WhatsApp Group         Join Now
Telegram Group Join Now

Police Constable Civil(06-11-2016) Previous question paper

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ


1.ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ ಭಾರತದ ಪ್ರಥಮ ಮಹಿಳೆ
 (ಎ)ರಾಜಕುಮಾರಿ ಅಮೃತ್ ಕೌರ್
 (ಬಿ)ವಿಜಯಲಕ್ಷ್ಮಿ ಪಂಡಿತ್
 (ಸಿ)ಅರುಣಾ ಅಶ್ರಫ್ ಅಲಿ
 (ಡಿ)ಸರೋಜಿನಿ ನಾಯ್ಡು

CORRECT ANSWER

(ಡಿ) ಸರೋಜಿನಿ ನಾಯ್ಡು


2.ಫ್ರಾನ್ಸ್ ಕ್ರಾಂತಿ ನಡೆದ ವರ್ಷ
 (ಎ)1776
 (ಬಿ)1778
 (ಸಿ)1789
 (ಡಿ)1792
CORRECT ANSWER

(ಸಿ) 1789


3.ಚಕ್ರವರ್ತಿ ಅಕ್ಬರ್‌ನ ಕಂದಾಯ ಮಂತ್ರಿಯಾಗಿದ್ದವನು
 (ಎ)ರಾಜಾ ತೋದರಮಲ್ಲ
 (ಬಿ)ರಾಜಾ ಬೀರ್‌ಬಲ್‌
 (ಸಿ)ಮಾನ್ ಸಿಂಗ್
 (ಡಿ)ಅಬುಲ್ ಫಜಲ್
CORRECT ANSWER

(ಎ) ರಾಜಾ ತೋದರಮಲ್ಲ


4.ಮಹಾತ್ಮಾ ಗಾಂಧೀಜಿಯವರು _________ ಎಂಬ ಸ್ಥಳದಲ್ಲಿ ಜನಿಸಿದರು.
 (ಎ)ಅಲಹಾಬಾದ್
 (ಬಿ)ಜುನಾಗಡ್
 (ಸಿ)ಪೋರಬಂದರ್
 (ಡಿ)ಸೂರತ್
CORRECT ANSWER

(ಸಿ) ಪೋರಬಂದರ್


5.ಲಂಡನ್‌ನಲ್ಲಿ ಜರುಗಿದ ಮೊದಲನೇ ದುಂಡುಮೇಜಿನ ಪರಿಷತ್ತು ನಡೆದ ವರ್ಷ
 (ಎ)1929
 (ಬಿ)1930
 (ಸಿ)1931
 (ಡಿ)1932
CORRECT ANSWER

(ಬಿ) 1930


6.ಒಲಿಂಪಿಕ್ಸ್‌ನಲ್ಲಿ ವೈಯುಕ್ತಿಕ ಚಿನ್ನದ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟು ಯಾರು?
 (ಎ)ಕರ್ಣಂ ಮಲ್ಲೇಶ್ವರಿ
 (ಬಿ)ರಾಜವರ್ಧನ್ ಸಿಂಗ್
 (ಸಿ)ಅಭಿನವ ಬಿಂದ್ರಾ
 (ಡಿ)ಪಿ.ಟಿ. ಉಷಾ
CORRECT ANSWER

(ಸಿ) ಅಭಿನವ ಬಿಂದ್ರಾ


7.ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲನೆಯ ಸಂಗೀತ ನಿರ್ದೆಶಕ
 (ಎ)ಆರ್.ಡಿ. ಬರ್ಮನ್
 (ಬಿ)ನೌಷದ್
 (ಸಿ)ಎ.ಆರ್. ರೆಹಮಾನ್
 (ಡಿ)ಓ.ಪಿ. ನಯ್ಯರ್
CORRECT ANSWER

(ಸಿ) ಎ.ಆರ್. ರೆಹಮಾನ್


8.ನೋಬೆಲ್ ಪ್ರಶಸ್ತಿ ಪಡೆದ ಮೊದಲನೆಯ ಭಾರತೀಯ ಯಾರು ?
 (ಎ)ಹೆಚ್. ಜಿ. ಖುರಾನ
 (ಬಿ)ಸಿ. ವಿ. ರಾಮನ್
 (ಸಿ)ಅಮರ್ತ್ಯ ಸೇನ್
 (ಡಿ)ರವೀಂದ್ರನಾಥ ಟ್ಯಾಗೋರ್
CORRECT ANSWER

(ಡಿ) ರವೀಂದ್ರನಾಥ ಟ್ಯಾಗೋರ್


9.‘ಕುಸುಮಬಾಲೆ’ ಇದರ ಲೇಖಕರು ಯಾರು?
 (ಎ)ಯು.ಆರ್. ಅನಂತಮೂರ್ತಿ
 (ಬಿ)ಗಿರೀಶ್ ಕಾರ್ನಾಡ್
 (ಸಿ)ಕುವೆಂಪು
 (ಡಿ)ದೇವನೂರು ಮಹಾದೇವ
CORRECT ANSWER

(ಡಿ) ದೇವನೂರು ಮಹಾದೇವ


10.ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಇರುವ ಸ್ಥಳ
 (ಎ)ಮೈಸೂರು
 (ಬಿ)ಬೆಳಗಾವಿ
 (ಸಿ)ತುಮಕೂರು
 (ಡಿ)ಬೆಂಗಳೂರು
CORRECT ANSWER

(ಎ) ಮೈಸೂರು


11.ಪ್ರಸಿದ್ದ ಕೊನಾರ್ಕ್ ದೇವಸ್ಥಾನವು _________ ನಿಂದ ನಿರ್ಮಿಸಲ್ಪಟ್ಟಿತು.
 (ಎ)ಒಂದನೇ ನರಸಿಂಹದೇವ
 (ಬಿ)ಒಂದನೇ ಆರ್ಯಭೀಮ ದೇವ
 (ಸಿ)ಕೊಂಕಣಿ ವರ್ಮ
 (ಡಿ)ಬಲ್ಲಾಳ ದೇವ
CORRECT ANSWER

(ಎ) ಒಂದನೇ ನರಸಿಂಹದೇವ


12.ಕದಂಬ ರಾಜವಂಶವು _________ನಿಂದ ಸಂಸ್ಥಾಪಿಸಲ್ಪಟ್ಟಿತು.
 (ಎ)ನರಸಿಂಹವರ್ಮ
 (ಬಿ)ಮಯೂರಶರ್ಮ
 (ಸಿ)ಕಾಕುಷ್ಟ ವರ್ಮ
 (ಡಿ)ಪುಲಕೇಶಿ-I (ಒಂದನೇ ಪುಲಕೇಶಿ)
CORRECT ANSWER

(ಬಿ) ಮಯೂರಶರ್ಮ


13.ನಾಲ್ಕನೇ ಮೈಸೂರು ಯುದ್ಧ ನಡೆದ ವರ್ಷ
 (ಎ)1779
 (ಬಿ)1792
 (ಸಿ)1799
 (ಡಿ)1802

CORRECT ANSWER

(ಸಿ) 1799


14.ಕೆಳಗಿನವುಗಳಲ್ಲಿ ಯಾವುದು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಕಾರಣವಾಯಿತು ?
 (ಎ)ಶಸ್ತ್ರಾಸ್ತ್ರಕಾಯ್ದೆ
 (ಬಿ)ರೌಲತ್ ಕಾಯ್ದೆ
 (ಸಿ)ದೇಶೀಯ ಪತ್ರಿಕೆಗಳ ಕಾಯ್ದೆ
 (ಡಿ)ರೆಗ್ಯುಲೇಟಿಂಗ್ ಕಾಯ್ದೆ
CORRECT ANSWER

(ಬಿ) ರೌಲತ್ ಕಾಯ್ದೆ


15.ಸತ್ಯಶೋಧಕ ಸಮಾಜದ ಸಂಸ್ಥಾಪಕರು
 (ಎ)ಆತ್ಮಾರಾಮ್
 (ಬಿ)ದೇಶಮುಖ್
 (ಸಿ)ರಾನಡೆ
 (ಡಿ)ಜ್ಯೋತಿಬಾ ಫುಲೆ
CORRECT ANSWER

(ಡಿ) ಜ್ಯೋತಿಬಾ ಫುಲೆ


16.ಒಂದು ಪರಿಸರ ವ್ಯವಸ್ಥೆಯಶಕ್ತಿ ಮೂಲವು _________ ಆಗಿದೆ.
 (ಎ)ಎ.ಟಿ.ಪಿ.
 (ಬಿ)ಸೂರ್ಯ ನ ಬೆಳಕು
 (ಸಿ)ಡಿ.ಎನ್.ಎ.
 (ಡಿ)ಆರ್.ಎನ್.ಎ.
CORRECT ANSWER

(ಬಿ) ಸೂರ್ಯ ನ ಬೆಳಕು


17.ಒಂದು ‘ಪಿಕ್ಸೆಲ್’ ಎಂದರೆ
 (ಎ)ಗಣಕಯಂತ್ರದ ಕಾರ್ಯಕ್ರಮ
 (ಬಿ)ಉಪಸ್ಮೃತಿ ಘಟಕದಲ್ಲಿ ಶೇಖರಣೆಯಾಗಿರುವ ಒಂದು ಚಿತ್ರ
 (ಸಿ)ಒಂದು ಚಿತ್ರದ ನಿರ್ಧರಿಸಬಹುದಾದಂತಹ ಅತ್ಯಂತ ಸಣ್ಣ ಭಾಗ
 (ಡಿ)ಮೇಲಿನ ಯಾವುದೂ ಅಲ್ಲ
CORRECT ANSWER

(ಸಿ) ಒಂದು ಚಿತ್ರದ ನಿರ್ಧರಿಸಬಹುದಾದಂತಹ ಅತ್ಯಂತ ಸಣ್ಣ ಭಾಗ


18.ಕಾಲುಬಾಯಿ ರೋಗವು ಇವುಗಳಲ್ಲಿ ಕಂಡುಬರುತ್ತದೆ
 (ಎ)ಬೆಕ್ಕು ಮತ್ತು ನಾಯಿ
 (ಬಿ)ಜಾನುವಾರುಗಳು
 (ಸಿ)ಕೋಳಿಗಳು
 (ಡಿ)ಮನುಷ್ಯರು
CORRECT ANSWER

(ಬಿ) ಜಾನುವಾರುಗಳು


19.ವಿಶ್ವನಾಥನ್ ಆನಂದ್ ಇವರು_________ ಕ್ರೀಡೆಗೆ ಸಂಬಂಧಪಟ್ಟಿರುತ್ತಾರೆ.
 (ಎ)ಫುಟ್‌ಬಾಲ್‌
 (ಬಿ)ಕ್ರಿಕೆಟ್
 (ಸಿ)ಚೆಸ್
 (ಡಿ)ಮೇಲಿನವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಸಿ) ಚೆಸ್


20.ಮಾನವ ದೇಹದ ಅತ್ಯಂತ ದೊಡ್ಡ ಗ್ರಂಥಿ _________ ಆಗಿದೆ.
 (ಎ)ಯಕೃತ್
 (ಬಿ)ಮೇದೋಜೀರಕ ಗ್ರಂಥಿ
 (ಸಿ)ಥೈರಾಯಿಡ್ ಗ್ರಂಥಿ
 (ಡಿ)ಮೂತ್ರಕೋಶ
CORRECT ANSWER

(ಎ) ಯಕೃತ್


21.2, 5, 8, 11, 14 _________ ಈ ಸಂಖ್ಯೆಯ ಶ್ರೇಣಿಯಲ್ಲಿ ಮುಂದಿನ ಸಂಖ್ಯೆಯನ್ನು ಭರ್ತಿ ಮಾಡಿ.
 (ಎ)18
 (ಬಿ)17
 (ಸಿ)19
 (ಡಿ)16
CORRECT ANSWER

(ಬಿ) 17


22.ಒಬ್ಬ ಆಯಾಸಗೊಂಡಿದ್ದ ಪೊಲೀಸ್ ಅಧಿಕಾರಿಯು ಒಂದು ದಿನ ರಾತ್ರಿ 10.00 ಗಂಟೆಗೆ ನಿದ್ರೆ ಹೋಗುತ್ತಾನೆ. ನಿದ್ರೆ ಹೋಗುವುದಕ್ಕೆ ಮುಂಚೆ ಮಾರನೇ ದಿನ ನಡು ಮಧ್ಯಾಹ್ನಕ್ಕೆ ಅಲಾರಂ ಇಟ್ಟಿರುತ್ತಾನೆ. ಅಲಾರಂ ಅವನನ್ನು ಎಚ್ಚರಿಸಿದಾಗ, ಅವನು ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಿರುತ್ತಾನೆ?
 (ಎ)14
 (ಬಿ)12
 (ಸಿ)11
 (ಡಿ)4
CORRECT ANSWER

(ಎ) 14


23.ಒಂದು ರಸ್ತೆ ಪಕ್ಕದ ರೆಸ್ಟೋರೆಂಟ್‌ನಿಂದ ಮಧ್ಯಾಹ್ನ 1 ಗಂಟೆಗೆ ಎರಡು ಕಾರುಗಳು ಹೊರಡುತ್ತವೆ. ಅವುಗಳಲ್ಲಿ ಒಂದು ಕಾರು ಗಂಟೆಗೆ 60 ಕಿ.ಮೀ. ವೇಗದಲ್ಲಿ ಪೂರ್ವ ದಿಕ್ಕಿಗೆ ಮತ್ತು ಇನ್ನೊಂದು ಕಾರು ಗಂಟೆಗೆ 40 ಕಿ.ಮೀ. ವೇಗದಲ್ಲಿ ಪಶ್ಚಿಮ ದಿಕ್ಕಿಗೆ, ಒಂದು ನೇರವಾದ ಹೆದ್ದಾರಿಯಲ್ಲಿ ಚಲಿಸುತ್ತವೆ. ಯಾವ ಸಮಯದಲ್ಲಿ ಎರಡೂ ಕಾರುಗಳು ಒಂದಕ್ಕೊಂದು 350 ಕಿ.ಮೀ. ಅಂತರದಲ್ಲಿರುತ್ತವೆ?
 (ಎ)4.30 ಮಧ್ಯಾಹ್ನ
 (ಬಿ)2.30 ಮಧ್ಯಾಹ್ನ
 (ಸಿ)3.30 ಮಧ್ಯಾಹ್ನ
 (ಡಿ)5.30 ಮಧ್ಯಾಹ್ನ
CORRECT ANSWER

(ಎ) 4.30 ಮಧ್ಯಾಹ್ನ


24.ಒಬ್ಬ ವ್ಯಾಪಾರಿಯು 1960, 1965 ಮತ್ತು 1970ರ ವರ್ಷಗಳ ಅಂತ್ಯದಲ್ಲಿ ಪ್ರತಿ ಬಾರಿ ತಲಾ 5,000 ರೂ. ಗಳಂತೆ ಹಣ ತೊಡಗಿಸುತ್ತಾನೆ. ಅವನ ಒಟ್ಟು ಹಣವು ಪ್ರತಿ ಐದು ವರ್ಷಕ್ಕೆ ದ್ವಿಗುಣಗೊಳ್ಳುತ್ತದೆ. ವ್ಯಾಪಾರಿಯು ರೂ. 5,000 ಗಳೊಂದಿಗೆ 1960ರಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದರೆ, 1980ರಲ್ಲಿ ಹಣದ ಮೊತ್ತ ಎಷ್ಟಾಗುತ್ತದೆ?
 (ಎ)ರೂ. 70,000/-
 (ಬಿ)ರೂ.1,40,000/-
 (ಸಿ)ರೂ. 2,40,000/-
 (ಡಿ)ರೂ.2,80,000/-
CORRECT ANSWER

(ಬಿ) ರೂ.1,40,000/-


25.ಎಲ್.ಸಿ.ಡಿ. ಎಂದರೆ
 (ಎ)ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ
 (ಬಿ)ಲೈಟ್ ಕಾಂಪ್ಯಾಕ್ಟ್ ಡಿಸ್‌ಪ್ಲೇ
 (ಸಿ)ಲಿಸರ್ಜಿಕ್ ಕಾಂಪ್ಯಾಕ್ಟ್ ಡೈಯೋಡ್
 (ಡಿ)ಲಾಂಗ್ ಚೈನ್ ಡಿವೈಸ್
CORRECT ANSWER

(ಎ) ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ


26.180 ಮೀಟರ್ ಉದ್ದದ ಒಂದು ರೈಲು ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. 120 ಮೀಟರ್ ಉದ್ದದ ಒಂದು ಸುರಂಗವನ್ನು ದಾಟಲು ರೈಲಿಗೆ ಬೇಕಾಗುವ ಸಮಯ
 (ಎ)20 ಸೆಕೆಂಡುಗಳು
 (ಬಿ)12 ಸೆಕೆಂಡುಗಳು
 (ಸಿ)15 ಸೆಕೆಂಡುಗಳು
 (ಡಿ)125 ಸೆಕೆಂಡುಗಳು
CORRECT ANSWER

(ಬಿ) 12 ಸೆಕೆಂಡುಗಳು


27.BAT = 23 ಮತ್ತು CAT = 24, ಆದರೆ BALL=
 (ಎ)27
 (ಬಿ)28
 (ಸಿ)32
 (ಡಿ)120
CORRECT ANSWER

(ಎ) 27


28.ಹಿತ್ತಾಳೆಯು ಇವುಗಳ ಮಿಶ್ರ ಲೋಹವಾಗಿದೆ
 (ಎ)ತಾಮ್ರ ಮತ್ತು ಸತು
 (ಬಿ)ತಾಮ್ರ ಮತ್ತು ಸೀಸ
 (ಸಿ)ತಾಮ್ರ ಮತ್ತು ತವರ
 (ಡಿ)ತಾಮ್ರ ಮತ್ತು ನಿಕ್ಕಲ್
CORRECT ANSWER

(ಎ) ತಾಮ್ರ ಮತ್ತು ಸತು


29.ನಕ್ಷತ್ರದಲ್ಲಿನ ಶಕ್ತಿಯ ಮೂಲ
 (ಎ)ಪರಮಾಣು ಸಮ್ಮೇಳನ
 (ಬಿ)ಪರಮಾಣು ವಿದಳನ
 (ಸಿ)ಪರಮಾಣು ವಿಭಜನೆ
 (ಡಿ)ಗುರುತ್ವಾಕರ್ಷಕ ಕುಸಿತ
CORRECT ANSWER

(ಎ) ಪರಮಾಣು ಸಮ್ಮೇಳನ


30.‘‘ಸುಕ್ರೋಸ್’’ನ ಅಣುಸೂತ್ರವು _________ ಆಗಿದೆ.
 (ಎ)C2H5OHC2H5OH
 (ಬಿ)C12H22O11C12H22O11
 (ಸಿ)C6H12O6C6H12O6
 (ಡಿ)CH3OHCH3OH
CORRECT ANSWER

(ಬಿ) C12H22O11C12H22O11


31.ಕರ್ನಾಟಕ ವಿಧಾನಸಭೆಯ ಸ್ಪೀಕರ್‌ರವರು ಯಾರು?
 (ಎ)ಶ್ರೀ ಕಾಗೋಡು ತಿಮ್ಮಪ್ಪ
 (ಬಿ)ಶ್ರೀ ಬಿ.ಎಲ್. ಶಂಕರ್
 (ಸಿ)ಶ್ರೀ ಡಿ.ಹೆಚ್. ಶಂಕರ ಮೂರ್ತಿ
 (ಡಿ)ಶ್ರೀ ಕೆ.ಬಿ. ಕೋಳಿವಾಡ
CORRECT ANSWER

(ಡಿ) ಶ್ರೀ ಕೆ.ಬಿ. ಕೋಳಿವಾಡ


32.ಕರ್ನಾಟಕ ಪ್ರಥಮ ವಿಶ್ವವಿದ್ಯಾಲಯವು
 (ಎ)ಬೆಂಗಳೂರು
 (ಬಿ)ಹಂಪಿ
 (ಸಿ)ಮೈಸೂರು
 (ಡಿ)ಶಿವಮೊಗ್ಗ
CORRECT ANSWER

(ಸಿ) ಮೈಸೂರು


33.‘‘ಉದಯವಾಗಲಿ ಚೆಲುವ ಕನ್ನಡ ನಾಡು’’ ಗೀತೆ ಕರ್ತೃ ಯಾರು ?
 (ಎ)ಕುವೆಂಪು
 (ಬಿ)ರವೀಂದ್ರನಾಥ ಟಾಗೋರ್
 (ಸಿ)ಹುಯಿಲಗೋಳ ನಾರಾಯಣ ರಾವ್
 (ಡಿ)ಚೆನ್ನವೀರ ಕಣವಿ
CORRECT ANSWER

(ಸಿ) ಹುಯಿಲಗೋಳ ನಾರಾಯಣ ರಾವ್


34.ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ನಂದಿ ಬೆಟ್ಟ ಅಸ್ತಿತ್ವದಲ್ಲಿರುತ್ತದೆ ?
 (ಎ)ಮೈಸೂರು
 (ಬಿ)ಚಿಕ್ಕಬಳ್ಳಾಪುರ
 (ಸಿ)ಚಿತ್ರದುರ್ಗ
 (ಡಿ)ಕೊಪ್ಪಳ
CORRECT ANSWER

(ಬಿ) ಚಿಕ್ಕಬಳ್ಳಾಪುರ


35.ಸಾಕಾ ಎರಾ ಪ್ರಾರಂಭವಾಗಿದ್ದು
 (ಎ)78 ಬಿ.ಸಿ.
 (ಬಿ)ಎ.ಡಿ. 78
 (ಸಿ)300 ಬಿ.ಸಿ.
 (ಡಿ)ಎ.ಡಿ.124
CORRECT ANSWER

(ಬಿ) ಎ.ಡಿ. 78


36.‘A’ನು ‘B’ಯ ಎರಡರಷ್ಟು ಉತ್ತಮ ಕೆಲಸಗಾರನಾಗಿದ್ದು, ಇವರಿಬ್ಬರೂ ಜೊತೆಯಾಗಿ ಒಂದು ಕೆಲಸವನ್ನು 18 ದಿನಗಳಲ್ಲಿ ಮುಕ್ತಾಯ ಮಾಡುತ್ತಾರೆ. ‘A’ ಒಬ್ಬನೇ ಎಷ್ಟು ದಿನಗಳಲ್ಲಿ ಆ ಕೆಲಸವನ್ನು ಮಾಡುತ್ತಾನೆ?
 (ಎ)31 ದಿನಗಳು
 (ಬಿ)25 ದಿನಗಳು
 (ಸಿ)27 ದಿನಗಳು
 (ಡಿ)29 ದಿನಗಳು
CORRECT ANSWER

(ಸಿ) 27 ದಿನಗಳು


37.ಅನಿಲನು ತನ್ನ ಮನೆಯಿಂದ ಪೂರ್ವ ದಿಕ್ಕಿಗೆ 6 ಕಿ.ಮೀ. ಪ್ರಯಾಣಮಾಡಿದನತರ ತಪ್ಪು ದಿಕ್ಕಿನಲ್ಲಿ ಪ್ರಯಾಣಿಸುತ್ತಿರುವುದು ಆತನಿಗೆ ಮನವರಿಕೆಯಾಗಿ ಹಿಂದಕ್ಕೆ ತಿರುಗಿ ಪಶ್ಚಿಮ ದಿಕ್ಕಿಗೆ 12 ಕಿ.ಮೀ. ಪ್ರಯಾಣಿಸುತ್ತಾನೆ. ಆನಂತರ ಬಲಕ್ಕೆ ತಿರುಗಿ 8 ಕಿ.ಮೀ. ಪ್ರಯಾಣಿಸಿ ಆತನ ಕಛೇರಿಯನ್ನು ತಲುಪುತ್ತಾನೆ. ಆತನ ಮನೆಯಿಂದ ಆತನ ಕಛೇರಿಗೆ ಇರುವ ನೇರ ಅಂತರ
 (ಎ)12 ಕಿ.ಮೀ.
 (ಬಿ)14 ಕಿ.ಮೀ.
 (ಸಿ)10 ಕಿ.ಮೀ.
 (ಡಿ)20 ಕಿ.ಮೀ.
CORRECT ANSWER

(ಸಿ) 10 ಕಿ.ಮೀ.


38.ಒಬ್ಬ ಅಂಗಡಿ ಮಾಲಿಕನು ಒಂದು ಡಜನ್‌ಗೆ ರೂ. 34/- ರಂತೆ ಬೀಗಗಳನ್ನು ಕೊಂಡುಕೊಳ್ಳುತ್ತಾನೆ ಹಾಗೂ ಡಜನ್‌ಗೆ ರೂ. 52/- ರಂತೆ ಅವುಗಳನ್ನು ಮಾರಾಟ ಮಾಡುತ್ತಾನೆ. ರೂ. 900/- ನ್ನು ಗಳಿಸಲು ಅವನು ಎಷ್ಟು ಬೀಗಗಳನ್ನು ಮಾರಾಟ ಮಾಡಬೇಕಾಗುತ್ತದೆ ?
 (ಎ)1,400
 (ಬಿ)600
 (ಸಿ)1,800
 (ಡಿ)2,000
CORRECT ANSWER

(ಬಿ) 600


39.ಒಂದು ಉದ್ಯಾನವನದಲ್ಲಿ ಗುಲಾಬಿ ಹೂಗಿಡಗಳು ಮತ್ತು ಸೂರ್ಯಕಾಂತಿ ಗಿಡಗಳ ಸಂಖ್ಯೆ 3:5ರ ಅನುಪಾತದಲ್ಲಿರುತ್ತದೆ. ಉದ್ಯಾನವನದಲ್ಲಿರುವ ಸೂರ್ಯಕಾಂತಿ ಗಿಡಗಳ ಸಂಖ್ಯೆ 25 ಆದರೆ, ಅಲ್ಲಿನ ಗುಲಾಬಿ ಹೂ ಗಿಡಗಳ ಸಂಖ್ಯೆ ಎಷ್ಟು?
 (ಎ)14
 (ಬಿ)12
 (ಸಿ)15
 (ಡಿ)10
CORRECT ANSWER

(ಸಿ) 15


40.ರೂ. 680ಗಳನ್ನು A, B, C ಇವರುಗಳ ನಡುವೆ ‘‘B’’ನು ಪಡೆಯುವುದರ ⅔ ರಷ್ಟನ್ನು ‘‘A’’ನು ಪಡೆಯುವಂತೆ ‘‘C’’ನು ಪಡೆಯುವುದರ ¼ ರಷ್ಟನ್ನು ‘‘B’’ನು ಪಡೆಯುವಂತೆ ವಿಭಾಗ ಮಾಡಲಾಗಿದೆ. ಅವರ ಪಾಲುಗಳು ಕ್ರಮವಾಗಿ
 (ಎ)ರೂ. 75, ರೂ. 325, ರೂ. 280
 (ಬಿ)ರೂ.80, ರೂ. 120, ರೂ.480
 (ಸಿ)ರೂ. 90, ರೂ. 210, ರೂ. 380
 (ಡಿ)ರೂ. 100, ರೂ. 200, ರೂ. 380
CORRECT ANSWER

(ಬಿ) ರೂ.80, ರೂ. 120, ರೂ.480


41.ಯಾವ ಸಲಕರಣೆಯಿಂದ ಗಾಳಿಯ ಒತ್ತಡವನ್ನು ಅಳೆಯುತ್ತಾರೆ?
 (ಎ)ಹೈಡ್ರೋ ಮೀಟರ್
 (ಬಿ)ಹೈಗ್ರೊ ಮೀಟರ್
 (ಸಿ)ಬ್ಯಾರೊ ಮೀಟರ್
 (ಡಿ)ಅಲ್ಟೋ ಮೀಟರ್
CORRECT ANSWER

(ಸಿ) ಬ್ಯಾರೋಮೀಟರ್


42.ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆ ಎಂದರೆ
 (ಎ)ಇನ್ಸ್‌ಪೆಕ್ಟರ್‌ ಜನರಲ್ ಆಫ್ ಪೊಲೀಸ್
 (ಬಿ)ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್
 (ಸಿ)ಡೈರೆಕ್ಟರ್ ಜನರಲ್ ಆಫ್ ಪೊಲೀಸ್
 (ಡಿ)ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್‌ ಜನರಲ್ ಆಫ್ ಪೊಲೀಸ್
CORRECT ANSWER

(ಡಿ) ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್‌ ಜನರಲ್ ಆಫ್ ಪೊಲೀಸ್


43.‘ಕುದುರೆಮುಖ’ ಯಾವುದಕ್ಕೆ ಪ್ರಸಿದ್ದಿಯಾಗಿದೆ?
 (ಎ)ಮ್ಯಾಂಗನೀಜ್ ಅದಿರು
 (ಬಿ)ಕಬ್ಬಿಣದ ಅದಿರು
 (ಸಿ)ಅಲ್ಯುಮಿನಿಯಂ ಅದಿರು
 (ಡಿ)ಮೇಲಿನ ಯಾವುದೂ ಅಲ್ಲ
CORRECT ANSWER

(ಬಿ) ಕಬ್ಬಿಣದ ಅದಿರು


44.ಭಾರತರತ್ನ ಪಡೆದ ಮೊದಲ ವಿಜ್ಞಾನಿಯವರು
 (ಎ)ಸಿ.ವಿ. ರಾಮನ್
 (ಬಿ)ಜೆ.ಸಿ. ಬೋಸ್
 (ಸಿ)ಚಂದ್ರ ಶೇಖರ್
 (ಡಿ)ಎ.ಪಿ.ಜೆ. ಅಬ್ದುಲ್ ಕಲಾಂ
CORRECT ANSWER

(ಎ) ಸಿ.ವಿ. ರಾಮನ್


45.ಭಾರತೀಯ ರಿಜರ್ವ್ ಬ್ಯಾಂಕ್‌ನ ಹಾಲಿ ಗವರ್ನರ್ ರವರು
 (ಎ)ಡಾ॥ ವೈ. ವಿ. ರೆಡ್ಡಿ
 (ಬಿ)ಡಾ॥ ಡಿ. ಸುಬ್ಬರಾವ್
 (ಸಿ)ಡಾ॥ ಸಿ. ರಂಗರಾಜ್
 (ಡಿ)ಡಾ॥ ಉರ್ಜಿತ್ ಆರ್. ಪಟೇಲ್
CORRECT ANSWER

(ಡಿ) ಡಾ॥ ಉರ್ಜಿತ್ ಆರ್. ಪಟೇಲ್


46.ನಿಶಬ್ದ ಕಣಿವೆಯು ಯಾವ ರಾಜ್ಯದಲ್ಲಿದೆ?
 (ಎ)ಕರ್ನಾಟಕ
 (ಬಿ)ತಮಿಳುನಾಡು
 (ಸಿ)ಕೇರಳ
 (ಡಿ)ಅರುಣಾಚಲ ಪ್ರದೇಶ
CORRECT ANSWER

(ಸಿ) ಕೇರಳ


47.ಕೆಳಗಿನ ಯಾವ ದ್ರಾವಣದಲ್ಲಿ ಬಂಗಾರವು ಕರಗುತ್ತದೆ ?
 (ಎ)ಆಮ್ಲಗಳಲ್ಲಿ
 (ಬಿ)ಪ್ರತ್ಯಾಮ್ಲಗಳಲ್ಲಿ
 (ಸಿ)ಸಿಲ್ವರ್ ನೈಟ್ರೇಟ್‌ನಲ್ಲಿ
 (ಡಿ)ರಾಜಾಮ್ಲದಲ್ಲಿ (ಅಕ್ವಾರೆಜಿಯಾ)
CORRECT ANSWER

(ಡಿ) ರಾಜಾಮ್ಲದಲ್ಲಿ (ಅಕ್ವಾರೆಜಿಯಾ)


48.ಒತ್ತಡದ ಅಳತೆಯ ಮಾನವು _________ ಆಗಿದೆ.
 (ಎ)ನ್ಯೂಟನ್
 (ಬಿ)ಕಿಲೋ ಗ್ರಾಂ ತೂಕ
 (ಸಿ)ಲೀಟರ್
 (ಡಿ)ಪಾಸ್ಕಲ್
CORRECT ANSWER

(ಡಿ) ಪಾಸ್ಕಲ್


49.ಸಸ್ಯಗಳು ದ್ಯುತಿ-ಸಶ್ಲೇಷಣೆ ಕ್ರಿಯೆಗೆ ಯಾವ ಅನಿಲವನ್ನು ಬಳಸಿಕೊಳ್ಳುತ್ತವೆ?
 (ಎ)ಇಂಗಾಲದ ಡೈ ಆಕ್ಸೆಡ್
 (ಬಿ)ಆಮ್ಲಜನಕ
 (ಸಿ)ಸಾರಜನಕ
 (ಡಿ)ಹೀಲಿಯಂ
CORRECT ANSWER

(ಎ) ಇಂಗಾಲದ ಡೈ ಆಕ್ಸೆಡ್


50.‘‘ವಾಷಿಂಗ್ ಸೋಡಾ ‘’ ಇದು _________ರ ಸಾಮಾನ್ಯ ಹೆಸರಾಗಿದೆ.
 (ಎ)ಸೋಡಿಯಂ ಕಾರ್ಬೊನೇಟ್
 (ಬಿ)ಕ್ಯಾಲ್ಸಿಯಂ ಬೈಕಾರ್ಬೊನೇಟ್
 (ಸಿ)ಸೋಡಿಯಂ ಬೈಕಾರ್ಬೋನೇಟ್
 (ಡಿ)ಕ್ಯಾಲ್ಸಿಯಂ ಕಾರ್ಬೊನೇಟ್
CORRECT ANSWER

(ಎ) ಸೋಡಿಯಂ ಕಾರ್ಬೊನೇಟ್


51.ಈ ಕೆಳಗಿನ ಯಾವ ನಗರವನ್ನು ‘‘ಭಾರತದ ಸಿಲಿಕಾನ್ ವ್ಯಾಲಿ’’ ಎಂದು ಕರೆಯುತ್ತಾರೆ ?
 (ಎ)ಬೆಂಗಳೂರು
 (ಬಿ)ಅಹಮದಾಬಾದ್
 (ಸಿ)ಹೈದ್ರಾಬಾದ್
 (ಡಿ)ಜಮ್ಮು ಮತ್ತು ಕಾಶ್ಮೀರ
CORRECT ANSWER

(ಎ) ಬೆಂಗಳೂರು


52.ನವರಾತ್ರಿ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದ ಮೈಸೂರಿನ ಅರಸು ಯಾರು?
 (ಎ)ರಾಜ ಒಡೆಯರ್
 (ಬಿ)ಕಂಠೀರವ ನರಸರಾಜ ಒಡೆಯರ್
 (ಸಿ)ಚಿಕ್ಕದೇವರಾಜ ಒಡೆಯರ್
 (ಡಿ)ದೊಡ್ಡದೇವರಾಜ ಒಡೆಯರ್
CORRECT ANSWER

(ಎ) ರಾಜ ಒಡೆಯರ್


53.‘‘ಕೈಗಾ ಸ್ಥಾವರ’’ವು ಒಂದು
 (ಎ)ಹೈಡ್ರೊ ಇಲೆಕ್ಟ್ರಿಕ್ ಸ್ಥಾವರ
 (ಬಿ)ಸೋಲಾರ್ ಇಲೆಕ್ಟ್ರಿಕ್ ಸ್ಥಾವರ
 (ಸಿ)ಅಟಾಮಿಕ್ ಇಲೆಕ್ಟ್ರಿಕ್ ಸ್ಥಾವರ
 (ಡಿ)ಯಾವುದೂ ಅಲ್ಲ
CORRECT ANSWER

(ಸಿ) ಅಟಾಮಿಕ್ ಇಲೆಕ್ಟ್ರಿಕ್ ಸ್ಥಾವರ


54.ಈ ಕೆಳಗಿನ ಯಾವ ಸತ್ಯಾಗ್ರಹ ಸ್ಥಳವನ್ನು ಕರ್ನಾಟಕದ ಜಲಿಯನ್‌ವಾಲಾ ಬಾಗ್ ಎಂದು ಕರೆಯುತ್ತಾರೆ ?
 (ಎ)ಅಂಕೋಲಾ
 (ಬಿ)ಶ್ರೀರಂಗಪಟ್ಟಣ
 (ಸಿ)ವಿದುರಾಶ್ವಥ
 (ಡಿ)ಶಿವಪುರ
CORRECT ANSWER

(ಸಿ) ವಿದುರಾಶ್ವಥ


55.ಈ ಕೆಳಗಿನವುಗಳಲ್ಲಿ ಯಾವ ಸ್ಥಳವನ್ನು ‘‘ವರ್ಲ್ಡ್ ಹೆರಿಟೇಜ್’’ ನಿವೇಶನ ಎಂದು ಘೋಷಿಸಲಾಗಿದೆ?
 (ಎ)ಶ್ರೀರಂಗಪಟ್ಟಣ
 (ಬಿ)ಬೇಲೂರು-ಹಳೇಬೀಡು
 (ಸಿ)ಹಂಪಿ
 (ಡಿ)ಬೆಂಗಳೂರು
CORRECT ANSWER

(ಸಿ) ಹಂಪಿ


56.ರ್ಯಾಡ್ ಕ್ಲಿಫ್, ರೇಖೆಯು ಕೆಳಗಿನ ಯಾವ ದೇಶಗಳ ನಡುವಿನ ಗಡಿ ರೇಖೆಯಾಗಿದೆ?
 (ಎ)ಭಾರತ ಮತ್ತು ಪಾಕಿಸ್ತಾನ
 (ಬಿ)ಭಾರತ ಮತ್ತು ಚೀನಾ
 (ಸಿ)ಭಾರತ ಮತ್ತು ಮ್ಯಾನ್ಮಾರ್
 (ಡಿ)ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್
CORRECT ANSWER

(ಎ) ಭಾರತ ಮತ್ತು ಪಾಕಿಸ್ತಾನ


57.ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಮೂಲಕ ಹಾದು ಹೋಗುತ್ತದೆ ?
 (ಎ)ಭೂಮಧ್ಯ ರೇಖೆ
 (ಬಿ)ಉತ್ತರ ಧ್ರುವೀಯ ವೃತ್ತ
 (ಸಿ)ಮಕರ ಸಂಕ್ರಾಂತಿ ವೃತ್ತ
 (ಡಿ)ಕರ್ಕಾಟಕ ಸಂಕ್ರಾಂತಿ ವೃತ್ತ
CORRECT ANSWER

(ಡಿ) ಕರ್ಕಾಟಕ ಸಂಕ್ರಾಂತಿ ವೃತ್ತ


58.ಕೆಳಗಿನವುಗಳಲ್ಲಿ ಪ್ರಪಂಚದ ಅತ್ಯಂತ ಕಿರಿಯ ಪರ್ವತಶ್ರೇಣಿ ಯಾವುದು?
 (ಎ)ಅರಾವಳಿ
 (ಬಿ)ಹಿಮಾಲಯ
 (ಸಿ)ಆ್ಯಂಡಿಸ್
 (ಡಿ)ಆಲ್ಫ್ಸ್
CORRECT ANSWER

(ಬಿ) ಹಿಮಾಲಯ


59.ಪಿರಮಿಡ್‌ಗಳು_________ನದಿಯ ದಡದಲ್ಲಿ ಕಂಡುಬರುತ್ತವೆ.
 (ಎ)ಅಮೆಜಾನ್
 (ಬಿ)ಸಿಂಧು
 (ಸಿ)ನೈಲ್
 (ಡಿ)ಡ್ಯಾನುಬ್
CORRECT ANSWER

(ಸಿ) ನೈಲ್


60.ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಕಂಡುಬರುವ ಪ್ರಾಣಿಗಳ ರಾಜ್ಯವನ್ನು _________ ಎಂದು ಕರೆಯಲಾಗುತ್ತದೆ.
 (ಎ)ಪ್ರಾಣಿ ಸಂಕುಲ
 (ಬಿ)ಸಸ್ಯವರ್ಗ
 (ಸಿ)ಜೀವಗೋಳ
 (ಡಿ)ಜಲಗೋಳ
CORRECT ANSWER

(ಎ) ಪ್ರಾಣಿ ಸಂಕುಲ


61.ಒಬ್ಬ ವ್ಯಕ್ತಿಯ ಅಕ್ರಮ ಬಂಧನಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಗಳು ಹೊರಡಿಸುವ ರಿಟ್ ಯಾವುದು?
 (ಎ)ಕೋ-ವಾರೆಂಟೊ (ಅಧಿಕಾರ ಪ್ರಶ್ನಕ ಆದೇಶ)
 (ಬಿ)ಹೆಬಿಯಸ್ ಕಾರ್ಪಸ್ (ಬಂಧೀ ಪ್ರತ್ಯಕ್ಷೀಕರಣ ಆದೇಶ)
 (ಸಿ)ಮ್ಯಾಂಡಮಸ್ (ಪರಮಾದೇಶ)
 (ಡಿ)ಸರ್ಟಿಯೋರರಿ
CORRECT ANSWER

(ಬಿ) ಹೆಬಿಯಸ್ ಕಾರ್ಪಸ್ (ಬಂಧೀ ಪ್ರತ್ಯಕ್ಷೀಕರಣ ಆದೇಶ)


62.ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವೇತನವನ್ನು ಇದರಿಂದ ಸಂದಾಯ ಮಾಡಲಾಗುತ್ತದೆ.
 (ಎ)ಗ್ರಾಂಟ್ಸ್ ಇನ್ ಎಯ್ಡ್
 (ಬಿ)ಸರ್ಕಾರಿ ಲೆಕ್ಕಪತ್ರಗಳು
 (ಸಿ)ಸಾದಿಲ್ವಾರು ನಿಧಿ
 (ಡಿ)ಸಂಚಿತ ನಿಧಿ
CORRECT ANSWER

(ಡಿ) ಸಂಚಿತ ನಿಧಿ


63.ಚಂದ್ರಮಂಡಲಕ್ಕೆ ಭಾರತದ ಪ್ರಥಮ ನಿಯೋಗ ಚಂದ್ರಯಾನ-I ನ್ನು ಉಡಾವಣೆ ಮಾಡಲಾದ ದಿನಾಂಕ
 (ಎ)ಅಕ್ಟೋಬರ್ 22, 2008
 (ಬಿ)ಅಕ್ಟೋಬರ್ 22, 2006
 (ಸಿ)ನವೆಂಬರ್ 22, 2010
 (ಡಿ)ನವೆಂಬರ್ 22, 2012
CORRECT ANSWER

(ಎ) ಅಕ್ಟೋಬರ್ 22, 2008


64. ‘‘ಪಂಚಾಯತ್ ರಾಜ್’’ ಇದು _________ನ ಒಂದು ವ್ಯವಸ್ಥೆಯಾಗಿದೆ.
 (ಎ)ಗ್ರಾಮೀಣ ಆಡಳಿತ
 (ಬಿ)ಸ್ಥಳೀಯ ಆಡಳಿತ
 (ಸಿ)ಸ್ಥಳೀಯ ಸ್ವಯಂ ಆಡಳಿತ
 (ಡಿ)ಗ್ರಾಮೀಣ ಸ್ಥಳೀಯ ಸ್ವಯಂ ಆಡಳಿತ
CORRECT ANSWER

(ಸಿ) ಸ್ಥಳೀಯ ಸ್ವಯಂ ಆಡಳಿತ


65.ಭಾರತದ ಅತ್ಯುನ್ನತ ಕಾನೂನು ಅಧಿಕಾರಿ ಯಾರು?
 (ಎ)ಅಟ್ಟಾರ್ನಿ ಜನರಲ್
 (ಬಿ)ಅಡ್ವೊಕೇಟ್ ಜನರಲ್
 (ಸಿ)ಸಾಲಿಸಿಟರ್ ಜನರಲ್
 (ಡಿ)ಸೆಕ್ರೆಟರಿ ಜನರಲ್, ಕಾನೂನು ಇಲಾಖೆ
CORRECT ANSWER

(ಎ) ಅಟ್ಟಾರ್ನಿ ಜನರಲ್


66.‘‘ನೀನಾಸಂ’’ ನಾಟಕ ಮತ್ತು ಸಾಂಸ್ಕೃತಿಕ ಸಂಘಟನೆ ಎಂಬುದು ಕರ್ನಾಟಕದ ಯಾವ ಊರಿನಲ್ಲಿದೆ?
 (ಎ)ಪುತ್ತೂರು
 (ಬಿ)ಮದ್ದೂರು
 (ಸಿ)ಹೆಗ್ಗೋಡು
 (ಡಿ)ಬಳ್ಳಾರಿ
CORRECT ANSWER

(ಸಿ) ಹೆಗ್ಗೋಡು


67.ಈ ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ಗೊಬ್ಬರವಾಗಿದೆ?
 (ಎ)ಸೋಡಿಯಂ ನೈಟ್ರೇಟ್
 (ಬಿ)ಸೋಡಿಯಂ ಪೆರಾಕ್ಸೈಡ್
 (ಸಿ)ಸೋಡಿಯಂ ಕಾರ್ಬೋನೇಟ್
 (ಡಿ)ಸೋಡಿಯಂ ಥಾಯೋಸಲ್ಫೇಟ್
CORRECT ANSWER

(ಎ) ಸೋಡಿಯಂ ನೈಟ್ರೇಟ್


68.ಈ ಕೆಳಗಿನ ಯಾವ ರಾಜ್ಯದಲ್ಲಿ ವಿಶ್ವ ಪ್ರಸಿದ್ದ ಅಜಂತಾ ಗುಹೆಗಳು ಇವೆ ?
 (ಎ)ಉತ್ತರ ಪ್ರದೇಶ
 (ಬಿ)ಮಧ್ಯ ಪ್ರದೇಶ
 (ಸಿ)ಮಹಾರಾಷ್ಟ್ರ
 (ಡಿ)ಜಾರ್ಖಂಡ್
CORRECT ANSWER

(ಸಿ) ಮಹಾರಾಷ್ಟ್ರ


69.ಅಬಕಾರಿ ಸುಂಕವೆಂದರೆ ಈ ಕೆಳಕಂಡ ಒಂದರ ಮೇಲೆ ವಿಧಿಸುವ ತೆರಿಗೆ
 (ಎ)ವಸ್ತುವಿನ ಉತ್ಪಾದನೆ
 (ಬಿ)ವಸ್ತುವಿನ ಮಾರಾಟ
 (ಸಿ)ವಸ್ತುವಿನ ಖರೀದಿ
 (ಡಿ)ವಸ್ತುವಿನ ಉಪಭೋಗ
CORRECT ANSWER

(ಎ) ವಸ್ತುವಿನ ಉತ್ಪಾದನೆ


70.ಭಾರತದ ಮೊಟ್ಟ ಮೊದಲನೆಯ ವಿದ್ಯುತ್ ಸ್ಥಾವರವೆಂದರೆ
 (ಎ)ಶಿವನಸಮುದ್ರ ಜಲಪಾತ
 (ಬಿ)ಗೋಕಾಕ್ ಜಲಪಾತ
 (ಸಿ)ಜೋಗ ಜಲಪಾತ
 (ಡಿ)ಅಬ್ಬಿ ಜಲಪಾತ
CORRECT ANSWER

(ಎ) ಶಿವನಸಮುದ್ರ ಜಲಪಾತ


71.ಆಪ್ಟಿಕಲ್ ಫೈಬರ್‌ಗಳನ್ನು ಪ್ರಮುಖವಾಗಿ _________ದಲ್ಲಿ ಉಪಯೋಗಿಸಲಾಗುತ್ತದೆ.
 (ಎ)ಸಂಗೀತ ಸಾಧನ
 (ಬಿ)ಆಹಾರ ಉದ್ದಿಮೆ
 (ಸಿ)ಉಡುಪು ಉದ್ದಿಮೆ
 (ಡಿ)ಸಂಪರ್ಕ
CORRECT ANSWER

(ಡಿ) ಸಂಪರ್ಕ


72.ಪರಮಾಣು ವಿದಳನವು _________ ಅಪ್ಪಳಿಕೆಯಿಂದ ಸಂಭವಿಸುತ್ತದೆ.
 (ಎ)ನ್ಯೂಟ್ರಾನ್
 (ಬಿ)ಪ್ರೋಟಾನ್
 (ಸಿ)ಡ್ಯೂಟೆರಾನ್
 (ಡಿ)ಎಲೆಕ್ಟ್ರಾನ್
CORRECT ANSWER

(ಎ) ನ್ಯೂಟ್ರಾನ್


73.‘‘ನಾವಿಕ ಮೈಲಿ’’ ಇದು _________ ದೂರವನ್ನು ಅಳೆಯುವ ಮಾನವಾಗಿದೆ.
 (ಎ)ಜಲಸಂಚಾರ
 (ಬಿ)ರಸ್ತೆ ಮೈಲಿ
 (ಸಿ)ಖಗೋಳ ಶಾಸ್ತ್ರ
 (ಡಿ)ದೇಶದ ಗಡಿ
CORRECT ANSWER

(ಎ) ಜಲಸಂಚಾರ


74.ಈ ಕೆಳಗಿನವುಗಳಲ್ಲಿ ಭಾರತದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ‘‘ಸೂಪರ್ ಕಂಪ್ಯೂಟರ್’’ ಯಾವುದು ?
 (ಎ)ಸೀಕ್ವಿಯ
 (ಬಿ)ಪರಮ್
 (ಸಿ)ಜಾಗ್ವರ್
 (ಡಿ)ಮಿರಾ
CORRECT ANSWER

(ಬಿ) ಪರಮ್


75.ಜೀವಕೋಶದ ಶಕ್ತಿ ಕೇಂದ್ರವು _________ಆಗಿದೆ.
 (ಎ)ಲೈಸೊಸೋಮ್
 (ಬಿ)ರೈಬೊಸೋಮ್
 (ಸಿ)ಮೈಟೊಕಾಂಡ್ರಿಯಾ
 (ಡಿ)ಗಾಲ್ಗಿ ಸಂಕೀರ್ಣ
CORRECT ANSWER

(ಸಿ) ಮೈಟೊಕಾಂಡ್ರಿಯಾ


76.ಈ ಕೆಳಗಿನವರುಗಳಲ್ಲಿ ಯಾರನ್ನು ಭಾರತದ ನೆಪೋಲಿಯನ್ ಎಂದು ಕರೆಯುತ್ತಾರೆ ?
 (ಎ)ಸಮುದ್ರಗುಪ್ತ
 (ಬಿ)ಚಂದ್ರ ಗುಪ್ತ
 (ಸಿ)ಅಶೋಕ
 (ಡಿ)ಹರ್ಷವರ್ಧನ
CORRECT ANSWER

(ಎ) ಸಮುದ್ರಗುಪ್ತ


77.ಭೂ-ದಾನ ಚಳುವಳಿಯನ್ನು ಪ್ರಾರಂಭಿಸಿದವರು
 (ಎ)ಮಹಾತ್ಮಾಗಾಂಧಿ
 (ಬಿ)ಜೈ ಪ್ರಕಾಶ್ ನಾರಾಯಣ
 (ಸಿ)ಅರವಿಂದೋ ಘೋಷ್
 (ಡಿ)ಆಚಾರ್ಯ ವಿನೋಬಾ ಭಾವೆ
CORRECT ANSWER

(ಡಿ) ಆಚಾರ್ಯ ವಿನೋಬಾ ಭಾವೆ


78.ಈ ಕೆಳಗಿನವುಗಳಲ್ಲಿ ಅತಿ ದೊಡ್ಡ ದ್ವೀಪ ಯಾವುದು ?
 (ಎ)ಕ್ಯೂಬಾ
 (ಬಿ)ಗ್ರೇಟ್ ಬ್ರಿಟನ್
 (ಸಿ)ಗ್ರೀನ್ ಲ್ಯಾಂಡ್
 (ಡಿ)ಶ್ರೀಲಂಕಾ
CORRECT ANSWER

(ಸಿ) ಗ್ರೀನ್ ಲ್ಯಾಂಡ್


79.ವಿಶ್ವದಲ್ಲಿಯೇ ಅತ್ಯಂತ ಗರಿಷ್ಠ ಎತ್ತರವಿರುವ ಮೌಂಟ್ ಎವರೆಸ್ಟ್ ಶಿಖರ ಇರುವುದು
 (ಎ)ಭೂತಾನ್
 (ಬಿ)ಚೀನಾ
 (ಸಿ)ಭಾರತ
 (ಡಿ)ನೇಪಾಳ
CORRECT ANSWER

(ಡಿ) ನೇಪಾಳ


80.ಈ ಕೆಳಗಿನವುಗಳಲ್ಲಿ ಯಾವ ರಸಗೊಬ್ಬರವು ಅತೀ ಹೆಚ್ಚು ನೈಟ್ರೋಜನ್ ಪ್ರಮಾಣ ಹೊಂದಿರುತ್ತದೆ ?
 (ಎ)ಯೂರಿಯಾ
 (ಬಿ)ಅಮೋನಿಯಂ ಸಲ್ಫೇಟ್
 (ಸಿ)ಪೊಟ್ಯಾಷಿಯಂ ನೈಟ್ರೇಟ್
 (ಡಿ)ಅಮೋನಿಯಂ ಫಾಸ್ಫೇಟ್
CORRECT ANSWER

(ಎ) ಯೂರಿಯಾ


81.ಕೃಷ್ಣಾ ನದಿಯು ಈ ಕೆಳಕಂಡ ಜಿಲ್ಲೆ _____________ಯಲ್ಲಿ ಹರಿಯುವುದಿಲ್ಲ.
 (ಎ)ಬೆಳಗಾವಿ
 (ಬಿ)ವಿಜಾಪುರ
 (ಸಿ)ಧಾರವಾಡ
 (ಡಿ)ರಾಯಚೂರು
CORRECT ANSWER

(ಸಿ) ಧಾರವಾಡ


82.ಇಸ್ತಾನ್‌ಬೂಲ್‌ನ ಹಳೆಯ ಹೆಸರು
 (ಎ)ಹುಲಾಸ್
 (ಬಿ)ಅಂಕಾರ
 (ಸಿ)ಅಂತಲ್ಯ
 (ಡಿ)ಕಾನ್‌ಸ್ಟಾಂಟಿನೋಪಲ್
CORRECT ANSWER

(ಡಿ) ಕಾನ್‌ಸ್ಟಾಂಟಿನೋಪಲ್


83.22 ವಿದ್ಯಾರ್ಥಿಗಳಿರುವ ಒಂದು ತರಗತಿಯ ಸರಾಸರಿ ವಯಸ್ಸು 21 ವರ್ಷ ಆಗಿರುತ್ತದೆ. ಶಿಕ್ಷಕನ ವಯಸ್ಸನ್ನು ಸೇರಿಸಿಕೊಂಡರೆ, ಈ ಸರಾಸರಿಯು 1 ವರ್ಷ ಹೆಚ್ಚಾಗುತ್ತದೆ. ಹಾಗಾದರೆ ಶಿಕ್ಷಕನ ವಯಸ್ಸು ಎಷ್ಟು?
 (ಎ)48 ವರ್ಷ
 (ಬಿ)45 ವರ್ಷ
 (ಸಿ)43 ವರ್ಷ
 (ಡಿ)44 ವರ್ಷ
CORRECT ANSWER

(ಡಿ) 44 ವರ್ಷ


84.ಒಂದು ಸಂಸಾರದಲ್ಲಿ ಒಬ್ಬ ವ್ಯಕ್ತಿ, ಅವನ ಪತ್ನಿ, ಅವರ ನಾಲ್ಕು ಜನ ಗಂಡು ಮಕ್ಕಳು ಮತ್ತು ಅವರ ಪತ್ನಿಯರು ಇರುತ್ತಾರೆ. ಪ್ರತಿಯೊಬ್ಬ ಮಗನ ಸಂಸಾರದಲ್ಲಿಯೂ ಮೂರು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿರುತ್ತಾರೆ. ಇಡೀ ಸಂಸಾರದಲ್ಲಿರುವ ಒಟ್ಟು ಗಂಡು ಸದಸ್ಯರ ಸಂಖ್ಯೆ ಎಷ್ಟು?
 (ಎ)5
 (ಬಿ)10
 (ಸಿ)16
 (ಡಿ)17
CORRECT ANSWER

(ಡಿ) 17


85. Kನು N ಮತ್ತು Xರ ಹೋದರನಾಗಿರುತ್ತಾನೆ. Yಳು Nನ/ಳ ತಾಯಿ ಮತ್ತು ZನುKನ/ಳ ತಂದೆ ಆಗಿರುತ್ತಾರೆ? ಕೆಳಗಿನ ಹೇಳಿಕೆಯಲ್ಲಿ ಯಾವುದು ಸರಿಯಲ್ಲ ?
 (ಎ)KನುZನ ಮಗ
 (ಬಿ)YಳುZನ ಹೆಂಡತಿ
 (ಸಿ)Nನು ಯಾವಾಗಲೂ Xನ/ಳ ಸಹೋದರನಾಗಿರುತ್ತಾನೆ
 (ಡಿ)ZನುXನ/ಳ ತಂದೆ
CORRECT ANSWER

(ಸಿ) Nನು ಯಾವಾಗಲೂ Xನ/ಳ ಸಹೋದರನಾಗಿರುತ್ತಾನೆ


86.‘‘ಮೋಡ ಬಿತ್ತನೆ’ಯನ್ನು _________ ಉಪಯೋಗಿಸಿ ಮಾಡಲಾಗುತ್ತದೆ.
 (ಎ)ಸಿಲ್ವರ್ ಅಯೋಡೈಡ್
 (ಬಿ)ಸೋಡಿಯಂ ಹೈಡ್ರಾಕ್ಸೈಡ್
 (ಸಿ)ಪೊಟ್ಯಾಷಿಯಂ ಕ್ಲೋರೈಡ್
 (ಡಿ)ಕಾರ್ಬನ್ ಮೊನಾಕ್ಸೈಡ್
CORRECT ANSWER

(ಎ) ಸಿಲ್ವರ್ ಅಯೋಡೈಡ್


87.ಐದು ಸಖ್ಯೆಗಳ ಸರಾಸರಿ 39.20 ಆಗಿದೆ. ಅವುಗಳಲ್ಲಿ ಮೂರು ಸಂಖ್ಯೆಗಳ ಸರಾಸರಿ 41.00 ಆದರೆ, ಉಳಿದ ಎರಡು ಸಂಖ್ಯೆಗಳ ಸರಾಸರಿ ಎಷ್ಟು?
 (ಎ)36.0
 (ಬಿ)36.5
 (ಸಿ)37.5
 (ಡಿ)38.2
CORRECT ANSWER

(ಬಿ) 36.5


88.⅛ ನ್ನು ದಶಮಾಂಶ ಭಿನ್ನರಾಶಿಗೆ ಬದಲಾಯಿಸಿ.
 (ಎ)0.0125
 (ಬಿ)0.125
 (ಸಿ)1.25
 (ಡಿ)12.5
CORRECT ANSWER

(ಬಿ) 0.125


89.ರೂ.500 ಕ್ಕೆ ವರ್ಷಕ್ಕೆ 5%ರ ಬಡ್ಡಿ ದರದಲ್ಲಿ ರೂ.50 ರ ಬಡ್ಡಿ ಸಂಗ್ರಹವಾಗಲು ಬೇಕಾಗುವ ಕಾಲ ಎಷ್ಟು?
 (ಎ)2 ವರ್ಷಗಳು
 (ಬಿ)3 ವರ್ಷಗಳು
 (ಸಿ)212212 ವರ್ಷಗಳು
 (ಡಿ)4 ವರ್ಷಗಳು
CORRECT ANSWER

(ಎ) 2 ವರ್ಷಗಳು


90.ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ. 25 ಕ್ಕೆ ಕೊಂಡುಕೊಂಡು ರೂ 30ಕ್ಕೆ ಮಾರಾಟ ಮಾಡುತ್ತಾನೆ. ಅವನು ಗಳಿಸಿದ ಲಾಭ
 (ಎ)16.67%
 (ಬಿ)20%
 (ಸಿ)25.5%
 (ಡಿ)25.67%
CORRECT ANSWER

(ಬಿ) 20%


91.ಅಲೆಕ್ಸಾಂಡರ್ ಮತ್ತು ಪೋರಸ್‌ನ ನಡುವೆ ನಡೆದ ಯುದ್ದವು _________ ನದಿಯ ದಡದಲ್ಲಿ ನಡೆಯಿತು.
 (ಎ)ಸಟ್ಲೇಜ್
 (ಬಿ)ರಾವಿ
 (ಸಿ)ಜೇಲಂ
 (ಡಿ)ಗಂಗಾ
CORRECT ANSWER

(ಸಿ) ಜೇಲಂ


92.‘‘ಸ್ವರಾಜ್ ಪಾರ್ಟಿ’’ ಯು _________ ಇವರುಗಳಿಂದ ಸ್ಥಾಪಿಸಲ್ಪಟ್ಟಿತ್ತು.
 (ಎ)ಸಿ.ಆರ್. ದಾಸ್ ಮತ್ತು ಬಿ.ಜಿ. ತಿಲಕ್
 (ಬಿ)ಮೋತಿಲಾಲ್ ಮತ್ತು ಮೌಲಾನಾ ಆಜಾದ್
 (ಸಿ)ಜವಾಹರಲಾಲ್ ನೆಹರೂ ಮತ್ತು ಜಿನ್ನಾ
 (ಡಿ)ಸಿ.ಆರ್. ದಾಸ್ ಮತ್ತು ಮೋತಿಲಾಲ್ ನೆಹರೂ
CORRECT ANSWER

(ಡಿ) ಸಿ.ಆರ್. ದಾಸ್ ಮತ್ತು ಮೋತಿಲಾಲ್ ನೆಹರೂ


93.‘‘ಮೊಹೆಂಜೊದಾರೊ’’ ಇದು _________ ದಲ್ಲಿದೆ.
 (ಎ)ಪಾಕಿಸ್ತಾನದ ಸಿಂಧ್ ಪ್ರಾಂತ್ಯ
 (ಬಿ)ಗುಜರಾತ್
 (ಸಿ)ಪಂಜಾಬ್
 (ಡಿ)ಅಫ್ಘಾನಿಸ್ತಾನ್
CORRECT ANSWER

(ಎ) ಪಾಕಿಸ್ತಾನದ ಸಿಂಧೂ ಪ್ರಾಂತ್ಯ


94.ನರ್ಮದಾ ನದಿಯ ದಡದಲ್ಲಿ ಹರ್ಷವರ್ಧನನು _________ ನಿಂದ ಸೋಲಿಸಲ್ಲಟನು.
 (ಎ)ಪುಲಿಕೇಶಿ- II
 (ಬಿ)ಕೀರ್ತಿವರ್ಮನ್
 (ಸಿ)ಅಮೋಘವರ್ಷ
 (ಡಿ)ನರಸಿಂಹವರ್ಮನ್
CORRECT ANSWER

(ಎ) ಪುಲಿಕೇಶಿ- II


95.1708 ರಲ್ಲಿ ಗುರು ಗೋವಿಂದ ಸಿಂಗ್‌ರವರನ್ನು _________ ಎಂಬಲ್ಲಿ ಹತ್ಯೆ ಮಾಡಲಾಯಿತು.
 (ಎ)ಅಮೃತ್ಸರ್
 (ಬಿ)ಕೀರ್ತಾಪುರ್
 (ಸಿ)ನಂದೇಡ್
 (ಡಿ)ಆನಂದಪುರ್
CORRECT ANSWER

(ಸಿ) ನಂದೇಡ್


96.45 ಜನ ಗಂಡಸರು ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡಿ, ಒಂದು ಕೆಲಸವನ್ನು 30 ದಿನಗಳಲ್ಲಿ ಮುಕ್ತಾಯ ಮಾಡುತ್ತಾರೆ. 60 ಜನ ಗಂಡಸರು ಪ್ರತಿದಿನ 10 ಗಂಟೆಗಳ ಕಾಲ ಕೆಲಸ ಮಾಡಿದರೆ ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮುಕ್ತಾಯ ಮಾಡುತ್ತಾರೆ?
 (ಎ)27 ದಿನಗಳು
 (ಬಿ)30 ದಿನಗಳು
 (ಸಿ)24 ದಿನಗಳು
 (ಡಿ)ಮೇಲಿನ ಯಾವುದೂ ಅಲ್ಲ
CORRECT ANSWER

(ಎ) 27 ದಿನಗಳು


97.ರಾಮ ಮತ್ತು ಭರತ್, ಒಂದೇ ದೂರವನ್ನು ಕ್ರಮವಾಗಿ ಗಂಟೆಗೆ 6 ಕಿ.ಮೀ. ಮತ್ತು ಗಂಟೆಗೆ 10 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಾರೆ. ರಾಮನು ಭರತ್ ನಿಗಿಂತ 30 ನಿಮಿಷಗಳ ಹೆಚ್ಚು ಕಾಲ ತೆಗೆದುಕೊಂಡರೆ, ಇವರಿಬ್ಬರು ಪ್ರಯಾಣಿಸಿದ ದೂರ
 (ಎ)6 ಕಿ.ಮೀ.
 (ಬಿ)10 ಕಿ.ಮೀ.
 (ಸಿ)7.5 ಕಿ.ಮೀ.
 (ಡಿ)20 ಕಿ.ಮೀ.
CORRECT ANSWER

(ಸಿ) 7.5 ಕಿ.ಮೀ.


98.ಕರ್ನಾಟಕ ಸಂಗೀತ ‘‘ಪಿತಾಮಹ ’’ ಎಂದು ಯಾರನ್ನು ಕರೆಯುತ್ತಾರೆ?
 (ಎ)ಕನಕದಾಸ
 (ಬಿ)ವಿಜಯದಾಸ
 (ಸಿ)ಪುರಂದರದಾಸ
 (ಡಿ)ವಿಠಲದಾಸ
CORRECT ANSWER

(ಸಿ) ಪುರಂದರದಾಸ


99.ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು
 (ಎ)ಇ.ಪಿ. ರೈಸ್
 (ಬಿ)ಎಡ್ವರ್ಡ್ ರೈಸ್
 (ಸಿ)ಆರ್. ನರಸಿಂಹಾಚಾರ್
 (ಡಿ)ಬಿ.ಎಲ್. ರೈಸ್
CORRECT ANSWER

(ಎ) ಇ.ಪಿ. ರೈಸ್


100.ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
 (ಎ)ಶ್ರೀ ಹೆಚ್.ಎಲ್. ದತ್ತು
 (ಬಿ)ಶ್ರೀ ಟಿ.ಎಸ್. ಠಾಕೂರ್
 (ಸಿ)ಶ್ರೀ ರಂಗನ್ ಗೊಗೊಯಿ
 (ಡಿ)ಶ್ರೀ ಕೆ.ಜಿ. ಬಾಲಕೃಷ್ಣನ್
CORRECT ANSWER

(ಬಿ) ಶ್ರೀ ಟಿ.ಎಸ್. ಠಾಕೂರ್


ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment