WhatsApp Group Join Now
Telegram Group Join Now

FDA General Knowledge Question Paper-2019

FDA-2019 Paper-III General Knowledge Questions with answers

ದಿನಾಂಕ 09.06.2019 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಜ್ಞಾನ ಪತ್ರಿಕೆ – III (ವಿಷಯ ಸಂಕೇತ: 366)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

1.ಸರ್ಕಾರಿಯಾ ಆಯೋಗವು ಈ ವರದಿಗಾಗಿ ನೇಮಕಗೊಂಡವು
 (1)ಬಾಲ್ಯ ಉದ್ಯೋಗ
 (2)ಕೇಂದ್ರ – ರಾಜ್ಯ ಸಂಬಂಧ
 (3)ಪರಿಸರ
 (4)ಈ ಯಾವುವೂ ಅಲ್ಲ

ಸರಿ ಉತ್ತರ

(2) ಕೇಂದ್ರ – ರಾಜ್ಯ ಸಂಬಂಧ


2.ಈ ಕೆಳಕಂಡವುಗಳಲ್ಲಿ ಯಾವುದು ಸಿಂದೂ ನಾಗರೀಕತೆಯ ಸಮಕಾಲೀನ ನಾಗರೀಕತೆಯಾಗಿರಲಿಲ್ಲ ?
 (1)ಈಜಿಪ್ಟ್ ನಾಗರೀಕತೆ
 (2)ಮೆಸಪಟೋಮಿಯ ನಾಗರೀಕತೆ
 (3)ಸುಮೇರಿಯ ನಾಗರೀಕತೆ
 (4)ಗ್ರೀಕ್ ನಾಗರೀಕತೆ
ಸರಿ ಉತ್ತರ

(4) ಗ್ರೀಕ್ ನಾಗರೀಕತೆ


3.‘‘ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ’’ ಪುಸ್ತಕವನ್ನು ರಚಿಸಿದವರು
 (1)ಆರ್.ಸಿ. ದತ್
 (2)ಹೆನ್ರಿ ಕಾಟನ್
 (3)ದಾದಾಭಾಯ್ ನವರೋಜಿ
 (4)ಮಹಾತ್ಮಾಗಾಂಧಿ
ಸರಿ ಉತ್ತರ

(3) ದಾದಾಭಾಯ್ ನವರೋಜಿ


4.ಪ್ರಸಿದ್ದ ‘ಸ್ವರಾಜಿಷ್ಟ್’ ದಳವು ಈ ಚಳುವಳಿಯ ವೈಪಲ್ಯದ ನಂತರ ಸ್ಥಾಪನೆಗೊಂಡಿತು
 (1)ಅಸಹಕಾರ ಚಳುವಳಿ
 (2)ಕಾಯ್ದೆ ಬಂಗ ಚಳುವಳಿ
 (3)ಭಾರತ ಬಿಟ್ಟು ತೊಲಗಿ ಚಳುವಳಿ
 (4)ಹೊಂ ರೂಲ್ ಚಳುವಳಿ
ಸರಿ ಉತ್ತರ

(1) ಅಸಹಕಾರ ಚಳುವಳಿ


5.ಗಾಂಧಿ-ಇರ್ವಿನ್ ಒಪ್ಪಂದಕ್ಕೆ …………………. ರಲ್ಲಿ ಸಹಿಹಾಕಲಾಯಿತು.
 (1)1932
 (2)1931
 (3)1930
 (4)1935
ಸರಿ ಉತ್ತರ

(2) 1931


6.ಈ ಕೆಳಗಿನ ನಿಯತ ಕಾಲಿಕಗಳಲ್ಲಿ ಯಾವುದು ಕ್ರಾಂತಿಕಾರಿ ಉಗ್ರಗಾಮಿ ಚಳುವಳಿಗಳೊಂದಿಗೆ ಸಂಬಂಧ ಹೊಂದಿಲ್ಲ?
 (1)ಸಂಧ್ಯ
 (2)ಯುಗಾಂತರ್
 (3)ಗದ್ದಾರ್
 (4)ಯಂಗ್ ಇಂಡಿಯಾ
ಸರಿ ಉತ್ತರ

(4) ಯಂಗ್ ಇಂಡಿಯಾ


7.‘ಸಂಗಮ’ ಸಾಹಿತ್ಯದ ಕೇಂದ್ರ ಯಾವುದಾಗಿತ್ತು ?
 (1)ಮಧುರೈ
 (2)ಚೆನೈ
 (3)ತಂಜಾವೂರ
 (4)ಕಾಂಚಿ
ಸರಿ ಉತ್ತರ

(1) ಮಧುರೈ


8.‘ರೈತವಾರಿ’ ಪದ್ಧತಿಯನ್ನು ಯಾರು ಜಾರಿಗೆ ತಂದರು ?
 (1)ಸರ್ ಥಾಮಸ್ ಮನ್ರೊ
 (2)ವಾರನ್ ಹೇಸ್ಟಿಂಗ್ಸ್
 (3)ಲಾರ್ಡ್ ಕಾರ್ನ್ ವಾಲಿಸ್
 (4)ಯಾರೂ ಅಲ್ಲ
ಸರಿ ಉತ್ತರ

(1) ಸರ್ ಥಾಮಸ್ ಮನ್ರೊ


9.EFGHIJK ಯ ಸಂಕೇತ VUTSRQP ಆದರೆ LIMITಯ ಸಂಕೇತ
 (1)KNRNC
 (2)JKOKG
 (3)RSTSG
 (4)ORNRG
ಸರಿ ಉತ್ತರ

(4) ORNRG


10.ಈ ಸರಣಿಯಲ್ಲಿನ ಮುಂದಿನ ಸಂಖ್ಯೆ ಕಂಡುಹಿಡಿಯಿರಿ
2, 4, 12, 48, 240, ……………….
 (1)1240
 (2)1260
 (3)1380
 (4)1440
ಸರಿ ಉತ್ತರ

(4) 1440


11.ಎ ಮತ್ತು ಬಿ ಒಟ್ಟಾರೆಯಾಗಿ ಕೆಲಸವನ್ನು 6 ದಿನದಲ್ಲಿ ಮುಗಿಸಬಲ್ಲರು. ಎ ಒಬ್ಬರೇ ಆ ಕೆಲಸವನ್ನು 10 ದಿನದಲ್ಲಿ ಮುಗಿಸಿದರೆ ಬಿ ಎಷ್ಟುದಿನದಲ್ಲಿ ಮುಗಿಸಿಬಹುದು ?
 (1)12 ದಿನಗಳು
 (2)10 ದಿನಗಳು
 (3)8 ದಿನಗಳು
 (4)15 ದಿನಗಳು
ಸರಿ ಉತ್ತರ

(4) 15 ದಿನಗಳು


12.ವ್ಯಕ್ತಿಯು 30% ವೇತನವನ್ನು ಆಹಾರಕ್ಕೆ 10% ಅನ್ನು ಮನೆಬಾಡಿಗೆಗೆ ವೆಚ್ಚ ಮಾಡಿದ ಮೇಲೆ ₹ 12,000 ಉಳಿದಿದೆ. ಅವನ ವೇತನ ಎಷ್ಟು
 (1)₹ 20,000
 (2)₹ 25,000
 (3)₹ 28,000
 (4)₹ 30,000
ಸರಿ ಉತ್ತರ

(1) ₹ 20,000


13.ಈ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳು ಎರಡು ತೀರ್ಮಾನಗಳು ಇದ್ದು I ಮತ್ತು II ಎಂದು ಹೇಳುವ ತೀರ್ಮಾನಗಳಲ್ಲಿ ಯಾವುದು ತಾರ್ಕಿಕ ವಿಧಾನದಿಂದ ಆಯ್ಕೆ ಆದದ್ದು ಎಂಬುದನ್ನು ಹೇಳಿಕೆ ಆಧರಿಸಿ ಕಂಡುಹಿಡಿಯಿರಿ.
ಹೇಳಿಕೆ:
 a.ಕೆಲವು ಒಂಟೆಗಳು ಹಡಗುಗಳು.
 b.ಯಾವ ಹಡಗು ದೋಣಿಯಲ್ಲ.
ತೀರ್ಮಾನ:
 I.ಕೆಲವು ಹಡಗುಗಳು ಒಂಟೆಗಳು.
 II.ಕೆಲವು ಒಂಟೆಗಳು ದೋಣಿಗಳಲ್ಲ,
 (1)I ಮಾತ್ರ ಸರಿ
 (2)II ಮಾತ್ರ ಸರಿ
 (3)I ಇಲ್ಲವೆ II ಸರಿ
 (4)I ಮತ್ತು II ಎರಡೂ ಸರಿ
ಸರಿ ಉತ್ತರ

(4) I ಮತ್ತು II ಎರಡೂ ಸರಿ


14.ನಗೀನಾ ಪುಷ್ಪಾಳಿಗಿಂತ ಉದ್ದ ಇದ್ದರೂ ಮನೀಷಾಳಷ್ಟು ಉದ್ದ ಇಲ್ಲ, ರೀನಾ ನಮಿತಾಗಿಂತ ಉದ್ದ ಇದ್ದಾಳೆ ; ಆದರೆ ಪುಷ್ಪಾಳಷ್ಟು ಉದ್ದ ಅಲ್ಲ, ಯಾರು ಅತಿ ಎತ್ತರ ?
 (1)ನಗೀನಾ
 (2)ಪುಷ್ಪ
 (3)ಮನಿಷ
 (4)ನಮಿತಾ
ಸರಿ ಉತ್ತರ

(3) ಮನಿಷ


15.20 ಗಾತ್ರದ ಮಾದರಿಯಲ್ಲಿ ಮಾಧ್ಯಬೆಲೆ 31∙5. ಎರಡು ಹೆಚ್ಚಿನ ವೀಕ್ಷಣೆಯಗಿ 35 ಮತ್ತು 39 ಅನ್ನು ಸೇರಿಸಿದರೆ ಹೊಸ ಮಾಧ್ಯವು
 (1)35∙167
 (2)32
 (3)35∙2
 (4)29∙5
ಸರಿ ಉತ್ತರ

(2) 32


16.ಸರಕಿನ ದರ ಪ್ರಾರಂಭದಲ್ಲಿ ₹ 1250 ಇದ್ದು ಮುಂದಿನ ತಿಂಗಳು 20% ಏರಿಕೆಯಾಯ್ತು. ಅದರ ಮುಂದಿನ ತಿಂಗಳು 10% ಇಳಿಕೆಯಾಯತು ಎರಡು ತಿಂಗಳ ಅನಂತರದ ಬೆಲೆ
 (1)₹1550
 (2)₹1650
 (3)₹1625
 (4)₹1350
ಸರಿ ಉತ್ತರ

(2) ₹1650 (4) ₹1350


17.ಒಂದು ಪೆಟ್ಟಿಗೆಯಲ್ಲಿ ಹತ್ತು ಚೆಂಡುಗಳಿದ್ದು ಆ ಪೈಕಿ ಆರು ಹಸಿರು ಮತ್ತು ನಾಲ್ಕು ಕೆಂಪು ಇದ್ದರೆ ಕೆಂಪು ಚೆಂಡು ತೆಗೆಯುವ ಸಂಭವನೀಯತೆ
 (1)0∙1
 (2)0∙5
 (3)1∙0
 (4)0∙4
ಸರಿ ಉತ್ತರ

(4) 0∙4


18.ತ್ಯಾಜ್ಯದಿಂದ ಇಂಧನ ತಯಾರಿಕೆಯಲ್ಲಿ ಉಪಯೋಗಿಸುವ ತಂತ್ರಜ್ಞಾನ
 (1)ಖನಿಜೀಕರಣ
 (2)ಘನೀಕರಣ
 (3)ಪ್ರತ್ಯೇಕೀಕರಣ
 (4)ಬಯೋಮೆಥನೈಸೇಷನ್
ಸರಿ ಉತ್ತರ

(4) ಬಯೋಮೆಥನೈಸೇಷನ್


19.ವರ್ಮಿ ಕಾಂಪೋಸ್ಟಿಂಗ್ ಅನ್ನು ಮಾಡುವ ಜೀವಿಗಳು
 (1)ಮಣ್ಣು ಜೀವಿಗಳು
 (2)ಎರೆಹುಳು
 (3)ಫಂಗೈ
 (4)ಕೀಟಗಳು
ಸರಿ ಉತ್ತರ

(2) ಎರೆಹುಳು


20.ಚಾಲುಕ್ಯರ ಸೈನ್ಯವು ಈ ಕೆಳಗಿನ ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು ?
 (1)ಚಾಲುಕ್ಯ ಸೇನೆ
 (2)ಕರ್ನಾಟ ಬಲ
 (3)ಕನ್ನಡ ಬಲ
 (4)ವಿಕ್ರಮಾದಿತ್ಯ ಬಲ
ಸರಿ ಉತ್ತರ

(2) ಕರ್ನಾಟ ಬಲ


21.ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಕರೆಯುತ್ತಿದ್ದುದು
 (1)ವಿಹಾರಗಳು
 (2)ಚೈತ್ಯಗಳು
 (3)ಘಟಿಕಾಲಯಗಳು
 (4)ಅಗ್ರಹಾರಗಳು
ಸರಿ ಉತ್ತರ

(3) ಘಟಿಕಾಲಯಗಳು


22.ದೇವಗಿರಿಯ ಸೀವುನ (ಯಾದವ) ರ ಕಾಲದಲ್ಲಿ ಹೊಸದಾಗಿ ಬಳಕೆಗೆ ಬಂದ ವಾಸ್ತು ಶೈಲಿ ಯಾವುದು ?
 (1)ದ್ರಾವಿಡ ಶೈಲಿ
 (2)ಇಂಡೋ-ಇಸ್ಲಾಮಿಕ್ ಶೈಲಿ
 (3)ಹೇಮಾದ ಪಂಥೀ ಶೈಲಿ
 (4)ನಾಗರ ಶೈಲಿ
ಸರಿ ಉತ್ತರ

(3) ಹೇಮಾದ ಪಂಥೀ ಶೈಲಿ


23.ಮೈಸೂರಿನ ‘ಓರಿಯಂಟಲ್ ಲೈಬ್ರರಿ’ ಯನ್ನು ಸ್ಥಾಪಿಸಿದ ದಿವಾನರು ಯಾರು ?
 (1)ದಿವಾನ್ ಪೂರ್ಣಯ್ಯ
 (2)ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ
 (3)ದಿವಾನ್ ಸಿ. ರಂಗಾಚಾರ್ಲು
 (4)ದಿವಾನ್ ಮಿರ್ಜಾ ಇಸ್ಮಾಯಿಲ್
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


24.ಮೌರ್ಯರ ಕಾಲದಲ್ಲಿದ್ದ ಆಡಳಿತ ಭಾಷೆ ಯಾವುದು ?
 (1)ಪ್ರಾಕೃತ್
 (2)ಸಂಸ್ಕೃತ
 (3)ಅರ್ಧಮಾಗಧಿ
 (4)ಖರೋಷ್ಠಿ
ಸರಿ ಉತ್ತರ

(1) ಪ್ರಾಕೃತ್


25.ಪ್ರಪಂಚದಲ್ಲಿಯೇ ಪ್ರಸಿದ್ದವಾದ ಖಜುರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು ?
 (1)ಪ್ರತಿಹಾರರು
 (2)ಪುಷ್ಯಭೂತಿಗಳು
 (3)ಚಂದೇಲರು
 (4)ಪಾಂಡ್ಯರು
ಸರಿ ಉತ್ತರ

(3) ಚಂದೇಲರು


26.ಹರ್ಷವರ್ಧನನ ಇತಿಹಾಸವನ್ನು ತಿಳಿಸುವ ‘‘ಹರ್ಷಚರಿತ’’ ಎಂಬ ಗ್ರಂಥವನ್ನು ಬರೆದವರು ?
 (1)ಬಾಣಭಟ್ಟ
 (2)ವಿಶಾಖದತ್ತ
 (3)ಕಾಳಿದಾಸ
 (4)ರವಿಕೀರ್ತಿ
ಸರಿ ಉತ್ತರ

(1) ಬಾಣಭಟ್ಟ


27.ಬಿಜಾಪುರದ ಗೋಳಗುಮ್ಮಟದ ನಿರ್ಮಾಪಕರು ಯಾರು ?
 (1)ಮೊಹಮ್ಮದ್ ಘೋಷ್
 (2)ಯೂಸ್ಫ್ ಆರಿಫ್
 (3)ಇಬ್ರಾಹಿಂ ಆದಿಲ್ ಷಾ
 (4)ಮಹಮ್ಮದ್ ಆದಿಲ್ ಷಾ
ಸರಿ ಉತ್ತರ

(4) ಮಹಮ್ಮದ್ ಆದಿಲ್ ಷಾ


28.2010 – 2011 ರ ಕೃಷಿ ಗಣತಿಯ ಪ್ರಕಾರ ಪರಿಶಿಷ್ಟ ಜಾತಿ (SC) ಯ ಗುಂಪಿನ ಒಟ್ಟು ಕಾರ್ಯನಿರ್ವಹಣೆಯ ಸ್ವಾಮ್ಯ
 (1)8%
 (2)20%
 (3)11∙7%
 (4)12∙5%
ಸರಿ ಉತ್ತರ

(3) 11∙7%


29.2011 ಗಣತಿಯ ಪ್ರಕಾರ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಇದೆ ?
 (1)ಕೊಪ್ಪಳ
 (2)ಮಂಡ್ಯ
 (3)ಚಾಮರಾಜನಗರ
 (4)ಕೊಡಗು
ಸರಿ ಉತ್ತರ

(4) ಕೊಡಗು


30.2011 ರ ಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಸಾಕ್ಷರತೆ ಪ್ರಮಾಣ ಏನು ?
 (1)59∙60%
 (2)68∙86%
 (3)65∙46%
 (4)63∙00%
ಸರಿ ಉತ್ತರ

(2) 68∙86%


31.ಜಿಲ್ಲಾ ಮಾನವ ಅಭಿವೃದ್ಧಿಯ ವರದಿಯ ಪ್ರಕಾರ ಕರ್ನಾಟಕದ ಯಾವ ಜಿಲ್ಲೆ ಅತ್ಯಂತ ಕೆಳ ಶ್ರೇಣಿಯಲ್ಲಿದೆ ?
 (1)ರಾಯಚೂರು
 (2)ಕೊಪ್ಪಳ
 (3)ಯಾದಗಿರಿ
 (4)ವಿಜಯಪುರ
ಸರಿ ಉತ್ತರ

(1) ರಾಯಚೂರು


32.ಸಾಮಾಜಿಕ ಬದಲಾವಣೆ ವಿವರಿಸಲು ಬಳಕೆ ಆಗುವ ಪದ
 (1)ಪಾಶ್ಚಾತ್ಯೀಕರಣ
 (2)ಸಂಸ್ಕೃತೀಕರಣ
 (3)ಆಧುನೀಕರಣ
 (4)ಈ ಮೇಲಿನ ಎಲ್ಲವೂ
ಸರಿ ಉತ್ತರ

(4) ಈ ಮೇಲಿನ ಎಲ್ಲವೂ


33.ಕರ್ನಾಟಕದಲ್ಲಿ ಮುಂಗಾರು ಬೆಳೆ ಕಾಲದ ಸಮಯ
 (1)ಫೆಬ್ರವರಿ ಯಿಂದ ಜೂನ್
 (2)ಏಪ್ರಿಲ್ ಯಿಂದ ಸೆಪ್ಟೆಂಬರ್
 (3)ಅಕ್ಟೋಬರ್ ಯಿಂದ ಡಿಸೆಂಬರ್
(4) ಜೂನ್ ಯಿಂದ ಸೆಪ್ಟೆಂಬರ್
ಸರಿ ಉತ್ತರ

(2) ಏಪ್ರಿಲ್ ಯಿಂದ ಸೆಪ್ಟೆಂಬರ್ (4) ಜೂನ್ ಯಿಂದ ಸೆಪ್ಟೆಂಬರ್


34.ಕರ್ನಾಟಕ ರಾಜ್ಯದ ಆರನೇ ವೇತನ ಆಯೋಗದ ಅಧ್ಯಕ್ಷರು
 (1)ಶ್ರೀ ಎಮ್.ಆರ್. ಶ್ರೀನಿವಾಸ ಮೂರ್ತಿ
 (2)ಶ್ರೀ ಮಹಮ್ಮದ ಸನಾಉಲ್ಲಾ
 (3)ಪ್ರೊ. ಯು.ಆರ್. ರಾವ್
 (4)ಜಸ್ಟೀಸ್ ಜಗನ್ನಾಥ ಶೆಟ್ಟಿ
ಸರಿ ಉತ್ತರ

(1) ಶ್ರೀ ಎಮ್.ಆರ್. ಶ್ರೀನಿವಾಸ ಮೂರ್ತಿ


35.ಕೃಷ್ಣಾ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗಳಿಗೆ ನೀರೊದಗಿಸುತ್ತದೆ
 (1)ಬಳ್ಳಾರಿ ಮತ್ತು ಬೀದರ್
 (2)ಬೆಳಗಾವಿ ಮತ್ತು ಉತ್ತರ ಕನ್ನಡ
 (3)ಶಿವಮೊಗ್ಗ ಮತ್ತು ಚಿತ್ರದುರ್ಗ
 (4)ಬಿಜಾಪುರ, ಗುಲ್ಬರ್ಗ ಮತ್ತು ರಾಯಚೂರು
ಸರಿ ಉತ್ತರ

(4) ಬಿಜಾಪುರ, ಗುಲ್ಬರ್ಗ ಮತ್ತು ರಾಯಚೂರು


36.ಗ್ರಾಮೀಣ ಪ್ರದೇಶದ ಬಡತನದ ರೇಖೆಯ ಕೆಳಗಿರುವ SC/ST ಜನರ ಮನೆಗೆ ನೀಡಿರುವ ವಿದ್ಯುತ್ ಸೌಲಭ್ಯ ಕರ್ನಾಟಕ ಸರ್ಕಾರದ ಈ ಯೋಜನೆ
 (1)ಸೌರಶಕ್ತಿ
 (2)ಭಾಗ್ಯಜ್ಯೋತಿ
 (3)ಕರ್ನಾಟಕ ಶಕ್ತಿ
 (4)ವಿದ್ಯುತ್ ಶಕ್ತಿ
ಸರಿ ಉತ್ತರ

(2) ಭಾಗ್ಯಜ್ಯೋತಿ


37.ಮನೋರಂಜನಾ ತೆರಿಗೆಯನ್ನು ವಿಧಿಸುವುದು
 (1)ರಾಜ್ಯ ಸರ್ಕಾರ
 (2)ಕೇಂದ್ರ ಸರ್ಕಾರ
 (3)ಇಬ್ಬರೂ
 (4)ಯಾರೂ ಅಲ್ಲ
ಸರಿ ಉತ್ತರ

(1) ರಾಜ್ಯ ಸರ್ಕಾರ


38.ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕ್ಯಾಲರಿ ಬೇಕಾಗುತ್ತದೆ. ಏಕೆಂದರೆ
 (1)ಗ್ರಾಮೀಣ ಜನರು ಹೆಚ್ಚು ಊಟಮಾಡುತ್ತಾರೆ
 (2)ಗ್ರಾಮೀಣ ಜನರ ದೇಹ ದಾರ್ಢ್ಯತೆ ಹೆಚ್ಚಿರುತ್ತದೆ
 (3)ಗ್ರಾಮೀಣ ಜನರು ಹೆಚ್ಚು ದೈಹಿಕ ಕೆಲಸ ಮಾಡುತ್ತಿರುತ್ತಾರೆ
 (4)ಗ್ರಾಮೀಣ ಜನರು ಹೆಚ್ಚು ವಿಶ್ರಾಂತಿ ತೆಗೆದು ಕೊಳ್ಳುತ್ತಾರೆ
ಸರಿ ಉತ್ತರ

(3) ಗ್ರಾಮೀಣ ಜನರು ಹೆಚ್ಚು ದೈಹಿಕ ಕೆಲಸ ಮಾಡುತ್ತಿರುತ್ತಾರೆ


39.‘ಸುವರ್ಣ ಕ್ರಾಂತಿ’ ಅವಧಿಯಲ್ಲಿ ಅತ್ಯಧಿಕ ಉತ್ಪಾದಕತೆಯಿತ್ತು.
 (1)ಸಾವಯವ ಕೃಷಿಯಲ್ಲಿ
 (2)ತೋಟಗಾರಿಕೆಯಲ್ಲಿ
 (3)ಮೀನುಗಾರಿಕೆನಲ್ಲಿ
 (4)ವಾಣಿಜ್ಯ ಬೆಳೆಗಳು
ಸರಿ ಉತ್ತರ

(2) ತೋಟಗಾರಿಕೆಯಲ್ಲಿ


40.ಮಹಿಳಾ ಸಮೃದ್ಧಿ ಯೋಜನೆಯ ಧ್ಯೇಯ
 (1)ಗ್ರಾಮೀಣ ಮಹಿಳೆಯರ ಅಂಚೆ ಕಛೇರಿಯ ಉಳಿತಾಯ ಠೇವಣೆಯ ಖಾತೆ ತೆರೆಯುವುದಾಗಿದೆ.
 (2)ಗ್ರಾಮೀಣ ಮಹಿಳೆಯರ ಸ್ವ-ಉದ್ಯೋಗವಾಗಿದೆ
 (3)ಗ್ರಾಮೀಣ ಮಹಿಳೆಯ ಆರೋಗ್ಯ ಸೌಲಭ್ಯವಾಗಿದೆ
 (4)ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ ಜೀವಸತ್ವ ಮಟ್ಟ ಹೆಚ್ಚಳವಾಗಿದೆ
ಸರಿ ಉತ್ತರ

(1) ಗ್ರಾಮೀಣ ಮಹಿಳೆಯರ ಅಂಚೆ ಕಛೇರಿಯ ಉಳಿತಾಯ ಠೇವಣೆಯ ಖಾತೆ ತೆರೆಯುವುದಾಗಿದೆ. (2) ಗ್ರಾಮೀಣ ಮಹಿಳೆಯರ ಸ್ವ-ಉದ್ಯೋಗವಾಗಿದೆ


41.ಪ್ರಥಮಾಕ್ಷರ ಪದ ‘ಮೋಡೆಮ್’ನ ವಿಸ್ತಾರ
 (1)ಮಾಡ್ಯುಲೇಷನ್ ಆಫ್ ಇಲೆಕ್ಟ್ರೋಮೈಗ್ನೆಟಿಕ್ ವೇವ್ಸ್
 (2)ಮಾಡ್ರನ್ ಮೆಥಡ್ ಆಫ್ ಟ್ರಾನ್ಸ್ಮಿಷನ್
 (3)ಮಾಡ್ಯುಲೇಷನ್ ಅಂಡ್ ಡೀಮಾಡ್ಯುಲೇಷನ್
 (4)ಮೋಡ್ಸ್ ಆಫ್ ಟ್ರಾನ್ಸ್ಮಿಷನ್
ಸರಿ ಉತ್ತರ

(3) ಮಾಡ್ಯುಲೇಷನ್ ಅಂಡ್ ಡೀಮಾಡ್ಯುಲೇಷನ್


42.ದ್ಯುತಿ ಎಳೆಗಳು ಬೆಳಕಿನ ಸಂಜ್ಞೆಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು
 (1)ಆಂತರಿಕ ಶಂಕು ವಕ್ರೀಭವನ
 (2)ದ್ವಿವಕ್ರೀಭವನ
 (3)ಬೆಳಕಿನ ಸಂಜ್ಞೆಗಳ ವಕ್ರೀಕರಣ
 (4)ಪೂರ್ಣ ಆಂತರಿಕ ಪ್ರತಿಫಲನ
ಸರಿ ಉತ್ತರ

(4) ಪೂರ್ಣ ಆಂತರಿಕ ಪ್ರತಿಫಲನ


43.ಒಂದು ಕಾಯದ ತಾಪ 98°F ಇದ್ದು ಅದನ್ನು ಸೆಲ್ಸಿಯಸ್ ನಲ್ಲಿ ಹೇಳಿದರೆ
 (1)36∙6°C
 (2)35∙5°C
 (3)3∙5°C
 (4)40°C
ಸರಿ ಉತ್ತರ

(1) 36∙6°C


44.ಪಾಲಿತೀನ್ (ಪ್ಲಾಸ್ಟಿಕ್) ಒಯ್ಯು ಚೀಲಗಳನ್ನು ಮರು ಬಿಕ್ರೀಯ ಬಳಕೆಗೆ ಒಳಪಡಿಸಬೇಕಾದರೆ ಅವುಗಳ ದಪ್ಪ
 (1)40 ಮೈಕ್ರಾನ್ ಗಿಂತ ಅಧಿಕ ಇರಬೇಕು
 (2)30 ಮೈಕ್ರಾ ನ್ ಗಿಂತ ಅಧಿಕ ಇರಬೇಕು
 (3)40 ಮೈಕ್ರಾ ನ್ ಗಿಂತ ಕಡಿಮೆ ಇರಬೇಕು
 (4)30 ಮೈಕ್ರಾ ನ್ ಗಿಂತ ಕಡಿಮೆ ಇರಬೇಕು
ಸರಿ ಉತ್ತರ

(1) 40 ಮೈಕ್ರಾ ನ್ ಗಿಂತ ಅಧಿಕ ಇರಬೇಕು


45.ಖೋಟಾನೋಟಿನ ಪತ್ತೆಗೆ ಬಳಕೆ ಮಾಡುವ ವಿಕಿರಣ ಯಾವುದು?
 (1)ಅವಿಕೆಂಪು ವಿಕಿರಣ
 (2)ಗಾಮಾ ವಿಕಿರಣ
 (3)ಅತಿನೇರಳೆ ವಿಕಿರಣ
 (4)ಎಕ್ಸ್-ರೇ ವಿಕಿರಣ
ಸರಿ ಉತ್ತರ

(3) ಅತಿನೇರಳೆ ವಿಕಿರಣ


46.ಸಮುದ್ರದಲ್ಲಿ ಮುಳುಗಿದ ವಸ್ತುವಿನ ಪತ್ತೆ ಮಾಡುವ ಸಾಧನ
 (1)ಸೋನಾರ್
 (2)ಲೇಸರ್
 (3)ರಾಡಾರ್
 (4)ಲಿಡಾರ್
ಸರಿ ಉತ್ತರ

(1) ಸೋನಾರ್


47.ಮಣ್ಣಿನಲ್ಲಿ ಕಂಡು ಬರುವ ಆಮ್ಲ
 (1)ಅಸಿಟಿಕ್ ಆಮ್ಲ
 (2)ಫಾರ್ಮಿಕ್ ಆಮ್ಲ
 (3)ಹ್ಯೂಮಿಕ್ ಆಮ್ಲ
 (4)ಕಾರ್ಬಾನಿಕ್ ಆಮ್ಲ
ಸರಿ ಉತ್ತರ

(3) ಹ್ಯೂಮಿಕ್ ಆಮ್ಲ


48.ಈ ಕೆಳಕಂಡ ಯಾವುದು ಪ್ರಪಂಚದ ಅತಿ ಹೆಚ್ಚಿನ ಶೇಖಡಾವಾರು ಅರಣ್ಯ ಪ್ರದೇಶವನ್ನು ಒಳಗೊಂಡಿದೆ ?
 (1)ಸಮಶೀತೋಷ್ಣ ಕೋನಿಫರಸ್ ಕಾಡುಗಳು
 (2)ಸಮಶೀತೋಷ್ಣ ಡೆಸಿಡ್ಯುಯಸ್ ಕಾಡುಗಳು
 (3)ಉಷ್ಣ ಮಾನ್ಸೂನ್ ಕಾಡುಗಳು
 (4)ಉಷ್ಣ ಮಳೆ ಕಾಡುಗಳು
ಸರಿ ಉತ್ತರ

(1) ಸಮಶೀತೋಷ್ಣ ಕೋನಿಫರಸ್ ಕಾಡುಗಳು


49.ಒತ್ತಿಟ್ಟ ಸಹಜ ಅನಿಲ
 (1)ಪ್ರೊಪೇನ್
 (2)ಮೀಥೇನ್
 (3)ಈಥೇನ್
 (4)ಬ್ಯೂಟೇನ್
ಸರಿ ಉತ್ತರ

(2) ಮೀಥೇನ್


50.ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ?
 (1)ಕಬ್ಬಿಣ
 (2)ಸಿಲಿಕಾನ್
 (3)ಆಮ್ಲಜನಕ
 (4)ಇಂಗಾಲ
ಸರಿ ಉತ್ತರ

(3) ಆಮ್ಲಜನಕ


51.ಎಕ್ಸ್-ಸಿಟು ಸಂರಕ್ಷಣೆಗೆ ಉದಾಹರಣೆ
 (1)ರಾಷ್ಟ್ರೀಯ ಉದ್ಯಾನವನ
 (2)ವನ್ಯಜೀವಿ ರಕ್ಷಣಾಧಾಮ
 (3)ಸಸ್ಯೋದ್ಯಾನ
 (4)ಉಲ್ಲುಗಾವಲು
ಸರಿ ಉತ್ತರ

(3) ಸಸ್ಯೋದ್ಯಾನ


52.ಪಟ್ಟಿ I ಮತ್ತು ಪಟ್ಟಿ II ಜೋಡಿಸಿ ಸರಿಯಾದ ಉತ್ತರವನ್ನು ಸಂಕೇತಾಧಾರಿತವಾಗಿ ಪತ್ತೆಮಾಡಿ:
  ಪಟ್ಟಿ I  ಪಟ್ಟಿ II
 A.ಸೈಕ್ರೋಮೀಟರ್I.ವಾಯುಮಂಡಲ ಆದ್ರತೆ
 B.ಪೈರನೋಮೀಟರ್II.ಸೌರವಿಕಿರಣತೆ
 C.ಅನಿಮೋಮೀಟರ್III.ವಾಯು ವೇಗ
 D.ಬಾರೋಮೀಟರ್IV.ವಾಯುಭಾರ ಒತ್ತಡ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
  ABCD
 (1)IIIIIIIV
 (2)IVIIIIII
 (3)IIIIIIIV
 (4)IIIIVIII
ಸರಿ ಉತ್ತರ

(1) I II III IV


53.ಒಂದು ರೈಲಿಗೆ ‘‘ಬುಲ್ಲೆಟ್ ರೈಲು’’ ಎಂದು ಕರೆಯಲು ಅದರ ವೇಗ ಈ ಮಿತಿಯಲ್ಲಿರಬೇಕು
 (1)100 – 150 ಕಿ.ಮೀ./ ತಾಸು
 (2)150 – 200 ಕಿ.ಮೀ./ ತಾಸು
 (3)250 – 350 ಕಿ.ಮೀ./ ತಾಸು
 (4)350 – 450 ಕಿ.ಮೀ./ ತಾಸು
ಸರಿ ಉತ್ತರ

(3) 250 – 350 ಕಿ.ಮೀ./ ತಾಸು


54.ಶರೀರದಲ್ಲಿ ಆಯೋಡಿನ್ ಅನ್ನು ಐಚ್ಛಿಕವಾಗಿ ಸಾಂದ್ರೀಕರಿಸಿಕೊಳ್ಳುವ ಭಾಗ ಇದು
 (1)ಥೈಮಸ್
 (2)ಥೈರಾಯಿಡ್
 (3)ಪ್ಲೀಹ
 (4)ಪ್ಯಾರಾಥೈರಾಯಿಡ್
ಸರಿ ಉತ್ತರ

(2) ಥೈರಾಯಿಡ್


55.ಎಲ್ಲಾ ರಕ್ತದ ಗುಂಪುಗಳಿಂದ ರಕ್ತವನ್ನು ಅಂಗೀಕರಿಸಿಕೊಳ್ಳುವ ರಕ್ತದ ಗುಂಪು ಇದು
 (1)
 (2)
 (3)ಬಿ
 (4)ಎ ಬಿ
ಸರಿ ಉತ್ತರ

(4) ಎ ಬಿ


56.ಕಾರ್ಬನ್ ಮೋನಾಕ್ಸೈಡಿನ ವಿಷಕಾರಿ ಗುಣಕ್ಕೆ ಕಾರಣ
 (1)ಕಾರ್ಬನ್ ಡೈಆಕ್ಸೈಡು ಪೂರೈಕೆ ಇಲ್ಲವಾಗುವುದು
 (2)ಕಾರ್ಬನ್ ಡೈಆಕ್ಸೈಡು ಆಗಿ ಪರಿವರ್ತನೆ ಆಗುವುದು
 (3)ರಕ್ತದ ಹಿಮೋಗ್ಲೋಬಿನ್ ನೊಂದಿಗೆ ಸಂಯೋಗ
 (4)ಧ್ವನಿ ಪಟ್ಟಿಗೆ ಮುಚ್ಚಿಹಾಕುವುದು
ಸರಿ ಉತ್ತರ

(3) ರಕ್ತದ ಹಿಮೋಗ್ಲೋಬಿನ್ ನೊಂದಿಗೆ ಸಂಯೋಗ


57.ರಾಡಿ ನೀರಿನ ಶುದ್ಧೀಕರಣ ಪಟಿಕದಿಂದ ಹೀಗೆ
 (1)ಗರಣೀಕರಣ
 (2)ಡಯಾಲಿಸಿಸ್
 (3)ಹೀರಿಕೆ
 (4)ನಿಜ ದ್ರಾವಣ ಉಂಟಾಗುವಿಕೆ
ಸರಿ ಉತ್ತರ

(1) ಗರಣೀಕರಣ


58.ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆ ಅನಿಲವಲ್ಲ?
 (1)CO₂
 (2)CH₄
 (3)ಎಥೇನ್
 (4)N₂O
ಸರಿ ಉತ್ತರ

(3) ಎಥೇನ್


59.ಅಂಡಾಶಯದ ಮಾನವ ಮೊಟ್ಟೆ ಬಿಡುಗಡೆಯಾದಾಗ
 (1)ಒಂದು ವೈ ಕ್ರೋಮೋಸೋಮ್
 (2)ಒಂದು ಎಕ್ಸ್ ಕ್ರೋಮೋಸೋಮ್
 (3)ಎರಡು ಎಕ್ಸ್ ಕ್ರೋಮೋಸೋಮ್ ಗಳು
 (4)ಎಕ್ಸ್ ವೈ ಕ್ರೋಮೋಸೋಮ್ ಗಳು
ಸರಿ ಉತ್ತರ

(2) ಒಂದು ಎಕ್ಸ್ ಕ್ರೋಮೋಸೋಮ್


60.ಪ್ರಾಣಿಗಳು, ಸಸ್ಯಗಳು ಮತ್ತು ಇತರ ಸೂಕ್ಷ್ಮಾಣು ಜೀವಿಗಳ ಪಳೆಯುಳಿಕೆಗಳು ಇಲ್ಲಿ ಕಂಡುಬರುತ್ತವೆ
 (1)ಪ್ಲುಟೋನಿಕ್ ಬಂಡೆಗಳು
 (2)ಸಂಚಿತ ಶಿಲೆಗಳು
 (3)ಮೆಟಾಮಾರ್ಫಿಕ್ ಬಂಡೆಗಳು
 (4)ಅಗ್ನಿ ಶಿಲೆಗಳು (ಇಗ್ನೀಷಿಯಸ್ ಬಂಡೆಗಳು)
ಸರಿ ಉತ್ತರ

(2) ಸಂಚಿತ ಶಿಲೆಗಳು


61.ಸಾರಜನಕವನ್ನು ಹಿಡಿದಿಡುವ ಸಾಮಾರ್ಥ್ಯಉಳ್ಳ ಸ್ವತಂತ್ರವಾಗಿ ಜೀವಿಸಬಲ್ಲ ಒಂದು ಬ್ಯಾಕ್ಟಿರಿಯಾ
 (1)ಕ್ಲಾಸ್ಟ್ರೀಡಿಯಂ
 (2)ಸೂಡೊಮೋನಾಸ್
 (3)ಬ್ಯಾಸಿಲ್ಲಸ್
 (4)ಸೈಫಿಲೊಕಾಕ್ಕಸ್
ಸರಿ ಉತ್ತರ

(1) ಕ್ಲಾಸ್ಟ್ರೀಡಿಯಂ


62.ಸಕ್ಕರೆಯಿಂದ ವಾಣಿಜ್ಯ ಮೂಲದ ಲಿಂಬೆ ಆಮ್ಲದ ಹುಳಿಯುವಿಕೆಯಲ್ಲಿ ಭಾಗಿಯಾದ ಜೀವಿ
 (1)ಸಿಟ್ರಸ್ ಹಣ್ಣು
 (2)ಬ್ಯಾಕ್ಟೀರಿಯಾ
 (3)ಪೆನಿಸಿಲಿಯಂ
 (4)ಆ್ಯಸ್ಪರ್ಜಿಲಸ್
ಸರಿ ಉತ್ತರ

(4) ಆ್ಯಸ್ಪರ್ಜಿಲಸ್


63.ಬಳಕೆದಾರ ಬೆಲೆ ಸೂಚ್ಯಂಕದಲ್ಲಿ ಯಾವ ಬಾಬ್ತು ಅತಿ ಹೆಚ್ಚಿನ ತೂಕವನ್ನು ಹೊಂದಿದೆ ?
 (1)ಬಾಡಿಗೆ
 (2)ಆಹಾರ
 (3)ಇಂಧನ
 (4)ವಸ್ತ್ರ
ಸರಿ ಉತ್ತರ

(2) ಆಹಾರ


64.‘ಸರ್ವೇಕ್ಷಣ’ ಒಂದು ತ್ರೈಮಾಸಿಕ ನಿಯತಕಾಲಿಕೆಯಾಗಿದ್ದು ಇದು ಇವರಿಂದ ಪ್ರಕಟಿಸಲ್ಪಡುತ್ತದೆ
 (1)ನ್ಯಾಷನಲ್ ಸ್ಯಾಂಪಲ್ ಸರ್ವೆ (ರಾಷ್ಟ್ರೀಯ ಮಾದರಿ ಸಮೀಕ್ಷೆ)
 (2)ಸೆಂಟ್ರಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಕೇಂದ್ರ ಸಂಖ್ಯಾ ಶಾಸ್ತ್ರೀಯ ಕಛೇರಿ)
 (3)ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ
 (4)ಲೇಬರ್ ಬ್ಯೂರೋ
ಸರಿ ಉತ್ತರ

(1) ನ್ಯಾಷನಲ್ ಸ್ಯಾಂಪಲ್ ಸರ್ವೆ (ರಾಷ್ಟ್ರೀಯ ಮಾದರಿ ಸಮೀಕ್ಷೆ)


65.2018 ನೇ ಸಾಲಿನ ಭೌತಶಾಸ್ತ್ರ ನೋಬೆಲ್ ಪಾರಿತೋಷಕವು ಈ ಕೆಳಗಿನ ಕ್ಷೇತ್ರದಲ್ಲಾದ ಸಂಶೋಧನೆಗಾಗಿ ನೀಡಲ್ಪಟ್ಟಿತು
 (1)ನ್ಯೂಕ್ಲಿಯರ್ ಭೌತಶಾಸ್ತ್ರ
 (2)ಖಗೋಳ ಭೌತಶಾಸ್ತ್ರ
 (3)ಕಾಂತತ್ವ
 (4)ಲೇಸರ್ ಭೌತಶಾಸ್ತ್ರ
ಸರಿ ಉತ್ತರ

(4) ಲೇಸರ್ ಭೌತಶಾಸ್ತ್ರ


66.2018 ರ ವಿಶ್ವ ಫಿಫಾ ಕಪ್ ನಲ್ಲಿ ‘ಚಿನ್ನದ ಚೆಂಡು’ ಇವರಿಗೆ ನೀಡಲ್ಪಟ್ಟಿತು
 (1)ಲೂಕಾ ಮೊಡ್ರಿಕ್
 (2)ಹ್ಯಾರಿ ಕೇನ್
 (3)ಥಿಬೌಟ್ ಕರ್ಟಿಯಸ್
 (4)ಈಡನ್ ಹಜಾರ್ಡ್
ಸರಿ ಉತ್ತರ

(1) ಲೂಕಾ ಮೊಡ್ರಿಕ್


67.ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್ ಗಳನ್ನು ಈ ದೇಶದ ಸ್ಪರ್ಧಾಳುಗಳಿಂದ ಗೆಲ್ಲಲ್ಪಟ್ಟಿತು
 (1)ರಷ್ಯಾ
 (2)ದಕ್ಷಿಣ ಆಫ್ರಿಕಾ
 (3)ಭಾರತ
 (4)ಬ್ರೆಝಿಲ್
ಸರಿ ಉತ್ತರ

(3) ಭಾರತ


68.2018 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯು ಇವರಿಗೆ ನೀಡಲ್ಪಟ್ಟಿತು
 (1)ಎಸ್. ರಾಮಕೃಷ್ಣನ್
 (2)ಚಂದ್ರ ಶೇಖರ ಕಂಬಾರ್
 (3)ಶಂಕರ್ ಘೋಷ್
 (4)ಅಮಿತವ್ ಘೋಷ್
ಸರಿ ಉತ್ತರ

(4) ಅಮಿತವ್ ಘೋಷ್


69.ಇತ್ತೀಚೆಗೆ ಉಡಾವಣೆಯಾದ GSAT-29 ಯನ್ನು ಈ ಕೆಳಗಿನ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ
 (1)ಸಂಪರ್ಕ
 (2)ಹವಾಮಾನ ಮುನ್ಸೂಚಿ
 (3)ಭಾರತೀಯ ವಾಯು ಪಡೆ
 (4)ಹಿಂದೂ ಮಹಾಸಾಗರದಲ್ಲಿನ ಬದಲಾವಣೆಗಳ 14 ಮೇಲ್ವಿಚಾರಣೆಗಾಗಿ
ಸರಿ ಉತ್ತರ

(1) ಸಂಪರ್ಕ


70.ಸ್ಪಿನ್ ನೇಕರ್ ಎಂಬುದು ವಿಶ್ವದ ಅತಿ ದೊಡ್ಡದಾದ
 (1)ವಾಣಿಜ್ಯಾತ್ಮಕ ರಾಕೆಟ್
 (2)ವಿಮಾನ ವಾಹಕ
 (3)ಮೆದುಳು ಅಣಕ ಸೂಪರ್ ಕಂಪ್ಯೂಟರ್
 (4)ಜಲ ಜನಕಾಧಾರಿತವಾಗಿ ಚಲಿಸುವ ಚಾಲಕ ರಹಿತ ರೇಸ್ ಕಾರು
ಸರಿ ಉತ್ತರ

(3) ಮೆದುಳು ಅಣಕ ಸೂಪರ್ ಕಂಪ್ಯೂಟರ್


71.2018 ರ ಡಿಸೆಂಬರ್ ನಲ್ಲಿ ನಿಧನರಾದ ಪದ್ಮಶ್ರೀ ಮುಶಿರುಲ್ ಹಸನ್ ರವರು ಈ ಕೆಳಗಿನ ಕ್ಷೇತ್ರದಲ್ಲಿನ ಅವರ ಕೊಡುಗೆಯಿಂದ ಖ್ಯಾತರಾಗಿದ್ದರು
 (1)ಇತಿಹಾಸ
 (2)ಅರ್ಥಶಾಸ್ತ್ರ
 (3)ವೈದ್ಯಕೀಯ ಸೇವೆ
 (4)ಸಂಗೀತ
ಸರಿ ಉತ್ತರ

(1) ಇತಿಹಾಸ


72.ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸ್ತುತದ ಗೌರ್ನರ್ ಯಾರು?
 (1)ಊರ್ಜಿತ್ ಪಟೇಲ್
 (2)ಶಕ್ತಿಕಾಂತ ದಾಸ್
 (3)ಕೃಷ್ಣಮೂರ್ತಿ ಸುಬ್ರಮಣ್ಯನ್
 (4)ಸುನೀಲ್ ಅರೋರಾ
ಸರಿ ಉತ್ತರ

(2) ಶಕ್ತಿಕಾಂತ ದಾಸ್


73.ಈ ಕೆಳಗಿನ ಯಾವ ಸಿನಿಮಾವು 91 ಅಕಾಡೆಮಿ ಪ್ರಶಸ್ತಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆ ಪ್ರವರ್ಗಗಳಲ್ಲಿ ಗೆಲುವನ್ನು ಗಳಿಸಿತು ?
 (1)ಗ್ರೀನ್ ಬುಕ್
 (2)ರೋಮಾ
 (3)ಬೊಹೆಮಿಯನ್ ರ್ಯಾಪ್ಸೊಡಿ
 (4)ಬ್ಲಾಕ್ ಪಾಂಥರ್
ಸರಿ ಉತ್ತರ

(3) ಬೊಹೆಮಿಯನ್ ರ್ಯಾಪ್ಸೊಡಿ


74.2018 ನೇ ಸಾಲಿನ HDI ರ್ಯಾಂಕಿಂಗ್ ನಲ್ಲಿ ಭಾರತದ ರ್ಯಾಂಕ್ (ಶ್ರೇಣಿಯು)
 (1)130
 (2)136
 (3)127
 (4)143
ಸರಿ ಉತ್ತರ

(1) 130


75.ಜಿ.ಎಸ್.ಟಿ. ಯಿಂದ ವಿನಾಯ್ತಿ ಪಡೆದದ್ದು
 (1)ಪೆಟ್ರೋಲಿಯಮ್ ಮತ್ತು ಜೈವಿಕ ಅನಿಲ
 (2)ಔಷಧೀಯ ಗ್ರೇಡ್ ಮತ್ತು ಉಪ್ಪು
 (3)ಪೆಟ್ರೋಲಿಯಮ್ ಮತ್ತು ಆಲ್ಕೋಹಾಲ್
 (4)ಪೆಟ್ರೋಲಿಯಮ್ ಮತ್ತು ಶಿಶು ಆಹಾರ
ಸರಿ ಉತ್ತರ

(3) ಪೆಟ್ರೋಲಿಯಮ್ ಮತ್ತು ಆಲ್ಕೋಹಾಲ್


76.ಕೊಲೆಸ್ಟರಾಲ್ ನಿಂದ ಪಡೆಯಲಾಗದ್ದು ಯಾವುದು ?
 (1)ಸ್ಟಿರಾಯ್ಡ್ ಹಾರ್ಮೋನುಗಳು
 (2)ಬೈಲ್ ಲವಣಗಳು
 (3)ಅಲ್ಡೋಸ್ಟಿರೋನ್
 (4)ಗ್ಲುಕಜನ್
ಸರಿ ಉತ್ತರ

(4) ಗ್ಲುಕಜನ್


77.ಭಾರತದಲ್ಲಿ ಜೀವಿಗೋಲ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ
 (1)ನಂದಾ ದೇವಿ
 (2)ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
 (3)ನೀಲಗಿರಿ
 (4)ಮಾನಸ್
ಸರಿ ಉತ್ತರ

(3) ನೀಲಗಿರಿ


78.ಈ ಶಿಲೆಯು ರೂಪಾಂತರ ಶಿಲೆಗೆ ಅತ್ಯುತ್ತಮ ಉದಾಹರಣೆ
 (1)ಷಿಸ್ಟ್
 (2)ಬಸಾಲ್ಟ್
 (3)ಬೆಣಜು
 (4)ಅಭ್ರಕ
ಸರಿ ಉತ್ತರ

(1) ಷಿಸ್ಟ್


79.ಸಹಜ ತಾಪ ತಗ್ಗಿಕೆ ವಾಯುಮಂಡಲದಲ್ಲಿ
 (1)6∙5°C/1000 m
 (2)6∙5°C/100 m
 (3)6∙5 K/1000 m
 (4)6∙5 K/100 m
ಸರಿ ಉತ್ತರ

(1) 6∙5°C/1000 m


80.ಡೋಲ್ ಡ್ರಮ್ಸ್ ಈ ವಲಯ
 (1)ಅಂತರ್ ಮೇಲ್ಮೈ ಅಭಿಸರಣ
 (2)ಅಂತರ್ ವಲಯ ವಿಸರಣ
 (3)ಸ್ಥಳೀಯ ಮಾರುತ
 (4)ಫ್ರಂಟೋಲಿಸಿಸ್
ಸರಿ ಉತ್ತರ

(1) ಅಂತರ್ ಮೇಲ್ಮೈ ಅಭಿಸರಣ


81.ಯಾವ ಕಲ್ಲಿದ್ದಲು ಗಣಿಯಿಂದ ಗರಿಷ್ಠ ಕಲ್ಲಿದ್ದಲು ಲಭ್ಯ ?
 (1)ತಲಚೇರ್
 (2)ರಾಣಿಗಂಜ್
 (3)ಬೊಕಾರೋ
 (4)ಝಾರಿಯಾ
ಸರಿ ಉತ್ತರ

(4) ಝಾರಿಯಾ


82.ಸಮಾನಾಂತರವಾದ ಎರಡು ಫಾಲ್ಟ್ ಗಳು ಕುಸಿಯುವ ಮುಖಾಂತರ ಉಂಟಾಗುವ ಕಣಿವೆ
 (1)ರಿಫ್ಟ್ ಕಣಿವೆ
 (2)ನೈಸರ್ಗಿಕ ಇಳಿಜಾರು
 (3)ಸ್ತರಭಂಗದಿಂದ ಕೂಡಿರುವ ಏರುಭೂಮಿ
 (4)ಪರ್ವತಗಳ ಅಡ್ಡ
ಸರಿ ಉತ್ತರ

(1) ರಿಫ್ಟ್ ಕಣಿವೆ


83.ವಾಯು ಮಂಡಲದ ಅತ್ಯಂತ ಕೆಳಪದರ
 (1)ಅಯಾನು ಗೋಲ
 (2)ಮೆಸೋಗೋಲ
 (3)ಸ್ತರಗೋಲ
 (4)ಟ್ರೋಪೋಗೋಲ
ಸರಿ ಉತ್ತರ

(4) ಟ್ರೋಪೋಗೋಲ


84.ಸ್ಥಳಾಕೃತಿಯ ನಕ್ಷೆಗಳು ಇದರಿಂದ ಸಿದ್ಧಪಡಿಸಲ್ಪಡುತ್ತವೆ
 (1)ಭಾರತ ಜನಗಣತಿ
 (2)ಭಾರತದ ಸಮೀಕ್ಷೆ
 (3)ಭಾರತದ ಭೂಗರ್ಭ ಸಮೀಕ್ಷೆ
 (4)ಅರಣ್ಯ ಸಂಶೋಧನಾ ಸಂಸ್ಥೆ
ಸರಿ ಉತ್ತರ

(2) ಭಾರತದ ಸಮೀಕ್ಷೆ


85.ಭಾರತದ ರಾಷ್ಟ್ರೀಯ ಆದಾಯ ಮಾಪನದ ಮೊದಲ ಪ್ರಯತ್ನ ಕೈಗೊಂಡವರು
 (1)ವಿ.ಕೆ.ಆರ್.ವಿ. ರಾವ್
 (2)ಅಬ್ದುಲ್ ಅಜೀಜ್
 (3)ಎಮ್. ಗೋವಿಂದ ರಾವ್
 (4)ಹನುಮಂತರಾವ್
ಸರಿ ಉತ್ತರ

(1) ವಿ.ಕೆ.ಆರ್.ವಿ. ರಾವ್


86.ಭಾರತದಲ್ಲಿ ವಿತ್ತೀಯ ನೀತಿ ರೂಪಿಸುವುದು ಯಾವುದು ?
 (1)ಯೋಜನಾ ಆಯೋಗ
 (2)ವಿತ್ತೀಯ ಆಯೋಗ
 (3)ಹಣಕಾಸು ಸಚಿವಾಲಯ
 (4)ಆರ್.ಬಿ.ಐ.
ಸರಿ ಉತ್ತರ

(3) ಹಣಕಾಸು ಸಚಿವಾಲಯ


87.ವಿಜಯ ಕೇಲ್ಕರ ಸಮಿತಿ ಭಾರತದಲ್ಲಿ ರಚನೆಯಾದದ್ದು ಇದರ ಸಂಬಂಧಿ
 (1)ತೆರಿಗೆ ಸುಧಾರಣೆ
 (2)ಹಣಕಾಸು ವಲಯ
 (3)ಪಂಚಾಯತ್ ರಾಜ್
 (4)ಸಾರ್ವಜನಿಕ ವಲಯ ಉದ್ದಿಮೆಗಳು
ಸರಿ ಉತ್ತರ

(1) ತೆರಿಗೆ ಸುಧಾರಣೆ


88.ಪಂಚಾಯತ್ ರಾಜ್ ಸಂಸ್ಥೆಗಳನ್ನು ಆಧರಿಸಿದ ವಿಕೇಂದ್ರೀಕೃತ ಯೋಜನೆಯನ್ನು ಶಿಫಾರಸು ಮಾಡಿದವರು
 (1)ಬಲವಂತರಾಯ್ ಮೆಹ್ತಾ ಸಮಿತಿ
 (2)ಮಹಾಲನೋಬಿಸ್ ಸಮಿತಿ
 (3)ಅಶೋಕ್ ಮೆಹ್ತಾ ಸಮಿತಿ
 (4)ಗಾಡ್ಗಿಲ್ ಸಮಿತಿ
ಸರಿ ಉತ್ತರ

(1) ಬಲವಂತರಾಯ್ ಮೆಹ್ತಾ ಸಮಿತಿ


89.ಅತಿ ಹೆಚ್ಚಿನ ಜನರನ್ನು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು, ಅವರ ನೈಜ ಕೊಡುಗೆಯು ಸೀಮಾಂತ ಇಲ್ಲವೆ ಋಣಾತ್ಮಕವಾಗಿದ್ದರೆ, ಅದು
 (1)ಋತುಮಾನ ನಿರುದ್ಯೋಗ
 (2)ಚಕ್ರಿಯಾ ನಿರುದ್ಯೋಗ
 (3)ತಾಂತ್ರಿಕ ನಿರುದ್ಯೋಗ
 (4)ಮರೆಮಾಚಿದ ನಿರುದ್ಯೋಗ
ಸರಿ ಉತ್ತರ

(4) ಮರೆಮಾಚಿದ ನಿರುದ್ಯೋಗ


90.ಪ್ರಸ್ತುತ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಹೆಚ್.ಡಿ.ಐ.) ಶಿಕ್ಷಣವನ್ನು ಅಳೆಯುವ ವಿಧಾನವು
 (1)ಪ್ರಾಥಮಿಕ ಶಾಲಾ ದಾಖಲಾತಿಯ 1313 ಮತ್ತು ವಯಸ್ಕರ ಸಾಕ್ಷರತೆಯ 2323
 (2)ಪ್ರಾಥಮಿಕ ಶಾಲಾ ದಾಖಲಾತಿಯ 2323 ಮತ್ತು ವಯಸ್ಕರ ಸಾಕ್ಷರತೆಯ 1313
 (3)25 ವರ್ಷಕ್ಕೆ ಮೇಲ್ಪಟ್ಟು ವಯಸ್ಕರ ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಮತ್ತು ಶಾಲೆಗೆ ಸೇರುವ ವಯೋಮಾನದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಪಡೆಯಲಿರುವ ನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳು
 (4)ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಹಾಗೂ ಪ್ರಾಥಮಿಕ ಮತ್ತು ಶಾಲಾ ದಾಖಲಾತಿ ಸೂಚ್ಯಂಕ
ಸರಿ ಉತ್ತರ

(3) 25 ವರ್ಷಕ್ಕೆ ಮೇಲ್ಪಟ್ಟು ವಯಸ್ಕರ ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಮತ್ತು ಶಾಲೆಗೆ ಸೇರುವ ವಯೋಮಾನದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಪಡೆಯಲಿರುವ ನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳು


91.ಕರ್ಕ ರೇಖೆ (ಟ್ರಾಪಿಕ್ ಆಫ್ ಕ್ಯಾನ್ಸರ್) ಹಾದು ಹೋಗದ ದೇಶ
 (1)ಥೈಲ್ಯಾಂಡ್
 (2)ವಿಯಟ್ನಾಂ
 (3)ಮಯನ್ಮಾರ್
 (4)ಮೆಕ್ಸಿಕೋ
ಸರಿ ಉತ್ತರ

(1) ಥೈಲ್ಯಾಂಡ್ (2) ವಿಯಟ್ನಾಂ


92.ಕೆಳಗಿನ ರಾಜ್ಯಗಳಲ್ಲಿ ಯಾವುದು ಅತ್ಯಂತ ನಗರೀಕರಣಕೊಳಗಾಗಿರುವ ರಾಜ್ಯ ?
 (1)ಹರಿಯಾಣ
 (2)ಮಧ್ಯ ಪ್ರದೇಶ
 (3)ಉತ್ತರ ಪ್ರದೇಶ
 (4)ಪಂಜಾಬ್
ಸರಿ ಉತ್ತರ

(4) ಪಂಜಾಬ್


93.‘‘ನೀಲಗಿರಿ ಬೆಟ್ಟಗಳಲ್ಲಿ’’ ಕಾಣದ ಜನಾಂಗ ಯಾವುದು ?
 (1)ತೋಡ
 (2)ಬಡಗ
 (3)ಕೋಟ
 (4)ಇರುಳಿಗ
ಸರಿ ಉತ್ತರ

(4) ಇರುಳಿಗ


94.ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಅಂತರ ………..ಗಿಂತ ಹೆಚ್ಚಿನದಾಗಿರದು.
 (1)ಎಂಟು ತಿಂಗಳು
 (2)ಆರು ತಿಂಗಳು
 (3)ನಾಲ್ಕು ತಿಂಗಳು
 (4)ಮೂರು ತಿಂಗಳು
ಸರಿ ಉತ್ತರ

(2) ಆರು ತಿಂಗಳು


95.ಕೆಳಗಿನವುಗಳನ್ನು ಸರಿಯಾದ ಉತ್ತರ ಆಯ್ಕೆಮಾಡಿ ಹೊಂದಿಸಿರಿ :
  ಪಟ್ಟಿ I  ಪಟ್ಟಿ II
 A.ಆಫೀಸ್ ಆಫ್ ಪ್ರಾಫಿಟ್ ಸಮಿತಿI.ಗೃಹ ಇಲಾಖೆಯ ಅಂಗ
 B.ನೀತಿ ಆಯೋಗII.ಸಂಸತ್ತಿನ ಜಂಟೀ ಸಮಿತಿ
 C.ಎಸ್ಟಿಮೇಟ್ಸ್ ಸಮಿತಿIII.ಶ್ರೇಷ್ಠ ಚಿಂತನಾ ಚಾವಡಿ
 D.ಭಾರತದ ಜನಗಣತಿIV.ಲೋಕಸಭೆಯ ಸಮಿತಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
  ABCD
 (1)IVIIIIII
 (2)IIIIIIIV
 (3)IIIIIIVI
 (4)IIIIIVII
ಸರಿ ಉತ್ತರ

(3) II III IV I


96.ರಾಜ್ಯನೀತಿಯ ನಿರ್ದೇಶನ ತತ್ತ್ವಗಳನ್ನು ಈ ಸಂವಿಧಾನದಿಂದ ಎರವಲು ಪಡೆದಿದ್ದೇವೆ
 (1)ಇಂಗ್ಲೆಂಡ್
 (2)ಜಪಾನ್
 (3)ಫ್ರಾನ್ಸ್
 (4)ಐರ್ಲೆಂಡ್
ಸರಿ ಉತ್ತರ

(4) ಐರ್ಲೆಂಡ್


97.ಅಸ್ಪ್ರಶ್ಯತೆಯು ಅಸಂವೈಧಾನಿಕ ಎಂದು ಘೋಷಿಸಿರುವ ಕಲಮು
 (1)17
 (2)14
 (3)29
 (4)32
ಸರಿ ಉತ್ತರ

(1) 17


98.ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಪ್ಪಿಸುವ ನಿಯಮ ಯಾವುದು?
 (1)ಫೆರಾ
 (2)ಎಸ್ಮಾ
 (3)ಪೊಕ್ಸೋ
 (4)ಟಾಡಾ
ಸರಿ ಉತ್ತರ

(3) ಪೊಕ್ಸೋ


99.ರಾಜ್ಯಸಭೆ ಪ್ರತಿನಿಧಿಸುವುದು
 (1)ಭಾರತದ ಪ್ರಜೆಗಳು
 (2)ಭಾರತದ ಮಹಿಳೆಯರು
 (3)ಭಾರತದ ರಾಜ್ಯಗಳು
 (4)ಯಾವುದೂ ಅಲ್ಲ
ಸರಿ ಉತ್ತರ

(3) ಭಾರತದ ರಾಜ್ಯಗಳು


100.ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಗೆ ಅವಕಾಶ ನೀಡುವ ಕಲಮು
 (1)29
 (2)360
 (3)352
 (4)356
ಸರಿ ಉತ್ತರ

(2) 360


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment