WhatsApp Group Join Now
Telegram Group Join Now

Amlagalu Pratyamlagalu Mattu Lavanagalu

10ನೇ ತರಗತಿ ಅಧ್ಯಾಯ-2 ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು ‌ವಿಜ್ಞಾನ ನೋಟ್ಸ್, 10th Standard Science Chapter 2 Notes Question Answer Mcq in Kannada Amlagalu Pratyamlagalu Mattu Lavanagalu Question Answer Notes Pdf Class 10 Science Chapter 2 PDF Kseeb Solutions for Class 10 Science Chapter 2 in Kannada 10th Science 2nd Lesson Question Answer Pdf in Kannada Medium

Class 10th Science Chapter 2nd Notes in Kannada

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು Question Answer

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1) ನಿಮಗೆ ಮೂರು ಪ್ರನಾಳಗಳನ್ನು ನೀಡಲಾಗಿದೆ. ಒಂದರಲ್ಲಿ ಭಟ್ಟಿ ಇಳಿಸಿದ ನೀರು ಇನ್ನೆರಡರಲ್ಲಿ ಕ್ರಮವಾಗಿ ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ದ್ರಾವಣಗಳಿವೆ. ನಿಮಗೆ ಕೇವಲ ಕೆಂಪು ಲಿಟ್ಮಸ್‌ ಕಾಗದವನ್ನು ಮಾತ್ರ ನೀಡಿದರೆ ಪ್ರನಾಳದಲ್ಲಿನ ಪ್ರತಿಯೊಂದು ಮಾದರಿಯನ್ನು ಹೇಗೆ ಗುರುತಿಸುವಿರಿ?

ಪ್ರತಿಯೊಂದು ಪ್ರನಾಳದಲ್ಲಿರುವ ದ್ರಾವಣವನ್ನು ಕೆಂಪು ಲಿಟ್ರಸ್ ಕಾಗದ ಬಳಸಿ ಪರೀಕ್ಷಿಸಬೇಕು.ಕೆಂಪು ಲಿಟ್ರಸ್ ಕಾಗದವನ್ನು ಒಂದು ಪ್ರನಾಳದಲ್ಲಿನ ದ್ರಾವಣದಲ್ಲಿ ಮುಳುಗಿಸಿದಾಗ ಅದು ನೀಲಿ ಬಣ್ಣಕ್ಕೆ ಬದಲಾದರೆ ಆ ದ್ರಾವಣವು ಪ್ರತ್ಯಾಮ್ಲ ಎಂದು , ಅದೇ ಕಾಗದವನ್ನು ಇನ್ನೊಂದು ಪ್ರನಾಳದಲ್ಲಿನ ದ್ರಾವಣದಲ್ಲಿ ಮುಳುಗಿಸಿದಾಗ ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಅದು ಆಮ್ಲಎಂದು , ಮತ್ತು ಯಾವುದೇ ಬಣ್ಣ ಬದಲಾವಣೆ ತೋರಿಸದೇ ಇರುವ ದ್ರಾವಣವು ಭಟ್ಟಿ ಇಳಿಸಿದ ನೀರು ಎಂದು ತೀರ್ಮಾನಿಸಬಹುದು .

2) ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಡಬಾರದು ಏಕೆ?

ಮೊಸರು ಮತ್ತು ಹುಳಿ ಪದಾರ್ಥಗಳಲ್ಲಿ ಆಮ್ಲಗಳಿರುವ ಕಾರಣ ಅವು ಹಿತ್ತಾಳೆ ಅಥವಾ ತಾಮ್ರದ ಜೊತೆ ವರ್ತಿಸಿ ಅವುಗಳ ಸಂಯುಕ್ತಗಳನ್ನು ಉತ್ಪತ್ತಿ ಮಾಡಿ ಆಹಾರ ಪದಾರ್ಥವನ್ನು ವಿಷಕಾರಿಯನ್ನಾಗಿಸಬಹುದು .

3) ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಸಾಮಾನ್ಯವಾಗಿ ಯಾವ ಅನಿಲ ಬಿಡುಗಡೆಯಾಗುತ್ತದೆ ? ಉದಾಹರಣೆಯೊಂದಿಗೆ ವಿವರಿಸಿ. ಈ ಅನಿಲದ ಅಸ್ತಿತ್ವವನ್ನು ನೀವು ಹೇಗೆ ಪರೀಕ್ಷಿಸುವಿರಿ.

ಹೈಡೋಜನ್ .

ಆಮ್ಲ + ಲೋಹ → ಲವಣ + ಹೈಡೋಜನ್ ಅನಿಲ. ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲವನ್ನು ಉರಿಯುತ್ತಿರುವ ಕಿಡಿಗೊಳ್ಳಿಯ ಸಮೀಪಕ್ಕೆ ತಂದಾಗ ಅದು ಸಶಬ್ದವಾಗಿ ಉರಿಯುತ್ತದೆ .

4) ಲೋಹೀಯ ಸಂಯುಕ್ತ ʼಎʼ ಸಾರರಿಕ್ತ ಹೈಡ್ರೋಕ್ಲೋರಿಕ್‌ ಆಮ್ಲದೊಂದಿಗೆ ವರ್ತಿಸಿ ಗುಳ್ಳೆಗಳನ್ನು ಉತ್ಪತ್ತಿ ಮಾಡುತ್ತದೆ. ಬಿಡುಗಡೆಯಾದ ಅನಿಲ ಉರಿಯುವ ಮೇಣದ ಬತ್ತಿಯನ್ನು ಆರಿಸುತ್ತದೆ. ಈ ಕ್ರಿಯೆಯಲ್ಲಿ ಉಂಟಾದ ಒಂದು ಸಂಯುಕ್ತ ಕ್ಯಾಲ್ಸಿಯಂ ಕ್ಲೊರೈಡ್‌ ಆದರೆ ಕ್ರಿಯೆಯ ಸರಿದೂಗಿಸಿದ ಸಮೀಕರಣ ಬರೆಯಿರಿ.

CaCO3 + 2HCI → CaCl₂ + CO₂ + H₂O

5) HCl, HNO3 ಇತ್ಯಾದಿಗಳು ಜಲೀಯ ದ್ರಾವಣದಲ್ಲಿ ಆಮ್ಲೀಯ ಗುಣಗಳನ್ನು ಪ್ರದರ್ಶಿಸುತ್ತವೆ. ಆದರೆ ಆಲ್ಕೋಹಾಲ್‌ ಮತ್ತು ಗ್ಲೂಕೋಸ್ ನಂತಹ ದ್ರಾವಣಗಳು ಆಮ್ಲೀಯ ಗುಣಗಳನ್ನು ಪ್ರದರ್ಶಿಸುವುದಿಲ್ಲ ಏಕೆ?

ಆಮ್ಲವು ನೀರಿನೊಂದಿಗೆ ವರ್ತಿಸಿ ಹೈಡೋಜನ್ ಅಯಾನ್ ಉತ್ಪತ್ತಿ ಮಾಡುತ್ತದೆ . ಆಮ್ಲಗಳಾದ HCl , H2SO4 , HNO , ಮತ್ತು CH COOH ನೀರಿನೊಂದಿಗೆ ವರ್ತಿಸಿ ಹೈಡೋಜನ್ ಅಯಾನ್ ( H ‘ ) ಉಂಟುಮಾಡುತ್ತದೆ.ಆದರೆ ಆಲ್ನೋಹಾಲ್ ಮತ್ತು ಗ್ಲೋಕೋಸ್ ನಂತಹ ಸಂಯುಕ್ತಗಳ ದ್ರಾವಣಗಳು ನೀರಿನಲ್ಲಿ ವಿಲೀನವಾದಾಗ ಹೈಡೋಜನ್ ಅಯಾನುಗಳನ್ನು ಉತ್ಪತ್ತಿ ಮಾಡದೆ ಇರುವ ಕಾರಣ ಆತ್ಮೀಯ ಗುಣವನ್ನು ಪ್ರದರ್ಶಿಸುವುದಿಲ್ಲ .

6) ಆಮ್ಲದ ಜಲೀಯ ದ್ರಾವಣ ವಿದ್ಯುತ್ತಿನ ವಾಹಕವಾಗಿದೆ ಏಕೆ?

ಆಮ್ಲದ ಜಲೀಯ ದ್ರಾವಣ ವಿದ್ಯುತ್ ವಾಹಕವಾಗಿರಲು ಕಾರಣ ಅದರಲ್ಲಿರುವ ಆವೇಶಯುಕ್ತ ಕಣಗಳಾದ ಅಯಾನುಗಳಿರುವುದು .

7) ಶುಷ್ಕ HCI ಅನಿಲ, ಶುಷ್ಕ ಲಿಟ್ಮಸ್‌ ಕಾಗದದ ಬಣ್ಣ ಬದಲಾಯಿಸುವುದಿಲ್ಲ ಏಕೆ?

ಶುಷ್ಕ HCI ಅನಿಲದಲ್ಲಿ ಹೈಡೋಜನ್ ಅಯಾನುಗಳು ಇಲ್ಲದಿರುವ ಕಾರಣ ಅದು ಆಮ್ಮಿಯ ಗುಣವನ್ನು ಪ್ರದರ್ಶಿಸುವುದಿಲ್ಲ .

8) ಆಮ್ಲವನ್ನು ಸಾರರಿಕ್ತಗೊಳಿಸುವಾಗ, ಆಮ್ಲವನ್ನೇ ನೀರಿಗೆ ಸೇರಿಸಬೇಕೆಂದೂ ಮತ್ತು ಆಮ್ಲಕ್ಕೆ ನೀರನ್ನು ಸೇರಿಸಬಾರದೆಂದೂ ಶಿಫಾರಸ್ಸು ಮಾಡುವುದೇಕೆ?

ನೀರನ್ನು ಆಮ್ಲಕ್ಕೆ ಸೇರಿಸಿದರೆ ಉತ್ಪತ್ತಿಯಾಗುವ ಉಷ್ಣವು ಮಿಶ್ರಣವು ಹೊರಸಿಡಿಯುವಂತೆ ಮಾಡಬಹುದು ಮತ್ತು ಸುಟ್ಟ ಗಾಯಗಳನ್ನು ಉಂಟುಮಾಡಬಹುದು .

9) ಆಮ್ಲದ ದ್ರಾವಣವನ್ನು ಸಾರರಿಕ್ತಗೊಳಿಸಿದಾಗ ಹೈಡ್ರೋನಿಯಂ ಅಯಾನು (H3O)+ಗಳ ಸಾರತೆಯ ಮೇಲೆ ಉಂಟಾಗುವ ಪರಿಣಾಮವೇನು?

ಆಮ್ಲದ ದ್ರಾವಣವನ್ನು ಸಾರರಿಕ್ತಗೊಳಿಸಿದಾಗ ಏಕಮಾನ ಗಾತ್ರದಲ್ಲಿರುವ ಅಯಾನುಗಳ ಸಾರತೆಯು ಕಡಿಮೆಯಾಗುತ್ತದೆ .

10) ಸೋಡಿಯಂ ಹೈಡ್ರಾಕ್ಸೈಡ್‌ ನ ದ್ರಾವಣದಲ್ಲಿ ಹೆಚ್ಚಿನ ಪ್ರಮಾಣದ ಪ್ರತ್ಯಾಮ್ಲವನ್ನು ವಿಲೀನಗೊಳಿಸಿದಾಗ ಹೈಡ್ರಾಕ್ಸೈಡ್‌ ಅಯಾನು (OH) ಗಳ ಸಾರತೆಯ ಮೇಲೆ ಉಂಟಾಗುವ ಪರಿಣಾಮವೇನು?

ಹೈಡ್ರಾಕ್ಸೆಡ್ ಅಯಾನುಗಳ ಸಾರತೆಯು ಕಡಿಮೆಯಾಗುತ್ತದೆ .

11) ನಿಮ್ಮಲ್ಲಿ ʼಎʼ ಮತ್ತು ʼಬಿʼ ಎಂವ ಎರಡು ದ್ರಾವಣಗಳಿವೆ. ದ್ರಾವಣ ʼಎʼ ಯ pH 6 ದ್ರಾವಣ ʼಬಿʼ ಯ pH ಮತ್ತು ಯಾವ ದ್ರಾವಣದಲ್ಲಿ ಹೈಡ್ರೋಜನ್‌ ಅಯಾನುಗಳ ಸಾರತೆ ಹೆಚ್ಚಿದೆ? ಇವುಗಳಲ್ಲಿ ಯಾವುದು ಆಮ್ಲ ಯಾವುದು ಪ್ರತ್ಯಾಮ್ಲ ?

pH ಮೌಲ್ಯ 7 ಕ್ಕಿಂತ ಕಡಿಮೆಯಿದ್ದರೆ ಅದು ಆತ್ಮೀಯ ಮತ್ತು 7 ಕ್ಕಿಂತ ಜಾಸ್ತಿ ಇದ್ದರೆ ಅದು ಪ್ರತ್ಯಾಮೀಯ . ಆದ್ದರಿಂದ pH 6 ಇರುವ ದ್ರಾವಣವು ಆತ್ಮೀಯ ಮತ್ತು ಅದರಲ್ಲಿ ಹೈಡೋಜನ್ ಅಯಾನಗಳ ಸಾರತೆ ಹೆಚ್ಚು . pH 8 ಇರುವ ದ್ರಾವಣವು ಪ್ರತ್ಯಾಮ್ಲೀಯವಾಗಿರುತ್ತದೆ .

12) ದ್ರಾವಣದ ಸ್ವಭಾವದ ಮೇಲೆ H+(aq) ಅಯಾನುಗಳ ಸಾರತೆಯು ಯಾವ ಪರಿಣಾಮ ಹೊಂದಿದೆ?

H+ ಅಯಾನುಗಳ ಸಾರತೆಯು ಅಧಿಕವಾಗಿದ್ದಲ್ಲಿ ದ್ರಾವಣವು ಆಮೀಯವಾಗುತ್ತದೆ ಮತ್ತು H ಅಯಾನುಗಳ ಸಾರತೆಯು ಕಡಿಮೆಯಿದ್ದಲ್ಲಿ ದ್ರಾವಣವು ಪ್ರತ್ಯಾಮ್ಲೀಯವಾಗಿರುತ್ತದೆ .

13) ಪ್ರತ್ಯಾಮ್ಲೀಯ ದ್ರಾವಣಗಳೂ H+(aq) ಅಯಾನುಗಳನ್ನು ಹೊಂದಿವೆಯೇ? ಹೌದಾದರೆ ಅವು ಏಕೆ ಪ್ರತ್ಯಾಮ್ಲೀಯವವಾಗಿದೆ?

ಪ್ರತ್ಯಾಮ್ಲೀಯ ದ್ರಾವಣಗಳು H+ಅಯಾನುಗಳನ್ನು ಹೊಂದಿವೆ , ಆದರೆ ಅದರ ಸಾರತೆ ಕಡಿಮೆ ಇರುತ್ತದೆ . ಅವು ಪ್ರತ್ಯಾಮೀಯವಾಗಿರಲು ಕಾರಣ ಅವುಗಳಲ್ಲಿರುವ OH ಅಯಾನುಗಳ ಸಾರತೆ ಅಧಿಕವಾಗಿರುವುದು

14) ಯಾವ ಸಂದರ್ಭಗಳಲ್ಲಿ ಒಬ್ಬ ರೈತ ತನ್ನ ಕೃಷಿ ಭೂಮಿಯ ಮಣ್ಣಿಗೆ ಸುಟ್ಟ ಸುಣ್ಣ ( ಕ್ಯಾಲ್ಸಿಯಂ ಆಕ್ಸೈಡ್ )‌ ಅಥವಾ ಅರಳಿದ ಸುಣ್ಣ ( ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌ ) ಅಥವಾ ಸೀಮೆಸುಣ್ಣ ( ಕ್ಯಾಲ್ಸಿಯಂ ಕಾರ್ಬೋನೇಟ್)‌ ಬೆರೆಸುತ್ತಾನೆ?

ರೈತನ ಕೃಷಿ ಭೂಮಿಯ ಮಣ್ಣು ಆತ್ಮೀಯವಾಗಿದ್ದರೆ ಆಗ ಅದನ್ನು ಪ್ರತ್ಯಾಮ್ಲೀಕರಿಸಲು ಅದಕ್ಕೆ ಸುಟ್ಟ ಸುಣ್ಣ , ಅರಳಿದ ಸುಣ್ಣ ಅಥವಾ ಸೀಮೆಸುಣ್ಣ ಬೆರೆಸುತ್ತಾರೆ .

15) CaOCl2 ಸಂಯುಕ್ತದ ಸಾಮಾನ್ಯ ಹೆಸರೇನು?

ಬ್ಲೀಚಿಂಗ್ ಪೌಡರ್ .

16) ಕ್ಲೋರಿನ್‌ ನೊಂದಿಗೆ ವರ್ತಿಸಿದಾಗ ಚಲುವೆ ಪುಡಿಯನ್ನು ಉತ್ಪತ್ತಿ ಮಾಡುವ ವಸ್ತುವನ್ನು ಹೆಸರಿಸಿ.

ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ( Ca (OH)2 )

17) ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತವನ್ನು ಹೆಸರಿಸಿ.

ವಾಷಿಂಗ್ ಸೋಡಾ ( Na2 CO3 .10H2O ) .

18) ಸೋಡಿಯಂ ಹೈಡ್ರೋಜನ್‌ ಕಾರ್ಬೋನೆಟ್‌ ದ್ರಾವಣವನ್ನು ಕಾಸಿದರೆ ಏನಾಗುತ್ತದೆ? ಈ ಕ್ರಿಯೆಯ ಸಮೀಕರಣವನ್ನು ಬರೆಯಿರಿ

ಸೋಡಿಯಂ ಹೈಡೋಜನ್ ಕಾರ್ಬೋನೇಟ್ ಅನ್ನು ಕಾಯಿಸಿದಾಗ ಸೋಡಿಯಂ ಕಾರ್ಬೋನೇಟ್ ಮತ್ತು ನೀರನ್ನು ಉತ್ಪತ್ತಿ ಮಾಡಿ ಇಂಗಾಲದ ಡೈ ಆಕ್ಸೆಡ್ ನ್ನು ಬಿಡುಗಡೆ ಮಾಡುತ್ತದೆ .

2NaHCO3 → Na2CO3 + H2O + CO2

19) ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮತ್ತು ನೀರು ಇವುಗಳ ನಡುವಿನ ಕ್ರಿಯೆಯನ್ನು ತೋರಿಸುವ ಸಮೀಕರಣ ಬರೆಯಿರಿ.

19.CaSO4.1/2 H₂O + 1 1 / 2H₂O →CaSO4.2H₂O ( ಜಿಪ್ಸಂ)

10th Science Chapter 2 Question Answer in Kannada

ಅಭ್ಯಾಸ ಪ್ರಶ್ನೆಗಳು

1) ಒಂದು ದ್ರಾವಣ ಕೆಂಪು ಲಿಟ್ಮಸ್‌ ನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ PH ಮೌಲ್ಯ

d) 10

2) ಒಂದು ದ್ರಾವಣ ಪುಡಿ ಮಾಡಿದ ಮೊಟ್ಟಯ ಚಿಪ್ಪುಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ಸುಣ್ಣದ ತಿಳಿನೀರನ್ನು ಬಿಳಿಯಾಗಿಸುತ್ತದೆ. ದ್ರಾವಣ ಇದನ್ನು ಒಳಗೊಂಡಿದೆ.

b) HCl

3) 10mL NaOH ದ್ರಾವಣವು 8mL HCl ದ್ರಾವಣದಿಂದ ಸಂಪೂರ್ಣವಾಗಿ ತಟಸ್ಥೀಕರಣಗೊಳಿಸಲ್ಪಡುತ್ತದೆ. ನಾವು ಇದೇ NaOH ದ್ರಾವಣವನ್ನು 20mL ನಷ್ಟು ತೆಗೆದುಕೊಂಡರೆ, ಇದನ್ನು ತಟಸ್ಥಗೊಳಿಸಲು ಬೇಕಾದ HCl ದ್ರಾವಣದ ಪ್ರಮಾಣ.

d ) 16ml

4) ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣದ ಚಿಕಿತ್ಸೆಗೆ ಬಳಸಲಾಗುತ್ತದೆ?

c ) ಆಮ್ಲಶಾಮಕ

5) ಈ ಕೆಳಗಿನ ಸಂದರ್ಭಗಳಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಗಳ ಪದ ಸಮೀಕರಣ ಮತ್ತು ನಂತರ ಸರಿದೂಗಿಸಿದ ಸಮೀಕರಣ ಬರೆಯಿರಿ

a ) ಸಾರರಿಕ್ತ ಸಲ್ಪ್ಯೂರಿಕ್ ಆಮ್ಲ ಸತುವಿನ ಚೂರಿನೊಂದಿಗೆ ವರ್ತಿಸಿದಾಗ

H2SO4+Zn → ZnSO4+H2

6) ಆಲ್ಕೋಹಾಲ್‌ ಮತ್ತು ಗ್ಲೂಕೋಸ್ ನಂತಹ ಸಂಯುಕ್ತಗಳೂ ಸಹ ಹೈಡ್ರೋಜನ್‌ ಹೊಂದಿವೆಯಾದರೂ ಅವುಗಳನ್ನು ಆಮ್ಲಗಳೆಂದು ವರ್ಗೀಕರಿಸಲಾಗಿಲ್ಲ. ಇದನ್ನು ಸಾಧಿಸಲು ಒಂದು ಚಟುವಟಿಕೆಯನ್ನು ವಿವರಿಸಿ

ರಬ್ಬರ್ ಕಾರ್ಕ್ ಮೇಲೆ ಎರಡು ಮೊಳೆಗಳನ್ನು ಜೋಡಿಸಬೇಕು.ಮತ್ತು ಅದನ್ನು 100 ml ಬೀಕರಿನಲ್ಲಿಡಬೇಕು.ಮೊಳೆಗಳನ್ನು 6V ಬ್ಯಾಟರಿಯ ಎರಡು ದ್ರುವಗಳಿಗೆ ಸ್ವಿಚ್ ಮತ್ತು ಬಲ್ಟ್ ಮೂಲಕಸಂಪರ್ಕಿಸಬೇಕು. ಈಗ ಬೀಕರಿಗೆ ಸ್ವಲ್ಪ ಸಾರರಿಕ್ತ HCI ಸುರಿಯಬೇಕು.ಮತ್ತು ವಿದ್ಯುತ್ ಹಾಯಿಸಬೇಕು . ಗ್ಲೋಕೋಸ್ ಮತ್ತು ಆಲ್ನೋಹಾಲ್ ದ್ರಾವಣಗಳೊಂದಿಗೆ ಪ್ರತ್ಯೇಕವಾಗಿ ಈ ಚಟುವಟಿಕೆಯನ್ನು ಪುನರಾವರ್ತಿಸಬೇಕು.ಬೀಕರಿನಲ್ಲಿ ಆಮ್ಲ ಇದ್ದಾಗ ಬಲ್ಸ್ ಬೆಳಗುತ್ತದೆ ಆದರೆ ಗ್ಲುಕೋಸ್ ಮತ್ತು ಆಲ್ನೋಹಾಲ್ ಇದ್ದಾಗ ಬೆಳಗುವುದಿಲ್ಲ . ಬಲ್ಸ್‌ನ ಉರಿಯುವಿಕೆಯು ದ್ರಾವಣದ ಮೂಲಕ ವಿದ್ಯುತ್ ಪ್ರವಾಹ ಹರಿಯುವುದನ್ನು ಸೂಚಿಸುತ್ತದೆ . ದ್ರಾವಣದಲ್ಲಿ ವಿದ್ಯುತ್ವವಾಹವು ಅಯಾನುಗಳ ಮೂಲಕ ಸಾಗಿಸಲ್ಪಡುತ್ತದೆ . ಗೂಕೋಸ್ , ದ್ರಾವಣದಲ್ಲಿ ಅಯಾನುಗಳನ್ನು ಉಂಟುಮಾಡದಿರುವ ಕಾರಣ ವಿದ್ಯುತ್ ಹರಿಯುವುದಿಲ್ಲ .

class 10th science chapter 2nd notes

10th class science chapter 2 question answer in kannada

7) ಮಳೆನೀರು ವಿದ್ಯುತ್‌ ಪ್ರವಾಹವನ್ನು ಪ್ರವಹಿಸಲು ಬಿಡುತ್ತದೆ. ಆದರೆ ಅಸವಿತ ನೀರು ಬಿಡುವುದಿಲ್ಲ ಏಕೆ?

ಅಸವಿತ ನೀರು ಅತ್ಯಂತ ಶುದ್ಧ ನೀರಾಗಿರುವ ಕಾರಣ ಮತ್ತು ಅದರಲ್ಲಿ ಯಾವುದೇ ಅಯಾನುಗಳು ಇಲ್ಲದಿರುವ ಕಾರಣ ಅದು ವಿದ್ಯುತ್ ಹರಿಯಲು ಬಿಡುವುದಿಲ್ಲ . ಆದರೆ ಮಳೆ ನೀರು ಅಶುದ್ಧವಾಗಿರುತ್ತದೆ ಮತ್ತು ಸಾಕಷ್ಟು ಅಯಾನುಗಳನ್ನು ಹೊಂದಿರುತ್ತದೆ.ಹಾಗಾಗಿ ಅದು ವಿದ್ಯುತ್ ಹರಿಯಲು ಬಿಡುತ್ತದೆ .

8) ಆಮ್ಲಗಳು ನೀರಿನ ಅನುಪಸ್ಥಿತಿಯಲ್ಲಿ ಆಮ್ಲೀಯ ಸ್ವಭಾವವನ್ನು ಏಕೆ ತೋರಿಸುವುದಿಲ್ಲ?

ಏಕೆಂದರೆ ಆಮ್ಲಗಳು ಹೈಡೋಜನ್ ಅಯಾನುಗಳಾಗಿ ವಿಲೀನಗೊಳ್ಳುವುದು ನೀರಿನಲ್ಲಿ ಮಾತ್ರ ಆತ್ಮೀಯ ಸ್ವಭಾವಕ್ಕೆ ಹೈಡ್ರೋಜನ್ ಅಯಾನುಗಳ ಅವಶ್ಯಕತೆ ಇದೆ . ‌

9) A.B.C.D ಮತ್ತು E ಈ ಐದು ದ್ರಾವಣಗಳನ್ನು ಸಾರ್ವತ್ರಿಕ ಸೂಚಕದಿಂದ ಪರೀಕ್ಷಿಸಿದಾಗ ಅನುಕ್ರಮವಾಗಿ 4, 11, 7, ಮತ್ತು 9 pH ತೋರಿಸಿವೆ. ಯಾವ ದ್ರಾವಣವು ಹೈಡೋಜನ್ ಅಯಾನುಗಳ ಸಾರತೆಯ ಏರಿಕೆ ಕ್ರಮದಲ್ಲಿ pH ಮೌಲ್ಯವನ್ನು ಕ್ರಮಗೊಳಿಸಿ.

a ) ತಟಸ್ಥ – D pH – 7

b ) ಪ್ರಬಲವಾಗಿ ಪ್ರತ್ಯಾಮ್ಲೀಯ – C pH – 11

c ) ಪ್ರಬಲವಾಗಿ ಆಮ್ಲೀಯ – B pH – 1

d ) ದುರ್ಬಲ ಆಮ್ಲೀಯ – A pH – 4

e ) ದುರ್ಬಲ ಪ್ರತ್ಯಾಮ್ಲೀಯ – E pH – 9

11 < 9 < 7 < 4 < 1

10) ಪ್ರನಾಳ A ಮತ್ತು B ಗಳಲ್ಲಿ ಸಮಾನ ಉದ್ದದ ಮೆಗ್ನೀಷಿಯಂ ಪಟ್ಟಿಗಳನ್ನು ತೆಗೆದುಕೊಳ್ಳಲಾಗಿದೆ.ಪ್ರನಾಳ A ಗೆ ಹೈಡ್ರೋಕ್ಲೋರಿಕ್‌ ಆಮ್ಲ ( HCl) ನ್ನು ಸೇರಿಸಲಾಗಿದೆ. ಪ್ರನಾಳ B ಗೆ ಅಸಿಟಿಕ್‌ ಆಮ್ಲ (CH3COOH)ವನ್ನು ಸೇರಿಸಲಾಗಿದೆ. ತೆಗೆದುಕೊಂಡ ಎರಡೂ ಆಮ್ಲಗಳ ಪ್ರಮಾಣ ಮತ್ತು ಸಾರತೆ ಒಂದೇ ಆಗಿದೆ. ಯಾವ ಪ್ರನಾಳದಲ್ಲಿ ಹೆಚ್ಚು ತೀವ್ರವಾಗಿ ಅನಿಲದ ಗುಳ್ಳೆಗಳು ಉಂಟಾಗುತ್ತವೆ ಮತ್ತು ಏಕೆ?

ಪ್ರನಾಳ A ದಲ್ಲಿ ಹೆಚ್ಚು ತೀವ್ರವಾಗಿ ಅನಿಲದ ಗುಳ್ಳೆಗಳು ಉಂಟಾಗುತ್ತದೆ ಏಕೆಂದರೆ ಹೈಡೋಕ್ಲೋರಿಕ್ ಆಮ್ಲವು ಅಸಿಟಿಕ್ ಆಮ್ಲಕ್ಕಿಂತ ಹೆಚ್ಚು ಪ್ರಬಲವಾಗಿದೆ ಮತ್ತು ವೇಗವಾಗಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ.

11) ತಾಜಾ ಹಾಲಿನ pH 6. ಅದು ಮೊಸರಾದಂತೆ ಅದರ pH ಹೇಗೆ ಬದಲಾಗುತ್ತದೆ ಎಂದು ನೀವು ಭಾವಿಸುತ್ತೀರಿ? ನಿಮ್ಮ ಉತ್ತರಕ್ಕೆ ವಿವರಣೆ ನೀಡಿ

ಹಾಲು ಮೊಸರಾದಂತೆ ಅದರ pH ಕಡಿಮೆಯಾಗುತ್ತದೆ ಯಾಕೆಂದರೆ ಮೊಸರು ಹುಳಿಯಾಗುತ್ತದೆ ಮತ್ತು ಅದರಲ್ಲಿರುವ ಆಮ್ಲವು pH ಕಡಿಮೆಯಾಗುವಂತೆ ಮಾಡುತ್ತದೆ .

12) ಒಬ್ಬ ಹಾಲು ಮಾರುವವನು ತಾಜಾ ಹಾಲಿಗೆ ಅತ್ಯಲ್ಪ ಪ್ರಮಾಣದ ಅಡುಗೆ ಸೋಡಾ ಸೇರಿಸುತ್ತಾನೆ.

a) ಅವನು ತಾಜಾ ಹಾಲಿನ pH ಅನ್ನು 6 ರಿಂದ ಸ್ವಲ್ಪ ಕ್ಷಾರೀಯತೆಯ ಕಡೆಗೆ ಏಕೆ ಬದಲಾಯಿಸುತ್ತಾನೆ?

b) ಈ ಹಾಲು ಮೊಸರಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದೇಕೆ?

a ) ಏಕೆಂದರೆ ಕ್ಷಾರೀಯ ಹಾಲು ಬೇಗನೆ ಕೆಟ್ಟು ಹೋಗುವುದಿಲ್ಲ . ( ಹುಳಿಯಾಗುವುದಿಲ್ಲ ) .

b ) ಯಾಕೆಂದರೆ ಉತ್ಪತ್ತಿಯಾಗುವ ಆಮ್ಲವು ಕ್ಷಾರದೊಂದಿಗೆ ತಟಸ್ತೀಕರಣಗೊಂಡು ಮೊಸರಾಗಲು ಸಮಯ ತೆಗೆದುಕೊಳ್ಳತ್ತದೆ .

13) ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ನ್ನು ತೇವಾಂಶ ನಿರೋಧಕ ಸಂಗ್ರಾಹಕದಲ್ಲಿ ಸಂಗ್ರಹಿಸಿ ಇಡಬೇಕು ಏಕೆ? ವಿವರಿಸಿ.

ಏಕೆಂದರೆ ಅದು ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಂಡು ಘನ ಜಿಪ್ಸಂ ಲವಣವಾಗಿ ಪರಿವರ್ತಿಸಲ್ಪಡುತ್ತದೆ .

CaSO4. 1/2 H₂O + 11/₂ H₂O → CaSO4.2H₂O

14) ತಟಸ್ಥೀಕರಣ ಕ್ರಿಯೆ ಎಂದರೇನು? ಎರಡು ಉದಾಹರಣೆ ಕೊಡಿ.

ಆಮ್ಮ ಮತ್ತು ಪ್ರತ್ಯಾಮ್ಲಗಳು ಪರಸ್ಪರ ವರ್ತಿಸಿ ನೀರು ಮತ್ತು ಲವಣವನ್ನು ಉತ್ಪತ್ತಿ ಮಾಡುವ ರಾಸಾಯನಿಕ ಕ್ರಿಯೆಯೇ ತಟಸೀಕರಣ ಕ್ರಿಯೆ.ಈ ಕ್ರಿಯೆಯಲ್ಲಿ ಉಷ್ಣದ ರೂಪದಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ .

NaOH + HCl → NaCl+H2O

( ಆಮ್ಮ ) ( ಪ್ರತ್ಯಾಮ್ಲ ) ( ಲವಣ ) ( ನೀರು )

Mg ( OH ) ₂ + 2HCl → MgCl₂ + 2H₂O

15) ವಾಷಿಂಗ್‌ ಸೋಡಾ ಮತ್ತು ಅಡುಗೆ ಸೋಡಾಗಳ ಎರಡು ಪ್ರಮುಖ ಉಪಯೋಗಗಳನ್ನು ಬರೆಯಿರಿ.

a ) ವಾಷಿಂಗ್ ಸೋಡಾ :

i ) ಗಾಜು , ಸಾಬೂನು ಮತ್ತು ಕಾಗದ ಕಾರ್ಖಾನೆಯಲ್ಲಿ ಉಪಯೋಗಿಸುವರು .

ii ) ನೀರಿನ ಗಡಸುತನ ನಿವಾರಣೆಗೆ ಉಪಯೋಗಿಸುತ್ತಾರೆ .

b ) ಅಡುಗೆ ಸೋಡಾ :

i ) ಬೇಕಿಂಗ್ ಪುಡಿ ತಯಾರಿಕೆಯಲ್ಲಿ ಬಳಸುತ್ತಾರೆ .

ii ) ಬೆಂಕಿ ಆರಿಸುವ ಸೋಡಾ – ಆಸಿಡ್ ಉಪಕರಣಗಳಲ್ಲಿ ಬಳಸುತ್ತಾರೆ.

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment