WhatsApp Group Join Now
Telegram Group Join Now

Civil Police Constable (17-07-2016) Previous question paper

Civil Police Constable (17-07-2016) Previous questions with answers


17/07/2016, ರಂದು ನಡೆದ CIVIL ಪೊಲೀಸ್ ಕಾನ್‌ಸ್ಟೆಬಲ್ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ. ಪ್ರಶ್ನೆಪತ್ರಿಕೆ ಶ್ರೇಣಿ B. 100 ಪ್ರಶ್ನೆಗಳು ಮತ್ತು 100 ಅಂಕಗಳನ್ನು ಈ ಪ್ರಶ್ನೆಪತ್ರಿಕೆಯು ಒಳಗೊಂಡಿದೆ ಹಾಗೂ 120 ನಿಮಿಷಗಳ ಅವಧಿಯಾಗಿರುತ್ತದೆ. 

1. ದಕ್ಷಿಣ ಭಾರತದಲ್ಲಿರುವ ನೀಲಗಿರಿ ಬೆಟ್ಟಗಳ ದಕ್ಷಿಣ ಅಂಚಿನಲ್ಲಿ/ತುದಿಯಲ್ಲಿ ಇರುವ ಪಾಸ್ ಯಾವುದು?


    (ಎ)    ಪಾಲ್ ಘಾಟ್ ಗ್ಯಾಪ್
    (ಬಿ)    ಬೋರ್ ಘಾಟ್ ಪಾಸ್
    (ಸಿ)    ತಾಲ್ ಘಾಟ್ ಪಾಸ್
    (ಡಿ)    ಬೋಲಾನ್ ಪಾಸ್

ಸರಿ ಉತ್ತರ

(ಎ) ಪಾಲ್ ಘಾಟ್ ಗ್ಯಾಪ್


2. ಭಾರತದಲ್ಲಿ ಅತೀಹೆಚ್ಚು ವಾರ್ಷಿಕ ಮಳೆ ಬರುವ ಸ್ಥಳ ಯಾವುದು?


    (ಎ)    ನಾಮ್ಚಿ, ಸಿಕ್ಕಿಮ್
    (ಬಿ)    ಚುರು, ರಾಜಸ್ಥಾನ
    (ಸಿ)    ಮಾವ್ ಸಿನ್ ರಾಮ್, ಮೇಘಾಲಯ
    (ಡಿ)    ಚಂಬಾ, ಹಿಮಾಚಲಪ್ರದೇಶ

ಸರಿ ಉತ್ತರ

(ಸಿ) ಮಾವ್ ಸಿನ್ ರಾಮ್, ಮೇಘಾಲಯ


3. ಭಾರತ ದೇಶವನ್ನು ದಕ್ಷಿಣ ದಿಕ್ಕಿನಲ್ಲಿ ಹಿಂದೂ ಮಹಾಸಾಗರವು, ನೈಋತ್ಯ ದಿಕ್ಕಿನಲ್ಲಿ ಅರೇಬಿಯನ್ ಸಮುದ್ರವು ಹಾಗೂ ಆಗ್ನೆಯ ದಿಕ್ಕಿನಲ್ಲಿ ____________ ಸಮುದ್ರವು ಸುತ್ತುವರೆದಿದೆ.

    (ಎ)    ಬ್ರಹ್ಮಪುತ್ರ
    (ಬಿ)    GANT
    (ಸಿ)    ಬಂಗಾಳ ಕೊಲ್ಲಿ
    (ಡಿ)    ಇದ್ಯಾವುದೂ ಅಲ್ಲ

ಸರಿ ಉತ್ತರ

(ಸಿ) ಬಂಗಾಳ ಕೊಲ್ಲಿ


4. ತಮಿಳುನಾಡು ರಾಜ್ಯ ಮತ್ತು ಶ್ರೀಲಂಕಾದ ಉತ್ತರ ಪ್ರಾಂತ್ಯದ ಮನ್ನಾರ್ ಜಿಲ್ಲೆಯ ಮಧ್ಯದಲ್ಲಿ ಇರುವ ಸ್ಟ್ರ್ಯಾಟ್ ಯಾವುದು?

    (ಎ)    ಪಾಕ್ ಸ್ಟ್ರ್ಯಾಟ್
    (ಬಿ)    ವಾಕ್ ಸ್ಟ್ರ್ಯಾಟ್
    (ಸಿ)    ಟಾಕ್ ಸ್ಟ್ರ್ಯಾಟ್
    (ಡಿ)    ಬಾಕ್ ಸ್ಟ್ರ್ಯಾಟ್

ಸರಿ ಉತ್ತರ

(ಎ) ಪಾಕ್ ಸ್ಟ್ರ್ಯಾಟ್


5. ಇವುಗಳಲ್ಲಿ ಯಾವ ನದಿಯ ಮೇಲೆ ‘ನಾಗಾರ್ಜುನ ಸಾಗರ ಯೋಜನೆ’ಯನ್ನು ಕಟ್ಟಲಾಗಿದೆ?

    (ಎ)    ಕಾವೇರಿ
    (ಬಿ)    ಬ್ರಹ್ಮಪುತ್ರ
    (ಸಿ)    ಕೃಷ್ಣ
    (ಡಿ)    ಗಂಗಾ

ಸರಿ ಉತ್ತರ

(ಸಿ) ಕೃಷ್ಣ


6. ‘ಬ್ಯಾಟಲ್ ಆಫ್ ಪ್ಲಾಸಿ’ ಜರುಗಿದ ವರ್ಷ

    (ಎ)    1757
    (ಬಿ)    1782
    (ಸಿ)    1748
    (ಡಿ)    1764

ಸರಿ ಉತ್ತರ

(ಎ) 1757


7. ಶ್ರೀರಂಗಪಟ್ಟಣದ ಒಪ್ಪಂದ’ ಟಿಪ್ಪುಸುಲ್ತಾನ್ ಮತ್ತು ______________ ನಡುವೆ ಮಾಡಲಾಗಿತ್ತು.

    (ಎ)    ರಾಬರ್ಟ್ ಕ್ಲೈವ್
    (ಬಿ)    ಕಾರ್ನ್ ವಾಲಿಸ್
    (ಸಿ)    ಡಾಲ್ ಹೌಸಿ
    (ಡಿ)    ವಾರನ್ ಹೇಸ್ಟಿಂಗ್ಸ್

ಸರಿ ಉತ್ತರ

(ಬಿ) ಕಾರ್ನ್ ವಾಲಿಸ್


8. ಸಾರಾನಾಥದಲ್ಲಿ ಇರುವ ‘ಲಯನ್ ಕ್ಯಾಪಿಟಲ್’ ಯಾವ ರಾಜನಿಗೆ ಸೇರಿದೆ ?

    (ಎ)    ಚಂದ್ರಗುಪ್ತ
    (ಬಿ)    ಅಶೋಕ
    (ಸಿ)    ಕನಿಷ್ಕ
    (ಡಿ)    ಹರ್ಷ

ಸರಿ ಉತ್ತರ

(ಬಿ) ಅಶೋಕ


9. ಸ್ವತಂತ್ರ ಭಾರತದ ಕೊನೆಯ ಗವರ್ನರ್ ಜನರಲ್ ಯಾರು?

    (ಎ)    ಮೌಂಟ್ ಬ್ಯಾಟನ್
    (ಬಿ)    ಲಿನ್ ಲಿತ್ ಗೊ
    (ಸಿ)    ವಿಲ್ಲಿಂಗ್ ಡನ್
    (ಡಿ)    ಸಿ. ರಾಜಗೋಪಾಲಾಚಾರಿ

ಸರಿ ಉತ್ತರ

(ಡಿ) ಸಿ. ರಾಜಗೋಪಾಲಾಚಾರಿ


10. “ಪಂಜಾಬ್ ಕೇಸರಿ’ ಎಂಬ ಬಿರುದನ್ನು ಯಾರಿಗೆ ಪ್ರದಾನ ಮಾಡಲಾಗಿತ್ತು?

    (ಎ)    ಲಾಲಾ ಲಜಪತ್ ರಾಯ್
    (ಬಿ)    ಸರ್ದಾರ್ ಬಲದೇವ್ ಸಿಂಗ್
    (ಸಿ)    ಭಗತ್ ಸಿಂಗ್
    (ಡಿ)    ರಂಜಿತ್ ಸಿಂಗ್

ಸರಿ ಉತ್ತರ

(ಎ) ಲಾಲಾ ಲಜಪತ್ ರಾಯ್


11. ಇವುಗಳಲ್ಲಿ ಯಾವ ಅಣೆಕಟ್ಟು ಕರ್ನಾಟಕ ರಾಜ್ಯದಲ್ಲಿದೆ?

    (ಎ)    ದುಧವಾ
    (ಬಿ)    ಕೌಶಲ್ಯ
    (ಸಿ)    ನಾಗಾರ್ಜುನ ಸಾಗರ
    (ಡಿ)    ಆಲಮಟ್ಟಿ

ಸರಿ ಉತ್ತರ

(ಡಿ) ಆಲಮಟ್ಟಿ


12. ಬೇಲೂರಿನಲ್ಲಿರುವ ಪ್ರಸಿದ್ಧವಾದ ದೇವಸ್ಥಾನ ಯಾವುದು?

    (ಎ)    ಚೆನ್ನಕೇಶವ ದೇವಸ್ಥಾನ
    (ಬಿ)    ಹನುಮಾನ್ ದೇವಸ್ಥಾನ
    (ಸಿ)    ಗಣಪತಿ ದೇವಸ್ಥಾನ
    (ಡಿ)    ವಿಷ್ಣು ದೇವಸ್ಥಾನ

ಸರಿ ಉತ್ತರ

(ಎ) ಚೆನ್ನಕೇಶವ ದೇವಸ್ಥಾನ


13. ಮೈಸೂರು ಪ್ರಾಂತ್ಯವನ್ನು ಕರ್ನಾಟಕ ರಾಜ್ಯ ಎಂದು ಯಾವ ಇಸವಿಯಲ್ಲಿ ಕರೆಯಲಾಯಿತು?

    (ಎ)    1972
    (ಬಿ)    1973
    (ಸಿ)    1974
    (ಡಿ)    1975

ಸರಿ ಉತ್ತರ

(ಬಿ) 1973


14. ಕರ್ನಾಟಕ ರಾಜ್ಯದಲ್ಲಿ ಅತೀ ಎತ್ತರವಾದ ಜಾಗ ಯಾವುದು?

    (ಎ)    ನಂದಿ ಬೆಟ್ಟ
    (ಬಿ)    ಮುಳ್ಳಯ್ಯನಗಿರಿ
    (ಸಿ)    ಬಿಳಿಗಿರಿ
    (ಡಿ)    ಮಲೆಮಾದೇಶ್ವರ ಬೆಟ್ಟ

ಸರಿ ಉತ್ತರ

(ಬಿ) ಮುಳ್ಳಯ್ಯನಗಿರಿ


15. ಕನ್ನಡ ಭಾಷೆಯ ಮೊಟ್ಟಮೊದಲ ಚಲನಚಿತ್ರ ಯಾವುದು?

    (ಎ)    ಗುಬ್ಬಿ ವೀರಣ್ಣ
    (ಬಿ)    ಭಕ್ತ ಧ್ರುವ
    (ಸಿ)    ಸತಿಸುಲೋಚನ
    (ಡಿ)    ಪಂಡರೀಬಾಯಿ

ಸರಿ ಉತ್ತರ

(ಸಿ) ಸತಿಸುಲೋಚನ


16. ಮಯೂರಶರ್ಮ ಯಾವ ರಾಜವಂಶದ ದೊರೆ ?

    (ಎ)    ಗುಪ್ತ
    (ಬಿ)    ಪಲ್ಲವ
    (ಸಿ)    ಕದಂಬ
    (ಡಿ)    ಚಾಲುಕ್ಯ

ಸರಿ ಉತ್ತರ

(ಸಿ) ಕದಂಬ


17. ಹಾಸನ ಜಿಲ್ಲೆಯಲ್ಲಿರುವ ಗೋಮಟೇಶ್ವರ ಮೂರ್ತಿಯನ್ನು ಯಾವ ಕಾಲಾವಧಿಯಲ್ಲಿ ನಿರ್ಮಿಸಲಾಯಿತು?

    (ಎ)    982-983 AD
    (ಬಿ)    1050-1051 AD
    (ಸಿ)    1101-1102 AD
    (ಡಿ)    1201-1202 AD

ಸರಿ ಉತ್ತರ

(ಎ) 982-983 AD


18. ಬಾದಾಮಿ ಗುಹೆ ದೇವಾಲಯಗಳು ಯಾವ ಜಿಲ್ಲೆಯಲ್ಲಿದೆ ?

    (ಎ)    ವಿಜಯಪುರ
    (ಬಿ)    ಬೆಳಗಾವಿ
    (ಸಿ)    ಬಾಗಲಕೋಟೆ
    (ಡಿ)    ಬೀದರ್

ಸರಿ ಉತ್ತರ

(ಸಿ) ಬಾಗಲಕೋಟೆ


19. ಹಂಪಿಯ ವಿರೂಪಾಕ್ಷ ದೇವಸ್ಥಾನ ಯಾವ ಜಿಲ್ಲೆಯಲ್ಲಿದೆ?

    (ಎ)    ಬೆಳಗಾವಿ.
    (ಬಿ)    ಬಳ್ಳಾರಿ
    (ಸಿ)    ಬೀದರ್
    (ಡಿ)    ಬಾಗಲಕೋಟೆ

ಸರಿ ಉತ್ತರ

(ಬಿ) ಬಳ್ಳಾರಿ


20. ‘ಗೋಲ್ ಗುಂಬಜ್’ ಯಾವ ಜಿಲ್ಲೆಯಲ್ಲಿದೆ?

    (ಎ)    ವಿಜಯಪುರ
    (ಬಿ)    ಬೆಳಗಾವಿ
    (ಸಿ)    ಬೀದರ್
    (ಡಿ)    ಹಾಸನ

ಸರಿ ಉತ್ತರ

(ಎ) ವಿಜಯಪುರ


21. ಯಾವ ನಗರವನ್ನು ‘ಭಾರತದ ಉದ್ಯಾನ ನಗರಿ’ ಎಂದು ಕರೆಯಲಾಗುತ್ತದೆ?

    (ಎ)    ಟ್ರಿವೆಂಡ್ರಮ್/ತಿರುವನಂತಪುರ
    (ಬಿ)    ಇಂಫಾಲ
    (ಸಿ)    ಶಿಮ್ಲಾ
    (ಡಿ)    ಬೆಂಗಳೂರು

ಸರಿ ಉತ್ತರ

(ಡಿ) ಬೆಂಗಳೂರು


22. ಸಾಹಿತ್ಯ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?

    (ಎ)    ಮದರ್ ತೆರೆಸಾ
    (ಬಿ)    ಸಿ.ವಿ. ರಾಮನ್
    (ಸಿ)    ರಬೀಂದ್ರನಾಥ್ ಟಾಗೋರ್
    (ಡಿ)    ಸರೋಜಿನಿನಾಯ್ಡು

ಸರಿ ಉತ್ತರ

(ಸಿ) ರಬೀಂದ್ರನಾಥ್ ಟಾಗೋರ್


23. ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಯಾರು?

    (ಎ)    ಡಾ|| ಜೆ.ಸಿ. ಬೋಸ್
    (ಬಿ)    ಡಾ| ಸಿ.ವಿ. ರಾಮನ್
    (ಸಿ)    ಡಾ|| ವಿಕ್ರಮ್ ಸಾರಾಬಾಯಿ
    (ಡಿ)    ಡಾ|| ಹೆಚ್.ಜೆ. ಬಾಬಾ

ಸರಿ ಉತ್ತರ

(ಬಿ) ಡಾ| ಸಿ.ವಿ. ರಾಮನ್


24. ‘ಶಿಕ್ಷಕರ ದಿನಾಚರಣೆ’ ಯಾವ ದಿನ ಆಚರಿಸಲಾಗುತ್ತದೆ?

    (ಎ)    ಸೆಪ್ಟೆಂಬರ್ 5
    (ಬಿ)    ಜನವರಿ 30
    (ಸಿ)    ನವೆಂಬರ್ 14
    (ಡಿ)    ಅಕ್ಟೋಬರ್ 2

ಸರಿ ಉತ್ತರ

(ಎ) ಸೆಪ್ಟೆಂಬರ್ 5


25. ಜೇಮ್ಸ್ ವಾಟ್ ಏನನ್ನು ಆವಿಷ್ಕರಿಸಿದರು?

    (ಎ)    ಡೈವಿಂಗ್ ಬೆಲ್
    (ಬಿ)    ದೋಣಿ
    (ಸಿ)    ಹಾಟ್ ಏರ್ ಬಲೂನ್
    (ಡಿ)    ರೋಟರಿ ಸ್ಟೀಮ್ ಎಂಜಿನ್

ಸರಿ ಉತ್ತರ

(ಡಿ) ರೋಟರಿ ಸ್ಟೀಮ್ ಎಂಜಿನ್


26. ಭಾರತದ ಮೊಟ್ಟಮೊದಲ ಉಪಗ್ರಹವನ್ನು 1975 ರಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು. ಅದನ್ನು ಏನೆಂದು ಕರೆಯಲಾಗಿತ್ತು?

    (ಎ)    ಆರ್ಯಭಟ
    (ಬಿ)    ರೋಹಿಣಿ
    (ಸಿ)    ಇನ್ ಸ್ಯಾಟ್-1ಎ
    (ಡಿ)    ಐ.ಆರ್.ಎಸ್.-1ಎ

ಸರಿ ಉತ್ತರ

(ಎ) ಆರ್ಯ ಭಟ


27. ಇಂಗಾಲದ ಡೈಆಕ್ಸೈಡ್ ಅನ್ನು ಹಸಿರುಮನೆ ಅನಿಲ ಎಂದು ಏಕೆ ಕರೆಯುತ್ತಾರೆ?

    (ಎ)    ಅದನ್ನು ಫೋಟೋಸಿಂಥೆಸಿಸ್/ ದ್ಯುತಿಸಂಶ್ಲೇಷಣೆಯಲ್ಲಿ ಬಳಸಲಾಗುತ್ತದೆ
    (ಬಿ)    ಅದು ಅತಿಗೆಂಪು ವಿಕಿರಣ/infrared radiationಅನ್ನು ಹೀರಿಕೊಳ್ಳುತ್ತದೆ
    (ಸಿ)    ಕಣ್ಣಿಗೆ ಕಾಣುವ ವಿಕಿರಣವನ್ನು ಹೊರಸೂಸುತ್ತದೆ
    (ಡಿ)    ಅದರ ಸಾಂದ್ರತೆಯು ಬೇರೆ ಅನಿಲಗಳಿಗಿಂತಯಾವಾಗಲು ಹೆಚ್ಚಾಗಿರುತ್ತದೆ

ಸರಿ ಉತ್ತರ

(ಬಿ) ಅದು ಅತಿಗೆಂಪು ವಿಕಿರಣ/infrared radiationಅನ್ನು ಹೀರಿಕೊಳ್ಳುತ್ತದೆ


28. ಜಲಜನಕ ಬಾಂಬ್ (Hydrogen bomb) ಯಾವ ತತ್ವದ ಮೇಲೆ ಆಧಾರಿತವಾಗಿದೆ ?

    (ಎ)    ಅನಿಯಂತ್ರಿತ ಸಮ್ಮಿಳನ
    (ಬಿ)    ನಿಯಂತ್ರಿತ ಸಮ್ಮಿಳನ
    (ಸಿ)    ಅನಿಯಂತ್ರಿತ ವಿದಳನ
    (ಡಿ)    ನಿಯಂತ್ರಿತ ವಿದಳನ

ಸರಿ ಉತ್ತರ

(ಎ) ಅನಿಯಂತ್ರಿತ ಸಮ್ಮಿಳನ


29. ವಾಟ್ಸನ್ ಮತ್ತು ಕ್ರಿಕ್ ಎಂಬವರು ಏನನ್ನು ಕಂಡುಹಿಡಿದುದ್ದಕ್ಕೆ ಪ್ರಸಿದ್ಧರಾದವರು ?

    (ಎ)    ಆ್ಯಂಟಿಬಾಡೀಸ್/ಪ್ರತಿಕಾಯಗಳು
    (ಬಿ)    DNA ರಚನೆ
    (ಸಿ)    ವ್ಯಾಕ್ಸೀನಿಯಾ
    (ಡಿ)    ಪ್ಲಾಸ್ಮೋಡಿಯಮ್ ವೈವಾಕ್ಸ್ ನ ಜೀವನದ ಇತಿಹಾಸ

ಸರಿ ಉತ್ತರ

(ಬಿ) DNA ರಚನೆ


30. RDX ಎಂದರೆ ಏನು?

    (ಎ)    ರಕ್ತದೊತ್ತಡ ಅಳೆಯುವ ಉಪಕರಣ
    (ಬಿ)    ಅನುವಂಶಿಕ ಧಾತು/ಜೀನ್
    (ಸಿ)    ಗೊಬ್ಬರ ಉತ್ಪಾದನೆಯಲ್ಲಿ ಉಪಯೋಗಿಸುವ ರಾಸಾಯನಿಕ
    (ಡಿ)    ಸ್ಫೋಟಕ

ಸರಿ ಉತ್ತರ

(ಡಿ) ಸ್ಫೋಟಕ


31. ಅಡುಗೆ ಅನಿಲ(LPG) ಯಾವುದರ ಮಿಶ್ರಣವಾಗಿದೆ?

    (ಎ)    ಕಾರ್ಬನ್ ಮೊನಾಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್
    (ಬಿ)    ಬ್ಯುಟೇನ್ ಮತ್ತು ಪ್ರೋಪೇನ್
    (ಸಿ)    ಮೀಥೇನ್ ಮತ್ತು ಎಥಿಲೀನ್
    (ಡಿ)    ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್

ಸರಿ ಉತ್ತರ

(ಬಿ) ಬ್ಯುಟೇನ್ ಮತ್ತು ಪ್ರೋಪೇನ್


32. ಡಿ.ಡಿ.ಟಿ. (D.D.T.) ಎಂಬ ರಾಸಾಯನಿಕವನ್ನು ಯಾವ ರೀತಿಯಲ್ಲಿ ಬಳಸಲಾಗುತ್ತದೆ?

    (ಎ)    ‘ಆ್ಯಂಟಿಸೆಪ್ಟಿಕ್/ನಂಜುನಿರೋಧಕ
    (ಬಿ)    ಕೀಟನಾಶಕ
    (ಸಿ)    ಆ್ಯಂಟಿಬೈಯೋಟಿಕ್/ಪ್ರತಿಜೀವಕ
    (ಡಿ)    ಗೊಬ್ಬರ

ಸರಿ ಉತ್ತರ

(ಬಿ) ಕೀಟನಾಶಕ


33. ಗೃಹಬಳಕೆಯ ರೆಫ್ರಿಜರೇಟರ್ ಗಳಲ್ಲಿ ಉಪಯೋಗಿಸುವ ಶೀತಕ (Refrigerant) ಯಾವುದು?

    (ಎ)    ನಿಯಾನ್
    (ಬಿ)    ಆಮ್ಲಜನಕ (ಆಕ್ಸಿಜನ್)
    (ಸಿ)    ಸಾರಜನಕ (ನೈಟ್ರೋಜನ್)
    (ಡಿ)    ಫಿಯಾನ್

ಸರಿ ಉತ್ತರ

(ಡಿ) ಫಿಯಾನ್


34. ರಕ್ತ ಹೆಪ್ಪುಗಟ್ಟಲು ಯಾವ ವಿಟಮಿನ್ ಅಗತ್ಯವಿದೆ?

    (ಎ)    ವಿಟಮಿನ್ ಎ
    (ಬಿ)    ವಿಟಮಿನ್ ಸಿ
    (ಸಿ)    ವಿಟಮಿನ್ ಇ
    (ಡಿ)    ವಿಟಮಿನ್ ಕೆ

ಸರಿ ಉತ್ತರ

(ಡಿ) ವಿಟಮಿನ್ ಕೆ


35. ಈ ಕೆಳಗಿನ ಯಾವುದುಸಾರಜನಕದಗೊಬ್ಬರ (nitrogenous fertilizer) ಅಲ್ಲ ?

    (ಎ)    ಅಮೋನಿಯಮ್ ಸಲ್ಫೇಟ್
    (ಬಿ)    ಯೂರಿಯಾ
    (ಸಿ)    ಅಮೋನಿಯಮ್ ನೈಟ್ರೇಟ್
    (ಡಿ)    ಸೂಪರ್ ಫಾಸ್ಫೇಟ್

ಸರಿ ಉತ್ತರ

(ಡಿ) ಸೂಪರ್ ಫಾಸ್ಫೇಟ್


36. ಡೈರಿ ಫಾರ್ಮ್ ನಲ್ಲಿರುವ 40 ಹಸುಗಳು 40 ದಿನಗಳಲ್ಲಿ 40 ಚೀಲ ಹುಲ್ಲನ್ನು ತಿನ್ನುತ್ತದೆ. ಹೀಗಿದ್ದಲ್ಲಿ, ಒಂದು ಹಸು ಎಷ್ಟು ದಿನಗಳಲ್ಲಿ ಒಂದು ಚೀಲ ಹುಲ್ಲನ್ನು ತಿನ್ನುತ್ತದೆ?

    (ಎ)    1
    (ಬಿ)    40
    (ಸಿ)    20
    (ಡಿ)    26

ಸರಿ ಉತ್ತರ

(ಬಿ) 40


37. ಒಂದು ದಿನದಲ್ಲಿ , ಎಷ್ಟು ಬಾರಿ ಗಡಿಯಾರದ ಮುಳ್ಳುಗಳು ಜೊತೆ ಜೊತೆಯಲ್ಲಿರುತ್ತದೆ?

    (ಎ)    24
    (ಬಿ)    22
    (ಸಿ)    20
    (ಡಿ)    21

ಸರಿ ಉತ್ತರ

(ಬಿ) 22


38. 0.03 × 0.0124 = ?

    (ಎ)    3.72 × 10⁻⁶
    (ಬಿ)    3.72 × 10⁻⁵
    (ಸಿ)    3.72 × 10⁻³
    (ಡಿ)    3.72 × 10⁻⁴

ಸರಿ ಉತ್ತರ

(ಡಿ) 3.72 × 10-4


39. 0.004 × 0.5= ?

    (ಎ)    0.02
    (ಬಿ)    0.002
    (ಸಿ)    0.0002
    (ಡಿ)    ಇದ್ಯಾವುದೂ ಅಲ್ಲ

ಸರಿ ಉತ್ತರ

(ಸಿ) 0.0002


40. ಇವುಗಳಲ್ಲಿ ಯಾವುದು ಅವಿಭಾಜ್ಯ ಸಂಖ್ಯೆ?

    (ಎ)    9
    (ಬಿ)    8
    (ಸಿ)    4
    (ಡಿ)    2

ಸರಿ ಉತ್ತರ

(ಡಿ) 2


41. ಕಾಣೆಯಾದ ಸಂಖ್ಯೆ ಯಾವುದು ?1,4,9, 16, 25, 36, 49, _______

    (ಎ)    64
    (ಬಿ)    54
    (ಸಿ)    56
    (ಡಿ)    81

ಸರಿ ಉತ್ತರ

(ಎ) 64


42. 20 + 20 × 2= ?

    (ಎ)    40
    (ಬಿ)    50
    (ಸಿ)    60
    (ಡಿ)    70

ಸರಿ ಉತ್ತರ

(ಸಿ) 60


43. ಒಬ್ಬ ವ್ಯಕ್ತಿ600 ಮೀಟರ್ ಉದ್ದದ ರಸ್ತೆಯನ್ನು5 ನಿಮಿಷಗಳಲ್ಲಿ ದಾಟುತ್ತಾನೆ. ಅವನ ವೇಗ ಪ್ರತಿ ಗಂಟೆಗೆ ಎಷ್ಟು ಕಿ.ಮೀ. ಆಗಿರುತ್ತದೆ?

    (ಎ)    8.2
    (ಬಿ)    4.2
    (ಸಿ)    6.1
    (ಡಿ)    7.2

ಸರಿ ಉತ್ತರ

(ಡಿ) 7.2


44. ರೈಲು ಗಂಟೆಗೆ 40 ಕಿ.ಮೀ. ವೇಗದಲ್ಲಿಓಡುತ್ತಿದೆ. ಅದೇ ರೈಲು ಒಂದು ಕ್ರಾಸಿಂಗ್ ಅನ್ನು 18 ಸೆಕೆಂಡುಗಳಲ್ಲಿ ದಾಟಿಹೋಗುತ್ತದೆ ಹಾಗಾದರೆ ಆ ರೈಲಿನ ಉದ್ದ ಎಷ್ಟು?

    (ಎ)    190 ಮೀ.
    (ಬಿ)    160 ಮೀ.
    (ಸಿ)    200 ಮೀ.
    (ಡಿ)    120 ಮೀ.

ಸರಿ ಉತ್ತರ

(ಸಿ) 200 ಮೀ.


45. 4.5% ವಾರ್ಷಿಕಸರಳಬಡ್ಡಿಯಂತೆ ಲೆಕ್ಕಹಾಕಿದಲ್ಲಿ, ರೂ.900 ರಷ್ಟು ಬಂಡವಾಳದ ಮೇಲೆ 81 ರೂ. ಬಡ್ಡಿ ಗಳಿಸಲು ಎಷ್ಟು ಸಮಯ ಬೇಕಾಗುತ್ತದೆ?

    (ಎ)    2 ವರ್ಷಗಳು
    (ಬಿ)    3 ವರ್ಷಗಳು
    (ಸಿ)    1 ವರ್ಷ
    (ಡಿ)    4 ವರ್ಷಗಳು

ಸರಿ ಉತ್ತರ

(ಎ) 2 ವರ್ಷಗಳು


46. SCD, TEF, UGH, _________, WKL

    (ಎ)    CMN
    (ಬಿ)    UJI
    (ಸಿ)    VIJ
    (ಡಿ)    IJT

ಸರಿ ಉತ್ತರ

(ಸಿ) VIJ


47. 125, 80, 45, 20, ?

    (ಎ)    5
    (ಬಿ)    8
    (ಸಿ)    10
    (ಡಿ)    12

ಸರಿ ಉತ್ತರ

(ಎ) 5


48. ಹರಿಯುವ : ನದಿ:: ನಿಂತಿರುವ : ?

    (ಎ)    ಮಳೆ
    (ಬಿ)    ಝರಿ
    (ಸಿ)    ಕೊಳ
    (ಡಿ)    ಕಾಲುವೆ

ಸರಿ ಉತ್ತರ

(ಸಿ) ಕೊಳ


49. ವಿದ್ಯಾಲಯ : ವಿದ್ಯಾರ್ಥಿ:: ಆಸ್ಪತ್ರೆ : ?

    (ಎ)    ನರ್ಸ್
    (ಬಿ)    ವೈದ್ಯರು
    (ಸಿ)    ಚಿಕಿತ್ಸೆ
    (ಡಿ)    ರೋಗಿ

ಸರಿ ಉತ್ತರ

(ಡಿ) ರೋಗಿ


50. ಓದು : ಜ್ಞಾನ : : ಕೆಲಸ : ?

    (ಎ)    ಹಣ
    (ಬಿ)    ಉದ್ಯೋಗ
    (ಸಿ)    ಅನುಭವ
    (ಡಿ)    ತೊಡಗಿಸಿಕೊಳ್ಳು

ಸರಿ ಉತ್ತರ

GRACE MARK


51. ಇವುಗಳಲ್ಲಿ ಯಾವ ಪ್ರದೇಶ ಭಾರತದಲ್ಲಿ ಅತೀ ಹೆಚ್ಚು ರಬ್ಬರ್ ಉತ್ಪಾದಿಸುವ ಪ್ರದೇಶವಾಗಿದೆ ?

    (ಎ)    ಚೆನ್ನೈ
    (ಬಿ)    ಔರಂಗಾಬಾದ್
    (ಸಿ)    ಹಿಮಾಚಲ
    (ಡಿ)    ಕೇರಳ

ಸರಿ ಉತ್ತರ

(ಡಿ) ಕೇರಳ


52. ಯಾವ ನದಿಯನ್ನು ಕೇರಳ ರಾಜ್ಯದ ಜೀವನಾಡಿ ಎನ್ನಲಾಗಿದೆ?

    (ಎ)    ಪೆರಿಯಾರ್
    (ಬಿ)    ಪಂಬ
    (ಸಿ)    ಚಲಿಯಾರ್
    (ಡಿ)    ಕಬಿನಿ

ಸರಿ ಉತ್ತರ

(ಎ) ಪೆರಿಯಾರ್


53. ಭಾರತ ದೇಶದ ಯಾವ ದ್ವೀಪವು ಭಾರತ ಹಾಗೂ ಶ್ರೀಲಂಕಾ ದೇಶದ ನಡುವೆ ನೆಲೆಸಿದೆ?

    (ಎ)    ಎಲಿಫೆಂಟಾ
    (ಬಿ)    ನಿಕೋಬಾರ್
    (ಸಿ)    ರಾಮೇಶ್ವರಂ
    (ಡಿ)    ಸಾಲ್ ಸೆಟ್

ಸರಿ ಉತ್ತರ

(ಸಿ) ರಾಮೇಶ್ವರಂ


54. ಇವುಗಳಲ್ಲಿ ಯಾವ ಪ್ರದೇಶದ ಮೂಲಕ ‘ಟ್ರಾಪಿಕ್ ಆಫ್ ಕ್ಯಾನ್ಸರ್’ ಹಾದುಹೋಗುತ್ತದೆ?

    (ಎ)    ಅಸ್ಸಾಮ್
    (ಬಿ)    ಮಣಿಪುರ
    (ಸಿ)    ಮಿಜೋರಾಮ್
    (ಡಿ)    ನಾಗಾಲ್ಯಾಂಡ್

ಸರಿ ಉತ್ತರ

(ಸಿ) ಮಿಜೋರಾಮ್


55. ಹೊಂದಿಸಿ ಬರೆಯಿರಿ:

 

ಟೈಗರ್ ರಿಸರ್ವ್

 

ರಾಜ್ಯಗಳು

A)

ಬಂಡೀಪುರ

1)

ಮಹಾರಾಷ್ಟ್ರ

B)

ಬಲ್ಬಾಕ್ರಾಮ್

2)

ತಮಿಳುನಾಡು

C)

ಮೇಲ್ಘಾಟ್

3)

ಮೇಘಾಲಯ

D)

ರೋಡ್ತಾ

4)

ಹಿಮಾಚಲಪ್ರದೇಶ

 

 

5)

ಕರ್ನಾಟಕ

 

    (ಎ)    A – 3, B-2, C-1, D – 4
    (ಬಿ)    A -5, B-3, C -1, D- 4
    (ಸಿ)    A-5, B-1, C-4, D – 3
    (ಡಿ)    A-2, B-3, C-4, D-5

ಸರಿ ಉತ್ತರ

(ಬಿ) A -5, B-3, C -1, D- 4


56. “ಭಾರತದ ರೆನಾಸಾನ್ಸ್ ನ ಪಿತಾಮಹ” ಯಾರು?

    (ಎ)    ಲಾಲಾ ಲಜಪತ್ ರಾಯ್
    (ಬಿ)    ರಾಜಾ ರಾಮ್ ಮೋಹನ್ ರಾಯ್
    (ಸಿ)    ಶಹೀದ್ ಭಗತ್ ಸಿಂಗ್
    (ಡಿ)    ಬಿ. ಜಿ. ತಿಲಕ್

ಸರಿ ಉತ್ತರ

(ಬಿ) ರಾಜಾ ರಾಮ್ ಮೋಹನ್ ರಾಯ್


57. ‘ಆಜಾದ್ ಹಿಂದ್’ ಯಾರ ನೆರವಿನಿಂದ ಸೃಷ್ಟಿಸಲಾಗಿತ್ತು ?

    (ಎ)    ಯು. ಎಸ್. ಎ.
    (ಬಿ)    ರಷ್ಯಾ
    (ಸಿ)    ಜಪಾನ್
    (ಡಿ)    ಚೈನಾ

ಸರಿ ಉತ್ತರ

(ಸಿ) ಜಪಾನ್


58. ಇವುಗಳಲ್ಲಿ ಯಾವ ಚಳುವಳಿಯು ‘ದಂಡಿ ಸತ್ಯಾಗ್ರಹ ‘ದಿಂದ ಶುರುವಾಯಿತು?

    (ಎ)    ಹೋಮ್ ರೂಲ್ ಚಳುವಳಿ
    (ಬಿ)    ನಾನ್ ಕೋಆಪರೇಷನ್ ಚಳುವಳಿ
    (ಸಿ)    ಸಿವಿಲ್ ಡಿಸ್ಒಬೀಡಿಯನ್ಸ್ ಚಳುವಳಿ
    (ಡಿ)    ಭಾರತ ಬಿಟ್ಟು ತೊಲಗಿ ಚಳುವಳಿ

ಸರಿ ಉತ್ತರ

(ಸಿ) ಸಿವಿಲ್ ಡಿಸ್ಒಬೀಡಿಯನ್ಸ್ ಚಳುವಳಿ


59. ‘ಕೆಂಪು ಕೋಟೆ’ಯನ್ನು ಕಟ್ಟಿದವರು ಯಾರು?

    (ಎ)    ಅಕ್ಬರ್
    (ಬಿ)    ಶಹಜಹಾನ್
    (ಸಿ)    ಜಹಂಗೀರ್
    (ಡಿ)    ಶೇರ್ ಶಾ

ಸರಿ ಉತ್ತರ

(ಬಿ) ಶಹಜಹಾನ್


60. ‘ಇಂಡಸ್ ಸಿವಿಲೈಜೇಶನ್’ನ ಅತಿ ದೊಡ್ಡ ಪ್ರದೇಶ ಯಾವುದು?

    (ಎ)    ಮೊಹೆಂಜೋದಾರೊ
    (ಬಿ)    ಲೋಥಲ್
    (ಸಿ)    ಚನ್ ಹುದಾರೊ
    (ಡಿ)    ಧೊಲವೀರ

ಸರಿ ಉತ್ತರ

(ಎ) ಮೊಹೆಂಜೋದಾರೊ


61. ಭಾರತದಲ್ಲಿ ಅತೀ ಹೆಚ್ಚು ಫಲವತ್ತಾದ ಪ್ರದೇಶ ಯಾವುದು?

    (ಎ)    ಹಿಮಾಲಯ
    (ಬಿ)    ಸೆಂಟ್ರಲ್ ಹೈಲ್ಯಾಂಡ್ಸ್
    (ಸಿ)    ಇಂಡೋ-ಗ್ಯಾಂಜೆಟಿಕ್ ಪ್ಲೇನ್
    (ಡಿ)    ಪೆನಿನ್ಸುಲಾರ್ ಪ್ಲಾಟೂ

ಸರಿ ಉತ್ತರ

(ಸಿ) ಇಂಡೋ-ಗ್ಯಾಂಜೆಟಿಕ್ ಪ್ಲೇನ್


62. ‘ಪೆನಿನ್ಸುಲಾರ್ ಇಂಡಿಯಾ’ ವಲಯದ ಮಣ್ಣು ಯಾವುದು?

    (ಎ)    ಕೆಂಪು ಮಣ್ಣು
    (ಬಿ)    ಹಳದಿ ಮಣ್ಣು
    (ಸಿ)    ಕಪ್ಪು ಮಣ್ಣು
    (ಡಿ)    ಹಳೆಯ ಮೆಕ್ಕಲು ಮಣ್ಣು/ಅಲುವಿಯಮ್ ಮಣ್ಣು

ಸರಿ ಉತ್ತರ

(ಎ) ಕೆಂಪು ಮಣ್ಣು


63. ಇವುಗಳಲ್ಲಿ ಯಾವಪರ್ವತ ಶ್ರೇಣಿಯು ಭಾರತದ ಅತೀ ಹಳೆಯ ಪರ್ವತವಾಗಿದೆ?

    (ಎ)    ಅರಾವಳಿ
    (ಬಿ)    ವಿಂಧ್ಯಾ
    (ಸಿ)    ಸತ್ಪುರಾ
    (ಡಿ)    ನೀಲಗಿರಿ ಬೆಟ್ಟಗಳು

ಸರಿ ಉತ್ತರ

(ಎ) ಅರಾವಳಿ


64. ಭಾರತದ ಅತೀ ಹಳೆಯತೈಲಶುದ್ದೀಕರಣ ಕೇಂದ್ರವು ಇಲ್ಲಿದೆ

    (ಎ)    ದಿಗ್ಬೋಯ್, ಅಸ್ಸಾಮ್
    (ಬಿ)    ಹಲ್ದಿಯಾ, ಕೋಲ್ಕತ್ತಾದ ಹತ್ತಿರ
    (ಸಿ)    ಕೊಯಾಲಿ, ಬರೋಡ ಹತ್ತಿರ
    (ಡಿ)    ನೂನ್ ಮತಿ, ಅಸ್ಸಾಮ್

ಸರಿ ಉತ್ತರ

(ಎ) ದಿಗ್ಬೋಯ್, ಅಸ್ಸಾಮ್


65. ಈ ಕೆಳಗಿನ ಯಾವ ನದಿಯ ಮೂಲ ಪಶ್ಚಿಮಘಟ್ಟ ಅಲ್ಲ?

    (ಎ)    ಕಾವೇರಿ
    (ಬಿ)    ಗೋದಾವರಿ
    (ಸಿ)    ಕೃಷ್ಣ
    (ಡಿ)    ಮಹಾನದಿ

ಸರಿ ಉತ್ತರ

(ಡಿ) ಮಹಾನದಿ


66. ಕರ್ನಾಟಕದಲ್ಲಿರುವ ಕುದುರೆಮುಖ ಯಾವ ಅದಿರುಗಳಿಗೆ ಪ್ರಸಿದ್ದಿಯಾಗಿದೆ?

    (ಎ)    ಕಬ್ಬಿಣ
    (ಬಿ)    ಮ್ಯಾಂಗನೀಸ್
    (ಸಿ)    ಕಾಪರ್ (ತಾಮ್ರ)
    (ಡಿ)    ಬಾಕ್ಸೈಟ್

ಸರಿ ಉತ್ತರ

(ಎ) ಕಬ್ಬಿಣ


67. ಕರ್ನಾಟಕದಲ್ಲಿ ಪ್ರಸಿದ್ಧವಾದ ನೃತ್ಯ ಯಾವುದು?

    (ಎ)    ಕೂಚುಪುಡಿ
    (ಬಿ)    ಭರತನಾಟ್ಯ
    (ಸಿ)    ಯಕ್ಷಗಾನ
    (ಡಿ)    ಕೋಲಾಟ

ಸರಿ ಉತ್ತರ

(ಸಿ) ಯಕ್ಷಗಾನ


68. ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ?

    (ಎ)    28
    (ಬಿ)    29
    (ಸಿ)    30
    (ಡಿ)    31

ಸರಿ ಉತ್ತರ

(ಸಿ) 30


69. ಕರ್ನಾಟಕ ರಾಜ್ಯದ ಲೋಕಸಭೆಯಲ್ಲಿ ಒಟ್ಟು ಎಷ್ಟು ಸ್ಥಾನಗಳಿವೆ?

    (ಎ)    26
    (ಬಿ)    28
    (ಸಿ)    30
    (ಡಿ)    32

ಸರಿ ಉತ್ತರ

(ಬಿ) 28


70. ಕರ್ನಾಟಕದ ವಿಧಾನಸಭೆಯಲ್ಲಿ ಒಟ್ಟು ಎಷ್ಟು ಸ್ಥಾನಗಳಿವೆ?

    (ಎ)    198
    (ಬಿ)    209
    (ಸಿ)    224
    (ಡಿ)    213

ಸರಿ ಉತ್ತರ

(ಸಿ) 224


71. ಹಂಪಿಯು ಯಾವ ನದಿ ತೀರದಲ್ಲಿ ಇದೆ?

    (ಎ)    ಕಾವೇರಿ
    (ಬಿ)    ಕೃಷ್ಣ
    (ಸಿ)    ತುಂಗಭದ್ರ
    (ಡಿ)    ಶರಾವತಿ

ಸರಿ ಉತ್ತರ

(ಸಿ) ತುಂಗಭದ್ರ


72. ಯಾವನಗರವನ್ನು ‘ರೇಷ್ಮೆನಗರ’ ಎಂದು ಕರೆಯಲಾಗುತ್ತದೆ?

    (ಎ)    ರಾಮನಗರ
    (ಬಿ)    ಹಾಸನ
    (ಸಿ)    ಮಂಡ್ಯ
    (ಡಿ)    ಮೈಸೂರು

ಸರಿ ಉತ್ತರ

(ಎ) ರಾಮನಗರ


73. ಕನ್ನಡ ಭಾಷೆಯಲ್ಲಿ ಮೊಟ್ಟಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ವ್ಯಕ್ತಿ ಯಾರು?

    (ಎ)    ಎಂ. ವಿ. ಐಯ್ಯಂಗಾರ್
    (ಬಿ)    ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
    (ಸಿ)    ಗಿರೀಶ್ ಕಾರ್ನಾಡ್
    (ಡಿ)    ಯು. ಆರ್. ಅನಂತಮೂರ್ತಿ

ಸರಿ ಉತ್ತರ

(ಬಿ) ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ


74. ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ ಎಲ್ಲಿದೆ?

    (ಎ)    ಕೇರಳ
    (ಬಿ)    ಚೆನ್ನೈ
    (ಸಿ)    ಬೆಂಗಳೂರು
    (ಡಿ)    ನವದೆಹಲಿ

ಸರಿ ಉತ್ತರ

(ಸಿ) ಬೆಂಗಳೂರು


75. ‘ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೋಲಿಸ್ ಅಕಾಡಮಿ’ ಎಲ್ಲಿದೆ ?

    (ಎ)    ಬೆಂಗಳೂರು
    (ಬಿ)    ಹೈದರಾಬಾದ್
    (ಸಿ)    ಅಬು ರೋಡ್
    (ಡಿ)    ಡೆಹ್ರಾಡೂನ್

ಸರಿ ಉತ್ತರ

(ಬಿ) ಹೈದರಾಬಾದ್


76. ಈ ಕೆಳಗಿನ ಯಾವ ಅನಿಲದ ಸೋರಿಕೆಯಿಂದ ‘ಭೋಪಾಲ್ ಗ್ಯಾಸ್ ಟ್ರಾಜೆಡಿ’ ಸಂಭವಿಸಿತು?

    (ಎ)    ಮೀಥೈಲ್ ಐಸೋಸಯಾನೇಟ್
    (ಬಿ)    ಕಾರ್ಬನ್ ಮೊನಾಕ್ಸೈಡ್
    (ಸಿ)    ನೈಟ್ರಿಕ್ ಆಕ್ಸೈಡ್
    (ಡಿ)    ಸಲ್ಪರ್ ಡೈಆಕ್ಸೈಡ್

ಸರಿ ಉತ್ತರ

(ಎ) ಮೀಥೈಲ್ ಐಸೋಸಯಾನೇಟ್


77. ಅಪಘಾತದಲ್ಲಿ ಒಬ್ಬಾತನಿಗೆ ಮಂಡಿ-ಕೀಲಿಗೆ ಪೆಟ್ಟಾದಲ್ಲಿ, ಆತ ಯಾವ ವೈದ್ಯರನ್ನು ಸಂಪರ್ಕಿಸಬೇಕು?

    (ಎ)    ಆರ್ಥೋಪೆಡಿಕ್ ಸರ್ಜನ್/ಮೂಳೆತಜ್ಞ
    (ಬಿ)    ಪೆಡಿಯಾಟ್ರಿಕ್ ಸರ್ಜನ್/ಶಿಶುತಜ್ಞ
    (ಸಿ)    ಆನ್ಕೊಲೊಜಿಸ್ಟ್ ಸರ್ಜನ್
    (ಡಿ)    ಯುರೋಲೊಜಿಸ್ಟ್ ಸರ್ಜನ್/ಮೂತ್ರಶಾಸ್ತ್ರಜ್ಞ

ಸರಿ ಉತ್ತರ

(ಎ) ಆರ್ಥೋಪೆಡಿಕ್ ಸರ್ಜನ್/ಮೂಳೆತಜ್ಞ


78. ಸಂಪರ್ಕ ಉಪಗ್ರಹಗಳನ್ನು ಈ ಕೆಳಗಿನ ಯಾವುದಕ್ಕೆ ಉಪಯೋಗಿಸಲಾಗುತ್ತದೆ?

    (ಎ)    ಸಂಪರ್ಕ ಸಿಗ್ನಲ್ ಗಳನ್ನು ಪ್ರಸಾರ ಮಾಡಲು ಮಾತ್ರ
    (ಬಿ)    ಸಂಪರ್ಕ ಸಿಗ್ನಲ್ ಗಳನ್ನು ಸ್ವೀಕರಿಸಲು ಮಾತ್ರ
    (ಸಿ)    ಸಂಪರ್ಕ ಸಿಗ್ನಲ್ ಗಳನ್ನು ಸ್ವೀಕರಿಸಲು ಹಾಗೂ ಪ್ರಸಾರ ಮಾಡಲು
    (ಡಿ)    ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ ಕೊಡಲು ಮಾತ್ರ

ಸರಿ ಉತ್ತರ

(ಸಿ) ಸಂಪರ್ಕ ಸಿಗ್ನಲ್ ಗಳನ್ನು ಸ್ವೀಕರಿಸಲು ಹಾಗೂ ಪ್ರಸಾರ ಮಾಡಲು


79. ‘ಬಿಳಿ ಕ್ರಾಂತಿ’ ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ?

    (ಎ)    ಹಾಲು ಉತ್ಪಾದನೆ
    (ಬಿ)    ಪ್ರವಾಹ ನಿಯಂತ್ರಣ
    (ಸಿ)    ಮೀನು ಉತ್ಪಾದನೆ
    (ಡಿ)    ಗೋಧಿ ಉತ್ಪಾದನೆ

ಸರಿ ಉತ್ತರ

(ಎ) ಹಾಲು ಉತ್ಪಾದನೆ


80. “ಬ್ಲೂಟೂತ್” ತಂತ್ರಜ್ಞಾನ ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ ?

    (ಎ)    ಉಕ್ಕಿನ ತಯಾರಿಕೆ
    (ಬಿ)    ಬಣ್ಣದ ತಯಾರಿಕೆ
    (ಸಿ)    ದಂತಶಾಸ್ತ್ರ
    (ಡಿ)    ನಿಸ್ತಂತ ಸಂಪರ್ಕ/ವೈರ್ಲೆಸ್ ಸಂಪರ್ಕ/ತಂತಿರಹಿತ ಸಂಪರ್ಕ

ಸರಿ ಉತ್ತರ

(ಡಿ) ನಿಸ್ತಂತ ಸಂಪರ್ಕ/ವೈರ್ಲೆಸ್ ಸಂಪರ್ಕ/ತಂತಿರಹಿತ ಸಂಪರ್ಕ


81. ‘ರೆಫ್ರಿಜರೇಟರ್’ನಲ್ಲಿ ಆಹಾರ ಕೆಡದೆ ಇರುವುದಕ್ಕೆ ಕಾರಣ ಏನು?

    (ಎ)    ಕಡಿಮೆ ತಾಪಮಾನದಲ್ಲಿ, ಬ್ಯಾಕ್ಟಿರಿಯಾ ಹಾಗೂ ಮೋಲ್ಡ್ ಜೀವಿಗಳು ನಿಷ್ಕ್ರಿಯವಾಗಿರುತ್ತವೆ
    (ಬಿ)    ಕಡಿಮೆ ತಾಪಮಾನದಲ್ಲಿ ಸೂಕ್ಷ್ಮಜೀವಿಗಳು ಸಾಯುತ್ತವೆ
    (ಸಿ)    ಕಡಿಮೆ ತಾಪಮಾನದಲ್ಲಿ, ಸೂಕ್ಷ್ಮಜೀವಿಗಳು ಫ್ರೀಜ್ ಆಗುತ್ತದೆ/ ಹೆಪ್ಪುಗಟ್ಟುತ್ತದೆ
    (ಡಿ)    ಇದು ಆಹಾರವನ್ನು ಕ್ರಿಮಿಶುದ್ಧಗೊಳಿಸುತ್ತದೆ

ಸರಿ ಉತ್ತರ

(ಎ) ಕಡಿಮೆ ತಾಪಮಾನದಲ್ಲಿ, ಬ್ಯಾಕ್ಟಿರಿಯಾ ಹಾಗೂ ಮೋಲ್ಡ್ ಜೀವಿಗಳು ನಿಷ್ಕ್ರಿಯವಾಗಿರುತ್ತವೆ ,


82. ಪೋಖಾನ್ ಪ್ರದೇಶವು ಯಾವ ಕಾರಣಕ್ಕೆ ಪ್ರಸಿದ್ದಿಯಾಗಿದೆ?

    (ಎ)    ರಾಸಾಯನಿಕ ಸ್ಥಾವರ
    (ಬಿ)    ರಾಷ್ಟ್ರೀಯ ಉದ್ಯಾನವನ
    (ಸಿ)    ಪರಮಾಣು ಪರೀಕ್ಷೆ
    (ಡಿ)    ಚಲನಚಿತ್ರ ಚಿತ್ರೀಕರಣ

ಸರಿ ಉತ್ತರ

(ಸಿ) ಪರಮಾಣು ಪರೀಕ್ಷೆ


83. ‘ಮೈಕ್ರೋಸಾಫ್ಟ್ ಆಫೀಸ್’ನಲ್ಲಿ ಈ ಕೆಳಗಿನ ಯಾವುದು ಲಭ್ಯವಿಲ್ಲ?

    (ಎ)    ಆ್ಯಂಡ್ರಾಯ್ಡ್
    (ಬಿ)    ಎಕ್ಸೆಲ್
    (ಸಿ)    ಪವರ್ ಪಾಯಿಂಟ್
    (ಡಿ)    ವರ್ಡ್

ಸರಿ ಉತ್ತರ

(ಎ) ಆ್ಯಂಡ್ರಾಯ್ಡ್


84. ಈ ಕೆಳಗಿನ ಯಾವ ಎರಡು ಬಣ್ಣಗಳನ್ನು ಸೇರಿಸಿದಲ್ಲಿ ‘ಹಸಿರು’ ಬಣ್ಣ ಆಗುತ್ತದೆ ?

    (ಎ)    ಹಳದಿ ಮತ್ತು ಕಪ್ಪು
    (ಬಿ)    ಹಳದಿ ಮತ್ತು ನೀಲಿ
    (ಸಿ)    ಕಿತ್ತಳೆ ಮತ್ತು ವಾಯ್ಲೆಟ್
    (ಡಿ)    ಪರ್ಪಲ್ (ನೇರಳೆ) ಮತ್ತು ಹಳದಿ

ಸರಿ ಉತ್ತರ

(ಬಿ) ಹಳದಿ ಮತ್ತು ನೀಲಿ


85. ಬಾಹ್ಯಾಕಾಶ ತಲುಪಿದ ಮೊದಲ ಭಾರತೀಯ ಯಾರು?

    (ಎ)    ಅಮಿತಾಬ್ ಬಚ್ಚನ್
    (ಬಿ)    ಅಮರ್ತ್ಯಸೇನ್
    (ಸಿ)    ರಾಕೇಶ್ ಶರ್ಮ
    (ಡಿ)    ನೀಲ್ ಆರ್ಮ್ ಸ್ಟ್ರಾಗ್

ಸರಿ ಉತ್ತರ

(ಸಿ) ರಾಕೇಶ್ ಶರ್ಮ


86. ಹತ್ತು ವರ್ಷಗಳ ಹಿಂದೆ, ‘P’ ಎಂಬುವವನ ವಯಸ್ಸು ‘Q’ ಎಂಬುವವನ ಅರ್ಧವಾಗಿತ್ತು. ಅವರ ಈಗಿನ ವಯಸ್ಸಿನ ಅನುಪಾತ 3:4 ಆಗಿದ್ದಲ್ಲಿ, ಅವರಿಬ್ಬರ ಈಗಿನವಯಸ್ಸಿನ ಒಟ್ಟಾರೆ ಮೊತ್ತ ಎಷ್ಟು?

    (ಎ)    45
    (ಬಿ)    40
    (ಸಿ)    35
    (ಡಿ)    30

ಸರಿ ಉತ್ತರ

(ಸಿ) 35


87. ಒಂದು ಟವಲ್ ಬ್ಲೀಚ್ ಮಾಡಿದಾಗ, ಅದು20% ಉದ್ದ ಮತ್ತು 10% ಅಗಲ ಕಡಿಮೆಯಾಗುತ್ತದೆ. ಹೀಗೆ ಉದ್ದ ಅಗಲ ಕಡಿಮೆಯಾದಲ್ಲಿ, ಅದರ ಚದರಳತೆ/ ವಿಸ್ತೀರ್ಣ ಶೇಕಡಾ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ?

    (ಎ)    30%
    (ಬಿ)    28%
    (ಸಿ)    32%
    (ಡಿ)    26%

ಸರಿ ಉತ್ತರ

(ಬಿ) 28%


88. ಕ್ರಿಕೆಟ್ ಆಟದ ಮೊದಲನೆ 10 ಓವರ್ ಗಳಲ್ಲಿ, ರನ್ ರೇಟ್ ಕೇವಲ 3.2 ಆಗಿತ್ತು. ಇನ್ನುಳಿದ 40 ಓವರ್ ಗಳಲ್ಲಿ, 282 ರನ್ಗಳ ಗುರಿ ಮುಟ್ಟಲು ರನ್ ರೇಟ್ ಎಷ್ಟಿರಬೇಕು?

    (ಎ)    6.25
    (ಬಿ)    5.5
    (ಸಿ)    7.4
    (ಡಿ)    5

ಸರಿ ಉತ್ತರ

(ಎ) 6.25


89. ಪ್ರವಾಹದ ಜೊತೆಗಿನ ಒಬ್ಬ ಮನುಷ್ಯನ ವೇಗವು ಗಂಟೆಗೆ 15 ಕಿ.ಮೀ.ಗಳಾಗಿದ್ದಲ್ಲಿ ಮತ್ತು ಪ್ರವಾಹದ ವೇಗವು ಗಂಟೆಗೆ 2.5ಕಿ.ಮೀ. ಆಗಿದ್ದಲ್ಲಿ, ಅದೇ ಮನುಷ್ಯನ ಪ್ರವಾಹದ ವಿರುದ್ಧದ ವೇಗವು ಎಷ್ಟಿರುತ್ತದೆ?

    (ಎ)    8.5ಕಿ.ಮೀ./ಗಂಟೆಗೆ
    (ಬಿ)    10 ಕಿ.ಮೀ./ಗಂಟೆಗೆ
    (ಸಿ)    12.5ಕಿ.ಮೀ./ಗಂಟೆಗೆ
    (ಡಿ)    9ಕಿ.ಮೀ./ಗಂಟೆಗೆ

ಸರಿ ಉತ್ತರ

(ಬಿ) 10 ಕಿ.ಮೀ./ಗಂಟೆಗೆ


90. ಇವತ್ತು ಸೋಮವಾರ. ಇನ್ನು61 ದಿನಗಳ ನಂತರ ಬರುವ ದಿನ

    (ಎ)    ಗುರುವಾರ
    (ಬಿ)    ಭಾನುವಾರ
    (ಸಿ)    ಸೋಮವಾರ
    (ಡಿ)    ಶನಿವಾರ

ಸರಿ ಉತ್ತರ

(ಡಿ) ಶನಿವಾರ


91. ‘A’ ಮತ್ತು ‘B’ ಹೊಸ ವ್ಯಾಪಾರವನ್ನು ಶುರುಮಾಡುತ್ತಾರೆ. ಇದರಲ್ಲಿ ‘A’ಎಂಬಾತನು 85,000 ರೂ.ಗಳು ಹಾಗೂ ‘B’ 15,000 ರೂ.ಗಳನ್ನು ಹೂಡಿಕೆ ಮಾಡುತ್ತಾರೆ. ಹೀಗಿದ್ದಲ್ಲಿ ವ್ಯಾಪಾರದ ಲಾಭವನ್ನು ಇವರಿಬ್ಬರಲ್ಲಿ ಯಾವ ಅನುಪಾತದಲ್ಲಿ ಪಾಲು ಮಾಡಬೇಕು?

    (ಎ)    10:3
    (ಬಿ)    17:3
    (ಸಿ)    3:10
    (ಡಿ)    3:17

ಸರಿ ಉತ್ತರ

(ಬಿ) 17:3


92. ಮೂರು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಅನುಕ್ರಮವಾಗಿ1136, 7636 ಹಾಗೂ11628 ಮತಗಳನ್ನು ಗಳಿಸಿರುತ್ತಾರೆ. ಹೀಗಿದ್ದಲ್ಲಿ ಜಯಿಸಿದ ಅಭ್ಯರ್ಥಿಯ ಮತಗಳು ಒಟ್ಟು ಮತಗಳ ಎಷ್ಟು ಪ್ರತಿಶತವಾಗಿರುತ್ತದೆ?

    (ಎ)    57%
    (ಬಿ)    50%
    (ಸಿ)    52%
    (ಡಿ)    60%

ಸರಿ ಉತ್ತರ

(ಎ) 57%


93. ನಾಣ್ಯವನ್ನು 3 ಬಾರಿ ಹಾರಿಸಲಾಗುತ್ತದೆ. ಇದರ ಸಂಭಾವ್ಯ ಫಲಿತಾಂಶಗಳ ಸಂಖ್ಯೆ ಎಷ್ಟು?

    (ಎ)    8
    (ಬಿ)    2
    (ಸಿ)    1
    (ಡಿ)    ಇದ್ಯಾವುದೂ ಅಲ್ಲ

ಸರಿ ಉತ್ತರ

(ಎ) 8


94. ಈಗುಂಪಿಗೆ ಸೇರದ ಸಂಖ್ಯೆ ಯಾವುದು? 1, 3, 9, 12, 19, 29

    (ಎ)    12
    (ಬಿ)    9
    (ಸಿ)    1
    (ಡಿ)    3

ಸರಿ ಉತ್ತರ

(ಎ) 12


95. ಈಗುಂಪಿಗೆ ಸೇರದಸಂಖ್ಯೆ ಯಾವುದು? 24, 36, 52, 72, 96

    (ಎ)    72
    (ಬಿ)    52
    (ಸಿ)    36
    (ಡಿ)    24

ಸರಿ ಉತ್ತರ

(ಬಿ) 52


96. ಮೂರು ಪೆನ್ಸಿಲ್ ಗಳ ಬೆಲೆ ಎರಡು ಎರೇಸರ್ ಗಳ ಬೆಲೆ ಒಂದೇ ಸಮ ಆಗಿರುತ್ತದೆ.
    ನಾಲ್ಕು ಎರೇಸರ್ ಗಳ ಬೆಲೆ ಒಂದು ರೂಲರ್ ನ ಬೆಲೆ ಒಂದೇ ಸಮ ಆಗಿರುತ್ತದೆ.
    ಪೆನ್ಸಿಲ್ ಗಳ ಬೆಲೆ ರೂಲರ್ ಬೆಲೆಗಿಂತ ಹೆಚ್ಚಾಗಿರುತ್ತದೆ.
    ಮೇಲಿನ ಮೊದಲ ಎರಡು ಹೇಳಿಕೆಗಳು ‘ಸರಿ’ ಇದ್ದಲ್ಲಿ, ಮೂರನೇ ಹೇಳಿಕೆಯು

    (ಎ)    ಸರಿ
    (ಬಿ)    ತಪ್ಪು
    (ಸಿ)    ಅನಿಶ್ಚಿತ
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಬಿ) ತಪ್ಪು


97. ಹೇಳಿಕೆ: ಏಕದಿನ ಕ್ರಿಕೆಟ್ ಪಂದ್ಯದಲ್ಲಿ, ಒಂದು ತಂಡದ ಒಟ್ಟು ರನ್ ಗಳು200 ಆಗಿರುತ್ತದೆ. 200 ರನ್ ಗಳಲ್ಲಿ, 160 ರನ್ ಗಳನ್ನು ಸ್ಪಿನ್ನರ್ ಗಳುಮಾಡಿರುತ್ತಾರೆ.
    ಸಮಾರೋಪ/ಕನ್ ಕ್ಲೂಶನ್ಸ್ :
    I.    ತಂಡದ80% ಆಟಗಾರರು ಸ್ಪಿನ್ನರ್ ಗಳಾಗಿರುತ್ತಾರೆ.
    II.    ಆರಂಭಿಕ ಬ್ಯಾಟ್ಸ್ ಮನ್ ಗಳು ಸ್ಪಿನ್ನರ್ ಗಳಾಗಿರುತ್ತಾರೆ.

    (ಎ)    ಕೇವಲ ಕನ್ ಕ್ಲೂಶನ್ I ಸರಿ
    (ಬಿ)    ಕೇವಲ ಕನ್ ಕ್ಲೂಶನ್ II ಸರಿ
    (ಸಿ)    I ಮತ್ತು II ಕನ್ ಕ್ಲೂಶನ್ ಗಳು ಸರಿ
    (ಡಿ)    ಎರಡೂ ಕನ್ ಕ್ಲೂಶನ್ ಗಳು ತಪ್ಪು

ಸರಿ ಉತ್ತರ

(ಡಿ) ಎರಡೂ ಕನ್ ಕ್ಲೂಶನ್ ಗಳು ತಪ್ಪು


98. ಸ್ಪಾಂಜ್ : ಸರಂಧ್ರ : : ರಬ್ಬರ್ : ?

    (ಎ)    ಬೃಹತ್ ದಪ್ಪ
    (ಬಿ)    ಗಟ್ಟಿ/ಘನ
    (ಸಿ)    ಇಲ್ಯಾಸ್ಟಿಕ್
    (ಡಿ)    ಬಗ್ಗಿಸಲಾಗದ

ಸರಿ ಉತ್ತರ

(ಸಿ) ಇಲ್ಯಾಸ್ಟಿಕ್


99. ದಳ: ಹೂವು, ಇದೇ ಹೋಲಿಕೆಯ ಪ್ರಕಾರ

    (ಎ)    ಉಪ್ಪು: ಕಾಳುಮೆಣಸು
    (ಬಿ)    ಟೈರ್ : ಸೈಕಲ್
    (ಸಿ)    ಬೇಸ್ : ಬಾಲ್
    (ಡಿ)    ಸ್ಯಾಂಡಲ್ : ಶೂ

ಸರಿ ಉತ್ತರ

(ಬಿ) ಟೈರ್ : ಸೈಕಲ್


100. ಈ ಗುಂಪಿಗೆ ಸೇರದ ಪದ ಯಾವುದು?

    (ಎ)    ಟೈರ್
    (ಬಿ)    ಸ್ಟಿಯರಿಂಗ್ ವೀಲ್
    (ಸಿ)    ಎಂಜಿನ್
    (ಡಿ)    ಕಾರ್

ಸರಿ ಉತ್ತರ

(ಡಿ) ಕಾರ್


ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment