ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ
1. | ಕಂಪ್ಯೂಟರ್ ಬಳಕೆದಾರರ ಅರಿವಿಲ್ಲದೆ, ಅನಗತ್ಯ ಸಾಫ್ಟ್‌ವೇರ್ ಅನ್ನು ಸ್ಥಾಪಿಸುವುದು ಮತ್ತು ಇಂಟರ್‌ನೆಟ್ ಬಳಕೆಯ ಡೇಟಾ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯುವುದು, ಇದನ್ನು ______ ಎಂದು ಕರೆಯಲಾಗುತ್ತದೆ. | |
(ಎ) | ರಾನ್ಸಮ್‌ವೇರ್ | |
(ಬಿ) | ಸ್ಪೈವೇರ್ | |
(ಸಿ) | ಟ್ರೋಜನ್ | |
(ಡಿ) | ಕೀ ಲೊಗ್ಗರ್ |
CORRECT ANSWER
(ಬಿ) ಸ್ಪೈವೇರ್
2. | ಮಿನಮಟ ಎಂಬ ರೋಗ, ಯಾವ ಲೋಹದಿಂದಾಗುತ್ತದೆ ? | |
(ಎ) | ಸೀಸ | |
(ಬಿ) | ನಿಕ್ಕಲ್ | |
(ಸಿ) | ಪಾದರಸ | |
(ಡಿ) | ಫ್ಲೋರೀನ್ |
CORRECT ANSWER
(ಸಿ) ಪಾದರಸ
3. | ಸರಕು ಮತ್ತು ಸೇವಾ ತೆರಿಗೆಯು ಒಂದು ______ . | |
(ಎ) | ನೇರ ತೆರಿಗೆ | |
(ಬಿ) | ಪರೋಕ್ಷ ತೆರಿಗೆ | |
(ಸಿ) | ಆದಾಯ ತೆರಿಗೆಯ ಭಾಗ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಬಿ) ಪರೋಕ್ಷ ತೆರಿಗೆ
4. | ಆರ್‌ಬಿಐ ಮೊನೆಟರಿ ಪಾಲಿಸಿಯ ಸಂಬಂಧದಲ್ಲಿ, ಸಿಆರ್ಆರ್ ಎಂಬ ಪದವು ______ ಅನ್ನು ಸೂಚಿಸುತ್ತದೆ: | |
(ಎ) | ಕ್ಯಾಶ್ ರಿಸರ್ವ್ ರೇಶಿಯೊ | |
(ಬಿ) | ಕರೆನ್ಸಿ ರಿಸರ್ವ್ ರೇಶಿಯೊ | |
(ಸಿ) | ಕ್ಯಾಶ್ ರಿಸರ್ವ್ ರೇಟ್ | |
(ಡಿ) | ಕರೆನ್ಸಿ ರಿಸರ್ವ್ ರೇಟ್ |
CORRECT ANSWER
(ಎ) ಕ್ಯಾಶ್ ರಿಸರ್ವ್ ರೇಶಿಯೊ
5. | ಹಣಕಾಸು ವಲಯದಲ್ಲಿ ಎನ್‌ಪಿಎ ಮತ್ತು ಸ್ಟ್ರೆಸಡ್ ಅಸೆಟ್ಸ್ ______ ಅನ್ನು ಸೂಚಿಸುತ್ತದೆ. | |
(ಎ) | ವಿಮಾ ಕಂಪನಿಗಳು | |
(ಬಿ) | ಚಿಟ್ ಫಡ್‌ಗಳು | |
(ಸಿ) | ಬ್ಯಾಂಕ್‌ಗಳು | |
(ಡಿ) | ಮ್ಯೂಚುವಲ್ ಫಂಡ್ ಕಂಪನಿಗಳು |
CORRECT ANSWER
(ಸಿ) ಬ್ಯಾಂಕ್‌ಗಳು
6. | ಖಾದ್ಯಶ್ರೇಣಿ (ಫುಡ್ ಚೈನ್) ಯಲ್ಲಿ, ಹುಲ್ಲು ತಿನ್ನುವ ಪ್ರಾಣಿ ಜಾತಿಯನ್ನು ______ ಎಂದು ಕರೆಯಲಾಗುತ್ತದೆ. | |
(ಎ) | ಪ್ರಾಥಮಿಕ (ಪ್ರೈಮರಿ) ಗ್ರಾಹಕರು | |
(ಬಿ) | ಉತ್ಪಾದಿಸುವವರು (ಪ್ರೊಡ್ಯುಸರ್ಸ್) | |
(ಸಿ) | ಆಟೋಟ್ರೋಫ್‌ಗಳು | |
(ಡಿ) | ಇವುಗಳು ಪುಡ್ ಚೈನ್‌ನ ಭಾಗವೇ ಅಲ್ಲ. |
CORRECT ANSWER
(ಎ) ಪ್ರಾಥಮಿಕ (ಪ್ರೈಮರಿ) ಗ್ರಾಹಕರು
7. | ಯಾವ ಬ್ಲಡ್ ಗ್ರೂಪ್ ಅನ್ನು ಯೂನಿವರ್ಸಲ್ ಡೋನರ್ ಎನ್ನಲಾಗುತ್ತದೆ ? | |
(ಎ) | ‘ಬಿ’ ಪಾಸಿಟಿವ್ | |
(ಬಿ) | ‘ಎ’ ಪಾಸಿಟಿವ್ | |
(ಸಿ) | ‘ಎಬಿ’ ನೆಗೆಟಿವ್ | |
(ಡಿ) | ‘ಓ’ ನೆಗೆಟಿವ್ |
CORRECT ANSWER
(ಡಿ) ‘ಓ’ ನೆಗೆಟಿವ್
8. | ಕೆಳಗಿನ ಯಾವುದು ನವೀಕರಿಸಲಾಗದ ಶಕ್ತಿಯ ಮೂಲ ? (ನಾನ್ ರಿನ್ಯೂವಬಲ್ ಸೋರ್ಸ್ ಆಫ್ ಎನರ್ಜಿ) | |
(ಎ) | ಉಬ್ಬರವಿಳಿತದ ಶಕ್ತಿ (ಟೈಡಲ್ ಎನರ್ಜಿ) | |
(ಬಿ) | ಪವನ ಶಕ್ತಿ (ವಿಂಡ್ ಎನರ್ಜಿ) | |
(ಸಿ) | ಸೌರ ಶಕ್ತಿ (ಸೋಲಾರ್ ಎನರ್ಜಿ) | |
(ಡಿ) | ಕಲ್ಲಿದ್ದಲು ಶಕ್ತಿ (ಕೋಲ್ ಎನರ್ಜಿ) |
CORRECT ANSWER
(ಡಿ) ಕಲ್ಲಿದ್ದಲು ಶಕ್ತಿ (ಕೋಲ್ ಎನರ್ಜಿ)
9. | ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆಯನ್ನು __________ ಎಂದು ಕರೆಯಲಾಗುತ್ತದೆ. | |
(ಎ) | ಫಾರ್ಮೆಂಟೇಶನ್ | |
(ಬಿ) | ನೈಟ್ರೊಜೆನ್ ಫಿಕ್ಸೇಶನ್ | |
(ಸಿ) | ಮೋಲ್ಡಿಂಗ್ | |
(ಡಿ) | ಇನ್‌ಫೆಕ್ಷನ್ |
CORRECT ANSWER
(ಎ) ಫಾರ್ಮೆಂಟೇಶನ್
10. | ಸಸ್ಯದ ಅಭಿವೃದ್ಧಿ, ಬೆಳವಣಿಗೆ ಮತ್ತು ಯೋಗಕ್ಷೇಮಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶವೆಂದರೆ ______________ . | |
(ಎ) | ನೈಟ್ರೋಜೆನ್ | |
(ಬಿ) | ಫಾಸ್ಫರಸ್ | |
(ಸಿ) | ಪೊಟ್ಯಾಶಿಯಮ್ | |
(ಡಿ) | ಕ್ಲೋರಿನ್ |
CORRECT ANSWER
(ಡಿ) ಕ್ಲೋರಿನ್
11. | ಮನುಷ್ಯನ ಹೃದಯವು ___________ ವ್ಯವಸ್ಥೆಯ ಒಂದು ಭಾಗವಾಗಿದೆ. | |
(ಎ) | ಪೋಷಣೆ | |
(ಬಿ) | ಉಸಿರಾಟ | |
(ಸಿ) | ಸಾರಿಗೆ | |
(ಡಿ) | ವಿಸರ್ಜನೆ |
CORRECT ANSWER
(ಸಿ) ಸಾರಿಗೆ
12. | ಜಾರ್ಜ್ ಫ್ಲಾಯ್ಡ್ ಸಾವಿಗೆ, ಪೊಲೀಸರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ ದೇಶ ಯಾವುದು ? | |
(ಎ) | ಯುಎಸ್ಎ | |
(ಬಿ) | ಯುನೈಟೆಡ್ ಕಿಂಗ್‌ಡಮ್ | |
(ಸಿ) | ಫ್ರಾನ್ಸ್ | |
(ಡಿ) | ಬ್ರೆಜಿಲ್ |
CORRECT ANSWER
(ಎ) ಯುಎಸ್ಎ
13. | ಕೆಳಗೆ ಕೊಟ್ಟಿರುವ ಜಿಲ್ಲೆಗಳಲ್ಲಿ, ಅತ್ಯಂತ ದೊಡ್ಡ ಸೋಲಾರ್ ಪವರ್ ಪಾರ್ಕ್ ಯಾವ ಜಿಲ್ಲೆಯಲ್ಲಿದೆ ? | |
(ಎ) | ಚಿತ್ರದುರ್ಗ | |
(ಬಿ) | ಚಾಮರಾಜನಗರ | |
(ಸಿ) | ದಾವಣಗೆರೆ | |
(ಡಿ) | ತುಮಕೂರು |
CORRECT ANSWER
(ಡಿ) ತುಮಕೂರು
14. | ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆ ಆಗಿಲ್ಲ ? | |
(ಎ) | ವಿಟಮಿನ್ ಸಿ – ಸ್ಕರ್ವಿ | |
(ಬಿ) | ವಿಟಮಿನ್ ಎ – ರಾತ್ರಿ ಕುರುಡುತನ | |
(ಸಿ) | ವಿಟಮಿನ್ ಡಿ – ಪೆಲ್ಲಾಗ್ರ | |
(ಡಿ) | ವಿಟಮಿನ್ ಬಿ1 – ಬೆರಿಬೆರಿ |
CORRECT ANSWER
(ಸಿ) ವಿಟಮಿನ್ ಡಿ – ಪೆಲ್ಲಾಗ್ರ
15. | ವಾಹನಗಳಲ್ಲಿ ಅಡ್ಡನೋಟ ಮತ್ತು ಹಿಂದಿನ ನೋಟಗಳಿಗೆ ಉಪಯೋಗಿಸುವ ಕನ್ನಡಿ ______. | |
(ಎ) | ಕಾನ್‌ಕೇವ್ ಕನ್ನಡಿ | |
(ಬಿ) | ಕಾನ್‌ವೆಕ್ಸ್ ಕನ್ನಡಿ | |
(ಸಿ) | ಪ್ಲೇನ್ ಕನ್ನಡಿ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಬಿ) ಕಾನ್‌ವೆಕ್ಸ್ ಕನ್ನಡಿ
16. | ಭಾರತದಲ್ಲಿ ಚಿಲ್ಲರೆ ಪಾವತಿ ಮತ್ತು ತೀರುವೆ/ವಸಾಹತು ವ್ಯವಸ್ಥೆಗಳಿಗಾಗಿ ಸಂಯೋಜಿಸಲ್ಪಟ್ಟ ಸಂಸ್ಥೆ __________. | |
(ಎ) | ಎಸ್ಇಬಿಐ | |
(ಬಿ) | ಎಮ್‌ಯುಡಿಆರ್‌ಎ (ಮುದ್ರಾ) ಬ್ಯಾಂಕ್ | |
(ಸಿ) | ಎನ್‌ಪಿಸಿಐ | |
(ಡಿ) | ಎಲ್ಐಸಿ |
CORRECT ANSWER
(ಸಿ) ಎನ್‌ಪಿಸಿಐ
17. | ಕೆಳಗಿನ ದೇಶಗಳಲ್ಲಿ, __________ ಅನ್ನು ಬಿಟ್ಟು ಮಿಕ್ಕ ಎಲ್ಲವೂ G-7 ದೇಶಗಳಾಗಿವೆ. | |
(ಎ) | ಇಂಡಿಯಾ | |
(ಬಿ) | ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, | |
(ಸಿ) | ಯುನೈಟೆಡ್ ಕಿಂಗ್‌ಡಮ್ | |
(ಡಿ) | ಇಟಲಿ |
CORRECT ANSWER
(ಎ) ಇಂಡಿಯಾ
18. | ತವಾಂಗ್ ವ್ಯಾಲಿ ಯಾವ ರಾಜ್ಯದಲ್ಲಿದೆ ? | |
(ಎ) | ಜಮ್ಮು ಮತ್ತು ಕಾಶ್ಮೀರ | |
(ಬಿ) | ಉತ್ತರಾಖಂಡ್ | |
(ಸಿ) | ಸಿಕ್ಕಿಮ್ | |
(ಡಿ) | ಅರುಣಾಚಲ ಪ್ರದೇಶ |
CORRECT ANSWER
(ಡಿ) ಅರುಣಾಚಲ ಪ್ರದೇಶ
19. | ಇವುಗಳಲ್ಲಿ ಯಾವುದು ಐಸಿಎಮ್ಆರ್ ಅನ್ನು ಸೂಚಿಸುತ್ತದೆ ? | |
(ಎ) | ಇಂಟರ್‌ನ್ಯಾಶನಲ್ ಕಮಿಟಿ ಆಫ್ ಮೆಡಿಕಲ್ ರಿಸರ್ಚ್ | |
(ಬಿ) | ಇಂಡಿಯನ್ ಕಮಿಟಿ ಫಾರ್ ಮೆಟಿರಿಯಲ್ ರಿಸೋರ್ಸಸ್ | |
(ಸಿ) | ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ | |
(ಡಿ) | ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ಮೀಡಿಯಾ ರಿಸರ್ಚ್ |
CORRECT ANSWER
(ಸಿ) ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್
20. | ಈ ಕೆಳಗಿನ ಯಾವುದು ವೈರಸ್‌ನಿಂದ ಆಗುವ ರೋಗ ಅಲ್ಲ? | |
(ಎ) | ಕೋವಿಡ್ – 19 | |
(ಬಿ) | ಟೈಫೋಯಿಡ್ | |
(ಸಿ) | ಎಸ್ಎಆರ್‌ಎಸ್ | |
(ಡಿ) | ಫೂಟ್ ಆ್ಯಂಡ್ ಮೌತ್ ಡಿಸೀಸ್ |
CORRECT ANSWER
(ಬಿ) ಟೈಫೋಯಿಡ್
21. | ಕೆಳಗಿನ ಯಾವ ಸಂಯೋಜನೆ ಸರಿ ಇಲ್ಲ ? | |
(ಎ) | ಸುಂದರ್ ಪಿಚ್ಚೈ- ಗೂಗಲ್ | |
(ಬಿ) | ಸತ್ಯ ನಡೆಲ್ಲಾ- ಆಪಲ್ | |
(ಸಿ) | ರಾಜೀವ್ ಸೂರಿ – ನೋಕಿಯಾ | |
(ಡಿ) | ಶಾಂತನು ನಾರಾಯಣ್ – ಅಡೋಬ್ |
CORRECT ANSWER
(ಬಿ) ಸತ್ಯ ನಡೆಲ್ಲಾ- ಆಪಲ್
22. | ನಮಸ್ತೆ ಟ್ರಂಪ್ ರ್ಯಾಲಿ, ಕೆಳಗಿನ ಯಾವ ನಗರದಲ್ಲಿ ನಡೆಯಿತು ? | |
(ಎ) | ನ್ಯೂದೆಹಲಿ | |
(ಬಿ) | ಮುಂಬೈ | |
(ಸಿ) | ಅಹಮದಾಬಾದ್ | |
(ಡಿ) | ಆಗ್ರಾ |
CORRECT ANSWER
(ಸಿ) ಅಹಮದಾಬಾದ್
23. | ಬಿಟ್‌ಕಾಯಿನ್ ಎಂದರೇನು ? | |
(ಎ) | ಪಡಿತರ ಅಂಗಡಿಗಳಲ್ಲಿ ನೀಡಲಾದ ಹೊಸ ವಿಧವಾದ ಟೋಕನ್ | |
(ಬಿ) | ಒಂದು ಡಿಜಿಟಲ್ ಕ್ರಿಪ್ಟೊ ಕರೆನ್ಸಿ | |
(ಸಿ) | ಬಡವರಿಗೆ ಸರ್ಕಾರ ಕೊಡುವ ಉಚಿತ ಸಬ್ಸಿಡಿಗಳು | |
(ಡಿ) | ಇತ್ತೀಚೆಗೆ ನಿಷೇಧಿಸಲಾದ ಒಂದು ಆನ್‌ಲೈನ್ ಜೂಜಾಟ |
CORRECT ANSWER
(ಬಿ) ಒಂದು ಡಿಜಿಟಲ್ ಕ್ರಿಪ್ಟೊ ಕರೆನ್ಸಿ
24. | ಭಾರತದಲ್ಲಿ ಹುಟ್ಟಿದ ಯಾವ ಎಕೊನೊಮಿಸ್ಟ್ ಈಗ IMF ನಲ್ಲಿ ಚೀಫ್ ಎಕೊನೊಮಿಸ್ಟ್ ಪದವಿಯಲ್ಲಿದ್ದಾರೆ ? | |
(ಎ) | ರಘುರಾಮ್ ರಾಜನ್ | |
(ಬಿ) | ಗೀತಾ ಗೋಪಿನಾಥ್ | |
(ಸಿ) | ಅರವಿಂದ್ ಸುಬ್ರಮಣ್ಯಮ್ | |
(ಡಿ) | ವಿರಲ್ ಆಚಾರ್ಯ |
CORRECT ANSWER
(ಬಿ) ಗೀತಾ ಗೋಪಿನಾಥ್
25. | ಕೆಳಗಿನ ಯಾವ ಜೋಡಿ ಸರಿ ಇಲ್ಲ ? | |
(ಎ) | ರಾಫೆಲ್ – ಫ್ರಾನ್ಸ್ | |
(ಬಿ) | ಎಮ್ಐಜಿ – ರಷ್ಯಾ | |
(ಸಿ) | ತೇಜಸ್ – ಇಂಡಿಯಾ | |
(ಡಿ) | ಸುಖೋಯ್ – ಯುನೈಟೆಡ್ ಕಿಂಗ್‌ಡಮ್ |
CORRECT ANSWER
(ಡಿ) ಸುಖೋಯ್- ಯುನೈಟೆಡ್ ಕಿಂಗ್‌ಡಮ್
26. | ಇಂಡಿಯಾ ಸೈನ್ಸ್ ಕಾಂಗ್ರೆಸ್ 2020 ______ ನಲ್ಲಿ ನಡೆಯಿತು. | |
(ಎ) | ಕೋಲ್ಕತಾ | |
(ಬಿ) | ಬೆಂಗಳೂರು | |
(ಸಿ) | ಮುಂಬೈ | |
(ಡಿ) | ವಾರಾಣಸಿ |
CORRECT ANSWER
(ಬಿ) ಬೆಂಗಳೂರು
27. | 2020 ರಲ್ಲಿ ನಡೆಯುವಂತಿದ್ದ ಒಲಿಂಪಿಕ್ಸ್, 2021 ಗೆ ಮುಂದೂಡಲಾಗಿ, ಯಾವ ದೇಶದಲ್ಲಿ ನಡೆಯಲಿದೆ ? | |
(ಎ) | ಸೌತ್ ಕೊರಿಯಾ | |
(ಬಿ) | ಆಸ್ಟ್ರೇಲಿಯಾ | |
(ಸಿ) | ಜಪಾನ್ | |
(ಡಿ) | ಚೀನಾ |
CORRECT ANSWER
(ಸಿ) ಜಪಾನ್
28. | ಅಪ್ಲಿಕೇಶನ್ MANI (ಮೊಬೈಲ್ ಏಡೆಡ್ ನೋಟ್ ಐಡೆಂಟಿಫೈಯರ್) ಅನ್ನು ದೃಷ್ಟಿಗೋಚರವಾಗದಿರುವವರಿಗಾಗಿ, ಕರೆನ್ಸಿ ನೋಟುಗಳನ್ನು ಗುರುತಿಸಲು, __________ ನಿಂದ ಪ್ರಾರಂಭಿಸಲಾಗಿದೆ. | |
(ಎ) | ಆರ್‌ಬಿಐ | |
(ಬಿ) | ಎಸ್‌ಬಿಐ | |
(ಸಿ) | ಮಿನಿಸ್ಟ್ರಿ ಆಫ್ ಫೈನಾನ್ಸ್ | |
(ಡಿ) | ಎನ್ಐಟಿಐ (ನೀತಿ) ಆಯೋಗ |
CORRECT ANSWER
(ಎ) ಆರ್‌ಬಿಐ
29. | ಹಾಂಗ್-ಕಾಂಗ್ ಪ್ರದೇಶ ಮೊದಲು ಕೆಳಗಿನ ಯಾವ ದೇಶದ ಆಡಳಿತಾತ್ಮಕ ನಿಯಂತ್ರಣದಲ್ಲಿತ್ತು ? | |
(ಎ) | ಫ್ರಾನ್ಸ್ | |
(ಬಿ) | ಬ್ರಿಟನ್ | |
(ಸಿ) | ಪೋರ್ಚುಗಲ್ | |
(ಡಿ) | ಇಟಲಿ |
CORRECT ANSWER
(ಬಿ) ಬ್ರಿಟನ್
30. | ಮಹಿಳೆಯರ ಮೇಲಿನ ಅಪರಾಧವನ್ನು ನಿಭಾಯಿಸಲು, ಇತ್ತೀಚೆಗೆ ಯಾವ ರಾಜ್ಯದಲ್ಲಿ ಮೊದಲ ದಿಶಾ ಪೊಲೀಸ್ ಸ್ಟೇಷನ್ ಸ್ಥಾಪಿಸಲಾಯಿತು ? | |
(ಎ) | ಆಂಧ್ರಪ್ರದೇಶ | |
(ಬಿ) | ಕರ್ನಾಟಕ | |
(ಸಿ) | ಮಹಾರಾಷ್ಟ್ರ | |
(ಡಿ) | ಮಧ್ಯಪ್ರದೇಶ |
CORRECT ANSWER
(ಎ) ಆಂಧ್ರಪ್ರದೇಶ
31. | ರೋಹಿಂಗ್ಯಾ ವಲಸಿಗರು ಕೆಳಗಿನ ಯಾವ ಮೂಲಸ್ಥಾನ ದೇಶಗಳಲ್ಲಿ ಇದ್ದಾರೆ ? | |
(ಎ) | ಬಾಂಗ್ಲಾದೇಶ | |
(ಬಿ) | ಮ್ಯಾನ್ಮಾರ್ | |
(ಸಿ) | ಪಾಕಿಸ್ತಾನ್ | |
(ಡಿ) | ಆಫ್ಘಾನಿಸ್ತಾನ್ |
CORRECT ANSWER
(ಬಿ) ಮ್ಯಾನ್ಮಾರ್
32. | ಕೆಳಗಿನ ಯಾವ ಆ್ಯಪ್ಸ್ ಕೋವಿಡ್-19 ಗೆ ಸಂಬಂಧಿಸಿದ್ದಿಲ್ಲ ? | |
(ಎ) | ಆರೋಗ್ಯ ಸೇತು | |
(ಬಿ) | ಆಪ್ತ ಮಿತ್ರ | |
(ಸಿ) | ಕ್ವಾರನ್ಟೈನ್ ವಾಚ್ | |
(ಡಿ) | ಸುರಕ್ಷ |
CORRECT ANSWER
(ಡಿ) ಸುರಕ್ಷ
33. | 4 ರಿಂದ ನಿಖರವಾಗಿ ಭಾಗಿಸಬಹುದಾದ ಶ್ರೇಷ್ಠ ಮೂರು ಅಂಕಿಯ ಸಂಖ್ಯೆ ___________ | |
(ಎ) | 952 | |
(ಬಿ) | 996 | |
(ಸಿ) | 998 | |
(ಡಿ) | 1002 |
CORRECT ANSWER
(ಬಿ) 996
34. | ಡಾಕ್ಟರ್ : ರೋಗನಿರ್ಣಯ (ಡಯಾಗ್ನೋಸಿಸ್) :: ಜಡ್ಜ್ 😕 | |
(ಎ) | ಕೋರ್ಟ್ | |
(ಬಿ) | ಲಾಯರ್ | |
(ಸಿ) | ತೀರ್ಪು | |
(ಡಿ) | ನಿಯಮಗಳು |
CORRECT ANSWER
(ಸಿ) ತೀರ್ಪು
35. | ಒಂದು ರೈಲು 140 ಮೀ. ಉದ್ದವಾಗಿದ್ದು, 54 kmph ವೇಗದಲ್ಲಿರುವಾಗ, 30 ಸೆಕೆಂಡಿನಲ್ಲಿ ಸೇತುವೆಯನ್ನು ದಾಟುತ್ತದೆ. ಆ ಸೇತುವೆ ಉದ್ದ __________. | |
(ಎ) | 300 m | |
(ಬಿ) | 310 m | |
(ಸಿ) | 330 m | |
(ಡಿ) | 340 m |
CORRECT ANSWER
(ಬಿ) 310 m
36. | ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CoDS)______ . | |
(ಎ) | ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರಿಯಪ್ಪ | |
(ಬಿ) | ಜನರಲ್ ಬಿಪಿನ್ ರಾವತ್ | |
(ಸಿ) | ಜನರಲ್ ಮನೋಜ್ ಮುಕುಂದ್ ನರಾವನೆ | |
(ಡಿ) | ಜನರಲ್ ಜೆ.ಜೆ. ಸಿಂಗ್ |
CORRECT ANSWER
(ಬಿ) ಜನರಲ್ ಬಿಪಿನ್ ರಾವತ್
37. | ದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LOC)__________ ಅನ್ನು ಪ್ರತ್ಯೇಕಿಸುತ್ತದೆ. | |
(ಎ) | ಇಂಡಿಯಾ ಮತ್ತು ಪಾಕಿಸ್ತಾನ್ | |
(ಬಿ) | ಇಂಡಿಯಾ ಮತ್ತು ಆಫ್ಘಾನಿಸ್ತಾನ್ | |
(ಸಿ) | ಇಂಡಿಯಾ ಮತ್ತು ನೇಪಾಲ್ | |
(ಡಿ) | ಇಂಡಿಯಾ ಮತ್ತು ಚೀನಾ |
CORRECT ANSWER
(ಡಿ) ಇಂಡಿಯಾ ಮತ್ತು ಚೀನಾ
38. | ಇತ್ತೀಚಿನ ನವೀನ ಸ್ಪರ್ಧೆ, ‘‘ಡೇರ್ ಟು ಡ್ರೀಮ್’’ಅನ್ನು __________ ನಿಂದ ಆರಂಭಿಸಲಾಯಿತು. | |
(ಎ) | ಐಎಸ್‌ಆರ್‌ಒ | |
(ಬಿ) | ಎನ್ಎಎಸ್ಎ | |
(ಸಿ) | ಡಿಆರ್‌ಡಿಒ | |
(ಡಿ) | ಸ್ಪೇಸ್ಎಕ್ಸ್ |
CORRECT ANSWER
(ಸಿ) ಡಿಆರ್‌ಡಿಒ
39. | ಕೆಳಗಿನ ಲೈನ್ ಚಾರ್ಟ್ ಅನ್ನು ಪರಿಶೀಲಿಸಿ, ಉತ್ತರ ಕೊಡಿ. ಈ ಲೈನ್ ಗ್ರಾಫ್ ಕೆಲವು ಭಾರತದ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳ ಸಂಖ್ಯೆ ಹಾಗೂ ವರ್ಷಗಳನ್ನು ತೋರಿಸುತ್ತದೆ. | |
ಬ್ರಾಂಚ್‌ಗಳ ಸಂಖ್ಯೆಯ ಶೇಕಡಾವಾರು ಹೆಚ್ಚಳವನ್ನು ಹುಡುಕಿ. 1980-81 ರಿಂದ 2020-21 ರವರೆಗೆ. | ||
(ಎ) | 300% | |
(ಬಿ) | 500% | |
(ಸಿ) | 700% | |
(ಡಿ) | 900% |
CORRECT ANSWER
(ಸಿ) 700%
40. | ಕೊಟ್ಟಿರುವ ಅನುಪಾತದ ಸರಿಸಮವಾದ ಸಂಖ್ಯೆಯನ್ನು ಕಂಡು ಹಿಡಿಯಿರಿ. 2 : 6 6: ______ | |
(ಎ) | 15 | |
(ಬಿ) | 18 | |
(ಸಿ) | 12 | |
(ಡಿ) | 24 |
CORRECT ANSWER
(ಬಿ) 18
41. | ಒಬ್ಬ ವ್ಯಕ್ತಿ ತನ್ನ ಸ್ನೇಹಿತನಿಗೆ ಒಂದು ಉದ್ಯಾನವನದಲ್ಲಿರುವ ಮಹಿಳೆಯನ್ನು ತೋರಿಸಿ ಹೇಳುತ್ತಾನೆ. ಅವಳು ನನ್ನ ಅಜ್ಜಿಯ ಒಂದೇ ಸಂತಾನದ ಮಗಳು. ಆ ವ್ಯಕ್ತಿ ಈ ಮಹಿಳೆಗೆ ಹೇಗೆ ಸಂಬಂಧ? | |
(ಎ) | ಸೋದರ | |
(ಬಿ) | ಸೋದರ ಸಂಬಂಧಿ | |
(ಸಿ) | ಚಿಕ್ಕಪ್ಪ / ದೊಡ್ಡಪ್ಪ / ಸೋದರಮಾವ | |
(ಡಿ) | ಸಹ – ಸಹೋದರ |
CORRECT ANSWER
(ಎ) ಸೋದರ
42. | 5, 7, 11, ______ ? | |
(ಎ) | 15 | |
(ಬಿ) | 16 | |
(ಸಿ) | 17 | |
(ಡಿ) | 18 |
CORRECT ANSWER
(ಸಿ) 17
43. | ರಾಜು ತನ್ನ ಶರ್ಟ್ ಬಟನ್ ಅಳತೆ ಮಾಡುತ್ತಾನೆ. ಶರ್ಟ್ ಬಟನ್‌ನ ಸುತ್ತಳತೆ 31.4mm. ಆ ಬಟನ್‌ನ ತ್ರಿಜ್ಯ ಎಷ್ಟು? | |
(ಎ) | 3 mm | |
(ಬಿ) | 4 mm | |
(ಸಿ) | 5 mm | |
(ಡಿ) | 6 mm |
CORRECT ANSWER
(ಸಿ) 5 mm
44. | ಸರಾಸರಿ 17 ಮತ್ತು ಪ್ರಮಾಣಗಳ ಸಂಖ್ಯೆ 9.ಹಾಗಾದರೆ, ಪ್ರಮಾಣಗಳ ಮೊತ್ತ ಎಷ್ಟು ? | |
(ಎ) | 153 | |
(ಬಿ) | 163 | |
(ಸಿ) | 173 | |
(ಡಿ) | 183 |
CORRECT ANSWER
(ಎ) 153
45. | I, X, J, K, V, L, __________ | |
(ಎ) | V | |
(ಬಿ) | T | |
(ಸಿ) | W | |
(ಡಿ) | U |
CORRECT ANSWER
(ಡಿ) U
46. | A – B = B – Aಆದರೆ, ಕೆಳಗಿನ ಯಾವುದು ಸರಿ ? | |
(ಎ) | A = B | |
(ಬಿ) | A ≠ B | |
(ಸಿ) | A > B | |
(ಡಿ) | A < B |
CORRECT ANSWER
(ಎ) A = B
47. | 6, 9, 12, 15, 18 ರಿಂದ ಭಾಗಿಸಿದಾಗ, ಕನಿಷ್ಠ ಸಂಖ್ಯೆ ಪ್ರತಿ ಪ್ರಕರಣದಲ್ಲಿ, ಅದೇ ಉಳಿದ 2 ನ್ನು ಬಿಡುತ್ತದೆ. ಆ ಕನಿಷ್ಠ ಸಂಖ್ಯೆ __________. | |
(ಎ) | 176 | |
(ಬಿ) | 178 | |
(ಸಿ) | 180 | |
(ಡಿ) | 182 |
CORRECT ANSWER
(ಡಿ) 182
48. | EJOT :______ :: YDIN : VAFX | |
(ಎ) | BGLT | |
(ಬಿ) | DGLQ | |
(ಸಿ) | BGLQ | |
(ಡಿ) | DGLT |
CORRECT ANSWER
(ಸಿ) BGLQ
49. | ಒಂದು ಪುಸ್ತಕ ₹ 80 ಗೆ ಖರೀದಿ ಮಾಡಿ 30% ಲಾಭಕ್ಕೆ ಮಾರಾಟ ಮಾಡಿದರೆ, ಅದರ ಮಾರಾಟ ಬೆಲೆ ಏನು ? | |
(ಎ) | ₹ 104 | |
(ಬಿ) | ₹ 108 | |
(ಸಿ) | ₹ 112 | |
(ಡಿ) | ₹ 116 |
CORRECT ANSWER
(ಎ) ₹ 104
50. | ‘‘ಬ್ರೆಕ್ಸಿಟ್’’ ಈ ಪದದ ಅರ್ಥ ಏನು ? | |
(ಎ) | ಅಸ್ವಸ್ಥವಾದ ಕಂಪನಿಗಳಿಗೆ, ನಿರ್ಗಮಿಸುವ ಕಾರ್ಯ ವಿಧಾನಗಳನ್ನು ಸರಾಗಗೊಳಿಸುವುದು | |
(ಬಿ) | ಬ್ರಿಟನ್, ಯೂರೋಪಿಯನ್ ಯೂನಿಯನ್‌ನಿಂದ ನಿರ್ಗಮಿಸಿದ್ದು | |
(ಸಿ) | ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ, ನಾರ್ಥ್ ಕೊರಿಯ ಜೊತೆ ಶಾಂತಿ ಮಾತುಕತೆ ಯಿಂದ ನಿರ್ಗಮಿಸಿದ್ದು | |
(ಡಿ) | ಭಾರತದಲ್ಲಿ 5G ನೆಟ್‌ವರ್ಕ್ ಪರಿಚಯ |
CORRECT ANSWER
(ಬಿ) ಬ್ರಿಟನ್, ಯೂರೋಪಿಯನ್ ಯೂನಿಯನ್‌ನಿಂದ ನಿರ್ಗಮಿಸಿದ್ದು
51. | ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕೊನೊಮಿಕ್ ರಿಸರ್ಚ್ (NCAER) ನ ವರದಿಯ ಪ್ರಕಾರ, ಪ್ರಪಂಚದ ಅತಿದೊಡ್ಡ ಬಡತನ ವಿರೋಧಿ ಕಾರ್ಯಕ್ರಮ ಯಾವುದು? | |
(ಎ) | ನ್ಯಾಶನಲ್ ರೂರಲ್ ಎಂಪ್ಲಾಯ್‌ಮೆಂಟ್ ಪ್ರೋಗ್ರಾಂ (NREP) | |
(ಬಿ) | ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನಾ(SJSRY) | |
(ಸಿ) | ಪ್ರೈಮ್ ಮಿನಿಸ್ಟರ್ ರೋಜ್‌ಗಾರ್ ಯೋಜನಾ (PMRY) | |
(ಡಿ) | ಮಹಾತ್ಮಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಸ್ಕೀಮ್ (MNREGS) |
CORRECT ANSWER
(ಡಿ) ಮಹಾತ್ಮಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಸ್ಕೀಮ್ (MNREGS)
52. | ಇವುಗಳಲ್ಲಿ ಯಾವುದು ಪಂಚಶೀಲ್‌ನ ತತ್ವಗಳಲ್ಲಿ ಒಂದಲ್ಲ ? | |
(ಎ) | ಪರಸ್ಪರ ಆಕ್ರಮಣವಿಲ್ಲದಿರುವುದು | |
(ಬಿ) | ಅಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು | |
(ಸಿ) | ಪರಸ್ಪರ ಸಹಕಾರ ಮತ್ತು ಗೌರವ ಇಲ್ಲದಿರುವುದು | |
(ಡಿ) | ಶಾಂತಿಯುತ ಸಹಬಾಳ್ವೆ |
CORRECT ANSWER
(ಸಿ) ಪರಸ್ಪರ ಸಹಕಾರ ಮತ್ತು ಗೌರವ ಇಲ್ಲದಿರುವುದು
53. | ‘‘ಈ ಲೋಕದಲ್ಲಿ, ಜನಗಳ ಎಲ್ಲಾ ಅಗತ್ಯಗಳನ್ನು ಪೂರೈಸಬಹುದು, ಆದರೆ ಅವರ ದುರಾಸೆಯನಲ್ಲ.’’ ಇದು ಕೆಳಗಿನ ಯಾವ ವ್ಯಕ್ತಿತ್ವದ ಪ್ರಸಿದ್ದ ಉಲ್ಲೇಖ ? | |
(ಎ) | ಜವಾಹರಲಾಲ್ ನೆಹರು | |
(ಬಿ) | ಅಂಬೇಡ್ಕರ್ | |
(ಸಿ) | ಸುಭಾಷ್ ಚಂದ್ರ ಬೋಸ್ | |
(ಡಿ) | ಮಹಾತ್ಮ ಗಾಂಧಿ |
CORRECT ANSWER
(ಡಿ) ಮಹಾತ್ಮ ಗಾಂಧಿ
54. | ಈ ಕೆಳಗಿನ ಯಾವುದು ಅತ್ಯಂತ ಹಳೆಯ ಕನ್ನಡ ಪತ್ರಿಕೆ ? | |
(ಎ) | ಮಂಗಳೂರು ಸಮಾಚಾರ | |
(ಬಿ) | ಪ್ರಜಾವಾಣಿ | |
(ಸಿ) | ಕನ್ನಡ ಪ್ರಭ | |
(ಡಿ) | ಜನತಾವಾಣಿ |
CORRECT ANSWER
(ಎ) ಮಂಗಳೂರು ಸಮಾಚಾರ
55. | ದ ವರ್ಲ್ಡ್ ಎನ್ವಿರಾನ್‌ಮೆಂಟ್ ಡೇ _________ ನಂದು ಆಚರಿಸಲಾಗುತ್ತದೆ. | |
(ಎ) | ಮೇ 5 | |
(ಬಿ) | ಜೂನ್ 5 | |
(ಸಿ) | ಮೇ 15 | |
(ಡಿ) | ಜೂನ್ 15 |
CORRECT ANSWER
(ಬಿ) ಜೂನ್ 5
56. | ಯಾರನ್ನು ಫಾದರ್ ಆಫ್ ಎಕೊನೊಮಿಕ್ಸ್’’ ಎಂದು ಕರೆಯಲಾಗುತ್ತದೆ ? | |
(ಎ) | ಜೆ.ಎಮ್. ಕೇನ್ಸ್ | |
(ಬಿ) | ಆಡಂ ಸ್ಮಿತ್ | |
(ಸಿ) | ಅಬ್ರಾಹಂ ಮಾಸ್ಲೊ | |
(ಡಿ) | ಇವರುಗಳಲ್ಲಿ ಯಾರೂ ಅಲ್ಲ |
CORRECT ANSWER
(ಬಿ) ಆಡಂ ಸ್ಮಿತ್
57. | ಇಂಟರ್‌ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ (ICJ) ಎಲ್ಲಿದೆ ? | |
(ಎ) | ಹಾಗ್ | |
(ಬಿ) | ನ್ಯೂಯಾರ್ಕ್ ಸಿಟಿ | |
(ಸಿ) | ಜೆನೆವಾ | |
(ಡಿ) | ರೋಮ್ |
CORRECT ANSWER
(ಎ) ಹಾಗ್
58. | ಕರ್ನಾಟಕದ ಯಾವ ಉತ್ಪನ್ನ ಜಿಐ (ಜಿಯೋಗ್ರಾಫಿಕಲ್ ಇಂಡಿಕೇಶನ್) ಟ್ಯಾಗ್ ಸ್ವೀಕರಿಸಿಲ್ಲ? | |
(ಎ) | ಕೂರ್ಗ್ ಅಡಿಕೆ | |
(ಬಿ) | ನಂಜನಗೂಡು ಬಾಳೆ | |
(ಸಿ) | ಮೈಸೂರು ಸಿಲ್ಕ್ | |
(ಡಿ) | ಚೆನ್ನಪಟ್ಟಣ ಆಟಿಕೆ |
CORRECT ANSWER
(ಎ) ಕೂರ್ಗ್ ಅಡಿಕೆ
59. | ಈ ಕೆಳಗಿನ ಯಾರಿಗೆ ‘‘ಕರ್ನಾಟಕ ರತ್ನ’’ (KR), ಅತ್ಯುನ್ನತ ಕರ್ನಾಟಕ ನಾಗರಿಕ ಗೌರವ ದೊರಕಿದೆ ? | |
(ಎ) | ರಾಹುಲ್ ದ್ರಾವಿಡ್ | |
(ಬಿ) | ಡಾ. ರಾಜ್‌ಕುಮಾರ್ | |
(ಸಿ) | ಡಾ. ವಿಷ್ಣುವರ್ಧನ್ | |
(ಡಿ) | ವಿ.ಕೆ. ಗೋಕಾಕ್ |
CORRECT ANSWER
(ಬಿ) ಡಾ. ರಾಜ್‌ಕುಮಾರ್
60. | ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ _______ ನಲ್ಲಿದೆ. | |
(ಎ) | ದೆಹಲಿ | |
(ಬಿ) | ಚೆನ್ನೈ | |
(ಸಿ) | ಪುಣೆ | |
(ಡಿ) | ಬೆಂಗಳೂರು |
CORRECT ANSWER
(ಸಿ) ಪುಣೆ
61. | ಭಾರತದಲ್ಲಿ ಮೊದಲ ಕೋವಿಡ್-19 ಪ್ರಕರಣವನ್ನು _______ ರಾಜ್ಯದಲ್ಲಿ ದೃಢಪಡಿಸಲಾಯಿತು. | |
(ಎ) | ಕರ್ನಾಟಕ | |
(ಬಿ) | ಮಹಾರಾಷ್ಟ್ರ | |
(ಸಿ) | ದೆಹಲಿ | |
(ಡಿ) | ಕೇರಳ |
CORRECT ANSWER
(ಡಿ) ಕೇರಳ
62. | ಈ ಕೆಳಗಿನ ಯಾವುದು ಕಾಳಿದಾಸನಿಂದ ರಚಿಸಲ್ಪಟ್ಟಿಲ್ಲ ? | |
(ಎ) | ರಘುವಂಶ | |
(ಬಿ) | ರಾಮಾಯಣ ದರ್ಶನಂ | |
(ಸಿ) | ಕುಮಾರಸಂಭವ | |
(ಡಿ) | ಮೇಘಧೂತ |
CORRECT ANSWER
(ಬಿ) ರಾಮಾಯಣ ದರ್ಶನಂ
63. | ರಿಸರ್ವ್ ಬ್ಯಾಂಕ್ ಆಫ್ ಇಂಡಿಯದ ಪ್ರಧಾನ ಕಚೇರಿ _________ ನಲ್ಲಿದೆ. | |
(ಎ) | ಮುಂಬೈ | |
(ಬಿ) | ಬೆಂಗಳೂರು | |
(ಸಿ) | ಹೈದರಾಬಾದ್ | |
(ಡಿ) | ಚೆನ್ನೈ |
CORRECT ANSWER
(ಎ) ಮುಂಬೈ
64. | ಈ ಕೆಳಗಿನ ಯಾರು, ‘‘ಕನ್ನಡ ರೈತ ಗೀತೆ’’ಯನ್ನು ರಚಿಸಿದ್ದಾರೆ ? | |
(ಎ) | ಡಾ. ಶಿವರಾಮ ಕಾರಂತ್ | |
(ಬಿ) | ಮಾಸ್ತಿ ವೆಂಕಟೇಶ ಐಯ್ಯಂಗಾರ್ | |
(ಸಿ) | ಕುವೆಂಪು | |
(ಡಿ) | ಚಂದ್ರಶೇಖರ ಕಂಬಾರ |
CORRECT ANSWER
(ಸಿ) ಕುವೆಂಪು
65. | ವಾತಾವರಣದಲ್ಲಿ, ಅತ್ಯಂತ ಹೇರಳವಾಗಿ ಪ್ರಸ್ತುತವಾಗಿರುವ ಅನಿಲ ___________. | |
(ಎ) | ಆಮ್ಲಜನಕ | |
(ಬಿ) | ಸಾರಜನಕ | |
(ಸಿ) | ಇಂಗಾಲದ ಡೈ ಆಕ್ಸೈಡ್ | |
(ಡಿ) | ಜಲಜನಕ |
CORRECT ANSWER
(ಬಿ) ಸಾರಜನಕ
66. | ಕೆಳಗಿನ ಯಾವ ಗವರ್ನರ್ ಜನರಲ್ ಜಮೀನ್ದಾರಿ ಸಿಸ್ಟಮ್ ಅನ್ನು ಭಾರತದಲ್ಲಿ ಜಾರಿಗೆ ತಂದರು ? | |
(ಎ) | ಲಾರ್ಡ್ ಡಾಲ್‌ಹೌಸಿ | |
(ಬಿ) | ಲಾರ್ಡ್ ಕ್ಯಾನಿಂಗ್ | |
(ಸಿ) | ಲಾರ್ಡ್ ವಾರನ್ ಹೇಸ್ಟಿಂಗ್ಸ್ | |
(ಡಿ) | ಲಾರ್ಡ್ ಕಾರ್ನ್‌ವಾಲಿಸ್ |
CORRECT ANSWER
(ಡಿ) ಲಾರ್ಡ್ ಕಾರ್ನ್‌ವಾಲಿಸ್
67. | ಮಿಲಿಟರಿ ಸುಧಾರಣೆಗಳಾದ, ‘ಹುಲಿಯ’ ಮತ್ತು ‘ದಾಘ್’ಅನ್ನು ___________ ನಿಂದ ಪರಿಚಯಿಸಲಾಗಿದೆ. | |
(ಎ) | ಕುತ್ಬುದ್ದೀನ್ ಐಬಕ್ | |
(ಬಿ) | ಅಲ್ಲಾವುದ್ದೀನ್ ಖಿಲ್ಜಿ | |
(ಸಿ) | ಮೊಹಮದ್ ಬಿನ್ ತುಘಲಕ್ | |
(ಡಿ) | ಇಲ್ತುತ್‌ಮಿಶ್ |
CORRECT ANSWER
(ಬಿ) ಅಲ್ಲಾವುದ್ದೀನ್ ಖಿಲ್ಜಿ
68. | ಏಳು ವರ್ಷಗಳ ಯುದ್ಧ (1756 – 63 C.E.)___________ ನಡುವೆ ನಡೆಯಿತು. | |
(ಎ) | ಫ್ರಾನ್ಸ್ ಮತ್ತು ಯುಎಸ್ಎ | |
(ಬಿ) | ಇಂಗ್ಲೆಂಡ್ ಮತ್ತು ಯುಎಸ್ಎ | |
(ಸಿ) | ಫ್ರಾನ್ಸ್ ಮತ್ತು ಇಂಗ್ಲೆಂಡ್ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಸಿ) ಫ್ರಾನ್ಸ್ ಮತ್ತು ಇಂಗ್ಲೆಂಡ್
69. | ‘‘ಬ್ಲಾಕ್ ರೂಮ್ ಟ್ರೇಜಡಿ’’ ಎಂದರೇನು ? | |
(ಎ) | ಬಹಳ ಇಂಗ್ಲಿಷರನ್ನು ಜೈಲಿನಲ್ಲಿಟ್ಟು, ಕೋಟೆಯ ಒಂದು ಚಿಕ್ಕ ಕೊಠಡಿಯಲ್ಲಿ ಸೀಮಿತಗೊಳಿಸಲಾಗಿತ್ತು, ಅದರಲ್ಲಿ ಬಹಳ ಜನರು ಪ್ರಾಣ ಬಿಟ್ಟರು. | |
(ಬಿ) | ಪ್ರಕಾಶವಿಲ್ಲದ ಒಂದು ಚಿಕ್ಕ ಕೊಠಡಿಯಲ್ಲಿ, ವಿಟಮಿನ್‌ಗಳ ಕೊರತೆ ಉಂಟಾಗುವುದು. | |
(ಸಿ) | ಇಂಗ್ಲಿಷರು, ಅವರ ಫಿರಂಗಿಗಳು, ತುಪಾಕಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಈ ಕೊಠಡಿಯಲ್ಲಿಟ್ಟಿದ್ದರು ಮತ್ತು ಇವೆಲ್ಲವೂ ಇದ್ದಕ್ಕಿದಂತೆ ಸ್ಫೋಟಗೊಂಡು ದುರಂತಕ್ಕೆ ಕಾರಣವಾಯಿತು. | |
(ಡಿ) | ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಕಪ್ಪು ಬಣ್ಣದಲ್ಲಿ ಸಂಪೂರ್ಣವಾಗಿ ಚಿತ್ರಿಸಿದ ಕೋಣೆ. |
CORRECT ANSWER
(ಎ) ಬಹಳ ಇಂಗ್ಲಿಷರನ್ನು ಜೈಲಿನಲ್ಲಿಟ್ಟು, ಕೋಟೆಯ ಒಂದು ಚಿಕ್ಕ ಕೊಠಡಿಯಲ್ಲಿ ಸೀಮಿತಗೊಳಿಸಲಾಗಿತ್ತು, ಅದರಲ್ಲಿ ಬಹಳ ಜನರು ಪ್ರಾಣ ಬಿಟ್ಟರು.
70. | ಮಹಾತ್ಮಗಾಂಧಿಯವರು ಯಾವ ವರ್ಷದಲ್ಲಿ ನಾನ್-ಕೊ ಆಪರೇಶನ್ ಮೂವ್‌ಮೆಂಟ್ ಅನ್ನು ಪ್ರಾರಂಭಿಸಿದರು ? | |
(ಎ) | 1919 | |
(ಬಿ) | 1920 | |
(ಸಿ) | 1930 | |
(ಡಿ) | 1942 |
CORRECT ANSWER
(ಬಿ) 1920
71. | ಯಾರನ್ನು ‘‘ಐರನ್ ಮ್ಯಾನ್ ಆಫ್ ಇಂಡಿಯ’’ ಎಂದು ಕರೆಯಲಾಗುತ್ತದೆ? | |
(ಎ) | ಸರ್ದಾರ್ ವಲ್ಲಭ್‌ಭಾಯ್ ಪಟೇಲ್ | |
(ಬಿ) | ನೇತಾಜಿ ಸುಭಾಷ್ ಚಂದ್ರ ಬೋಸ್ | |
(ಸಿ) | ಮಹಾತ್ಮ ಗಾಂಧಿ | |
(ಡಿ) | ರಬೀಂದ್ರನಾಥ ಟ್ಯಾಗೋರ್ |
CORRECT ANSWER
(ಎ) ಸರ್ದಾರ್ ವಲ್ಲಭ್‌ಭಾಯ್ ಪಟೇಲ್
72. | ವಿಜಯನಗರ ರಾಜ್ಯದ ಬಗ್ಗೆ, ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿ. | |
(ಎ) | ಅವರು ಎಲ್ಲಾ ಧರ್ಮಗಳ ಬಗೆ ಸಹಿಷ್ಣುತೆಯನ್ನು ತೋರಿಸುತ್ತಿದ್ದರು. | |
(ಬಿ) | ಅವರು, ಅವರ ರಾಜಧಾನಿಯಲ್ಲಿ ಮಸೀದಿಯನ್ನು ಕಟ್ಟಿದರು. | |
(ಸಿ) | ಜೈನರು ಮತ್ತು ವೈಷ್ಣವರ ನಡುವಿನ ಸಮಸ್ಯೆಗಳನ್ನು ಬುಕ್ಕರಾಯರವರು ಪರಿಹರಿಸಿದರು. | |
(ಡಿ) | ವಿಜಯನಗರದ ಕಲೆ ಮತ್ತು ಶಿಲ್ಪಕಲೆ ನಾಗರ ಶೈಲಿಯ ವಾಸ್ತುಶಿಲ್ಪದ ವಿಕಸನೀಯ ರೂಪ ಎಂದು ಇತಿಹಾಸಕಾರ ಪರ್ಸಿ ಬ್ರೌನ್ ಹೇಳಿದ್ದಾರೆ. |
CORRECT ANSWER
(ಡಿ) ವಿಜಯನಗರದ ಕಲೆ ಮತ್ತು ಶಿಲ್ಪಕಲೆ ನಾಗರ ಶೈಲಿಯ ವಾಸ್ತುಶಿಲ್ಪದ ವಿಕಸನೀಯ ರೂಪ ಎಂದು ಇತಿಹಾಸಕಾರ ಪರ್ಸಿ ಬ್ರೌನ್ ಹೇಳಿದ್ದಾರೆ.
73. | ಕೆಳಗಿನ ಹೇಳಿಕೆಗಳಲ್ಲಿ, ಯಾವುದು ಭಕ್ತಿ ಮೂವ್‌ಮೆಂಟ್‌ನ ಫಲಿತಾಂಶವಲ್ಲ ? | |
(ಎ) | ಭಕ್ತಿ ಸಂತರು ಹಿಂದೂ ಮತ್ತು ಮುಸಲ್ಮಾನರ ನಡುವೆ ಸಾಮರಸ್ಯವನ್ನು ಉಂಟುಮಾಡಿದರು. | |
(ಬಿ) | ಭಕ್ತಿ ಸಂತರು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ಬರೆದರು. | |
(ಸಿ) | ಭಕ್ತಿ ಸಂತರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದರು. | |
(ಡಿ) | ಭಕ್ತಿ ಸಂತರು ಸಾಂಪ್ರದಾಯಿಕರಾಗಿದ್ದರು ಮತ್ತು ಜಾತಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರು ಮತ್ತು ಉತ್ತೇಜಿಸಿದರು. |
CORRECT ANSWER
(ಡಿ) ಭಕ್ತಿ ಸಂತರು ಸಾಂಪ್ರದಾಯಿಕರಾಗಿದ್ದರು ಮತ್ತು ಜಾತಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರು ಮತ್ತು ಉತ್ತೇಜಿಸಿದರು.
74. | ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ. | |
(ಎ) | ಆಗುಂಬೆ ಘಾಟ್ – ಶಿವಮೊಗ್ಗ ಮತ್ತು ಉಡುಪಿಯನ್ನು ಸೇರಿಸುತ್ತದೆ. | |
(ಬಿ) | ಶಿರಾಡಿ ಘಾಟ್ – ಶಿವಮೊಗ್ಗ ಮತ್ತು ಕುಂದಾಪುರವನ್ನು ಸೇರಿಸುತ್ತದೆ. | |
(ಸಿ) | ಹುಲಿಕಲ್ ಘಾಟ್ – ಹಾಸನ, ಸಕಲೇಶಪುರ ಮತ್ತು ಮಂಗಳೂರನ್ನು ಸೇರಿಸುತ್ತದೆ. | |
(ಡಿ) | ಚಾರ್ಮಾಡಿ ಘಾಟ್ – ಮಂಗಳೂರು ಮತ್ತು ಉಡುಪಿಯನ್ನು ಸೇರಿಸುತ್ತದೆ. |
CORRECT ANSWER
(ಎ) ಆಗುಂಬೆ ಘಾಟ್ – ಶಿವಮೊಗ್ಗ ಮತ್ತು ಉಡುಪಿಯನ್ನು ಸೇರಿಸುತ್ತದೆ.
75. | ಯಾವ ನದಿಯನ್ನು ‘‘ಕರ್ನಾಟಕದ ನಯಾಗರಾ’’ ಎಂದು ಕರೆಯಲಾಗುತ್ತದೆ ? | |
(ಎ) | ಜೋಗ್ ಫಾಲ್ಸ್ | |
(ಬಿ) | ಗೋಕಾಕ್ ಫಾಲ್ಸ್ | |
(ಸಿ) | ಮಗೋಡ್ ಫಾಲ್ಸ್ | |
(ಡಿ) | ಅಬ್ಬೆ ಫಾಲ್ಸ್ |
CORRECT ANSWER
(ಬಿ) ಗೋಕಾಕ್ ಫಾಲ್ಸ್
76. | ಶ್ರೀರಂಗಪಟ್ಟಣ ಸಂಧಿ / ಒಪ್ಪಂದವನ್ನು ಯಾವ ಯುದ್ಧದ ನಂತರ ಮಾಡಲಾಯಿತು ? | |
(ಎ) | ಮೊದಲ ಆಂಗ್ಲೋ ಮೈಸೂರು ಯುದ್ಧ | |
(ಬಿ) | ಮೊದಲ ಕರ್ನಾಟಕ ಯುದ್ಧ | |
(ಸಿ) | ಮೂರನೆಯ ಆಂಗ್ಲೋ ಮೈಸೂರು ಯುದ್ಧ | |
(ಡಿ) | ಎರಡನೆಯ ಕರ್ನಾಟಕ ಯುದ್ಧ |
CORRECT ANSWER
(ಸಿ) ಮೂರನೆಯ ಆಂಗ್ಲೋ ಮೈಸೂರು ಯುದ್ಧ
77. | ಇವುಗಳಲ್ಲಿ ಯಾವುದು, ಪ್ರವಾಹ ಸಂಭವಿಸಲು ಮನುಷ್ಯ ಮಾಡಿದ ಕಾರಣವಲ್ಲ ? | |
(ಎ) | ಅರಣ್ಯನಾಶ | |
(ಬಿ) | ನದಿಪಾತ್ರದ ಅತಿಕ್ರಮಣ | |
(ಸಿ) | ಒಳಚರಂಡಿ ವ್ಯವಸ್ಥೆಗಳ ಅಗಲೀಕರಣ | |
(ಡಿ) | ಅಗ್ರಾಹ್ಯ ಮೇಲ್ಮೈ |
CORRECT ANSWER
(ಸಿ) ಒಳಚರಂಡಿ ವ್ಯವಸ್ಥೆಗಳ ಅಗಲೀಕರಣ
78. | ಒಂದು ದೇಶದಿಂದ ಅಥವಾ ಒಬ್ಬ ವ್ಯಕ್ತಿಯಿಂದ ಸಂಪನ್ಮೂಲಗಳ ಬಳಕೆ ಅಥವಾ ತ್ಯಾಜ್ಯ ಉತ್ಪಾದನೆಯ ವ್ಯಾಪ್ತಿಯ ಬಗ್ಗೆ ಕಲ್ಪನೆಯನ್ನು ಈ ಕೆಳಗಿನ ಯಾವುದು ಕೊಡುತ್ತದೆ ? | |
(ಎ) | ಪರಿಸರ ಸಾಮರ್ಥ್ಯ | |
(ಬಿ) | ಜೀವಗೋಳ (ಬಯೊಸ್ಫಿಯರ್) | |
(ಸಿ) | ಜೀವವೈವಿಧ್ಯ | |
(ಡಿ) | ಪರಿಸರ ಹೆಜ್ಜೆಗುರುತು |
CORRECT ANSWER
(ಡಿ) ಪರಿಸರ ಹೆಜ್ಜೆಗುರುತು
79. | ಕೆಳಗೆ ಅಟ್ಮಾಸ್ಪಿಯರ್‌ನ ಪದರಗಳನ್ನು ಕೊಟ್ಟಿದೆ. ಇದರಲ್ಲಿ, ಭೂಮಿಯಿಂದ ಆರಂಭಿಸಿದರೆ, ಸರಿಯಾದ ಕ್ರಮ ಯಾವುದು ? | |
(ಎ) | ಟ್ರೋಪೊಸ್ಪಿಯರ್-ಸ್ಟ್ರೆಟೊಸ್ಪಿಯರ್ – ಮೆಸೊಸ್ಪಿಯರ್- ಥರ್ಮೋಸ್ಪಿಯರ್ -ಎಕ್ಸೋಸ್ಪಿಯರ್ | |
(ಬಿ) | ಟ್ರೋಪೊಸ್ಪಿಯರ್-ಥರ್ಮೋಸ್ಟಿಯರ್ – ಸ್ಟ್ರೆಟೊಸ್ಪಿಯರ್- ಮೆಸೊಸ್ಪಿಯರ್ – ಎಕ್ಸೋಸ್ಪಿಯರ್ | |
(ಸಿ) | ಟ್ರೋಪೊಸ್ಪಿಯರ್-ಸ್ಟ್ರೆಟೊಸ್ಪಿಯರ್ ಥರ್ಮೋಸ್ಪಿಯರ್- ಎಕ್ಸೋಸ್ಪಿಯರ್ – ಮೆಸೊಸ್ಪಿಯರ್ | |
(ಡಿ) | ಸ್ಟ್ರೆಟೋಸ್ಪಿಯರ್-ಟ್ರೋಪೊಸ್ಪಿಯರ್ – ಮೆಸೊಪ್ಪಿಯರ್- ಥರ್ಮೋಸ್ಪಿಯರ್ – ಎಕ್ಸೋಸ್ಪಿಯರ್ |
CORRECT ANSWER
(ಎ) ಟ್ರೋಪೊಸ್ಪಿಯರ್-ಸ್ಟ್ರೆಟೊಸ್ಪಿಯರ್ – ಮೆಸೊಸ್ಪಿಯರ್- ಥರ್ಮೋಸ್ಪಿಯರ್ -ಎಕ್ಸೋಸ್ಪಿಯರ್
80. | ಕರ್ನಾಟಕದ ಅತ್ಯಂತ ಉದ್ದವಾದ ನ್ಯಾಶನಲ್ ಹೈವೇ______ . | |
(ಎ) | NH 4 | |
(ಬಿ) | NH 7 | |
(ಸಿ) | NH 13 | |
(ಡಿ) | NH 20 |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
81. | ಗ್ರೀನ್ ರೆವಲ್ಯೂಶನ್ ಆಹಾರ ಧಾನ್ಯಗಳನ್ನು ಸೂಚಿಸಿದರೆ, ಬ್ಲಾಕ್ ರೆವಲ್ಯೂಶನ್ ಯಾವುದನ್ನು ಸೂಚಿಸುತ್ತದೆ ? | |
(ಎ) | ಸೆಣಬು (ಜೂಟ್) | |
(ಬಿ) | ಪೆಟ್ರೋಲಿಯಂ ಉತ್ಪನ್ನಗಳು | |
(ಸಿ) | ರಸಗೊಬ್ಬರಗಳು | |
(ಡಿ) | ವಜ್ರ |
CORRECT ANSWER
(ಬಿ) ಪೆಟ್ರೋಲಿಯಂ ಉತ್ಪನ್ನಗಳು
82. | ಇವುಗಳಲ್ಲಿ ಯಾವುದರ ರೂಪಾಂತರ ಸಾಧ್ಯ ? | |
(ಎ) | ಕಲ್ಲಿದ್ದಲಿಂದ ಅಮೃತಶಿಲೆ | |
(ಬಿ) | ಲೈಮ್ ಸ್ಟೋನ್‌ನಿಂದ ಗ್ರಾಫೈಟ್ | |
(ಸಿ) | ಮರಳುಗಲ್ಲಿನಿಂದ ನೈಸ್ | |
(ಡಿ) | ಗ್ರಾಫೈಟ್‌ನಿಂದ ವಜ್ರ |
CORRECT ANSWER
(ಡಿ) ಗ್ರಾಫೈಟ್‌ನಿಂದ ವಜ್ರ
83. | ಪಾಕ್ ಸ್ಟ್ರೇಯಿಟ್, ಯಾವ ಎರಡು ದೇಶಗಳನ್ನು ಪ್ರತ್ಯೇಕಿಸುತ್ತದೆ? | |
(ಎ) | ಭಾರತ ಮತ್ತು ಬಾಂಗ್ಲಾದೇಶ | |
(ಬಿ) | ಭಾರತ ಮತ್ತು ಶ್ರೀಲಂಕಾ | |
(ಸಿ) | ಭಾರತ ಮತ್ತು ಚೀನಾ | |
(ಡಿ) | ಭಾರತ ಮತ್ತು ಮ್ಯಾನ್‌ಮಾರ್ |
CORRECT ANSWER
(ಬಿ) ಭಾರತ ಮತ್ತು ಶ್ರೀಲಂಕಾ
84. | ಕೊಟ್ಟಿರುವ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ ? | |
(ಎ) | ಬಂಧಿಸಿದ ವ್ಯಕ್ತಿಯನ್ನು 24 ಗಂಟೆಗಳಿಗಿಂತ ಜಾಸ್ತಿಯಾಗಿ (ಪ್ರಯಾಣ ಸಮಯವನ್ನು ಸೇರಿಸದೇ) ಬಂಧನದಲ್ಲಿ ಇಡಲಾಗುವುದಿಲ್ಲ. | |
(ಬಿ) | ಅರಿವಿನ ಅಪರಾಧ ಮಾಡುವ ವ್ಯಕ್ತಿಯನ್ನು ಬಂಧನ ವಾರಂಟ್ ಇಲ್ಲದೆ ಬಂಧಿಸಬಹುದು. | |
(ಸಿ) | ಅಸಾಧಾರಣ ಸಂದರ್ಭಗಳು ಇಲ್ಲದೆ ಇರುವಾಗ, ಯಾವ ಮಹಿಳೆಯನ್ನೂ ಸೂರ್ಯಾಸ್ತಮ ನಂತರ ಹಾಗೂ ಸೂರ್ಯೋದಯದ ಮೊದಲು ಬಂಧಿಸಲಾಗುವುದಿಲ್ಲ. | |
(ಡಿ) | ಯಾವ ಸಂದರ್ಭಗಳಲ್ಲಿಯೂ, ಸಾರ್ವಜನಿಕ ಜನರು ಯಾರನ್ನೂ ಯಾವ ಸಂದರ್ಭದಲ್ಲಿಯೂ ಬಂಧಿಸಲಾಗುವುದಿಲ್ಲ, ಅರಿವುಳ್ಳ ಮತ್ತು ಜಾಮೀನು ಪಡೆಯಲಾಗದ ಅಪರಾಧವಿದ್ದರೂ. |
CORRECT ANSWER
(ಡಿ) ಯಾವ ಸಂದರ್ಭಗಳಲ್ಲಿಯೂ, ಸಾರ್ವಜನಿಕ ಜನರು ಯಾರನ್ನೂ ಯಾವ ಸಂದರ್ಭದಲ್ಲಿಯೂ ಬಂಧಿಸಲಾಗುವುದಿಲ್ಲ, ಅರಿವುಳ್ಳ ಮತ್ತು ಜಾಮೀನು ಪಡೆಯಲಾಗದ ಅಪರಾಧವಿದ್ದರೂ.
85. | ಚಂಡಮಾರುತವನ್ನು ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಿಕೆಯಾಗಿಲ್ಲ ? | |
(ಎ) | ಯುಎಸ್ಎ ಮತ್ತು ಮೆಕ್ಸಿಕೊ – ಹರ್ರಿಕೇನ್ | |
(ಬಿ) | ಚೀನಾ- ಟೈಫೂನ್ | |
(ಸಿ) | ಆಸ್ಟ್ರೇಲಿಯಾ – ವರ್ಲ್‌ಪೂಲ್ | |
(ಡಿ) | ಭಾರತ – ಸೈಕ್ಲೋನ್ |
CORRECT ANSWER
(ಸಿ) ಆಸ್ಟ್ರೇಲಿಯಾ – ವರ್ಲ್‌ಪೂಲ್
86. | ಹಂಪಿ ಯಾವ ನದಿಯ ದಂಡೆಯಲ್ಲಿದೆ ? | |
(ಎ) | ತುಂಗಭದ್ರಾ | |
(ಬಿ) | ಮಲಪ್ರಭಾ | |
(ಸಿ) | ಘಟಪ್ರಭಾ | |
(ಡಿ) | ಭೀಮ |
CORRECT ANSWER
(ಎ) ತುಂಗಭದ್ರಾ
87. | ಯಾವ ನದಿಯನ್ನು ‘‘ದಕ್ಷಿಣ ಗಂಗಾ’’ ಎನ್ನುತ್ತಾರೆ ? | |
(ಎ) | ಗೋದಾವರಿ | |
(ಬಿ) | ಕೃಷ್ಣಾ | |
(ಸಿ) | ಕಾವೇರಿ | |
(ಡಿ) | ತುಂಗಭದ್ರಾ |
CORRECT ANSWER
(ಎ) ಗೋದಾವರಿ & (ಸಿ) ಕಾವೇರಿ
88. | ಭಾರತ ಸಂವಿಧಾನದ ಯಾವ ಆರ್ಟಿಕಲ್‌ನಲ್ಲಿ, ಸಿಟಿಜನ್‌ಶಿಪ್ ಬಗ್ಗೆ ಇದೆ ? | |
(ಎ) | ಆರ್ಟಿಕಲ್ 5 | |
(ಬಿ) | ಆರ್ಟಿಕಲ್ 15 | |
(ಸಿ) | ಆರ್ಟಿಕಲ್ 25 | |
(ಡಿ) | ಆರ್ಟಿಕಲ್ 35 |
CORRECT ANSWER
(ಎ) ಆರ್ಟಿಕಲ್ 5
89. | ಇತ್ತೀಚೆಗೆ, ಭಾರತ ಸಂವಿಧಾನದಿಂದ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟ ಆರ್ಟಿಕಲ್ ಅನ್ನು ತೆಗೆದಿದೆ. ಈ ಆರ್ಟಿಕಲ್ ______ ಇದೆ. | |
(ಎ) | ಆರ್ಟಿಕಲ್ 371 | |
(ಬಿ) | ಆರ್ಟಿಕಲ್ 370 | |
(ಸಿ) | ಆರ್ಟಿಕಲ್ 372 | |
(ಡಿ) | ಆರ್ಟಿಕಲ್ 373 |
CORRECT ANSWER
(ಬಿ) ಆರ್ಟಿಕಲ್ 370
90. | ನಮ್ಮ ರಾಜ್ಯ/ದೇಶವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಎಲ್ಲಾ ______ ವಯಸ್ಸಿನ ಮಕ್ಕಳಿಗೆ ಒದಗಿಸುತ್ತದೆ. | |
(ಎ) | ಐದರಿಂದ ಹದಿನಾಲ್ಕು ವರ್ಷ | |
(ಬಿ) | ಐದರಿಂದ ಹದಿನೈದು ವರ್ಷ | |
(ಸಿ) | ಆರರಿಂದ ಹದಿನಾಲ್ಕು ವರ್ಷ | |
(ಡಿ) | ಐದರಿಂದ ಹದಿನಾರು ವರ್ಷ |
CORRECT ANSWER
(ಸಿ) ಆರರಿಂದ ಹದಿನಾಲ್ಕು ವರ್ಷ
91. | ಕೆಳಗಿನ ಯಾವುದು ಸಂವಿಧಾನದಲ್ಲಿ ಉಲ್ಲೇಖಿಸಿದ ಮೂಲಭೂತ ಕರ್ತವ್ಯಗಳಲ್ಲಿ ಒಂದಲ್ಲ ? | |
(ಎ) | ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತಪ್ಪಿಸುವುದು. | |
(ಬಿ) | ಚುನಾವಣೆಯಲ್ಲಿ ಮತ ಚಲಾಯಿಸುವುದು. | |
(ಸಿ) | ನಮ್ಮ ಸಂಯೋಜಿತ ಸಂಸ್ಕೃತಿಯ ಸಂಪನ್ನ ಪರಂಪರೆಯನ್ನು ಮೌಲೀಕರಿಸಿ/ಗೌರವಿಸುವುದು ಮತ್ತು ಸಂರಕ್ಷಿಸುವುದು. | |
(ಡಿ) | ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು. |
CORRECT ANSWER
(ಬಿ) ಚುನಾವಣೆಯಲ್ಲಿ ಮತ ಚಲಾಯಿಸುವುದು.
92. | ಭಾರತ ಸಂವಿಧಾನದ ಯಾವ ಶೆಡ್ಯೂಲ್‌ನಲ್ಲಿಆಂಟಿ ಡಿಫೆಕ್ಷನ್ ಕಾನೂನು ಇದೆ ? | |
(ಎ) | ಶೆಡ್ಯೂಲ್ 7 | |
(ಬಿ) | ಶೆಡ್ಯೂಲ್ 8 | |
(ಸಿ) | ಶೆಡ್ಯೂಲ್ | |
(ಡಿ) | ಶೆಡ್ಯೂಲ್ 10 |
CORRECT ANSWER
(ಡಿ) ಶೆಡ್ಯೂಲ್ 10
93. | ಐತಿಹಾಸಿಕ 73 ಮತ್ತು 74 ನೆಯ ಅಮೆಂಡ್‌ಮೆಂಟ್ ಆಕ್ಟ್ ______ ಗೆ ಸಂಬಂಧಿಸಿದೆ. | |
(ಎ) | ಸ್ಥಳೀಯ ಸ್ವಸರ್ಕಾರ | |
(ಬಿ) | ವಿರೋಧಿ ಪಕ್ಷಾಂತರ | |
(ಸಿ) | ತುರ್ತು ನಿಬಂಧನೆಗಳು | |
(ಡಿ) | ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸದೀಯ ಅಧಿಕಾರಗಳು |
CORRECT ANSWER
(ಎ) ಸ್ಥಳೀಯ ಸ್ವಸರ್ಕಾರ
94. | ಅಗತ್ಯವಾದ ಕನಿಷ್ಠ ವಯಸ್ಸನ್ನು ಸಂಬಂಧಿಸಿದರೆ ಇವುಗಳಲ್ಲಿ ಯಾವುದು ಸರಿ ಇಲ್ಲ ? | |
(ಎ) | ಲೋಕಸಭೆಯ ಸದಸ್ಯ – 25 ವರ್ಷ | |
(ಬಿ) | ರಾಜ್ಯಸಭೆಯ ಸದಸ್ಯ – 30 ವರ್ಷ | |
(ಸಿ) | ಭಾರತದ ಉಪರಾಷ್ಟ್ರಪತಿ – 30 ವರ್ಷ | |
(ಡಿ) | ಭಾರತದ ರಾಷ್ಟ್ರಪತಿ – 35 ವರ್ಷ |
CORRECT ANSWER
(ಸಿ) ಭಾರತದ ಉಪರಾಷ್ಟ್ರಪತಿ – 30 ವರ್ಷ
95. | ಕಾರ್ಯನಿರ್ವಾಹಕ ಅಥವಾ ಇತರ ಯಾವುದೇ ಅಧೀನ ಸಂಸ್ಥೆಗಳು ಕೆಲವು ಕರ್ತವ್ಯಗಳನ್ನು ಅಥವಾ ಕಾರ್ಯಗಳನ್ನು ನಿರ್ವಹಿಸಲು ವಿಫಲವಾದಾಗ, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಈ ಕಾರ್ಯಗಳನ್ನು ನಿರ್ವಹಿಸಲು ಆದೇಶಿಸುತ್ತದೆ. ಈ ಆದೇಶವನ್ನು __________ ಎನ್ನಲಾಗುತ್ತದೆ. | |
(ಎ) | ಮ್ಯಾಂಡಮಸ್ | |
(ಬಿ) | ಸರ್ಶಿಯೋರರಿ | |
(ಸಿ) | ಪ್ರೊಹಿಬಿಷನ್ | |
(ಡಿ) | ಹೇಬಿಯಸ್ ಕಾರ್ಪಸ್ |
CORRECT ANSWER
(ಎ) ಮ್ಯಾಂಡಮಸ್
96. | ಪ್ರಸಿದ್ದ ಬೋಧನೆ (ಡಾಕ್ಟ್ರಿನ್) ‘‘ಬೇಸಿಕ್ ಸ್ಟ್ರಕ್ಚರ್ ಆಫ್ ಕಾನ್ಸ್‌ಟಿಟ್ಯೂಶನ್’’ ಅನ್ನು ಭಾರತದ ಸುಪ್ರೀಂ ಕೋರ್ಟ್ __________ ಕೇಸಿನಲ್ಲಿ ವಿಸ್ತರಿಸಲಾಗಿತ್ತು. | |
(ಎ) | ಪ್ರಕಾಶ್ ಸಿಂಗ್ | |
(ಬಿ) | ಕೇಶವಾನಂದ ಭಾರತಿ | |
(ಸಿ) | ಎಸ್.ಆರ್. ಬೊಮ್ಮಾಯಿ | |
(ಡಿ) | ಮೇನಕಾಗಾಂಧಿ |
CORRECT ANSWER
(ಬಿ) ಕೇಶವಾನಂದ ಭಾರತಿ
97. | ಭಾರತದ ಹೊರಗೆ ವಿತರಿಸಲಾದ, ಆದರೆ ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಿದ ಬಾಂಡ್‌ಗಳನ್ನು __________ ಎಂದು ಕರೆಯಲಾಗುತ್ತದೆ. | |
(ಎ) | ಡಿಮ್ ಸಮ್ ಬಾಂಡ್ಸ್ | |
(ಬಿ) | ಶಾಂಘಾಯ್ ಬಾಂಡ್ಸ್ | |
(ಸಿ) | ಮಸಲ ಬಾಂಡ್ಸ್ | |
(ಡಿ) | ಸೇಫ್ರನ್ ಬಾಂಡ್ಸ್ |
CORRECT ANSWER
(ಸಿ) ಮಸಲ ಬಾಂಡ್ಸ್
98. | ಭಾರತ ಸಂವಿಧಾನದ ಯಾವ ಆರ್ಟಿಕಲ್, ಅಸ್ಪೃಶ್ಯತೆಯ ನಿರ್ಮೂಲನೆಗೆ ಸಂಬಂಧಿಸಿದೆ ? | |
(ಎ) | ಆರ್ಟಿಕಲ್ 14 | |
(ಬಿ) | ಆರ್ಟಿಕಲ್ 15 | |
(ಸಿ) | ಆರ್ಟಿಕಲ್ 17 | |
(ಡಿ) | ಆರ್ಟಿಕಲ್ 18 |
CORRECT ANSWER
(ಸಿ) ಆರ್ಟಿಕಲ್ 17
99. | ಸರ್ಕಾರಿಯಾ ಕಮಿಷನ್ __________ ಗೆ ಸಂಬಂಧಿಸಿದೆ. | |
(ಎ) | ಕೇಂದ್ರ – ರಾಜ್ಯಗಳ ಸಂಬಂಧಗಳು | |
(ಬಿ) | ಕೃಷಿ ಸುಧಾರಣೆಗಳು | |
(ಸಿ) | ಗದ್ದೆಗಳ ರಕ್ಷಣೆ | |
(ಡಿ) | ಸಂವಿಧಾನದ ವಿಮರ್ಶೆ |
CORRECT ANSWER
(ಎ) ಕೇಂದ್ರ – ರಾಜ್ಯಗಳ ಸಂಬಂಧಗಳು
100. | ಡಿಮೇಟ್ ಅಕೌಂಟ್ ಎಂದರೇನು ? | |
(ಎ) | ಷೇರುಗಳ ಖರೀದಿ ಹಾಗೂ ಮಾರಾಟಕ್ಕಾಗಿ ಷೇರುದಾರರು ಈ ಖಾತೆಯನ್ನು ತೆರೆಯಬೇಕು. | |
(ಬಿ) | ಆಧಾರ್ ಕಾರ್ಡನ್ನು ಹೊಂದಿರುವವರು ಈ ಖಾತೆಯನ್ನು ತೆರೆಯಲೇ ಬೇಕು. | |
(ಸಿ) | ಟ್ರಸ್ಟ್ ಗಳನ್ನು ಸ್ಥಾಪಿಸಲು ಬಯಸುವ ವ್ಯಕ್ತಿ ಈ ಖಾತೆಯನ್ನು ತೆರೆಯಬೇಕಾಗುತ್ತದೆ. | |
(ಡಿ) | ಉತ್ಪಾದನೆಯಲ್ಲಿ ಹೊಸ ಟೆಕ್ನಾಲಜಿಯನ್ನು ಒಳಗೊಂಡ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ಬಳಸುವ ಖಾತೆಯು ಇದು. ಉತ್ಪಾದನೆಯಲ್ಲಿ ಹೆಚ್ಚಿನ ಅಪಾಯವಿರುತ್ತದೆ ಆದರೆ ಹೆಚ್ಚಿನ ಆದಾಯದ ಸಂಭಾವನೆಯೂ ಇರುತ್ತದೆ. |
CORRECT ANSWER
(ಎ) ಷೇರುಗಳ ಖರೀದಿ ಹಾಗೂ ಮಾರಾಟಕ್ಕಾಗಿ ಷೇರುದಾರರು ಈ ಖಾತೆಯನ್ನು ತೆರೆಯಬೇಕು.