WhatsApp Group Join Now
Telegram Group Join Now

Chapter 10 Ondu Hoo Hechige Idutini

Chapter 10 Ondu Hoo Hechige Idutini Questions and Answers Pdf, Notes, Summary, 2nd PUC Kannada Textbook question Answers, Karnataka State Board Solutions help you to revise complete Syllabus and score more marks in your examinations.You can Download Chapter 10 Ondu Hoo Hechige Idutini Questions and Answers Pdf, Notes, Summary. ಒಂದು ಹೂ ಹೆಚ್ಚಿಗೆ ಇಡುತೀನಿ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd PUC Ondu Hoo Hechige Idutini Kannada Notes Question Answer Pdf Chapter 11.

2nd PUC Kannada
ಪದ್ಯ 10ಒಂದು ಹೂ ಹೆಚ್ಚಿಗೆ ಇಡುತೀನಿ
ಕೃತಿಕಾರರ ಹೆಸರು :ಲಲಿತಾ ಸಿದ್ಧಬಸವಯ್ಯ

Ondu Hoo Hechige Idutini Notes

ಕವಿ ಪರಿಚಯ :

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ( ಜನನ : ೨೭೦೨.೧೯೫೫ ) ವರ್ತಮಾನದ ಸರಳ ಸಾಮಾನ್ಯ ಸಂಗತಿಗಳನ್ನು , ಅವುಗಳ ಒಳವಿವರಗಳೊಂದಿಗೆ ಕವಿತೆಯನ್ನಾಗಿ ಕಟ್ಟುವ ಕೌಶಲವನ್ನು ಕರಗತವಾಗಿಸಿಕೊಂಡಿರುವ ಅಪರೂಪದ ಕವಯಿತಿ , ಇವರು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು . ಇವರ ತಂದೆ ಡಿ.ಎಸ್ . ಸಿದ್ಧಲಿಂಗಯ್ಯ , ತಾಯಿ ಶ್ರೀಮತಿ ಆರ್ . ಪುಟ್ಟಮಣ್ಣಿ . ಕೊರಟಗೆರೆ – ತುಮಕೂರುಗಳಲ್ಲಿ ವ್ಯಾಸಂಗ ಮುಗಿಸಿ , ಬಿ.ಎಸ್ಸಿ . ಪದವೀಧರೆಯಾದರು . ೨೮ ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ .

ಮೊದಲಸಿರಿ , ಇಹದಸ್ವರ , ಕೆಬ್ಬೆನೆಲ , ದಾರಿನೆಂಟ ಮತ್ತು ಬಿಡಿ ಹರಳು ಎಂಬ ಕವಿತಾ ಸಂಕಲನಗಳನ್ನೂ , ಆನೆಘಟ್ಟ ಎಂಬ ಕಥಾಸಂಕಲನವನ್ನೂ , ಇನ್ನೊಂದು ಸಭಾಪರ್ವ ಎಂಬ ನಾಟಕವನ್ನೂ , ಮಿ , ಛತ್ರಪತಿ ಎಂಬ ನಗೆಬರಹವನ್ನೂ ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡೆಮಿ ಬಹುಮಾನ , ಬಿಎಂಶ್ರೀ ಕಾವ್ಯ ಪ್ರಶಸ್ತಿ , ಪುತಿನ ಕಾವ್ಯ ಪ್ರಶಸ್ತಿ , ಕಾವ್ಯಾನಂದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ .

ತನ್ನ ಜೀವನ ಸಂಗಾತಿಯಿಂದ ದೂರವಾಗಿ ಮಗನ ಆಶ್ರಯದಲ್ಲಿರುವ ಮುದುಕಿಯೊಬ್ಬಳ ತಳಮಳವನ್ನು ಈ ಕವಿತೆ ಚಿತ್ರಿಸಿದೆ . ಮತ್ತೊಬ್ಬ ಮಗನ ಬಳಿಯಿರುವ ಮುದುಕನ ಬಗೆಗೆ ಅವಳಲ್ಲಿ ಕಳಕಳಿ – ಚಿಂತೆಗಳು ತುಂಬಿವೆ . ದೂರವಾಣಿಯ ಮೂಲಕ ಪರಸ್ಪರರ ದನಿ ಕೇಳಲು ಚಡಪಡಿಸುವ ಈ ಹಿರಿಯ ಜೀವಗಳು ಇಂದಿನ ಕೃತಕ ಸಂಬಂಧಗಳನ್ನು ಕುಟುಕುವಂತಿವೆ . ವೃದ್ಧರನ್ನು ಗೌರವ , ಪ್ರೀತಿ , ಆದರಗಳಿಂದ ಕಾಣುವ ಮನೋಭಾವ ‘ ಕರ್ತವ್ಯ’ಕಷ್ಟೇ ಸೀಮಿತವಾಗಿರುವುದನ್ನು ಈ ಕವಿತೆ ಹೃದ್ಯವಾಗಿ ನಿರೂಪಿಸಿದೆ . ಕವಿತೆಯ ಗದ್ಯಗಂಧಿ ಶೈಲಿ ಗಮನ ಸೆಳೆಯುವಂತಿದೆ .

ಕಾವ್ಯದ ಹಿನ್ನೆಲೆ :

ವಯೋವೃದ್ಧ ತಂದೆತಾಯಿಯರನ್ನು ಜವಾಬ್ದಾರಿಯ ನಿಭಾವಣೆಯ ನೆಪದಲ್ಲಿ ಹಂಚಿಕೊಂಡು , ಹಿರಿಯ ಜೀವಗಳ ತಲ್ಲಣಗಳನ್ನು ಅಲಕ್ಷಿಸುವಷ್ಟು ವ್ಯಾವಹಾರಿಕವಾಗಿದೆ ಕರುಳುಬಳ್ಳಿಯ ಸಂಬಂಧಗಳು , ಮಮತೆಯಿಂದ ಸಾಕಿಬೆಳೆಸಿದ ಹೆತ್ತವರನ್ನು ತಾತ್ಸಾರದಿಂದ ಕಾಣುವ ಮನೋಭಾವವಿಂದು ಎಲ್ಲೆಲ್ಲೂ ಸಾಮಾನ್ಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ . ಬೇರ್ಪಟ್ಟಿರುವ ಕಾರಣಕ್ಕೆ ಪರಸ್ಪರ ತಳಮಳ ವ್ಯಕ್ತಪಡಿಸುವ ಹಿರಿಯ ಜೀವಗಳೆರಡರ ತುಯ್ದಾಟವನ್ನು ಚಿತ್ರಿಸುವ ಪ್ರಸ್ತುತ ಕವಿತೆಯು ನಾವು ಕಳೆದುಕೊಳ್ಳುತ್ತಿರುವ ಮಾನವೀಯ ಮೌಲ್ಯಗಳಿಗೆ ಕನ್ನಡಿ ಹಿಡಿಯುವಂತಿವೆ . ಗದ್ಯಗಂಧಿಯಾದ ನಿರೂಪಣೆಯುಳ್ಳ ಈ ಕವಿತೆ ವರ್ತಮಾನದ ಚಲನೆಯ ದಿಕ್ಕನ್ನು ಸಶಕ್ತವಾಗಿ ಬಿಂಬಿಸಿದೆ .

ಶಬ್ಧಾರ್ಥ :

ತಾವು – ಸ್ಥಳ ; ಬಾಯತುರಿಕೆ – ಬಾಯಿಯ ಚಪಲ ; ಸಸೇಮಿರ – ಚೂರೂ : ಗೋಗರೆ – ದೈನ್ಯದಿಂದ ಬೇಡಿಕೊಳ್ಳು ಸುಲ್ಲು – ನಿಟ್ಟುಸಿರು ; ದಿಗಿಲು – ಭಯ ; ಕಾಡಿ – ಪೀಡಿಸಿ ; ಆವಾಹಿಸು – ನೆಲೆಗೊಳಿಸು ; ಅಟ್ಟ – ಮಹಡಿ ; ಅಂತರ್ಧಾನ ಕಣ್ಮರೆಯಾಗು ; ಸಮ್ಮಿಲಿಸು – ಒಂದುಗೂಡು ; ನಿರಾಳ – ನೆಮ್ಮದಿ , ಚಿಂತೆಯಿಲ್ಲದೆ ; ಕೂಡೆ – ಜೊತೆಗೆ ; ಆಗಣಿತ – ಲೆಕ್ಕವಿಲ್ಲದಷ್ಟು ; ಮೊರೆ – ಆರ್ತನಾದ , ಗೋಳಾಟ ; ಒಟ್ಟಲಿಗೆ – ರಾಶಿಗೆ , ಗುಂಪಿಗೆ ; ಲೀಲಾಮಾತ್ರ – ದೇವರು .

ಅ )ಒಂದು ಹೂ ಹೆಚ್ಚಿಗೆ ಇಡುತೀನಿ ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

2nd PUC Ondu Hoo Hechige Idutini question answers

1 ) ಮುದುಕ ಇರುವುದೆಲ್ಲಿ ?

ಮುದುಕ ಇರುವುದು ಅಸ್ಸಾಂನಲ್ಲಿ

2 ) ಮುದುಕಿಯ ಭಯಕ್ಕೆ ಕಾರಣವೇನು?

ರಿಂಗ್ ಆಗುತ್ತಿದ್ದ ಫೋನ್ ಎತ್ತಿದರೆ ಸೊಸೆ ಏನಾಂದಳೋ , ಮಗ ಎಲ್ಲಿ ಗದರುವನೋ ಎಂಬುದಾಗಿ ಮುದುಕಿ ಭಯಪಟ್ಟಳು

3 ) ಮುದುಕಿಯು ಏನೆಂದು ಹರಕೆ ಹೊತ್ತಳು ?

ಮುದುಕಿ ಒಂದು ಹೂ ಹೆಚ್ಚಾಗಿ ಇಡುತೀನಿ ನಿನ್ನ ಗಟ್ಟಿಪಾದಕ್ಕೆ ಎಂಬುದಾಗಿ ಹರಕೆ ಹೊತ್ತಳು .

4 ) ಮೊಮ್ಮಗಳು ಏನು ಮಾಡುತ್ತಿದ್ದಳು ?

ಮೊಮ್ಮಗಳು ಕಂಪ್ಯೂಟರ್‌ನಲ್ಲಿ ಆಡುತ್ತಿದ್ದಳು .

5 ) ಮುದುಕಿಗೆ ಯಾರಿಂದ ಫೋನ್ ಕರೆ ಬಂದಿತ್ತು ?

ಮುದುಕಿಗೆ , ಮುದುಕ ( ತನ್ನ ಪತಿಯಿಂದ ) ಫೋನ್ ಕರೆ ಬಂದಿತ್ತು .

6 ) ಮುದುಕಿಯು ಯಾವ ದೇವರಿಗೆ ಹರಕೆ ಹೊತ್ತಳು ?

ಮುದುಕಿಯು ಗುಟ್ಟೆಮಲ್ಲಪ್ಪನಿಗೆ ಹರಕೆ ಹೊತ್ತಳು .

ಆ )ಒಂದು ಹೂ ಹೆಚ್ಚಿಗೆ ಇಡುತೀನಿ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

Ondu Hoo Hechige Idutini Notes 2-3 sentence question answer

1 ) ಮುದುಕ ಏನೆಂದು ಗೋಗರೆಯುತ್ತಾನೆ ?

ಬೆಳಗಿನಿಂದ ರಾತ್ರಿಯವರೆಗೆ ತಾನೊಬ್ಬನೆ , ತನ್ನೊಡನೆ ಯಾರು ಮಾತನಾಡುವವರಿಲ್ಲ . ಮಾತು ಮರೆತಂತೆ ಆಗುತ್ತಿದೆ . ನೀನಾದರೂ ನನ್ನೊಡನೆ ಮಾತನಾಡು ಮಾತಾಡು ಮಾತು ಆಡುತ್ತಲೇ ಇರು ‘ ಎಂಬುದಾಗಿ ಮುದುಕ ಮುದುಕಿಯನ್ನು ಗೋಗರೆಯುತ್ತಾನೆ .

2 ) ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದ್ದೇಕೆ ?

ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದಳು . ಏಕೆಂದರೆ , ಎಲ್ಲರೂ ಹೊರಗೆ ಹೋಗಿದ್ದಾರೆ . ಸೊಸೆಯು ಹೊರಗಿನ ಕೆಲಸಕ್ಕೆ ಹೋದರೆ ಮುದುಕನ ( ತನ್ನ ಪತಿಯ ) ಬಳಿ ಸಾವಕಾಶವಾಗಿ ಮಾತಾಡಬಹುದೆಂದು ಮುದುಕಿ ಬಯಸಿದಳು .

3 ) ಮೊಮ್ಮಗಳ ಆತುರಕ್ಕೆ ಮುದುಕಿ ಏನೆಂದುಕೊಂಡಳು ?

ಮೊಮ್ಮಗಳ ಆತುರವನ್ನು ಕಂಡು ಮುದುಕಿಯು “ ಈ ಹುಡುಗಿ ಸರಿಯಾಗಿ ಕೇಳಿಸಿಕೊಂಡಳೋ , ಗಡಿಬಿಡಿಯಲ್ಲಿ ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗೆಂದಳೋ ” ಎಂದು ಯೋಚಿಸಿದಳು .

4 ) ಮುದುಕಿಯು ಯಾರನ್ನು ಏನೆಂದು ಪ್ರಾರ್ಥಿಸುವಳು ?

ಮುದುಕಿಯು ಗುಟ್ಟೆಮಲ್ಲಪ್ಪನಿಗೆ – ಸೊಸೆಯೊಬ್ಬಳಿಗೆ ಈ ಹೊತ್ತು ದೇವರೆ ಹೊರಗಿನ ಕೆಲಸ ಸಮ್ಮಿಸಲಿ , ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿ ಪಾದಕ್ಕೆ ಎಂದು ಪ್ರಾರ್ಥಿಸಿದಳು .

5 ) ಮುದುಕಿಯ ಜೀವ ಎಳೆಯುತ್ತಿರುವುದೇಕೆ ?

ಮುದುಕ ( ಮುದುಕಿಯ ಪತಿ ) ದೂರದ ಅಸ್ಸಾಂನಲ್ಲಿ ಕಿರಿಮಗನ ಜೊತೆಗಿದ್ದನು . ಮುದುಕಿ ಹಿರಿ ಮಗನ ಜೊತೆಗಿದ್ದಳು . ವೃದ್ಧಾಪ್ಯದಲ್ಲಿ ಒಬ್ಬರನ್ನೊಬ್ಬರು ಅಗಲಿ ಇರಬೇಕಾದ ಪರಿಸ್ಥಿತಿ ಉಂಟಾಗಿತ್ತು . ಯಾರು ಇಲ್ಲದ ಸಮಯದಲ್ಲಿ ಮಾತ್ರ ಇಬ್ಬರು ಸಾವಕಾಶವಾಗಿ ಫೋನಿನಲ್ಲಿ ಮಾತನಾಡಬಹುದಿತ್ತು . ಅದಕ್ಕಾಗಿ ಮುದುಕಿಯ ಜೀವ ಮುದುಕನ ಫೋನ್‌ಗಾಗಿ ಜೀವ ಎಳೆಯುತ್ತಿತ್ತು .

ಇ )ಒಂದು ಹೂ ಹೆಚ್ಚಿಗೆ ಇಡುತೀನಿ ಐದಾರು ವಾಕ್ಯದಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )

2nd puc chapter 10 ondu hoo hecchige iditini question answers

1 ) ಮುದುಕನ ಕುರಿತು ಮುದುಕಿಯ ನೆನಕೆಗಳೇನು ?

ಮುದುಕನನ್ನು ಕುರಿತು ಮುದುಕಿಗೆ ನೆನಪು ತುಂಬಾ ಕಾಡುತ್ತಿತ್ತು . ಮುದುಕಿ ಇರುವುದು ಕನ್ನಡ ದೇಶದಲ್ಲಿ , ಆದರೆ ಮುದುಕ ಇದ್ದುದು ಅಸ್ಸಾಂನಲ್ಲಿ , ಕಿರಿಯ ಮಗ ಸೊಸೆ ಬೆಳಿಗ್ಗೆ ಹೋದರೆ ಬರುತ್ತಿದ್ದುದ್ದು ರಾತ್ರಿ ಮಾತನಾಡುವವರು ಯಾರು ಇಲ್ಲ . ನೆರೆಹೊರೆಯವರ ಬಳಿ ಮಾತಾಡೋಣವೆಂದರೆ ಭಾಷೆ ಸ್ವಲ್ಪವೂ ತಿಳಿಯದು . ಫೋನು ಮಾಡಿದಾಗ ಮುದುಕ “ ಮಾತೆ ಮರೆತು ಹೋಗಿದೆ ಕಣೆ . ಮಾತಾಡು ಮಾತಾಡು . ಮಾತಾಡುತ್ತಿರು ನಿಲ್ಲಿಸಬೇಡ ಎಂದು ಗೋಗರೆಯುತ್ತಾನೆ ‘ ಈ ನೆನಪುಗಳು ಮುದುಕಿಗೆ ತಳಮಳವನ್ನುಂಟು ಮಾಡುತ್ತದೆ .

2 ) ವೃದ್ಧರ ತವಕ – ತಲ್ಲಣಗಳನ್ನು ಕವಯಿತ್ರಿ ಹೇಗೆ ಚಿತ್ರಿಸಿದ್ದಾರೆ ?

ವೃದ್ಧರ ತವಕ – ತಲ್ಲಣಗಳನ್ನು ಕವಯಿತ್ರಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ . ತನ್ನ ಜೀವನ ಸಂಗತಿಯಿಂದ ದೂರವಾಗಿ ಮಗನ ಆಶ್ರಯದಲ್ಲಿರುವ ಮುದುಕಿಯೊಬ್ಬಳ ತಳಮಳವನ್ನು ಈ ಕವಿತೆ ಚಿತ್ರಿಸಿದೆ . ಮತ್ತೊಬ್ಬ ಮಗನ ಬಳಿಯಿರುವ ಮುದುಕನ ಬಗೆಗೆ ಅವಳಲ್ಲಿ ಕಳಕಳಿ – ಚಿಂತೆಗಳು ತುಂಬಿವೆ . ಫೋನಿನ ಮೂಲಕ ಪರಸ್ಪರರ ದನಿ ಕೇಳಲು ಚಡಪಡಿಸುವ ಈ ಹಿರಿಯ ಜೀವಗಳು ಇಂದಿನ ಕೃತಕ ಸಂಬಂಧಗಳನ್ನು ಕುಟುಕುವಂತಿದೆ . ವೃದ್ಧರನ್ನು ಗೌರವ , ಪ್ರೀತಿ , ಆದರಗಳಿಂದ ಕಾಣುವ ಮನೋಭಾವ , ಕರ್ತವ್ಯಕಷ್ಟೇ ಸೀಮಿತವಾಗಿರುವುದನ್ನು ಈ ಕವಿತೆ ಹೃದ್ಯವಾಗಿ ನಿರೂಪಿಸಿದೆ .

3 ) ಮುದುಕಿಯ ತಳಮಳವು ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ ?

ಮುದುಕಿ , ತನ್ನ ಪತಿಗಾಗಿ ಹಂಬಲಿಸುತ್ತಾ ಫೋನಿನಲ್ಲಿ ಆತನೊಡನೆ ಮಾತನಾಡಬೇಕು . ಆತನ ಕ್ಷೇಮ ವಿಚಾರಿಸಬೇಕು ಎಂಬ ತವಕ . ಫೋನು ರಿಂಗಾದಾಗ ಎತ್ತಿದರೆ ಸೊಸೆ ಎನ್ನಬಹುದೋ ಮಗ ‘ ಎಷ್ಟು ಸಲ ಹೇಳುವುದು ನಿನಗೆ ? ‘ ಎಂದು ಗದರಬಹುದು . ಯಾರಾದರು ಬಂದು ಫೋನು ತೆಗೆದುಕೊಳ್ಳಬಾರದೆ ಎಂದು ಒಮ್ಮೆ ಕಿಚನ್ ಕಡೆಗೆ ಮತ್ತೊಮ್ಮೆ ಸ್ಟಡಿರೂಂ ಕಡೆಗೆ ನೋಡತೊಡಗಿದರು . ಯಾರು ಕಾಣದಿದ್ದಾಗ ಮಂಡಿನೋವು ಇದ್ದರೂ ಮೊಮ್ಮಗಳನ್ನು ಕೂಗಿದರೆ ರಾಂಗೆಂದಳೋ ಎಂದು ಹೀಗೆ ಮುದುಕನ ಬಳಿ ಮಾತಾಡಲು ಆಕೆ ತಳಮಳಗೊಳ್ಳುತ್ತಿದ್ದುದನ್ನು ಕವಯಿತ್ರಿ ಬಹಳ ಸೊಗಸಾಗಿ ವರ್ಣಿಸಿದ್ದಾರೆ .

3 ) ಮಗ , ಸೊಸೆ ಮತ್ತು ಮೊಮ್ಮಗಳು ಮುದುಕಿಯನ್ನು ಹೇಗೆ ನಡೆಸಿಕೊಳ್ಳುವರು ?

ಮಗ , ಸೊಸೆ ಮತ್ತು ಮೊಮ್ಮಗಳು ಮುದುಕಿಯನ್ನು ತಾಯಿ , ಅತ್ತೆ , ಅಜ್ಜಿ ಎಂಬ ಸಂಬಂಧವನ್ನು ಮರೆತು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿದ್ದರು . ಮುದುಕಿ ಹೇಳುವಂತೆ , ಸೊಸೆ ಏನೆನ್ನುವಳೋ , ಮಗ ಗದರಬಹುದು . ಇನ್ನು ಮೊಮ್ಮಗಳಿಗೆ ಗಡಿಬಿಡಿ , ರೈಟ್‌ನಂಬರನ್ನು ರಾಂಗ್ ಎಂದಳೇನೋ ಹೀಗೆ ಎಲ್ಲರೂ ಮುದುಕಿಯ ಬಗ್ಗೆ ತಾತ್ಸಾರ ತೋರುವವರೇ ಆಗಿದ್ದರು .

ಈ )ಒಂದು ಹೂ ಹೆಚ್ಚಿಗೆ ಇಡುತೀನಿ ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1 ) “ ಮಾತೇ ಮರೆತು ಹೋಗಿದೆ ಕಣೆ

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯ ವಾಕ್ಯವಿದು . ಇದನ್ನು ಮುದುಕ ಮುದುಕಿಗೆ ಹೇಳಿರುವುದಾಗಿದೆ . ದೂರದ ಅಸ್ಸಾಮಿನಲ್ಲಿ ಕಿರಿಮಗನ ಮನೆಯಲ್ಲಿರುವ ಆತನಿಗೆ ಒಂಟಿತನ ಕಾಡುತ್ತಿದೆ . ಗುಡ್ಡದ ಮೇಲಿರುವ ವಸತಿಗೃಹದಲ್ಲಿ ಆತ ಒಂಟಿಯಾಗಿದ್ದಾನೆ . ಮಗ – ಸೊಸೆ ಬೆಳಿಗ್ಗೆ ಕೆಲಸಕ್ಕೆ ಹೋದರೆ ಹಿಂದಿರುಗುವುದು ಕತ್ತಲಾದ ಮೇಲೆ , ಅಕ್ಕಪಕ್ಕದವರೊಂದಿಗೆ ಮಾತನಾಡಲು ಅಲ್ಲಿಯ ಭಾಷೆ ಬರುವುದಿಲ್ಲ . ಹೀಗಾಗಿ ಆತನಿಗೆ ಮಾತೇ ಮರೆತು ಹೋದಂತಾಗಿದೆ . ಇದನ್ನಾತ ಮುದುಕಿಗೆ ಕರೆ ಮಾಡಿದಾಗ ತಿಳಿಸಿದ್ದಾನೆ .

2 ) “ ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು “

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರು ರಚಿಸಿರುವ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಮುದುಕಿ ಇರುವುದು ಹಿರಿಯ ಮಗನ ಬಳಿ , ಸದ್ಯ ಅದು ಕನ್ನಡ ಪ್ರದೇಶ , ಆದರೆ ಮುದುಕ ಕಿರಿಮಗ ಸೊಸೆಯೊಂದಿಗೆ ದೂರದ ಅಸ್ಸಾಮಿನಲ್ಲಿದ್ದಾನೆ . ತಾನಾದರೂ ಇಲ್ಲಿ ಯಾರೂ ಮನೆಯಲ್ಲಿಲ್ಲದ್ದಾಗ ಅವರಿವರೊಂದಿಗೆ ಕನ್ನಡದಲ್ಲಿ ಮಾತನಾಡಿ ಬಾಯಿತುರಿಕೆ ತೀರಿಸಿಕೊಳ್ಳಬಹುದು . ಆದರೆ ಮುದುಕನಿಗೆ ಅಸ್ಸಾಮಿ ಭಾಷೆ ಸ್ವಲ್ಪವೂ ಬಾರದು . ಹೀಗಾಗಿ ಆತನಿಗೆ ಮಾತೇ ಮರೆತು ಹೋಗಿದೆ ಎಂದು ಮುದುಕಿಯೊಂದಿಗೆ ಹೇಳಿಕೊಂಡಿದ್ದನ್ನು ಮುದುಕಿಯು ನೆನಪಿಸಿಕೊಳ್ಳುವ ಸಂದರ್ಭವಿದಾಗಿದೆ .

3 ) “ ಇನ್ನೊಂದು ಸೇರ್ಪಡೆ ಆ ಲೀಲಾ ಮಾತ್ರನಿಗೆ ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯ ಕೊನೆಯ ವಾಕ್ಯವಿದು . ಇದನ್ನು ಕವಯಿತ್ರಿಯೇ ಅತ್ಯಂತ ವಿಷಾದದಿಂದ ಹೇಳಿದ್ದಾರೆ . ಮುದುಕನಿಂದ ಕರೆ ಬಂದ ಸಂದರ್ಭದಲ್ಲಿ ಮನೆಯವರೆಲ್ಲರೂ ಹೊರ ಹೊರಟರೆ ತಾನು ನಿರಾತಂಕವಾಗಿ ಮುದುಕನೊಂದಿಗೆ ಸ್ವಲ್ಪ ಹೊತ್ತು ಮಾತನಾಡಬಹು ದೆಂದು ಮುದುಕಿಯು ಯೋಚಿಸುತ್ತಾಳೆ . ಅವಳು ಇದುವರೆಗೆ ಸಲ್ಲಿಸಿರುವ ಇಂತಹ ಒಂದು ದೊಡ್ಡ ಗಂಟೆ ದೇವರ ಬಳಿ ಇರುವಾಗ ಈಗಿನ ಅವಳ ಪ್ರಾರ್ಥನೆಯು ಇನ್ನೊಂದು ಸೇರ್ಪಡೆ ಎಂದು ಕವಯಿತ್ರಿ ವಿಷಾದದಿಂದ ಹೇಳಿದ್ದಾರೆ .

4 ) “ ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗೆಂದಳೋ ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ಮುದುಕಿಯು ಫೋನ್ ರಿಸೀವ್ ಮಾಡುವಂತೆ ಮಹಡಿ ಮೇಲಿದ್ದ ಮೊಮ್ಮಗಳನ್ನು ಕಾಡುತ್ತಾಳೆ . ಕಂಪ್ಯೂಟರ್ ಪರದೆಯ ಮೇಲೆ ಮೂಜಗವನ್ನೇ ಆವಾಹಿಸಿ ಕೊಂಡು ಕುಳಿತಿದ್ದ ಆಕೆಗೆ ಆಜ್ಜಿಯ ಕಾಟದಿಂದ ಕಿರಿಕಿರಿಯಾಯಿತು . ಅವಳು ಧಡಧಡನೆ ಮೆಟ್ಟಲಿಳಿದು ಬಂದು , ಫೋನ್ ರಿಸೀವರನ್ನು ಎತ್ತಿ ಕುಕ್ಕಿ ‘ ರಾಂಗ್ ನಂಬರ್ ‘ ಎಂದು ಕ್ಷಣಾರ್ಧದಲ್ಲಿ ಮಾಯವಾದಳು . ಆಗ ಮುದುಕಿಯು ತನ್ನ ಮೊಮ್ಮಗಳು ಸರಿಯಾಗಿ ಕೇಳಿಸಿಕೊಂಡಳೋ ಅಥವಾ ಬಿಟ್ಟರೆ ಸಾಕೆಂದು ರೈಟನ್ನೇ ರಾಂಗೆಂದಳೋ ಎಂಬ ಅನುಮಾನ ಕಾಡುವ ಸಂದರ್ಭವಿದಾಗಿದೆ .

5 ) “ ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿಪಾದಕ್ಕೆ ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರ ‘ ಒಂದು ಹಣ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯ ವಾಕ್ಯವಿದು . ಇದು ಮುದುಕಿಯು ತನ್ನೊಳಗೇ ದೇವರಿಗೆ ಸಲ್ಲಿಸಿರುವ ಪ್ರಾರ್ಥನೆಯಾಗಿದೆ .ಮುದುಕನಿಂದ ಕರೆ ಬಂದ ಸಮಯದಲ್ಲೇ ಮಗನ ಕಾರು , ಮೊಮ್ಮಗಳ ಸ್ಕೂಟಿ ಹೊರಟ ಸದ್ದು ಕೇಳಿದೆ . ಮೊಮ್ಮಗ ಸ್ಕೂಲಿಗೆ ಹೋಗುವ ವ್ಯಾನೂ ಬಂದಾಯಿತು . ಇನ್ನಿರುವ ಅಡ್ಡಿಯೆಂದರೆ ಸೊಸೆ . ಅವಳಿಗೂ ಹೊರಗಡೆಯ ಕೆಲಸ ಸಮ್ಮಿಲಿಸಿದರೆ ತಾನು ಮುದುಕನೊಂದಿಗೆ ಸ್ವಲ್ಪ ಹೊತ್ತು ನಿರಾಳವಾಗಿ ಮಾತನಾಡಿಕೊಳ್ಳಬಹುದು . ಇದಕ್ಕೆ ಅವಕಾಶ ಮಾಡಿಕೊಟ್ಟರೆ ತನ್ನ ಮನೆದೇವರಾದ ಗುಟೆಮಲ್ಲಪ್ಪನಿಗೆ ಒಂದು ಹೂ ಹೆಚ್ಚಿಗೆ ಇಡುವುದಾಗಿ ಮುದುಕಿಯು ಸಲ್ಲಿಸುವ ಪ್ರಾರ್ಥನೆಯಾಗಿದೆ .

6 ) “ ಎಷ್ಟುಸಲವಮ್ಮ ಹೇಳುವುದು ನಿನಗೆ ? ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮುದುಕಿಯ ಮಗ ಈ ಮೇಲಿನಂತೆ ಗದರಬಹುದೆಂದು ತನ್ನೊಳಗೆ ಯೋಚಿಸುತ್ತಾಳೆ . ಫೋನು ಝಣಗುಡುತ್ತಿದೆ . ಅದು ಮುದುಕನದಾಗಿರಬಹುದೆಂದು ಭಾವಿಸಿದ ಮುದುಕಿ ಯಾರೂ ಬರದಿದ್ದಾಗ ತಾನೇ ಎತ್ತಿಕೊಳ್ಳಲು ಹಿಂಜರಿಯುತ್ತಾಳೆ . ಫೋನ್ ಮುಟ್ಟಿದರೆ ಸೊಸೆ ಕೋಪಿಸಿಕೊಳ್ಳಬಹುದು , ಮಗ ಎಷ್ಟು ಸಲವಮ್ಮ ಹೇಳುವುದೆಂದು ಗದರಬಹುದೆಂಬ ಭಯ ಆಕೆಯದು . ಹಿಂದೆ ಗದರಿರುವ ಅನುಭವಗಳು ಈಗ ಈ ರೀತಿ ಯೋಚಿಸುವಂತೆ ಮಾಡಿದೆ . ಅವಲಂಬಿತಳಾಗಿರುವ ಆಕೆಗೆ ಮಗನ ಮನೆಯಲ್ಲಿ ಸ್ವಾತಂತ್ರ್ಯವೇ ಇಲ್ಲ . ಮಗನ ಬಗ್ಗೆ ಭಯದಿಂದಲೇ ವರ್ತಿಸಬೇಕಾದ ಸ್ಥಿತಿ ಮುದುಕಿಯದು .

2nd puc kannada notes

Sahitya Sampada Kavya Bhaga
(ಸಾಹಿತ್ಯ ಸಂಪದ ಕಾವ್ಯ ಭಾಗ)
NPoem nameDownload
1ಕದಡಿದ ಸಲಿಲಂ ತಿಳಿವಂದದೆclick here
2ವಚನಗಳು (ಬಸವಣ್ಣನವರ ವಚನಗಳು) (ಉರಿಲಿಂಗಪೆದ್ದಿಯ ವಚನಗಳು)click here
3ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲುclick here
4ಪಗೆಯಂ ಬಾಲಕನೆಂಬರೇclick here
5ಜಾಲಿಯ ಮರದಂತೆclick here
6ಹಬ್ಬಲಿ ಅವರ ರಸಬಳ್ಳಿclick here
7ಬೆಳಗು ಜಾವclick here
8ಮುಂಬೈ ಜಾತಕclick here
9ಶಿಲುಬೆ ಏರಿದ್ದಾನೆclick here
10ಒಂದು ಹೂ ಹೆಚ್ಚಿಗೆ ಇಡುತೀನಿclick here
11ಹತ್ತಿ..ಚಿತ್ತ.. ಮತ್ತು..click here
12ಒಮ್ಮೆ ನಗುತ್ತೇವೆclick here
Sahitya Sampada Gadya Bhaga
(ಸಾಹಿತ್ಯ ಸಂಪದ ಗಧ್ಯ ಭಾಗ)
Nchapter nameDownload
1ಮುಟ್ಟಿಸಿಕೊಂಡವನುclick here
2ವಾಲ್‌ಪರೈ: ಅಭಿವೃದ್ಧಿ ತಂದ ದುರಂತclick here
3ಆಯ್ಕೆಯಿದೆ ನಮ್ಮ ಕೈಯಲ್ಲಿclick here
4ಕನ್ನಡವನ್ನು ಕಟ್ಟುವ ಕೆಲಸclick here
5ಧಣಿಗಳ ಬೆಳ್ಳಿಲೋಟclick here
6ಬದುಕನ್ನು ಪ್ರೀತಿಸಿದ ಸಂತclick here
7ತಿರುಳ್ಗನ್ನಡದ ಬೆಳ್ನುಡಿclick here
8ಹಳ್ಳಿಯ ಚಹಾ ಹೋಟೇಲುಗಳುclick here
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment