? | |
(ಎ) | ಕಲ್ಲಿದ್ದಲು | |
(ಬಿ) | ಖನಿಜ ತೈಲ | |
(ಸಿ) | ನೈಸರ್ಗಿಕ ಅನಿಲ | |
(ಡಿ) | ಯುರೇನಿಯಮ್ |
ಸರಿ ಉತ್ತರ
(ಎ) ಕಲ್ಲಿದ್ದಲು
38. | ಈರುಳ್ಳಿಯು ಯಾವುದರ ಪರಿಷ್ಕೃತ ರೂಪವಾಗಿದೆ ? | |
(ಎ) | ಎಲೆ | |
(ಬಿ) | ಕಾಂಡ | |
(ಸಿ) | ಬೇರು | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
ಸರಿ ಉತ್ತರ
(ಬಿ) ಕಾಂಡ
39. | ಈ ಕೆಳಕಂಡವುಗಳಲ್ಲಿ ಮನುಷ್ಯನಿಗೆ ವೈರಸ್ ನಿಂದ ಬರುವ ರೋಗ ಯಾವುದು ? | |
(ಎ) | ಮಂಗನಬಾವು | |
(ಬಿ) | ಪ್ಲೇಗ್ | |
(ಸಿ) | ಕಾಲರ | |
(ಡಿ) | ಪರಂಗಿ ರೋಗ(ಸೈಫಿಲಿಸ್) |
ಸರಿ ಉತ್ತರ
(ಎ) ಮಂಗನಬಾವು
40. | ತಲೆಯು ಕತ್ತಿನ ಭಾಗಕ್ಕೆ ಸೇರುವಿಕೆಯ ಜಾಗ | |
(ಎ) | ಬಾಲ್ ಅಂಡ್ ಸಾಕೆಟ್ ಜಾಯಿಂಟ್ | |
(ಬಿ) | ಪಿವೋಟಲ್ ಜಾಯಿಂಟ್ | |
(ಸಿ) | ಹಿಂಜ್ ಜಾಯಿಂಟ್ | |
(ಡಿ) | ಫಿಕ್ಸ್ಡ್ ಜಾಯಿಂಟ್ |
ಸರಿ ಉತ್ತರ
(ಬಿ) ಪಿವೋಟಲ್ ಜಾಯಿಂಟ್
41. | ಅಸ್ಕಾರ್ಬಿಕ್ ಆಸಿಡ್ ಅನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ? | |
(ಎ) | ವಿಟಮಿನ್ ಎ | |
(ಬಿ) | ವಿಟಮಿನ್ ಸಿ | |
(ಸಿ) | ವಿಟಮಿನ್ ಡಿ | |
(ಡಿ) | ವಿಟಮಿನ್ ಕೆ |
ಸರಿ ಉತ್ತರ
(ಬಿ) ವಿಟಮಿನ್ ಸಿ
42. | ಈ ಕೆಳಕಂಡವುಗಳಲ್ಲಿ ಯಾವುದು ಪ್ರತಿನಿರೋಧಕಗಳನ್ನು ಉತ್ಪಾದಿಸುತ್ತದೆ ? | |
(ಎ) | ಎಸಿನೋಫಿಲ್ | |
(ಬಿ) | ಮೋನೋಸೈಟ್ | |
(ಸಿ) | ಬಾಸೋಫಿಲ್ | |
(ಡಿ) | ಲಿಫೋಸೈಟ್ |
ಸರಿ ಉತ್ತರ
(ಡಿ) ಲಿಫೋಸೈಟ್
43. | ಕ್ಷಯ ರೋಗಕ್ಕೆ ಕಾರಣವಾಗುವುದು ಯಾವುದು ? | |
(ಎ) | ಮೈಕೋಬ್ಯಾಕ್ಟಿರಿಯಂ | |
(ಬಿ) | ಆಸ್ಪರಜಿಲ್ಲಸ್ | |
(ಸಿ) | ರಾಬ್ಡೋವೈರಸ್ | |
(ಡಿ) | ಎಚ್.ಐ.ವಿ. |
ಸರಿ ಉತ್ತರ
(ಎ) ಮೈಕೋಬ್ಯಾಕ್ಟಿರಿಯಂ
44. | ರೋಗಗಳನ್ನು ವರ್ಗಾಯಿಸುವ ಕೀಟಗಳನ್ನು ಏನೆಂದು ಕರೆಯುತ್ತಾರೆ ? | |
(ಎ) | ವೆಕ್ಟರ್ | |
(ಬಿ) | ಟ್ರಾನ್ಸ್ಮಿಟ್ಟರ್ | |
(ಸಿ) | ಡ್ರೋನ್ಸ್ | |
(ಡಿ) | ಕಂಡಕ್ಟರ್ |
ಸರಿ ಉತ್ತರ
(ಎ) ವೆಕ್ಟರ್
45. | M.R.I. ಇದರ ವಿಸೃತ ರೂಪವೇನು ? | |
(ಎ) | ಮೀಟರ್ಡ್ ರೆಸೋನಾನ್ಸ್ ಇಮೇಜಿಂಗ್ | |
(ಬಿ) | ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್ | |
(ಸಿ) | ಮ್ಯಾಗ್ನೆಟಿಕ್ ರಿಯಾಕ್ಷನ್ ಇಮೇಜಿಂಗ್ | |
(ಡಿ) | ಮೀಟರ್ಡ್ ರಿಯಾಕ್ಷನ್ ಇಮೇಜಿಂಗ್ |
ಸರಿ ಉತ್ತರ
(ಬಿ) ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್
46. | ಕಾಫಿ ಮತ್ತು ಟೀ ಪಾನೀಯದಲ್ಲಿರುವ ಮುಖ್ಯ ಪ್ರಚೋದಕ ಯಾವುದು ? | |
(ಎ) | ನಿಕೋಟಿನ್ | |
(ಬಿ) | ಕ್ಲೋರೋಫಿಲ್ | |
(ಸಿ) | ಕೆಫಿನ್ | |
(ಡಿ) | ಆಸ್ಪಿರಿನ್ |
ಸರಿ ಉತ್ತರ
(ಸಿ) ಕೆಫಿನ್
47. | ಪಾಲಿಥೀನ್ ಅನ್ನು ಉತ್ಪಾದಿಸಲು ಬೇಕಾಗುವ ವಸ್ತು | |
(ಎ) | ಈಥೇನ್ | |
(ಬಿ) | ಎಥಿಲೀನ್ | |
(ಸಿ) | ಈಥೈಲ್ ಆಲ್ಕೋಹಾಲ್ | |
(ಡಿ) | ಈಥೀನ್ |
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
48. | ಒಂದು ಆಮೀಯ ದ್ರಾವಣದ pHನ ಮೌಲ್ಯ _________. | |
(ಎ) | < 7 | |
(ಬಿ) | > 7 | |
(ಸಿ) | 7 | |
(ಡಿ) | 0 |
ಸರಿ ಉತ್ತರ
(ಎ) < 7
49. | ನಿರ್ಜಲೀಕರಣ ಉಂಟಾದಾಗ ದೇಹವು ಯಾವ ಅಂಶವನ್ನು ಕಳೆದುಕೊಳ್ಳುತ್ತದೆ ? | |
(ಎ) | ಸಕ್ಕರೆ | |
(ಬಿ) | ಸೋಡಿಯಂ ಕ್ಲೋರೈಡ್ | |
(ಸಿ) | ಕ್ಯಾಲ್ಷಿಯಂ ಫಾಸ್ಫೇಟ್ | |
(ಡಿ) | ಪೊಟಾಷಿಯಂ ಕ್ಲೋರೈಡ್ |
ಸರಿ ಉತ್ತರ
(ಬಿ) ಸೋಡಿಯಂ ಕ್ಲೋರೈಡ್
50. | ಒಣ ಐಸ್ ಎಂದರೇನು ? | |
(ಎ) | ನೀರಿನ ಹರಳುಗಟ್ಟುವಿಕೆಯಿಲ್ಲದ ಐಸ್ | |
(ಬಿ) | ಕರಗದೇ ಇರುವ ಐಸ್ | |
(ಸಿ) | ಗಟ್ಟಿಯಾದ ಇಂಗಾಲದ ಡೈ ಆಕ್ಸೈಡ್ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
ಸರಿ ಉತ್ತರ
(ಸಿ) ಗಟ್ಟಿಯಾದ ಇಂಗಾಲದ ಡೈ ಆಕ್ಸೈಡ್
51. | ಗ್ರಾಫೈಟ್ ರಾಡುಗಳನ್ನು ಅಣು ವಿದ್ಯುತ್ ರಿಯಾಕ್ಟರ್ ಗಳಲ್ಲಿ ಬಳಸುವ ಉದ್ದೇಶ ? | |
(ಎ) | ಯುರೇನಿಯಂನೊಂದಿಗೆ ವರ್ತಿಸಿ ಶಕ್ತಿಯ ಬಿಡುಗಡೆ | |
(ಬಿ) | ನ್ಯೂಟ್ರಾನ್ಗಳ ಉತ್ಪತ್ತಿ | |
(ಸಿ) | ಅಣು ವಿದಳನ ಕ್ರಿಯೆಯನ್ನು ಪ್ರಚೋದಿಸುತ್ತದೆ | |
(ಡಿ) | ವೇಗವಾಗಿ ಚಲಿಸುವ ನ್ಯೂಟ್ರಾನ್ ಗಳನ್ನು ಥರ್ಮಲ್ ನ್ಯೂಟ್ರಾನ್ ಗಳಾಗಿ ಪರಿವರ್ತಿಸುತ್ತದೆ. |
ಸರಿ ಉತ್ತರ
(ಡಿ) ವೇಗವಾಗಿ ಚಲಿಸುವ ನ್ಯೂಟ್ರಾನ್ ಗಳನ್ನು ಥರ್ಮಲ್ ನ್ಯೂಟ್ರಾನ್ ಗಳಾಗಿ ಪರಿವರ್ತಿಸುತ್ತದೆ.
52. | ಗಾಳಿಯಲ್ಲಿರುವ ಹೆಚ್ಚಿನ ಭಾಗ ಯಾವುದು ? | |
(ಎ) | ಸಾರಜನಕ | |
(ಬಿ) | ಇಂಗಾಲದ ಡೈ ಆಕ್ಸೈಡ್ | |
(ಸಿ) | ಆಮ್ಲಜನಕ | |
(ಡಿ) | ಜಲಜನಕ |
ಸರಿ ಉತ್ತರ
(ಎ) ಸಾರಜನಕ
53. | ಮೆಗ್ನೀಷಿಯಂ ಮತ್ತು ಕ್ಯಾಲ್ಷಿಯಂ ಎರಡನ್ನೂ ಹೊಂದಿರುವುದು ಯಾವುದು ? | |
(ಎ) | ಮೆಗ್ನಿಸೈಟ್ | |
(ಬಿ) | ಕ್ಯಾಲ್ಸೈಟ್ | |
(ಸಿ) | ಕಾರ್ನಲೈಟ್ | |
(ಡಿ) | ಡೊಲೋಮೈಟ್ |
ಸರಿ ಉತ್ತರ
(ಡಿ) ಡೊಲೋಮೈಟ್
54. | HCl ನೊಂದಿಗೆ ವರ್ತಿಸಿದಾಗ ಜಲಜನಕವನ್ನು ಬಿಡುಗಡೆ ಮಾಡದ ಲೋಹ ಯಾವುದು ? | |
(ಎ) | ಸತು | |
(ಬಿ) | ಕಬ್ಬಿಣ | |
(ಸಿ) | ಬೆಳ್ಳಿ | |
(ಡಿ) | ಕ್ಯಾಲ್ಷಿಯಂ |
ಸರಿ ಉತ್ತರ
(ಸಿ) ಬೆಳ್ಳಿ
55. | ಹೀರುಕಾಗದವು ಶಾಯಿಯನ್ನು ಹೀರುವ ಕ್ರಿಯೆಯು ಇದನ್ನು ಒಳಗೊಳ್ಳುತ್ತದೆ. | |
(ಎ) | ಶಾಯಿಯ ಜಿಗುಟು | |
(ಬಿ) | ಲೋಮನಾಳ ಕ್ರಿಯೆ | |
(ಸಿ) | ಹೀರು ಕಾಗದದ ಮೇಲೆ ಶಾಯಿಯ ಪ್ರಸರಣ | |
(ಡಿ) | ನುಗ್ಗುವ ಕ್ರಿಯೆ |
ಸರಿ ಉತ್ತರ
(ಬಿ) ಲೋಮನಾಳ ಕ್ರಿಯೆ
56. | ಘನ ಸ್ಥಿತಿಯಿಂದ ಅನಿಲ ರೂಪಕ್ಕೆ ಬದಲಾಗುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ ? | |
(ಎ) | ಕರಗುವಿಕೆ | |
(ಬಿ) | ಕುದಿಯುವುದು | |
(ಸಿ) | ಮಿಳನ | |
(ಡಿ) | ಸಂಸ್ಕರಣ |
ಸರಿ ಉತ್ತರ
(ಡಿ) ಸಂಸ್ಕರಣ
57. | ಥರ್ಮೋಎಲೆಕ್ಟ್ರಿಕ್ ರೆಫ್ರಿಜರೇಟರ್ ಯಾವ ಪರಿಣಾಮದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ? | |
(ಎ) | ಜೂಲ್ಸ್ ಪರಿಣಾಮ | |
(ಬಿ) | ಸೀಬೆಕ್ ಪರಿಣಾಮ | |
(ಸಿ) | ಪೆಲ್ವಿಯರ್ ಪರಿಣಾಮ | |
(ಡಿ) | ವೆರ್ನಿಯರ್ ಪರಿಣಾಮ |
ಸರಿ ಉತ್ತರ
(ಸಿ) ಪೆಲ್ವಿಯರ್ ಪರಿಣಾಮ
58. | ಲೋಹಗಳು ಉತ್ತಮವಾದ ವಿದ್ಯುದ್ವಾಹಕಗಳು. ಏಕೆಂದರೆ | |
(ಎ) | ಅವು ಅನಿರ್ಬಂಧಿತ ಎಲೆಕ್ಟ್ರಾನ್ ಗಳನ್ನು ಹೊಂದಿವೆ | |
(ಬಿ) | ಅವುಗಳ ಅಣುಗಳು ವಿರಳವಾಗಿ ಬಂಧಿತವಾಗಿವೆ | |
(ಸಿ) | ಅವುಗಳು ಹೆಚ್ಚಿನ ಕರಗುವ ಗುಣವನ್ನು ಹೊಂದಿವೆ | |
(ಡಿ) | ಇವುಗಳಲ್ಲಿ ಎಲ್ಲವೂ |
ಸರಿ ಉತ್ತರ
(ಎ) ಅವು ಅನಿರ್ಬಂಧಿತ ಎಲೆಕ್ಟ್ರಾನ್ ಗಳನ್ನು ಹೊಂದಿವೆ
59. | ಡಯೋಡ್ ರೆಕ್ಟಿಫೈಯರ್ ಆಗಿ ಕೆಲಸ ಮಾಡುವಾಗ ಈ ಪರಿವರ್ತನೆ ಮಾಡುತ್ತದೆ | |
(ಎ) | ಪರ್ಯಾಯ ವಿದ್ಯುತ್ ನಿಂದ ನೇರ ವಿದ್ಯುತ್ ಗೆ | |
(ಬಿ) | ನೇರ ವಿದ್ಯುತ್ ನಿಂದ ಪರ್ಯಾಯ ವಿದ್ಯುತ್ ಗೆ | |
(ಸಿ) | ನೇರ ವಿದ್ಯುತ್ ನಿಂದ ಸ್ಥಿರ ವಿದ್ಯುತ್ ಗೆ | |
(ಡಿ) | ಹೆಚ್ಚಿನ ವೋಲ್ಟೇಜ್ ನಿಂದ ಕಡಿಮೆ ವೋಲ್ಟೇಜ್ಗೆ ಮತ್ತು ವೈಸ್- ವರ್ಸಾ |
ಸರಿ ಉತ್ತರ
(ಎ) ಪರ್ಯಾಯ ವಿದ್ಯುತ್ ನಿಂದ ನೇರ ವಿದ್ಯುತ್ ಗೆ
60. | ‘ಟೈಟನ್’ ಎಂಬುದು ಯಾವ ಗ್ರಹದ ಉಪಗ್ರಹವಾಗಿದೆ ? | |
(ಎ) | ಬುಧ ಗ್ರಹ | |
(ಬಿ) | ಗುರು ಗ್ರಹ | |
(ಸಿ) | ಶುಕ್ರ ಗ್ರಹ | |
(ಡಿ) | ಶನಿ ಗ್ರಹ |
ಸರಿ ಉತ್ತರ
(ಡಿ) ಶನಿ ಗ್ರಹ
61. | ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು ? | |
(ಎ) | ಜಲಜನಕ ಮತ್ತು ಹೀಲಿಯಂ | |
(ಬಿ) | ಜಲಜನಕ ಮತ್ತು ಆರ್ಗನ್ | |
(ಸಿ) | ಆರ್ಗನ್ ಮತ್ತು ಹೀಲಿಯಂ | |
(ಡಿ) | ಜಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ |
ಸರಿ ಉತ್ತರ
(ಎ) ಜಲಜನಕ ಮತ್ತು ಹೀಲಿಯಂ
62. | ಆಕಾಶದ ನೀಲಿ ಬಣ್ಣಕ್ಕೆ ಕಾರಣ | |
(ಎ) | ಪ್ರತಿಫಲನ | |
(ಬಿ) | ವಕ್ರಿಭವನ | |
(ಸಿ) | ಎಲ್ಲೆಡೆ ಚದುರುವಿಕೆ | |
(ಡಿ) | ಹರಡುವಿಕೆ |
ಸರಿ ಉತ್ತರ
(ಸಿ) ಎಲ್ಲೆಡೆ ಚದುರುವಿಕೆ
63. | ಎರಡು ವಿಭಿನ್ನ ತೂಕದ ದೇಹಗಳು ಪ್ರಾರಂಭಿಕವಾಗಿ ಸ್ಥಿರಸ್ಥಿತಿಯಲ್ಲಿದ್ದು, ನಂತರ ಒಂದೇ ಸಮಯದಲ್ಲಿ ಒಂದೇ ಪ್ರಮಾಣದ ಬಲ ಉಪಯೋಗ ಮಾಡಿದಾಗ ಈ ಎರಡೂ ದೇಹಗಳು ಸಮನಾಂತರ _____________ ಪಡೆದುಕೊಳ್ಳುತ್ತವೆ. | |
(ಎ) | ವೇಗ | |
(ಬಿ) | ಆವೇಗ | |
(ಸಿ) | ವೇಗದ ಗತಿ | |
(ಡಿ) | ಚಲನಶಕ್ತಿ |
ಸರಿ ಉತ್ತರ
(ಬಿ) ಆವೇಗ
64. | ಈ ಕೆಳಕಂಡವುಗಳಲ್ಲಿ ಯಾವುದು ವಿದ್ಯುತ್ ಕಾಂತದ ಒಳಭಾಗಕ್ಕೆ ಸೂಕ್ತವಾಗಿದೆ ? | |
(ಎ) | ಗಾಳಿ | |
(ಬಿ) | ಮೆದು ಕಬ್ಬಿಣ | |
(ಸಿ) | ಉಕ್ಕು | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
ಸರಿ ಉತ್ತರ
(ಬಿ) ಮೆದು ಕಬ್ಬಿಣ
65. | ಸಮಾನ ಉದ್ದವಿರುವ ಎರಡು ರೈಲುಗಳು ಸಮಾನಾಂತರ ಹಳಿಗಳ ಮೇಲೆ ಒಂದು ರೈಲು ಗಂಟೆಗೆ 46 ಕಿ.ಮೀ. ವೇಗದಲ್ಲಿ ಮತ್ತು ಮತ್ತೊೊಂದು ರೈಲು 36 ಕಿ.ಮೀ./ಗಂ, ವೇಗದಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುತ್ತಿವೆ. ಹೆಚ್ಚು ವೇಗವಾಗಿ ಚಲಿಸುತ್ತಿರುವ ರೈಲು ಕಡಿಮೆ ವೇಗದಲ್ಲಿ ಚಲಿಸುತ್ತಿರುವ ರೈಲನ್ನು 36 ಸೆಕೆಂಡ್ ಗಳಲ್ಲಿ ಹಾದುಹೋಗುತ್ತದೆ. ಪ್ರತಿಯೊಂದು ರೈಲಿನ ಉದ್ದ ಎಷ್ಟು ? | |
(ಎ) | 50 ಮೀಟರ್ | |
(ಬಿ) | 72 ಮೀಟರ್ | |
(ಸಿ) | 80 ಮೀಟರ್ | |
(ಡಿ) | 82 ಮೀಟರ್ |
ಸರಿ ಉತ್ತರ
(ಎ) 50 ಮೀಟರ್
66. | ‘ಎ’ ನು ಒಂದು ಕೆಲಸವನ್ನು 4 ಗಂಟೆಗಳಲ್ಲಿ ಮಾಡುತ್ತಾನೆ; ಅದೇ ಕೆಲಸವನ್ನು ‘ಬಿ’ ಮತ್ತು ‘ಸಿ’ ರವರು ಜೊತೆಯಾಗಿ 3 ಗಂಟೆಗಳಲ್ಲಿ ಮಾಡುತ್ತಾರೆ. ‘ಎ’ ಮತ್ತು ‘ಸಿ’ ರವರು ಜೊತೆಯಾಗಿ 2 ಗಂಟೆಗಳಲ್ಲಿ ಮಾಡುತ್ತಾರೆ; ‘ಬಿ’ ಒಬ್ಬನೇ ಈ ಕೆಲಸ ಮಾಡಲು ಎಷ್ಟು ಸಮಯ ಬೇಕಾಗುತ್ತದೆ? | |
(ಎ) | 8 ಗಂಟೆಗಳು | |
(ಬಿ) | 10 ಗಂಟೆಗಳು | |
(ಸಿ) | 12 ಗಂಟೆಗಳು | |
(ಡಿ) | 24 ಗಂಟೆಗಳು |
ಸರಿ ಉತ್ತರ
(ಸಿ) 12 ಗಂಟೆಗಳು
67. | ಸೂಪರ್ ಕಂಡಕ್ಟರ್ ಗಳು ಅಂದರೆ ಏನು ? | |
(ಎ) | ಕಡಿಮೆ ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ. | |
(ಬಿ) | ವಿದ್ಯುತ್ ಹರಿಯುವಿಕೆಗೆ ಹೆಚ್ಚಿನ ಪ್ರತಿರೋಧ ತೋರುತ್ತದೆ. | |
(ಸಿ) | ವಿದ್ಯುತ್ ಹರಿಯುವಿಕೆಗೆ ಪ್ರತಿರೋಧ ತೋರುವುದಿಲ್ಲ. | |
(ಡಿ) | ಹೆಚ್ಚಿನ ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ. |
ಸರಿ ಉತ್ತರ
(ಎ) ಕಡಿಮೆ ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ. or (ಸಿ) ವಿದ್ಯುತ್ ಹರಿಯುವಿಕೆಗೆ ಪ್ರತಿರೋಧ ತೋರುವುದಿಲ್ಲ.
68. | ಒಬ್ಬ ವ್ಯಕ್ತಿಯು ಬ್ಯಾಂಕಿನಿಂದ ವಾರ್ಷಿಕವಾಗಿ ಸಾಮಾನ್ಯ ಬಡ್ಡಿದರ ಶೇ. 12 ರಂತೆ ಸಾಲ ಪಡೆದುಕೊಂಡಿರುತ್ತಾನೆ. 3 ವರ್ಷಗಳ ನಂತರ ಆತನು ರೂ. 5,400 ಗಳನ್ನು ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಹಾಗಾದರೆ ಆತನು ಸಾಲವಾಗಿ ಪಡೆದುಕೊಂಡಿದ್ದ ಮೂಲಧನ ಎಷ್ಟು ? | |
(ಎ) | ರೂ. 2,000 | |
(ಬಿ) | ರೂ. 10,000 | |
(ಸಿ) | ರೂ. 15,000 | |
(ಡಿ) | ರೂ. 20,000 |
ಸರಿ ಉತ್ತರ
(ಸಿ) ರೂ. 15,000
69. | ಒಬ್ಬ ವ್ಯಕ್ತಿಯು ಆತನ ಮಗನಿಗಿಂತ 24 ವರ್ಷ ಹಿರಿಯನಾಗಿರುತ್ತಾನೆ. 2 ವರ್ಷಗಳ ನಂತರ ಆತನ ವಯಸ್ಸು ಮಗನ ಎರಡರಷ್ಟಾಗುತ್ತದೆ. ಆತನ ಮಗನ ಪ್ರಸ್ತುತ ವಯಸ್ಸೆಷ್ಟು ? | |
(ಎ) | 14 ವರ್ಷಗಳು | |
(ಬಿ) | 18 ವರ್ಷಗಳು | |
(ಸಿ) | 20 ವರ್ಷಗಳು | |
(ಡಿ) | 22 ವರ್ಷಗಳು |
ಸರಿ ಉತ್ತರ
(ಡಿ) 22 ವರ್ಷಗಳು
70. | ನಿಂತಿರುವ ನೀರಿನಲ್ಲಿ ಗಂಟೆಗೆ 15 ಕಿ.ಮೀ. ವೇಗವಾಗಿ ಚಲಿಸುವ ಮೋಟಾರ್ ಬೋಟು ನೀರು ಹರಿಯುವ ದಿಕ್ಕಿನಲ್ಲಿ 30 ಕಿ.ಮೀ. ಚಲಿಸಿ ಮತ್ತೆ ವಾಪಸ್ಸು ಬರಲು 4 ಗಂಟೆ 30 ನಿಮಿಷ ಸಮಯವಾಗುತ್ತದೆ. ಹಾಗಾದರೆ ನೀರಿನ ಹರಿವಿನ ವೇಗ (ಕಿ.ಮೀ./ಗಂಟೆ) ಎಷ್ಟು ? | |
(ಎ) | 4 | |
(ಬಿ) | 5 | |
(ಸಿ) | 6 | |
(ಡಿ) | 10 |
ಸರಿ ಉತ್ತರ
(ಬಿ) 5
71. | ‘ಎ’ ನು ‘ಡಿ’ ಯ ಸೋದರನಾಗಿದ್ದಾನೆ. ‘ಡಿ’ ನು ‘ಬಿ’ ಯ ತಂದೆಯಾಗಿದ್ದಾನೆ, ‘ಬಿ’ ಮತ್ತು ‘ಸಿ’ ರವರು ಸೋದರಿಯರಾಗಿರುತ್ತಾರೆ. ಹಾಗಾದರೆ ‘ಎ’ ನು ‘ಸಿ’ ಗೆ ಹೇಗೆ ಸಂಬಂಧಿಯಾಗಿದ್ದಾನೆ ? | |
(ಎ) | ಮಗ | |
(ಬಿ) | ಚಿಕ್ಕಪ್ಪ | |
(ಸಿ) | ತಂದೆ | |
(ಡಿ) | ಮೊಮ್ಮಗ |
ಸರಿ ಉತ್ತರ
(ಬಿ) ಚಿಕ್ಕಪ್ಪ
72. | ಎಷ್ಟು ಎರಡು ಅಂಕಿಗಳ ಸಂಖ್ಯೆಗಳು ಈ ಗುಣವನ್ನು ಹೊಂದಿರುತ್ತವೆ. ಎರಡು ಅಂಕಿಗಳ ಸಂಖ್ಯೆಯ ಘಾತದ ಕೊನೆಯ ಅಂಕಿ 8 ಆಗಿರುತ್ತದೆ | |
(ಎ) | 1 | |
(ಬಿ) | 2 | |
(ಸಿ) | 3 | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
ಸರಿ ಉತ್ತರ
(ಡಿ) ಇವುಗಳಲ್ಲಿ ಯಾವುದೂ ಅಲ್ಲ
73. | ‘LEADER’ ಎಂಬ ಅಕ್ಷರಗಳ ಪದದಿಂದ ಎಷ್ಟು ಬಗೆಯ ಪದಗಳನ್ನು ರಚಿಸಬಹುದು ? | |
(ಎ) | 72 | |
(ಬಿ) | 144 | |
(ಸಿ) | 360 | |
(ಡಿ) | 720 |
ಸರಿ ಉತ್ತರ
(ಸಿ) 360
74. | ಒಂದು ನದಿಯು ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ, ಅದು ಹರಿಯುವಾಗ ಎಡಕ್ಕೆ ತಿರುಗುವ ವೇಳೆಯಲ್ಲಿ ದಿಬ್ಬವೊಂದನ್ನು ಅರೆವೃತ್ತಾಕಾರದಲ್ಲಿ ಸುತ್ತಿ ಮತ್ತೆ ಎಡ ತಿರುವು ತೆಗೆದುಕೊಂಡು ನೇರವಾಗಿ ಹರಿಯುತ್ತದೆ. ಕೊನೆಯದಾಗಿ ನದಿಯು ಯಾವ ದಿಕ್ಕಿಗೆ ಹರಿಯುತ್ತದೆ ? | |
(ಎ) | ದಕ್ಷಿಣ | |
(ಬಿ) | ಉತ್ತರ | |
(ಸಿ) | ಪೂರ್ವ | |
(ಡಿ) | ಪಶ್ಚಿಮ |
ಸರಿ ಉತ್ತರ
(ಎ) ದಕ್ಷಿಣ or (ಬಿ) ಉತ್ತರ or (ಸಿ) ಪೂರ್ವ
75. | ಎರಡು ಸಂಖ್ಯೆಗಳ ಸಂಕಲನವು 25 ಆಗಿದ್ದು, ಅವುಗಳ ನಡುವಿನ ವ್ಯತ್ಯಾಸ 13 ಆಗಿರುತ್ತದೆ. ಹಾಗಾದರೆ ಅವುಗಳ ಗುಣಾಕಾರ ಸಂಖ್ಯೆ ಯಾವುದು ? | |
(ಎ) | 104 | |
(ಬಿ) | 114 | |
(ಸಿ) | 315 | |
(ಡಿ) | 325 |
ಸರಿ ಉತ್ತರ
(ಬಿ) 114
76. | ಸಂವಿಧಾನದ ಈ ಭಾಗವು ಸಂವಿಧಾನದ ರಚನೆಕಾರರ ಮನಸ್ಸು ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸುತ್ತವೆ. | |
(ಎ) | ನಿರ್ದೇಶಕ ತತ್ವಗಳು | |
(ಬಿ) | ಮೂಲಭೂತ ಹಕ್ಕುಗಳು | |
(ಸಿ) | ಪ್ರಸ್ತಾವನೆ | |
(ಡಿ) | ಪೌರತ್ವ |
ಸರಿ ಉತ್ತರ
(ಸಿ) ಪ್ರಸ್ತಾವನೆ
77. | ರಾಷ್ಟ್ರಪತಿಯವರಿಗೆ ಪ್ರಮಾಣ ವಚನವನ್ನು ಯಾರು ಬೋಧನೆ ಮಾಡುತ್ತಾರೆ ? | |
(ಎ) | ಭಾರತದ ಮುಖ್ಯ ನ್ಯಾಯಮೂರ್ತಿಗಳು | |
(ಬಿ) | ಲೋಕಸಭೆಯ ಸಭಾಧ್ಯಕ್ಷರು | |
(ಸಿ) | ಪ್ರಧಾನ ಮಂತ್ರಿಗಳು | |
(ಡಿ) | ಉಪರಾಷ್ಟ್ರಪತಿಗಳು |
ಸರಿ ಉತ್ತರ
(ಎ) ಭಾರತದ ಮುಖ್ಯ ನ್ಯಾಯಮೂರ್ತಿಗಳು
78. | ‘ಕಲ್ಯಾಣ ರಾಜ್ಯ’ ಎಂಬ ಪರಿಕಲ್ಪನೆಯು ಭಾರತ ಸಂವಿಧಾನದ ಈ ಭಾಗದಲ್ಲಿ ಕಂಡು ಬರುತ್ತದೆ | |
(ಎ) | ಮೂಲಭೂತ ಕರ್ತವ್ಯಗಳು | |
(ಬಿ) | ಪ್ರಸ್ತಾವನೆ | |
(ಸಿ) | ನಿರ್ದೇಶಕ ತತ್ವಗಳು | |
(ಡಿ) | ಮೂಲಭೂತ ಹಕ್ಕುಗಳು |
ಸರಿ ಉತ್ತರ
(ಸಿ) ನಿರ್ದೇಶಕ ತತ್ವಗಳು
79. | ಭಾರತ ಸಂವಿಧಾನದ ಯಾವ ಅನುಸೂಚಿಯು ಪಂಚಾಯ್ತಿಗಳ ಅಧಿಕಾರ, ಪ್ರಾಧಿಕಾರ ಮತ್ತು ಜವಾಬ್ದಾರಿಗಳನ್ನು ಒಳಗೊಂಡಿದೆ ? | |
(ಎ) | ಅನುಸೂಚಿ 4 | |
(ಬಿ) | ಅನುಸೂಚಿ 6 | |
(ಸಿ) | ಅನುಸೂಚಿ 7 | |
(ಡಿ) | ಅನುಸೂಚಿ 11 |
ಸರಿ ಉತ್ತರ
(ಡಿ) ಅನುಸೂಚಿ 11
80. | ಭಾರತ ಸಂವಿಧಾನದ ಯಾವ ಅನುಚ್ಛೇದವು ಮಾದ್ಯಮಗಳಿಗೆ ವಾರ್ತೆಗಳನ್ನು ಪ್ರಸಾರ ಮಾಡುವ ಅವಕಾಶ ನೀಡಿದೆ ? | |
(ಎ) | ಅನುಚ್ಛೇದ 19 | |
(ಬಿ) | ಅನುಚ್ಛೇದ 17 | |
(ಸಿ) | ಅನುಚ್ಛೇದ 16 | |
(ಡಿ) | ಅನುಚ್ಛೇದ 18 |
ಸರಿ ಉತ್ತರ
(ಎ) ಅನುಚ್ಛೇದ 19
81. | ಈ ಕೆಳಕಂಡವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆಯಲ್ಲ ? | |
(ಎ) | ಚುನಾವಣಾ ಆಯೋಗ | |
(ಬಿ) | ಯೋಜನಾ ಆಯೋಗ | |
(ಸಿ) | ರಾಷ್ಟ್ರೀಯ ಸಲಹಾ ಮಂಡಳಿ | |
(ಡಿ) | ಅಂತರ ರಾಜ್ಯ ಮಂಡಳಿ |
ಸರಿ ಉತ್ತರ
(ಬಿ) ಯೋಜನಾ ಆಯೋಗ or (ಸಿ) ರಾಷ್ಟ್ರೀಯ ಸಲಹಾ ಮಂಡಳಿ
82. | ಭಾರತ ಸಂವಿಧಾನದ ಯಾವ ಅನುಚ್ಛೇದವು ರಾಷ್ಟ್ರಪತಿಗಳ ವಿಶೇಷ ಭಾಷಣವನ್ನು ಕುರಿತಂತೆ ಒಳಗೊಂಡಿದೆ ? | |
(ಎ) | ಅನುಚ್ಛೇದ 84 | |
(ಬಿ) | ಅನುಚ್ಛೇದ 85 | |
(ಸಿ) | ಅನುಚ್ಛೇದ 86 | |
(ಡಿ) | ಅನುಚ್ಛೇದ 87 |
ಸರಿ ಉತ್ತರ
(ಡಿ) ಅನುಚ್ಛೇದ 87
83. | ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ? | |
(ಎ) | ಮುಖ್ಯಮಂತ್ರಿಗಳು | |
(ಬಿ) | ಭಾರತದ ಮುಖ್ಯ ನ್ಯಾಯಮೂರ್ತಿಗಳು | |
(ಸಿ) | ರಾಜ್ಯಪಾಲರು | |
(ಡಿ) | ಉಪರಾಷ್ಟ್ರಪತಿಗಳು |
ಸರಿ ಉತ್ತರ
(ಸಿ) ರಾಜ್ಯಪಾಲರು
84. | ದ್ಯುತಿ ಚಾಂದ್ ರವರು ಯಾವ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದಾರೆ ? | |
(ಎ) | ಅಥ್ಲೆಟಿಕ್ಸ್ | |
(ಬಿ) | ಕ್ರಿಕೆಟ್ | |
(ಸಿ) | ಬ್ಯಾಡ್ಮಿಂಟನ್ | |
(ಡಿ) | ಸ್ಕ್ವಾಷ್ |
ಸರಿ ಉತ್ತರ
(ಎ) ಅಥ್ಲೆಟಿಕ್ಸ್
85. | ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಯಾರು ನೇಮಿಸುತ್ತಾರೆ ? | |
(ಎ) | ಪ್ರಧಾನ ಮಂತ್ರಿ | |
(ಬಿ) | ಭಾರತದ ಮುಖ್ಯ ನ್ಯಾಯಮೂರ್ತಿಗಳು | |
(ಸಿ) | ಲೋಕಸಭೆಯ ಸಭಾಪತಿಗಳು | |
(ಡಿ) | ರಾಷ್ಟ್ರಪತಿಗಳು |
ಸರಿ ಉತ್ತರ
(ಡಿ) ರಾಷ್ಟ್ರಪತಿಗಳು
86. | ಚಾಲ್ಕೋಲಿಥಿಕ್ ಸಂಸ್ಕೃತಿಯ ಒಂದು ಬಗೆಯ ಜೋರ್ವೆ ಸಂಸ್ಕೃತಿಯನ್ನು ಭಾರತದ ಯಾವ ರಾಜ್ಯದಲ್ಲಿ ಪ್ರಥಮ ಬಾರಿಗೆ ಆವಿಷ್ಕರಿಸಲಾಯಿತು ? | |
(ಎ) | ಮಹಾರಾಷ್ಟ್ರ | |
(ಬಿ) | ಕರ್ನಾಟಕ | |
(ಸಿ) | ತಮಿಳುನಾಡು | |
(ಡಿ) | ರಾಜಸ್ತಾನ |
ಸರಿ ಉತ್ತರ
(ಎ) ಮಹಾರಾಷ್ಟ್ರ
87. | ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೌನ್ ರವರು ಏನನ್ನು ಸೃಜಿಸಿದರು? | |
(ಎ) | ಟ್ವಿಟ್ಟರ್ | |
(ಬಿ) | ಫೇಸ್ ಬುಕ್ | |
(ಸಿ) | ಇನ್ಸ್ಟಾಗ್ರಾಂ | |
(ಡಿ) | ವಾಟ್ಸ್ ಆಪ್ |
ಸರಿ ಉತ್ತರ
(ಡಿ) ವಾಟ್ಸ್ ಆಪ್
88. | ಕಂಪ್ಯೂಟರಿಗೆ ಸಂಬಂಧಪಟ್ಟಂತೆ AI ನ ವಿಸ್ತ್ರತ ರೂಪವೇನು ? | |
(ಎ) | ಆಟೋಮ್ಯಾಟಿಕ್ ಇನ್ಸ್ ಟ್ರೂಮೆಂಟ್ಸ್ | |
(ಬಿ) | ಆರ್ಟಿಫಿಷಿಯಲ್ ಇಂಟಲಿಜೆನ್ಸ್ | |
(ಸಿ) | ಆಟೋಮೇಟೆಡ್ ಇಂಟಲಿಜೆನ್ಸ್ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
ಸರಿ ಉತ್ತರ
(ಬಿ) ಆರ್ಟಿಫಿಷಿಯಲ್ ಇಂಟಲಿಜೆನ್ಸ್
89. | ಯಾವುವು 3 ಪ್ರಾಥಮಿಕ ಬಣ್ಣಗಳಾಗಿವೆ ? | |
(ಎ) | ಕೆಂಪು, ಹಸಿರು, ನೀಲಿ | |
(ಬಿ) | ಕಪ್ಪು, ಬಿಳಿ, ಕಂದು | |
(ಸಿ) | ಹಳದಿ, ಹಸಿರು, ನೀಲಿ | |
(ಡಿ) | ಬಿಳಿ, ಕೆಂಪು, ಹಸಿರು |
ಸರಿ ಉತ್ತರ
(ಎ) ಕೆಂಪು, ಹಸಿರು, ನೀಲಿ
90. | ಬ್ರಹ್ಮಗಿರಿ ವನ್ಯಜೀವಿಧಾಮವು ಯಾವ ರಾಜ್ಯದಲ್ಲಿದೆ ? | |
(ಎ) | ಕೇರಳ | |
(ಬಿ) | ಕರ್ನಾಟಕ | |
(ಸಿ) | ಒಡಿಸ್ಸಾ | |
(ಡಿ) | ಅಸ್ಸಾಂ |
ಸರಿ ಉತ್ತರ
(ಬಿ) ಕರ್ನಾಟಕ
91. | ಈ ಕೆಳಕಂಡವರಲ್ಲಿ ಯಾರನ್ನು ‘ಭಾರತದ ಪುನರುಜ್ಜೀವನದ ಪಿತಾಮಹ’ ಎಂದು ಕರೆಯುತ್ತಾರೆ ? | |
(ಎ) | ವಿಕ್ರಂ ಸಾರಾಭಾಯ್ | |
(ಬಿ) | ರಾಜಾರಾಮ್ ಮೋಹನ್ ರಾಯ್ | |
(ಸಿ) | ರವೀಂದ್ರನಾಥ ಟ್ಯಾಗೋರ್ | |
(ಡಿ) | ಲಾಲಾ ಲಜಪತ್ ರಾಯ್ |
ಸರಿ ಉತ್ತರ
(ಬಿ) ರಾಜಾರಾಮ್ ಮೋಹನ್ ರಾಯ್
92. | ‘CA(ClO)_2’ ಇದರ ಸಾಮಾನ್ಯ ಹೆಸರು ಯಾವುದು? | |
(ಎ) | ಬೇಕಿಂಗ್ ಸೋಡ | |
(ಬಿ) | ಬ್ಲೀಚಿಂಗ್ ಪೌಡರ್ | |
(ಸಿ) | ವಾಷಿಂಗ್ ಸೋಡ | |
(ಡಿ) | ಬೇಕಿಂಗ್ ಪೌಡರ್ |
ಸರಿ ಉತ್ತರ
(ಬಿ) ಬ್ಲೀಚಿಂಗ್ ಪೌಡರ್
93. | ಭಾರತವು ಯಾವ ದೇಶದೊಂದಿಗೆ ಜಂಟಿಯಾಗಿ ‘ಶಿನ್ಯೂ ಮೈತ್ರಿ’ ಎಂಬ ಸಮರಾಭ್ಯಾಸವನ್ನು ಆಯೋಜಿಸುತ್ತಿದೆ ? | |
(ಎ) | ನೇಪಾಳ | |
(ಬಿ) | ಚೀನಾ | |
(ಸಿ) | ರಷ್ಯಾ | |
(ಡಿ) | ಜಪಾನ್ |
ಸರಿ ಉತ್ತರ
(ಡಿ) ಜಪಾನ್
94. | ಭಾರತದ ಈ ಕೆಳಕಂಡ ನಗರವು ಸಮುದ್ರದ ನೀರಿನ ಕೊಳಗಳಿಗೆ ಪ್ರಸಿದ್ಧವಾಗಿದ್ದು, ಇದನ್ನು ‘ಪೂರ್ವದ ವೆನಿಸ್’ ಎಂದು ಕರೆಯಲಾಗುತ್ತದೆ. | |
(ಎ) | ಹೈದರಾಬಾದ್ | |
(ಬಿ) | ಜೈಪುರ | |
(ಸಿ) | ಮುಂಬೈ | |
(ಡಿ) | ಅಲಪ್ಪುಝ್ಹ |
ಸರಿ ಉತ್ತರ
(ಡಿ) ಅಲಪ್ಪುಝ್ಹ
95. | ವಿಜಯನಗರದ ಆಡಳಿತಗಾರನಾಗಿದ್ದ ಕೃಷ್ಣದೇವರಾಯನು ರಚಿಸಿದ ‘ಅಮುಕ್ತಮಾಲ್ಯದ’ ಕೃತಿಯು ಯಾವ ಭಾಷೆಯಲ್ಲಿದೆ ? | |
(ಎ) | ತೆಲುಗು | |
(ಬಿ) | ಸಂಸ್ಕೃತ | |
(ಸಿ) | ತಮಿಳು | |
(ಡಿ) | ಕನ್ನಡ |
ಸರಿ ಉತ್ತರ
(ಎ) ತೆಲುಗು
96. | ‘ಸತಪಥ ಬ್ರಾಹ್ಮಣ’ ಮತ್ತು ‘ತೈತ್ತಿರೀಯ ಬ್ರಾಹ್ಮಣ’ ಇವುಗಳು _________ ವೇದದ ಅಂಗಗಳಾಗಿವೆ ? | |
(ಎ) | ಋಗೈದ | |
(ಬಿ) | ಯಜುರ್ವೇದ | |
(ಸಿ) | ಸಾಮವೇದ | |
(ಡಿ) | ಅಥರ್ವವೇದ |
ಸರಿ ಉತ್ತರ
(ಬಿ) ಯಜುರ್ವೇದ
97. | ಭಾರತದಲ್ಲಿನ ‘ನೂನ್ ಮತಿ’ ಎಂಬ ಸ್ಥಳವು ಈ ಕೆಳಕಂಡ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ? | |
(ಎ) | ಉಪ್ಪಿನ ಕೈಗಾರಿಕೆಗಳು | |
(ಬಿ) | ಪೆಟ್ರೋಲಿಯಂ ಕೈಗಾರಿಕೆಗಳು | |
(ಸಿ) | ಕಾಗದದ ಕೈಗಾರಿಕೆಗಳು | |
(ಡಿ) | ಜವಳಿ ಕೈಗಾರಿಕೆಗಳು |
ಸರಿ ಉತ್ತರ
(ಬಿ) ಪೆಟ್ರೋಲಿಯಂ ಕೈಗಾರಿಕೆಗಳು
98. | ‘ರಾಷ್ಟ್ರೀಯ ಏಕತಾ ಪ್ರಶಸ್ತಿ’ ಯಾರ ಹೆಸರಿನಲ್ಲಿ ನೀಡಲಾಗುತ್ತದೆ ? | |
(ಎ) | ಮಹಾತ್ಮ ಗಾಂಧಿ | |
(ಬಿ) | ಜವಹರಲಾಲ್ ನೆಹರೂ | |
(ಸಿ) | ಸರ್ದಾರ್ ವಲ್ಲಭಭಾಯ್ ಪಟೇಲ್ | |
(ಡಿ) | ಬಿ.ಆರ್. ಅಂಬೇಡ್ಕರ್ |
ಸರಿ ಉತ್ತರ
(ಸಿ) ಸರ್ದಾರ್ ವಲ್ಲಭಭಾಯ್ ಪಟೇಲ್
99. | ಈ ಕೆಳಕಂಡ ಯಾವ ಸಚಿವಾಲಯವು ಇಂಡಿಯಾ ಗೇಟ್ ನ ಹುಲ್ಲುಹಾಸಿನ ಮೇಲೆ ಅಕ್ಟೋಬರ್ 2019 ರಲ್ಲಿ ‘ಸಾರಸ್ ಅಜೀವಿಕ ಮೇಳ’ ವನ್ನು ಆಯೋಜಿಸಿತ್ತು ? | |
(ಎ) | ರಸ್ತೆ ಸಾಗಣೆ ಮತ್ತು ಹೆದ್ದಾರಿ ಸಚಿವಾಲಯ | |
(ಬಿ) | ವಸತಿ ಮತ್ತು ನಗರ ಸಂಬಂಧಗಳ ಸಚಿವಾಲಯ | |
(ಸಿ) | ಗ್ರಾಮೀಣಾಭಿವೃದ್ಧಿ ಸಚಿವಾಲಯ | |
(ಡಿ) | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ |
ಸರಿ ಉತ್ತರ
(ಸಿ) ಗ್ರಾಮೀಣಾಭಿವೃದ್ಧಿ ಸಚಿವಾಲಯ
100. | ಈ ಕೆಳಕಂಡ ಯಾವ ಮಸೂರವನ್ನು ವಾಹನಗಳಲ್ಲಿ ಹಿನ್ನೋಟ ದರ್ಪಣವಾಗಿ ಬಳಸುತ್ತಾರೆ ? | |
(ಎ) | ನಿಮ್ಮ ಮಸೂರ | |
(ಬಿ) | ಪೀನ ಮಸೂರ | |
(ಸಿ) | ಸಾಮಾನ್ಯ ಮಸೂರ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
ಸರಿ ಉತ್ತರ
(ಬಿ) ಪೀನ ಮಸೂರ
ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ