WhatsApp Group Join Now
Telegram Group Join Now

FDA General Knowledge Question Paper-2018

FDA-2018 Paper-III General Knowledge Questions with answers

ದಿನಾಂಕ 25.02.2018 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಜ್ಞಾನ ಪತ್ರಿಕೆ – III (ವಿಷಯ ಸಂಕೇತ: 281)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

1.ಸಾಮಾನ್ಯವಾಗಿ ಮೊಬೈಲ್ ಫೋನ್ ಹ್ಯಾಂಡ್ ಸೆಟ್ ಗಳಲ್ಲಿ ಬಳಸುವ ಪುನಃ ವಿದ್ಯುದಾವಿಷ್ಟಗೊಳಿಸಬಹುದಾದ (ರೀ ಚಾರ್ಜಬಲ್) ಬ್ಯಾಟರಿಗಳು
 (1)ಲಿಥಿಯಂ ಆಯಾನು ಬ್ಯಾಟರಿ
 (2)ಸತುವಿನ ಆಯಾನು ಬ್ಯಾಟರಿ
 (3)ಮ್ಯಾಗ್ನೀಷಿಯಂ ಆಯಾನು ಬ್ಯಾಟರಿ
 (4)ತಾಮ್ರ ಆಯಾನು ಬ್ಯಾಟರಿ

ಸರಿ ಉತ್ತರ

(1) ಲಿಥಿಯಂ ಆಯಾನು ಬ್ಯಾಟರಿ


2.ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲಿ ಮುಖ್ಯ ಅತಿಥಿಯಾಗಿ 2015ನೇ ಜನವರಿ 26ರಂದು ಭಾರತಕ್ಕೆ ಅಮೆರಿಕಾದ ಹಿಂದಿನ ಅಧ್ಯಕ್ಷರಾದ ಬರಾಕ್ ಒಬಾಮರವರು ಭೇಟಿಯಿತ್ತರು. ಭಾರತಕ್ಕೆ ಭೇಟಿ ನೀಡಿದ ಪ್ರಥಮ ಅಮೆರಿಕಾ ಅಧ್ಯಕ್ಷರು ಯಾರು?
 (1)ರಿಚರ್ಡ್ ನಿಕ್ಸನ್
 (2)ಜಿಮ್ಮಿ ಕಾರ್ಟರ್
 (3)ಡ್ವೈಟ್ ಡಿ.ಐಸೆನ್ ಹೋವರ್
 (4)ಜಾರ್ಜ್ ಡಬ್ಲ್ಯೂ. ಬುಶ್
ಸರಿ ಉತ್ತರ

(3) ಡ್ವೈಟ್ ಡಿ.ಐಸೆನ್ ಹೋವರ್


3.ಭಾರತೀಯ ಒಕ್ಕೂಟದ ರಾಜ್ಯಗಳನ್ನು ಪುನರ್ರಚಿಸುವುದು ಅಥವಾ ಅವುಗಳ ಎಲ್ಲೆಗಳನ್ನು ಬದಲಿಸುವುದು ಇದರಿಂದ
 (1)ಸಂಬಂಧಿತ ರಾಜ್ಯಸರ್ಕಾರದ ಸಮ್ಮತಿಯೊಂದಿಗೆ ಕೇಂದ್ರ ಸರ್ಕಾರದ ಕಾರ್ಯಕಾರಿ ಆದೇಶ.
 (2)ಕೇಂದ್ರ ಸಂಸತ್ತು, ಸಾಮಾನ್ಯ/ಸಾಧಾರಣ ರೂಢಿಯ ಶಾಸನ ಪ್ರಕ್ರಿಯೆಯಲ್ಲಿ ಸರಳ ಬಹುಮತದಿಂದ.
 (3)ಸಂಸತ್ತಿನ ಎರಡೂ ಸದನಗಳ 2/3ರಷ್ಟು ಬಹುಮತದಿಂದ.
 (4)ಸಂಸತ್ತಿನ ಎರಡೂ ಸದನಗಳ 2/3 ರಷ್ಟು ಬಹುಮತದಿಂದ ಮತ್ತು ಸಂಬಂಧಿತ ರಾಜ್ಯ ವಿಧಾನಮಂಡಲದ ಸಮ್ಮತಿಯಿಂದ.
ಸರಿ ಉತ್ತರ

(2) ಕೇಂದ್ರ ಸಂಸತ್ತು, ಸಾಮಾನ್ಯ/ಸಾಧಾರಣ ರೂಢಿಯ ಶಾಸನ ಪ್ರಕ್ರಿಯೆಯಲ್ಲಿ ಸರಳ ಬಹುಮತದಿಂದ.


4.ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕುಗಳು ಭಾರತೀಯ ಪೌರರಿಗೆ ಲಭ್ಯವಾಗುತ್ತದೆ? ಆದರೆ ಅನ್ಯದೇಶೀಯರಿಗಲ್ಲ?
 A.ಕಾನೂನಿನ ಮುಂದೆ ಸಮಾನತೆ
 B.ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ
 C.ಅಲ್ಪಸಂಖ್ಯಾತರು ತಮ್ಮದೇ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಹಕ್ಕು
 D.ಜೀವ ಮತ್ತು ಸ್ವಾತಂತ್ರ್ಯದ ಸಂರಕ್ಷಣೆ
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A, B ಮತ್ತು D ಮಾತ್ರ
 (2)A, B ಮತ್ತು C ಮಾತ್ರ
 (3)B, C ಮತ್ತು D ಮಾತ್ರ
 (4)B ಮತ್ತು C ಮಾತ್ರ
ಸರಿ ಉತ್ತರ

(4) B ಮತ್ತು C ಮಾತ್ರ


5.ಶಿವಾಜಿಯನ್ನು ಶಿಕ್ಷಿಸಲೋಸುಗ ಬಿಜಾಪುರದ ದೊರೆಯಿಂದ ಕಳುಹಿಸಲ್ಪಟ್ಟವನಾರು?
 (1)ರುಮಿ ಖಾನ್
 (2)ಶಯಿಸ್ತಾ ಖಾನ್
 (3)ಅಫ್ಜಲ್ ಖಾನ್
 (4)ಇನಾಯತ್ ಖಾನ್
ಸರಿ ಉತ್ತರ

(3) ಅಫ್ಜಲ್ ಖಾನ್


6.ಈ ಕೆಳಗಿನವುಗಳಲ್ಲಿ ಸರಿ ಹೊಂದುವುದು ಯಾವುದು?
 A.ಸಂವಿಧಾನದ IIIನೇ ಭಾಗ – ಮೂಲಭೂತ ಹಕ್ಕುಗಳು
 B.ಸಂವಿಧಾನದ IIನೇ ಭಾಗ – ಪೌರತ್ವ
 C.ಸಂವಿಧಾನದ IV A ಭಾಗ – ಮೂಲಭೂತ ಕರ್ತವ್ಯಗಳು
 D.ಸಂವಿಧಾನದ Vನೇ ಭಾಗ – ರಾಜ್ಯ ನೀತಿ ನಿರ್ದೇಶಕ ತತ್ವಗಳು
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು C ಮಾತ್ರ
 (4)C ಮತ್ತು D ಮಾತ್ರ
ಸರಿ ಉತ್ತರ

(3) A, B ಮತ್ತು C ಮಾತ್ರ


7.ಈ ಕೆಳಗಿನವರಲ್ಲಿ ಯಾರು ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ವೀಕರಿಸಿದವರು?
 A.ಖಾನ್ ಅಬ್ದುಲ್ ಗಾಫಾರ್ ಖಾನ್
 B.ಡಾ.ಬಿ.ಆರ್. ಅಂಬೇಡ್ಕರ್
 C.ಜಯಪ್ರಕಾಶ್ ನಾರಾಯಣ್
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು C
 (4)ಮೇಲಿನ ಯಾವುದೂ ಇಲ್ಲ
ಸರಿ ಉತ್ತರ

(2) B ಮತ್ತು C ಮಾತ್ರ


8.ಕೆಳಗಿನ ಪೇಶ್ವೆಗಳ ಕಾಲಾನುಕ್ರಮಣಿಕೆಯ ಸರಣಿಯೇನು?
 A.ಬಾಲಾಜಿ ವಿಶ್ವನಾಥ್
 B.ಬಾಲಾಜಿ ಬಾಜೀ ರಾವ್
 C.ಮೊದಲನೆ ಬಾಜೀ ರಾವ್
 D.ನಾರಾಯಣ್ ರಾವ್
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, C, B, D
 (2)A, C, D, B
 (3)A, B, C, D
 (4)C, B, A, D
ಸರಿ ಉತ್ತರ

(1) A, C, B, D


9.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ವಿದರ್ಭ ಕ್ರಿಕೆಟ್ ತಂಡವು 2017ರ ರಣಜಿ ಟ್ರೋಫಿ ಪಂದ್ಯಾವಳಿಯನ್ನು ಗೆದ್ದಿತು.
 B.ಅದು ವಿದರ್ಭದ ಮೊದಲ ರಣಜಿ ಟ್ರೋಫಿ ಬಿರುದು/ಪ್ರಶಸ್ತಿ
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಇವೆರಡೂ


10.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಔರಂಗಜೇಬ್ ನು ಆತನ ಆಸ್ಥಾನದಿಂದ ಸಂಗೀತದ ಎಲ್ಲ ರೂಪಗಳನ್ನೂ ಬಹಿಷ್ಕರಿಸಿದ್ದನು.
 B.ಆತನು ವೈಯಕ್ತಿಕ ಧಾರ್ಮಿಕ ಹೊರನೋಟದಲ್ಲಿ ಸಂಪ್ರದಾಯಿ ಸುನ್ನಿ ಮುಸ್ಲಿಮನಾಗಿದ್ದನು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು / ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಇವೆರಡೂ


11.ಭಾರತೀಯ ಇತಿಹಾಸದಲ್ಲಿ, ಅಬ್ದುಲ್ ಹಮೀದ್ ಲಾಹೋರಿಯು ಯಾರು?
 (1)ಅಕ್ಬರ್ನ ಆಳ್ವಿಕೆಯ ಅವಧಿಯಲ್ಲಿ ಅವನು ಪ್ರಮುಖ ಸೈನಿಕ ಕಮಾಂಡರ್ ಆಗಿದ್ದನು.
 (2)ಷಹಜಹಾನ್ ನ ಆಳ್ವಿಕೆಯಲ್ಲಿ ಅವನು ಅಧಿಕೃತ ಚರಿತ್ರಕಾರನಾಗಿದ್ದನು.
 (3)ಔರಂಗಜೇಬನ ಆಳ್ವಿಕೆಯ ಅವಧಿಯಲ್ಲಿ ಅವನು ಪ್ರಮುಖ (ಶ್ರೇಷ್ಠ) ಮತ್ತು ಔರಂಗಜೇಬನಿಗೆ ಅತ್ಯಂತ ಆತ್ಮೀಯನಾಗಿದ್ದವನು.
 (4)ಮುಹಮ್ಮದ್ ಷಾನ ಕಾಲಾವಧಿಯಲ್ಲಿನ ಆಸ್ಥಾನ ಕವಿ.
ಸರಿ ಉತ್ತರ

(2) ಷಹಜಹಾನ್ ನ ಆಳ್ವಿಕೆಯಲ್ಲಿ ಅವನು ಅಧಿಕೃತ ಚರಿತ್ರಕಾರನಾಗಿದ್ದನು.


12.ಕೆಳಗಿನ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳನ್ನು ನೀಡಲಾಗಿದ್ದು, ಇವುಗಳನ್ನು ಹೊಂದಿಕೊಂಡಂತೆ ಎರಡು ತೀರ್ಮಾನಗಳಿವೆ. ಅವು ತಿಳಿದಿರುವ ಸಂಗತಿಗಳೊಂದಿಗೆ ಅನುರೂಪವಾಗಿರದಿದ್ದರೂ, ಹೇಳಿಕೆಗಳನ್ನು ನೀವು ಸತ್ಯ ಎಂತಲೇ ಪರಿಗಣಿಸಬೇಕಾಗುತ್ತದೆ. ನೀಡಿರುವ ಹೇಳಿಕೆಗಳಿಗೆ ತಾರ್ಕಿಕವಾಗಿ ಅವುಗಳನ್ನು ಅನುಸರಿಸುವ ತೀರ್ಮಾನಗಳು ಯಾವುವು?
ಹೇಳಿಕೆ I : ಎಲ್ಲಾ ಮನುಷ್ಯರೂ ಬೆಕ್ಕುಗಳು
ಹೇಳಿಕೆ II : ಎಲ್ಲಾ ಬೆಕ್ಕುಗಳೂ ನಾಯಿಗಳು.
ತೀರ್ಮಾನಗಳು A : ಎಲ್ಲಾ ಮನುಷ್ಯರೂ ನಾಯಿಗಳು.
ತೀರ್ಮಾನಗಳು B : ಎಲ್ಲಾ ನಾಯಿಗಳೂ ಮನುಷ್ಯರು.
 ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
 (1)ನೀಡಿದ ಹೇಳಿಕೆಗಳನ್ನು, A ತೀರ್ಮಾನ ಮಾತ್ರವೇ ಅನುಸರಿಸುತ್ತದೆ.
 (2)ನೀಡಿದ ಹೇಳಿಕೆಗಳನ್ನು, B ತೀರ್ಮಾನ ಮಾತ್ರವೇ ಆನುಸರಿಸುತ್ತದೆ.
 (3)A ಮತ್ತು B ಎರಡೂ ತೀರ್ಮಾನಗಳು ನೀಡಿರುವ ಹೇಳಿಕೆಗಳನ್ನು ಅನುಸರಿಸುತ್ತದೆ.
 (4)ನೀಡಲಾದ ಹೇಳಿಕೆಗಳನ್ನು A ಆಗಲೀ ಅಥವಾ B ತೀರ್ಮಾನವಾಗಲೀ ಅನುಸರಿಸುವುದಿಲ್ಲ.
ಸರಿ ಉತ್ತರ

(1) ನೀಡಿದ ಹೇಳಿಕೆಗಳನ್ನು, A ತೀರ್ಮಾನ ಮಾತ್ರವೇ ಅನುಸರಿಸುತ್ತದೆ.


13.ಕುಜ್ನೆಟ್ಸಿಕ್ ಕಲ್ಲಿದ್ದಲು ಬೋಗುಣಿಯು (ಬೇಸಿನ್) ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದವುಗಳಲ್ಲೊಂದು ಮತ್ತು ಇದು 70,000 ಚ.ಕಿ.ಮೀ.ಗಳಷ್ಟು ಆವರಿಸಿದೆ ಹಾಗೂ 300 ಬಿಲಿಯನ್ ಟನ್ ಗಳಿಗಿಂತಲೂ ಅಧಿಕವಾದ ಗಣಿಗಾರಿಕಾ ಸಂಪನ್ಮೂಲಗಳನ್ನು ಹೊಂದಿದೆ. ಈ ಕೆಳಗಿನ ಯಾವ ದೇಶದಲ್ಲಿ ಇದು ನೆಲೆಯಾಗಿದೆ?
 (1)ತಜಿಕಿಸ್ತಾನ್
 (2)ಎಸ್ತೋನಿಯಾ
 (3)ರಷ್ಯಾ
 (4)ಲಿಥುವೇನಿಯಾ
ಸರಿ ಉತ್ತರ

(3) ರಷ್ಯಾ


14.ಭಾರತದ ಸಂವಿಧಾನದ ಯಾವ ಕಲಮು ಹೀಗೆಂದು ನಿರ್ದೇಶಿಸುತ್ತದೆ ‘‘ರಾಜ್ಯವು ಪರಿಸರದ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರಯತ್ನಿಸಬೇಕು ಹಾಗೂ ದೇಶದಲ್ಲಿನ ಅರಣ್ಯಗಳು ಮತ್ತು ವನ್ಯ ಜೀವನವನ್ನು ರಕ್ಷಣೆ ಮಾಡಬೇಕು’’?
 (1)ಕಲಮು 48A
 (2)ಕಲಮು 47A
 (3)ಕಲಮು 50A
 (4)ಕಲಮು 51A
ಸರಿ ಉತ್ತರ

(1) ಕಲಮು 48A


15.ಕರ್ನಾಟಕದ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಭೂತ ಆರಾಧನೆ ಎಂಬ ತುಳು ಜನರ ಒಂದು ಆರಾಧನಾ ಮಾರ್ಗವು, ಧಾರ್ಮಿಕ ವಿಧಿಗಳ ಒಂದು ನೃತ್ಯವಾಗಿದ್ದು, ಕರ್ನಾಟಕದ ಕಡಲ/ಕರಾವಳಿ ತೀರ ಭಾಗಗಳಲ್ಲಿ ಅದರ ಮೂಲವನ್ನು ಗುರ್ತಿಸಲಾಗಿದೆ.
 B.ನಾಗಮಂಡಲ ಎಂಬುದು ಹಾವುಗಳನ್ನು ಆರಾಧಿಸುವ ಒಂದು ಜನಪದ ಕಲೆಯಾಗಿದ್ದು ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(1) A ಮಾತ್ರ


16.ಒಂದು ರೈಲಿನಲ್ಲಿ ಜನರ ಗುಂಪೊಂದು ಪ್ರಯಾಣಿಸುತ್ತಿದ್ದು, 8 ವ್ಯಕ್ತಿಗಳು ಹಿಂದಿಯಲ್ಲಿ, 15 ವ್ಯಕ್ತಿಗಳು ಕನ್ನಡದಲ್ಲಿ ಮತ್ತು 10 ವ್ಯಕ್ತಿಗಳು ಇಂಗ್ಲೀಷ್ ನಲ್ಲಿ ಮಾತನಾಡುವರು. ಈ ಗುಂಪಿನಲ್ಲಿ ಯಾರೂ ಈ ಮೂರು ಭಾಷೆಗಳ ಹೊರತಾಗಿ ಬೇರೆ ಯಾವುದೇ ಭಾಷೆಯಲ್ಲಿ ಮಾತನಾಡಲಾರರು. ಈ ಗುಂಪಿನಲ್ಲಿ ಇಬ್ಬರು ವ್ಯಕ್ತಿಗಳು ಎರಡು ಭಾಷೆಯಲ್ಲಿ ಮತ್ತು ಮೂರು ವ್ಯಕ್ತಿಗಳು ಮೂರು ಭಾಷೆಗಳಲ್ಲಿ ಮಾತನಾಡಬಲ್ಲರು. ಹಾಗಿದ್ದಲ್ಲಿ ಗುಂಪಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೆ?
 (1)21
 (2)25
 (3)29
 (4)24
ಸರಿ ಉತ್ತರ

(2) 25


17.ಒಂದು ಮೋಟಾರುದೋಣಿಯು (ಮೋಟಾರುಬೋಟ್) ಹರಿವಿನುದ್ದಕ್ಕೂ ಒಂದು ಘಂಟೆಗೆ 12 ಕಿ.ಮೀ.ಗಳಷ್ಟು ಮತ್ತು ಹರಿವಿನ ವಿರುದ್ಧವಾಗಿ 6 ಕಿ.ಮೀ.ಗಳಷ್ಟು ಚಲಿಸುತ್ತದೆ. (ನಿಶ್ಚಲ) ಸ್ತಬ್ಧ ನೀರಿನಲ್ಲಿ ಈ ದೋಣಿಯ ವೇಗವೆಷ್ಟು?
 (1)8 ಕಿ.ಮೀ./ಗಂಟೆ
 (2)10 ಕಿ.ಮೀ./ಗಂಟೆ
 (3)9 ಕಿ.ಮೀ./ಗಂಟೆ
 (4)12 ಕಿ.ಮೀ./ಗಂಟೆ
ಸರಿ ಉತ್ತರ

(3) 9 ಕಿ.ಮೀ./ಗಂಟೆ


18.ಪ್ರತಿಯೊಂದೂ ಕೆಂಪು, ನೀಲಿ, ಹಸಿರು ಮತ್ತು ಬಿಳಿಯ ಬಣ್ಣಗಳನ್ನುಳ್ಳ ನಾಲ್ಕು ಪೆಟ್ಟಿಗೆಗಳು ಮತ್ತು ನಾಲ್ಕು ಚೆಂಡುಗಳಿವೆ. ಪ್ರತಿಯೊಂದು ಚೆಂಡನ್ನೂ ಒಂದು ಪೆಟ್ಟಿಗೆಯಲ್ಲಿಟ್ಟಾಗ, ಯಾವುದೇ ಪೆಟ್ಟಿಗೆಯಲ್ಲಿಯೂ ಅದರದೇ ಬಣ್ಣದ ಚೆಂಡನ್ನು ಇಟ್ಟಿಲ್ಲ. ಯಾವ ಬಣ್ಣದ ಚೆಂಡು ಯಾವ ಬಣ್ಣದ ಪೆಟ್ಟಿಗೆಯಲ್ಲಿದೆ ಎಂಬುದನ್ನು ಗುರ್ತಿಸಲು ತೆರೆಯಬೇಕಾಗಿರುವ ಪೆಟ್ಟಿಗೆಗಳ ಕನಿಷ್ಠ ಸಂಖ್ಯೆಯು
 (1)1
 (2)2
 (3)3
 (4)4
ಸರಿ ಉತ್ತರ

(2) 2, (3) 3


19.ಪಟ್ಟಿ Iರಲ್ಲಿನ ದ್ವೀಪಗಳ ಬಗೆಗಳೊಂದಿಗೆ ಪಟ್ಟಿ IIರಲ್ಲಿನ ದ್ವೀಪಗಳನ್ನು ಸರಿ ಹೊಂದಿಸಿ:
  ಪಟ್ಟಿ I (ದ್ವೀಪದ ಬಗೆಗಳು) ಪಟ್ಟಿ II (ದ್ವೀಪ)
 A.ಕಾಂಟಿನೆಂಟಲ್ ದ್ವೀಪI.ಮಾರಿಷಸ್
 B.ಕೋರಲ್ ದ್ವೀಪ (ಹವಳ)II.ಮಡಗಾಸ್ಕರ್
 C.ಜ್ವಾಲಾಮುಖೀಯ ಉಗಮದ ದ್ವೀಪ III.ಮಾಲ್ಡೀವ್ಸ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABC
 (1)IIIIII
 (2)IIIIII
 (3)IIIIII
 (4)IIIIII
ಸರಿ ಉತ್ತರ

(1) II III I


20.ವಿಶ್ವದ ವಾಯುಗುಣದ ವರ್ಗೀಕರಣವನ್ನು ಉಷ್ಣ, ಸಮಶೀತೋಷ್ಣ ಮತ್ತು ಶೀತವಲಯಗಳಾಗಿ, ಈ ಕೆಳಗಿನವರುಗಳಿಂದ ನಿರ್ಮಿತವಾದ ತಾಪದ ಆಧಾರದ ಮೇಲೆ ವರ್ಗೀಕರಿಸಲಾಗಿದೆ.
 (1)ಕೊಪ್ಪೆನ್
 (2)ಥಾನ್ತ್ ವೆಯ್ಟ್
 (3)ಮಧ್ಯಕಾಲೀನ ಭೂಗೋಳಶಾಸಜ್ಞರು
 (4)ಪುರಾತನ ಗ್ರೀಕ್ ಭೂಗೋಳಶಾಸಜ್ಞರು
ಸರಿ ಉತ್ತರ

(4) ಪುರಾತನ ಗ್ರೀಕ್ ಭೂಗೋಳಶಾಸಜ್ಞರು


21.ಪಟ್ಟಿ Iರಲ್ಲಿನ ಪುಸ್ತಕಗಳನ್ನು ಪಟ್ಟಿ IIರಲ್ಲಿನ ಅವುಗಳ ಲೇಖಕರೊಂದಿಗೆ ಸರಿ ಹೊಂದಿಸಿ :
  ಪಟ್ಟಿ I (ಪುಸ್ತಕಗಳು) ಪಟ್ಟಿ II (ಲೇಖಕರು)
 A.ಟೂ ಲೈವ್ಸ್ I.ರಸ್ಕಿನ್ ಬಾಂಡ್
 B.ದಿ ಬ್ಲೂ ಅಂಬ್ರೆಲ್ಲಾ II.ವಿಕ್ರಮ ಸೇಟ್
 C.ಎ ಬ್ರೀಫ್ ಹಿಸ್ಟರಿ ಆಫ್ ಟೈಂIII.ಡಾನ್ ಬ್ರೌನ್
 D.ದಿ ಡ ವಿನ್ಸಿ ಕೋಡ್ IV.ಸ್ಟೀಫನ್ ಹಾಕಿಂಗ್
 V. ಶಶಿ ತರೂರ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIVIV
 (3)IVIVIII
 (4)IIIIIVV
ಸರಿ ಉತ್ತರ

(1) II I IV III


22.ಲೋಕಸಭೆಯ ಸಭಾಧ್ಯಕ್ಷರನ್ನು (ಸ್ಪೀಕರ್) ಅಧಿಕಾರದಿಂದ ತೆಗೆದು ಹಾಕುವುದು ಹೀಗೆ
 (1)ಸದನದಲ್ಲಿನ ಬಹುಮತದ ಪಕ್ಷವು ಒಂದು ಅವಿಶ್ವಾಸ ಸೂಚನೆಯನ್ನು ಅಳವಡಿಸಿಕೊಳ್ಳುವುದರಿಂದ.
 (2)ಸದನದ ಒಟ್ಟು ಸದಸ್ಯತ್ವದಲ್ಲಿ ಅರ್ಧಕ್ಕಿಂತಲೂ ಕಡಿಮೆ ಇರದಷ್ಟು ಸದಸ್ಯರಿಂದ ಠರಾವನ್ನು/ನಿರ್ಣಯವನ್ನು ಹೊರಡಿಸುವುದರಿಂದ.
 (3)ಸದನದ ಒಟ್ಟು ಸದಸ್ಯತ್ವದಲ್ಲಿ ಕನಿಷ್ಠಪಕ್ಷ ಮೂರನೇ ಎರಡು ಸದಸ್ಯರಿಂದ ಠರಾವನ್ನು, ನಿರ್ಣಯವನ್ನು ಹೊರಡಿಸುವುದರಿಂದ.
 (4)ಸದನದ ಎಲ್ಲಾ ಸದಸ್ಯರ ಬಹುಮತದಿಂದ ಠರಾವನ್ನು/ನಿರ್ಣಯವನ್ನು ಹೊರಡಿಸುವುದರಿಂದ.
ಸರಿ ಉತ್ತರ

(4) ಸದನದ ಎಲ್ಲಾ ಸದಸ್ಯರ ಬಹುಮತದಿಂದ ಠರಾವನ್ನು/ನಿರ್ಣಯವನ್ನು ಹೊರಡಿಸುವುದರಿಂದ.


23.ಭಾರತದ ಅಧ್ಯಕ್ಷರಲ್ಲಿ ಈ ಕೆಳಗಿನ ಯಾವ ವೀಟೋ ಅಧಿಕಾರವು ನಿಹಿತವಾಗಿರುತ್ತದೆ?
 A.ನಿರುಪಾಧಿಕ ವೀಟೋ
 B.ತಾತ್ಕಾಲಿಕ ನಿಷೇಧಾಧಿಕಾರ (ಸ್ಥಗನಾಧಿಕಾರ)
 C.ಪಾಕೆಟ್ ವೀಟೋ (ಪರೋಕ್ಷ ಕ್ರಿಯೆಯ ವೀಟೋ ಅಧಿಕಾರ)
 D.ಕ್ವಾಲಿಫೈಡ್ ವೀಟೋ (ಅರ್ಹತಾ ನಿರ್ಧಾರಕ ವೀಟೋ ಅಧಿಕಾರ)
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)B, C ಮತ್ತು D ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು C ಮಾತ್ರ
 (4)A, B, C ಮತ್ತು D
ಸರಿ ಉತ್ತರ

(3) A, B ಮತ್ತು C ಮಾತ್ರ


24.‘‘ನೊಳಂಬವಾಡಿಗೊಂಡ’’ ಮತ್ತು ‘‘ತಲಕಾಡುಗೊಂಡ’’ ವಿಶೇಷಣಗಳು ಈ ಕೆಳಗಿನವರಲ್ಲಿ ಯಾರ ನಾಣ್ಯದ ಮೇಲೆ ಕಂಡು ಬಂದಿವೆ?
 (1)IIನೇ ಬಲ್ಲಾಳ
 (2)ಬಿಟ್ಟಿದೇವ
 (3)ವೀರ ಸೋಮೇಶ್ವರ
 (4)IIIನೇ ನರಸಿಂಹ
ಸರಿ ಉತ್ತರ

(2) ಬಿಟ್ಟಿದೇವ


25.ಭಾರತ ಸಂವಿಧಾನದ 156ನೇ ಕಲಮು, ಒಬ್ಬ ರಾಜ್ಯಪಾಲರು ಅವರು ಅಧಿಕಾರ ಸ್ವೀಕರಿಸಿದಾಗಿನಿಂದ ಐದು ವರ್ಷಗಳ ಅವಧಿಯವರೆಗೂ ಅಧಿಕಾರದಲ್ಲಿರುತ್ತಾರೆ ಎಂದು ಉಪಬಂಧಿಸಿದೆ. ಈ ಮೇಲಿನ ಕಲಮಿನಿಂದ ಕೆಳಗಿನ ಯಾವುದನ್ನು ತರ್ಕಿಸಬಹುದಾಗಿದೆ?
 A.ಯಾವುದೇ ರಾಜ್ಯಪಾಲರನ್ನು ಅವರ ಅವಧಿಯು ಪೂರ್ಣಗೊಳ್ಳುವವರೆಗೂ ತೆಗೆದು ಹಾಕಲಾಗುವುದಿಲ್ಲ.
 B.5 ವರ್ಷಗಳ ಅವಧಿಯನ್ನು ಮೀರಿದ ನಂತರ ಯಾವ ರಾಜ್ಯಪಾಲರೂ ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(4) A ಆಗಲೀ ಅಥವಾ B ಆಗಲೀ ಅಲ್ಲ


26.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಭಾರತದ ಮುಖ್ಯ ನ್ಯಾಯಾಧೀಶರು 6 ವರ್ಷಗಳು ಅಥವಾ ಅವರು 65 ವರ್ಷ ವಯಸ್ಸನ್ನು ಹೊಂದುವವರೆಗೂ ಅಧಿಕಾರದಲ್ಲಿರಬಹುದು.
 B.ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು, ಭಾರತದ ಮುಖ್ಯ ನ್ಯಾಯಾಧೀಶರಿಗೆ, ಲಿಖಿತ ರೂಪದಲ್ಲಿ ಅರ್ಜಿ ನೀಡಿ, ತಮ್ಮ ಅಧಿಕಾರಕ್ಕೆ ರಾಜೀನಾಮೆಯನ್ನು ನೀಡಬಹುದು.
 C.ಸಂಸತ್ತಿನ ಶಿಫಾರಸ್ ನ ಮೇರೆಗೆ ರಾಷ್ಟ್ರಾಧ್ಯಕ್ಷರು ಸರ್ವೋಚ್ಛ ನಾಯಾಲಯದ ನ್ಯಾಯಾಧೀಶರನ್ನು ಅಧಿಕಾರಿಂದ ತೆಗೆದು ಹಾಕಬಹುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)C ಮಾತ್ರ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(3) C ಮಾತ್ರ


27.ಪ್ರಸಿದ್ಧ ಜೈನ ಪಂಡಿತನಾದ ಜಿನಸೇನನು ಈ ಕೆಳಗಿನ ಯಾವ ದೊರೆಯ ಆಸ್ಥಾನದಲ್ಲಿದ್ದನು?
 (1)ಅಮೋಘವರ್ಷ
 (2)ಕೃಷ್ಣ
 (3)ಧ್ರುವ
 (4)ದಂತಿದುರ್ಗ
ಸರಿ ಉತ್ತರ

(1) ಅಮೋಘವರ್ಷ


28.ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ ಸಿಕ್ರಿಯಲ್ಲಿ ‘ಬುಲಂದ್ ದರ್ವಾಜಾ’ವನ್ನು ನಿರ್ಮಿಸಿದನು?
 (1)ಗುಜರಾತ್
 (2)ಸಿಂಧ್
 (3)ಪಂಜಾಬ್
 (4)ಮೇವಾರ್
ಸರಿ ಉತ್ತರ

(1) ಗುಜರಾತ್


29.ರಾಜ್ಯಸಭೆಯನ್ನು ಕುರಿತಂತೆ ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿವೆ?
 A.ರಾಜ್ಯಸಭೆಯ ಅನುಮತಿಸಲಾದ ಗರಿಷ್ಠ ಸಂಖ್ಯಾಬಲವು 250 ಸದಸ್ಯರು.
 B.ರಾಜ್ಯಸಭೆಯಲ್ಲಿ 238 ಸದಸ್ಯರುಗಳು ಅಪರೋಕ್ಷವಾಗಿ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾಗಿರುತ್ತಾರೆ.
 C.ಅಖಿಲ ಭಾರತ ಸೇವೆಗಳ ಸೃಷ್ಟಿಯಂತಹ ವಿಷಯಗಳಲ್ಲಿ ಲೋಕ ಸಭೆಯೊಂದಿಗೆ ಸಂಸದೀಯ ಅಧಿಕಾರಗಳನ್ನು ಸಮಾನವಾಗಿ ಹಂಚಿ ಕೊಳ್ಳುತ್ತದೆ.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮತ್ತು B ಮಾತ್ರ
 (2)A, B ಮತ್ತು C
 (3)B ಮತ್ತು C ಮಾತ್ರ
 (4)A ಮಾತ್ರ
ಸರಿ ಉತ್ತರ

(2) A, B ಮತ್ತು C


30.ಮುದ್ರಾ ಬ್ಯಾಂಕ್ ನ MUDRA ಎಂಬ ಅಕ್ರಾನಿಂ (ಪ್ರಥಮಾಕ್ಷರಕ) ವುಕೆಳಗಿನ ಯಾವುದನ್ನು ಸಂಕೇತಿಸುತ್ತದೆ?
 (1)ಮ್ಯಾಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರಿಕನ್ಸ್ಟ್ರಕ್ಷನ್ ಏಜೆನ್ಸಿ ಬ್ಯಾಂಕ್
 (2)ಮಾಡಿಫೈಡ್ ಡೆವಲಪ್ಮೆಂಟ್ ಅಂಡ್ ರಿಸ್ಟ್ರಕ್ಚರಿಂಗ್ ಏಜೆನ್ಸಿ ಬ್ಯಾಂಕ್
 (3)ಮೈಕ್ರೊ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ ಬ್ಯಾಂಕ್
 (4)ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ ಬ್ಯಾಂಕ್
ಸರಿ ಉತ್ತರ

(3) ಮೈಕ್ರೊ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ ಬ್ಯಾಂಕ್


31.ವಿಜಯನಗರ ಆಳ್ವಿಕೆಯಡಿ ಜಮೀನುದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುಗಾರಿಕೆ ವ್ಯವಸ್ಥೆಯನ್ನು ಹೀಗೆಂದು ಕರೆಯುವರು.
 (1)ಕಾವಲ್ ಗಾರ
 (2)ಕೈರಿನೈಕುಡ್ಡಿ
 (3)ವರಮ್
 (4)ಕುಟ್ಟಗೈ
ಸರಿ ಉತ್ತರ

(3) ವರಮ್


32.A ಮತ್ತು B ಗಳು ಒಂದು ಕೆಲಸವನ್ನು ಒಟ್ಟಿಗೆ 12 ದಿನಗಳಲ್ಲಿ ಮುಗಿಸಬಲ್ಲರು, B ಒಬ್ಬನೇ ಅದೇ ಕೆಲಸವನ್ನು 30 ದಿನಗಳಲ್ಲಿ ಮುಗಿಸಬಲ್ಲ. A ಒಬ್ಬನೇ B ಕೆಲಸವನ್ನು ಎಷ್ಟು ದಿನಗಳಲ್ಲಿ ಮುಗಿಸಬಲ್ಲ?
 (1)10 ದಿನಗಳು
 (2)12 ದಿನಗಳು
 (3)18 ದಿನಗಳು
 (4)20 ದಿನಗಳು
ಸರಿ ಉತ್ತರ

(4) 20 ದಿನಗಳು


33.ಒಬ್ಬ ವ್ಯಕ್ತಿಯ ಪ್ರತಿದಿನದ ಸರಾಸರಿ ದೈನಂದಿನ ವೆಚ್ಚವು ಮೊದಲ 5 ದಿನಗಳಿಗೆ ₹ 120 ಮತ್ತು ನಂತರದ 4 ದಿನಗಳಿಗೆ ₹ 80 ಆಗಿದೆ. ಈ 9 ದಿನಗಳ ಅವಧಿಯಲ್ಲಿ ಅವನು ಒಟ್ಟು ₹ 25ನ್ನು ಉಳಿಸಿದ್ದಲ್ಲಿ, ಅವನ ದಿನನಿತ್ಯದ ಸರಾಸರಿ ಆದಾಯವೆಷ್ಟು?
 (1)₹ 9
 (2)₹ 105
 (3)₹ 945
 (4)₹ 120
ಸರಿ ಉತ್ತರ

(2) ₹ 105


34.ಈ ಕೆಳಗಿನ ಯಾವ ಒಂದು ಹಾರ್ಮೋನು ಪ್ರಚೋದಿಸುವುದರಿಂದ ಸಸ್ಯ ಜೀವಕೋಶಗಳು ಬೆಳೆಯುವ ರೀತಿಯಲ್ಲಿ, ಆ ಸಸ್ಯವು ಬೆಳಕಿನತ್ತ ಬಾಗುತ್ತಿರುವುದು ಗೋಚರವಾಗುತ್ತದೆ?
 (1)ಸೈಟೋಕಿನಿನ್
 (2)ಆಕ್ಸಿನ್
 (3)ಗಿಬ್ಬರ್ ಲಿನ್
 (4)ಅಬ್ಸಿಸಿಕ್ ಆಮ್ಲ
ಸರಿ ಉತ್ತರ

(2) ಆಕ್ಸಿನ್


35.ಅಲ್ಯೂಮಿನಿಯಂವು ಕಬ್ಬಿಣಕ್ಕಿಂತಲೂ ಹೆಚ್ಚು ಪ್ರತಿಕ್ರಿಯಾತ್ಮಕ. ಆದರೆ ಅಲ್ಯೂಮಿನಿಯಂ ಕಬ್ಬಿಣಕ್ಕಿಂತಲೂ ಸ್ವಲ್ಪ ಸುಲಭವಾಗಿ ಕೊರೆತ (ಸವೆತ) ಕ್ಕೊಳಗಾಗುತ್ತದೆ. ಏಕೆಂದರೆ,
 (1)ಆಮ್ಲಜನಕವು ಸುರಕ್ಷಣಾ ಆಕ್ಸೈಡ್ ಪದರವನ್ನು ರೂಪಿಸುತ್ತದೆ.
 (2)ಅಲ್ಯೂಮಿನಿಯಂ ಒಂದು ಶ್ರೇಷ್ಠ ಲೋಹ.
 (3)ಕಬ್ಬಣವು ನೀರಿನೊಂದಿಗೆ ಸುಲಭವಾಗಿ ವರ್ತಿಸುತ್ತದೆ.
 (4)ಕಬ್ಬಿಣವು ಆಯಾನುಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದೆ.
ಸರಿ ಉತ್ತರ

(1) ಆಮ್ಲಜನಕವು ಸುರಕ್ಷಣಾ ಆಕ್ಸೈಡ್ ಪದರವನ್ನು ರೂಪಿಸುತ್ತದೆ.


36.ಪಟ್ಟಿ Iರಲ್ಲಿನ ಮಿಶ್ರಲೋಹಗಳನ್ನು ಮತ್ತು ಪಟ್ಟಿ IIರಲ್ಲಿರುವ ಅದರ ಘಟಕಗಳೊಡನೆ ಸರಿ ಹೊಂದಿಸಿ:
  ಪಟ್ಟಿ I (ಮಿಶ್ರಲೋಹಗಳು) ಪಟ್ಟಿ II (ಘಟಕಗಳು)
 A.ಸೋಲ್ಡರ್I.ತಾಮ್ರ, ಅಲ್ಯೂಮಿನಿಯಂ
 B.ರೋಲ್ಡ್ ಗೋಲ್ಡ್II.ಸೀಸ, ತವರ
 C.ಮಾಗ್ನಾಲಿಯಂIII.ತಾಮ್ರ, ಸತು
 D.ಹಿತ್ತಾಳೆIV.ಮೆಗ್ನೀಷಿಯಂ, ಅಲ್ಯೂಮಿನಿಯಂ
 V. ತಾಮ್ರ, ತವರ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVV
 (2)IIIIVIII
 (3)IIIVIII
 (4)IIIIVV
ಸರಿ ಉತ್ತರ

(2) II I IV III


37.ನಾಲ್ಕು ಚಕ್ರದ ವಾಹನಗಳು ಮತ್ತು ಆಧುನಿಕ ಆಟೋಮೊಬೈಲ್ ಗಳಲ್ಲಿ, ಹೊರಗಿನ ದರ್ಪಣದಲ್ಲಿ ‘‘ದರ್ಪಣದಲ್ಲಿರುವ ವಸ್ತುಗಳು ಅವುಗಳು ಗೋಚರಿಸುವುದಕ್ಕಿಂತಲೂ ಸಮೀಪದಲ್ಲಿರುತ್ತದೆ’’ ಎಂಬ ಎಚ್ಚರಿಕೆಯನ್ನು ನೀಡಲಾಗಿರುತ್ತದೆ. ಇಂತಹ ದರ್ಪಣಗಳು
 (1)ಸಮತಲ ದರ್ಪಣಗಳು
 (2)ಅಧಿಕ ದೊಡ್ಡದಾದ ನಾಭಿದೂರದೊಂದಿಗಿರುವ ನಿಮ್ನ ಮಸೂರಗಳು
 (3)ಅತಿ ಕಡಿಮೆ ನಾಭಿ ದೂರದೊಂದಿಗಿರುವ ನಿಮ್ನ ಮಸೂರಗಳು
 (4)ಪೀನ ಮಸೂರಗಳು
ಸರಿ ಉತ್ತರ

(4) ಪೀನ ಮಸೂರಗಳು


38.URL ಎಂದರೇನು?
 (1)ಇದು ಕಂಪ್ಯೂಟರ್ ಡಿಸ್ಕ್ ನ ಡಿಫ್ರಾಗ್ಮೆಂಟೇಷನ್ ನಲ್ಲಿ ಬಳಸುವ ತಂತ್ರಾಂಶವಾಗಿದೆ
 (2)ಇದು ಕಂಪ್ಯೂಟರ್ ಪರದೆಯನ್ನು ಪ್ರಕಾಶಮಾನವಾಗಿ ಮಾಡುವ ಒಂದು ತಂತ್ರಾಂಶ.
 (3)ಇದು ಅಂತರ್ಜಾಲ ಸಂಪನ್ಮೂಲಕ್ಕೆ ರೆಫರೆನ್ಸ್ (ಉಲ್ಲೇಖಗಳನ್ನೊದಗಿಸುವ) ಅನ್ನು ರಚಿಸುವ ಒಂದು ನಿರ್ದಿಷ್ಟ ಕ್ಯಾರಕ್ಟರ್ ತಂತುವಾಗಿದೆ.
 (4)ಇದು ಕಂಪ್ಯೂಟರ್ ತಂತ್ರಾಂಶದ ಒಂದು ನಿರ್ದಿಷ್ಟ ಏಕರೂಪದ (ಯೂನಿಫಾರ್ಮ) ಜೋಡಣೆ (ಸರಿಹೊಂದಿಕೆ) ಯಾಗಿದ್ದು, ಕಂಪ್ಯೂಟರ್ ನ್ನು ವೇಗವಾಗಿ ನಡೆಯುವಂತೆ ಮಾಡುತ್ತದೆ.
ಸರಿ ಉತ್ತರ

(3) ಇದು ಅಂತರ್ಜಾಲ ಸಂಪನ್ಮೂಲಕ್ಕೆ ರೆಫರೆನ್ಸ್ (ಉಲ್ಲೇಖಗಳನ್ನೊದಗಿಸುವ) ಅನ್ನು ರಚಿಸುವ ಒಂದು ನಿರ್ದಿಷ್ಟ ಕ್ಯಾರಕ್ಟರ್ ತಂತುವಾಗಿದೆ.


39.ಕೆಳಗಿನವುಗಳಲ್ಲಿ ಯಾವ ಜೋಡಿ ಸರಿ ಹೊಂದುತ್ತದೆ?
  ಜಲಪಾತಗಳು ನದಿಗಳು
 A.ಕಪಿಲಧಾರೆ ಗೋದಾವರಿ
 B.ಜೋಗ್ ಜಲಪಾತಶರಾವತಿ
 C.ಶಿವನಸಮುದ್ರಕಾವೇರಿ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(3) B ಮತ್ತು C ಮಾತ್ರ


40.ಪಟ್ಟಿ Iರಲ್ಲಿನ ಸಿಡಿತಲೆ/ಕ್ಷಿಪಣಿಯ ಹೆಸರು ಮತ್ತು ಪಟ್ಟಿ IIರಲ್ಲಿರುವ ಅವುಗಳ ವಿಧಗಳೊಂದಿಗೆ ಸರಿ ಹೊಂದಿಸಿ:
  ಪಟ್ಟಿ I (ಸಿಡಿತಲೆ/ಕ್ಷಿಪಣಿಯ ಹೆಸರು) ಪಟ್ಟಿ II (ವಿಧ)
 A.ತೇಜಸ್ I.ಪ್ರಧಾನ ಯುದ್ಧ ಟ್ಯಾಂಕು
 B.ಧೃವ II.ಲಘು ಯುದ್ಧ ವಾಯುನೌಕೆ
 C.ಅರ್ಜುನ್III.ಮುಂದುವರಿದ ಲಘು/ಹಗುರ ಹೆಲಿಕಾಪ್ಟರ್
 D.ಧನುಷ್IV.ಹಡಗು ಆಧಾರಿತ ಮಿಸ್ಸೈಲ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIIIIV
 (3)IVIIIIII
 (4)IVIIIIII
ಸರಿ ಉತ್ತರ

(2) II III I IV


41.ಈ ಕೆಳಗಿನ ಯಾವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನೈರ್ಮಲ್ಯ ಮತ್ತು ಸಸ್ಯಮೂಲನೈರ್ಮಲ್ಯಾದಿ ಕ್ರಮಗಳ (SPS) ಒಪ್ಪಂದವು, ಸರ್ಕಾರವು ಆಹಾರ ಸುರಕ್ಷತೆ, ಪ್ರಾಣಿ ಮತ್ತು ಸಸ್ಯ ಆರೋಗ್ಯ ಕ್ರಮಗಳನ್ನು ಹೇಗೆ ಅನ್ವಯಿಸಬಹುದೆಂಬುದನ್ನು ಅಧಿಕೃತಗೊಳಿಸುತ್ತದೆ?
 (1)ವಿಶ್ವ ಆರ್ಥಿಕ ಫೋರಂ
 (2)ವಿಶ್ವ ಆರೋಗ್ಯ ಸಂಸ್ಥೆ
 (3)ವಿಶ್ವ ವ್ಯಾಪಾರ ಸಂಸ್ಥೆ
 (4)ಆಹಾರ ಮತ್ತು ಕೃಷಿ ಸಂಸ್ಥೆ
ಸರಿ ಉತ್ತರ

(3) ವಿಶ್ವ ವ್ಯಾಪಾರ ಸಂಸ್ಥೆ


42.ಸಂಸತ್ತಿನ ಜಂಟಿ ಅಧಿವೇಶನವನ್ನು ಕುರಿತಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
 A.ಇದಕ್ಕೆ ರಾಷ್ಟ್ರಾಧ್ಯಕ್ಷರು ಕರೆ ನೀಡಬಹುದು.
 B.ರಾಜ್ಯಸಭೆಯ ಅಧ್ಯಕ್ಷರು ಅದರ ಅಧ್ಯಕ್ಷತೆಯನ್ನು ವಹಿಸುವರು.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(1) ಅ ಮಾತ್ರ


43.ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ‘‘ವೀ ಕನೆಕ್ಟ್ ಇಂಟರ್ ನ್ಯಾಷನಲ್ (WEConnect International)’’ ರಿಂದ ನೀಡಿದ ಅತ್ಯಧಿಕ ಬೆಂಬಲಾತ್ಮಕ ಸರ್ಕಾರಿ ಪ್ರಶಸ್ತಿ 2017ನ್ನು ಯಾವ ರಾಜ್ಯ ಸರ್ಕಾರವು ಸ್ವೀಕರಿಸಿತು?
 (1)ಆಂಧ್ರಪ್ರದೇಶ
 (2)ತೆಲಂಗಾಣ
 (3)ಕರ್ನಾಟಕ
 (4)ಕೇರಳ
ಸರಿ ಉತ್ತರ

(3) ಕರ್ನಾಟಕ


44.ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?
 (1)ಡಾ. ಸಿದ್ದಲಿಂಗಯ್ಯ
 (2)ಬರಗೂರ ರಾಮಚಂದ್ರಪ್ಪ
 (3)ಚಂದ್ರಶೇಖರ ಪಾಟೀಲ
 (4)ಚಂದ್ರಶೇಖರ ಕಂಬಾರ
ಸರಿ ಉತ್ತರ

(3) ಚಂದ್ರಶೇಖರ ಪಾಟೀಲ


45.ಕರ್ನಾಟಕದ ಪ್ರವಾಸೋದ್ಯಮವನ್ನು ಸುಲಭಗೊಳಿಸಲಿಕ್ಕಾಗಿ, ತಮ್ಮ ದೇಶದಲ್ಲಿ ಪ್ರವಾಸೋದ್ಯಮ ಮಾಹಿತಿ ಕಛೇರಿಯನ್ನು ಸ್ಥಾಪಿಸಲು, ಕರ್ನಾಟಕ ಸರ್ಕಾರದ ಮುಂದೆ ಜೂನ್ 2017ರಲ್ಲಿ ದೇಶವೊಂದು ಪ್ರಸ್ತಾಪನೆಯೊಂದನ್ನು ಮುಂದಿಟ್ಟಿದ್ದು, ಈ ಪ್ರಸ್ತಾವನೆಯನ್ನು ಸಲ್ಲಿಸಿರುವ ದೇಶ ಯಾವುದು?
 (1)ಫ್ರಾನ್ಸ್
 (2)ಕೊರಿಯಾ
 (3)ನೈಜೀರಿಯಾ
 (4)ಜಪಾನ್
ಸರಿ ಉತ್ತರ

(4) ಜಪಾನ್


46.ಈ ಕೆಳಗಿನ ಯಾವ ಶ್ರೇಣಿಯ ನದಿಗಳು ಕರ್ನಾಟಕ ರಾಜ್ಯದ ಪಶ್ಚಿಮ ದಿಕ್ಕಿಗೆ ಹರಿಯುತ್ತವೆ?
 (1)ಭೀಮಾ – ಹಿರಣ್ಯಕೇಶಿ – ಕೃಷ್ಣಾ
 (2)ಕಾಳಿ – ಗಂಗಾವತಿ – ಕೃಷ್ಣಾ
 (3)ಅಘನಾಶಿನಿ – ಘಟಪ್ರಭಾ – ಭೀಮಾ
 (4)ನೇತ್ರಾವತಿ-ಗಂಗಾವಳಿ-ಕಾಳಿ
ಸರಿ ಉತ್ತರ

(4) ನೇತ್ರಾವತಿ-ಗಂಗಾವಳಿ-ಕಾಳಿ


47.ಸೂಪರ್ ಕಂಪ್ಯೂಟಿಂಗ್ ನ ಪಿತ ಎಂದು ಯಾರನ್ನು ಭಾವಿಸಲಾಗಿದೆ?
 (1)ಸೆಯ್ ಮೆರ್ ಕ್ರೆ
 (2)ಆಡಂ ಡಂಕೆಲ್ಸ್
 (3)ಹೇವಿಡ್ ಜೆ. ಬ್ರೌನ್
 (4)ಜೀನ್ ಅಮ್ಡಾಲ್
ಸರಿ ಉತ್ತರ

(1) ಸೆಯ್ ಮೆರ್ ಕ್ರೆ


48.ಜನವರಿ 2018 ರಲ್ಲಿ ವಿಶ್ವದ ಸಿಹಿ ಉತ್ಸವವನ್ನು ಭಾರತದ ಯಾವ ನಗರವು ಚಾಲನೆಗೊಳಿಸಿದೆ?
 (1)ನವದೆಹಲಿ
 (2)ಹೈದರಾಬಾದ್
 (3)ಲಕ್ನೋ
 (4)ಚೆನ್ನೈ
ಸರಿ ಉತ್ತರ

(2) ಹೈದರಾಬಾದ್


49.ಈ ಕೆಳಗಿನ ಯಾವ ದೇಶಗಳಲ್ಲೊಂದಾದ ದಖ್ಖನಿ ಮುಸ್ಲಿಂ ರಾಜ್ಯವು ಪರ್ಷಿಯನ್ ಬದಲಿಗೆ ‘ಹಿಂದಿ’ ಅಥವಾ ‘ದಖನಿ ಉರ್ದು’ವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಿತು?
 (1)ಗೋಲ್ಕೊಂಡಾ
 (2)ಅಹ್ಮದ್ ನಗರ
 (3)ಬೀರಾರ್
 (4)ಬಿಜಾಪುರ
ಸರಿ ಉತ್ತರ

(4) ಬಿಜಾಪುರ


50.ಮಲ್ಪೆ ಬಳಿಯಲ್ಲಿರುವ ಸೆಂಟ್ ಮೇರೀಸ್ ದ್ವೀಪದ ಸ್ಥಳೀಯ ಹೆಸರೇನು?
 (1)ಪಿಜನ್ ದ್ವೀಪ
 (2)ತೊನ್ಸೆಪಾರ್ ದ್ವೀಪ
 (3)ನೇತ್ರಾಣಿ ದ್ವೀಪ
 (4)ದರಿಯಾ ಬಹಾದೂರ್ ಘರ್
ಸರಿ ಉತ್ತರ

(2) ತೊನ್ಸೆಪಾರ್ ದ್ವೀಪ


51.ಈ ಕೆಳಗಿನ ಯಾವ ಭಕ್ತಿ ಪಂಥದ ಸಂತರಿಂದ ಬೋಧಿಸಲ್ಪಟ್ಟ ಅದ್ವೈತವು ಶುದ್ಧಾದ್ವೈತ ಅಥವಾ ಶುದ್ಧ ದ್ವೈತ ರಹಿತ ಎಂದು ಕರೆಯಲ್ಪಟ್ಟಿದೆ?
 (1)ನರ್ಸಿ ಮೆಹತಾ
 (2)ನಾನಕ್
 (3)ಕಬೀರ್
 (4)ವಲ್ಲಭಾಚಾರ್ಯ
ಸರಿ ಉತ್ತರ

(4) ವಲ್ಲಭಾಚಾರ್ಯ


52.ಕರ್ನಾಟಕದ ಕೆಳಗಿನ ಯಾವ ಜಿಲ್ಲೆಯು ‘‘ಪದಾತಿಪಡೆಯ ತೊಟ್ಟಿಲು’’ ಎಂಬ ಅಂಕಿತ/ಉಪನಾಮವನ್ನು ಹೊಂದಿದೆ?
 (1)ಬೆಂಗಳೂರು
 (2)ಮೈಸೂರು
 (3)ಬೆಳಗಾಂ
 (4)ಬೀದರ್
ಸರಿ ಉತ್ತರ

(3) ಬೆಳಗಾಂ


53.ಕೇಂದ್ರ ಮಾಹಿತಿ ಮತ್ತು ಪ್ರಸರಣ ಮಂತ್ರಿಮಂಡಲದಡಿ (I ಮತ್ತು B) ಭಾರತದ ಪ್ರಥಮ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯು (FTII) ಪುಣೆಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ನಿರ್ಮಿತವಾಗಿದ್ದು, ಎರಡನೆಯ FTIIನ್ನು ಶೀಘ್ರದಲ್ಲಿಯೇ ಎಲ್ಲಿ ನಿರ್ಮಿಸಲು ಯೋಜಿಸಲಾಗಿದೆ?
 (1)ಮಿಜೋರಾಂ
 (2)ತ್ರಿಪುರ
 (3)ಅರುಣಾಚಲ ಪ್ರದೇಶ
 (4)ಒರಿಸ್ಸಾ
ಸರಿ ಉತ್ತರ

(3) ಅರುಣಾಚಲ ಪ್ರದೇಶ


54.9ನೇ ಜನವರಿ 2018ರಂದು ನವದೆಹಲಿಯಲ್ಲಿ ಮೊದಲನೇ PIO (ಭಾರತೀಯ ಮೂಲದ ಜನರ) ಸಂಸದೀಯ ಸಮಾವೇಶವು ಜರುಗಿತು. ಈ ಸಮಾವೇಶವನ್ನು ಉದ್ಘಾಟಿಸಿದವರಾರು?
 (1)ಶ್ರೀ ನರೇಂದ್ರ ಮೋದಿ
 (2)ಶ್ರೀಮತಿ ಸುಷ್ಮಾ ಸ್ವರಾಜ್
 (3)ಶ್ರೀ ಎಂ. ವೆಂಕಯ್ಯ ನಾಯ್ಡು
 (4)ಶ್ರೀರಾಮನಾಥ್ ಕೋವಿಂದ್
ಸರಿ ಉತ್ತರ

(1) ಶ್ರೀ ನರೇಂದ್ರ ಮೋದಿ


55.ಕೇಂದ್ರ ರಕ್ಷಣಾ ಖಾತೆ ಸಚಿವರಾದ ನಿರ್ಮಲಾ ಸೀತಾರಾಮನ್ ರವರು ‘ಡಿಫೆನ್ಸ್ ಇನ್ನೋವೇಷನ್ ಸೆಂಟರ್’(DIC)ನ್ನು ನಿರ್ಮಿಸಲು ಪ್ರಸ್ತಾಪಿಸಿದ್ದು, ರಕ್ಷಣಾ ವಲಯದ ಘಟಕಗಳ ತಯಾರಿಕೆಯಲ್ಲಿ ಸಣ್ಣ ಉದ್ದಿಮೆಗಳಿಗೆ ಸಹಾಯ ಮಾಡಲು ಈ ಕೆಳಗಿನ ಯಾವ ಸ್ಥಳದಲ್ಲಿ ಅದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ?
 (1)ಕೋಝಿಕೋಡ್
 (2)ಬೆಂಗಳೂರು
 (3)ಕೊಯಂಬತ್ತೂರು
 (4)ಚೆನ್ನೈ
ಸರಿ ಉತ್ತರ

(3) ಕೊಯಂಬತ್ತೂರು


56.2022ರಲ್ಲಿನ 39ನೇ ರಾಷ್ಟ್ರೀಯ ಕ್ರೀಡೆಗಳ ಚಾಲನೆಗಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA)ನೊಂದಿಗೆ ಯಾವ ರಾಜ್ಯವು ಇತ್ತೀಚೆಗೆ ಅತಿಥೇಯ ನಗರ ಒಪ್ಪಂದಕ್ಕೆ ಸಹಿ ಹಾಕಿತು?
 (1)ನಾಗಾಲ್ಯಾಂಡ್
 (2)ಮಣಿಪುರ್
 (3)ಮಿಜೋರಾಂ
 (4)ಮೇಘಾಲಯ
ಸರಿ ಉತ್ತರ

(4) ಮೇಘಾಲಯ


57.28 ಫೆಬ್ರವರಿ, 2018ರಿಂದ ನಡೆಯುವ ‘ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ (KITE)’ದ ಮೊದಲ ಆವೃತ್ತಿಯನ್ನು ಭಾರತದ ಯಾವ ನಗರವು ಚಾಲನೆ ಮಾಡಲಿದೆ?
 (1)ಬೆಂಗಳೂರು
 (2)ಬಿಜಾಪುರ್
 (3)ಧಾರವಾಡ್
 (4)ಮೈಸೂರು
ಸರಿ ಉತ್ತರ

(1) ಬೆಂಗಳೂರು


58.ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾಗಿ ನೇಮಕಾತಿ ಹೊಂದುವ ಮುನ್ನ ಶ್ರೀ ವಜುಭಾಯಿ ರುಡಾಭಾಯಿ ವಾಲಾರವರು ಈ ಕೆಳಗಿನ ಯಾವ ವಿಧಾನಮಂಡಲದ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು?
 (1)ರಾಜಸ್ಥಾನ ವಿಧಾನಮಂಡಲ
 (2)ಮಧ್ಯಪ್ರದೇಶ ವಿಧಾನಮಂಡಲ
 (3)ದೆಹಲಿ ವಿಧಾನಮಂಡಲ
 (4)ಗುಜರಾತ್ ವಿಧಾನಮಂಡಲ
ಸರಿ ಉತ್ತರ

(4) ಗುಜರಾತ್ ವಿಧಾನಮಂಡಲ


59.ಜನರನ್ನು ಮತ್ತು ಸರಕುಗಳನ್ನು ಸಾಗಣೆ ಮಾಡುವಲ್ಲಿ ರೈಲ್ವೆಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ರೈಲ್ವೆ ಪಥಗಳು ವಿಭಿನ್ನ ಭೌಗೋಳಿಕ ಪ್ರದೇಶಗಳ ಮುಖಾಂತರ ಸಂಚರಿಸುತ್ತವೆ / ಅಡ್ಡಹಾಯುತ್ತದೆ. ಪ್ರಪಂಚದಲ್ಲಿಯೇ ಅತ್ಯಂತ ಉನ್ನತವಾದ ರೈಲ್ವೆ ಪಥವು ಎಲ್ಲಿದೆ?
 (1)ಚೀನಾದಲ್ಲಿ ಕಿಂಗೈ-ಟಿಬೆಟ್ ರೈಲು ಮಾರ್ಗ
 (2)ಪೆರುವಿನಲ್ಲಿ ಲೀಮಾ – ಹ್ಯೂಯೆನ್ ಕಯೋ
 (3)ಬೊಲಿವಿಯಾದಲ್ಲಿ ರಿಯೊ ಮುಲಟೊಸ ಪೊಟೊಸಿ
 (4)ಸ್ವಿಟ್ಜರ್ಲೆಂಡ್ ನಲ್ಲಿಯ ಜಂಗ್ ಪ್ರೌಬ್ಹಾನ್
ಸರಿ ಉತ್ತರ

(1) ಚೀನಾದಲ್ಲಿ ಕಿಂಗೈ-ಟಿಬೆಟ್ ರೈಲು ಮಾರ್ಗ


60.ಪಟ್ಟಿ Iರಲ್ಲಿನ ಮಂಡಲಿಗಳೊಂದಿಗೆ ಪಟ್ಟಿ IIರಲ್ಲಿನ ಅವುಗಳ ಕೇಂದ್ರ ಕಾರ್ಯಸ್ಥಾನಗಳನ್ನು ಹೊಂದಿಸಿ :
  ಪಟ್ಟಿ I (ಮಂಡಲಿ) ಪಟ್ಟಿ II(ಕೇಂದ್ರ ಕಾರ್ಯಸ್ಥಾನ)
 A.ಕಾಫಿ ಮಂಡಳಿI.ಗುಂಟೂರು
 B.ರಬ್ಬರ್ ಮಂಡಳಿII.ಬೆಂಗಳೂರು
 C.ಚಹಾ ಮಂಡಳಿIII.ಕೊಟ್ಟಾಯಂ
 D.ಹೊಗೆಸೊಪ್ಪು ಮಂಡಳಿIV.ಕೋಲ್ಕತ್ತಾ
 V. ಮುಂಬಯಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIVI
 (2)IIIIIIVI
 (3)IIIIIIIV
 (4)IIIIIIVV
ಸರಿ ಉತ್ತರ

(2) II III IV I


61. ಪಟ್ಟಿ Iರಲ್ಲಿನ ಅಂತರ್ರಾಷ್ಟ್ರೀಯ ಸಂಘಟನೆಗಳೊಂದಿಗೆ ಪಟ್ಟಿ IIರಲ್ಲಿನ ಅವುಗಳ ಕೇಂದ್ರ ಕಾರ್ಯಸ್ಥಾನಗಳನ್ನು ಹೊಂದಿಸಿ :
  ಪಟ್ಟಿ I (ಅಂತರರಾಷ್ಟ್ರೀಯ ಸಂಘಟನೆಗಳು) ಪಟ್ಟಿ II (ಕೇಂದ್ರ ಕಾರ್ಯಸ್ಥಾನಗಳು)
 A.ಇಂಟರ್ಪೋಲ್I.ಪ್ಯಾರಿಸ್
 B.OECDII.ಲಿಯಾನ್
 C.ADBIII.ಢಾಕಾ
 D.BIMSTECIV.ಮನಿಲಾ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:
  ABCD
 (1)IIIIVIII
 (2)IIIIIIIV
 (3)IIIIIIIV
 (4)IIIIVIII
ಸರಿ ಉತ್ತರ

(4) II I IV III


62.ಟ್ರಾಫಿಕ್ ಹರಿವು ಮತ್ತು ಅತ್ಯುತ್ತಮ ಸರಕು ಕಾರ್ಯಾಚರಣೆ ಯೋಜನೆಗೆ ನೆರವಾಗುವ ಪ್ರಮುಖ ಡಿಜಿಟಲ್ ಪ್ರಯತ್ನದಲ್ಲಿ ರೈಲ್ವೆ ಮಂತ್ರಿಮಂಡಲವು ಸರಕು ವ್ಯವಸ್ಥಾಪಕರಿಗೆ ಆಪ್ ಒಂದನ್ನು ಇತ್ತೀಚೆಗೆ ಚಾಲನೆ ಮಾಡಿದೆ. ಈ ಆಪ್ ವು GIS ನೋಟಗಳು ಮತ್ತು ಡ್ಯಾಶ್ಬೋರ್ಡ್ ನ್ನು ಬಳಸಿಕೊಂಡು ಸರಕು ವ್ಯವಹಾರವನ್ನು ನಿಯಂತ್ರಿಸಲು ಮತ್ತು ನಿರ್ವಹಿಸುವ ಉಪಯೋಗಗಳನ್ನು ಒದಗಿಸುತ್ತದೆ. ಈ ಆಪ್ ನ ಹೆಸರೇನು?
 (1)SFOORTI
 (2)SPOORTI
 (3)RELFRE
 (4)RAILLOAD
ಸರಿ ಉತ್ತರ

(1) SFOORTI


63.ಆಯುರ್ವೇದ, ಎಂಬುದರ ಸಾಹಿತ್ಯಿಕ ಅರ್ಥವು ಜೀವನದ ವಿಜ್ಞಾನವಾಗಿದ್ದು ಇದು ಪುರಾತನ ವೈದ್ಯಕೀಯ ವಿಜ್ಞಾನವಾಗಿದ್ದು ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿತು. ಆಯುರ್ವೇದದ ಸ್ಥಾಪಕರಲ್ಲಿ ಒಬ್ಬರು ಯಾರು?
 (1)ಚರಕ
 (2)ಬ್ರಹ್ಮ
 (3)ಆಚಾರ್ಯ ಪುನರ್ವಸು
 (4)ಪತಂಜಲಿ
ಸರಿ ಉತ್ತರ

(1) ಚರಕ


64.ಪಟ್ಟಿ Iರಲ್ಲಿನ ರೈಲ್ವೆ ವಲಯಗಳೊಂದಿಗೆ ಪಟ್ಟಿ IIರಲ್ಲಿನ ಅವುಗಳ ಕೇಂದ್ರ ಕಾರ್ಯಸ್ಥಾನಗಳನ್ನು ಹೊಂದಿಸಿ :
  ಪಟ್ಟಿ I (ರೈಲ್ವೆ ವಲಯಗಳು) ಪಟ್ಟಿ II(ಕೇಂದ್ರ ಕಾರ್ಯಸ್ಥಾನಗಳು)
 A.ಮಧ್ಯರೈಲ್ವೆI.ಹಾಜೀಪುರ್
 B.ಪೂರ್ವ ಮಧ್ಯ ರೈಲ್ವೆ II.ಜಬಲ್ಪುರ್
 C.ದಕ್ಷಿಣ ಮಧ್ಯ ರೈಲ್ವೆIII.ಮುಂಬಯಿ
 D.ಪಶ್ಚಿಮ ಮಧ್ಯ ರೈಲ್ವೆIV.ಸಿಕಂದರಾಬಾದ್
 V. ಬಿಲಾಸ್ಪುರ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIVII
 (2)IIIIIIIV
 (3)IIVIVIII
 (4)IIVIIIIV
ಸರಿ ಉತ್ತರ

(1) III I IV II


65.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ರೀಗರ್ ಮಣ್ಣು ಅಧಿಕವಾಗಿ ಫಲವತ್ತಾಗಿದೆ.
 B.ರೀಗರ್ ಮಣ್ಣು ಸಿಟ್ರಸ್ ಹಣ್ಣುಗಳಿಗೆ ಉತ್ತಮ
 C.ರೀಗರ್ ಮಣ್ಣು ಮಹಾರಾಷ್ಟ್ರದಾದ್ಯಂತ ಹರಡಿದೆ.
 D.ರೀಗರ್ ಮಣ್ಣು ಲೆಗ್ಯುಮಿನಸ್ ಬೆಳೆಗಳಿಗೆ ಸೂಕ್ತವಾದುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, B ಮತ್ತು C ಮಾತ್ರ
 (2)A, C ಮತ್ತು D ಮಾತ್ರ
 (3)B, C ಮತ್ತು D ಮಾತ್ರ
 (4)A, B, C ಮತ್ತು D
ಸರಿ ಉತ್ತರ

(4) A, B, C ಮತ್ತು D


66.2011ರ ಜನಗಣತಿಯ ಮೇರೆಗೆ ಜನಸಂಖ್ಯೆಯ ಆರೋಹಣ ಕ್ರಮದಲ್ಲಿ ಕೆಳಗಿನ ರಾಜ್ಯಗಳನ್ನು ಜೋಡಿಸಿ :
 A.ಪಶ್ಚಿಮ ಬಂಗಾಳ
 B.ಉತ್ತರ ಪ್ರದೇಶ್
 C.ಬಿಹಾರ್
 D.ಕರ್ನಾಟಕ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)D, A, C, B
 (2)D, C, A, B
 (3)A, D, C, B
 (4)A, D, B, C
ಸರಿ ಉತ್ತರ

(1) D, A, C, B


67.ಪಟ್ಟಿ Iರಲ್ಲಿನ ಕೃಷಿ ವಲಯಗಳನ್ನು ಪಟ್ಟಿ IIರಲ್ಲಿನ ಜಿಲ್ಲೆಗಳೊಂದಿಗೆ ಅವುಗಳು ಕರ್ನಾಟಕ ರಾಜ್ಯದ ಯಾವ ಕೃಷಿ ವಲಯದಡಿ ಬರುವುದೋ ಅದಕ್ಕನುಗುಣವಾಗಿ ಹೊಂದಿಸಿ :
  ಪಟ್ಟಿ I (ಕೃಷಿ ವಲಯಗಳು) ಪಟ್ಟಿ II (ಜಿಲ್ಲೆಗಳು)
 A.ಕರಾವಳಿ/ಕಡಲತೀರ ವಲಯI.ಹಾಸನ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ
 B.ಈಶಾನ್ಯ ಶುಷ್ಕ ವಲಯII.ಉ.ಕನ್ನಡ, ದ.ಕನ್ನಡ, ಉಡುಪಿ
 C.ಉತ್ತರ ಪರಿವರ್ತನಾ ವಲಯIII.ಬೆಳಗಾವಿ, ಧಾರವಾಡ, ಹಾವೇರಿ, ಗದಗ್
 D.ದಕ್ಷಿಣ ಶುಷ್ಕ ವಲಯIV.ಗುಲ್ಬರ್ಗಾ, ರಾಯಚೂರು, ಯಾದಗಿರ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIIVIII
 (3)IVIIIIII
 (4)IIIVIIII
ಸರಿ ಉತ್ತರ

(4) II IV III I


68.ಪಟ್ಟಿ Iರಲ್ಲಿನ ಅನ್ವೇಷಣೆಗಳು ಮತ್ತು ಪಟ್ಟಿ IIರಲ್ಲಿನ ಅನ್ವೇಷಕರನ್ನು ಹೊಂದಿಸಿ :
  ಪಟ್ಟಿ I (ಅನ್ವೇಷಣೆ) ಪಟ್ಟಿ II (ಅನ್ವೇಷಕರು)
 A.ಅಮೆರಿಕಾI.ಅಮಂಡ್ ಸನ್
 B.ಉತ್ತರ ಧ್ರುವII.ಕೊಲಂಬಸ್
 C.ದಕ್ಷಿಣ ಧ್ರುವIII.ಕೆಪ್ಲರ್
 D.ಗ್ರಹೀಯ ಚಲನೆIV.ರಾಬರ್ಟ್ ಪಿಯರಿ
 V. ವಾಸ್ಕೋಡಗಾಮಾ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)VIVIIII
 (3)IIIVIIII
 (4)IIIIVV
ಸರಿ ಉತ್ತರ

(3) II IV I III


69.ಈ ಕೆಳಗಿನ ಮಾತುಗಳನ್ನು ಹೇಳಿದವರಾರು?
‘‘ಪರಿಶೀಲಿಸದಿದ್ದಾಗ ಜನಸಂಖ್ಯೆಯು ಜ್ಯಾಮಿತೀಯ ಅನುಪಾತದಲ್ಲಿ ಏರುತ್ತದೆ.
ಜೀವನಾಧಾರವು ಮಾತ್ರ ಅಂಕಗಣತೀಯ ಅನುಪಾತದಲ್ಲಿ ಹೆಚ್ಚುತ್ತದೆ.’’
 (1)ಕಾರ್ಲ್ ಮಾರ್ಕ್ಸ್
 (2)ಮಾಲ್ಥಸ್
 (3)ಡಬಲಡೆ
 (4)ಸೆಂಪ್ಲ್
ಸರಿ ಉತ್ತರ

(2) ಮಾಲ್ಥಸ್


70.1940ರಲ್ಲಿ ಮಹಾತ್ಮ ಗಾಂಧಿಯವರು ಪರಿಮಿತ ಸತ್ಯಾಗ್ರಹವನ್ನು ವೈಯಕ್ತಿಕ ನೆಲೆಯಲ್ಲಿ ಪ್ರಾರಂಭಿಸಿದುದು ಏಕೆಂದರೆ,
 (1)ರಾಷ್ಟ್ರೀಯ ಚಳುವಳಿಯ ಅವಧಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಎಡ ಮತ್ತು ಬಲ ಪಂಥಗಳೆರಡನ್ನೂ ಒಟ್ಟುಗೂಡಿಸಲು ಬಯಸಿದರು.
 (2)ಅವರು ಬ್ರಿಟಿಷ್ ಆಳ್ವಿಕೆಗೆ ಸಾಂಕೇತಿಕವಾಗಿ ವಿರೋಧವನ್ನು ವ್ಯಕ್ತಪಡಿಸಲು ಬಯಸಿದ್ದು, ಅದು ಯುರೋಪ್ ನಲ್ಲಿ ಫ್ಯಾಸಿಸ್ಟ್ ಶಕ್ತಿ ಬಣಗಳನ್ನು ಶಮನಮಾಡುತ್ತಿದ್ದುದರಿಂದ.
 (3)ಭಾರತದ ಸ್ವಾತಂತ್ರ್ಯ ಬೇಡಿಕೆಯನ್ನು ಶಾಂತಿಯುತವಾಗಿ ಒಪ್ಪಿಕೊಳ್ಳಲಿಕ್ಕಾಗಿ ಮತ್ತು ತತ್ಕ್ಷಣವೇ ಮಧ್ಯಂತರ ಭಾರತೀಯ ಸರ್ಕಾರವನ್ನು ರಚಿಸಲಿಕ್ಕಾಗಿ, ಬ್ರಿಟಿಷ್ ಆಳ್ವಿಕೆಗೆ ಒಂದು ಅವಕಾಶವನ್ನು ನೀಡಬಯಸಿದರು.
 (4)ಯುರೋಪ್ ನಲ್ಲಿನ ಫ್ಯಾಸಿಸ್ಟ್ ಶಕ್ತಿಬಣಗಳನ್ನು ವಿರೋಧಿಸಲಿಕ್ಕಾಗಿ ಬ್ರಿಟಿಷ್ ಆಳ್ವಿಕೆಗೆ ಅವರ ಸಕ್ರಿಯ ಬೆಂಬಲವನ್ನು ನೀಡಲು ಬಯಸಿದರು.
ಸರಿ ಉತ್ತರ

(3) ಭಾರತದ ಸ್ವಾತಂತ್ರ್ಯ ಬೇಡಿಕೆಯನ್ನು ಶಾಂತಿಯುತವಾಗಿ ಒಪ್ಪಿಕೊಳ್ಳಲಿಕ್ಕಾಗಿ ಮತ್ತು ತತ್ಕ್ಷಣವೇ ಮಧ್ಯಂತರ ಭಾರತೀಯ ಸರ್ಕಾರವನ್ನು ರಚಿಸಲಿಕ್ಕಾಗಿ, ಬ್ರಿಟಿಷ್ ಆಳ್ವಿಕೆಗೆ ಒಂದು ಅವಕಾಶವನ್ನು ನೀಡಬಯಸಿದರು.


71.ಈ ಕೆಳಗಿನ ಉರ್ದು ಪಂಡಿತರಲ್ಲಿ ಯಾರನ್ನು ಎರಡನೇ ಮತ್ತು ಮೂರನೇ ದುಂಡುಮೇಜಿನ ಸಮಾವೇಶಕ್ಕೆ ಪರಿಷತ್ತಿಗೆ ಆಹ್ವಾನಿಸಲಾಗಿತ್ತು?
 (1)ಫಯಾಜ್ ಅಹ್ಮದ್ ಫಯಾಜ್
 (2)ಜೋಷ್ ಮಲಿಹಾಬಾದಿ
 (3)ಮುಹಮದ್ ಇಕ್ಬಾಲ್
 (4)ಫಿರಾಖ್ ಗೋರಕ್ ಪುರಿ
ಸರಿ ಉತ್ತರ

(3) ಮುಹಮದ್ ಇಕ್ಬಾಲ್


72.ಈ ಕೆಳಗಿನವುಗಳಲ್ಲಿ ಯಾವುದು ಯುದ್ಧಾವಧಿಯ ಶೌರ್ಯ ಪುರಸ್ಕಾರವಾಗಿದೆ?
 (1)ಅಶೋಕ್ ಚಕ್ರ
 (2)ಕೀರ್ತಿ ಚಕ್ರ
 (3)ವೀರ ಚಕ್ರ
 (4)ಶೌರ್ಯ ಚಕ್ರ
ಸರಿ ಉತ್ತರ

(3) ವೀರ ಚಕ್ರ


73.ಈ ಕೆಳಗಿನ ಯಾವ ಕಾಯ್ದೆಯನ್ನು ಜವಾಹರಲಾಲ್ ನೆಹರೂರವರು ‘‘ದಾಸ್ಯತ್ವದ ಹೊಸ ಸನ್ನದು (ಚಾರ್ಟರ್)’’ ಎಂಬುದಾಗಿ ವಿವರಿಸಿದರು?
 (1)ಭಾರತ ಸರ್ಕಾರದ 1919ರ ಕಾಯ್ದೆ (ಆಕ್ಟ್)
 (2)ಭಾರತ ಸರ್ಕಾರದ 1935ರ ಕಾಯ್ದೆ (ಆಕ್ಟ್)
 (3)ಪಿಟ್ಸ್ ಇಂಡಿಯಾ ಕಾಯ್ದೆ (ಆಕ್ಟ್), 1784
 (4)ರೆಗ್ಯುಲೇಟಿಂಗ್ ಕಾಯ್ದೆ (ಆಕ್ಟ್), 1773
ಸರಿ ಉತ್ತರ

(2) ಭಾರತ ಸರ್ಕಾರದ 1935ರ ಕಾಯ್ದೆ (ಆಕ್ಟ್)


74.‘‘ಪೋಲೋ ಕಾರ್ಯಾಚರಣೆ’’ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
 (1)ಕ್ವಿಟ್ ಇಂಡಿಯಾ ಚಳುವಳಿಯ ಅವಧಿಯಲ್ಲಿ ಜವಾಹರಲಾಲ್ ನೆಹರೂರವರ ಬಂಧನ
 (2)ಬ್ರಿಟಿಷ್ ಭಾರತದ ಮೇಲೆ ಭಾರತೀಯ ರಾಷ್ಟ್ರೀಯ ಸೈನ್ಯದ ಆಕ್ರಮಣ
 (3)ಭಾರತ ಸರ್ಕಾರದಿಂದ ಹೈದರಾಬಾದ್ ಮಾಂಡಲಿಕ ರಾಜ್ಯದ ಸ್ವಾಧೀನಪಡಿಸಿಕೊಳ್ಳುವಿಕೆ
 (4)ಪೋರ್ಚುಗೀಸರ ವಿರುದ್ಧ ಗೋವಾದ ಸ್ವಾತಂತ್ರ್ಯ ಹೋರಾಟ
ಸರಿ ಉತ್ತರ

(3) ಭಾರತ ಸರ್ಕಾರದಿಂದ ಹೈದರಾಬಾದ್ ಮಾಂಡಲಿಕ ರಾಜ್ಯದ ಸ್ವಾಧೀನಪಡಿಸಿಕೊಳ್ಳುವಿಕೆ


75.1927ರ ಬಟ್ಲರ್ ಸಮಿತಿಯ ಧ್ಯೇಯವು
 (1)ಭಾರತೀಯ ಸೈನ್ಯದ ಆಧುನೀಕೀಕರಣ.
 (2)ಭಾರತೀಯ ಕೃಷಿಯ ಆಧುನೀಕೀಕರಣ.
 (3)ರಾಷ್ಟ್ರೀಯ ಮುದ್ರಣಾಲಯದ ಮೇಲೆ ಸೆನ್ಸಾರ್ ಷಿಪ್ ನ ಹೇರಿಕೆ.
 (4)ಭಾರತ ಸರ್ಕಾರ ಮತ್ತು ಭಾರತೀಯ ಮಾಂಡಲೀಕ ರಾಜ್ಯಗಳ ನಡುವಣ ಸಂಬಂಧವನ್ನು ಸುಧಾರಿಸುವುದು.
ಸರಿ ಉತ್ತರ

(4) ಭಾರತ ಸರ್ಕಾರ ಮತ್ತು ಭಾರತೀಯ ಮಾಂಡಲೀಕ ರಾಜ್ಯಗಳ ನಡುವಣ ಸಂಬಂಧವನ್ನು ಸುಧಾರಿಸುವುದು.


76.ಪಟ್ಟಿ Iರಲ್ಲಿನ ಪ್ರಮುಖ ದಿನಗಳನ್ನು ಪಟ್ಟಿ IIರಲ್ಲಿನ ದಿನಾಂಕಗಳೊಂದಿಗೆ ಸರಿ ಹೊಂದಿಸಿ:
  ಪಟ್ಟಿ I (ಪ್ರಮುಖ ದಿನಗಳು) ಪಟ್ಟಿ II (ದಿನಾಂಕಗಳು)
 A.ವಿಶ್ವ ರೆಡ್ ಕ್ರಾಸ್ ದಿನI.21ನೇ ಜೂನ್
 B.ಅಂತರರಾಷ್ಟ್ರೀಯ ಯೋಗ ದಿನ II.8ನೇ ಮೇ
 C.ಭಾರತದ ವಾಯುದಳ ದಿನIII.8ನೇ ಸೆಪ್ಟೆಂಬರ್
 D.ಅಂತರರಾಷ್ಟ್ರೀಯ ಸಾಕ್ಷರತೆ ದಿನIV.8ನೇ ಅಕ್ಟೋಬರ್
 V. 7ನೇ ನವೆಂಬರ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVV
 (2)IIIIIIIV
 (3)IIIIVIII
 (4)IIIIVV
ಸರಿ ಉತ್ತರ

(3) II I IV III


77.P, Q ಮತ್ತು Rರ ವಯಸ್ಸುಗಳ ಮೊತ್ತವು 50 ವರ್ಷಗಳು. ‘Q’ನ ವಯಸ್ಸೇನು?
 A.P ಯು Qಗಿಂತ 10 ವರ್ಷ ದೊಡ್ಡವನು.
 B.R 30 ವರ್ಷ ವಯಸ್ಸಿನವನು.
 ಮೇಲಿನ ಪ್ರಶ್ನೆಗಳಲ್ಲಿ ಯಾವುದು ಪ್ರಶ್ನೆಗೆ ಉತ್ತರಿಸಲು ಸಾಕಷ್ಟು ದತ್ತಾಂಶವನ್ನು ಹೊಂದಿದೆ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)ಪ್ರಶ್ನೆಗೆ ಉತ್ತರಿಸಲು ಕೇವಲ A ಹೇಳಿಕೆಯಲ್ಲಿನ ದತ್ತಾಂಶವೊಂದೇ ಸಾಕು.
 (2)ಹೇಳಿಕೆ B ನಲ್ಲಿರುವ ಮಾಹಿತಿಯೊಂದೇ ಪ್ರಶ್ನೆಗೆ ಉತ್ತರಿಸಲು ಸಾಕಾಗುತ್ತದೆ.
 (3)ಪ್ರಶ್ನೆಗಳಿಗೆ ಉತ್ತರಿಸಲು A ಮತ್ತು B ಗಳೆರಡೂ ಹೇಳಿಕೆಗಳ ಒಟ್ಟು ಮಾಹಿತಿಯು ಸಾಕಾಗುವುದಿಲ್ಲ.
 (4)ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡಲ್ಲಿನ ಒಟ್ಟು ಮಾಹಿತಿಯು ಅವಶ್ಯಕವಾಗಿದೆ.
ಸರಿ ಉತ್ತರ

(4) ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡಲ್ಲಿನ ಒಟ್ಟು ಮಾಹಿತಿಯು ಅವಶ್ಯಕವಾಗಿದೆ.


78.ಈ ಕೆಳಗಿನ ಸಮಸ್ಯೆಯ ಚಿತ್ರದಲ್ಲಿ ಪ್ರಶ್ನಾರ್ಥಕ ಚಿಹ್ನೆಯುಳ್ಳ (?) ಸ್ಥಳಕ್ಕೆ ಹೊಂದಿಕೆಯಾಗಬಲ್ಲ ಸರಿ ಚಿತ್ರವನ್ನು ಉತ್ತರದ ಚಿತ್ರಗಳಿಂದ ಆರಿಸಿ.
ಪ್ರಶ್ನೆ ಚಿತ್ರ:
ಸರಿಯಾದ ಆಯ್ಕೆಯನ್ನುಆರಿಸಿ:
 (1)
 (2)
 (3)
 (4)
ಸರಿ ಉತ್ತರ

(4)


79.ಈ ಕೆಳಗಿನ ಚಿತ್ರದಲ್ಲಿ ಎಷ್ಟು ಸರಳ ರೇಖೆಗಳಿವೆ?
 (1)11
 (2)12
 (3)15
 (4)48
ಸರಿ ಉತ್ತರ

(2) 12


80.ಈ ಕೆಳಗಿನ ಹೇಳಿಕೆಗಳನ್ನು ಪರಿಶಿಲೀಸಿ :
 A.ಅಜಯನು ರಾಹುಲ್ ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾನೆ.
 B.ರಾಹುಲ್ ನು ಮನೀಶ್ ಗಿಂತಲೂ ಕಡಿಮೆ ಅಂಕಗಳನ್ನು ಗಳಿಸಿದ್ದಾನೆ.
 C.ಮನೀಶ್ ನು ಅಜಯ್ ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾನೆ.
 D.ವಿಜಯ್ ನು ಅಜಯ್ ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾನೆ ಆದರೆ, ಮನೀಶ್ ಗಿಂತಲೂ ಕಡಿಮೆ ಅಂಕಗಳನ್ನು ಗಳಿಸಿದ್ದಾನೆ.
ಮೇಲಿನ ಹೇಳಿಕೆಗಳ ಮೇರೆಗೆ ಯಾರು ಅತ್ಯಧಿಕ ಅಂಕಗಳನ್ನು ಗಳಿಸಿದ್ದಾರೆ?
 (1)ಅಜಯ್
 (2)ರಾಹುಲ್
 (3)ಮನೀಶ್
 (4)ವಿಜಯ್
ಸರಿ ಉತ್ತರ

(3) ಮನೀಶ್


81.ಈ ಕೆಳಗಿನ ಪ್ರಶ್ನೆಯಲ್ಲಿ, ಒಂದು ಹೇಳಿಕೆಯನ್ನು A ಮತು B ಎಂಬ ಎರಡು ಊಹೆಗಳು ಅನುಸರಿಸುತ್ತವೆ. ನೀವು ಹೇಳಿಕೆಯನ್ನು ಮತ್ತು ಅದನ್ನನುಸರಿಸುವ ಊಹೆಗಳನ್ನು ಪರಿಗಣಿಸಬೇಕು ಮತ್ತು ಯಾವ ಊಹೆಯು/ಗಳು ಹೇಳಿಕೆಯಲ್ಲಿ ಧ್ವನಿಸುತ್ತದೆ/ವೆ ಎಂಬುದನ್ನು ನಿರ್ಧರಿಸಿ.
ಹೇಳಿಕೆ : ರಾಜ್ಯ ಸರ್ಕಾರವು ನಾಲ್ಕು ಸಾವಿರ ಪ್ರಾಥಮಿಕ ಶಾಲೆಗಳ ಉಪಾಧ್ಯಾಯರನ್ನು ಮುಂದಿನ ಹಣಕಾಸಿನ ವರ್ಷದಲ್ಲಿ ನೇಮಕ ಮಾಡಲು ನಿರ್ಧರಿಸಿದೆ.
ಊಹೆ A: ನಾಲ್ಕು ಸಾವಿರ ಹೆಚ್ಚುವರಿ ಉಪಾಧ್ಯಾಯರನ್ನು ಒಳಗೊಳ್ಳಲು ರಾಜ್ಯದಲ್ಲಿ ಸಾಕಷ್ಟು ಶಾಲೆಗಳಿವೆ.
ಊಹೆ B: ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಆಸಕ್ತಿ ಹೊಂದದಿರಬಹುದು ಅಥವಾ ಅಂತಿಮವಾಗಿ ಸರ್ಕಾರದಿಂದ ಅಷ್ಟು ಹೆಚ್ಚಿನ ಸಂಖ್ಯೆಯ ಪ್ರಾಥಮಿಕ ಶಾಲಾ ಉಪಾಧ್ಯಾಯರನ್ನು ನೇಮಿಸಲಾಗುವುದಿಲ್ಲ.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಊಹೆ ಮಾತ್ರ ಧ್ವನಿಸುತ್ತದೆ
 (2)B ಊಹೆ ಮಾತ್ರ ಧ್ವನಿಸುತ್ತದೆ
 (3)A ಊಹೆ ಮತ್ತು B ಊಹೆಗಳೆರಡೂ ಧ್ವನಿಸುತ್ತವೆ.
 (4)A ಊಹೆ ಆಗಲೀ ಅಥವಾ B ಊಹೆ ಆಗಲೀ ಧ್ವನಿಸುವುದಿಲ್ಲ.
ಸರಿ ಉತ್ತರ

(1) A ಊಹೆ ಮಾತ್ರ ಧ್ವನಿಸುತ್ತದೆ


82.ಪ್ರಕಾಶನಿಗೆ ಆಶೀಷನು ಹೇಳಿದನು ‘‘ಫುಟ್ಬಾಲ್ ನೊಂದಿಗೆ ಆಡುತ್ತಿರುವ ಆ ಹುಡುಗನು ನನ್ನ ತಂದೆಯ ಪತ್ನಿಯ ಮಗಳ ಇಬ್ಬರು ಸೋದರರಲ್ಲಿ ಕಿರಿಯವನು’’ ಫುಟ್ಬಾಲ್ ನ್ನು ಆಡುತ್ತಿರುವ ಹುಡುಗನು ಆಶೀಷ್ ಗೆ ಯಾವ ರೀತಿಯಲ್ಲಿ ಸಂಬಂಧ ಹೊಂದಿದ್ದಾನೆ?
 (1)ಮಗ
 (2)ಸಹೋದರ
 (3)ಮೈದುನ / ಭಾವ / ಸೋದರಿಯ ಗಂಡ
 (4)ಚಿಕ್ಕಪ್ಪನ ಮಗ
ಸರಿ ಉತ್ತರ

(2) ಸಹೋದರ


83.ಈ ಕೆಳಗಿನ ಪ್ರಶ್ನೆಯಲ್ಲಿ, ನಿರ್ದಿಷ್ಟ ಸಂಖ್ಯೆಗಳನ್ನು ಉಳ್ಳ ಒಂದು ಚಿತ್ರವನ್ನು ನೀಡಿದೆ. ಈ ಚಿತ್ರದಲ್ಲಿನ ಸಂಖ್ಯೆಗಳು ಒಂದು ಸದೃಶ ನಮೂನೆಯನ್ನು ಅನುಸರಿಸುತ್ತವೆ ಎಂದು ಭಾವಿಸಿ ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ.
 (1)4
 (2)5
 (3)6
 (4)2
ಸರಿ ಉತ್ತರ

(1) 4


84.ಕೆಳಗಿನ ಯಾವ ರೇಖಾಚಿತ್ರಗಳು ಕರೆನ್ಸಿ, ರೂಪಾಯಿ ಮತ್ತು ಡಾಲರ್ಗಳ ನಡುವಣ ಸರಿಯಾದ ಸಂಬಂಧವನ್ನು ಪ್ರತಿನಿಧಿಸುತ್ತವೆ?
 (1)
 (2)
 (3)
 (4)
ಸರಿ ಉತ್ತರ

(2)


85.ಒಬ್ಬ ಬಾಲಕನು ಪ್ರಾತಃಕಾಲದಲ್ಲಿ ಮನೆಯಿಂದ ಹೊರಡುತ್ತಾನೆ ಮತ್ತು ಸೂರ್ಯನಿಗಭಿಮುಖವಾಗಿ ನೇರವಾಗಿ 8 ಕಿ.ಮೀ.ಗಳಷ್ಟು ನಡೆಯುತ್ತಾನೆ. ನಂತರ ಅವನು ಬಲಕ್ಕೆ ತಿರುಗುತ್ತಾನೆ ಮತ್ತು 3 ಕಿ.ಮೀ.ಗಳಷ್ಟು ನಡೆಯುತ್ತಾನೆ. ಪುನಃ ಬಲಕ್ಕೆ ತಿರುಗುತ್ತಾನೆ ಮತ್ತು 2 ಕಿ.ಮೀ.ಗಳಷ್ಟು ನಡೆಯುತ್ತಾನೆ ಮತ್ತು ನಂತರ ಎಡಕ್ಕೆ ತಿರುಗುತ್ತಾನೆ ಹಾಗೂ 1 ಕಿ.ಮೀ. ನಡೆಯುತ್ತಾನೆ. ಪುನಃ ಬಲಕ್ಕೆ ತಿರುಗುತ್ತಾನೆ ಮತ್ತು 1 ಕಿ.ಮೀ. ನಡೆಯುತ್ತಾನೆ. ಪುನಃ ಬಲಕ್ಕೆ ತಿರುಗುತ್ತಾನೆ ಮತ್ತು ನೇರವಾಗಿ 4 ಕಿ.ಮೀ.ಗಳಷ್ಟು ನಡೆಯುತ್ತಾನೆ. ಪ್ರಾರಂಭಿತ ಬಿಂದುವಿನಿಂದ ಅವನು ಎಷ್ಟು ದೂರದಲ್ಲಿದ್ದಾನೆ?
 (1)5 ಕಿ.ಮೀ.
 (2)6 ಕಿ.ಮೀ.
 (3)2 ಕಿ.ಮೀ.
 (4)4 ಕಿ.ಮೀ.
ಸರಿ ಉತ್ತರ

(1) 5 ಕಿ.ಮೀ.


86.ಒಂದು ದಾಳದ ಮೂರು ಸ್ಥಾನಗಳನ್ನು ಕೆಳಗೆ ನೀಡಲಾಗಿದೆ :
6ರ ಸಂಖ್ಯೆಯ ವಿರುದ್ಧಮುಖದ ಮೇಲಿನ ಸಂಖ್ಯೆ ಎಷ್ಟು?
 (1)1
 (2)4
 (3)5
 (4)7
ಸರಿ ಉತ್ತರ

(2) 4


87.ಕೆಳಗಿನ ಬದಲಾವಣೆಗಳನ್ನು ಪರಿಗಣಿಸಿ :
 A.ಹಾಲು ಹೆಪ್ಪುಗಟ್ಟುವುದು
 B.ಬಣ್ಣವು ಶುಷ್ಕಗೊಳ್ಳುವುದು (ಒಣಗುವುದು)
 C.ಕರ್ಪೂರದ ಉತ್ಪತನ
 D.SO2SO2 ನಿಂದ SO3SO3 ಗೆ ಆಕ್ಸಿಡೀಕರಣಗೊಳ್ಳುವುದು
 ಮೇಲಿನವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆಯಾಗಿದೆ?
 (1)A, B ಮತ್ತು D ಮಾತ್ರ
 (2)A, C ಮತ್ತು D ಮಾತ್ರ
 (3)A, B, C ಮತ್ತು D
 (4)A, B ಮತ್ತು C ಮಾತ್ರ
ಸರಿ ಉತ್ತರ

(1) A, B ಮತ್ತು D ಮಾತ್ರ


88.ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು 1977-78ರಲ್ಲಿ ಜನತಾ ಪಕ್ಷದ ಸರಕಾರದಿಂದ ಅಂತ್ಯಗೊಳಿಸಲ್ಪಟ್ಟಿತು?
 (1)4ನೇ ಪಂಚವಾರ್ಷಿಕ ಯೋಜನೆ
 (2)5ನೇ ಪಂಚವಾರ್ಷಿಕ ಯೋಜನೆ
 (3)7ನೇ ಪಂಚವಾರ್ಷಿಕ ಯೋಜನೆ
 (4)8ನೇ ಪಂಚವಾರ್ಷಿಕ ಯೋಜನೆ
ಸರಿ ಉತ್ತರ

(2) 5ನೇ ಪಂಚವಾರ್ಷಿಕ ಯೋಜನೆ


89.ಮೊಘಲರ ಆಸ್ಥಾನಲ್ಲಿದ್ದ ಯಾರನ್ನು ತುರಾನೀಸ್ ಎಂದು ಕರೆಯಲಾಗುತ್ತಿತ್ತು?
 (1)ಇರಾಕ್ ನಿಂದ ಬಂದವರನ್ನು
 (2)ಆಫ್ಘಾನಿಸ್ತಾನಕ್ಕೆ ಸೇರಿದವರನ್ನು
 (3)ಮಧ್ಯ ಏಷ್ಯ ಪ್ರದೇಶಗಳ ಮೂಲದಿಂದ ಬಂದವರನ್ನು
 (4)ಇರಾನ್ ನಿಂದ ಬಂದವರನ್ನು
ಸರಿ ಉತ್ತರ

(3) ಮಧ್ಯ ಏಷ್ಯ ಪ್ರದೇಶಗಳ ಮೂಲದಿಂದ ಬಂದವರನ್ನು


90.ಈ ಕೆಳಗಿನ ಯಾವುದರ ನಡುವೆ ಪಾಕ್ ಕೊಲ್ಲಿಯು ನೆಲೆಸಿದೆ?
 (1)ಗಲ್ಫ್ ಆಫ್ ಕಚ್ ಮತ್ತು ಗಲ್ಫ್ ಆಫ್ ಖಂಭಾಟ್
 (2)ಗಲ್ಫ್ ಆಫ್ ಮನ್ನಾರ್ ಮತ್ತು ಬೇ ಆಫ್ ಬೆಂಗಾಲ್
 (3)ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ ದ್ವೀಪಗಳು
 (4)ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಸರಿ ಉತ್ತರ

(2) ಗಲ್ಫ್ ಆಫ್ ಮನ್ನಾರ್ ಮತ್ತು ಬೇ ಆಫ್ ಬೆಂಗಾಲ್


91.ಈ ಕೆಳಗಿನ ಯಾವ ಸ್ಥಳದಲ್ಲಿ ನವಿಲು ಅಭಯಧಾಮವು ಸ್ಥಾಪಿತವಾಗಿದೆ?
 (1)ಮಂಡಗದ್ದೆ
 (2)ಮಾಗಡಿ
 (3)ಬೊನಲ್
 (4)ಬಂಕಾಪುರ
ಸರಿ ಉತ್ತರ

(4) ಬಂಕಾಪುರ


92.ಈ ಕೆಳಗಿನ ಯಾವ ನದಿ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ?
 (1)ಸೀತಾನದಿ
 (2)ಶರಬಿ
 (3)ತಾಡ್ರಿ
 (4)ಶರಾವತಿ
ಸರಿ ಉತ್ತರ

(2) ಶರಬಿ


93.ಹಣದುಬ್ಬರಕ್ಕೆ ಕೆಳಗಿನ ಯಾವುದು ಹೊಣೆಯಾಗುವುದಿಲ್ಲ?
 (1)ಆರ್ಥಿಕತೆಯಲ್ಲಿನ ಹೆಚ್ಚುವರಿ ದ್ರವ್ಯ
 (2)ಜನರಿಂದ ಉಳಿತಾಯದಲ್ಲಿನ ಹೆಚ್ಚಳ
 (3)ಬ್ಯಾಂಕ್ ಸಾಲಗಳಲ್ಲಿನ ತೀವ್ರಗತಿಯ ವಿಸ್ತರಣೆ
 (4)ಸರ್ಕಾರದಿಂದ ಹೆಚ್ಚುವರಿಯಾಗಿ ಆದ ವೆಚ್ಚ
ಸರಿ ಉತ್ತರ

(2) ಜನರಿಂದ ಉಳಿತಾಯದಲ್ಲಿನ ಹೆಚ್ಚಳ


94.ವಿದ್ಯುತ್ ಉಪಕರಣವನ್ನು ಭೂ ಅಂಗರ್ತತ / ಸಂಪರ್ಕ (ಅರ್ತ್ಡ್) ಗೊಳಿಸುವುದು ಇದಕ್ಕಾಗಿ
 A.ಉಪಕರಣವನ್ನು ಯಾವುದೇ ಹಾನಿಗೊಳಗಾಗದಂತೆ ತಡೆಯಲು.
 B.ವಿದ್ಯುತ್ ಆಘಾತಗಳನ್ನು ರಕ್ಷಿಸಲಿಕ್ಕಾಗಿ.
 C.ಶಾರ್ಟ್ಸರ್ಕೀಟ್ ಆಗುವುದನ್ನು ತಡೆಯಲು
 D.ಶಕ್ತಿಯ ಉಳಿತಾಯಕ್ಕಾಗಿ
 ಮೇಲಿನ ಹೇಳಿಕೆಗಳಲ್ಲಿ ಯಾವುದು / ವು ಸರಿ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)B ಮತ್ತು C ಮಾತ್ರ
 (4)C ಮತ್ತು D ಮಾತ್ರ
ಸರಿ ಉತ್ತರ

(2) B ಮಾತ್ರ


95.ಪಟ್ಟಿ Iರಲ್ಲಿನ ಪ್ರಸಿದ್ಧ ಸ್ಥಳಗಳನ್ನು ಪಟ್ಟಿ IIರಲ್ಲಿನ ಅವುಗಳು ಸಂಬಂಧ ಹೊಂದಿರುವ ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸರಿ ಹೊಂದಿಸಿ :
  ಪಟ್ಟಿ I (ಪ್ರಸಿದ್ಧ ಸ್ಥಳಗಳು) ಪಟ್ಟಿ II (ಪ್ರಖ್ಯಾತ ವ್ಯಕ್ತಿಗಳು)
 A.ಕೋರ್ಸಿಕಾI.ಅಲೆಕ್ಸಾಂಡರ್ ಮಹಾಶಯ
 B.ಮ್ಯಾಸಿಡೋನಿಯಾII.ನೆಪೋಲಿಯನ್ ಬೋನಪಾರ್ಟೆ
 C.ಟ್ರಾಲ್ಗರ್III.ನೆಲ್ಸನ್
 D.ಮೆಕ್ಕಾIV.ಪ್ರವಾದಿ ಮೊಹಮ್ಮದ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನುಆರಿಸಿ:
  ABCD
 (1)IIIIIIIV
 (2)IIIIIIIV
 (3)IIIIVIII
 (4)IIIIIIIV
ಸರಿ ಉತ್ತರ

(2) II I III IV


96.ಈ ಕೆಳಗಿನವರಲ್ಲಿ ಯಾರು ಪ್ರತಿ ವರ್ಷವೂ ಅಧಿಕೃತವಾಗಿ ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸುವರು?
 (1)ಭಾರತದ ರಿಸರ್ವ್ ಬ್ಯಾಂಕ್
 (2)ಭಾರತದ ಯೋಜನಾ ಆಯೋಗ
 (3)ಭಾರತ ಸರ್ಕಾರದ ಹಣಕಾಸು ಮಂತ್ರಿಮಂಡಲ
 (4)ಭಾರತ ಸರ್ಕಾರದ ಕೈಗಾರಿಕಾ ಮಂತ್ರಿಮಂಡಲ
ಸರಿ ಉತ್ತರ

(3) ಭಾರತ ಸರ್ಕಾರದ ಹಣಕಾಸು ಮಂತ್ರಿಮಂಡಲ


97.ಪಟ್ಟಿ Iರಲ್ಲಿನ ಸ್ಮಾರಕಗಳನ್ನು ಪಟ್ಟಿ IIರಲ್ಲಿನ ಮನೆತನಗಳೊಂದಿಗೆ ಸರಿ ಹೊಂದಿಸಿ :
  ಪಟ್ಟಿ I (ಸ್ಮಾರಕಗಳು) ಪಟ್ಟಿ II (ಮನೆತನ)
 A.ಅಲಾಯ್ ದರ್ವಾಜI.ಗುಲಾಮಿ ಮನೆತನ
 B.ಹಾಜ್ ಖಾಸ್II.ಮೊಘಲ್ ಮನೆತನ
 C.ಶಾಲೀಮಾರ್ ಬಾಗ್III.ಖಿಲ್ಜಿ ಮನೆತನ
 D.ಅಢಾಯಿ ದಿನ್ ಕಾ ಝೋಪ್ಡಾIV.ತುಘಲಕ್ ಮನೆತನ
 V. ಲೋದಿ ಮನೆತನ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIV
 (2)IIIIVIII
 (3)IVIIIIII
 (4)IIIIVVII
ಸರಿ ಉತ್ತರ

(2) III IV II I


98. ಕೆಳಗಿನ ಕಾರ್ಯಕಾರಿಗಳನ್ನು ಪರಿಗಣಿಸಿ :
 A.ಕ್ಯಾಬಿನೆಟ್ ಕಾರ್ಯದರ್ಶಿ
 B.ಮುಖ್ಯ ಚುನಾವಣಾ ಆಯುಕ್ತರು
 C.ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು
 D.ಭಾರತದ ಮುಖ್ಯ ನ್ಯಾಯಾಧೀಶರು
 ಇವರುಗಳ ಅಗ್ರತೆಯ ಕ್ರಮದಲ್ಲಿನ ಸರಿಯಾದ ಶ್ರೇಣಿಯು :
 (1)C, D, B, A
 (2)D, C, A, B
 (3)D, C, B, A
 (4)C, D, A, B
ಸರಿ ಉತ್ತರ

(3) D, C, B, A


99.ಮುಖ್ಯ ಮಾಹಿತಿ ಆಯುಕ್ತರ / ಮಾಹಿತಿ ಆಯುಕ್ತರ ಅಧಿಕಾರಾವಧಿಯು ಎಷ್ಟು?
 (1)ನಿಶ್ಚಿತವಾದ ಅವಧಿಯು ಇಲ್ಲ. ರಾಷ್ಟ್ರಾಧ್ಯಕ್ಷರು ಬಯಸುವವರೆಗೆ ಆಯುಕ್ತರು ಕಾರ್ಯ ನಿರ್ವಹಿಸಬಹುದು.
 (2)5 ವರ್ಷಗಳ ಅವಧಿ ಅಥವಾ 65 ವರ್ಷ ವಯಸ್ಸಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗಿನ ಅವಧಿಗೆ ನೇಮಿಸಲಾಗುವುದು.
 (3)3 ವರ್ಷಗಳ ಅವಧಿ ಅಥವಾ 65 ವರ್ಷ ವಯೋಮಿತಿಯವರೆಗೆ ಯಾವುದು ಮೊದಲೋ ಅಲ್ಲಿಯವರೆಗಿನ ಅವಧಿಗೆ ನೇಮಿಸಲಾಗುವುದು.
 (4)ಆಯುಕ್ತರು 70 ವರ್ಷಗಳ ವಯಸ್ಸನ್ನು ಮುಟ್ಟುವವರೆಗೆ ನೇಮಿಸಲಾಗುವುದು.
ಸರಿ ಉತ್ತರ

(2) 5 ವರ್ಷಗಳ ಅವಧಿ ಅಥವಾ 65 ವರ್ಷ ವಯಸ್ಸಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗಿನ ಅವಧಿಗೆ ನೇಮಿಸಲಾಗುವುದು.


100.ಭಾರತದ ಪ್ರಥಮ ಗೌರ್ನರ್ ಜನರಲ್ನಾದ ವಾರನ್ ಹೇಸ್ಟಿಂಗ್ಸ್ ನು ದುರ್ನಡತೆಯ ಆಪಾದಿತನಾಗಿದ್ದು, ಅವನ ವಿರುದ್ಧವಾಗಿ ಕೈಗೊಳ್ಳಲಾದ ಕ್ರಮವೇನು?
 (1)ಅವನನ್ನು ಬ್ರಿಟನ್ ಗೆ ಹಿಂದಿರುಗುವಂತೆ ಹೇಳಲಾಯಿತು.
 (2)ಅವನ ವಿರುದ್ಧವಾಗಿ ಖಂಡಿಸುವ ವ್ಯವಹರಣೆಗಳನ್ನು ಪ್ರಾರಂಭಿಸಲಾಯಿತು.
 (3)ಅವನು ಅಧಿಕ ಮೊತ್ತದ ದಂಡವನ್ನು ಪಾವತಿಸಲು ಹೇಳಲಾಯಿತು.
 (4)ಬ್ರಿಟಿಷ್ ಸಾಮ್ರಾಜ್ಯದಿಂದ ಕ್ಷಮೆಯಾಚಿಸಲು ಅವನಿಗೆ ಹೇಳಲಾಯಿತು.
ಸರಿ ಉತ್ತರ

(2) ಅವನ ವಿರುದ್ಧವಾಗಿ ಖಂಡಿಸುವ ವ್ಯವಹರಣೆಗಳನ್ನು ಪ್ರಾರಂಭಿಸಲಾಯಿತು.


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment