WhatsApp Group Join Now
Telegram Group Join Now

Police Constable Previous Paper 20-09-2020

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ

 

1.ಕಂಪ್ಯೂಟರ್ ಬಳಕೆದಾರರ ಅರಿವಿಲ್ಲದೆ, ಅನಗತ್ಯ ಸಾಫ್ಟ್‌ವೇರ್‌ ಅನ್ನು ಸ್ಥಾಪಿಸುವುದು ಮತ್ತು ಇಂಟರ್‌ನೆಟ್‌ ಬಳಕೆಯ ಡೇಟಾ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯುವುದು, ಇದನ್ನು ______ ಎಂದು ಕರೆಯಲಾಗುತ್ತದೆ.
 (ಎ)ರಾನ್ಸಮ್‌ವೇರ್‌
 (ಬಿ)ಸ್ಪೈವೇರ್
 (ಸಿ)ಟ್ರೋಜನ್
 (ಡಿ)ಕೀ ಲೊಗ್ಗರ್

CORRECT ANSWER

(ಬಿ) ಸ್ಪೈವೇರ್


2.ಮಿನಮಟ ಎಂಬ ರೋಗ, ಯಾವ ಲೋಹದಿಂದಾಗುತ್ತದೆ ?
 (ಎ)ಸೀಸ
 (ಬಿ)ನಿಕ್ಕಲ್
 (ಸಿ)ಪಾದರಸ
 (ಡಿ)ಫ್ಲೋರೀನ್
CORRECT ANSWER

(ಸಿ) ಪಾದರಸ


3.ಸರಕು ಮತ್ತು ಸೇವಾ ತೆರಿಗೆಯು ಒಂದು ______ .
 (ಎ)ನೇರ ತೆರಿಗೆ
 (ಬಿ)ಪರೋಕ್ಷ ತೆರಿಗೆ
 (ಸಿ)ಆದಾಯ ತೆರಿಗೆಯ ಭಾಗ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ಪರೋಕ್ಷ ತೆರಿಗೆ


4.ಆರ್‌ಬಿಐ ಮೊನೆಟರಿ ಪಾಲಿಸಿಯ ಸಂಬಂಧದಲ್ಲಿ, ಸಿಆರ್ಆರ್ ಎಂಬ ಪದವು ______ ಅನ್ನು ಸೂಚಿಸುತ್ತದೆ:
 (ಎ)ಕ್ಯಾಶ್ ರಿಸರ್ವ್ ರೇಶಿಯೊ
 (ಬಿ)ಕರೆನ್ಸಿ ರಿಸರ್ವ್ ರೇಶಿಯೊ
 (ಸಿ)ಕ್ಯಾಶ್ ರಿಸರ್ವ್ ರೇಟ್
 (ಡಿ)ಕರೆನ್ಸಿ ರಿಸರ್ವ್ ರೇಟ್
CORRECT ANSWER

(ಎ) ಕ್ಯಾಶ್ ರಿಸರ್ವ್ ರೇಶಿಯೊ


5.ಹಣಕಾಸು ವಲಯದಲ್ಲಿ ಎನ್‌ಪಿಎ ಮತ್ತು ಸ್ಟ್ರೆಸಡ್ ಅಸೆಟ್ಸ್ ______ ಅನ್ನು ಸೂಚಿಸುತ್ತದೆ.
 (ಎ)ವಿಮಾ ಕಂಪನಿಗಳು
 (ಬಿ)ಚಿಟ್ ಫಡ್‌ಗಳು
 (ಸಿ)ಬ್ಯಾಂಕ್‌ಗಳು
 (ಡಿ)ಮ್ಯೂಚುವಲ್ ಫಂಡ್ ಕಂಪನಿಗಳು
CORRECT ANSWER

(ಸಿ) ಬ್ಯಾಂಕ್‌ಗಳು


6.ಖಾದ್ಯಶ್ರೇಣಿ (ಫುಡ್ ಚೈನ್) ಯಲ್ಲಿ, ಹುಲ್ಲು ತಿನ್ನುವ ಪ್ರಾಣಿ ಜಾತಿಯನ್ನು ______ ಎಂದು ಕರೆಯಲಾಗುತ್ತದೆ.
 (ಎ)ಪ್ರಾಥಮಿಕ (ಪ್ರೈಮರಿ) ಗ್ರಾಹಕರು
 (ಬಿ)ಉತ್ಪಾದಿಸುವವರು (ಪ್ರೊಡ್ಯುಸರ್ಸ್)
 (ಸಿ)ಆಟೋಟ್ರೋಫ್‌ಗಳು
 (ಡಿ)ಇವುಗಳು ಪುಡ್ ಚೈನ್‌ನ ಭಾಗವೇ ಅಲ್ಲ.
CORRECT ANSWER

(ಎ) ಪ್ರಾಥಮಿಕ (ಪ್ರೈಮರಿ) ಗ್ರಾಹಕರು


7.ಯಾವ ಬ್ಲಡ್ ಗ್ರೂಪ್ ಅನ್ನು ಯೂನಿವರ್ಸಲ್ ಡೋನರ್ ಎನ್ನಲಾಗುತ್ತದೆ ?
 (ಎ)‘ಬಿ’ ಪಾಸಿಟಿವ್
 (ಬಿ)‘ಎ’ ಪಾಸಿಟಿವ್
 (ಸಿ)‘ಎಬಿ’ ನೆಗೆಟಿವ್
 (ಡಿ)‘ಓ’ ನೆಗೆಟಿವ್
CORRECT ANSWER

(ಡಿ) ‘ಓ’ ನೆಗೆಟಿವ್


8.ಕೆಳಗಿನ ಯಾವುದು ನವೀಕರಿಸಲಾಗದ ಶಕ್ತಿಯ ಮೂಲ ?
(ನಾನ್ ರಿನ್ಯೂವಬಲ್ ಸೋರ್ಸ್ ಆಫ್ ಎನರ್ಜಿ)
 (ಎ)ಉಬ್ಬರವಿಳಿತದ ಶಕ್ತಿ (ಟೈಡಲ್ ಎನರ್ಜಿ)
 (ಬಿ)ಪವನ ಶಕ್ತಿ (ವಿಂಡ್ ಎನರ್ಜಿ)
 (ಸಿ)ಸೌರ ಶಕ್ತಿ (ಸೋಲಾರ್ ಎನರ್ಜಿ)
 (ಡಿ)ಕಲ್ಲಿದ್ದಲು ಶಕ್ತಿ (ಕೋಲ್ ಎನರ್ಜಿ)
CORRECT ANSWER

(ಡಿ) ಕಲ್ಲಿದ್ದಲು ಶಕ್ತಿ (ಕೋಲ್ ಎನರ್ಜಿ)


9.ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆಯನ್ನು __________ ಎಂದು ಕರೆಯಲಾಗುತ್ತದೆ.
 (ಎ)ಫಾರ್ಮೆಂಟೇಶನ್
 (ಬಿ)ನೈಟ್ರೊಜೆನ್ ಫಿಕ್ಸೇಶನ್
 (ಸಿ)ಮೋಲ್ಡಿಂಗ್
 (ಡಿ)ಇನ್‌ಫೆಕ್ಷನ್‌
CORRECT ANSWER

(ಎ) ಫಾರ್ಮೆಂಟೇಶನ್


10.ಸಸ್ಯದ ಅಭಿವೃದ್ಧಿ, ಬೆಳವಣಿಗೆ ಮತ್ತು ಯೋಗಕ್ಷೇಮಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶವೆಂದರೆ ______________ .
 (ಎ)ನೈಟ್ರೋಜೆನ್
 (ಬಿ)ಫಾಸ್ಫರಸ್
 (ಸಿ)ಪೊಟ್ಯಾಶಿಯಮ್
 (ಡಿ)ಕ್ಲೋರಿನ್
CORRECT ANSWER

(ಡಿ) ಕ್ಲೋರಿನ್


11.ಮನುಷ್ಯನ ಹೃದಯವು ___________ ವ್ಯವಸ್ಥೆಯ ಒಂದು ಭಾಗವಾಗಿದೆ.
 (ಎ)ಪೋಷಣೆ
 (ಬಿ)ಉಸಿರಾಟ
 (ಸಿ)ಸಾರಿಗೆ
 (ಡಿ)ವಿಸರ್ಜನೆ
CORRECT ANSWER

(ಸಿ) ಸಾರಿಗೆ


12.ಜಾರ್ಜ್ ಫ್ಲಾಯ್ಡ್ ಸಾವಿಗೆ, ಪೊಲೀಸರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ ದೇಶ ಯಾವುದು ?
 (ಎ)ಯುಎಸ್ಎ
 (ಬಿ)ಯುನೈಟೆಡ್ ಕಿಂಗ್‌ಡಮ್‌
 (ಸಿ)ಫ್ರಾನ್ಸ್
 (ಡಿ)ಬ್ರೆಜಿಲ್
CORRECT ANSWER

(ಎ) ಯುಎಸ್ಎ


13.ಕೆಳಗೆ ಕೊಟ್ಟಿರುವ ಜಿಲ್ಲೆಗಳಲ್ಲಿ, ಅತ್ಯಂತ ದೊಡ್ಡ ಸೋಲಾರ್ ಪವರ್ ಪಾರ್ಕ್ ಯಾವ ಜಿಲ್ಲೆಯಲ್ಲಿದೆ ?
 (ಎ)ಚಿತ್ರದುರ್ಗ
 (ಬಿ)ಚಾಮರಾಜನಗರ
 (ಸಿ)ದಾವಣಗೆರೆ
 (ಡಿ)ತುಮಕೂರು

CORRECT ANSWER

(ಡಿ) ತುಮಕೂರು


14.ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆ ಆಗಿಲ್ಲ ?
 (ಎ)ವಿಟಮಿನ್ ಸಿ – ಸ್ಕರ್ವಿ
 (ಬಿ)ವಿಟಮಿನ್ ಎ – ರಾತ್ರಿ ಕುರುಡುತನ
 (ಸಿ)ವಿಟಮಿನ್ ಡಿ – ಪೆಲ್ಲಾಗ್ರ
 (ಡಿ)ವಿಟಮಿನ್ ಬಿ1 – ಬೆರಿಬೆರಿ
CORRECT ANSWER

(ಸಿ) ವಿಟಮಿನ್ ಡಿ – ಪೆಲ್ಲಾಗ್ರ


15.ವಾಹನಗಳಲ್ಲಿ ಅಡ್ಡನೋಟ ಮತ್ತು ಹಿಂದಿನ ನೋಟಗಳಿಗೆ ಉಪಯೋಗಿಸುವ ಕನ್ನಡಿ ______.
 (ಎ)ಕಾನ್‌ಕೇವ್ ಕನ್ನಡಿ
 (ಬಿ)ಕಾನ್‌ವೆಕ್ಸ್ ಕನ್ನಡಿ
 (ಸಿ)ಪ್ಲೇನ್ ಕನ್ನಡಿ
 (ಡಿ)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ಕಾನ್‌ವೆಕ್ಸ್ ಕನ್ನಡಿ


16.ಭಾರತದಲ್ಲಿ ಚಿಲ್ಲರೆ ಪಾವತಿ ಮತ್ತು ತೀರುವೆ/ವಸಾಹತು ವ್ಯವಸ್ಥೆಗಳಿಗಾಗಿ ಸಂಯೋಜಿಸಲ್ಪಟ್ಟ ಸಂಸ್ಥೆ __________.
 (ಎ)ಎಸ್ಇಬಿಐ
 (ಬಿ)ಎಮ್‌ಯುಡಿಆರ್‌ಎ (ಮುದ್ರಾ) ಬ್ಯಾಂಕ್
 (ಸಿ)ಎನ್‌ಪಿಸಿಐ
 (ಡಿ)ಎಲ್ಐಸಿ
CORRECT ANSWER

(ಸಿ) ಎನ್‌ಪಿಸಿಐ


17.ಕೆಳಗಿನ ದೇಶಗಳಲ್ಲಿ, __________ ಅನ್ನು ಬಿಟ್ಟು ಮಿಕ್ಕ ಎಲ್ಲವೂ G-7 ದೇಶಗಳಾಗಿವೆ.
 (ಎ)ಇಂಡಿಯಾ
 (ಬಿ)ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ,
 (ಸಿ)ಯುನೈಟೆಡ್ ಕಿಂಗ್‌ಡಮ್‌
 (ಡಿ)ಇಟಲಿ
CORRECT ANSWER

(ಎ) ಇಂಡಿಯಾ


18.ತವಾಂಗ್ ವ್ಯಾಲಿ ಯಾವ ರಾಜ್ಯದಲ್ಲಿದೆ ?
 (ಎ)ಜಮ್ಮು ಮತ್ತು ಕಾಶ್ಮೀರ
 (ಬಿ)ಉತ್ತರಾಖಂಡ್
 (ಸಿ)ಸಿಕ್ಕಿಮ್
 (ಡಿ)ಅರುಣಾಚಲ ಪ್ರದೇಶ
CORRECT ANSWER

(ಡಿ) ಅರುಣಾಚಲ ಪ್ರದೇಶ


19.ಇವುಗಳಲ್ಲಿ ಯಾವುದು ಐಸಿಎಮ್ಆರ್ ಅನ್ನು ಸೂಚಿಸುತ್ತದೆ ?
 (ಎ)ಇಂಟರ್‌ನ್ಯಾಶನಲ್‌ ಕಮಿಟಿ ಆಫ್ ಮೆಡಿಕಲ್ ರಿಸರ್ಚ್
 (ಬಿ)ಇಂಡಿಯನ್ ಕಮಿಟಿ ಫಾರ್ ಮೆಟಿರಿಯಲ್ ರಿಸೋರ್ಸಸ್
 (ಸಿ)ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್
 (ಡಿ)ಇಂಟರ್‌ನ್ಯಾಶನಲ್‌ ಕೌನ್ಸಿಲ್ ಆಫ್ ಮೀಡಿಯಾ ರಿಸರ್ಚ್
CORRECT ANSWER

(ಸಿ) ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್


20.ಈ ಕೆಳಗಿನ ಯಾವುದು ವೈರಸ್‌ನಿಂದ ಆಗುವ ರೋಗ ಅಲ್ಲ?
 (ಎ)ಕೋವಿಡ್ – 19
 (ಬಿ)ಟೈಫೋಯಿಡ್
 (ಸಿ)ಎಸ್ಎಆರ್‌ಎಸ್
 (ಡಿ)ಫೂಟ್ ಆ್ಯಂಡ್ ಮೌತ್ ಡಿಸೀಸ್
CORRECT ANSWER

(ಬಿ) ಟೈಫೋಯಿಡ್


21.ಕೆಳಗಿನ ಯಾವ ಸಂಯೋಜನೆ ಸರಿ ಇಲ್ಲ ?
 (ಎ)ಸುಂದರ್ ಪಿಚ್ಚೈ- ಗೂಗಲ್
 (ಬಿ)ಸತ್ಯ ನಡೆಲ್ಲಾ- ಆಪಲ್
 (ಸಿ)ರಾಜೀವ್ ಸೂರಿ – ನೋಕಿಯಾ
 (ಡಿ)ಶಾಂತನು ನಾರಾಯಣ್ – ಅಡೋಬ್
CORRECT ANSWER

(ಬಿ) ಸತ್ಯ ನಡೆಲ್ಲಾ- ಆಪಲ್


22.ನಮಸ್ತೆ ಟ್ರಂಪ್ ರ್ಯಾಲಿ, ಕೆಳಗಿನ ಯಾವ ನಗರದಲ್ಲಿ ನಡೆಯಿತು ?
 (ಎ)ನ್ಯೂದೆಹಲಿ
 (ಬಿ)ಮುಂಬೈ
 (ಸಿ)ಅಹಮದಾಬಾದ್
 (ಡಿ)ಆಗ್ರಾ
CORRECT ANSWER

(ಸಿ) ಅಹಮದಾಬಾದ್


23.ಬಿಟ್‌ಕಾಯಿನ್‌ ಎಂದರೇನು ?
 (ಎ)ಪಡಿತರ ಅಂಗಡಿಗಳಲ್ಲಿ ನೀಡಲಾದ ಹೊಸ ವಿಧವಾದ ಟೋಕನ್
 (ಬಿ)ಒಂದು ಡಿಜಿಟಲ್ ಕ್ರಿಪ್ಟೊ ಕರೆನ್ಸಿ
 (ಸಿ)ಬಡವರಿಗೆ ಸರ್ಕಾರ ಕೊಡುವ ಉಚಿತ ಸಬ್ಸಿಡಿಗಳು
 (ಡಿ)ಇತ್ತೀಚೆಗೆ ನಿಷೇಧಿಸಲಾದ ಒಂದು ಆನ್‌ಲೈನ್‌ ಜೂಜಾಟ
CORRECT ANSWER

(ಬಿ) ಒಂದು ಡಿಜಿಟಲ್ ಕ್ರಿಪ್ಟೊ ಕರೆನ್ಸಿ


24.ಭಾರತದಲ್ಲಿ ಹುಟ್ಟಿದ ಯಾವ ಎಕೊನೊಮಿಸ್ಟ್ ಈಗ IMF ನಲ್ಲಿ ಚೀಫ್ ಎಕೊನೊಮಿಸ್ಟ್ ಪದವಿಯಲ್ಲಿದ್ದಾರೆ ?
 (ಎ)ರಘುರಾಮ್ ರಾಜನ್
 (ಬಿ)ಗೀತಾ ಗೋಪಿನಾಥ್
 (ಸಿ)ಅರವಿಂದ್ ಸುಬ್ರಮಣ್ಯಮ್
 (ಡಿ)ವಿರಲ್ ಆಚಾರ್ಯ
CORRECT ANSWER

(ಬಿ) ಗೀತಾ ಗೋಪಿನಾಥ್


25.ಕೆಳಗಿನ ಯಾವ ಜೋಡಿ ಸರಿ ಇಲ್ಲ ?
 (ಎ)ರಾಫೆಲ್ – ಫ್ರಾನ್ಸ್
 (ಬಿ)ಎಮ್ಐಜಿ – ರಷ್ಯಾ
 (ಸಿ)ತೇಜಸ್ – ಇಂಡಿಯಾ
 (ಡಿ)ಸುಖೋಯ್ – ಯುನೈಟೆಡ್ ಕಿಂಗ್‌ಡಮ್‌
CORRECT ANSWER

(ಡಿ) ಸುಖೋಯ್- ಯುನೈಟೆಡ್ ಕಿಂಗ್‌ಡಮ್‌


26.ಇಂಡಿಯಾ ಸೈನ್ಸ್ ಕಾಂಗ್ರೆಸ್ 2020 ______ ನಲ್ಲಿ ನಡೆಯಿತು.
 (ಎ)ಕೋಲ್ಕತಾ
 (ಬಿ)ಬೆಂಗಳೂರು
 (ಸಿ)ಮುಂಬೈ
 (ಡಿ)ವಾರಾಣಸಿ
CORRECT ANSWER

(ಬಿ) ಬೆಂಗಳೂರು


27.2020 ರಲ್ಲಿ ನಡೆಯುವಂತಿದ್ದ ಒಲಿಂಪಿಕ್ಸ್, 2021 ಗೆ ಮುಂದೂಡಲಾಗಿ, ಯಾವ ದೇಶದಲ್ಲಿ ನಡೆಯಲಿದೆ ?
 (ಎ)ಸೌತ್ ಕೊರಿಯಾ
 (ಬಿ)ಆಸ್ಟ್ರೇಲಿಯಾ
 (ಸಿ)ಜಪಾನ್
 (ಡಿ)ಚೀನಾ
CORRECT ANSWER

(ಸಿ) ಜಪಾನ್


28.ಅಪ್ಲಿಕೇಶನ್ MANI (ಮೊಬೈಲ್ ಏಡೆಡ್ ನೋಟ್ ಐಡೆಂಟಿಫೈಯರ್) ಅನ್ನು ದೃಷ್ಟಿಗೋಚರವಾಗದಿರುವವರಿಗಾಗಿ, ಕರೆನ್ಸಿ ನೋಟುಗಳನ್ನು ಗುರುತಿಸಲು, __________ ನಿಂದ ಪ್ರಾರಂಭಿಸಲಾಗಿದೆ.
 (ಎ)ಆರ್‌ಬಿಐ
 (ಬಿ)ಎಸ್‌ಬಿಐ
 (ಸಿ)ಮಿನಿಸ್ಟ್ರಿ ಆಫ್ ಫೈನಾನ್ಸ್
 (ಡಿ)ಎನ್ಐಟಿಐ (ನೀತಿ) ಆಯೋಗ
CORRECT ANSWER

(ಎ) ಆರ್‌ಬಿಐ


29.ಹಾಂಗ್-ಕಾಂಗ್ ಪ್ರದೇಶ ಮೊದಲು ಕೆಳಗಿನ ಯಾವ ದೇಶದ ಆಡಳಿತಾತ್ಮಕ ನಿಯಂತ್ರಣದಲ್ಲಿತ್ತು ?
 (ಎ)ಫ್ರಾನ್ಸ್
 (ಬಿ)ಬ್ರಿಟನ್
 (ಸಿ)ಪೋರ್ಚುಗಲ್
 (ಡಿ)ಇಟಲಿ
CORRECT ANSWER

(ಬಿ) ಬ್ರಿಟನ್


30.ಮಹಿಳೆಯರ ಮೇಲಿನ ಅಪರಾಧವನ್ನು ನಿಭಾಯಿಸಲು, ಇತ್ತೀಚೆಗೆ ಯಾವ ರಾಜ್ಯದಲ್ಲಿ ಮೊದಲ ದಿಶಾ ಪೊಲೀಸ್ ಸ್ಟೇಷನ್ ಸ್ಥಾಪಿಸಲಾಯಿತು ?
 (ಎ)ಆಂಧ್ರಪ್ರದೇಶ
 (ಬಿ)ಕರ್ನಾಟಕ
 (ಸಿ)ಮಹಾರಾಷ್ಟ್ರ
 (ಡಿ)ಮಧ್ಯಪ್ರದೇಶ
CORRECT ANSWER

(ಎ) ಆಂಧ್ರಪ್ರದೇಶ


31.ರೋಹಿಂಗ್ಯಾ ವಲಸಿಗರು ಕೆಳಗಿನ ಯಾವ ಮೂಲಸ್ಥಾನ ದೇಶಗಳಲ್ಲಿ ಇದ್ದಾರೆ ?
 (ಎ)ಬಾಂಗ್ಲಾದೇಶ
 (ಬಿ)ಮ್ಯಾನ್ಮಾರ್
 (ಸಿ)ಪಾಕಿಸ್ತಾನ್
 (ಡಿ)ಆಫ್ಘಾನಿಸ್ತಾನ್
CORRECT ANSWER

(ಬಿ) ಮ್ಯಾನ್ಮಾರ್


32.ಕೆಳಗಿನ ಯಾವ ಆ್ಯಪ್ಸ್ ಕೋವಿಡ್-19 ಗೆ ಸಂಬಂಧಿಸಿದ್ದಿಲ್ಲ ?
 (ಎ)ಆರೋಗ್ಯ ಸೇತು
 (ಬಿ)ಆಪ್ತ ಮಿತ್ರ
 (ಸಿ)ಕ್ವಾರನ್ಟೈನ್ ವಾಚ್
 (ಡಿ)ಸುರಕ್ಷ
CORRECT ANSWER

(ಡಿ) ಸುರಕ್ಷ


33.4 ರಿಂದ ನಿಖರವಾಗಿ ಭಾಗಿಸಬಹುದಾದ ಶ್ರೇಷ್ಠ ಮೂರು ಅಂಕಿಯ ಸಂಖ್ಯೆ ___________
 (ಎ)952
 (ಬಿ)996
 (ಸಿ)998
 (ಡಿ)1002
CORRECT ANSWER

(ಬಿ) 996


34.ಡಾಕ್ಟರ್ : ರೋಗನಿರ್ಣಯ (ಡಯಾಗ್ನೋಸಿಸ್) :: ಜಡ್ಜ್ 😕
 (ಎ)ಕೋರ್ಟ್
 (ಬಿ)ಲಾಯರ್
 (ಸಿ)ತೀರ್ಪು
 (ಡಿ)ನಿಯಮಗಳು
CORRECT ANSWER

(ಸಿ) ತೀರ್ಪು


35.ಒಂದು ರೈಲು 140 ಮೀ. ಉದ್ದವಾಗಿದ್ದು, 54 kmph ವೇಗದಲ್ಲಿರುವಾಗ, 30 ಸೆಕೆಂಡಿನಲ್ಲಿ ಸೇತುವೆಯನ್ನು ದಾಟುತ್ತದೆ. ಆ ಸೇತುವೆ ಉದ್ದ __________.
 (ಎ)300 m
 (ಬಿ)310 m
 (ಸಿ)330 m
 (ಡಿ)340 m
CORRECT ANSWER

(ಬಿ) 310 m


36.ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್
(CoDS)______ .
 (ಎ)ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರಿಯಪ್ಪ
 (ಬಿ)ಜನರಲ್ ಬಿಪಿನ್ ರಾವತ್
 (ಸಿ)ಜನರಲ್ ಮನೋಜ್ ಮುಕುಂದ್ ನರಾವನೆ
 (ಡಿ)ಜನರಲ್ ಜೆ.ಜೆ. ಸಿಂಗ್
CORRECT ANSWER

(ಬಿ) ಜನರಲ್ ಬಿಪಿನ್ ರಾವತ್


37.ದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LOC)__________ ಅನ್ನು
ಪ್ರತ್ಯೇಕಿಸುತ್ತದೆ.
 (ಎ)ಇಂಡಿಯಾ ಮತ್ತು ಪಾಕಿಸ್ತಾನ್
 (ಬಿ)ಇಂಡಿಯಾ ಮತ್ತು ಆಫ್ಘಾನಿಸ್ತಾನ್
 (ಸಿ)ಇಂಡಿಯಾ ಮತ್ತು ನೇಪಾಲ್
 (ಡಿ)ಇಂಡಿಯಾ ಮತ್ತು ಚೀನಾ
CORRECT ANSWER

(ಡಿ) ಇಂಡಿಯಾ ಮತ್ತು ಚೀನಾ


38.ಇತ್ತೀಚಿನ ನವೀನ ಸ್ಪರ್ಧೆ, ‘‘ಡೇರ್ ಟು ಡ್ರೀಮ್’’ಅನ್ನು __________ ನಿಂದ ಆರಂಭಿಸಲಾಯಿತು.
 (ಎ)ಐಎಸ್‌ಆರ್‌ಒ
 (ಬಿ)ಎನ್ಎಎಸ್ಎ
 (ಸಿ)ಡಿಆರ್‌ಡಿಒ
 (ಡಿ)ಸ್ಪೇಸ್ಎಕ್ಸ್
CORRECT ANSWER

(ಸಿ) ಡಿಆರ್‌ಡಿಒ


39.ಕೆಳಗಿನ ಲೈನ್ ಚಾರ್ಟ್ ಅನ್ನು ಪರಿಶೀಲಿಸಿ, ಉತ್ತರ ಕೊಡಿ. ಈ ಲೈನ್ ಗ್ರಾಫ್ ಕೆಲವು ಭಾರತದ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳ ಸಂಖ್ಯೆ ಹಾಗೂ ವರ್ಷಗಳನ್ನು ತೋರಿಸುತ್ತದೆ.
ಬ್ರಾಂಚ್‌ಗಳ ಸಂಖ್ಯೆಯ ಶೇಕಡಾವಾರು ಹೆಚ್ಚಳವನ್ನು ಹುಡುಕಿ. 1980-81 ರಿಂದ 2020-21 ರವರೆಗೆ.
 (ಎ)300%
 (ಬಿ)500%
 (ಸಿ)700%
 (ಡಿ)900%
CORRECT ANSWER

(ಸಿ) 700%


40.ಕೊಟ್ಟಿರುವ ಅನುಪಾತದ ಸರಿಸಮವಾದ ಸಂಖ್ಯೆಯನ್ನು ಕಂಡು ಹಿಡಿಯಿರಿ. 2 : 6 6: ______
 (ಎ)15
 (ಬಿ)18
 (ಸಿ)12
 (ಡಿ)24
CORRECT ANSWER

(ಬಿ) 18


41.ಒಬ್ಬ ವ್ಯಕ್ತಿ ತನ್ನ ಸ್ನೇಹಿತನಿಗೆ ಒಂದು ಉದ್ಯಾನವನದಲ್ಲಿರುವ ಮಹಿಳೆಯನ್ನು ತೋರಿಸಿ ಹೇಳುತ್ತಾನೆ. ಅವಳು ನನ್ನ ಅಜ್ಜಿಯ ಒಂದೇ ಸಂತಾನದ ಮಗಳು. ಆ ವ್ಯಕ್ತಿ ಈ ಮಹಿಳೆಗೆ ಹೇಗೆ ಸಂಬಂಧ?
 (ಎ)ಸೋದರ
 (ಬಿ)ಸೋದರ ಸಂಬಂಧಿ
 (ಸಿ)ಚಿಕ್ಕಪ್ಪ / ದೊಡ್ಡಪ್ಪ / ಸೋದರಮಾವ
 (ಡಿ)ಸಹ – ಸಹೋದರ
CORRECT ANSWER

(ಎ) ಸೋದರ


42.5, 7, 11, ______ ?
 (ಎ)15
 (ಬಿ)16
 (ಸಿ)17
 (ಡಿ)18
CORRECT ANSWER

(ಸಿ) 17


43.ರಾಜು ತನ್ನ ಶರ್ಟ್ ಬಟನ್ ಅಳತೆ ಮಾಡುತ್ತಾನೆ. ಶರ್ಟ್ ಬಟನ್‌ನ ಸುತ್ತಳತೆ 31.4mm. ಆ ಬಟನ್‌ನ ತ್ರಿಜ್ಯ ಎಷ್ಟು?
 (ಎ)3 mm
 (ಬಿ)4 mm
 (ಸಿ)5 mm
 (ಡಿ)6 mm
CORRECT ANSWER

(ಸಿ) 5 mm


44.ಸರಾಸರಿ 17 ಮತ್ತು ಪ್ರಮಾಣಗಳ ಸಂಖ್ಯೆ 9.ಹಾಗಾದರೆ, ಪ್ರಮಾಣಗಳ ಮೊತ್ತ ಎಷ್ಟು ?
 (ಎ)153
 (ಬಿ)163
 (ಸಿ)173
 (ಡಿ)183
CORRECT ANSWER

(ಎ) 153


45.I, X, J, K, V, L, __________
 (ಎ)V
 (ಬಿ)T
 (ಸಿ)W
 (ಡಿ)U
CORRECT ANSWER

(ಡಿ) U


46.A – B = B – Aಆದರೆ, ಕೆಳಗಿನ ಯಾವುದು ಸರಿ ?
 (ಎ)A = B
 (ಬಿ)A ≠ B
 (ಸಿ)A > B
 (ಡಿ)A < B
CORRECT ANSWER

(ಎ) A = B


47.6, 9, 12, 15, 18 ರಿಂದ ಭಾಗಿಸಿದಾಗ, ಕನಿಷ್ಠ ಸಂಖ್ಯೆ ಪ್ರತಿ ಪ್ರಕರಣದಲ್ಲಿ, ಅದೇ ಉಳಿದ 2 ನ್ನು ಬಿಡುತ್ತದೆ. ಆ ಕನಿಷ್ಠ ಸಂಖ್ಯೆ __________.
 (ಎ)176
 (ಬಿ)178
 (ಸಿ)180
 (ಡಿ)182
CORRECT ANSWER

(ಡಿ) 182


48.EJOT :______ :: YDIN : VAFX
 (ಎ)BGLT
 (ಬಿ)DGLQ
 (ಸಿ)BGLQ
 (ಡಿ)DGLT
CORRECT ANSWER

(ಸಿ) BGLQ


49.ಒಂದು ಪುಸ್ತಕ ₹ 80 ಗೆ ಖರೀದಿ ಮಾಡಿ 30% ಲಾಭಕ್ಕೆ ಮಾರಾಟ ಮಾಡಿದರೆ, ಅದರ ಮಾರಾಟ ಬೆಲೆ ಏನು ?
 (ಎ)₹ 104
 (ಬಿ)₹ 108
 (ಸಿ)₹ 112
 (ಡಿ)₹ 116
CORRECT ANSWER

(ಎ) ₹ 104


50.‘‘ಬ್ರೆಕ್ಸಿಟ್’’ ಈ ಪದದ ಅರ್ಥ ಏನು ?
 (ಎ)ಅಸ್ವಸ್ಥವಾದ ಕಂಪನಿಗಳಿಗೆ, ನಿರ್ಗಮಿಸುವ ಕಾರ್ಯ ವಿಧಾನಗಳನ್ನು ಸರಾಗಗೊಳಿಸುವುದು
 (ಬಿ)ಬ್ರಿಟನ್, ಯೂರೋಪಿಯನ್ ಯೂನಿಯನ್‌ನಿಂದ ನಿರ್ಗಮಿಸಿದ್ದು
 (ಸಿ)ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ, ನಾರ್ಥ್ ಕೊರಿಯ ಜೊತೆ ಶಾಂತಿ ಮಾತುಕತೆ ಯಿಂದ ನಿರ್ಗಮಿಸಿದ್ದು
 (ಡಿ)ಭಾರತದಲ್ಲಿ 5G ನೆಟ್‌ವರ್ಕ್‌ ಪರಿಚಯ
CORRECT ANSWER

(ಬಿ) ಬ್ರಿಟನ್, ಯೂರೋಪಿಯನ್ ಯೂನಿಯನ್‌ನಿಂದ ನಿರ್ಗಮಿಸಿದ್ದು


51.ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕೊನೊಮಿಕ್ ರಿಸರ್ಚ್ (NCAER) ನ ವರದಿಯ ಪ್ರಕಾರ, ಪ್ರಪಂಚದ ಅತಿದೊಡ್ಡ ಬಡತನ ವಿರೋಧಿ ಕಾರ್ಯಕ್ರಮ ಯಾವುದು?
 (ಎ)ನ್ಯಾಶನಲ್ ರೂರಲ್ ಎಂಪ್ಲಾಯ್‌ಮೆಂಟ್‌ ಪ್ರೋಗ್ರಾಂ (NREP)
 (ಬಿ)ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್‌ ಯೋಜನಾ(SJSRY)
 (ಸಿ)ಪ್ರೈಮ್ ಮಿನಿಸ್ಟರ್ ರೋಜ್‌ಗಾರ್‌ ಯೋಜನಾ (PMRY)
 (ಡಿ)ಮಹಾತ್ಮಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯ್‌ಮೆಂಟ್‌ ಗ್ಯಾರಂಟಿ ಸ್ಕೀಮ್ (MNREGS)
CORRECT ANSWER

(ಡಿ) ಮಹಾತ್ಮಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯ್‌ಮೆಂಟ್‌ ಗ್ಯಾರಂಟಿ ಸ್ಕೀಮ್ (MNREGS)


52.ಇವುಗಳಲ್ಲಿ ಯಾವುದು ಪಂಚಶೀಲ್‌ನ ತತ್ವಗಳಲ್ಲಿ ಒಂದಲ್ಲ ?
 (ಎ)ಪರಸ್ಪರ ಆಕ್ರಮಣವಿಲ್ಲದಿರುವುದು
 (ಬಿ)ಅಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು
 (ಸಿ)ಪರಸ್ಪರ ಸಹಕಾರ ಮತ್ತು ಗೌರವ ಇಲ್ಲದಿರುವುದು
 (ಡಿ)ಶಾಂತಿಯುತ ಸಹಬಾಳ್ವೆ
CORRECT ANSWER

(ಸಿ) ಪರಸ್ಪರ ಸಹಕಾರ ಮತ್ತು ಗೌರವ ಇಲ್ಲದಿರುವುದು


53.‘‘ಈ ಲೋಕದಲ್ಲಿ, ಜನಗಳ ಎಲ್ಲಾ ಅಗತ್ಯಗಳನ್ನು ಪೂರೈಸಬಹುದು, ಆದರೆ ಅವರ ದುರಾಸೆಯನಲ್ಲ.’’ ಇದು ಕೆಳಗಿನ ಯಾವ ವ್ಯಕ್ತಿತ್ವದ ಪ್ರಸಿದ್ದ ಉಲ್ಲೇಖ ?
 (ಎ)ಜವಾಹರಲಾಲ್ ನೆಹರು
 (ಬಿ)ಅಂಬೇಡ್ಕರ್
 (ಸಿ)ಸುಭಾಷ್ ಚಂದ್ರ ಬೋಸ್
 (ಡಿ)ಮಹಾತ್ಮ ಗಾಂಧಿ
CORRECT ANSWER

(ಡಿ) ಮಹಾತ್ಮ ಗಾಂಧಿ


54.ಈ ಕೆಳಗಿನ ಯಾವುದು ಅತ್ಯಂತ ಹಳೆಯ ಕನ್ನಡ ಪತ್ರಿಕೆ ?
 (ಎ)ಮಂಗಳೂರು ಸಮಾಚಾರ
 (ಬಿ)ಪ್ರಜಾವಾಣಿ
 (ಸಿ)ಕನ್ನಡ ಪ್ರಭ
 (ಡಿ)ಜನತಾವಾಣಿ
CORRECT ANSWER

(ಎ) ಮಂಗಳೂರು ಸಮಾಚಾರ


55.ದ ವರ್ಲ್ಡ್ ಎನ್ವಿರಾನ್‌ಮೆಂಟ್‌ ಡೇ _________ ನಂದು ಆಚರಿಸಲಾಗುತ್ತದೆ.
 (ಎ)ಮೇ 5
 (ಬಿ)ಜೂನ್ 5
 (ಸಿ)ಮೇ 15
 (ಡಿ)ಜೂನ್ 15
CORRECT ANSWER

(ಬಿ) ಜೂನ್ 5


56.ಯಾರನ್ನು ಫಾದರ್ ಆಫ್ ಎಕೊನೊಮಿಕ್ಸ್’’ ಎಂದು ಕರೆಯಲಾಗುತ್ತದೆ ?
 (ಎ)ಜೆ.ಎಮ್. ಕೇನ್ಸ್
 (ಬಿ)ಆಡಂ ಸ್ಮಿತ್
 (ಸಿ)ಅಬ್ರಾಹಂ ಮಾಸ್ಲೊ
 (ಡಿ)ಇವರುಗಳಲ್ಲಿ ಯಾರೂ ಅಲ್ಲ
CORRECT ANSWER

(ಬಿ) ಆಡಂ ಸ್ಮಿತ್


57.ಇಂಟರ್‌ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ (ICJ) ಎಲ್ಲಿದೆ ?
 (ಎ)ಹಾಗ್
 (ಬಿ)ನ್ಯೂಯಾರ್ಕ್ ಸಿಟಿ
 (ಸಿ)ಜೆನೆವಾ
 (ಡಿ)ರೋಮ್
CORRECT ANSWER

(ಎ) ಹಾಗ್


58.ಕರ್ನಾಟಕದ ಯಾವ ಉತ್ಪನ್ನ ಜಿಐ (ಜಿಯೋಗ್ರಾಫಿಕಲ್ ಇಂಡಿಕೇಶನ್) ಟ್ಯಾಗ್ ಸ್ವೀಕರಿಸಿಲ್ಲ?
 (ಎ)ಕೂರ್ಗ್ ಅಡಿಕೆ
 (ಬಿ)ನಂಜನಗೂಡು ಬಾಳೆ
 (ಸಿ)ಮೈಸೂರು ಸಿಲ್ಕ್
 (ಡಿ)ಚೆನ್ನಪಟ್ಟಣ ಆಟಿಕೆ
CORRECT ANSWER

(ಎ) ಕೂರ್ಗ್ ಅಡಿಕೆ


59.ಈ ಕೆಳಗಿನ ಯಾರಿಗೆ ‘‘ಕರ್ನಾಟಕ ರತ್ನ’’ (KR), ಅತ್ಯುನ್ನತ ಕರ್ನಾಟಕ ನಾಗರಿಕ ಗೌರವ ದೊರಕಿದೆ ?
 (ಎ)ರಾಹುಲ್ ದ್ರಾವಿಡ್
 (ಬಿ)ಡಾ. ರಾಜ್‌ಕುಮಾರ್‌
 (ಸಿ)ಡಾ. ವಿಷ್ಣುವರ್ಧನ್
 (ಡಿ)ವಿ.ಕೆ. ಗೋಕಾಕ್
CORRECT ANSWER

(ಬಿ) ಡಾ. ರಾಜ್‌ಕುಮಾರ್‌


60.ನ್ಯಾಶನಲ್ ಇನ್ಸ್‌ಟಿಟ್ಯೂಟ್‌ ಆಫ್ ವೈರಾಲಜಿ _______ ನಲ್ಲಿದೆ.
 (ಎ)ದೆಹಲಿ
 (ಬಿ)ಚೆನ್ನೈ
 (ಸಿ)ಪುಣೆ
 (ಡಿ)ಬೆಂಗಳೂರು
CORRECT ANSWER

(ಸಿ) ಪುಣೆ


61.ಭಾರತದಲ್ಲಿ ಮೊದಲ ಕೋವಿಡ್-19 ಪ್ರಕರಣವನ್ನು _______ ರಾಜ್ಯದಲ್ಲಿ ದೃಢಪಡಿಸಲಾಯಿತು.
 (ಎ)ಕರ್ನಾಟಕ
 (ಬಿ)ಮಹಾರಾಷ್ಟ್ರ
 (ಸಿ)ದೆಹಲಿ
 (ಡಿ)ಕೇರಳ
CORRECT ANSWER

(ಡಿ) ಕೇರಳ


62.ಈ ಕೆಳಗಿನ ಯಾವುದು ಕಾಳಿದಾಸನಿಂದ ರಚಿಸಲ್ಪಟ್ಟಿಲ್ಲ ?
 (ಎ)ರಘುವಂಶ
 (ಬಿ)ರಾಮಾಯಣ ದರ್ಶನಂ
 (ಸಿ)ಕುಮಾರಸಂಭವ
 (ಡಿ)ಮೇಘಧೂತ
CORRECT ANSWER

(ಬಿ) ರಾಮಾಯಣ ದರ್ಶನಂ


63.ರಿಸರ್ವ್ ಬ್ಯಾಂಕ್ ಆಫ್ ಇಂಡಿಯದ ಪ್ರಧಾನ ಕಚೇರಿ _________ ನಲ್ಲಿದೆ.
 (ಎ)ಮುಂಬೈ
 (ಬಿ)ಬೆಂಗಳೂರು
 (ಸಿ)ಹೈದರಾಬಾದ್
 (ಡಿ)ಚೆನ್ನೈ
CORRECT ANSWER

(ಎ) ಮುಂಬೈ


64.ಈ ಕೆಳಗಿನ ಯಾರು, ‘‘ಕನ್ನಡ ರೈತ ಗೀತೆ’’ಯನ್ನು ರಚಿಸಿದ್ದಾರೆ ?
 (ಎ)ಡಾ. ಶಿವರಾಮ ಕಾರಂತ್
 (ಬಿ)ಮಾಸ್ತಿ ವೆಂಕಟೇಶ ಐಯ್ಯಂಗಾರ್
 (ಸಿ)ಕುವೆಂಪು
 (ಡಿ)ಚಂದ್ರಶೇಖರ ಕಂಬಾರ
CORRECT ANSWER

(ಸಿ) ಕುವೆಂಪು


65.ವಾತಾವರಣದಲ್ಲಿ, ಅತ್ಯಂತ ಹೇರಳವಾಗಿ ಪ್ರಸ್ತುತವಾಗಿರುವ ಅನಿಲ ___________.
 (ಎ)ಆಮ್ಲಜನಕ
 (ಬಿ)ಸಾರಜನಕ
 (ಸಿ)ಇಂಗಾಲದ ಡೈ ಆಕ್ಸೈಡ್
 (ಡಿ)ಜಲಜನಕ
CORRECT ANSWER

(ಬಿ) ಸಾರಜನಕ


66.ಕೆಳಗಿನ ಯಾವ ಗವರ್ನರ್ ಜನರಲ್ ಜಮೀನ್ದಾರಿ ಸಿಸ್ಟಮ್ ಅನ್ನು ಭಾರತದಲ್ಲಿ ಜಾರಿಗೆ ತಂದರು ?
 (ಎ)ಲಾರ್ಡ್ ಡಾಲ್‌ಹೌಸಿ
 (ಬಿ)ಲಾರ್ಡ್ ಕ್ಯಾನಿಂಗ್
 (ಸಿ)ಲಾರ್ಡ್ ವಾರನ್ ಹೇಸ್ಟಿಂಗ್ಸ್
 (ಡಿ)ಲಾರ್ಡ್ ಕಾರ್ನ್‌ವಾಲಿಸ್‌
CORRECT ANSWER

(ಡಿ) ಲಾರ್ಡ್ ಕಾರ್ನ್‌ವಾಲಿಸ್‌


67.ಮಿಲಿಟರಿ ಸುಧಾರಣೆಗಳಾದ, ‘ಹುಲಿಯ’ ಮತ್ತು ‘ದಾಘ್’ಅನ್ನು ___________ ನಿಂದ ಪರಿಚಯಿಸಲಾಗಿದೆ.
 (ಎ)ಕುತ್ಬುದ್ದೀನ್ ಐಬಕ್
 (ಬಿ)ಅಲ್ಲಾವುದ್ದೀನ್ ಖಿಲ್ಜಿ
 (ಸಿ)ಮೊಹಮದ್ ಬಿನ್ ತುಘಲಕ್
 (ಡಿ)ಇಲ್ತುತ್‌ಮಿಶ್‌
CORRECT ANSWER

(ಬಿ) ಅಲ್ಲಾವುದ್ದೀನ್ ಖಿಲ್ಜಿ


68.ಏಳು ವರ್ಷಗಳ ಯುದ್ಧ (1756 – 63 C.E.)___________ ನಡುವೆ ನಡೆಯಿತು.
 (ಎ)ಫ್ರಾನ್ಸ್ ಮತ್ತು ಯುಎಸ್ಎ
 (ಬಿ)ಇಂಗ್ಲೆಂಡ್ ಮತ್ತು ಯುಎಸ್ಎ
 (ಸಿ)ಫ್ರಾನ್ಸ್ ಮತ್ತು ಇಂಗ್ಲೆಂಡ್
 (ಡಿ)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಸಿ) ಫ್ರಾನ್ಸ್ ಮತ್ತು ಇಂಗ್ಲೆಂಡ್


69.‘‘ಬ್ಲಾಕ್ ರೂಮ್ ಟ್ರೇಜಡಿ’’ ಎಂದರೇನು ?
 (ಎ)ಬಹಳ ಇಂಗ್ಲಿಷರನ್ನು ಜೈಲಿನಲ್ಲಿಟ್ಟು, ಕೋಟೆಯ ಒಂದು ಚಿಕ್ಕ ಕೊಠಡಿಯಲ್ಲಿ ಸೀಮಿತಗೊಳಿಸಲಾಗಿತ್ತು, ಅದರಲ್ಲಿ ಬಹಳ ಜನರು ಪ್ರಾಣ ಬಿಟ್ಟರು.
 (ಬಿ)ಪ್ರಕಾಶವಿಲ್ಲದ ಒಂದು ಚಿಕ್ಕ ಕೊಠಡಿಯಲ್ಲಿ, ವಿಟಮಿನ್‌ಗಳ ಕೊರತೆ ಉಂಟಾಗುವುದು.
 (ಸಿ)ಇಂಗ್ಲಿಷರು, ಅವರ ಫಿರಂಗಿಗಳು, ತುಪಾಕಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಈ ಕೊಠಡಿಯಲ್ಲಿಟ್ಟಿದ್ದರು ಮತ್ತು ಇವೆಲ್ಲವೂ ಇದ್ದಕ್ಕಿದಂತೆ ಸ್ಫೋಟಗೊಂಡು ದುರಂತಕ್ಕೆ ಕಾರಣವಾಯಿತು.
 (ಡಿ)ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಕಪ್ಪು ಬಣ್ಣದಲ್ಲಿ ಸಂಪೂರ್ಣವಾಗಿ ಚಿತ್ರಿಸಿದ ಕೋಣೆ.
CORRECT ANSWER

(ಎ) ಬಹಳ ಇಂಗ್ಲಿಷರನ್ನು ಜೈಲಿನಲ್ಲಿಟ್ಟು, ಕೋಟೆಯ ಒಂದು ಚಿಕ್ಕ ಕೊಠಡಿಯಲ್ಲಿ ಸೀಮಿತಗೊಳಿಸಲಾಗಿತ್ತು, ಅದರಲ್ಲಿ ಬಹಳ ಜನರು ಪ್ರಾಣ ಬಿಟ್ಟರು.


70.ಮಹಾತ್ಮಗಾಂಧಿಯವರು ಯಾವ ವರ್ಷದಲ್ಲಿ ನಾನ್-ಕೊ ಆಪರೇಶನ್ ಮೂವ್‌ಮೆಂಟ್‌ ಅನ್ನು ಪ್ರಾರಂಭಿಸಿದರು ?
 (ಎ)1919
 (ಬಿ)1920
 (ಸಿ)1930
 (ಡಿ)1942
CORRECT ANSWER

(ಬಿ) 1920


71.ಯಾರನ್ನು ‘‘ಐರನ್ ಮ್ಯಾನ್ ಆಫ್ ಇಂಡಿಯ’’ ಎಂದು ಕರೆಯಲಾಗುತ್ತದೆ?
 (ಎ)ಸರ್ದಾರ್ ವಲ್ಲಭ್‌ಭಾಯ್‌ ಪಟೇಲ್
 (ಬಿ)ನೇತಾಜಿ ಸುಭಾಷ್ ಚಂದ್ರ ಬೋಸ್
 (ಸಿ)ಮಹಾತ್ಮ ಗಾಂಧಿ
 (ಡಿ)ರಬೀಂದ್ರನಾಥ ಟ್ಯಾಗೋರ್
CORRECT ANSWER

(ಎ) ಸರ್ದಾರ್ ವಲ್ಲಭ್‌ಭಾಯ್‌ ಪಟೇಲ್


72.ವಿಜಯನಗರ ರಾಜ್ಯದ ಬಗ್ಗೆ, ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿ.
 (ಎ)ಅವರು ಎಲ್ಲಾ ಧರ್ಮಗಳ ಬಗೆ ಸಹಿಷ್ಣುತೆಯನ್ನು ತೋರಿಸುತ್ತಿದ್ದರು.
 (ಬಿ)ಅವರು, ಅವರ ರಾಜಧಾನಿಯಲ್ಲಿ ಮಸೀದಿಯನ್ನು ಕಟ್ಟಿದರು.
 (ಸಿ)ಜೈನರು ಮತ್ತು ವೈಷ್ಣವರ ನಡುವಿನ ಸಮಸ್ಯೆಗಳನ್ನು ಬುಕ್ಕರಾಯರವರು ಪರಿಹರಿಸಿದರು.
 (ಡಿ)ವಿಜಯನಗರದ ಕಲೆ ಮತ್ತು ಶಿಲ್ಪಕಲೆ ನಾಗರ ಶೈಲಿಯ ವಾಸ್ತುಶಿಲ್ಪದ ವಿಕಸನೀಯ ರೂಪ ಎಂದು ಇತಿಹಾಸಕಾರ ಪರ್ಸಿ ಬ್ರೌನ್ ಹೇಳಿದ್ದಾರೆ.
CORRECT ANSWER

(ಡಿ) ವಿಜಯನಗರದ ಕಲೆ ಮತ್ತು ಶಿಲ್ಪಕಲೆ ನಾಗರ ಶೈಲಿಯ ವಾಸ್ತುಶಿಲ್ಪದ ವಿಕಸನೀಯ ರೂಪ ಎಂದು ಇತಿಹಾಸಕಾರ ಪರ್ಸಿ ಬ್ರೌನ್ ಹೇಳಿದ್ದಾರೆ.


73.ಕೆಳಗಿನ ಹೇಳಿಕೆಗಳಲ್ಲಿ, ಯಾವುದು ಭಕ್ತಿ ಮೂವ್‌ಮೆಂಟ್‌ನ ಫಲಿತಾಂಶವಲ್ಲ ?
 (ಎ)ಭಕ್ತಿ ಸಂತರು ಹಿಂದೂ ಮತ್ತು ಮುಸಲ್ಮಾನರ ನಡುವೆ ಸಾಮರಸ್ಯವನ್ನು ಉಂಟುಮಾಡಿದರು.
 (ಬಿ)ಭಕ್ತಿ ಸಂತರು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ಬರೆದರು.
 (ಸಿ)ಭಕ್ತಿ ಸಂತರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದರು.
 (ಡಿ)ಭಕ್ತಿ ಸಂತರು ಸಾಂಪ್ರದಾಯಿಕರಾಗಿದ್ದರು ಮತ್ತು ಜಾತಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರು ಮತ್ತು ಉತ್ತೇಜಿಸಿದರು.
CORRECT ANSWER

(ಡಿ) ಭಕ್ತಿ ಸಂತರು ಸಾಂಪ್ರದಾಯಿಕರಾಗಿದ್ದರು ಮತ್ತು ಜಾತಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರು ಮತ್ತು ಉತ್ತೇಜಿಸಿದರು.


74.ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ.
 (ಎ)ಆಗುಂಬೆ ಘಾಟ್ – ಶಿವಮೊಗ್ಗ ಮತ್ತು ಉಡುಪಿಯನ್ನು ಸೇರಿಸುತ್ತದೆ.
 (ಬಿ)ಶಿರಾಡಿ ಘಾಟ್ – ಶಿವಮೊಗ್ಗ ಮತ್ತು ಕುಂದಾಪುರವನ್ನು ಸೇರಿಸುತ್ತದೆ.
 (ಸಿ)ಹುಲಿಕಲ್ ಘಾಟ್ – ಹಾಸನ, ಸಕಲೇಶಪುರ ಮತ್ತು ಮಂಗಳೂರನ್ನು ಸೇರಿಸುತ್ತದೆ.
 (ಡಿ)ಚಾರ್ಮಾಡಿ ಘಾಟ್ – ಮಂಗಳೂರು ಮತ್ತು ಉಡುಪಿಯನ್ನು ಸೇರಿಸುತ್ತದೆ.
CORRECT ANSWER

(ಎ) ಆಗುಂಬೆ ಘಾಟ್ – ಶಿವಮೊಗ್ಗ ಮತ್ತು ಉಡುಪಿಯನ್ನು ಸೇರಿಸುತ್ತದೆ.


75.ಯಾವ ನದಿಯನ್ನು ‘‘ಕರ್ನಾಟಕದ ನಯಾಗರಾ’’ ಎಂದು ಕರೆಯಲಾಗುತ್ತದೆ ?
 (ಎ)ಜೋಗ್ ಫಾಲ್ಸ್
 (ಬಿ)ಗೋಕಾಕ್ ಫಾಲ್ಸ್
 (ಸಿ)ಮಗೋಡ್ ಫಾಲ್ಸ್
 (ಡಿ)ಅಬ್ಬೆ ಫಾಲ್ಸ್
CORRECT ANSWER

(ಬಿ) ಗೋಕಾಕ್ ಫಾಲ್ಸ್


76.ಶ್ರೀರಂಗಪಟ್ಟಣ ಸಂಧಿ / ಒಪ್ಪಂದವನ್ನು ಯಾವ ಯುದ್ಧದ ನಂತರ ಮಾಡಲಾಯಿತು ?
 (ಎ)ಮೊದಲ ಆಂಗ್ಲೋ ಮೈಸೂರು ಯುದ್ಧ
 (ಬಿ)ಮೊದಲ ಕರ್ನಾಟಕ ಯುದ್ಧ
 (ಸಿ)ಮೂರನೆಯ ಆಂಗ್ಲೋ ಮೈಸೂರು ಯುದ್ಧ
 (ಡಿ)ಎರಡನೆಯ ಕರ್ನಾಟಕ ಯುದ್ಧ
CORRECT ANSWER

(ಸಿ) ಮೂರನೆಯ ಆಂಗ್ಲೋ ಮೈಸೂರು ಯುದ್ಧ


77.ಇವುಗಳಲ್ಲಿ ಯಾವುದು, ಪ್ರವಾಹ ಸಂಭವಿಸಲು ಮನುಷ್ಯ ಮಾಡಿದ ಕಾರಣವಲ್ಲ ?
 (ಎ)ಅರಣ್ಯನಾಶ
 (ಬಿ)ನದಿಪಾತ್ರದ ಅತಿಕ್ರಮಣ
 (ಸಿ)ಒಳಚರಂಡಿ ವ್ಯವಸ್ಥೆಗಳ ಅಗಲೀಕರಣ
 (ಡಿ)ಅಗ್ರಾಹ್ಯ ಮೇಲ್ಮೈ
CORRECT ANSWER

(ಸಿ) ಒಳಚರಂಡಿ ವ್ಯವಸ್ಥೆಗಳ ಅಗಲೀಕರಣ


78.ಒಂದು ದೇಶದಿಂದ ಅಥವಾ ಒಬ್ಬ ವ್ಯಕ್ತಿಯಿಂದ ಸಂಪನ್ಮೂಲಗಳ ಬಳಕೆ ಅಥವಾ ತ್ಯಾಜ್ಯ ಉತ್ಪಾದನೆಯ ವ್ಯಾಪ್ತಿಯ ಬಗ್ಗೆ ಕಲ್ಪನೆಯನ್ನು ಈ ಕೆಳಗಿನ ಯಾವುದು ಕೊಡುತ್ತದೆ ?
 (ಎ)ಪರಿಸರ ಸಾಮರ್ಥ್ಯ
 (ಬಿ)ಜೀವಗೋಳ (ಬಯೊಸ್ಫಿಯರ್)
 (ಸಿ)ಜೀವವೈವಿಧ್ಯ
 (ಡಿ)ಪರಿಸರ ಹೆಜ್ಜೆಗುರುತು
CORRECT ANSWER

(ಡಿ) ಪರಿಸರ ಹೆಜ್ಜೆಗುರುತು


79.ಕೆಳಗೆ ಅಟ್ಮಾಸ್ಪಿಯರ್‌ನ ಪದರಗಳನ್ನು ಕೊಟ್ಟಿದೆ. ಇದರಲ್ಲಿ, ಭೂಮಿಯಿಂದ ಆರಂಭಿಸಿದರೆ, ಸರಿಯಾದ ಕ್ರಮ ಯಾವುದು ?
 (ಎ)ಟ್ರೋಪೊಸ್ಪಿಯರ್-ಸ್ಟ್ರೆಟೊಸ್ಪಿಯರ್ – ಮೆಸೊಸ್ಪಿಯರ್- ಥರ್ಮೋಸ್ಪಿಯರ್ -ಎಕ್ಸೋಸ್ಪಿಯರ್
 (ಬಿ)ಟ್ರೋಪೊಸ್ಪಿಯರ್-ಥರ್ಮೋಸ್ಟಿಯರ್ – ಸ್ಟ್ರೆಟೊಸ್ಪಿಯರ್- ಮೆಸೊಸ್ಪಿಯರ್ – ಎಕ್ಸೋಸ್ಪಿಯರ್
 (ಸಿ)ಟ್ರೋಪೊಸ್ಪಿಯರ್-ಸ್ಟ್ರೆಟೊಸ್ಪಿಯರ್ ಥರ್ಮೋಸ್ಪಿಯರ್- ಎಕ್ಸೋಸ್ಪಿಯರ್ – ಮೆಸೊಸ್ಪಿಯರ್
 (ಡಿ)ಸ್ಟ್ರೆಟೋಸ್ಪಿಯರ್-ಟ್ರೋಪೊಸ್ಪಿಯರ್ – ಮೆಸೊಪ್ಪಿಯರ್- ಥರ್ಮೋಸ್ಪಿಯರ್ – ಎಕ್ಸೋಸ್ಪಿಯರ್
CORRECT ANSWER

(ಎ) ಟ್ರೋಪೊಸ್ಪಿಯರ್-ಸ್ಟ್ರೆಟೊಸ್ಪಿಯರ್ – ಮೆಸೊಸ್ಪಿಯರ್- ಥರ್ಮೋಸ್ಪಿಯರ್ -ಎಕ್ಸೋಸ್ಪಿಯರ್


80.ಕರ್ನಾಟಕದ ಅತ್ಯಂತ ಉದ್ದವಾದ ನ್ಯಾಶನಲ್ ಹೈವೇ______ .
 (ಎ)NH 4
 (ಬಿ)NH 7
 (ಸಿ)NH 13
 (ಡಿ)NH 20
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


81.ಗ್ರೀನ್ ರೆವಲ್ಯೂಶನ್ ಆಹಾರ ಧಾನ್ಯಗಳನ್ನು ಸೂಚಿಸಿದರೆ, ಬ್ಲಾಕ್ ರೆವಲ್ಯೂಶನ್ ಯಾವುದನ್ನು ಸೂಚಿಸುತ್ತದೆ ?
 (ಎ)ಸೆಣಬು (ಜೂಟ್)
 (ಬಿ)ಪೆಟ್ರೋಲಿಯಂ ಉತ್ಪನ್ನಗಳು
 (ಸಿ)ರಸಗೊಬ್ಬರಗಳು
 (ಡಿ)ವಜ್ರ
CORRECT ANSWER

(ಬಿ) ಪೆಟ್ರೋಲಿಯಂ ಉತ್ಪನ್ನಗಳು


82.ಇವುಗಳಲ್ಲಿ ಯಾವುದರ ರೂಪಾಂತರ ಸಾಧ್ಯ ?
 (ಎ)ಕಲ್ಲಿದ್ದಲಿಂದ ಅಮೃತಶಿಲೆ
 (ಬಿ)ಲೈಮ್ ಸ್ಟೋನ್‌ನಿಂದ ಗ್ರಾಫೈಟ್
 (ಸಿ)ಮರಳುಗಲ್ಲಿನಿಂದ ನೈಸ್
 (ಡಿ)ಗ್ರಾಫೈಟ್‌ನಿಂದ ವಜ್ರ
CORRECT ANSWER

(ಡಿ) ಗ್ರಾಫೈಟ್‌ನಿಂದ ವಜ್ರ


83.ಪಾಕ್ ಸ್ಟ್ರೇಯಿಟ್, ಯಾವ ಎರಡು ದೇಶಗಳನ್ನು ಪ್ರತ್ಯೇಕಿಸುತ್ತದೆ?
 (ಎ)ಭಾರತ ಮತ್ತು ಬಾಂಗ್ಲಾದೇಶ
 (ಬಿ)ಭಾರತ ಮತ್ತು ಶ್ರೀಲಂಕಾ
 (ಸಿ)ಭಾರತ ಮತ್ತು ಚೀನಾ
 (ಡಿ)ಭಾರತ ಮತ್ತು ಮ್ಯಾನ್‌ಮಾರ್‌
CORRECT ANSWER

(ಬಿ) ಭಾರತ ಮತ್ತು ಶ್ರೀಲಂಕಾ


84.ಕೊಟ್ಟಿರುವ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ ?
 (ಎ)ಬಂಧಿಸಿದ ವ್ಯಕ್ತಿಯನ್ನು 24 ಗಂಟೆಗಳಿಗಿಂತ ಜಾಸ್ತಿಯಾಗಿ (ಪ್ರಯಾಣ ಸಮಯವನ್ನು ಸೇರಿಸದೇ) ಬಂಧನದಲ್ಲಿ ಇಡಲಾಗುವುದಿಲ್ಲ.
 (ಬಿ)ಅರಿವಿನ ಅಪರಾಧ ಮಾಡುವ ವ್ಯಕ್ತಿಯನ್ನು ಬಂಧನ ವಾರಂಟ್ ಇಲ್ಲದೆ ಬಂಧಿಸಬಹುದು.
 (ಸಿ)ಅಸಾಧಾರಣ ಸಂದರ್ಭಗಳು ಇಲ್ಲದೆ ಇರುವಾಗ, ಯಾವ ಮಹಿಳೆಯನ್ನೂ ಸೂರ್ಯಾಸ್ತಮ ನಂತರ ಹಾಗೂ ಸೂರ್ಯೋದಯದ ಮೊದಲು ಬಂಧಿಸಲಾಗುವುದಿಲ್ಲ.
 (ಡಿ)ಯಾವ ಸಂದರ್ಭಗಳಲ್ಲಿಯೂ, ಸಾರ್ವಜನಿಕ ಜನರು ಯಾರನ್ನೂ ಯಾವ ಸಂದರ್ಭದಲ್ಲಿಯೂ ಬಂಧಿಸಲಾಗುವುದಿಲ್ಲ, ಅರಿವುಳ್ಳ ಮತ್ತು ಜಾಮೀನು ಪಡೆಯಲಾಗದ ಅಪರಾಧವಿದ್ದರೂ.
CORRECT ANSWER

(ಡಿ) ಯಾವ ಸಂದರ್ಭಗಳಲ್ಲಿಯೂ, ಸಾರ್ವಜನಿಕ ಜನರು ಯಾರನ್ನೂ ಯಾವ ಸಂದರ್ಭದಲ್ಲಿಯೂ ಬಂಧಿಸಲಾಗುವುದಿಲ್ಲ, ಅರಿವುಳ್ಳ ಮತ್ತು ಜಾಮೀನು ಪಡೆಯಲಾಗದ ಅಪರಾಧವಿದ್ದರೂ.


85.ಚಂಡಮಾರುತವನ್ನು ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಿಕೆಯಾಗಿಲ್ಲ ?
 (ಎ)ಯುಎಸ್ಎ ಮತ್ತು ಮೆಕ್ಸಿಕೊ – ಹರ್ರಿಕೇನ್
 (ಬಿ)ಚೀನಾ- ಟೈಫೂನ್
 (ಸಿ)ಆಸ್ಟ್ರೇಲಿಯಾ – ವರ್ಲ್‌ಪೂಲ್‌
 (ಡಿ)ಭಾರತ – ಸೈಕ್ಲೋನ್
CORRECT ANSWER

(ಸಿ) ಆಸ್ಟ್ರೇಲಿಯಾ – ವರ್ಲ್‌ಪೂಲ್‌


86.ಹಂಪಿ ಯಾವ ನದಿಯ ದಂಡೆಯಲ್ಲಿದೆ ?
 (ಎ)ತುಂಗಭದ್ರಾ
 (ಬಿ)ಮಲಪ್ರಭಾ
 (ಸಿ)ಘಟಪ್ರಭಾ
 (ಡಿ)ಭೀಮ
CORRECT ANSWER

(ಎ) ತುಂಗಭದ್ರಾ


87.ಯಾವ ನದಿಯನ್ನು ‘‘ದಕ್ಷಿಣ ಗಂಗಾ’’ ಎನ್ನುತ್ತಾರೆ ?
 (ಎ)ಗೋದಾವರಿ
 (ಬಿ)ಕೃಷ್ಣಾ
 (ಸಿ)ಕಾವೇರಿ
 (ಡಿ)ತುಂಗಭದ್ರಾ
CORRECT ANSWER

(ಎ) ಗೋದಾವರಿ & (ಸಿ) ಕಾವೇರಿ


88.ಭಾರತ ಸಂವಿಧಾನದ ಯಾವ ಆರ್ಟಿಕಲ್‌ನಲ್ಲಿ, ಸಿಟಿಜನ್‌ಶಿಪ್‌ ಬಗ್ಗೆ ಇದೆ ?
 (ಎ)ಆರ್ಟಿಕಲ್ 5
 (ಬಿ)ಆರ್ಟಿಕಲ್ 15
 (ಸಿ)ಆರ್ಟಿಕಲ್ 25
 (ಡಿ)ಆರ್ಟಿಕಲ್ 35
CORRECT ANSWER

(ಎ) ಆರ್ಟಿಕಲ್ 5


89.ಇತ್ತೀಚೆಗೆ, ಭಾರತ ಸಂವಿಧಾನದಿಂದ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟ ಆರ್ಟಿಕಲ್ ಅನ್ನು ತೆಗೆದಿದೆ. ಈ ಆರ್ಟಿಕಲ್ ______ ಇದೆ.
 (ಎ)ಆರ್ಟಿಕಲ್ 371
 (ಬಿ)ಆರ್ಟಿಕಲ್ 370
 (ಸಿ)ಆರ್ಟಿಕಲ್ 372
 (ಡಿ)ಆರ್ಟಿಕಲ್ 373
CORRECT ANSWER

(ಬಿ) ಆರ್ಟಿಕಲ್ 370


90.ನಮ್ಮ ರಾಜ್ಯ/ದೇಶವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಎಲ್ಲಾ ______ ವಯಸ್ಸಿನ ಮಕ್ಕಳಿಗೆ ಒದಗಿಸುತ್ತದೆ.
 (ಎ)ಐದರಿಂದ ಹದಿನಾಲ್ಕು ವರ್ಷ
 (ಬಿ)ಐದರಿಂದ ಹದಿನೈದು ವರ್ಷ
 (ಸಿ)ಆರರಿಂದ ಹದಿನಾಲ್ಕು ವರ್ಷ
 (ಡಿ)ಐದರಿಂದ ಹದಿನಾರು ವರ್ಷ
CORRECT ANSWER

(ಸಿ) ಆರರಿಂದ ಹದಿನಾಲ್ಕು ವರ್ಷ


91.ಕೆಳಗಿನ ಯಾವುದು ಸಂವಿಧಾನದಲ್ಲಿ ಉಲ್ಲೇಖಿಸಿದ ಮೂಲಭೂತ ಕರ್ತವ್ಯಗಳಲ್ಲಿ ಒಂದಲ್ಲ ?
 (ಎ)ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತಪ್ಪಿಸುವುದು.
 (ಬಿ)ಚುನಾವಣೆಯಲ್ಲಿ ಮತ ಚಲಾಯಿಸುವುದು.
 (ಸಿ)ನಮ್ಮ ಸಂಯೋಜಿತ ಸಂಸ್ಕೃತಿಯ ಸಂಪನ್ನ ಪರಂಪರೆಯನ್ನು ಮೌಲೀಕರಿಸಿ/ಗೌರವಿಸುವುದು ಮತ್ತು ಸಂರಕ್ಷಿಸುವುದು.
 (ಡಿ)ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
CORRECT ANSWER

(ಬಿ) ಚುನಾವಣೆಯಲ್ಲಿ ಮತ ಚಲಾಯಿಸುವುದು.


92.ಭಾರತ ಸಂವಿಧಾನದ ಯಾವ ಶೆಡ್ಯೂಲ್‌ನಲ್ಲಿಆಂಟಿ ಡಿಫೆಕ್ಷನ್ ಕಾನೂನು ಇದೆ ?
 (ಎ)ಶೆಡ್ಯೂಲ್ 7
 (ಬಿ)ಶೆಡ್ಯೂಲ್ 8
 (ಸಿ)ಶೆಡ್ಯೂಲ್
 (ಡಿ)ಶೆಡ್ಯೂಲ್ 10
CORRECT ANSWER

(ಡಿ) ಶೆಡ್ಯೂಲ್ 10


93.ಐತಿಹಾಸಿಕ 73 ಮತ್ತು 74 ನೆಯ ಅಮೆಂಡ್‌ಮೆಂಟ್‌ ಆಕ್ಟ್ ______ ಗೆ ಸಂಬಂಧಿಸಿದೆ.
 (ಎ)ಸ್ಥಳೀಯ ಸ್ವಸರ್ಕಾರ
 (ಬಿ)ವಿರೋಧಿ ಪಕ್ಷಾಂತರ
 (ಸಿ)ತುರ್ತು ನಿಬಂಧನೆಗಳು
 (ಡಿ)ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸದೀಯ ಅಧಿಕಾರಗಳು
CORRECT ANSWER

(ಎ) ಸ್ಥಳೀಯ ಸ್ವಸರ್ಕಾರ


94.ಅಗತ್ಯವಾದ ಕನಿಷ್ಠ ವಯಸ್ಸನ್ನು ಸಂಬಂಧಿಸಿದರೆ ಇವುಗಳಲ್ಲಿ ಯಾವುದು ಸರಿ ಇಲ್ಲ ?
 (ಎ)ಲೋಕಸಭೆಯ ಸದಸ್ಯ – 25 ವರ್ಷ
 (ಬಿ)ರಾಜ್ಯಸಭೆಯ ಸದಸ್ಯ – 30 ವರ್ಷ
 (ಸಿ)ಭಾರತದ ಉಪರಾಷ್ಟ್ರಪತಿ – 30 ವರ್ಷ
 (ಡಿ)ಭಾರತದ ರಾಷ್ಟ್ರಪತಿ – 35 ವರ್ಷ
CORRECT ANSWER

(ಸಿ) ಭಾರತದ ಉಪರಾಷ್ಟ್ರಪತಿ – 30 ವರ್ಷ


95.ಕಾರ್ಯನಿರ್ವಾಹಕ ಅಥವಾ ಇತರ ಯಾವುದೇ ಅಧೀನ ಸಂಸ್ಥೆಗಳು ಕೆಲವು ಕರ್ತವ್ಯಗಳನ್ನು ಅಥವಾ ಕಾರ್ಯಗಳನ್ನು ನಿರ್ವಹಿಸಲು ವಿಫಲವಾದಾಗ, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಈ ಕಾರ್ಯಗಳನ್ನು ನಿರ್ವಹಿಸಲು ಆದೇಶಿಸುತ್ತದೆ. ಈ ಆದೇಶವನ್ನು __________ ಎನ್ನಲಾಗುತ್ತದೆ.
 (ಎ)ಮ್ಯಾಂಡಮಸ್
 (ಬಿ)ಸರ್ಶಿಯೋರರಿ
 (ಸಿ)ಪ್ರೊಹಿಬಿಷನ್
 (ಡಿ)ಹೇಬಿಯಸ್ ಕಾರ್ಪಸ್
CORRECT ANSWER

(ಎ) ಮ್ಯಾಂಡಮಸ್


96.ಪ್ರಸಿದ್ದ ಬೋಧನೆ (ಡಾಕ್ಟ್ರಿನ್) ‘‘ಬೇಸಿಕ್ ಸ್ಟ್ರಕ್ಚರ್ ಆಫ್
ಕಾನ್ಸ್‌ಟಿಟ್ಯೂಶನ್’’ ಅನ್ನು ಭಾರತದ ಸುಪ್ರೀಂ ಕೋರ್ಟ್ __________ ಕೇಸಿನಲ್ಲಿ ವಿಸ್ತರಿಸಲಾಗಿತ್ತು.
 (ಎ)ಪ್ರಕಾಶ್ ಸಿಂಗ್
 (ಬಿ)ಕೇಶವಾನಂದ ಭಾರತಿ
 (ಸಿ)ಎಸ್.ಆರ್. ಬೊಮ್ಮಾಯಿ
 (ಡಿ)ಮೇನಕಾಗಾಂಧಿ
CORRECT ANSWER

(ಬಿ) ಕೇಶವಾನಂದ ಭಾರತಿ


97.ಭಾರತದ ಹೊರಗೆ ವಿತರಿಸಲಾದ, ಆದರೆ ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಿದ ಬಾಂಡ್‌ಗಳನ್ನು __________ ಎಂದು ಕರೆಯಲಾಗುತ್ತದೆ.
 (ಎ)ಡಿಮ್ ಸಮ್ ಬಾಂಡ್ಸ್
 (ಬಿ)ಶಾಂಘಾಯ್ ಬಾಂಡ್ಸ್
 (ಸಿ)ಮಸಲ ಬಾಂಡ್ಸ್
 (ಡಿ)ಸೇಫ್ರನ್ ಬಾಂಡ್ಸ್
CORRECT ANSWER

(ಸಿ) ಮಸಲ ಬಾಂಡ್ಸ್


98.ಭಾರತ ಸಂವಿಧಾನದ ಯಾವ ಆರ್ಟಿಕಲ್, ಅಸ್ಪೃಶ್ಯತೆಯ ನಿರ್ಮೂಲನೆಗೆ ಸಂಬಂಧಿಸಿದೆ ?
 (ಎ)ಆರ್ಟಿಕಲ್ 14
 (ಬಿ)ಆರ್ಟಿಕಲ್ 15
 (ಸಿ)ಆರ್ಟಿಕಲ್ 17
 (ಡಿ)ಆರ್ಟಿಕಲ್ 18
CORRECT ANSWER

(ಸಿ) ಆರ್ಟಿಕಲ್ 17


99.ಸರ್ಕಾರಿಯಾ ಕಮಿಷನ್ __________ ಗೆ ಸಂಬಂಧಿಸಿದೆ.
 (ಎ)ಕೇಂದ್ರ – ರಾಜ್ಯಗಳ ಸಂಬಂಧಗಳು
 (ಬಿ)ಕೃಷಿ ಸುಧಾರಣೆಗಳು
 (ಸಿ)ಗದ್ದೆಗಳ ರಕ್ಷಣೆ
 (ಡಿ)ಸಂವಿಧಾನದ ವಿಮರ್ಶೆ
CORRECT ANSWER

(ಎ) ಕೇಂದ್ರ – ರಾಜ್ಯಗಳ ಸಂಬಂಧಗಳು


100.ಡಿಮೇಟ್ ಅಕೌಂಟ್ ಎಂದರೇನು ?
 (ಎ)ಷೇರುಗಳ ಖರೀದಿ ಹಾಗೂ ಮಾರಾಟಕ್ಕಾಗಿ ಷೇರುದಾರರು ಈ ಖಾತೆಯನ್ನು ತೆರೆಯಬೇಕು.
 (ಬಿ)ಆಧಾರ್ ಕಾರ್ಡನ್ನು ಹೊಂದಿರುವವರು ಈ ಖಾತೆಯನ್ನು ತೆರೆಯಲೇ ಬೇಕು.
 (ಸಿ)ಟ್ರಸ್ಟ್ ಗಳನ್ನು ಸ್ಥಾಪಿಸಲು ಬಯಸುವ ವ್ಯಕ್ತಿ ಈ ಖಾತೆಯನ್ನು ತೆರೆಯಬೇಕಾಗುತ್ತದೆ.
 (ಡಿ)ಉತ್ಪಾದನೆಯಲ್ಲಿ ಹೊಸ ಟೆಕ್ನಾಲಜಿಯನ್ನು ಒಳಗೊಂಡ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ಬಳಸುವ ಖಾತೆಯು ಇದು. ಉತ್ಪಾದನೆಯಲ್ಲಿ ಹೆಚ್ಚಿನ ಅಪಾಯವಿರುತ್ತದೆ ಆದರೆ ಹೆಚ್ಚಿನ ಆದಾಯದ ಸಂಭಾವನೆಯೂ ಇರುತ್ತದೆ.
CORRECT ANSWER

(ಎ) ಷೇರುಗಳ ಖರೀದಿ ಹಾಗೂ ಮಾರಾಟಕ್ಕಾಗಿ ಷೇರುದಾರರು ಈ ಖಾತೆಯನ್ನು ತೆರೆಯಬೇಕು.

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment