KPSC : ಪ್ರಥಮ ದರ್ಜೆ ಸಹಾಯಕ : ಸಾಮಾನ್ಯ ಜ್ಞಾನ
|
1. | ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ : |
| ಹೇಳಿಕೆ 1 : ಎಲ್ಲ ಕೋಳಿಗಳು ಹಕ್ಕಿಗಳು. |
| ಹೇಳಿಕೆ 2 : ಕೆಲವು ಕೋಳಿಗಳು ಹೆಣ್ಣು ಕೋಳಿಗಳು. |
| ಹೇಳಿಕೆ 3 : ಹೆಣ್ಣು ಹಕ್ಕಿಗಳು ಮೊಟ್ಟೆ ಇಡುತ್ತವೆ. |
| ಮೇಲಿನ 3 ಹೇಳಿಕೆಗಳು ವಾಸ್ತವ ಸಂಗತಿಗಳಾದರೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸಹ ವಾಸ್ತವ ಸಂಗತಿಗಳಾಗಿದೆ? |
| I. | ಎಲ್ಲ ಹಕ್ಕಿಗಳೂ ಮೊಟ್ಟೆ ಇಡುವವು. |
| II. | ಹೆಣ್ಣು ಕೋಳಿಗಳು ಹಕ್ಕಿಗಳು. |
| III. | ಕೆಲವು ಕೋಳಿಗಳು ಹೆಣ್ಣಲ್ಲ. |
| | ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ : |
|
| (1) | II ಮಾತ್ರ |
| (2) | II ಮತ್ತು III ಮಾತ್ರ |
| (3) | I, II ಮತ್ತು III |
| (4) | I, II ಮತ್ತು III ಯಾವುದೂ ಸರಿಯಲ್ಲ |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
|
2. | ಮೂರು ಬಗೆಯ ಕಾಫಿ ಬಿತ್ತಗಳು – ಕಾಫಿ ಅರೆಬಿಕಾ, ಕಾಫಿ ರೋಬಸ್ಟಾ ಮತ್ತು ಸ್ಥಳೀಯ ಬಿತ್ತಗಳು ಅನುಕ್ರಮವಾಗಿ ₹ 95/ಕಿ.ಗ್ರಾಂ, ₹ 100/ಕಿ.ಗ್ರಾಂ ಮತ್ತು ₹ 70/ಕಿ.ಗ್ರಾಂ ಯ ಬೆಲೆಯವು, ಅನುಕ್ರಮವಾಗಿ ಇವನ್ನು ಎಷ್ಟೆಷ್ಟು ಬೆರೆಸಿ 100 ಕಿ.ಗ್ರಾಂ ಮಾಡಿ ₹ 90/ಕಿ.ಗ್ರಾಂ ಬೆಲೆ ಉಂಟುಮಾಡಬಹುದು? ರೋಬಸ್ಟಾ ಮತ್ತು ಸ್ಥಳೀಯ ಬಿತ್ತಗಳ ಪ್ರಮಾಣ ಸಮನಾಗಿರಬೇಕು |
|
| (1) | 70, 15, 15 |
| (2) | 60, 20, 20 |
| (3) | 40, 30, 30 |
| (4) | 50, 25, 25 |
CORRECT ANSWER
(4) 50, 25, 25
|
3. | ಅಂತರರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಯಲ್ಲಿ ಮತದಾನದ ಹಕ್ಕುಗಳು ಇವುಗಳ ಆಧಾರದ ಮೇಲೆ ಹಂಚಿಕೆಯಾಗಿವೆ: |
|
| (1) | ಒಂದು ದೇಶ ಒಂದು ಮತ |
| (2) | ವಿಶ್ವದ ಆದಾಯದಲ್ಲಿ ಆಯಾ ದೇಶಗಳ ಆದಾಯದ ಪಾಲಿಗನುಗುಣವಾದ ಅನುಸಾರದ ಮೇರೆಗೆ |
| (3) | ಪ್ರತಿಯೊಂದು ದೇಶವೂ ನೀಡಿರುವ ಕೊಡುಗೆಗಳ ಅನುಪಾತಕ್ಕನುಗುಣವಾಗಿ |
| (4) | ಕಾಲಕಾಲಕ್ಕೆ ಆಯಾ ದೇಶಗಳಿಗೆ ನೀಡಲಾಗಿರುವ ಕೋಟಾದ ಅನುಪಾತಕ್ಕನುಗುಣವಾಗಿ |
CORRECT ANSWER
(4) ಕಾಲಕಾಲಕ್ಕೆ ಆಯಾ ದೇಶಗಳಿಗೆ ನೀಡಲಾಗಿರುವ ಕೋಟಾದ ಅನುಪಾತಕ್ಕನುಗುಣವಾಗಿ
|
4. | ದೀನ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯ ಗುರಿ
|
| A. | ಎಲ್ಲ ಹಳ್ಳಿಗಳ ವಿದ್ಯುದೀಕರಣ
|
| B. | ನಷ್ಟ ತಗ್ಗಿಸಲು ಮೀಟರ್ ಇಲ್ಲದೆಡೆ ಮೀಟರ್ ಅಳವಡಿಸುವುದು
|
| C. | ಫೀಡರ್‌ಗಳನ್ನು ಪ್ರತ್ಯೇಕಿಸಿ ಕೃಷಿಗೆ ಸಾಕಷ್ಟು ವಿದ್ಯುತ್ ಒದಗಿಸಿ, ಇತರ ವರ್ಗಕ್ಕೆ ನಿರಂತರ ವಿದ್ಯುತ್ ಪೂರೈಸುವುದು
|
| D. | ಉಪ ಪ್ರಸರಣ ಮತ್ತು ವಿತರಣ ಜಾಲವನ್ನು ಸುಧಾರಿಸಿ ಪೂರೈಕೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವುದು |
| ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ : |
|
| (1) | A ಮಾತ್ರ |
| (2) | A, B, C ಮತ್ತು D |
| (3) | B ಮತ್ತು C |
| (4) | A ಮತ್ತು B |
CORRECT ANSWER
(2) A, B, C ಮತ್ತು D
|
5. | 1857ರ ಬಂಡಾಯ ನಡೆಯದ ಪ್ರದೇಶವು |
|
| (1) | ಅವಧ್ |
| (2) | ಮದ್ರಾಸ್ |
| (3) | ಮಧ್ಯಪ್ರದೇಶ |
| (4) | ಪೂರ್ವ ಪಂಜಾಬು |
CORRECT ANSWER
(2) ಮದ್ರಾಸ್
|
6. | ಭಾರತದಲ್ಲಿ ಔಪಚಾರಿಕ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಅಡ್ಡಿಗಳೇನು?
|
| A. | ಔಪಚಾರಿಕ ಉದ್ಯೋೋಗಿಗಳಿಗೆ ವಿನಿಮಯ ಪ್ರೇರಿತ ತೆರಿಗೆ.
|
| B. | ಕೆಲಸ ಹಾಗೂ ಉದ್ಯೋೋಗಿಗಳ ಮಧ್ಯ ಇರುವ ಪ್ರತ್ಯೇಕತೆ.
|
| C. | ಅಸಮರ್ಪಕ ಮಾನವ ಸಂಪನ್ಮೂಲ ಹರಿವು.
|
| D. | ಮಾನವ ಬಂಡವಾಳದಲ್ಲಿ ಹೂಡಿಕೆ ಕೊರತೆ. |
| ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ : |
|
| (1) | A ಮಾತ್ರ |
| (2) | B ಮತ್ತು C ಮಾತ್ರ |
| (3) | A, B ಮತ್ತು D ಮಾತ್ರ |
| (4) | A ಮತ್ತು B ಮಾತ್ರ |
CORRECT ANSWER
(4) A ಮತ್ತು B ಮಾತ್ರ
|
7. | ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕುಗಳ ಕೇಂದ್ರ ಸ್ಥಾನ ಇಲ್ಲಿ ನೆಲೆಯಾಗಿದೆ. |
|
| (1) | IMF – ಜಿನೀವಾ, |
| | ವಿಶ್ವಬ್ಯಾಂಕು – ಮಾಂಟ್ರಿಯಲ್ |
| (2) | IMF – ಜಿನೀವಾ, |
| | ವಿಶ್ವಬ್ಯಾಂಕು – ವಿಯೆನ್ನಾ |
| (3) | IMF – ನ್ಯೂಯಾರ್ಕ್, |
| | ವಿಶ್ವಬ್ಯಾಂಕು – ಜಿನೀವಾ |
| (4) | IMF – ವಾಷಿಂಗ್ಟನ್ ಡಿಸಿ, |
| | ವಿಶ್ವಬ್ಯಾಂಕು – ವಾಷಿಂಗ್ಟನ್ ಡಿಸಿ |
CORRECT ANSWER
(4) IMF – ವಾಷಿಂಗ್ಟನ್ ಡಿಸಿ,
ವಿಶ್ವಬ್ಯಾಂಕು – ವಾಷಿಂಗ್ಟನ್ ಡಿಸಿ
|
8. | ಭಾರತ ಹಾಗೂ ಪಾಕಿಸ್ತಾನ ನಡುವೆ ‘‘ಗಂಗಾಜಲ ಒಪ್ಪಂದ 1960’’ ಕುರಿತಂತೆ, ಈ ಪೈಕಿ ಯಾವುದು ಸರಿಯಲ್ಲ? |
|
| (1) | ಭಾರತಕ್ಕೆ ಪೂರ್ವದ ನದಿಗಳಾದ ಸಟ್ಲೇಜ್, ಬಿಯಾಸ್ ಮತ್ತು ರಬಿ ನದಿಗಳ ನೀರನ್ನು ಅನಿರ್ಬಂಧಿತವಾಗಿ ಬಳಕೆ ಮಾಡುವ ಹಕ್ಕು ಇದೆ. |
| (2) | ಪಾಕಿಸ್ತಾನಕ್ಕೆ ಪಶ್ಚಿಮದ ನದಿಗಳಾದ ಸಿಂಧೂ, ಚೀನಾಬ್ ಮತ್ತು ಝೀಲಮ್ ನದಿಗಳ ಅನಿರ್ಬಂಧಿತ ಬಳಕೆ ಮಾಡುವ ಹಕ್ಕಿದೆ. |
| (3) | ಭಾರತಕ್ಕೆ ಭಾರತದಲ್ಲಿ ಹುಟ್ಟುವ ಹಾಗೂ ಪಾಕಿಸ್ತಾನಕ್ಕೆ ಹರಿವ ಆರು ನದಿಗಳ ನದಿ ಉಸುಕನ್ನು ಬಳಕೆ ಮಾಡುವ ಹಕ್ಕು ಇದೆ. |
| (4) | ಭಾರತ ಮತ್ತು ಪಾಕಿಸ್ತಾನಗಳೆರಡಕ್ಕೂ ನದಿ ಮಾಲಿನ್ಯ ತಡೆಗಟ್ಟುವ ಹೊಣೆಗಾರಿಕೆ ಇದೆ. |
CORRECT ANSWER
(3) ಭಾರತಕ್ಕೆ ಭಾರತದಲ್ಲಿ ಹುಟ್ಟುವ ಹಾಗೂ ಪಾಕಿಸ್ತಾನಕ್ಕೆ ಹರಿವ ಆರು ನದಿಗಳ ನದಿ ಉಸುಕನ್ನು ಬಳಕೆ ಮಾಡುವ ಹಕ್ಕು ಇದೆ.
|
9. | ದೆಹಲಿಯಿಂದ ದೇವಗಿರಿಗೆ (ದೌಲತಾಬಾದ್) ರಾಜಧಾನಿಯನ್ನು ವರ್ಗಾವಣೆ ಮಾಡಿದ್ದನ್ನು ಕುರಿತು ಯಾವ ಇತಿಹಾಸಕಾರ ಕೆಳಗಿನ ಹೇಳಿಕೆಯನ್ನು ನೀಡಿದ್ದು? |
| ‘‘ಪೂರ್ಣ ಅವನತಿ ಎಂದರೆ ಆ ನಗರದ ಕಟ್ಟಡಗಳಲ್ಲಿ ಒಂದು ಬೆಕ್ಕು ಅಥವಾ ನಾಯಿಯೂ ಉಳಿದಿಲ್ಲ’’ |
|
| (1) | ಫಿರಿಶ್ತಾ |
| (2) | ಬರಾನಿ |
| (3) | ಇಬನ್ ಬಟೂಟ |
| (4) | ಎಲ್ಫಿನ್‌ಸ್ಟೋನ್ |
CORRECT ANSWER
(2) ಬರಾನಿ
|
10. | ಈ ಕೆಳಗಿನವರಲ್ಲಿ ಯಾವ ದೊರೆಗಳು ಪಾರಿವಾಳ ಹಾರಾಟದ ಆಟಕ್ಕೆ ‘‘ಇಷ್ಕ್-ಬಾಝಿ’’ ಎಂಬ ಪದವನ್ನು ನೀಡಿದರು ? |
|
| (1) | ಔರಂಗಜೇಬ್ |
| (2) | ಅಲ್ಲಾವುದ್ದೀನ್ ಖಿಲ್ಜಿ |
| (3) | ಅಕ್ಬರ್ |
| (4) | ಬಾಬರ್ |
CORRECT ANSWER
(3) ಅಕ್ಬರ್
|
11. | ಬಹಮನಿ ರಾಜ್ಯಸ್ಥಾಪನೆಗೆ ಕಾರಣವಾದ ಅಂಶಗಳು ಕೆಳಗಿನವುಗಳಲ್ಲಿ ಈ ಪೈಕಿ ಯಾವುವು? |
|
| (1) | ಕಲ್ಯಾಣಿ ಚಾಲುಕ್ಯರ ರಾಜ್ಯವು ಒಡೆದು ಹೋಳಾಗಿದ್ದು |
| (2) | ದಕ್ಷಿಣದಲ್ಲಿ ತೊಘಲಕ್ ಅಧಿಕಾರದ ವಿರುದ್ಧ ಸರಣಿ ಬಂಡಾಯಗಳು |
| (3) | ಸೇನಾ ಬೆಂಬಲ ಮತ್ತು ಪ್ರೋತ್ಸಾಹವನ್ನು ದೆಹಲಿ ಸುಲ್ತಾನರು ನೀಡಿದ್ದು |
| (4) | ಮಹಮದ್ ಬಿನ್ ತೊಘಲಕ್‌ನ ವಿರುದ್ಧ ಹೆಚ್ಚಿನ ಅತೃಪ್ತಿಯಿಂದ ವ್ಯಾಪಕವಾಗಿ ಹರಡಿದ ದಂಗೆಗಳ ಉಪಯೋಗಗಳನ್ನು ಪಡೆದ ಅಮ್ರಿನ I ನ ದಂಗೆ |
CORRECT ANSWER
(4) ಮಹಮದ್ ಬಿನ್ ತೊಘಲಕ್‌ನ ವಿರುದ್ಧ ಹೆಚ್ಚಿನ ಅತೃಪ್ತಿಯಿಂದ ವ್ಯಾಪಕವಾಗಿ ಹರಡಿದ ದಂಗೆಗಳ ಉಪಯೋಗಗಳನ್ನು ಪಡೆದ ಅಮ್ರಿನ I ನ ದಂಗೆ
|
12. | ವಂಶಗಳು ಹಾಗೂ ರಾಜಧಾನಿಗಳನ್ನು ಹೊಂದಿಸಿ : |
| A. | ಆದಿಲ್‌ಷಾಹಿಗಳು | I. | ಅಹ್ಮದ್‌ನಗರ್ |
| B. | ಕುತುಬ್ ಷಾಹಿಗಳು | II. | ಬೀದರ್ |
| C. | ನಿಜಾಮ್ ಷಾಹಿಗಳು | III. | ಬಿಜಾಪುರ್ |
| D. | ಬರೀದ್ ಷಾಹಿಗಳು | IV. | ಗೋಲ್‌ಕೊಂಡ |
| ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರ ಆರಿಸಿ : |
|
| (1) | III | IV | I | II |
| (2) | I | III | II | IV |
| (3) | II | I | IV | III |
| (4) | I | II | III | IV |
| |
CORRECT ANSWER
(1) III, IV, I, II
|
13. | ಕೆಳಗೆ ಕೊಟ್ಟಿರುವ ರಾಷ್ಟ್ರಗಳಲ್ಲಿ ಭಾರತವು ಯಾವ ರಾಷ್ಟ್ರದೊಂದಿಗೆ ಉದ್ದವಾದ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ? |
|
| (1) | ನೇಪಾಳ |
| (2) | ಪಾಕಿಸ್ತಾನ್ |
| (3) | ಚೈನಾ |
| (4) | ಬಾಂಗ್ಲಾದೇಶ |
CORRECT ANSWER
(4) ಬಾಂಗ್ಲಾದೇಶ
|
14. | ಯಾವ ದೇಶದೊಂದಿಗೆ ಪೊಲ್ ಪಾಟ್, ಖ್ಮೇರ್ ರೋಜ್ ಮತ್ತು ಮಾನವ ಹತ್ಯೆ ಸಂಬಂಧಿಸಿದೆ? |
|
| (1) | ಕೊರಿಯಾ |
| (2) | ಜಪಾನ್ |
| (3) | ಮ್ಯಾನ್‌ಮಾರ್ (ಬರ್ಮಾ) |
| (4) | ಕಾಂಬೋಡಿಯಾ (ಕಂಪೂಚಿಯಾ) |
CORRECT ANSWER
(4) ಕಾಂಬೋಡಿಯಾ (ಕಂಪೂಚಿಯಾ)
|
15. | ಅಂತರರಾಷ್ಟ್ರೀಯ ಹಣಕಾಸು ಆಯೋಗದಿಂದಾದ ಆಪ್‌ಡೇಟೆಡ್ ವಿಶ್ವ ಆರ್ಥಿಕ ಹೊರನೋಟದ (WEO) ವರದಿಯ ಮೇರೆಗೆ 2017ರ ಆರ್ಥಿಕ ವರ್ಷದ ಭಾರತೀಯ ಜಿ.ಡಿ.ಪಿ. ಬೆಳವಣಿಗೆ ಭವಿಷ್ಯ ದರವು |
|
| (1) | 6.6% |
| (2) | 7.1% |
| (3) | 6.2% |
| (4) | 6.5% |
CORRECT ANSWER
(1) 6.6%
|
16. | ಕೇಂದ್ರಸರ್ಕಾರದಿಂದ ಸರ್ವ ಶಿಕ್ಷಾ ಅಭಿಯಾನಕ್ಕಾಗಿ ಯಾವ ಹೆಬ್ಬಾಗಿಲನ್ನು ನಿರ್ಮಿಸಲಾಯಿತು? |
|
| (1) | ಗ್ಯಾನ್ ಹೆಬ್ಬಾಗಿಲು |
| (2) | ಉಜಾಲಾ ಹೆಬ್ಬಾಗಿಲು |
| (3) | ವ್ಯಾಸಂಗ್ ಹೆಬ್ಬಾಗಿಲು |
| (4) | ಶಗುನ್ ಹೆಬ್ಬಾಗಿಲು |
CORRECT ANSWER
(4) ಶಗುನ್ ಹೆಬ್ಬಾಗಿಲು
|
17. | ಯಾವ ರಾಜ್ಯದಲ್ಲಿ ಭಾರತದ ಮಂಗಳಮುಖಿಯರ (ಟ್ರಾನ್ಸ್ ಜೆಂಡರ್) ಮೊದಲನೇ ಶಾಲೆಯು ಸ್ಥಾಪಿತವಾಯಿತು? |
|
| (1) | ತಮಿಳುನಾಡು |
| (2) | ಕೇರಳ |
| (3) | ಕರ್ನಾಟಕ |
| (4) | ಆಂಧ್ರಪ್ರದೇಶ |
CORRECT ANSWER
(2) ಕೇರಳ
|
18. | ಈ ಕೆಳಗಿನವುಗಳಲ್ಲಿ ಯಾವ ಬ್ಯಾಂಕು ಜಂಟಿ ಮಾರುಕಟ್ಟೆ ಚಟುವಟಿಕೆಗಳನ್ನು ನಿರ್ವಹಿಸಲೋಸುಗ ಆನ್‌ಲೈನ್ ಹೆಬ್ಬಾಗಿಲು ಮ್ಯಾಜಿಕ್‌ಬ್ರಿಕ್ಸ್.ಕಾಂ ನೊಂದಿಗೆ ಸಹಯೋಗಿತ್ವವನ್ನು ಹೊಂದಿದೆ? |
|
| (1) | ICICI ಬ್ಯಾಂಕು |
| (2) | ಪಂಜಾಬ್ ನ್ಯಾಷನಲ್ ಬ್ಯಾಂಕು |
| (3) | HDFC ಬ್ಯಾಂಕು |
| (4) | ಭಾರತೀಯ ಸ್ಟೇಟ್ ಬ್ಯಾಂಕು |
CORRECT ANSWER
(4) ಭಾರತೀಯ ಸ್ಟೇಟ್ ಬ್ಯಾಂಕು
|
19. | ಭಾರತದ ಪರ್ಯಾಯ ದ್ವೀಪದಲ್ಲಿ ಟ್ಯಾಂಕು ನೀರಾವರಿಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕೆಳಗಿನವುಗಳಲ್ಲಿ ಯಾವುದು ಕಾರಣವಾಗಿಲ್ಲ? |
|
| (1) | ಹೊಯ್ದಾಟದ ಪರಿಹಾರ ಮತ್ತು ಕಠಿಣ ಬಂಡೆಗಳು |
| (2) | ಅಭೇದ್ಯ ಶಿಲಾಸ್ವರೂಪದಿಂದ ಕಡಿಮೆ ಮಳೆನೀರಿನ ಸೋಸುವಿಕೆ |
| (3) | ಭಾರತದ ಪರ್ಯಾಯ ದ್ವೀಪದ ಬಹಳಷ್ಟು ನದಿಗಳು ಅವ್ಯಾಹತವಾದವು |
| (4) | ಕೆಲವು ಪ್ರವಾಹಗಳು ಮಳೆಗಾಲದ ಅವಧಿಯಲ್ಲಿ ಸೆಳವುಗಳನ್ನು ಹೊಂದಿರುತ್ತವೆ |
CORRECT ANSWER
(3) ಭಾರತದ ಪರ್ಯಾಯ ದ್ವೀಪದ ಬಹಳಷ್ಟು ನದಿಗಳು ಅವ್ಯಾಹತವಾದವು
|
20. | ಇತ್ತೀಚಿನ ಅನಾಣ್ಯೀಕರದ ನಂತರ, ಹಣರಹಿತ, ಡಿಜಿಟಲ್ ಮತ್ತು ವಿದ್ಯುನ್ಮಾನ ವ್ಯವಹಾರ ನಡೆಸಲು ವಿವಿಧ ರಾಜ್ಯ ಸರ್ಕಾರಗಳು ಅಂತೆಯೇ ಕೇಂದ್ರಸರ್ಕಾರವೂ ಬಹಳ ಒತ್ತನ್ನು ನೀಡಿದ್ದು ಇಂತಹ ಯೋಜನೆಗಳಲ್ಲಿ ಒಂದಾದ ‘ಡಿಜಿಟಲ್ ಡಾಕಿಯಾ’ ಯೋಜನೆಯು ಯಾವ ರಾಜ್ಯದ್ದು? |
|
| (1) | ಮಧ್ಯಪ್ರದೇಶ್ |
| (2) | ರಾಜಸ್ಥಾನ |
| (3) | ಕರ್ನಾಟಕ |
| (4) | ಅಸ್ಸೋಂ |
CORRECT ANSWER
(1) ಮಧ್ಯಪ್ರದೇಶ್
|
21. | ಮಧ್ಯ ಪ್ರದೇಶದ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮುಂಬಯಿಯನ್ನು 5 ವಿಕೆಟ್‌ಗಳಿಂದ ಸೋಲಿಸಿದ ನಂತರ ಯಾವ ಕ್ರಿಕೆಟ್ ತಂಡವು ತಮ್ಮ ಮೊದಲನೆಯ ರಣಜಿ ಟ್ರೋಫಿಯನ್ನು 2016-17ನೇ ಸಾಲಿನಲ್ಲಿ ಗಳಿಸಿತು? |
|
| (1) | ಛತ್ತೀಸ್‌ಘಡ್ |
| (2) | ಗುಜರಾತ್ |
| (3) | ಕರ್ನಾಟಕ |
| (4) | ತಮಿಳುನಾಡು |
CORRECT ANSWER
(2) ಗುಜರಾತ್
|
22. | ಈ ಕೆಳಗಿನವುಗಳಲ್ಲಿ ಯಾವ ನಾಲೆಗಳು ಬೆಳಗಾವಿ, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳ ಪ್ರಧಾನ ಭಾಗಗಳಿಗೆ ನೀರಾವರಿಯನ್ನು ಒದಗಿಸುತ್ತವೆ? |
|
| (1) | ವಿಶ್ವೇಶ್ವರಯ್ಯ ನಾಲೆ |
| (2) | ತಂಡುಲಾ ನಾಲೆ |
| (3) | ಮೆಟ್ಟೂರು ನಾಲೆ |
| (4) | ಮಲಪ್ರಭಾ ಯೋಜನೆ |
CORRECT ANSWER
(4) ಮಲಪ್ರಭಾ ಯೋಜನೆ
|
23. | ಈ ಕೆಳಗಿನ ಹೇಳಿಕೆಗಳನ್ನು ಉತ್ತರ ಭಾರತದ ಚಳಿಗಾಲದ ಋತುಮಾನದಲ್ಲಿ ಶೀತದ ಅಲೆಗಳಿಗೆ ಸಂಬಂಧಿಸಿದಂತೆ ಪರಿಗಣಿಸಿ:
|
| A. | ಇಲ್ಲಿ ಸಮುದ್ರದ ಪ್ರಭಾವದ ಕೊರತೆಯಿದೆ. |
| B. | ಉತ್ತರ ಭಾರತವು ಹಿಮಾಲಯ ಪ್ರದೇಶಕ್ಕೆ ಸಮೀಪವಾಗಿದೆ. |
| C. | ಗಾಳಿ ರಾಶಿಯು ಧ್ರುವೀಯ ಪ್ರಾಂತ್ಯದಿಂದ ಉತ್ತರ ಭಾರತಕ್ಕೆ ಆಗಮಿಸುತ್ತದೆ. |
| | ಈ ಹೇಳಿಕೆಗಳಲ್ಲಿ ಯಾವುದು/ವು ಸರಿ? |
|
| (1) | A ಮಾತ್ರ |
| (2) | B ಮತ್ತು C ಮಾತ್ರ |
| (3) | A ಮತ್ತು C ಮಾತ್ರ |
| (4) | A ಮತ್ತು B ಮಾತ್ರ |
CORRECT ANSWER
(4) A ಮತ್ತು B ಮಾತ್ರ
|
24. | ರಾಷ್ಟ್ರೀಯ ಆಹಾರ ಸುರಕ್ಷತಾ ಆಯೋಗದ ಗುರಿಯೆಂದರೆ ಕೆಲವು ನಿರ್ದಿಷ್ಟ ಬೆಳೆಗಳ ಉತ್ಪಾದನೆಯನ್ನು ಕ್ಷೇತ್ರ ವಿಸ್ತರಣೆಯ ಮೂಲಕ ಹೆಚ್ಚಿಸುವುದು ಮತ್ತು ಸುಸ್ಥಿರತೆ ರೀತಿಯಲ್ಲಿ ಉತ್ಪಾದನೆಯ ಹೆಚ್ಚಳವನ್ನು, ರಾಷ್ಟ್ರದ ಗುರ್ತಿಸಲಾದ ಜಿಲ್ಲೆಗಳಲ್ಲಿ ಹೆಚ್ಚಿಸುವುದಾಗಿದೆ. ಆ ಬೆಳೆಗಳು ಯಾವುವು? |
|
| (1) | ಅಕ್ಕಿ ಮತ್ತು ಗೋಧಿ |
| (2) | ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳು |
| (3) | ಅಕ್ಕಿ, ಗೋಧಿ, ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳು |
| (4) | ಅಕ್ಕಿ, ಗೋಧಿ, ಬೇಳೆಕಾಳುಗಳು, ಎಣ್ಣೆ ಬೀಜಗಳು ಮತ್ತು ತರಕಾರಿಗಳು |
CORRECT ANSWER
(2) ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳು
|
25. | ಅಕ್ಬರ್ ಹಶೆಮಿ ರಫ್‌ಸೆನ್ಜಾನಿಯವರು ಇತ್ತೀಚೆಗೆ ನಿಧನ ಹೊಂದಿದ್ದು, ಇವರು ಯಾವ ದೇಶದ ಹಿಂದಿನ ರಾಷ್ಟ್ರಾಧ್ಯಕ್ಷರಾಗಿದ್ದರು? |
|
| (1) | ಸಿರಿಯಾ |
| (2) | ಇರಾಕ್ |
| (3) | ಇರಾನ್ |
| (4) | ಇಸ್ರೇಲ್ |
CORRECT ANSWER
(3) ಇರಾನ್
|
26. | ಭಾರತದ ಮೊದಲ ಅಂತರರಾಷ್ಟ್ರೀಯ ಸ್ಟಾಕ್ ವಿನಿಮಯ ಕೇಂದ್ರವಾದ ‘‘ಭಾರತೀಯ ಅಂತರರಾಷ್ಟ್ರೀಯ ವಿನಿಮಯ’’ ಕೇಂದ್ರವು ಯಾವ ನಗರದಲ್ಲಿ ಸ್ಥಾಪಿತವಾಯಿತು? |
|
| (1) | ಲಕ್ನೋ |
| (2) | ಗಾಂಧಿನಗರ |
| (3) | ಬೆಂಗಳೂರು |
| (4) | ಮುಂಬಯಿ |
CORRECT ANSWER
(2) ಗಾಂಧಿನಗರ
|
27. | ಚಲನಚಿತ್ರ ತಾರೆಗಳಾದ ರೋಯನ್ ಗೋಸ್ಲಿಂಗ್ ಮತ್ತು ಎಮ್ಮಾ ಸ್ಟೋನ್ ಮತ್ತು ಡೇಮಿಯನ್ ಚಚಾಲಾರಿಂದ ನಿರ್ದೇಶಿತವಾದ ಏಕೈಕ ಚಲನಚಿತ್ರವು 74ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2017ರಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಗಳಿಸಿದ ದಾಖಲೆಗಳನ್ನು ನಿರ್ಮಿಸಿದ್ದು ಇದು |
|
| (1) | ಲಾ ಲಾ ಲ್ಯಾಂಡ್ |
| (2) | ಮೂನ್ ಲೈಟ್ |
| (3) | 20ನೇ ಶತಮಾನದ ಮಹಿಳೆ |
| (4) | ಸಮುದ್ರದಿಂದಾದ ಮ್ಯಾಂಚೆಸ್ಟರ್ |
CORRECT ANSWER
(1) ಲಾ ಲಾ ಲ್ಯಾಂಡ್
|
28. | ಅಮೇರಿಕಾದ ಮಹತ್ತರ ಗೀತ ಪರಂಪರೆಯೊಳಗೆ ಹೊಸ ಕಾವ್ಯಾತ್ಮಕ ಅಭಿವ್ಯಕ್ತಿಗಳನ್ನು ಸೃಷ್ಟಿಸಿದುದಕ್ಕಾಗಿ ಹೆಸರಾದ 2016ನೇ ಸಾಲಿನ ಸಾಹಿತ್ಯದ ನೊಬೆಲ್ ಪಾರಿತೋಷಕವನ್ನು ಗಳಿಸಿದವರು |
|
| (1) | ಬಾಬ್ ಡೈಲಾನ್ |
| (2) | ಹರುಕಿ ಮುರಾಕಾಮಿ |
| (3) | ಜೋಯ್ಸ್ ಕ್ಯಾರೊಲ್ |
| (4) | ಅಡೊನಿಲ್ |
CORRECT ANSWER
(1) ಬಾಬ್ ಡೈಲಾನ್
|
29. | ಎಡ್ವರ್ಡ್ ಸ್ನೋಡೆನ್‌ರಿಗೆ ಯಾವ ದೇಶದಿಂದ ಆಸರೆ ದೊರಕಿತು? |
|
| (1) | ರಷ್ಯಾ |
| (2) | ಹಾಂಗ್‌ಕಾಂಗ್ |
| (3) | ಫ್ರಾನ್ಸ್ |
| (4) | ಚೈನಾ |
CORRECT ANSWER
(1) ರಷ್ಯಾ
|
30. | ‘‘ವೈಸರಾಯರ ಅರಮನೆಯ ಮೆಟ್ಟಿಲುಗಳ ಮೇಲೆ ಗಾಂಧೀಜಿಯವರು ರಾಜಿಗಾಗಿ ನಿಂತಿರುವ ತೇಜೋವಧೆಯ ಶೋಚನೀಯ ವಾಕರಿಕೆ ಬರಿಸುವ ದೃಶ್ಯ… ‘‘ರಾಜ ಚಕ್ರವರ್ತಿಗಳ’’ ಪ್ರತಿನಿಧಿಗಳೊಂದಿಗೆ ಎಂಬ ಸಂವಾದಿ ಪದಗಳೊಂದಿಗೆ’’. ಹೀಗೆ ನುಡಿದವರು ಯಾರು? |
|
| (1) | ಕ್ಲೆಮೆಂಟ್ ಅಟ್ಲೀ |
| (2) | ವಿಲಿಯಮ್ ಡಿಗ್ಬಿ |
| (3) | ವಿನ್‌ಸ್ಟನ್ ಚರ್ಚಿಲ್ |
| (4) | ಸ್ಟೈಫೋರ್ಡ್ ಕ್ರಿಪ್ಸ್ |
CORRECT ANSWER
(3) ವಿನ್‌ಸ್ಟನ್ ಚರ್ಚಿಲ್
|
31. | ರಬ್ಬರ್ ಉತ್ಪಾದನೆಯಲ್ಲಿ ಭಾರತದ ಯಾವ ರಾಜ್ಯವು ಮುಂಚೂಣಿಯಲ್ಲಿದೆ? |
|
| (1) | ತಮಿಳುನಾಡು |
| (2) | ಕೇರಳ |
| (3) | ಕರ್ನಾಟಕ |
| (4) | ಗುಜರಾತ್ |
CORRECT ANSWER
(2) ಕೇರಳ
|
32. | I ಪಟ್ಟಿಯಲ್ಲಿನ ಜಲವಿದ್ಯುತ್ ಕೇಂದ್ರಗಳೊಂದಿಗೆ II ಪಟ್ಟಿಯಲ್ಲಿನ ನದಿಗಳನ್ನು ಹೊಂದಿಸಿರಿ : |
| | ಪಟ್ಟಿ – I (ಜಲವಿದ್ಯುತ್ ಕೇಂದ್ರ) | | ಪಟ್ಟಿ – II (ನದಿಗಳು) |
| A. | ಹಿರಾಕುಡ್ | I. | ರಿಹಾಂದ್ |
| B. | ವಾಲ್ಮೀಕಿನಗರ್ | II. | ಗಂಡಕ್ |
| C. | ಪಿಪ್ರಿ | III. | ಚಂಬಲ್ |
| D. | ಕೋಟ | IV. | ಮಹಾನದಿ |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| | A | B | C | D |
| (1) | IV | II | I | III |
| (2) | IV | III | I | II |
| (3) | II | III | I | IV |
| (4) | III | II | IV | I |
| |
CORRECT ANSWER
(1) IV, II, I, III
|
33. | ಒಂದು ನ್ಯೂಕ್ಲಿಯರ್ ರಿಯಾಕ್ಟರ್‌ನಲ್ಲಿನ ಭಾರ ಜಲದ ಕಾರ್ಯವೆಂದರೆ: |
|
| (1) | ನ್ಯೂಟ್ರಾನುಗಳ ವೇಗವನ್ನು ನಿಧಾನಗೊಳಿಸುವುದು |
| (2) | ನ್ಯೂಟ್ರಾನುಗಳ ವೇಗವನ್ನು ಹೆಚ್ಚಿಸುವುದು |
| (3) | ರಿಯಾಕ್ಟರ್ಅನ್ನು ತಂಪುಗೊಳಿಸುವುದು |
| (4) | ನ್ಯೂಕ್ಲಿಯರ್ ಪ್ರತಿಕ್ರಿಯೆಗಳನ್ನು ನಿಲ್ಲಿಸುವುದು |
CORRECT ANSWER
(1) ನ್ಯೂಟ್ರಾನುಗಳ ವೇಗವನ್ನು ನಿಧಾನಗೊಳಿಸುವುದು (3) ರಿಯಾಕ್ಟರ್ಅನ್ನು ತಂಪುಗೊಳಿಸುವುದು
|
34. | ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ನೀಡುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯು ವಾರ್ಷಿಕವಾಗಿ ಇವರಿಗೆ ನೀಡಲ್ಪಡುವುದು |
|
| (1) | ಸಿ.ಎಸ್.ಐ.ಆರ್. |
| (2) | ಐ.ಎಸ್.ಆರ್.ಓ. |
| (3) | ಐ.ಐ.ಟಿ. |
| (4) | ಟಿ.ಐ.ಎಸ್.ಎಸ್. |
CORRECT ANSWER
(1) ಸಿ.ಎಸ್.ಐ.ಆರ್.
|
35. | ಈ ಕೆಳಗಿನವುಗಳಲ್ಲಿ ಯಾವುದು ಸರಿ ? |
|
| (1) | ಸಾಕ್ರಟೀಸನು ಪ್ಲೇಟೋನ ಶಿಷ್ಯನಾಗಿದ್ದನು. |
| (2) | ಪ್ಲೇಟೋನು ಸಾಕ್ರಟೀಸನ ಶಿಷ್ಯನಾಗಿದ್ದನು. |
| (3) | ಪ್ಲೇಟೋನು ಅರಿಸ್ಟಾಟಲ್‌ನ ಶಿಷ್ಯನಾಗಿದ್ದನು. |
| (4) | ಸಾಕ್ರಟೀಸ್ ಮತ್ತು ಪ್ಲೇಟೋರು ಅರಿಸ್ಟಾಟಲ್‌ನ ಶಿಷ್ಯರಾಗಿದ್ದರು. |
CORRECT ANSWER
(2) ಪ್ಲೇಟೋನು ಸಾಕ್ರಟೀಸನ ಶಿಷ್ಯನಾಗಿದ್ದನು.
|
36. | ‘ಕ್ರಿಕೆಟ್ ಸಂಸ್ಥೆಯಲ್ಲಿ ಹುಲಿ’ ಎಂದು ಗುರುತಿಸಲಾದ ಕ್ರಿಕೆಟ್ ಆಟಗಾರ ಮತ್ತು ‘ಪಟೌಡಿಯ ನವಾಬ’ ಎಂದು ಕರೆಸಿಕೊಂಡವ |
|
| (1) | ಸೈಫ್ ಅಲಿ ಖಾನ್ |
| (2) | ಮನ್ಸೂರ್ ಅಲಿ ಖಾನ್ |
| (3) | ಪಾಲಿ ಉಮ್ರೀಗರ್ |
| (4) | ಯೂಸ್‌ಫ್ ಖಾನ್ |
CORRECT ANSWER
(2) ಮನ್ಸೂರ್ ಅಲಿ ಖಾನ್
|
37. | ಎಂ.ಎಫ್. ಹುಸೇನರನ್ನು ಹೀಗೆಂದೂ ಕರೆಯಲಾಗಿದೆ. |
|
| (1) | ಭಾರತದ ಮೈಕೆಲಾಂಜೆಲೋ |
| (2) | ಭಾರತದ ಸಾಕ್ರಟೀಸ್ |
| (3) | ಭಾರತದ ಪ್ಲೇಟೋ |
| (4) | ಭಾರತದ ಪಿಕಾಸೋ |
CORRECT ANSWER
(4) ಭಾರತದ ಪಿಕಾಸೋ
|
38. | ಅರ್ಜೆಂಟೈನಾ ಮತ್ತು ಆಲ್ಬೇನಿಯಾಗಳ ರಾಜಧಾನಿ ಯಾವುದು ? |
|
| (1) | ಅರ್ಜೆಂಟೈನಾ – ಮನಾಮ, ಆಲ್ಬೇನಿಯಾ – ಬಾಕು |
| (2) | ಅರ್ಜೆಂಟೈನಾ – ಬ್ಯೂನಸ್ ಐರಿಸ್, ಆಲ್ಬೇನಿಯಾ – ತಿರಾನಾ |
| (3) | ಅರ್ಜೆಂಟೈನಾ – ಬೆಲ್ಮೊಪಾನ್, ಆಲ್ಬೇನಿಯಾ – ಯೆರೆವಾನ್ |
| (4) | ಅರ್ಜೆಂಟೈನಾ – ಮಿನ್ಸ್ಕ್, ಆಲ್ಬೇನಿಯಾ – ಬೆಲ್ಮೊಪಾನ್ |
CORRECT ANSWER
(2) ಅರ್ಜೆಂಟೈನಾ – ಬ್ಯೂನಸ್ ಐರಿಸ್, ಆಲ್ಬೇನಿಯಾ – ತಿರಾನಾ
|
39. | ಯುನೈಟೆಡ್ ಅರಬ್ಸ್ ಎಮಿರೇಟ್‌ನ ಕರೆನ್ಸಿ ಯಾವುದು ? |
|
| (1) | ಯು.ಎ.ಇ. ದಿರ್ಹಾಮ್ |
| (2) | ಯು.ಎ.ಇ. ದೀನಾರ್ |
| (3) | ಯು.ಎ.ಇ. ಲೀರಾ |
| (4) | ಯು.ಎ.ಇ. ರಿಯಾದ್ |
CORRECT ANSWER
(1) ಯು.ಎ.ಇ. ದಿರ್ಹಾಮ್
|
40. | ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯವ್ಯಯವನ್ನು ಮಂಡಿಸಿದವರು ಯಾರು ? |
|
| (1) | ಮೊರಾರ್ಜಿ ದೇಸಾಯಿ |
| (2) | ಜಾನ್ ಮಥಾಯ್ |
| (3) | ಆರ್.ಕೆ. ಷಣ್ಮುಖಂ ಚೆಟ್ಟಿ |
| (4) | ಎನ್.ಕೆ. ಚಂದಾ |
CORRECT ANSWER
(3) ಆರ್.ಕೆ. ಷಣ್ಮುಖಂ ಚೆಟ್ಟಿ
|
41. | ಭಾರತದಲ್ಲಿನ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ? |
|
| (1) | ಭಾರತದಲ್ಲಿನ ಹಣದುಬ್ಬರವನ್ನು ನಿಯಂತ್ರಿಸುವುದು ಭಾರತ ಸರ್ಕಾರದ್ದಷ್ಟೇ ಹೊಣೆಗಾರಿಕೆಯಾಗಿದೆ |
| (2) | ಹಣದುಬ್ಬರವನ್ನು ನಿಯಂತ್ರಿಸುವುದರಲ್ಲಿ ರಿಸರ್ವ್ ಬ್ಯಾಂಕ್‌ನ ಪಾತ್ರವಿಲ್ಲ. |
| (3) | ಹಣ ಚಲಾವಣೆಯಲ್ಲಿನ ಕುಸಿತವು ಹಣದುಬ್ಬರದ ನಿಯಂತ್ರಣಕ್ಕೆ ಸಹಾಯಕವಾಗಿದೆ. |
| (4) | ಹಣ ಚಲಾವಣೆಯಲ್ಲಿನ ಹೆಚ್ಚಳವು ಹಣದುಬ್ಬರದ ನಿಯಂತ್ರಣಕ್ಕೆ ಸಹಾಯಕವಾಗಿದೆ. |
CORRECT ANSWER
(3) ಹಣ ಚಲಾವಣೆಯಲ್ಲಿನ ಕುಸಿತವು ಹಣದುಬ್ಬರದ ನಿಯಂತ್ರಣಕ್ಕೆ ಸಹಾಯಕವಾಗಿದೆ.
|
42. | 2011ರ ಜನಗಣತಿಯ ಮೇರೆಗೆ ಒಂದು ಚ.ಕಿ. ಮೀ.ಗೆ 1102 ವ್ಯಕ್ತಿಗಳನ್ನು ಹೊಂದಿ ಅತ್ಯಂತ ಜನದಟ್ಟಣೆಯನ್ನು ಹೊಂದಿದೆ ಎಂದೆನಿಸಿದ ರಾಜ್ಯ ಯಾವುದು ? |
|
| (1) | ಬಿಹಾರ್ |
| (2) | ಪಶ್ವಿಮ ಬಂಗಾಳ |
| (3) | ಕೇರಳ |
| (4) | ಉತ್ತರ ಪ್ರದೇಶ |
CORRECT ANSWER
(1) ಬಿಹಾರ್
|
43. | ಭಾರತದಲ್ಲಿ ತಲಾ ಕೃಷಿ ಹಿಡುವಳಿ ಭೂಮಿಯ ಹೊಂದಿರುವಿಕೆಯು ಕಡಿಮೆ ಇರುವುದಕ್ಕೆ ಕೆಳಗಿನವುಗಳಲ್ಲಿ ಯಾವುವು ಕಾರಣವಾಗಿವೆ ? |
| A. | ಕೃಷಿಯ ವ್ಯಾಪಕತೆ |
| B. | ಜನಸಂಖ್ಯೆಯಲ್ಲಿನ ತೀವ್ರಗತಿಯ ಹೆಚ್ಚಳ |
| C. | ಉತ್ತರಾಧಿಕಾರಿಗಳಿಗೆ ಭೂಮಿಯನ್ನು ಸಮಾನವಾಗಿ ಭಾಗ ಮಾಡುವ ಪದ್ಧತಿ |
| D. | ತಳೀಯ ಪರಿಷ್ಕೃತ (GM)ಬೆಳೆಗಳ ಬೆಳೆಯುವಿಕೆ |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು B |
| (2) | B ಮತ್ತು C |
| (3) | A ಮತ್ತು D |
| (4) | A, B ಮತ್ತು D |
CORRECT ANSWER
(2) B ಮತ್ತು C
|
44. | ಕೆಳಗಿನವುಗಳನ್ನು ಹೊಂದಿಸಿ |
| | ಸೂಚಿ – I | | ಸೂಚಿ – II |
| A. | ಆರ್ಥಿಕ ಕಡಿತ | I. | ನಿರ್ದಿಷ್ಟ ಕುಂದು ಕೊರತೆಯನ್ನು ಸರಿಪಡಿಸುವುದು |
| B. | ಟೋಕನ್ ಕಡಿತ | II. | ಲೋಕಸಭೆಯಲ್ಲಿ ಅನುಮೋದನೆ. ಆದರೆ ಸಚಿವ ಮಂಡಳಿ ರಾಜೀನಾಮೆ ನೀಡುವುದು |
| C. | ದಂಡನಾ ನಿರ್ಣಯ | III. | ನೀತಿಯ ನಿರಾಕರಣೆ |
| D. | ನೀತಿ ಕಡಿತ | IV. | ನಿರ್ದಿಷ್ಟ ಮೊತ್ತದಷ್ಟು ಬೇಡಿಕೆಯನ್ನು ತಗ್ಗಿಸುವುದು |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| | A | B | C | D |
| (1) | II | IV | I | III |
| (2) | IV | III | II | I |
| (3) | IV | I | II | III |
| (4) | IV | III | I | II |
| |
CORRECT ANSWER
(3) IV, I, II, III
|
45. | ಸಂವಿಧಾನಾತ್ಮಕ ಪರಿಹಾರ ಹಕ್ಕು ಕುರಿತಂತೆ ಈ ಹೇಳಿಕೆಗಳನ್ನು ಪರಿಗಣಿಸಿ. |
| A. | ರಿಟ್ ನೀಡಿಕೆಯು ಹಕ್ಕಿನ ವಿಷಯ |
| B. | ಶಾಸನದಿಂದ ಹಕ್ಕನ್ನು ಸಂಕ್ಷೇಪನ ಗೊಳಿಸಬಹುದು |
| C. | ಅಸಮಾಧಾನಕ್ಕೊಳಗಾದವರು ಮೊದಲು ಉಚ್ಚ ನ್ಯಾಯಾಲಯಕ್ಕೆ ಸಾಗಿ ಅನಂತರ ಸರ್ವೋಚ್ಚ ನ್ಯಾಯಲಯಕ್ಕೆ ಮನವಿ ಸಲ್ಲಿಸಬೇಕು. |
| D. | ಅನುಚ್ಛೇದ 32ರ ಪ್ರಕಾರ ಪರ್ಯಾಯ ಪರಿಹಾರ ಲಭ್ಯತೆಗೆ ಅಡ್ಡಿಯಿಲ್ಲ |
| | ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು D ಮಾತ್ರ |
| (2) | B ಮತ್ತು C ಮಾತ್ರ |
| (3) | B ಮತ್ತು D ಮಾತ್ರ |
| (4) | A ಮತ್ತು B ಮಾತ್ರ |
CORRECT ANSWER
(1) A ಮತ್ತು D ಮಾತ್ರ
|
46. | ಕೇಂದ್ರ ಶಾಸನ ಸಭೆಯ ಎರಡು ಸದನಗಳು 1935ರ ಭಾರತ ಸರ್ಕಾರದ ಕಾಯ್ದೆ ಪ್ರಕಾರ: |
|
| (1) | ವಿಧಾನ ಸಭೆ ಮತ್ತು ವಿಧಾನ ಪರಿಷತ್ತು |
| (2) | ಪ್ರಾಂತೀಯ ವಿಧಾನಸಭೆ ಮತ್ತು ಕೇಂದ್ರ ಶಾಸನ ಸಭೆ |
| (3) | ಫೆಡರಲ್ ಅಸೆಂಬ್ಲಿ ಮತ್ತು ರಾಜ್ಯಗಳ ಮಂಡಲಿ |
| (4) | ಮೇಲಿನ ಯಾವುವೂ ಅಲ್ಲ |
CORRECT ANSWER
(3) ಫೆಡರಲ್ ಅಸೆಂಬ್ಲಿ ಮತ್ತು ರಾಜ್ಯಗಳ ಮಂಡಲಿ
|
47. | ಪರಿಶಿಷ್ಟ ಜಾತಿಯವರಿಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗ ಕುರಿತಂತೆ ಈ ಹೇಳಿಕೆಗಳನ್ನು ಪರಿಗಣಿಸಿ : |
| A. | ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಹಿತಾಸಕ್ತಿಗಳಿಗೆ ಮತ್ತು ಹಕ್ಕುಗಳಿಗೆ ಕುಂದು ಉಂಟಾದದ್ದರ ಬಗ್ಗೆ ನಿರ್ದಿಷ್ಟ ದೂರುಗಳನ್ನು ಪರಿಶೀಲಿಸುವುದು ಅದರ ಕರ್ತವ್ಯಗಳಲ್ಲೊಂದಾಗಿದೆ. |
| B. | ಕೇಂದ್ರಸರ್ಕಾರ ಹಾಗೂ ಪ್ರತಿ ರಾಜ್ಯ ಸರ್ಕಾರಗಳೂ ಪ್ರಮುಖ ಪರಿಶಿಷ್ಟ ಜಾತಿಯವರ ಹಿತಾಸಕ್ತಿ ಮೇಲೆ ಪ್ರಭಾವ ಬೀರುವ ಪ್ರಮುಖ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಆಯೋಗದೊಂದಿಗೆ ಸಮಾಲೋಚಿಸುವುದು. |
| C. | ಈ ಸುರಕ್ಷಾ ಕ್ರಮಗಳ ಬಗೆಗೆ ಆಯೋಗವು ಅಗತ್ಯವೆನಿಸಿದರೆ ವರದಿಯನ್ನು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ವಾರ್ಷಿಕವಾಗಿ ಮತ್ತು ಬೇರೆ ಸಮಯಗಳಲ್ಲಿ ವರದಿ ಮಾಡುವುದು. |
| D. | ಪರಿಶಿಷ್ಟ ಜಾತಿಯವರ ವಿರುದ್ಧ ನಡೆದ ದೌರ್ಜನ್ಯ ಕುರಿತಂತೆ ಕ್ರಿಮಿನಲ್ ನ್ಯಾಯಾಲಯ ಆಗಿ ಕಾರ್ಯ ನಿರ್ವಹಿಸುವುದು. |
| | ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | A, C ಮತ್ತು D ಮಾತ್ರ |
| (3) | C ಮತ್ತು D ಮಾತ್ರ |
| (4) | A ಮತ್ತು B ಮಾತ್ರ |
CORRECT ANSWER
(4) A ಮತ್ತು B ಮಾತ್ರ
|
48. | ಕಾರು ಶೈತ್ಯಕವು |
| A. | ನೀರಿನ ಕುದಿಯುವ ಬಿಂದುವನ್ನು ಹೆಚ್ಚಳಗೊಳಿಸುವುದು. |
| B. | ನೀರಿನ ಘನೀಭವನ ಬಿಂದುವನ್ನು ತಗ್ಗಿಸುವುದು. |
| C. | ಇಂಜನ್ನಿನ ಲೋಹೀಯ ಭಾಗಗಳ ತುಕ್ಕು ಹಿಡಿಯುವಿಕೆಯನ್ನು ಕಡಿಮೆ ಮಾಡುವುದು. |
| D. | ಪೆಟ್ರೋಲ್‌ನ ಉಪಯೋಗವನ್ನು ತಗ್ಗಿಸುವುದು. |
| | ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು B |
| (2) | A, B ಮತ್ತು C |
| (3) | A, B ಮತ್ತು D |
| (4) | A, C ಮತ್ತು D |
CORRECT ANSWER
(2) A, B ಮತ್ತು C
|
49. | ವ್ಯಕ್ತಿಯ ತೂಕ ಶೂನ್ಯವಾಗುವುದು ಯಾವಾಗ ಎಂದರೆ |
| A. | ಅವನು ಮುಕ್ತವಾಗಿ ಕೆಳಗೆ ಬೀಳುವಾಗ. |
| B. | ಅವನು ಉಪಗ್ರಹದಲ್ಲಿ ಸುತ್ತುವಾಗ |
| C. | ಅವನು ಅತಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಡುವಾಗ |
| D. | ಅವನು ಅನಿಲ ಭರಿತ ಬೆಲೂನಿನಲ್ಲಿ ಸವಾರಿ ಮಾಡುವಾಗ |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು B ಗಳು ಸರಿ |
| (2) | A ಮತ್ತು D ಗಳು ಸರಿ |
| (3) | A, B ಮತ್ತು D ಗಳು ಸರಿ |
| (4) | A, B, C ಮತ್ತು D ಗಳು ಸರಿ |
CORRECT ANSWER
(1) A ಮತ್ತು B ಗಳು ಸರಿ
|
50. | ಭಾರತಕ್ಕೆ ಸ್ವಯಂ ಆಡಳಿತ ಸರ್ಕಾರವನ್ನು ಆಧುನಿಕ ಷರತ್ತುಗಳಡಿಯಲ್ಲಿ ಪ್ರಾಚೀನ ಭಾರತ ಜೀವನವನ್ನು ಪೂರೈಸುವಂತಿರಬೇಕು ಮತ್ತು ಅಂತಿಮವಾಗಿ ವೇದಾಂತ ಆದರ್ಶಕ್ಕನುಗುಣವಾಗಿರಬೇಕೆಂದು ಪ್ರತಿಪಾದಿಸಿದ ರಾಷ್ಟ್ರೀಯತಾವಾದಿಗಳು ಯಾರು ? |
|
| (1) | ರಾಜಾರಾಮ್ ಮೋಹನ್ ರಾಯ್ |
| (2) | ಜಿ.ಕೆ. ಗೋಖಲೆ |
| (3) | ಅರಬಿಂದೋ ಘೋಷ್ |
| (4) | ಶ್ರೀಮತಿ ಅನಿಬೆಸೆಂಟ್ |
CORRECT ANSWER
(3) ಅರಬಿಂದೋ ಘೋಷ್
|
51. | ‘ಯಾವುದೇ ಆಕಾರ ಅಥವಾ ರೂಪದಲ್ಲಿ ಸಹಕಾರವನ್ನು ಸೈತಾನಿಕಿ ಸರ್ಕಾರದೊಂದಿಗೆ ನೀಡುವುದು ಪಾಪ’ – ಎಂದು ಗಾಂಧೀಜಿ ಘೋಷಿಸಿದ್ದು ಈ ಕೆಳಗಿನ ಯಾವ ಘಟನೆಯ ನಂತರ ? |
|
| (1) | ರೌಲೆಟ್ ಕಾಯ್ದೆಯು ಜಾರಿಯಾದಾಗ |
| (2) | ಪಂಜಾಬಿನಲ್ಲಿಯ ಜಲಿಯನ್‌ವಾಲಾಬಾಗ್ ದುರಂತ |
| (3) | ಎರಡನೇ ದುಂಡು ಮೇಜು ಪರಿಷತ್ತಿನ ವೈಫಲ್ಯ |
| (4) | ಮೇಲಿನ ಯಾವುವೂ ಅಲ್ಲ |
CORRECT ANSWER
(2) ಪಂಜಾಬಿನಲ್ಲಿಯ ಜಲಿಯನ್‌ವಾಲಾಬಾಗ್ ದುರಂತ
|
52. | ಈ ಹೇಳಿಕೆಗಳ ಸರಿಯಾದ ಕಾಲಾನುಕ್ರಮ ಆಯ್ಕೆ ಮಾಡಿ: |
| A. | ಸಬರ್‌ಮತಿ ಆಶ್ರಮದಿಂದ ದಂಡಿ ಸಮುದ್ರ ತೀರಕ್ಕೆ ನಡಿಗೆ |
| B. | ಲಾಹೋರ್ ಕಾಂಗ್ರೆಸ್ ಅಧಿವೇಶನ |
| C. | ಗಾಂಧೀಜಿ ಎರಡನೆಯ ದುಂಡುಮೇಜು ಪರಿಷತ್ತಿನಲ್ಲಿ ಭಾಗವಹಿಸಿದ್ದು |
| D. | ಗಾಂಧಿ ಇರ್ವಿನ್ ಒಪ್ಪಂದ |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | B, C, D, A |
| (2) | A, C, D, B |
| (3) | B, A, D, C |
| (4) | A, B, D, C |
CORRECT ANSWER
(3) B, A, D, C
|
53. | ಸಂಘವನ್ನು ರಚಿಸುವ ಹಕ್ಕಿನಲ್ಲಿ ಈ ಪೈಕಿ ಯಾವುದನ್ನು ನೀಡಲಾಗಿಲ್ಲ? |
| A. | ಟ್ರೇಡ್ ಯೂನಿಯನ್ ರೂಪಿಸುವ ಹಕ್ಕು |
| B. | ಮುಷ್ಕರಕ್ಕೆ ಕರೆ ನೀಡುವ ಹಕ್ಕು |
| C. | ಸಂಘ ರಚಿಸುವಾಗ ಮಾನ್ಯತೆ ಪಡೆಯುವಾಗ ಸರ್ಕಾರದಿಂದ ವಿಧಿಸಲ್ಪಟ್ಟ ಷರತ್ತುಗಳನ್ನು ಎದುರಿಸುವುದು. |
| D. | ಅಪೇಕ್ಷಿಸಿದಾಗ ಸಂಘದ ಸದಸ್ಯರಾಗುವ ಹಕ್ಕು. |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು D ಮಾತ್ರ |
| (2) | B ಮಾತ್ರ |
| (3) | C ಮಾತ್ರ |
| (4) | B ಮತ್ತು C ಮಾತ್ರ |
CORRECT ANSWER
(4) B ಮತ್ತು C ಮಾತ್ರ
|
54. | ಆದಿವಾಸಿ ಇಲ್ಲವೇ ಆದಿವಾಸಿ ಸಮುದಾಯ ಅಥವಾ ಭಾಗಶಃ ಅಥವಾ ಆದಿವಾಸಿಗಳೊಳಗೆ ಅಥವಾ ಆದಿವಾಸಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಅಧಿಸೂಚಿಸುವಾಗ ರಾಷ್ಟ್ರಪತಿಯವರು ಯಾರನ್ನು ಸಮಾಲೋಚಿಸಬೇಕು ? |
|
| (1) | ಸಂಬಂಧಿಸಿದ ರಾಜ್ಯದ ಮುಖ್ಯಮಂತ್ರಿ |
| (2) | ಭಾರತದ ಮುಖ್ಯ ನ್ಯಾಯಾಧೀಶರು |
| (3) | ಸಂಬಂಧಿಸಿದ ರಾಜ್ಯದ ರಾಜ್ಯಪಾಲರು |
| (4) | ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರು |
CORRECT ANSWER
(3) ಸಂಬಂಧಿಸಿದ ರಾಜ್ಯದ ರಾಜ್ಯಪಾಲರು
|
55. | ಈ ಕೆಳಗಿನ ಹೇಳಿಕೆಗಳನ್ನು ಭಾರತದ ರಾಜಕಾರಣಕ್ಕೆ ಸಂಬಂಧಿಸಿದಂತೆ – ಪರಿಗಣಿಸಿ: |
| A. | ಸಂವಿಧಾನದ ಸಾರ್ವಭೌಮತೆ. |
| B. | ದ್ವಿನ್ಯಾಯಾಲಯದ ವ್ಯವಸ್ಥೆಯ ಗೈರುಹಾಜರು |
| C. | ಅಖಿಲ ಭಾರತ ಸೇವೆಗಳ ಸೃಷ್ಟಿ |
| D. | ಸಂವಿಧಾನದ 7 ನೇ ಅನುಸೂಚಿ |
| | ಈ ಪೈಕಿ ಯಾವುದು/ಯಾವುವು ಭಾರತದ ರಾಜಕೀಯತೆಯ ಏಕತೆ ಸ್ವರೂಪದವು ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | B ಮತ್ತು C ಮಾತ್ರ |
| (3) | B,C ಮತ್ತು D ಮಾತ್ರ |
| (4) | B ಮಾತ್ರ |
CORRECT ANSWER
(2) B ಮತ್ತು C ಮಾತ್ರ
|
56. | ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕುರಿತಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಈ ಪೈಕಿ ಯಾವ ಹೇಳಿಕೆಗಳು ಸರಿ? |
| A. | ತನ್ನ ಧರ್ಮದ ಪ್ರಸಾರವೆಂದರೆ, ಇತರ ಧರ್ಮದವರನ್ನು ತನ್ನ ಧರ್ಮಕ್ಕೆ ಮತಾಂತರಿಸುವುದು. |
| B. | ಒಬ್ಬ ವ್ಯಕ್ತಿಯು ಇನ್ನೊಂದು ಧರ್ಮವನ್ನು ಅಳವಡಿಸಿಕೊಳ್ಳಲು ಸ್ವತಂತ್ರ |
| C. | ಧರ್ಮದ ಅತ್ಯಗತ್ಯ ಭಾಗವೆಂದು ಆ ಧರ್ಮ ಪರಿಗಣಿಸುವುದೋ ಅದನ್ನು ನ್ಯಾಯಾಂಗ ಪರಿಶೀಲನೆಗೆ ಒಳ ಪಡಿಸುವುದು. |
| D. | ಆಡಳಿತವನ್ನು ಸಾಮಾಜಿಕ ಕ್ಷೇಮ ಅಥವಾ ಸುಧಾರಣೆ ಮಾಡುವಲ್ಲಿ ತಡೆಹಿಡಿಯದಿರುವುದು. |
| | ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಲ್ಲ ? |
|
| (1) | A ಮಾತ್ರ |
| (2) | B ಮಾತ್ರ |
| (3) | B ಮತ್ತು C ಮಾತ್ರ |
| (4) | B,C ಮತ್ತು D ಮಾತ್ರ |
CORRECT ANSWER
(4) B,C ಮತ್ತು D ಮಾತ್ರ
|
57. | ಈ ಪೈಕಿ ಯಾವ ಹೇಳಿಕೆ/ಗಳು ಶಾಸಕಾಂಗ ವಿಧಾನಗಳಿಗೆ ಸಂಬಂಧಿಸಿದಂತೆ ಸರಿ : |
| A. | ಎರಡು ಸದನಗಳಲ್ಲಿ ಹಣಕಾಸು ಮಸೂದೆಗೆ ಸ್ಥಗಿತತೆ ಉಂಟಾದಾಗ ರಾಷ್ಟ್ರಪತಿಗಳು ಪಾರ್ಲಿಮೆಂಟಿನ ಜಂಟಿ ಸಭೆ ಕರೆಯಬಹುದು. |
| B. | ಎರಡೂ ಸದನಗಳಲ್ಲಿ ಸಾಮಾನ್ಯ ಮಸೂದೆಗೆ ಸ್ಥಗಿತತೆ ಉಂಟಾದಾಗ ರಾಜ್ಯಪಾಲರು ಶಾಸಕಾಂಗದ ಜಂಟಿ ಸದನದ ಸಭೆ ಕರೆಯುವರು. |
| C. | ಎರಡು ಸದನಗಳ ನಡುವೆ ಸಾಮಾನ್ಯ ಮಸೂದೆಗೆ ಸ್ಥಗಿತತೆ ಉಂಟಾದಾಗ ರಾಷ್ಟ್ರಪತಿಗಳು ಲೋಕಸಭೆಯ ಎರಡು ಸದನಗಳ ಜಂಟಿ ಸಭೆ ಕರೆಯುವರು. |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | B ಮತ್ತು C ಮಾತ್ರ |
| (3) | B ಮಾತ್ರ |
| (4) | C ಮಾತ್ರ |
CORRECT ANSWER
(4) C ಮಾತ್ರ
|
58. | ರಾಜ್ಯ ನೀತಿ ನಿರ್ದೇಶನಾ ತತ್ವಗಳ ಯಾವ ಅನುಚ್ಛೇದವು ಹಸು ಮತ್ತು ಕರುಗಳ ಮತ್ತು ಇತರ ಕರಾವಿನ ಭಾರ ಎಳೆಯುವ ದನಕರುಗಳನ್ನು ಕಡಿಯುವುದನ್ನು ನಿಷೇಧಿಸುತ್ತದೆ. |
|
| (1) | ಅನುಚ್ಛೇದ 48 |
| (2) | ಅನುಚ್ಛೇದ 47 |
| (3) | ಅನುಚ್ಛೇದ 43A |
| (4) | ಅನುಚ್ಛೇದ 43 |
CORRECT ANSWER
(1) ಅನುಚ್ಛೇದ 48
|
59. | ಪರಿವರ್ತಕವು ಇದಕ್ಕೆ ಬಳಕೆಯಾಗುವ ಸಾಧನ |
|
| (1) | DC ವೋಲ್ಟೇಜು ಹೆಚ್ಚಳ (ಅಥವಾ ತಗ್ಗಿಕೆ) |
| (2) | ವಿದ್ಯುತ್ ಉತ್ಪಾದನೆ |
| (3) | AC ಯನ್ನು DC ಆಗಿ ಪರಿವರ್ತಿಸುವುದು |
| (4) | AC ವೋಲ್ಟೇಜಿನ ಹೆಚ್ಚಳ ಇಲ್ಲವೆ ತಗ್ಗಿಕೆ |
CORRECT ANSWER
(4) AC ವೋಲ್ಟೇಜಿನ ಹೆಚ್ಚಳ ಇಲ್ಲವೆ ತಗ್ಗಿಕೆ
|
60. | ದ್ಯುತಿತಂತುಗಳು ಇಲ್ಲಿ ಉಪಯುಕ್ತ |
| A. | ಅತಿ ದೂರ ಸಂವಹನದಲ್ಲಿ |
| B. | ಜೆಟ್ ಇಂಜಿನ್ನುಗಳ ಆಂತರಿಕ ತಾಪವನ್ನು ಅಳೆಯುವ ಸಂವೇದಕಗಳು. |
| C. | ಸೂರಿನಿಂದ ಕಟ್ಟಡದ ವಿವಿಧ ಭಾಗಗಳಿಗೆ ಸೂರ್ಯನ ಬೆಳಕು ಪಸರಿಸಲು. |
| D. | ಎಂಡೋಸ್ಕೋಪಿಗಳಲ್ಲಿ |
| | ಮೇಲಿನವುಗಳಲ್ಲಿ ಯಾವುದು/ವು ಸರಿ ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A,B ಮತ್ತು C |
| (2) | A, C ಮತ್ತು D |
| (3) | A,B, C ಮತ್ತು D |
| (4) | B, C ಮತ್ತು D |
CORRECT ANSWER
(3) A,B, C ಮತ್ತು D
|
61. | ಮೈಕ್ರೋಫೋನಿನಲ್ಲಿ ಆಗುವ ಶಕ್ತಿ ಪರಿವರ್ತನೆಯು ಉಂಟಾಗುವುದು |
|
| (1) | ಶಬ್ದದಿಂದ ಯಾಂತ್ರಿಕದಿಂದ ವಿದ್ಯುತ್ |
| (2) | ವಿದ್ಯುತ್ ದಿಂದ ಯಾಂತ್ರಿಕದಿಂದ ವಿದ್ಯುತ್ |
| (3) | ಶಬ್ದದಿಂದ ಯಾಂತ್ರಿಕ |
| (4) | ಯಾಂತ್ರಿಕದಿಂದ ಶಬ್ದ |
CORRECT ANSWER
(1) ಶಬ್ದದಿಂದ ಯಾಂತ್ರಿಕದಿಂದ ವಿದ್ಯುತ್
|
62. | ಕ್ರಿ.ಶ. 1942ರಲ್ಲಿ ಭಾರತ ಬಿಟ್ಟುತೊಲಗಿ ಚಳವಳಿ ಪ್ರಾರಂಭವಾದಾಗ ಭಾರತದ ವೈಸರಾಯ್ ಆಗಿದ್ದವರು ಯಾರು? |
|
| (1) | ಲಿನ್‌ಲಿತ್‌ಗೋ |
| (2) | ವಿಲಿಂಗ್ಡನ್ |
| (3) | ವೇವೆಲ್ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(1) ಲಿನ್‌ಲಿತ್‌ಗೋ
|
63. | ವಸಾಹತು ಅವಧಿಯಲ್ಲಿನ ಕೆಲವು ಸಾಮಾಜಿಕ ಸುಧಾರಕರು ಮತ್ತು ಅವರ ಸಂಸ್ಥೆಗಳನ್ನು ಇಲ್ಲಿ ನೀಡಲಾಗಿದೆ. |
| A. | ಸೇವಾಸದನ : ಮಹರ್ಷಿ ಕರ್ವೆ |
| B. | ಸೋಷಿಯಲ್ ಸರ್ವೀಸ್ ಲೀಗ್ : ಚಂದಾವರ್ಬಾಯಿ |
| C. | ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ : ಜಿ.ಕೆ. ಗೋಖಲೆ |
| D. | ಶಾರದಾ ಸದನ್ : ಪಂಡಿತಾ ರಾಮಾಬಾಯಿ |
| | ಮೇಲಿನವುಗಳಲ್ಲಿ ಯಾವುದು/ವು ಸರಿ ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು C ಮಾತ್ರ |
| (2) | B ಮತ್ತು C ಮಾತ್ರ |
| (3) | C ಮತ್ತು D ಮಾತ್ರ |
| (4) | A, B, C ಮತ್ತು D |
CORRECT ANSWER
(3) C ಮತ್ತು D ಮಾತ್ರ
|
64. | ಬರಿಕಣ್ಣಿಗೆ ಕಾಣುವ ಸಮೀಪದ ನಕ್ಷತ್ರ (ಸೂರ್ಯನಲ್ಲದ್ದು) |
|
| (1) | ಪ್ರಾಕ್ಸಿಮಾ ಸೆಂಟಾರಿ |
| (2) | ಆಲ್ಫ ಸೆಂಟಾರಿ |
| (3) | ಧ್ರುವ ನಕ್ಷತ್ರ |
| (4) | ವೇಗ |
CORRECT ANSWER
(2) ಆಲ್ಫ ಸೆಂಟಾರಿ
|
65. | 60 ಜನ ವಿದ್ಯಾರ್ಥಿಗಳು ಇರುವ ತರಗತಿಯಲ್ಲಿ 1 ರಿಂದ 60ರವರೆಗೆ ಶ್ರೇಣೀಕರಿಸಲಾಗಿದೆ. ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗಿಂತ ಎರಡು ಪಟ್ಟು ಸಂಖ್ಯೆ ಇದ್ದಾರೆ. ಬಾಲಕರಲ್ಲಿ ಕಾರ್ತಿಕನಿಗಿಂತ ಹನ್ನೆರಡು ಹುಡುಗಿಯರು ಮುಂದೆ ಇದ್ದರೆ ಎಷ್ಟು ವಿದ್ಯಾರ್ಥಿಗಳು (ಬಾಲಕ) ಅವನ ನಂತರ ಇದ್ದಾರೆ ? |
|
| (1) | 2 |
| (2) | 14 |
| (3) | 16 |
| (4) | 18 |
CORRECT ANSWER
(2) 14
|
66. | ಈ ಪೆಟ್ಟಿಗೆಯಲ್ಲಿ ತಪ್ಪಿಹೋಗಿರುವ ಸಂಖ್ಯೆ |
| |
|
| (1) | 628 |
| (2) | 638 |
| (3) | 668 |
| (4) | 698 |
CORRECT ANSWER
(4) 698
|
67. | ಹೆಂಡತಿಯ ವಯಸ್ಸಿನ ಸಂಖ್ಯೆಗಳನ್ನು ಅದಲು ಬದಲು ಮಾಡಿದರೆ ಗಂಡನ ವಯಸ್ಸು ಬರುತ್ತದೆ. ಅವರ ವಯಸ್ಸಿನ ಅಂತರ ಅವರ ವಯಸ್ಸಿನ ಮೊತ್ತದ ಹನ್ನೊಂದರಲ್ಲಿ ಒಂದು ಭಾಗವಾದರೆ ಆಗ ಪತ್ನಿಯ ವಯಸ್ಸು |
|
| (1) | 56 |
| (2) | 45 |
| (3) | 34 |
| (4) | 23 |
CORRECT ANSWER
(2) 45
|
68. | B ನಗರವು A ನಗರದ ದಕ್ಷಿಣಕ್ಕೆ 4 ಮೈಲಿ ದೂರ. Cಯು Bಯ ಪಶ್ಚಿಮಕ್ಕೆ 6 ಮೈಲಿ ದೂರ ಮತ್ತು D ನಗರವು Cಯ ದಕ್ಷಿಣಕ್ಕೆ 4 ಮೈಲಿ ದೂರ. A ಮತ್ತು Dಗಳ ನಡುವೆ ಇರುವ ಅತಿ ಕಡಿಮೆ ದೂರ |
|
| (1) | 8 ಮೈಲಿ |
| (2) | 12 ಮೈಲಿ |
| (3) | 14 ಮೈಲಿ |
| (4) | 10 ಮೈಲಿ |
CORRECT ANSWER
(4) 10 ಮೈಲಿ
|
69. | ಈ ಚಿತ್ರಗಳನ್ನು ಗಮನಿಸಿ :
|
| |
| ಈ ಪೈಕಿ ಯಾವುದು ನಾಲ್ಕನೆ ಸ್ಥಾಾನಕ್ಕೆ ಹೊಂದುವುದು ? |
CORRECT ANSWER
(3)
|
70. | 3 ಪುರುಷರು ಮತ್ತು 7 ಮಹಿಳೆಯರು 10 ದಿನಗಳಲ್ಲಿ ಒಂದು ಕೆಲಸವನ್ನು ಮುಗಿಸುವರು. ಆದರೆ 4 ಪುರುಷರು ಮತ್ತು 6 ಮಹಿಳೆಯರು 8 ದಿನಗಳಲ್ಲಿ ಅದೇ ಕೆಲಸವನ್ನು ಮುಗಿಸುವರು. ಹಾಗಾದರೆ 10 ಮಹಿಳೆಯರು ಅದೇ ಕೆಲಸವನ್ನು ಎಷ್ಟು ದಿನದಲ್ಲಿ ಮುಗಿಸುವರು ? |
|
| (1) | 30 |
| (2) | 20 |
| (3) | 50 |
| (4) | 40 |
CORRECT ANSWER
(4) 40
|
71. | ಈ ಹೇಳಿಕೆಯನ್ನು ಓದಿ : |
| ‘ಎಲ್ಲಾ ಮೊಬೈಲುಗಳು ಆ ಅಂಗಡಿಯಲ್ಲಿ ಮಾರಾಟವಾದವು. ಉತ್ತಮ ಗುಣಮಟ್ಟದವು. ಕೆಲವು ಸ್ಯಾಮ್ಸಂಗ್ ಮೊಬೈಲುಗಳು ಆ ಅಂಗಡಿಯಲ್ಲಿ ಮಾರಾಟವಾಗಿವೆ.’ ಈ ಪೈಕಿ ಯಾವ ತೀರ್ಮಾನವು ಸರಿ ? |
|
| (1) | ಸ್ಯಾಮ್‌ಸಂಗ್‌ನವರು ಉತ್ಪಾದಿಸಿದ ಎಲ್ಲ ಮೊಬೈಲುಗಳೂ ಉತ್ತಮ ಗುಣಮಟ್ಟದವು. |
| (2) | ಸ್ಯಾಮ್‌ಸಂಗ್ ಮೊಬೈಲುಗಳ ಪೈಕಿ ಕೆಲವು ಉತ್ತಮ ಗುಣಮಟ್ಟದವು. |
| (3) | ಯಾವುದೇ ಸ್ಯಾಮ್‌ಸಂಗ್‌ಮೊಬೈಲು ಉತ್ತಮ ಗುಣಮಟ್ಟದ್ದಲ್ಲ. |
| (4) | ಉತ್ತಮ ಗುಣಮಟ್ಟದ ಕೆಲವು ಸ್ಯಾಮ್ಸಂಗ್ ಮೊಬೈಲುಗಳು ಆ ಅಂಗಡಿಯಲ್ಲಿ ಮಾರಾಟವಾಗಲಿಲ್ಲ. |
CORRECT ANSWER
(2) ಸ್ಯಾಮ್‌ಸಂಗ್ ಮೊಬೈಲುಗಳ ಪೈಕಿ ಕೆಲವು ಉತ್ತಮ ಗುಣಮಟ್ಟದವು.
|
72. | ಈ ಸಂಖ್ಯೆಯ ಗಣಗಳ ಪೈಕಿ ಯಾವುದು {64, 16, 8} ಗಣದಂತಲ್ಲ? |
|
| (1) | {96, 24, 12} |
| (2) | {128, 32, 16) |
| (3) | {144, 36, 18} |
| (4) | {72, 18, 6} |
CORRECT ANSWER
(4) {72, 18, 6}
|
73. | ಈ ಪೈಕಿ ನಾಲ್ಕು ತಾರ್ಕಿಕ ವೆನ್ ನಕಾಶೆಗಳು ಈ ಸಂಬಂಧವನ್ನು ಪ್ರತಿನಿಧಿಸುವವು ? |
| ಸಂಗೀತಗಾರರು, ಪಿಟೀಲು ವಾದಕರು, ಗಾಯಕರು |
|
| (1) | |
| (2) | |
| (3) | |
| (4) | |
CORRECT ANSWER
(1)
|
74. | ಈ ಸರಣಿಯ ಮುಂದಿನ ಅಂಕೆ : |
| 1, 2, 4, 5, 9, 10, 16, 17, 25, _____ |
|
| (1) | 36 |
| (2) | 26 |
| (3) | 25 |
| (4) | 24 |
CORRECT ANSWER
(2) 26
|
75. | ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಸಂದರ್ಭದಲ್ಲಿ ರಾಷ್ಟ್ರಪತಿಯವರು |
| A. | ರಾಜ್ಯದ ಎಲ್ಲ ಕಾರ್ಯನಿರ್ವಹಣೆಯನ್ನೂ ಉಚ್ಚ ನ್ಯಾಯಾಲಯವೂ ಸೇರಿದಂತೆ ತಾವೇ ವಹಿಸಿಕೊಳ್ಳುವರು. |
| B. | ರಾಜ್ಯಪಾಲರ ಅಧಿಕಾರದ ಅಡಿಯಲ್ಲಿ ರಾಜ್ಯ ಆಡಳಿತದಲ್ಲಿನ ಅಧಿಕಾರವನ್ನು ಶಾಸನಸಭೆ ನಿರ್ವಹಿಸುವುದೆಂದು ಘೋಷಿಸುವರು |
| C. | ಉಚ್ಚ ನ್ಯಾಯಾಲಯದ ಹೊರತಾಗಿ ರಾಜ್ಯದ ಎಲ್ಲ ಕಾರ್ಯಗಳ ನಿರ್ವಹಣೆಯನ್ನು ತಾವೇ ವಹಿಸಿಕೊಳ್ಳುವರು. |
| D. | ರಾಷ್ಟ್ರಪತಿಗಳ ಅಧಿಕಾರದ ಅಡಿಯಲ್ಲಿ ರಾಜ್ಯ ಶಾಸನ ಸಭೆಯು ಅಧಿಕಾರ ಚಲಾಯಿಸುವುದು.
|
| | ಮೇಲಿನವುಗಳಲ್ಲಿ ಯಾವುದು/ವು ಸರಿ ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು B ಮಾತ್ರ |
| (2) | B ಮತ್ತು C ಮಾತ್ರ |
| (3) | C ಮತ್ತು D ಮಾತ್ರ |
| (4) | A ಮತ್ತು D ಮಾತ್ರ |
| |
CORRECT ANSWER
(2) B ಮತ್ತು C ಮಾತ್ರ
|
76. | ಈ ಪೈಕಿ ಯಾವ ರಾಜ್ಯದಲ್ಲಿ ದ್ವಿಶಾಸನ ಸಭೆ ಇಲ್ಲ (ವಿಧಾನಸಭೆ + ವಿಧಾನಪರಿಷತ್ತು) |
| A. | ಉತ್ತರ ಪ್ರದೇಶ |
| B. | ಮಧ್ಯಪ್ರದೇಶ |
| C. | ಬಿಹಾರ |
| D. | ಕರ್ನಾಟಕ |
| | ಸರಿಯಾದ ಸಂಕೇತವನ್ನಾರಿಸುವ ಮೂಲಕ ಸರಿಯಾದ ಉತ್ತರಗಳನ್ನು ಆರಿಸಿ : |
|
| (1) | A ಮಾತ್ರ |
| (2) | B ಮಾತ್ರ |
| (3) | B ಮತ್ತು D |
| (4) | A ಮತ್ತು C |
CORRECT ANSWER
(2) B ಮಾತ್ರ
|
77. | ನಬಾರ್ಡ್‌ನ ಮೂರು ಪ್ರಧಾನ ಕಾರ್ಯಗಳೆಂದರೆ |
|
| (1) | ಮರುಹಣನೀಡಿಕೆ, ಸಾಂಸ್ಥಿಕ ಬೆಳವಣಿಗೆ ಮತ್ತು ಕಕ್ಷಿದಾರ ಬ್ಯಾಂಕುಗಳ ಪರಿಶೀಲನೆ |
| (2) | ಮರುಹಣನೀಡಿಕೆ, ಗ್ರಾಮ ದತ್ತು ಮತ್ತು ಕಿರು ರೈತರಿಗೆ ಮಧ್ಯಮ ಅವಧಿಯ ಸಾಲದ ವಿಸ್ತರಣೆ |
| (3) | ಮರುಹಣನೀಡಿಕೆ, ರಾಜ್ಯಮಟ್ಟದ ಸಹಕಾರಿ ಬ್ಯಾಂಕುಗಳಿಗೆ ಮತ್ತು ಹಿರಿಯ ರೈತರಿಗೆ ಅವಧಿಕ ಸಾಲ ವಿಸ್ತರಣೆ |
| (4) | ಈ ಮೇಲಿನ ಯಾವುವೂ ಅಲ್ಲ |
CORRECT ANSWER
(1) ಮರುಹಣನೀಡಿಕೆ, ಸಾಂಸ್ಥಿಕ ಬೆಳವಣಿಗೆ ಮತ್ತು ಕಕ್ಷಿದಾರ ಬ್ಯಾಂಕುಗಳ ಪರಿಶೀಲನೆ
|
78. | ಕೆಳಗಿನ ಯಾವ ಮೊಘಲ್ ದೊರೆಗಳು ಇಸ್ಲಾಂ ಕಾನೂನುಗಳನ್ನು ‘ಫತ್ವಾ-ಇ-ಅಲಂಗೀರ್’ ಎಂಬ ಪುಸ್ತಕದಲ್ಲಿ ಸಂಯೋಜಿಸಿ ಪರಿಚಯಿಸಿದರು ? |
|
| (1) | ಔರಂಗ್‌ಜೇಬ್ |
| (2) | ಅಕ್ಬರ್ |
| (3) | ಜಹಾಂಗೀರ್ |
| (4) | ಷಹಜಹಾನ್ |
CORRECT ANSWER
(1) ಔರಂಗ್‌ಜೇಬ್
|
79. | ದಾರಾ ಶಿಖೋರು ಪರ್ಷಿಯನ್‌ಗೆ ಉಪನಿಷತ್ತುಗಳನ್ನು ಭಾಷಾಂತರ ಮಾಡಿದ್ದು ಈ ಶೀರ್ಷಿಕೆಯಡಿಯಲ್ಲಿ : |
|
| (1) | ಆಲ್ – ಫಿಹ್ರಿಸ್ಟ್ |
| (2) | ಕಿತಾಬ್-ಉಲ್-ಬಯಾನ್ |
| (3) | ಮಜ್ಮಾ-ಉಲ್-ಬಹರೇನ್ |
| (4) | ಶಿರ್-ಇ-ಅಕಬರ್ |
CORRECT ANSWER
(4) ಶಿರ್-ಇ-ಅಕಬರ್
|
80. | ನಾಟ್ಯಶಾಸ್ತ್ರ ಅಭಿನಯ ಕಲೆಯ ಮೇಲಿರುವ ಸಂಸ್ಕೃತ ಹಿಂದೂ ಕೃತಿ, ಅಭಿನಯ ಕಲೆ ಮತ್ತು ಈ ವಿಷಯಗಳನ್ನು ನಾಟಕ ರಚನೆ, ಅಭಿನಯ ಕೌಶಲ, ಅಂಗಭಂಗಿ, ದೇಹ ಚಲನೆಗಳು, ಪ್ರಸಾಧನ, ಉಡುಗೆ ಕುರಿತು ಇದೆ. ಇದರ ಕರ್ತೃ |
|
| (1) | ಭರತ ಮುನಿ |
| (2) | ತಂಡು ಮುನಿ |
| (3) | ನಾರದ ಮುನಿ |
| (4) | ಆಭಿನವ ಗುಪ್ತ |
CORRECT ANSWER
(1) ಭರತ ಮುನಿ
|
81. | ಪಟ್ಟಿ – I ಮತ್ತು ಪಟ್ಟಿ – IIಹೊಂದಿಸಿ |
| | ಪಟ್ಟಿ – I | | ಪಟ್ಟಿ – II |
| A. | ರಾಮಾನುಜ | I. | ಶುದ್ಧಾದ್ವೈತ |
| B. | ಮಧ್ವಾಚಾರ್ಯ | II. | ದ್ವೈತಾದ್ವೈತ |
| C. | ನಿಂಬರಕಾಚಾರ್ಯ | III. | ದ್ವೈತ |
| D. | ವಲ್ಲಭಾಚಾರ್ಯ | IV. | ವಿಶಿಷ್ಟಾದ್ವೈತ |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| | A | B | C | D |
| (1) | IV | III | II | I |
| (2) | I | II | III | IV |
| (3) | III | I | IV | II |
| (4) | II | IV | I | III |
| |
CORRECT ANSWER
(1) IV, III, II, I
|
82. | ಲೇಖಕರು (ಪಟ್ಟಿ – I) ಮತ್ತು ಅವರಿಂದ ಬರೆಯಲ್ಪಟ್ಟ ಕೃತಿಗಳ (ಪಟ್ಟಿ – II) ಪಟ್ಟಿಯನ್ನು ಹೊಂದಿಸಿರಿ: |
| | (ಪಟ್ಟಿ – I) ಲೇಖಕರು | | (ಪಟ್ಟಿ – II) ಕೃತಿಗಳ |
| A. | ವಿಕ್ರಮ ಸೇಠ್ | I. | ದ ವೈಟ್ ಟೈಗರ್ |
| B. | ಉಪಮನ್ಯು ಚಟರ್ಜಿ | II. | ಎ ಸೂಟಬಲ್ ಬಾಯ್ |
| C. | ಕಿರಣ ದೇಸಾಯಿ | III. | ಇಂಗ್ಲಿಷ್ ಆಗಸ್ಟ್ : ಎನ್ ಇಂಡಿಯನ್ ಸ್ಟೋರಿ |
| D. | ಝುಂಪಾ ಲಹೆರಿ | IV. | ಇನ್‌ಹೆರಿಟೆನ್ಸ್ ಆಫ್ ಲಾಸ್ |
| D. | | V. | ಇಂಟರ್‌ಪ್ರಿಟರ್ ಆಫ್ ಮೆಲಡೀಸ್ |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| | A | B | C | D |
| (1) | I | IV | II | III |
| (2) | II | III | IV | V |
| (3) | III | II | V | I |
| (4) | I | III | IV | V |
| |
CORRECT ANSWER
(2) II, III, IV, V
|
83. | ಇವನ್ನು ಪರಿಗಣಿಸಿ : |
| A. | ಕಾರ್ಬನ್ ಡೈಆಕ್ಸೈಡು |
| B. | ನೈಟ್ರೋಜನ್ ಆಕ್ಸೈಡುಗಳು |
| C. | ಸಲ್ಫರ್ ಆಕ್ಸೈಡುಗಳು |
| | ಥರ್ಮಲ್ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಹನದಿಂದ ಮೇಲಿನವುಗಳಲ್ಲಿ ಯಾವುದು/ವು ವಿಸರ್ಜಿಸಲ್ಪಡುತ್ತದೆ/ವೆ? |
| | ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | B ಮತ್ತು C |
| (3) | A ಮತ್ತು C |
| (4) | A,B ಮತ್ತು C |
CORRECT ANSWER
(4) A,B ಮತ್ತು C
|
84. | ಕ್ರೀಡಾಳುಗಳೊಂದಿಗೆ (ಪಟ್ಟಿ -I) ಅವರಿಗೆ ಸಂಬಂಧಿಸಿದ ಕ್ರೀಡೆಗಳನ್ನು (ಪಟ್ಟಿ -II) ಹೊಂದಿಸಿರಿ. |
| | ಪಟ್ಟಿ – I (ಕ್ರೀಡಾಳುಗಳು) | | ಪಟ್ಟಿ – II (ಕ್ರೀಡೆಗಳು) |
| A. | ಶ್ರೇಯಸ್ ಮೆಹ್ತಾ | I. | ಕ್ರಿಕೆಟ್ |
| B. | ಜೂಡಿ ಫೆಲಿಕ್ಸ್ | II. | ಸ್ಕ್ವಾಶ್ |
| C. | ಸ್ಮೃತಿ ಮಂಧಾನಾ | III. | ಹಾಕಿ |
| D. | ಪಂಕಜ್ ಅಡ್ವಾನಿ | IV. | ಬಿಲಿಯರ್ಡ್ಸ್ |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| | A | B | C | D |
| (1) | I | IV | II | III |
| (2) | II | III | I | IV |
| (3) | III | II | IV | I |
| (4) | IV | I | III | II |
| |
CORRECT ANSWER
(2) II, III, I, IV
|
85. | ಯುನೈಟೆಡ್ ನೇಷನ್ಸ್‌ಗಳ ಅಧಿಕೃತ ಭಾಷೆಗಳೆಂದರೆ : |
|
| (1) | ಆಫ್ರಿಕನ್,ಚೈನೀಸ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಮತ್ತು ಸ್ಪಾನಿಷ್ |
| (2) | ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪಾನಿಷ್ |
| (3) | ಅರೇಬಿಕ್, ಜಪಾನೀಸ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಮತ್ತು ಸ್ಪಾನಿಷ್ |
| (4) | ಚೈನೀಸ್, ಇಂಗ್ಲಿಷ್, ಫ್ರೆಂಚ್, ಹಿಂದಿ, ಜಪಾನೀಸ್ ಮತ್ತು ಸ್ಪಾನಿಷ್ |
CORRECT ANSWER
(2) ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪಾನಿಷ್
|
86. | ಜೈಪುರ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ 2017ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯ ಗೌರವಕ್ಕೆ ಭಾಜನರಾದವರು ಯಾರು ? |
|
| (1) | ಓಂ ಪುರಿ |
| (2) | ಅಮಿತಾಭ್ ಬಚ್ಚನ್ |
| (3) | ರಮೇಶ್ ಪ್ರಸಾದ್ |
| (4) | ಮೇಲಿನ ಯಾರು ಅಲ್ಲ |
CORRECT ANSWER
(3) ರಮೇಶ್ ಪ್ರಸಾದ್
|
87. | 1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು. ಆ ಅವಧಿಯಲ್ಲಿ ಭಾರತದ ಪ್ರಧಾನ ಮಂತ್ರಿ ಯಾರಾಗಿದ್ದರು? |
|
| (1) | ಇಂದಿರಾ ಗಾಂಧಿ |
| (2) | ಜವಾಹರಲಾಲ್ ನೆಹರೂ |
| (3) | ಲಾಲ್ ಬಹದ್ದೂರ್ ಶಾಸ್ತ್ರಿ |
| (4) | ಮೊರಾರ್ಜಿ ದೇಸಾಯಿ |
CORRECT ANSWER
(1) ಇಂದಿರಾ ಗಾಂಧಿ
|
88. | ಇಲ್ಲಿಯತನಕ ವಿಶ್ವ ಆರೋಗ್ಯ ಸಂಸ್ಥೆ (WHO)ಯಲ್ಲಿ ಅಧ್ಯಕ್ಷರಾಗಿದ್ದವರಲ್ಲಿ ಏಕೈಕ ಭಾರತೀಯ ಮಹಿಳೆ ಎಂದರೆ |
|
| (1) | ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ |
| (2) | ರಾಜ್ ಕುಮಾರಿ ಅಮೃತಾ ಕೌರ್ |
| (3) | ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ |
| (4) | ಡಾ॥ ಸುಶೀಲಾ ನಾಯರ್ |
CORRECT ANSWER
(2) ರಾಜ್ ಕುಮಾರಿ ಅಮೃತಾ ಕೌರ್
|
89. | ಕೆಳಗಿನ ಕರ್ನಾಟಕದ ಕೈಗಾರಿಕೆಗಳೊಂದಿಗೆ (ಪಟ್ಟಿ I) ಅದು ಸ್ಥಾಪನೆಯಾಗಿರುವ ಪ್ರದೇಶವನ್ನು (ಪಟ್ಟಿ II) ಹೊಂದಿಸಿರಿ |
| | (ಪಟ್ಟಿ I) (ಕೈಗಾರಿಕೆ) | | (ಪಟ್ಟಿ II) (ಪ್ರದೇಶ) |
| A. | ಸಿಮೆಂಟ್ ಕೈಗಾರಿಕೆ | I. | ಉಗಾರ್ |
| B. | ಸಕ್ಕರೆ ಕೈಗಾರಿಕೆ | II. | ತೋರಣಗಲ್ಲು |
| C. | ಕಾಗದ ಕೈಗಾರಿಕೆ | III. | ಶಹಾಬಾದ್ |
| D. | ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ | IV. | ದಾಂಡೇಲಿ |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
| |
|
| | A | B | C | D |
| (1) | III | I | IV | II |
| (2) | IV | I | III | II |
| (3) | III | IV | I | II |
| (4) | II | III | IV | I |
CORRECT ANSWER
(1) III, I, IV, II
|
90. | ವಾಣಿ ವಿಲಾಸ ಸಾಗರ ವಿವಿಧೋದ್ದೇಶ ಯೋಜನೆಯನ್ನು ನಿರ್ಮಾಣ ಮಾಡಿರುುದು ಈ ನದಿಯ ಮೇಲೆ. |
|
| (1) | ಭದ್ರಾ |
| (2) | ವೇದಾವತಿ |
| (3) | ಮಲಪ್ರಭಾ |
| (4) | ಹೇಮಾವತಿ |
CORRECT ANSWER
(2) ವೇದಾವತಿ
|
91. | ಕರ್ನಾಟಕದ ಅತಿ ಉದ್ದನೆಯ ರಾಷ್ಟ್ರೀಯ ಹೆದ್ದಾರಿ, ಎನ್.ಹೆಚ್.-13 ಇವುಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. |
|
| (1) | ಬೀದರ್ – ಬಾಗಲಕೋಟೆ |
| (2) | ಕಲಬುರ್ಗಿ – ಮೈಸೂರು |
| (3) | ಪುಣೆ – ಬೆಂಗಳೂರು |
| (4) | ಮೇಲಿನ ಯಾವುವೂ ಅಲ್ಲ |
CORRECT ANSWER
(4) ಮೇಲಿನ ಯಾವುವೂ ಅಲ್ಲ
|
92. | ವನ್ಯಜೀವಿ ಆಶ್ರಯ ಧಾಮಗಳೊಂದಿಗೆ (ಪಟ್ಟಿ I) ಅವುಗಳಿರುವ ಸ್ಥಳಗಳನ್ನು (ಪಟ್ಟಿ II) ಹೊಂದಿಸಿರಿ : |
| | (ಪಟ್ಟಿ I) (ವನ್ಯಜೀವಿ ಆಶ್ರಯಧಾಮ) | | (ಪಟ್ಟಿ II) (ಸ್ಥಳಗಳು) |
| A. | ತಲಕಾವೇರಿ ವನ್ಯ ಜೀವಿ ಆಶ್ರಯಧಾಮ | I. | ಶಿವಮೊಗ್ಗ |
| B. | ಶರಾವತಿ ವನ್ಯ ಜೀವಿ ಆಶ್ರಯಧಾಮ | II. | ಮಂಡ್ಯ |
| C. | ರಂಗನತಿಟ್ಟು ವನ್ಯ ಜೀವಿ ಆಶ್ರಯಧಾಮ | III. | ಉತ್ತರ ಕನ್ನಡ |
| D. | ದಾಂಡೇಲಿ ವನ್ಯ ಜೀವಿ ಆಶ್ರಯಧಾಮ | IV. | ಕೊಡಗು |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| | A | B | C | D |
| (1) | IV | III | I | II |
| (2) | II | I | IV | III |
| (3) | I | III | II | IV |
| (4) | IV | I | II | III |
| |
CORRECT ANSWER
(4) IV, I, II, III
|
93. | ನಗರಗಳೊಂದಿಗೆ (ಪಟ್ಟಿ I) ಸಮುದ್ರ ಬಂದರುಗಳು ಹೊಂದಿರುವ ಸ್ವಾಭಾವಗಳನ್ನು (ಪಟ್ಟಿ II) ಹೊಂದಿಸಿರಿ: |
| | (ಪಟ್ಟಿ I) (ನಗರಗಳು) | | (ಪಟ್ಟಿ II) (ಸಮುದ್ರ ಬಂದರುಗಳು) |
| A. | ಮುಂಬಯಿ | I. | ಉಬ್ಬರವಿಳಿತ ಬಂದರು |
| B. | ಕೋಲ್ಕತಾ | II. | ಸ್ವಾಭಾವಿಕ ಬಂದರು |
| C. | ವಿಶಾಖಪಟ್ಟಣಂ | III. | ನದೀಯ ಬಂದರು |
| D. | ಕಾಂಡ್ಲಾಾ | IV. | ಆಳವಾದ ಬಂದರು |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
| |
|
| | A | B | C | D |
| (1) | II | III | IV | I |
| (2) | II | IV | I | III |
| (3) | III | II | IV | I |
| (4) | I | III | II | IV |
| |
CORRECT ANSWER
(1) II, III, IV, I
|
94. | 1972ರಲ್ಲಿ ಈ ದಿನಾಂಕಂದು ಮಾನವ ಪರಿಸದ ಕುರಿತಾದ ಸ್ಟಾಕ್ ಹೋಮ್ ಅಧಿವೇಶನವು ಸ್ವೀಡನ್‌ನಲ್ಲಿ ನಡೆಯಿತು, ಅಂದಿನಿಂದ ವಿಶ್ವ ಪರಿಸರ ದಿನವನ್ನು ಆ ದಿನಾಂಕದಂದು ಆಚರಿಸಲಾಗುತ್ತದೆ. ಆ ದಿನಾಂಕವನ್ನು ತಿಳಿಸಿ : |
|
| (1) | 8ನೇ ಮಾರ್ಚ್ |
| (2) | 5ನೇ ಜೂನ್ |
| (3) | 22ನೇ ಮೇ |
| (4) | 8ನೇ ಅಕ್ಟೋಬರ್ |
CORRECT ANSWER
(2) 5ನೇ ಜೂನ್
|
95. | ಈ ಕೆಳಗಿನ ಜೋಡಿಗಳ್ನು ಪರಿಗಣಿಸಿ. |
| | (ಗದ್ದೆಗಳು) | | (ನದಿ ಸಂಗಮ) |
| A. | ಹರಿಕೆ ಗದ್ದೆಗಳು | – | ಬಿಯಾಸ್ ಮತ್ತು ಸಟ್ಲೇಜ್ ಸಂಗಮ |
| B. | ಕಿಯೊಲೆಡೊ ಘಾನಾ ರಾಷ್ಟ್ರೀಯ ಉದ್ಯಾನ | – | ಬಾನಸ್ ಮತ್ತು ಚಂಬಲ್ ಸಂಗಮ |
| C. | ಕೊಲ್ಲೇರು ಸರೋವರ | – | ಮೂಸಿ ಮತ್ತು ಕೃಷ್ಣಾ ಸಂಗಮ |
| ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ? |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | B ಮತ್ತು C ಮಾತ್ರ |
| (3) | A ಮತ್ತು C ಮಾತ್ರ |
| (4) | A, B, ಮತ್ತು C |
| |
CORRECT ANSWER
(1) A ಮಾತ್ರ
|
96. | ಪುನರುಜ್ಜೀವನ ಬರಹಗಾರರು (ಪಟ್ಟಿ I) ಮತ್ತು ಅವರ ಕೃತಿಗಳು (ಪಟ್ಟಿ II) ಹೊಂದಿಸಿರಿ: |
| | ಪಟ್ಟಿ I (ಬರಹಗಾರರು) | | ಪಟ್ಟಿ II (ಕೃತಿಗಳು) |
| A. | ಡಾಂಟೆ | I. | ಗರ್ಗಂಟುವ ಮತ್ತು ಪಂಟಾಗ್ರುಯೆಲ್ |
| B. | ಮೆಕೈವಲ್ಲಿ | II. | ಡಾನ್ ಕ್ವಿಕ್ಸೋಟ್ |
| C. | ರಬೆಲಾಯ್ಸ್ | III. | ದ ಪ್ರಿನ್ಸ್ |
| D. | ಸರ್ವೆಂಟಾಸ್ | IV. | ಡಿವೈನ್ ಕಾಮೆಡಿ |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| | A | B | C | D |
| (1) | II | III | I | IV |
| (2) | III | IV | II | I |
| (3) | IV | III | II | I |
| (4) | IV | III | I | II |
| |
CORRECT ANSWER
(4) IV, III, I, II
|
97. | ಪ್ರತ್ಯಾಮ್ಲಕವನ್ನು ಹೊಟ್ಟೆಯ ಅಮ್ಲೀಯತೆ ನಿವಾರಣೆಗೆ ಬಳಕೆ ಮಾಡಲಾಗುವುದು. ಸಾಮಾನ್ಯವಾಗಿ ಬಳಸುವ ಪ್ರತ್ಯಾಮ್ಲಕ |
|
| (1) | ಸೋಡಿಯಮ್ ಹೈಡ್ರೋಜನ್ ಥ್ಯಾಲೇಟ್ |
| (2) | ಮೆಗ್ನೀಸಿಯಮ್ ಹೈಡ್ರಾಕ್ಸೈಡು |
| (3) | ಕ್ಯಾಲ್ಸಿಯಮ್ ಹೈಡ್ರಾಕ್ಸೈಡು |
| (4) | ಮ್ಯಾಂಗನೀಸ್ ಅಸಿಟೇಟು |
CORRECT ANSWER
(2) ಮೆಗ್ನೀಸಿಯಮ್ ಹೈಡ್ರಾಕ್ಸೈಡು
|
98. | ಈ ಕೆಳಗಿನವುಗಳನ್ನು ಹೊಂದಿಸಿ : ಪರಿಸರ ವಿಘಟನೆ ಬಗೆಗಳನ್ನು (ಪಟ್ಟಿ I) ಮತ್ತು ವಿಘಟನಾ ಕಾರಕಗಳನ್ನು (ಪಟ್ಟಿ II) ನೀಡಿದೆ: |
| | ಪಟ್ಟಿ I (ಪರಿಸರಾತ್ಮಕ ವಿಘಟನೆ) | | ಪಟ್ಟಿ II (ವಿಘಟನಾಕಾರಕ) |
| A. | ಆಮ್ಲ ಮಳೆ | I. | ಫಾಸ್ಫೋರಸ್ |
| B. | ಓಜೋನ್ ವಿನಾಶ | II. | ಕಾರ್ಬನ್ ಡೈಆಕ್ಸೈಡು |
| C. | ಜಾಗತಿಕ ತಾಪ | III. | ನೈಟ್ರೊಜನ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ |
| | | IV. | ಕ್ಲೋರೋಫ್ಲೋರೋ-ಕಾರ್ಬನ್ |
| ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ : |
|
| | A | B | C |
| (1) | IV | II | I |
| (2) | III | IV | II |
| (3) | IV | III | II |
| (4) | I | IV | II |
| |
CORRECT ANSWER
(2) III, IV, II
|
99. | ಹಿಂದೂ ದಾರ್ಶನಿಕತೆಗಳು ಮತ್ತು ಅವುಗಳ ಸ್ಥಾಪಕರ ಹೆಸರುಗಳ ಜೋಡಿಯನ್ನು ನೀಡಿದೆ. |
| A. | ನ್ಯಾಯ -ಗೌತಮ |
| B. | ಸಾಂಖ್ಯ – ಕಪಿಲ |
| C. | ವೈಶೇಷಿಕ – ಕಾನಡ |
| D. | ಯೋಗ – ಪತಂಜಲಿ |
| | ಮೇಲಿರುವ ಜೋಡಿಗಳಲ್ಲಿ ಯಾವುದು ಸರಿ ? |
| | ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ : |
|
| (1) | A ಮತ್ತು B ಮಾತ್ರ |
| (2) | B ಮತ್ತು C ಮಾತ್ರ |
| (3) | A,B ಮತ್ತು C ಮಾತ್ರ |
| (4) | A,B, C ಮತ್ತು D |
CORRECT ANSWER
(4) A,B, C ಮತ್ತು D
|
100. | ಈ ಕೆಳಗಿನವುಗಳ ಪೈಕಿ ಯಾವ ಗ್ರಹದ ಸುತ್ತಲೂ ಉಪಗ್ರಹಗಳು ಸುತ್ತುತ್ತಿಲ್ಲ ? |
| A. | ಮಂಗಳ |
| B. | ಶುಕ್ರ |
| C. | ಬುಧ |
| D. | ನೆಪ್ಚೂನ್ |
| | ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ : |
|
| (1) | A ಮತ್ತು B ಮಾತ್ರ |
| (2) | B ಮತ್ತು C ಮಾತ್ರ |
| (3) | A ಮತ್ತು C ಮಾತ್ರ |
| (4) | B ಮತ್ತು D ಮಾತ್ರ |
CORRECT ANSWER
(2) B ಮತ್ತು C ಮಾತ್ರ