WhatsApp Group Join Now
Telegram Group Join Now

PSI Previous Question Paper 13-01-2019

ಪೂಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಸಿವಿಲ್‌) ಪ್ರಶ್ನೆಪತ್ರಿಕೆ

 

1.ಮಿಲ್ ವಾಕೀ ಡೀಪ್ (ಆಳ) , ಜಾವಾ ಟ್ರೆಂಚ್ (ಕಾಲುವೆ) ಮತ್ತು ಚಾಲೆಂಜರ್ ಡೀಪ್ ಗಳ ನಡುವಿನ ಸಮಾನತೆ ಏನು?
 (ಎ)ಇವು ಕ್ರಮಬದ್ಧವಾಗಿ ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಮುದ್ರಗಳ ಅತೀ ಆಳವಾದ ಭಾಗಗಳು
 (ಬಿ)ಇವು ಪೆಸಿಫಿಕ್ ಸಮುದ್ರದಲ್ಲಿರುವ ಕಾಲುವೆಗಳು / ಕಂದಕಗಳು (ಟ್ರೆಂಚ್)
 (ಸಿ)ಇದು ಹಿಂದೂ ಮಹಾಸಾಗರದಲ್ಲಿರುವ ಕಾಲುವೆ/ಕಂದಕ (ಟ್ರೆಂಚ್) ಗಳು
 (ಡಿ)ಇವು ಅಟ್ಲಾಂಟಿಕ್ ಮಹಾಸಾಗರದಲ್ಲಿನ ಆಳ (ಡೀಪ್) ಗಳು

CORRECT ANSWER

(ಎ) ಇವು ಕ್ರಮಬದ್ಧವಾಗಿ ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಮುದ್ರಗಳ ಅತೀ ಆಳವಾದ ಭಾಗಗಳು


2.ಸಮುದ್ರದ ನೆಲದಿಂದ 1000 ಮೀಟರ್ ಗಿಂತ ಎತ್ತರಕ್ಕೆ ಇರುವ ಸಬ್ ಮೆರೀನ್ ಪರ್ವತ ಅಥವಾ ಶಿಖರವನ್ನು ಏನೆಂದು ಕರೆಯುತ್ತಾರೆ?
 (ಎ)ಗಯಾಟ್ ಗಳು
 (ಬಿ)ಸೀಮೌಂಟ್ ಗಳು
 (ಸಿ)ಅಬಿಸಲ್ ಬೆಟ್ಟಗಳು
 (ಡಿ)ಟ್ರೆಂಚ್ ಗಳು (ಕಾಲುವೆ/ಕಂದಕ)
CORRECT ANSWER

(ಬಿ) ಸೀಮೌಂಟ್ ಗಳು


3.ಈ ಕೆಳಗಿನವುಗಳಲ್ಲಿ ಬೆಚ್ಚಗಿನ ಪ್ರವಾಹ/ಹರಿವು (ವಾರ್ಮ್ ಕರೆಂಟ್) ಯಾವುದು?
 (ಎ)ಒಯಾ ಶಿಯೊ ಕರೆಂಟ್
 (ಬಿ)ಕುರೊ ಶಿಯೊ ಕರೆಂಟ್
 (ಸಿ)ಒಖೋಟ್ಸ್ಕ್ ಕರೆಂಟ್
 (ಡಿ)ಪೆರು ಕರೆಂಟ್
CORRECT ANSWER

(ಬಿ) ಕುರೊ ಶಿಯೊ ಕರೆಂಟ್


4.2018ರ ಏಶಿಯನ್ ಗೇಮ್ಸ್ ನ ಶೂಟಿಂಗ್ ನಲ್ಲಿ ಪ್ರತ್ಯೇಕ ಬಂಗಾರದ ಪದಕವನ್ನು ಗೆದ್ದ ಭಾರತದ ಮೊತ್ತ-ಮೊದಲ ಮಹಿಳೆ ಯಾರು?
 (ಎ)ಮನು ಭಕೇರ್
 (ಬಿ)ಅಂಕಿತ ರೈನ
 (ಸಿ)ಮೆಹುಲಿ ಘೋಶ್
 (ಡಿ)ರಾಹಿ ಸರ್ನೊಬತ್
CORRECT ANSWER

(ಡಿ) ರಾಹಿ ಸರ್ನೊಬತ್


5.ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡವು ಇತ್ತೀಚೆಗೆ ಬೆಳಸಲ್ಪಟ್ಟ ಯಾವ ಬೆಳೆಯ ಜೆನೆಟಿಕ್ ಕೋಡ್ ನ್ನು ಮೊದಲು ಮುರಿದಿರುವರು?
 (ಎ)ಗೋಧಿ
 (ಬಿ)ಅಕ್ಕಿ
 (ಸಿ)ಮೆಕ್ಕೆಜೋಳ
 (ಡಿ)ದ್ವಿದಳ ಧಾನ್ಯಗಳು
CORRECT ANSWER

(ಎ) ಗೋಧಿ


6.ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳನ್ನು ಯಾವುದು ಸಂರಕ್ಷಿಸುವುದು?
 (ಎ)ಶಾಸಕಾಂಗ
 (ಬಿ)ಕಾರ್ಯಾಂಗ
 (ಸಿ)ರಾಜಕೀಯ ಪಕ್ಷಗಳು
 (ಡಿ)ನ್ಯಾಯಾಂಗ
CORRECT ANSWER

(ಡಿ) ನ್ಯಾಯಾಂಗ


7.ಸ್ವತಂತ್ರ ಭಾರತದಲ್ಲಿ ಮೊದಲ ಜನರಲ್ ಇಲೆಕ್ಷನ್ (ಸಾಮಾನ್ಯ ಚುನಾವಣೆ) ಯಾವ ವರ್ಷದಲ್ಲಿ ನಡೆದಿತ್ತು?
 (ಎ)1947
 (ಬಿ)1950
 (ಸಿ)1951
 (ಡಿ)1948
CORRECT ANSWER

(ಸಿ) 1951


8.ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಬಹುದು?
 (ಎ)31ನೇ ವಿಧಿ
 (ಬಿ)32ನೇ ವಿಧಿ
 (ಸಿ)28ನೇ ವಿಧಿ
 (ಡಿ)29ನೇ ವಿಧಿ
CORRECT ANSWER

(ಬಿ) 32ನೇ ವಿಧಿ


9.ಭಾರತದಲ್ಲಿ ಯಾವ ತಾರೀಖಿನಂದು ಕಿಸಾನ್ ದಿವಸ್ (ರೈತ ದಿನ) ಆಚರಿಸಲ್ಪಡುತ್ತದೆ?
 (ಎ)ಡಿಸೆಂಬರ್ 24
 (ಬಿ)ಡಿಸೆಂಬರ್ 21
 (ಸಿ)ಡಿಸೆಂಬರ್ 22
 (ಡಿ)ಡಿಸೆಂಬರ್ 23
CORRECT ANSWER

(ಡಿ) ಡಿಸೆಂಬರ್ 23


10.ಇನ್ಫೋಸಿಸ್ ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
 (ಎ)ಮೈಕಲ್ ಪ್ಹೆಶ್
 (ಬಿ)ನಂದನ್ ನೀಲೇಕಣಿ
 (ಸಿ)ಸಲಿಲ್ ಪರೇಖ್
 (ಡಿ)ಪ್ರವೀಣ್ ರಾವ್
CORRECT ANSWER

(ಸಿ) ಸಲಿಲ್ ಪರೇಖ್


11.“WINGS” ಎಂಬ VOIP ಆಧಾರಿತ ದೂರವಾಣಿ ವ್ಯವಸ್ಥೆಯನ್ನು ಯಾವ ಟೆಲಿಕಾಂ ಕಂಪೆನಿಯು ಪ್ರಾರಂಭಿಸಿದೆ?
 (ಎ)ಏರ್ಟೆಲ್
 (ಬಿ)ಬಿ.ಎಸ್.ಎನ್.ಎಲ್.
 (ಸಿ)ರಿಲಯೆನ್ಸ್ ಜಿಯೊ
 (ಡಿ)ವೊಡಾಫೋನ್
CORRECT ANSWER

(ಬಿ) ಬಿ.ಎಸ್.ಎನ್.ಎಲ್.


12.ಇತ್ತೀಚೆಗೆ ಸಾವನ್ನಪ್ಪಿದ, ಟ್ರಿನಿಡಾಡ್ ನಲ್ಲಿ ಜನಿಸಿದ ಮೂಲತಃ ಭಾರತದ ಲೇಖಕರಾದ ದಿವಂಗತ ವಿ.ಎಸ್.ನೈಪಾಲ್ ರವರ ಈ ಕೆಳಗಿನ ಕೃತಿಗಳಲ್ಲಿ ಯಾವುದು ಸೇರುವುದಿಲ್ಲ?
 (ಎ)ಎ ಬೆಂಡ್ ಇನ್ ದಿ ರಿವರ್
 (ಬಿ)ಮ್ಯಾಜಿಕ್ ಸೀಡ್ಸ್
 (ಸಿ)ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್
 (ಡಿ)ದಿ ರಿಮೈನ್ಸ್ ಆಫ್ ದಿ ಡೇ
CORRECT ANSWER

(ಡಿ) ದಿ ರಿಮೈನ್ಸ್ ಆಫ್ ದಿ ಡೇ


13.ಜಗತ್ತಿನ ಕಾಯ್ದಿಟ್ಟ ಜೀವಗೋಳದ ಜಾಲದಲ್ಲಿ ಸೇರಿದ ಭಾರತದಲ್ಲಿನ ಕಾಯ್ದಿಟ್ಟ ಜೀವಗೋಳದ ಪ್ರಸ್ತುತ ಸಂಖ್ಯೆ ಎಷ್ಟು?
 (ಎ)8
 (ಬಿ)9
 (ಸಿ)10
 (ಡಿ)11

CORRECT ANSWER

(ಡಿ) 11


14.ಕರ್ನಾಟಕ ಪೋಲೀಸ್ ಫ್ಲಾಗ್ ಡೇ (ಬಾವುಟ ದಿನ) ಯನ್ನು ___________ ಆಚರಿಸುತ್ತಾರೆ.
 (ಎ)ನವೆಂಬರ್ 1 ರಂದು
 (ಬಿ)ಏಪ್ರಿಲ್ 2 ರಂದು
 (ಸಿ)ಜುಲೈ 26 ರಂದು
 (ಡಿ)ಅಕ್ಟೋಬರ್ 23 ರಂದು
CORRECT ANSWER

(ಬಿ) ಏಪ್ರಿಲ್ 2 ರಂದು


15.ನ್ಯಾಯ ವಿಚಾರಣೆ ಇಲ್ಲದೆ ಜನಸಾಮಾನ್ಯರನ್ನು ಕೊಲ್ಲುವುದು (ಮಾಬ್ ಲಿಂಚಿಂಗ್) ಮತ್ತು ಹಿಂಸೆಯ ವಿರುದ್ಧ ಕಾನೂನನ್ನು ಸೂಚಿಸಲು ಕೇಂದ್ರಸರ್ಕಾರವು ಉನ್ನತಮಟ್ಟದ ಯಾವ ಸಮಿತಿಯನ್ನು ಸೂಚಿಸಿದೆ?
 (ಎ)ಎ.ಕೆ. ಧಾಸಮನ ಸಮಿತಿ
 (ಬಿ)ರಾಜೀವ್ ಗೌಬಾ ಸಮಿತಿ
 (ಸಿ)ಭಾಸ್ಕರ್ ಖುಲ್ಬೆ ಸಮಿತಿ
 (ಡಿ)ಇಂದರ್ ಜಿತ್ ಸಿಂಗ್ ಸಮಿತಿ
CORRECT ANSWER

(ಬಿ) ರಾಜೀವ್ ಗೌಬಾ ಸಮಿತಿ


16.ರಾಷ್ಟ್ರೀಯ ನಾಗರಿಕ ನೊಂದಣಿಯ ಮೊದಲ ಕರಡು (ಡ್ರಾಫ್ಟ್) ಯಾವ ರಾಜ್ಯಕ್ಕೆ ಬಿಡುಗಡೆಯಾಯಿತು?
 (ಎ)ನಾಗಾಲ್ಯಾಂಡ್
 (ಬಿ)ಅಸ್ಸಾಂ
 (ಸಿ)ಪಂಜಾಬ್
 (ಡಿ)ಕೇರಳ
CORRECT ANSWER

(ಬಿ) ಅಸ್ಸಾಂ


17.2018ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?
 (ಎ)ವಿನೋದ್ ಖನ್ನಾ
 (ಬಿ)ಶರ್ಮಿಳಾ ಠಾಗೋರ್
 (ಸಿ)ಶಾರುಖ್ ಖಾನ್
 (ಡಿ)ಶಶಿಕಪೂರ್
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


18.ಜಪಾನ್ ದ್ವೀಪ ಸಮುದಾಯದ ಯಾವ ದ್ವೀಪದಲ್ಲಿ ‘ಹಿರೋಷಿಮಾ’ ಮತ್ತು ‘ನಾಗಾಸಾಕಿ’ ನಗರಗಳಿವೆ?
 (ಎ)ಹೋನ್ ಶೂ ಮತ್ತು ಕ್ಯೂಶೂ ಅನುಕ್ರಮವಾಗಿ
 (ಬಿ)ಹೋನ್ ಶೂ ಮತ್ತು ಶಿಕೋಕು ಕ್ರಮವಾಗಿ
 (ಸಿ)ಹೊಕಾಡು ಮತ್ತು ಕ್ಯೂಶೂ ಕ್ರಮವಾಗಿ
 (ಡಿ)ಕ್ಯೂಶು ಮತ್ತು ಶಿಕೋಕು ಕ್ರಮವಾಗಿ
CORRECT ANSWER

(ಎ) ಹೋನ್ ಶೂ ಮತ್ತು ಕ್ಯೂಶೂ ಅನುಕ್ರಮವಾಗಿ


19.ಈ ಕೆಳಗಿನವರಲ್ಲಿ ಯಾರು ಪಟ್ಟದಕಲ್ಲು ಮತ್ತು ಐಹೊಳೆಗಳ ಸುಂದರ ದೇಗುಲಗಳನ್ನು ನಿರ್ಮಿಸಿದರು?
 (ಎ)ಚಾಲುಕ್ಯರು
 (ಬಿ)ಹೊಯ್ಸಳರು
 (ಸಿ)ಶಾತವಾಹನರು
 (ಡಿ)ರಾಷ್ಟ್ರಕೂಟರು
CORRECT ANSWER

(ಎ) ಚಾಲುಕ್ಯರು


20.ಕಲ್ಯಾಣಿ ಚಾಲುಕ್ಯರಲ್ಲಿ ‘ಜಗದೇಕಮಲ್ಲ’ ಬಿರುದು ಪಡೆದವರು
 (ಎ)ಜಯಸಿಂಹ II
 (ಬಿ)ವಿಜಯಾದಿತ್ಯ VII
 (ಸಿ)ವಿಜಯಾದಿತ್ಯ II
 (ಡಿ)ಸೋಮೇಶ್ವರ I
CORRECT ANSWER

(ಎ) ಜಯಸಿಂಹ ಐಐ


21.2018ರ ಫೀಫಾ ವರ್ಲ್ಡ್ ಕಪ್ ಪಂದ್ಯದಲ್ಲಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಗೆದ್ದ ಅತ್ಯುತ್ತಮ ಆಟಗಾರ ಯಾರು?
 (ಎ)ಲುಕಾ ಮಾಡ್ರಿಕ್
 (ಬಿ)ಕೈಲಿಯನ್ ಬಾಪ್ಪೆ
 (ಸಿ)ಹ್ಯಾರಿ ಕೇನ್
 (ಡಿ)ಥಿಬೌಟ್ ಕೌರ್ಟಾಯಿಸ್
CORRECT ANSWER

(ಎ) ಲುಕಾ ಮಾಡ್ರಿಕ್


22.ಭಾರತದ ಮಿಸೈಲ್ ಗಳಲ್ಲಿ ‘ಸೂಪರ್ ಸಾನಿಕ್ ಕ್ರೂಸ್ ಮಿಸೈಲ್’ ಯಾವುದು?
 (ಎ)ಅಗ್ನಿ-V
 (ಬಿ)ಬ್ರಹ್ಮೋಸ್
 (ಸಿ)ಪೃಥ್ವಿ-III
 (ಡಿ)ಆಕಾಶ್
CORRECT ANSWER

(ಬಿ) ಬ್ರಹ್ಮೋಸ್


23.2018ರ ಗೋಲ್ಡನ್ ಮ್ಯಾನ್ ಬುಕರ್ ಪ್ರಶಸ್ತಿಯನ್ನು ಗೆದ್ದ ಕೃತಿ/ಕಾದಂಬರಿ ಯಾವುದು?
 (ಎ)ಇನ್ ಎ ಫ್ರೀ ಸ್ಟೇಟ್
 (ಬಿ)ದಿ ಇಂಗ್ಲಿಷ್ ಪೇಶಂಟ್
 (ಸಿ)ವುಲ್ ಹಾಲ್
 (ಡಿ)ಮೂನ್ ಟೈಗರ್
CORRECT ANSWER

(ಬಿ) ದಿ ಇಂಗ್ಲಿಷ್ ಪೇಶಂಟ್


24.ನಾಗ್ ಮಿಸೈಲ್ ನ್ನು ಅಭಿವೃದ್ಧಿ ಪಡಿಸಿದ ಭಾರತೀಯ ಸಂಸ್ಥೆ ಯಾವುದು?
 (ಎ)ಡಿ.ಆರ್.ಡಿ.ಒ.
 (ಬಿ)ಬಿ.ಎ.ಆರ್.ಸಿ.
 (ಸಿ)ಐ.ಎಸ್.ಆರ್.ಒ.
 (ಡಿ)ಮೇಲಿನ ಎಲ್ಲವೂ
CORRECT ANSWER

(ಎ) ಡಿ.ಆರ್.ಡಿ.ಒ.


25.ಸಂವಿಧಾನದಲ್ಲಿ ಶಿಕ್ಷಣದ ಹಕ್ಕನ್ನು ಒದಗಿಸುವ ಹೊಸ ಆರ್ಟಿಕಲ್-21 ಎ, ಇದನ್ನು ಸೇರ್ಪಡಿಸಿದ ತಿದ್ದುಪಡಿ ಯಾವುದು?
 (ಎ)86ನೆಯ ತಿದ್ದುಪಡಿ
 (ಬಿ)87ನೆಯ ತಿದ್ದುಪಡಿ
 (ಸಿ)88ನೆಯ ತಿದ್ದುಪಡಿ
 (ಡಿ)89ನೆಯ ತಿದ್ದುಪಡಿ
CORRECT ANSWER

(ಎ) 86ನೆಯ ತಿದ್ದುಪಡಿ


26.ಮಹಿಳೆಯರಿಗಾಗಿನ ರಾಷ್ಟ್ರೀಯ ಆಯೋಗವು ___________ ನೊಂದಿಗೆ ಅಂತರ್ಜಾಲದ ಸುರಕ್ಷಿತ ಬಳಕೆಯ ಕುರಿತು ಮಹಿಳೆಯರಿಗೆ ತರಬೇತಿ ನೀಡಲು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವೊಂದನ್ನು ಆಯೋಜಿಸಲು ಪಾಲುದಾರಿಕೆ ಹೊಂದಿದೆ.
 (ಎ)ಪೇಸ್ ಬುಕ್
 (ಬಿ)ಗೂಗಲ್
 (ಸಿ)ಅಮೇಜಾನ್
 (ಡಿ)ಮೈಕ್ರೋಸಾಫ್ಟ್
CORRECT ANSWER

(ಎ) ಫೇಸ್ ಬುಕ್


27.ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ___________ ವಿಮಾನ ನಿಲ್ದಾಣವನ್ನು ಜಗತ್ತಿನ ಮೊದಲ ಪೂರ್ಣಪ್ರಮಾಣದ ಸೌರಶಕ್ತಿ ಚಾಲಿತ ವಿಮಾನನಿಲ್ದಾಣವೆಂದು ಗುರುತಿಸಿದೆ.
 (ಎ)ಜೈಪುರ
 (ಬಿ)ಬೆಂಗಳೂರು (ಕೆ.ಐ.ಎ.ಎಲ್.)
 (ಸಿ)ಕೊಚ್ಚಿನ್ (ಸಿ.ಐ.ಎ.ಎಲ್)
 (ಡಿ)ಮಂಗಳೂರು (ಎಂ.ಐ.ಎ.ಎಲ್)
CORRECT ANSWER

(ಸಿ) ಕೊಚ್ಚಿನ್ (ಸಿ.ಐ.ಎ.ಎಲ್)


28.ಅಟಲ್ ಇನ್ನೋವೇಶನ್ ಮಿಷನ್ ನಾವೀನ್ಯತೆ ಸಂಸ್ಕೃತಿ ಪ್ರೋತ್ಸಾಹಿಸಲು ಭಾರತ ಸರ್ಕಾರದ ಒಂದು ಪ್ರಯತ್ನವಾಗಿದ್ದು ___________ ದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.
 (ಎ)ಪರಿಸರ ಸಚಿವಾಲಯ
 (ಬಿ)ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
 (ಸಿ)ನೀತಿ ಆಯೋಗ
 (ಡಿ)ರಕ್ಷಣಾ ಸಚಿವಾಲಯ
CORRECT ANSWER

(ಸಿ) ನೀತಿ ಆಯೋಗ


29.ಇಂದು ಮಲ್ಹೋತ್ರಾ ಇವರು
 (ಎ)ಏರ್ ಇಂಡಿಯಾದ ಮೊದಲ ಮಹಿಳಾ ಸಿಎಂಡಿಯಾಗಿದ್ದಾರೆ.
 (ಬಿ)ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮಹಿಳಾ ಹಿರಿಯ ವಕೀಲರಾಗಿದ್ದಾರೆ
 (ಸಿ)ಭಾರತದ ಅಡ್ವೊೊಕೇಟ್ ಜನರಲ್ ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ.
 (ಡಿ)ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕರಾಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ.
CORRECT ANSWER

(ಬಿ) ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ
ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮಹಿಳಾ ಹಿರಿಯ ವಕೀಲರಾಗಿದ್ದಾರೆ


30.‘ಸಾಗರ್ ಕವಚ’ ಎಂದರೆ
 (ಎ)ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನೌಕಾಪಡೆಯ ವಿಮಾನ ನಿರೋಧಕ ಗನ್
 (ಬಿ)ಕರಾವಳಿ ಭದ್ರತೆಯಲ್ಲಿನ ಲೋಪದೋಷಗಳ ಮೌಲ್ಯಮಾಪನ ಮತ್ತು ಭದ್ರತೆ ಬಲಪಡಿಸಲು ಕಾರ್ಯಾಭ್ಯಾಸ
 (ಸಿ)ಕರಾವಳಿ ಭದ್ರತೆಗಾಗಿ ನಿಯೋಜಿಸಲಾದ ವಿಶೇಷ ತಟರಕ್ಷಣಾ ಘಟಕ
 (ಡಿ)ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ತಟರಕ್ಷಣಾ ನೌಕೆ
CORRECT ANSWER

(ಬಿ) ಕರಾವಳಿ ಭದ್ರತೆಯಲ್ಲಿನ ಲೋಪದೋಷಗಳ ಮೌಲ್ಯಮಾಪನ ಮತ್ತು ಭದ್ರತೆ ಬಲಪಡಿಸಲು ಕಾರ್ಯಾಭ್ಯಾಸ


31.ಮೊಬೈಲ್ ಟೆಲಿಫೋನಿನಲ್ಲಿ GSM ಎಂದರೇನು?
 (ಎ)ಗ್ಲೋಬಲ್ ಸಿಸ್ಟಮ್ಸ್ ಆಫ್ ಮೊಬೈಲ್ಸ್
 (ಬಿ)ಗ್ಲೋಬಲ್ ಸಿಸ್ಟಮ್ ಆಫ್ ಮೊಬೈಲ್ ಕಮ್ಯುನಿಕೇಶನ್ಸ್
 (ಸಿ)ಗ್ಲೋಬಲ್ ಸ್ಟಾಂಡರ್ಡ್ ಫಾರ್ ಮೊಬೈಲ್ಸ್
 (ಡಿ)ಜನರಲ್ ಸ್ಟಾಂಡರ್ಡ್ ಫಾರ್ ಮೊಬೈಲ್ಸ್
CORRECT ANSWER

(ಬಿ) ಗ್ಲೋಬಲ್ ಸಿಸ್ಟಮ್ ಆಫ್ ಮೊಬೈಲ್ ಕಮ್ಯುನಿಕೇಶನ್ಸ್


32.BIOS ಎಂದರೇನು?
 (ಎ)ಬೇಸಿಕ್ ಇನ್ ಪುಟ್ ಔಟ್ ಪುಟ್ ಸಿಸ್ಟಮ್
 (ಬಿ)ಬೈನರಿ ಇನ್ ಪುಟ್ ಔಟ್ ಪುಟ್ ಸಿಸ್ಟಮ್
 (ಸಿ)ಬೇಸಿಕ್ ಇನ್ ಪುಟ್ ಆಫ್ ಸಿಸ್ಟಮ್
 (ಡಿ)ಮೇಲಿನ ಎಲ್ಲವೂ
CORRECT ANSWER

(ಎ) ಬೇಸಿಕ್ ಇನ್ ಪುಟ್ ಔಟ್ ಪುಟ್ ಸಿಸ್ಟಮ್


33.ಒಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ ಆ ವ್ಯಕ್ತಿಯೆಂದು ಯಥಾರ್ಥವಾಗಿ (ಕೃತಕವಾಗಿ ನಡೆದುಕೊಳ್ಳುವುದು) ಸೋಗುಹಾಕುವ ಅಪರಾಧವನ್ನು ಏನೆಂದು ಕರೆಯುತ್ತಾರೆ?
 (ಎ)ಸ್ಪೂಲ್ ಮಾಡುವುದು
 (ಬಿ)ಗುರುತು ಅಪಹರಣ
 (ಸಿ)ವಂಚನೆ (ಸ್ಪೂಫ್) ಮಾಡುವುದು
 (ಡಿ)ಹ್ಯಾಕ್ ಮಾಡುವುದು
CORRECT ANSWER

(ಬಿ) ಗುರುತು ಅಪಹರಣ


34.ಭ್ರಾಂತಿ/ಮರೀಚಿಕೆ (ಮೈರೇಜ್) ಗೆ ಕಾರಣವೇನು?
 (ಎ)ಬೆಳಕಿನ ವ್ಯತಿಕರಣ
 (ಬಿ)ಬೆಳಕಿನ ವಿವರ್ತನೆ
 (ಸಿ)ಬೆಳಕಿನ ಧ್ರುವೀಕರಣ
 (ಡಿ)ಬೆಳಕಿನ ಸಮಗ್ರ ಆಂತರಿಕ ವಕ್ರೀಕರಣ
CORRECT ANSWER

(ಡಿ) ಬೆಳಕಿನ ಸಮಗ್ರ ಆಂತರಿಕ ವಕ್ರೀಕರಣ


35.ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವನ್ನು ___________ ಎಂದು ಕರೆಯುತ್ತಾರೆ.
 (ಎ)ಬ್ಯಾಟರಿ
 (ಬಿ)ಮೋಟಾರ್
 (ಸಿ)ಜನರೇಟರ್
 (ಡಿ)ಚಲಿಸುವ ಸುರುಳಿ ಮೀಟರ್
CORRECT ANSWER

(ಎ) ಬ್ಯಾಟರಿ


36.2018ರ ಜಕಾರ್ತ ಏಷ್ಯ್ನ್ ಗೇಮ್ಸ್ನಲ್ಲಿ ಅಥ್ಲೆಟಿಕ್ನ ಯಾವ ವಿಭಾಗದಲ್ಲಿ ತೇಜಿಂದರ್ ಪಾಲ್ ಸಿಂಗ್ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು?
 (ಎ)ಜಾವೆಲಿನ್ ಎಸೆತ
 (ಬಿ)400 ಮೀ.ಓಟ
 (ಸಿ)ಉದ್ದಜಿಗಿತ
 (ಡಿ)ಗುಂಡೆಸೆತ
CORRECT ANSWER

(ಡಿ) ಗುಂಡೆಸೆತ


37.ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದಿಂದ ಸ್ಥಾಪಿಸಲ್ಪಟ್ಟ ಮೊಬೈಲ್ ಆ್ಯಪ್ ‘ರಿ-ಯುನೈಟ್’ (ಮರಳಿ ಸೇರಿಸು) ನ ಉದ್ದೇಶ
 (ಎ)ಆನ್ ಲೈನ್ ಶಾಪಿಂಗ್ ವೇಳೆ ಸಮಸ್ಯೆಗಳಿಲ್ಲದೆ ಹಣಪಾವತಿ
 (ಬಿ)ಆನ್ ಲೈನ್ ವ್ಯವಹಾರ ನಿರ್ವಹಿಸಲು ಸಾಮಾನ್ಯ ವೇದಿಕೆ
 (ಸಿ)ಕಾಣೆಯಾದ ಮತ್ತು ಪರಿತ್ಯಕ್ತ ಮಕ್ಕಳ ಜಾಡು ಹಿಡಿಯುವುದು
 (ಡಿ)ಗುರುತಿಸಲ್ಪಡದ ಶವಗಳನ್ನು ಗುರುತಿಸುವುದು.
CORRECT ANSWER

(ಸಿ) ಕಾಣೆಯಾದ ಮತ್ತು ಪರಿತ್ಯಕ್ತ ಮಕ್ಕಳ ಜಾಡು ಹಿಡಿಯುವುದು


38.ಈ ಕೆಳಗಿನವುಗಳಲ್ಲಿ ಯಾವುದು ಪೋಲಿಸ್ (ಆರಕ್ಷಕ) ಸಿಬ್ಬಂದಿಗಾಗಿ ಗೃಹ ಸಚಿವಾಲಯ ಇತ್ತೀಚೆಗೆ ಸ್ಥಾಪಿಸಿದ ಪದಕವಲ್ಲ?
 (ಎ)ಗೃಹಮಂತ್ರಿಗಳ ವಿಶಿಷ್ಟ ಕಾರ್ಯಾಚರಣಾ ಪದಕ
 (ಬಿ)ಆಂತರಿಕ ಸುರಕ್ಷಾ ಪದಕ
 (ಸಿ)ವಿಶಿಷ್ಟ ಸೇವಾ ಪದಕ
 (ಡಿ)ಉತ್ಕೃಷ್ಟ ಸೇವಾ ಪದಕ
CORRECT ANSWER

(ಸಿ) ವಿಶಿಷ್ಟ ಸೇವಾ ಪದಕ


39.ಹೈನುಗಾರಿಕೆ ಕ್ಷೇತ್ರದಲ್ಲಿ ವಿಪರೀತ ದುರ್ಬಳಕೆಗಾಗಿ ಈ ಔಷಧಿಯ ಉತ್ಪಾದನೆ ಮತ್ತು ಮಾರಾಟವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ನಿರ್ಬಂಧಿಸಿದೆ.
 (ಎ)ಸೆಫೆಲೊಸ್ಪೊರಿನ್
 (ಬಿ)ಆಕ್ಸಿಟೋಸಿನ್
 (ಸಿ)ಆಕ್ಸಿಟೆಟ್ರಾಸೈಕ್ಲೀನ್
 (ಡಿ)ಪ್ಯುರಾರೊಲಿಡೋನ್
CORRECT ANSWER

(ಬಿ) ಆಕ್ಸಿಟೋಸಿನ್


40.ಪಿನಾಕಾ – II ರ ವಿಷಯದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿ?
 (ಎ)ಇದು ಡಿ.ಆರ್.ಡಿ.ಓ.ದಿಂದ ಅಭಿವೃದ್ಧಿಪಡಿಸಲಾದ ಬಹುಬ್ಯಾರೆಲ್ ಗನ್ ಆಗಿದೆ.
 (ಬಿ)ಇದು ಭಾರತೀಯ ಸೇನೆಗಾಗಿ ಅಭಿವೃದ್ಧಿ ಪಡಿಸಲಾದ ಪೂರ್ತಿಯಾಗಿ ಸ್ವಯಂಚಾಲಿತ ಮೆಷಿನ್ ಗನ್ ಆಗಿದೆ.
 (ಸಿ)ಬಹುಬ್ಯಾರೆಲ್ ರಾಕೆಟ್ ಲಾಂಚರ್ ನ ಮಾರ್ಗದರ್ಶನ ಹೊಂದಿದ ಆವೃತ್ತಿಯಾಗಿದೆ.
 (ಡಿ)ಇದು ರಷ್ಯಾದ ಸಹಯೋಗದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಯುದ್ಧ ಟ್ಯಾಂಕ್ ಆಗಿದೆ.
CORRECT ANSWER

(ಸಿ) ಬಹುಬ್ಯಾರೆಲ್ ರಾಕೆಟ್ ಲಾಂಚರ್ ನ ಮಾರ್ಗದರ್ಶನ ಹೊಂದಿದ ಆವೃತ್ತಿಯಾಗಿದೆ.


41.ಒಂದು ಸಬ್ ಮೆರೀನ್ ನಲ್ಲಿ ಸಮುದ್ರಮಟ್ಟದ ಮೇಲಿರುವ ವಸ್ತುಗಳನ್ನು ನೋಡಲು ಉಪಯೋಗಿಸುವ ಉಪಕರಣ
 (ಎ)ಪೆರಿಸ್ಕೋಪ್
 (ಬಿ)ಪಾಲಿಗ್ರಾಫ್
 (ಸಿ)ಫೋಟೋಮೀಟರ್
 (ಡಿ)ಪೈರೋಮೀಟರ್
CORRECT ANSWER

(ಎ) ಪೆರಿಸ್ಕೋಪ್


42.ಗುರುತ್ವದಿಂದ ಉಂಟಾದ ವೇಗೋತ್ಕರ್ಷವು ಯಾವುದರಿಂದ ಮುಕ್ತವಾಗಿರುತ್ತದೆ?
 (ಎ)ವಸ್ತುವಿನ ಘನರಾಶಿ (ಮಾಸ್)
 (ಬಿ)ಗಾತ್ರ
 (ಸಿ)ಆಕಾರ
 (ಡಿ)ಮೇಲಿನ ಎಲ್ಲವೂ
CORRECT ANSWER

(ಡಿ) ಮೇಲಿನ ಎಲ್ಲವೂ


43.ತುಕ್ಕು ಹಿಡಿಯುವುದರಿಂದ ಕಬ್ಬಿಣದ ತೂಕವು
 (ಎ)ಕಡಿಮೆಯಾಗುತ್ತದೆ
 (ಬಿ)ಹೆಚ್ಚಾಗುತ್ತದೆ
 (ಸಿ)ಸಮಾನವಾಗಿ ಉಳಿಯುತ್ತದೆ
 (ಡಿ)ನಿಖರವಾಗಿಲ್ಲ
CORRECT ANSWER

(ಬಿ) ಹೆಚ್ಚಾಗುತ್ತದೆ


44.ಲಾಫಿಂಗ್ ಗ್ಯಾಸ್ (ನಗೆ ಅನಿಲ) ಯಾವುದು?
 (ಎ)ಕಾರ್ಬನ್ ಡೈಆಕ್ಸೈಡ್
 (ಬಿ)ಸಲರ್ ಡೈಆಕ್ಸೈಡ್
 (ಸಿ)ನೈಟ್ರೋಜನ್ ಡೈಆಕ್ಸೈಡ್
 (ಡಿ)ನೈಟ್ರಸ್ ಆಕ್ಸೈಡ್
CORRECT ANSWER

(ಡಿ) ನೈಟ್ರಸ್ ಆಕ್ಸೈಡ್


45.ರೇಡಿಯಮ್ ನ್ನು ಯಾವ ಖನಿಜದಿಂದ ಪಡೆಯಲಾಗುತ್ತದೆ?
 (ಎ)ಸುಣ್ಣಶಿಲೆ (ಲೈಮ್ ಸ್ಟೋನ್)
 (ಬಿ)ಹೆಮಟೈಟ್
 (ಸಿ)ಪಿಚ್ ಬ್ಲೆಂಡ್
 (ಡಿ)ರುಟೈಲ್
CORRECT ANSWER

(ಸಿ) ಪಿಚ್ ಬ್ಲೆಂಡ್


46.ಲೋಕಸಭೆಯಲ್ಲಿ ಅಂಗೀಕರಿಸಲಾದ ಕ್ರಿಮಿನಲ್ ಕಾಯ್ದೆ (ತಿದ್ದುಪಡಿ ಮಸೂದೆ 2018) ಈ ವಿಷಯವಾಗಿ ಅವಕಾಶ ಕಲ್ಪಿಸಿದೆ.
 (ಎ)ಎಲ್ಲ ಸಾಮೂಹಿಕ ಅತ್ಯಾಚಾರ ಅಪರಾಗಳಿಗೆ ಮರಣದಂಡನೆ
 (ಬಿ)12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಅತ್ಯಾಚಾರ ಅಪರಾಗಳಿಗೆ ಮರಣದಂಡನೆ
 (ಸಿ)18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಅತ್ಯಾಚಾರ ಅಪರಾಗಳಿಗೆ ಮರಣದಂಡನೆ
 (ಡಿ)ಮೇಲಿನ ಯಾವುದೂ ಅಲ್ಲ
CORRECT ANSWER

(ಬಿ) 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಅತ್ಯಾಚಾರ ಅಪರಾಗಳಿಗೆ ಮರಣದಂಡನೆ


47.ಭಾರತೀಯ ಸೇನೆಗಾಗಿ ‘ಮೇಕ್ ಇನ್ ಇಂಡಿಯಾ’ ದ ಅಡಿಯಲ್ಲಿ ತಯಾರಿಸಲಾದ V-46-6 ಮತ್ತು V-92- S2 ಗಳು.
 (ಎ)ಪೂರ್ಣ ಪ್ರಮಾಣದ ಸ್ವಯಂಚಾಲಿತ ಮೆಷಿನ್ ಗನ್ ಗಳು
 (ಬಿ)ಅಧಿಕ ಶಕ್ತಿಯ ಬಹು ಇಂಧನ ಇಂಜಿನ್ ಗಳು
 (ಸಿ)ಹೊಸ ಆವೃತ್ತಿಯ ಮಾರ್ಗನಿರ್ದೇಶಿತ ಮೇಲ್ಮೈಯಿಂದ ಮೇಲ್ಮೈ ಮಿಸೈಲ್ ಗಳಿಗೆ
 (ಡಿ)ಹಗುರ ತೂಕದ ಬುಲೆಟ್ ಫೂಫ್ ಜಾಕೆಟ್ ಗಳು
CORRECT ANSWER

(ಬಿ) ಅಧಿಕ ಶಕ್ತಿಯ ಬಹು ಇಂಧನ ಇಂಜಿನ್ ಗಳು


48.ಹುಲಿ ಸಂರಕ್ಷಣೆ ಕುರಿತ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಹುಲಿ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ?
 (ಎ)ಜೂನ್ 21
 (ಬಿ)ಜುಲೈ 29
 (ಸಿ)ಮಾರ್ಚ್ 1
 (ಡಿ)ಡಿಸೆಂಬರ್ 1
CORRECT ANSWER

(ಬಿ) ಜುಲೈ 29


49.ಭಾರತ ಅಭಿವೃದ್ಧಿಗೊಳಿಸಿದ ಮೊಟ್ಟ ಮೊದಲ ಪರಿಸರ ಸ್ನೇಹಿ ಜೈವಿಕ ಇಂಧನ ಚಾಲಿತ ವಿಮಾನ ಇತ್ತೀಚೆಗೆ ಡೆಹ್ರಾಡೂನ್ ನಿಂದ ದೆಹಲಿಗೆ ಪ್ರಯಾಣಿಸಿತು. ಜೈವಿಕ ಇಂಧನವಾಗಿ ಉಪಯೋಗಿಸಿದ್ದು ಯಾವುದರ ತೈಲ ಮಿಶ್ರಣ?
 (ಎ)ಜಟೊಫಾ ಬೀಜಗಳು
 (ಬಿ)ಸಾಸಿವೆ ಬೀಜಗಳು
 (ಸಿ)ಬಿಳಿ ಸಾಸಿವೆ (ರ್ಯಾಪ್ಸೀಡ್)
 (ಡಿ)ತಾಳೆ ಎಣ್ಣೆ
CORRECT ANSWER

(ಎ) ಜಟ್ರೊಫಾ ಬೀಜಗಳು


50.ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ಇತ್ತೀಚೆಗೆ ನೇಮಕಗೊಂಡ ಗಣ್ಯ ಕ್ಷಿಪಣಿ ವಿಜ್ಞಾನಿ
 (ಎ)ಶ್ರೀ. ಕೆ. ಭರತ್ ರೆಡ್ಡಿ
 (ಬಿ)ಶ್ರೀ.ಎಸ್. ಕ್ರಿಸ್ಟೋಫರ್
 (ಸಿ)ಶ್ರೀ ಜಿ. ಸತೀಶ್ ರೆಡ್ಡಿ
 (ಡಿ)ಶ್ರೀ ವಿ.ಕೆ. ಸಾರಸ್ವತ್
CORRECT ANSWER

(ಸಿ) ಶ್ರೀ ಜಿ. ಸತೀಶ್ ರೆಡ್ಡಿ


51.ಈ ಕೆಳಗಿನ ಯಾವ ಪರಿಸ್ಥಿತಿಗಳಲ್ಲಿ ರಾಸಾಯನಿಕ ಕ್ರಿಯೆಯು ಸಂಭವಿಸುವುದಿಲ್ಲ?
 (ಎ)ಸಾಮಾನ್ಯ ಲವಣವು ಗಾಳಿಗೆ ಅನಾವರಿಸಲ್ಪಟ್ಟಾಗ
 (ಬಿ)ಗಾಳಿಯಲ್ಲಿ ಕಲ್ಲಿದ್ದಲನ್ನು ಸುಡುವಾಗ
 (ಸಿ)ಸೋಡಿಯಮ್ ನ್ನು ನೀರಿನಲ್ಲಿ ಇರಿಸಿದಾಗ
 (ಡಿ)ಕಬ್ಬಿಣವನ್ನು ತೇವಾಂಶವಿರುವ ಗಾಳಿಯಲ್ಲಿ ಇರಿಸಿದಾಗ
CORRECT ANSWER

(ಎ) ಸಾಮಾನ್ಯ ಲವಣವು ಗಾಳಿಗೆ ಅನಾವರಿಸಲ್ಪಟ್ಟಾಗ


ನಿರ್ದೇಶನ (52-54) : ಕೆಳಗೆ ನೀಡಲ್ಪಟ್ಟ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೇಳಲ್ಪಟ್ಟ ಪ್ರಶ್ನೆಗಳನ್ನು ಉತ್ತರಿಸಿ :

  D ಬಿಂದು A ಬಿಂದುವಿನ ಪಶ್ಚಿಮ ದಿಕ್ಕಿನಲ್ಲಿ 14 ಮೀಟರ್ ದೂರದಲ್ಲಿದೆ.
  B ಬಿಂದು D ಬಿಂದುವಿನ ದಕ್ಷಿಣದಲ್ಲಿ 4 ಮೀಟರ್ ದೂರದಲ್ಲಿದೆ.
  F ಬಿಂದು D ಬಿಂದುವಿನ ದಕ್ಷಿಣದಲ್ಲಿ 9 ಮೀಟರ್ ದೂರದಲ್ಲಿದೆ.
  E ಬಿಂದು B ಬಿಂದುವಿನ ಪೂರ್ವಕ್ಕೆ 7 ಮೀಟರ್ ದೂರದಲ್ಲಿದೆ.
  C ಬಿಂದು E ಬಿಂದುವಿನ ಉತ್ತರದಲ್ಲಿ 4 ಮೀಟರ್ ದೂರದಲ್ಲಿದೆ.
  G ಬಿಂದು A ಬಿಂದುವಿನ ದಕ್ಷಿಣದಲ್ಲಿ 4 ಮೀಟರ್ ದೂರದಲ್ಲಿದೆ.
52.ಈ ಕೆಳಗಿನವುಗಳಲ್ಲಿ ಯಾವ ಬಿಂದುಗಳು ನೇರ ರೇಖೆಯಲ್ಲಿದೆ?
 (ಎ)D, E, A
 (ಬಿ)E, G, C
 (ಸಿ)D, B, G
 (ಡಿ)E, G, B
CORRECT ANSWER

(ಡಿ) E, G, B


53.C ಬಿಂದುವಿಗೆ ಸಂಬಂಧಪಟ್ಟಂತೆ A ಬಿಂದು ಯಾವ ದಿಕ್ಕಿನಲ್ಲಿದೆ?
 (ಎ)ಪೂರ್ವ
 (ಬಿ)ಪಶ್ಚಿಮ
 (ಸಿ)ಉತ್ತರ
 (ಡಿ)ದಕ್ಷಿಣ
CORRECT ANSWER

(ಎ) ಪೂರ್ವ


54.F ಬಿಂದುವಿನ ಕಡೆಗೆ ಉತ್ತರ ದಿಕ್ಕಿನಲ್ಲಿ ಒಬ್ಬ ವ್ಯಕ್ತಿಯು 5 ಮೀಟರ್ ಚಲಿಸಿ ಬಲಕ್ಕೆ ತಿರುಗುತ್ತಾನೆ. ಈ ಕೆಳಗಿನವುಗಳಲ್ಲಿ ಯಾವ ಬಿಂದುವನ್ನು ಅವನು ಮೊದಲಿಗೆ ತಲುಪುತ್ತಾನೆ?
 (ಎ)G
 (ಬಿ)D
 (ಸಿ) E
 (ಡಿ)A
CORRECT ANSWER

(ಸಿ) E


55.ಗೀತಾಳ ಸ್ಕೂಟರ್ ನಲ್ಲಿ ಟ್ಯಾಂಕ್ ಭರ್ತಿಯಿರುವ ಪೆಟ್ರೋಲ್ 10 ದಿನಗಳಿಗೆ ಸಾಕಾಗುತ್ತದೆ. ಅವಳು ಪ್ರತಿ ದಿನ 25% ನಷ್ಟು ಹೆಚ್ಚು ಉಪಯೋಗಿಸಲಾರಂಭಿಸಿದರೆ ಟ್ಯಾಂಕ್ ಪೂರ್ತಿಯಿರುವ ಪೆಟ್ರೋಲ್ ಎಷ್ಟು ದಿನಗಳಿಗೆ ಸಾಕಾಗುತ್ತದೆ?
 (ಎ)5
 (ಬಿ)6
 (ಸಿ)7
 (ಡಿ)8
CORRECT ANSWER

(ಡಿ) 8


56.ಭಾರತದ ಸಂವಿಧಾನದ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ವಿವಾದಗಳನ್ನು ಈ ಮೂಲಕ ಬಗೆಹರಿಸಲು ಅಧಿಕಾರ ಕೊಟ್ಟಿದೆ.
 (ಎ)ಮೇಲ್ಮನವಿಯ ನ್ಯಾಯವ್ಯಾಪ್ತಿ
 (ಬಿ)ಮೂಲ ನ್ಯಾಯಾಧಿಕಾರ
 (ಸಿ)ಸಲಹಾ ನ್ಯಾಯಾಧಿಕಾರ
 (ಡಿ)ರಿಟ್ ನ್ಯಾಯಾಧಿಕಾರ
CORRECT ANSWER

(ಬಿ) ಮೂಲ ನ್ಯಾಯಾಧಿಕಾರ


57.ಗಡಿ ನಿರ್ವಹಣಾ ಇಲಾಖೆಯು ಯಾವ ಕೇಂದ್ರ ಸಚಿವಾಲಯದಡಿ ಬರುತ್ತದೆ?
 (ಎ)ರಕ್ಷಣಾ ಸಚಿವಾಲಯ
 (ಬಿ)ಗೃಹ ಸಚಿವಾಲಯ
 (ಸಿ)ವಿದೇಶಾಂಗ ವ್ಯವಹಾರಗಳ ಸಚಿವಾಲಯ
 (ಡಿ)ವಾಣಿಜ್ಯ ಸಚಿವಾಲಯ
CORRECT ANSWER

(ಬಿ) ಗೃಹ ಸಚಿವಾಲಯ


58.ಇವುಗಳಲ್ಲಿ ಯಾವ / ಯಾರ ಚುನಾವಣೆಗೆ ಭಾರತದ ಚುನಾವಣಾ ಆಯೋಗ ಸಂಬಂಧಪಟ್ಟಿಲ್ಲ?
 (ಎ)ಸಂಸತ್ತು
 (ಬಿ)ಉಪರಾಷ್ಟ್ರಪತಿ
 (ಸಿ)ರಾಜ್ಯ ಶಾಸಕಾಂಗ
 (ಡಿ)ಪಂಚಾಯತ್ ಗಳು ಮತ್ತು ನಗರಸಭೆಗಳು
CORRECT ANSWER

(ಡಿ) ಪಂಚಾಯತ್ ಗಳು ಮತ್ತು ನಗರಸಭೆಗಳು


59.ಈ ರಿಟ್ ಗಳಲ್ಲಿ ಯಾವುದು ಅಕ್ಷರಶಃ ‘ಱನಾವು ಆದೇಶಿಸುತ್ತೇವೆ’’ ಎಂದು ಅರ್ಥ ಕೊಡುತ್ತದೆ?
 (ಎ)ಬಂಧೀ ಪ್ರತ್ಯಕ್ಷೀಕರಣ
 (ಬಿ)ಪರಮಾದೇಶ
 (ಸಿ)ಕೋ-ವಾರಂಟ್
 (ಡಿ)ಸರ್ಟಿಯೊರರಿ
CORRECT ANSWER

(ಬಿ) ಪರಮಾದೇಶ


ನಿರ್ದೇಶನ (60-61) : ಇಲ್ಲಿ ನೀಡಲ್ಪಟ್ಟ 3 ಅಕ್ಷರಗಳ 5 ಪದಗಳನ್ನು ಕೆಳಗಿನ ಪ್ರಶ್ನೆಗಳು ಆಧರಿಸಿರುತ್ತವೆ :

TUBHUBMUGPARFOR
60.ಮೇಲಿನ ಎಲ್ಲಾ ಪದಗಳ ಮೊದಲ ಮತ್ತು ಎರಡನೆಯ ಅಕ್ಷರಗಳನ್ನು ಪರಸ್ಪರ ಅದಲುಬದಲು ಮಾಡುವುದರಿಂದ ಇಂಗ್ಲೀಷ್ ಭಾಷೆಯ ಎಷ್ಟು ಅರ್ಥಬದ್ಧವಾದ ಪದಗಳನ್ನು ರಚಿಸಬಹುದು?
 (ಎ)ಯಾವುದೂ ಸಾಧ್ಯವಿಲ್ಲ
 (ಬಿ)ಮೂರು
 (ಸಿ)ಒಂದು
 (ಡಿ)ಎರಡು
CORRECT ANSWER

(ಎ) ಯಾವುದೂ ಸಾಧ್ಯವಿಲ್ಲ


61.ಮೇಲಿನ ಎಲ್ಲಾ ಪದಗಳ ಅಕ್ಷರಗಳನ್ನು ಅಕ್ಷರಾದಿ ಕ್ರಮದಲ್ಲಿ (ಆಯಾ ಪದಗಳೊಳಗೆ) ಜೋಡಿಸಿದರೆ, ಎಷ್ಟು ಪದಗಳು ಬದಲಾಗದೇ ಉಳಿಯುತ್ತದೆ?
 (ಎ)ಎರಡು
 (ಬಿ)ಮೂರು
 (ಸಿ)ಒಂದು
 (ಡಿ)ಯಾವುದೂ ಉಳಿಯುವುದಿಲ್ಲ
CORRECT ANSWER

(ಸಿ) ಒಂದು


62.1857ರಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?
 (ಎ)ಲಾರ್ಡ್ ಡಾಲ್ ಹೌಸೀ
 (ಬಿ)ಲಾರ್ಡ್ ಕ್ಯಾನಿಂಗ್
 (ಸಿ)ಲಾರ್ಡ್ ಹಾರ್ಡಿಂಗ್
 (ಡಿ)ಲಾರ್ಡ್ ಲಿಟ್ಟನ್
CORRECT ANSWER

(ಬಿ) ಲಾರ್ಡ್ ಕ್ಯಾನಿಂಗ್


63.ಸಂಗಮ್ ಸಾಹಿತ್ಯವು ___________ ಆಗಿದೆ.
 (ಎ)ಗುಪ್ತ ಸಾಮ್ರಾಜ್ಯದವರು ಪ್ರೋತ್ಸಾಹಿಸಿದ ಶಾಸೀಯ ಸಂಸ್ಕೃತ ಸಾಹಿತ್ಯ
 (ಬಿ)ಬೌದ್ಧ ಸಂಘಗಳ ಇತಿಹಾಸಕ್ಕೆ ಸಂಬಂಧಪಟ್ಟ ಪಾಲಿ ಸಾಹಿತ್ಯ
 (ಸಿ)ದಕ್ಷಿಣ ಭಾರತದ ಪ್ರಾಚೀನ ಇತಿಹಾಸದ ಗುಣಲಕ್ಷಣಗಳನ್ನು ಹೇಳುವ ಮುಂಚಿನ ತಮಿಳು ಸಾಹಿತ್ಯ
 (ಡಿ)ಪ್ರಯಾಗದಲ್ಲಿನ ನದಿಗಳ ಸಂಗಮದ ಪ್ರದೇಶದ ಪವಿತ್ರತೆಗೆ ಸಂಬಂಧಿಸಿದ ಪೌರಾಣಿಕ ಸ್ವರೂಪವುಳ್ಳ ಸಂಸ್ಕೃತ ಕೃತಿಗಳು
CORRECT ANSWER

(ಸಿ) ದಕ್ಷಿಣ ಭಾರತದ ಪ್ರಾಚೀನ ಇತಿಹಾಸದ ಗುಣಲಕ್ಷಣಗಳನ್ನು ಹೇಳುವ ಮುಂಚಿನ ತಮಿಳು ಸಾಹಿತ್ಯ


64.ಬರ್ದೋಲಿ ಸತ್ಯಾಗ್ರಹದ (1928) ನಾಯಕ ಯಾರಾಗಿದ್ದರು?
 (ಎ)ವಲ್ಲಭಭಾಯಿ ಪಟೇಲ್
 (ಬಿ)ಮಹಾತ್ಮಗಾಂಧಿ
 (ಸಿ)ವಿಟ್ಠಲಭಾಯಿ ಪಟೇಲ್
 (ಡಿ)ಮಹದೇವ್ ದೇಸಾಯಿ
CORRECT ANSWER

(ಎ) ವಲ್ಲಭಭಾಯಿ ಪಟೇಲ್


65.ಅಜಂತಾ ಗುಹೆಗಳು ಎಲ್ಲಿವೆ?
 (ಎ)ಗುಜರಾತ್
 (ಬಿ)ಮಹಾರಾಷ್ಟ್ರ
 (ಸಿ)ಕರ್ನಾಟಕ
 (ಡಿ)ಒಡಿಶಾ
CORRECT ANSWER

(ಬಿ) ಮಹಾರಾಷ್ಟ್ರ


66.‘ವಿಟಮಿನ್ ಡಿ’ ಕೊರತೆ ಇದರ ಹೀರಿಕೊಳ್ಳುವಿಕೆಯ ಕೊರತೆಗೆ ದಾರಿ ಮಾಡಿಕೊಡುತ್ತದೆ.
 (ಎ)ಅಯೋಡಿನ್
 (ಬಿ)ಫಾಸ್ಫರಸ್
 (ಸಿ)ಕ್ಯಾಲ್ಸಿಯಂ
 (ಡಿ)ಕಬ್ಬಿಣಾಂಶ (Iron)
CORRECT ANSWER

(ಸಿ) ಕ್ಯಾಲ್ಸಿಯಂ


67.ಒಬ್ಬವ್ಯಕ್ತಿ 50 ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತಾನೆ. ಅವನು 4 ಕಿ.ಮೀ./ ಗಂಟೆಯಂತೆ ನಡೆದುಕೊಂಡು ಒಂದಿಷ್ಟು ದೂರ ಹೋಗುತ್ತಾನೆ ಮತ್ತು 10 ಕಿ.ಮೀ/ ಗಂಟೆಯಂತೆ ಉಳಿದ ದೂರವನ್ನು ಬೈಸಿಕಲ್ ನಲ್ಲಿ ಕ್ರಮಿಸುತ್ತಾನೆ. ಅವನು ನಡೆದುಕೊಂಡು ಸಾಗಿದ ದೂರವೆಷ್ಟು?
 (ಎ)10 ಕಿ.ಮೀ
 (ಬಿ)20 ಕಿ.ಮೀ
 (ಸಿ)30 ಕಿ.ಮೀ
 (ಡಿ)40 ಕಿ.ಮೀ
CORRECT ANSWER

(ಬಿ) 20 ಕಿ.ಮೀ


68.ಸಭೆಯೊಂದರಲ್ಲಿ ಗ್ರಾಮದ ನಕ್ಷೆಯನ್ನು ಆಗ್ನೇಯ ದಿಕ್ಕು ಉತ್ತರವಾಗುವಂತೆ ಮತ್ತು ಈಶಾನ್ಯವು ಪಶ್ಚಿಮ ದಿಕ್ಕಾಗುವಂತೆ ಇರಿಸಲಾಗಿದೆ. ಹಾಗಾದರೆ ದಕ್ಷಿಣ ಯಾವ ದಿಕ್ಕಾಗುತ್ತದೆ?
 (ಎ)ಉತ್ತರ
 (ಬಿ)ಈಶಾನ್ಯ
 (ಸಿ)ವಾಯುವ್ಯ
 (ಡಿ)ಪಶ್ಚಿಮ
CORRECT ANSWER

(ಬಿ) ಈಶಾನ್ಯ


69.ಎರಡು ಮೇಕೆಗಳನ್ನು ಒಂದೇ ಬೆಲೆಯಲ್ಲಿ ಮಾರಿದಾಗ ಕಿರಣ್ ಒಂದು ಮೇಕೆಗೆ 10% ಲಾಭ ಪಡೆದರೆ ಇನ್ನೊೊಂದರ ಮೇಲೆ 10% ನಷ್ಟ ಅನುಭವಿಸುತ್ತಾನೆ ಆಗ
 (ಎ)ಅವನಿಗೆ ಲಾಭವೂ ಇಲ್ಲ ಮತ್ತು ನಷ್ಟವೂ ಇಲ್ಲ
 (ಬಿ)ಅವನು 1% ಲಾಭ ಪಡೆಯುತ್ತಾನೆ.
 (ಸಿ)ಅವನು 1% ನಷ್ಟ ಅನುಭವಿಸುತ್ತಾನೆ.
 (ಡಿ)ಅವನು 2% ನಷ್ಟ ಅನುಭವಿಸುತ್ತಾನೆ.
CORRECT ANSWER

(ಸಿ) ಅವನು 1% ನಷ್ಟ ಅನುಭವಿಸುತ್ತಾನೆ.


70.ರಮ್ಯ ರಶ್ಮಿಗಿಂತ ಅಂದವಾಗಿದ್ದಾಳೆ. ಆದರೆ ರೇಖಾಳಷ್ಟು ಅಂದವಾಗಿಲ್ಲ, ಹಾಗಾದರೆ
 (ಎ)ರಶ್ಮಿ ರಮ್ಯಳಷ್ಟು ಅಂದವಾಗಿಲ್ಲ
 (ಬಿ)ರಶ್ಮಿ ರೇಖಾಳಿಗಿಂತ ಅಂದವಾಗಿದ್ದಾಳೆ
 (ಸಿ)ರೇಖಾ ರಮ್ಯಳಷ್ಟು ಅಂದವಾಗಿಲ್ಲ
 (ಡಿ)ರಮ್ಯ ರೇಖಾಳಿಗಿಂತ ಅಂದವಾಗಿದ್ದಾಳೆ
CORRECT ANSWER

(ಎ) ರಶ್ಮಿ ರಮ್ಯಳಷ್ಟು ಅಂದವಾಗಿಲ್ಲ


71.ಅರ್ಥಶಾಸದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ಯಾರು?
 (ಎ)ಡಿ. ಸುಬ್ಬರಾವ್
 (ಬಿ)ಸಿ.ವಿ.ರಾಮನ್
 (ಸಿ)ರಘುರಾಮ್ ರಾಜನ್
 (ಡಿ)ಅಮಾರ್ತ್ಯ ಸೇನ್
CORRECT ANSWER

(ಡಿ) ಅಮಾರ್ತ್ಯ ಸೇನ್


72.ಈ ಕೆಳಗಿನ ಸಂಸ್ಥೆಗಳಲ್ಲಿ ಭಾರತದಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ (ಕ್ಯಾಪಿಟಲ್ ಮಾರ್ಕೆಟ್ ರೆಗ್ಯುಲೇಟರ್ ಇನ್ ಇಂಡಿಯಾ) ಎಂದು ಯಾವುದನ್ನು ಕರೆಯುತ್ತಾರೆ?
 (ಎ)IBA
 (ಬಿ)SEBI
 (ಸಿ)RBI
 (ಡಿ)NSDL
CORRECT ANSWER

(ಬಿ) SEBI


73.ಯಾವ ದೇಶವು G-20 ಸಮೂಹದ ಸದಸ್ಯವಾಗಿಲ್ಲ?
 (ಎ)ಭಾರತ
 (ಬಿ)ಇಂಡೋನೇಶಿಯಾ
 (ಸಿ)ಥೈಲ್ಯಾಂಡ್
 (ಡಿ)ಸೌದಿ ಅರೇಬಿಯಾ
CORRECT ANSWER

(ಸಿ) ಥೈಲ್ಯಾಂಡ್


74.ASEAN ನಲ್ಲಿನ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
 (ಎ)12
 (ಬಿ)10
 (ಸಿ)8
 (ಡಿ)15
CORRECT ANSWER

(ಬಿ) 10


75.ಈ ಕೆಳಗಿನವುಗಳಲ್ಲಿ ಯಾವುದು ಅರ್ಥಶಾಸದ ಆರ್ಥಿಕ ಚಟುವಟಿಕೆ ಆಗಿರುವುದಿಲ್ಲ?
 (ಎ)ಒಬ್ಬ ಶಿಕ್ಷಕನು ತನ್ನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವುದು.
 (ಬಿ)ಒಂದು ಕೋಚಿಂಗ್ ಸಂಸ್ಥೆಯಲ್ಲಿ ಶಿಕ್ಷಕನು ವಿದ್ಯಾರ್ಥಿಗಳಿಗೆ ಪಾಠ ಹೇಳುವುದು
 (ಸಿ)ಒಬ್ಬ ಶಿಕ್ಷಕನು ತನ್ನ ಮನೆಯಲ್ಲಿ ತನ್ನ ಮಗಳಿಗೆ ಪಾಠ ಹೇಳುವುದು
 (ಡಿ)ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಒಬ್ಬ ಶಿಕ್ಷಕನು ವಿದ್ಯಾರ್ಥಿಗಳಿಗೆ ಪಾಠ ಹೇಳುವುದು
CORRECT ANSWER

(ಸಿ) ಒಬ್ಬ ಶಿಕ್ಷಕನು ತನ್ನ ಮನೆಯಲ್ಲಿ ತನ್ನ ಮಗಳಿಗೆ ಪಾಠ ಹೇಳುವುದು


76.ಕೆಳಗಿನವುಗಳಲ್ಲಿ ಯಾವ ಎರಡು ಜಿಲ್ಲೆಗಳ ಜೊತೆ ಕರ್ನಾಟಕದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಸರಿಯಾದ ನೆಲೆಯನ್ನು ತೋರಿಸುತ್ತದೆ?
 (ಎ)ರಾಯಚೂರು ಮತ್ತು ಉಡುಪಿ
 (ಬಿ)ಉಡುಪಿ ಮತ್ತು ಮಂಡ್ಯ
 (ಸಿ)ಉಡುಪಿ ಮತ್ತು ಶಿವಮೊಗ್ಗ
 (ಡಿ)ರಾಯಚೂರು ಮತ್ತು ಶಿವಮೊಗ್ಗ
CORRECT ANSWER

(ಎ) ರಾಯಚೂರು ಮತ್ತು ಉಡುಪಿ


77.ಇಳಕಲ್ ಸೀರೆಗಳಿಗಾಗಿ ಪ್ರಸಿದ್ಧಿ ಪಡೆದ ಇಳಕಲ್
 (ಎ)ಬಿಜಾಪುರ
 (ಬಿ)ಬಾಗಲಕೋಟೆ
 (ಸಿ)ಗದಗ
 (ಡಿ)ದಾವಣಗೆರೆ
CORRECT ANSWER

(ಬಿ) ಬಾಗಲಕೋಟೆ


78.ವಿದ್ಯುತ್ ಬಲ್ಬ್ನ ತಂತು (ಫಿಲಮೆಂಟ್) ಇದರಿಂದ ತಯಾರಿಸಲ್ಪಡುತ್ತದೆ.
 (ಎ)ಮ್ಯಾಗ್ನೇಶಿಯಂ
 (ಬಿ)ತಾಮ್ರ
 (ಸಿ)ಸೀಸ
 (ಡಿ)ಟಂಗ್ ಸ್ಟನ್
CORRECT ANSWER

(ಡಿ) ಟಂಗ್ ಸ್ಟನ್


79.ಇವುಗಳಲ್ಲಿ ಯಾವುದು ಬಿಟಿ ಹತ್ತಿಯನ್ನು ಅತ್ಯುತ್ತಮವಾಗಿ ವಿವರಿಸುತ್ತದೆ?
 (ಎ)ಕೀಟನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವ ಅಗತ್ಯವಿದೆ.
 (ಬಿ)ಭಾರತದಲ್ಲಿ 2002ರಿಂದ ನಿಷೇಧಿಸಲ್ಪಟ್ಟಿದೆ
 (ಸಿ)ಕೀಟನಾಶಕ ಉತ್ಪಾದಿಸಲು ತಳೀಯವಾಗಿ ಬದಲಾಯಿಸಲಾಗಿದೆ.
 (ಡಿ)ವೈರಸ್ ತಳಿಗಳನ್ನು ಉಪಯೋಗಿಸಿ ತಳಿ ಬದಲಾವಣೆ ಮಾಡಲಾಗಿದೆ.
CORRECT ANSWER

(ಸಿ) ಕೀಟನಾಶಕ ಉತ್ಪಾದಿಸಲು ತಳೀಯವಾಗಿ ಬದಲಾಯಿಸಲಾಗಿದೆ.


80.ಸಂದುಗಳಲ್ಲಿ ಶೇಖರಣೆಗೊಳ್ಳುವುದರಿಂದ ಗೌಟ್ (ಸಂಧಿವಾತ) ಕಾಯಿಲೆ ಬರುತ್ತದೆ.
 (ಎ)ಲ್ಯಾಕ್ಟಿಕ್ ಆ್ಯಸಿಡ್
 (ಬಿ)ಆಕ್ಸಾಲಿಕ್ ಆಮ್ಲ
 (ಸಿ)ಅಸೆಟಿಕ್ ಆಮ್ಲ
 (ಡಿ)ಯೂರಿಕ್ ಆಮ್ಲ
CORRECT ANSWER

(ಡಿ) ಯೂರಿಕ್ ಆಮ್ಲ


81.1946ರಲ್ಲಿ ಭಾರತಕ್ಕೆ ಆಗಮಿಸಿದ ಕ್ಯಾಬಿನೆಟ್ ಮಿಶನ್ ಯಾರ ಮುಂದಾಳತ್ವದಲ್ಲಿತ್ತು?
 (ಎ)ಲಾರ್ಡ್ ಪೆಥಿಕ್ ಲಾರೆನ್ಸ್
 (ಬಿ)ಸರ್ ಸ್ಟಫಾರ್ಡ್ ಕ್ರಿಪ್ಸ್
 (ಸಿ)ಎ.ವಿ. ಅಲೆಕ್ಸಾಂಡರ್
 (ಡಿ)ಲಾರ್ಡ್ ಎಟ್ಲೀ
CORRECT ANSWER

(ಎ) ಲಾರ್ಡ್ ಪೆಥಿಕ್ ಲಾರೆನ್ಸ್


82.ಗ್ರಾಂಡ್ ಟ್ರಂಕ್ ರಸ್ತೆಯನ್ನು ಯಾವ ಅಧಿಕಾರಿಯ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿತು?
 (ಎ)ಶೇರ್ ಶಾಹ್ ಸೂರಿ
 (ಬಿ)ಬಾಬರ್
 (ಸಿ)ಶಾಹ್ ಜಹಾನ್
 (ಡಿ)ಅಕ್ಬರ್
CORRECT ANSWER

(ಎ) ಶೇರ್ ಶಾಹ್ ಸೂರಿ


83.ಮರಾಠಾ ಸಾಮ್ರಾಜ್ಯದಲ್ಲಿ ಮಂತ್ರಿ ಮಂಡಲದಲ್ಲಿ ಪ್ರಧಾನಮಂತ್ರಿಯನ್ನು ಏನೆಂದು ಕರೆಯುತ್ತಿದ್ದರು?
 (ಎ)ಪೇಶ್ವಾ
 (ಬಿ)ಸಚಿವ
 (ಸಿ)ಮಂತ್ರಿ
 (ಡಿ)ಸಮಂತ
CORRECT ANSWER

(ಎ) ಪೇಶ್ವಾ


84.ನಾಣ್ಯಪದ್ಧತಿಯ ಅಪಮೌಲ್ಯೀಕರಣ ಎಂದರೆ
 (ಎ)ಅಂತರರಾಷ್ಟ್ರೀಯ ನಾಣ್ಯಪದ್ಧತಿಗಳ ಬೃಹತ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಾಣ್ಯದ ಬೆಲೆಯಲ್ಲಿ ಇಳಿಕೆ
 (ಬಿ)ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಾಣ್ಯಕ್ಕೆ ತನ್ನ ಮೌಲ್ಯವನ್ನು ಪಡೆದುಕೊಳ್ಳಲು ಅನುಮತಿ ನೀಡುವುದು
 (ಸಿ)ಪೂರ್ವ ನಿರ್ಧಾರಿತ ನಾಣ್ಯಗಳ ಬುಟ್ಟಿಯ ಬೆಲೆಯೊಂದಿಗೆ ನಾಣ್ಯದ ಮೌಲ್ಯವನ್ನು ಸಂಯೋಜಿಸುವುದು
 (ಡಿ)ಐ.ಎಮ್.ಎಫ್. ವರ್ಲ್ಡ್ ಬ್ಯಾಂಕ್ ಮತ್ತು ವ್ಯಾಪಾರದ ಬೃಹತ್ ಪಾಲುದಾರರೊಂದಿಗೆ ಹಲವು ದಿಕ್ಕಿನ ಸಮಾಲೋಚನೆಯಿಂದ ನಾಣ್ಯದ ಮೌಲ್ಯವನ್ನು ನಿಗದಿಸುವುದು
CORRECT ANSWER

(ಎ) ಅಂತರರಾಷ್ಟ್ರೀಯ ನಾಣ್ಯಪದ್ಧತಿಗಳ ಬೃಹತ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಾಣ್ಯದ ಬೆಲೆಯಲ್ಲಿ ಇಳಿಕೆ


85.ಭಾರತದಲ್ಲಿ ಕೇಂದ್ರ ಬ್ಯಾಂಕಿಂಗ್ ಕಾರ್ಯಗಳನ್ನು ನಿರ್ವಹಿಸುವ ಬ್ಯಾಂಕ್ ಯಾವುದು?
 I.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
 II.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
 III.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
 IV.ಪಂಜಾಬ್ ನ್ಯಾಶನಲ್ ಬ್ಯಾಂಕ್
 (ಎ)I, II
 (ಬಿ)II
 (ಸಿ)I
 (ಡಿ)II, III
CORRECT ANSWER

(ಬಿ) II


86.ಕರ್ನಾಟಕದ ಮೊದಲ ಜಲವಿದ್ಯುತ್ ಸ್ಥಾವರ ಯಾವ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ?
 (ಎ)ಶಿವನಸಮುದ್ರದ ಬಳಿ ಕಾವೇರಿ
 (ಬಿ)ಕೃಷ್ಣ ರಾಜಸಾಗರದ ಬಳಿ ಕಾವೇರಿ
 (ಸಿ)ಗೇರುಸೊಪ್ಪ ಬಳಿ ಶರಾವತಿ
 (ಡಿ)ಹೊಸಪೇಟೆಯ ಹತ್ತಿರ ತುಂಗಾಭದ್ರಾ
CORRECT ANSWER

(ಎ) ಶಿವನಸಮುದ್ರದ ಬಳಿ ಕಾವೇರಿ


87.ಇವುಗಳಲ್ಲಿ ಯಾವುದು ಕರ್ನಾಟಕದಲ್ಲಿನ ವಿದ್ಯುತ್ ಪೂರೈಕೆ ಕಂಪೆನಿ (ಸಂಸ್ಥೆ) ಯಲ್ಲ?
 (ಎ)ಟೆಸ್ಕಾಂ (TESCOM)
 (ಬಿ)ಸೆಸ್ಕಾಂ (CESCOM)
 (ಸಿ)ಹೆಸ್ಕಾಂ (HESCOM)
 (ಡಿ)ಗೆಸ್ಕಾಂ (GESCOM)
CORRECT ANSWER

(ಎ) ಟೆಸ್ಕಾಂ (TESCOM)


88.ಇವುಗಳಲ್ಲಿ ಯಾವುದು ಕರ್ನಾಟಕದ ಪೂರ್ವಾಭಿಮುಖವಾಗಿ ಹರಿಯುವ ನದಿಯಲ್ಲ?
 (ಎ)ಕಾವೇರಿ
 (ಬಿ)ತುಂಗಭದ್ರಾ
 (ಸಿ)ಶರಾವತಿ
 (ಡಿ)ಭೀಮಾ
CORRECT ANSWER

(ಸಿ) ಶರಾವತಿ


89.ಕರ್ನಾಟಕದ ಅತ್ಯಂತ ಎತ್ತರದ ಶಿಖರ ಇದಾಗಿದೆ
 (ಎ)ಮುಳ್ಳಯ್ಯನ ಗಿರಿ
 (ಬಿ)ಕೊಡಚಾದ್ರಿ
 (ಸಿ)ಕೆಮ್ಮಣ್ಣುಗುಂಡಿ
 (ಡಿ)ಕುದುರೆಮುಖ
CORRECT ANSWER

(ಎ) ಮುಳ್ಳಯ್ಯನ ಗಿರಿ


90.ಕರ್ನಾಟಕ ರಾಜ್ಯಕ್ಕೆ ಸಂಬಂದಪಟ್ಟಂತೆ ಇವುಗಳನ್ನು ಹೊಂದಿಸಿ:
 A.ಗೋಕಾಕ್ ಜಲಪಾತ1.ಮಂಡ್ಯ
 B.ಅಬ್ಬಿ ಜಲಪಾತ2.ಶಿವಮೊಗ್ಗ
 C.ಗೇರುಸೊಪ್ಪ ಜಲಪಾತ3.ಬೆಳಗಾವಿ
 D.ಭರಚುಕ್ಕಿ ಜಲಪಾತ4.ಕೊಡಗು
 (ಎ)A-2,B-3,C-1,D-4
 (ಬಿ)A-3,B-1,C-4,D-2
 (ಸಿ)A-3,B-4,C-2,D-1
 (ಡಿ)A-2,B-4,C-1,D-3
CORRECT ANSWER

(ಸಿ) A-3, B-4, C-2, D-1


91.ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸಲ್ಪಟ್ಟ ಪರಮಾಣು ವಿದ್ಯುತ್ ಕೇಂದ್ರ ಯಾವುದು?
 (ಎ)ಕಲ್ಪಕ್ಕಮ್
 (ಬಿ)ನರೋರ
 (ಸಿ)ರಾವತ್ ಭಟ
 (ಡಿ)ತಾರಾಪೊರ್
CORRECT ANSWER

(ಎ) ಕಲ್ಪಕ್ಕಮ್


92.ಈ ಕೆಳಗಿನ ನದಿಗಳಲ್ಲಿ ಮೇಲ್ಮೈನ ಒಳಚರಂಡಿ ವ್ಯವಸ್ಥೆಯ ಉದಾಹರಣೆ ಯಾವುದು?
 (ಎ)ಬಾನಸ್
 (ಬಿ)ಚಂಬಾಲ್
 (ಸಿ)ಸರಸ್ವತಿ
 (ಡಿ)ಗೋಮ್ತಿ
CORRECT ANSWER

(ಎ) ಬಾನಸ್ or (ಬಿ) ಚಂಬಾಲ್


93.ಭಾರತದ ಕೇಂದ್ರಾಡಳಿತದ ಪ್ರದೇಶಗಳಲ್ಲಿ ಅತಿ ಹೆಚ್ಚು ಚದುರ ಅಡಿವುಳ್ಳದ್ದು ಈ ಕೆಳಗಿನವುಗಳಲ್ಲಿ ಯಾವುದು?
 (ಎ)ದೆಹಲಿ
 (ಬಿ)ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು
 (ಸಿ)ದಾದ್ರ ಮತ್ತು ನಗರ್ ಹವೇಲಿ
 (ಡಿ)ಚಂಡೀಗಢ
CORRECT ANSWER

(ಬಿ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು


94.‘ಮುಲ್ಲಪೆರಿಯಾರ್ ಅಣೆಕಟ್ಟು’ ಯಾವ ಎರಡು ರಾಜ್ಯಗಳ ನಡುವಿನ ದೀರ್ಘಕಾಲದಿಂದ ಬಾಕಿಯಾಗಿ ಉಳಿದ ವಿಷಯವಾಗಿದೆ?
 (ಎ)ಕರ್ನಾಟಕ ಮತ್ತು ಕೇರಳ
 (ಬಿ)ಆಂಧ್ರಪ್ರದೇಶ ಮತ್ತು ತಮಿಳುನಾಡು
 (ಸಿ)ಕರ್ನಾಟಕ ಮತ್ತು ತಮಿಳುನಾಡು
 (ಡಿ)ತಮಿಳುನಾಡು ಮತ್ತು ಕೇರಳ
CORRECT ANSWER

ANS:(ಡಿ) ತಮಿಳುನಾಡು ಮತ್ತು ಕೇರಳ


95.ಲಾಲ್ ಬಕಿಯಾ, ಬಾಗ್ ಮತಿ ಮತ್ತು ಕಮ್ಲಾ ನದಿಗಳ ಉದ್ದಕ್ಕೂ ಒಡ್ಡು ಏರಿಕೆಯ / ಅಣೆಕಟ್ಟಿನ / (ಎಂಬ್ಯಾಂಕ್ ಮೆಂಟ್) ಸಬಲೀಕರಣ ಮತ್ತು ವಿಸ್ತೀರ್ಣತೆಯ ವಿಚಾರದಲ್ಲಿ ಭಾರತವು ಕೆಳಗಿನ ಯಾವ ನೆರೆಯ ದೇಶಕ್ಕೆ ಸಹಕಾರ ಒದಗಿಸುತ್ತಾ ಇದೆ?
 (ಎ)ಬಾಂಗ್ಲಾದೇಶ
 (ಬಿ)ನೇಪಾಳ
 (ಸಿ)ಪಾಕಿಸ್ತಾನ
 (ಡಿ)ಮ್ಯಾನ್ಮಾರ್
CORRECT ANSWER

(ಬಿ) ನೇಪಾಳ


96.1780-1784ರ ಮಂಗಳೂರು ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜವಲ್ಲ?
 (ಎ)ಈ ಒಪ್ಪಂದದೊಂದಿಗೆ ಎರಡನೆಯ ಆಂಗ್ಲೋ ಮೈಸೂರು ಯುದ್ಧ ಸಮಾಪ್ತಿಗೊಂಡಿತು.
 (ಬಿ)ಟಿಪ್ಪು ಸುಲ್ತಾನ ಮತ್ತು ಬ್ರಿಟಿಷರ ನಡುವಿನ ಒಪ್ಪಂದಕ್ಕೆ ಸಹಿ ಹಾಕಲಾಯಿತು.
 (ಸಿ)ಒಪ್ಪಂದದ ಪ್ರಕಾರ ಬ್ರಿಟಿಷರು ಮಲಬಾರ್ ಬಿಟ್ಟು ತೆರಳಿದರು ಮತ್ತು ಕಾರ್ನಾಟಿಕ್ ಮೇಲೆ ಮತ್ತೆ ಹಿಡಿತ ಸಾಧಿಸಿದರು.
 (ಡಿ)ಒಪ್ಪಂದ ಒಂದು ನೀತಿಯಾಗಿತ್ತು ಮತ್ತು ಬ್ರಿಟಿಷರಿಗೆ ಮಾನಸಿಕ ವಿಜಯವಾಗಿತ್ತು.
CORRECT ANSWER

(ಡಿ) ಒಪ್ಪಂದ ಒಂದು ನೀತಿಯಾಗಿತ್ತು ಮತ್ತು ಬ್ರಿಟಿಷರಿಗೆ ಮಾನಸಿಕ ವಿಜಯವಾಗಿತ್ತು.


97.ಈ ಕೆಳಗಿನವುಗಳಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನಿಗೆ ಸಂಬಂಧಪಟ್ಟಂತೆ ಯಾವುದು ಸರಿಯಾಗಿದೆ?
 (ಎ)ವಿಷ್ಣುವರ್ಧನ ಚೋಳರ ಗಂಗವಾಡಿ ಸಂಸ್ಥಾನವನ್ನು ವಶಪಡಿಸಿಕೊಂಡನು
 (ಬಿ)ವಿಷ್ಣುವರ್ಧನ ಮೂಲತಃ ಜೈನನಾಗಿದ್ದು ವೈಷ್ಣವ ಧರ್ಮಕ್ಕೆ ಪರಿವರ್ತಿತನಾದನು
 (ಸಿ)ವಿಷ್ಣುವರ್ಧನನು ಮೊದಲನೆಯ ನರಸಿಂಹ ದೊರೆಯ ಉತ್ತರಾಧಿಕಾರಿಯಾದನು
 (ಡಿ)ವಿಷ್ಣುವರ್ಧನ ಮೊದಲು ವೈಷ್ಣವನಾಗಿದ್ದು ಜೈನಧರ್ಮಕ್ಕೆ ಧರ್ಮಾಂತರಗೊಂಡನು
CORRECT ANSWER

(ಎ) ವಿಷ್ಣುವರ್ಧನ ಚೋಳರ ಗಂಗವಾಡಿ ಸಂಸ್ಥಾನವನ್ನು ವಶಪಡಿಸಿಕೊಂಡನು or (ಬಿ) ವಿಷ್ಣುವರ್ಧನ ಮೂಲತಃ ಜೈನನಾಗಿದ್ದು ವೈಷ್ಣವ ಧರ್ಮಕ್ಕೆ ಪರಿವರ್ತಿತನಾದನು


98.ಬೀದರ್ ನಲ್ಲಿ ಪ್ರಸಿದ್ಧವಾದ ಮದರಸಾ ಸ್ಥಾಪಿಸಿದವರು
 (ಎ)ಆಲಿ ಆದಿಲ್ ಷಾ
 (ಬಿ)ಮೊಹಮ್ಮದ್ ಗವಾನ್
 (ಸಿ)ಮೊಹಮ್ಮದ್ ಷಾ I
 (ಡಿ)ಅಲ್ಲಾವುದ್ದೀನ್ ಬಹಮನ್ ಷಾ
CORRECT ANSWER

(ಬಿ) ಮೊಹಮ್ಮದ್ ಗವಾನ್


99.ಯಾವ ಅರಸರ ಕಾಲದಲ್ಲಿ ಚೀನಾದ ಬೌದ್ಧ ಯಾತ್ರಿ ಹ್ಯುಯೆನ್ ತ್ಸಾಂಗ್ ಕರ್ನಾಟಕಕ್ಕೆ ಭೇಟಿ ನೀಡಿದನು?
 (ಎ)ಚಾಲ್ಯುಕರ ಸಾಮ್ರಾಜ್ಯದ ಎರಡನೆಯ ಪುಲಕೇಶಿ
 (ಬಿ)ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯ
 (ಸಿ)ಗುಪ್ತ ಸಾಮ್ರಾಜ್ಯದ ಎರಡನೆಯ ಚಂದ್ರಗುಪ್ತ
 (ಡಿ)ಗುಪ್ತ ಸಾಮ್ರಾಜ್ಯದ ಸಮುದ್ರಗುಪ್ತ
CORRECT ANSWER

(ಎ) ಚಾಲ್ಯುಕರ ಸಾಮ್ರಾಜ್ಯದ ಎರಡನೆಯ ಪುಲಕೇಶಿ


100.ಇವುಗಳಲ್ಲಿ ಯಾವ ರಾಷ್ಟ್ರೀಕೃತ ಬ್ಯಾಂಕ್ ಕರ್ನಾಟಕದಲ್ಲಿ ಆರಂಭಿಸಲ್ಪಟ್ಟಿದ್ದಲ್ಲ?
 (ಎ)ಸಿಂಡಿಕೇಟ್ ಬ್ಯಾಂಕ್
 (ಬಿ)ಇಂಡಿಯನ್ ಬ್ಯಾಂಕ್
 (ಸಿ)ವಿಜಯಾ ಬ್ಯಾಂಕ್
 (ಡಿ)ಕಾರ್ಪೊರೇಷನ್ ಬ್ಯಾಂಕ್
CORRECT ANSWER

(ಬಿ) ಇಂಡಿಯನ್ ಬ್ಯಾಂಕ್

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment