WhatsApp Group Join Now
Telegram Group Join Now

KAS prelims 2015 paper-2 Previous Question Paper

KAS prelims 19-04-2015 Paper-2 General Studies Questions with answers

ದಿನಾಂಕ 19-04-2015 ರಂದು ನಡೆದ  ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಪತ್ರಿಕೆ-2 ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ.

1. ಕೆಳಗಿನ ಚಿತ್ರವನ್ನು ಪರಿಶೀಲಿಸಿ ಮತ್ತು ಈ ಕೆಳಗಿನ ಪ್ರಶ್ನೆಗೆ ಉತ್ತರಿಸಿ.

ಮದುವೆಯಾದ ಜನರು

ಅವಿಭಕ್ತ ಕುಟುಂಬದಲ್ಲಿ
ವಾಸಿಸುವ ಜನರು

ಶಾಲಾ ಶಿಕ್ಷಕರು


ಅವಿಭಕ್ತ ಕುಟುಂಬದಲ್ಲಿ ವಾಸಿಸುವ ಆದರೆ ಶಾಲಾ ಶಿಕ್ಷಕರಾಗಿಲ್ಲದ ಜನರನ್ನು ಯಾವ ಅಕ್ಷರವು ಪ್ರತಿನಿಧಿಸುತ್ತದೆ?

    (a)    T
    (b)    R
    (c)    Q
    (d)    S

ಸರಿ ಉತ್ತರ

(d) S


2. E, F, G, H, I, J, K ಮತ್ತು L ಎಂಬ ಎಂಟು ಮಂದಿ ಸ್ನೇಹಿತರು ಪ್ರತಿ ಬದಿಗೂ ಇಬ್ಬರಂತೆ ಒಂದು ಚೌಕಾಕಾರದ ಮೇಜಿನ ಸುತ್ತ ಕುಳಿತಿದ್ದಾರೆ.
ಇಲ್ಲಿ ಮೂವರು ಹುಡುಗಿಯರಿದ್ದು, ಅವರು ಪರಸ್ಪರ ಅಕ್ಕಪಕ್ಕದಲ್ಲಿ ಕುಳಿತಿಲ್ಲ.
        J ಯು L ಮತ್ತು F ನಡುವೆ ಇದ್ದಾರೆ.
        G ಯು I ಮತ್ತು F ನಡುವೆ ಇದ್ದಾರೆ.
        H, ಒಬ್ಬ ಹುಡುಗಿಯಾಗಿದ್ದು, Jಯ ಎಡಕ್ಕೆ ಎರಡನೆಯವರಾಗಿ ಕುಳಿತಿದ್ದಾರೆ.
        F ಒಬ್ಬ ಹುಡುಗನಾಗಿದ್ದು, ಮಹಿಳಾ ಸದಸ್ಯೆಯಾಗಿರುವ E ಯ ಎದುರುಗಡೆ ಕುಳಿತಿದ್ದಾರೆ.
        F ಮತ್ತು I ನಡುವೆ ಒಬ್ಬ ಹುಡುಗಿಯಿದ್ದಾಳೆ
J ಮತ್ತು K ಕುರಿತಂತೆ ಯಾವುದು ಸರಿ?

    (a)    J ಹುಡುಗ, K ಹುಡುಗಿ
    (b)    J ಹುಡುಗಿ, K ಹುಡುಗ
    (c)    ಇಬ್ಬರೂ ಹುಡುಗಿಯರು
    (d)    ಇಬ್ಬರೂ ಹುಡುಗರು

ಸರಿ ಉತ್ತರ

(d) ಇಬ್ಬರೂ ಹುಡುಗರು


3. 583 ಜನರು 385 ದಿನಗಳಲ್ಲಿ 385 ಬುಟ್ಟಿಗಳನ್ನು ತಯಾರಿಸಬಲ್ಲರು. ಎಲ್ಲರೂ ಒಂದೇ ರೀತಿಯ ವೇಗದಲ್ಲಿ ಕೆಲಸ ಮಾಡುತ್ತಾರೆ ಮತ್ತು ಎಲ್ಲ ಬುಟ್ಟಿಗಳಿಗೂ ಒಂದೇ ರೀತಿಯ ಪ್ರಯತ್ನ ಬೇಕಾಗುತ್ತದೆ. ಇಂತಹ ಎರಡು ಬುಟ್ಟಿಗಳನ್ನು ತಯಾರಿಸಲು ಒಬ್ಬ ವ್ಯಕ್ತಿಗೆ ಎಷ್ಟು ಸಮಯ ಬೇಕಾಗುತ್ತದೆ ?

    (a)    385 ದಿನಗಳು
    (b)    583 ದಿನಗಳು
    (c)    1166 ದಿನಗಳು
    (d)    770 ದಿನಗಳು

ಸರಿ ಉತ್ತರ

(c) 1166 ದಿನಗಳು


4. ಈ ಕೆಳಗೆ ನೀಡಿದ ಮಾಹಿತಿಯನ್ನು ಗಮನವಿಟ್ಟು ಓದಿ ಮತ್ತು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗೆ ಉತ್ತರಿಸಿ : ರಾಮು ಮತ್ತು ಶ್ಯಾಮು ಇವರಿಬ್ಬರ ಆದಾಯದ ಒಟ್ಟು ಮೊತ್ತವು ಚಂದ್ರು ಮತ್ತು ದೀಪು ರ ಆದಾಯದ ಒಟ್ಟು ಮೊತ್ತಕ್ಕಿಂತ ಹೆಚ್ಚಿದೆ. ರಾಮು ಮತ್ತು ಚಂದ್ರು ರ ಆದಾಯದ ಒಟ್ಟು ಮೊತ್ತವು ಶ್ಯಾಮು ಮತ್ತು ದೀಪು ರ ಆದಾಯದ ಒಟ್ಟು ಮೊತ್ತಕ್ಕೆ ಸಮನಾಗಿದೆ. ಅಲ್ಲದೆ, ಶ್ಯಾಮು ಮತ್ತು ದೀಪುರ ಆದಾಯದ ಒಟ್ಟು ಮೊತ್ತದ ಅರ್ಧದಷ್ಟು ರಾಮು ಗಳಿಸುತ್ತಾನೆ.
ಯಾರ ಆದಾಯವು ಅತಿ ಹೆಚ್ಚಿದೆ ?

    (a)    ರಾಮುವಿನದು
    (b)    ಶ್ಯಾಮುವಿನದು
    (c)    ಚಂದ್ರುವಿನದು
    (d)    ದೀಪುವಿನದು

ಸರಿ ಉತ್ತರ

(b) ಶ್ಯಾಮುವಿನದು


5. 3, 10, 101 .. .. .. ಈ ಸರಣಿಯಲ್ಲಿ ನಂತರದಲ್ಲಿ ಬರಬೇಕಾದ ಸಂಖ್ಯೆ ಯಾವುದು ?

    (a)    10101
    (b)    10201
    (c)    10202
    (d)    11012

ಸರಿ ಉತ್ತರ

(c) 10202


6. ಈ ಮುಂದಿನ 4 ಚಿತ್ರಗಳನ್ನು ಪರಿಗಣಿಸಿ.


ಈ ಮುಂದಿನ ಯಾವ ಚಿತ್ರವು 5ನೇ ಸ್ಥಾನಕ್ಕೆ ಹೊಂದಿಕೊಳ್ಳುತ್ತದೆ ?

    (a)   

    (b)    

    (c)    

    (d)    

ಸರಿ ಉತ್ತರ

(b)


7. A, B, C, D, E ಮತ್ತು F ಇವರದು ಸ್ನೇಹಿತರ ಸಮೂಹವಾಗಿದೆ. ಈ ಸಮೂಹದಲ್ಲಿ ಇಬ್ಬರು ಗೃಹಿಣಿಯರು, ಒಬ್ಬರು ಪೊಫೆಸರ್, ಒಬ್ಬರು ವೈದ್ಯರು, ಒಬ್ಬರು ಎಂಜಿನಿಯರ್ ಮತ್ತು ಒಬ್ಬರು ವಕೀಲರು ಇದ್ದಾರೆ. ಈ ಸಮೂಹದಲ್ಲಿ 2 ವಿವಾಹಿತ ಜೋಡಿಗಳಿವೆ. ವಕೀಲನು ಗೃಹಿಣಿಯಾಗಿರುವ D ಯನ್ನು ವಿವಾಹವಾಗಿದ್ದಾರೆ. ಈ ಸಮೂಹದಲ್ಲಿ ಯಾವೊಬ್ಬ ಮಹಿಳೆಯೂ ಡಾಕ್ಟರಾಗಿಯಾಗಲೀ ಅಥವಾ ಎಂಜಿನಿಯರಾಗಿಯಾಗಲೀ ಇಲ್ಲ. Cಯು ಎಂಜಿನಿಯರಾಗಿದ್ದು ಪೊಫೆಸರ್ ಆಗಿರುವಂಥ F ಅನ್ನು ವಿವಾಹವಾಗಿದ್ದಾರೆ. A ಯು ಗೃಹಿಣಿಯನ್ನು ವಿವಾಹವಾಗಿದ್ದಾರೆ. E ಯು ಗೃಹಿಣಿಯಲ್ಲ.
ಈ ಮುಂದಿನ ಯಾವುದು ವಿವಾಹಿತ ಜೋಡಿಯಾಗಿದೆ?

    (a)    A ಮತ್ತು B
    (b)    B ಮತ್ತು E
    (c)    D ಮತ್ತು E
    (d)    A ಮತ್ತು D

ಸರಿ ಉತ್ತರ

(d) A ಮತ್ತು D


8. ಹಂದಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಮುನಿಸಿಪಲ್ ಆಯುಕ್ತರಾಗಿರುವ ನಿಮ್ಮನ್ನು ಟೀಕಿಸಲಾಗುತ್ತಿದೆ. ಈ ಹಂದಿಗಳು ಸ್ಥಳೀಯ ವಿಧಾನಸಭಾ ಸದಸ್ಯರಿಗೆ ಬಹಳ ಆಪ್ತರಾಗಿರುವ ಒಂದು ಸಮುದಾಯದವರಿಗೆ ಸೇರಿವೆ. ಹಂದಿಗಳನ್ನು ಸ್ಥಳಾಂತರಿಸುವುದು ನಿಮಗೆ ಕಷ್ಟ. ಏಕೆಂದರೆ ಅವು ಮತ್ತೆ ಬರಬಹುದಾಗಿದೆ. ಹಂದಿಗಳು ಹೊಲಸನ್ನು ತಿನ್ನುವ ಮೂಲಕ ಅದರ ಸಮಸ್ಯೆಯನ್ನು ನಿವಾರಿಸುತ್ತವೆ ಎಂದು ಕೆಲವು ನಾಯಕರು ನಿಮ್ಮನ್ನು ಒಪ್ಪಿಸುತ್ತಾರೆ. ನಿಮ್ಮ ಸ್ಥಳೀಯ ಕೆಳಹಂತದ ವರದಿ ಪ್ರಾಧಿಕಾರಿಯು ಹಂದಿಗಳಿಗೆ ಗುಂಡು ಹಾರಿಸತೊಡಗುತ್ತಾರೆ. ಅಂತಹ ಒಂದು ಗುಂಡು ಒಂದು ಮಗುವಿನ ಕಾಲಿಗೆ ಬೀಳುತ್ತದೆ. ಇದರಿಂದ ಭಾರೀ ಗಲಭೆಯಾಗುತ್ತದೆ. ನೀವು ಯಾವ ಕ್ರಮ ಕೈಗೊಳ್ಳುವಿರಿ?

    (a)    ತಕ್ಷಣವೇ ಹಂದಿಗಳಿಗೆ ಗುಂಡು ಹಾರಿಸುವುದನ್ನು ನಿಲ್ಲಿಸುತ್ತೀರಿ ಮತ್ತು ಗುಂಡು ಹಾರಿಸುವುದಕ್ಕೆ ಆದೇಶ ನೀಡಿದ ನಿಮ್ಮ ವರದಿ ಅಧಿಕಾರಿಯನ್ನು ವಜಾ ಮಾಡುತ್ತೀರಿ.

    (b)    ವರದಿ ಅಧಿಕಾರಿಯನ್ನು ರಕ್ಷಿಸುತ್ತೀರಿ (ಸಮರ್ಥಿಸು) ಮತ್ತು ನಿಮ್ಮ ನಿಲುವಿಗೆ ಅಂಟಿಕೊಳ್ಳುತ್ತೀರಿ ಮತ್ತು ಗುಂಡು ಹಾರಿಸುವುದನ್ನು ಮುಂದುವರೆಸುತ್ತೀರಿ.

    (c)    ನಿಮ್ಮ ವರದಿ ಅಧಿಕಾರಿಯನ್ನು (ಸಮರ್ಥಿಸು) ರಕ್ಷಿಸುತ್ತೀರಿ ಮತ್ತು ಗುಂಡು ಹಾರಿಸುವ ಕಾರ್ಯಾಚರಣೆಯನ್ನು ನಿಲ್ಲಿಸುತ್ತೀರಿ.
    (d)    ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತೀರಿ ಮತ್ತು ಎಲ್ಲವೂ ತಗ್ಗುವವರೆಗೂ ಸುಮ್ಮನಿರುತ್ತೀರಿ.

ಸರಿ ಉತ್ತರ

(c) ನಿಮ್ಮ ವರದಿ ಅಧಿಕಾರಿಯನ್ನು (ಸಮರ್ಥಿಸು) ರಕ್ಷಿಸುತ್ತೀರಿ ಮತ್ತು ಗುಂಡು ಹಾರಿಸುವ ಕಾರ್ಯಾಚರಣೆಯನ್ನು ನಿಲ್ಲಿಸುತ್ತೀರಿ.


9. ಬಿಡುಗಡೆಯಾಗಬೇಕಾಗಿರುವ ಒಂದು ವಾಣಿಜ್ಯ ಚಲನಚಿತ್ರದ ವಸ್ತುವು ಸ್ಥಳೀಯ ಅಲ್ಪಸಂಖ್ಯಾತ ಧರ್ಮದ ತತ್ವಗಳ ವಿರುದ್ಧವಿದೆ ಎಂಬ ಕಾರಣದಿಂದ ಬಹಳಷ್ಟು ವಿವಾದವೆಬ್ಬಿಸಿದೆ. ಆದರೆ ಥಿಯೇಟರ್ ಮಾಲೀಕರು ಮತ್ತು ಚಿತ್ರದ ತಯಾರಕರು ಈ ಚಲನಚಿತ್ರವನ್ನು ಬಿಡುಗಡೆ ಮಾಡಲು ಹಾಗೂ ಸಾರ್ವಜನಿಕರಿಗೆ ಅದನ್ನು ಪ್ರದರ್ಶಿಸಲು ಅನುಮತಿ ಪಡೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಬಹಳಷ್ಟು ಮಂದಿ ಸ್ಥಳೀಯ ಯುವಕರು ಹಾಗೂ ಸಂದೇಹಾಸ್ಪದ ನಡೆವಳಿಕೆಯ ವ್ಯಕ್ತಿಗಳು ಥಿಯೇಟರ್ ಮೇಲೆ ಕಲ್ಲು ತೂರುತ್ತಿರುವುದನ್ನು ಮತ್ತು ಥಿಯೇಟರ್ನೊಳಗೆ ಪ್ರವೇಶಿಸದಂತೆ ಅಭಿಮಾನಿಗಳನ್ನು ತಡೆಯುತ್ತಿರುವುದನ್ನು ನೀವು ನೋಡುತ್ತೀರಿ. ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಯಾದ ನಿಮ್ಮನ್ನು ಈ ಬಗ್ಗೆ ಕ್ರಮ ಕೈಗೊಂಡು ಚಿತ್ರ ನೋಡುವುದಕ್ಕೆ ಅವಕಾಶ ಕಲ್ಪಿಸಬೇಕೆಂದು ಥಿಯೇಟರ್ ಮಾಲೀಕರು ಕೇಳುತ್ತಿದ್ದಾರೆ. ನೀವು ಯಾವ ಕ್ರಮ ಕೈಗೊಳ್ಳುತ್ತೀರಿ ?

    (a)    ಮುಷ್ಕರವನ್ನು ನಿಲ್ಲಿಸುವಂತೆ ಮತ್ತು ಚಿತ್ರ ನೋಡುವುದಕ್ಕೆ ಅವಕಾಶ ಮಾಡಿಕೊಡುವಂತೆ ಸ್ಥಳೀಯ ಯುವಕರು ಹಾಗೂ ಸಮಾಜದ ಪ್ರಮುಖರೊಂದಿಗೆ ಮಾತುಕತೆ ನಡೆಸುತ್ತೀರಿ. ಆದರೆ ಇದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇಲ್ಲ.
    (b)    ಸ್ಥಳೀಯ ನಾಯಕರು ಹಾಗೂ ಯುವಕರನ್ನು ಉಚ್ಚಾಟಿಸಲು ಬಲಪ್ರಯೋಗ ಮಾಡುತ್ತೀರಿ ಮತ್ತು ಅಭಿಮಾನಿಗಳಿಗೆ ಚಿತ್ರ ನೋಡಲು ಅವಕಾಶ ಮಾಡಿಕೊಡುತ್ತೀರಿ.
    (c)    ಆಸ್ತಿಪಾಸ್ತಿಗಳ ಸುರಕ್ಷಣೆಯ ದೃಷ್ಟಿಯಿಂದ ಚಿತ್ರದ ಬಿಡುಗಡೆಯನ್ನು ಸದ್ಯಕ್ಕೆ ನಿಲ್ಲಿಸುವಂತೆ ಥಿಯೇಟರ್ ಮಾಲೀಕರುಗಳಿಗೆ ತಿಳಿಸುತ್ತೀರಿ.
    (d)    ಪ್ರತಿಭಟನೆ ನಡೆಸಿರುವ ಎಲ್ಲ ಯುವಕರನ್ನು ಹಾಗೂ ಸ್ಥಳೀಯ ನಾಯಕರನ್ನು ಬಂಧಿಸುತ್ತೀರಿ ಮತ್ತು ಸಿನಿಮಾ ನೋಡಲು ಅವಕಾಶ ಕಲ್ಪಿಸುತ್ತೀರಿ.

ಸರಿ ಉತ್ತರ

(d) ಪ್ರತಿಭಟನೆ ನಡೆಸಿರುವ ಎಲ್ಲ ಯುವಕರನ್ನು ಹಾಗೂ ಸ್ಥಳೀಯ ನಾಯಕರನ್ನು ಬಂಧಿಸುತ್ತೀರಿ ಮತ್ತು ಸಿನಿಮಾ ನೋಡಲು ಅವಕಾಶ ಕಲ್ಪಿಸುತ್ತೀರಿ.


10. ಜನಜಂಗುಳಿಯ ಮಾರುಕಟ್ಟೆ ಸ್ಥಳದಲ್ಲಿ ಸಂಜೆ ಸುಮಾರು 7.30ಕ್ಕೆ ಬಾಂಬ್ ಸ್ಫೋಟವಾಗಿದೆ. ಅದರಲ್ಲಿ ಬಹಳಷ್ಟು ಮಂದಿ ಸತ್ತಿರಬಹುದೆಂಬ ಹಾಗೂ / ಅಥವಾ ಗಂಭೀರ ಗಾಯಗಳಾಗಿರಬಹುದೆಂಬ ಭೀತಿಯಿದೆ. ನೀವು ಆ ಜಿಲ್ಲೆಯ ಹಿರಿಯ ಆಡಳಿತಾಧಿಕಾರಿಯಾಗಿದ್ದೀರಿ. ಸಂಜೆ 7.35ಕ್ಕೆ ಸ್ಫೋಟದ ಮಾಹಿತಿ ನಿಮಗೆ ಸಿಕ್ಕಿದೆ. ಆಗ ನೀವು ಏನು ಮಾಡುವಿರಿ?

    (a)    ಘಟನಾ ಸ್ಥಳಕ್ಕೆ ಖುದ್ದಾಗಿ ರಭಸದಿಂದ ಹೋಗುವುದು ಮತ್ತು ಮೃತರನ್ನು, ಗಾಯಾಳು ಗಳನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸುವುದು.
    (b)    ಪೊಲೀಸ್, ಆರೋಗ್ಯ ಹಾಗೂ ನಾಗರಿಕ ಪ್ರಾಧಿಕಾರಿಗಳನ್ನು ಕ್ರಿಯಾಶೀಲರಾಗುವಂತೆ ಕೇಳುವುದು ಮತ್ತು ಪ್ರಮುಖ ಆಸ್ಪತ್ರೆಗಳಿಗೆ ತುರ್ತು ಕರ್ತವ್ಯದ ಎಚ್ಚರಿಕೆ ಸೂಚನೆ ಸಹ ಕಳುಹಿಸುವುದು.
    (c)    ತಜ್ಞರ ನೆರವು ಪಡೆಯಲು ರಾಜ್ಯದ ಕೇಂದ್ರ ಕಚೇರಿಯ ಭಯೋತ್ಪಾದನೆ ನಿಗ್ರಹ ದಳದೊಂದಿಗೆ ಸಂಪರ್ಕದಲ್ಲಿರುವುದು.
    (d)    ಮಾಧ್ಯಮ ಸಭೆ ಕರೆದು, ಅವರಿಗೆ ಘಟನೆಯನ್ನು ವಿವರಿಸುವುದು ಮತ್ತು ಪರಿಶೀಲಿಸದೆ ಇರುವ ಮಾಹಿತಿಯನ್ನು ಪ್ರಕಟಿಸದಂತೆ ವಿನಂತಿಸುವುದು.

ಸರಿ ಉತ್ತರ

(b) ಪೊಲೀಸ್, ಆರೋಗ್ಯ ಹಾಗೂ ನಾಗರಿಕ ಪ್ರಾಧಿಕಾರಿಗಳನ್ನು ಕ್ರಿಯಾಶೀಲರಾಗುವಂತೆ ಕೇಳುವುದು ಮತ್ತು ಪ್ರಮುಖ ಆಸ್ಪತ್ರೆಗಳಿಗೆ ತುರ್ತು ಕರ್ತವ್ಯದ ಎಚ್ಚರಿಕೆ ಸೂಚನೆ ಸಹ ಕಳುಹಿಸುವುದು.


11. ಅಭ್ಯರ್ಥಿಗಳ ಆಯ್ಕೆ ಸಮಿತಿಯ ಅಧ್ಯಕ್ಷರು ನೀವಾಗಿದ್ದೀರಿ, ಸಮದರ್ಜೆಯ ಇಬ್ಬರು ಸದಸ್ಯರು, ಅಭ್ಯರ್ಥಿಯ ಆಯ್ಕೆ ವಿಷಯದಲ್ಲಿ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ನೀವು ಏನು ಮಾಡುವಿರಿ ?

    (a)    ಇಬ್ಬರನ್ನು ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳುವುದು
    (b)    ಇಬ್ಬರನ್ನೂ ಕಾದಾಡಲು ಬಿಟ್ಟು, ಅವರು ತಮ್ಮದೇ ಪರಿಹಾರ ಕಂಡುಕೊಳ್ಳಲು ಬಿಡುವುದು
    (c)    ಅವರ ವೈರುಧ್ಯದ ದೃಷ್ಟಿಕೋನವನ್ನು ಪರಿಗಣಿಸದಿರುವುದು
    (d)    ಅವರ ಚರ್ಚೆಯ ಪರವಿರೋಧಗಳನ್ನು ವಿಮರ್ಶಿಸಿ ನಿರ್ಧಾರ ಕೈಗೊಳ್ಳುವುದು

ಸರಿ ಉತ್ತರ

(d) ಅವರ ಚರ್ಚೆಯ ಪರವಿರೋಧಗಳನ್ನು ವಿಮರ್ಶಿಸಿ ನಿರ್ಧಾರ ಕೈಗೊಳ್ಳುವುದು


12. 300 ರೂ.ಗಳ ಒಂದು ಛತ್ರಿಯನ್ನು ಮಾರುವ ಮೂಲಕ ಒಬ್ಬ ಅಂಗಡಿಯಾತ 20%ಲಾಭ ಗಳಿಸುತ್ತಾನೆ. ತೀರುವಳಿ ಮಾರಾಟದ ಸಂದರ್ಭದಲ್ಲಿ ಅಂಗಡಿಯವನು ನಮೂದಿಸಿದ ಬೆಲೆಯ ಮೇಲೆ 10% ರಿಯಾಯಿತಿಯನ್ನು ನೀಡುತ್ತಾನೆ. ಅಂಗಡಿಯವನು ಶೇಕಡಾ ಎಷ್ಟು ಲಾಭ ಗಳಿಸುತ್ತಾನೆ?

    (a)    7%
    (b)    7½%
    (c)    8%
    (d)    8½%

ಸರಿ ಉತ್ತರ

(c) 8%


13. ನಟೇಶ್ ಎಂಬಾತ ಮೊದಲ 3 ವರ್ಷಗಳಿಗೆ ಪ್ರತಿ ವರ್ಷಕ್ಕೆ 6% ಬಡ್ಡಿಯಂತೆ, ನಂತರದ 5 ವರ್ಷಗಳಿಗೆ ಪ್ರತಿವರ್ಷಕ್ಕೆ 9% ಬಡ್ಡಿಯಂತೆ ಮತ್ತು 8 ವರ್ಷಗಳಿಂದಾಚೆಗೆ ಪ್ರತಿವರ್ಷಕ್ಕೆ 13% ಬಡ್ಡಿಯಂತೆ ಒಂದಿಷ್ಟು ಹಣವನ್ನು ಸಾಲ ಪಡೆಯುತ್ತಾನೆ. ಮೇಲಿನ ಎಲ್ಲವೂ ಸರಳಬಡ್ಡಿಯ ದರದಲ್ಲಿವೆ. 11 ವರ್ಷಗಳ ನಂತರ ನಟೇಶ್ ಒಟ್ಟು 8160 ರೂ.ಗಳನ್ನು ಸಂದಾಯ ಮಾಡಿದ್ದರೆ, ಆತ ಪಡೆದುಕೊಂಡಿದ್ದ ಸಾಲದ ಮೊತ್ತ ಎಷ್ಟು?

    (a)    ರೂ. 8,000
    (b)    ರೂ. 10,000
    (c)    ರೂ. 12,000
    (d)    ರೂ. 14,000

ಸರಿ ಉತ್ತರ

(a) ರೂ. 8,000


14. ಒಂದು ಎಕ್ಸ್ಪ್ರೆಸ್ ರೈಲು 100 ಕಿ.ಮೀ./ಗಂಟೆಯ ಸರಾಸರಿ ವೇಗದಲ್ಲಿ ಚಲಿಸುತ್ತಿದ್ದು, ಪ್ರತಿ 75 ಕಿ.ಮೀ. ನಂತರ 3 ನಿಮಿಷಗಳವರೆಗೆ ನಿಲ್ಲುತ್ತದೆ. 600 ಕಿ.ಮೀ. ಅಂತರದಲ್ಲಿರುವ ಎರಡು ಸ್ಥಳಗಳ ನಡುವೆ ಸಂಚರಿಸಲು ಅದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?

    (a)    6 ಗಂಟೆ 21 ನಿಮಿಷ
    (b)    6 ಗಂಟೆ 24 ನಿಮಿಷ
    (c)    6 ಗಂಟೆ 27 ನಿಮಿಷ
    (d)    6 ಗಂಟೆ 30 ನಿಮಿಷ

ಸರಿ ಉತ್ತರ

(a) 6 ಗಂಟೆ 21 ನಿಮಿಷ


15. ಒಂದು ಗುಲಾಬಿ ತೋಟದಲ್ಲಿ ನಿರ್ದಿಷ್ಟ ವಿಧದ ಗುಲಾಬಿ ಗಿಡದ ಬೀಜವು ಪುನರುತ್ಪತ್ತಿಯಿಂದಾಗಿ ಪ್ರತಿದಿನ ಎರಡರಿಂದ ಗುಣಾಕಾರಗೊಳ್ಳುತ್ತ ಹೋಗುತ್ತದೆ. ಮೊದಲ ದಿನದಂದು ಒಂದೇ ಒಂದು ಬೀಜವಿದ್ದರೆ ಎರಡನೇ ದಿನ ಅದು ಎರಡಾಗುತ್ತದೆ. ಮೂರನೇ ದಿನ ನಾಲ್ಕಾಗುತ್ತದೆ. ನಾಲ್ಕನೇ ದಿನ ಎಂಟಾಗುತ್ತದೆ. ಹೀಗೆ, ಒಂದು ಬೀಜದಿಂದ ಆರಂಭಿಸಿ, ಅದು 200 ಚದರ -ಮೀಟರ್ಗಳ ಜಾಗವನ್ನು ವ್ಯಾಪಿಸಿಕೊಳ್ಳಲು 30 ದಿನ ತೆಗೆದುಕೊಂಡರೆ, ಎರಡು ಬೀಜದಿಂದ ಆರಂಭಿಸಿ, ಅಷ್ಟೇ ವ್ಯಾಪ್ತಿಯ ಜಾಗದಲ್ಲಿ ವ್ಯಾಪಿಸಲು ಅದು ಎಷ್ಟು ದಿನ ತೆಗೆದುಕೊಳ್ಳುತ್ತದೆ ?

    (a)    16 ದಿನ
    (b)    15 ದಿನ
    (c)    17 ದಿನ
    (d)    29 ದಿನ

ಸರಿ ಉತ್ತರ

(d) 29 ದಿನ


16. A ಯಿಂದ B ಎಂಬ ಸ್ಥಳಕ್ಕೆ ಹೋಗುತ್ತಿರುವ ಬಸ್ ಮಾರ್ಗದಲ್ಲಿ ಪ್ರತಿ ಪ್ರಯಾಣಿಕನಿಗೆ ನಿಗದಿಸಿರುವ ಟಿಕೆಟ್ ಬೆಲೆ ರೂ. x ಆಗಿದೆ. 50-x ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ರೆವೆನ್ಯೂವನ್ನು ಗರಿಷ್ಠಗೊಳಿಸಬೇಕಾದರೆ, ಟಿಕೆಟಿನ ಬೆಲೆ ಎಷ್ಟಿರಬೇಕು ?

    (a)    15 ರೂ.
    (b)    20 ರೂ.
    (c)    25 ರೂ.
    (d)    30 ರೂ.

ಸರಿ ಉತ್ತರ

(c) 25 ರೂ.


17. ಈ ಮುಂದಿನ ಚಿತ್ರದಲ್ಲಿರುವ ತ್ರಿಕೋನಗಳ ಸಂಖ್ಯೆ

    (a)    8
    (b)    10
    (c)    12
    (d)    14

ಸರಿ ಉತ್ತರ

(d) 14


18. ಒಂದು ಘನಾಕೃತಿಯನ್ನು ತೆಗೆದುಕೊಂಡು ಅದರ ಆರು ಮುಖಗಳಿಗೆ ಬಣ್ಣ ಲೇಪಿಸಲಾಗಿದೆ. ನಂತರ ಈ ಘನಾಕೃತಿಯನ್ನು ಗರಿಷ್ಠ ಸಂಖ್ಯೆಯ ಚಿಕ್ಕ ಘನಾಕೃತಿಗಳನ್ನು ಕೊಡುವಂತೆ ಆರು ಸಮತಲಗಳಲ್ಲಿ ಕತ್ತರಿಸಲಾಗಿದೆ. ಮೂಲ ಘನಾಕೃತಿಗೆ ಬಣ್ಣ ಲೇಪಿಸಲು 3.5 ಲೀಟರುಗಳಷ್ಟು ಬಣ್ಣ ಬೇಕಾಗಿದ್ದರೆ ಈ ಎಲ್ಲ ಚಿಕ್ಕ ಘನಾಕೃತಿಗಳ, ಬಣ್ಣ ಲೇಪನವಿಲ್ಲದ ಎಲ್ಲ ಮುಖಗಳಿಗೂ ಬಣ್ಣ ಲೇಪಿಸಬೇಕಾದರೆ ಹೆಚ್ಚುವರಿ ಎಷ್ಟು ಬಣ್ಣ ಬೇಕಾಗುತ್ತದೆ ?

    (a)    3.0 ಲೀಟರುಗಳು
    (b)    11.5 ಲೀಟರುಗಳು
    (c)    7 ಲೀಟರುಗಳು
    (d)    10.5 ಲೀಟರುಗಳು

ಸರಿ ಉತ್ತರ

(c) 7 ಲೀಟರುಗಳು


ಒಂದು ಊರಿನ ಬೇರೆ ಬೇರೆ ಏಳು ವಿದ್ಯಾಸಂಸ್ಥೆಗಳಲ್ಲಿರುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ ವಿದ್ಯಾರ್ಥಿಗಳ ಹಂಚಿಕೆಯನ್ನು ಕೆಳಕಂಡ ಪೈಚಾರ್ಟ್ ತೋರಿಸುತ್ತದೆ. ಕೆಳಕಂಡ ಎರಡು ಪ್ರಶ್ನೆಗಳಿಗೆ (ಪ್ರ. 19 & 20) ಉತ್ತರಿಸಿ.
ಏಳು ವಿದ್ಯಾಸಂಸ್ಥೆಗಳಲ್ಲಿರುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ ವಿದ್ಯಾರ್ಥಿಗಳ ಹಂಚಿಕೆ.

19. S ವಿದ್ಯಾ ಸಂಸ್ಥೆಯಲ್ಲಿ ಅನುಕ್ರಮವಾಗಿ ಸ್ನಾತಕೋತ್ತರ ಪದವಿ ಹಾಗೂ ಪದವಿ ಮಟ್ಟದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತವನ್ನು ತಿಳಿಸಿ.

    (a)    14 : 19
    (b)    19 : 21
    (c)    17 : 21
    (d)    19 : 14

ಸರಿ ಉತ್ತರ

(d) 19 : 14


20. N ಮತ್ತು P ವಿದ್ಯಾಸಂಸ್ಥೆಗಳಲ್ಲಿ ಸ್ನಾತಕೋತ್ತರ ಮಟ್ಟದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ

    (a)    5601
    (b)    5944
    (c)    6669
    (d)    8372

ಸರಿ ಉತ್ತರ

(c) 6669


ನಿರ್ದೇಶನಗಳು : ನೀಡಿರುವ ರೇಖಾಚಿತ್ರದ ಬಗ್ಗೆ ಕೆಳಗಿನ ಎರಡು ಪ್ರಶ್ನೆಗಳಿಗೆ ಉತ್ತರಿಸಿ. (ಪ್ರ.ಸಂ. 21 & 22)
ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2009 ರಿಂದ 2015 ರವರೆಗೆ ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗ ಹಂದಿಜ್ವರದ ಪರಿಸ್ಥಿತಿಯ ಬಗ್ಗೆ ಪ್ರಕಟಿಸಿದೆ.

21. ಹಂದಿಜ್ವರ ರೋಗದಿಂದ ಬಳಲುತ್ತಿರುವವರಲ್ಲಿ ಶೇಕಡಾವಾರು ಹೆಚ್ಚು ಜನರು ಸತ್ತ ವರ್ಷ ಯಾವುದು ?

    (a)    2009
    (b)    2010
    (c)    2011
    (d)    2013

ಸರಿ ಉತ್ತರ

(d) 2013


22. 2009ರಿಂದ 2014ರವರೆಗೆ ಶೇಕಡಾವಾರು ಸತ್ತವರ ಸಂಖ್ಯೆಯನ್ನು ಗಮನಿಸಿದಾಗ ಯಾವ ತರಹದ ದಿಕ್ಸೂಚಿ ಕಂಡು ಬರುತ್ತದೆ ?

    (a)    ಹೆಚ್ಚಾಗದೆ ಇರುವುದು
    (b)    ಕಡಿಮೆಯಾಗದೆ ಇರುವುದು
    (c)    ಸ್ಥಿರವಾಗಿರುವುದು
    (d)    ಏರಿಳಿತಗಳಿರುವುದು

ಸರಿ ಉತ್ತರ

(d) ಏರಿಳಿತಗಳಿರುವುದು


23. 2008ರಿಂದ 2013ರ ಅವಧಿಯಲ್ಲಿ ಒಂದು ದೇಶದ ಪುರುಷರು ಹಾಗೂ ಮಹಿಳೆಯರ ಜನಸಂಖ್ಯೆಯನ್ನು (ಲಕ್ಷಗಳಲ್ಲಿ) ಕೆಳಕಂಡ ನಕ್ಷೆಯಲ್ಲಿ ಕೊಡಲಾಗಿದೆ. ಕೊಟ್ಟಿರುವ ಎಷ್ಟು ವರ್ಷಗಳಲ್ಲಿ ಪುರುಷರ ಜನಸಂಖ್ಯೆಯು ಮಹಿಳೆಯರ ಜನಸಂಖ್ಯೆಗಿಂತ ಕನಿಷ್ಠ 10% ಹೆಚ್ಚಾಗಿತ್ತು?

    (a)    3
    (b)    2
    (c)    1
    (d)    0

ಸರಿ ಉತ್ತರ

(b) 2


24. ಒಂದು ನಗರದಲ್ಲಿ ಮದ್ಯ ನಿಷೇಧದ ಮೇಲೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಒಂದು ಸಮೀಕ್ಷೆ ನಡೆಸಲಾಯಿತು. ಒಂದು ಪ್ರಶ್ನಾವಳಿಯ ಮೇಲೆ ಆಧಾರಿತವಾಗಿ ದಾಖಲು ಮಾಡಿದ ಅಭಿಪ್ರಾಯವನ್ನು ಈ ಮುಂದಿನ ಕೋಷ್ಠಕದಲ್ಲಿ ಕೊಡಲಾಗಿದೆ.

 

ನಿಷೇಧಕ್ಕೆ
ಪರ

ನಿಷೇಧಕ್ಕೆ
ವಿರೋಧ

ಯಾವುದೇ
ಅಭಿಪ್ರಾಯವಿಲ್ಲ

ಒಟ್ಟು

ಪುರುಷರು

680

1290

110

2080

ಸೀಯರು

920

380

120

1420

ಒಟ್ಟು

1600

1670

230

3500

ಈ ಮುಂದಿನ ಹೇಳಿಕೆಗಳಲ್ಲಿ ಅತ್ಯಂತ ಔಚಿತ್ಯಪೂರ್ಣ ಹೇಳಿಕೆಯನ್ನು ಗುರುತಿಸಿ.

    (a)    ಹೆಚ್ಚು ಮಹಿಳೆಯರು ಮದ್ಯ ನಿಷೇಧವನ್ನು ವಿರೋಧಿಸಿದ್ದಾರೆ
    (b)    ಹೆಚ್ಚು ಪುರುಷರು ಮದ್ಯ ನಿಷೇಧವನ್ನು ವಿರೋಧಿಸಿದ್ದಾರೆ
    (c)    ಹೆಚ್ಚು ಪುರುಷರು ಮದ್ಯ ನಿಷೇಧದ ಪರವಾಗಿದ್ದಾರೆ
    (d)    ಶೇ. 10ಕ್ಕಿಂತಲೂ ಹೆಚ್ಚು ಪುರುಷರಿಂದ ಯಾವುದೇ ಅಭಿಪ್ರಾಯವಿಲ್ಲ

ಸರಿ ಉತ್ತರ

(b) ಹೆಚ್ಚು ಪುರುಷರು ಮದ್ಯ ನಿಷೇಧವನ್ನು ವಿರೋಧಿಸಿದ್ದಾರೆ


25. ಭಾರತದಲ್ಲಿ ಕೃಷಿಯ ಏಳಿಗೆಯು ಮಳೆಯನ್ನಾಧರಿಸಿದೆ. ದೇಶದಾದ್ಯಂತ ಶೇಕಡಾ 80-90 ರಷ್ಟು ಮಳೆಯಾಗುವುದು ಈ ಕೆಳಗಿನ ಯಾವ ಮುಂಗಾರು ಮಳೆಯ ಅವಧಿಯಲ್ಲಿ?

    (a)    ವಾಯವ್ಯ ಮುಂಗಾರು
    (b)    ಈಶಾನ್ಯ ಮುಂಗಾರು
    (c)    ನೈಋತ್ಯ ಮುಂಗಾರು
    (d)    ಆಗ್ನೇಯ ಮುಂಗಾರು

ಸರಿ ಉತ್ತರ

(c) ನೈಋತ್ಯ ಮುಂಗಾರು


26. ಕರ್ನಾಟಕದ ಈ ಕೆಳಕಂಡ ಯಾವ ಕೈಮಗ್ಗ ಉತ್ಪನ್ನವು ಜಿಯಾಗ್ರಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ಆ್ಯಕ್ಟ್ 1999 ರಡಿ ನೋಂದಾಯಿಸಲ್ಪಟ್ಟಿದೆ ?

    (a)    ಉಡುಪಿ ಸೀರೆ
    (b)    ಮೇಲುಕೋಟೆ ಸೀರೆ
    (c)    ಮೈಸೂರು ರೇಷ್ಮೆ ಸೀರೆ
    (d)    ಇಳಕಲ್ ಸೀರೆ

ಸರಿ ಉತ್ತರ

(d) ಇಳಕಲ್ ಸೀರೆ


27. ಸಕಾಲ ಮಿಷನ್ ಇದನ್ನು ಹೊಂದಿದೆ.
    I.    ISO 9001:2008 ಪ್ರಮಾಣೀಕರಣ
    II.    ಸಾರ್ವಜನಿಕ ಸೇವಾ ವಿಲೇವಾರಿಯಲ್ಲಿ ಉತ್ಕೃಷ್ಟತೆಗಾಗಿ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
    III.    ರಾಜ್ಯದಲ್ಲಿ ನಾಗರಿಕ ಸೇವಾ ವಿಲೇವಾರಿಯ ಉತ್ತಮ ಮಾದರಿ
    IV.    ವಿಶ್ವಬ್ಯಾಂಕ್ ಅನುದಾನ ಹಾಗೂ ತಾಂತ್ರಿಕ ಬೆಂಬಲ
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    (a)    I ಮತ್ತು II
    (b)    II ಮತ್ತು III
    (c)    I, II ಮತ್ತು III
    (d)    II, III ಮತ್ತು IV

ಸರಿ ಉತ್ತರ

(c) I, II ಮತ್ತು III


28. ವಿದ್ಯುತ್ ದರ ನಿಗದಿಪಡಿಸುವ ಸಂಸ್ಥೆ

    (a)    ರಾಜ್ಯ ಸರ್ಕಾರ
    (b)    ಕೇಂದ್ರ ವಿದ್ಯುತ್ ಪ್ರಾಧಿಕಾರ
    (c)    ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ
    (d)    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಸರಿ ಉತ್ತರ

(c) ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ


29. ವಾಯುಶಕ್ತಿಯ ರಾಷ್ಟ್ರೀಯ ಸಂಸ್ಥೆಯನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ ?

    (a)    ನವದೆಹಲಿ
    (b)    ಚೆನ್ನೈ
    (c)    ಕೋಲ್ಕತಾ
    (d)    ಬೆಂಗಳೂರು

ಸರಿ ಉತ್ತರ

(b) ಚೆನ್ನೈ


30. ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲನ್ನು ಒಂದು ವಾರದಲ್ಲಿ ಎಷ್ಟು ದಿನ ನೀಡಲಾಗುತ್ತಿದೆ ?

    (a)    6
    (b)    3
    (c)    5
    (d)    4

ಸರಿ ಉತ್ತರ

(b) 3


31. ‘ಸಣ್ಣ ಪ್ರಮಾಣದ ತಯಾರಿಕಾ ಉದ್ದಿಮೆ’ಯೆಂಬುದಾಗಿ ನಿರ್ಣಯಿಸಬೇಕಾದರೆ, ಸ್ಥಾವರ ಮತ್ತು ಯಂತ್ರೋಪಕರಣಗಳಲ್ಲಿನ ಪ್ರಸ್ತುತದ ಹೂಡಿಕೆ ಮಿತಿಯೆಷ್ಟು?

    (a)    ರೂ. 25.00 ಲಕ್ಷಗಳ ಮೇಲ್ಪಟ್ಟು ರೂ. 200.00 ಲಕ್ಷಗಳವರೆಗೆ
    (b)    ರೂ. 25.00 ಲಕ್ಷಗಳ ಮೇಲ್ಪಟ್ಟು ರೂ. 300.00 ಲಕ್ಷಗಳವರೆಗೆ
    (c)    ರೂ. 25.00 ಲಕ್ಷಗಳ ಮೇಲ್ಪಟ್ಟು ರೂ. 400.00 ಲಕ್ಷಗಳವರೆಗೆ
    (d)    ರೂ. 25.00 ಲಕ್ಷಗಳ ಮೇಲ್ಪಟ್ಟು ರೂ. 500.00 ಲಕ್ಷಗಳವರೆಗೆ

ಸರಿ ಉತ್ತರ

(d) ರೂ. 25.00 ಲಕ್ಷಗಳ ಮೇಲ್ಪಟ್ಟು ರೂ. 500.00 ಲಕ್ಷಗಳವರೆಗೆ


32. ಕರ್ನಾಟಕ ಸರ್ಕಾರದ ‘‘ಮನಸ್ವಿನಿ’’ ಕಾರ್ಯಕ್ರಮವೆಂದರೆ

    (a)    35 ವರ್ಷ ವಯಸ್ಸಿಗೂ ಮೇಲ್ಪಟ್ಟ, ಬಡತನ ರೇಖೆಗಿಂತ ಕೆಳಗಿನ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗಾಗಿ ರೂ. 500ಗಳ ಮಾಸಿಕ ಪಿಂಚಣಿ
    (b)    45 ವರ್ಷ ವಯಸ್ಸಿಗೂ ಮೇಲ್ಪಟ್ಟ, ಬಡತನ ರೇಖೆಗಿಂತ ಕೆಳಗಿನ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗಾಗಿ ರೂ. 600ಗಳ ಮಾಸಿಕ ಪಿಂಚಣಿ
    (c)    40 ವರ್ಷ ವಯಸ್ಸಿಗೂ ಮೇಲ್ಪಟ್ಟ, ಬಡತನ ರೇಖೆಗಿಂತ ಕೆಳಗಿನ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗಾಗಿ ರೂ. 500ಗಳ ಮಾಸಿಕ ಪಿಂಚಣಿ
    (d)    40 ವರ್ಷ ವಯಸ್ಸಿಗೂ ಮೇಲ್ಪಟ್ಟ, ಬಡತನ ರೇಖೆಗಿಂತ ಕೆಳಗಿನ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗಾಗಿ ರೂ. 800ಗಳ ಮಾಸಿಕ ಪಿಂಚಣಿ

ಸರಿ ಉತ್ತರ

(c) 40 ವರ್ಷ ವಯಸ್ಸಿಗೂ ಮೇಲ್ಪಟ್ಟ, ಬಡತನ ರೇಖೆಗಿಂತ ಕೆಳಗಿನ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗಾಗಿ ರೂ. 500ಗಳ ಮಾಸಿಕ ಪಿಂಚಣಿ


33. ಈ ಕೆಳಕಂಡವುಗಳಲ್ಲಿ ಕರ್ನಾಟಕ ರಾಜ್ಯದ ಹೈನು ಮತ್ತು ಕೃಷಿ ಕೆಲಸಗಳಿಗೆ ಹೆಸರುವಾಸಿಯಾದ ದೇಶಿ ಅವಳಿ ಉದ್ದೇಶಿತ ತಳಿಗಳು ಯಾವುವು ?

    (a)    ಅಮೃತ್ ಮಹಲ್, ಹಳ್ಳಿಕಾರ್
    (b)    ಖಿಲ್ಲಾರ್, ಮಲೆನಾಡು ಗಿಡ್ಡ
    (c)    ದೇವಣಿ, ಕೃಷ್ಣ ವ್ಯಾಲಿ
    (d)    ಶಾಹಿವಾಲ್, ಕಾಂಕ್ರೇಜ್

ಸರಿ ಉತ್ತರ

(c) ದೇವಣಿ, ಕೃಷ್ಣ ವ್ಯಾಲಿ


34. ಕರ್ನಾಟಕ ಯೋಜನೆ ಮಂಡಳಿಯ ಉಪಾಧ್ಯಕ್ಷರು

    (a)    ಸಿ.ಎಂ. ಇಬ್ರಾಹಿಂ
    (b)    ಟಿ.ಬಿ. ಜಯಚಂದ್ರ
    (c)    ಪ್ರೊ. ಡಾ. ಮುಮ್ತಾಜ್ ಅಲಿಖಾನ್
    (d)    ಡಿ.ಹೆಚ್. ಶಂಕರಮೂರ್ತಿ

ಸರಿ ಉತ್ತರ

(a) ಸಿ.ಎಂ. ಇಬ್ರಾಹಿಂ


35. ಒಂದು ಹೆದ್ದಾರಿಯಲ್ಲಿ ಸಂಚರಿಸುವಾಗ ಕಿ.ಮೀ. ಕಲ್ಲಿಗೆ ಬಿಳಿಯ ಗುರುತು ಮಾಡಿದ್ದಾರೆ. ಬಿಳಿಯ ಬಣ್ಣ ಬಳಿದಿದ್ದರೆ ಮತ್ತು ಕಿ.ಮೀ. ಕಲ್ಲಿನ ಮೇಲೆ ಅರೆ ವೃತ್ತಾಕಾರಕ್ಕೆ ಹೊಳೆಯುವ ಹಸಿರು ಬಣ್ಣದಿಂದ ಗುರುತು ಮಾಡಿದ್ದರೆ ಆಗ ಅದು ಈ ಮುಂದಿನ ಹೆದ್ದಾರಿ ಆಗಿರಲೇಬೇಕು.

    (a)    ರಾಜ್ಯ ಹೆದ್ದಾರಿ
    (b)    ರಾಷ್ಟ್ರೀಯ ಹೆದ್ದಾರಿ
    (c)    ಎಕ್ಸ್ಪ್ರೆಸ್ ದಾರಿ
    (d)    ಪ್ರಮುಖ ಜಿಲ್ಲಾ ರಸ್ತೆ

ಸರಿ ಉತ್ತರ

(a) ರಾಜ್ಯ ಹೆದ್ದಾರಿ


36. ಅನುಷ್ಠಾನಗೊಳಿಸುವ ಪ್ರತಿಯೊಂದು ಸಂಸ್ಥೆಯೂ ವೇತನ ಹಾಗೂ ಸಾಮಗ್ರಿ ವೆಚ್ಚದ ಕನಿಷ್ಠ ಅನುಪಾತವನ್ನು ಕಾಯ್ದುಕೊಳ್ಳಬೇಕೆಂದು ಎಂಜಿಎನ್ಆರ್ಇಜಿಎ ಮಾರ್ಗದರ್ಶಿ ರೇಖೆಗಳು ನಿರ್ದೇಶಿಸುತ್ತವೆ. ಆ ಅನುಪಾತವು :

    (a)    40% ವೇತನ ವೆಚ್ಚ : 60% ಸಾಮಗ್ರಿ ವೆಚ್ಚ, ಒಂದು ವರ್ಷದಲ್ಲಿನ ಎಲ್ಲ ಕೆಲಸಗಳಿಗೆ
    (b)    60% ವೇತನ ವೆಚ್ಚ : 40% ಸಾಮಗ್ರಿ ವೆಚ್ಚ, ಒಂದು ವರ್ಷದಲ್ಲಿನ ಎಲ್ಲ ಕೆಲಸಗಳಿಗೆ
    (c)    60% ವೇತನ ವೆಚ್ಚ : 40% ಸಾಮಗ್ರಿ ವೆಚ್ಚ, ಪ್ರತಿ ಕೆಲಸಕ್ಕೆ
    (d)    40% ವೇತನ ವೆಚ್ಚ : 60% ಸಾಮಗ್ರಿ ವೆಚ್ಚ, ಪ್ರತಿ ಕೆಲಸಕ್ಕೆ

ಸರಿ ಉತ್ತರ

(b) 60% ವೇತನ ವೆಚ್ಚ : 40% ಸಾಮಗ್ರಿ ವೆಚ್ಚ, ಒಂದು ವರ್ಷದಲ್ಲಿನ ಎಲ್ಲ ಕೆಲಸಗಳಿಗೆ


37. ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯವು (Ministry) ____________ ಕಾರ್ಯಕ್ರಮದಡಿಯಲ್ಲಿ ಪರಿಸರ ಜಾಗೃತಿಯನ್ನು ಉತ್ತೇಜಿಸುವುದಕ್ಕಾಗಿ ಹಾಗೂ ಶಾಲಾ ಮಕ್ಕಳನ್ನು ಸುಶಿಕ್ಷಿತ ರನ್ನಾಗಿಸುವುದಕ್ಕಾಗಿ ಪರಿಸರಾತ್ಮಕ ಕ್ಲಬ್ಬುಗಳಿಗೆ ಹಣಕಾಸಿನ ನೆರವನ್ನು ಒದಗಿಸುತ್ತದೆ.

    (a)    ಹಸಿರು ಭಾರತಕ್ಕಾಗಿ ರಾಷ್ಟ್ರೀಯ ಅಭಿಯಾನ
    (b)    ರಾಷ್ಟ್ರೀಯ ಪರಿಸರಾತ್ಮಕ ಕ್ಲಬ್ ಕಾರ್ಯಕ್ರಮ
    (c)    ರಾಷ್ಟ್ರೀಯ ಹಸಿರು ಶಾಂತಿ ಕಾರ್ಯಕ್ರಮ
    (d)    ರಾಷ್ಟ್ರೀಯ ಹಸಿರು ದಳ ಕಾರ್ಯಕ್ರಮ

ಸರಿ ಉತ್ತರ

(d) ರಾಷ್ಟ್ರೀಯ ಹಸಿರು ದಳ ಕಾರ್ಯಕ್ರಮ


38. ‘‘ಡಾ. ಸಲೀಂ ಆಲಿ’’ ಇವರು ಈ ಕೆಳಗಿನ ಯಾವ ವಿಷಯಕ್ಕೆ ಪ್ರಖ್ಯಾತರು ?

    (a)    ಆರ್ನಿಥಾಲಜಿಸ್ಟ್
    (b)    ಬಯೋಲಾಜಿಸ್ಟ್
    (c)    ಎನ್ವಿರಾನ್ಮೆಂಟಲಿಸ್ಟ್
    (d)    ಡರ್ಮಟಲಾಜಿಸ್ಟ್

ಸರಿ ಉತ್ತರ

(a) ಆರ್ನಿಥಾಲಜಿಸ್ಟ್


39. ಕರ್ನಾಟಕ ಸರ್ಕಾರದ ಮುಂದಿನ ಯಾವ ಯೋಜನೆ/ ಕಾರ್ಯಕ್ರಮವು ಜನರಿಗೆ ಅತ್ಯಲ್ಪ ದರದಲ್ಲಿ ಸಸಿಗಳನ್ನು ಒದಗಿಸುವ ಮೂಲಕ, ಸಾರ್ವಜನಿಕರು ಅಥವಾ ರೈತರು ಮರ ನೆಡುವುದನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ?

    (a)    ಸಮೃದ್ಧ ಹಸಿರು ಗ್ರಾಮ ಯೋಜನೆ
    (b)    ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
    (c)    ದೇವದೇವ ವನ ಯೋಜನೆ
    (d)    ವನ ಭಾಗ್ಯ ಯೋಜನೆ

ಸರಿ ಉತ್ತರ

(b) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ


40. ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿನ ಪಶ್ಚಿಮ ಘಟ್ಟಗಳ ಕುರಿತಾದ ಉನ್ನತ ಮಟ್ಟದ ಕಾರ್ಯಶೀಲ ಸಮೂಹದ ವರದಿಯ ಪ್ರಕಾರ ಅಂದಾಜು ಕರ್ನಾಟಕದ ಎಷ್ಟು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ (ESA) ಭಾಗವಾಗಿ ಸೇರ್ಪಡೆ ಮಾಡಲಾಯಿತು ?

    (a)    800
    (b)    1500
    (c)    500
    (d)    2500

ಸರಿ ಉತ್ತರ

(b) 1500


41. ಈ ಕೆಳಕಂಡ ಯಾವ ನಗರವು HRIDAY (ಪಾರಂಪರಿಕ ನಗರ ಅಭಿವೃದ್ಧಿ ಹಾಗೂ ಸಂವರ್ಧನಾ ಯೋಜನೆ) ಯೋಜನೆಯಡಿಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದೆ?

    (a)    ಹಂಪಿ
    (b)    ಬಿಜಾಪುರ
    (c)    ಬೀದರ್
    (d)    ಬಾದಾಮಿ

ಸರಿ ಉತ್ತರ

(d) ಬಾದಾಮಿ


42. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಅಧಿನಿಯಮ, 1976ರ ಪ್ರಕಾರ ಕಾರ್ಪೊರೇಷನ್ನ ಮೇಯರ್ ಹಾಗೂ ಉಪಮೇಯರ್ರ ಅಧಿಕಾರಾವಧಿ ಎಷ್ಟು ?

    (a)    5 ವರ್ಷಗಳು
    (b)    1 ವರ್ಷ
    (c)    2½ ವರ್ಷಗಳು
    (d)    3 ವರ್ಷಗಳು

ಸರಿ ಉತ್ತರ

(b) 1 ವರ್ಷ


43. ಕರ್ನಾಟಕದಲ್ಲಿರುವ ಒಟ್ಟು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಧಾಮಗಳ ಸಂಖ್ಯೆ :

    (a)    ಅನುಕ್ರಮವಾಗಿ 5 ಮತ್ತು 27
    (b)    ಅನುಕ್ರಮವಾಗಿ 6 ಮತ್ತು 25
    (c)    ಅನುಕ್ರಮವಾಗಿ 4 ಮತ್ತು 23
    (d)    ಅನುಕ್ರಮವಾಗಿ 6 ಮತ್ತು 29

ಸರಿ ಉತ್ತರ

(a) ಅನುಕ್ರಮವಾಗಿ 5 ಮತ್ತು 27


44. ‘ಬಾಲ ಸಂಜೀವಿನಿ’ ಯೋಜನೆಯನ್ನು ಈ ಕೆಳಗಿನ ಸೇವೆ ಒದಗಿಸಲು ಆರಂಭಿಸಲಾಗಿದೆ.

    (a)    3ನೇ ಹಂತ(Tertiary)ದ ಆರೋಗ್ಯ ಸೇವೆಯನ್ನು ಅರ್ಹ ಅಂಗನವಾಡಿ ಮಕ್ಕಳಿಗೆ ರಾಜ್ಯದ ಆಯ್ದ ಆಸ್ಪತ್ರೆಗಳಲ್ಲಿ ನೀಡಲು ಆರಂಭಿಸಲಾಗಿದೆ.
    (b)    ಶಾಲೆಗೆ ಹೋಗುವ ಮಕ್ಕಳಿಗೆ ರಾಜ್ಯದಲ್ಲಿ ಆರೋಗ್ಯ ಸೇವೆ ಒದಗಿಸಲು ಆರಂಭಿಸಲಾಗಿದೆ.
    (c)    ರಾಜ್ಯದ ಎಲ್ಲಾ ಮಕ್ಕಳಿಗೆ ಆರೋಗ್ಯ ವಿಮೆ ಯೋಜನೆ ಒದಗಿಸಲು ಆರಂಭಿಸಲಾಗಿದೆ.
    (d)    ಮೇಲಿನ ಯಾವುದೂ ಅಲ್ಲ.

ಸರಿ ಉತ್ತರ

(a) 3ನೇ ಹಂತ(Tertiary)ದ ಆರೋಗ್ಯ ಸೇವೆಯನ್ನು ಅರ್ಹ ಅಂಗನವಾಡಿ ಮಕ್ಕಳಿಗೆ ರಾಜ್ಯದ ಆಯ್ದ ಆಸ್ಪತ್ರೆಗಳಲ್ಲಿ ನೀಡಲು ಆರಂಭಿಸಲಾಗಿದೆ.


45. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆ ಗಳ ಇಲಾಖೆಯು __________ನ ಒಂದು ಜಾಲ ತಂತ್ರಾಂಶವನ್ನು ಅನ್ವಯಿಸಿ ಸಾರ್ವಜನಿಕರಿಗೆ (ಕರ್ನಾಟಕ ಭೂಕಂದಾಯ ಕಾಯ್ದೆಯಡಿ ನಿಗದಿಪಡಿಸಿರುವಂತೆ) ಮ್ಯುಟೇಶನ್ ಪೂರ್ವ (11ಇ) ನಕ್ಷೆ ನೀಡಲಾಗುವುದು.

    (a)    ಭೂಮಿ
    (b)    ನಾಡ ಕಛೇರಿ
    (c)    ಯು.ಪಿ.ಒ.ಆರ್.
    (d)    ಮೋಜಣಿ

ಸರಿ ಉತ್ತರ

(d) ಮೋಜಣಿ


46. ಕರ್ನಾಟಕದಲ್ಲಿರುವ ರಾಜ್ಯಸಭಾ ಸ್ಥಾನಗಳೆಷ್ಟು?

    (a)    10
    (b)    12
    (c)    8
    (d)    14

ಸರಿ ಉತ್ತರ

(b) 12


47. ಪ್ಲಾಸ್ಟಿಕ್ ಚೀಲಗಳ (ವ್ಯವಸ್ಥಾಪಕತೆ ಮತ್ತು ನಿರ್ವಹಣೆ) ನಿಯಮಗಳು 2011 ರ ಅನ್ವಯ ________ ಗಿಂತ ಕಡಿಮೆ ಮಂದದ ಪ್ಲಾಸ್ಟಿಕ್ ಚೀಲಗಳ ತಯಾರಿಕೆಯನ್ನು ರದ್ದುಗೊಳಿಸಲಾಗಿದೆ.

    (a)    25 ಮೈಕ್ರಾನ್ಗಳು
    (b)    30 ಮೈಕ್ರಾನ್ಗಳು
    (c)    35 ಮೈಕ್ರಾನ್ಗಳು
    (d)    40 ಮೈಕ್ರಾನ್ಗಳು

ಸರಿ ಉತ್ತರ

(d) 40 ಮೈಕ್ರಾನ್ಗಳು


48. ಒಂದು ಪರಿಸರ ವ್ಯವಸ್ಥೆಯಲ್ಲಿ ಸದಾ ಪೋಷಕಾಂಶಗಳು ಯಾವ ರೀತಿಯಲ್ಲಿ ಸಂಚಲನವಾಗುತ್ತವೆ ?

    (a)    ಚಕ್ರೀಯ
    (b)    ರೇಖಾತ್ಮಕ
    (c)    ಸಮಾಂತರ
    (d)    ಸಮತಲ

ಸರಿ ಉತ್ತರ

(a) ಚಕ್ರೀಯ


49. ಸಂಖ್ಯೆಗಳು ಹಾಗೂ ಜೈವಿಕ ರಾಶಿಯ ತಲೆಕೆಳಗಾದ ಪಿರಮಿಡ್ಡು ಎಲ್ಲಿ ಕಂಡು ಬರುತ್ತದೆ ?

    (a)    ಅನುಕ್ರಮವಾಗಿ, ಪರಾವಲಂಬಿ ಆಹಾರ ಸರಪಳಿ ಮತ್ತು ಅರಣ್ಯದ ಜೀವ ಪರಿಸರ ವ್ಯವಸ್ಥೆಯಲ್ಲಿ
    (b)    ಅನುಕ್ರಮವಾಗಿ, ಹುಲ್ಲುಗಾವಲಿನ ಜೀವ ಪರಿಸರ ವ್ಯವಸ್ಥೆ ಹಾಗೂ ಅರಣ್ಯ ಜೀವ ಪರಿಸರ ವ್ಯವಸ್ಥೆಯಲ್ಲಿ
    (c)    ಅನುಕ್ರಮವಾಗಿ, ಪರಾವಲಂಬಿ ಆಹಾರ ಸರಪಳಿ ಹಾಗೂ ಕೊಳದ ಜೀವ ಪರಿಸರ ವ್ಯವಸ್ಥೆಯಲ್ಲಿ
    (d)    ಅನುಕ್ರಮವಾಗಿ, ಕೊಳದ ಜೀವ ಪರಿಸರ ವ್ಯವಸ್ಥೆ ಹಾಗೂ ಅರಣ್ಯ ಜೀವ ಪರಿಸರ ವ್ಯವಸ್ಥೆಯಲ್ಲಿ

ಸರಿ ಉತ್ತರ

(c) ಅನುಕ್ರಮವಾಗಿ, ಪರಾವಲಂಬಿ ಆಹಾರ ಸರಪಳಿ ಹಾಗೂ ಕೊಳದ ಜೀವ ಪರಿಸರ ವ್ಯವಸ್ಥೆಯಲ್ಲಿ


50. ಭಾರತದಲ್ಲಿ ‘‘ಜೈವಿಕ ವೈವಿಧ್ಯದ ಹಾಟ್ ಸ್ಪಾಟ್’’ ಎಂದು ಘೋಷಿಸಲ್ಪಟ್ಟ ಸ್ಥಳವೆಂದರೆ

    (a)    ಹಿಮಾಲಯಾಸ್
    (b)    ಆರಾವಳಿ ಘಟ್ಟಗಳು
    (c)    ವಿಂಧ್ಯಾ-ಸಾತ್ಪುರಗಳು
    (d)    ನಲ್ಲಮಾಲಾ ಘಟ್ಟಗಳು

ಸರಿ ಉತ್ತರ

(a) ಹಿಮಾಲಯಾಸ್


51. ಆಹಾರದ ಸರಪಳಿಯಲ್ಲಿ ಕೆಳಕಂಡ ಯಾವುದು ಪ್ರಾಥಮಿಕ ಉತ್ಪಾದಕ ?

    (a)    ಹೆಟಿರೋಟ್ರೋಪ್ಸ್ (ಪರಾವಲಂಬಿಗಳು)
    (b)    ಆಟೋಟ್ರೋಪ್ಸ್ (ಸ್ವಪೋಷಕರು)
    (c)    ಪ್ಲಾಂಟ್ಸ್ (ಸಸ್ಯಗಳು)
    (d)    ಪ್ರಿಡೇಟರ್ಸ್ (ಪರಭಕ್ಷಕಗಳು)

ಸರಿ ಉತ್ತರ

(b) ಆಟೋಟ್ರೋಪ್ಸ್ (ಸ್ವಪೋಷಕರು)


52. ಒಂದು ಸೆಮಿಕಂಡಕ್ಟರ್ ನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದನ್ನು ಆಧರಿಸಿ ಸೂಕ್ತ ಕಲ್ಮಶಗಳನ್ನು ಅದಕ್ಕೆ ಸೇರಿಸಲಾಗುವುದು. ಹೀಗೆ ಮಾಡುವುದರ ಉದ್ದೇಶವೇನು?

    (a)    ಅದರ ಆಯುಷ್ಯವನ್ನು ಹೆಚ್ಚಿಸಲು
    (b)    ಅದು, ಅಧಿಕ ವೋಲ್ಟೇಜುಗಳನ್ನು ತಾಳಿಕೊಳ್ಳುವಂತೆ ಮಾಡಲು
    (c)    ಅದರ ವಿದ್ಯುತ್ ವಾಹಕತ್ವವನ್ನು ಹೆಚ್ಚಿಸಲು
    (d)    ಅದರ ವಿದ್ಯುತ್ ಪ್ರತಿರೋಧಕತ್ವವನ್ನು ಹೆಚ್ಚಿಸಲು

ಸರಿ ಉತ್ತರ

(c) ಅದರ ವಿದ್ಯುತ್ ವಾಹಕತ್ವವನ್ನು ಹೆಚ್ಚಿಸಲು


53. ಮಳೆಯು ಲಂಬರೇಖೀಯವಾಗಿ ಕೆಳಗೆ ಬೀಳುತ್ತಿದೆ. ಪೂರ್ವಾಭಿಮುಖವಾಗಿ ಓಡುತ್ತಿರುವ ವ್ಯಕ್ತಿಗೆ ಮಳೆಯು ___________ ದಿಕ್ಕಿನಿಂದ ಬರುವಂತೆ ಕಾಣುತ್ತದೆ.

    (a)    ಪೂರ್ವ
    (b)    ಪಶ್ಚಿಮ
    (c)    ಈಶಾನ್ಯ
    (d)    ಆಗ್ನೇಯ

ಸರಿ ಉತ್ತರ

(a) ಪೂರ್ವ


54. ಈ ಮುಂದಿನ ಯಾವುದು Ex Situ ಸಂರಕ್ಷಣೆಯಾಗುತ್ತದೆ ?

    (a)    ವನ್ಯ ಜೀವಿಧಾಮ
    (b)    ಸೀಡ್ ಬ್ಯಾಂಕ್
    (c)    ಸೇಕ್ರೆಡ್ ಗ್ರೂವ್ಸ್
    (d)    ರಾಷ್ಟ್ರೀಯ ಉದ್ಯಾನವನ

ಸರಿ ಉತ್ತರ

(b) ಸೀಡ್ ಬ್ಯಾಂಕ್


55. ನ್ಯೂಟ್ರಿನೋ ಸಂಶೋಧನೆಗಾಗಿ ವಿಶ್ವದರ್ಜೆಯ ಭೂ ಅಂತರ್ಗತ ಪ್ರಯೋಗಾಲಯ ಎನಿಸಿಕೊಂಡಿರುವ ಭಾರತೀಯ ನೆಲೆಯ ನ್ಯೂಟ್ರಿನೋ ವೀಕ್ಷಣಾಲಯವು (INO) _______ ಸ್ಥಳದಲ್ಲಿ ತಲೆ ಎತ್ತಲಿದೆ.

    (a)    ತಮಿಳುನಾಡಿನ ಪೊಟ್ಟಿಪುರಂ
    (b)    ರಾಜ್ಕೋಟ್, ಗುಜರಾತ್
    (c)    ದಿಬ್ರೂಗರ್, ಅಸ್ಸಾಂ
    (d)    ಜೈತಾಪುರ್, ಮಹಾರಾಷ್ಟ್ರ

ಸರಿ ಉತ್ತರ

(a) ತಮಿಳುನಾಡಿನ ಪೊಟ್ಟಿಪುರಂ


56. ನಮ್ಮ ಸೌರವ್ಯೂಹದಲ್ಲಿನ ಯಾವ ಗ್ರಹವನ್ನು ಅದರ ಸ್ಥಾನದಿಂದ ಕೆಳಗಿಳಿಸಲಾಯಿತು?

    (a)    ಯುರೇನಸ್
    (b)    ಪ್ಲೂಟೋ
    (c)    ನೆಪ್ಚೂನ್
    (d)    ವೀನಸ್

ಸರಿ ಉತ್ತರ

(b) ಪ್ಲೂಟೋ


57. ಒಂದು ಸ್ವಚ್ಛವಾದ ಗಾಜಿನ ತಟ್ಟೆಯಲ್ಲಿ ನೀರಿನ ಹನಿ ಬಿದ್ದರೆ ಅದು ಹರಡಿಕೊಂಡು ತೆಳುವಾದ ಪದರವನ್ನು ರೂಪಿಸುತ್ತದೆ. ಆದರೆ ಪಾದರಸದ ಹನಿ ಬಿದ್ದರೆ ಅದು ಬಹುತೇಕ ಗೋಳಾಕಾರವಾಗಿಯೇ ಉಳಿದಿರುತ್ತದೆ. ಇದಕ್ಕೆ ಕಾರಣವೇನು?

    (a)    ನೀರಿನ ಸಂಲಗ್ನ ಬಲವು ಗಾಜಿನೊಂದಿಗೆ ಅಂಟಿಕೊಳ್ಳುವ ಅನುಸಕ್ತಿ ಬಲಕ್ಕಿಂತ ಹೆಚ್ಚಾಗಿರುತ್ತದೆ.
    (b)    ಪಾದರಸದ ಸಂಲಗ್ನ ಬಲವು ಗಾಜಿನೊಂದಿಗೆ ಅಂಟಿಕೊಳ್ಳುವ ಅನುಸಕ್ತಿ ಬಲಕ್ಕಿಂತ ಹೆಚ್ಚಾಗಿರುತ್ತದೆ.
    (c)    ಪಾದರಸದ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಹೆಚ್ಚಾಗಿರುತ್ತದೆ.
    (d)    ಪಾದರಸದ ಅನುಸಕ್ತಿ ಬಲವು ಗಾಜಿನೊಂದಿಗಿರುವ ಸಂಲಗ್ನ ಬಲಕ್ಕಿಂತ ಹೆಚ್ಚಾಗಿರುತ್ತದೆ.

ಸರಿ ಉತ್ತರ

(b) ಪಾದರಸದ ಸಂಲಗ್ನ ಬಲವು ಗಾಜಿನೊಂದಿಗೆ ಅಂಟಿಕೊಳ್ಳುವ ಅನುಸಕ್ತಿ ಬಲಕ್ಕಿಂತ ಹೆಚ್ಚಾಗಿರುತ್ತದೆ.


58. ಒಂದು ಗಡಿಯಾರದಲ್ಲಿ ನಿಮಿಷವನ್ನು ತೋರಿಸುವ ಮುಳ್ಳಿನ ತುದಿಯ ಚಲನೆಯನ್ನು ಗಮನಿಸಿ. ಒಂದು ಗಂಟೆಯೊಳಗೆ
    1.    . ಸ್ಥಾನಪಲ್ಲಟವು ಸೊನ್ನೆ
    2.    . ಕ್ರಮಿಸುವ ದೂರವು ಸೊನ್ನೆ
    3.    . ಸರಾಸರಿ ವೇಗವು ಸೊನ್ನೆ
    4.    . ಸರಾಸರಿ (ವೆಲಾಸಿಟಿಯು) ಸೊನ್ನೆ
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ತಿಳಿಸಿ.

    (a)    1 ಮತ್ತು 4
    (b)    1 ಮತ್ತು 2
    (c)    1 ಮತ್ತು 3
    (d)    2 ಮತ್ತು 3

ಸರಿ ಉತ್ತರ

(a) 1 ಮತ್ತು 4


59. ಒಂದು ವೇಳೆ ಭೂಮಿಯು ಸೂರ್ಯನಿಂದ ಈಗಿರುವ ದೂರಕ್ಕೆ ಬದಲಾಗಿ ನಾಲ್ಕನೇ ಒಂದು ಭಾಗದಷ್ಟು ದೂರದಲ್ಲಿದ್ದಿದ್ದರೆ ಒಂದು ವರ್ಷದ ಅವಧಿ ಎಷ್ಟಾಗಿರುತ್ತಿತ್ತು?

    (a)    ಈಗಿರುವ ವರ್ಷದ ಅರ್ಧದಷ್ಟು
    (b)    ಈಗಿರುವ ವರ್ಷದ ಎಂಟನೇ ಒಂದು ಭಾಗದಷ್ಟು
    (c)    ಈಗಿರುವ ವರ್ಷದ ನಾಲ್ಕನೇ ಒಂದು ಭಾಗದಷ್ಟು
    (d)    ಈಗಿರುವ ವರ್ಷದ ಆರನೇ ಒಂದು ಭಾಗದಷ್ಟು

ಸರಿ ಉತ್ತರ

(b) ಈಗಿರುವ ವರ್ಷದ ಎಂಟನೇ ಒಂದು ಭಾಗದಷ್ಟು


60. ಭೂಮಿಯ ಮೇಲ್ಮೈಯಲ್ಲಿ ವ್ಯಕ್ತಿಯೊಬ್ಬನ ತೂಕವು ಭೂಮಧ್ಯರೇಖೆಗಿಂತ ಧ್ರುವಗಳ ಬಳಿ ಹೆಚ್ಚಿರುತ್ತದೆ. ಇದಕ್ಕೆ ಕಾರಣ

    (a)    ಧ್ರುವಪ್ರದೇಶಗಳಿಗಿಂತ ಭೂಮಧ್ಯ ರೇಖೆಯ ಬಳಿಯ ಪ್ರದೇಶ ಹೆಚ್ಚು ಬಿಸಿಯಾಗಿರುತ್ತದೆ
    (b)    ಭೂಮಿಯು ಧ್ರುವಪ್ರದೇಶಗಳಲ್ಲಿ ಚಪ್ಪಟೆ ಯಾಗಿದ್ದು, ಭೂಮಧ್ಯರೇಖೆಯ ಬಳಿ ಉಬ್ಬಿದೆ
    (c)    ಧ್ರುವಗಳ ಬಳಿ ಭೂಮಿಯ ಮೇಲ್ಮೈ ಮಂಜು ಗಡ್ಡೆಯಿಂದ ಆವೃತವಾಗಿದೆ
    (d)    ಭೂಮಿಯನ್ನು ಸುತ್ತುತ್ತಿರುವ ಚಂದ್ರನು ಧ್ರುವಗಳಿಗಿಂತ ಭೂಮಧ್ಯ ರೇಖೆಯಲ್ಲಿನ ವ್ಯಕ್ತಿಯ ಮೇಲೆ ಕಡಿಮೆ ಬಲಪ್ರಯೋಗ ಮಾಡುತ್ತಾನೆ

ಸರಿ ಉತ್ತರ

(b) ಭೂಮಿಯು ಧ್ರುವಪ್ರದೇಶಗಳಲ್ಲಿ ಚಪ್ಪಟೆ ಯಾಗಿದ್ದು, ಭೂಮಧ್ಯರೇಖೆಯ ಬಳಿ ಉಬ್ಬಿದೆ


61. ನಮ್ಮ ಮನೆಗಳಲ್ಲಿ AC ಮುಖ್ಯವಾಹಿನಿಯ ಲೈವ್ ತುದಿಗೆ ಸೋಕಿಸಿದಾಗ ಬೆಳಗುವ ಟೆಸ್ಟರ್ (ವಿದ್ಯುತ್ ಪರೀಕ್ಷಕ) ತಟಸ್ಥ (ನ್ಯೂಟ್ರಲ್) ತುದಿಗೆ ಸೋಕಿಸಿದಾಗ ಬೆಳಗುವುದಿಲ್ಲ. ಇದಕ್ಕೆ ಕಾರಣವೆಂದರೆ

    (a)    ಪೂರೈಕೆಯಾದಾಗ ಯಾವಾಗಲೂ ವಿದ್ಯುತ್ತು AC ಯಿಂದ DCಗೆ ಪರಿವರ್ತನೆಯಾಗುತ್ತದೆ.
    (b)    ಲೈವ್ ತಂತಿಯು ವಾಹಕ, ಆದರೆ ತಟಸ್ಥ ತಂತಿಯು ವಾಹಕವಲ್ಲ.
    (c)    ತಟಸ್ಥ ತಂತಿಯು ನೆಲದ (ಗ್ರೌಂಡ್) ವೋಲ್ಟೇಜಿನಷ್ಟೇ ವೋಲ್ಟೇಜನ್ನು ಹೊಂದಿರುತ್ತದೆ.
    (d)    ಕೇವಲ ಲೈವ್ ತಂತಿ ಮೂಲಕ ವಿದ್ಯುತ್ ಹರಿಯುತ್ತದೆ, ತಟಸ್ಥ ತಂತಿಯ ಮೂಲಕ ಹರಿಯುವುದೇ ಇಲ್ಲ.

ಸರಿ ಉತ್ತರ

(c) ತಟಸ್ಥ ತಂತಿಯು ನೆಲದ (ಗ್ರೌಂಡ್) ವೋಲ್ಟೇಜಿನಷ್ಟೇ ವೋಲ್ಟೇಜನ್ನು ಹೊಂದಿರುತ್ತದೆ.


62. ಕೃತಕವಾಗಿ ಹಣ್ಣುಗಳನ್ನು ಪಕ್ವಗೊಳಿಸುವುದಕ್ಕೆ ಬಳಸಲಾಗುವ ಅನಿಲ

    (a)    ಮೀಥೇನ್
    (b)    ಈಥೇನ್
    (c)    ಎಥಿಲೀನ್
    (d)    ಅಸಿಟಲಿನ್

ಸರಿ ಉತ್ತರ

(c) ಎಥಿಲೀನ್


63. ನಮ್ಮನ್ನು ಎಚ್ಚರವಾಗಿಡುವುದಕ್ಕೆ ಮತ್ತು ಕೆಲವೊಮ್ಮೆ ನಮಗೆ ದಣಿವಾಗಿರದಿದ್ದರೂ ನಿದ್ದೆ ಬರುವಂತೆ ಮಾಡುವುದಕ್ಕೆ ಒಂದು ಹಾರ್ಮೋನು ಕಾರಣವಾಗಿದೆ. ಅದು ಯಾವುದು ?

    (a)    ಅಡ್ರಿನಾಲಿನ್
    (b)    ಅಡಿನೋಸಿನ್
    (c)    ಥೈರಾಕ್ಸಿನ್
    (d)    ಸೆರಟೋನಿನ್

ಸರಿ ಉತ್ತರ

(b) ಅಡಿನೋಸಿನ್


64. ಪರಮಾಣುವಿನ ದ್ರವ್ಯರಾಶಿ ಸಂಖ್ಯೆಯು ಯಾವ ಸಂಖ್ಯೆಗೆ ಸಮವಾಗಿರುತ್ತದೆ?

    (a)    ಎಲೆಕ್ಟ್ರಾನ್ ಸಂಖ್ಯೆಗೆ
    (b)    ನ್ಯೂಟ್ರಾನ್ ಸಂಖ್ಯೆಗೆ
    (c)    ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡನ್ನೂ ಕೂಡಿದಾಗ ಬರುವ ಸಂಖ್ಯೆಗೆ
    (d)    ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಎರಡನ್ನೂ ಕೂಡಿದಾಗ ಬರುವ ಸಂಖ್ಯೆಗೆ

ಸರಿ ಉತ್ತರ

(c) ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡನ್ನೂ ಕೂಡಿದಾಗ ಬರುವ ಸಂಖ್ಯೆಗೆ


65. ಜಗತ್ತಿನ ಕೆಲವು ಭಾಗಗಳಲ್ಲಿ ಅತೀ ಚಳಿಗಾಲದ ಸಮಯದಲ್ಲಿ ಸರೋವರದ ಮೇಲ್ಮೈ ಹೆಪ್ಪುಗಟ್ಟಿದ್ದು, ಅದರ ಕೆಳಭಾಗದಲ್ಲಿ ನೀರಿರುತ್ತದೆ. ತಳಮಟ್ಟದಲ್ಲಿ ಹೆಪ್ಪುಗಟ್ಟುವಿಕೆ ಆಗದಿರಲು ಕಾರಣ,

    (a)    ಹಿಮದ ವಾಹಕತೆ ಕಡಿಮೆ
    (b)    ನೀರು ಸಮ್ಮಿಳನದ ಹೆಚ್ಚು ಗುಪ್ತೋಷ್ಣವನ್ನು ಹೊಂದಿರುತ್ತದೆ
    (c)    ನೀರು ಅತಿ ಹೆಚ್ಚು ವಿಶಿಷ್ಟ ಉಷ್ಣವನ್ನು ಹೊಂದಿರುತ್ತದೆ
    (d)    ಸರೋವರದ ತಳದಲ್ಲಿ ಭೂಮಿಯ ಉಷ್ಣತೆಯು ಹೆಚ್ಚಿರುತ್ತದೆ

ಸರಿ ಉತ್ತರ

(a) ಹಿಮದ ವಾಹಕತೆ ಕಡಿಮೆ


66. ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರಮ್ಗೆ ಅನೇಕ ವಿಭಿನ್ನ ಕ್ಷೇತ್ರಗಳಿವೆ. ಅವುಗಳು __________ ಗಳನ್ನು ಒಳಗೊಳ್ಳುತ್ತವೆ.
    A.     ಗೋಚರಿಸಬಲ್ಲ ಬೆಳಕು
    B.     ಗಾಮಾ-ಕಿರಣಗಳು
    C.    ಅವಕೆಂಪು
    D.     ಸೂಕ್ಷ್ಮ ತರಂಗಗಳು
    E.     ರೇಡಿಯೋ ತರಂಗಗಳು
    F.    ನೇರಳಾತೀತ ಮತ್ತು
    G.    ಕ್ಷ-ಕಿರಣಗಳು ಅತಿ ಕಡಿಮೆ ತರಂಗಾಂತರದಿಂದ ಪ್ರಾರಂಭಿಸಿ, ಹೆಚ್ಚಿನ ತರಂಗಾಂತರವಿರುವಂತೆ ಅವುಗಳನ್ನು ಜೋಡಿಸಿ.

    (a)    GBDAFCE
    (b)    BGFADCE
    (c)    GBAFCDE
    (d)    BGFACDE

ಸರಿ ಉತ್ತರ

(d) BGFACDE


67. ಈ ಮುಂದಿನ ಅಂತರಾಷ್ಟ್ರೀಯ ಪರಿಸರ ಸಮ್ಮೇಳನಗಳು/ ಕೌಲು (Protocol) / ಕಾನ್ಫರೆನ್ಸ್
ಗಳನ್ನು ಅವುಗಳ ಪ್ರಮುಖ ವಿಷಯಗಳೊಂದಿಗೆ ಪರಿಶೀಲಿಸಿ.
    1.    UN (ಯುಎನ್) ಹವಾಮಾನ ಬದಲಾವಣೆ ಕಾನ್ಫೆರೆನ್ಸ್ ಪೋಲೆಂಡಿನಲ್ಲಿ 2008ರ ಡಿಸೆಂಬರ್ನಲ್ಲಿ ನಡೆಯಿತು. ಅಲ್ಲಿ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವರ್ಗಾವಣೆ, ವಿತ್ತೀಯ ತಂತ್ರಕುಶಲತೆ, ಅರಣ್ಯನಾಶ ಮತ್ತು ಅರಣ್ಯಗಳನ್ನು ಕೆಳದರ್ಜೆ ಗಿಳಿಸುವುದರಿಂದಾದ ಹೊರ ಹೊಮ್ಮುವಿಕೆಯನ್ನು ಕಡಿಮೆಗೊಳಿಸುವುದು ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು.
    2.    1989ರಲ್ಲಿ ನಡೆದ ಬಾಸೆಲ್ ಸಮ್ಮೇಳನ ‘‘ಅಪಾಯಕಾರಿ ತ್ಯಾಜ್ಯವಸ್ತುಗಳು ಮತ್ತು ಅವುಗಳ ವಿಲೇವಾರಿಯ ಗಡಿಯಾಚೆಗಿನ ಚಳವಳಿಯ ನಿಯಂತ್ರಣ’’ ಕುರಿತಂತೆ ನಡೆಯಿತು.
    3.    1987ರಲ್ಲಿ ಅಂಗೀಕರಿಸಿದ ಮಾಂಟ್ರಿಯಲ್ ಕೌಲು ಓರೆನ್ ಪದರವನ್ನು ಬರಿದು ಮಾಡುವ ವಸ್ತುಗಳ ವಿರುದ್ಧ ತೆಗೆದುಕೊಳ್ಳಬೇಕಾದ ನಿರ್ದಿಷ್ಟ ಕ್ರಮಗಳನ್ನು ಉಲ್ಲೇಖಿಸಿತು.
    4.    1985ರಲ್ಲಿ ನಡೆದ ವಿಯೆನ್ನಾ ಸಮ್ಮೇಳನದಲ್ಲಿ ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳು ಮತ್ತು ಸಸ್ಯಗಳ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರದ ಬಗ್ಗೆ ಚರ್ಚಿಸಲಾಯಿತು.
ಈ ಮೇಲಿನ ಯಾವ ಹೇಳಿಕೆ/ಗಳು ಸರಿ?

    (a)    1 ಮಾತ್ರ
    (b)    2 ಮತ್ತು 3 ಮಾತ್ರ
    (c)    1, 2 ಮತ್ತು 3 ಮಾತ್ರ
    (d)    1, 2, 3 ಮತ್ತು 4

ಸರಿ ಉತ್ತರ

(c) 1, 2 ಮತ್ತು 3 ಮಾತ್ರ


68. ಕಾದಿರಿಸಿದ ಜೀವಗೋಳವನ್ನು ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳ ಜೀವವೈವಿಧ್ಯತೆ ಮತ್ತು ಅನು ವಂಶಿಕ ಸಮಗ್ರತೆಯ ಸಂರಕ್ಷಣೆಗಾಗಿ ಸ್ಥಾಪಿಸಲಾಗಿದೆ.
ಈ ಮುಂದಿನ ಪದಗಳ ಜೋಡಿಗಳನ್ನು ಅವಲೋಕಿಸಿ.
ಕಾದಿರಿಸಿದ ಜೀವಗೋಳ ರಾಜ್ಯ

 

ಕಾದಿರಿಸಿದ ಜೀವಗೋಳ

 

ರಾಜ್ಯ

1.

ದೆಹಾಂಗ್ದಬಾಂಗ್

:

ಅರುಣಾಚಲ ಪ್ರದೇಶ

2.

ಮಾನಸ್

:

ಅಸ್ಸಾಂ

3.

ಸಿಮ್ಲಿಪಾಲ್

:

ಝಾರ್ಖಂಡ್

4.

ಅಗಸ್ತ್ಯ ಮಲೈ

:

ಕರ್ನಾಟಕ

 ಮೇಲಿನ ಯಾವ ಜೋಡಿಗಳು ಸರಿ ಹೊಂದುತ್ತವೆ ?

    (a)    1 ಮತ್ತು 2 ಮಾತ್ರ
    (b)    1, 2 ಮತ್ತು 3 ಮಾತ್ರ
    (c)    1, 2 ಮತ್ತು 4 ಮಾತ್ರ
    (d)    1, 2, 3 ಮತ್ತು 4

ಸರಿ ಉತ್ತರ

(a) 1 ಮತ್ತು 2 ಮಾತ್ರ


69. ಈ ಮುಂದಿನ ಸಸ್ಯಕೋಶ ಅಂಗಕಗಳು ಮತ್ತು ಅವುಗಳ ನಿರ್ದಿಷ್ಟ ಕಾರ್ಯಗಳನ್ನು ಪರಿಗಣಿಸಿ.
    1.    ಕ್ಲೋರೋಪ್ಲಾಸ್ಟ್
: ದ್ಯುತಿ ಸಂಶ್ಲೇಷಣೆ
    2.    ಮೈಟೋಕಾಂಡ್ರಿಯಾ : ಉಸಿರಾಟ
    3.    ನ್ಯೂಕ್ಲಿಯಸ್ : ಸ್ರಾವ (Secretion)
    4.    ರೈಬೋಸೋಮ್ಗಳು
: ಪ್ರೊಟೀನ್ ಸಂಶ್ಲೇಷಣೆ 

ಈ ಮೇಲಿನವುಗಳಲ್ಲಿ ಸರಿಯಾಗಿ ಹೊಂದಿಸಲಾದ ಜೋಡಿಗಳು ಯಾವುದು/ವು?

    (a)    2 ಮಾತ್ರ
    (b)    1 ಮತ್ತು 3 ಮಾತ್ರ
    (c)    1, 2 ಮತ್ತು 4 ಮಾತ್ರ
    (d)    1, 2, 3 ಮತ್ತು 4

ಸರಿ ಉತ್ತರ

(c) 1, 2 ಮತ್ತು 4 ಮಾತ್ರ


70. ಕೆಳಕಂಡ ಪ್ರೊಪಗ್ಯೂಲ್ಗಳನ್ನು (ಸಂತಾನಾಭಿವೃದ್ಧಿ ಭಾಗಗಳು) ಪರಿಶೀಲಿಸಿ.
    1.    ಶುಂಠಿಯ ನೆಲಕಾಂಡ
    2.    ಸಿಹಿಗೆಣಸಿನ ಗಂಟು
    3.    ಈರುಳ್ಳಿ ಗೆಡ್ಡೆ
    4.    ಬಾಳೆ ಕಂದು
ಇವುಗಳಲ್ಲಿ ಮಾರ್ಪಾಟು ಹೊಂದಿದ ಬೇರು ಯಾವುದು?

    (a)    1 ಮತ್ತು 2 ಮಾತ್ರ
    (b)    2 ಮಾತ್ರ
    (c)    1 ಮತ್ತು 3 ಮಾತ್ರ
    (d)    1, 3 ಮತ್ತು 4 ಮಾತ್ರ

ಸರಿ ಉತ್ತರ

(b) 2 ಮಾತ್ರ


71. ಆಧುನಿಕ ಜೈವಿಕ ತಂತ್ರಜ್ಞಾನದಲ್ಲಿ ತಳಿ ಶಾಸೀಯವಾಗಿ ಮಾರ್ಪಾಟು ಮಾಡಿದ ಜೀವಿಗಳನ್ನು ಅಭಿವೃದ್ಧಿ ಪಡಿಸಲು ಈ ಕೆಳಗಿನ ಯಾವ ವಿಧಾನವನ್ನು ಅನುಸರಿಸಲಾಗುತ್ತದೆ ?
    1.    ಇತರ ಜೀವಿಗಳಿಂದ ತೆಗೆದ ವಂಶವಾಹಿಗಳನ್ನು ಅಳವಡಿಸುವುದು
    2.    ವಂಶವಾಹಿಗಳ ಕೆಲವು ಭಾಗವನ್ನು ತೆಗೆದು ಹಾಕುವುದು
    3.    ವಂಶವಾಹಿ ಉತ್ಪರಿವರ್ತನೆಯನ್ನು ನಡೆಸುವುದು
    4.    ಕೆಲವು ವಂಶವಾಹಿಗಳನ್ನು ಮೂಕವಾಗಿಸುವುದು
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರ ತಿಳಿಸಿ.

    (a)    2, 3 ಮತ್ತು 4
    (b)    1, 2 ಮತ್ತು 4
    (c)    1, 3 ಮತ್ತು 4
    (d)    1, 2 ಮತ್ತು 3

ಸರಿ ಉತ್ತರ

(b) 1, 2 ಮತ್ತು 4


72. ವೆಂಕಟರಾಮನ್ ರಾಮಕೃಷ್ಣನ್ ಹಾಗೂ ಅವರೊಂದಿಗೆ ಕೆಲಸ ಮಾಡಿದವರಿಗೆ 2009ರಲ್ಲಿ ನೊಬೆಲ್ ಬಹುಮಾನ ದೊರೆಯಿತು. ರೈಬೋಸೋಮ್ಗಳ ರಾಚನಿಕ ವಿಶಿಷ್ಟತೆಯನ್ನು ಕುರಿತು ಅವರು ಸಂಶೋಧನೆ ಮಾಡಿದರು. ಇದಕ್ಕಾಗಿ ಅವರು ಬಳಸಿದ ಪ್ರಾಯೋಗಿಕ ಜೀವಿ ಯಾವುದು?

    (a)    Pyrolobus fumarii
    (b)    Sulfobolus thurbers
    (c)    Methanopyrus Kandiers
    (d)    Thermus thermophilus

ಸರಿ ಉತ್ತರ

(d) Thermus thermophilus


73. ಡೈನೋಸಾರ್ಗಳು ಈ ಯುಗದಲ್ಲಿದ್ದವು ?

    (a)    ಪೇಲಿಯೋಜೋಯಿಕ್ ಯುಗ
    (b)    ಸೀನೋಜೋಯಿಕ್ ಯುಗ
    (c)    ಮೀಸೋಜೋಯಿಕ್ ಯುಗ
    (d)    ಪ್ರೊೊಟಿರೋಜೋಯಿಕ್ ಯುಗ

ಸರಿ ಉತ್ತರ

(c) ಮೀಸೋಜೋಯಿಕ್ ಯುಗ


74. ಪತಿ-ಪತ್ನಿಯರಿಬ್ಬರಿಗೂ ಸಾಮಾನ್ಯವಾದ ದೃಷ್ಟಿ ಸಾಮರ್ಥ್ಯವಿದೆ. ಆದರೆ ಅವರಿಬ್ಬರ ತಂದೆಯರಿಗೂ ಬಣ್ಣಗುರುಡುತನವಿದೆ. ಇವರಿಗೆ ಹುಟ್ಟುವ ಮೊದಲ ಮಗುವಿಗೆ ಬಣ್ಣಗುರುಡುತನ ಬರುವ ಸಂಭವನೀಯತೆ ಎಷ್ಟು?

    (a)    25%
    (b)    50%
    (c)    75%
    (d)    0%

ಸರಿ ಉತ್ತರ

(d) 0%


75. ಈ ಕೆಳಗಿನ ಯಾವುದನ್ನು ಹೊರತುಪಡಿಸಿ ಸೊಳ್ಳೆಗಳು ಪ್ರಸಾರ ಮಾಡುತ್ತವೆ ?

    (a)    ಮಲೇರಿಯಾ
    (b)    ಲೇಯಿಶ್ ಮೇನಿಯಾಸಿಸ್
    (c)    ಡೆಂಗ್ಯೂ
    (d)    ಚಿಕೂನ್ ಗುನ್ಯಾ

ಸರಿ ಉತ್ತರ

(b) ಲೇಯಿಶ್ ಮೇನಿಯಾಸಿಸ್


76. ಕಾರ್ಟೊಸ್ಯಾಟ್ 1 ಮತ್ತು 2, ರೈಸ್ಯಾಟ್ 1 ಮತ್ತು 3 ಹಾಗೂ ಸರಳ್ ಇವು

    (a)    ವಿದ್ಯಾರ್ಥಿ ಉಪಗ್ರಹಗಳು
    (b)    ಸಂಪರ್ಕ ಉಪಗ್ರಹಗಳು
    (c)    ನೇವಿಗೇಷನ್ ಉಪಗ್ರಹಗಳು
    (d)    ಭೂ ವೀಕ್ಷಣಾ ಉಪಗ್ರಹಗಳು

ಸರಿ ಉತ್ತರ

(d) ಭೂ ವೀಕ್ಷಣಾ ಉಪಗ್ರಹಗಳು


77. ಭಾರತದ ರಾಷ್ಟ್ರೀಯ ಚಿಹ್ನೆಗಳನ್ನು ಕುರಿತಾದ ಜೋಡಿಗಳನ್ನು ಪರಿಗಣಿಸಿ.
(i) ರಾಷ್ಟ್ರೀಯ ಪ್ರಾಣಿ – ರಾಯಲ್ ಬಂಗಾಳ ಹುಲಿ
(ii) ಭಾರತದ ರಾಷ್ಟ್ರೀಯ ಪರಂಪರೆಯ ಪ್ರಾಣಿ – ಹನುಮಾನ್ ಲಾಂಗೂರ್
(iii) ಭಾರತದ ರಾಷ್ಟ್ರೀಯ ಸಸ್ತನಿ – ಆನೆ
(iv) ರಾಷ್ಟ್ರೀಯ ಪಕ್ಷಿ – ನವಿಲು
ಮೇಲಿನ ಯಾವ ಜೋಡಿಗಳು ಸರಿಯಾಗಿವೆ?

    (a)    (i) ಮತ್ತು (ii)
    (b)    (iii) ಮತ್ತು (iv)
    (c)    (i) ಮತ್ತು (iii)
    (d)    (i) ಮತ್ತು (iv)

ಸರಿ ಉತ್ತರ

(d) (i) ಮತ್ತು (iv)


78. ಟಿಡಿ-ಎಲ್ಟಿಇ ತಂತ್ರಜ್ಞಾನವನ್ನು ಬಳಸಿದ, 4ನೇ ತಲೆಮಾರಿನ (4G) ಮೊಬೈಲ್ ದೂರಸಂಪರ್ಕ ಸೇವೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಎಲ್ಲಿ ಆರಂಭಿಸಲಾಯಿತು?

    (a)    ಕೋಲ್ಕತಾ
    (b)    ಚೆನ್ನೈ
    (c)    ನವದೆಹಲಿ
    (d)    ಮುಂಬೈ

ಸರಿ ಉತ್ತರ

(a) ಕೋಲ್ಕತಾ


79. ಭಾರತದಲ್ಲಿ ಜಲವಿದ್ಯುತ್ ಪರಿಯೋಜನೆಗಳನ್ನು, ವಿದ್ಯುತ್ ಉತ್ಪಾದಿಸುವ ಅವುಗಳ ಸಾಮರ್ಥ್ಯವನ್ನು ಆಧರಿಸಿ ವರ್ಗೀಕರಿಸಲಾಗಿದೆ. ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

    (a)    ಮೈಕ್ರೋಜಲವಿದ್ಯುತ್ ಪರಿಯೋಜನೆ : 300 kW ವರೆಗೆ ಮಿನಿಜಲವಿದ್ಯುತ್ ಪರಿಯೋಜನೆ : 301 ರಿಂದ 3000 kW ಸಣ್ಣ ಜಲವಿದ್ಯುತ್ ಪರಿಯೋಜನೆ : 3001 ರಿಂದ 30000 kW
    (b)    ಮೈಕ್ರೋಜಲವಿದ್ಯುತ್ ಪರಿಯೋಜನೆ : 200 kW ವರೆಗೆ ಮಿನಿಜಲವಿದ್ಯುತ್ ಪರಿಯೋಜನೆ : 201 ರಿಂದ 1000 kW ಸಣ್ಣ ಜಲವಿದ್ಯುತ್ ಪರಿಯೋಜನೆ : 1001 ರಿಂದ 5000 kW
    (c)    ಮೈಕ್ರೋಜಲವಿದ್ಯುತ್ ಪರಿಯೋಜನೆ : 500 kW ವರೆಗೆ ಮಿನಿಜಲವಿದ್ಯುತ್ ಪರಿಯೋಜನೆ : 501 ರಿಂದ 5000 kW ಸಣ್ಣ ಜಲವಿದ್ಯುತ್ ಪರಿಯೋಜನೆ : 5001 ರಿಂದ 30000 kW
    (d)    ಮೈಕ್ರೋಜಲವಿದ್ಯುತ್ ಪರಿಯೋಜನೆ : 100 kW ವರೆಗೆ ಮಿನಿಜಲವಿದ್ಯುತ್ ಪರಿಯೋಜನೆ : 101 ರಿಂದ 2000 kW ಸಣ್ಣ ಜಲವಿದ್ಯುತ್ ಪರಿಯೋಜನೆ : 2001 ರಿಂದ 25000 kW

ಸರಿ ಉತ್ತರ

(d) ಮೈಕ್ರೋಜಲವಿದ್ಯುತ್ ಪರಿಯೋಜನೆ : 100 kW ವರೆಗೆ ಮಿನಿಜಲವಿದ್ಯುತ್ ಪರಿಯೋಜನೆ : 101 ರಿಂದ 2000 kW ಸಣ್ಣ ಜಲವಿದ್ಯುತ್ ಪರಿಯೋಜನೆ : 2001 ರಿಂದ 25000 kW


80. ಕರ್ನಾಟಕದ ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್ಗೆ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪರಿಗಣಿಸಿ.
    1.    ಬೆಂಗಳೂರು ನಗರ ಮತ್ತು ಗ್ರಾಮೀಣ ಹಾಲು ಉತ್ಪಾದಕರ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟವು ಕರ್ನಾಟಕದ ಯಾವುದೇ ಡೈರಿಗಿಂತ ಅತಿಹೆಚ್ಚು ಪ್ರಮಾಣದ ಹಾಲನ್ನು ಪಡೆದುಕೊಳ್ಳುವ ಹಾಗೂ ಹಾಲನ್ನು ಮಾರಾಟ ಮಾಡುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
    2.    ದೇಶದ ಡೈರಿ ಸಹಕಾರ ಸಂಸ್ಥೆಗಳ ಪೈಕಿ ಕೆಎಂಎಫ್ ಸಂಸ್ಥೆಯು ಎರಡನೇ ಅತಿದೊಡ್ಡ ಡೈರಿ ಸಹಕಾರ ಸಂಸ್ಥೆಯಾಗಿದೆ.
    3.    ಇದು 13 ಹಾಲಿನ ಒಕ್ಕೂಟಗಳನ್ನು ಹೊಂದಿದೆ.
ಮೇಲಿನ ಹೇಳಿಕೆಗಳನ್ನು ಯಾವುದು/ವು ಸರಿ?

    (a)    1, 2 ಮತ್ತು 3
    (b)    1 ಮಾತ್ರ
    (c)    2 ಮಾತ್ರ
    (d)    3 ಮಾತ್ರ

ಸರಿ ಉತ್ತರ

(a) 1, 2 ಮತ್ತು 3


81. ಭಾರತದಲ್ಲಿ ಆದ ಪ್ರಮುಖವಾದ ಕೃಷಿ ಕ್ರಾಂತಿಗಳನ್ನು ಹೊಂದಿಸಿ ಬರೆಯಿರಿ.

A.

ಚಿನ್ನದ ಕ್ರಾಂತಿ

1.

ಮೀನಿನ ಉತ್ಪಾದನೆ

B.

ಬೂದು ಕ್ರಾಂತಿ

2.

ತೈಲ
ಬೀಜಗಳ ಉತ್ಪಾದನೆ

C.

ನೀಲಿ ಕ್ರಾಂತಿ

3.

ಸೀಗಡಿ ಉತ್ಪಾದನೆ

D.

ಹಳದಿ ಕ್ರಾಂತಿ

4.

ಆಲೂಗೆಡ್ಡೆ ಉತ್ಪಾದನೆ

E.

ಗುಲಾಬಿ ಕ್ರಾಂತಿ

5.

ಹಣ್ಣಿನ ಉತ್ಪಾದನೆ

F.

ದುಂಡು ಕ್ರಾಂತಿ

6.

ರಸಗೊಬ್ಬರ ಉತ್ಪಾದನೆ

 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರ ತಿಳಿಸಿ.

 

A

B

C

D

E

F

(a)

3

4

2

5

1

6

(b)

5

6

1

2

3

4

(c)

4

3

2

1

6

5

(d)

5

6

3

4

2

1

ಸರಿ ಉತ್ತರ

(b) 5 6 1 2 3 4


82. ಸಾಮಾನ್ಯ ಮನುಷ್ಯನ ಸರಾಸರಿ ಬುದ್ಧಿಶಕ್ತಿ ಭಾಗಲಬ್ಧ (IQ) ಪ್ರಮಾಣ

    (a)    90-110
    (b)    50-60
    (c)    75-95
    (d)    120-150

ಸರಿ ಉತ್ತರ

(a) 90-110


83. ಕರ್ನಾಟಕದ IMR (Infant Mortality Rate) ಎಷ್ಟು?

    (a)    38
    (b)    49
    (c)    56
    (d)    28

ಸರಿ ಉತ್ತರ

(a) 38


84. ಕಾಫಿ ಉತ್ಪಾದನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
    1.    ಭಾರತದಲ್ಲಿ ಕರ್ನಾಟಕವು ಪ್ರಮುಖ ಕಾಫಿ ಉತ್ಪಾದನಾ ರಾಜ್ಯವಾಗಿದೆ.
    2.    ಕರ್ನಾಟಕದಲ್ಲಿ ಕಾಫಿ ಉತ್ಪಾದನೆಯ ಪ್ರಮುಖ ಜಿಲ್ಲೆಗಳು ತುಮಕೂರು, ದಾವಣಗೆರೆ ಮತ್ತು ಶಿವಮೊಗ್ಗ
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?

    (a)    1 ಮಾತ್ರ
    (b)    2 ಮಾತ್ರ
    (c)    1 ಮತ್ತು 2 ಎರಡೂ
    (d)    1 ಅಥವಾ 2 ಎರಡೂ ಅಲ್ಲ

ಸರಿ ಉತ್ತರ

(a) 1 ಮಾತ್ರ


85. ವೈದ್ಯಕೀಯ ಇತಿಹಾಸದಲ್ಲಿಯೇ ಯಶಸ್ವಿ ಶಸಚಿಕಿತ್ಸೆ ಎಂದು ಪರಿಗಣಿಸಲ್ಪಟ್ಟ, 9 ದಿನದ ಶಿಶುವಿನ ಮೇಲೆ ನಡೆಸಲಾದ ಪ್ರಥಮ ನಿಯೋನೇಟಲ್ ಹೃದಯ ಸರ್ಜರಿಯನ್ನು ಮಾಡಿದ ವೈದ್ಯರನ್ನು ಹೆಸರಿಸಿ.

    (a)    ಡಾ. ಆನಂದ್ ಕುಮಾರ್
    (b)    ಡಾ. ದೇವಿಪ್ರಸಾದ್ ಶೆಟ್ಟಿ
    (c)    ಡಾ. ದೇಸಾಯಿ
    (d)    ಡಾ. ಭಟ್. ಕೆ.ಎಸ್.ಎಸ್.

ಸರಿ ಉತ್ತರ

(b) ಡಾ. ದೇವಿಪ್ರಸಾದ್ ಶೆಟ್ಟಿ


86. ಹಕ್ಕಿಜ್ವರವನ್ನು ಯಾವ ವಿಧದ ಇನ್ಉಫ್ಲುಯೆಂಜಾ ವೈರಸ್ ಉಂಟು ಮಾಡುತ್ತದೆ?

    (a)    H1N1
    (b)    H5N1
    (c)    H7N1
    (d)    H9N1

ಸರಿ ಉತ್ತರ

(b) H5N1


87. ಉತ್ತರ ಕರ್ನಾಟಕ ವಲಯದಲ್ಲಿ ಪುನರಾವರ್ತನೆಗೊಳ್ಳುವ ನೀರಿನ ಕೊರತೆಯನ್ನು ನೀಗಿಸಲು, ಹೆಚ್ಚು ಸಂಖ್ಯೆಯ ರೈತರಿಗೆ ಸಹಾಯ ಮಾಡಲು ನಿರ್ಮಿಸಲಾದ ನೀರಾವರಿ ಯೋಜನೆ ಯಾವುದು?

    (a)    ತುಬಚಿ-ಬಬಲೇಶ್ವರ ಏತ ನೀರಾವರಿ
    (b)    ಕೊಯ್ನಾ ಅಣೆಕಟ್ಟು ನೀರಾವರಿ
    (c)    ಕೃಷ್ಣಾ ಮೇಲ್ದಂಡೆ ಯೋಜನೆ
    (d)    ಭೀಮಾ ನದಿ ನೀರಾವರಿ ಯೋಜನೆ

ಸರಿ ಉತ್ತರ

(a) ತುಬಚಿ-ಬಬಲೇಶ್ವರ ಏತ ನೀರಾವರಿ


88. ಫೆಬ್ರವರಿ 2015ರಲ್ಲಿ ನಡೆದ ಬೆಂಗಳೂರಿನ ವೈಮಾನಿಕ ಪ್ರದರ್ಶನದಲ್ಲಿ ಈ ಕೆಲವು ಹೆಲಿಕಾಪ್ಟರ್ಗಳಿದ್ದವು. ಮುಂದೆ ನೀಡಿರುವ ಪಟ್ಟಿ-I (ಹೆಲಿಕಾಪ್ಟರ್ ಮಾದರಿ) ಯೊಂದಿಗೆ ಪಟ್ಟಿ-II (ದೇಶ/ತಯಾರಕ)ವನ್ನು ಹೊಂದಿಸಿ. ಸರಿಯಾದ ಉತ್ತರವನ್ನು ಗುರುತಿಸಿ.

 

ಪಟ್ಟಿ-I

 

ಪಟ್ಟಿ-II

A.

ಸೀಕಿಂಗ್ ಎಂಕೆ 41

1.

ರಷ್ಯಾ

B.

ಕೆಎ-226
ಟಿ

2.

ಭಾರತ

C.

.ಎಸ್.565
ಎಂಬಿ ಪ್ಯಾಂಥರ್

3.

ಫ್ರಾನ್ಸ್

D.

ಎಸ್ಎ 321 ಸೂಪರ್ ಫ್ರಿಯೋನ್

4.

ಯುಎಸ್ಎ

 

 

5.

ಜರ್ಮನಿ

 ಸರಿಯಾದ ಉತ್ತರವನ್ನು ಆಯ್ಕೆ ಮಾಡಿ

 

A

B

C

D

(a)

5

2

3

1

(b)

5

1

4

3

(c)

3

4

5

1

(d)

2

4

5

3

ಸರಿ ಉತ್ತರ

(b) 5 1 4 3


89. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕುಮಾರವ್ಯಾಸ ಪ್ರಶಸ್ತಿ 2013 ನ್ನು ಈ ಮುಂದಿನವರಿಗೆ ನೀಡಿತು.

    (a)    ಬಾಲಚಂದ್ರ ಶಾಸ್ತ್ರೀ ಹಿರೇಮಠ್
    (b)    ಮಠಪತಿ
    (c)    ರಾಮಲಿಂಗೇಗೌಡ
    (d)    ಶಿವಶಂಕರಪ್ಪ

ಸರಿ ಉತ್ತರ

(a) ಬಾಲಚಂದ್ರ ಶಾಸೀ ಹಿರೇಮಠ್


90. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನವದೆಹಲಿ ಯಲ್ಲಿ ನಡೆದ ಗಣರಾಜ್ಯ ದಿನದ ಪೆರೇಡಿನ ಸಮಯದಲ್ಲಿ ಮುಕುಂದ್ ವರದರಾಜನ್ರ ವಿಧವೆಗೆ _________ ಅನ್ನು ನೀಡಿದರು.

    (a)    ಅಶೋಕ ಚಕ್ರ
    (b)    ಪರಮವೀರ ಚಕ್ರ
    (c)    ಕೀರ್ತಿ ಚಕ್ರ
    (d)    ಶೌರ್ಯ ಚಕ್ರ

ಸರಿ ಉತ್ತರ

(a) ಅಶೋಕ ಚಕ್ರ


91. ರಾಮನಗರ ಜಿಲ್ಲೆಯಲ್ಲಿರುವ ಬ್ಯಾಲಾಳು ಇತ್ತೀಚೆಗೆ ಯಾವ ಕಾರಣಕ್ಕಾಗಿ ಸುದ್ಧಿಯಲ್ಲಿತ್ತು?

    (a)    ದ್ಯುತೀಯ ದೂರದರ್ಶಕ ಕೇಂದ್ರ
    (b)    ಮಂಗಳಯಾನ ಟ್ರ್ಯಾಕಿಂಗ್ ಕೇಂದ್ರ
    (c)    ಜೆಟ್ ಪ್ರೊಪೆಲ್ಶನ್ ಕೇಂದ್ರ
    (d)    ಡಿಆರ್ಡಿಓ ಕ್ಷಿಪಣಿ ಕೇಂದ್ರ

ಸರಿ ಉತ್ತರ

(b) ಮಂಗಳಯಾನ ಟ್ರ್ಯಾಕಿಂಗ್ ಕೇಂದ್ರ


92. ನವರಸಪುರ ಉತ್ಸವವು ___________ಇದರೊಂದಿಗೆ ನಿಕಟವಾಗಿ ಸಂಬಂಧಿಸಿದೆ.

    (a)    ಸಂಗೀತ
    (b)    ಹೋಳಿ ಆಚರಣೆ
    (c)    ರೈತರ ಹಬ್ಬ
    (d)    ಮೀನುಗಾರರು

ಸರಿ ಉತ್ತರ

(a) ಸಂಗೀತ


93. ಕೆಳಗಿನವುಗಳನ್ನು ಸರಿಹೊಂದಿಸಿ.

 

ಪಟ್ಟಿ -I

 

ಪಟ್ಟಿ-II

A.

ಸ್ವಾಭಾವಿಕ ಕ್ರಿಯಾಶೀಲ ನಿರೋಧಕತೆ

1.

ರೇಬೀಸ್ ಪ್ರತಿರೋಧಕ ರಕ್ತಸಾರ

B.

ಸ್ವಾಭಾವಿಕ ನಿಷ್ಕ್ರಿಯ ನಿರೋಧಕತೆ

2.

ಸಿಡುಬಿನ ಸೋಂಕಿನ ನಂತರ ಗಳಿಸಿದ್ದು

C.

ಕೃತಕ ಕ್ರಿಯಾಶೀಲ ನಿರೋಧಕತೆ

3.

ತಾಯಿಯಿಂದ ಮಗುವಿಗೆ ವರ್ಗಾವಣೆಯಾದದ್ದು

D.

 ಕೃತಕ ನಿಷ್ಕ್ರಿಯ ನಿರೋಧಕತೆ

4.

ಲಸಿಕೆ ನೀಡಿದ್ದರ ಪರಿಣಾಮವಾಗಿ ರೂಪುಗೊಂಡಿದ್ದು

 ಸರಿಯಾದ ಹೊಂದಿಕೆಯಾದ ಉತ್ತರ :

 

A

B

C

D

(a)

2

1

4

3

(b)

2

3

4

1

(c)

3

4

2

1

(d)

4

3

2

1

ಸರಿ ಉತ್ತರ

(b) 2 3 4 1


94. ಪೃಥ್ವೀ II ಕ್ಷಿಪಣಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ ?
    1.    ಇದು ಭಾರತದ IGMDPಯ ಒಂದು ಭಾಗವಾಗಿದೆ.
    2.    ಇದರ ನೌಕಾ ಭಿನ್ನರೂಪವನ್ನು ಧನುಷ್ ಎಂದು ಕರೆಯಲಾಗಿದೆ.
    3.    ಇದು 5000 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ.
ಸರಿಯಾದ ಉತ್ತರವನ್ನು ಆರಿಸಿ.

    (a)    1 ಮಾತ್ರ
    (b)    2 ಮಾತ್ರ
    (c)    1 ಮತ್ತು 2
    (d)    1, 2 ಮತ್ತು 3

ಸರಿ ಉತ್ತರ

(c) 1 ಮತ್ತು 2


ಕೆಳಕಂಡ 6 ಅಂಶಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳು : ಕೆಳಗಿನ 3 ಉದ್ಧೃತ ಭಾಗಗಳನ್ನು ಓದಿ ಮತ್ತು ಪ್ರತಿಯೊಂದು ಉದ್ಧೃತ ಭಾಗದ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಉತ್ತರಗಳು ಉದ್ಧೃತ ಭಾಗದ ಮೇಲೆ ಆಧರಿತವಾಗಿರಲಿ.
ಉದ್ಧೃತ ಭಾಗ-1
ನಾನು ಶ್ಲಾಘಿಸಿದ್ದು ನಮ್ಮ ಚಳುವಳಿ ಮತ್ತು ಸತ್ಯಾಗ್ರಹದ ನೈತಿಕ ಮತ್ತು ಧರ್ಮಸಿದ್ಧಾಂತ ಪಾರ್ಶ್ವವನ್ನು, ಅಹಿಂಸಾ ತತ್ವಕ್ಕೆ ನಾನು ನಿರುಪಾಧಿಕ ನಿಷ್ಠೆ ತೋರಿಸಲಿಲ್ಲ ಅಥವಾ ಸದಾಕಾಲಕ್ಕೂ ಅಂಗೀಕರಿಸಲಿಲ್ಲ, ಆದರೆ ಅದು ನನ್ನನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸಿತು, ಮತ್ತು ನಾವು ಭಾರತದಲ್ಲಿರುವುದರಿಂದ ಮತ್ತು ನಮ್ಮ ಹಿನ್ನೆಲೆಗಳು ಮತ್ತು ಪರಂಪರೆಗಳ ದೃಷ್ಟಿಯಿಂದ, ಅದು ನಮಗೆ ಸರಿಯಾದ ನೀತಿ ಎಂಬ ನಂಬುಗೆ ನನ್ನಲ್ಲಿ ಬೆಳೆಯಿತು, ರಾಜನೀತಿಯ ಆಧ್ಯಾತ್ಮೀಕರಣವು, ಅದರಲ್ಲಿ ‘ಇಲ್ಲ’ ಪದವನ್ನು, ಅದರ ಕಿರಿದಾದ ಧಾರ್ಮಿಕ ಪ್ರಜ್ಞೆಯಲ್ಲಿ ಬಳಸುವುದು, ಒಂದು ಒಳ್ಳೆಯ ಭಾವನೆಯೆಂದು ತೋರಿತು. ಒಂದು ಯೋಗ್ಯ ಸಾಧನೆ ಮಾಡಲು ಅದನ್ನು ತಲುಪುವ ಯೋಗ್ಯ ಸಾಧನವಿರಬೇಕು. ಅದು ಒಂದು ಉತ್ತಮ ನೀತಿ ಸಿದ್ಧಾಂತವೆಂದಷ್ಟೇ ಅಲ್ಲದೆ ದೃಢವಾದ ಪ್ರಾಯೋಗಿಕ ರಾಜನೀತಿಯೆಂದೂ ಸಹಾ ತೋರಿತು. ಏಕೆಂದರೆ ಸರಿಯಾಗಿಲ್ಲದ ಸಾಧನಗಳು ದೃಷ್ಟಿಯಲ್ಲಿರುವ ಸಾಧನಗಳನ್ನು ಬಹಳ ಸಲ ಸೋಲಿಸುತ್ತದೆ ಮತ್ತು ಹೊಸ ಸಮಸ್ಯೆಗಳು ಮತ್ತು ತೊಂದರೆಗಳನ್ನು ಉಂಟು ಮಾಡುತ್ತದೆ. ತರುವಾಯ, ಅಂಥ ಸಾಧನಗಳಿಗೆ ಒಳಗಾಗುವುದು, ಕೆಸರಿನಲ್ಲಿ ನಡೆಯುವುದು ಒಬ್ಬ ವ್ಯಕ್ತಿಯ ಅಥವಾ ಒಂದು ದೇಶದ ಸ್ವಾಭಿಮಾನಕ್ಕೆ ತಕ್ಕುದಲ್ಲ, ಹೀನತೆ ಉಂಟು ಮಾಡುತ್ತದೆಂದು ಕಂಡು ಬಂತು. ಒಬ್ಬ ವ್ಯಕ್ತಿಯು ಅದಕ್ಕೆ ಬಲಿಯಾಗದಿರುವುದು ಹೇಗೆ? ನಾವು ಬಾಗಿದರೆ ಅಥವಾ ತೆವಳಿದರೆ ತ್ವರಿತವಾಗಿ ಮುಂದೆ ಸಾಗುವುದು ಹೇಗೆ?
ಆಗ ನನ್ನ ಭಾವನೆಗಳು ಹಾಗಿದ್ದವು. ಅಸಹಕಾರ ಚಳವಳಿಯು ನನಗೆ ಬೇಕಿದ್ದುದನ್ನು ಒದಗಿಸಿತು. ರಾಷ್ಟ್ರದ ಸ್ವಾತಂತ್ರ್ಯದ ಗುರಿ ಮತ್ತು (ನಾನು ಭಾವಿಸಿದಂತೆ) ತುಳಿತಕ್ಕೊಳಗಾದವರ ಶೋಷಣೆಯ ಅಂತ್ಯ ಮತ್ತು ನನ್ನ ನೈತಿಕ ಭಾವನೆಯನ್ನು ತೃಪ್ತಿಪಡಿಸಿದ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಭಾವವನ್ನು ಕೊಟ್ಟ ಸಾಧನಗಳು. ಈ ವೈಯಕ್ತಿಕ ತೃಪ್ತಿ ಎಷ್ಟಿತ್ತೆಂದರೆ, ವೈಫಲ್ಯತೆ ಸಾಧ್ಯತೆಯೂ ಸಹ ಗಣನೆಗೆ ಬರಲಿಲ್ಲ. ಏಕೆಂದರೆ ಅಂಥ ವೈಫಲ್ಯ ಕೇವಲ ತಾತ್ಕಾಲಿಕ. ಭಗವದ್ ಗೀತೆಯ ಅಧ್ಯಾತ್ಮ ಭಾಗವು ನನಗೆ ಅರ್ಥವಾಗಲಿಲ್ಲ ಅಥವಾ ಅದು ನನ್ನನ್ನು ಆಕರ್ಷಿಸಲಿಲ್ಲ. ಆದರೆ ಶ್ಲೋಕಗಳನ್ನು
ಪಠಿಸಲು ಇಚ್ಛೆ ಹೊಂದಿದ್ದೆ. ಪ್ರತಿ ಸಂಜೆ ಗಾಂಧೀಜಿಯವರ ಆಶ್ರಮ ಪ್ರಾರ್ಥನೆಯಲ್ಲಿ ಪಠಿಸಿದ ಆ ಶ್ಲೋಕವು ಒಬ್ಬ ಮಾನವನು : ಉದ್ದೇಶವುಳ್ಳ ಶಾಂತ, ಪ್ರಸನ್ನ ಮತ್ತು ಅಚಲವಾಗಿರಬೇಕು, ತನ್ನ ಕರ್ತವ್ಯ ನಿಭಾಯಿಸುತ್ತಿರಬೇಕು ಮತ್ತು ತನ್ನ ಕಾರ್ಯದ ಪ್ರತಿಫಲಕ್ಕೆ ಹೆಚ್ಚು ಯೋಚಿಸದಿರಬೇಕು ಎಂದು ತಿಳಿಸುತ್ತದೆ. ಶಾಂತ ಸ್ವಭಾವದವನಲ್ಲದ ಅಥವಾ ಅಲಿಪ್ತನಲ್ಲದ ನಾನು, ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಕಲ್ಪನೆಯು ನನ್ನನ್ನು ಆಕರ್ಷಿಸಿತು ಎಂದು ಭಾವಿಸುತ್ತೇನೆ.

95. ಉದ್ಧೃತ ಭಾಗದಲ್ಲಿ ಲೇಖಕನ ಅಂತಿಮ ಮೂಲಭೂತ ದೃಷ್ಟಿ ಏನು?

    (a)    ಈ ಲೇಖಕರಿಗೆ ಸತ್ಯಾಗ್ರಹದ ನೈತಿಕ ಮತ್ತು ಧರ್ಮಸಿದ್ಧಾಂತ ಪಾರ್ಶ್ವವು ಇಷ್ಟವಾಗುತ್ತದೆ.
    (b)    ರಾಜಕೀಯದ ಆಧ್ಯಾತ್ಮೀಕರಣವು ಉತ್ತಮ ಭಾವನೆಯೆಂದು ತೋರುತ್ತದೆ.
    (c)    ಅಸಹಕಾರ ಚಳವಳಿಯು ಲೇಖಕರಿಗೆ, ಅವರಿಗೆ ಬೇಕಿದ್ದುದನ್ನು ನೀಡಿದೆ.
    (d)    ಯೋಗ್ಯ ಸಿದ್ಧಿಯು ಯೋಗ್ಯ ಸಾಧನ ಹೊಂದಿರಬೇಕು.

ಸರಿ ಉತ್ತರ

(c) ಅಸಹಕಾರ ಚಳವಳಿಯು ಲೇಖಕರಿಗೆ, ಅವರಿಗೆ ಬೇಕಿದ್ದುದನ್ನು ನೀಡಿದೆ.


96. ಉದ್ಧೃತ ಭಾಗದಲ್ಲಿ ಸೂಚಿಸಿರುವಂತೆ ಭಗವದ್ಗೀತೆಯು ಲೇಖಕರಿಗೆ ಏಕೆ ಇಷ್ಟವಾಯಿತು? ಅದು ಇಷ್ಟವಾದುದಕ್ಕೆ ಕಾರಣ

    (a)    ಲೇಖಕನಿಗೆ ಭಗವದ್ಗೀತೆಯ ಶ್ಲೋಕಗಳು ಇಷ್ಟವಾದವು
    (b)    ಲೇಖಕನು ಸ್ವಯಂ ತಾನು ಶಾಂತವಾಗಿರಲಿಲ್ಲ ಮತ್ತು ಅಲಿಪ್ತನಾಗಿರಲಿಲ್ಲ
    (c)    ಲೇಖಕನಿಗೆ ಭಗವದ್ಗೀತೆಯಲ್ಲಿ ತಿಳಿಸಿರುವ ‘ಫಲಿತಾಂಶಕ್ಕೆ ಯೋಚಿಸದೆ’ ಎಂಬ ಹೇಳಿಕೆ ಇಷ್ಟವಾಯಿತು
    (d)    ಲೇಖಕನಿಗೆ ಗಾಂಧೀಜಿಯವರ ಆಶ್ರಮದ ಪ್ರಾರ್ಥನೆಯಲ್ಲಿ ಪ್ರತಿದಿನ ಪಠಿಸುವ ಶ್ಲೋಕಗಳು ಇಷ್ಟವಾದವು.

ಸರಿ ಉತ್ತರ

(b) ಲೇಖಕನು ಸ್ವಯಂ ತಾನು ಶಾಂತವಾಗಿರಲಿಲ್ಲ ಮತ್ತು ಅಲಿಪ್ತನಾಗಿರಲಿಲ್ಲ


ಉದ್ಧೃತ ಭಾಗ-2
ಈ ಜಗತ್ತಿನ ವ್ಯವಸ್ಥೆಯಲ್ಲೆಲ್ಲೋ ನಮಗೆ ಆನಂದ ನೀಡುವುದರ ಬಗ್ಗೆ ಅಪಾರ ಆಸ್ಥೆಯಿರುವಂತೆ ಕಾಣುತ್ತದೆ. ಇದು, ವಿಶ್ವದಲ್ಲಿ, ವಸ್ತು ಹಾಗೂ ಚಾಲಕಶಕ್ತಿಗಳ ಅರ್ಥಕ್ಕಿಂತ ಮಿಗಿಲಾಗಿ, ವ್ಯಕ್ತಿತ್ವದ ಮಾಂತ್ರಿಕ ಸ್ಪರ್ಶದ ಮೂಲಕ ತಲುಪುವ ಸಂದೇಶವಿರುವುದೆಂಬುದನ್ನು ತೋರಿಸುತ್ತದೆ. ಈ ಸ್ಪರ್ಶವನ್ನು ಅನುಭವಿಸಬಹುದೇ ವಿನಃ ವಿಶ್ಲೇಷಿಸಲಾಗದು. ಅನ್ಯಗ್ರಹದ ವ್ಯಕ್ತಿಯು, ಅವ್ಯಕ್ತವಾಗಿಯೇ ಉಳಿದಂಥ, ಆದರೆ ಯಂತ್ರೋಪಕರಣಗಳ ಮೂಲಕ ತನ್ನ ಹೃದಯದೊಂದಿಗೆ ನೇರ ಸಂಭಾಷಿಸಿದಂಥ ವ್ಯಕ್ತಿತ್ವವನ್ನು ತನ್ನ ಸಹಚರರ ತೃಪ್ತಿಗಾಗಿ ಸಾಬೀತುಪಡಿಸುವ ಪ್ರಯತ್ನದ ಹಾಗೆ ಅದಕ್ಕಿಂತ ಹೆಚ್ಚಿಗೆ ನಾವು ಏನನ್ನೂ ಸಾಬೀತುಪಡಿಸಲಾಗದು. ಗುಲಾಬಿಯು ದುಂಡಗೆ ಹಾಗೂ ನಸುಗೆಂಪಗಿರುವ ಕಾರಣದಿಂದ ಮಾತ್ರವೇ, ಜೀವನದ ಆವಶ್ಯಕತೆಗಾಗಿ ಕೊಳ್ಳಬಲ್ಲಂಥ ಬಂಗಾರಕ್ಕಿಂತ ಹೆಚ್ಚಿನ ತೃಪ್ತಿ ಸಿಗುತ್ತದೆಯೇ? ಗುಲಾಬಿಯು ಬಂಗಾರದ ತುಣುಕಿಗಿಂತ ಹೆಚ್ಚು ಆನಂದ ನೀಡುವುದೆಂಬ ಸತ್ಯವನ್ನು ಯಾರೇ ವ್ಯಕ್ತಿಯು, ಆರಂಭದಲ್ಲಿ ಅಲ್ಲಗಳೆಯಬಹುದು. ಆದರೆ, ಅಂಥ ಆಕ್ಷೇಪಕನು – ನಾನು ಕೃತಕ ವೌಲ್ಯಗಳನ್ನು ಹೇಳುತ್ತಿಲ್ಲವೆಂಬುದನ್ನು ನೆನಪಿಡಲೇಬೇಕು. ನಾವು ಬಂಗಾರದಿಂದ ಮಾಡಿದ ಮರಳುಕಣಗಳ ಮರುಭೂಮಿಯನ್ನು ದಾಟಬೇಕಾಗಿ ಬಂದರೆ, ಈ ಮೃತ ಕಣಗಳ ಕ್ರೂರ ಝಗಮಗವು ನಮಗೆ ಭಯಾನಕವಾಗಿಬಿಡಬಹುದು, ಹಾಗೂ ಆಗ ಗುಲಾಬಿಯ ದೃಶ್ಯವು ನಮಗೆ ಸ್ವರ್ಗಸಂಗೀತವನ್ನು ತರಬಹುದು. ಸಂಗೀತವು ನೀಡುವ ಸಂತೋಷದ ಅಂತಿಮ ಅರ್ಥವು ಗ್ರಾಮಫೋನ್ ಡಿಸ್ಕಿನಲ್ಲಿ ಹೇಗೆ ಇರುವುದಿಲ್ಲವೋ ಹಾಗೆಯೇ ಗುಲಾಬಿಯಲ್ಲಿ ಸಿಗುವಂಥ ಆನಂದದ ಅಂತಿಮ ಅರ್ಥವು ಅದರ ಪಕಳೆಗಳ ದುಂಡಾಕಾರದಲ್ಲಿ ಎಂದೂ ಇರುವುದಿಲ್ಲ. ಪ್ರೀತಿಯ ಭಾಷೆಯು, ಹೇಗೋ ಗುಲಾಬಿಯ ಮೂಲಕ ನಮ್ಮ ಹೃದಯಗಳನ್ನು ಸೇರುತ್ತದೆ. ವಿಶ್ಲೇಷಿಸಲಾಗದಂಥ, ನಮ್ಮ ಶಬ್ದಗಳ ಭಾಷೆಯಂತಲ್ಲದೆ, ಗುಲಾಬಿಯಲ್ಲಿ ಸಂದೇಶವು ಅಡಕವಾಗಿಯೇ ಇರುವ ಕಾರಣ ಅದನ್ನು ನಮ್ಮ ಪ್ರೀತಿ ಪಾತ್ರರಿಗೆ ಒಯ್ಯುವುದಿಲ್ಲವೇ? ಈ ಗುಲಾಬಿಯ ಕಾಣಿಕೆ / ಉಡುಗೊರೆಯ ಮೂಲಕ, ಅಭಿವ್ಯಕ್ತಿಯ ಸ್ವ ಉದ್ದೇಶಕ್ಕಾಗಿಯೇ ನಾವು ಸಂತಸದ ವಿಶ್ವಾತ್ಮಕ ಭಾಷೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ.

97. ಈ ಪಠ್ಯಭಾಗವು ಏನನ್ನು ಉದ್ದೇಶಿಸಿದೆ ?

    (a)    ಆನಂದವು ಗುಲಾಬಿಯ ದುಂಡು ಪಕಳೆಗಳಲ್ಲಿ ಪ್ರಕಟವಾಗುತ್ತದೆ.
    (b)    ವ್ಯಕ್ತಿತ್ವದ ಮಾಂತ್ರಿಕ ಸ್ಪರ್ಶವನ್ನು ವಿಶ್ಲೇಷಿಸಬಹುದು.
    (c)    ಆನಂದದ ಅಭಿವ್ಯಕ್ತಿಯು ಬಾಹ್ಯ ಪ್ರಕಟಣೆಗಿಂತ ಮಿಗಿಲಾದುದು.
    (d)    ಗ್ರಾಮಫೋನ್ ಡಿಸ್ಕ್, ಸಂಗೀತದ ಅಂತಿಮ ಸಂತೋಷವನ್ನು ನೀಡುತ್ತದೆ.

ಸರಿ ಉತ್ತರ

(c) ಆನಂದದ ಅಭಿವ್ಯಕ್ತಿಯು ಬಾಹ್ಯ ಪ್ರಕಟಣೆಗಿಂತ ಮಿಗಿಲಾದುದು.


98. ಪಠ್ಯಭಾಗದಲ್ಲಿ ಲೇಖಕ ಏನನ್ನು ಪ್ರತಿಪಾದಿಸುತ್ತಾನೆ?
    1.    ಜಗತ್ತಿನಲ್ಲಿ ಕೃತಕ ವೌಲ್ಯಗಳ ಪರವಾಗಿ ಮಾತಾಡುವುದು.
    2.    ಸಂದೇಶವನ್ನು ಹೃದಯಕ್ಕೆ ನೇರವಾಗಿ ತಲುಪಿಸುವುದಕ್ಕೆ ಯಂತ್ರೋಪಕರಣವನ್ನು ಬಳಸಲಾಗುತ್ತದೆ.
    3.    ಸಂತಸದ ವಿಶ್ವಾತ್ಮಕ ಭಾಷೆಯನ್ನು ಗುಲಾಬಿಯ ಮೂಲಕ ವ್ಯಕ್ತಪಡಿಸಲಾಗಿದೆ.
    4.    ಆನಂದದ ಅರ್ಥವು, ಸಂದೇಶದಲ್ಲಿ ಅಡಕವಾಗಿದೆ.
ಸರಿಯಾದ ಉತ್ತರವನ್ನು ಗುರುತಿಸಿ :

    (a)    3, 1 ಮತ್ತು 4
    (b)    2, 1 ಮತ್ತು 3
    (c)    2, 3 ಮತ್ತು 4
    (d)    1, 2 ಮತ್ತು 4

ಸರಿ ಉತ್ತರ

(c) 2, 3 ಮತ್ತು 4


ಉದ್ಧೃತ ಭಾಗ-3
ನ್ಯಾಯವನ್ನು ನೀಡುವುದು ಮಾತ್ರವಲ್ಲ ‘‘ಅದನ್ನು ನೀಡಲಾಗಿದೆ ಎಂಬುದು ಕಾಣುವಂತೆ’’ ಮಾಡುವುದೂ ಅಗತ್ಯ ಎಂದು ವಾದಿಸಲಾಗಿದೆ. ಅಥವಾ ಇನ್ನೂ ಹೆಚ್ಚು ಸ್ಪಷ್ಟವಾಗಿ (ಲಾರ್ಡ್ ಹೆವಾರ್ಟ್ರವರು 1923ರಲ್ಲಿ ತಮ್ಮ ಸುಪ್ರಸಿದ್ಧ ತೀರ್ಪಿನಲ್ಲಿ ಹೇಳಿರುವಂತೆ) ನ್ಯಾಯವನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿ ಪ್ರಕಟವಾಗುವಂತೆ ಹಾಗೂ ನಿಸ್ಸಂಶಯವಾಗಿ ಕಾಣುವಂತೆ ಇರಬೇಕು. ಒಟ್ಟಾರೆಯಾಗಿ ಜಾಗತೀಕರಣದ ಸಾಧಕ ಮತ್ತು ಬಾಧಕಗಳನ್ನು ಹಾಗೂ ಜಾಗತೀಕರಣವನ್ನು ಯಶಸ್ವಿಗೊಳಿಸುವಲ್ಲಿ ಪರಸ್ಪರಾವಲಂಬನೆಯ ನಿರ್ದಿಷ್ಟ ಪಾತ್ರವನ್ನು ನಿರ್ಣಯಿಸುವಾಗ, ನ್ಯಾಯನೀಡಿಕೆಯಲ್ಲಿ ಈ ಅಂಶ ಇರುವುದರ ಅಗತ್ಯತೆಯ ಬಗ್ಗೆ ಯೋಚಿಸುವುದು ಉಪಯುಕ್ತವಾಗಿದೆ. ಆರ್ಥಿಕ ಜಾಗತೀಕರಣವು ಒಟ್ಟಾರೆಯಾಗಿ ಉತ್ಕೃಷ್ಟ ಗುರಿ ಹೊಂದಿದೆ ಮತ್ತು ಸಮಕಾಲೀನ ಜಗತ್ತಿನಲ್ಲಿ ಅದು ಬಹು ಒಳ್ಳೆಯ ಕೊಡುಗೆ ನೀಡುತ್ತಿದೆ ಎಂದು ವಾದಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದೇ ಸಂದರ್ಭದಲ್ಲಿ ಜಾಗತೀಕರಣವು ಬಡವರೂ ಸೇರಿದಂತೆ ಸ್ಪಷ್ಟವಾಗಿ ಎಲ್ಲರಿಗೂ ವರದಾಯಕವಾಗಿದೆ ಎಂದು ಬಹುತೇಕ ಜನರಿಗೆ ಮನವರಿಕೆ ಮಾಡಿಕೊಡುವುದು ಸ್ವಲ್ಪ ಕಷ್ಟಕರ ಎಂಬುದನ್ನು ನಿರಾಕರಿಸದೇ ಇರಲು ಸಾಧ್ಯವಿಲ್ಲ. ಈ ರೀತಿಯ ವಿರೋಧವಿದ್ದ ಮಾತ್ರಕ್ಕೆ ಜಾಗತೀಕರಣವು ಒಂದು ಕೆಟ್ಟ ಗುರಿ ಎಂದೇನೂ ಆಗುವುದಿಲ್ಲ. ಆದರೆ ಜಾಗತೀಕರಣವು ‘‘ಅತ್ಯಂತ ಸ್ಪಷ್ಟವಾಗಿ ಮತ್ತು ನಿಸ್ಸಂದೇಹವಾಗಿ’’ ಒಳ್ಳೆಯದು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಲು ಯಾಕೆ ಕಷ್ಟಕರವಾಗಿದೆ ಎಂಬುದಕ್ಕೆ ಕಾರಣಗಳನ್ನು ಪರಿಶೀಲಿಸುವುದು ಅಗತ್ಯವಾಗುತ್ತದೆ.
ಕೇವಲ ಅಸಂಗತತೆ ಅಥವಾ ಪಟ್ಟು ಹಿಡಿಯುವಿಕೆಯಿಂದ ವಿಚಲಿತರಾಗದಿರುವ ಅನೇಕ ವಿಮರ್ಶಕರು, ಜಗತ್ತಿನ ಅವಕಾಶ ವಂಚಿತ ಜನಕ್ಕೆ ಜಾಗತೀಕರಣವು ಬಹುದೊಡ್ಡ ವರವಾಗಿದೆ ಎಂಬುದನ್ನು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದರ ಜೊತೆ ಜೊತೆಗೇ ಜಾಗತೀಕರಣದ ವಿಮರ್ಶಾತ್ಮಕ ವೌಲ್ಯಮಾಪನವು ನಡೆಯಬೇಕು. ಅನೇಕ ಜನರು, ಮುಖ್ಯವಾಗಿ ಜಗತ್ತಿನ ಶ್ರೀಮಂತವಲ್ಲದ ದೇಶಗಳ ಜನರು ಜಾಗತೀಕರಣವು ತಮ್ಮ ಹಿತಾಸಕ್ತಿಗಳ ಪರವಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ನಿಜವಾಗಿಯೂ ಕಷ್ಟಪಡುತ್ತಾರೆ ಎಂದಾಗ, ಈ ಮನಸ್ಸುಗಳ ಭಿನ್ನಾಭಿಪ್ರಾಯದಲ್ಲಿ ನಿಜವಾಗಿಯೂ ಒಂದು ಗಂಭೀರವಾದ ಸವಾಲು ಇದೆ ಎಂದು ತಿಳಿಯಬೇಕು. ಇದರಲ್ಲಿರುವ ಸವಾಲು, ಜನರ ಚಿಂತನೆಯ ಪಾತ್ರವನ್ನು ಹಾಗೂ ದಾರ್ಶನಿಕ ಜಾನ್ ರಾಲ್ಸ್ ಅವರು ಯಾವುದನ್ನು “a public framework of public thought” ಎಂದು ಕರೆಯುತ್ತಾರೋ ಅದರ ಅಗತ್ಯವನ್ನು ಒಳಗೊಳ್ಳುತ್ತದೆ. ರಾಲ್ಸ್ ಅವರು ಹೇಳುವ ಅಂಶವು ನ್ಯಾಯಬದ್ಧವಾದ ವ್ಯಕ್ತಿಗಳ ತೀರ್ಮಾನದಲ್ಲಿರುವ ಸಹಮತದ ಒಂದು ಲೆಕ್ಕವನ್ನು ಒದಗಿಸುತ್ತದೆ. ರಾಲ್ಸ್ ಅವರು ಮಾಡಿದ ವಿಮರ್ಶಾತ್ಮಕ ವೌಲ್ಯಮಾಪನದ ವಿಶ್ಲೇಷಣೆಯು ಒಂದು ದೇಶದೊಳಗಿನ ನ್ಯಾಯನೀಡಿಕೆಯ ವಿಷಯಗಳಿಗಷ್ಟೇ ಬಹುತೇಕವಾಗಿ ಸೀಮಿತವಾಗಿತ್ತು. ಆದರೆ ಅದನ್ನು ಜಾಗತಿಕ ಚರ್ಚೆಗಳಿಗೂ ಸಹ ವಿಸ್ತರಿಸಬಹುದಾಗಿದೆ ಮತ್ತು ಸರಿಯಾದ ಜಾಗತೀಕರಣದ ಗುರಿ ಹಾಗೂ ಅದರ ಮಾರ್ಗ ಮತ್ತು ವಿಧಾನಗಳ ವೌಲ್ಯಮಾಪನವನ್ನು ನೀವು ಮಾಡಲು ಯತ್ನಿಸುವುದೇ ಆಗಿದ್ದರೆ, ಖಂಡಿತವಾಗಿಯೂ ಅದನ್ನು ವಿಸ್ತರಿಸಬೇಕು, ಜಾಗತೀಕರಣದ ಗುರಿಯು ಮನಸ್ಸುಗಳ ಸಂಬಂಧವನ್ನು ಅಲಕ್ಷಿಸಿ ಕೇವಲ ಸರಕುಗಳ ಸಂಬಂಧಗಳ ಬಗೆಗಷ್ಟೇ ಕಾಳಜಿ ವಹಿಸುವುದು ಸಾಧ್ಯವಿಲ್ಲ.
ಒಂದು ವರ್ಷದ ಹಿಂದೆ, ವಿಶ್ವಸಂಸ್ಥೆಯ ಸರ್ವಸದಸ್ಯರ ಸಭೆಯು ‘‘ಹೆಚ್ಚಿನ ಸುಸಂಗತತೆಯನ್ನು ರೂಪಿಸುವುದಕ್ಕಾಗಿ ಜಾಗತೀಕರಣ ಮತ್ತು ಪರಸ್ಪರ ಅವಲಂಬನೆ’’ ಕುರಿತ ಒಂದು ವರದಿಯನ್ನು ಸಿದ್ಧಪಡಿಸುವಂತೆ ಪ್ರಧಾನ ಕಾರ್ಯದರ್ಶಿ ಅವರನ್ನು ಕೋರಿಕೊಂಡಾಗ, ಆ ಸಭೆಯು ಮಾರ್ಗ ಮತ್ತು ವಿಧಾನಗಳನ್ನು ಕುರಿತ ಸಾಂಪ್ರದಾಯಿಕ ಪ್ರಶ್ನೆಗಳ ಬಾಗಿಲನ್ನು ಮಾತ್ರವೇ ತೆರೆದಿರಲಿಲ್ಲ. ಪ್ರಯೋಜನಗಳ ವೌಲ್ಯಮಾಪನ ಹಾಗೂ ಗ್ರಹಿಕೆಯ ಪಾರದರ್ಶಕತೆಯ ಬಗ್ಗೆ ವ್ಯವಹರಿಸುವ ಪ್ರಶ್ನೆಗಳ ಬಾಗಿಲನ್ನೂ ತೆರೆದಿತ್ತು. ತರುವಾಯದಲ್ಲಿ ಈ ತಿಳವಳಿಕೆಯಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುವುದು ಸಾಧ್ಯವಾಗುವಂತೆ, ಜಾಗತಿಕ ಆರ್ಥಿಕ ಸಂಬಂಧಗಳನ್ನು ಹೇಗೆ ವೌಲ್ಯಮಾಪನ ಮಾಡಬೇಕು ಎಂಬುದನ್ನು ನಾವು ನಿರ್ದಿಷ್ಟವಾಗಿ ಕೇಳಬೇಕು.

99. ಜಾಗತೀಕರಣವನ್ನು ಕುರಿತಂತೆ ಗೆಲುವು ಪಡೆಯುವಂಥ ವಾದ ಯಾವುದೆಂದರೆ,
    1.    ಇದು ಎಲ್ಲಾ ರಾಷ್ಟ್ರಗಳಿಗೂ ಒಳ್ಳೆಯದು
    2.    ಇದು ಒಟ್ಟಾರೆಯಾಗಿ ಒಂದು ಉತ್ಕೃಷ್ಟವಾದ ಗುರಿ
    3.    ಬಡವರೂ ಸೇರಿದಂತೆ ಎಲ್ಲರಿಗೂ ಇದು ವರದಾನ
    4.    ಸಮಕಾಲೀನ ಜಗತ್ತಿಗೆ ಇದು ಒಳ್ಳೆಯ ಕೊಡುಗೆ
ಸರಿ ಉತ್ತರವನ್ನು ಆಯ್ಕೆ ಮಾಡಿ :

    (a)    1 ಮಾತ್ರ
    (b)    2 ಮತ್ತು 4
    (c)    3 ಮಾತ್ರ
    (d)    4 ಮಾತ್ರ

ಸರಿ ಉತ್ತರ

(c) 3 ಮಾತ್ರ


100. ಜಾಗತೀಕರಣದ ವಿಚಾರವು ವ್ಯಾಪಕವಾದ ಮನ್ನಣೆಯನ್ನು ಗಳಿಸಿಲ್ಲ. ಕಾರಣವೇನೆಂದರೆ,
    1.    ಇಲ್ಲಿ ಸರಿಯಾದ ಸಾರ್ವಜನಿಕ ಚಿಂತನೆಯ ಚೌಕಟ್ಟಾಗಲೀ, ವಿಮರ್ಶಾತ್ಮಕವಾದ ವಿವೇಚನೆಯಾಗಲೀ ಇಲ್ಲ.
    2.    ಹೆಚ್ಚು ಶ್ರೀಮಂತವಲ್ಲದ ದೇಶಗಳ ಮೇಲೆ ಇದು ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಜನರು ಯೋಚಿಸುತ್ತಾರೆ.
    3.    ಜಗತ್ತಿನ ಅವಕಾಶ ವಂಚಿತ ಜನರಿಗೆ ಜಾಗತೀಕರಣವು ಒಂದು ವರದಾನವಾಗಿದೆ ಎಂದು ಯಾರೂ ಕೂಡ ಪರಿಗಣಿಸುವುದಿಲ್ಲ.
    4.    ಬಹಳಷ್ಟು ಮೊಂಡು ವಿಮರ್ಶಕರಿದ್ದಾರೆ.
ಮೇಲಿನ ಯಾವ ವಿವರಣೆಗಳನ್ನು ಉದ್ಧೃತ ಭಾಗವು ಹೆಚ್ಚು ಬೆಂಬಲಿಸುತ್ತದೆ ?

    (a)    1 ಮಾತ್ರ
    (b)    2 ಮತ್ತು 3
    (c)    3 ಮಾತ್ರ
    (d)    3 ಮತ್ತು 4

ಸರಿ ಉತ್ತರ

(d) 3 ಮತ್ತು 4


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment