FDA-2017 Paper-2 General KANNADA Questions with answers
ದಿನಾಂಕ 05.02.2017 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಕನ್ನಡ ಪತ್ರಿಕೆ – II (ವಿಷಯ ಸಂಕೇತ: 168)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.
ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1-9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರುತಿಸಿ.
ಉದಾಹರಣೆ : | ||
ಮೀನ್ ಎಂದರೆ | ||
(1) | ಹೊಳೆಯುವ | |
(2) | ಮೀಯು | |
(3) | ಮೇಯು | |
(4) | ಆಕಾಶ |
ಇಲ್ಲಿ ‘‘ಹೊಳೆಯುವ’’ ಎಂಬುದು ‘‘ಮೀನ್’’ನ ಅರ್ಥವನ್ನು ಹೇಳುವ ಪದ ಆದುದರಿಂದ (1)ನ್ನು ಗುರುತಿಸಬೇಕು.
1. | ‘‘ಕಡಸು’’ ಎಂದರೆ ………………. | |
(1) | ಗಟ್ಟಿ | |
(2) | ಹಸು | |
(3) | ನಾಶಪಡಿಸು | |
(4) | ಕತ್ತರಿಸು |
ಸರಿ ಉತ್ತರ
(2) ಹಸು
2. | ‘‘ಬಾನ್’’ ಎಂದರೆ ……………. | |
(1) | ಆಕಾಶ | |
(2) | ಸೂರ್ಯ | |
(3) | ಬಾನಿ | |
(4) | ಅನ್ನ |
ಸರಿ ಉತ್ತರ
(1) ಆಕಾಶ
3. | ‘‘ಕುರುಳು’’ ಎಂದರೆ ………….. | |
(1) | ಕೊರಳು | |
(2) | ಕರುಳು | |
(3) | ಕೂದಲು | |
(4) | ಒರಳು |
ಸರಿ ಉತ್ತರ
(3) ಕೂದಲು
4. | ‘‘ಕರಿಮುಖ’’ ಎಂದರೆ …………. | |
(1) | ಕಪ್ಪು ಮುಖದವನು | |
(2) | ಕೋತಿ | |
(3) | ಆನೆ | |
(4) | ಗಣಪತಿ |
ಸರಿ ಉತ್ತರ
(4) ಗಣಪತಿ
5. | ‘‘ಬೆನ್ನೀರು’’ ಎಂದರೆ ………….. | |
(1) | ಬೆವರು | |
(2) | ಬೆನ್ನಿಗೆ ಹಾಕುವ ನೀರು | |
(3) | ಬಿಸಿನೀರು | |
(4) | ಸಮುದ್ರ |
ಸರಿ ಉತ್ತರ
(3) ಬಿಸಿನೀರು
6. | ‘‘ಭ್ರಮರ’’ ಎಂದರೆ ………….. | |
(1) | ಭ್ರಮೆ | |
(2) | ಒಂದು ಜಾತಿಯ ಮರ | |
(3) | ಹೊಗೆ | |
(4) | ದುಂಬಿ |
ಸರಿ ಉತ್ತರ
(4) ದುಂಬಿ
7. | ‘‘ಕೇತನ’’ ಎಂದರೆ ………. | |
(1) | ಚೇತನ | |
(2) | ಕೇತು | |
(3) | ಬಾವುಟ | |
(4) | ಹೊಲಗದ್ದೆ |
ಸರಿ ಉತ್ತರ
(3) ಬಾವುಟ
8. | ‘‘ಒಲುಮೆ’’ ಎಂದರೆ …………. | |
(1) | ಓಲುವುದು | |
(2) | ಕುಲುಮೆ | |
(3) | ಪ್ರೀತಿ | |
(4) | ಒತ್ತಾಯ |
ಸರಿ ಉತ್ತರ
(3) ಪ್ರೀತಿ
9. | ‘‘ಕೌಸ್ತುಭಧರ’’ ಎಂದರೆ …………. | |
(1) | ಶಿವ | |
(2) | ವಿಷ್ಣು | |
(3) | ಬ್ರಹ್ಮ | |
(4) | ಭೀಮ |
ಸರಿ ಉತ್ತರ
(2) ವಿಷ್ಣು
ಸೂಚನೆಗಳು : ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10-17) ವಿರುದ್ಧಾರ್ಥಕ ಪದಗಳ ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರುತಿಸಿ.
ಉದಾಹರಣೆ : | ||
ತೆಂಕಣ | ||
(1) | ಮೂಡಣ | |
(2) | ಬಡಗಣ | |
(3) | ಪಡುವಣ | |
(4) | ತೆಗಣ |
ಇಲ್ಲಿ ‘‘ತೆಂಕಣ’’ ಇದಕ್ಕೆ ವಿರುದ್ಧಾರ್ಥಕ ರೂಪ‘‘ಬಡಗಣ’’ ಎಂಬುದು (2)ನ್ನು ಗುರುತಿಸಬಹುದು.
10. | ಆತಂಕ | |
(1) | ಅನಾತಂಕ | |
(2) | ಸಮಾಧಾನ | |
(3) | ನಿರಾಂತಕ | |
(4) | ಅತ್ಯಾತಂಕ |
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
11. | ಹಿಗ್ಗು | |
(1) | ದುಃಖ | |
(2) | ವಿಷಾದ | |
(3) | ಕುಗ್ಗು | |
(4) | ಉಬ್ಬು |
ಸರಿ ಉತ್ತರ
(3) ಕುಗ್ಗು
12. | ಶ್ವೇತ | |
(1) | ಕೃಷ್ಣ | |
(2) | ಕರಿಯ | |
(3) | ಕಾಳ | |
(4) | ಧವಳ |
ಸರಿ ಉತ್ತರ
(1) ಕೃಷ್ಣ (2) ಕರಿಯ
13. | ನಾಕ | |
(1) | ನರಕ | |
(2) | ಸ್ವರ್ಗ | |
(3) | ನಾಯಕ | |
(4) | ಮೂಕ |
ಸರಿ ಉತ್ತರ
(1) ನರಕ
14. | ಆದಿ | |
(1) | ಆರಂಭ | |
(2) | ಹಾದಿ | |
(3) | ಅಂತ್ಯ | |
(4) | ಅನಂತ |
ಸರಿ ಉತ್ತರ
(3) ಅಂತ್ಯ
15. | ನಿರ್ಗಮನ | |
(1) | ಸಂಗಮನ | |
(2) | ದುರ್ಗಮನ | |
(3) | ಸದ್ಗಮನ | |
(4) | ಆಗಮನ |
ಸರಿ ಉತ್ತರ
(4) ಆಗಮನ
16. | ಸೃಷ್ಟಿ | |
(1) | ವ್ಯಷ್ಠಿ | |
(2) | ನಾಶ | |
(3) | ಲಯ | |
(4) | ಪ್ರಳಯ |
ಸರಿ ಉತ್ತರ
(3) ಲಯ
17. | ಪ್ರೀತಿ | |
(1) | ಜಗಳ | |
(2) | ದ್ವೇಷ | |
(3) | ತಿರಸ್ಕಾರ | |
(4) | ಹೀನಾಯ |
ಸರಿ ಉತ್ತರ
(2) ದ್ವೇಷ
ಸೂಚನೆಗಳು : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 18-27) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆ ಮಾಡಿ ಗುರುತಿಸಿ.
ಉದಾಹರಣೆ : | ||
‘ಬೆಣ್ಣೆ ಹಚ್ಚು’’ | ||
(1) | ರೊಟ್ಟಿಗೆ ಬೆಣ್ಣೆ ಹಚ್ಚು | |
(2) | ಮೈಯುಜ್ಜುವುದು | |
(3) | ಹೊಗಳುವುದು | |
(4) | ಸೇವೆ ಮಾಡುವುದು |
ಇಲ್ಲಿ ‘ಸಿ’ ಸರಿಯಾದ ಅರ್ಥ ಆದುದರಿಂದ (3)ನ್ನು ಗುರುತಿಸಬೇಕು.
18. | ‘‘ಕೈಕೊಡು’’ | |
(1) | ಹಸ್ತಲಾಘವ ಮಾಡು | |
(2) | ಮೋಸ ಮಾಡು | |
(3) | ಸಹಾಯ ಮಾಡು | |
(4) | ದಾನ ನೀಡುವ ಕೈ |
ಸರಿ ಉತ್ತರ
(2) ಮೋಸ ಮಾಡು
19. | ‘‘ಮುಖಕ್ಕೆ ಮಂಗಳಾರತಿ ಎತ್ತು’’ | |
(1) | ಗೌರವ ನೀಡು | |
(2) | ಆರತಿ ಮಾಡಿ ಸಂತೋಷಿಸು | |
(3) | ಅವಮಾನ ಮಾಡು | |
(4) | ದಕ್ಷಿಣೆ ಕಾಸಿಗೆ ಆಸೆಪಡು |
ಸರಿ ಉತ್ತರ
(3) ಅವಮಾನ ಮಾಡು
20. | ‘‘ಆಕಾಶಕ್ಕೆ ಏಣಿ ಹಾಕು’ | |
(1) | ದೊಡ್ಡ ಏಣಿ ಹಾಕು | |
(2) | ಕೈಗೂಡದ್ದಕ್ಕೆ ಪ್ರಯತ್ನಿಸು | |
(3) | ಕಾಮನಬಿಲ್ಲು | |
(4) | ಮೋಡಗಳ ರಾಶಿ |
ಸರಿ ಉತ್ತರ
(2) ಕೈಗೂಡದ್ದಕ್ಕೆ ಪ್ರಯತ್ನಿಸು
21. | ‘‘ರಾಮಬಾಣ’’’ | |
(1) | ರಾಮ ಬಿಟ್ಟಿದ್ದ ಬಾಣ | |
(2) | ಔಷಧಿಯೊಂದರ ಹೆಸರು | |
(3) | ಹನುಮಂತ | |
(4) | ಸರಿಯಾದ ಉಪಾಯ |
ಸರಿ ಉತ್ತರ
(4) ಸರಿಯಾದ ಉಪಾಯ
22. | ‘‘ಎರಡು ನಾಲಿಗೆ’’ | |
(1) | ಒಂದು ಸಸ್ಯ | |
(2) | ಹಾವಿನ ನಾಲಿಗೆ | |
(3) | ಸುಳ್ಳಾಡುವುದು | |
(4) | ಹೊಟ್ಟೆ ಬಾಕತನ |
ಸರಿ ಉತ್ತರ
(3) ಸುಳ್ಳಾಡುವುದು
23. | ‘‘ಮೂಗು ತೂರಿಸು’’ | |
(1) | ಮೂಗಿಗೆ ಮೂಗುತಿ ತೂರಿಸುವುದು | |
(2) | ನೆಗಡಿಯಾಗುವುದು | |
(3) | ಮೂಗನ್ನು ಕೆರೆಯುವುದು | |
(4) | ಅನಗತ್ಯವಾಗಿ ಮಧ್ಯೆ ಪ್ರವೇಶಿಸುವುದು |
ಸರಿ ಉತ್ತರ
(4) ಅನಗತ್ಯವಾಗಿ ಮಧ್ಯೆ ಪ್ರವೇಶಿಸುವುದು
24. | ‘‘ಬಾಲ ಬಿಚ್ಚು’’ | |
(1) | ಕಟ್ಟಿದ್ದ ಕರುವನ್ನು ಬಿಚ್ಚುವುದು | |
(2) | ತೊಂದರೆ ಉಂಟು ಮಾಡುವುದು | |
(3) | ಜಡೆಯನ್ನು ಬಿಚ್ಚುವುದು | |
(4) | ಬಾಲವನ್ನು ಕತ್ತರಿಸುವುದು |
ಸರಿ ಉತ್ತರ
(2) ತೊಂದರೆ ಉಂಟು ಮಾಡುವುದು
25. | ‘‘ಟೋಪಿ ಹಾಕು’’ | |
(1) | ಕುಲಾವಿಯನ್ನು ಕಟ್ಟುವುದು | |
(2) | ಕಳ್ಳತನ ಮಾಡುವುದು | |
(3) | ರಕ್ಷಣೆ ಒದಗಿಸುವುದು | |
(4) | ಮೋಸ ಮಾಡುವುದು |
ಸರಿ ಉತ್ತರ
(4) ಮೋಸ ಮಾಡುವುದು
26. | ‘‘ಮೊಸಳೆ ಕಣ್ಣೀರು’’ | |
(1) | ಹೆಚ್ಚು ಪ್ರಮಾಣದ ಕಣ್ಣೀರು | |
(2) | ಕಡಿಮೆ ಪ್ರಮಾಣದ ಕಣ್ಣೀರು | |
(3) | ಈರುಳ್ಳಿ ಹೆಚ್ಚುವಾಗ ಸುರಿಯುವ ಕಣ್ಣೀರು | |
(4) | ಕಪಟ ದುಃಖ |
ಸರಿ ಉತ್ತರ
(4) ಕಪಟ ದುಃಖ
27. | ‘‘ಕಾಲು ಕೀಳು’’ | |
(1) | ಕಾಲಿನ ಶಸ್ತ್ರಚಿಕಿತ್ಸೆ | |
(2) | ಚಪ್ಪಲಿ | |
(3) | ಕಾಲುಮುಟ್ಟಿ ನಮಸ್ಕರಿಸು | |
(4) | ಓಡಿ ಹೋಗು |
ಸರಿ ಉತ್ತರ
(4) ಓಡಿ ಹೋಗು
ಸೂಚನೆಗಳು : ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28-33) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ.
ಉದಾಹರಣೆ : | ||
(1) | ಹುಡುಗಿ | |
(2) | ನವಿಲು | |
(3) | ಗಿಳಿ | |
(4) | ಕಿತ್ತಳೆ |
ಇಲ್ಲಿ ‘‘ಕಿತ್ತಳೆ’’ ಇತರ ಪದಗಳ ಜಾತಿಗೆ ಸೇರುವುದಿಲ್ಲ. ಆದುದರಿಂದ (4)ನ್ನು ಗುರುತಿಸಬೇಕು.
28. | ||
(1) | ಹಾಲು | |
(2) | ಮೊಸರು | |
(3) | ಬೆಣ್ಣೆ | |
(4) | ತುಪ್ಪ |
ಸರಿ ಉತ್ತರ
(1) ಹಾಲು
29. | ||
(1) | ವಸಂತ | |
(2) | ಹೇಮಂತ | |
(3) | ಕಾರ್ತೀಕ | |
(4) | ಶರತ್ |
ಸರಿ ಉತ್ತರ
(3) ಕಾರ್ತೀಕ
30. | ||
(1) | ಸವರ್ಣದೀರ್ಘ ಸಂಧಿ | |
(2) | ಆಗಮ ಸಂಧಿ | |
(3) | ಗುಣ ಸಂಧಿ | |
(4) | ವೃದ್ಧಿ ಸಂಧಿ |
ಸರಿ ಉತ್ತರ
(2) ಆಗಮ ಸಂಧಿ
31. | ||
(1) | ಎತ್ತು | |
(2) | ಆಡು | |
(3) | ಕಾಡು | |
(4) | ನೋಡು |
ಸರಿ ಉತ್ತರ
(4) ನೋಡು
32. | ||
(1) | ಕೆರೆ | |
(2) | ತೊರೆ | |
(3) | ಹೊಳೆ | |
(4) | ನದಿ |
ಸರಿ ಉತ್ತರ
(1) ಕೆರೆ
33. | ||
(1) | ಡಿ.ವಿ. ಗುಂಡಪ್ಪ | |
(2) | ವಿ. ಸೀತಾರಾಮಯ್ಯ | |
(3) | ತ್ರಿವೇಣಿ | |
(4) | ವೈದೇಹಿ |
ಸರಿ ಉತ್ತರ
(3) ತ್ರಿವೇಣಿ or (4) ವೈದೇಹಿ
ಸೂಚನೆಗಳು ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪ್ಪಿಲ್ಲದಿದ್ದರೆ ‘ತಪ್ಪಿಲ್ಲ’ ಎಂಬ (4)ನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 34-40).
ಉದಾಹರಣೆ : | ||
ಲೋಕಾಯುಕ್ತ ಲಂಚ ಹಗುರಣಕ್ಕೆ ಸಂಬಂಧಿಸಿ ಎಂಟು ಜನರ ಬಂಧನ | ||
(1) | ಹಾಗರಣ | |
(2) | ಹಗರಣ | |
(3) | ಹಗರನ | |
(4) | ಹಗರಾಣ |
ಇಲ್ಲಿ ಗೆರೆ ಎಳೆದ ‘‘ಹಗುರಣ’’ ತಪ್ಪಾಗಿದ್ದು ಅದರ ಸರಿಯಾದ ರೂಪವು ಹಗರಣ ಎಂದಾಗಿದೆ. ಆದುದರಿಂದ (2)ನ್ನು ಗುರುತಿಸಬೇಕು.
34. | ವಿದ್ಯುಚ್ಛಕ್ತಿ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. | |
(1) | ವಿದ್ಯುಚ್ಛಕ್ತಿ | |
(2) | ವಿಧ್ಯುತ್ಚಕ್ತಿ | |
(3) | ವಿಧ್ಯುಛಕ್ತಿ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
35. | ಈ ಕೆಳಗಿನ ಪದ್ಯವನ್ನು ವಿಸ್ಲೇಷಣೆ ಮಾಡಿರಿ | |
(1) | ವಿಶ್ಲೇಶಣೆ | |
(2) | ವಿಶ್ಲೇಷಣೆ | |
(3) | ವಿಷ್ಲೇಶಣೆ | |
(4) | ತಪ್ಪಿಲ್ಲ |
ಸರಿ ಉತ್ತರ
(2) ವಿಶ್ಲೇಷಣೆ
36. | ಕತ್ತೆಗೂ, ಕುದುರೆಗೂ ನಡುವಿನ ವ್ಯತ್ಯಾಸ ನಿಮಗೆ ಗೊತ್ತೆ ? | |
(1) | ವೆತ್ಯಾಸ | |
(2) | ವೆತ್ವಾಸ | |
(3) | ವ್ಯಥ್ಯಾಸ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
37. | ಇಲ್ಲಿ ಪ್ರತಿಭಟಣೆ ಮಾಡುವುದು ಒಳ್ಳೆಯದಲ್ಲ. | |
(1) | ಪ್ರತಿಬಟನೆ | |
(2) | ಪ್ರತಿಭಟನೆ | |
(3) | ಪ್ರತಿಭಠನೆ | |
(4) | ತಪ್ಪಿಲ್ಲ |
ಸರಿ ಉತ್ತರ
(2) ಪ್ರತಿಭಟನೆ
38. | ಸಂಪತ್ತಲ್ಲ , ಇಂದು ಆರೋಗ್ಯವೆ ಮಹದೈಶ್ವರ್ಯ | |
(1) | ಮಹದೇಶ್ವರ್ಯ | |
(2) | ಮಹಾದೈಶ್ವರ್ಯ | |
(3) | ಮಹದೈಷ್ವರ್ಯ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
39. | ಅರ್ಜುನನಿಗೆ ಸಾರಥಿಯಾಗಿ ಶ್ರೀ ಕೃಷ್ಣ ಪಾರ್ಥಸಾರಥಿ ಎಂಬ ಹೆಸರು ಪಡೆದನು. | |
(1) | ಪಾರ್ತಸಾರಥಿ | |
(2) | ಫಾರ್ಥಸಾರಥಿ | |
(3) | ಪಾರ್ಥಸಾರತಿ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
40. | ಆಕಾಶದಲ್ಲಿ ಕಾಮನಬಿಲ್ಲನ್ನು ಕಂಡು ಮಕ್ಕಳು ಹರ್ಶಪಟ್ಟರು. | |
(1) | ಅರ್ಷ | |
(2) | ಹರ್ಷ | |
(3) | ಅರ್ಶ | |
(4) | ತಪ್ಪಿಲ್ಲ |
ಸರಿ ಉತ್ತರ
(2) ಹರ್ಷ
ಸೂಚನೆಗಳು : ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 41-65)
ಉದಾಹರಣೆ : | ||
ನಡೆಯುತ್ತಿದೆ ಎಂಬುದು………ದ ಪದ. | ||
(1) | ಭೂತಕಾಲ | |
(2) | ವರ್ತಮಾನ ಕಾಲ | |
(3) | ಭವಿಷ್ಯತ್ ಕಾಲ | |
(4) | ಹಿಂದಿನ ಕಾಲ |
ಇಲ್ಲಿ ‘ವರ್ತಮಾನಕಾಲ’ ಎಂಬುದು ಸರಿಯಾದ ಉತ್ತರ ಆದುದರಿಂದ (2)ನ್ನು ಗುರುತಿಸಬೇಕು.
41. | ‘ಕಣ್ಣುಗಳು’ ಎನ್ನುವುದು ………. ವಚನ. | |
(1) | ಏಕ | |
(2) | ದ್ವಿ | |
(3) | ಬಹು | |
(4) | ಸಂಖ್ಯಾವಚನ |
ಸರಿ ಉತ್ತರ
(3) ಬಹು
42. | ‘ಮಾಡಿದ’ ಎಂಬುದು………..ದ ಉದಾಹರಣೆ. | |
(1) | ಭೂತಕೃದಂತ | |
(2) | ಭಾವಕೃದಂತ | |
(3) | ಕೃದಂತಾವ್ಯಯ | |
(4) | ತದ್ಧಿತಾಂತ |
ಸರಿ ಉತ್ತರ
(1) ಭೂತಕೃದಂತ
43. | ‘ಬಿಳುಪು’ ಎಂಬುದು ………. ಪದ. | |
(1) | ತದ್ಧಿತಾಂತ | |
(2) | ತದ್ಧಿತಾಂತ ಅವ್ಯಯ | |
(3) | ಭಾವಕೃದಂತ | |
(4) | ತದ್ಧಿತಾಂತ ಭಾವನಾಮ |
ಸರಿ ಉತ್ತರ
(4) ತದ್ಧಿತಾಂತ ಭಾವನಾಮ
44. | ‘ಒಗ್ಗಟ್ಟು’ ಎಂಬುದು………..ಸಮಾಸ | |
(1) | ಅಂಶಿ | |
(2) | ಬಹುವ್ರೀಹಿ | |
(3) | ದ್ವಿಗು | |
(4) | ಕರ್ಮಧಾರಯ |
ಸರಿ ಉತ್ತರ
(3) ದ್ವಿಗು
45. | ‘ಕಮಲನಯನ’ ಎಂಬುದು ………..ಸಮಾಸ. | |
(1) | ತತ್ಪುರುಷ | |
(2) | ದ್ವಂದ್ವ | |
(3) | ದ್ವಿಗು | |
(4) | ಬಹುವ್ರೀಹಿ |
ಸರಿ ಉತ್ತರ
(4) ಬಹುವ್ರೀಹಿ
46. | ‘ಮುಂದಲೆ’ ಎಂಬುದು………….ಸಮಾಸ | |
(1) | ಅಂಶಿ | |
(2) | ಕರ್ಮಧಾರಯ | |
(3) | ಬಹುವ್ರೀಹಿ | |
(4) | ತತ್ಪುರುಷ |
ಸರಿ ಉತ್ತರ
(1) ಅಂಶಿ
47. | ‘ಕಣ್ದೆರೆ’ ಎಂಬುದು………….ಸಮಾಸ. | |
(1) | ದ್ವಿಗು | |
(2) | ದ್ವಂದ್ವ | |
(3) | ಕ್ರಿಯಾ | |
(4) | ಕ್ರಿಯಾ |
ಸರಿ ಉತ್ತರ
(3) ಕ್ರಿಯಾ (4) ಕ್ರಿಯಾ
48. | ‘ಮತ್ತೆ ಮತ್ತೆ’ ಎಂಬ ಪದ………………ಆಗಿದೆ. | |
(1) | ಜೋಡುನುಡಿ | |
(2) | ಅನುಕರಣಾವ್ಯಯ | |
(3) | ದ್ವಿರುಕ್ತಿ | |
(4) | ತಪ್ಪು ಬಳಕೆ |
ಸರಿ ಉತ್ತರ
(3) ದ್ವಿರುಕ್ತಿ
49. | ‘ಅಯ್ಯೋ, ಮಗು ಬಿದ್ದು ಬಿಟ್ಟಿತಲ್ಲ’ – ಇಲ್ಲಿ ‘ಅಯ್ಯೋ’ ಎಂಬುದು…………. | |
(1) | ಅನುಕರಣಾವ್ಯಯ | |
(2) | ಸಂಬಂಧ ಸೂಚಕಾವ್ಯಯ | |
(3) | ಸಾಮಾನ್ಯಾವ್ಯಯ | |
(4) | ಭಾವಸೂಚಕಾವ್ಯಯ |
ಸರಿ ಉತ್ತರ
(4) ಭಾವಸೂಚಕಾವ್ಯಯ
50. | ‘ಡಬ್ಬದಲ್ಲಿನ ಸಕ್ಕರೆ ಸಿಹಿಯಾಗಿದೆ’ ಎಂಬುದು………… ವಾಕ್ಯವಾಗಿದೆ. | |
(1) | ವೈಷಯಿಕ | |
(2) | ಕ್ರಿಯಾತ್ಮಕ | |
(3) | ಪ್ರಸ್ತಾವನಾ | |
(4) | ನಿಷೇಧಾರ್ಥಕ |
ಸರಿ ಉತ್ತರ
(1) ವೈಷಯಿಕ
51. | ‘ಕೆಲವು’ ಎಂಬ ಪದ …….. ವಾಚಕ. | |
(1) | ಗುಣ | |
(2) | ಸಂಖ್ಯಾ | |
(3) | ಸಂಖ್ಯೇಯ | |
(4) | ಪರಿಮಾಣ |
ಸರಿ ಉತ್ತರ
(4) ಪರಿಮಾಣ
52. | ನಮ್ಮ ವರ್ಣಮಾಲೆಯಲ್ಲಿ ‘ಅಂ’ ಎಂಬುದು ……ಆಗಿದೆ. | |
(1) | ಅನುನಾಸಿಕ | |
(2) | ಅನುಸ್ವಾರ | |
(3) | ಸಂಧ್ಯಕ್ಷರ | |
(4) | ಅಲ್ಪ ವಿಸರ್ಗ |
ಸರಿ ಉತ್ತರ
(2) ಅನುಸ್ವಾರ
53. | ‘ನಿಮಗೆ ಕಾಫಿಗೆ ಇನ್ನಷ್ಟು ಸಕ್ಕರೆ ಬೇಕು, ಅಲ್ಲವೆ ?’ ಇದು ………ಪ್ರಶ್ನೆ. | |
(1) | ವೈಚಾರಿಕ | |
(2) | ತಥ್ಯವಿಷಯಕ | |
(3) | ವೈಕಲ್ಪಿತ | |
(4) | ಅನುಗತ |
ಸರಿ ಉತ್ತರ
(4) ಅನುಗತ
54. | ಮಣ್ಣಾದರು ಎಂಬ ಪದ ……..ಕಾಲದಲ್ಲಿದೆ. | |
(1) | ಭೂತ | |
(2) | ಭವಿಷ್ಯತ್ | |
(3) | ವರ್ತಮಾನ | |
(4) | ಅಪರಿಚಿತ |
ಸರಿ ಉತ್ತರ
(1) ಭೂತ
55. | ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ ………. | |
(1) | 8 | |
(2) | 10 | |
(3) | 12 | |
(4) | 14 |
ಸರಿ ಉತ್ತರ
(2) 10
56. | ತಮಿಳನ್ನು ಹೊರತು ಪಡಿಸಿದರೆ ಪ್ರಾಚೀನತಮವಾದ ದ್ರಾವಿಡ ಭಾಷೆ …………. | |
(1) | ತೆಲುಗು | |
(2) | ಮಲಯಾಳಂ | |
(3) | ತುಳು | |
(4) | ಕನ್ನಡ |
ಸರಿ ಉತ್ತರ
(4) ಕನ್ನಡ
57. | ವಿಜಾತೀಯ ಸಂಯುಕ್ತಾಕ್ಷರ ಇರುವ ಪದ………….. | |
(1) | ರೊಟ್ಟಿ | |
(2) | ಅನ್ನ | |
(3) | ರಾಗಿಮುದ್ದೆ | |
(4) | ಪಲ್ಯ |
ಸರಿ ಉತ್ತರ
(4) ಪಲ್ಯ
58. | ‘ಬೆಟ್ಟ’ ಎಂಬುದು …………. | |
(1) | ನಾಮಪದ | |
(2) | ಕ್ರಿಯಾ ಪದ | |
(3) | ವಿಶೇಷಣ | |
(4) | ಧಾತು |
ಸರಿ ಉತ್ತರ
(1) ನಾಮಪದ
59. | ‘ಹಾಲಿನಲ್ಲಿ ಸಕ್ಕರೆ ಇಲ್ಲ’ ಎನ್ನುವುದು ……….. ವಾಕ್ಯ. | |
(1) | ಕ್ರಿಯಾರ್ಥಕ ವಾಕ್ಯ | |
(2) | ವೈಷಯಿಕ ವಾಕ್ಯ | |
(3) | ಪ್ರಸ್ತಾವನಾ ವಾಕ್ಯ | |
(4) | ನಿಷೇಧಾರ್ಥಕ ವಾಕ್ಯ |
ಸರಿ ಉತ್ತರ
(4) ನಿಷೇಧಾರ್ಥಕ ವಾಕ್ಯ
60. | ‘ನೂರಾರು’ ಎಂಬ ಪದದಲ್ಲಿ ………ಸಂಧಿಯಿದೆ. | |
(1) | ಸವರ್ಣದೀರ್ಘ | |
(2) | ಲೋಪ | |
(3) | ಆಗಮ | |
(4) | ಆದೇಶ |
ಸರಿ ಉತ್ತರ
(2) ಲೋಪ
61. | ‘ತೋಟವನ್ನು’ ಎಂಬ ಪದದಲ್ಲಿ ………ಸಂಧಿಯಿದೆ. | |
(1) | ವೃದ್ಧಿ | |
(2) | ಗುಣ | |
(3) | ಆಗಮ | |
(4) | ಆದೇಶ |
ಸರಿ ಉತ್ತರ
(3) ಆಗಮ ಸಂಧಿ
62. | ‘ಹೊಸಗನ್ನಡ’ ಎಂಬ ಪದದಲ್ಲಿ ……..ಸಂಧಿಯಿದೆ. | |
(1) | ಲೋಪ | |
(2) | ಯಣ್ | |
(3) | ಆಗಮ | |
(4) | ಆದೇಶ |
ಸರಿ ಉತ್ತರ
(4) ಆದೇಶ
63. | ‘ನಾನು’ ಎನ್ನುವುದು ………ಸರ್ವನಾಮ. | |
(1) | ಪ್ರಥಮ ಪುರುಷ | |
(2) | ಉತ್ತಮ ಪುರುಷ | |
(3) | ಮಧ್ಯಮ ಪುರುಷ | |
(4) | ಶ್ರೇಷ್ಠ ಪುರುಷ |
ಸರಿ ಉತ್ತರ
(2) ಉತ್ತಮ ಪುರುಷ
64. | ‘ಕುಡಿದಾನು’ ಎಂಬುದು ………ಪದ. | |
(1) | ವಿಧ್ಯರ್ಥಕ | |
(2) | ನಿಷೇಧಾರ್ಥಕ | |
(3) | ಸಂಭಾವನಾರ್ಥಕ | |
(4) | ಪ್ರೇರಣಾರ್ಥಕ |
ಸರಿ ಉತ್ತರ
(3) ಸಂಭಾವನಾರ್ಥಕ
65. | ‘ಏಳಿಂ’ ಎನ್ನುವುದು ………….. ಪದ. | |
(1) | ನಿಷೇಧಾರ್ಥಕ | |
(2) | ಸಂಭಾವನಾರ್ಥಕ | |
(3) | ವಿಧ್ಯರ್ಥಕ | |
(4) | ಸಂದೇಹಾರ್ಥಕ |
ಸರಿ ಉತ್ತರ
(3) ವಿಧ್ಯರ್ಥಕ
ಸೂಚನೆಗಳು : ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66-69) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.
ಉದಾಹರಣೆ: | ||
(1) | ದಾರಿ | |
(2) | ಹಾದಿ | |
(3) | ರಸ್ತೆ | |
(4) | ಕಾಡು |
ಈ ನಾಲ್ಕು ಪದಗಳಲ್ಲಿ ‘ರಸ್ತೆ’ ಮಾತ್ರ ಅನ್ಯಭಾಷೆಯಿಂದ ಸ್ವೀಕೃತವಾದ ಪದವಾಗಿದೆ. ಆದುದರಿಂದ ಇಲ್ಲಿ (3)ನ್ನು ಗುರುತಿಸಬೇಕು.
66. | ||
(1) | ನೆಲ | |
(2) | ಜಲ | |
(3) | ಹೊಲ | |
(4) | ಬಿಲ |
ಸರಿ ಉತ್ತರ
(2) ಜಲ
67. | ||
(1) | ಪೆನ್ನು | |
(2) | ಚಿನ್ನ | |
(3) | ಕೆನ್ನೆ | |
(4) | ಸನ್ನೆ |
ಸರಿ ಉತ್ತರ
(1) ಪೆನ್ನು
68. | ||
(1) | ಕಾಗೆ | |
(2) | ಕಾಲು | |
(3) | ಕಾಗದ | |
(4) | ಕಾಡು |
ಸರಿ ಉತ್ತರ
(3) ಕಾಗದ
69. | ||
(1) | ಆಕಾಶ | |
(2) | ಬಾಗಿಲು | |
(3) | ಕುದುರೆ | |
(4) | ಮುಂಜಾನೆ |
ಸರಿ ಉತ್ತರ
(1) ಆಕಾಶ
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 70-72) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ , ಆಗ (4)ನ್ನು ಗುರುತಿಸಿ.
ಉದಾಹರಣೆ: | ||
ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು. | ||
(1) | ಹಾಡಿದರು | |
(2) | ಆಲಿಸಿದರು | |
(3) | ಮಾಡಿಸಿದರು | |
(4) | ಅಲಿಸಿದರು. |
ಇಲ್ಲಿ ‘ಆಡಿದರು’ ಎಂಬುದು ದೋಷವಾಗಿದ್ದು ‘ಹಾಡಿದರು’ ಎಂದಿರಬೇಕು. ಆದುದರಿಂದ (1)ನ್ನು ಗುರುತಿಸಬೇಕು.
70. | ರಾಜ್ಯೋತ್ಸವದ ಕಾರ್ಯಕ್ರಮವು ವಿಜೃಂಭಣೆ ಯಿಂದ ಜರುಗಿತು. | |
(1) | ವಿಜೃಂಬಣೆ | |
(2) | ವಿಜುಂಭಣೆ | |
(3) | ವಿಜ್ರುಂಭಣೆ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(4) ಸುಧಾರಣೆ ಬೇಕಿಲ್ಲ
71. | ಒಟ್ಟಿನಲ್ಲಿ ಗ್ರಂಥ ಪರಿಷ್ಕರಣೆ ಮಾಡಲು ನಿರ್ಧರಿಸಿದರು. | |
(1) | ಪರಿಶ್ ಕರಣೆ | |
(2) | ಪರಿಶರ್ಕರಣೆ | |
(3) | ಪರಿಶ್ಕರಣೆ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(4) ಸುಧಾರಣೆ ಬೇಕಿಲ್ಲ
72. | ಈ ದಿನ ಕೇಸನ್ನು ಇತ್ಯರ್ತ ಪಡಿಸುತ್ತೇವೆ. | |
(1) | ಇತ್ಯರ್ಥ | |
(2) | ಈತ್ಯರ್ಥ | |
(3) | ಇತರ್ತ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(1) ಇತ್ಯರ್ಥ
ಸೂಚನೆಗಳು : ಕೆಳಗಿನವುಗಳಲ್ಲಿ (ಪ್ರಶ್ನೆ ಸಂಖ್ಯೆ 73-77) ಗೆರೆ ಹಾಕಿದ ಭಾಗಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.
ಉದಾಹರಣೆ : | ||
ಕುವೆಂಪು ಚೋಮನದುಡಿ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. | ||
(1) | ಬೆಟ್ಟದ ಜೀವ | |
(2) | ಕಾನೂರ ಹೆಗ್ಗಡತಿ | |
(3) | ಚಿಕವೀರ ರಾಜೇಂದ್ರ | |
(4) | ದುರ್ಗಾಸ್ತಮಾನtd> |
ಇಲ್ಲಿ ‘ಕಾನೂರ ಹೆಗ್ಗಡತಿ’ ಸರಿಯಾದ ಉತ್ತರ. ಆದುದರಿಂದ (2)ನ್ನು ಗುರುತಿಸಬೇಕು.
73. | ಪ್ರಾಚೀನ ಕಾಲದಲ್ಲಿ ಕನ್ನಡ ನಾಡು ಕಾವೇರಿಯಿಂದ ಹಿಡಿದು ಗಂಗಾ ನದಿಯ ತನಕ ಹರಡಿತ್ತು ಎಂದು ಪ್ರಸಿದ್ಧಿಯಾಗಿತ್ತು. | |
(1) | ತುಂಗಭದ್ರ | |
(2) | ಕೃಷ್ಣಾ | |
(3) | ಗೋದಾವರಿ | |
(4) | ನರ್ಮದಾ |
ಸರಿ ಉತ್ತರ
(3) ಗೋದಾವರಿ
74. | ಶಿವರಾಮಕಾರಂತರು ಶ್ರೀರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚಿಸಿದ್ದಾರೆ. | |
(1) | ಮಲೆಗಳಲ್ಲಿ ಮದುಮಗಳು | |
(2) | ಚಿಕವೀರ ರಾಜೇಂದ್ರ | |
(3) | ಮರಳಿ ಮಣ್ಣಿಗೆ | |
(4) | ಸಂಸ್ಕಾರ |
ಸರಿ ಉತ್ತರ
(3) ಮರಳಿ ಮಣ್ಣಿಗೆ
75. | ಕನ್ನಡದ ‘ಆದಿಕವಿ’ ಎಂಬ ಹೊಗಳಿಕೆಗೆ ಕುಮಾರವ್ಯಾಸ ಪಾತ್ರನಾಗಿದ್ದಾನೆ. | |
(1) | ಶ್ರೀ ವಿಜಯ | |
(2) | ಪಂಪ | |
(3) | ರನ್ನ | |
(4) | ಬಸವಣ್ಣ |
ಸರಿ ಉತ್ತರ
(2) ಪಂಪ
76. | ಕನ್ನಡದ ಜನಪ್ರಿಯ ಕಥನ ಕಾವ್ಯದ ಪುಣ್ಯಕೋಟಿಯ ಕಥೆಯಲ್ಲಿ ಬರುವ ಹುಲಿಯ ಹೆಸರು ಕರ್ದಮ. | |
(1) | ವ್ಯಾಗುರ | |
(2) | ಬರ್ದಿಲ | |
(3) | ಅರ್ಬುದ | |
(4) | ಮಧ್ಯಮ |
ಸರಿ ಉತ್ತರ
(3) ಅರ್ಬುದ
77. | ಶ್ರೇಷ್ಠ ಸಾಹಿತಿಗಳೆಂದು ಹೆಸರು ಪಡೆದಿರುವ ಕನ್ನಡದ ತಂದೆ- ಮಗನ ಜೋಡಿ ಎಂದರೆ ಮಾಸ್ತಿ – ಶ್ರೀನಿವಾಸ | |
(1) | ಡಿ.ವಿ. ಗುಂಡಪ್ಪ – ಬಿ.ಜಿ.ಎಲ್. ಸ್ವಾಮಿ | |
(2) | ಹರಿಹರ – ರಾಘವಾಂಕ | |
(3) | ಶಿವರಾಮ ಕಾರಂತ – ಉಲ್ಲಾಸ ಕಾರಂತ | |
(4) | ಲಂಕೇಶ್- ಇಂದ್ರಜಿತ್ ಲಂಕೇಶ್ |
ಸರಿ ಉತ್ತರ
(1) ಡಿ.ವಿ. ಗುಂಡಪ್ಪ – ಬಿ.ಜಿ.ಎಲ್. ಸ್ವಾಮಿ
ಸೂಚನೆಗಳು : ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 78-85) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ ಅವುಗಳ ಅನುಕ್ರಮವನ್ನು ಗುರುತಿಸಿ.
ಉದಾಹರಣೆ : | ||
ವಿದ್ಯಾರ್ಥಿಗಳು | ||
P | ||
ಜಾಸ್ತಿಯಾಗಿದೆ | ||
Q | ||
ಆಕರ್ಷಿತರಾಗುತ್ತಿರುವುದು | ||
R | ||
ದುರಭ್ಯಾಸಗಳ ಕಡೆಗೆ | ||
S | ||
(1) | P S R Q | |
(2) | Q R S P | |
(3) | S Q R P | |
(4) | Q S R P |
ಇಲ್ಲಿ P S R Q ಎಂಬುದು ಸರಿಯಾದ ಜೋಡಣೆಯ ಕ್ರಮ ಆದುದರಿಂದ ಇಲ್ಲಿ (1)ನ್ನು ಗುರುತಿಸಬೇಕು
78. | ಅರ್ಥಮಾಡಿಕೊಳ್ಳಬೇಕು | |
P | ||
ಎಂಬುದನ್ನು ನೀವೇ | ||
Q | ||
ಅಸೂಕ್ಷವಾಗಿರುತ್ತಿರೋ ಅಥವಾ | ||
R | ||
ಕ್ರಿಯಾಶೀಲ ಹುಚ್ಚರಾಗಿರುತ್ತೀರೋ | ||
S | ||
(1) | P R S Q | |
(2) | R S P Q | |
(3) | P Q R S | |
(4) | R S Q P |
ಸರಿ ಉತ್ತರ
(4) R S Q P
79. | ಬಲೆ ತನಗೆ | |
P | ||
ಜೇಡ ನಿರ್ಮಿಸಿಕೊಂಡಿರುವ | ||
Q | ||
ಮಿಕ್ಕವರಿಗೆ ಮೃತ್ಯುಪಂಜ | ||
R | ||
ಮಾತ್ರ ವಾಸಸ್ಥಾನ | ||
S | ||
(1) | R P Q S | |
(2) | P Q R S | |
(3) | Q P S R | |
(4) | R Q P S |
ಸರಿ ಉತ್ತರ
(3) Q P S R
80. | ಸುಖವೆಂದರೆ ಏನೆಂಬ | |
P | ||
ಜನರಿಗಾದರೂ ಸುಖಕ್ಕಾಗಿ | ||
Q | ||
ಕಲ್ಪನೆ ಬಹಳ ಕಡಿಮೆ | ||
R | ||
ಎಲ್ಲರೂ ಹಂಬಲಿಸುವವರೆ | ||
S | ||
(1) | Q S P R | |
(2) | P R Q S | |
(3) | Q S R P | |
(4) | P Q R S |
ಸರಿ ಉತ್ತರ
(2) P R Q S
81. | ಅದಕ್ಕೆ ರಕ್ಷೆ | |
P | ||
ಶಿಕ್ಷೆ | ||
Q | ||
ನಮಗೆ | ||
R | ||
ಗುಲಾಬಿಗಿಡದ ಮುಳ್ಳು | ||
S | ||
(1) | S P R Q | |
(2) | R Q P S | |
(3) | P Q R S | |
(4) | S Q R P |
ಸರಿ ಉತ್ತರ
(1) S P R Q
82. | ವ್ಯಕ್ತವಾಗುತ್ತೆ | |
P | ||
ನಮ್ಮ ಸಮಾಜದಲ್ಲಿ | ||
Q | ||
ಕ್ರೌರ್ಯ ಮತ್ತು ದಬ್ಬಾಳಿಕೆ | ||
R | ||
ಅನೇಕ ರೀತಿಗಳಲ್ಲಿ | ||
S | ||
(1) | R S P Q | |
(2) | S Q R P | |
(3) | Q R S P | |
(4) | P Q R S |
ಸರಿ ಉತ್ತರ
(3) Q R S P
83. | ಗ್ರೀಸ್ ದೇಶದ ಅಲೆಗ್ಸಾಂಡರ್ | |
P | ||
ಹೊರಟವನು | ||
Q | ||
ಇಡೀ ವಿಶ್ವವನ್ನು | ||
R | ||
ಗೆಲ್ಲುವ ಆಸೆಯಿಂದ | ||
S | ||
(1) | R S P Q | |
(2) | P Q R S | |
(3) | Q P R S | |
(4) | P R S Q |
ಸರಿ ಉತ್ತರ
(4) P R S Q
84. | ಮೃಗವನ್ನು | |
P | ||
ಆಶ್ಚರ್ಯವಾಗುತ್ತದೆ | ||
Q | ||
ಮನುಷ್ಯನ ಮನದಾಳದಲ್ಲಿರು | ||
R | ||
ನೋಡಿದರೆ | ||
S | ||
(1) | S R P Q | |
(2) | Q R P S | |
(3) | R P S Q | |
(4) | P Q R S |
ಸರಿ ಉತ್ತರ
(3) R P S Q
85. | ನಮ್ಮೊಂದಿಗಿರುವುದು ಸಾಧ್ಯವಿಲ್ಲ | |
P | ||
ವಿಚಿತ್ರವೆಂದರೆ | ||
Q | ||
ನಾಟಕಗಳು ನಮ್ಮೊಂದಿಗಿದ್ದರೂ | ||
R | ||
ನಾಟಕಗಳ ಪ್ರದರ್ಶನ | ||
S | ||
(1) | P Q R S | |
(2) | R S P Q | |
(3) | Q R S P | |
(4) | R S Q P |
ಸರಿ ಉತ್ತರ
(3) Q R S P
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 86-91) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರುತಿಸಿ. ದೋಷವಿಲ್ಲದಿದ್ದರೆ ‘ತಪ್ಪಿಲ್ಲ’ ಎಂಬ (4) ಭಾಗವನ್ನು ಗುರುತಿಸಿ.
ಉದಾಹರಣೆ : | ||
ವಿದ್ಯಾರ್ಥಿಗಳು | ||
(1) | ||
ಶಾಲೆಗೆ | ||
(2) | ||
ಮುಗಿಸಿಕೊಂಡು ಬಂದರು | ||
(3) | ||
ತಪ್ಪಿಲ್ಲ | ||
(4) |
ಇಲ್ಲಿ ಭಾಗ (2) ರಲ್ಲಿ ‘ಶಾಲೆಯನ್ನು’ ಎಂದಿರಬೇಕಾಗಿತ್ತು ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ (2)ನ್ನು ಗುರುತಿಸಬೇಕು.
86. | ಬೆಟ್ಟ | |
(1) | ||
ಹತ್ತುವುದು | ||
(2) | ||
ಬಲುಕಸ್ಟ. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(3)
87. | ಹಾಸಿಗೆಯಿದ್ದಷ್ಟು | |
(1) | ||
ಕಾಲುಚಾಚುವುದು | ||
(2) | ||
ಒಳ್ಳೆಯದು. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(4)
88. | ವಿದ್ವತ್ಪೂರ್ಣ | |
(1) | ||
ಭಾಷಣದಿಂದ ವಿದ್ಯಾರ್ಥಿಗಳು | ||
(2) | ||
ಸಂತೋಷಗೊಂಡರು. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(2)
89. | ರೈತ | |
(1) | ||
ಭೂಮಿ | ||
(2) | ||
ಅಗಿಯಲು ಆರಂಭಿಸಿದ. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(3)
90. | ಹೆಂಗಸರು | |
(1) | ||
ನದಿಯಿಂದ | ||
(2) | ||
ನೀರಿಗೆ ತಂದರು. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(3)
91. | ಕಾವೇರಿ | |
(1) | ||
ಕರ್ನಾಟಕ | ||
(2) | ||
ಜೀವನದಿ. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(2)
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 92-97) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲಿಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.
ಉದಾಹರಣೆ : | ||
ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು. | ||
(1) | ಪ್ರಮಾದ | |
(2) | ಅಪಘಾತ | |
(3) | ವಿಪತ್ತು | |
(4) | ಅಕಸ್ಮಾತ್ |
ಇಲ್ಲಿ ‘ಅಪಘಾತ’ ಎಂಬುದು ಸೂಕ್ತ ರೂಪವಾದುದರಿಂದ (2)ನ್ನು ಗುರುತಿಸಬೇಕು
92. | ಕಮ್ಯುನಿಸಂ ತಾನು ಹುಟ್ಟಿದ ರಾಷ್ಟ್ರಗಳಲ್ಲಿ ದುರ್ಗತಿ ಕಂಡರೂ, ನಮ್ಮ ಕೇರಳದಲ್ಲೇ ಉಳಿದುಕೊಂಡಿದೆ. | |
(1) | ಸಮತಾವಾದ | |
(2) | ಸಮಾಜವಾದ | |
(3) | ದೇಸಿವಾದ | |
(4) | ನಕ್ಸಲ್ವಾದ |
ಸರಿ ಉತ್ತರ
(1) ಸಮತಾವಾದ
93. | ದಾರಿಯಲ್ಲಿ ಬಿದ್ದಿದ್ದ ಹಣವನ್ನು ಎತ್ತಿಕೊಳ್ಳಲು ನನಗೆ ಹೆಸಿಟೇಟ್ ಆಯಿತು. | |
(1) | ಹಿಂಜರಿಕೆ | |
(2) | ಸಂಕೋಚ | |
(3) | ಕಸಿವಿಸಿ | |
(4) | ಮುಜುಗರ |
ಸರಿ ಉತ್ತರ
(1) ಹಿಂಜರಿಕೆ
94. | ಮಹಿಳಾ ದಿನಾಚರಣೆಗೆ ಬಂದ ಅತಿಥಿಗಳು ತುಂಬಾ ರೆಲವೆಂಟಾಗಿ ಮಾತನಾಡಿದರು. | |
(1) | ಚೆನ್ನಾಗಿ | |
(2) | ನಿರರ್ಗಳವಾಗಿ | |
(3) | ಸ್ಪಷ್ಟವಾಗಿ | |
(4) | ಸುಸಂಗತವಾಗಿ |
ಸರಿ ಉತ್ತರ
(4) ಸುಸಂಗತವಾಗಿ
95. | ಅವನು ಆ ಸಿನಿಮಾವನ್ನು ಕ್ರಿಟಿಸೈಸ್ ಮಾಡಿದನು. | |
(1) | ವಿವರಿಸು | |
(2) | ವಿಮರ್ಶಿಸು | |
(3) | ವಿಶ್ಲೇಷಿಸು | |
(4) | ತೆಗಳು |
ಸರಿ ಉತ್ತರ
(2) ವಿಮರ್ಶಿಸು
96. | ಭ್ರಷ್ಟಾಚಾರದಿಂದಾಗುವ ಪರಿಣಾಮಗಳನ್ನು ಇಮ್ಯಾಜಿನ್ ಮಾಡಿಕೊಳ್ಳಲು ಸಾಧ್ಯವಿಲ್ಲ | |
(1) | ದುರಂತ | |
(2) | ಊಹಿಸು | |
(3) | ನಷ್ಟ | |
(4) | ನಾಶ |
ಸರಿ ಉತ್ತರ
(2) ಊಹಿಸು
97. | ತನಗೆ ಇಂಡಿಪೆಂಡೆನ್ಸ್ ಸಾಲದೆಂದು ಮಾಧುರಿ ಗಂಡನನ್ನು ಬಿಟ್ಟಳಂತೆ. | |
(1) | ಸ್ವೇಚ್ಛೆ | |
(2) | ಸ್ವಾಯತ್ತತೆ | |
(3) | ಸ್ವಾತಂತ್ರ್ಯ | |
(4) | ಸ್ವಚ್ಛಂದ |
ಸರಿ ಉತ್ತರ
(3) ಸ್ವಾತಂತ್ರ್ಯ
ಸೂಚನೆಗಳು : ಈ ಕೆಳಗೆ (ಪ್ರಶ್ನೆ ಸಂಖ್ಯೆ 98-100) P Q R S ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.
ಉದಾಹರಣೆ : | ||
P. | ಪುಲಿಗೆರೆ, ಕಿಸುವೊಳಲ್, ಕೊಪ್ಪಳ ಮತ್ತು ಒಕ್ಕುಂದ ಇವೆ ಆ ನಾಲ್ಕು ನಗರಗಳು. | |
Q. | ಒಂಬತ್ತನೆಯ ಶತಮಾನದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು. | |
R. | ಆ ನಾಡಿನಲ್ಲಿನ ನಾಲ್ಕು ನಗರಗಳ ಮಧ್ಯದ ಕನ್ನಡವೇ ಕನ್ನಡದ ತಿರುಳೆಂದು ಕವಿ ಹೇಳಿದ್ದಾನೆ. | |
S. | ಆ ನಾಡಿನಲ್ಲಿ ವಾಸವಾಗಿದ್ದ ಜನತೆಯ ಉನ್ನತ ಸಂಸ್ಕೃತಿಯಿಂದಾಗಿ ಇಡೀ ವಿಶ್ವದಲ್ಲಿ ಕನ್ನಡ ನಾಡು ಒಂದು ವಿಶೇಷ ಸ್ಥಾನವನ್ನು ಪಡೆದಿತ್ತು. | |
(1) | Q S R P | |
(2) | S R Q P | |
(3) | P Q R S | |
(4) | R P Q S |
ಇಲ್ಲಿ ಸರಿಯಾದ ಉತ್ತರ Q S R P ಆದುದರಿಂದ (1) ನ್ನು ಗುರುತಿಸಬೇಕು.
98. | P. | ಈ ಆತ್ಮಕಥನವು ನನಗೆ ಇಷ್ಟವಾಗಲು ಹಲವಾರು ಕಾರಣಗಳಿವೆ. |
Q. | ಮೂರ್ತಿಯವರ ‘ಬಾಳಹಾದಿ’ ಆತ್ಮಕಥನವು ‘ವ್ಯಕ್ತಿಮಹತ್ವ’ದ ಭೂಮಿಕೆಯಿಂದ ಸಿದ್ಧವಾಗಿದೆ. | |
R. | ಅವುಗಳಲ್ಲಿ ಮುಖ್ಯವಾದುದು, ಬೆಂಗಳೂರಿನ ಸಾಂಸ್ಕೃತಿಕ ಬದುಕು ಕಳೆದ ಅರ್ಧಶತಮಾನದಲ್ಲಿ ಹೇಗೆ ವಿರೂಪಗೊಂಡಿದೆಯೆಂಬುದನ್ನು ಇದು ದಾಖಲಿಸುತ್ತದೆ. | |
S. | ನಮ್ಮಲ್ಲಿ ಆತ್ಮಕಥನಗಳ ಸಂಖ್ಯೆ ಗಣನೀಯವಾಗೇ ಇದೆ. | |
(1) | P Q R S | |
(2) | S Q P R | |
(3) | S P Q R | |
(4) | R S Q P |
ಸರಿ ಉತ್ತರ
(2) S Q P R
99. | P. | ಅವಳು ಕೈಕೇಯಿಯ ಕಿವಿಗಳಲ್ಲಿ ವಿಷ ತುಂಬಿದಳು. |
Q. | ರಾಮನಿಗೆ ಪಟ್ಟಾಭಿಷೇಕವಾಗುತ್ತಿದೆ ಎನ್ನುವ ಸುದ್ದಿ ಅಯೋಧ್ಯೆಯಲ್ಲೆಲ್ಲಾ ಹರಡಿತು. | |
R. | ಅವಳ ದಾಸಿ ಮಂಥರೆಗೆ ಈ ಸುದ್ದಿ ಸ್ವಲ್ಪವೂ ಸಂತೋಷ ತರಲಿಲ್ಲ. | |
S. | ರಾಣಿ ಕೈಕೇಯಿಗಂತೂ ಮಹದಾನಂದವಾಯಿತು. | |
(1) | S R P Q | |
(2) | P Q R S | |
(3) | Q S R P | |
(4) | Q R P S |
ಸರಿ ಉತ್ತರ
(3) Q S R P
100. | P. | ಯಾವುದೇ ಮಗು ವಿಶೇಷವಾದ ದೈಹಿಕ ಊನವಿಲ್ಲದಿದ್ದ ಪಕ್ಷದಲ್ಲಿ ತಾನು ಹುಟ್ಟಿದ ಒಂದೂವರೆ ಎರಡು ವರ್ಷದ ಒಳಗಾಗಿ ಒಂದಿಲ್ಲೊಂದು ಭಾಷೆಯನ್ನು ಕಲಿಯುತ್ತದೆ. |
Q. | ಇದನ್ನು ನಡೆಯುವುದು ಅಥವಾ ಕೈಕಾಲು ಆಡಿಸುವುದು ಮುಂತಾದ ಕ್ರಿಯೆಗಳಷ್ಟೇ ಸಹಜವಾಗಿ ಮಗು ಕಲಿಯುತ್ತದೆ. | |
R. | ಭಾಷೆಯನ್ನು ಕಲಿಯುವ ವಿಷಯದಲ್ಲಿ ಒಂದು ಸಂಗತಿ ನಮಗೆ ಚಿರಪರಿಚಿತ. | |
S. | ಅದು ತಂದೆ-ತಾಯಿಯರ ಭಾಷೆ ಇರಬಹುದು ಅಥವಾ ಪರಿಸರದ ಭಾಷೆಯಾಗಿರಬಹುದು. | |
(1) | R P S Q | |
(2) | P Q R S | |
(3) | P Q S R | |
(4) | R P Q S |
ಸರಿ ಉತ್ತರ
(1) R P S Q