WhatsApp Group Join Now
Telegram Group Join Now

kas-2015 (prelims) paper-I previous question paper

KPSC : Kas prelims 19-04-2015 Paper-1 General Studies Questions with answers

ದಿನಾಂಕ 19-04-2015 ರಂದು ನಡೆದ  ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಪತ್ರಿಕೆ-1 ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ.

1. 19ನೇ ಶತಮಾನದವರೆಗೆ ಭಾರತದಲ್ಲಿ ಪರಿಚಿತವಾಗಿದ್ದ ಅತಿದೊಡ್ಡ ಕಾಲುವೆಗಳ ಸಂಪರ್ಕಜಾಲವನ್ನು ನಿರ್ಮಿಸಿದ ಸುಲ್ತಾನ


(a) ಘಿಯಾಸುದ್ದೀನ್ ತುಘಲಕ್
(b) ಫಿರೋಜ್ ಷಾ ತುಘಲಕ್
(c) ಮೊಹಮ್ಮದ್ ಬಿನ್ ತುಘಲಕ್
(d) ಅಲಾವುದ್ದೀನ್ ಖಿಲ್ಜಿ

ಸರಿ ಉತ್ತರ

ಸರಿ ಉತ್ತರ:(b) ಫಿರೋಜ್ ಷಾ ತುಘಲಕ್


2. ಅಮೀರ್ ಖುಸ್ರು ದೆಹಲಿ ಸುಲ್ತಾನರ ಕಾಲದ ಶ್ರೇಷ್ಠ ಪರ್ಷಿಯನ್ ಕವಿಯೆಂದು ಗೌರವಿಸಲ್ಪಟ್ಟಿದ್ದಾನೆ. ಈ ಕೆಳಗಿನ ಯಾವ ಕೃತಿಯನ್ನು ಅವನು ಬರೆದಿಲ್ಲ ?

(a) ತಾರೀಕ್-ಇ-ಫಿರೋಜ್ ಷಾಹಿ
(b) ಆಶಿಖಾ
(c) ಖಿರಾನ್-ಉಸ್-ಸದೇನ್
(d) ಮಿಫ್ರಾ-ಉಲ್- ಫುತುಹ್

ಸರಿ ಉತ್ತರ

ಸರಿ ಉತ್ತರ:(a) ತಾರೀಕ್-ಇ-ಫಿರೋಜ್ ಷಾಹಿ


3. ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು ?

(a) ನಿಗಮ ಸಭಾ
(b) ಆಗಮ ಸಭಾ
(c) ಸಮಿತಿ
(d) ವಿಧಾತಾ

ಸರಿ ಉತ್ತರ

ಸರಿ ಉತ್ತರ:(a) ನಿಗಮ ಸಭಾ


4. ಈ ಕೆಳಗಿನ ಯಾವ ಯುದ್ಧಗಳು ಹುಮಾಯೂನನಿಗೆ ಸಂಬಂಧಿಸಿವೆ?
1. ಕಲಿಂಜರ್ ಯುದ್ಧ

2. ಚುನಾರ್ ಯುದ್ಧ

3. ಎರಡನೇ ಪಾಣಿಪತ್ ಯುದ್ಧ

4. ಹಲ್ದಿಘಾಟ್ ಯುದ್ಧ
ಈ ಕೆಳಗೆ ನೀಡಿರುವ ಸಂಕೇತಗಳಿಂದ ಸರಿಯಾದ ಉತ್ತರ ಗುರುತಿಸಿರಿ.

(a) 1 ಮತ್ತು 4
(b) 3 ಮತ್ತು 4
(c) 2 ಮತ್ತು 3
(d) 1 ಮತ್ತು 2

ಸರಿ ಉತ್ತರ

ಸರಿ ಉತ್ತರ:(d) 1 ಮತ್ತು 2


5. ‘ಗಗನ್ ಮಹಲ್’ ಕಟ್ಟಡವು ಯಾವ ಮನೆತನದ ವಾಸ್ತುಶಿಲ್ಪಿಯ ಸಾಧನೆ ?

(a) ಆದಿಲ್ ಷಾಹಿಗಳು
(b) ಕುತುಬ್ ಷಾಹಿಗಳು
(c) ನಿಜಾಮ್ ಷಾಹಿಗಳು
(d) ಬರೀದ್ ಷಾಹಿಗಳು

ಸರಿ ಉತ್ತರ

ಸರಿ ಉತ್ತರ:(a) ಆದಿಲ್ ಷಾಹಿಗಳು


6. ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯಗಳನ್ನು ಹೀಗೆ ಕರೆಯಲಾಗುತ್ತಿತ್ತು .

(a) ಸಂಸ್ಥಾನಗಳು
(b) ರಾಜ್ಯಗಳು
(c) ದೇಶಗಳು
(d) ಪ್ರಾಂತಗಳು

ಸರಿ ಉತ್ತರ

ಸರಿ ಉತ್ತರ:(b) ರಾಜ್ಯಗಳು


7. ಮಂತ್ರಿ ಮಂಡಲಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳಿಗೆ ಇರುವ ಈ ಕೆಳಕಂಡ ಅಧಿಕಾರಗಳ ಪೈಕಿ ಒಂದನ್ನು ತಪ್ಪಾಗಿ ಪಟ್ಟಿ ಮಾಡಲಾಗಿದೆ.

(a) ಸಚಿವರು ತನ್ನೊಂದಿಗೆ ಸಹಕರಿಸುತ್ತಿಲ್ಲವೆಂದು ಅವರಿಗೆ ಕಂಡು ಬಂದಲ್ಲಿ ಅಂಥ ಯಾವುದೇ ಸಚಿವರನ್ನು ವಜಾಗೊಳಿಸಬಹುದು.

(b) ಮಂತ್ರಿಮಂಡಲ ಸದಸ್ಯರನ್ನು ಪ್ರಧಾನ ಮಂತ್ರಿಗಳ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

(c) ಅವರು ಮಂತ್ರಿಮಂಡಲದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡುವರು.
(d) ಅವರು ಮಂತ್ರಿ ಮಂಡಲದ ಸಭೆಗಳ ಅಧ್ಯಕ್ಷತೆಯನ್ನು ವಹಿಸುವರು.

ಸರಿ ಉತ್ತರ

ಸರಿ ಉತ್ತರ:(a) ಸಚಿವರು ತನ್ನೊಂದಿಗೆ ಸಹಕರಿಸುತ್ತಿಲ್ಲವೆಂದು ಅವರಿಗೆ ಕಂಡು ಬಂದಲ್ಲಿ ಅಂಥ ಯಾವುದೇ ಸಚಿವರನ್ನು ವಜಾಗೊಳಿಸಬಹುದು.


8. ಭಾರತ ಸಂವಿಧಾನದ ಪೀಠಿಕಾ ಭಾಗದ ಮೂಲ ಒಕ್ಕಣೆಯ ಹೆಸರು

(a) ಸಂಯುಕ್ತ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ
(b) ಸಾರ್ವಭೌಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ
(c) ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ
(d) ಸಂಯುಕ್ತ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ

ಸರಿ ಉತ್ತರ

ಸರಿ ಉತ್ತರ:(c) ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ


9. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ?

(a) ಐ.ಎ.ಎಸ್. ಮ್ಯಾಂಡರಿನ್ ಮಾದರಿಯ ನಾಗರಿಕ ಸೇವೆಯಾಗಿದ್ದು , ಸ್ಥೂಲವಾಗಿ ಇದನ್ನು ಬ್ರಿಟನ್, ಫ್ರಾನ್ಸ್ ಅಥವಾ ಜಪಾನ್ ನಲ್ಲಿ ನಡೆಸುವ ಉನ್ನತ ಸೇವೆಗಳ ನೇಮಕಾತಿ ಪರೀಕ್ಷೆಯೊಂದಿಗೆ ಹೋಲಿಸಬಹುದಾಗಿದೆ.
(b) ಐ.ಎ.ಎಸ್. ಅಧಿಕಾರಿಗಳನ್ನು ಕೇಂದ್ರ ಸರ್ಕಾರಕ್ಕೆ ಹಂಚಿಕೆ ಮಾಡಲಾಗುತ್ತದೆ ಮತ್ತು ರಾಜ್ಯದ ಭಾಷೆ, ರೂಢಿಗಳು, ಕಾನೂನುಗಳು ಇತ್ಯಾದಿಯಲ್ಲಿ ಅವರು ವಿಶೇಷ ಪರಿಣತಿಯನ್ನು ಹೊಂದುವ ಅಗತ್ಯವಿಲ್ಲ .

(c) ರಾಜ್ಯ ಸರ್ಕಾರದ ಪ್ರಮುಖ ಆಡಳಿತಾತ್ಮಕ ಹಾಗೂ ಪೊಲೀಸ್ ಸ್ಥಾನಗಳನ್ನು ಕೇವಲ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳಿಗೆ ಮಾತ್ರ ವಹಿಸಲಾಗುತ್ತದೆ.

(d) ಪ್ರಸ್ತುತ ಭಾರತೀಯ ಆಡಳಿತಾತ್ಮಕ ಮತ್ತು ಪೊಲೀಸ್ ಸೇವೆಗಳನ್ನು ಸಂವಿಧಾನವು ಸೃಷ್ಟಿಸಿದ ಸೇವೆಗಳು ಎಂಬುದಾಗಿ ಭಾವಿಸಿದೆ ಹಾಗೂ ಸಂಸದೀಯ ಅಧಿನಿಯಮ ಬೆಂಬಲವನ್ನು ಹೊಂದಿಲ್ಲ .

ಸರಿ ಉತ್ತರ

ಸರಿ ಉತ್ತರ:(a) ಐ.ಎ.ಎಸ್. ಮ್ಯಾಂಡರಿನ್ ಮಾದರಿಯ ನಾಗರಿಕ ಸೇವೆಯಾಗಿದ್ದು , ಸ್ಥೂಲವಾಗಿ ಇದನ್ನು ಬ್ರಿಟನ್, ಫ್ರಾನ್ಸ್ ಅಥವಾ ಜಪಾನ್ ನಲ್ಲಿ ನಡೆಸುವ ಉನ್ನತ ಸೇವೆಗಳ ನೇಮಕಾತಿ ಪರೀಕ್ಷೆಯೊಂದಿಗೆ ಹೋಲಿಸಬಹುದಾಗಿದೆ.


10. ರಾಷ್ಟ್ರೀಯ ಮಹಿಳಾ ಆಯೋಗ ಅಧಿನಿಯಮ 1990ರ ಅಡಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಶಾಸನಾತ್ಮಕ ನಿಕಾಯವಾಗಿ ಜನವರಿ 1992ರಲ್ಲಿ ಸ್ಥಾಪಿಸಿದ ಉದ್ದೇಶ :
1. ಮಹಿಳೆಯರಿಗಾಗಿ ಇರುವ ಸಾಂವಿಧಾನಿಕ ಹಾಗೂ ಕಾನೂನಿನ ಭದ್ರತೆಗಳನ್ನು ಪರಿಶೀಲಿಸುವುದು
2. ಪರಿಹಾರಾತ್ಮಕ ಶಾಸನಬದ್ಧ (legislative) ಪರಿಹಾರ ಕ್ರಮಗಳನ್ನು ಶಿಫಾರಸು ಮಾಡುವುದು
3. ಕುಂದುಕೊರತೆಗಳ ನಿವಾರಣೆಗೆ ಅನುವು ಮಾಡಿಕೊಡುವುದು
4. ಮಹಿಳೆಯರ ಮೇಲೆ ಅಪರಾಧಗಳನ್ನು ಮಾಡುವ ಅಪರಾಧಿಗಳ ವಿರುದ್ಧ ನೇರ ಕ್ರಮ ಜರುಗಿಸುವುದು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ತಪ್ಪಾಗಿವೆ?

(a) 1, 2 ಮತ್ತು 3
(b) 2 ಮಾತ್ರ
(c) 4 ಮಾತ್ರ
(d) ಮೇಲಿನ ಎಲ್ಲವೂ

ಸರಿ ಉತ್ತರ

ಸರಿ ಉತ್ತರ:(c) 4 ಮಾತ್ರ


11. ಭಾರತದ ಚುನಾವಣೆಗಳಿಗೆ ಸಂಬಂಧಿಸಿದಂತೆ ಈ ಮುಂದಿನ ಯಾವುದು ಸಾಂವಿಧಾನಿಕ ತತ್ವವಾಗಿದೆ ?

(a) ಸಂಸತ್ತು ಹಾಗೂ ರಾಜ್ಯಗಳ ವಿಧಾನಮಂಡಲ ಚುನಾವಣೆಯು ಪ್ರಮಾಣಾನುಸಾರ ಪ್ರಾತಿನಿಧ್ಯವನ್ನು ಆಧರಿಸಿದೆ.
(b) ಚುನಾವಣೆಯು ಪುರುಷ ವಯಸ್ಕರ ಮತಾಧಿಕಾರವನ್ನು ಆಧರಿಸಿದೆ.
(c) ಚುನಾವಣೆಗಳ ಸಂಬಂಧದ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ಮಾಡುವ ಅಧಿಕಾರವು ರಾಜ್ಯ ವಿಧಾನಮಂಡಲಕ್ಕೆ ಮಾತ್ರ ಇದೆ.
(d) ಯಾರೇ ವ್ಯಕ್ತಿಯನ್ನು ಅವನ/ಳ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಇವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಚುನಾವಣಾ ಮತಪಟ್ಟಿಯಿಂದ ಹೊರಗಿಡತಕ್ಕದ್ದಲ್ಲ .

ಸರಿ ಉತ್ತರ

ಸರಿ ಉತ್ತರ:(d) ಯಾರೇ ವ್ಯಕ್ತಿಯನ್ನು ಅವನ/ಳ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಇವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಚುನಾವಣಾ ಮತಪಟ್ಟಿಯಿಂದ ಹೊರಗಿಡತಕ್ಕದ್ದಲ್ಲ .


12. ಈ ಮುಂದಿನ ಹೇಳಿಕೆಗಳನ್ನು ಪರ್ಯಾಲೋಚಿಸಿ.
1. ಮೂಲ ರಚನಾ ಸಿದ್ಧಾಂತವನ್ನು ಸಂವಿಧಾನದಲ್ಲಿ ವ್ಯಾಖ್ಯಾನಿಸಲಾಗಿದೆ.
2. ಸಂವಿಧಾನ ಹಲವು ನಿರ್ದಿಷ್ಟ ಮೂಲಭೂತ ಲಕ್ಷಣಗಳನ್ನು ಅನುಚ್ಛೇದ 368ರ ಅಡಿಯಲ್ಲಿ ತಿದ್ದುಪಡಿ ಮಾಡುವ ಅಧಿಕಾರ ಚಲಾಯಿಸುವುದರಿಂದ ಮಾರ್ಪಾಡು ಮಾಡಲಾಗದು.
3. ಸಂವಿಧಾನದ ಎಲ್ಲ ಉಪಬಂಧಗಳನ್ನು ಸಂಸತ್ತು ತಿದ್ದುಪಡಿ ಮಾಡಬಹುದು ಹಾಗೂ ಅಂಥ ತಿದ್ದುಪಡಿಗಳಿಗೆ ನ್ಯಾಯಿಕ ಪರಿಶೀಲನೆ ಅನ್ವಯಿಸತಕ್ಕದ್ದಲ್ಲ .
4. ಸಂವಿಧಾನದ ಮೂಲಭೂತ ಲಕ್ಷಣಗಳನ್ನು ಸರ್ವೋಚ್ಚ ನ್ಯಾಯಾಲಯವು ಗೋಲಕನಾಥ ಪ್ರಕರಣದಲ್ಲಿ ಆಮೂಲಾಗ್ರವಾಗಿ ಪಟ್ಟಿ ಮಾಡಿದೆ.
ಮೂಲರಚನಾ ಸಿದ್ಧಾಂತದ ಸಂದರ್ಭದಲ್ಲಿ ಮೇಲಿನ ಯಾವ ಹೇಳಿಕೆ/ಗಳು ಸರಿ?

(a) 2 ಮತ್ತು 4 ಮಾತ್ರ
(b) 1, 2 ಮತ್ತು 3 ಮಾತ್ರ
(c) 2 ಮಾತ್ರ
(d) 1 ಮತ್ತು 4 ಮಾತ್ರ

ಸರಿ ಉತ್ತರ

ಸರಿ ಉತ್ತರ:(c) 2 ಮಾತ್ರ


13. ಈ ಮುಂದಿನ ಹೇಳಿಕೆಗಳನ್ನು ಪರ್ಯಾಲೋಚಿಸಿ.
1. ‘ಹೇಬಿಯಸ್ ಕಾರ್ಪಸ್’ ಇದು ವ್ಯಕ್ತಿಯೊಬ್ಬನು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದಾಗ, ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ, ಆ ವ್ಯಕ್ತಿಗೆ ಆದೇಶಿಸುವ ಸ್ವರೂಪದಲ್ಲಿದೆ.
2. ‘ಮ್ಯಾಂಡಮಸ್’ ಇದರ ಪದಶಃ ಅರ್ಥ ಅಪ್ಪಣೆ (ಆದೇಶ).
3. ‘ಸರ್ಷಿಯೋರರಿ’ಯನ್ನು ಅಧೀನ ನ್ಯಾಯಾಲಯದ ಆದೇಶ ಅಥವಾ ನಿರ್ಧಾರವನ್ನು ರದ್ದುಗೊಳಿಸಲು ಹೊರಡಿಸಲಾಗುತ್ತದೆ.
4. ‘ಕೋ ವಾರೆಂಟೋ’ವನ್ನು ಅಧೀನ ನ್ಯಾಯಾಲಯವು ಅಧಿಕಾರಾತೀತ ಆದೇಶ ಅಥವಾ ನಿರ್ಧಾರ ಕೈಗೊಳ್ಳುವುದನ್ನು ಪ್ರತಿಬಂಧಿಸಲು ಹೊರಡಿಸಲಾಗುತ್ತದೆ.
ಮೇಲಿನ ಯಾವ ಯಾವ ರಿಟ್/ಗಳ ವ್ಯಾಖ್ಯೆ ಸರಿಯಾಗಿದೆ :

(a) 1, 2 ಮತ್ತು 3
(b) 1, 2 ಮತ್ತು 4
(c) 3 ಮತ್ತು 4
(d) 1 ಮತ್ತು 2

ಸರಿ ಉತ್ತರ

ಸರಿ ಉತ್ತರ:(a) 1, 2 ಮತ್ತು 3


14. ಈ ಮುಂದಿನ ಯಾವ ತುರ್ತು ಪರಿಸ್ಥಿತಿ ರೂಪವು ನಮ್ಮ ಸಂವಿಧಾನದಲ್ಲಿ ಮಾನ್ಯ ಮಾಡಲಾದ (ಗುರುತಿಸಲಾದ) ರೂಪವಾಗಿಲ್ಲ ?

(a) ಯುದ್ಧ , ಬಾಹ್ಯ ಆಕ್ರಮಣ ಅಥವಾ ಶಸ್ತ್ರ ದಂಗೆಯ ಕಾರಣದಿಂದಾದ ತುರ್ತುಪರಿಸ್ಥಿತಿ
(b) ರಾಜ್ಯಗಳಲ್ಲಿ ಸಾಂವಿಧಾನಿಕ ಕಾರ್ಯಯಂತ್ರದ ವಿಲತೆಯ ಕಾರಣದಿಂದಾದ ತುರ್ತುಪರಿಸ್ಥಿತಿ
(c) ನೈಸರ್ಗಿಕ ಅವಘಡದ ಕಾರಣದಿಂದಾದ ತುರ್ತುಪರಿಸ್ಥಿತಿ
(d) ಹಣಕಾಸಿನ ತುರ್ತುಪರಿಸ್ಥಿತಿ

ಸರಿ ಉತ್ತರ

ಸರಿ ಉತ್ತರ:(c) ನೈಸರ್ಗಿಕ ಅವಘಡದ ಕಾರಣದಿಂದಾದ ತುರ್ತುಪರಿಸ್ಥಿತಿ


15. ಭಾರತದ ನಾಗರಿಕರ ಸಾಮೂಹಿಕ ಸಮಾಜವಾದಿ ಆರ್ಥಿಕ ಧ್ಯೇಯೋದ್ದೇಶಗಳನ್ನು ಇದರಲ್ಲಿ ಸೇರಿಸಲಾಗಿದೆ.

(a) ಮೂಲಭೂತ ಹಕ್ಕುಗಳು
(b) ರಾಜ್ಯನೀತಿ ನಿರ್ದೇಶಕ ತತ್ವಗಳು
(c) ಮೂಲಭೂತ ಕರ್ತವ್ಯಗಳು
(d) ಸಂವಿಧಾನದ ಪ್ರಸ್ತಾವನೆ

ಸರಿ ಉತ್ತರ

ಸರಿ ಉತ್ತರ:(b) ರಾಜ್ಯನೀತಿ ನಿರ್ದೇಶಕ ತತ್ವಗಳು


16. ಇಂತಹ ಸಂದರ್ಭದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಕರೆಯಲಾಗುವುದಿಲ್ಲ .
(i) ಆಯವ್ಯಯ ಮಸೂದೆ
(ii) ಹಣಕಾಸು ಮಸೂದೆ
(iii) ಸಂವಿಧಾನ ತಿದ್ದುಪಡಿ ಮಸೂದೆ
(iv) ಸಾಮಾನ್ಯ ಮಸೂದೆ
ಸಂಕೇತಗಳನ್ನು ಉಪಯೋಗಿಸಿ, ಸರಿಯಾದ ಉತ್ತರವನ್ನು ಆರಿಸಿ.

(a) (i) ಮತ್ತು (ii)
(b) (i), (ii) ಮತ್ತು (iii)
(c) (ii) ಮತ್ತು (iii)
(d) (i), (ii), (iii) ಮತ್ತು (iv)

ಸರಿ ಉತ್ತರ

ಸರಿ ಉತ್ತರ:(b) (i), (ii) ಮತ್ತು (iii)


17. ಪೌರರ ಕೆಳಗಿನ ಹಕ್ಕುಗಳನ್ನು ಪರಿಶೀಲಿಸಿರಿ.
1. ಉಚಿತ ಕಾನೂನು ನೆರವಿನ ಹಕ್ಕು
2. ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು
3. ಧರ್ಮಾರ್ಥ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕು
4. ಉತ್ತಮ ಜೀವನಮಟ್ಟದ ಹಕ್ಕು
ಮೇಲಿನವುಗಳಲ್ಲಿ ಯಾವುದಕ್ಕೆ ನ್ಯಾಯಿಕ ಪರಿಹಾರ (non-justiciable) ಕೇಳಲು ಬರುವುದಿಲ್ಲ?


(a) 1, 2 ಮತ್ತು 3
(b) 2 ಮತ್ತು 4
(c) 1, 2 ಮತ್ತು 4
(d) 2, 3 ಮತ್ತು 4

ಸರಿ ಉತ್ತರ

ಸರಿ ಉತ್ತರ:(c) 1, 2 ಮತ್ತು 4


18. ಭಾರತದ ರಾಜಕೀಯ ವ್ಯವಸ್ಥೆಯ ಕೆಲವು ಲಕ್ಷಣಗಳು ಸಂಯುಕ್ತ ಸರ್ಕಾರ ಪದ್ಧತಿಗೆ ಹೊಂದಿಕೊಳ್ಳುವುದಿಲ್ಲ ಎಂದು ಪರಿಗಣಿಸಲಾಗುತ್ತದೆ. ಕೆಳಗಿನವುಗಳನ್ನು ಪರಿಗಣಿಸಿರಿ.
1. ಕೆಲವು ಸಂದರ್ಭಗಳಲ್ಲಿ ರಾಜ್ಯಗಳ ಶಾಸನಗಳ ಮೇಲೆ ರಾಷ್ಟ್ರಪತಿಗೆ ಇರುವ ಸಂಪೂರ್ಣ (ವೀಟೋ) ನಿಷೇಧಾಧಿಕಾರ
2. ತುರ್ತು ಪರಿಸ್ಥಿತಿಯ ವಿಧಿಗಳು
3. ರಾಜ್ಯಗಳ ಗಡಿಗಳಲ್ಲಿನ ಬದಲಾವಣೆ
4. ಎಲ್ಲ ಅಧಿಕಾರಗಳೂ ಸಂವಿಧಾನದ ಅಧೀನಕ್ಕೆ ಒಳಪಟ್ಟಿರುವುದು

ಹೊಂದಿಕೊಳ್ಳದಿರುವ ಲಕ್ಷಣಗಳನ್ನು ಆಯ್ಕೆ ಮಾಡಿರಿ.

(a) 1 ಮತ್ತು 2
(b) 3 ಮಾತ್ರ
(c) 1, 3 ಮತ್ತು 4
(d) 1, 2 ಮತ್ತು 3

ಸರಿ ಉತ್ತರ

ಸರಿ ಉತ್ತರ:(d) 1, 2 ಮತ್ತು 3


19. ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ , ಮೈಸೂರು ಸಂಸ್ಥಾನದ ಸ್ಥಾನವು ಈ ರೀತಿಯದು.

(a) ಮೂವತ್ತೊಂದು ಬಂದೂಕ ಸಲಾಮಿನ ರಾಜ್ಯ
(b) ಇಪ್ಪತ್ತೊಂದು ಬಂದೂಕ ಸಲಾಮಿನ ರಾಜ್ಯ
(c) ಹತ್ತೊಂಬತ್ತು ಬಂದೂಕ ಸಲಾಮಿನ ರಾಜ್ಯ
(d) ಹದಿನೇಳು ಬಂದೂಕ ಸಲಾಮಿನ ರಾಜ್ಯ

ಸರಿ ಉತ್ತರ

ಸರಿ ಉತ್ತರ:(b) ಇಪ್ಪತ್ತೊಂದು ಬಂದೂಕ ಸಲಾಮಿನ ರಾಜ್ಯ


20. 1930ರ ಏಪ್ರಿಲ್ ನಲ್ಲಿ ಬೆಳಗಾಂನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರಾರು?

(a) ಕಾರ್ನಾಡ್ ಸದಾಶಿವರಾವ್
(b) ಆರ್.ಆರ್. ದಿವಾಕರ್
(c) ಹನುಮಂತರಾವ್ ಕೌಜಲಗಿ
(d) ಗಂಗಾಧರರಾವ್ ದೇಶಪಾಂಡೆ

ಸರಿ ಉತ್ತರ

ಸರಿ ಉತ್ತರ:(d) ಗಂಗಾಧರರಾವ್ ದೇಶಪಾಂಡೆ


21. ಕೇಂದ್ರ ಸರ್ಕಾರ ಸಂಗ್ರಹಿಸಿದ ಒಟ್ಟು ತೆರಿಗೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡುವ ವಿಷಯದಲ್ಲಿ ರಾಷ್ಟ್ರಪತಿಯವರಿಗೆ ಯಾರು ಶಿಫಾರಸ್ಸು ಮಾಡುತ್ತಾರೆ ?


(a) ಯೋಜನಾ ಆಯೋಗ
(b) ಹಣಕಾಸು ಆಯೋಗ
(c) ಭಾರತದ ಮಹಾಲೆಕ್ಕ ಪರಿಶೋಧಕ (ಕಂಪ್ಟ್ರೋಲರ್ & ಆಡಿಟರ್ ಜನರಲ್)
(d) ಕೇಂದ್ರ ಸರ್ಕಾರ

ಸರಿ ಉತ್ತರ

ಸರಿ ಉತ್ತರ:(b) ಹಣಕಾಸು ಆಯೋಗ


22. ಮಾಪಿಳ್ಳ ದಂಗೆಯು _____________ ಗೆ ಸಂಬಂಧಿಸಿದುದಾಗಿದೆ

(a) ಬುಡಕಟ್ಟು ಜನರ ಅತೃಪ್ತಿ
(b) ರಾಷ್ಟ್ರೀಯವಾದಿಗಳ ಅತೃಪ್ತಿ
(c) ಸೈನಿಕರ ಅತೃಪ್ತಿ
(d) ರೈತರ ಅತೃಪ್ತಿ

ಸರಿ ಉತ್ತರ

ಸರಿ ಉತ್ತರ:(d) ರೈತರ ಅತೃಪ್ತಿ


23. ನಾಗರಿಕ ಉಲ್ಲಂಘನಾ ಚಳವಳಿಯ ಅವಧಿಯಲ್ಲಿ ಕರ್ನಾಟಕದಲ್ಲಿ ಈ ಕೆಳಗಿನ ಯಾವ ಸ್ಥಳಗಳನ್ನು ‘ತೆರಿಗೆಗೆ ಒಳಪಡದ ಪ್ರದೇಶ’ವೆಂದು ಆಯ್ಕೆ ಮಾಡಲಾಯಿತು ?

(a) ಕಾರವಾರ
(b) ಶಿರಸಿ
(c) ಸಿದ್ಧಾಪುರ
(d) ಅಂಕೋಲ

ಸರಿ ಉತ್ತರ

ಸರಿ ಉತ್ತರ:(d) ಅಂಕೋಲ


24. ರೈತವಾರಿ ಪದ್ಧತಿಯು ಬ್ರಿಟಿಷ್ ಭಾರತದ ದಕ್ಷಿಣ ಭಾಗದಲ್ಲಿ ಪರಿಚಯಿಸಿದ ಭೂಮಿ ಕರ ನಿರ್ಧರಣೆ ಪದ್ಧತಿಯಾಗಿತ್ತು ಇದಕ್ಕೆ ಕಾರಣ :

(a) ಬ್ರಿಟಿಷ್ ಭಾರತದಲ್ಲಿ ಭೂಮಿ ಕಂದಾಯ ಸಂಗ್ರಹಣೆಯನ್ನು ಹೆಚ್ಚಿಸುವುದು
(b) ಭಾರತದ ಆರ್ಥಿಕತೆಯನ್ನು ಸುಧಾರಿಸುವುದು
(c) ಭೂಮಾಲೀಕರ ಮೇಲೆ ಹಿಡಿತ ಸಾಧಿಸುವುದು
(d) ಕ್ಷಾಮಗಳ ಪುನರಾವೃತ್ತಿಯನ್ನು ತಡೆಯುವುದು

ಸರಿ ಉತ್ತರ

ಸರಿ ಉತ್ತರ:(a) ಬ್ರಿಟಿಷ್ ಭಾರತದಲ್ಲಿ ಭೂಮಿ ಕಂದಾಯ ಸಂಗ್ರಹಣೆಯನ್ನು ಹೆಚ್ಚಿಸುವುದು


25. ಭಾರತದ ರಾಷ್ಟ್ರೀಯತಾವಾದಿಗಳ ಚಳವಳಿಯ ಇತಿಹಾಸದಲ್ಲಿ ಲಾಹೋರಿನ ಕಾಂಗ್ರೆಸ್ ಅಧಿವೇಶನವು ಒಂದು ಹೆಗ್ಗುರುತು ಏಕೆಂದರೆ

(a) ಕಾಂಗ್ರೆಸ್ ಅಂತೂ ಇಂತೂ ಕೊನೆಯಲ್ಲಿ ಪೂರ್ಣ ಸ್ವರಾಜ್ ನಂಬಿಕೆಯನ್ನು ಮತ್ತು ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡಿತು.
(b) ಅದು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನ ನಡುವಿನ ಅಂತರದ ಸೇತುವೆ ನಿರ್ಮಿಸಿತು.
(c) ಅದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸಿತು.
(d) ಕಾಂಗ್ರೆಸ್ ಚಕ್ರಾಧಿಪತ್ಯ ಸ್ಥಾನಮಾನ ಸ್ಥಿತಿಯನ್ನು ಒಪ್ಪಿಕೊಂಡಿತು.

ಸರಿ ಉತ್ತರ

ಸರಿ ಉತ್ತರ:(a) ಕಾಂಗ್ರೆಸ್ ಅಂತೂ ಇಂತೂ ಕೊನೆಯಲ್ಲಿ ಪೂರ್ಣ ಸ್ವರಾಜ್ ನಂಬಿಕೆಯನ್ನು ಮತ್ತು ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡಿತು.


26. ಭಾರತದಲ್ಲಿ ಕಂಪನಿ ರಾಜ್ಯದ ಚರಿತ್ರೆಯಲ್ಲಿ 1813ರ ಸನ್ನದು ಅಧಿನಿಯಮ ಒಂದು ಮುಖ್ಯ ಹೆಗ್ಗುರುತು. ಏಕೆಂದರೆ

(a) ಈ ಅಧಿನಿಯಮವು ಭಾರತದಲ್ಲಿ ಕಂಪನಿ ಹೊಂದಿದ್ದ ಭಾರತೀಯ ಪ್ರಾಂತ್ಯಗಳ ಮೇಲೆ ಬ್ರಿಟಿಷ್ ಸಿಂಹಾಸನದ ಸಾರ್ವಭೌಮತ್ವವನ್ನು ಖಾತರಿಪಡಿಸಿತು.
(b) ಈ ಅಧಿನಿಯಮವು ಕಂಪನಿಯ ವ್ಯಾಪಾರ ಏಕಸ್ವಾಮ್ಯಕ್ಕೆ ಅಂತ್ಯ ಹಾಡಿತು.
(c) ಈ ಅಧಿನಿಯಮವು ಭಾರತ ಹಾಗೂ ಚೀನಾದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರದ ಏಕಸ್ವಾಮ್ಯತೆಗೆ ಅವಕಾಶ ಕಲ್ಪಿಸಿತು.
(d) ಈ ಅಧಿನಿಯಮವು ನಿಯಂತ್ರಣಾ ಮಂಡಳಿಗೆ ಕಂಪನಿಯ ಮೇಲೆ ಪೂರ್ಣ ಅಧಿಕಾರ ಮತ್ತು ಪ್ರಾಧಿಕಾರ ನೀಡಿತು.

ಸರಿ ಉತ್ತರ

ಸರಿ ಉತ್ತರ:(a) ಈ ಅಧಿನಿಯಮವು ಭಾರತದಲ್ಲಿ ಕಂಪನಿ ಹೊಂದಿದ್ದ ಭಾರತೀಯ ಪ್ರಾಂತ್ಯಗಳ ಮೇಲೆ ಬ್ರಿಟಿಷ್ ಸಿಂಹಾಸನದ ಸಾರ್ವಭೌಮತ್ವವನ್ನು ಖಾತರಿಪಡಿಸಿತು.


27. ಈ ಮುಂದಿನವುಗಳನ್ನು ಸರಿ ಹೊಂದಿಸಿ :

 

ಪಟ್ಟಿ –I

 

ಪಟ್ಟಿ – II

A.

ಬಂಜರು ವೃತ್ತ

1.

ಬಾತೋಲಿತ್ಸ್

B.

ಜ್ವಾಲಾಮುಖಿಗಳು

2.

ಕ್ಸೆಲಿಯೇಷನ್

C.

ಸುಣ್ಣಕಲ್ಲು
ವಲಯಗಳು

3.

ಡಿಪ್ಲೇಷನ್

D.

ವೆದರಿಂಗ್

4.

ಪೊಲ್ಜೆ

      A  B  C  D
(a)  3   1  4  2
(b)  1   3  2  4
(c)  4  2  1  3
(d)  2  4  3  1

ಸರಿ ಉತ್ತರ

ಸರಿ ಉತ್ತರ:(a) 3 1 4 2


28. ಇಂಗ್ಲೆಂಡ್ ನಿಂದ ಭಾರತಕ್ಕೆ ಅಧಿಕಾರ ವರ್ಗಾಯಿಸಲು ‘ಬಾಲ್ಕನ್ ಯೋಜನೆ’ಯನ್ನು ರೂಪಿಸಿದವರು ಮತ್ತು ಸಲಹೆ ಮಾಡಿದವರು ಯಾರು ?

(a) ಕ್ಲೆಮೆಂಟ್ ಅಟ್ಲೀ
(b) ವೇವೆಲ್
(c) ಚರ್ಚಿಲ್
(d) ಮೌಂಟ್ ಬ್ಯಾಟನ್

ಸರಿ ಉತ್ತರ

ಸರಿ ಉತ್ತರ:(d) ವೌಂಟ್ ಬ್ಯಾಟನ್


ಕೆಳಗಿನ ಎರಡು ಪ್ರಶ್ನೆಗಳಿಗೆ (ಪ್ರ .ಸಂ. 29 ಮತ್ತು 30) ನಿರ್ದೇಶನಗಳು : ಪ್ರತಿಪಾದನೆ (ಎ) ಮತ್ತು ಕಾರಣ (ಆರ್) ಎರಡೂ ಹೇಳಿಕೆಗಳನ್ನು ಓದಿ. ಕೊಟ್ಟಿರುವ (a), (b), (c) ಅಥವಾ (d) ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

(a) (ಎ) ಮತ್ತು (ಆರ್) ಇವೆರಡೂ ಸರಿ ಮತ್ತು (ಆರ್), (ಎ) ಯನ್ನು ವಿವರಿಸುತ್ತದೆ
(b) (ಎ) ಮತ್ತು (ಆರ್) ಇವೆರಡೂ ಸರಿ ಆದರೆ (ಆರ್), (ಎ) ಯನ್ನು ವಿವರಿಸುವುದಿಲ್ಲ
(c) (ಎ) ಸರಿ ಆದರೆ (ಆರ್) ತಪ್ಪು
(d) (ಎ) ತಪ್ಪು ಆದರೆ (ಆರ್) ಸರಿ

29. ಪ್ರತಿಪಾದನೆ (ಎ) : ಸೌರ ಉಷ್ಣ ಶಕ್ತಿಯಿಂದ ರಾಸಾಯನಿಕ ಶಕ್ತಿಗೆ ಉಂಟಾಗುವ ಪರಿವರ್ತನೆಯ ಪ್ರಕ್ರಿಯೆಯನ್ನು ದ್ಯುತಿ ಸಂಶ್ಲೇಷಣ ಕ್ರಿಯೆ ಎಂದು ಕರೆಯುತ್ತಾರೆ.
ಕಾರಣ (ಆರ್) : ಸ್ವಪೋಷಕಗಳು (ಆಟೋಟ್ರೋಪ್ ಗಳು) ಕಾರ್ಬೊಹೈಡ್ರೇಟ್ ಗಳನ್ನು ಉತ್ಪಾದಿಸುವುದಕ್ಕಾಗಿ ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಪರಿವರ್ತಿಸಲು ಮತ್ತು ಅಂತಿಮವಾಗಿ ಜೀವಿಗಳ ಬೆಂಬಲಕ್ಕಾಗಿ ಇತರ ಜೀವ ರಾಸಾಯನಿಕ ಅಣುಗಳನ್ನು ಉತ್ಪಾದಿಸಲು ಸೌರಶಕ್ತಿಯನ್ನು ಬಳಸುತ್ತವೆ.

ಸರಿ ಉತ್ತರ

ಸರಿ ಉತ್ತರ:(a) (ಎ) ಮತ್ತು (ಆರ್) ಇವೆರಡೂ ಸರಿ ಮತ್ತು (ಆರ್), (ಎ) ಯನ್ನು ವಿವರಿಸುತ್ತದೆ


30. ಪ್ರತಿಪಾದನೆ (ಎ) : ಓಜೋನ್ ಪದರವು ತೀವ್ರ ಹಾನಿಯುಂಟು ಮಾಡುವ ಸೌರ ವಿಕಿರಣದ ಹೆಚ್ಚಾದ ಪ್ರಮಾಣದಿಂದ ಭೂಮಿಯನ್ನು ರಕ್ಷಿಸುತ್ತದೆ.
ಕಾರಣ (ಆರ್): ಓಜೋನ್ ರಂಧ್ರವನ್ನು ಆಂಟಾರ್ಟಿಕಾ ಖಂಡದ ಮೇಲೆ ಪತ್ತೆ ಮಾಡಲಾಗಿದೆ.

ಸರಿ ಉತ್ತರ

ಸರಿ ಉತ್ತರ:(b) (ಎ) ಮತ್ತು (ಆರ್) ಇವೆರಡೂ ಸರಿ ಆದರೆ (ಆರ್), (ಎ) ಯನ್ನು ವಿವರಿಸುವುದಿಲ್ಲ


31. ಸವನ್ನಾ ಬಯೋಮ್ ನ ಪ್ರಮುಖ ಹವಾಮಾನ ಗುಣಲಕ್ಷಣಗಳೆಂದರೆ
1. ಈ ಬಯೋಮ್ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಸಮಶೀತೋಷ್ಣ ವಲಯದ ಆರ್ದ್ರ ಹವಾಮಾನದಲ್ಲಿ ಕಂಡುಬರುತ್ತದೆ.
2. ತಿಂಗಳ ಸರಾಸರಿ ಉಷ್ಣಾಂಶವು 28°C ಗಿಂತ ಹೆಚ್ಚು
3. ಸಾಮಾನ್ಯ ಮಳೆ 50 ಸೆಂ.ಮೀ. ನಿಂದ 100 ಸೆಂ.ಮೀ.
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

(a) 1 ಮಾತ್ರ
(b) 1 ಮತ್ತು 3 ಮಾತ್ರ
(c) 2 ಮತ್ತು 3 ಮಾತ್ರ
(d) 1, 2 ಮತ್ತು 3

ಸರಿ ಉತ್ತರ

ಸರಿ ಉತ್ತರ:ಈ ಪ್ರಶ್ನೆಗೆ GRACE MARK ನೀಡಲಾಗಿದೆ.


32. ಮಂಗಳ ಗ್ರಹಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿವೆ ?
1. ಮಂಗಳ ಗ್ರಹವನ್ನು ಕೆಂಪು ಗ್ರಹವೆಂದೂ ಸಹ ಕರೆಯುತ್ತಿದ್ದು , ಇದು ಭೂಮಿಯ ನೆರೆಯಲ್ಲಿರುವ ಒಂದು ಗ್ರಹ.
2. ಇದು ಡಿಮೋಸ್ ಮತ್ತು ಕ್ಯಾಲಿಸ್ಟೊ ಎಂಬ ಎರಡು ಉಪಗ್ರಹಗಳನ್ನು ಹೊಂದಿದೆ.
3. ಇದು ಮಾನವನಿಂದ ಅತಿಹೆಚ್ಚು ಶೋಧಿಸಲ್ಪಟ್ಟಿರುವ ಸೌರವ್ಯೂಹದ ಗ್ರಹ (ಭೂಮಿಯನ್ನು ಬಿಟ್ಟು ).
4. ಇದು ಸೌರವ್ಯೂಹದ ಅತಿ ಚಿಕ್ಕ ಗ್ರಹ.
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ.

(a) 1 ಮಾತ್ರ
(b) 1 ಮತ್ತು 3
(c) 1, 2 ಮತ್ತು 3
(d) ಎಲ್ಲವೂ ಸರಿ

ಸರಿ ಉತ್ತರ

ಸರಿ ಉತ್ತರ:(b) 1 ಮತ್ತು 3


33. ಸಾಗರಗಳ ಗಾತ್ರಗಳ ಪ್ರಕಾರ ಆರೋಹಣ ಕ್ರಮದಲ್ಲಿ ಅವುಗಳ ಸರಿಯಾದ ಕ್ರಮ ಯಾವುದು?

(a) ಹಿಂದೂ ಮಹಾಸಾಗರ ಪೆಸಿಫಿಕ್- ಅಟ್ಲಾಂಟಿಕ್- ಆರ್ಕಟಿಕ್
(b) ಆರ್ಕಟಿಕ್, ಹಿಂದೂ ಮಹಾಸಾಗರ- ಅಟ್ಲಾಂಟಿಕ್-ಪೆಸಿಫಿಕ್
(c) ಆರ್ಕಟಿಕ್ -ಅಟ್ಲಾಂಟಿಕ್-ಪೆಸಿಫಿಕ್- ಹಿಂದೂ ಮಹಾಸಾಗರ
(d) ಅಟ್ಲಾಂಟಿಕ್-ಹಿಂದೂ ಮಹಾಸಾಗರ- ಆರ್ಕಟಿಕ್ -ಪೆಸಿಫಿಕ್

ಸರಿ ಉತ್ತರ

ಸರಿ ಉತ್ತರ:(b) ಆರ್ಕಟಿಕ್, ಹಿಂದೂ ಮಹಾಸಾಗರ- ಅಟ್ಲಾಂಟಿಕ್-ಪೆಸಿಫಿಕ್


34. ಅಮೇರಿಕಾ ಸಂಯುಕ್ತ ಸಂಸ್ಥಾನ-ಕೆನಡಾಗಳ ಪಂಚ ಮಹಾಸಾಗರಗಳನ್ನು ನಕ್ಷೆಯಲ್ಲಿ 1,2,3,4,5 ಎಂದು ಗುರುತಿಸಲಾಗಿದೆ. ಇವುಗಳನ್ನು ಗುರುತಿಸಿ.

(a)

1-ಆಂಟೇರಿಯೊ

2-ಈರಿ

3-ಸುಪೀರಿಯರ್

4-ಹ್ಯೂರಾನ್

5-ಮಿಚಿಗನ್

(b)

1-ಮಿಚಿಗನ್

2-ಹ್ಯೂರಾನ್

3-ಸುಪೀರಿಯರ್

4-ಈರಿ

5-ಆಂಟೇರಿಯೊ

(c)

1-ಈರಿ

2-ಆಂಟೇರಿಯೊ

3-ಹ್ಯೂರಾನ್

4-ಸುಪೀರಿಯರ್

5-ಮಿಚಿಗನ್

(d)

1-ಹ್ಯೂರಾನ್

2-ಸುಪೀರಿಯರ್

3-ಈರಿ

4-ಆಂಟೇರಿಯೊ

5-ಮಿಚಿಗನ್

ಸರಿ ಉತ್ತರ

ಸರಿ ಉತ್ತರ:(b) 1-ಮಿಚಿಗನ್, 2-ಹ್ಯೂರಾನ್,3-ಸುಪೀರಿಯರ್, 4-ಈರಿ, 5-ಆಂಟೇರಿಯೊ


35. ಭಾರತದ ಒಂದು ರಾಜ್ಯವು ಈ ಮುಂದಿನ ಗುಣಲಕ್ಷಣಗಳನ್ನು ಹೊಂದಿದೆ.
1. ಅದರ ಉತ್ತರಭಾಗ ಬಂಜರು ಮತ್ತು ಅರೆಬಂಜರು.
2. ಅದರ ಮಧ್ಯ ಭಾಗವು ಹತ್ತಿಯನ್ನು ಉತ್ಪಾದಿಸುತ್ತದೆ.
3. ವಾಣಿಜ್ಯ ಬೆಳೆಯ ಕೃಷಿ ಆಹಾರ ಪದಾರ್ಥ ಬೆಳೆಗಳಿಗಿಂತ ಹೆಚ್ಚು ಪ್ರಾಧಾನ್ಯವಾಗಿದೆ.
ಸರಿಯಾದ ರಾಜ್ಯವನ್ನು ಆರಿಸಿ.

(a) ತೆಲಂಗಾಣ
(b) ಗುಜರಾತ್
(c) ಕರ್ನಾಟಕ
(d) ರಾಜಸ್ಥಾನ

ಸರಿ ಉತ್ತರ

ಸರಿ ಉತ್ತರ:(b) ಗುಜರಾತ್


36. ವಾಯುಗುಣವನ್ನು ಕುರಿತ ಈ ಕೆಳಗಿನ ಹೇಳಿಕೆಗಳನ್ನು ಓದಿ.
1. ಮಳೆಯು ಚಳಿಗಾಲದಲ್ಲಿ ಅತಿಹೆಚ್ಚು ಕೇಂದ್ರೀಕೃತವಾಗಿರುವ ವಾಯುಗುಣ
2. ಪ್ರಪಂಚದಲ್ಲಿ ಜನರು ವಾಸಿಸುವ ಎಲ್ಲಾ ಭೂಖಂಡಗಳಲ್ಲಿಯೂ ಇದು ಕಂಡುಬರುವುದು
3. ಇದು ಉಪಉಷ್ಣವಲಯದಲ್ಲಿ ಕಂಡುಬರುವುದು
4. ಇದು ಜಾಗತಿಕ ಒತ್ತಡಪಟ್ಟಿಗಳ ಸ್ಥಳಾಂತರದೊಡನೆ ಸಂಬಂಧವನ್ನು ಹೊಂದಿದೆ
ಈ ವಾಯುಗುಣವು ಸಂಬಂಧಿಸಿರುವುದು-

(a) ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದ ಮರುಭೂಮಿ
(b) ಉಷ್ಣವಲಯದ ಹುಲ್ಲುಗಾವಲುಗಳು
(c) ಚೈನಾ ಮಾದರಿಯ ವಾಯುಗುಣ
(d) ಮೆಡಿಟರೇನಿಯನ್ ವಾಯುಗುಣ

ಸರಿ ಉತ್ತರ

ಸರಿ ಉತ್ತರ:(d) ಮೆಡಿಟರೇನಿಯನ್ ವಾಯುಗುಣ


37. ದೇಶವನ್ನು ಅದರ ಪ್ರಮುಖ ಕಲ್ಲಿದ್ದಲು ನಿಕ್ಷೇಪ ವಲಯದೊಂದಿಗೆ ಹೊಂದಿಸಿರಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

 

ದೇಶ

 

ಪ್ರಮುಖ ಕಲ್ಲಿದ್ದಲು
ನಿಕ್ಷೇಪ ವಲಯ

A.

ಯು ಎಸ್

1.

ಶಾಂಕ್ಸಿ

B.

ಚೀನಾ

2.

ಚಿಕಾಗೋ

C.

ಗ್ರೇಟ್ ಬ್ರಿಟನ್

3.

ಪಿಟ್ಸ್ ಬರ್ಗ್

D.

ಜಪಾನ್

4.

ಸೌತ್ ವೇಲ್ಸ್

 

 

5.

ಹೊನ್ಷು

 ಹೊನ್ಷು
ಸಂಕೇತಗಳು :

      A  B  C  D
(a)  2  5  3  1
(b)  3  5  4  1
(c)  2  1  3  5
(d)  3  1  4  5

ಸರಿ ಉತ್ತರ

ಸರಿ ಉತ್ತರ:(d) 3 1 4 5


38. 2014ರಲ್ಲಿ ಭಾರತದಲ್ಲಿ ಈ ಮುಂದಿನ ಯಾವ ಚಂಡ ಮಾರುತಗಳು (ಸೈಕ್ಲೋನ್ ಗಳು) ಉಂಟಾದವು?
i. ಹುಡ್ ಹುಡ್
ii. ಫೈಲಿನ್
iii. ನಿಲೋಫರ್
iv. ಲೆಹರ್
ಸರಿಯಾದ ಉತ್ತರವನ್ನು ಆರಿಸಿ.

(a) i ಮತ್ತು ii
(b) i ಮತ್ತು iii
(c) ii ಮತ್ತು iii
(d) iii ಮತ್ತು iv

ಸರಿ ಉತ್ತರ

ಸರಿ ಉತ್ತರ:(b) i ಮತ್ತು iii


39. ವಿಶ್ವದ ಅತ್ಯಂತ ಉದ್ದದ ರೈಲ್ವೇ ರಸ್ತೆಗಳಲ್ಲಿ ಒಂದಾಗಿರುವ ಕೆನೆಡಿಯನ್ ಪೆಸಿಫಿಕ್ ರೈಲ್ವೆಯು ಈ ಮುಂದಿನವುಗಳಲ್ಲಿ ಯಾವುದಾಗಿದೆ ?

(a) ವ್ಯಾಂಕೋವರ್ ನಿಂದ ಸೆಂಟ್ ಜಾನ್ಸ್
(b) ಸಿಯಾಟ್ಲ್ ನಿಂದ ಹ್ಯಾಲಿಫ್ಯಾಕ್ಸ್
(c) ಪ್ರಿನ್ಸ್ ರುಪರ್ಟ್ ನಿಂದ ಸೆಂಟ್ ಜಾನ್
(d) ವ್ಯಾಂಕೋವರ್ ನಿಂದ ಹ್ಯಾಲಿಫ್ಯಾಕ್ಸ್

ಸರಿ ಉತ್ತರ

ಸರಿ ಉತ್ತರ:(d) ವ್ಯಾಂಕೋವರ್ ನಿಂದ ಹ್ಯಾಲಿಫ್ಯಾಕ್ಸ್


40. ರಾಷ್ಟ್ರೀಯ ಉದ್ಯಾನವನವನ್ನು ಅದರ ರಾಜ್ಯದೊಂದಿಗೆ ಹೊಂದಿಸಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

 

ರಾಜ್ಯ

 

ರಾಷ್ಟ್ರೀಯ ಉದ್ಯಾನವನ

A.

ಮೇಘಾಲಯ

1.

ಹೆಮಿಸ್

B.

ಜಾರ್ಖಂಡ್

2.

ನಮ್ದಾಫಾ

C.

ಅರುಣಾಚಲ ಪ್ರದೇಶ

3.

ಬಾಲ್ಫಾಕ್ರಮ್

D.

ಜಮ್ಮು ಮತ್ತು
ಕಾಶ್ಮೀರ

4.

ಹಜಾರಿಬಾಗ್

 ಸಂಕೇತಗಳು :

      A  B  C  D
(a)  2  1  4  3
(b)  3  4  2  1
(c)  3  1  4  2
(d)  2  4  1  3

ಸರಿ ಉತ್ತರ

ಸರಿ ಉತ್ತರ:(b) 3 4 2 1


41. ಕರ್ನಾಟಕದ ಕರಾವಳಿ ಬಯಲು, ಇದು ಅಲೆ ವಿನ್ಯಾಸದ ಪ್ರದೇಶವಾಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಮುಂದಿನ ಯಾವುದು ಸರಿಯಾಗಿದೆ ?

(a) ಇದು ಜ್ವಾಲಾಮುಖಿ ಚಟುವಟಿಕೆಯ ಫಲಿತಾಂಶವಾಗಿದೆ
(b) ಇದು (ಸವೆತ) ಕ್ಷರಣ ಬಯಲಾಗಿದೆ
(c) ಇದು ನಿಕ್ಷೇಪನ ಬಯಲಾಗಿದೆ
(d) ಮೇಲಿನ ಎಲ್ಲವೂ

ಸರಿ ಉತ್ತರ

ಸರಿ ಉತ್ತರ:(b) ಇದು (ಸವೆತ) ಕ್ಷರಣ ಬಯಲಾಗಿದೆ


42. ಜಲಾನಯನ ಅಭಿವೃದ್ಧಿ ಕಾರ್ಯಕ್ರಮದ ಗುರಿಯು,
1. ಮಣ್ಣಿನ ಸವೆತವನ್ನು ನಿಯಂತ್ರಿಸುವುದು
2. ನೀರಿನ ಸಂರಕ್ಷಣೆ ಹಾಗೂ ಅಂತರ್ಜಲದ ನಿರ್ವಹಣೆ
3. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವುದು
4. ಮಳೆಗಾಲದಲ್ಲಿನ ನದಿ ಪ್ರವಾಹವನ್ನು ನಿಯಂತ್ರಿಸುವುದು
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

(a) 1 ಮತ್ತು 2
(b) 2 ಮತ್ತು 3
(c) 1 ಮತ್ತು 3
(d) ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

ಸರಿ ಉತ್ತರ:(a) 1 ಮತ್ತು 2


43. ಕರ್ನಾಟಕದ ರೈಲ್ವೆ ನಕ್ಷೆಯ ವಿಶ್ಲೇಷಣೆಯು ಏನನ್ನು ಸೂಚಿಸುತ್ತದೆ ?
1. ಕೊಡಗು ಜಿಲ್ಲೆಯು ರೈಲ್ವೆ ಮಾರ್ಗ ಹೊಂದಿಲ್ಲದ ಕರ್ನಾಟಕದ ಏಕೈಕ ಜಿಲ್ಲೆಯಾಗಿದೆ
2. ಪೂರ್ವದಿಂದ ಪಶ್ಚಿಮದವರೆಗೆ, ಮಲ್ನಾಡನ್ನು ಹಾಯ್ದುಹೋಗುವ ಏಕೈಕ ರೈಲ್ವೆ ಹಾದಿಯೆಂದರೆ ಹಾಸನ-ಮಂಗಳೂರು
ಸರಿಯಾದ ಉತ್ತರವನ್ನು ಆರಿಸಿ.

(a) 1 ಸರಿಯಾಗಿದೆ ಆದರೆ 2 ಸರಿಯಾಗಿಲ್ಲ
(b) 2 ಸರಿಯಾಗಿದೆ ಆದರೆ 1 ಸರಿಯಾಗಿಲ್ಲ
(c) 1 ಮತ್ತು 2 ಎರಡೂ ಸರಿಯಾಗಿಲ್ಲ
(d) 1 ಮತ್ತು 2 ಎರಡೂ ಸರಿಯಾಗಿವೆ

ಸರಿ ಉತ್ತರ

ಸರಿ ಉತ್ತರ:(d) 1 ಮತ್ತು 2 ಎರಡೂ ಸರಿಯಾಗಿವೆ


44. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಸ್ಥಳ :

(a) ಕೊಡಗು
(b) ಚಳ್ಳಕೆರೆ
(c) ಬೀದರ್
(d) ಪುಲಿಂಗೋತ್

ಸರಿ ಉತ್ತರ

ಸರಿ ಉತ್ತರ:(b) ಚಳ್ಳಕೆರೆ


45. ಕಳಸಾ ಬಂಡೂರಿ ಜಲವಿವಾದವು _____________ ಗೆ ಸಂಬಂಧಿಸಿದೆ

(a) ಭೀಮಾ ನದಿ ನೀರಿನ ಹಂಚಿಕೆ
(b) ಮಲಪ್ರಭಾ ನದಿ ನೀರಿನ ಹಂಚಿಕೆ
(c) ಮಾಂಡೋವಿ ನದಿ ನೀರಿನ ಹಂಚಿಕೆ
(d) ಭದ್ರಾ ನದಿ ನೀರಿನ ಹಂಚಿಕೆ

ಸರಿ ಉತ್ತರ

ಸರಿ ಉತ್ತರ:(c) ಮಾಂಡೋವಿ ನದಿ ನೀರಿನ ಹಂಚಿಕೆ


46. ಪಟ್ಟಿ-I (ಹೆಲಿಕಾಪ್ಟರ್ ಮಾದರಿ) ರೊಂದಿಗೆ ಪಟ್ಟಿ-II ಅನ್ನು ಹೊಂದಿಸಿ, ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯಾದ ಉತ್ತರವನ್ನು ಗುರುತಿಸಿ.

 

ಪಟ್ಟಿ –I

 

ಪಟ್ಟಿ -II

A.

 ಕಾವೇರಿ

1.

ಹಿಡ್ಕಲ್

B.

 ಮಲಪ್ರಭಾ

2.

ಗೇರುಸೊಪ್ಪ

C.

 ಶರಾವತಿ

3.

ಕೆ ಆರ್
ಎಸ್

D.

 ಘಟಪ್ರಭಾ

4.

ನವಿಲುತೀರ್ಥ

ಸಂಕೇತ :

      A  B  C  D
(a)  2  1  3  4
(b)  3  4  2  1
(c)  4  1  3  2
(d)  1  3  4  2

ಸರಿ ಉತ್ತರ

ಸರಿ ಉತ್ತರ:(b) 3 4 2 1


47. ಅವುಗಳ ಭೌಗೋಳಿಕ ವಿಸ್ತಾರದ ಆಧಾರದ ಮೇಲೆ ಈ ಮುಂದಿನ ಜಿಲ್ಲೆಗಳ ಸರಿಯಾದ ಆರೋಹಣ ಕ್ರಮ ಏನು?
1. ಗುಲ್ಬರ್ಗಾ (ಕಲ್ಬುರ್ಗಿ)
2. ತುಮಕೂರು
3. ಬೆಳಗಾವಿ
4. ಬಿಜಾಪುರ (ವಿಜಯಪುರ)
ಸರಿಯಾದ ಉತ್ತರವನ್ನು ಆರಿಸಿ.

(a) 2, 3, 4, 1
(b) 2, 3, 1, 4
(c) 4, 1, 2, 3
(d) 4, 2, 1, 3

ಸರಿ ಉತ್ತರ

ಸರಿ ಉತ್ತರ:(d) 4, 2, 1, 3


48. ಇಂದು ಭಾರತದ ಹತ್ತಿಬಟ್ಟೆಗಳನ್ನು ಜಗತ್ತಿನಲ್ಲೇ ಅತಿಹೆಚ್ಚು ಕೊಂಡುಕೊಳ್ಳುವ ರಾಷ್ಟ್ರ ಯಾವುದು?

(a) ಯು.ಕೆ.
(b) ಯು.ಎಸ್.ಎ.
(c) ಸಿ.ಐ.ಎಸ್.
(d) ಫ್ರಾನ್ಸ್

ಸರಿ ಉತ್ತರ

ಸರಿ ಉತ್ತರ:(a) ಯು.ಕೆ.


49. ಚಿರಾಪುಂಜಿ ಮತ್ತು ಮೌಸಿನ್ರಾಂ ಹಳ್ಳಿಗಳಲ್ಲಿ ಹೆಚ್ಚು ಮಳೆ ಬೀಳುವುದಕ್ಕೆ ಕಾರಣ :

(a) ಭಾರತದ ಇತರ ಯಾವುದೇ ಭಾಗಗಳಿಗಿಂತಲೂ ಈ ಹಳ್ಳಿಗಳು ಅತಿ ಹೆಚ್ಚು ಎತ್ತರದಲ್ಲಿರುವುದು
(b) ಬಂಗಾಳಕೊಲ್ಲಿಗೆ ಅತಿ ಸಮೀಪದಲ್ಲಿರುವುದು
(c) ನೈರುತ್ಯ ಮಾನ್ಸೂನ್ ಮತ್ತು ಈಶಾನ್ಯ ಮಾನ್ಸೂನ್ ಮಾರುತಗಳ ಪ್ರಭಾವ
(d) ಮಳೆಭರಿತ ಮಾರುತಗಳು ಖಾಸೀ ಬೆಟ್ಟಗಳಲ್ಲಿ ಬಂಧಿತವಾಗಿರುವುದು

ಸರಿ ಉತ್ತರ

ಸರಿ ಉತ್ತರ:(d) ಮಳೆಭರಿತ ಮಾರುತಗಳು ಖಾಸೀ ಬೆಟ್ಟಗಳಲ್ಲಿ ಬಂಧಿತವಾಗಿರುವುದು


50. ಭಾರತ ಮತ್ತು ಪಾಕಿಸ್ಥಾನಗಳ ನಡುವಿನ ಈ ಮುಂದಿನ ಯಾವ ಎರಡು ನಗರಗಳಿಗೆ ಬಸ್ ಸೇವೆ ಒದಗಿಸಲಾಗಿದೆ?

(a) ಅಮೃತ್ಸರ್-ಲಾಹೋರ್
(b) ಇಸ್ಲಾಮಾಬಾದ್-ಅಮೃತ್ಸರ್
(c) ಇಸ್ಲಾಮಾಬಾದ್-ಡೆಲ್ಲಿ
(d) ಲಾಹೋರ್-ಡೆಲ್ಲಿ

ಸರಿ ಉತ್ತರ

ಸರಿ ಉತ್ತರ:(d) ಲಾಹೋರ್-ಡೆಲ್ಲಿ


51. ಕರ್ನಾಟಕದಲ್ಲಿ ಇತ್ತೀಚೆಗೆ ಅನುಷ್ಠಾನಕ್ಕೆ ಬಂದ ‘ನಮ್ಮ ಮನೆ’ ಗೃಹ ಯೋಜನೆಯು ಒಂದು _____________ ಆಗಿದೆ.

(a) ನಗರ ಬಡವರ ಗೃಹನಿರ್ಮಾಣಕ್ಕಾಗಿ ಬಡ್ಡಿ ಸಹಾಯಧನ ಯೋಜನೆ (ISHUP)
(b) ಮನೆರಹಿತ ಗ್ರಾಮೀಣ ಬಡವರಿಗಾಗಿ ಸಹಾಯಧನ ಯೋಜನೆ (SSHLRP)
(c) ಗ್ರಾಮೀಣ ದುರ್ಬಲ ವರ್ಗಗಳಿಗಾಗಿ ಗೃಹಗಳು (HRWS)
(d) ಗ್ರಾಮೀಣ ಬಡವರಿಗೆ ಸಹಾಯಧನ ಗೃಹನಿರ್ಮಾಣ ಸೌಕರ್ಯ (RPSHF)

ಸರಿ ಉತ್ತರ

ಸರಿ ಉತ್ತರ:(a) ನಗರ ಬಡವರ ಗೃಹನಿರ್ಮಾಣಕ್ಕಾಗಿ ಬಡ್ಡಿ ಸಹಾಯಧನ ಯೋಜನೆ (ISHUP)


52. ಪಾವತಿಗಳ ಬಾಕಿಯ ಚಾಲ್ತಿ ಲೆಕ್ಕವು ಇದನ್ನು ಒಳಗೊಳ್ಳುತ್ತದೆ.

(a) ವ್ಯಾಪಾರದ ಬಾಕಿಯನ್ನು ಮಾತ್ರ
(b) ನಿವ್ವಳ ಹೂಡಿಕೆ ಆದಾಯಗಳು ಮತ್ತು ನಿವ್ವಳ ವರ್ಗಾವಣೆಗಳು
(c) ವ್ಯಾಪಾರ ಬಾಕಿ, ನಿವ್ವಳ ಹೂಡಿಕೆ ಆದಾಯಗಳು ಮತ್ತು ನಿವ್ವಳ ವರ್ಗಾವಣೆಗಳು
(d) ನಿವ್ವಳ ವರ್ಗಾವಣೆಗಳು ಮತ್ತು ವ್ಯಾಪಾರ ಬಾಕಿ

ಸರಿ ಉತ್ತರ

ಸರಿ ಉತ್ತರ:(c) ವ್ಯಾಪಾರ ಬಾಕಿ, ನಿವ್ವಳ ಹೂಡಿಕೆ ಆದಾಯಗಳು ಮತ್ತು ನಿವ್ವಳ ವರ್ಗಾವಣೆಗಳು


53. “ವಿವಿಧ ಬಳಕೆಗಾಗಿ ನೀರಿನ ಲಭ್ಯತೆ ಮತ್ತು ಅಗತ್ಯತೆಯ ನಿರ್ಧರಣೆ-2000” ಮೇಲಿನ ಸ್ಥಾಯಿ ಉಪಸಮಿತಿಯ ವರದಿಯ ಪ್ರಕಾರ 2025ರಲ್ಲಿ ಭಾರತದಲ್ಲಿ ನೀರಾವರಿಗೆ ಅಂದಾಜು ಮಾಡಲಾದ ನೀರಿನ ಬೇಡಿಕೆಯು _____________ ರಷ್ಟಿರುತ್ತದೆ.

(a) 618 ಬಿಲಿಯನ್ ಕ್ಯೂಬಿಕ್ ಮೀಟರುಗಳು
(b) 910 ಬಿಲಿಯನ್ ಕ್ಯೂಬಿಕ್ ಮೀಟರುಗಳು
(c) 1024 ಬಿಲಿಯನ್ ಕ್ಯೂಬಿಕ್ ಮೀಟರುಗಳು
(d) 2856 ಬಿಲಿಯನ್ ಕ್ಯೂಬಿಕ್ ಮೀಟರುಗಳು

ಸರಿ ಉತ್ತರ

ಸರಿ ಉತ್ತರ:(b) 910 ಬಿಲಿಯನ್ ಕ್ಯೂಬಿಕ್ ಮೀಟರುಗಳು


54. ಭಾರತ ಸರ್ಕಾರದ ದೃಷ್ಟಿಯಲ್ಲಿ ಉನ್ನತ ಶಿಕ್ಷಣ ನೀತಿಯು ಈ ಮುಂದಿನ ಮೂರು ‘E’ಗಳಿಂದ ಪ್ರೇರೇಪಿಸಲ್ಪಟ್ಟಿರಬೇಕು.

(a) ಶಿಕ್ಷಣ, ಹಿರಿಮೆ ಹಾಗೂ ಆರ್ಥಿಕತೆ
(b) ವಿಸ್ತರಣೆ, ಸಮತೆ ಮತ್ತು ಹಿರಿಮೆ
(c) ಸಮಾನತೆ, ಸಬಲತೆ ಮತ್ತು ವಿಸ್ತರಣೆ
(d) ಪ್ರೋತ್ಸಾಹ, ಪರಿಣಾಮಕಾರಿತ್ವ ಮತ್ತು ಸಾಮರ್ಥ್ಯ

ಸರಿ ಉತ್ತರ

ಸರಿ ಉತ್ತರ:(b) ವಿಸ್ತರಣೆ, ಸಮತೆ ಮತ್ತು ಹಿರಿಮೆ


55. ತೃತೀಯ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ಎಂದರೆ 1961-1962 ರಿಂದ 1965-1966ರ ಅವಧಿಯಲ್ಲಿ ಆಮದುಗಳ ಏರಿಕೆಗೆ ಕಾರಣ
1. ತ್ವರಿತ ಕೈಗಾರಿಕೀಕರಣವು ಹೆಚ್ಚಿನ ಸಂಖ್ಯೆಯ ಯಂತ್ರೋೋಪಕರಣಗಳು, ಸಾಧನ ಸಾಮಗ್ರಿಗಳು, ಕೈಗಾರಿಕಾ ಕಚ್ಚಾ ಸರಕುಗಳು ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಲು ಅಗತ್ಯಪಡಿಸಿತು.
2. ಚೀನಾ ಮತ್ತು ಪಾಕಿಸ್ಥಾನ ದಾಳಿಯ ನಂತರ ರಕ್ಷಣಾ ಅಗತ್ಯತೆಗಳು ಹೆಚ್ಚಾದವು.
3. 1965-66ರಲ್ಲಿನ ವ್ಯಾಪಕ ಬೆಳೆ ವೈಫಲ್ಯವು ದೊಡ್ಡ ಪ್ರಮಾಣದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಕಾರಣವಾಯಿತು.
4. ಆಮದುಗಳು ಹಣದುಬ್ಬರ ನಿವಾರಕವಾಗಿವೆ. ಏಕೆಂದರೆ ಅವು ಗ್ರಾಹಕ ಸರಕುಗಳ ಕೊರತೆಯನ್ನು ಕಡಿಮೆ ಮಾಡುತ್ತವೆ.
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

(a) 1 ಮತ್ತು 2
(b) 1, 2 ಮತ್ತು 3
(c) 3 ಮಾತ್ರ
(d) 4 ಮಾತ್ರ

ಸರಿ ಉತ್ತರ

ಸರಿ ಉತ್ತರ:(b) 1, 2 ಮತ್ತು 3


56. ಹೆಚ್ಚಿನ ತಲಾ ಆದಾಯವು _____________ ಕ್ಷೇತ್ರದಲ್ಲಿ ತೊಡಗಿರುವ ಸಕ್ರಿಯ ಜನಸಂಖ್ಯೆಯೊಂದಿಗೆ, ಪರಸ್ಪರ ಪ್ರತಿಲೋಮ ಅನ್ಯೋನ್ಯತೆಯನ್ನು ಹೊಂದಿದೆ.

(a) ಕೃಷಿ
(b) ಕೈಗಾರಿಕೆ
(c) ಸೇವೆಗಳು
(d) ವಿದೇಶಿ ವ್ಯಾಪಾರ

ಸರಿ ಉತ್ತರ

ಸರಿ ಉತ್ತರ:(a) ಕೃಷಿ


57. ಭಾರತದ ಎನ್ ಡಿ ಪಿಯು ಎನ್ಎನ್ ಪಿ ಗಿಂತಲೂ ಹೆಚ್ಚಾದಲ್ಲಿ ಅದು ಏನನ್ನು ಸೂಚಿಸುತ್ತದೆ ?

(a) ಖಾಸಗಿ ವಲಯದಲ್ಲಿ ಉತ್ಪಾದನೆಯ ಮಟ್ಟವು ಹೆಚ್ಚಾಗಿದೆ
(b) ಸಾರ್ವಜನಿಕ ವಲಯದಲ್ಲಿ ಉತ್ಪಾದನೆಯ ಮಟ್ಟವು ಹೆಚ್ಚಾಗಿದೆ
(c) ವಿದೇಶದಿಂದ ನಿವ್ವಳ ಗಳಿಕೆಗಳು ಧನಾತ್ಮಕವಾಗಿವೆ
(d) ವಿದೇಶದಿಂದ ನಿವ್ವಳ ಗಳಿಕೆಗಳು ಋಣಾತ್ಮಕವಾಗಿವೆ

ಸರಿ ಉತ್ತರ

ಸರಿ ಉತ್ತರ:(d) ವಿದೇಶದಿಂದ ನಿವ್ವಳ ಗಳಿಕೆಗಳು ಋಣಾತ್ಮಕವಾಗಿವೆ


58. ದೇಶದಲ್ಲಿನ ಜನನ ದರವನ್ನು ಮಾಪನ ಮಾಡುವುದು ಹೀಗೆ

(a) ದೇಶದಲ್ಲಿ ಜನಿಸುವ ಮಕ್ಕಳ ಸಂಖ್ಯೆ
(b) ದೇಶದಲ್ಲಿನ ಒಟ್ಟು ಮಹಿಳೆಯರ ಶೇಕಡಾ ಸಂಖ್ಯೆಗೆ ಜನಿಸುವ ಮಕ್ಕಳ ಸಂಖ್ಯೆ
(c) ಪ್ರತಿ 1000 ಅರ್ಹ ದಂಪತಿಗಳಿಗೆ ಜನಿಸುವ ಮಕ್ಕಳ ಸಂಖ್ಯೆ
(d) ದೇಶದ ಪ್ರತಿ 1000 ಜನಸಂಖ್ಯೆಗೆ ಜನಿಸುವ ಮಕ್ಕಳ ಸಂಖ್ಯೆ

ಸರಿ ಉತ್ತರ

ಸರಿ ಉತ್ತರ:(d) ದೇಶದ ಪ್ರತಿ 1000 ಜನಸಂಖ್ಯೆಗೆ ಜನಿಸುವ ಮಕ್ಕಳ ಸಂಖ್ಯೆ


59. ಭಾರತದಲ್ಲಿ ಭೂ ಹಿಡುವಳಿಯ ಪುನರ್ವಿಭಾಗಿಸುವಿಕೆ ಹಾಗೂ ತುಂಡು-ತುಂಡಾದ ಭೂಮಿಯು ಹಲವಾರು ಕಾರಣಗಳಿಗೆ ಗಂಭೀರದ ವಿಷಯವಾಗುತ್ತದೆ.
1. ಭೂಮಿಯ ಮೇಲೆ ಜನಸಂಖ್ಯೆಯ ಒತ್ತಡ
2. ಪಿತ್ರಾರ್ಜಿತ ಹಾಗೂ ಉತ್ತರಾಧಿಕಾರದ ಕಾಯ್ದೆ
3. ಅವಿಭಕ್ತ ಕುಟುಂಬ ವ್ಯವಸ್ಥೆಯ ವಿಭಜನೆ
4. ಸಣ್ಣ ಹಾಗೂ ಅತಿಸಣ್ಣ ರೈತರ ಸಾಲ ಬೆಳೆಯುವಿಕೆ
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

(a) 1 ಮಾತ್ರ
(b) 1 ಮತ್ತು 2
(c) 2 ಮತ್ತು 3
(d) 1, 2, 3 ಹಾಗೂ 4

ಸರಿ ಉತ್ತರ

ಸರಿ ಉತ್ತರ:(d) 1, 2, 3 ಹಾಗೂ 4


60. ಆದಾಯ ಅಸಮಾನತೆ / ವಿಷಮತೆಗಳನ್ನು ತಗ್ಗಿಸುವಲ್ಲಿ ಯಾವ ರೀತಿಯ ತೆರಿಗೆಗಳು ನೆರವಾಗುತ್ತವೆ?

(a) ತಟಸ್ಥ ತೆರಿಗೆಗಳು
(b) ಪ್ರಮಾಣಾತ್ಮಕ (ದಾಮಾಷಾ) ತೆರಿಗೆಗಳು
(c) ಮುಂಚಲನೆ ತೆರಿಗೆಗಳು
(d) ಹಿಂಚಲನೆ ತೆರಿಗೆಗಳು

ಸರಿ ಉತ್ತರ

ಸರಿ ಉತ್ತರ:(c) ಮುಂಚಲನೆ ತೆರಿಗೆಗಳು


61. ವಿಭಾಗೀಯ ಸಂಚಿತ (ಒಟ್ಟುಗೂಡಿಸಿದ) ಅನುಭೋಗ ವಂಚಿತ ಸೂಚ್ಯಂಕ (CDI) ಆಧಾರದ ಮೇಲೆ, ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲಿರುವ ಹೈಪವರ್ ಸಮಿತಿ (HPC-FRR1-2002)ಯು, ಅಭಿವೃದ್ಧಿ ಅಸಮತೋಲನ ಕಡಿಮೆ ಮಾಡಲು, ಹೆಚ್ಚಿನ ಹಣಕಾಸು ಸಂಪನ್ಮೂಲಗಳ ಪ್ರಾದೇಶಿಕ ಹಂಚಿಕೆ, ಈ ಕೆಳಗಿನಂತೆ ಆಗಬೇಕೆಂದು ಶಿಾರಸ್ಸು ಮಾಡಿತು.

(a) (ಗುಲಬರ್ಗಾ) ಕಲಬುರಗಿ ವಿಭಾಗ = 20% + (ಬೆಳಗಾಂ) ಬೆಳಗಾವಿ ವಿಭಾಗ = 40% = 60% ಉತ್ತರ ಕರ್ನಾಟಕ ಪ್ರದೇಶಕ್ಕೆ ಹಾಗೂ ಬೆಂಗಳೂರು ವಿಭಾಗ = 15% + ಮೈಸೂರು ವಿಭಾಗ 25% = 40% ದಕ್ಷಿಣ ಕರ್ನಾಟಕ ಪ್ರದೇಶಕ್ಕೆ
(b) (ಗುಲಬರ್ಗಾ) ಕಲಬುರಗಿ ವಿಭಾಗ = 40% + (ಬೆಳಗಾಂ) ಬೆಳಗಾವಿ ವಿಭಾಗ = 20% = 60% ಉತ್ತರ ಕರ್ನಾಟಕ ಪ್ರದೇಶಕ್ಕೆ ಹಾಗೂ ಬೆಂಗಳೂರು ವಿಭಾಗ = 25% + ಮೈಸೂರು ವಿಭಾಗ 15% = 40% ದಕ್ಷಿಣ ಕರ್ನಾಟಕ ಪ್ರದೇಶಕ್ಕೆ
(c) (ಗುಲಬರ್ಗಾ) ಕಲಬುರಗಿ ವಿಭಾಗ = 25% + (ಬೆಳಗಾಂ) ಬೆಳಗಾವಿ ವಿಭಾಗ = 15% = 40% ಉತ್ತರ ಕರ್ನಾಟಕ ಪ್ರದೇಶಕ್ಕೆ ಹಾಗೂ ಬೆಂಗಳೂರು ವಿಭಾಗ = 40% + ಮೈಸೂರು ವಿಭಾಗ 20% = 60% ದಕ್ಷಿಣ ಕರ್ನಾಟಕ ಪ್ರದೇಶಕ್ಕೆ
(d) (ಗುಲಬರ್ಗಾ) ಕಲಬುರಗಿ ವಿಭಾಗ = 15% + (ಬೆಳಗಾಂ) ಬೆಳಗಾವಿ ವಿಭಾಗ = 25% = 40% ಉತ್ತರ ಕರ್ನಾಟಕ ಪ್ರದೇಶಕ್ಕೆ ಹಾಗೂ ಬೆಂಗಳೂರು ವಿಭಾಗ = 20% + ಮೈಸೂರು ವಿಭಾಗ 40% = 60% ದಕ್ಷಿಣ ಕರ್ನಾಟಕ ಪ್ರದೇಶಕ್ಕೆ

ಸರಿ ಉತ್ತರ

ಸರಿ ಉತ್ತರ:(b) (ಗುಲಬರ್ಗಾ) ಕಲಬುರಗಿ ವಿಭಾಗ = 40% + (ಬೆಳಗಾಂ) ಬೆಳಗಾವಿ ವಿಭಾಗ = 20% = 60% ಉತ್ತರ ಕರ್ನಾಟಕ ಪ್ರದೇಶಕ್ಕೆ ಹಾಗೂ ಬೆಂಗಳೂರು ವಿಭಾಗ = 25% + ಮೈಸೂರು ವಿಭಾಗ 15% = 40% ದಕ್ಷಿಣ ಕರ್ನಾಟಕ ಪ್ರದೇಶಕ್ಕೆ


62. ಎಲ್ಲ ಆದರೆ 5 ಉತ್ಪನ್ನಗಳು ಹೊರತುಪಡಿಸಿ ಉದ್ದಿಮೆಯ ಪರವಾನಗಿಯ ಅಗತ್ಯತೆಯನ್ನು (ಉದ್ದಿಮೆ ನೀತಿ-1991) ರದ್ದುಪಡಿಸಲಾಯಿತು. ಅವು ಹೀಗಿವೆ.

(a) ಆಲ್ಕೋಹಾಲ್, ಸಿಗರೇಟ್ಗಳು, ಅಪಾಯಕಾರಿ ರಾಸಾಯನಿಕ ವಸ್ತುಗಳು, ಉದ್ದಿಮೆಯ ಸ್ಫೋಟಕಗಳು, ಎಲೆಕ್ಟ್ರಾನಿಕ್ ವಾಯುಮಾರ್ಗದ ಮತ್ತು ರಕ್ಷಣೆಯ ಸಲಕರಣೆಗಳು (ಎಲ್ಲ ತರಹದ) ಮತ್ತು ಕೃಷಿ ಉತ್ಪನ್ನಗಳು
(b) ಆಲ್ಕೋೋಹಾಲ್, ಸಿಗರೇಟ್ಗಳು, ಅಪಾಯಕಾರಿ ರಾಸಾಯನಿಕ ವಸ್ತುಗಳು, ಉದ್ದಿಮೆಯ ಸ್ಫೋಟಕಗಳು, ಎಲೆಕ್ಟ್ರಾನಿಕ್ ವಾಯುಮಾರ್ಗದ ಮತ್ತು ರಕ್ಷಣೆಯ ಸಲಕರಣೆಗಳು (ಎಲ್ಲ ತರಹದ)
(c) ಆಲ್ಕೋೋಹಾಲ್, ಸಿಗರೇಟ್ಗಳು, ಅಪಾಯಕಾರಿ ರಾಸಾಯನಿಕ ವಸ್ತುಗಳು, ಉದ್ದಿಮೆಯ ಸ್ಫೋಟಕಗಳು, ಮತ್ತು ರಕ್ಷಣೆಯ ಸಲಕರಣೆಗಳು
(d) ಸಿಗರೇಟ್, ಅಪಾಯಕಾರಿ ರಾಸಾಯನಿಕ ವಸ್ತುಗಳು, ಉದ್ದಿಮೆಯ ಸ್ಫೋಟಕಗಳು, ಎಲೆಕ್ಟ್ರಾನಿಕ್ ವಾಯುಮಾರ್ಗದ ಮತ್ತು ರಕ್ಷಣೆಯ ಸಲಕರಣೆಗಳು

ಸರಿ ಉತ್ತರ

ಸರಿ ಉತ್ತರ:(b) ಆಲ್ಕೋೋಹಾಲ್, ಸಿಗರೇಟ್ಗಳು, ಅಪಾಯಕಾರಿ ರಾಸಾಯನಿಕ ವಸ್ತುಗಳು, ಉದ್ದಿಮೆಯ ಸ್ಫೋಟಕಗಳು, ಎಲೆಕ್ಟ್ರಾನಿಕ್ ವಾಯುಮಾರ್ಗದ ಮತ್ತು ರಕ್ಷಣೆಯ ಸಲಕರಣೆಗಳು (ಎಲ್ಲ ತರಹದ)


63. ಈ ಕೆಳಕಂಡ ಯಾವ ರಾಷ್ಟ್ರದ ಶೃಂಗಸಭೆಯಲ್ಲಿ BRICS ಅಭಿವೃದ್ಧಿ ಬ್ಯಾಂಕನ್ನು ಪ್ರಾರಂಭಿಸಲಾಯಿತು?

(a) ರಷ್ಯಾ
(b) ದಕ್ಷಿಣ ಆಫ್ರಿಕಾ
(c) ಚೀನಾ
(d) ಬ್ರೆಜಿಲ್

ಸರಿ ಉತ್ತರ

ಸರಿ ಉತ್ತರ:(d) ಬ್ರೆಜಿಲ್


64. ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ ?
ಬಡತನದ ‘ಸೆನ್ ಮಾನಕ’ವು ಒಂದು ಸಮಾಜದಲ್ಲಿನ ಸಂಪತ್ತಿನ ವಿತರಣೆಗಿಂತಲೂ ನಿಜವಾಗಿ ಕಲ್ಯಾಣದ ಹಂಚಿಕೆಯನ್ನು ಅಳತೆ ಮಾಡುತ್ತದೆಂದು ಹೇಳಲಾಗುತ್ತದೆ. ಏಕೆಂದರೆ

(a) ಅದು ಬಡತನವನ್ನು ಕನಿಷ್ಠ ಮಟ್ಟದ ಜೀವನ ನಿರ್ವಹಣೆ ಅಂಶಗಳಲ್ಲಿ ಗುರುತಿಸುತ್ತದೆ
(b) ಅದು ಒಂದು ಕುಟುಂಬದ ಶಕ್ತಿ ಅಗತ್ಯತೆಗಳನ್ನು ಅಳತೆ ಮಾಡುತ್ತದೆ.
(c) ಅದು ಯೋಗಕ್ಷೇಮದ ಒಂದು ಸಾರ್ವತ್ರಿಕ ಮಾನಕವನ್ನು ಗೊತ್ತುಪಡಿಸುತ್ತದೆ.
(d) ಬಡತನದ ರೇಖೆಗಿಂತ ಕೆಳಗಿನ ಪ್ರತಿಯೊಬ್ಬ ವ್ಯಕ್ತಿಯ ಆದಾಯದ ಕೊರತೆಯನ್ನು ಅಳತೆ ಮಾಡಲು ಕೋರುತ್ತದೆ.

ಸರಿ ಉತ್ತರ

ಸರಿ ಉತ್ತರ:(d) ಬಡತನದ ರೇಖೆಗಿಂತ ಕೆಳಗಿನ ಪ್ರತಿಯೊಬ್ಬ ವ್ಯಕ್ತಿಯ ಆದಾಯದ ಕೊರತೆಯನ್ನು ಅಳತೆ ಮಾಡಲು ಕೋರುತ್ತದೆ.


65. ಡೀಸೆಲ್ ಮತ್ತು ಅಡುಗೆ ಇಂಧನದ ಬೆಲೆ ನಿಗದಿ ಮಾಡುವ ವಿಧಾನಕ್ರಮವನ್ನು ಸಲಹೆ ಮಾಡಲು ಯಾವ ಸಮಿತಿಯನ್ನು ರಚಿಸಲಾಯಿತು?

(a) ಕಿರೀಟ್ ಪಾರಿಖ್ ಸಮಿತಿ
(b) ಹನುಮಂತರಾವ್ ಸಮಿತಿ
(c) ನರೇಶ್ ಚಂದ್ರ ಸಮಿತಿ
(d) ಆತ್ರೇಯ ಸಮಿತಿ

ಸರಿ ಉತ್ತರ

ಸರಿ ಉತ್ತರ:(a) ಕಿರೀಟ್ ಪಾರಿಖ್ ಸಮಿತಿ


66. ಭಾರತವು 2014ರ ASEAN ನೊಂದಿಗೆ ಸಹಿ ಮಾಡಿದ FTA ಯು ಈ ಮುಂದಿನ ಕ್ಷೇತ್ರಗಳಲ್ಲಿ ಮಾನವ ಶಕ್ತಿ ಮತ್ತು ಹೂಡಿಕೆಗಳ ಚಲನೆಗೆ ಅವಕಾಶ ಮಾಡಿಕೊಡುತ್ತದೆ.
1. ಹಣಕಾಸು
2. ನಾಗರಿಕ ಆಕಾಶಯಾನ (Aviation)
3. ಆರೋಗ್ಯ
4. ಮಾಹಿತಿ ತಂತ್ರಜ್ಞಾನ
ಕೆಳಗೆ ನೀಡಿದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ.

(a) 1 ಮತ್ತು 2
(b) 1, 3 ಮತ್ತು 4
(c) 4 ಮತ್ತು 1
(d) 1, 2, 3 ಮತ್ತು 4

ಸರಿ ಉತ್ತರ

ಸರಿ ಉತ್ತರ:(b) 1, 3 ಮತ್ತು 4


67. ಈ ಮುಂದಿನ ಯಾವ ಎರಡು ದೇಶಗಳು 2003-2004ರಲ್ಲಿ BIMSTEC ಅನ್ನು ಸೇರಿದವು ?

(a) ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್
(b) ಮಾಲ್ಡೀವ್ಸ್ ಮತ್ತು ಭೂತಾನ್
(c) ಚೀನಾ ಮತ್ತು ನೇಪಾಳ
(d) ನೇಪಾಳ ಮತ್ತು ಭೂತಾನ್

ಸರಿ ಉತ್ತರ

ಸರಿ ಉತ್ತರ:(d) ನೇಪಾಳ ಮತ್ತು ಭೂತಾನ್


68. ಬಹುಪಕ್ಷೀಯ ವ್ಯಾಪಾರ ಸಂಧಾನಗಳ ಯಾವ ಸಮ್ಮೇಳನದಲ್ಲಿ ಸೇವೆಗಳು ಮತ್ತು ಕೃಷಿಯನ್ನು ಪ್ರಥಮ ಬಾರಿಗೆ ಸೇರ್ಪಡೆ ಮಾಡಲಾಯಿತು?

(a) ದೋಹಾ ಸಮ್ಮೇಳನ
(b) ಉರುಗ್ವೆ ಸಮ್ಮೇಳನ
(c) ಬಾಲಿ ಸಮ್ಮೇಳನ
(d) ಸಿಯಾಟಲ್ ಸಮ್ಮೇಳನ

ಸರಿ ಉತ್ತರ

ಸರಿ ಉತ್ತರ:(b) ಉರುಗ್ವೆ ಸಮ್ಮೇಳನ


69. ಮುಂದಿನ ಯಾವ ವಿದೇಶಿ ವ್ಯಾಪಾರ ನೀತಿಗಳಲ್ಲಿ ರಫ್ತು ಉತ್ತೇಜಕ ಮೂಲ ಸರಕುಗಳನ್ನು (EPCG) ಪರಿಚಯಿಸಲಾಯಿತು ?

(a) ವಿದೇಶಿ ವ್ಯಾಪಾರ ನೀತಿ, 2014-19
(b) ವಿದೇಶಿ ವ್ಯಾಪಾರ ನೀತಿ, 2004-09
(c) ವಿದೇಶಿ ವ್ಯಾಪಾರ ನೀತಿ, 2009-14
(d) ವಿದೇಶಿ ವ್ಯಾಪಾರ ನೀತಿ, 2008-09

ಸರಿ ಉತ್ತರ

ಸರಿ ಉತ್ತರ:(b) ವಿದೇಶಿ ವ್ಯಾಪಾರ ನೀತಿ, 2004-09


70. ಏಪ್ರಿಲ್ 2000 ದಿಂದ ಮಾರ್ಚ್ 2014ರ ಅವಧಿಯಲ್ಲಿನ ಸಂಚಿತ ಎಫ್ ಡಿ ಐ ಈಕ್ವಿಟಿ ಒಳಹರಿವುಗಳ ಶೇಕಡಾ ಪ್ರಮಾಣದ ಸಂಬಂಧದಲ್ಲಿ, ಭಾರತೀಯ ಸೇವಾ ವಲಯದಲ್ಲಿ ಎಫ್ ಡಿ ಐ ಪಾಲು ಎಷ್ಟಿದೆ ?

(a) ಶೇ. 45
(b) ಶೇ. 54
(c) ಶೇ. 65
(d) ಶೇ. 57

ಸರಿ ಉತ್ತರ

ಸರಿ ಉತ್ತರ:(a) ಶೇ. 45


71. ವಿಭಿನ್ನ ದೇಶಗಳ ನಡುವಿನ ಆರ್ಥಿಕ ಸಮಗ್ರತೆಯ ಪ್ರಕ್ರಿಯೆಯಲ್ಲಿ ಈ ಮುಂದಿನ ಯಾವುದು ಸರಿಯಾದ ಶ್ರೇಣಿಯ ಕ್ರಮವಾಗಿದೆ?

(a) ಸಾಮಾನ್ಯ ಮಾರುಕಟ್ಟೆ-ಮುಕ್ತ ವ್ಯಾಪಾರ ಪ್ರದೇಶ-ಸುಂಕ ಒಕ್ಕೂಟ (ಕಸ್ಟಮ್ ಯೂನಿಯನ್) -ಆರ್ಥಿಕ ಒಕ್ಕೂಟ
(b) ಮುಕ್ತ ವ್ಯಾಪಾರ ಪ್ರದೇಶ-ಸುಂಕದ ಒಕ್ಕೂಟ- ಸಾಮಾನ್ಯ ಮಾರುಕಟ್ಟೆ-ಆರ್ಥಿಕ ಒಕ್ಕೂಟ
(c) ಮುಕ್ತ ವ್ಯಾಪಾರ ಪ್ರದೇಶ-ಸಾಮಾನ್ಯ ಮಾರುಕಟ್ಟೆ-ಸುಂಕ ಒಕ್ಕೂಟ-ಆರ್ಥಿಕ ಒಕ್ಕೂಟ
(d) ಸಾಮಾನ್ಯ ಮಾರುಕಟ್ಟೆ-ಮುಕ್ತ ವ್ಯಾಪಾರ ಪ್ರದೇಶ- ಆರ್ಥಿಕ ಒಕ್ಕೂಟ-ಸುಂಕ ಒಕ್ಕೂಟ

ಸರಿ ಉತ್ತರ

ಸರಿ ಉತ್ತರ:(b) ಮುಕ್ತ ವ್ಯಾಪಾರ ಪ್ರದೇಶ-ಸುಂಕದ ಒಕ್ಕೂಟ- ಸಾಮಾನ್ಯ ಮಾರುಕಟ್ಟೆ-ಆರ್ಥಿಕ ಒಕ್ಕೂಟ)


72. ಈ ಮುಂದಿನ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರ್ಯಾಲೋಚಿಸಿ.
1. ದುಡಿಮೆ ಕಾರ್ಯಕ್ರಮಕ್ಕಾಗಿ ಆಹಾರ
2. ಸಮುದಾಯ ಅಭಿವೃದ್ಧಿ ಕಾರ್ಯಕ್ರಮ
3. TRYSEM
4. IRDP
ಸರ್ಕಾರವು ಈ ಕಾರ್ಯಕ್ರಮಗಳನ್ನು ಆರಂಭಿಸಿದ ಸರಿಯಾದ ಕಾಲಾನುಕ್ರಮಣಿಕೆಯನ್ನು ಗುರುತಿಸಿ.

(a) 1, 2, 3, 4
(b) 2, 1, 4, 3
(c) 1, 2, 4, 3
(d) 2, 1, 3, 4

ಸರಿ ಉತ್ತರ

ಸರಿ ಉತ್ತರ:(d) 2, 1, 3, 4


73. ಈ ಕೆಳಗಿನ ಯಾವ ನಗರದಲ್ಲಿ ಹಡಗು ನಿರ್ಮಾಣ ಕೈಗಾರಿಕೆಯು ಸ್ಥಾಪಿತವಾಗಿದೆ ?

(a) ಚೆನ್ನೈ
(b) ಪಾರಾದೀಪ್
(c) ಮುಂಬೈ
(d) ಕೊಚ್ಚಿನ್

ಸರಿ ಉತ್ತರ

ಸರಿ ಉತ್ತರ:(d) ಕೊಚ್ಚಿನ್


74. ಭಾರತ ಸರ್ಕಾರವು ಪೆಟ್ರೋಲ್, ಡೀಸೆಲ್, ಎಲ್ಪಿಜಿ, ಸೀಮೆಎಣ್ಣೆ ಬೆಲೆಗಳನ್ನು ವಿನಿಯಂತ್ರಣ (ಡಿಕಂಟ್ರೋಲ್) ಗೊಳಿಸಲು ನಿರ್ಧರಿಸಿದೆ. ವಿನಿಯಂತ್ರಣ ಎಂದರೇನು ?

(a) ಬೆಲೆಗಳನ್ನು ತೈಲ ಸಂಸ್ಥೆಗಳು ನಿರ್ಧರಿಸಬೇಕು, ಸರ್ಕಾರವಲ್ಲ
(b) ಸಹಾಯಧನ (ಸಬ್ಸಿಡಿ) ಇಲ್ಲ . ಆದರೆ ಮಾರುಕಟ್ಟೆ ಸಂಯೋಜಿತ ಬೆಲೆಗಳಿರುತ್ತವೆ
(c) ಬೆಲೆಗಳನ್ನು ಜಾಗತಿಕ ಕಚ್ಚಾ ಬೆಲೆಗಳೊಂದಿಗೆ ಜೋಡಿಸಲಾಗುತ್ತದೆ ಹಾಗೂ ಬೆಲೆಗಳು ನಿಯತ ಕಾಲಿಕವಾಗಿ ಬದಲಾಗುತ್ತವೆ
(d) ಮೇಲಿನ ಎಲ್ಲವೂ

ಸರಿ ಉತ್ತರ

ಸರಿ ಉತ್ತರ:(d) ಮೇಲಿನ ಎಲ್ಲವೂ


75. ಭಾರತವು WTOದ ಸದಸ್ಯ ರಾಷ್ಟ್ರವಾದದ್ದು ಯಾವಾಗ?

(a) 1993
(b) 1995
(c) 1994
(d) 1992

ಸರಿ ಉತ್ತರ

ಸರಿ ಉತ್ತರ:(b) 1995


76. 2014ರ ಜ್ಞಾನಪೀಠ ಪ್ರಶಸ್ತಿಯು ಯಾರಿಗೆ ಸಂದಿದೆ ?

(a) ಚಂದ್ರಶೇಖರ್ ಕಂಬಾರ
(b) ಬಾಲಚಂದ್ರ ನೇಮಾಡೆ
(c) ನಿರ್ಮಲ ವರ್ಮಾ
(d) ಗುರ್ದಯಾಲ್ ಸಿಂಗ್

ಸರಿ ಉತ್ತರ

ಸರಿ ಉತ್ತರ:(b) ಬಾಲಚಂದ್ರ ನೇಮಾಡೆ


77. ಇತ್ತೀಚಿನ ‘ಅರಬ್ ಸ್ಪ್ರಿಂಗ್’ ಎಂಬ ಸಾಮುದಾಯಿಕ ದಂಗೆ ಈ ಕೆಳಗಿನ ಯಾವ ದೇಶದಲ್ಲಿ ಆರಂಭವಾಯಿತು?

(a) ಈಜಿಪ್ಟ್
(b) ಲಿಬಿಯಾ
(c) ಸಿರಿಯಾ
(d) ಟ್ಯುನೀಶಿಯಾ

ಸರಿ ಉತ್ತರ

ಸರಿ ಉತ್ತರ:(d) ಟ್ಯುನೀಶಿಯಾ


78. ಸಾರ್ಕ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು ತಲಾ ಆದಾಯ (ಪರ್ ಕ್ಯಾಪಿಟಲ್ ಇನ್ಕಮ್) ಹೊಂದಿರುವ ರಾಷ್ಟ್ರ _____________

(a) ಭಾರತ
(b) ಪಾಕಿಸ್ತಾನ
(c) ಶ್ರೀಲಂಕಾ
(d) ಬಾಂಗ್ಲಾದೇಶ

ಸರಿ ಉತ್ತರ

ಸರಿ ಉತ್ತರ:(c) ಶ್ರೀಲಂಕಾ


79. ‘ಭಾರತೀಯ ಮಹಿಳಾ ಬ್ಯಾಂಕ್’ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ?

(a) ಇದು ಮಹಿಳೆಯರಿಗೆ ಸಾಲ ಕೊಡಲು ಆದ್ಯತೆ ನೀಡುತ್ತದೆ
(b) ಇದು ಜಗತ್ತಿನಲ್ಲೇ ಮಹಿಳೆಯರಿಗಾಗಿ ಇರುವ ಪ್ರಪ್ರಥಮ ವಿಶೇಷ ರೀತಿಯ ಬ್ಯಾಂಕು
(c) ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದೆ
(d) ಇದರ ಮಂಡಳಿಯಲ್ಲಿ ಎಲ್ಲ ಮಹಿಳಾ ನಿರ್ದೇಶಕರುಗಳೇ ಇರುತ್ತಾರೆ

ಸರಿ ಉತ್ತರ

ಸರಿ ಉತ್ತರ:(b) ಇದು ಜಗತ್ತಿನಲ್ಲೇ ಮಹಿಳೆಯರಿಗಾಗಿ ಇರುವ ಪ್ರಪ್ರಥಮ ವಿಶೇಷ ರೀತಿಯ ಬ್ಯಾಂಕು


80. ಎರಡನೇ ಕಾಲುವೆ ಟಾಪ್ 10 ಎಂಡಬ್ಲ್ಯೂ ಸಾಮರ್ಥ್ಯದ ಸೌರಶಕ್ತಿಯ ವಿದ್ಯುತ್ ಯೋಜನೆಯನ್ನು 2014ರಲ್ಲಿ ಯು.ಎನ್. ಸೆಕ್ರೆಟರಿ ಜನರಲ್ ಬಾನ್ ಕಿ ಮೂನ್ ಎಲ್ಲಿ ಉದ್ಘಾಟಿಸಿದರು?

(a) ಗುಜರಾತ್
(b) ಕರ್ನಾಟಕ
(c) ಉತ್ತರ ಪ್ರದೇಶ
(d) ಮಹಾರಾಷ್ಟ್ರ

ಸರಿ ಉತ್ತರ

ಸರಿ ಉತ್ತರ:(a) ಗುಜರಾತ್


81. ಪ್ರಧಾನಮಂತ್ರಿಯವರ ಜನ್ ಧನ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಲ್ಲ ?

(a) ಖಾತೆ ಹೊಂದಿರುವವರಿಗೆ ಶೂನ್ಯ ಶಿಲ್ಕು ಬ್ಯಾಂಕ್ ಖಾತೆಯನ್ನು ಒದಗಿಸಲಾಗುವುದು
(b) ಖಾತೆ ಹೊಂದಿರುವವರಿಗೆ ಡೆಬಿಟ್ ಕಾರ್ಡನ್ನು ಒದಗಿಸಲಾಗುವುದು
(c) ಖಾತೆ ಹೊಂದಿರುವವರಿಗೆ, 1 ಲಕ್ಷ ರೂ.ಗಳ ಜೀವ ವಿಮಾ ರಕ್ಷಣೆಯನ್ನು ನೀಡಲಾಗುವುದು
(d) ಖಾತೆ ಹೊಂದಿರುವವರಿಗೆ ಒಂದು ಲಕ್ಷ ರೂ.ಗಳ ಅಪಘಾತ ವಿಮಾ ರಕ್ಷಣೆಯನ್ನು ನೀಡಲಾಗುವುದು

ಸರಿ ಉತ್ತರ

ಸರಿ ಉತ್ತರ:(c) ಖಾತೆ ಹೊಂದಿರುವವರಿಗೆ, 1 ಲಕ್ಷ ರೂ.ಗಳ ಜೀವ ವಿಮಾ ರಕ್ಷಣೆಯನ್ನು ನೀಡಲಾಗುವುದು


82. ಭಾರತದ ಯಾವ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚಿನ ತಲಾ ಮದ್ಯ ಬಳಕೆಯ ಪ್ರಮಾಣವನ್ನು ಹೊಂದಿದೆ?

(a) ಕರ್ನಾಟಕ
(b) ಕೇರಳ
(c) ತಮಿಳುನಾಡು
(d) ತೆಲಂಗಾಣ

ಸರಿ ಉತ್ತರ

ಸರಿ ಉತ್ತರ:(b) ಕೇರಳ


83. ಗಣಿತಶಾಸದ ನೊಬೆಲ್ ಎಂದೇ ವ್ಯಾಪಕವಾಗಿ ಮನ್ನಣೆ ಗಳಿಸಿರುವ ಪ್ರತಿಷ್ಠಿತ ಫೀಲ್ಡ್ ಪದಕವನ್ನು 2014ರ ಆಗಸ್ಟ್ ನಲ್ಲಿ ಪಡೆದುಕೊಂಡ ಪ್ರಪ್ರಥಮ ಮಹಿಳೆ

(a) ಮಾರಿಯಮ್ ಮಿರಾಖಾನಿ
(b) ಮಯಮ್ ಲಕ್ಷ್ಮಿ
(c) ಐಮಿಯರ್ ಮೆಕ್ ಬ್ರೈಡ್
(d) ನಾಡಿನ್ ಗೊರ್ಡಿಮರ್

ಸರಿ ಉತ್ತರ

ಸರಿ ಉತ್ತರ:(a) ಮಾರಿಯಮ್ ಮಿರಾಖಾನಿ


84. ಈ ಮುಂದಿನ ಕಾರ್ಪೊರೇಟ್ ದೈತ್ಯ ಸಂಸ್ಥೆಗಳಲ್ಲೊಂದು, ಅಂತರ್ಜಾಲದಲ್ಲಿ ಸ್ಥಳೀಯ ಭಾಷಾ ವಿಷಯಗಳನ್ನು ಲಭ್ಯವಾಗಿಸುವುದಕ್ಕಾಗಿ, ಭಾರತೀಯ ಭಾಷಾ ಅಂತರ್ಜಾಲ ಒಕ್ಕೂಟವನ್ನು ಪ್ರಾರಂಭಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ಅದು ಯಾವುದು ?

(a) ಯಾಹೂ
(b) ಫೇಸ್ ಬುಕ್
(c) ಐಬಿಎಂ
(d) ಗೂಗಲ್

ಸರಿ ಉತ್ತರ

ಸರಿ ಉತ್ತರ:(d) ಗೂಗಲ್


85. ಬೊಕೊ ಹರಾಂ ಈ ಮುಂದಿನ ದೇಶದ ಒಂದು ಭಯೋತ್ಪಾದಕ ಗುಂಪಾಗಿದೆ :

(a) ಕೀನ್ಯಾ
(b) ಸೂಡಾನ್
(c) ನೈಜೀರಿಯಾ
(d) ಉಗಾಂಡ

ಸರಿ ಉತ್ತರ

ಸರಿ ಉತ್ತರ:(c) ನೈಜೀರಿಯಾ


86. ಇಯಾನ್ ಪಿಯಾಂಗ್ ದ್ವೀಪವು ಯಾವ ಎರಡು ರಾಷ್ಟ್ರಗಳ ನಡುವಿನ ವಿವಾದಕ್ಕೆ ಮೂಲವಾಗಿದೆ?

(a) ಜಪಾನ್ ಮತ್ತು ಚೀನಾ
(b) ಜಪಾನ್ ಮತ್ತು ದಕ್ಷಿಣ ಕೊರಿಯಾ
(c) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
(d) ಉತ್ತರ ಕೊರಿಯಾ ಮತ್ತು ರಷ್ಯಾ

ಸರಿ ಉತ್ತರ

ಸರಿ ಉತ್ತರ:(c) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ


87. ಈ ಮುಂದಿನ ಯಾವ ದೇಶ 2014ರಲ್ಲಿ ಯೂರೋ ಜೋನ್ ಸೇರಿತು?

(a) ಗ್ರೀಸ್
(b) ಸೈಪ್ರಸ್
(c) ಐರ್ಲ್ಯಾಂಡ್
(d) ಲಾಟ್ವಿಯಾ

ಸರಿ ಉತ್ತರ

ಸರಿ ಉತ್ತರ:(d) ಲಾಟ್ವಿಯಾ


88. ನಾವೀನ್ಯತೆ ಪ್ರವರ್ತಿಸಲು ರೈಲ್ವೆ ಆಯವ್ಯಯ-2015ರಲ್ಲಿ ಪ್ರಸ್ತಾಪಿಸಲಾಗಿರುವ ನಾವೀನ್ಯ ಪರಿಷತ್ತಿನ ಹೆಸರೇನು ?

(a) ನವಚರ್
(b) ರೈಲ್ ಟೆಕ್
(c) ಕಾಯಕಲ್ಪ್
(d) ಸಂಕಲ್ಪ್

ಸರಿ ಉತ್ತರ

ಸರಿ ಉತ್ತರ:(c) ಕಾಯಕಲ್ಪ್


89. ವಿವಾದಾತ್ಮಕ “ಕಾನ್ಹಾರ್ ಅಣೆಕಟ್ಟು ಯೋಜನೆ” ಯಾವ ರಾಜ್ಯಕ್ಕೆ ಸಂಬಂಧಿಸಿದೆ ?

(a) ಬಿಹಾರ
(b) ಉತ್ತರ ಪ್ರದೇಶ
(c) ಉತ್ತರಾಖಂಡ್
(d) ಹಿಮಾಚಲ ಪ್ರದೇಶ

ಸರಿ ಉತ್ತರ

ಸರಿ ಉತ್ತರ:(b) ಉತ್ತರ ಪ್ರದೇಶ


90. ವಿಭಿನ್ನ ದೂರವಾಣಿ ಸೇವೆಗಳ ಮೊಬೈಲ್ ಫೋನ್ ಬಳಕೆದಾರರ ಅತಿ ಹೆಚ್ಚು ಸಂಖ್ಯೆಯಿಂದ ಅತಿ ಕಡಿಮೆ ಸಂಖ್ಯೆಯವರೆಗಿನ ಕ್ರಮಾಣಿಕೆಯನ್ನು ಗುರುತಿಸಿ.
1. ಬಿಎಸ್ಎನ್ಎಲ್
2. ಏರ್ಟೆಲ್
3. ಐಡಿಯಾ
4. ವೊಡೊಫೋನ್
ಸರಿಯಾದ ಉತ್ತರವನ್ನು ಆರಿಸಿ

(a) 2, 4, 3, 1
(b) 2, 1, 4, 3
(c) 1, 2, 4, 3
(d) 1, 2, 3, 4

ಸರಿ ಉತ್ತರ

ಸರಿ ಉತ್ತರ:(a) 2, 4, 3, 1


91. ಫೋರ್ಬ್ಸ್ ನ ಟಾಪ್-50 ಪಟ್ಟಿಯಲ್ಲಿನ ‘ಏಷ್ಯಾದ ಬಲಿಷ್ಠ ವ್ಯವಹಾರೀ ಮಹಿಳೆಯರ’ನ್ನು ಅವರ ಸಂಸ್ಥೆಗಳೊಂದಿಗೆ ಹೊಂದಿಸಿ :

 

ಪಟ್ಟಿ –I

 

ಪಟ್ಟಿ -II

A.

ಕಿರಣ್ ಮಜುಂದಾರ್
ಷಾ

1.

ಆಕ್ಸಿಸ್ ಬ್ಯಾಂಕ್

B.

ಅರುಂಧತಿ ಭಟ್ಟಾಚಾರ್ಯ

2.

ಐಸಿಐಸಿಐ ಬ್ಯಾಂಕ್

C.

ಚಂದಾ ಕೊಚ್ಚಾರ್

3.

ಬಯೋಕಾನ್

D.

ಶಿಖಾ ಶರ್ಮ

4.

ಎಸ್ಬಿಐ

E.

ಉಷಾ ಸಂಘ್ವನ್

5.

ಶ್ರೀರಾಮ್

F.

ಅಖಿಲಾ ಶ್ರೀನಿವಾಸನ್

6

.ಜೀವ ವಿಮಾ
ನಿಗಮ (ಎಲ್..ಸಿ.)

ಸರಿಯಾದ ಉತ್ತರ ಗುರುತಿಸಿ :
A B C D E F
(a) 4 5 3 6 1 2
(b) 3 4 2 1 6 5
(c) 3 4 6 2 1 5
(d) 4 5 6 3 2 1

ಸರಿ ಉತ್ತರ

ಸರಿ ಉತ್ತರ:(b) 3 4 2 1 6 5


92. 2014ರ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಕೈಲಾಶ್ ಸತ್ಯಾರ್ಥಿ ಹಾಗೂ ಮಲಾಲಾ ಯೂಸ್ ಝಾಯಿ ಈ ಇಬ್ಬರೂ, ಅನುಕ್ರಮವಾಗಿ ಮುಂದಿನ ದೇಶಗಳಿಗೆ ಸೇರಿದವರು

(a) ಶ್ರೀಲಂಕಾ ಮತ್ತು ಪಾಕಿಸ್ತಾನ
(b) ಭಾರತ ಮತ್ತು ಪಾಕಿಸ್ತಾನ
(c) ಭಾರತ ಮತ್ತು ಬಾಂಗ್ಲಾದೇಶ
(d) ಭಾರತ ಮತ್ತು ಆಫ್ಘಾನಿಸ್ತಾನ

ಸರಿ ಉತ್ತರ

ಸರಿ ಉತ್ತರ:(b) ಭಾರತ ಮತ್ತು ಪಾಕಿಸ್ತಾನ


93. ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯವು ನಡೆಸಿದ ಹುಲಿ ಗಣನೆ, 2014ರ ಪ್ರಕಾರ, ಅತಿ ಹೆಚ್ಚು ಹುಲಿ ಜನಸಂಖ್ಯೆ ಹೊಂದಿರುವ ರಾಜ್ಯ :

(a) ಮಧ್ಯ ಪ್ರದೇಶ
(b) ಉತ್ತರಾಖಂಡ್
(c) ಕರ್ನಾಟಕ
(d) ತಮಿಳುನಾಡು

ಸರಿ ಉತ್ತರ

ಸರಿ ಉತ್ತರ:(c) ಕರ್ನಾಟಕ


94. ಭಾರತದಲ್ಲಿ ಸಾಮಾಜಿಕ ಅರಣ್ಯ ಪ್ರದೇಶ / ಶಾಸ್ತ್ರ (ಫಾರೆಸ್ಟ್ರಿ) ಕಾರ್ಯಕ್ರಮವನ್ನು ಮುಂದಿನ ಯಾವುದರ ಶಿಫಾರಸಿನ ಮೇಲೆ ಪರಿಚಯಿಸಲಾಯಿತು ?

(a) ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟ
(b) ಅಂತರರಾಷ್ಟ್ರೀಯ ಮರಸಾಕಣೆ ಸಮ್ಮೇಳನ, ಡೆಹ್ರಾಡೂನ್
(c) ಕೃಷಿಯ ಅಂತರರಾಷ್ಟ್ರೀಯ ಆಯೋಗದ ವರದಿ, 1976
(d) ವಿಶ್ವ ಭೂಮಿ ಶೃಂಗಸಭೆ, ರಿಯೋ, 1992

ಸರಿ ಉತ್ತರ

ಸರಿ ಉತ್ತರ:(c) ಕೃಷಿಯ ಅಂತರರಾಷ್ಟ್ರೀಯ ಆಯೋಗದ ವರದಿ, 1976


95. ಇತ್ತೀಚೆಗೆ 2014ರಲ್ಲಿ ಶಾಂತಿಯುತವಾಗಿ ನಡೆದ ಜನಮತ/ ಜನಾಭಿಪ್ರಾಯ ಗಣನೆಯಲ್ಲಿ ಯಾವ ರಾಷ್ಟ್ರದ ಪ್ರತ್ಯೇಕತಾ ವಾದಿಗಳು ಸ್ವಾತಂತ್ರ್ಯಕ್ಕೆ ಬೇಕಾದ ಮತ ಗಳಿಸಲಿಲ್ಲ ?

(a) ಇಂಡೋನೇಷ್ಯಾ
(b) ಬೋಸ್ನಿಯಾ
(c) ಸೂಡಾನ್
(d) ಯುನೈಟೆಡ್ ಕಿಂಗ್ಡಂ

ಸರಿ ಉತ್ತರ

ಸರಿ ಉತ್ತರ:(d) ಯುನೈಟೆಡ್ ಕಿಂಗ್ಡಂ


96. ಈ ಕೆಳಗಿನ ಸಿಂಧೂ ಸಂಸ್ಕೃತಿಯ ಯಾವ ನಗರದಲ್ಲಿ ವ್ಯಾಪಕವಾದ ಜಲಸಂಗ್ರಹಣೆಯ ವ್ಯವಸ್ಥೆ ಕಂಡು ಬಂದಿದೆ?

(a) ಮೊಹೆಂಜೋದಾರೋ
(b) ಲೋಥಾಲ್
(c) ಧೋಲಾವಿರ
(d) ಕಾಲಿಬಂಗನ್

ಸರಿ ಉತ್ತರ

ಸರಿ ಉತ್ತರ:(c) ಧೋಲಾವಿರ


97. ಕೆಳಗೆ ಸೂಚಿಸಿದ ಪಟ್ಟಿಯಲ್ಲಿ ಮಹಾಯಾನ ಬೌದ್ಧರನ್ನು ಹೀನಯಾನದವರಿಂದ ಬೇರ್ಪಡಿಸುವ ವಿಶಿಷ್ಟ ಲಕ್ಷಣಗಳನ್ನು ಗುರುತಿಸಿ.
1. ಬುದ್ಧ ಮೂರ್ತಿಗಳು
2. ಸ್ತೂಪಗಳು
3. ಚೈತ್ಯಗಳು
4. ಸಂಸ್ಕೃತ ಗ್ರಂಥಗಳು
ಸೂಚಿಸಿದ ಸಂಕೇತಗಳನ್ನು ಬಳಸಿಕೊಂಡು ಈ ಕೆಳಗಿನ ಸರಿಯಾದ ಹೇಳಿಕೆಯನ್ನು/ಹೇಳಿಕೆಗಳನ್ನು ಆಯ್ಕೆ ಮಾಡಿ.

(a) 1, 2, 3 ಮತ್ತು 4
(b) 1 ಮತ್ತು 4
(c) 1, 3 ಮತ್ತು 4
(d) 1 ಮಾತ್ರ

ಸರಿ ಉತ್ತರ

ಸರಿ ಉತ್ತರ:(b) 1 ಮತ್ತು 4


98. ಸಂಗಂ ಸಾಹಿತ್ಯದಲ್ಲಿ, ಲವತ್ತಾದ ಕೃಷಿ ಭೂಮಿಯನ್ನು _____________ ಎಂದು ಕರೆಯಲಾಗುತ್ತಿತ್ತು .

(a) ಪಾಲೈ
(b) ಮರುದಮ್
(c) ಮುಳ್ಳೈ
(d) ನೆಯ್ದಲ್

ಸರಿ ಉತ್ತರ

ಸರಿ ಉತ್ತರ:(b) ಮರುದಮ್


99. ಈ ಕೆಳಗಿನ ಸಂಗತಿಗಳು ಗುಪ್ತರ ಆಳ್ವಿಕೆಯನ್ನು ಅದಕ್ಕೂ ಹಿಂದಿನ ಆಳ್ವಿಕೆಗಳಿಂದ ಪ್ರತ್ಯೇಕಿಸುತ್ತವೆ. ಅವನ್ನು ಗುರುತಿಸಿ.
1. ನಗರಗಳ ಅವನತಿ
2. ಬಂಗಾರದ ನಾಣ್ಯಗಳು
3. ಅಧಿಕಾರ ವಿಕೇಂದ್ರೀಕರಣ

4. ದೇವಾಲಯ ವಾಸ್ತುಶಿಲ್ಪ
ಸೂಚಿಸಿದ ಸಂಕೇತಗಳನ್ನು ಬಳಸಿಕೊಂಡು ಈ ಕೆಳಗಿನ ಸರಿಯಾದ ಹೇಳಿಕೆಯನ್ನು /ಹೇಳಿಕೆಗಳನ್ನು ಆಯ್ಕೆ ಮಾಡಿ.

(a) 1, 2 ಮತ್ತು 4
(b) 1, 3 ಮತ್ತು 4
(c) 1, 2 ಮತ್ತು 3
(d) 1, 2, 3 ಮತ್ತು 4

ಸರಿ ಉತ್ತರ

ಸರಿ ಉತ್ತರ:(b) 1, 3 ಮತ್ತು 4


100. ಕ್ರಿಸ್ತ ಶಕ 9, 10ನೆಯ ಶತಮಾನದಲ್ಲಿ ಉತ್ತರ ಭಾರತದ ಮೇಲಿನ ಚಕ್ರಾಧಿಪತ್ಯಕ್ಕಾಗಿ ಈ ಕೆಳಗೆ ಸೂಚಿಸಿದ ಮೂರು ರಾಜವಂಶಗಳ ನಡುವೆ ಸೆಣಸಾಟ ನಡೆಯಿತು. ಅವರನ್ನು ಗುರುತಿಸಿ.
1. ರಜಪೂತರು
2. ಪ್ರತಿಹಾರರು
3. ಪಾಲರು
4. ರಾಷ್ಟ್ರಕೂಟರು
ಸೂಚಿಸಿದ ಸಂಕೇತಗಳನ್ನು ಬಳಸಿಕೊಂಡು ಈ ಕೆಳಗಿನ ಸರಿಯಾದ ಹೇಳಿಕೆಯನ್ನು/ ಹೇಳಿಕೆಗಳನ್ನು ಆಯ್ಕೆ ಮಾಡಿ.

(a) 1, 2 ಮತ್ತು 3
(b) 2, 3 ಮತ್ತು 4
(c) 3, 4 ಮತ್ತು 1
(d) 4, 1 ಮತ್ತು 2

ಸರಿ ಉತ್ತರ

ಸರಿ ಉತ್ತರ:(b) 2, 3 ಮತ್ತು 4


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment