WhatsApp Group Join Now
Telegram Group Join Now

Police Constable Previous Paper 18-10-2020

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ

 

1.ಬಿಎಸ್ಇ __________ಅನ್ನು ಸೂಚಿಸುತ್ತದೆ.
 (ಎ)ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌
 (ಬಿ)ಬಿಗ್ ಸ್ಟಾಕ್ ಎಕ್ಸ್‌ಚೇಂಜ್‌
 (ಸಿ)ಬಿಲ್ಡರ್ಸ್ ಸ್ಟಾಕ್ ಎಕ್ಸ್‌ಚೇಂಜ್‌
 (ಡಿ)ಬ್ರಿಡ್ಜ್ ಸ್ಟಾಕ್ ಎಕ್ಸ್‌ಚೇಂಜ್‌

CORRECT ANSWER

(ಎ) ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌


2.ಕೆಳಗಿನವುಗಳಲ್ಲಿ ಯಾವುದು, ಭಾರತದಲ್ಲಿ ಸರಕುಮಾರುಕಟ್ಟೆಗಳ ನಿಯಂತ್ರಕ ?
 (ಎ)ಆರ್‌ಬಿಐ
 (ಬಿ)ಎಸ್ಇಬಿಐ
 (ಸಿ)ಎಸ್‌ಬಿಐ
 (ಡಿ)ಫಾರ್ವರ್ಡ್ ಮಾರ್ಕೆಟ್ ಕಮಿಷನ್
CORRECT ANSWER

(ಬಿ) ಎಸ್ಇಬಿಐ
or
(ಡಿ) ಫಾರ್ವರ್ಡ್ ಮಾರ್ಕೆಟ್ ಕಮಿಷನ್


3.ಆದಾಯ ತೆರಿಗೆ ಒಂದು __________.
 (ಎ)ಪರೋಕ್ಷ ತೆರಿಗೆ
 (ಬಿ)ನೇರ ತೆರಿಗೆ
 (ಸಿ)ಪುನರುಜ್ಜಿವನ/ಪ್ರತಿಗಮನ ತೆರಿಗೆ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ನೇರ ತೆರಿಗೆ


4.ಜಿಎನ್‌ಪಿ, ಅರ್ಥಶಾಸ್ತ್ರದಲ್ಲಿ ________ಅನ್ನು ಸೂಚಿಸುತ್ತದೆ.
 (ಎ)ಗ್ರೊಸ್ ನಂಬರ್ ಪ್ರಾಡಕ್ಟ್
 (ಬಿ)ಗ್ರೊಸ್ ನ್ಯೂಟ್ರಲ್ ಪ್ರಾಡಕ್ಟ್
 (ಸಿ)ಗ್ರೊಸ್ ನ್ಯಾಶನಲ್ ಪ್ರಾಡಕ್ಟ್
 (ಡಿ)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಸಿ) ಗ್ರೊಸ್ ನ್ಯಾಶನಲ್ ಪ್ರಾಡಕ್ಟ್


5.ಮೂರು ಹುಡುಗರ ಸರಾಸರಿ ವಯಸ್ಸು 15 ವರ್ಷಗಳು. ಅವರ ವಯಸ್ಸಿನ ಅನುಪಾತ 3 : 5 : 7 ರ ಅನುಪಾತ ದಲ್ಲಿದ್ದರೆ, ಎಲ್ಲರಿಗಿಂತ ಕಿರಿಯ ಹುಡುಗನ ವಯಸ್ಸೇನು ?
 (ಎ)21 ವರ್ಷಗಳು
 (ಬಿ)18 ವರ್ಷಗಳು
 (ಸಿ)15 ವರ್ಷಗಳು
 (ಡಿ)9 ವರ್ಷಗಳು
CORRECT ANSWER

(ಡಿ) 9 ವರ್ಷಗಳು


6.A ಮತ್ತು B ಇಬ್ಬರೂ ಒಟ್ಟಿಗೆ ಒಂದು ಕೆಲಸವನ್ನು 15 ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ ಮತ್ತು B ಒಬ್ಬನೇ 20 ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ. ಹೀಗಿರುವಾಗ, A ಒಬ್ಬನೇ ಈ ಕೆಲಸವನ್ನು ಎಷ್ಟು ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ ?
 (ಎ)60
 (ಬಿ)45
 (ಸಿ)40
 (ಡಿ)30
CORRECT ANSWER

(ಎ) 60


7.ಈ ಕ್ರಮದಲ್ಲಿ, ಮುಂದಿನ ಅಂಕ ಯಾವುದು ?
1, 4, 9, 16, 25, 36, 49 __________.
 (ಎ)1
 (ಬಿ)9
 (ಸಿ)64
 (ಡಿ)99
CORRECT ANSWER

(ಸಿ) 64


8.ಈ ಸರಣಿಯಲ್ಲಿ ಹೊಂದಿಕೆಯಾಗದ ಸಂಖ್ಯೆ ಯಾವುದು?
3, 5, 11, 14, 17, 21
 (ಎ)21
 (ಬಿ)14
 (ಸಿ)17
 (ಡಿ)3
CORRECT ANSWER

(ಬಿ) 14


9.ಎರಡು ಸಂಖ್ಯೆಗಳ ಮೊತ್ತ 25 ಮತ್ತು ಅವುಗಳ ವ್ಯತ್ಯಾಸ 13 ಆದರೆ, ಅವುಗಳ ಗುಣಲಬ್ಧ ಏನು ?
 (ಎ)104
 (ಬಿ)114
 (ಸಿ)315
 (ಡಿ)325
CORRECT ANSWER

(ಬಿ) 114


10.ಒಂದು ಗಂಟೆಗೆ 60 ಕಿ.ಮೀ. ವೇಗದಲ್ಲಿ ಓಡುತ್ತಿರುವ ರೈಲುಗಾಡಿ, ಒಂದು ಕಂಬವನ್ನು ದಾಟಲು 9 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಈ ರೈಲುಗಾಡಿಯ ಉದ್ದವೆಷ್ಟು ?
 (ಎ)120 ಮೀ.
 (ಬಿ)180 ಮೀ.
 (ಸಿ)324 ಮೀ.
 (ಡಿ)150 ಮೀ.
CORRECT ANSWER

(ಡಿ) 150 ಮೀ.


11.ಕಾಣೆಯಾದ ಸಂಖ್ಯೆಯನ್ನು ಕಂಡು ಹಿಡಿಯಿರಿ.
 (ಎ)5
 (ಬಿ)10
 (ಸಿ)21
 (ಡಿ)15
CORRECT ANSWER

(ಬಿ) 10


12.ಒಂದು ಮರಗಳ ಸಾಲಿನಲ್ಲಿ, ಒಂದು ಮರವು ಎಡ ತುದಿಯಿಂದ ಏಳನೆಯದಾಗಿಯೂ, ಬಲ ತುದಿಯಿಂದ ಹದಿನಾಲ್ಕನೆಯದಾಗಿಯೂ ಇದೆ. ಆ ಸಾಲಿನಲ್ಲಿ ಮೊತ್ತವಾಗಿ/ಒಟ್ಟು ಎಷ್ಟು ಮರಗಳಿವೆ ?
 (ಎ)18
 (ಬಿ)19
 (ಸಿ)20
 (ಡಿ)21
CORRECT ANSWER

(ಸಿ) 20


13.a : b : c = 3 : 4 : 7 ಆದರೆ, ಅನುಪಾತ (a + b + 3) : c __________ ಗೆ ಸಮಾನವಾಗಿದೆ.
 (ಎ)2:1
 (ಬಿ)14 : 3
 (ಸಿ)7:2
 (ಡಿ)1:2
CORRECT ANSWER

(ಎ) 2:1


14.ಒಬ್ಬ ಕ್ರೀಡಾಪಟು 200 ಮೀಟರ್ ಓಟದ ಪಂದ್ಯವನ್ನು 24 ಸೆಕೆಂಡುಗಳಲ್ಲಿ ಪೂರ್ಣಗೊಳಿಸುತ್ತಾನೆ. ಅವನ ವೇಗ ______ ಕಿ.ಮೀ / ಗಂಟೆ ಇರುತ್ತದೆ.
 (ಎ)20
 (ಬಿ)24
 (ಸಿ)28.5
 (ಡಿ)30
CORRECT ANSWER

(ಡಿ) 30


15.ಕರ್ನಾಟಕ ರಾಜ್ಯದ ರಾಜ್ಯಪಕ್ಷಿ ಯಾವುದು ?
 (ಎ)ದೊಡ್ಡ ಹಾರ್ನ್‌ಬಿಲ್‌ (ಕೊಕ್ಕಿನ ಮೇಲೆ ಕೊಂಬಿನಂತೆ ಚಾಚುಳ್ಳ ಪಕ್ಷಿ)
 (ಬಿ)ಮನೆ ಗುಬ್ಬಚ್ಚಿ
 (ಸಿ)ಇಂಡಿಯನ್ ರೋಲರ್ (ನೀಲಕಂಠ)
 (ಡಿ)ಗ್ರೇಟರ್ ಫ್ಲೆಮಿಂಗೋ (ರಾಜಹಂಸ)
CORRECT ANSWER

(ಸಿ) ಇಂಡಿಯನ್ ರೋಲರ್ (ನೀಲಕಂಠ)


16.ಯುಎಸ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಟೆನಿಸ್ ಟೈಟಲ್ ಅನ್ನು 2020 ರಲ್ಲಿ ಯಾರು ಜಯಿಸಿದರು ?
 (ಎ)ನೊವಾಕ್ ಜೊಕೊವಿಕ್
 (ಬಿ)ಡೊಮಿನಿಕ್ ಥೀಮ್
 (ಸಿ)ರೋಜರ್ ಫೆಡರರ್
 (ಡಿ)ರೆಫೆಲ್ ನಡಾಲ್
CORRECT ANSWER

(ಬಿ) ಡೊಮಿನಿಕ್ ಥೀಮ್


17.ಇತ್ತೀಚೆಗೆ ಸ್ವರ್ಗಸ್ತರಾದ ಪಂಡಿತ ಜಸರಾಜ್ _______ ಜೊತೆ ಸಂಬಂಧಿಸಿದ್ದಾರೆ.
 (ಎ)ಕ್ರೀಡೆ
 (ಬಿ)ರಾಜಕಾರಣ
 (ಸಿ)ಸಂಗೀತ
 (ಡಿ)ನೃತ್ಯ
CORRECT ANSWER

(ಸಿ) ಸಂಗೀತ


18.ಸತ್ಯಪಾಲ್ ಮಲಿಕ್ ಅವರನ್ನು ಇತ್ತೀಚೆಗೆ _____________ ರಾಜ್ಯದ ರಾಜ್ಯಪಾಲರಾಗಿ ನಿಯಮಿಸಲಾಯಿತು.
 (ಎ)ನಾಗಾಲ್ಯಾಂಡ್
 (ಬಿ)ಮಧ್ಯಪ್ರದೇಶ
 (ಸಿ)ತೆಲಂಗಾಣ
 (ಡಿ)ಮೇಘಾಲಯ
CORRECT ANSWER

(ಡಿ) ಮೇಘಾಲಯ


19.ಅಶೋಕ್ ಲವಾಸ ಅವರ ಬದಲಿಗೆ, ಯಾರನ್ನು ಭಾರತದ ಹೊಸ ಚುನಾವಣಾ ಆಯುಕ್ತರು ಆಗಿ ನಿಯಮಿಸಲಾಗಿದೆ ?
 (ಎ)ಬಿಬೇಕ್ ಡೆಬ್ರಾಯ್
 (ಬಿ)ಅರವಿಂದ್ ಪನಗರಿಯ
 (ಸಿ)ರಾಜೀವ್ ಮೆಹರಿಷಿ
 (ಡಿ)ರಾಜೀವ್ ಕುಮಾರ್
CORRECT ANSWER

(ಡಿ) ರಾಜೀವ್ ಕುಮಾರ್


20.ಭಾರತದ ಅತ್ಯಂತ ಉದ್ದವಾದ ರೋಪ್‌ವೇಯನ್ನು ಯಾವ ನದಿಯ ಮೇಲೆ ಪ್ರಾರಂಭಿಸಲಾಗಿದೆ?
 (ಎ)ಬ್ರಹ್ಮಪುತ್ರ
 (ಬಿ)ಗಂಗಾ
 (ಸಿ)ಯಮುನಾ
 (ಡಿ)ನರ್ಮದಾ
CORRECT ANSWER

(ಎ) ಬ್ರಹ್ಮಪುತ್ರ


21.ಇಂದ್ರ (ಐಎನ್‌ಡಿಆರ್‌ಎ) – ಇದು ಯಾವ ರಾಷ್ಟ್ರದ ಜೊತೆ ಭಾರತೀಯ ನೌಕಾಪಡೆಯ ದ್ವಿಪಕ್ಷೀಯ ವ್ಯಾಯಾಮ ?
 (ಎ)ಫ್ರಾನ್ಸ್
 (ಬಿ)ಶ್ರೀಲಂಕಾ
 (ಸಿ)ರಷ್ಯಾ
 (ಡಿ)ಇಸ್ರೇಲ್
CORRECT ANSWER

(ಸಿ) ರಷ್ಯಾ


22.ನವೀನ ಅಭಿವೃದ್ಧಿ ಯೋಜನೆಯ ಮೂಲಕ ಕೃಷಿ ಸ್ಥಿತಿಸ್ಥಾಪಕತ್ವಕ್ಕಾಗಿ ಜಲಾನಯನ ಪ್ರದೇಶಗಳನ್ನು ಪುನಶ್ವೇತನಗೊಳಿಸುವುದು, ಇದನ್ನು ಯಾವ ರಾಜ್ಯ ಆರಂಭಿಸಿದೆ ?
 (ಎ)ಕರ್ನಾಟಕ
 (ಬಿ)ಅಸ್ಸಾಂ
 (ಸಿ)ಹರಿಯಾಣ
 (ಡಿ)ಕೇರಳ
CORRECT ANSWER

(ಎ) ಕರ್ನಾಟಕ


23.ಕರ್ನಾಟಕದಲ್ಲಿ, ಕೆಳಗಿನ ಯಾವ ಎಮ್ಮೆ ಓಟ ನಡೆಯುತ್ತದೆ ?
 (ಎ)ಬೇಯಿಲ್ ಗಾಡಿ ಶರಿಯತ್
 (ಬಿ)ಮರಮಡಿ
 (ಸಿ)ಜಲ್ಲಿಕಟ್ಟು
 (ಡಿ)ಕಂಬಳ
CORRECT ANSWER

(ಡಿ) ಕಂಬಳ


24.ಕರ್ನಾಟಕ ರಾಜ್ಯವು, ಕೋವಿಡ್ – 19 ಪೆಂಡಮಿಕ್ ವಿರುದ್ಧ ಹೋರಾಡಲು, ಯಾವ ಮೊಬೈಲ್ ಆ್ಯಪ್ ಅನ್ನು ಆರಂಭಿಸಿದೆ ?
 (ಎ)ಆಪ್ತಮಿತ್ರ
 (ಬಿ)ಸಿಒವಿಎ (ಕೊವ)
 (ಸಿ)ಮಹಾಕವಚ್
 (ಡಿ)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಎ) ಆಪ್ತಮಿತ್ರ


25.ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಅನ್ನು ಸ್ಥಾಪಿಸಲು, ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ ?
 (ಎ)ತುಮಕೂರು
 (ಬಿ)ಗಂಗಾವತಿ
 (ಸಿ)ಕಾರವಾರ
 (ಡಿ)ಶಿವಮೊಗ್ಗ
CORRECT ANSWER

(ಬಿ) ಗಂಗಾವತಿ


26.ಭಾರತದ ನಗರಾಭಿವೃದ್ಧಿ ಸಚಿವಾಲಯದ ಮೂಲಕ ಹೊರಪಟ್ಟ ಸ್ವಚ್ಛ ಭಾರತ ಶ್ರೇಯಾಂಕದಲ್ಲಿ ಉನ್ನತ ಸ್ಥಾನ ಯಾವ ನಗರಕ್ಕೆ ದೊರಕಿದೆ ?
 (ಎ)ಚೆನ್ನೈ
 (ಬಿ)ಪುಣೆ
 (ಸಿ)ಮೈಸೂರು
 (ಡಿ)ಬೆಂಗಳೂರು
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


27.ಇತ್ತೀಚೆಗೆ ಯಾವ ಅರಬ್ ರಾಷ್ಟ್ರ ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿತು ?
 (ಎ)ಇರಾನ್
 (ಬಿ)ಇರಾಕ್
 (ಸಿ)ಯುಎಇ
 (ಡಿ)ಯೆಮನ್
CORRECT ANSWER

(ಸಿ) ಯುಎಇ


28.ಕರ್ನಾಟಕ ರಾಜ್ಯದ ಮೊದಲ ರಾಜ್ಯಪಾಲ ಯಾರು ?
 (ಎ)ಜಯಚಾಮರಾಜೇಂದ್ರ ಓಡೆಯರ್
 (ಬಿ)ಎಸ್.ಎಮ್. ಶ್ರೀನಾಗೇಶ್
 (ಸಿ)ವಿ.ವಿ. ಗಿರಿ
 (ಡಿ)ಗುಂಡೂರಾವ್
CORRECT ANSWER

(ಎ) ಜಯಚಾಮರಾಜೇಂದ್ರ ಓಡೆಯರ್


29.ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ ?
 (ಎ)ಗದಗ
 (ಬಿ)ಚಿಕ್ಕಮಗಳೂರು
 (ಸಿ)ಹಾಸನ
 (ಡಿ)ಧಾರವಾಡ
CORRECT ANSWER

(ಬಿ) ಚಿಕ್ಕಮಗಳೂರು


30.‘ಅನ್ಶಿ’ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ನೆಲೆಸಿದೆ ?
 (ಎ)ಉಡುಪಿ
 (ಬಿ)ಉತ್ತರ ಕನ್ನಡ
 (ಸಿ)ಬಾಗಲಕೋಟೆ
 (ಡಿ)ಶಿವಮೊಗ್ಗ
CORRECT ANSWER

(ಬಿ) ಉತ್ತರ ಕನ್ನಡ


31.ಜಗಳ ಮುಕ್ತ ಆಡಳಿತಕ್ಕಾಗಿ, ಯಾವ ರಾಜ್ಯ ಸರ್ಕಾರ ಸೇವಾ ಸಿಂಧು ಎಂಬ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಆರಂಭಿಸಿದೆ ?
 (ಎ)ತೆಲಂಗಾಣ
 (ಬಿ)ತಮಿಳುನಾಡು
 (ಸಿ)ಆಂಧ್ರ ಪ್ರದೇಶ
 (ಡಿ)ಕರ್ನಾಟಕ
CORRECT ANSWER

(ಡಿ) ಕರ್ನಾಟಕ


32.ಇತ್ತೀಚಿನ ಸಮಾಚಾರದಲ್ಲಿದ್ದ ನುಬ್ರಾ ವ್ಯಾಲಿ ಯಾವ ರಾಜ್ಯ ಅಥವಾ ಯೂನಿಯನ್ ಪ್ರದೇಶದಲ್ಲಿದೆ ?
 (ಎ)ಪಂಜಾಬ್
 (ಬಿ)ಉತ್ತರಾಖಂಡ್
 (ಸಿ)ಅಸ್ಸಾಂ
 (ಡಿ)ಲಡಾಖ್
CORRECT ANSWER

(ಡಿ) ಲಡಾಖ್


33.ಇತ್ತೀಚೆಗೆ ಯಾರನ್ನು, ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ ನಿಯಮಿಸಲಾಯಿತು ?
 (ಎ)ಶರದ್ ಕುಮಾರ್
 (ಬಿ)ಬಿಮಲ್ ಜಲನ್
 (ಸಿ)ರತನ್ ತಿಯಮ್
 (ಡಿ)ಪರೇಶ್ ರಾವಲ್
CORRECT ANSWER

(ಡಿ) ಪರೇಶ್ ರಾವಲ್


34.ಭಾರತದ ಮೊದಲ ಸಂಯೋಜಿತ ವಾಯು ಆಂಬ್ಯುಲೆನ್ಸ್ ಸರ್ವಿಸ್ ಯಾವ ನಗರದಲ್ಲಿ ಆರಂಭಿಸಲಾಯಿತು ?
 (ಎ)ಕೊಲ್ಕತ್ತ
 (ಬಿ)ಚೆನ್ನೈ
 (ಸಿ)ಕೊಚ್ಚಿ
 (ಡಿ)ಬೆಂಗಳೂರು
CORRECT ANSWER

(ಡಿ) ಬೆಂಗಳೂರು


35.ಯಾವ ರಾಜ್ಯ, ಭಾರತದ ಮೊದಲ ಅಂತರರಾಷ್ಟ್ರೀಯ ಮಹಿಳಾ ವ್ಯಾಪಾರ ಕೇಂದ್ರವನ್ನು ಆರಂಭಿಸಲಿದೆ ?
 (ಎ)ಆಂಧ್ರ ಪ್ರದೇಶ
 (ಬಿ)ಕರ್ನಾಟಕ
 (ಸಿ)ಕೇರಳ
 (ಡಿ)ತಮಿಳುನಾಡು
CORRECT ANSWER

(ಸಿ) ಕೇರಳ


36.ಶ್ರೀಲಂಕಾದ ರಾಜಧಾನಿ ಯಾವುದು ?
 (ಎ)ಬ್ಯಾಂಕಾಕ್
 (ಬಿ)ಕೊಲಂಬೊ
 (ಸಿ)ತಿಂಪು
 (ಡಿ)ಕಾಠ್ಮಂಡು
CORRECT ANSWER

(ಬಿ) ಕೊಲಂಬೊ


37.ಟಿಯಾನ್‌ವೆನ್-1, ಯಾವ ರಾಷ್ಟ್ರದ ಸಾಮೂಹಿಕ ನಿಯೋಗ ?
 (ಎ)ಚೀನಾ
 (ಬಿ)ದಕ್ಷಿಣ ಕೊರಿಯಾ
 (ಸಿ)ಜಪಾನ್
 (ಡಿ)ಉತ್ತರ ಕೊರಿಯಾ
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


38.ಹಾರ್ನ್‌ಬಿಲ್‌ ಫೆಸ್ಟಿವಲ್ (ಹಬ್ಬ) ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ ?
 (ಎ)ಮಿಜೋರಂ
 (ಬಿ)ನಾಗಾಲ್ಯಾಂಡ್
 (ಸಿ)ಅಸ್ಸಾಂ
 (ಡಿ)ಸಿಕ್ಕಿಂ
CORRECT ANSWER

(ಬಿ) ನಾಗಾಲ್ಯಾಂಡ್


39.ಸಾಗರ ಮಾಹಿತಿ ಸೇವೆಗಳಿಗಾಗಿ ಭಾರತೀಯ ರಾಷ್ಟ್ರೀಯ ಕೇಂದ್ರ (INCOIS) ಯಾವ ನಗರದಲ್ಲಿದೆ ?
 (ಎ)ಬೆಂಗಳೂರು
 (ಬಿ)ಹೈದರಾಬಾದ್
 (ಸಿ)ಪುಣೆ
 (ಡಿ)ಸೂರತ್
CORRECT ANSWER

(ಬಿ) ಹೈದರಾಬಾದ್


40.ಕೊಂಕಣ ಕರಾವಳಿ __________ ಗಳ ನಡುವೆ ವಿಸ್ತರಿಸಿದೆ.
 (ಎ)ಚೆನ್ನೈ ಮತ್ತು ಕನ್ಯಾಕುಮಾರಿ
 (ಬಿ)ಕೊಲ್ಕತ್ತ ಮತ್ತು ವಿಶಾಖಪಟ್ಟಣಂ
 (ಸಿ)ಗೋವಾ ಮತ್ತು ಕೊಚ್ಚಿ
 (ಡಿ)ತಿರುವನಂತಪುರಮ್‌ನಿಂದ ಕನ್ಯಾಕುಮಾರಿ
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


41.ಭಾರತದಲ್ಲಿ ಯಾವ ರಾಜ್ಯಕ್ಕೆ ಅತಿದೊಡ್ಡ ಕರಾವಳಿ ಇದೆ ?
 (ಎ)ಗುಜರಾತ್
 (ಬಿ)ತಮಿಳುನಾಡು
 (ಸಿ)ಕರ್ನಾಟಕ
 (ಡಿ)ಆಂಧ್ರ ಪ್ರದೇಶ
CORRECT ANSWER

(ಎ) ಗುಜರಾತ್


42.ಕೆಳಗಿನ ಯಾವ ಅಕ್ಷಾಂಶ ಭಾರತದ ಮೂಲಕ ಹಾದುಹೋಗುತ್ತದೆ?
 (ಎ)ಸಮಭಾಜಕ
 (ಬಿ)ಆರ್ಕಟಿಕ್ ವಲಯ
 (ಸಿ)ಮಕರ ಸಂಕ್ರಾಂತಿ ವೃತ್ತ
 (ಡಿ)ಕ್ಯಾನ್ಸರ್‌ನ ಉಷ್ಣವಲಯ
CORRECT ANSWER

(ಡಿ) ಕ್ಯಾನ್ಸರ್‌ನ ಉಷ್ಣವಲಯ


43.ಮ್ಯಾಕ್ ಮಹೊನ್ ಲೈನ್__________ ನಡುವಿನ ಗಡಿಯನ್ನು ಗುರುತಿಸುತ್ತದೆ.
 (ಎ)ಭಾರತ ಮತ್ತು ಪಾಕಿಸ್ತಾನ
 (ಬಿ)ಭಾರತ ಮತ್ತು ಚೀನಾ
 (ಸಿ)ಭಾರತ ಮತ್ತು ನೇಪಾಳ
 (ಡಿ)ಭಾರತ ಮತ್ತು ಬಾಂಗ್ಲಾದೇಶ
CORRECT ANSWER

(ಬಿ) ಭಾರತ ಮತ್ತು ಚೀನಾ


44.ಕಾವೇರಿ ನದಿ __________ ಕಡೆಗೆ ಹರಿಯುತ್ತದೆ.
 (ಎ)ಕರ್ನಾಟಕದಿಂದ ಕೇರಳ
 (ಬಿ)ಕರ್ನಾಟಕದಿಂದ ತಮಿಳುನಾಡು
 (ಸಿ)ಕರ್ನಾಟಕದಿಂದ ಆಂಧ್ರಪ್ರದೇಶ
 (ಡಿ)ಕರ್ನಾಟಕದಿಂದ ತೆಲಂಗಾಣ
CORRECT ANSWER

(ಬಿ) ಕರ್ನಾಟಕದಿಂದ ತಮಿಳುನಾಡು


45.ಲಕ್ಷದ್ವೀಪದ ರಾಜಧಾನಿ
 (ಎ)ಪೋರ್ಟ್ ಬ್ಲೇರ್
 (ಬಿ)ಸಿಲ್ವಾಸ್ಸಾ
 (ಸಿ)ಐಜ್ವಾಲ್
 (ಡಿ)ಕವರಟ್ಟಿ
CORRECT ANSWER

(ಡಿ) ಕವರಟ್ಟಿ


46.ಗೋಲ್ ಗುಂಬಜ್ __________ ನಲ್ಲಿದೆ.
 (ಎ)ಬೀದರ್
 (ಬಿ)ಕಲ್ಬುರ್ಗಿ
 (ಸಿ)ವಿಜಯಪುರ
 (ಡಿ)ಧಾರವಾಡ
CORRECT ANSWER

(ಸಿ) ವಿಜಯಪುರ


47.ಯಾವ ನದಿಯಲ್ಲಿ ಜೋಗ್ ಫಾಲ್ಸ್ ಇದೆ ?
 (ಎ)ಕಾಳಿ
 (ಬಿ)ಅಗನಾಶಿನಿ
 (ಸಿ)ಶರಾವತಿ
 (ಡಿ)ತುಂಗ
CORRECT ANSWER

(ಸಿ) ಶರಾವತಿ


48.ಕಪ್ಪು ಮಣ್ಣು __________ ಬೆಳೆಯಲು ಹೆಚ್ಚು ಸೂಕ್ತವಾಗಿದೆ.
 (ಎ)ಸೇಬು
 (ಬಿ)ದ್ರಾಕ್ಷಿ
 (ಸಿ)ತೆಂಗಿನಕಾಯಿ
 (ಡಿ)ಹತ್ತಿ
CORRECT ANSWER

(ಡಿ) ಹತ್ತಿ


49.ದೇವ್‌ಬಾಗ್‌ ಬೀಚ್ __________ ನಲ್ಲಿದೆ.
 (ಎ)ಕಾರವಾರ
 (ಬಿ)ಉಡುಪಿ
 (ಸಿ)ಮಂಗಳೂರು
 (ಡಿ)ಚೆನ್ನೈ
CORRECT ANSWER

(ಎ) ಕಾರವಾರ


50.ಭಾರತದಲ್ಲಿ ಮಲ್‌ಬೆರ್ರ್ರಿ ರೇಷ್ಮೆಯ ಪ್ರಮುಖ ಉತ್ಪಾದಕ __________.
 (ಎ)ಜಮ್ಮು ಮತ್ತು ಕಾಶ್ಮೀರ
 (ಬಿ)ಜಾರ್ಖಂಡ್
 (ಸಿ)ಕರ್ನಾಟಕ
 (ಡಿ)ಅರುಣಾಚಲ ಪ್ರದೇಶ
CORRECT ANSWER

(ಸಿ) ಕರ್ನಾಟಕ


51.ರಾಬಿ ಬೆಳೆ __________ ನಲ್ಲಿ ಬಿತ್ತನೆ ಮಾಡಲಾಗುತ್ತದೆ.
 (ಎ)ಅಕ್ಟೋಬರ್- ನವೆಂಬರ್
 (ಬಿ)ಏಪ್ರಿಲ್- ಮೇ –
 (ಸಿ)ಜನವರಿ- ಫೆಬ್ರುವರಿ
 (ಡಿ)ಆಗಸ್ಟ್- ಸೆಪ್ಟೆಂಬರ್
CORRECT ANSWER

(ಎ) ಅಕ್ಟೋಬರ್- ನವೆಂಬರ್


52.ಸಿಂಧೂ ಕಣಿವೆಯ ನಾಗರೀಕತೆಯು __________ ಸೇರಿದೆಯೆಂದು ಹೇಳಲಾಗುತ್ತದೆ.
 (ಎ)ಪಾಲಿಯೊಲಿಥಿಕ್ (ಪೂರ್ವಶಿಲಾ ಯುಗ)
 (ಬಿ)ಪ್ರಾಚೀನ ಯುಗ
 (ಸಿ)ನಿಯೋಲಿಥಿಕ್ (ನೂತನಶಿಲಾ ಯುಗ)
 (ಡಿ)ಕಂಚಿನ ಯುಗ
CORRECT ANSWER

(ಡಿ) ಕಂಚಿನ ಯುಗ


53.ಬಾಕ್ಸೈಟ್ __________ನ ಅದಿರು.
 (ಎ)ಅಲ್ಯುಮಿನಿಯಂ
 (ಬಿ)ತಾಮ್ರ
 (ಸಿ)ಸತು
 (ಡಿ)ಮೈಕಾ
CORRECT ANSWER

(ಎ) ಅಲ್ಯುಮಿನಿಯಂ


54.ಕೆಳಗಿನ ಯಾವ ನದಿ, ವಿಂಧ್ಯಾ ಮತ್ತು ಸಾತ್ಪುರ ಪರ್ವತ ಶ್ರೇಣಿಗಳ ನಡುವೆ ಹರಿಯುತ್ತದೆ ?
 (ಎ)ಮಹಾನದಿ
 (ಬಿ)ತಾಪಿ
 (ಸಿ)ನರ್ಮದಾ
 (ಡಿ)ಚಂಬಲ್
CORRECT ANSWER

(ಸಿ) ನರ್ಮದಾ


55.ಹಂಪಿ __________ ನಲ್ಲಿದೆ.
 (ಎ)ಮಂಡ್ಯ
 (ಬಿ)ಹಾಸನ
 (ಸಿ)ರಾಯಚೂರು
 (ಡಿ)ಬಳ್ಳಾರಿ
CORRECT ANSWER

(ಡಿ) ಬಳ್ಳಾರಿ


56.ವಿಜಯನಗರ ರಾಜ್ಯವನ್ನು ಸ್ಥಾಪಿಸಲು, ಸಂಬಂಧಿಸಿದ ಆಧ್ಯಾತ್ಮಿಕ ನಾಯಕ ಯಾರು ?
 (ಎ)ರಾಮದಾಸ
 (ಬಿ)ವಿದ್ಯಾರಣ್ಯ
 (ಸಿ)ಪುರಂದರದಾಸ
 (ಡಿ)ಅಪ್ಪಯ್ಯ ದೀಕ್ಷಿತರ್
CORRECT ANSWER

(ಬಿ) ವಿದ್ಯಾರಣ್ಯ


57.ಗೌತಮ ಬುದ್ಧ ರಾಜಕುಮಾರನಾಗಿದ್ದಾಗ ಇದ್ದ ಹೆಸರು ____________
 (ಎ)ಗೌತಮ
 (ಬಿ)ಸಿದ್ದಾರ್ಥ
 (ಸಿ)ರಾಹುಲ್
 (ಡಿ)ಶುದ್ಧೋಧನ
CORRECT ANSWER

(ಬಿ) ಸಿದ್ದಾರ್ಥ


58.ಉಪನಿಷತ್ತುಗಳಲ್ಲಿ ಪ್ರತಿಪಾದಿಸಿದ ತತ್ವಶಾಸ್ತ್ರವನ್ನು ________ ಎಂದು ಕರೆಯುತ್ತಾರೆ.
 (ಎ)ಅದ್ವೈತ
 (ಬಿ)ವೇದಾಂತ
 (ಸಿ)ಯೋಗ
 (ಡಿ)ಸಾಂಖ್ಯ
CORRECT ANSWER

(ಬಿ) ವೇದಾಂತ


59.ಜೈನ ಧರ್ಮದ ಸ್ಥಾಪಕ __________.
 (ಎ)ರಿಷಭ
 (ಬಿ)ನೇಮಿನಾಥ
 (ಸಿ)ಪಾರ್ಷವನಾಥ
 (ಡಿ)ವರ್ಧಮಾನ ಮಹಾವೀರ
CORRECT ANSWER

(ಎ) ರಿಷಭ


60.ಬೇಲೂರು ಮತ್ತು ಹಳೇಬೀಡಿನ ಮಂದಿರಗಳು ಯಾವ ರಾಜವಂಶಕ್ಕೆ ಸೇರಿದವು ?
 (ಎ)ಹೊಯ್ಸಳರು
 (ಬಿ)ಚಾಲುಕ್ಯರು
 (ಸಿ)ಚೋಳರು
 (ಡಿ)ರಾಷ್ಟ್ರಕೂಟರು
CORRECT ANSWER

(ಎ) ಹೊಯ್ಸಳರು


61.ಮಜಲ್ ಖಾನ್, ಶಿವಾಜಿಯೊಂದಿಗೆ ಯುದ್ಧ ಮಾಡಿದವನು __________ ದ ಆಡಳಿತಗಾರ.
 (ಎ)ಬಿಜಾಪುರ
 (ಬಿ)ನಿಜಾಮ್
 (ಸಿ)ಗೋಲ್ಗೊಂಡ
 (ಡಿ)ಬೆಂಗಾಲ್ (ಬಂಗಾಳ)
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


62.ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಪರಿಗಣಿಸಲಾಗುತ್ತದೆ ?
 (ಎ)ಪುರಂದರದಾಸ
 (ಬಿ)ಕನಕದಾಸ
 (ಸಿ)ಬಸವಣ್ಣ
 (ಡಿ)ಅಲ್ಲಮ ಪ್ರಭು
CORRECT ANSWER

(ಎ) ಪುರಂದರದಾಸ


63.ಶ್ರವಣಬೆಳಗೊಳ __________ಗೆ ಒಂದು ಮುಖ್ಯವಾದ ತೀರ್ಥಯಾತ್ರ ಕೇಂದ್ರವಾಗಿದೆ.
 (ಎ)ಹಿಂದೂಗಳು
 (ಬಿ)ಸಿಖ್ಖರು
 (ಸಿ)ಮುಸಲ್ಮಾನರು
 (ಡಿ)ಜೈನರು
CORRECT ANSWER

(ಡಿ) ಜೈನರು


64.ಕನ್ನಡ ಸಾಹಿತ್ಯ ಪರಿಷತ್ತು ಯಾವಗ ನಿರ್ಮಿಸಲಾಯಿತು ?
 (ಎ)1902
 (ಬಿ)1915
 (ಸಿ)1922
 (ಡಿ)1935
CORRECT ANSWER

(ಬಿ) 1915


65.ಮೊದಲನೆಯ ಆಂಗ್ಲೊ – ಮೈಸೂರು ಯುದ್ಧ ಯಾವಾಗ ನಡೆಯಿತು ?
 (ಎ)1855
 (ಬಿ)1870
 (ಸಿ)1716
 (ಡಿ)1767
CORRECT ANSWER

(ಡಿ) 1767


66.ಕೆಳಗಿನ ಯಾವುದು ಮೊದಲ ಕನ್ನಡ ಚಲನಚಿತ್ರ ?
 (ಎ)ಗುಬ್ಬಿ ವೀರಣ್ಣ
 (ಬಿ)ಭಟ್ಕಲ್ ಧ್ರುವ
 (ಸಿ)ಸತಿ ಸುಲೋಚನ
 (ಡಿ)ಪಂಡರಿಬಾಯಿ
CORRECT ANSWER

(ಸಿ) ಸತಿ ಸುಲೋಚನ


67.ಬೇಲೂರಿನಲ್ಲಿರುವ ಪ್ರಖ್ಯಾತವಾದ ಮಂದಿರ ಯಾವುದು ?
 (ಎ)ಚೆನ್ನಕೇಶವ ಮಂದಿರ
 (ಬಿ)ಹನುಮಾನ್ ಮಂದಿರ
 (ಸಿ)ಗಣೇಶ ಮಂದಿರ
 (ಡಿ)ವಿಷ್ಣು ಮಂದಿರ
CORRECT ANSWER

(ಎ) ಚೆನ್ನಕೇಶವ ಮಂದಿರ


68.1905 ರಲ್ಲಿ, ಭಾರತದ ಸೇವಕರ ಸಮಾಜವನ್ನು __________ ಸ್ಥಾಪಿಸಿದರು.
 (ಎ)ಬಿ.ಜಿ. ತಿಲಕ್
 (ಬಿ)ಲಾಲಾ ಲಜಪತ್ ರಾಯ್
 (ಸಿ)ಗೋಪಾಲ ಕೃಷ್ಣ ಗೋಖಲೆ
 (ಡಿ)ಅರಬಿಂದೋ ಘೋಷ್
CORRECT ANSWER

(ಸಿ) ಗೋಪಾಲ ಕೃಷ್ಣ ಗೋಖಲೆ


69.ಗಾಂಧಿ-ಇರ್ವಿನ್ ಒಪ್ಪಂದಕ್ಕೆ __________ ವರ್ಷದಲ್ಲಿ ಸಹಿ/ರುಜು ಮಾಡಲಾಯಿತು,
 (ಎ)1928
 (ಬಿ)1930
 (ಸಿ)1931
 (ಡಿ)1935
CORRECT ANSWER

(ಸಿ) 1931


70.ಖಿಲಾಫತ್ ಚಳುವಳಿಯನ್ನು __________ಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸಂಘಟಿಸಲಾಯಿತು.
 (ಎ)ಪರ್ಶಿಯಾ
 (ಬಿ)ಟರ್ಕಿ
 (ಸಿ)ಅರೇಬಿಯಾ
 (ಡಿ)ಈಜಿಪ್ಟ್
CORRECT ANSWER

(ಬಿ) ಟರ್ಕಿ


71.ಸಂಪತ್ತಿನ ಬರಿದಾಗುವುದು – ಈ ಸಿದ್ದಾಂತದ ಮುಖ್ಯ ಪ್ರತಿಪಾದಕ ಯಾರು ?
 (ಎ)ಆರ್.ಸಿ. ದತ್
 (ಬಿ)ದಾದಾಬಾಯಿ ನವರೋಜಿ
 (ಸಿ)ಡಿ.ಆರ್. ಗಡೋಯಿಲ್
 (ಡಿ)ಕಾರ್ಲ್ ಮಾನೆ
CORRECT ANSWER

(ಬಿ) ದಾದಾಬಾಯಿ ನವರೋಜಿ


72.ಗಾಜು __________ನ ಮಿಶ್ರಣ.
 (ಎ)ಸ್ಫಟಿಕಶಿಲೆ ಮತ್ತು ಮೈಕಾ
 (ಬಿ)ಮರಳು ಮತ್ತು ಸಿಲಿಕೇಟ್
 (ಸಿ)ಉಪ್ಪು ಮತ್ತು ಸ್ಪಟಿಕಶಿಲೆ
 (ಡಿ)ಮರಳು ಮತ್ತು ಉಪ್ಪು
CORRECT ANSWER

(ಬಿ) ಮರಳು ಮತ್ತು ಸಿಲಿಕೇಟ್


73.ಕೆಳಗಿನವುಗಳಲ್ಲಿ ಯಾವುದನ್ನು ಸೀಸದ ಕಡ್ಡಿಯಲ್ಲಿ ಉಪಯೋಗಿಸಲಾಗುತ್ತದೆ ?
 (ಎ)ಗ್ರಾಫೈಟ್
 (ಬಿ)ಸಿಲಿಕಾನ್
 (ಸಿ)ಚಾರ್‌ಕೋಲ್‌
 (ಡಿ)ಫಾಸ್ಪರಸ್
CORRECT ANSWER

(ಎ) ಗ್ರಾಫೈಟ್


74.ವಿದ್ಯುತ್ ಬಲ್ಬನ ತಂತು _______ ನಿಂದ ಮಾಡಲಾಗುತ್ತದೆ.
 (ಎ)ತಾಮ್ರ
 (ಬಿ)ಅಲ್ಯುಮಿನಿಯಂ
 (ಸಿ)ಸೀಸ
 (ಡಿ)ಟಂಗ್‌ಸ್ಟನ್‌
CORRECT ANSWER

(ಡಿ) ಟಂಗ್ಸ್ಟನ್


75.ಒಂದು ಕಿಲೋಮೀಟರ್__________ಮೈಲಿಯ ಸಮಾನ.
 (ಎ)0.84
 (ಬಿ)0.5
 (ಸಿ)1.6
 (ಡಿ)0.62
CORRECT ANSWER

(ಡಿ) 0.62


76.ಸಸ್ಯಗಳು ಕರಗಿದ ನೈಟ್ರೇಟ್‌ಗಳನ್ನು ಮಣ್ಣಿನಿಂದ ಹೀರಿಕೊಳ್ಳುತ್ತವೆ ಮತ್ತು ಅದನ್ನು __________ಆಗಿ ಪರಿವರ್ತಿಸುತ್ತವೆ.
 (ಎ)ಸ್ಟೇಚ್ಛೆಯಾಗಿರುವ ಸಾರಜನಕ
 (ಬಿ)ಯೂರಿಯ
 (ಸಿ)ಅಮೋನಿಯಾ
 (ಡಿ)ಪ್ರೊಟೀನ್‌ಗಳು
CORRECT ANSWER

(ಎ) ಸ್ಟೇಚ್ಛೆಯಾಗಿರುವ ಸಾರಜನಕ


77.ಯಾವ ಪದರ, ಸೂರ್ಯನ ಹಾನಿಕಾರಕ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ ?
 (ಎ)ಆಯಾನುಗೋಳ
 (ಬಿ)ಓಜೋನ್ ಪದರ
 (ಸಿ)ಉಷ್ಣವಲಯ
 (ಡಿ)ಮೆಗ್ನೆಟೋಸ್ಪಿಯರ್
CORRECT ANSWER

(ಬಿ) ಓಜೋನ್ ಪದರ


78.ಈ ಕೆಳಗಿನ ಯಾವುದನ್ನು ಪರಮಾಣು ರಿಯಾಕ್ಟರ್ ನಲ್ಲಿ ಮಾಡರೇಟರ್ ಆಗಿ ಉಪಯೋಗಿಸಲಾಗುತ್ತದೆ ?
 (ಎ)ಥೋರಿಯಮ್
 (ಬಿ)ಗ್ರಾಫೈಟ್
 (ಸಿ)ರೇಡಿಯಮ್
 (ಡಿ)ಸಾಮಾನ್ಯ ನೀರು
CORRECT ANSWER

(ಬಿ) ಗ್ರಾಫೈಟ್
or
(ಡಿ) ಸಾಮಾನ್ಯ ನೀರು


79.ಮಂಪ್ಸ್ ಎಂಬ ರೋಗ _______ ನಿಂದ ಉಂಟಾಗುವುದು.
 (ಎ)ಬೂಷ್ಟು
 (ಬಿ)ಬ್ಯಾಕ್ಟೀರಿಯಂ
 (ಸಿ)ವೈರಸ್
 (ಡಿ)ಪಾಚಿ
CORRECT ANSWER

(ಸಿ) ವೈರಸ್


80.ಈ ಕೆಳಗಿನ ಯಾವುದು ಅಂತರ್ಜಾಲ ಕಾರ್ಯಕ್ರಮ/ಪರಿವಿಡಿಯ ಭಾಷೆ ಅಲ್ಲ?
 (ಎ)BASIC
 (ಬಿ)C++
 (ಸಿ)JAVA
 (ಡಿ)MICROSOFT
CORRECT ANSWER

(ಡಿ) MICROSOFT


81.ಮೈಕ್ರೋಸಾಫ್ಟ್ ವರ್ಡ್ ________ನ ಒಂದು ಉದಾಹರಣೆ.
 (ಎ)ಆಪರೇಟಿಂಗ್ ಸಿಸ್ಟಮ್
 (ಬಿ)ಇನ್‌ಪುಟ್‌ ಡಿವೈಸ್
 (ಸಿ)ಅಪ್ಲಿಕೇಶನ್ ಸಾಫ್ಟ್‌ವೇರ್‌
 (ಡಿ)ಪ್ರೊಸೆಸಿಂಗ್ ಡಿವೈಸ್
CORRECT ANSWER

(ಸಿ) ಅಪ್ಲಿಕೇಶನ್ ಸಾಫ್ಟ್‌ವೇರ್‌


82.ಅಂತರ್ಜಾಲ ವೈರಾಣು (ವೈರಸ್) ಒಂದು __________.
 (ಎ)ಹಾರ್ಡ್‌ವೇರ್‌ (ಯಂತ್ರಾಂಶ)
 (ಬಿ)ಸಾಫ್ಟ್‌ವೇರ್‌
 (ಸಿ)ಬ್ಯಾಕ್ಟೀರಿಯಾ
 (ಡಿ)ಫ್ರೀವೇರ್
CORRECT ANSWER

(ಬಿ) ಸಾಫ್ಟ್‌ವೇರ್‌


83.ವರ್ಲ್ಡ್ ವೈಡ್ ವ್‌ಬ್‌ನ್ನು ಪ್ರವೇಶಿಸಲು __________ ಮಾರ್ಗವಾಗಿದೆ.
 (ಎ)ಬ್ರೌಸರ್‌ಗಳು
 (ಬಿ)ವಾಟ್ಸಪ್
 (ಸಿ)ಹೈ ಬ್ಯಾಂಡ್‌ವಿಡ್ತ್‌(ಹೆಚ್ಚಿನ ಬ್ಯಾಂಡ್ ಅಗಲ)
 (ಡಿ)ಸರ್ಚ್ ಎಂಜಿನ್
CORRECT ANSWER

(ಎ) ಬ್ರೌಸರ್‌ಗಳು


84.ಎಲ್ಎಎನ್ __________ ಅನ್ನು ಸೂಚಿಸುತ್ತದೆ.
 (ಎ)ಲಾಸ್ಟ್ ಅಫೋರ್ಡಬಲ್ ನೆಟ್‌ವರ್ಕ್‌
 (ಬಿ)ಲೀಸಡ್ ಏರಿಯಾ ನೆಟ್‌ವರ್ಕ್‌
 (ಸಿ)ಲೆಟೆನ್ಸಿ ಅರೌಂಡ್ ನೆಟ್‌ವರ್ಕ್‌
 (ಡಿ)ಲೋಕಲ್ ಏರಿಯಾ ನೆಟ್‌ವರ್ಕ್‌
CORRECT ANSWER

(ಡಿ) ಲೋಕಲ್ ಏರಿಯಾ ನೆಟ್‌ವರ್ಕ್‌


85.ಅಂತರ್ಜಾಲ ತಂತ್ರಜ್ಞಾನದಲ್ಲಿ ಡಿಎನ್ಎಸ್ ಸೂಚಿಸುತ್ತದೆ.
 (ಎ)ಡಿಸ್ಟ್ರಿಬ್ಯೂಟೆಡ್ ನೇಮ್ ಸಿಸ್ಟಮ್
 (ಬಿ)ಡೇಟಾ ನೇಮ್ ಸಿಸ್ಟಮ್
 (ಸಿ)ಡೊಮೈನ್ ನೇಮ್ ಸಿಸ್ಟಮ್
 (ಡಿ)ಡೈನಮಿಕ್ ನೇಮ್ ಸಿಸ್ಟಮ್
CORRECT ANSWER

(ಸಿ) ಡೊಮೈನ್ ನೇಮ್ ಸಿಸ್ಟಮ್


86.ದಾಖಲೆಗಳಲ್ಲಿ ಕೊನೆಯ ಕ್ರಿಯೆಯಾಗಿರುವ, ‘‘ಅನ್‌ಡು’’ ವಿನ ಶಾರ್ಟ್ ಕಟ್ ಕೀ ಯಾವುದು?
 (ಎ)Ctrl + X
 (ಬಿ)Ctrl + Z
 (ಸಿ)Ctrl + Y
 (ಡಿ)Ctrl + U
CORRECT ANSWER

(ಬಿ) Ctrl + Z


87.ಕೆಳಗಿನ ಯಾವುದು ಇನ್‌ಪುಟ್‌ ಸಾಧನ ಅಲ್ಲ?
 (ಎ)ಕೀಬೋರ್ಡ್
 (ಬಿ)ಜಾಯ್ ಸ್ಟಿಕ್
 (ಸಿ)ಮುದ್ರಕಗಳು
 (ಡಿ)ಸ್ಕ್ಯಾನರ್ (ಕ್ಷಿಪ್ರವೀಕ್ಷಕ)
CORRECT ANSWER

(ಸಿ) ಮುದ್ರಕಗಳು


88.ಕೆಳಗಿನ ಯಾವುದು ಅತ್ಯಂತ ದೊಡ್ಡ ಶೇಖರಣಾ ಘಟಕವಾಗಿದೆ ?
 (ಎ)ಗಿಗಾಬೈಟ್
 (ಬಿ)ಕಿಲೊಬೈಟ್
 (ಸಿ)ಟೆರಾಬೈಟ್
 (ಡಿ)ಮೆಗಾಬೈಟ್
CORRECT ANSWER

(ಸಿ) ಟೆರಾಬೈಟ್


89.__________ನಿಂದ ಮಾಹಿತಿಯನ್ನು ಹಂಚಿಕೊಳ್ಳಲು ಎರಡು ಅಥವಾ ಹೆಚ್ಚಿನ ಕಂಪ್ಯೂಟರ್‌ಗಳನ್ನು ಸಂಪರ್ಕಿಸ/ ಜೋಡಿಸಲಾಗುತ್ತದೆ.
 (ಎ)ಪೈಪ್‌ಲೈನ್‌
 (ಬಿ)ನೆಟ್‌ವರ್ಕ್‌
 (ಸಿ)ಟನ್ನಲ್
 (ಡಿ)ರೌಟರ್
CORRECT ANSWER

(ಬಿ) ನೆಟ್‌ವರ್ಕ್‌


90.ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸದಸ್ಯರನ್ನು, ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಯನ್ನು __________ನಲ್ಲಿ ಒದಗಿಸಲಾಗಿದೆ.
 (ಎ)ಸಂವಿಧಾನದ ಹತ್ತನೆಯ ವಿವರಪಟ್ಟಿ
 (ಬಿ)ಸಂವಿಧಾನದ ಹನ್ನೊಂದನೆಯ ವಿವರಪಟ್ಟಿ
 (ಸಿ)ಸಂವಿಧಾನದ ಏಳನೆಯ ವಿವರಪಟ್ಟಿ
 (ಡಿ)ಸಂವಿಧಾನದ ಹನ್ನೆರಡನೆಯ ವಿವರಪಟ್ಟಿ
CORRECT ANSWER

(ಎ) ಸಂವಿಧಾನದ ಹತ್ತನೆಯ ವಿವರಪಟ್ಟಿ


91.ಒಬ್ಬ ರಾಜ್ಯಪಾಲರು, ರಾಷ್ಟ್ರಪತಿಯ ಇಚ್ಛೆಯನ್ನುಸಾರ ತಮ್ಮ ಪದವಿ/ಅಶಿಕಾರದಲ್ಲಿದ್ದರೂ ಸಹ, __________ ರ ಒಂದು ಅವಿಭಾಜ್ಯ ಅಂಗವಾಗಿದ್ದಾರೆ.
 (ಎ)ಲೋಕಸಭೆ
 (ಬಿ)ರಾಜ್ಯ ಶಾಸಕಾಂಗ
 (ಸಿ)ರಾಜ್ಯಸಭೆ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ರಾಜ್ಯ ಶಾಸಕಾಂಗ


92.ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು (ರೈಟ್ ಟು ಲೈಫ್ ಅಂಡ್ ಲಿಬರ್ಟಿ), ಇದನ್ನು __________ ನಲ್ಲಿ ಖಾತ್ರಿ ಪಡಿಸಲಾಗಿದೆ.
 (ಎ)ಸಂವಿಧಾನದ ಹನ್ನೆರಡನೆಯ ಲೇಖನದಲ್ಲಿ
 (ಬಿ)ಸಂವಿಧಾನದ ಹದಿಮೂರನೆಯ ಲೇಖನದಲ್ಲಿ
 (ಸಿ)ಸಂವಿಧಾನದ ಹದಿನೈದನೆಯ ಲೇಖನದಲ್ಲಿ
 (ಡಿ)ಸಂವಿಧಾನದ ಇಪ್ಪತ್ತೊಂದನೆಯ ಲೇಖನದಲ್ಲಿ
CORRECT ANSWER

(ಡಿ) ಸಂವಿಧಾನದ ಇಪ್ಪತ್ತೊಂದನೆಯ ಲೇಖನದಲ್ಲಿ


93.ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು __________ ನಲ್ಲಿ ಪ್ರತಿಷ್ಠಾಪಿಸಲಾಗಿದೆ.
 (ಎ)ಸಂವಿಧಾನದ ಐದನೆಯ ಭಾಗ
 (ಬಿ)ಸಂವಿಧಾನದ ಆರನೆಯ ಭಾಗ
 (ಸಿ)ಸಂವಿಧಾನದ ಮೂರನೆಯ ಭಾಗ
 (ಡಿ)ಸಂವಿಧಾನದ ನಾಲ್ಕನೆಯ ಭಾಗ
CORRECT ANSWER

(ಡಿ) ಸಂವಿಧಾನದ ನಾಲ್ಕನೆಯ ಭಾಗ


94.ರಾಷ್ಟ್ರಗೀತೆಯನ್ನು ಬರೆದವರು __________.
 (ಎ)ಬಂಕಿಮ್ ಚಂದ್ರ ಚಟರ್ಜಿ
 (ಬಿ)ರವೀಂದ್ರನಾಥ ಟ್ಯಾಗೋರ್
 (ಸಿ)ಶರತ್‌ಚಂದ್ರ ಚಟರ್ಜಿ
 (ಡಿ)ಅರಬಿಂದೊ ಘೋಶ್
CORRECT ANSWER

(ಬಿ) ರವೀಂದ್ರನಾಥ ಟ್ಯಾಗೋರ್


95.ಲೋಕಸಭೆಯ ಚುನಾವಣೆಗೆ ನಿಲ್ಲಲು, ಕನಿಷ್ಠ ವಯಸ್ಸು ______ ಇದೆ.
 (ಎ)25 ವರ್ಷಗಳು
 (ಬಿ)21 ವರ್ಷಗಳು
 (ಸಿ)18 ವರ್ಷಗಳು
 (ಡಿ)35 ವರ್ಷಗಳು
CORRECT ANSWER

(ಎ) 25 ವರ್ಷಗಳು


96.ಭಾರತದಲ್ಲಿ ಮತದಾರನ ಕನಿಷ್ಠ ವಯಸ್ಸು __________.
 (ಎ)15 ವರ್ಷಗಳು
 (ಬಿ)18 ವರ್ಷಗಳು
 (ಸಿ)21 ವರ್ಷಗಳು
 (ಡಿ)25 ವರ್ಷಗಳು
CORRECT ANSWER

(ಬಿ) 18 ವರ್ಷಗಳು


97.ರಾಜ್ಯಸಭೆಯ ಸದಸ್ಯರನ್ನು __________ ವರ್ಷಗಳಿಗೊಸ್ಕರ ಚುನಾಯಿಸಲಾಗುತ್ತದೆ.
 (ಎ)ಐದು
 (ಬಿ)ಮೂರು
 (ಸಿ)ಆರು
 (ಡಿ)ಹತ್ತು
CORRECT ANSWER

(ಸಿ) ಆರು


98.ಭಾರತದ ಸಂವಿಧಾನದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷರು __________.
 (ಎ)ವಿರೋಧ ಪಕ್ಷದ ನಾಯಕ
 (ಬಿ)ಲೋಕಸಭೆಯ ಸಭಾಪತಿ
 (ಸಿ)ಲೋಕಸಭೆಯ ಡೆಪ್ಯೂಟಿ ಚೇರ್ಮನ್ (ಅಧ್ಯಕ್ಷರು)
 (ಡಿ)ರಾಜ್ಯಸಭೆಯ ಚೇರ್ಮನ್ (ಅಧ್ಯಕ್ಷರು)
CORRECT ANSWER

(ಎ) ವಿರೋಧ ಪಕ್ಷದ ನಾಯಕ


99.__________ ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ.
 (ಎ)ರಾಜ್ಯಪಾಲ
 (ಬಿ)ರಾಷ್ಟ್ರಪತಿ
 (ಸಿ)ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ
 (ಡಿ)ಉಚ್ಚ ನ್ಯಾಯಾಲಯ (ಹೈ ಕೋರ್ಟ್)ದ ಮುಖ್ಯ ನ್ಯಾಯಾಧೀಶ
CORRECT ANSWER

(ಎ) ರಾಜ್ಯಪಾಲ


100.ಬ್ಯಾಂಕ್ ದರ ಎಂದರೆ, ಬ್ಯಾಂಕಿನ ದರ ಈ ಪ್ರಮಾಣವಾಗಿರಬಹುದು.
 (ಎ)ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವದಿಯ ಸಾಲವನ್ನು ನೀಡುವುದು
 (ಬಿ)ವಾಣಿಜ್ಯ ಬ್ಯಾಂಕ್ ಅವರ ಗ್ರಾಹಕರಿಗೆ ಸಾಲವನ್ನು ಕೊಡುವುದು
 (ಸಿ)ಆರ್‌ಬಿಐ ದೀರ್ಘಕಾಲಾವಧಿಯ ಸಾಲವನ್ನು ವಾಣಿಜ್ಯ ಬ್ಯಾಂಕುಗಳಿಗೆ ಕೊಡುವುದು
 (ಡಿ)ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಒಂದು ರಾತ್ರಿ ಅವಧಿಗೆ ಹಣವನ್ನು ಎರವಲು ಪಡೆಯುವುದು
CORRECT ANSWER

(ಎ) ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವದಿಯ ಸಾಲವನ್ನು ನೀಡುವುದು

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment