WhatsApp Group Join Now
Telegram Group Join Now

FDA General knowledge Previous Paper (K) 2017

KPSC : ಪ್ರಥಮ ದರ್ಜೆ ಸಹಾಯಕ : ಸಾಮಾನ್ಯ ಜ್ಞಾನ

1.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ :
ಹೇಳಿಕೆ 1 : ಎಲ್ಲ ಕೋಳಿಗಳು ಹಕ್ಕಿಗಳು.
ಹೇಳಿಕೆ 2 : ಕೆಲವು ಕೋಳಿಗಳು ಹೆಣ್ಣು ಕೋಳಿಗಳು.
ಹೇಳಿಕೆ 3 : ಹೆಣ್ಣು ಹಕ್ಕಿಗಳು ಮೊಟ್ಟೆ ಇಡುತ್ತವೆ.
ಮೇಲಿನ 3 ಹೇಳಿಕೆಗಳು ವಾಸ್ತವ ಸಂಗತಿಗಳಾದರೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸಹ ವಾಸ್ತವ ಸಂಗತಿಗಳಾಗಿದೆ?
 I.ಎಲ್ಲ ಹಕ್ಕಿಗಳೂ ಮೊಟ್ಟೆ ಇಡುವವು.
 II.ಹೆಣ್ಣು ಕೋಳಿಗಳು ಹಕ್ಕಿಗಳು.
 III.ಕೆಲವು ಕೋಳಿಗಳು ಹೆಣ್ಣಲ್ಲ.
 ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ :
 (1)II ಮಾತ್ರ
 (2)II ಮತ್ತು III ಮಾತ್ರ
 (3)I, II ಮತ್ತು III
 (4)I, II ಮತ್ತು III ಯಾವುದೂ ಸರಿಯಲ್ಲ

CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


2.ಮೂರು ಬಗೆಯ ಕಾಫಿ ಬಿತ್ತಗಳು – ಕಾಫಿ ಅರೆಬಿಕಾ, ಕಾಫಿ ರೋಬಸ್ಟಾ ಮತ್ತು ಸ್ಥಳೀಯ ಬಿತ್ತಗಳು ಅನುಕ್ರಮವಾಗಿ ₹ 95/ಕಿ.ಗ್ರಾಂ, ₹ 100/ಕಿ.ಗ್ರಾಂ ಮತ್ತು ₹ 70/ಕಿ.ಗ್ರಾಂ ಯ ಬೆಲೆಯವು, ಅನುಕ್ರಮವಾಗಿ ಇವನ್ನು ಎಷ್ಟೆಷ್ಟು ಬೆರೆಸಿ 100 ಕಿ.ಗ್ರಾಂ ಮಾಡಿ ₹ 90/ಕಿ.ಗ್ರಾಂ ಬೆಲೆ ಉಂಟುಮಾಡಬಹುದು? ರೋಬಸ್ಟಾ ಮತ್ತು ಸ್ಥಳೀಯ ಬಿತ್ತಗಳ ಪ್ರಮಾಣ ಸಮನಾಗಿರಬೇಕು
 (1)70, 15, 15
 (2)60, 20, 20
 (3)40, 30, 30
 (4)50, 25, 25
CORRECT ANSWER

(4) 50, 25, 25


3.ಅಂತರರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಯಲ್ಲಿ ಮತದಾನದ ಹಕ್ಕುಗಳು ಇವುಗಳ ಆಧಾರದ ಮೇಲೆ ಹಂಚಿಕೆಯಾಗಿವೆ:
 (1)ಒಂದು ದೇಶ ಒಂದು ಮತ
 (2)ವಿಶ್ವದ ಆದಾಯದಲ್ಲಿ ಆಯಾ ದೇಶಗಳ ಆದಾಯದ ಪಾಲಿಗನುಗುಣವಾದ ಅನುಸಾರದ ಮೇರೆಗೆ
 (3)ಪ್ರತಿಯೊಂದು ದೇಶವೂ ನೀಡಿರುವ ಕೊಡುಗೆಗಳ ಅನುಪಾತಕ್ಕನುಗುಣವಾಗಿ
 (4)ಕಾಲಕಾಲಕ್ಕೆ ಆಯಾ ದೇಶಗಳಿಗೆ ನೀಡಲಾಗಿರುವ ಕೋಟಾದ ಅನುಪಾತಕ್ಕನುಗುಣವಾಗಿ
CORRECT ANSWER

(4) ಕಾಲಕಾಲಕ್ಕೆ ಆಯಾ ದೇಶಗಳಿಗೆ ನೀಡಲಾಗಿರುವ ಕೋಟಾದ ಅನುಪಾತಕ್ಕನುಗುಣವಾಗಿ


4.ದೀನ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯ ಗುರಿ
 A.ಎಲ್ಲ ಹಳ್ಳಿಗಳ ವಿದ್ಯುದೀಕರಣ
 B.ನಷ್ಟ ತಗ್ಗಿಸಲು ಮೀಟರ್ ಇಲ್ಲದೆಡೆ ಮೀಟರ್ ಅಳವಡಿಸುವುದು
 C.ಫೀಡರ್‌ಗಳನ್ನು ಪ್ರತ್ಯೇಕಿಸಿ ಕೃಷಿಗೆ ಸಾಕಷ್ಟು ವಿದ್ಯುತ್ ಒದಗಿಸಿ, ಇತರ ವರ್ಗಕ್ಕೆ ನಿರಂತರ ವಿದ್ಯುತ್ ಪೂರೈಸುವುದು
 D.ಉಪ ಪ್ರಸರಣ ಮತ್ತು ವಿತರಣ ಜಾಲವನ್ನು ಸುಧಾರಿಸಿ ಪೂರೈಕೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವುದು
 ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ :
 (1)A ಮಾತ್ರ
 (2)A, B, C ಮತ್ತು D
 (3)B ಮತ್ತು C
 (4)A ಮತ್ತು B
CORRECT ANSWER

(2) A, B, C ಮತ್ತು D


5.1857ರ ಬಂಡಾಯ ನಡೆಯದ ಪ್ರದೇಶವು
 (1)ಅವಧ್
 (2)ಮದ್ರಾಸ್
 (3)ಮಧ್ಯಪ್ರದೇಶ
 (4)ಪೂರ್ವ ಪಂಜಾಬು
CORRECT ANSWER

(2) ಮದ್ರಾಸ್


6.ಭಾರತದಲ್ಲಿ ಔಪಚಾರಿಕ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಅಡ್ಡಿಗಳೇನು?
 A.ಔಪಚಾರಿಕ ಉದ್ಯೋೋಗಿಗಳಿಗೆ ವಿನಿಮಯ ಪ್ರೇರಿತ ತೆರಿಗೆ.
 B.ಕೆಲಸ ಹಾಗೂ ಉದ್ಯೋೋಗಿಗಳ ಮಧ್ಯ ಇರುವ ಪ್ರತ್ಯೇಕತೆ.
 C.ಅಸಮರ್ಪಕ ಮಾನವ ಸಂಪನ್ಮೂಲ ಹರಿವು.
 D.ಮಾನವ ಬಂಡವಾಳದಲ್ಲಿ ಹೂಡಿಕೆ ಕೊರತೆ.
 ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ :
 (1)A ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು D ಮಾತ್ರ
 (4)A ಮತ್ತು B ಮಾತ್ರ
CORRECT ANSWER

(4) A ಮತ್ತು B ಮಾತ್ರ


7.ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕುಗಳ ಕೇಂದ್ರ ಸ್ಥಾನ ಇಲ್ಲಿ ನೆಲೆಯಾಗಿದೆ.
 (1)IMF – ಜಿನೀವಾ,
 ವಿಶ್ವಬ್ಯಾಂಕು – ಮಾಂಟ್ರಿಯಲ್
 (2)IMF – ಜಿನೀವಾ,
 ವಿಶ್ವಬ್ಯಾಂಕು – ವಿಯೆನ್ನಾ
 (3)IMF – ನ್ಯೂಯಾರ್ಕ್,
 ವಿಶ್ವಬ್ಯಾಂಕು – ಜಿನೀವಾ
 (4)IMF – ವಾಷಿಂಗ್ಟನ್ ಡಿಸಿ,
 ವಿಶ್ವಬ್ಯಾಂಕು – ವಾಷಿಂಗ್ಟನ್ ಡಿಸಿ
CORRECT ANSWER

(4) IMF – ವಾಷಿಂಗ್ಟನ್ ಡಿಸಿ,
ವಿಶ್ವಬ್ಯಾಂಕು – ವಾಷಿಂಗ್ಟನ್ ಡಿಸಿ


8.ಭಾರತ ಹಾಗೂ ಪಾಕಿಸ್ತಾನ ನಡುವೆ ‘‘ಗಂಗಾಜಲ ಒಪ್ಪಂದ 1960’’ ಕುರಿತಂತೆ, ಈ ಪೈಕಿ ಯಾವುದು ಸರಿಯಲ್ಲ?
 (1)ಭಾರತಕ್ಕೆ ಪೂರ್ವದ ನದಿಗಳಾದ ಸಟ್ಲೇಜ್, ಬಿಯಾಸ್ ಮತ್ತು ರಬಿ ನದಿಗಳ ನೀರನ್ನು ಅನಿರ್ಬಂಧಿತವಾಗಿ ಬಳಕೆ ಮಾಡುವ ಹಕ್ಕು ಇದೆ.
 (2)ಪಾಕಿಸ್ತಾನಕ್ಕೆ ಪಶ್ಚಿಮದ ನದಿಗಳಾದ ಸಿಂಧೂ, ಚೀನಾಬ್ ಮತ್ತು ಝೀಲಮ್ ನದಿಗಳ ಅನಿರ್ಬಂಧಿತ ಬಳಕೆ ಮಾಡುವ ಹಕ್ಕಿದೆ.
 (3)ಭಾರತಕ್ಕೆ ಭಾರತದಲ್ಲಿ ಹುಟ್ಟುವ ಹಾಗೂ ಪಾಕಿಸ್ತಾನಕ್ಕೆ ಹರಿವ ಆರು ನದಿಗಳ ನದಿ ಉಸುಕನ್ನು ಬಳಕೆ ಮಾಡುವ ಹಕ್ಕು ಇದೆ.
 (4)ಭಾರತ ಮತ್ತು ಪಾಕಿಸ್ತಾನಗಳೆರಡಕ್ಕೂ ನದಿ ಮಾಲಿನ್ಯ ತಡೆಗಟ್ಟುವ ಹೊಣೆಗಾರಿಕೆ ಇದೆ.
CORRECT ANSWER

(3) ಭಾರತಕ್ಕೆ ಭಾರತದಲ್ಲಿ ಹುಟ್ಟುವ ಹಾಗೂ ಪಾಕಿಸ್ತಾನಕ್ಕೆ ಹರಿವ ಆರು ನದಿಗಳ ನದಿ ಉಸುಕನ್ನು ಬಳಕೆ ಮಾಡುವ ಹಕ್ಕು ಇದೆ.


9.ದೆಹಲಿಯಿಂದ ದೇವಗಿರಿಗೆ (ದೌಲತಾಬಾದ್) ರಾಜಧಾನಿಯನ್ನು ವರ್ಗಾವಣೆ ಮಾಡಿದ್ದನ್ನು ಕುರಿತು ಯಾವ ಇತಿಹಾಸಕಾರ ಕೆಳಗಿನ ಹೇಳಿಕೆಯನ್ನು ನೀಡಿದ್ದು?
‘‘ಪೂರ್ಣ ಅವನತಿ ಎಂದರೆ ಆ ನಗರದ ಕಟ್ಟಡಗಳಲ್ಲಿ ಒಂದು ಬೆಕ್ಕು ಅಥವಾ ನಾಯಿಯೂ ಉಳಿದಿಲ್ಲ’’
 (1)ಫಿರಿಶ್ತಾ
 (2)ಬರಾನಿ
 (3)ಇಬನ್ ಬಟೂಟ
 (4)ಎಲ್ಫಿನ್‌ಸ್ಟೋನ್
CORRECT ANSWER

(2) ಬರಾನಿ


10.ಈ ಕೆಳಗಿನವರಲ್ಲಿ ಯಾವ ದೊರೆಗಳು ಪಾರಿವಾಳ ಹಾರಾಟದ ಆಟಕ್ಕೆ ‘‘ಇಷ್ಕ್-ಬಾಝಿ’’ ಎಂಬ ಪದವನ್ನು ನೀಡಿದರು ?
 (1)ಔರಂಗಜೇಬ್‌
 (2)ಅಲ್ಲಾವುದ್ದೀನ್ ಖಿಲ್ಜಿ
 (3)ಅಕ್ಬರ್
 (4)ಬಾಬರ್
CORRECT ANSWER

(3) ಅಕ್ಬರ್


11.ಬಹಮನಿ ರಾಜ್ಯಸ್ಥಾಪನೆಗೆ ಕಾರಣವಾದ ಅಂಶಗಳು ಕೆಳಗಿನವುಗಳಲ್ಲಿ ಈ ಪೈಕಿ ಯಾವುವು?
 (1)ಕಲ್ಯಾಣಿ ಚಾಲುಕ್ಯರ ರಾಜ್ಯವು ಒಡೆದು ಹೋಳಾಗಿದ್ದು
 (2)ದಕ್ಷಿಣದಲ್ಲಿ ತೊಘಲಕ್ ಅಧಿಕಾರದ ವಿರುದ್ಧ ಸರಣಿ ಬಂಡಾಯಗಳು
 (3)ಸೇನಾ ಬೆಂಬಲ ಮತ್ತು ಪ್ರೋತ್ಸಾಹವನ್ನು ದೆಹಲಿ ಸುಲ್ತಾನರು ನೀಡಿದ್ದು
 (4)ಮಹಮದ್ ಬಿನ್ ತೊಘಲಕ್‌ನ ವಿರುದ್ಧ ಹೆಚ್ಚಿನ ಅತೃಪ್ತಿಯಿಂದ ವ್ಯಾಪಕವಾಗಿ ಹರಡಿದ ದಂಗೆಗಳ ಉಪಯೋಗಗಳನ್ನು ಪಡೆದ ಅಮ್ರಿನ I ನ ದಂಗೆ
CORRECT ANSWER

(4) ಮಹಮದ್ ಬಿನ್ ತೊಘಲಕ್‌ನ ವಿರುದ್ಧ ಹೆಚ್ಚಿನ ಅತೃಪ್ತಿಯಿಂದ ವ್ಯಾಪಕವಾಗಿ ಹರಡಿದ ದಂಗೆಗಳ ಉಪಯೋಗಗಳನ್ನು ಪಡೆದ ಅಮ್ರಿನ I ನ ದಂಗೆ


12.ವಂಶಗಳು ಹಾಗೂ ರಾಜಧಾನಿಗಳನ್ನು ಹೊಂದಿಸಿ :
 A.ಆದಿಲ್‌ಷಾಹಿಗಳುI.ಅಹ್ಮದ್‌ನಗರ್
 B.ಕುತುಬ್ ಷಾಹಿಗಳುII.ಬೀದರ್
 C.ನಿಜಾಮ್ ಷಾಹಿಗಳುIII.ಬಿಜಾಪುರ್
 D.ಬರೀದ್ ಷಾಹಿಗಳುIV.ಗೋಲ್‌ಕೊಂಡ
ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರ ಆರಿಸಿ :

 (1)IIIIVIII
 (2)IIIIIIIV
 (3)IIIIVIII
 (4)IIIIIIIV
CORRECT ANSWER

(1) III, IV, I, II


13.ಕೆಳಗೆ ಕೊಟ್ಟಿರುವ ರಾಷ್ಟ್ರಗಳಲ್ಲಿ ಭಾರತವು ಯಾವ ರಾಷ್ಟ್ರದೊಂದಿಗೆ ಉದ್ದವಾದ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ?
 (1)ನೇಪಾಳ
 (2)ಪಾಕಿಸ್ತಾನ್
 (3)ಚೈನಾ
 (4)ಬಾಂಗ್ಲಾದೇಶ
CORRECT ANSWER

(4) ಬಾಂಗ್ಲಾದೇಶ


14.ಯಾವ ದೇಶದೊಂದಿಗೆ ಪೊಲ್ ಪಾಟ್, ಖ್ಮೇರ್ ರೋಜ್ ಮತ್ತು ಮಾನವ ಹತ್ಯೆ ಸಂಬಂಧಿಸಿದೆ?
 (1)ಕೊರಿಯಾ
 (2)ಜಪಾನ್
 (3)ಮ್ಯಾನ್‌ಮಾರ್ (ಬರ್ಮಾ)
 (4)ಕಾಂಬೋಡಿಯಾ (ಕಂಪೂಚಿಯಾ)
CORRECT ANSWER

(4) ಕಾಂಬೋಡಿಯಾ (ಕಂಪೂಚಿಯಾ)


15.ಅಂತರರಾಷ್ಟ್ರೀಯ ಹಣಕಾಸು ಆಯೋಗದಿಂದಾದ ಆಪ್‌ಡೇಟೆಡ್ ವಿಶ್ವ ಆರ್ಥಿಕ ಹೊರನೋಟದ (WEO) ವರದಿಯ ಮೇರೆಗೆ 2017ರ ಆರ್ಥಿಕ ವರ್ಷದ ಭಾರತೀಯ ಜಿ.ಡಿ.ಪಿ. ಬೆಳವಣಿಗೆ ಭವಿಷ್ಯ ದರವು
 (1)6.6%
 (2)7.1%
 (3)6.2%
 (4)6.5%
CORRECT ANSWER

(1) 6.6%


16.ಕೇಂದ್ರಸರ್ಕಾರದಿಂದ ಸರ್ವ ಶಿಕ್ಷಾ ಅಭಿಯಾನಕ್ಕಾಗಿ ಯಾವ ಹೆಬ್ಬಾಗಿಲನ್ನು ನಿರ್ಮಿಸಲಾಯಿತು?
 (1)ಗ್ಯಾನ್ ಹೆಬ್ಬಾಗಿಲು
 (2)ಉಜಾಲಾ ಹೆಬ್ಬಾಗಿಲು
 (3)ವ್ಯಾಸಂಗ್ ಹೆಬ್ಬಾಗಿಲು
 (4)ಶಗುನ್ ಹೆಬ್ಬಾಗಿಲು
CORRECT ANSWER

(4) ಶಗುನ್ ಹೆಬ್ಬಾಗಿಲು


17.ಯಾವ ರಾಜ್ಯದಲ್ಲಿ ಭಾರತದ ಮಂಗಳಮುಖಿಯರ (ಟ್ರಾನ್ಸ್ ಜೆಂಡರ್) ಮೊದಲನೇ ಶಾಲೆಯು ಸ್ಥಾಪಿತವಾಯಿತು?
 (1)ತಮಿಳುನಾಡು
 (2)ಕೇರಳ
 (3)ಕರ್ನಾಟಕ
 (4)ಆಂಧ್ರಪ್ರದೇಶ
CORRECT ANSWER

(2) ಕೇರಳ


18.ಈ ಕೆಳಗಿನವುಗಳಲ್ಲಿ ಯಾವ ಬ್ಯಾಂಕು ಜಂಟಿ ಮಾರುಕಟ್ಟೆ ಚಟುವಟಿಕೆಗಳನ್ನು ನಿರ್ವಹಿಸಲೋಸುಗ ಆನ್‌ಲೈನ್ ಹೆಬ್ಬಾಗಿಲು ಮ್ಯಾಜಿಕ್‌ಬ್ರಿಕ್ಸ್‌.ಕಾಂ ನೊಂದಿಗೆ ಸಹಯೋಗಿತ್ವವನ್ನು ಹೊಂದಿದೆ?
 (1)ICICI ಬ್ಯಾಂಕು
 (2)ಪಂಜಾಬ್ ನ್ಯಾಷನಲ್ ಬ್ಯಾಂಕು
 (3)HDFC ಬ್ಯಾಂಕು
 (4)ಭಾರತೀಯ ಸ್ಟೇಟ್ ಬ್ಯಾಂಕು
CORRECT ANSWER

(4) ಭಾರತೀಯ ಸ್ಟೇಟ್ ಬ್ಯಾಂಕು


19.ಭಾರತದ ಪರ್ಯಾಯ ದ್ವೀಪದಲ್ಲಿ ಟ್ಯಾಂಕು ನೀರಾವರಿಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕೆಳಗಿನವುಗಳಲ್ಲಿ ಯಾವುದು ಕಾರಣವಾಗಿಲ್ಲ?
 (1)ಹೊಯ್ದಾಟದ ಪರಿಹಾರ ಮತ್ತು ಕಠಿಣ ಬಂಡೆಗಳು
 (2)ಅಭೇದ್ಯ ಶಿಲಾಸ್ವರೂಪದಿಂದ ಕಡಿಮೆ ಮಳೆನೀರಿನ ಸೋಸುವಿಕೆ
 (3)ಭಾರತದ ಪರ್ಯಾಯ ದ್ವೀಪದ ಬಹಳಷ್ಟು ನದಿಗಳು ಅವ್ಯಾಹತವಾದವು
 (4)ಕೆಲವು ಪ್ರವಾಹಗಳು ಮಳೆಗಾಲದ ಅವಧಿಯಲ್ಲಿ ಸೆಳವುಗಳನ್ನು ಹೊಂದಿರುತ್ತವೆ
CORRECT ANSWER

(3) ಭಾರತದ ಪರ್ಯಾಯ ದ್ವೀಪದ ಬಹಳಷ್ಟು ನದಿಗಳು ಅವ್ಯಾಹತವಾದವು


20.ಇತ್ತೀಚಿನ ಅನಾಣ್ಯೀಕರದ ನಂತರ, ಹಣರಹಿತ, ಡಿಜಿಟಲ್ ಮತ್ತು ವಿದ್ಯುನ್ಮಾನ ವ್ಯವಹಾರ ನಡೆಸಲು ವಿವಿಧ ರಾಜ್ಯ ಸರ್ಕಾರಗಳು ಅಂತೆಯೇ ಕೇಂದ್ರಸರ್ಕಾರವೂ ಬಹಳ ಒತ್ತನ್ನು ನೀಡಿದ್ದು ಇಂತಹ ಯೋಜನೆಗಳಲ್ಲಿ ಒಂದಾದ ‘ಡಿಜಿಟಲ್ ಡಾಕಿಯಾ’ ಯೋಜನೆಯು ಯಾವ ರಾಜ್ಯದ್ದು?
 (1)ಮಧ್ಯಪ್ರದೇಶ್
 (2)ರಾಜಸ್ಥಾನ
 (3)ಕರ್ನಾಟಕ
 (4)ಅಸ್ಸೋಂ
CORRECT ANSWER

(1) ಮಧ್ಯಪ್ರದೇಶ್


21.ಮಧ್ಯ ಪ್ರದೇಶದ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮುಂಬಯಿಯನ್ನು 5 ವಿಕೆಟ್‌ಗಳಿಂದ ಸೋಲಿಸಿದ ನಂತರ ಯಾವ ಕ್ರಿಕೆಟ್ ತಂಡವು ತಮ್ಮ ಮೊದಲನೆಯ ರಣಜಿ ಟ್ರೋಫಿಯನ್ನು 2016-17ನೇ ಸಾಲಿನಲ್ಲಿ ಗಳಿಸಿತು?
 (1)ಛತ್ತೀಸ್‌ಘಡ್
 (2)ಗುಜರಾತ್
 (3)ಕರ್ನಾಟಕ
 (4)ತಮಿಳುನಾಡು
CORRECT ANSWER

(2) ಗುಜರಾತ್


22.ಈ ಕೆಳಗಿನವುಗಳಲ್ಲಿ ಯಾವ ನಾಲೆಗಳು ಬೆಳಗಾವಿ, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳ ಪ್ರಧಾನ ಭಾಗಗಳಿಗೆ ನೀರಾವರಿಯನ್ನು ಒದಗಿಸುತ್ತವೆ?
 (1)ವಿಶ್ವೇಶ್ವರಯ್ಯ ನಾಲೆ
 (2)ತಂಡುಲಾ ನಾಲೆ
 (3)ಮೆಟ್ಟೂರು ನಾಲೆ
 (4)ಮಲಪ್ರಭಾ ಯೋಜನೆ
CORRECT ANSWER

(4) ಮಲಪ್ರಭಾ ಯೋಜನೆ


23.ಈ ಕೆಳಗಿನ ಹೇಳಿಕೆಗಳನ್ನು ಉತ್ತರ ಭಾರತದ ಚಳಿಗಾಲದ ಋತುಮಾನದಲ್ಲಿ ಶೀತದ ಅಲೆಗಳಿಗೆ ಸಂಬಂಧಿಸಿದಂತೆ ಪರಿಗಣಿಸಿ:
 A.ಇಲ್ಲಿ ಸಮುದ್ರದ ಪ್ರಭಾವದ ಕೊರತೆಯಿದೆ.
 B.ಉತ್ತರ ಭಾರತವು ಹಿಮಾಲಯ ಪ್ರದೇಶಕ್ಕೆ ಸಮೀಪವಾಗಿದೆ.
 C.ಗಾಳಿ ರಾಶಿಯು ಧ್ರುವೀಯ ಪ್ರಾಂತ್ಯದಿಂದ ಉತ್ತರ ಭಾರತಕ್ಕೆ ಆಗಮಿಸುತ್ತದೆ.
 ಈ ಹೇಳಿಕೆಗಳಲ್ಲಿ ಯಾವುದು/ವು ಸರಿ?
 (1)A ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A ಮತ್ತು B ಮಾತ್ರ
CORRECT ANSWER

(4) A ಮತ್ತು B ಮಾತ್ರ


24.ರಾಷ್ಟ್ರೀಯ ಆಹಾರ ಸುರಕ್ಷತಾ ಆಯೋಗದ ಗುರಿಯೆಂದರೆ ಕೆಲವು ನಿರ್ದಿಷ್ಟ ಬೆಳೆಗಳ ಉತ್ಪಾದನೆಯನ್ನು ಕ್ಷೇತ್ರ ವಿಸ್ತರಣೆಯ ಮೂಲಕ ಹೆಚ್ಚಿಸುವುದು ಮತ್ತು ಸುಸ್ಥಿರತೆ ರೀತಿಯಲ್ಲಿ ಉತ್ಪಾದನೆಯ ಹೆಚ್ಚಳವನ್ನು, ರಾಷ್ಟ್ರದ ಗುರ್ತಿಸಲಾದ ಜಿಲ್ಲೆಗಳಲ್ಲಿ ಹೆಚ್ಚಿಸುವುದಾಗಿದೆ. ಆ ಬೆಳೆಗಳು ಯಾವುವು?
 (1)ಅಕ್ಕಿ ಮತ್ತು ಗೋಧಿ
 (2)ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳು
 (3)ಅಕ್ಕಿ, ಗೋಧಿ, ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳು
 (4)ಅಕ್ಕಿ, ಗೋಧಿ, ಬೇಳೆಕಾಳುಗಳು, ಎಣ್ಣೆ ಬೀಜಗಳು ಮತ್ತು ತರಕಾರಿಗಳು
CORRECT ANSWER

(2) ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳು


25.ಅಕ್ಬರ್ ಹಶೆಮಿ ರಫ್‌ಸೆನ್ಜಾನಿಯವರು ಇತ್ತೀಚೆಗೆ ನಿಧನ ಹೊಂದಿದ್ದು, ಇವರು ಯಾವ ದೇಶದ ಹಿಂದಿನ ರಾಷ್ಟ್ರಾಧ್ಯಕ್ಷರಾಗಿದ್ದರು?
 (1)ಸಿರಿಯಾ
 (2)ಇರಾಕ್
 (3)ಇರಾನ್
 (4)ಇಸ್ರೇಲ್
CORRECT ANSWER

(3) ಇರಾನ್


26.ಭಾರತದ ಮೊದಲ ಅಂತರರಾಷ್ಟ್ರೀಯ ಸ್ಟಾಕ್ ವಿನಿಮಯ ಕೇಂದ್ರವಾದ ‘‘ಭಾರತೀಯ ಅಂತರರಾಷ್ಟ್ರೀಯ ವಿನಿಮಯ’’ ಕೇಂದ್ರವು ಯಾವ ನಗರದಲ್ಲಿ ಸ್ಥಾಪಿತವಾಯಿತು?
 (1)ಲಕ್ನೋ
 (2)ಗಾಂಧಿನಗರ
 (3)ಬೆಂಗಳೂರು
 (4)ಮುಂಬಯಿ
CORRECT ANSWER

(2) ಗಾಂಧಿನಗರ


27.ಚಲನಚಿತ್ರ ತಾರೆಗಳಾದ ರೋಯನ್ ಗೋಸ್ಲಿಂಗ್ ಮತ್ತು ಎಮ್ಮಾ ಸ್ಟೋನ್ ಮತ್ತು ಡೇಮಿಯನ್ ಚಚಾಲಾರಿಂದ ನಿರ್ದೇಶಿತವಾದ ಏಕೈಕ ಚಲನಚಿತ್ರವು 74ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2017ರಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಗಳಿಸಿದ ದಾಖಲೆಗಳನ್ನು ನಿರ್ಮಿಸಿದ್ದು ಇದು
 (1)ಲಾ ಲಾ ಲ್ಯಾಂಡ್
 (2)ಮೂನ್ ಲೈಟ್
 (3)20ನೇ ಶತಮಾನದ ಮಹಿಳೆ
 (4)ಸಮುದ್ರದಿಂದಾದ ಮ್ಯಾಂಚೆಸ್ಟರ್
CORRECT ANSWER

(1) ಲಾ ಲಾ ಲ್ಯಾಂಡ್


28.ಅಮೇರಿಕಾದ ಮಹತ್ತರ ಗೀತ ಪರಂಪರೆಯೊಳಗೆ ಹೊಸ ಕಾವ್ಯಾತ್ಮಕ ಅಭಿವ್ಯಕ್ತಿಗಳನ್ನು ಸೃಷ್ಟಿಸಿದುದಕ್ಕಾಗಿ ಹೆಸರಾದ 2016ನೇ ಸಾಲಿನ ಸಾಹಿತ್ಯದ ನೊಬೆಲ್ ಪಾರಿತೋಷಕವನ್ನು ಗಳಿಸಿದವರು
 (1)ಬಾಬ್ ಡೈಲಾನ್
 (2)ಹರುಕಿ ಮುರಾಕಾಮಿ
 (3)ಜೋಯ್ಸ್ ಕ್ಯಾರೊಲ್
 (4)ಅಡೊನಿಲ್
CORRECT ANSWER

(1) ಬಾಬ್ ಡೈಲಾನ್


29.ಎಡ್ವರ್ಡ್ ಸ್ನೋಡೆನ್‌ರಿಗೆ ಯಾವ ದೇಶದಿಂದ ಆಸರೆ ದೊರಕಿತು?
 (1)ರಷ್ಯಾ
 (2)ಹಾಂಗ್‌ಕಾಂಗ್
 (3)ಫ್ರಾನ್ಸ್
 (4)ಚೈನಾ
CORRECT ANSWER

(1) ರಷ್ಯಾ


30.‘‘ವೈಸರಾಯರ ಅರಮನೆಯ ಮೆಟ್ಟಿಲುಗಳ ಮೇಲೆ ಗಾಂಧೀಜಿಯವರು ರಾಜಿಗಾಗಿ ನಿಂತಿರುವ ತೇಜೋವಧೆಯ ಶೋಚನೀಯ ವಾಕರಿಕೆ ಬರಿಸುವ ದೃಶ್ಯ… ‘‘ರಾಜ ಚಕ್ರವರ್ತಿಗಳ’’ ಪ್ರತಿನಿಧಿಗಳೊಂದಿಗೆ ಎಂಬ ಸಂವಾದಿ ಪದಗಳೊಂದಿಗೆ’’. ಹೀಗೆ ನುಡಿದವರು ಯಾರು?
 (1)ಕ್ಲೆಮೆಂಟ್ ಅಟ್ಲೀ
 (2)ವಿಲಿಯಮ್ ಡಿಗ್ಬಿ
 (3)ವಿನ್‌ಸ್ಟನ್‌ ಚರ್ಚಿಲ್
 (4)ಸ್ಟೈಫೋರ್ಡ್ ಕ್ರಿಪ್ಸ್
CORRECT ANSWER

(3) ವಿನ್‌ಸ್ಟನ್‌ ಚರ್ಚಿಲ್


31.ರಬ್ಬರ್ ಉತ್ಪಾದನೆಯಲ್ಲಿ ಭಾರತದ ಯಾವ ರಾಜ್ಯವು ಮುಂಚೂಣಿಯಲ್ಲಿದೆ?
 (1)ತಮಿಳುನಾಡು
 (2)ಕೇರಳ
 (3)ಕರ್ನಾಟಕ
 (4)ಗುಜರಾತ್
CORRECT ANSWER

(2) ಕೇರಳ


32.I ಪಟ್ಟಿಯಲ್ಲಿನ ಜಲವಿದ್ಯುತ್ ಕೇಂದ್ರಗಳೊಂದಿಗೆ II ಪಟ್ಟಿಯಲ್ಲಿನ ನದಿಗಳನ್ನು ಹೊಂದಿಸಿರಿ :
  ಪಟ್ಟಿ – I (ಜಲವಿದ್ಯುತ್ ಕೇಂದ್ರ) ಪಟ್ಟಿ – II (ನದಿಗಳು)
 A.ಹಿರಾಕುಡ್I.ರಿಹಾಂದ್
 B.ವಾಲ್ಮೀಕಿನಗರ್II.ಗಂಡಕ್
 C.ಪಿಪ್ರಿIII.ಚಂಬಲ್
 D.ಕೋಟIV.ಮಹಾನದಿ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IVIIIIII
 (2)IVIIIIII
 (3)IIIIIIIV
 (4)IIIIIIVI
CORRECT ANSWER

(1) IV, II, I, III


33.ಒಂದು ನ್ಯೂಕ್ಲಿಯರ್ ರಿಯಾಕ್ಟರ್‌ನಲ್ಲಿನ ಭಾರ ಜಲದ ಕಾರ್ಯವೆಂದರೆ:
 (1)ನ್ಯೂಟ್ರಾನುಗಳ ವೇಗವನ್ನು ನಿಧಾನಗೊಳಿಸುವುದು
 (2)ನ್ಯೂಟ್ರಾನುಗಳ ವೇಗವನ್ನು ಹೆಚ್ಚಿಸುವುದು
 (3)ರಿಯಾಕ್ಟರ್ಅನ್ನು ತಂಪುಗೊಳಿಸುವುದು
 (4)ನ್ಯೂಕ್ಲಿಯರ್ ಪ್ರತಿಕ್ರಿಯೆಗಳನ್ನು ನಿಲ್ಲಿಸುವುದು
CORRECT ANSWER

(1) ನ್ಯೂಟ್ರಾನುಗಳ ವೇಗವನ್ನು ನಿಧಾನಗೊಳಿಸುವುದು (3) ರಿಯಾಕ್ಟರ್ಅನ್ನು ತಂಪುಗೊಳಿಸುವುದು


34.ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ನೀಡುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯು ವಾರ್ಷಿಕವಾಗಿ ಇವರಿಗೆ ನೀಡಲ್ಪಡುವುದು
 (1)ಸಿ.ಎಸ್.ಐ.ಆರ್.
 (2)ಐ.ಎಸ್.ಆರ್.ಓ.
 (3)ಐ.ಐ.ಟಿ.
 (4)ಟಿ.ಐ.ಎಸ್.ಎಸ್.
CORRECT ANSWER

(1) ಸಿ.ಎಸ್.ಐ.ಆರ್.


35.ಈ ಕೆಳಗಿನವುಗಳಲ್ಲಿ ಯಾವುದು ಸರಿ ?
 (1)ಸಾಕ್ರಟೀಸನು ಪ್ಲೇಟೋನ ಶಿಷ್ಯನಾಗಿದ್ದನು.
 (2)ಪ್ಲೇಟೋನು ಸಾಕ್ರಟೀಸನ ಶಿಷ್ಯನಾಗಿದ್ದನು.
 (3)ಪ್ಲೇಟೋನು ಅರಿಸ್ಟಾಟಲ್‌ನ ಶಿಷ್ಯನಾಗಿದ್ದನು.
 (4)ಸಾಕ್ರಟೀಸ್ ಮತ್ತು ಪ್ಲೇಟೋರು ಅರಿಸ್ಟಾಟಲ್‌ನ ಶಿಷ್ಯರಾಗಿದ್ದರು.
CORRECT ANSWER

(2) ಪ್ಲೇಟೋನು ಸಾಕ್ರಟೀಸನ ಶಿಷ್ಯನಾಗಿದ್ದನು.


36.‘ಕ್ರಿಕೆಟ್ ಸಂಸ್ಥೆಯಲ್ಲಿ ಹುಲಿ’ ಎಂದು ಗುರುತಿಸಲಾದ ಕ್ರಿಕೆಟ್ ಆಟಗಾರ ಮತ್ತು ‘ಪಟೌಡಿಯ ನವಾಬ’ ಎಂದು ಕರೆಸಿಕೊಂಡವ
 (1)ಸೈಫ್‌ ಅಲಿ ಖಾನ್
 (2)ಮನ್ಸೂರ್ ಅಲಿ ಖಾನ್
 (3)ಪಾಲಿ ಉಮ್ರೀಗರ್
 (4)ಯೂಸ್‌ಫ್‌ ಖಾನ್
CORRECT ANSWER

(2) ಮನ್ಸೂರ್ ಅಲಿ ಖಾನ್


37.ಎಂ.ಎಫ್‌. ಹುಸೇನರನ್ನು ಹೀಗೆಂದೂ ಕರೆಯಲಾಗಿದೆ.
 (1)ಭಾರತದ ಮೈಕೆಲಾಂಜೆಲೋ
 (2)ಭಾರತದ ಸಾಕ್ರಟೀಸ್
 (3)ಭಾರತದ ಪ್ಲೇಟೋ
 (4)ಭಾರತದ ಪಿಕಾಸೋ
CORRECT ANSWER

(4) ಭಾರತದ ಪಿಕಾಸೋ


38.ಅರ್ಜೆಂಟೈನಾ ಮತ್ತು ಆಲ್ಬೇನಿಯಾಗಳ ರಾಜಧಾನಿ ಯಾವುದು ?
 (1)ಅರ್ಜೆಂಟೈನಾ – ಮನಾಮ, ಆಲ್ಬೇನಿಯಾ – ಬಾಕು
 (2)ಅರ್ಜೆಂಟೈನಾ – ಬ್ಯೂನಸ್ ಐರಿಸ್, ಆಲ್ಬೇನಿಯಾ – ತಿರಾನಾ
 (3)ಅರ್ಜೆಂಟೈನಾ – ಬೆಲ್ಮೊಪಾನ್, ಆಲ್ಬೇನಿಯಾ – ಯೆರೆವಾನ್
 (4)ಅರ್ಜೆಂಟೈನಾ – ಮಿನ್ಸ್ಕ್, ಆಲ್ಬೇನಿಯಾ – ಬೆಲ್ಮೊಪಾನ್
CORRECT ANSWER

(2) ಅರ್ಜೆಂಟೈನಾ – ಬ್ಯೂನಸ್ ಐರಿಸ್, ಆಲ್ಬೇನಿಯಾ – ತಿರಾನಾ


39.ಯುನೈಟೆಡ್ ಅರಬ್ಸ್ ಎಮಿರೇಟ್‌ನ ಕರೆನ್ಸಿ ಯಾವುದು ?
 (1)ಯು.ಎ.ಇ. ದಿರ್ಹಾಮ್‌
 (2)ಯು.ಎ.ಇ. ದೀನಾರ್
 (3)ಯು.ಎ.ಇ. ಲೀರಾ
 (4)ಯು.ಎ.ಇ. ರಿಯಾದ್
CORRECT ANSWER

(1) ಯು.ಎ.ಇ. ದಿರ್ಹಾಮ್‌


40.ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯವ್ಯಯವನ್ನು ಮಂಡಿಸಿದವರು ಯಾರು ?
 (1)ಮೊರಾರ್ಜಿ ದೇಸಾಯಿ
 (2)ಜಾನ್ ಮಥಾಯ್
 (3)ಆರ್.ಕೆ. ಷಣ್ಮುಖಂ ಚೆಟ್ಟಿ
 (4)ಎನ್.ಕೆ. ಚಂದಾ
CORRECT ANSWER

(3) ಆರ್.ಕೆ. ಷಣ್ಮುಖಂ ಚೆಟ್ಟಿ


41.ಭಾರತದಲ್ಲಿನ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ?
 (1)ಭಾರತದಲ್ಲಿನ ಹಣದುಬ್ಬರವನ್ನು ನಿಯಂತ್ರಿಸುವುದು ಭಾರತ ಸರ್ಕಾರದ್ದಷ್ಟೇ ಹೊಣೆಗಾರಿಕೆಯಾಗಿದೆ
 (2)ಹಣದುಬ್ಬರವನ್ನು ನಿಯಂತ್ರಿಸುವುದರಲ್ಲಿ ರಿಸರ್ವ್ ಬ್ಯಾಂಕ್‌ನ ಪಾತ್ರವಿಲ್ಲ.
 (3)ಹಣ ಚಲಾವಣೆಯಲ್ಲಿನ ಕುಸಿತವು ಹಣದುಬ್ಬರದ ನಿಯಂತ್ರಣಕ್ಕೆ ಸಹಾಯಕವಾಗಿದೆ.
 (4)ಹಣ ಚಲಾವಣೆಯಲ್ಲಿನ ಹೆಚ್ಚಳವು ಹಣದುಬ್ಬರದ ನಿಯಂತ್ರಣಕ್ಕೆ ಸಹಾಯಕವಾಗಿದೆ.
CORRECT ANSWER

(3) ಹಣ ಚಲಾವಣೆಯಲ್ಲಿನ ಕುಸಿತವು ಹಣದುಬ್ಬರದ ನಿಯಂತ್ರಣಕ್ಕೆ ಸಹಾಯಕವಾಗಿದೆ.


42.2011ರ ಜನಗಣತಿಯ ಮೇರೆಗೆ ಒಂದು ಚ.ಕಿ. ಮೀ.ಗೆ 1102 ವ್ಯಕ್ತಿಗಳನ್ನು ಹೊಂದಿ ಅತ್ಯಂತ ಜನದಟ್ಟಣೆಯನ್ನು ಹೊಂದಿದೆ ಎಂದೆನಿಸಿದ ರಾಜ್ಯ ಯಾವುದು ?
 (1)ಬಿಹಾರ್
 (2)ಪಶ್ವಿಮ ಬಂಗಾಳ
 (3)ಕೇರಳ
 (4)ಉತ್ತರ ಪ್ರದೇಶ
CORRECT ANSWER

(1) ಬಿಹಾರ್


43.ಭಾರತದಲ್ಲಿ ತಲಾ ಕೃಷಿ ಹಿಡುವಳಿ ಭೂಮಿಯ ಹೊಂದಿರುವಿಕೆಯು ಕಡಿಮೆ ಇರುವುದಕ್ಕೆ ಕೆಳಗಿನವುಗಳಲ್ಲಿ ಯಾವುವು ಕಾರಣವಾಗಿವೆ ?
 A.ಕೃಷಿಯ ವ್ಯಾಪಕತೆ
 B.ಜನಸಂಖ್ಯೆಯಲ್ಲಿನ ತೀವ್ರಗತಿಯ ಹೆಚ್ಚಳ
 C.ಉತ್ತರಾಧಿಕಾರಿಗಳಿಗೆ ಭೂಮಿಯನ್ನು ಸಮಾನವಾಗಿ ಭಾಗ ಮಾಡುವ ಪದ್ಧತಿ
 D.ತಳೀಯ ಪರಿಷ್ಕೃತ (GM)ಬೆಳೆಗಳ ಬೆಳೆಯುವಿಕೆ
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B
 (2)B ಮತ್ತು C
 (3)A ಮತ್ತು D
 (4)A, B ಮತ್ತು D
CORRECT ANSWER

(2) B ಮತ್ತು C


44.ಕೆಳಗಿನವುಗಳನ್ನು ಹೊಂದಿಸಿ
  ಸೂಚಿ – I ಸೂಚಿ – II
 A.ಆರ್ಥಿಕ ಕಡಿತI.ನಿರ್ದಿಷ್ಟ ಕುಂದು ಕೊರತೆಯನ್ನು ಸರಿಪಡಿಸುವುದು
 B.ಟೋಕನ್ ಕಡಿತII.ಲೋಕಸಭೆಯಲ್ಲಿ ಅನುಮೋದನೆ. ಆದರೆ ಸಚಿವ ಮಂಡಳಿ ರಾಜೀನಾಮೆ ನೀಡುವುದು
 C.ದಂಡನಾ ನಿರ್ಣಯIII.ನೀತಿಯ ನಿರಾಕರಣೆ
 D.ನೀತಿ ಕಡಿತIV.ನಿರ್ದಿಷ್ಟ ಮೊತ್ತದಷ್ಟು ಬೇಡಿಕೆಯನ್ನು ತಗ್ಗಿಸುವುದು
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IIIVIIII
 (2)IVIIIIII
 (3)IVIIIIII
 (4)IVIIIIII
CORRECT ANSWER

(3) IV, I, II, III


45.ಸಂವಿಧಾನಾತ್ಮಕ ಪರಿಹಾರ ಹಕ್ಕು ಕುರಿತಂತೆ ಈ ಹೇಳಿಕೆಗಳನ್ನು ಪರಿಗಣಿಸಿ.
 A.ರಿಟ್ ನೀಡಿಕೆಯು ಹಕ್ಕಿನ ವಿಷಯ
 B.ಶಾಸನದಿಂದ ಹಕ್ಕನ್ನು ಸಂಕ್ಷೇಪನ ಗೊಳಿಸಬಹುದು
 C.ಅಸಮಾಧಾನಕ್ಕೊಳಗಾದವರು ಮೊದಲು ಉಚ್ಚ ನ್ಯಾಯಾಲಯಕ್ಕೆ ಸಾಗಿ ಅನಂತರ ಸರ್ವೋಚ್ಚ ನ್ಯಾಯಲಯಕ್ಕೆ ಮನವಿ ಸಲ್ಲಿಸಬೇಕು.
 D.ಅನುಚ್ಛೇದ 32ರ ಪ್ರಕಾರ ಪರ್ಯಾಯ ಪರಿಹಾರ ಲಭ್ಯತೆಗೆ ಅಡ್ಡಿಯಿಲ್ಲ
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು D ಮಾತ್ರ
 (2)B ಮತ್ತು C ಮಾತ್ರ
 (3)B ಮತ್ತು D ಮಾತ್ರ
 (4)A ಮತ್ತು B ಮಾತ್ರ
CORRECT ANSWER

(1) A ಮತ್ತು D ಮಾತ್ರ


46.ಕೇಂದ್ರ ಶಾಸನ ಸಭೆಯ ಎರಡು ಸದನಗಳು 1935ರ ಭಾರತ ಸರ್ಕಾರದ ಕಾಯ್ದೆ ಪ್ರಕಾರ:
 (1)ವಿಧಾನ ಸಭೆ ಮತ್ತು ವಿಧಾನ ಪರಿಷತ್ತು
 (2)ಪ್ರಾಂತೀಯ ವಿಧಾನಸಭೆ ಮತ್ತು ಕೇಂದ್ರ ಶಾಸನ ಸಭೆ
 (3)ಫೆಡರಲ್ ಅಸೆಂಬ್ಲಿ ಮತ್ತು ರಾಜ್ಯಗಳ ಮಂಡಲಿ
 (4)ಮೇಲಿನ ಯಾವುವೂ ಅಲ್ಲ
CORRECT ANSWER

(3) ಫೆಡರಲ್ ಅಸೆಂಬ್ಲಿ ಮತ್ತು ರಾಜ್ಯಗಳ ಮಂಡಲಿ


47.ಪರಿಶಿಷ್ಟ ಜಾತಿಯವರಿಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗ ಕುರಿತಂತೆ ಈ ಹೇಳಿಕೆಗಳನ್ನು ಪರಿಗಣಿಸಿ :
 A.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಹಿತಾಸಕ್ತಿಗಳಿಗೆ ಮತ್ತು ಹಕ್ಕುಗಳಿಗೆ ಕುಂದು ಉಂಟಾದದ್ದರ ಬಗ್ಗೆ ನಿರ್ದಿಷ್ಟ ದೂರುಗಳನ್ನು ಪರಿಶೀಲಿಸುವುದು ಅದರ ಕರ್ತವ್ಯಗಳಲ್ಲೊಂದಾಗಿದೆ.
 B.ಕೇಂದ್ರಸರ್ಕಾರ ಹಾಗೂ ಪ್ರತಿ ರಾಜ್ಯ ಸರ್ಕಾರಗಳೂ ಪ್ರಮುಖ ಪರಿಶಿಷ್ಟ ಜಾತಿಯವರ ಹಿತಾಸಕ್ತಿ ಮೇಲೆ ಪ್ರಭಾವ ಬೀರುವ ಪ್ರಮುಖ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಆಯೋಗದೊಂದಿಗೆ ಸಮಾಲೋಚಿಸುವುದು.
 C.ಈ ಸುರಕ್ಷಾ ಕ್ರಮಗಳ ಬಗೆಗೆ ಆಯೋಗವು ಅಗತ್ಯವೆನಿಸಿದರೆ ವರದಿಯನ್ನು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ವಾರ್ಷಿಕವಾಗಿ ಮತ್ತು ಬೇರೆ ಸಮಯಗಳಲ್ಲಿ ವರದಿ ಮಾಡುವುದು.
 D.ಪರಿಶಿಷ್ಟ ಜಾತಿಯವರ ವಿರುದ್ಧ ನಡೆದ ದೌರ್ಜನ್ಯ ಕುರಿತಂತೆ ಕ್ರಿಮಿನಲ್ ನ್ಯಾಯಾಲಯ ಆಗಿ ಕಾರ್ಯ ನಿರ್ವಹಿಸುವುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)A, C ಮತ್ತು D ಮಾತ್ರ
 (3)C ಮತ್ತು D ಮಾತ್ರ
 (4)A ಮತ್ತು B ಮಾತ್ರ
CORRECT ANSWER

(4) A ಮತ್ತು B ಮಾತ್ರ


48.ಕಾರು ಶೈತ್ಯಕವು
 A.ನೀರಿನ ಕುದಿಯುವ ಬಿಂದುವನ್ನು ಹೆಚ್ಚಳಗೊಳಿಸುವುದು.
 B.ನೀರಿನ ಘನೀಭವನ ಬಿಂದುವನ್ನು ತಗ್ಗಿಸುವುದು.
 C.ಇಂಜನ್ನಿನ ಲೋಹೀಯ ಭಾಗಗಳ ತುಕ್ಕು ಹಿಡಿಯುವಿಕೆಯನ್ನು ಕಡಿಮೆ ಮಾಡುವುದು.
 D.ಪೆಟ್ರೋಲ್‌ನ ಉಪಯೋಗವನ್ನು ತಗ್ಗಿಸುವುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B
 (2)A, B ಮತ್ತು C
 (3)A, B ಮತ್ತು D
 (4)A, C ಮತ್ತು D
CORRECT ANSWER

(2) A, B ಮತ್ತು C


49.ವ್ಯಕ್ತಿಯ ತೂಕ ಶೂನ್ಯವಾಗುವುದು ಯಾವಾಗ ಎಂದರೆ
 A.ಅವನು ಮುಕ್ತವಾಗಿ ಕೆಳಗೆ ಬೀಳುವಾಗ.
 B.ಅವನು ಉಪಗ್ರಹದಲ್ಲಿ ಸುತ್ತುವಾಗ
 C.ಅವನು ಅತಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಡುವಾಗ
 D.ಅವನು ಅನಿಲ ಭರಿತ ಬೆಲೂನಿನಲ್ಲಿ ಸವಾರಿ ಮಾಡುವಾಗ
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಗಳು ಸರಿ
 (2)A ಮತ್ತು D ಗಳು ಸರಿ
 (3)A, B ಮತ್ತು D ಗಳು ಸರಿ
 (4)A, B, C ಮತ್ತು D ಗಳು ಸರಿ
CORRECT ANSWER

(1) A ಮತ್ತು B ಗಳು ಸರಿ


50.ಭಾರತಕ್ಕೆ ಸ್ವಯಂ ಆಡಳಿತ ಸರ್ಕಾರವನ್ನು ಆಧುನಿಕ ಷರತ್ತುಗಳಡಿಯಲ್ಲಿ ಪ್ರಾಚೀನ ಭಾರತ ಜೀವನವನ್ನು ಪೂರೈಸುವಂತಿರಬೇಕು ಮತ್ತು ಅಂತಿಮವಾಗಿ ವೇದಾಂತ ಆದರ್ಶಕ್ಕನುಗುಣವಾಗಿರಬೇಕೆಂದು ಪ್ರತಿಪಾದಿಸಿದ ರಾಷ್ಟ್ರೀಯತಾವಾದಿಗಳು ಯಾರು ?
 (1)ರಾಜಾರಾಮ್ ಮೋಹನ್ ರಾಯ್
 (2)ಜಿ.ಕೆ. ಗೋಖಲೆ
 (3)ಅರಬಿಂದೋ ಘೋಷ್
 (4)ಶ್ರೀಮತಿ ಅನಿಬೆಸೆಂಟ್
CORRECT ANSWER

(3) ಅರಬಿಂದೋ ಘೋಷ್


51.‘ಯಾವುದೇ ಆಕಾರ ಅಥವಾ ರೂಪದಲ್ಲಿ ಸಹಕಾರವನ್ನು ಸೈತಾನಿಕಿ ಸರ್ಕಾರದೊಂದಿಗೆ ನೀಡುವುದು ಪಾಪ’ – ಎಂದು ಗಾಂಧೀಜಿ ಘೋಷಿಸಿದ್ದು ಈ ಕೆಳಗಿನ ಯಾವ ಘಟನೆಯ ನಂತರ ?
 (1)ರೌಲೆಟ್ ಕಾಯ್ದೆಯು ಜಾರಿಯಾದಾಗ
 (2)ಪಂಜಾಬಿನಲ್ಲಿಯ ಜಲಿಯನ್‌ವಾಲಾಬಾಗ್ ದುರಂತ
 (3)ಎರಡನೇ ದುಂಡು ಮೇಜು ಪರಿಷತ್ತಿನ ವೈಫಲ್ಯ
 (4)ಮೇಲಿನ ಯಾವುವೂ ಅಲ್ಲ
CORRECT ANSWER

(2) ಪಂಜಾಬಿನಲ್ಲಿಯ ಜಲಿಯನ್‌ವಾಲಾಬಾಗ್ ದುರಂತ


52.ಈ ಹೇಳಿಕೆಗಳ ಸರಿಯಾದ ಕಾಲಾನುಕ್ರಮ ಆಯ್ಕೆ ಮಾಡಿ:
 A.ಸಬರ್‌ಮತಿ ಆಶ್ರಮದಿಂದ ದಂಡಿ ಸಮುದ್ರ ತೀರಕ್ಕೆ ನಡಿಗೆ
 B.ಲಾಹೋರ್ ಕಾಂಗ್ರೆಸ್ ಅಧಿವೇಶನ
 C.ಗಾಂಧೀಜಿ ಎರಡನೆಯ ದುಂಡುಮೇಜು ಪರಿಷತ್ತಿನಲ್ಲಿ ಭಾಗವಹಿಸಿದ್ದು
 D.ಗಾಂಧಿ ಇರ್ವಿನ್ ಒಪ್ಪಂದ
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)B, C, D, A
 (2)A, C, D, B
 (3)B, A, D, C
 (4)A, B, D, C
CORRECT ANSWER

(3) B, A, D, C


53.ಸಂಘವನ್ನು ರಚಿಸುವ ಹಕ್ಕಿನಲ್ಲಿ ಈ ಪೈಕಿ ಯಾವುದನ್ನು ನೀಡಲಾಗಿಲ್ಲ?
 A.ಟ್ರೇಡ್ ಯೂನಿಯನ್ ರೂಪಿಸುವ ಹಕ್ಕು
 B.ಮುಷ್ಕರಕ್ಕೆ ಕರೆ ನೀಡುವ ಹಕ್ಕು
 C.ಸಂಘ ರಚಿಸುವಾಗ ಮಾನ್ಯತೆ ಪಡೆಯುವಾಗ ಸರ್ಕಾರದಿಂದ ವಿಧಿಸಲ್ಪಟ್ಟ ಷರತ್ತುಗಳನ್ನು ಎದುರಿಸುವುದು.
 D.ಅಪೇಕ್ಷಿಸಿದಾಗ ಸಂಘದ ಸದಸ್ಯರಾಗುವ ಹಕ್ಕು.
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು D ಮಾತ್ರ
 (2)B ಮಾತ್ರ
 (3)C ಮಾತ್ರ
 (4)B ಮತ್ತು C ಮಾತ್ರ
CORRECT ANSWER

(4) B ಮತ್ತು C ಮಾತ್ರ


54.ಆದಿವಾಸಿ ಇಲ್ಲವೇ ಆದಿವಾಸಿ ಸಮುದಾಯ ಅಥವಾ ಭಾಗಶಃ ಅಥವಾ ಆದಿವಾಸಿಗಳೊಳಗೆ ಅಥವಾ ಆದಿವಾಸಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಅಧಿಸೂಚಿಸುವಾಗ ರಾಷ್ಟ್ರಪತಿಯವರು ಯಾರನ್ನು ಸಮಾಲೋಚಿಸಬೇಕು ?
 (1)ಸಂಬಂಧಿಸಿದ ರಾಜ್ಯದ ಮುಖ್ಯಮಂತ್ರಿ
 (2)ಭಾರತದ ಮುಖ್ಯ ನ್ಯಾಯಾಧೀಶರು
 (3)ಸಂಬಂಧಿಸಿದ ರಾಜ್ಯದ ರಾಜ್ಯಪಾಲರು
 (4)ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರು
CORRECT ANSWER

(3) ಸಂಬಂಧಿಸಿದ ರಾಜ್ಯದ ರಾಜ್ಯಪಾಲರು


55.ಈ ಕೆಳಗಿನ ಹೇಳಿಕೆಗಳನ್ನು ಭಾರತದ ರಾಜಕಾರಣಕ್ಕೆ ಸಂಬಂಧಿಸಿದಂತೆ – ಪರಿಗಣಿಸಿ:
 A.ಸಂವಿಧಾನದ ಸಾರ್ವಭೌಮತೆ.
 B.ದ್ವಿನ್ಯಾಯಾಲಯದ ವ್ಯವಸ್ಥೆಯ ಗೈರುಹಾಜರು
 C.ಅಖಿಲ ಭಾರತ ಸೇವೆಗಳ ಸೃಷ್ಟಿ
 D.ಸಂವಿಧಾನದ 7 ನೇ ಅನುಸೂಚಿ
  ಈ ಪೈಕಿ ಯಾವುದು/ಯಾವುವು ಭಾರತದ ರಾಜಕೀಯತೆಯ ಏಕತೆ ಸ್ವರೂಪದವು ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮತ್ತು C ಮಾತ್ರ
 (3)B,C ಮತ್ತು D ಮಾತ್ರ
 (4)B ಮಾತ್ರ
CORRECT ANSWER

(2) B ಮತ್ತು C ಮಾತ್ರ


56.ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕುರಿತಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಈ ಪೈಕಿ ಯಾವ ಹೇಳಿಕೆಗಳು ಸರಿ?
 A.ತನ್ನ ಧರ್ಮದ ಪ್ರಸಾರವೆಂದರೆ, ಇತರ ಧರ್ಮದವರನ್ನು ತನ್ನ ಧರ್ಮಕ್ಕೆ ಮತಾಂತರಿಸುವುದು.
 B.ಒಬ್ಬ ವ್ಯಕ್ತಿಯು ಇನ್ನೊಂದು ಧರ್ಮವನ್ನು ಅಳವಡಿಸಿಕೊಳ್ಳಲು ಸ್ವತಂತ್ರ
 C.ಧರ್ಮದ ಅತ್ಯಗತ್ಯ ಭಾಗವೆಂದು ಆ ಧರ್ಮ ಪರಿಗಣಿಸುವುದೋ ಅದನ್ನು ನ್ಯಾಯಾಂಗ ಪರಿಶೀಲನೆಗೆ ಒಳ ಪಡಿಸುವುದು.
 D.ಆಡಳಿತವನ್ನು ಸಾಮಾಜಿಕ ಕ್ಷೇಮ ಅಥವಾ ಸುಧಾರಣೆ ಮಾಡುವಲ್ಲಿ ತಡೆಹಿಡಿಯದಿರುವುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಲ್ಲ ?
 (1)A ಮಾತ್ರ
 (2)B ಮಾತ್ರ
 (3)B ಮತ್ತು C ಮಾತ್ರ
 (4)B,C ಮತ್ತು D ಮಾತ್ರ
CORRECT ANSWER

(4) B,C ಮತ್ತು D ಮಾತ್ರ


57.ಈ ಪೈಕಿ ಯಾವ ಹೇಳಿಕೆ/ಗಳು ಶಾಸಕಾಂಗ ವಿಧಾನಗಳಿಗೆ ಸಂಬಂಧಿಸಿದಂತೆ ಸರಿ :
 A.ಎರಡು ಸದನಗಳಲ್ಲಿ ಹಣಕಾಸು ಮಸೂದೆಗೆ ಸ್ಥಗಿತತೆ ಉಂಟಾದಾಗ ರಾಷ್ಟ್ರಪತಿಗಳು ಪಾರ್ಲಿಮೆಂಟಿನ ಜಂಟಿ ಸಭೆ ಕರೆಯಬಹುದು.
 B.ಎರಡೂ ಸದನಗಳಲ್ಲಿ ಸಾಮಾನ್ಯ ಮಸೂದೆಗೆ ಸ್ಥಗಿತತೆ ಉಂಟಾದಾಗ ರಾಜ್ಯಪಾಲರು ಶಾಸಕಾಂಗದ ಜಂಟಿ ಸದನದ ಸಭೆ ಕರೆಯುವರು.
 C.ಎರಡು ಸದನಗಳ ನಡುವೆ ಸಾಮಾನ್ಯ ಮಸೂದೆಗೆ ಸ್ಥಗಿತತೆ ಉಂಟಾದಾಗ ರಾಷ್ಟ್ರಪತಿಗಳು ಲೋಕಸಭೆಯ ಎರಡು ಸದನಗಳ ಜಂಟಿ ಸಭೆ ಕರೆಯುವರು.
  ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮತ್ತು C ಮಾತ್ರ
 (3)B ಮಾತ್ರ
 (4)C ಮಾತ್ರ
CORRECT ANSWER

(4) C ಮಾತ್ರ


58.ರಾಜ್ಯ ನೀತಿ ನಿರ್ದೇಶನಾ ತತ್ವಗಳ ಯಾವ ಅನುಚ್ಛೇದವು ಹಸು ಮತ್ತು ಕರುಗಳ ಮತ್ತು ಇತರ ಕರಾವಿನ ಭಾರ ಎಳೆಯುವ ದನಕರುಗಳನ್ನು ಕಡಿಯುವುದನ್ನು ನಿಷೇಧಿಸುತ್ತದೆ.
 (1)ಅನುಚ್ಛೇದ 48
 (2)ಅನುಚ್ಛೇದ 47
 (3)ಅನುಚ್ಛೇದ 43A
 (4)ಅನುಚ್ಛೇದ 43
CORRECT ANSWER

(1) ಅನುಚ್ಛೇದ 48


59.ಪರಿವರ್ತಕವು ಇದಕ್ಕೆ ಬಳಕೆಯಾಗುವ ಸಾಧನ
 (1)DC ವೋಲ್ಟೇಜು ಹೆಚ್ಚಳ (ಅಥವಾ ತಗ್ಗಿಕೆ)
 (2)ವಿದ್ಯುತ್ ಉತ್ಪಾದನೆ
 (3)AC ಯನ್ನು DC ಆಗಿ ಪರಿವರ್ತಿಸುವುದು
 (4)AC ವೋಲ್ಟೇಜಿನ ಹೆಚ್ಚಳ ಇಲ್ಲವೆ ತಗ್ಗಿಕೆ
CORRECT ANSWER

(4) AC ವೋಲ್ಟೇಜಿನ ಹೆಚ್ಚಳ ಇಲ್ಲವೆ ತಗ್ಗಿಕೆ


60.ದ್ಯುತಿತಂತುಗಳು ಇಲ್ಲಿ ಉಪಯುಕ್ತ
 A.ಅತಿ ದೂರ ಸಂವಹನದಲ್ಲಿ
 B.ಜೆಟ್ ಇಂಜಿನ್ನುಗಳ ಆಂತರಿಕ ತಾಪವನ್ನು ಅಳೆಯುವ ಸಂವೇದಕಗಳು.
 C.ಸೂರಿನಿಂದ ಕಟ್ಟಡದ ವಿವಿಧ ಭಾಗಗಳಿಗೆ ಸೂರ್ಯನ ಬೆಳಕು ಪಸರಿಸಲು.
 D.ಎಂಡೋಸ್ಕೋಪಿಗಳಲ್ಲಿ
 ಮೇಲಿನವುಗಳಲ್ಲಿ ಯಾವುದು/ವು ಸರಿ ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A,B ಮತ್ತು C
 (2)A, C ಮತ್ತು D
 (3)A,B, C ಮತ್ತು D
 (4)B, C ಮತ್ತು D
CORRECT ANSWER

(3) A,B, C ಮತ್ತು D


61.ಮೈಕ್ರೋಫೋನಿನಲ್ಲಿ ಆಗುವ ಶಕ್ತಿ ಪರಿವರ್ತನೆಯು ಉಂಟಾಗುವುದು
 (1)ಶಬ್ದದಿಂದ ಯಾಂತ್ರಿಕದಿಂದ ವಿದ್ಯುತ್
 (2)ವಿದ್ಯುತ್ ದಿಂದ ಯಾಂತ್ರಿಕದಿಂದ ವಿದ್ಯುತ್
 (3)ಶಬ್ದದಿಂದ ಯಾಂತ್ರಿಕ
 (4)ಯಾಂತ್ರಿಕದಿಂದ ಶಬ್ದ
CORRECT ANSWER

(1) ಶಬ್ದದಿಂದ ಯಾಂತ್ರಿಕದಿಂದ ವಿದ್ಯುತ್


62.ಕ್ರಿ.ಶ. 1942ರಲ್ಲಿ ಭಾರತ ಬಿಟ್ಟುತೊಲಗಿ ಚಳವಳಿ ಪ್ರಾರಂಭವಾದಾಗ ಭಾರತದ ವೈಸರಾಯ್ ಆಗಿದ್ದವರು ಯಾರು?
 (1)ಲಿನ್‌ಲಿತ್‌ಗೋ
 (2)ವಿಲಿಂಗ್ಡನ್
 (3)ವೇವೆಲ್
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಲಿನ್‌ಲಿತ್‌ಗೋ


63.ವಸಾಹತು ಅವಧಿಯಲ್ಲಿನ ಕೆಲವು ಸಾಮಾಜಿಕ ಸುಧಾರಕರು ಮತ್ತು ಅವರ ಸಂಸ್ಥೆಗಳನ್ನು ಇಲ್ಲಿ ನೀಡಲಾಗಿದೆ.
 A.ಸೇವಾಸದನ : ಮಹರ್ಷಿ ಕರ್ವೆ
 B.ಸೋಷಿಯಲ್ ಸರ್ವೀಸ್ ಲೀಗ್ : ಚಂದಾವರ್ಬಾಯಿ
 C.ಸರ್ವೆಂಟ್ಸ್ ಆಫ್‌ ಇಂಡಿಯಾ ಸೊಸೈಟಿ : ಜಿ.ಕೆ. ಗೋಖಲೆ
 D.ಶಾರದಾ ಸದನ್ : ಪಂಡಿತಾ ರಾಮಾಬಾಯಿ
 ಮೇಲಿನವುಗಳಲ್ಲಿ ಯಾವುದು/ವು ಸರಿ ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು C ಮಾತ್ರ
 (2)B ಮತ್ತು C ಮಾತ್ರ
 (3)C ಮತ್ತು D ಮಾತ್ರ
 (4)A, B, C ಮತ್ತು D
CORRECT ANSWER

(3) C ಮತ್ತು D ಮಾತ್ರ


64.ಬರಿಕಣ್ಣಿಗೆ ಕಾಣುವ ಸಮೀಪದ ನಕ್ಷತ್ರ (ಸೂರ್ಯನಲ್ಲದ್ದು)
 (1)ಪ್ರಾಕ್ಸಿಮಾ ಸೆಂಟಾರಿ
 (2)ಆಲ್ಫ ಸೆಂಟಾರಿ
 (3)ಧ್ರುವ ನಕ್ಷತ್ರ
 (4)ವೇಗ
CORRECT ANSWER

(2) ಆಲ್ಫ ಸೆಂಟಾರಿ


65.60 ಜನ ವಿದ್ಯಾರ್ಥಿಗಳು ಇರುವ ತರಗತಿಯಲ್ಲಿ 1 ರಿಂದ 60ರವರೆಗೆ ಶ್ರೇಣೀಕರಿಸಲಾಗಿದೆ. ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗಿಂತ ಎರಡು ಪಟ್ಟು ಸಂಖ್ಯೆ ಇದ್ದಾರೆ. ಬಾಲಕರಲ್ಲಿ ಕಾರ್ತಿಕನಿಗಿಂತ ಹನ್ನೆರಡು ಹುಡುಗಿಯರು ಮುಂದೆ ಇದ್ದರೆ ಎಷ್ಟು ವಿದ್ಯಾರ್ಥಿಗಳು (ಬಾಲಕ) ಅವನ ನಂತರ ಇದ್ದಾರೆ ?
 (1)2
 (2)14
 (3)16
 (4)18
CORRECT ANSWER

(2) 14


66.ಈ ಪೆಟ್ಟಿಗೆಯಲ್ಲಿ ತಪ್ಪಿಹೋಗಿರುವ ಸಂಖ್ಯೆ
 (1)628
 (2)638
 (3)668
 (4)698
CORRECT ANSWER

(4) 698


67.ಹೆಂಡತಿಯ ವಯಸ್ಸಿನ ಸಂಖ್ಯೆಗಳನ್ನು ಅದಲು ಬದಲು ಮಾಡಿದರೆ ಗಂಡನ ವಯಸ್ಸು ಬರುತ್ತದೆ. ಅವರ ವಯಸ್ಸಿನ ಅಂತರ ಅವರ ವಯಸ್ಸಿನ ಮೊತ್ತದ ಹನ್ನೊಂದರಲ್ಲಿ ಒಂದು ಭಾಗವಾದರೆ ಆಗ ಪತ್ನಿಯ ವಯಸ್ಸು
 (1)56
 (2)45
 (3)34
 (4)23
CORRECT ANSWER

(2) 45


68.B ನಗರವು A ನಗರದ ದಕ್ಷಿಣಕ್ಕೆ 4 ಮೈಲಿ ದೂರ. Cಯು Bಯ ಪಶ್ಚಿಮಕ್ಕೆ 6 ಮೈಲಿ ದೂರ ಮತ್ತು D ನಗರವು Cಯ ದಕ್ಷಿಣಕ್ಕೆ 4 ಮೈಲಿ ದೂರ. A ಮತ್ತು Dಗಳ ನಡುವೆ ಇರುವ ಅತಿ ಕಡಿಮೆ ದೂರ
 (1)8 ಮೈಲಿ
 (2)12 ಮೈಲಿ
 (3)14 ಮೈಲಿ
 (4)10 ಮೈಲಿ
CORRECT ANSWER

(4) 10 ಮೈಲಿ


69.ಈ ಚಿತ್ರಗಳನ್ನು ಗಮನಿಸಿ :
ಈ ಪೈಕಿ ಯಾವುದು ನಾಲ್ಕನೆ ಸ್ಥಾಾನಕ್ಕೆ ಹೊಂದುವುದು ?
 (1)
 (2)
 (3)
 (4)
CORRECT ANSWER

(3)


70.3 ಪುರುಷರು ಮತ್ತು 7 ಮಹಿಳೆಯರು 10 ದಿನಗಳಲ್ಲಿ ಒಂದು ಕೆಲಸವನ್ನು ಮುಗಿಸುವರು. ಆದರೆ 4 ಪುರುಷರು ಮತ್ತು 6 ಮಹಿಳೆಯರು 8 ದಿನಗಳಲ್ಲಿ ಅದೇ ಕೆಲಸವನ್ನು ಮುಗಿಸುವರು. ಹಾಗಾದರೆ 10 ಮಹಿಳೆಯರು ಅದೇ ಕೆಲಸವನ್ನು ಎಷ್ಟು ದಿನದಲ್ಲಿ ಮುಗಿಸುವರು ?
 (1)30
 (2)20
 (3)50
 (4)40
CORRECT ANSWER

(4) 40


71.ಈ ಹೇಳಿಕೆಯನ್ನು ಓದಿ :
‘ಎಲ್ಲಾ ಮೊಬೈಲುಗಳು ಆ ಅಂಗಡಿಯಲ್ಲಿ ಮಾರಾಟವಾದವು. ಉತ್ತಮ ಗುಣಮಟ್ಟದವು. ಕೆಲವು ಸ್ಯಾಮ್ಸಂಗ್ ಮೊಬೈಲುಗಳು ಆ ಅಂಗಡಿಯಲ್ಲಿ ಮಾರಾಟವಾಗಿವೆ.’ ಈ ಪೈಕಿ ಯಾವ ತೀರ್ಮಾನವು ಸರಿ ?
 (1)ಸ್ಯಾಮ್‌ಸಂಗ್‌ನವರು ಉತ್ಪಾದಿಸಿದ ಎಲ್ಲ ಮೊಬೈಲುಗಳೂ ಉತ್ತಮ ಗುಣಮಟ್ಟದವು.
 (2)ಸ್ಯಾಮ್‌ಸಂಗ್‌ ಮೊಬೈಲುಗಳ ಪೈಕಿ ಕೆಲವು ಉತ್ತಮ ಗುಣಮಟ್ಟದವು.
 (3)ಯಾವುದೇ ಸ್ಯಾಮ್‌ಸಂಗ್‌ಮೊಬೈಲು ಉತ್ತಮ ಗುಣಮಟ್ಟದ್ದಲ್ಲ.
 (4)ಉತ್ತಮ ಗುಣಮಟ್ಟದ ಕೆಲವು ಸ್ಯಾಮ್‌ಸಂಗ್‌ ಮೊಬೈಲುಗಳು ಆ ಅಂಗಡಿಯಲ್ಲಿ ಮಾರಾಟವಾಗಲಿಲ್ಲ.
CORRECT ANSWER

(2) ಸ್ಯಾಮ್‌ಸಂಗ್‌ ಮೊಬೈಲುಗಳ ಪೈಕಿ ಕೆಲವು ಉತ್ತಮ ಗುಣಮಟ್ಟದವು.


72.ಈ ಸಂಖ್ಯೆಯ ಗಣಗಳ ಪೈಕಿ ಯಾವುದು {64, 16, 8} ಗಣದಂತಲ್ಲ?
 (1){96, 24, 12}
 (2){128, 32, 16)
 (3){144, 36, 18}
 (4){72, 18, 6}
CORRECT ANSWER

(4) {72, 18, 6}


73.ಈ ಪೈಕಿ ನಾಲ್ಕು ತಾರ್ಕಿಕ ವೆನ್ ನಕಾಶೆಗಳು ಈ ಸಂಬಂಧವನ್ನು ಪ್ರತಿನಿಧಿಸುವವು ?
ಸಂಗೀತಗಾರರು, ಪಿಟೀಲು ವಾದಕರು, ಗಾಯಕರು
 (1)
 (2)
 (3)
 (4)
CORRECT ANSWER

(1)


74.ಈ ಸರಣಿಯ ಮುಂದಿನ ಅಂಕೆ :
1, 2, 4, 5, 9, 10, 16, 17, 25, _____
 (1)36
 (2)26
 (3)25
 (4)24
CORRECT ANSWER

(2) 26


75.ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಸಂದರ್ಭದಲ್ಲಿ ರಾಷ್ಟ್ರಪತಿಯವರು
 A.ರಾಜ್ಯದ ಎಲ್ಲ ಕಾರ್ಯನಿರ್ವಹಣೆಯನ್ನೂ ಉಚ್ಚ ನ್ಯಾಯಾಲಯವೂ ಸೇರಿದಂತೆ ತಾವೇ ವಹಿಸಿಕೊಳ್ಳುವರು.
 B.ರಾಜ್ಯಪಾಲರ ಅಧಿಕಾರದ ಅಡಿಯಲ್ಲಿ ರಾಜ್ಯ ಆಡಳಿತದಲ್ಲಿನ ಅಧಿಕಾರವನ್ನು ಶಾಸನಸಭೆ ನಿರ್ವಹಿಸುವುದೆಂದು ಘೋಷಿಸುವರು
 C.ಉಚ್ಚ ನ್ಯಾಯಾಲಯದ ಹೊರತಾಗಿ ರಾಜ್ಯದ ಎಲ್ಲ ಕಾರ್ಯಗಳ ನಿರ್ವಹಣೆಯನ್ನು ತಾವೇ ವಹಿಸಿಕೊಳ್ಳುವರು.
 D.ರಾಷ್ಟ್ರಪತಿಗಳ ಅಧಿಕಾರದ ಅಡಿಯಲ್ಲಿ ರಾಜ್ಯ ಶಾಸನ ಸಭೆಯು ಅಧಿಕಾರ ಚಲಾಯಿಸುವುದು.
 ಮೇಲಿನವುಗಳಲ್ಲಿ ಯಾವುದು/ವು ಸರಿ ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)C ಮತ್ತು D ಮಾತ್ರ
 (4)A ಮತ್ತು D ಮಾತ್ರ
CORRECT ANSWER

(2) B ಮತ್ತು C ಮಾತ್ರ


76.ಈ ಪೈಕಿ ಯಾವ ರಾಜ್ಯದಲ್ಲಿ ದ್ವಿಶಾಸನ ಸಭೆ ಇಲ್ಲ (ವಿಧಾನಸಭೆ + ವಿಧಾನಪರಿಷತ್ತು)
 A.ಉತ್ತರ ಪ್ರದೇಶ
 B.ಮಧ್ಯಪ್ರದೇಶ
 C.ಬಿಹಾರ
 D.ಕರ್ನಾಟಕ
 ಸರಿಯಾದ ಸಂಕೇತವನ್ನಾರಿಸುವ ಮೂಲಕ ಸರಿಯಾದ ಉತ್ತರಗಳನ್ನು ಆರಿಸಿ :
 (1)A ಮಾತ್ರ
 (2)B ಮಾತ್ರ
 (3)B ಮತ್ತು D
 (4)A ಮತ್ತು C
CORRECT ANSWER

(2) B ಮಾತ್ರ


77.ನಬಾರ್ಡ್‌ನ ಮೂರು ಪ್ರಧಾನ ಕಾರ್ಯಗಳೆಂದರೆ
 (1)ಮರುಹಣನೀಡಿಕೆ, ಸಾಂಸ್ಥಿಕ ಬೆಳವಣಿಗೆ ಮತ್ತು ಕಕ್ಷಿದಾರ ಬ್ಯಾಂಕುಗಳ ಪರಿಶೀಲನೆ
 (2)ಮರುಹಣನೀಡಿಕೆ, ಗ್ರಾಮ ದತ್ತು ಮತ್ತು ಕಿರು ರೈತರಿಗೆ ಮಧ್ಯಮ ಅವಧಿಯ ಸಾಲದ ವಿಸ್ತರಣೆ
 (3)ಮರುಹಣನೀಡಿಕೆ, ರಾಜ್ಯಮಟ್ಟದ ಸಹಕಾರಿ ಬ್ಯಾಂಕುಗಳಿಗೆ ಮತ್ತು ಹಿರಿಯ ರೈತರಿಗೆ ಅವಧಿಕ ಸಾಲ ವಿಸ್ತರಣೆ
 (4)ಈ ಮೇಲಿನ ಯಾವುವೂ ಅಲ್ಲ
CORRECT ANSWER

(1) ಮರುಹಣನೀಡಿಕೆ, ಸಾಂಸ್ಥಿಕ ಬೆಳವಣಿಗೆ ಮತ್ತು ಕಕ್ಷಿದಾರ ಬ್ಯಾಂಕುಗಳ ಪರಿಶೀಲನೆ


78.ಕೆಳಗಿನ ಯಾವ ಮೊಘಲ್ ದೊರೆಗಳು ಇಸ್ಲಾಂ ಕಾನೂನುಗಳನ್ನು ‘ಫತ್ವಾ-ಇ-ಅಲಂಗೀರ್’ ಎಂಬ ಪುಸ್ತಕದಲ್ಲಿ ಸಂಯೋಜಿಸಿ ಪರಿಚಯಿಸಿದರು ?
 (1)ಔರಂಗ್‌ಜೇಬ್
 (2)ಅಕ್ಬರ್
 (3)ಜಹಾಂಗೀರ್
 (4)ಷಹಜಹಾನ್
CORRECT ANSWER

(1) ಔರಂಗ್‌ಜೇಬ್


79.ದಾರಾ ಶಿಖೋರು ಪರ್ಷಿಯನ್‌ಗೆ ಉಪನಿಷತ್ತುಗಳನ್ನು ಭಾಷಾಂತರ ಮಾಡಿದ್ದು ಈ ಶೀರ್ಷಿಕೆಯಡಿಯಲ್ಲಿ :
 (1)ಆಲ್ – ಫಿಹ್ರಿಸ್ಟ್
 (2)ಕಿತಾಬ್-ಉಲ್-ಬಯಾನ್
 (3)ಮಜ್ಮಾ-ಉಲ್-ಬಹರೇನ್
 (4)ಶಿರ್-ಇ-ಅಕಬರ್
CORRECT ANSWER

(4) ಶಿರ್-ಇ-ಅಕಬರ್


80.ನಾಟ್ಯಶಾಸ್ತ್ರ ಅಭಿನಯ ಕಲೆಯ ಮೇಲಿರುವ ಸಂಸ್ಕೃತ ಹಿಂದೂ ಕೃತಿ, ಅಭಿನಯ ಕಲೆ ಮತ್ತು ಈ ವಿಷಯಗಳನ್ನು ನಾಟಕ ರಚನೆ, ಅಭಿನಯ ಕೌಶಲ, ಅಂಗಭಂಗಿ, ದೇಹ ಚಲನೆಗಳು, ಪ್ರಸಾಧನ, ಉಡುಗೆ ಕುರಿತು ಇದೆ. ಇದರ ಕರ್ತೃ
 (1)ಭರತ ಮುನಿ
 (2)ತಂಡು ಮುನಿ
 (3)ನಾರದ ಮುನಿ
 (4)ಆಭಿನವ ಗುಪ್ತ
CORRECT ANSWER

(1) ಭರತ ಮುನಿ


81.ಪಟ್ಟಿ – I ಮತ್ತು ಪಟ್ಟಿ – IIಹೊಂದಿಸಿ
  ಪಟ್ಟಿ – I ಪಟ್ಟಿ – II
 A.ರಾಮಾನುಜI.ಶುದ್ಧಾದ್ವೈತ
 B.ಮಧ್ವಾಚಾರ್ಯII.ದ್ವೈತಾದ್ವೈತ
 C.ನಿಂಬರಕಾಚಾರ್ಯIII.ದ್ವೈತ
 D.ವಲ್ಲಭಾಚಾರ್ಯIV.ವಿಶಿಷ್ಟಾದ್ವೈತ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IVIIIIII
 (2)IIIIIIIV
 (3)IIIIIVII
 (4)IIIVIIII
CORRECT ANSWER

(1) IV, III, II, I


82.ಲೇಖಕರು (ಪಟ್ಟಿ – I) ಮತ್ತು ಅವರಿಂದ ಬರೆಯಲ್ಪಟ್ಟ ಕೃತಿಗಳ (ಪಟ್ಟಿ – II) ಪಟ್ಟಿಯನ್ನು ಹೊಂದಿಸಿರಿ:
  (ಪಟ್ಟಿ – I) ಲೇಖಕರು (ಪಟ್ಟಿ – II) ಕೃತಿಗಳ
 A.ವಿಕ್ರಮ ಸೇಠ್‌I.ದ ವೈಟ್‌ ಟೈಗರ್‌
 B.ಉಪಮನ್ಯು ಚಟರ್ಜಿII.ಎ ಸೂಟಬಲ್ ಬಾಯ್
 C.ಕಿರಣ ದೇಸಾಯಿIII.ಇಂಗ್ಲಿಷ್ ಆಗಸ್ಟ್ : ಎನ್ ಇಂಡಿಯನ್ ಸ್ಟೋರಿ
 D.ಝುಂಪಾ ಲಹೆರಿIV.ಇನ್‌ಹೆರಿಟೆನ್ಸ್‌ ಆಫ್‌ ಲಾಸ್
 D.V.ಇಂಟರ್‌ಪ್ರಿಟರ್ ಆಫ್‌ ಮೆಲಡೀಸ್
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IIVIIIII
 (2)IIIIIIVV
 (3)IIIIIVI
 (4)IIIIIVV
CORRECT ANSWER

(2) II, III, IV, V


83.ಇವನ್ನು ಪರಿಗಣಿಸಿ :
 A.ಕಾರ್ಬನ್ ಡೈಆಕ್ಸೈಡು
 B.ನೈಟ್ರೋಜನ್ ಆಕ್ಸೈಡುಗಳು
 C.ಸಲ್ಫರ್ ಆಕ್ಸೈಡುಗಳು
 ಥರ್ಮಲ್ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಹನದಿಂದ ಮೇಲಿನವುಗಳಲ್ಲಿ ಯಾವುದು/ವು ವಿಸರ್ಜಿಸಲ್ಪಡುತ್ತದೆ/ವೆ?
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮತ್ತು C
 (3)A ಮತ್ತು C
 (4)A,B ಮತ್ತು C
CORRECT ANSWER

(4) A,B ಮತ್ತು C


84.ಕ್ರೀಡಾಳುಗಳೊಂದಿಗೆ (ಪಟ್ಟಿ -I) ಅವರಿಗೆ ಸಂಬಂಧಿಸಿದ ಕ್ರೀಡೆಗಳನ್ನು (ಪಟ್ಟಿ -II) ಹೊಂದಿಸಿರಿ.
  ಪಟ್ಟಿ – I (ಕ್ರೀಡಾಳುಗಳು) ಪಟ್ಟಿ – II (ಕ್ರೀಡೆಗಳು)
 A.ಶ್ರೇಯಸ್ ಮೆಹ್ತಾI.ಕ್ರಿಕೆಟ್
 B.ಜೂಡಿ ಫೆಲಿಕ್ಸ್II.ಸ್ಕ್ವಾಶ್
 C.ಸ್ಮೃತಿ ಮಂಧಾನಾIII.ಹಾಕಿ
 D.ಪಂಕಜ್ ಅಡ್ವಾನಿIV.ಬಿಲಿಯರ್ಡ್ಸ್
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IIVIIIII
 (2)IIIIIIIV
 (3)IIIIIIVI
 (4)IVIIIIII
CORRECT ANSWER

(2) II, III, I, IV


85.ಯುನೈಟೆಡ್ ನೇಷನ್ಸ್‌ಗಳ ಅಧಿಕೃತ ಭಾಷೆಗಳೆಂದರೆ :
 (1)ಆಫ್ರಿಕನ್,ಚೈನೀಸ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಮತ್ತು ಸ್ಪಾನಿಷ್
 (2)ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪಾನಿಷ್
 (3)ಅರೇಬಿಕ್, ಜಪಾನೀಸ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಮತ್ತು ಸ್ಪಾನಿಷ್
 (4)ಚೈನೀಸ್, ಇಂಗ್ಲಿಷ್, ಫ್ರೆಂಚ್, ಹಿಂದಿ, ಜಪಾನೀಸ್ ಮತ್ತು ಸ್ಪಾನಿಷ್
CORRECT ANSWER

(2) ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪಾನಿಷ್


86.ಜೈಪುರ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ 2017ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯ ಗೌರವಕ್ಕೆ ಭಾಜನರಾದವರು ಯಾರು ?
 (1)ಓಂ ಪುರಿ
 (2)ಅಮಿತಾಭ್ ಬಚ್ಚನ್
 (3)ರಮೇಶ್ ಪ್ರಸಾದ್
 (4)ಮೇಲಿನ ಯಾರು ಅಲ್ಲ
CORRECT ANSWER

(3) ರಮೇಶ್ ಪ್ರಸಾದ್


87.1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು. ಆ ಅವಧಿಯಲ್ಲಿ ಭಾರತದ ಪ್ರಧಾನ ಮಂತ್ರಿ ಯಾರಾಗಿದ್ದರು?
 (1)ಇಂದಿರಾ ಗಾಂಧಿ
 (2)ಜವಾಹರಲಾಲ್ ನೆಹರೂ
 (3)ಲಾಲ್ ಬಹದ್ದೂರ್ ಶಾಸ್ತ್ರಿ
 (4)ಮೊರಾರ್ಜಿ ದೇಸಾಯಿ
CORRECT ANSWER

(1) ಇಂದಿರಾ ಗಾಂಧಿ


88.ಇಲ್ಲಿಯತನಕ ವಿಶ್ವ ಆರೋಗ್ಯ ಸಂಸ್ಥೆ (WHO)ಯಲ್ಲಿ ಅಧ್ಯಕ್ಷರಾಗಿದ್ದವರಲ್ಲಿ ಏಕೈಕ ಭಾರತೀಯ ಮಹಿಳೆ ಎಂದರೆ
 (1)ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ
 (2)ರಾಜ್‌ ಕುಮಾರಿ ಅಮೃತಾ ಕೌರ್
 (3)ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್
 (4)ಡಾ॥ ಸುಶೀಲಾ ನಾಯರ್
CORRECT ANSWER

(2) ರಾಜ್‌ ಕುಮಾರಿ ಅಮೃತಾ ಕೌರ್


89.ಕೆಳಗಿನ ಕರ್ನಾಟಕದ ಕೈಗಾರಿಕೆಗಳೊಂದಿಗೆ (ಪಟ್ಟಿ I) ಅದು ಸ್ಥಾಪನೆಯಾಗಿರುವ ಪ್ರದೇಶವನ್ನು (ಪಟ್ಟಿ II) ಹೊಂದಿಸಿರಿ
  (ಪಟ್ಟಿ I) (ಕೈಗಾರಿಕೆ) (ಪಟ್ಟಿ II) (ಪ್ರದೇಶ)
 A.ಸಿಮೆಂಟ್‌ ಕೈಗಾರಿಕೆI.ಉಗಾರ್‌
 B.ಸಕ್ಕರೆ ಕೈಗಾರಿಕೆII.ತೋರಣಗಲ್ಲು
 C.ಕಾಗದ ಕೈಗಾರಿಕೆIII.ಶಹಾಬಾದ್
 D.ಕಬ್ಬಿಣ ಮತ್ತು ಉಕ್ಕು ಕೈಗಾರಿಕೆIV.ದಾಂಡೇಲಿ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IIIIIVII
 (2)IVIIIIII
 (3)IIIIVIII
 (4)IIIIIIVI
CORRECT ANSWER

(1) III, I, IV, II


90.ವಾಣಿ ವಿಲಾಸ ಸಾಗರ ವಿವಿಧೋದ್ದೇಶ ಯೋಜನೆಯನ್ನು ನಿರ್ಮಾಣ ಮಾಡಿರುುದು ಈ ನದಿಯ ಮೇಲೆ.
 (1)ಭದ್ರಾ
 (2)ವೇದಾವತಿ
 (3)ಮಲಪ್ರಭಾ
 (4)ಹೇಮಾವತಿ
CORRECT ANSWER

(2) ವೇದಾವತಿ


91.ಕರ್ನಾಟಕದ ಅತಿ ಉದ್ದನೆಯ ರಾಷ್ಟ್ರೀಯ ಹೆದ್ದಾರಿ, ಎನ್.ಹೆಚ್.-13 ಇವುಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ.
 (1)ಬೀದರ್ – ಬಾಗಲಕೋಟೆ
 (2)ಕಲಬುರ್ಗಿ – ಮೈಸೂರು
 (3)ಪುಣೆ – ಬೆಂಗಳೂರು
 (4)ಮೇಲಿನ ಯಾವುವೂ ಅಲ್ಲ
CORRECT ANSWER

(4) ಮೇಲಿನ ಯಾವುವೂ ಅಲ್ಲ


92.ವನ್ಯಜೀವಿ ಆಶ್ರಯ ಧಾಮಗಳೊಂದಿಗೆ (ಪಟ್ಟಿ I) ಅವುಗಳಿರುವ ಸ್ಥಳಗಳನ್ನು (ಪಟ್ಟಿ II) ಹೊಂದಿಸಿರಿ :
  (ಪಟ್ಟಿ I) (ವನ್ಯಜೀವಿ ಆಶ್ರಯಧಾಮ) (ಪಟ್ಟಿ II) (ಸ್ಥಳಗಳು)
 A.ತಲಕಾವೇರಿ ವನ್ಯ ಜೀವಿ ಆಶ್ರಯಧಾಮI.ಶಿವಮೊಗ್ಗ
 B.ಶರಾವತಿ ವನ್ಯ ಜೀವಿ ಆಶ್ರಯಧಾಮII.ಮಂಡ್ಯ
 C.ರಂಗನತಿಟ್ಟು ವನ್ಯ ಜೀವಿ ಆಶ್ರಯಧಾಮIII.ಉತ್ತರ ಕನ್ನಡ
 D.ದಾಂಡೇಲಿ ವನ್ಯ ಜೀವಿ ಆಶ್ರಯಧಾಮIV.ಕೊಡಗು
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IVIIIIII
 (2)IIIIVIII
 (3)IIIIIIIV
 (4)IVIIIIII
CORRECT ANSWER

(4) IV, I, II, III


93.ನಗರಗಳೊಂದಿಗೆ (ಪಟ್ಟಿ I) ಸಮುದ್ರ ಬಂದರುಗಳು ಹೊಂದಿರುವ ಸ್ವಾಭಾವಗಳನ್ನು (ಪಟ್ಟಿ II) ಹೊಂದಿಸಿರಿ:
  (ಪಟ್ಟಿ I) (ನಗರಗಳು) (ಪಟ್ಟಿ II) (ಸಮುದ್ರ ಬಂದರುಗಳು)
 A.ಮುಂಬಯಿI.ಉಬ್ಬರವಿಳಿತ ಬಂದರು
 B.ಕೋಲ್ಕತಾII.ಸ್ವಾಭಾವಿಕ ಬಂದರು
 C.ವಿಶಾಖಪಟ್ಟಣಂIII.ನದೀಯ ಬಂದರು
 D.ಕಾಂಡ್ಲಾಾIV.ಆಳವಾದ ಬಂದರು
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IIIIIIVI
 (2)IIIVIIII
 (3)IIIIIIVI
 (4)IIIIIIIV
CORRECT ANSWER

(1) II, III, IV, I


94.1972ರಲ್ಲಿ ಈ ದಿನಾಂಕಂದು ಮಾನವ ಪರಿಸದ ಕುರಿತಾದ ಸ್ಟಾಕ್ ಹೋಮ್ ಅಧಿವೇಶನವು ಸ್ವೀಡನ್‌ನಲ್ಲಿ ನಡೆಯಿತು, ಅಂದಿನಿಂದ ವಿಶ್ವ ಪರಿಸರ ದಿನವನ್ನು ಆ ದಿನಾಂಕದಂದು ಆಚರಿಸಲಾಗುತ್ತದೆ. ಆ ದಿನಾಂಕವನ್ನು ತಿಳಿಸಿ :
 (1)8ನೇ ಮಾರ್ಚ್
 (2)5ನೇ ಜೂನ್
 (3)22ನೇ ಮೇ
 (4)8ನೇ ಅಕ್ಟೋಬರ್‌
CORRECT ANSWER

(2) 5ನೇ ಜೂನ್


95.ಈ ಕೆಳಗಿನ ಜೋಡಿಗಳ್ನು ಪರಿಗಣಿಸಿ.
  (ಗದ್ದೆಗಳು) (ನದಿ ಸಂಗಮ)
 A.ಹರಿಕೆ ಗದ್ದೆಗಳುಬಿಯಾಸ್ ಮತ್ತು ಸಟ್ಲೇಜ್ ಸಂಗಮ
 B.ಕಿಯೊಲೆಡೊ ಘಾನಾ ರಾಷ್ಟ್ರೀಯ ಉದ್ಯಾನಬಾನಸ್ ಮತ್ತು ಚಂಬಲ್ ಸಂಗಮ
 C.ಕೊಲ್ಲೇರು ಸರೋವರಮೂಸಿ ಮತ್ತು ಕೃಷ್ಣಾ ಸಂಗಮ
ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A, B, ಮತ್ತು C
CORRECT ANSWER

(1) A ಮಾತ್ರ


96.ಪುನರುಜ್ಜೀವನ ಬರಹಗಾರರು (ಪಟ್ಟಿ I) ಮತ್ತು ಅವರ ಕೃತಿಗಳು (ಪಟ್ಟಿ II) ಹೊಂದಿಸಿರಿ:
  ಪಟ್ಟಿ I (ಬರಹಗಾರರು) ಪಟ್ಟಿ II (ಕೃತಿಗಳು)
 A.ಡಾಂಟೆI.ಗರ್ಗಂಟುವ ಮತ್ತು ಪಂಟಾಗ್ರುಯೆಲ್
 B.ಮೆಕೈವಲ್ಲಿII.ಡಾನ್ ಕ್ವಿಕ್ಸೋಟ್‌
 C.ರಬೆಲಾಯ್ಸ್III.ದ ಪ್ರಿನ್ಸ್
 D.ಸರ್ವೆಂಟಾಸ್IV.ಡಿವೈನ್ ಕಾಮೆಡಿ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
  ABCD
 (1)IIIIIIIV
 (2)IIIIVIII
 (3)IVIIIIII
 (4)IVIIIIII
CORRECT ANSWER

(4) IV, III, I, II


97.ಪ್ರತ್ಯಾಮ್ಲಕವನ್ನು ಹೊಟ್ಟೆಯ ಅಮ್ಲೀಯತೆ ನಿವಾರಣೆಗೆ ಬಳಕೆ ಮಾಡಲಾಗುವುದು. ಸಾಮಾನ್ಯವಾಗಿ ಬಳಸುವ ಪ್ರತ್ಯಾಮ್ಲಕ
 (1)ಸೋಡಿಯಮ್‌ ಹೈಡ್ರೋಜನ್ ಥ್ಯಾಲೇಟ್
 (2)ಮೆಗ್ನೀಸಿಯಮ್ ಹೈಡ್ರಾಕ್ಸೈಡು
 (3)ಕ್ಯಾಲ್ಸಿಯಮ್ ಹೈಡ್ರಾಕ್ಸೈಡು
 (4)ಮ್ಯಾಂಗನೀಸ್‌ ಅಸಿಟೇಟು
CORRECT ANSWER

(2) ಮೆಗ್ನೀಸಿಯಮ್ ಹೈಡ್ರಾಕ್ಸೈಡು


98.ಈ ಕೆಳಗಿನವುಗಳನ್ನು ಹೊಂದಿಸಿ : ಪರಿಸರ ವಿಘಟನೆ ಬಗೆಗಳನ್ನು (ಪಟ್ಟಿ I) ಮತ್ತು ವಿಘಟನಾ ಕಾರಕಗಳನ್ನು (ಪಟ್ಟಿ II) ನೀಡಿದೆ:
  ಪಟ್ಟಿ I (ಪರಿಸರಾತ್ಮಕ ವಿಘಟನೆ) ಪಟ್ಟಿ II (ವಿಘಟನಾಕಾರಕ)
 A.ಆಮ್ಲ ಮಳೆI.ಫಾಸ್ಫೋರಸ್‌
 B.ಓಜೋನ್‌ ವಿನಾಶII.ಕಾರ್ಬನ್ ಡೈಆಕ್ಸೈಡು
 C.ಜಾಗತಿಕ ತಾಪIII.ನೈಟ್ರೊಜನ್ ಆಕ್ಸೈಡ್‌ ಮತ್ತು ಸಲ್ಫರ್ ಡೈ ಆಕ್ಸೈಡ್
 IV.ಕ್ಲೋರೋಫ್ಲೋರೋ-ಕಾರ್ಬನ್
ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ :
  ABC
 (1)IVIII
 (2)IIIIVII
 (3)IVIIIII
 (4)IIVII
CORRECT ANSWER

(2) III, IV, II


99.ಹಿಂದೂ ದಾರ್ಶನಿಕತೆಗಳು ಮತ್ತು ಅವುಗಳ ಸ್ಥಾಪಕರ ಹೆಸರುಗಳ ಜೋಡಿಯನ್ನು ನೀಡಿದೆ.
 A.ನ್ಯಾಯ -ಗೌತಮ
 B.ಸಾಂಖ್ಯ – ಕಪಿಲ
 C.ವೈಶೇಷಿಕ – ಕಾನಡ
 D.ಯೋಗ – ಪತಂಜಲಿ
 ಮೇಲಿರುವ ಜೋಡಿಗಳಲ್ಲಿ ಯಾವುದು ಸರಿ ?
 ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A,B ಮತ್ತು C ಮಾತ್ರ
 (4)A,B, C ಮತ್ತು D
CORRECT ANSWER

(4) A,B, C ಮತ್ತು D


100.ಈ ಕೆಳಗಿನವುಗಳ ಪೈಕಿ ಯಾವ ಗ್ರಹದ ಸುತ್ತಲೂ ಉಪಗ್ರಹಗಳು ಸುತ್ತುತ್ತಿಲ್ಲ ?
 A.ಮಂಗಳ
 B.ಶುಕ್ರ
 C.ಬುಧ
 D.ನೆಪ್ಚೂನ್
 ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)B ಮತ್ತು D ಮಾತ್ರ
CORRECT ANSWER

(2) B ಮತ್ತು C ಮಾತ್ರ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment