WhatsApp Group Join Now
Telegram Group Join Now

KAS prelims 2017 paper-1 Previous Question Paper

KAS prelims 20-08-2017 Paper-1 General Studies Questions with answers

ಆಯೋಗವು ದಿನಾಂಕ: 20-08-2017 ರಂದು ನಡೆಸಿದ ಗೆಜೆಟೆಡ್ ಪ್ರೋಬೆಷನರ್ಸ್ ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ – I (ವಿಷಯ ಸಂಕೇತ: 261)ಕ್ಕೆ ಸಂಬಂಧಿಸಿದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

1. ಪಟ್ಟಿ I (ವರ್ಗಾವಣೆ ಬೇಸಾಯದ ಹೆಸರು) ಮತ್ತು ಪಟ್ಟಿ II (ರಾಷ್ಟ್ರ) ವನ್ನು ಹೊಂದಿಸಿ :

  ಪಟ್ಟಿ I (ವರ್ಗಾವಣೆ ಬೇಸಾಯದ ಹೆಸರು) ಪಟ್ಟಿ II (ರಾಷ್ಟ್ರ)
 A.ಹ್ಯೂಮಾ / ಲಡಾಂಗ್ I. ಬ್ರೆಜಿಲ್
 B.ಮಿಲ್ಪ II.ವಿಯಟ್ನಾಂ
 C.ರೇ III. ಮಧ್ಯ ಅಮೆರಿಕಾ
 D.ರೋಕಾ IV. ಇಂಡೋನೇಷ್ಯಾ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

  ABCD
 (1)IVIIIIII
 (2)IVIIIIII
 (3)IIIIVIII
 (4)IIIIVIII

ಸರಿ ಉತ್ತರ

(1) IV III II I


02. ಮಾರ್ಲೆ-ಮಿಂಟೋ ಸುಧಾರಣೆಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಇದನ್ನು ಭಾರತೀಯ ಕೌನ್ಸಿಲ್ ಕಾಯ್ದೆ , 1909 ಎಂತಲೂ ತಿಳಿಯಲಾಗಿದೆ.
 B.ಪ್ರಥಮ ಬಾರಿಗೆ ಭಾರತ ವಿವಿಧ ಶಾಸಕಾಂಗ ಕೌನ್ಸಿಲ್ಗಳಿಗೆ ಭಾರತೀಯರ ಚುನಾವಣೆಗಳನ್ನು ಪರಿಣಾಮಕಾರಿಯಾಗಿ ಶಾಸನಬದ್ಧಗೊಳಿಸಲಾಯಿತು.
 C.ಬ್ರಿಟಿಷರು ಮುಸ್ಲಿಮ ನಾಯಕರ ಇಲ್ಲಿಯವರೆಗಿನ ಪ್ರತ್ಯೇಕ ಚುನಾವಣಾ ಸಮುದಾಯದ ಬೇಡಿಕೆಗೆ ಈ ಕಾಯ್ದೆಯಲ್ಲಿ ಅನುಮೋದಿಸಿದರು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


3. ಪಟ್ಟಿ I (ಕಲ್ಲಿದ್ದಲು ನಿಕ್ಷೇಪ ಸ್ಥಾನಗಳನ್ನು) ಮತ್ತು ಪಟ್ಟಿ II (ದೇಶಗಳೊಡನೆ) ವನ್ನು ಹೊಂದಿಸಿ:
  ಪಟ್ಟಿ I (ಕಲ್ಲಿದ್ದಲು ನಿಕ್ಷೇಪ ಸ್ಥಾನಗಳನ್ನು) ಪಟ್ಟಿ II (ದೇಶಗಳೊಡನೆ)
 A.ಸಿಚುಆನ I. ಯು.ಎಸ್.ಎ.
 B.ಪೆನ್ಸಿಲ್ವೇನಿಯಾ II. ಚೀನಾ
 C.ಕಿಜೆಲ್ III. ಆಸ್ಟ್ರೇಲಿಯಾ
 D.ಇಪ್ಸ್ ವಿಚ್IV.ಭಾರತ
 E.ತಲ್ಚೆರ್V.ರಷ್ಯಾ
  ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

  ABCDE
 (1)IIIIIIVIV
 (2)IIIIIIVIV
 (3)IIIVIIIIV
 (4)IIIIIIVIV
ಸರಿ ಉತ್ತರ

(3) II I V III IV


4.ಅಂತರ್ ಸರ್ಕಾರೀಯ ತಂಡದ ವಾಯುಗುಣ ಬದಲಾಗುವಿಕೆ ಕುರಿತ 46 ನೇ ಅಧಿವೇಶನ (ಐ.ಪಿ.ಸಿ.ಸಿ.) ಸೆಪ್ಟೆಂಬರ್, 2017 ರಂದು ಈ ಕೆಳಗಿನ ಯಾವ ಪ್ರದೇಶದಲ್ಲಿ ನಡೆಯಲಿದೆ ?
 (1)ಗ್ವಾಡಲಜರ
 (2)ಮೊಂಟ್ರಿಯಲ್
 (3)ನವ ದೆಹಲಿ
 (4)ಕ್ಯೋಟೋ
ಸರಿ ಉತ್ತರ

(2) ಮೊಂಟ್ರಿಯಲ್


5.2017 ರ G20 ಶೃಂಗಸಭೆಯಲ್ಲಿ ಇಪ್ಪತ್ತು ರಾಷ್ಟ್ರಗಳ ಗುಂಪಿನ 12 ನೇ (G20) ಸಭೆ 2017 ಜುಲೈನಲ್ಲಿ ಎಲ್ಲಿ ನಡೆಯಿತು ?
 (1)ಹ್ಯಾಂಬರ್ಗ್, ಜರ್ಮನಿ
 (2)ಸೀನ್, ಪ್ಯಾರಿಸ್
 (3)ನ್ಯೂಯಾರ್ಕ್, ಯು.ಎಸ್.ಎ.
 (4)ಲಂಡನ್, ಯು.ಕೆ.
ಸರಿ ಉತ್ತರ

(1) ಹ್ಯಾಂಬರ್ಗ್, ಜರ್ಮನಿ


6.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಸವನ್ನಾ ವಾಯುಗುಣವನ್ನು ಸೂಡಾನ್ ಮಾದರಿ ವಾಯುಗುಣವೆಂದೂ ಕರೆಯುವರು.
 B.ಸವನ್ನಾ ವಾಯುಗುಣವು ಸಂಕ್ರಮಣಕಾರಿ ಮಾದರಿ ವಾಯುಗುಣ ಆಗಿದ್ದು ಇದು ಸಮಭಾಜಕ ಅರಣ್ಯಗಳು ಮತ್ತು ವಾಣಿಜ್ಯ ಮಾರುತ ಬಿಸಿ ಮರುಭೂಮಿಗಳ ನಡುವೆ ಇರುವಂತಹದು.
 C.ಇದು ಪರ್ಯಾಯ ಮತ್ತು ಭಿನ್ನವಾದ ಬಿಸಿ ಮಳೆ ಋತು ಮತ್ತು ತಂಪು ಶುಷ್ಕ ಋತುಮಾನದ ಲಕ್ಷಣವನ್ನು ಹೊಂದಿದೆ.
 D.ಸವನ್ನಾ ಮಾದರಿ ವಾಯುಗುಣ ದಕ್ಷಿಣ ಅಮೆರಿಕಾದ ನೈರುತ್ಯ ಭಾಗ ಮತ್ತು ಆಸ್ಟ್ರೇಲಿಯಾ ದಕ್ಷಿಣ ಭಾಗದಲ್ಲಿದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು C ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು C ಮಾತ್ರ
 (4)A, B, C ಮತ್ತು D
ಸರಿ ಉತ್ತರ

(3) A, B ಮತ್ತು C ಮಾತ್ರ


7.ಪ್ರಪಂಚದ ಎರಡನೇ ಮಹಾಯುದ್ಧಕ್ಕೆ ಸಂಬಂಧಿಸಿದಂತೆ, ಜರ್ಮನಿ, ಇಟಲಿ ಮತ್ತು ಜಪಾನ್ಗಳನ್ನು ಒಟ್ಟಿಗೆ ಹೀಗೆಂದು ಕರೆಯಲಾಯಿತು
 (1)ವಿರೋಧಿ ಚಳುವಳಿ
 (2)ಆಕ್ಸಿಸ್ ಶಕ್ತಿ ಬಣ
 (3)ಮಿತ್ರ ಕೂಟ
 (4)ಮಹಾ ತ್ರಿಕೂಟ
ಸರಿ ಉತ್ತರ

(2) ಆಕ್ಸಿಸ್ ಶಕ್ತಿ ಬಣ


8.ಪಟ್ಟಿ I ರಲ್ಲಿನ ವನ್ಯಜೀವಿಗಳನ್ನು ಅವುಗಳ ತತ್ಸಂಬಂಧಿ ವನ್ಯಜೀವಿ ಧಾಮ ಗಳೊಡನೆ (ಪಟ್ಟಿ II) ಹೊಂದಿಸಿ :
  ಪಟ್ಟಿ I (ವನ್ಯಜೀವಿ) ಪಟ್ಟಿ II (ವನ್ಯಜೀವಿ ಧಾಮ)
 A.ಚಿಂಕಾರ I. ರಾಣಿಬೆನ್ನೂರು
 B.ಬ್ಲಾಕ್ ಬಕ್II. ದರೋಜಿ
 C.ನಾಲ್ಕು ಕೊಂಬಿನ ಆಂಟೆಲೋಪ್ (ಹುಲ್ಲೆ) III. ರಂಗಯ್ಯನದುರ್ಗ
 D.ಸ್ಲಾತ್ ಬೇರ್ (ಕರಡಿ) IV. ಯಡಹಳ್ಳಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

  ABCD
 (1)IIIIIIIV
 (2)IVIIIIII
 (3)IVIIIIII
 (4)IVIIIIII
ಸರಿ ಉತ್ತರ

(2) IV I III II


9.ಅಮನ್ – 17 ರ ಕುರಿತಂತೆ ಸರಿಯಾದ ಆಯ್ಕೆಯನ್ನು ಆರಿಸಿರಿ.
 (1)ಇದು ಮಧ್ಯ ಏಷ್ಯಾದ ವಿಶ್ವಾಸವನ್ನು ಗೆಲ್ಲಲಿಕ್ಕಾಗಿ ಇರಾನ್ ನಿಂದ ವ್ಯವಸ್ಥೆಗೊಳಿಸಲ್ಪಟ್ಟ ನೌಕಾ ಕಸರತ್ತು.
 (2)ಇದು ಇಸ್ರೋನ ಸಹಾಯದೊಂದಿಗೆ ಆಫಘಾನಿಸ್ತಾನ ಕೈಗೊಂಡ ಮೊದಲನೇ ಬಾಹ್ಯಕಾಶ ಶೋಧದ ಕಾರ್ಯಕ್ರಮ.
 (3)ಇದು ಪಾಕೀಸ್ತಾನದಿಂದ ವ್ಯವಸ್ಥೆಗೊಳಿಸಲ್ಪಟ್ಟ ಬಹುರಾಷ್ಟ್ರಗಳ ನೌಕಾ ಕಸರತ್ತು.
 (4)ಇದು ಭಾರತದಲ್ಲಿ ಹಿಂದೂಸ್ತಾನಿ ಮತ್ತು ಪಾಕೀಸ್ತಾನಿ ಸಂಗೀತಕ್ಕಾಗಿ ವ್ಯವಸ್ಥೆಗೊಳಿಸಿದ ಒಂದು ಸಂಗೀತ ಕಛೇರಿ.
ಸರಿ ಉತ್ತರ

(3) ಇದು ಪಾಕೀಸ್ತಾನದಿಂದ ವ್ಯವಸ್ಥೆಗೊಳಿಸಲ್ಪಟ್ಟ ಬಹುರಾಷ್ಟ್ರಗಳ ನೌಕಾ ಕಸರತ್ತು.


10.2011 ರ ಜನಗಣತಿಗಾಗಿ, ಜನಗಣತಿಯ ನಗರ ಈ ಕೆಳಗಿನ ಯಾವ ಮಾನದಂಡಗಳನ್ನು ಹೊಂದಿತ್ತು ?
 A.ಕನಿಷ್ಠ ಜನಸಂಖ್ಯೆಯು 5000.
 B.ಕನಿಷ್ಠ 50% ಮುಖ್ಯ ಕಾರ್ಯಶೀಲ ಪುರುಷರು ಉದ್ಯೋಗಕ್ಕಾಗಿ ಕೃಷಿಯೇತರ ಕಾರ್ಯನಿರತರು.
 C.ಜನಸಾಂದ್ರತೆ ಪ್ರತಿ ಚ.ಕಿ.ಮೀ. ಗೆ ಕನಿಷ್ಠ 400.
 ಈ ಮೇಲಿನ ಮಾನದಂಡಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(2) A ಮತ್ತು C ಮಾತ್ರ


11. ಪಟ್ಟಿ I (ಪರ್ವತಗಳ ವಿಧಗಳು) ಮತ್ತು ಪಟ್ಟಿ II (ಪರ್ವತಗಳು) ನ್ನು ಸಂಕೇತಾಧಾರಿತವಾಗಿ ಹೊಂದಿಸಿ :
  ಪಟ್ಟಿ I (ಪರ್ವತಗಳ ವಿಧಗಳು) ಪಟ್ಟಿ II (ಪರ್ವತಗಳು)
 A. ಫೋಲ್ಡ್ (ಮಡಿಕೆ) ಪರ್ವತಗಳು I. ಮೌಂಟ್ ಮಾಯನ್ ಮತ್ತು ಫುಜಿ
 B.ಬ್ಲಾಕ್ ಪರ್ವತಗಳು II.ರಾಕೀಸ್, ಆಲ್ಪ್ಸ್ ಮತ್ತು ಆ್ಯಂಡೀಸ್
 C.ಜ್ವಾಲಾಮುಖಿ ಪರ್ವತಗಳು III. ಮೌಂಟ್ ಮೊನೋಡ್ನಾಕ್
 D.ಉಳಿಕೆ (ಶೇಷ) ಪರ್ವತಗಳು IV. ರೈನ್ ಲ್ಯಾಂಡ್ ನ ಬ್ಲ್ಯಾಕ್ ಫಾರೆಸ್ಟ್ ಮತ್ತು ಹಾನ್ಸರಕ್ ಪರ್ವತಗಳು
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

  ABCD
 (1)IIIIVIII
 (2)IIIVIIII
 (3)IIIIIIIV
 (4)IIIIIIIV
ಸರಿ ಉತ್ತರ

(2) II IV I III


12. ಜಗತ್ತಿನ ಒಳನಾಡು ಜಲಮಾರ್ಗಗಳಲ್ಲಿ ಅತಿ ಹೆಚ್ಚು ಬಳಕೆಯಾಗುವುದು ಯಾವುದು ?
 (1)ಡ್ಯಾನ್ಯೂಬ್ ಜಲಮಾರ್ಗ
 (2)ರ್ಹೈನ್[Rhine] ಜಲಮಾರ್ಗ
 (3)ವೋಲ್ಗಾ ಜಲಮಾರ್ಗ
 (4)ಮಿಸಿಸಿಪ್ಪಿ ಜಲಮಾರ್ಗ
ಸರಿ ಉತ್ತರ

(2) ರ್ಹೈನ್(Rhine) ಜಲಮಾರ್ಗ


13. ಪಟ್ಟಿ I ಮತ್ತು ಪಟ್ಟಿ II ನ್ನು ಸಂಕೇತಾಧಾರಿತವಾಗಿ ಹೊಂದಿಸಿ :
  ಪಟ್ಟಿ I ಪಟ್ಟಿ II
 A. ಮೂರನೇ ಪರಿಶಿಷ್ಠ I. ಮೇಲ್ಮನೆಯಲ್ಲಿ ಸ್ಥಾನಗಳ ಹಂಚಿಕೆ
 B.ಎಂಟನೇ ಪರಿಶಿಷ್ಠ II. ಪಕ್ಷಾಂತರ ಆಧಾರದ ಮೇಲೆ ಅನರ್ಹತೆ
 C.ನಾಲ್ಕನೇ ಪರಿಶಿಷ್ಠ III. ಕೆಲವು ಕಾಯ್ದೆಗಳ ಸಕ್ರಮೀಕರಣ
 D.ಹತ್ತನೇ ಪರಿಶಿಷ್ಠ IV. ಗಣತಂತ್ರ ಭಾರತದ ಅಧಿಕೃತ ಭಾಷೆಗಳು
 V.ಪ್ರಮಾಣಗಳು ಮತ್ತು ದೃಢೀಕರಣದ ರೂಪಗಳು
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIVII
 (2)VIVIII
 (3)VIVIII
 (4)IIVIIIII
ಸರಿ ಉತ್ತರ

(2) V IV I II


14.ಭಾರತದ ರಾಜ್ಯಗಳ ಹಿಂದಿನ ಆಳ್ವಿಕೆಗಾರರ ರಾಜಧನ, ಸೌಕರ್ಯ ಮತ್ತು ಹಕ್ಕು ಬಾಧ್ಯತೆಗಳನ್ನು ಸಂವಿಧಾನದ ಕೆಳಗಿನ ಯಾವ ತಿದ್ದುಪಡಿ ಮೂಲಕ ರದ್ದುಗೊಳಿಸಲಾಯಿತು ?
 (1)26ನೇ ತಿದ್ದುಪಡಿ
 (2)28ನೇ ತಿದ್ದುಪಡಿ
 (3)30ನೇ ತಿದ್ದುಪಡಿ
 (4)32ನೇ ತಿದ್ದುಪಡಿ
ಸರಿ ಉತ್ತರ

(1) 26ನೇ ತಿದ್ದುಪಡಿ


15.ಕಾಲಕ್ರಮಣಿಕೆಯಲ್ಲಿ ಈ ಕೆಳಗೆ ಕಾಣಿಸಿದ ಸಂಗತಿಗಳನ್ನು ಹೊಂದಿಸಿ :
 A.ಆಗಸ್ಟ್ ಕೊಡುಗೆ
 B.ಸಿಮ್ಲಾ ಪರಿಷತ್ತು
 C.ಕ್ರಿಪ್ಸ್ ನಿಯೋಗ
 D.ಕ್ಯಾಬಿನೆಟ್ ಮಿಷನ್ ಯೋಜನೆ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, B, C, D
 (2)B, D, C, A
 (3)A, C, B, D
 (4)D, B, C, A
ಸರಿ ಉತ್ತರ

(3) A, C, B, D


16.ಖ್ಯಾತ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೆ.ಈ. ಮಾಮೆನ್ ರು ಇತ್ತೀಚೆಗೆ ನಮ್ಮನ್ನಗಲಿದರು ಇವರು ಈ ಕೆಳಗಿನ ಯಾವ ರಾಜ್ಯಕ್ಕೆ ಸೇರಿದವರು ?
 (1)ಕರ್ನಾಟಕ
 (2)ಆಂಧ್ರ ಪ್ರದೇಶ
 (3)ಕೇರಳ
 (4)ತಮಿಳು ನಾಡು
ಸರಿ ಉತ್ತರ

(3) ಕೇರಳ


17.ಇನ್ನರ್ ಲೈನ್ ಪರ್ಮಿಟ್ (ILP) ಎಂಬುದು ಒಂದು ಅಧಿಕೃತ ಪ್ರಯಾಣ ದಾಖಲೆಯಾಗಿದ್ದು, ಭಾರತ ಸರ್ಕಾರವು ಇದನ್ನು ಜಾರಿ ಮಾಡಿದ್ದು, ಭಾರತೀಯ ಪ್ರಜೆಯೊಬ್ಬ ನಿರ್ದಿಷ್ಟ ಗೊಳಿಸಿದ್ದ ರಾಜ್ಯಗಳಲ್ಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ನಿಯಮಿತ ಅವಧಿಯಲ್ಲಿ ಒಳಭಾಗದಲ್ಲಿ ಸಂಚರಿಸಲು ಅನುಮತಿಸುತ್ತದೆ, ಈ ಕೆಳಗಿನ ಯಾವ ರಾಜ್ಯಗಳಿಗೆ, ಭಾರತೀಯ ಪ್ರಜೆಗಳು ಈ ರಾಜ್ಯಗಳ ಹೊರಭಾಗದಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ಸಂಚರಿಸಲು ILP ಯ ಆವಶ್ಯಕವಾಗಿದೆ?
 A.ಮಣಿಪುರ್
 B.ಮಿರೆರಾಂ
 C.ನಾಗಾಲ್ಯಾಂಡ್
 D.ಅರುಣಾಚಲ್ ಪ್ರದೇಶ
 E.ಅಸ್ಸಾಂ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, B, C ಮತ್ತು D ಮಾತ್ರ
 (2)B, C ಮತ್ತು D ಮಾತ್ರ
 (3)D ಮತ್ತು E ಮಾತ್ರ
 (4)A, B, C, D, E
ಸರಿ ಉತ್ತರ

(2) B, C ಮತ್ತು D ಮಾತ್ರ


18.ಉಚ್ಛ ನ್ಯಾಯಾಲಯವು ಕೆಳಗಿನ ಯಾವ ರಿಟ್ ನ್ನು ಜಾರಿ ಮಾಡಿ ಕೆಳಗಿನ ನ್ಯಾಯಾಲಯಕ್ಕೆ ಅಥವಾ ಅರೆ ನ್ಯಾಯಾಂಗ ಕಾಯಕ್ಕೆ ತನ್ನ ವ್ಯಾಪ್ತಿಯೊಳಗಿರದಿದ್ದರೂ ಯಾವುದೇ ಒಂದು ನಿರ್ದಿಷ್ಟ ಪ್ರಕರಣದಲ್ಲಿ ನಡಾವಳಿಗಳನ್ನು ತಡೆ ಹಿಡಿಯಬಹುದೆಂಬ ಆದೇಶವನ್ನು ನೀಡಬಹುದಾಗಿದೆ ?
 (1)ಹೇಬಿಯಸ್ ಕಾರ್ಪಸ್
 (2)ಪ್ರತಿಬಂಧಕಾಜ್ಞೆ
 (3)ಅಧಿಕಾರವನ್ನು ಪ್ರಶ್ನಿಸುವುದು
 (4)ಪ್ರಮಾಣ ಪತ್ರವನ್ನು ನೀಡುವುದು (ದಾಖಲೆ ಕೇಳಿಕೆ)
ಸರಿ ಉತ್ತರ

(2) ಪ್ರತಿಬಂಧಕಾಜ್ಞೆ


19.ಪಟ್ಟಿ I (ಸಂವಿಧಾನದ ಅನುಚ್ಛೇದಗಳು) ಮತ್ತು ಪಟ್ಟಿ II ನ್ನು (ವಿಷಯಗಳು) ಹೊಂದಿಸಿ :
  ಪಟ್ಟಿ I (ಸಂವಿಧಾನದ ಅನುಚ್ಛೇದಗಳು) ಪಟ್ಟಿ II (ವಿಷಯಗಳು)
 A. ಅನುಚ್ಛೇದ 155 I. ಅಖಿಲ ಭಾರತ ಸೇವೆಗಳು
 B.ಅನುಚ್ಛೇದ 201II. ರಾಷ್ಟ್ರಪತಿಯು ರಾಜ್ಯಪಾಲರನ್ನು ನೇಮಕ ಮಾಡುವ ಅಧಿಕಾರ
 C.ಅನುಚ್ಛೇದ 213 III. ಕೆಲವೊಂದು ವಿಷಯಗಳ ಬಗ್ಗೆ ರಾಜ್ಯಪಾಲರಿಗೆ ಸುಗ್ರಿವಾಜ್ಞೆಗಳನ್ನು ಹೊರಡಿಸಲು ರಾಷ್ಟ್ರಪತಿಯು ಸೂಚನೆಗಳನ್ನು ನೀಡುವ ಬಗ್ಗೆ
 D.ಅನುಚ್ಛೇದ 312 IV. ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗಾಗಿ ಕಾಯ್ದಿರಿಸುವ ಮಸೂದೆಗಳು

  ABCD
 (1)IIIIIIIV
 (2)IIIIIIIV
 (3)IIIVIIII
 (4)IVIIIIII
ಸರಿ ಉತ್ತರ

(3) II IV III I


20.ಗಮನ ಸೆಳೆಯುವ ಸೂಚನೆ ಬಗ್ಗೆ ಈ ಕೆಳಗೆ ಕಾಣಿಸಿದ ಹೇಳಿಕೆಗಳನ್ನು ಪರಿಶೀಲಿಸಿ :
 A.ಸಂಸದೀಯ ಪ್ರಕ್ರಿಯಾ ವಿಧಾನದಲ್ಲಿ ಭಾರತೀಯ ನಾವೀನ್ಯ.
 B.ಇದನ್ನು ಪಾರ್ಲಿಮೆಂಟಿನಲ್ಲಿ ಪರಿಚಯಿಸಲಾಗಿದ್ದು ಯಾವುದೇ ಸಂಸತ್ ಸದಸ್ಯನು ಅತ್ಯಂತ ಜರೂರಾದ ಸಾರ್ವಜನಿಕ ಮಹತ್ವದ ವಿಷಯವನ್ನು ಕುರಿತು ಸಂಬಂಧಪಟ್ಟ ಸಚಿವರ ಗಮನ ಸೆಳೆಯುವುದು ಮತ್ತು ಆ ವಿಷಯದ ಬಗ್ಗೆ ಅಧಿಕೃತ ವಿವರಣೆಯನ್ನು ಪಡೆದು ಕೊಳ್ಳುವುದು.
 C.ಸರ್ಕಾರದ ವಿರುದ್ಧದ ನಿಂದ್ಯಖಂಡನೀಯ ಹೇಳಿಕೆಯನ್ನೂ ಒಳಗೊಳ್ಳುವುದು.
 D.ವಿಧಿವಿಧಾನಗಳಲ್ಲಿ ಶೂನ್ಯ ಸಮಯದ ಬಗ್ಗೆ ತಿಳಿಸಲಾಗಿಲ್ಲ. ಗಮನ ಸೆಳೆಯುವ ಸೂಚನೆ ಬಗ್ಗೆ ವಿಧಿ ವಿಧಾನದಲ್ಲಿ ತಿಳಿಸಲಾಗಿದೆ.
  ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, B ಮತ್ತು C ಮಾತ್ರ
 (2)B, C ಮತ್ತು D ಮಾತ್ರ
 (3)A, B ಮತ್ತು D ಮಾತ್ರ
 (4)A, C ಮತ್ತು D ಮಾತ್ರ
ಸರಿ ಉತ್ತರ

(3) A, B ಮತ್ತು D ಮಾತ್ರ


21. ದಖ್ಖನ್ ನ ಇಸ್ಲಾಮಿ ಸುಲ್ತಾನರು (ಅಹ್ಮದ್ ನಗರ, ಬಿಜಾಪುರ, ಗೋಲ್ಕಂಡಾ, ಬೀರಾರ್, ಬೀದರ್) 1565 ಒಟ್ಟುಗೂಡಿ ಹಿಂದೂ ವಿಜಯನಗರ ಸಾಮ್ರಾಜ್ಯದ ದೊರೆಯ ಮೇಲೆ ಒಟ್ಟಾಗಿ ಧಾಳಿ ನಡೆಸಿ ತಾಳಿಕೋಟೆ ಯುದ್ಧದಲ್ಲಿ ಭೀಕರವಾಗಿ ಸೋಲಿಸಿದರು. ಆಗ ಆಳುತ್ತಿದ್ದ ವಿಜಯನಗರದ ದೊರೆ ಯಾರು ?
 (1)ರಾಮ ರಾಯ
 (2)ಸಾತ್ಯಕಿ
 (3)ತಿರುಮಲ
 (4)ಸದಾಶಿವ ರಾಯ
ಸರಿ ಉತ್ತರ

(1) ರಾಮ ರಾಯ


22. ಸಾರ್ವಜನಿಕ ಸ್ವಾಯತ್ತೆಗಳ ಸಮಿತಿ ಬಗ್ಗೆ ಈ ಕೆಳಗೆ ಕಾಣಿಸಿದ ಹೇಳಿಕೆಗಳನ್ನು ಪರಿಶೀಲಿಸಿ :
 A.ಸಮಿತಿಯು 22 ಸದಸ್ಯರನ್ನು ಹೊಂದಿರುತ್ತದೆ (15 ಲೋಕಸಭಾ ಸದಸ್ಯರು ಮತ್ತು 7 ರಾಜ್ಯಸಭಾ ಸದಸ್ಯರು).
 B.ಪ್ರತಿ ವರ್ಷ ಸಂಸತ್ತಿನಿಂದ ಸಮಿತಿಯ ಸದಸ್ಯರು ಚುನಾಯಿಸಲ್ಪಡುತ್ತಾರೆ.
 C.ಲೋಕಸಭಾ ಸದಸ್ಯರಲ್ಲಿಯೇ ಒಬ್ಬ ಸದಸ್ಯನು ಸಭಾಪತಿಯಿಂದ ಅಧ್ಯಕ್ಷನಾಗಿ ನೇಮಕಗೊಳ್ಳುತ್ತಾನೆ.
 D.ಸಮಿತಿಯ ಅಧ್ಯಕ್ಷ ಹುದ್ದೆಯು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಲ್ಲಿ ಅವರ್ತವಾಗಿ ತಿರುಗುತ್ತದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, B ಮತ್ತು C ಮಾತ್ರ
 (2)B ಮತ್ತು D ಮಾತ್ರ
 (3)A, B ಮತ್ತು D ಮಾತ್ರ
 (4)A ಮತ್ತು B ಮಾತ್ರ
ಸರಿ ಉತ್ತರ

(1) A, B ಮತ್ತು C ಮಾತ್ರ


23. ಉದ್ಯೋಗ ಸ್ಥಿತಿಸ್ಥಾಪಕತೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
 (1)1% ಬಿಂದು ಆರ್ಥಿಕ ಬೆಳವಣಿಗೆಯೊಂದಿಗೆ ಉದ್ಯೋಗದ ಶೇಕಡಾವಾರು ಬದಲಾವಣೆ
 (2)ಪ್ರತಿ ಹೂಡಿಕೆಯ ಘಟಕಕ್ಕೆ ಉದ್ಯೋಗಗಳ ಸೃಷ್ಟಿ
 (3)ನಿರುದ್ಯೋಗಿ ಜನರ ಘಟಕಕ್ಕೆ ಉದ್ಯೋಗ ಸೃಷ್ಟಿ
 (4)ಈ ಮೇಲಿನ ಯಾವುವೂ ಅಲ್ಲ
ಸರಿ ಉತ್ತರ

(1) 1% ಬಿಂದು ಆರ್ಥಿಕ ಬೆಳವಣಿಗೆಯೊಂದಿಗೆ ಉದ್ಯೋಗದ ಶೇಕಡಾವಾರು ಬದಲಾವಣೆ


24.ಈ ಕೆಳಗಿನ ಯಾವ ಹೇಳಿಕೆಗಳು ರಾಷ್ಟ್ರಪತಿಗಳ ಕ್ಷಮಾಪಣಾಧಿಕಾರಕ್ಕೆ ಸಂಬಂಧಿಸಿದಂತೆ ಸರಿಯಾಗಿದೆ / ವೆ ?
 A.ನ್ಯಾಯಾಂಗದ ನಿರ್ಣಯದ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಇವರ ಕ್ಷಮಾಪಣಾಧಿಕಾರವು ಇರುತ್ತದೆ.
 B.ಇವರಿಗೆ ಭೂ, ಕೇಂದ್ರ ಅಥವಾ ರಾಜ್ಯ ಕಾನೂನಿಗೆ ವಿರುದ್ಧವಾದ ಯಾವುದೇ ಅಪರಾಧಕ್ಕೆ ಸಂಬಂಧಿಸಿದ ಶಿಕ್ಷೆಯನ್ನು ಮುಂದೂಡುವ ಮತ್ತು ತಡೆಯುವ ಅಧಿಕಾರವಿದೆ.
 C.ಇವರೊಬ್ಬರೇ ಮರಣ ದಂಡನೆಗೆ ಸಂಬಂಧಿಸಿದಂತೆ ಕ್ಷಮಾ ನಿರ್ಣಯವನ್ನು ಕೈಗೊಳ್ಳ ಬಹುದು.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)C ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(3) A ಮತ್ತು C ಮಾತ್ರ


25.ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕ ನಾಗಿದ್ದು, ಗೆರಿಲ್ಲಾ ತಂತ್ರದಿಂದ ಬ್ರಿಟಿಷರೊಡನೆ ಹೋರಾಟನಡೆಸಿದ್ದ. ಆ ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಯಾರು ?
 (1)ಮುದುವೀಡು ಕೃಷ್ಣ ರಾವ್
 (2)ಆಲೂರು ವೆಂಕಟ್ ರಾವ್
 (3)ಜೋಗಿ ಬೀರಣ್ಣ ನಾಯಕ್
 (4)ಸಂಗೊಳ್ಳಿ ರಾಯಣ್ಣ
ಸರಿ ಉತ್ತರ

(4) ಸಂಗೊಳ್ಳಿ ರಾಯಣ್ಣ


26.ಪ್ರವಾಸಿಗರ (ಪಟ್ಟಿ I) ಅವರು ವಿಜಯನಗರ ಸಾಮ್ರಾಜ್ಯದ ರಾಜರ (ಪಟ್ಟಿ II) ಅಳ್ವಿಕೆಯ ಕಾಲದಲ್ಲಿ ಭೇಟಿ ನೀಡಿದ್ದನ್ನು ಹೊಂದಿಸಿರಿ :
  ಪಟ್ಟಿ I (ಪ್ರವಾಸಿಗರು) ಪಟ್ಟಿ II (ರಾಜರು)
 A. ಅಬ್ದುರ್ ರಜಾಕ್ I. ದೇವರಾಯ I
 B.ನಿಕೊಲೋ ಕೊಂಟಿ II. ದೇವರಾಯ II
 C.ಫರ್ನಾವ್ ನ್ಯೂನಿಜ್ III. ಕೃಷ್ಣ ದೇವರಾಯ
 D.ಬಾರ್ಬೊಸಾIV. ಅಚ್ಯುತ ರಾಯ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIIVIII
 (3)IIIIIIIV
 (4)IIVIIIII
ಸರಿ ಉತ್ತರ

(2) II I IV III


27.ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918 ರಲ್ಲಿ ನೇಮಿಸಿದ ಸಮಿತಿ
 (1)ಎಲ್.ಜಿ. ಹಾವನೂರು ಸಮಿತಿ
 (2)ನಾಗನ ಗೌಡ ಸಮಿತಿ
 (3)ಮೆಕ್ಲ್ಯಾಂಡ್ ಸಮಿತಿ
 (4)ಲೆಸ್ಲೀ ಮಿಲ್ಲರ್ ಸಮಿತಿ
ಸರಿ ಉತ್ತರ

(4) ಲೆಸ್ಲೀ ಮಿಲ್ಲರ್ ಸಮಿತಿ


28.ಶಾಸನ ಸಭೆ ಸಮಿತಿಗಳೊಂದಿಗೆ (ಪಟ್ಟಿ I) ಅದರ ಅಧ್ಯಕ್ಷರನ್ನು (ಪಟ್ಟಿ II) ಹೊಂದಿಸಿರಿ :
  ಪಟ್ಟಿ I (ಸಮಿತಿ) ಪಟ್ಟಿ II (ಅಧ್ಯಕ್ಷರನ್ನು)
 A.ಗೃಹ ಸಮಿತಿ I. ಕೆ.ಎಂ. ಮುನ್ಷಿ
 B.ವಾಣಿಜ್ಯ ಸುವ್ಯವಸ್ಥೆ ಸಮಿತಿ II. ಪಟ್ಟಾಭಿ ಸೀತಾರಾಮಯ್ಯ
 C.ಕೇಂದ್ರ ಸಂವಿಧಾನ ಸಮಿತಿ III. ಸರ್ದಾರ್ ಪಟೇಲ್
 D.ಪ್ರಾಂತೀಯ ಸಂವಿಧಾನ ಸಮಿತಿ IV. ಜವಾಹರ್ಲಾಲ್ ನೆಹರೂ
 V.ಅಲ್ಲದಿ ಕೃಷ್ಣಸ್ವಾಮಿ ಅಯ್ಯರ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)VIIIVI
 (2)IIIIVIII
 (3)VIIIVIII
 (4)IIIIVIII
ಸರಿ ಉತ್ತರ

(2) II I IV III


29.ಇತ್ತೀಚೆಗೆ, ನಾಸಾವು OSIRIS-REx ನ್ನು ನಿಯೋಗಕ್ಕಾಗಿ ಅಮೇರಿಕಾದಿಂದ ಮೊದಲ ರೀತಿಯಂತೆ ಉಡಾವಣೆ ಮಾಡಿತು.
ಕೆಳಗಿನವುಗಳಿಂದ ನಿಯೋಗದ ಉದ್ದೇಶಗಳನ್ನು ಆರಿಸಿ :
 (1)ಗುರುಗ್ರಹದ ವಾತಾವರಣದಲ್ಲಿರುವ ನೀರಿನ ಕಣಗಳನ್ನು ಪತ್ತೆ ಹಚ್ಚುವುದು
 (2)ಗುರುಗ್ರಹದ ಉಪಗ್ರಹಗಳನ್ನು ಶೋಧಿಸುವುದು
 (3)ನೀರಿನ ಕಣದ ಹುಡುಕಾಟದಲ್ಲಿ ಮಂಗಳನ ಮೇಲ್ಮೈಯನ್ನು ತಲುಪುವುದು
 (4)ಕ್ಷುದ್ರಗ್ರಹ 101955 ಬೆನ್ನುದ (Bennu) ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಭೂಮಿಗೆ ಮರಳುವುದು
ಸರಿ ಉತ್ತರ

(4) ಕ್ಷುದ್ರಗ್ರಹ 101955 ಬೆನ್ನುದ (Bennu) ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಭೂಮಿಗೆ ಮರಳುವುದು


30.ಬುಡಕಟ್ಟು ಪ್ರದೇಶಗಳಲ್ಲಿನ ಸ್ವಾಯತ್ತ ಜಿಲ್ಲಾ ಪರಿಷತ್ತುಗಳು :
 A.ಕಾರ್ಯಾಂಗೀಯ ಅಧಿಕಾರವನ್ನು ಹೊಂದಿವೆ.
 B.ನ್ಯಾಯಾಂಗೀಯ ಅಧಿಕಾರವನ್ನು ಹೊಂದಿಲ್ಲ.
 C.ಶಾಸಕಾಂಗೀಯ ಅಧಿಕಾರವನ್ನು ಹೊಂದಿಲ್ಲ.
  ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
  ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)A ಮತ್ತು C ಮಾತ್ರ
 (3)A ಮಾತ್ರ
 (4)C ಮಾತ್ರ
ಸರಿ ಉತ್ತರ

(3) A ಮಾತ್ರ


31. ಯಾವ ಕಾಯ್ದೆಯು “ಪಕ್ಷಾಂತರ ನಿಷೇಧ ಕಾಯ್ದೆ’ಎಂದು ಚಿರಪರಿಚಿತ ?
 (1)52 ನೇ ತಿದ್ದುಪಡಿ ಕಾಯ್ದೆ
 (2)62 ನೇ ತಿದ್ದುಪಡಿ ಕಾಯ್ದೆ
 (3)69 ನೇ ತಿದ್ದುಪಡಿ ಕಾಯ್ದೆ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(1) 52 ನೇ ತಿದ್ದುಪಡಿ ಕಾಯ್ದೆ


32. ಕಾಲಾನುಕ್ರಮವಾಗಿ ಏರಿಕೆಯ ಕ್ರಮದಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳ ಸರಿಯಾದ ಜೋಡಣೆ ಮಾಡಿ :
 A.ಶ್ರೀ ವೀರೇಂದ್ರ ಪಾಟೀಲ್
 B.ಶ್ರೀ ಕಡಿದಾಳ ಮಂಜಪ್ಪ
 C.ಶ್ರೀ ಗುಂಡೂ ರಾವ್
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)B, C, A
 (2)B, A, C
 (3)C, A, B
 (4)C, B, A
ಸರಿ ಉತ್ತರ

(2) B, A, C


33. ರಾಜ್ಯ ಮತ್ತು ಅದರ ಸೃಷ್ಠಿಯಾದ ವರ್ಷಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುತ್ತಿಲ್ಲ ?
 (1)ಆಂಧ್ರ ಪ್ರದೇಶ – 1956
 (2)ಮಹಾರಾಷ್ಟ್ರ – 1960
 (3)ಅರುಣಾಚಲ ಪ್ರದೇಶ – 1987
 (4)ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(4) ಮೇಲಿನ ಯಾವುದೂ ಅಲ್ಲ


34.ಭಾರತದ ಡಿಲಿಮಿಟೇಷನ್ ಆಯೋಗವು ಒಟ್ಟು ಪಾರ್ಲಿಮೆಂಟರಿ ಸ್ಥಾನಗಳನ್ನು ಕರ್ನಾಟಕ ಕುರಿತಂತೆ ಈ ಅನುಪಾತದಲ್ಲಿ ಹಂಚಿಕೆ ಮಾಡಿದೆ :
 A.28 ಲೋಕ ಸಭಾ ಸ್ಥಾನಗಳ ಪೈಕಿ 05 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 02 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
 B.28 ಲೋಕ ಸಭಾ ಸ್ಥಾನಗಳ ಪೈಕಿ 07 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 05 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
 C.224 ಅಸೆಂಬ್ಲಿ ಸ್ಥಾನಗಳ ಪೈಕಿ 76 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 28 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
 D.224 ಅಸೆಂಬ್ಲಿ ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 15 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು D ಮಾತ್ರ
 (2)B ಮತ್ತು C ಮಾತ್ರ
 (3)A ಮಾತ್ರ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(3) A ಮಾತ್ರ


35.ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆ 1993, ಅಸ್ತಿತ್ವಕ್ಕೆ ಬಂದ ದಿನಾಂಕ
 (1)30 ನೇ ಮೇ, 1993
 (2)30 ನೇ ಏಪ್ರಿಲ್, 1993
 (3)10 ನೇ ಮೇ, 1993
 (4)10 ನೇ ಏಪ್ರಿಲ್, 1993
ಸರಿ ಉತ್ತರ

(3) 10 ನೇ ಮೇ, 1993


36.ಭಾರತದ ರಾಷ್ಟ್ರಪತಿಯವರು ವೀಟೋ ಅಧಿಕಾರಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ರೀತಿಯ ವೀಟೋ ಅಧಿಕಾರಗಳನ್ನು ಹೊಂದಿರಬಹುದು ?
 A.ನಿರಪೇಕ್ಷ ವಿಟೋ ಎಂದರೆ ಶಾಸಕಾಂಗದಿಂದ ಅನುಮೋದಿಸಲ್ಪಟ್ಟ ಮಸೂದೆಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವುದು.
 B.ಅರ್ಹ ವೀಟೋವನ್ನು ಶಾಸಕಾಂಗದ ಬಹುಮತದಿಂದ ರದ್ದು ಗೊಳಿಸಬಹುದು.
 C.ನಿಲಂಬನ ವೀಟೋವನ್ನು ಶಾಸಕಾಂಗದ ಸಾಮಾನ್ಯ ಬಹುಮತದಿಂದ ರದ್ದು ಗೊಳಿಸಬಹುದು.
 D.ಪಾಕೆಟ್ ವೀಟೊವು ಶಾಸಕಾಂಗದಿಂದ ಒಪ್ಪಿತವಾದ ಮಸೂದೆಯ ಬಗ್ಗೆ ಯಾವುದೇ ಕ್ರಮವನ್ನು ತೆಗೆದು ಕೊಳ್ಳುವುದಿಲ್ಲ.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು C ಮಾತ್ರ
 (4)A, C ಮತ್ತು D ಮಾತ್ರ
ಸರಿ ಉತ್ತರ

(4) A, C ಮತ್ತು D ಮಾತ್ರ


37.1953 ರಲ್ಲಿನ ರಾಜ್ಯಗಳ ಪುನರ್ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿತವಾಯಿತು.
 (1)ಅಧ್ಯಕ್ಷರು : ಫಜಲ್ ಅಲಿ ಸದಸ್ಯರು : ಹೆಚ್.ಎನ್. ಕುಂಜ್ರು, ಕೆ.ಎಮ್. ಪಣಿಕ್ಕರ್
 (2)ಅಧ್ಯಕ್ಷರು : ಜವಹರ್ಲಾಲ್ ನೆಹ್ರೂ ಸದಸ್ಯರು : ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ
 (3)ಅಧ್ಯಕ್ಷರು : ಎಸ್.ಕೆ. ಧರ್ ಸದಸ್ಯರು : ಜೆ.ಎನ್. ಲಾಲ್, ಪನ್ನಾ ಲಾಲ್
 (4)ಅಧ್ಯಕ್ಷರು : ಡಾ. ಬಿ.ಆರ್. ಅಂಬೇಡ್ಕರ್ ಸದಸ್ಯರು : ಕೆ.ಎಮ್. ಮುನ್ಷಿ , ಬಿ.ಎನ್. ರಾವ್
ಸರಿ ಉತ್ತರ

(1) ಅಧ್ಯಕ್ಷರು : ಫಜಲ್ ಅಲಿ ಸದಸ್ಯರು : ಹೆಚ್.ಎನ್. ಕುಂಜ್ರು, ಕೆ.ಎಮ್. ಪಣಿಕ್ಕರ್


38.ಈ ಕೆಳಗಿನ ಸಮಿತಿಗಳನ್ನು (ಪಟ್ಟಿ I) ಮತ್ತು ಅದರ ಅಧ್ಯಕ್ಷರನ್ನು (ಪಟ್ಟಿ II) ಹೊಂದಿಸಿ ಬರೆಯಿರಿ :
  ಪಟ್ಟಿ I (ಸಮಿತಿ) ಪಟ್ಟಿ II (ಅಧ್ಯಕ್ಷರು)
 A.ನಾಗರಿಕ ಸೇವಾ ಸುಧಾರಣಾ ಸಮಿತಿ I. ಪಿ.ಸಿ. ಹೋಟಾ
 B.ಪೊಲೀಸು ಸುಧಾರಣಾ ಸಮಿತಿ II. ರಾಜಿಂದರ್ ಸಚಾರ್
 C.ಮುಸಲ್ಮಾನ ಸ್ಥಾನಮಾನ ಸಮಿತಿ III. ನರೇಶ್ ಚಂದ್ರ
 D.ಕಾರ್ಪೊರೇಟ್ ಆಳ್ವಿಕೆ ಸಮಿತಿ IV. ಸೋಲಿ ಸೊರಬ್ಜಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIVIIIII
 (2)IIIVIIII
 (3)IIIIIIVI
 (4)IIIIIIIV
ಸರಿ ಉತ್ತರ

(1) I IV II III


39.“”ಕೇಂದ್ರ ಸರ್ಕಾರದ ಕರ್ತವ್ಯವು ಯಾವುದೇ ರಾಜ್ಯದ ಮೇಲೆ ಬಾಹ್ಯ ದಾಳಿ ಆಗದಂತೆ ಮತ್ತು ಆಂತರಿಕ ಕ್ಷೋಭೆ ಇಲ್ಲದಂತೆ ಸಂವಿಧಾನಾತ್ಮಕವಾಗಿ ಆಳ್ವಿಕೆ ನಡೆಸಿ ಕೊಂಡು ಹೋಗುವುದು.”
ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ಸಂವಿಧಾನದ ಯಾವ ಕಲಮು ವ್ಯವಹರಿಸುತ್ತದೆ ?
 (1)ಕಲಮು 355
 (2)ಕಲಮು 356
 (3)ಕಲಮು 352
 (4)ಕಲಮು 358
ಸರಿ ಉತ್ತರ

(1) ಕಲಮು 355


40.ಕೆಳಗಿನವುಗಳಲ್ಲಿ ಯಾವ ಜೋಡಿ ಸರಿಯಾಗಿ ಹೊಂದಾಣಿಕೆ ಯಾಗುವುದಿಲ್ಲ ?
 (1)ಗೊರಮ್ ಘಾಟ್ – ರಾಜಸ್ಥಾನ
 (2)ಹರಿಶ್ಚಂದ್ರ ಪರ್ವತ ಶ್ರೇಣಿ – ಮಹಾರಾಷ್ಟ್ರ
 (3)ಪಂಚಮಲೈ – ಕೇರಳ
 (4)ಅರ್ಮಾ-ಕೊಂಡಾ – ಆಂಧ್ರ ಪ್ರದೇಶ
ಸರಿ ಉತ್ತರ

(3) ಪಂಚಮಲೈ – ಕೇರಳ


41. ಕರ್ನಾಟಕದ ಕೆಳಗಿನ ಶಿಖರಗಳನ್ನು ಅವುಗಳ ಎತ್ತರಗಳ ಇಳಿಕೆಯ ಕ್ರಮದಲ್ಲಿ ಜೋಡಿಸಿ :
 A.ಮುಳ್ಳಯ್ಯನಗಿರಿ
 B.ಬಾಬಾ ಬುಡನ್ಗಿರಿ
 C.ಬ್ರಹ್ಮಗಿರಿ
 D.ಕೊಡಚಾದ್ರಿ
 E.ಪುಷ್ಪಗಿರಿ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, B, C, D, E
 (2)A, B, C, E, D
 (3)A, B, E, C, D
 (4)A, E, B, C, D

ಸರಿ ಉತ್ತರ

(3) A, B, E, C, D


42. ಈ ಕೆಳಗಿನ ಯಾವ ಬುಡಕಟ್ಟು ಜನಾಂಗದವರು ತಮಿಳು ನಾಡಿನಲ್ಲಿ ನೆಲೆಸಿದ್ದಾರೆ ?
 (1)ಗೊಂಡರು
 (2)ಬಿಲ್ಲರು
 (3)ತೋಡರು
 (4)ಸಂತಾಲರು
ಸರಿ ಉತ್ತರ

(3) ತೋಡರು


43. ಪಟ್ಟಿ I (ಪರ್ವತ ಕಣಿವೆ ಮಾರ್ಗಗಳು) ಮತ್ತು ಪಟ್ಟಿ II (ರಾಜ್ಯಗಳು) ವನ್ನು ಹೊಂದಿಸಿ :
  ಪಟ್ಟಿ I (ಪರ್ವತ ಕಣಿವೆ ಮಾರ್ಗಗಳು) ಪಟ್ಟಿ II (ರಾಜ್ಯಗಳು)
 A. ದಿಹಾಂಗ I. ಸಿಕ್ಕಿಂ
 B.ಖರ್ಡುಂಗ್ ಲಾ II. ಜಮ್ಮು ಮತ್ತು ಕಾಶ್ಮೀರ
 C.ಜೆಲೆಪ್ ಲಾ III. ಹಿಮಾಚಲ ಪ್ರದೇಶ
 D.ದಿಬ್ಸಾ IV. ಅರುಣಾಚಲ ಪ್ರದೇಶ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIVIIII
 (3)IVIIIIII
 (4)IVIIIIII
ಸರಿ ಉತ್ತರ

(4) IV II I III


44.ಕೆಳಗಿನವುಗಳಲ್ಲಿ ಭಾರತದ ಯಾವ ರಾಜ್ಯವು ಅತೀ ಹೆಚ್ಚು ಸೋಯಬೀನನ್ನು ಉತ್ಪಾದಿಸುತ್ತದೆ?
 (1)ಮಹಾರಾಷ್ಟ್ರ
 (2)ಮಧ್ಯ ಪ್ರದೇಶ
 (3)ರಾಜಸ್ಥಾನ
 (4)ಛತ್ತೀಸಗಡ
ಸರಿ ಉತ್ತರ

(2) ಮಧ್ಯ ಪ್ರದೇಶ


45.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಜಾರ್ಖಂಡವು ಬಾಕ್ಸೈಟ್ ನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.
 B.ಆಂಧ್ರ ಪ್ರದೇಶವು ಅಭ್ರಕವನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.
 C.ಕರ್ನಾಟಕವು ಕಬ್ಬಿಣ ಅದಿರನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಮಾತ್ರ
 (4)C ಮಾತ್ರ
ಸರಿ ಉತ್ತರ

(2) B ಮಾತ್ರ


46.ಹಣದುಬ್ಬರವಿಳಿತದ ಸೂಕ್ತವಾದ ವರ್ಣನೆಯು ಕೆಳಗಿನವುಗಳಲ್ಲಿ ಯಾವುದಾಗಿದೆ ?
 (1)ವಿಶ್ವದ ಇತರೆ ಜನಪ್ರಿಯ ಕರೆನ್ಸಿಗಳ ವಿರುದ್ಧವಾಗಿ ಒಂದು ಕರೆನ್ಸಿಯ ಮೌಲ್ಯದಲ್ಲಿ ಆಕಸ್ಮಾತ್ ಕುಸಿತವಾಗುವುದು.
 (2)ಕೆಲವು ಗಣನೀಯ ಕಾಲಾವಧಿಯವರೆಗೆ ಆರ್ಥಿಕತೆಯಲ್ಲಿನ ಒಂದು ಸ್ಥಿರ ಹಿಂಜರಿತವಾಗುವುದು.
 (3)ಸರಕುಗಳು ಮತ್ತು ಸೇವೆಗಳ ಸಾಮಾನ್ಯ ಬೆಲೆಯ ಮಟ್ಟದಲ್ಲಿ ಸ್ಥಿರ ಕುಸಿತವಾಗುವುದು.
 (4)ಒಂದು ನಿಗದಿತ ಕಾಲಾವಧಿಯಲ್ಲಿ ಹಣ ದುಬ್ಬರದ ದರದಲ್ಲಿ ಕುಸಿತವಾಗುವುದು.
ಸರಿ ಉತ್ತರ

(3) ಸರಕುಗಳು ಮತ್ತು ಸೇವೆಗಳ ಸಾಮಾನ್ಯ ಬೆಲೆಯ ಮಟ್ಟದಲ್ಲಿ ಸ್ಥಿರ ಕುಸಿತವಾಗುವುದು.


47.ಕೆಳಗಿನ ಯಾವ ಮುಘಲರ ದೊರೆಯ ಅವಧಿಯಲ್ಲಿ, ನಾದಿರ್ ಷಾನು ದೆಹಲಿಯ ಮೇಲೆ ಧಾಳಿ ಮಾಡಿ ಲೂಟಿ ಮಾಡಿದನು ಮತ್ತು ಅಲ್ಲಿನ ನವಿಲು ಸಿಂಹಾಸನವನ್ನು ತನ್ನೊಂದಿಗೆ ಒಯ್ದನು ?
 (1)ಅಹ್ಮದ್ ಷಾ
 (2)ಮೊಹಮದ್ ಷಾ
 (3)ಜಹಾಂದಾರ್ ಷಾ
 (4)ಷಾ ಆಲಂ
ಸರಿ ಉತ್ತರ

(2) ಮೊಹಮದ್ ಷಾ


48.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಪ್ರತಿ ವರ್ಷವೂ 2ನೇ ಫೆಬ್ರುವರಿಯಂದು ವಿಶ್ವ ಜೌಗು ಭೂಮಿ ದಿನವನ್ನು ಆಚರಿಸಲಾಗುತ್ತಿದ್ದು, ಮಾನವತೆ ಮತ್ತು ಗ್ರಹಕ್ಕಾಗಿ, ಜೌಗು ನೆಲದ ಮಹತ್ವದ ಬಗೆಗಿನ ಅರಿವುಗಳನ್ನು ಜಾಗೃತಿಗೊಳಿಸಲಿಕ್ಕಾಗಿ.
 B.2017 ರ ವಿಶ್ವ ಜೌಗುಭೂಮಿ ದಿನದ ಪ್ರಧಾನ ಆಶಯವೆಂದರೆ “”ಜೌಗುನೆಲಗಳು ನಮ್ಮ ಮುಂದಿನ ಭವಿಷ್ಯಕ್ಕಾಗಿ : ಸುಸ್ಥಿರ ಜೀವನೋಪಾಯಗಳು”.
 C.2017 ರ ವಿಶ್ವ ಜೌಗುಭೂಮಿ ದಿನವನ್ನು ಚಿಲ್ಕಾ ಸರೋವರ ದಲ್ಲಿ ಆಚರಿಸಲಾಯಿತು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)A ಮತ್ತು B ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(1) A ಮಾತ್ರ


49.ಕರ್ನಾಟಕದ ಈ ಕೆಳಗಿನ ಯಾರು ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹದ ಜಾಥಾದಲ್ಲಿ ಪಾಲ್ಗೊಂಡಿದ್ದರು ?
 (1)ಎಮ್.ಪಿ. ನಾಡಕರ್ಣಿ
 (2)ಕೆ.ಪಿ. ಭಾಷ್ಯಂ
 (3)ಮೈಲಾರ ಮಹದೇವಪ್ಪ
 (4)ಟಿ. ಸಿದ್ದಲಿಂಗಯ್ಯ
ಸರಿ ಉತ್ತರ

(3) ಮೈಲಾರ ಮಹದೇವಪ್ಪ


50.ಇತ್ತೀಚೆಗೆ ಮಾಜುಲಿ ದ್ವೀಪವನ್ನು ವಿಶ್ವದ ಅತ್ಯಂತ ದೊಡ್ಡ ನದಿ ದ್ವೀಪವೆಂದು ಘೋಷಿಸಲಾಗಿದೆ. ಈ ದ್ವೀಪವನ್ನು ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಮಾಜುಲಿಯು 15 ನೇ ಶತಮಾನದಲ್ಲಿ ಸಂತ ಸುಧಾರಕರಾದ ಶಂಕರದೇವರಿಂದ ಪ್ರಾರಂಭಿತವಾದ ಅಸ್ಸಾಮೀಯರ ನವೀನ ವೈಷ್ಣವ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು.
 B.ಈ ದ್ವೀಪವು ಬ್ರಹ್ಮಪುತ್ರ ನದಿಯಿಂದ ರೂಪು ತಳೆಯಿತು.
 C.ಇದು ರಾಷ್ಟ್ರದ ಮೊದಲ ಜಿಲ್ಲಾ ದ್ವೀಪವಾಗಿತ್ತು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(3) A ಮತ್ತು C ಮಾತ್ರ


51. ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿಯು ಪ್ರಾರಂಭಿಸಿತು ?
 (1)ಸಿವೇಲ್ ಮಿಷನರಿ
 (2)ಮೈಸೂರು ಮಿಷನರಿ
 (3)ವೆಸ್ಲಿಯನ್ ಮಿಷನರಿ
 (4)ಬೇಸಿಲ್ ಮಿಷನರಿ
ಸರಿ ಉತ್ತರ

(3) ವೆಸ್ಲಿಯನ್ ಮಿಷನರಿ


52. ಭಾರತದ ಮೊದಲ ‘‘ಕೃಷಿ ಮಾರುಕಟ್ಟೆ ಮತ್ತು ರೈತ ಸ್ನೇಹಿ ಸುಧಾರಣಾ ಸೂಚ್ಯಂಕ’’ ಪ್ರಾರಂಭಿಸಿದವರು ಈ ಕೆಳಗಿನವರಲ್ಲಿ ಯಾರು ?
 (1)ಕೃಷಿ ಸಚಿವಾಲಯ
 (2)ನೀತಿ ಆಯೋಗ
 (3)ಗ್ರಾಮೀಣ ಅಭಿವೃದ್ಧಿ ಸಚಿವಾಲಯ
 (4)ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಸರಿ ಉತ್ತರ

(2) ನೀತಿ ಆಯೋಗ


53. ಸಾರ್ವಭೌಮ ಸುವರ್ಣ ಬಾಂಡ್ ಯೋಜನೆಯನ್ನು ಕುರಿತಂತೆ ಕೆಳಗಿನವುಗಳಲ್ಲಿ ಯಾವುದು / ವು ಸರಿಯಾಗಿದೆ ?
 A.ಕನಿಷ್ಠ ಹೂಡಿಕೆಯು 1 ಗ್ರಾಂನ ಭೌತಿಕ ಚಿನ್ನ ಮತ್ತು ಗರಿಷ್ಠ 1 ಕಿ.ಗ್ರಾಂ. ವರೆಗಿನ ಧಾರಣೆ.
 B.ಸಾರ್ವಭೌಮ ಸುವರ್ಣ ಬಾಂಡ್ ಯೋಜನೆಯ ಗರಿಷ್ಠ ಕಾಲಾವಧಿಯು 10 ವರ್ಷಗಳು.
 C.ಈ ಬಾಂಡ್ಗಳು ಡಿಮ್ಯಾಟ್ ಮತ್ತು ಕಾಗದದ ರೂಪದಲ್ಲಿ ದೊರೆಯುವುದು, ಸ್ಟಾಕ್ ವಿನಿಮಯದಲ್ಲಿ ಮಾರಾಟವಾಗತಕ್ಕವು ಮತ್ತು ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಲ್ಪಡುವಂತಹವು.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು C ಮಾತ್ರ
 (2)B ಮತ್ತು C ಮಾತ್ರ
 (3)C ಮಾತ್ರ
 (4)A, B ಮತ್ತು C
ಸರಿ ಉತ್ತರ

(3) C ಮಾತ್ರ


54.ಮೊಘಲರ ಅವಧಿಯಲ್ಲಿ ಐತಿಹಾಸಿಕ ವಿವರಣೆಯ ಹುಮಾಯೂನ್ ನಾಮವನ್ನು ಕೆಳಗಿನ ಸ್ತ್ರಿಯರಲ್ಲಿ ಯಾರು ಬರೆದರು ?
 (1)ಗುಲ್ಬದನ್ ಬೇಗಂ
 (2)ನೂರ್ ಬೇಗಂ
 (3)ಝೇಬುನ್ನೀಸಾ ಬೇಗಂ
 (4)ಜಹಾನಾರಾ
ಸರಿ ಉತ್ತರ

(1) ಗುಲ್ಬದನ್ ಬೇಗಂ


55.ಭಾರತೀಯ ರೇಲ್ವೆಯ ಮುಷ್ಕರ (1974) ಭಾರತೀಯ ರೇಲ್ವೆ ಇತಿಹಾಸದಲ್ಲಿಯೇ ಸಾಮಾನ್ಯ ರೇಲ್ವೆ ಕೆಲಸಗಾರರು ಕೈಗೊಂಡ ಅತಿದೊಡ್ಡ ಮುಷ್ಕರ. ಮುಷ್ಕರದ ಮುಂಚೂಣಿ ಯಲ್ಲಿದ್ದ ಹಾಗೂ ಅಖಿಲ ಭಾರತ ರೇಲ್ವೆ ಫೆಡರೇಷನ್ನಿನ ಅಧ್ಯಕ್ಷರಾಗಿದ್ದವರು
 (1)ಜಯಪ್ರಕಾಶ ನಾರಾಯಣ
 (2)ಜಾರ್ಜ್ ಫರ್ನಾಂಡಿಸ್
 (3)ಜಗಜೀವನ ರಾಮ್
 (4)ನರೇಂದ್ರ ದೇಸಾಯಿ
ಸರಿ ಉತ್ತರ

(2) ಜಾರ್ಜ್ ಫರ್ನಾಂಡಿಸ್


56. ‘ಸಿನ್ ಲೈಟ್’ಎಂದರೇನು ?
 (1)ಇತ್ತೀಚೆಗೆ ನಾಸಾದಿಂದ ಸಂಶೋಧಿಸಲ್ಪಟ್ಟ ಸ್ಥಳವಾಗಿದ್ದು ವಿವಿಧ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳ ಸಂಯೋಜನೆಯ ಮೂಲಕ ಬೆಳಕನ್ನು ತನ್ನಂತೇ ಉತ್ಪಾದಿಸುವುದು.
 (2)ಇದು ICBM (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸ್ಸೈಲ್) ನ್ನು ಅಭಿವೃದ್ಧಿಗೊಳಿಸಲು ಸಮರ್ಪಿತವಾದ ಯೋಜನೆ ಮತ್ತು ಬೆಳಕಿನ ವೇಗವನ್ನು ಹತ್ತನೇ ಒಂದರಷ್ಟು ಸಾಧಿಸುವ ಗುರಿಯನ್ನು ಹೊಂದಿದೆ.
 (3)ಕೃತಕ ಸೂರ್ಯನಿಂದ ಸೌರಬೆಳಕನ್ನು ಉತ್ಪಾದಿಸುವ ಅನುಕರಣೆಯ ಒಂದು ಯೋಜನೆಯಾಗಿದೆ.
 (4)ಇದು ಕ್ಯಾನ್ಸರ್ ನ ಒಂದು ಪ್ರಬಲ ಚಿಕಿತ್ಸೆಯಾಗಿದ್ದು , ಬೆಳಕಿನ ಶಕ್ತಿಯ ಫೊಟಾನ್ ಗಳನ್ನು ಬಳಕೆ ಮಾಡುತ್ತದೆ.
ಸರಿ ಉತ್ತರ

(3) ಕೃತಕ ಸೂರ್ಯನಿಂದ ಸೌರಬೆಳಕನ್ನು ಉತ್ಪಾದಿಸುವ ಅನುಕರಣೆಯ ಒಂದು ಯೋಜನೆಯಾಗಿದೆ.


57.ಭಾರತ ಮತ್ತು ವಿಶ್ವ ಸಂಸ್ಥೆ ಪ್ರಕೋಪ ಹಾವಳಿತಗ್ಗಿಕೆ ಕಛೇರಿಗಳು ಕೋ ಆಪರೇಷನ್ ಆಫ್ ದಿ ಸೆಂಡೈ ಫ್ರೇಮ್ ವರ್ಕ್ ಆಫ್ ಡಿಸಾಸ್ಟರ್ ರಿಡಕ್ಷನ್ ನ ಒಂದು ಹೇಳಿಕೆಗೆ ನವದೆಹಲಿಯಲ್ಲಿ ಸಹಿಯನ್ನು ಹಾಕಿದವು ಎಸ್.ಎಫ್.ಡಿ.ಆರ್.ಆರ್.ವು ಅಂತರರಾಷ್ಟ್ರೀಯ ಒಪ್ಪಂದ ವಾಗಿದ್ದು, ಅದನ್ನು ಸೆಂಡೈನಲ್ಲಿ ವಿಶ್ವ ಸಂಸ್ಥೆ ಸದಸ್ಯ ರಾಷ್ಟ್ರಗಳು ಅನುಮೋದಿಸಿವೆ. ಸೆಂಡೈ ಎಲ್ಲಿದೆ ?
 (1)ಜಪಾನ್
 (2)ಚೀನಾ
 (3)ಇಂಡೋನೇಷ್ಯಾ
 (4)ಮಲೇಷಿಯಾ
ಸರಿ ಉತ್ತರ

(1) ಜಪಾನ್


58.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಬೇರನ್ ದ್ವೀಪವು ದಕ್ಷಿಣ ಏಷ್ಯಾದ ಏಕೈಕ ಸಕ್ರಿಯಾ ಜ್ವಾಲಾಮುಖಿಯಾಗಿದ್ದು, ಸುಮಾತ್ರಾದಿಂದ ಮಯನ್ಮಾರ್ ವರೆಗಿನ ಒಂದು ಜ್ವಾಲಾಮುಖಿಗಳ ಸರಪಣಿಯಾಗಿದೆ.
 B.ಬೇರನ್ ದ್ವೀಪವು ಅಂಡಮಾನ್ ದ್ವೀಪದ ಒಂದು ಭಾಗವಾಗಿದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಎರಡೂ


59.ಕೆಳಗಿನ ಪರಿಹಾರ ಕ್ರಮಗಳನ್ನು ಪರಿಗಣಿಸಿ :
 A.ರೆಪೊ ದರ
 B.ನಗದು ಕಾಯ್ದರಿಸುವಿಕೆ ಅನುಪಾತ (CRR)
 C.ವ್ಯತ್ಯಸ್ತ ರೆಪೊ ದರ
 ಮೇಲಿನ ಪರಿಹಾರ ಕ್ರಮಗಳಲ್ಲಿ ಯಾವುದು ದ್ರವ್ಯ ಹೊಂದಾಣಿಕೆ ಸೌಲಭ್ಯದಲ್ಲಿ ಬಳಕೆಯಾಗುತ್ತದೆ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A ಮಾತ್ರ
ಸರಿ ಉತ್ತರ

(3) A ಮತ್ತು C ಮಾತ್ರ


60.ಸಿಂಧೂ ನೀರಿನ ಒಪ್ಪಂದ ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಒಪ್ಪಂದದ ಮೇರೆಗೆ, ಬಿಯಾಸ, ರಾವಿ ಮತ್ತು ಸಟ್ಲಜ್ ಗಳು ಪೂರ್ಣವಾಗಿ ಪಾಕೀಸ್ತಾನದಿಂದ ನಿಯಂತ್ರಿಸಲ್ಪಡುವುದು, ಸಿಂಧೂ, ಚೀನಾಬ್ ಮತ್ತು ಝೇಲಂಗಳು ಭಾರತದಿಂದ ಪೂರ್ಣವಾಗಿ ನಿಯಂತ್ರಿಸಲ್ಪಡುವುದು.
 B.ಪ್ರಾರಂಭದಲ್ಲಿ ಈ ಒಪ್ಪಂದಕ್ಕೆ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕು ಮಧ್ಯವರ್ತಿಯಾಗಿತ್ತು.
 C.ಈ ಒಪ್ಪಂದದಲ್ಲಿ ಚೀನಾ ಸಹ ಒಂದು ಪಕ್ಷವಾಗಿದ್ದು ಸಿಂಧೂ ಚೀನಾ, ಟಿಬೆಟ್ ನಿಂದ ಉಗಮವಾಗುವುದು.
 D.ಈ ಒಪ್ಪಂದಕ್ಕೆ ಅಂದಿನ ಪ್ರಧಾನ ಮಂತ್ರಿಗಳಾದ ಜವಾಹರ್ಲಾಲ್ ನೆಹರೂ ಮತ್ತು ಪಾಕೀಸ್ತಾನದ ಅಧ್ಯಕ್ಷ ಅಯೂಬ್ ಖಾನ್ ರವರು ಕರಾಚಿಯಲ್ಲಿ ಸೆಪ್ಟೆಂಬರ್ 19, 1960 ರಂದು ಸಹಿ ಹಾಕಿದರು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)C ಮತ್ತು D ಮಾತ್ರ
 (4)D ಮಾತ್ರ
ಸರಿ ಉತ್ತರ

(4) D ಮಾತ್ರ


61. ಪ್ರಾದೇಶಿಕ ವಾಯು ಸಂಪರ್ಕ ಜೋಡಣೆಗಾಗಿ ಕೇಂದ್ರವು ಉಡಾನ್ ನ್ನು ಅನುಷ್ಠಾನಕ್ಕೆ ತಂದಿದ್ದು, ಉಡಾನ್ ಕುರಿತಂತೆ ಕೆಳಗಿನವುಗಳನ್ನು ಪರಿಗಣಿಸಿ :
 A.ಒಂದು ನಿರ್ದಿಷ್ಟ ಪ್ರಾದೇಶಿಕ ಮಾರ್ಗದಲ್ಲಿ 3 ವರ್ಷಗಳವರೆಗೆ ಹಾರಾಟ ನಡೆಸುವ ಪ್ರತ್ಯೇಕ ಹಕ್ಕುಗಳನ್ನು ವಿಮಾನಯಾನ ಸಂಸ್ಥೆಯು ಹೊಂದಿದೆ. ಪ್ರಾದೇಶಿಕ ಹಾರಾಟಗಳ ಮಾರ್ಗಗಳಿಗಾಗಿ, ₹ 2,500 ಗಳನ್ನು ಪ್ರತಿ ಘಂಟೆಯ ಹಾರಾಟಕ್ಕೆ ವಿಧಿಸಲಾಗುವುದು.
 B.ಉಡಾನ್ ನ ಯೋಜನೆಯು ದೇಶದ ಸೇವಾ ರಹಿತ ಮತ್ತು ಕೆಳಹಂತದ ಸೇವೆಯ ವಿಮಾನ ನಿಲ್ದಾಣಗಳಿಗೆ ಜೋಡಣೆಗಳನ್ನು ಆಧುನಿಕ ಮೂಲಭೂತ ಸೌಕರ್ಯಗಳೊಡನೆ ನೂತನ ವಿಮಾನ ನಿಲ್ದಾಣಗಳ ಮೂಲಕ ನಿರ್ಮಿಸುವ ವಿಚಾರವನ್ನು ಉತ್ತೇಜಿಸುವುದಾಗಿದೆ.
 C.ಉಡಾನ್ ಮುಖ್ಯವಾಗಿ ಪ್ರವಾಸೋದ್ಯಮವನ್ನು ಮತ್ತು ಹಿನ್ನಾಡಿನಲ್ಲಿ ಔದ್ಯೋಗಿಕ ಉತ್ಪಾದನೆಯನ್ನು ಉತ್ತೇಜಿಸುವುದಾಗಿದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(2) A ಮತ್ತು C ಮಾತ್ರ


62. ಈ ಕೆಳಗಿನ ಅಂಶಗಳನ್ನು ವಿಶ್ವ ಸಂಸ್ಥೆ ಭದ್ರತಾ ಮಂಡಳಿ (ಯು.ಎನ್.ಎಸ್.ಸಿ.) ಗೆ ಸಂಬಂಧಿಸಿದಂತೆ ಪರಿಶೀಲಿಸಿ :
 A.ಯು.ಎನ್.ಎಸ್.ಸಿ. ಯಲ್ಲಿ 15 ಸದಸ್ಯರಿದ್ದಾರೆ.
 B.ಐದು ಶಾಶ್ವತ ಸದಸ್ಯ ರಾಷ್ಟ್ರಗಳೆಂದರೆ ಯು.ಎಸ್.ಎ., ಯು.ಕೆ., ಜಪಾನ್, ರಷ್ಯಾ ಮತ್ತು ಚೀನಾ.
 C.ಹತ್ತು ಶಾಶ್ವತವಲ್ಲದ ಸದಸ್ಯರನ್ನು ಐದು ವರ್ಷದ ಅವಧಿಗೆ ಸೇವೆ ಮಾಡಲು ಪ್ರಾದೇಶಿಕ ಆಧಾರದ ಮೇಲೆ ಆಯ್ಕೆಮಾಡಲಾಗುವುದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(1) A ಮಾತ್ರ


63. ಈ ಕೆಳಗಿನವುಗಳ ಪೈಕಿ ಯಾವುದು / ವು ಹೊಯ್ಸಳರಿಂದ ನಿರ್ಮಿತವಾದ ದೇವಾಲಯ /ಗಳು?
 A.ಸೋಮನಾಥಪುರದ ಚೆನ್ನಕೇಶವ ದೇವಾಲಯ
 B.ಐಹೊಳೆಯ ಲಾಡ್ ಖಾನ್ ದೇವಾಲಯ
 C.ಬೆಂಗಳೂರು ಸೋಮೇಶ್ವರ ದೇವಾಲಯ
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು C
 (4)ಮೇಲಿನ ಯಾವುದೂ ಅಲ
ಸರಿ ಉತ್ತರ

(1) A ಮಾತ್ರ


64.ಭಾರತೀಯ ರಿಸರ್ವ ಬ್ಯಾಂಕ್ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಜನವರಿ 1, 1949 ರಂದು ಭಾರತೀಯ ರಿಸರ್ವ್ ಬ್ಯಾಂಕು ರಾಷ್ಟ್ರೀಕರಣಗೊಂಡಿತು.
 B.ಭಾರತೀಯ ರಿಸರ್ವ್ ಬ್ಯಾಂಕು ಏಷಿಯನ್ ತೀರುವಳಿ ಒಕ್ಕೂಟದ ಸದಸ್ಯ ಬ್ಯಾಂಕಾಗಿದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಗಳೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಗಳೆರಡೂ


65.“ಕೈಝಲಾ”ಎಂಬ ಆಪ್ ಇತ್ತೀಚೆಗೆ ಅಝೂರ್ ಕ್ಲೌಡ್ ವೇದಿಕೆಯಿಂದ ಉತ್ಪಾದಿತವಾಗಿದ್ದು ಭಾರತೀಯ ಸಂಸ್ಥೆಗಳ ಉತ್ಪಾದಕತೆಯ ಆಪ್ ಆಗಿ ಇತ್ತೀಚೆಗೆ ಚಾಲನೆಗೊಂಡಿತು. ಈ ಆಪ್ ನ ಸೇವೆಯು ದೊಡ್ಡ ಗುಂಪಿನ ಸಂವಹನ ಮತ್ತು ಕಾರ್ಯಾಡಳಿತಗಳ ನಿರ್ವಹಣೆಯ ಬಗ್ಗೆ ವಿನ್ಯಾಸಿತವಾಗಿದೆ. ಈ ಕೆಳಗಿನ ಯಾವ ತಾಂತ್ರಿಕ ದೈತ್ಯರು ಇದನ್ನು ಚಾಲನೆಗೊಳಿಸಿದರು ?
 (1)ವೆರಿಝೂನ್
 (2)ಮೈಕ್ರೋಸಾಫ್ಟ್
 (3)ಆಪಲ್
 (4)ವಿಪ್ರೋ
ಸರಿ ಉತ್ತರ

(2) ಮೈಕ್ರೋಸಾಫ್ಟ್


66.ಒಂದು ಬ್ಯಾಂಕ್ ಇತ್ತೀಚೆಗೆ ಪಾವತಿ ಜಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಸ್ನ್ಯಾಪ್ ಡೀಲ್ ಮಾಲೀಕತ್ವದ ಮೊಬೈಲ್ ವ್ಯಾಲೆಟ್ ಫ್ರೀಚಾರ್ಜ್ ಅನ್ನು ಸ್ವೀಕರಿಸಿದೆ. ಈ ಮಹತ್ವದ ಹೆಜ್ಜೆಯು ಹಣಕಾಸು ಉತ್ಪನ್ನಗಳ ಡಿಜಿಟಲ್ ಹಂಚಿಕೆಯತ್ತ ಇರಿಸಲು ಬ್ಯಾಂಕ್ ಗೆ ಈ ಅರ್ಜನೆಯಿಂದ ಸಹಾಯಕವಾಗುವುದೆಂದು ನಿರೀಕ್ಷಿಸಲಾಗಿದೆ. ಯಾವ ಬ್ಯಾಂಕು ಇದನ್ನು ಕೈಗೊಂಡಿದೆ ?
 (1)ICICI ಬ್ಯಾಂಕು
 (2)ಆಕ್ಸಿಸ್ ಬ್ಯಾಂಕು
 (3)ಬಾರ್ಕ್ಲೇಸ್ ಬ್ಯಾಂಕು
 (4)HDFC ಬ್ಯಾಂಕು
ಸರಿ ಉತ್ತರ

(2) ಆಕ್ಸಿಸ್ ಬ್ಯಾಂಕು


67.ಇತ್ತೀಚೆಗೆ ಒಂದು ದೇಶವು ತನ್ನ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್ಗಳಿಂದ ಸಂಪೂರ್ಣ ಸ್ವತಂತ್ರವಾಗಿದೆಯೆಂದು ಘೋಷಿಸಿಕೊಂಡಿದ್ದು, ಇದು ಕಳೆದ ವರ್ಷ ಅವರ ಬೇಡಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲವೆಂದು ಪ್ರಕಟಿಸಿದ ನಂತರದ್ದಾಗಿದೆ.
ಕೆಳಗಿನ ಯಾವ ರಾಷ್ಟ್ರವು ಹೀಗೆಂದು ಘೋಷಿಸಿತು ?
 (1)ಪೆರು
 (2)ಬೊಲಿವಿಯಾ
 (3)ಟರ್ಕಿ
 (4)ಈಜಿಪ್ಟ್
ಸರಿ ಉತ್ತರ

(2) ಬೊಲಿವಿಯಾ


68.ಯಾವ ಪಂಚವಾರ್ಷಿಕ ಯೋಜನೆಯಲ್ಲಿ, ಭಾರತದಲ್ಲಿ ಎಕ್ಸಿಂ ಬ್ಯಾಂಕು ಸ್ಥಾಪನೆಯಾಯಿತು ?
 (1)ಎರಡನೇ
 (2)ನಾಲ್ಕನೇ
 (3)ಐದನೇ
 (4)ಆರನೇ
ಸರಿ ಉತ್ತರ

(4) ಆರನೇ


69.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ದ್ವೀಪಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ಪುನರ್ ಪರಿಶೀಲನೆ ಸಭೆಯನ್ನನುಸರಿಸಿ ದಿನಾಂಕ 1 ನೇ ಜೂನ್, 2017 ರಂದು ದ್ವೀಪ ಅಭಿವೃದ್ಧಿ ಏಜೆನ್ಸಿ (IDA) ಯು ಸ್ಥಾಪಿತವಾಯಿತು.
 B.ಸವಿಸ್ತಾರ ಸಮಾಲೋಚನೆಯ ನಂತರ, ಮೊದಲ ಹಂತದಲ್ಲಿ, ಸಮಗ್ರತಾ ಬೆಳವಣಿಗೆಗಾಗಿ 10 ದ್ವೀಪಗಳನ್ನು ಗುರ್ತಿಸಲಾಯಿತು.
 C.24 ನೇ ಜುಲೈ, 2017 ರಂದು ನಡೆದ ಮೊದಲ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್ ರು ವಹಿಸಿದ್ದರು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು B ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


70.ಭಾರತೀಯ ರಿಸರ್ವ್ ಬ್ಯಾಂಕು, ಕರ್ನಾಟಕ್ ಬ್ಯಾಂಕ್ ನ್ನು A1+ ದರ್ಜೆಯ ಅನುಸೂಚಿತ ವಾಣಿಜ್ಯ ಬ್ಯಾಂಕೆಂದು ನಿಯಮಿಸಿದ್ದು. ಈ ಕರ್ನಾಟಕ ಬ್ಯಾಂಕ್ ನಿಗಮದ ಕೇಂದ್ರಸ್ಥಾನವು ಎಲ್ಲಿದೆ ?
 (1)ಬೆಂಗಳೂರು
 (2)ಮಂಗಳೂರು
 (3)ಮೈಸೂರು
 (4)ಉಡುಪಿ
ಸರಿ ಉತ್ತರ

(2) ಮಂಗಳೂರು


71. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಭಾರತದಲ್ಲಿನ ರೈಲ್ವೆ ಹಾದಿಯ ಶೇ. 60 ಕ್ಕಿಂತಲೂ ಅಧಿಕ ಕಿ.ಮೀ. ಗಳಷ್ಟು ವಿದ್ಯುದೀಕರಣಗೊಂಡಿದೆ.
 B.ಭಾರತದಲ್ಲಿನ ರೈಲ್ವೆ ಜಾಲವನ್ನು 19 ವಲಯಗಳನ್ನಾಗಿ ವಿಂಗಡಿಸಲಾಗಿದೆ.
 C.ಪೂರ್ವ-ಮಧ್ಯ ರೈಲ್ವೆಯ ವಲಯ ಕೇಂದ್ರ ಸ್ಥಾನವು ಕೊಲಕತ್ತಾದಲ್ಲಿ ಇದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)A ಮತ್ತು C ಮಾತ್ರ
 (3)A, B ಮತ್ತು C
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(4) ಮೇಲಿನ ಯಾವುದೂ ಅಲ್ಲ


72. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಸಾರ್ಕ್ ಸದಸ್ಯ ರಾಷ್ಟ್ರಗಳಲ್ಲೆಲ್ಲಾ ಭಾರತವು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ (ಹೆಚ್.ಡಿ.ಐ.) ಅತ್ಯಧಿಕ ಸ್ಥಾನದಲ್ಲಿದೆ.
 B.ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲೆಲ್ಲಾ ಭಾರತವು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ (ಹೆಚ್.ಡಿ.ಐ.) ಕಡಿಮೆಸ್ಥಾನವನ್ನು ಹೊಂದಿದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(2) B ಮಾತ್ರ


73. ಒಬ್ಬ ವ್ಯಕ್ತಿಯು ತನ್ನ ಮನೆಯಾಚೆ ಇರುವ ಧ್ವಜ ಸ್ತಂಭದ ನೆರಳು, 21 ನೇ ಡಿಸೆಂಬರ್ 12 ಘಂಟೆ ನಡುಹಗಲಿನಲ್ಲಿ ಬಿದ್ದಿಲ್ಲವೆಂಬುದನ್ನು ಗಮನಿಸಿದ್ದಾನೆ. ಹಾಗಿದ್ದಲ್ಲಿ, ಆತನ ಮನೆಯು ಕೆಳಗಿನ ಯಾವ ಸ್ಥಳದಲ್ಲಿ ಇದೆ ?
 (1)ಉತ್ತರ ಧ್ರುವ
 (2)ದಕ್ಷಿಣ ಧ್ರುವ
 (3)ಕರ್ಕಾಟಕ ಸಂಕ್ರಾಂತಿ ವೃತ್ತ
 (4)ಮಕರ ಸಂಕ್ರಾಂತಿ ವೃತ್ತ
ಸರಿ ಉತ್ತರ

(4) ಮಕರ ಸಂಕ್ರಾಂತಿ ವೃತ್ತ


74.ಕೆಳಗಿನವುಗಳಲ್ಲಿ (ವಿಶ್ವವಿದ್ಯಾಲಯಗಳು) ಪಟ್ಟಿ I ಮತ್ತು ಪಟ್ಟಿ II ನ್ನು (ಪ್ರಥಮ ಉಪಕುಲಪತಿಗಳು) ಹೊಂದಿಸಿ ಬರೆಯಿರಿ :
  ಪಟ್ಟಿ I (ವಿಶ್ವವಿದ್ಯಾಲಯಗಳು) ಪಟ್ಟಿ II (ಪ್ರಥಮ ಉಪಕುಲಪತಿಗಳು)
 A. ಮೈಸೂರು ವಿಶ್ವವಿದ್ಯಾಲಯ I. ಚಂದ್ರಶೇಖರ ಕಂಬಾರ
 B.ಕುವೆಂಪು ವಿಶ್ವವಿದ್ಯಾಲಯ II. ಎಚ್.ವಿ. ನಂಜುಂಡಯ್ಯ
 C.ಮಂಗಳೂರು ವಿಶ್ವವಿದ್ಯಾಲಯ III. ಶಾಂತಿನಾಥ ದೇಸಾಯಿ
 D.ಕನ್ನಡ ವಿಶ್ವವಿದ್ಯಾಲಯIV.ಬಿ. ಶೇಖ್ ಅಲಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIIIIV
 (3)IVIIIIII
 (4)IIIIIIVI
ಸರಿ ಉತ್ತರ

(4) II III IV I


75.1928 ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಘರ್ಷಣೆಗಳು, ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು, ಮೈಸೂರಿನ ಮಹಾರಾಜರು ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿಯ ಮುಖ್ಯಸ್ಥರು ಯಾರು ?
 (1)ಸರ್ ಮಿರ್ಜಾ ಇಸ್ಮಾಯಿಲ್
 (2)ಸರ್ ಎಂ. ವಿಶ್ವೇಶ್ವರಯ್ಯ
 (3)ಕೆ.ಟಿ. ಭಾಷ್ಯಂ
 (4)ಅಲ್ಬಿಯನ್ ಬ್ಯಾನರ್ಜಿ
ಸರಿ ಉತ್ತರ

(2) ಸರ್ ಎಂ. ವಿಶ್ವೇಶ್ವರಯ್ಯ


76.“ಸಂಸ್ಕೃತ ಭಾಷೆಯ ಪ್ರಾಚೀನತೆ ಹೇಗೇ ಇರಲಿ, ಅದು ಒಂದು ಅದ್ಭುತ ರಚನೆಯಾಗಿದೆ, ಗ್ರೀಕ್ ಗಿಂತಲೂ ಪರಿಪೂರ್ಣವಾಗಿದೆ. ಲ್ಯಾಟಿನ್ ಗಿತಲೂ ಸಮೃದ್ಧಿಯಾದುದು ಮತ್ತು ಇತರೆಗಿಂತಲೂ ಅತ್ಯುತ್ತಮವಾಗಿ ಸುಧಾರಿತ ವಾಗಿದೆ. ಇವೆರಡಕ್ಕೂ ಒಂದು ಪ್ರಬಲವಾದ ಸಾದೃಶ್ಯತೆತಂದಿದ್ದು, ಇದು ಕ್ರಿಯಾಪದಗಳ ಬೇರುಗಳಲ್ಲಿ ಮತ್ತು ವ್ಯಾಕರಣದ ರೂಪಗಳೆರಡರಲ್ಲೂ …..”ಎಂದು ಹೇಳಿದವರು ಯಾರು ?
 (1)ವಿಲಿಯಂ ಜೋನ್ಸ್
 (2)ಥಾಮಸ್ ಮೆಕಾಲೆ
 (3)ಕೋಲಬ್ರೂಕ್
 (4)ಜಾನ್ ಗಿಲ್ ಕ್ರಿಸ್ಟ್
ಸರಿ ಉತ್ತರ

(1) ವಿಲಿಯಂ ಜೋನ್ಸ್


77.ಈಸ್ಟ್ ಇಂಡಿಯಾ ಕಂಪನಿಯನ್ನು ಅನೌಪಚಾರಿಕವಾಗಿ ಕೆಳಗಿನವುಗಳಲ್ಲಿ ಯಾವುದು ಎಂದು ಕರೆಯಲಾಗುತ್ತದೆ ?
 (1)ಡೇನಿಯಲ್ಸ್ ಕಂಪನಿ
 (2)ಜಾನ್ ಕಂಪನಿ
 (3)ಇಂಟರ್ ಲೋಪರ್ಸ್ ಕಂಪನಿ
 (4)ಜಾಬ್ ಚಾರ್ಲೋಕ್ ಕಂಪನಿ
ಸರಿ ಉತ್ತರ

(2) ಜಾನ್ ಕಂಪನಿ


78.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಅಮೀರ್ ಖುಸ್ರೋನು ಒಂದು ಹೊಸ ಸಾಹಿತ್ಯಿಕ ಶೈಲಿಯನ್ನು ಪರ್ಷಿಯನ್ ನಲ್ಲಿ ಸೃಷ್ಟಿಸಿದ್ದು, ಇದನ್ನು ಸಬಖ್-ಇ-ಹಿಂದಿ ಎಂದು ಕರೆಯಲಾಗಿದೆ.
 B.ಅಮಿರ್ ಖುಸ್ರೋನು ನಿಝಾಮುದ್ದೀನ್ ಔಲಿಯಾನ ಶಿಷ್ಯನಾಗಿದ್ದನು.
 C.ಅವನು ಪರ್ಸೋ-ಅರೇಬಿಕ್ ರಾಗಗಳೇ ಮುಂತಾದವನ್ನು ಪರಿಚಯಿಸಿದನು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


79.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಭಕ್ತಿ ಸಂತನಾದ ನಾಮದೇವನು ವೃತ್ತಿಯಿಂದ ಒಬ್ಬ ದರ್ಜಿಯ ವನಾಗಿದ್ದನು.
 B.ಭಕ್ತಿ ಸಂತನಾದ ಕಬೀರ್ ನು ವೃತ್ತಿಯಿಂದ ನೇಯ್ಗೆಯವನಾಗಿದ್ದನು.
 C.ಭಕ್ತಿ ಸಂತನಾದ ರವಿದಾಸ್ನು ವೃತ್ತಿಯಿಂದ ಚಮ್ಮಾರನಾಗಿದ್ದನು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)C ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


80.ಅಹಮದಾಬಾದ್ ಗಿರಣಿ ಮುಷ್ಕರ, 1918 ವನ್ನು ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಇದು ಮುಖ್ಯವಾಗಿ ಭಾರತೀಯ ಕೆಲಸಗಾರರು ಮತ್ತು ಯುರೋಪಿಯನ್ ಗಿರಣಿ ಒಡೆಯರ ನಡುವೆ ಕೆಲಸದ ಅವಧಿ ಮತ್ತು ರಜೆಯ ಮಂಜೂರಾತಿಯನ್ನು ಕುರಿತ ವ್ಯಾಜ್ಯಕ್ಕೆ ಸಂಬಂಧಿಸಿದ್ದಾಗಿತ್ತು.
 B.ಅಹಮದಾಬಾದ್ನ ಒಂದು ಶ್ರೀಮಂತ ಗಿರಣಿ ಒಡೆಯರ ಸೋದರಿಯಾದ ಅನುಸೂಯಾ ಬೇನ್ ಸಾರಾಬಾಯಿಯವರು ಚಳುವಳಿಯ ನಾಯಕರಲ್ಲಿ ಒಬ್ಬರಾಗಿದ್ದರು.
 C.ಗಾಂಧೀಜಿಯವರು ಉಪವಾಸ ಮುಷ್ಕರದ ಅಸ್ತ್ರವನ್ನು ಬಳಸಿದ್ದು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(2) B ಮತ್ತು C ಮಾತ್ರ


81. ಚಾಲ್ತಿ ಖಾತೆಯು ಭಾರತದ ಪಾವತಿ ಬಾಕಿಗೆ ಸಂಬಂಧಿಸಿದಂತೆ ಕಾರ್ಯಾತ್ಮಕವಾಗಿ ಎರಡು ರೀತಿ ವರ್ಗೀಕರಣಗೊಂಡಿದೆ
 (1)ಮರ್ಚಂಡೈಸ್ (ವಾಣಿಜ್ಯ ಸರಕು) ಮತ್ತು ಅಗೋಚರಗಳು
 (2)ಸಾಲಗಳು ಮತ್ತು ಅಮಾರ್ಟೈಸೇಷನ್ (ಪರಭಾರೆ ಮಾಡಲಾಗದ ದತ್ತಿ)
 (3)ವಿದೇಶಿ ಹೂಡಿಕೆ ಮತ್ತು ವಿದೇಶಿ ಕರೆನ್ಸಿ ಠೇವಣಿಗಳು
 (4)ಈ ಯಾವುದೂ ಅಲ್ಲ
ಸರಿ ಉತ್ತರ

(1) ಮರ್ಚಂಡೈಸ್ (ವಾಣಿಜ್ಯ ಸರಕು) ಮತ್ತು ಅಗೋಚರಗಳು


82. ಜನನಿ ಸುರಕ್ಷಾ ಯೋಜನೆ (ಜೆ.ಎಸ್.ವೈ.) ಗೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ :
 A.ಇದನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ನಿಯೋಗದ ಭಾಗವಾಗಿ (ಎನ್.ಆರ್.ಎಲ್.ಎಮ್.) ಪ್ರಾರಂಭಿಸಲಾಯಿತು.
 B.ಇದರ ಉ್ದದೇಶವು ತಾಯಿಯರ ಮತ್ತು ನವಜಾತ ಶಿಶುವಿನ ಆರೋಗ್ಯವನ್ನು ಸಾಂಸ್ಥಿಕ ಹೆರಿಗೆಗಳ ಅವಕಾಶದಿಂದ ಸುಧಾರಿಸುವುದು.
 C.ಇದು 100% ಕೇಂದ್ರದಿಂದ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.).
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(3) B ಮತ್ತು C ಮಾತ್ರ


83. ಈ ಕೆಳಗಿನ ಯೋಜನೆಗಳ ಪೈಕಿ ಭಾರತ ಸರ್ಕಾರದ ಯಾವ ಯೋಜನೆಯು ಗರ್ಭಿಣಿಯರ ಕುಟುಂಬಗಳಿಗೆ ಗರ್ಭ, ಹೆರಿಗೆ ಮತ್ತು ಮಕ್ಕಳ ಪಾಲನೆ ಕುರಿತಂತೆ ಉಚಿತ ಸಂದೇಶಗಳನ್ನು ಒದಗಿಸುವುದಾಗಿದೆ ?
 (1)ಕಿಲ್ಕಾರಿ
 (2)ಅನಮೋಲ್
 (3)ಸ್ರಿಜನ್
 (4)ಕಿಶೋರ್
ಸರಿ ಉತ್ತರ

(1) ಕಿಲ್ಕಾರಿ


84.2011 ರ ಜನಗಣತಿ ಪ್ರಕಾರ ಕರ್ನಾಟಕದ ಸರಾಸರಿ ಸಾಕ್ಷರತಾ ದರ ಸೇಕಡಾವಾರು ಎಷ್ಟು ?
 (1)75.36%
 (2)57.63%
 (3)66.65%
 (4)81.14%
ಸರಿ ಉತ್ತರ

(1) 75.36%


85.ಪ್ರಧಾನ ಮಂತ್ರಿ ಆವಾಸ ಯೋಜನೆಗೆ – ಸಾಲಾಧಾರಿತ ಸಬ್ಸಿಡಿ ಯೋಜನೆ (PMAY – CLSS) ಸಂಬಂಧಿಸಿದಂತೆ ಯಾವುದು ಸರಿಯಲ್ಲ ?
 (1)ಆರ್ಥಿಕ ದುರ್ಬಲ ವರ್ಗದ ಫಲಾನುಭವಿಗಳು ಹಾಗೂ ಕಡಿಮೆ ಆದಾಯ ಗುಂಪಿನವರು (ಎಲ್.ಐ.ಜಿ.) ಬ್ಯಾಂಕ್, ಹಣಕಾಸು ಕಂಪನಿಗಳ ಮತ್ತು ಮತ್ತಿತರ ಸಂಸ್ಥೆಗಳಿಂದ ಗೃಹಸಾಲಪಡೆದಾಗ ₹ 6 ಲಕ್ಷ ಮೊತ್ತದ ವರೆಗಿನ ಸಾಲದ ಮೇಲಿನ ಬಡ್ಡಿಯ ಸಬ್ಸಿಡಿಗೆ ಅರ್ಹರು.
 (2)ಮಧ್ಯಮ ಆದಾಯವರ್ಗದವರಿಗೆ (ಎಮ್.ಐ.ಜಿ.) ಸಾಲಾಧಾರಿತ ಸಬ್ಸಿಡಿ ಯೋಜನೆ ಇಲ್ಲ.
 (3)ಸಾಲಪತ್ರ ಸಂಸ್ಥೆಗಳಿಗೆ ಸಬ್ಸಿಡಿಯನ್ನು ಚಾಲನೆ ಮಾಡಲು ಮತ್ತು ಈ ಅಂಶದ ಪ್ರಗತಿಯ ಮೇಲ್ವಿಚಾರಣೆಗಾಗಿ ಹುಡ್ಕೋ ಮತ್ತು ಎನ್.ಹೆಚ್.ಬಿ. ಗಳನ್ನು ಕೇಂದ್ರ ನೋಡಲ್ ಏಜೆನ್ಸೀಸ್ ಎಂದು ಗುರುತಿಸಲಾಗಿದೆ.
 (4)ಈ ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(2) ಮಧ್ಯಮ ಆದಾಯವರ್ಗದವರಿಗೆ (ಎಮ್.ಐ.ಜಿ.) ಸಾಲಾಧಾರಿತ ಸಬ್ಸಿಡಿ ಯೋಜನೆ ಇಲ್ಲ.


86.ಹರ್ಟೋಗ್ ಸಮಿತಿ ವರದಿಗೆ ಈ ಪೈಕಿ ಯಾವುದು ಸಂಬಂಧಿಸಿದೆ ?
 (1)ಬ್ರಿಟಿಷ್-ಭಾರತದಲ್ಲಿ ಶಿಕ್ಷಣದ ಬೆಳವಣಿಗೆ ಮತ್ತು ಅದರ ಭವಿಷ್ಯ ಪ್ರಗತಿಯ ಅಂತಃಸತ್ವಗಳು
 (2)ಮೊಂಟಗ್ಯೂ-ಚೆಮ್ಸ್ ಫರ್ಡ್ ಸುಧಾರಣೆ ಯಲ್ಲಿರುವಂತೆ ದ್ವಿಮುಖ ಆಡಳಿತ ಜಾರಿ
 (3)ಭಾರತದ ಲಕ್ಷಣಗಳನ್ನು ಭವಿಷ್ಯದ ರಾಜಕೀಯ ಸುಧಾರಣೆಗೆ ಸಂಬಂಧಿಸಿದಂತೆ ಮರು ಪರಿಶೀಲಿಸುವುದು
 (4)ಶ್ರಮಿಕರು ಪ್ರಸ್ತುತ ಇರುವ ಸ್ಥಿತಿ ಗತಿಗಳ ಬಗೆಗೆ ವರದಿನೀಡುವುದು ಮತ್ತು ಶ್ರಮಿಕರ ಕಾನೂನು ತಿದ್ದುಪಡಿಗೆ ಶಿಫಾರಸು ನೀಡುವುದು
ಸರಿ ಉತ್ತರ

(1) ಬ್ರಿಟಿಷ್-ಭಾರತದಲ್ಲಿ ಶಿಕ್ಷಣದ ಬೆಳವಣಿಗೆ ಮತ್ತು ಅದರ ಭವಿಷ್ಯ ಪ್ರಗತಿಯ ಅಂತಃಸತ್ವಗಳು


87.ಕೆಳಗಿನ ಯಾವ ನೀಡಿಕೆಗೆ ಸಂಬಂಧಿಸಿದಂತೆ ಗಾಂಧೀಜಿಯವರು ಹೀಗೆ ಹೇಳಿದ್ದರು ‘‘ಮುಳುಗುವ ಬ್ಯಾಂಕಿಗೆ ಉತ್ತರ ದಿನಾಂಕದ ಚೆಕ್ ’’?
 (1)ಯುದ್ಧಾನಂತರ ಡೋಮಿನಿಯನ್ ಸ್ಥಾನ ನೀಡುವ ಕ್ರಿಪ್ಸ್ ನ ಕೊಡುಗೆ
 (2)ಭಾರತದಲ್ಲಿ ಸ್ವ ಆಡಳಿತವನ್ನು ಕ್ರಮೇಣ ಜಾರಿಗೆ ತರುವ ಮೊಂಟ್-ಫೋರ್ಡ್ ಸುಧಾರಣೆಗಳು
 (3)ಸೈಮನ್ ಕಮಿಷನ್ ಶಿಫಾರಸುಗಳು
 (4)ಈ ಯಾವುವೂ ಅಲ್ಲ
ಸರಿ ಉತ್ತರ

(1) ಯುದ್ಧಾನಂತರ ಡೋಮಿನಿಯನ್ ಸ್ಥಾನ ನೀಡುವ ಕ್ರಿಪ್ಸ್ನ ಕೊಡುಗೆ


88.ಚೀನಾದ ಟಿಯನನ್ಮನ್ ಚೌಕದ ಹತ್ಯೆಯು ಇದಕ್ಕೆ ಪ್ರತಿಕ್ರಿಯೆಯಾಗಿದೆ
 (1)ಡೆಂಗ್ ಕ್ಸೆಯೀಪಿಂಗ್ ಅವರ ಸಾಂಸ್ಕೃತಿಕ ಕ್ರಾಂತಿಯ ಪುನರುಜ್ಜೀವನ ಯೋಜನೆ
 (2)ವೈಯಕ್ತಿಕ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ವಿದ್ಯಾರ್ಥಿಗಳ ಬೇಡಿಕೆಗಳು
 (3)ಪಾಶ್ಚಿಮಾತ್ಯ ಹೂಡಿಕೆದಾರರನ್ನು ಗಳಿಸುವ ಚೀನಾದ ನಿರ್ಧಾರ
 (4)ಹಾಂಗ್ ಕಾಂಗ್ ಅನ್ನು ಚೀನಾಗೆ ಹಿಂತಿರುಗಿಸುವ ಬ್ರಿಟನ್ನ ನಿರ್ಧಾರ
ಸರಿ ಉತ್ತರ

(2) ವೈಯಕ್ತಿಕ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ವಿದ್ಯಾರ್ಥಿಗಳ ಬೇಡಿಕೆಗಳು


89.ಯಾವ ದೇಶವು ಇತ್ತೀಚೆಗೆ ಬ್ರಿಕ್ಸ್ ಯುವಜನ ವೇದಿಕೆಯನ್ನು (BYF) ಜುಲೈ, 2017 ರಂದು ಆ ಗುಂಪಿನ ದೇಶಗಳ ಯುವಜನ ಅಭಿವೃದ್ಧಿಯನ್ನು ಚರ್ಚಿಸಲು ಹೋಸ್ಟ್ ಮಾಡಿತು (ಕೈಗೊಂಡಿತು) ?
 (1)ಬ್ರೆಜಿಲ್
 (2)ರಷ್ಯಾ
 (3)ಚೀನಾ
 (4)ದಕ್ಷಿಣ ಆಫ್ರಿಕಾ
ಸರಿ ಉತ್ತರ

(3) ಚೀನಾ


90.ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿಯವರು ಇತ್ತೀಚೆಗೆ ಹೊಸ ಪಿಂಚಣಿ ಯೋಜನೆಯನ್ನು ನವದೆಹಲಿಯಲ್ಲಿ ಜುಲೈ 2017 ರಲ್ಲಿ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದರು. ಅದನ್ನು ಆನ್ಲೈನ್ ಮೂಲಕ ಇಲ್ಲವೇ ಬೇರೆ ವಿಧಾನದಿಂದ, ಜೀವವಿಮೆ ನಿಗಮ (LIC) ಮೂಲಕ ಪಡೆಯಬಹುದಾಗಿದ್ದು ಅದು ಸೇವಾ ತೆರಿಗೆ ಅಥವಾ ಜಿ.ಎಸ್.ಟಿ. ಯಿಂದ ವಿನಾಯ್ತ ಪಡೆದಿದೆ ಮತ್ತು ವಾರ್ಷಿಕ ಶೇ. 8 ರಂತೆ 10 ವರ್ಷ ದವರೆಗೆ ಪ್ರತಿಫಲದ ಭರವಸೆಯನ್ನು ನೀಡಿದೆ. ಈ ಯೋಜನೆಯ ಹೆಸರೇನು ?
 (1)ಪ್ರಧಾನ ಮಂತ್ರಿ ವಯ ವಂದನ ಯೋಜನಾ (PMVVY)
 (2)ಪ್ರಧಾನ ಮಂತ್ರಿ ವಯ ವಿಕಾಸ ಯೋಜನಾ (PMVVY)
 (3)ಪ್ರಧಾನ ಮಂತ್ರಿ ವೃದ್ಧ ವಿಶೇಷ ಯೋಜನಾ (PMVVY)
 (4)ಪ್ರಧಾನ ಮಂತ್ರಿ ವಯ ವರುಣ ಯೋಜನಾ (PMVVY)
ಸರಿ ಉತ್ತರ

(1) ಪ್ರಧಾನ ಮಂತ್ರಿ ವಯ ವಂದನ ಯೋಜನಾ (PMVVY)


91. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ.) ಇತ್ತೀಚೆಗೆ ಪ್ರಥಮ ಬಾರಿಗೆ ಭಾರತದ ಮಾನವರಹಿತ ದೂರ ನಿಯಂತ್ರಣ ಕಾರ್ಯಚರಣೆಯ ಟ್ಯಾಂಕ್ ಅನ್ನು ಚೆನ್ನೈ ಪ್ರಯೋಗಾಲಯದಲ್ಲಿ ಹೊರತಂದಿತು. ಆ ಟ್ಯಾಂಕ್ ನ ಹೆಸರೇನು ?
 (1)ಮಂತ್ರ
 (2)ಸ್ವಯಂಭೂ
 (3)ಓಜಸ್ವಿ
 (4)ಮಾರ್ತಾಂಡ
ಸರಿ ಉತ್ತರ

(1) ಮಂತ್ರ


92. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC), ಶಿವಪುರದಲ್ಲಿ ನಡೆಸಿದ ಧ್ವಜ ಸತ್ಯಾಗ್ರಹದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು ?
 (1)ಮೈಲಾರ ಮಹದೇವಪ್ಪ
 (2)ಮಹಾತ್ಮಾ ಗಾಂಧಿ
 (3)ಟಿ. ಸಿದ್ಧಲಿಂಗಯ್ಯ
 (4)ಕೆ.ಸಿ. ರೆಡ್ಡಿ
ಸರಿ ಉತ್ತರ

(3) ಟಿ. ಸಿದ್ಧಲಿಂಗಯ್ಯ


93. ಈ ಮುನ್ನಿನ ಜೇಮ್ಸ್ ಬಾಂಡ್ ಚಲನಚಿತ್ರದ ತಾರೆಯು ಏಳು ಜೇಮ್ಸ್ ಬಾಂಡ್ ಚಿತ್ರಗಳಲ್ಲಿ, ಮೂನ್ ರೇಕರ್ (1979), ಆಕ್ಟೋಪಸಿ (1983), ಎ ವ್ಯೂ ಟು ಎ ಕಿಲ್ (1985) ಮುಂತಾದವುಗಳಲ್ಲಿ ಅಭಿನಯಿಸಿದವರು. ತಮ್ಮ 89 ನೇ ವಯಸ್ಸಿನಲ್ಲಿ 2017 ರ ಮೇನಲ್ಲಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇತ್ತೀಚೆಗೆ ನಿಧನವಾದರು. ಆ ತಾರೆಯ ಹೆಸರೇನು ?
 (1)ಹ್ಯಾರಿಸನ್ ಫೋರ್ಡ್
 (2)ರೋಜರ್ ಮೂರ್
 (3)ಸೀನ್ ಕಾನರಿ
 (4)ಗೈ ಹೆಮಿಲ್ಟನ್
ಸರಿ ಉತ್ತರ

(2) ರೋಜರ್ ಮೂರ್


94.ಕರ್ನಾಟಕದಲ್ಲಿ ಜಲಾನಯನ ಪ್ರದೇಶದ ವ್ಯಾಪ್ತಿಯ ಇಳಿಕೆಯ ಕ್ರಮವನ್ನು ಈ ಪೈಕಿ ಗುರುತಿಸಿರಿ?
 (1)ಕಾವೇರಿ, ಉತ್ತರ ಪೆನ್ನಾರ್, ಕೃಷ್ಣಾ, ಗೋದಾವರಿ
 (2)ಕೃಷ್ಣಾ, ಕಾವೇರಿ, ಉತ್ತರ ಪೆನ್ನಾರ್, ಗೋದಾವರಿ
 (3)ಕೃಷ್ಣಾ, ಕಾವೇರಿ, ಗೋದಾವರಿ, ಉತ್ತರ ಪೆನ್ನಾರ್
 (4)ಉತ್ತರ ಪೆನ್ನಾರ್, ಗೋದಾವರಿ, ಕಾವೇರಿ, ಕೃಷ್ಣಾ
ಸರಿ ಉತ್ತರ

(2) ಕೃಷ್ಣಾ, ಕಾವೇರಿ, ಉತ್ತರ ಪೆನ್ನಾರ್, ಗೋದಾವರಿ


95.2017 – 18 ರ ಆಯವ್ಯಯದಲ್ಲಿ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ, ಈ ಹೇಳಿಕೆಗಳನ್ನು ಪರಿಗಣಿಸಿ :
 A.ಬಾಂಡುಗಳನ್ನು ನಗದು, ಚೆಕ್ ಅಥವಾ ಡ್ರಾಫ್ಟ್ ಗಳಿಂದ ರಾಷ್ಟ್ರೀಯ ಬ್ಯಾಂಕು ಗಳಲ್ಲಿ ಮಾತ್ರ ಖರೀದಿಸಬಹುದು.
 B.ಅವುಗಳನ್ನು ಭಾರತದ ಚುನಾವಣಾ ಆಯೋಗವು ಜಾರಿ ಮಾಡುವುದು.
 C.ಅವು ರಾಜಕೀಯ ಪಕ್ಷಗಳಿಗೆ ಕೊಡುಗೆ ನೀಡುವ ಸಾಧನ ಮಾತ್ರ ವಾಗಿರುವುವು. ಈ ಬಾಂಡುಗಳಲ್ಲದೆ ರಾಜಕೀಯ ಪಕ್ಷಗಳಿಗೆ ಕೊಡುಗೆಯನ್ನು ಬೇರೆ ಯಾವ ರೂಪದಲ್ಲೂ ನೀಡುವಂತಿಲ್ಲ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)B ಮಾತ್ರ
 (2)A ಮತ್ತು B ಮಾತ್ರ
 (3)A, B ಮತ್ತು C
 (4)ಈ ಯಾವುವೂ ಅಲ್ಲ
ಸರಿ ಉತ್ತರ

(4) ಈ ಯಾವುವೂ ಅಲ್ಲ


96.ಐ.ಸಿ.ಸಿ. ಚಾಂಪಿಯನ್ ಟ್ರೋಫಿ, 2017 ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :
 A.ಐ.ಸಿ.ಸಿ. ಚಾಂಪಿಯನ್ ಟ್ರೋಫಿ, 2017 ರಲ್ಲಿ ಲಂಡನ್, ಓವಲ್ ನಲ್ಲಿ ಆದ ಅಂತಿಮ ಪಂದ್ಯದಲ್ಲಿ ಪಾಕೀಸ್ತಾನವು ಭಾರತವನ್ನು ಸೋಲಿಸಿತು.
 B.ಈ ಕ್ರೀಡಾಪಂದ್ಯದಲ್ಲಿ ಅತ್ಯಂತ ಅಧಿಕ ಸ್ಕೋರ್ ಗಳಿಸಿದವರು ಭಾರತೀಯ ಶಿಖರ್ ಧವನ್.
 C.ಅಂತಿಮ ಪಂದ್ಯಾವಳಿಯಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಾಕೀಸ್ತಾನದ ಫಕರ್ ಜಮನ್ ಅವರಿಗೆ ನೀಡಲಾಯಿತು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)A ಮತ್ತು C ಮಾತ್ರ
 (3)C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


97.ಕೇಂದ್ರ ಬಜೆಟ್, 2017 – 2018 ರ ಪ್ರಸ್ತಾವಿತ ಹಣಪಾವತಿ ನಿಯಂತ್ರಣ ಮಂಡಳಿಗೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಪರಿಗಣಿಸಿ :
 A.ಪಾವತಿ ವ್ಯವಸ್ಥೆಯ ನಿಯಂತ್ರಣ ಮತ್ತು ಮೇಲ್ವಿಚಾರಣೆಯಿಂದ ಮಂಡಳಿಯನ್ನು ಬದಲಿ ಮಾಡುವುದು.
 B.ಕೇಂದ್ರ ಅರ್ಥ ಸಚಿವರು ಮಂಡಳಿಯ ಅಧ್ಯಕ್ಷರಾಗಿದ್ದಾರೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಗಳೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(1) A ಮಾತ್ರ


98.ಪಟ್ಟಿ I (ಜಲಪಾತ) ನ್ನು ಪಟ್ಟಿ II (ಅವುನೆಲೆಸಿರುವ ನದಿ) ಗಳೊಂದಿಗೆ ಜೋಡಣೆಮಾಡಿ :
  ಪಟ್ಟಿ I (ಜಲಪಾತ) ಪಟ್ಟಿ II (ಅವುನೆಲೆಸಿರುವ ನದಿ)
 A. ಬರ್ಕಾನಾ I. ಕಾಳಿ
 B.ಮಾಗೊದ್ II. ಸೀತಾ
 C.ಲಾಲಗುಲಿ III. ಸೊಂಡಾ
 D.ಶಿವಗಂಗಾ IV. ಬೇಡ್ತಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IVIIIIII
 (2)IIIVIIII
 (3)IIIIVIII
 (4)IIIIIIIV
ಸರಿ ಉತ್ತರ

(2) II IV I III


99.ಕೆಳಗಿನ ಯಾವ ದೆಹಲಿ ಸುಲ್ತಾನರು “ಸಿಜ್ದಾ”ಪದ್ಧತಿಯನ್ನು ಪರಿಚಯಿಸಿದರು ಮತ್ತು ಸುಲ್ತಾನರು ಭೂಮಿಯ ಮೇಲೆ ದೇವರ ಪ್ರತಿನಿಧಿಗಳೆಂದು ಸಾರುವ ಪವಿತ್ರ ಹಕ್ಕುಗಳ ಇರಾನೀಯ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದರು ?
 (1)ಬಲ್ಬನ್
 (2)ಅಲ್ಲಾಉದ್ದೀನ್ ಖಿಲ್ಜಿ
 (3)ಮೊಹಮದ್-ಬಿನ್-ತುಘಲಕ್
 (4)ಇಲ್ತುತಮಿಷ್
ಸರಿ ಉತ್ತರ

(1) ಬಲ್ಬನ್


100.ಈ ಕೆಳಗಿನ ಯಾವ ದೊರೆಯು “ತಲಕಾಡುಗೊಂಡ”ಎಂಬ ಬಿರುದನ್ನು ಹೊಂದಿದ್ದನು ?
 (1)ವೀರ ಬಲ್ಲಾಳ III
 (2)ಕುಲೋತ್ತುಂಗ ಚೋಳ III
 (3)ವಿಷ್ಣುವರ್ಧನ
 (4)ನರಸಿಂಹ II
ಸರಿ ಉತ್ತರ

(3) ವಿಷ್ಣುವರ್ಧನ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment