KPSC : ದ್ವಿತೀಯ ದರ್ಜೆ ಸಹಾಯಕ : ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆ
ಸೂಚನೆ: ಸೂಕ್ತ ಉತ್ತರವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 01-06)
1. | ಭರತೇಶ ವೈಭವವು ಎಂತಹ ಕಾವ್ಯ | |
(1) | ಶೃಂಗಾರ ಕಾವ್ಯ | |
(2) | ಹಾಸ್ಯ ಕಾವ್ಯ | |
(3) | ಸಾಂಗತ್ಯ ಕಾವ್ಯ | |
(4) | ಮಹಾ ಕಾವ್ಯ |
CORRECT ANSWER
(1) ಶೃಂಗಾರ ಕಾವ್ಯ
ಮತ್ತು
(3) ಸಾಂಗತ್ಯ ಕಾವ್ಯ
2. | ಭಾರತೀಯ ಕಾವ್ಯಮೀಮಾಂಸೆಗೆ ಬಂದ ಪ್ರಶಸ್ತಿ | |
(1) | ಜ್ಞಾನಪೀಠ ಪ್ರಶಸ್ತಿ | |
(2) | ಪಂಪ ಪ್ರಶಸ್ತಿ | |
(3) | ಕನ್ನಡ ಸಾಹಿತ್ಯ ಅಕಾಡೆಮಿ | |
(4) | ಕೇಂದ್ರೀಯ ಸಾಹಿತ್ಯ ಅಕಾಡೆಮಿ |
CORRECT ANSWER
(2) ಪಂಪ ಪ್ರಶಸ್ತಿ
3. | ‘ಮೈಸೂರು ಮಲ್ಲಿಗೆ’ ಯ ಕರ್ತೃ | |
(1) | ಬೇಂದ್ರೆ | |
(2) | ಪು.ತಿ.ನ. | |
(3) | ಕೆ.ಎಸ್.ಎನ್. | |
(4) | ಕುವೆಂಪು |
CORRECT ANSWER
(3) ಕೆ.ಎಸ್.ಎನ್.
4. | ಇವುಗಳಲ್ಲಿ ಗೊರೂರುರವರ ಕೃತಿಯನ್ನು ಗುರುತಿಸಿರಿ. | |
(1) | ಆಕಾಶ ದೀಪ | |
(2) | ಹೇಮಾವತಿ | |
(3) | ಕಲ್ಯಾಣ ಸ್ವಾಮಿ | |
(4) | ಬೆಕ್ಕಿನ ಕಣ್ಣು |
CORRECT ANSWER
(2) ಹೇಮಾವತಿ
5. | ‘ದೃಶ್ಯಕಾವ್ಯ’- ಈ ಪರ್ಯಾಯ ನಾಮ ಸಾಹಿತ್ಯದ ಯಾವ ಪ್ರಕಾರದ್ದು. | |
(1) | ಕಾದಂಬರಿ | |
(2) | ಸಣ್ಣಕತೆ | |
(3) | ಪ್ರಬಂಧ | |
(4) | ನಾಟಕ |
CORRECT ANSWER
(4) ನಾಟಕ
6. | ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದ ಕೃತಿ ಯಾವುದು? | |
(1) | ರಾಮಾಯಣ ದರ್ಶನಂ | |
(2) | ಕಾನೂರು ಹೆಗ್ಗಡತಿ | |
(3) | ರಕ್ಷಾಕ್ಷಿ | |
(4) | ನಾಕುತಂತಿ |
CORRECT ANSWER
(1) ರಾಮಾಯಣ ದರ್ಶನಂ
ಸೂಚನೆ: ಕೆಳಗಿನ ವಾಕ್ಯಗಳಲ್ಲಿ ಪದಗಳು ಕ್ರಮಬದ್ಧವಾಗಿಲ್ಲ. ಗೆರೆ ಎಳೆದು ಸೂಚಿಸಿರುವ ಭಾಗಗಳನ್ನು ಹೊಂದಿಸಿ ಅವುಗಳ ಅನುಕ್ರಮಗಳನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 07-11)
ನೋಡಿ, | ||
P | ||
ದುರುಗುಟ್ಟಿ | ||
Q | ||
ಸುಟ್ಟುರಿಯುವಂತೆ | ||
R | ||
ದೌಡಾಯಿಸಿದಳು | ||
S | ||
(1) | QRPS | |
(2) | RSPQ | |
(3) | RQPS | |
(4) | RPQS |
ಇಲ್ಲಿ QRPS ಎಂಬುದು ಸರಿಯಾದ ಕ್ರಮ ಆದುದರಿಂದ ಇಲ್ಲಿ (1)ನ್ನು ಗುರುತಿಸಬೇಕು
7. | ಮನುಷ್ಯ | |
P | ||
ಬೆಲೆ ಕಟ್ಟುವುದು ಸಂಪ್ರದಾಯ | ||
Q | ||
ಮಾನವೀಯ | ||
R | ||
ಅನುಕಂಪದ ಮೌಲ್ಯಾದರ್ಶಗಳಿಗೆ | ||
S | ||
(1) | SRPQ | |
(2) | PSRA | |
(3) | QSRP | |
(4) | RSPQ |
CORRECT ANSWER
(4) RSPQ
8. | ಮಟ್ಟ ಕುಸಿಯುತ್ತಿದೆ | |
P | ||
ಭಾಷಾ ಕಲಿಕೆಯ | ||
Q | ||
ವಿದ್ಯಾರ್ಥಿಗಳಲ್ಲಿ | ||
R | ||
ಇಂದಿನ | ||
S | ||
(1) | RPQS | |
(2) | PQRS | |
(3) | QPRS | |
(4) | SRQP |
CORRECT ANSWER
(4) SRQP
9. | ಮನೋನಿಶ್ಚಯದಂತೆ, | |
P | ||
ಹಠದಪಟ್ಟನ್ನು ಸಡಿಲಿಸದೆ | ||
Q | ||
ಅಪೂರ್ವ ಕುಶಲತೆಯನ್ನು, | ||
R | ||
ತೋರಿದ ಪ್ರತಿಭಾವಂತನೀತ | ||
S | ||
(1) | QPRS | |
(2) | PQRS | |
(3) | RQSP | |
(4) | PRQS |
CORRECT ANSWER
(1) QPRS
10. | ಅಂಗವಿಕಲ | |
P | ||
ಶಿಕ್ಷಕರು, | ||
Q | ||
ವಿದ್ಯಾರ್ಥಿಗಳಿಗೆ ಪಾಠ ಹೇಳಲು, | ||
R | ||
ಸಿದ್ಧರಾದರು | ||
S | ||
(1) | QPRS | |
(2) | PQRS | |
(3) | SRQP | |
(4) | RPQS |
CORRECT ANSWER
(1) QPRS
11. | ಮಂಗಳೂರಿಗೆ | |
P | ||
ನಿನ್ನೆ | ||
Q | ||
ಹೋದನು | ||
R | ||
ಸ್ವರೂಪ | ||
S | ||
(1) | SQPR | |
(2) | PRQS | |
(3) | QSPR | |
(4) | RPQS |
CORRECT ANSWER
(1) SQPR
ಸೂಚನೆ: ಈ ಕೆಳಗೆ ಕೊಡಲಾದ ಆರು ವಾಕ್ಯಗಳುಳ್ಳ ಭಾಗಗಳಲ್ಲಿ ಒಂದು ಮತ್ತು ಆರನೇ ವಾಕ್ಯಗಳು ಸರಿಯಾದ ರೀತಿಯಲ್ಲಿವೆ. ನಡುವಿನ ನಾಲ್ಕು ವಾಕ್ಯಗಳು (PQRS) ಜಾಗ ಬದಲಾಯಿಸಿವೆ. ಅವುಗಳನ್ನು ಅರ್ಥ ಬರುವಂತೆ ಸರಿಯಾಗಿ ಹೊಂದಿಸಿ ಉತ್ತರ ಯಾವುದು ಎಂಬುದನ್ನು ಗುರುತಿಸಬೇಕು. (ಪ್ರಶ್ನೆ ಸಂಖ್ಯೆ 12-16)
1. | 1893ರಲ್ಲಿ ಒಮ್ಮೆ ಸ್ವಾಮಿ ವಿವೇಕಾನಂದರು ಪ್ಯಾರಿಸ್‌ನಿಂದ ಗ್ರಾಮವೊಂದಕ್ಕೆ ಹೊರಟಿದ್ದರು | |
P. | ಕುದುರೆ ಗಾಡಿಯ ಚಾಲಕ, ಕೆಳಗಿಳಿದು ತನ್ನ ಮಕ್ಕಳನ್ನು ಮುದ್ದಾಡಿ ಮುಂದೆ ಸಾಗುತ್ತಾನೆ. | |
Q. | ಹಿಂದೆ ಮುಳುಗಿಹೋಗಿದ್ದ ಬ್ಯಾಂಕನ್ನು ಕಟ್ಟಿ ಮತ್ತೆ ಮಾಲೀಕನಾಗುವ ಹಿರಿಯಾಸೆ ಚಾಲಕನಿಗಿತ್ತು. | |
R. | ಈಗ ಸಂಸಾರ ಸಾಗಿಸಲು, ಸಾಲ ತೀರಿಸಲು ಚಾಲಕ ವೃತ್ತಿಯನ್ನು ಅವಲಂಬಿಸಿದ್ದ. | |
S. | ಚಾಲಕನ ಪೂರ್ವ ಚರಿತ್ರೆ ಕೇಳಿದ ವಿವೇಕಾನಂದರು ಅತೀವ ಆನಂದ ಪಟ್ಟು. | |
6. | ‘‘ಈ ವ್ಯಕ್ತಿ ಒಬ್ಬ ವ್ಯಾವಹಾರಿಕ ವೇದಾಂತಿ’’ ಎಂದು ಮೆಚ್ಚಿಕೊಂಡರು. ಕೆಳಕ್ಕೆ ಉರುಳಿದರೂ ಸನ್ನಿವೇಶಕ್ಕೆ ಬಲಿಯಾಗಬಾರದು, ಅಲ್ಲವೆ? | |
(1) | PQRS | |
(2) | QPSR | |
(3) | RQSP | |
(4) | SPRQ |
ಈ ಉದಾಹರಣೆಯಲ್ಲಿ PQRS ಎಂಬುದು ಸರಿಯಾದ ವಾಕ್ಯ ಹೊಂದಾಣಿಕೆ ಕ್ರಮವಾಗಿದೆ. ಆದ್ದರಿಂದ ಇಲ್ಲಿ (1)ಅನ್ನು ಗುರುತಿಸಬೇಕು.
12. | 1. | ಪಾಟಲೀಪುತ್ರದ ಮಹಾರಾಜ ಸರ್ವಾರ್ಥ ಸಿದ್ಧಿ |
P. | ಈ ಮೌರ್ಯನಿಗೆ ಚಂದ್ರಗುಪ್ತಾದಿ ನೂರು ಜನ ಅಸಹಾಯ ಶೂರ ಗಂಡು ಮಕ್ಕಳು. ಇವರೇ ಮೌರ್ಯರು. | |
Q. | ಮೌರ್ಯರು ಮುಂದೆ ತಮಗೆ ಕಂಟಕಪ್ರಾಯರಾದಾರೆಂಬ ಭಾವನೆಯಿಂದ ನವನಂದರು ಮೌರ್ಯರನ್ನು ನೆಲಮಾಳಿಗೆ ಯಲ್ಲಿರಿಸಿ ಕೊಲ್ಲಲೆಳಸಿದರು. | |
R. | ಈತನಿಗೆ ಮುರಾದೇವಿ ಎಂಬುವಳಲ್ಲಿ ಹುಟ್ಟಿದ ಮಗ ಮೌರ್ಯ. | |
S. | ಸರ್ವಾರ್ಥ ಸಿದ್ಧಿಯ ಪಟ್ಟಮಹಿಷಿ ಸುನಂದಾ ದೇವಿಯಲ್ಲಿ ಒಂಬತ್ತು ಗಂಡು ಮಕ್ಕಳು; ಇವರೇ ನವನಂದರು. | |
6. | ಮೌರ್ಯ ಮತ್ತು ಅವರ ಮಕ್ಕಳ ಒಪ್ಪಂದದಿಂದ ಚಂದ್ರಗುಪ್ತ ನೊಬ್ಬ ಮಾತ್ರ ಬದುಕುಳಿದ. | |
(1) | PQRS | |
(2) | RPSQ | |
(3) | QPSR | |
(4) | RQPS |
CORRECT ANSWER
(2) RPSQ
13. | 1. | ಸೋಮವಂಶದ ‘ಪ್ರತಿಮ’ ಎಂಬ ರಾಜನ ಹಿರಿಯ ಪುತ್ರ ‘ಶಂತನು’ ಮಹಾರಾಜ ಮಹಾಭಾರತದ ಒಂದು ಪ್ರಸಂಗ. |
P. | ನನ್ನ ಮಗಳಿಗೆ ಹುಟ್ಟಿದ ಮಗನಿಗೆ ರಾಜ್ಯದ ಒಡೆತನ ಬರಬೇಕು, ಎಂದ ದಾಶರಾಜ. | |
Q. | ಒಮ್ಮೆ ಬೇಟೆಗೆ ಹೋಗಿದ್ದ ಶಂತನು ಮಹಾರಾಜ, ಸುಂದರಿಯೊಬ್ಬಳನ್ನು ಕಂಡು, ಅವಳ ತಂದೆಯನ್ನು ಬೇಡಿಕೊಂಡ. | |
R. | ಹಕ್ಕುದಾರ ಪುತ್ರನಿರುವಾಗ ಈ ಒಪ್ಪಂದಕ್ಕೆ ಹೆದರಿ, ಕೊರಗಿ ಕೊರಗಿ ಸೊರಗುತ್ತಿದ್ದ ಶಂತನು ರಾಜ. | |
S. | ಆಜನ್ಮ ಬ್ರಹ್ಮಚರ್ಯವನ್ನೇ ತಬ್ಬಿ, ಒಪ್ಪಂದಕ್ಕೆ ಒಪ್ಪಿ, ಸತ್ಯವತಿಯನ್ನು ತನ್ನ ತಾಯಿಯ ಸ್ಥಾನಕ್ಕೆ ಏರಿಸುತ್ತಾನೆ, ಪ್ರತಿಜ್ಞಾರೂಢ ಪುತ್ರ ಗಾಂಗೇಯ | |
6. | ಹೀಗೆ ಉನ್ನತೋನ್ನತ ಪಿತೃಭಕ್ತಿಯನ್ನು ಮೆರೆಯುತ್ತಾನೆ ಭೀಷ್ಮ. | |
(1) | RPSQ | |
(2) | SRQP | |
(3) | QPRS | |
(4) | PRQS |
CORRECT ANSWER
(3) QPRS
14. | 1. | ಒಂದು ಊರಿನಲ್ಲಿ ಚಿಪ್ಪಿಗ(ದರ್ಜಿ)ನೊಬ್ಬ ವಾಸವಾಗಿದ್ದ, ಆತ ಯಾವಾಗಲೂ. |
P. | ಕಿಟಕಿಯ ಹತ್ತಿರ ಕೂತು ಬಟ್ಟೆ ಹೊಲಿಯುತ್ತಿದ್ದ. | |
Q. | ಒಂದು ದಿನ ಬೇಸತ್ತು ಚಿಪ್ಪಿಗ ಸೂಜಿಯಿಂದ ಸೊಂಡಿಲನ್ನು ಚುಚ್ಚಿದ. | |
R. | ಕೆರೆಗೆ ಹೋಗುತ್ತಿದ್ದ ಆನೆಯೊಂದು ಸೊಂಡಿಲಿನಿಂದ ಅವನನ್ನು ಆಶೀರ್ವದಿಸಿದಾಗ, ಆತ ಪ್ರತಿಯಾಗಿ ಪ್ರೀತಿಯಿಂದ ಬಾಳೆ ಹಣ್ಣುತಿನ್ನಿಸುತ್ತಿದ್ದ. | |
S. | ಆಗ ಮೌನದಿಂದ ಹೆಜ್ಜೆಯಿಟ್ಟ ಆನೆ, ಎರಡು ಕೊಡ ಕೆಸರು ನೀರನ್ನು ತಂದು, ಅವನ ತಲೆ ಮೇಲೆ ಸುರಿದುಬಿಟ್ಟಿತು. | |
6. | ‘‘ಪ್ರಾಣಿಗಳಿಗೂ ಆತ್ಮಾಭಿಮಾನ ಇರುವುದು ಸಹಜವಲ್ಲವೆ’’. | |
(1) | QSPR | |
(2) | QRPS | |
(3) | PRQS | |
(4) | PQSR |
CORRECT ANSWER
(3) PRQS
15. | 1. | ಕಲ್ಮಾಡಿ ನಮ್ಮ ಸುತ್ತಿಗೆ ದೊಡ್ಡ ಹಳ್ಳಿ. |
P. | ಈ ಕಲ್ಮಾಡಿ ಮಾರಿಗೆ ಕುರಿ, ಆಡು, ಕೋಳಿ, ಸಾಲದೆ ಕೋಣವೇ ಬೇಕಾಗುತ್ತಿತ್ತು. | |
Q. | ಮಾರಿಯ ಮೂರ್ತಿಗಳಲ್ಲಿ ಈ ಹಳ್ಳಿಯ ಮೂರ್ತಿ ಬಲು ಪ್ರಸಿದ್ಧ, ಬಲು ಭಯಂಕರ. | |
R. | ಹಿಂದೆಲ್ಲ ಬಲಿಕೊಡುತ್ತಿದ್ದ ಶಕ್ತಿಶಾಲಿ ಮುನಿಯನ ಒಂದೇ ಹೊಡೆತಕ್ಕೆ ಕೋಣನ ರುಂಡ ಉರುಳಿ ಬೀಳುತ್ತಿತ್ತು. | |
S. | ಕೊನೆಗೊಂದು ದಿನ ತಾನು ಸಾಕಿ ಬೆಳೆಸಿದ ಕೋಣವನ್ನು ಬಲಿ ಕೊಡಬೇಕಾದಾಗ ಮುನಿಯನ ಕರುಳು ಕಿತ್ತು ಬಂದ ಸಂಕಟ ಕಾಡುತ್ತಿತ್ತು. | |
6. | ಹೀಗೆ ಜೀವದಾಳವೆಸೆದು ಸಾವಿನ-ಗರವನ್ನು ನಡೆಸಲಾಗಿತ್ತು. | |
(1) | SQRP | |
(2) | RSQP | |
(3) | QRSP | |
(4) | PQRS |
CORRECT ANSWER
(4) PQRS
16. | 1. | ಜಾನಪದ ಕತೆಯ ಒಂದು ಪ್ರಸಂಗ. |
P. | ರೈತನೊಬ್ಬನಿಗೆ ದಿವಸ ದಿವಸ ರಾಗಿ ಮುದ್ದೆ ತಿಂದು ಬೇಸರವಾಯಿತು. | |
Q. | ದಾರಿಯಲ್ಲಿ ಹೆಂಡತಿ ಕೊಟ್ಟ ರಾಗಿರೊಟ್ಟಿಯನ್ನು ತಿಂದು ಅತ್ತೆ ಮನೆ ಸೇರಿದ. | |
R. | ಒಳ್ಳೆಯ ರುಚಿರುಚಿಯ ಊಟದ ಆಸೆಯಿಂದ ಅತ್ತೆ ಮನೆಗೆ ಹೊರಟ. | |
S. | ಮನೆಗೆ ಬಂದ ಅಳಿಯನಿಗೆ ಸಂಭ್ರಮದಿಂದ ‘ರಾಗಿ ಸೇವಿಗೆ’ ಮಾಡಿ ಅತ್ತೆ ಬಡಿಸಿದಳು. | |
6. | ಜಾಣ ರೈತ ಹಾಡಿಕೊಂಡು ಮನೆಯಲ್ಲಿದ್ರೆ ಲಿಂಗಾಕಾರ ಪ್ರಯಾಣದಲ್ಲಿ ಚಕ್ರಾಕಾರ ಇಲ್ಲಿಗೂ ಬಂದ್ಯಾ ಜಡೆಶಂಕರ ಎಂದ. ಪಡೆದಷ್ಟನ್ನು ಅನುಭವಿಸಲೇಬೇಕು, ಅಲ್ಲವೆ. | |
(1) | RSQP | |
(2) | QPSR | |
(3) | PRQS | |
(4) | RPQS |
CORRECT ANSWER
(3) PRQS
ಸೂಚನೆ: ಕೆಳಗೆ ಕೊಡಲಾದ ಗಾದೆಗಳ ಅರ್ಥವನ್ನು ಗ್ರಹಿಸಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿರಿ.(ಪ್ರಶ್ನೆ ಸಂಖ್ಯೆ 17-21)
17. | ಗಾಳಿ ಬಂದಾಗ ತೂರಿಕೊ ಎಂದರೆ | |
(1) | ತಾನಾಗಿ ಬಂದ ಸುಖ ಸಂಪತ್ತನ್ನು ದೂರ ಮಾಡಬೇಡ | |
(2) | ಅವಕಾಶ ಒದಗಿದಾಗ ಕಾರ್ಯಸಾಧನೆ ಮಾಡು | |
(3) | ಕಾಲ ನಮಗಾಗಿ ಕಾಯುವುದಿಲ್ಲ | |
(4) | ನಾವು ಸಮಯವನ್ನು ಕಾಯುವುದು ಲೇಸು |
CORRECT ANSWER
(2) ಅವಕಾಶ ಒದಗಿದಾಗ ಕಾರ್ಯಸಾಧನೆ ಮಾಡು
18. | ತುಂಬಿದ ಕೊಡ ತುಳುಕುವುದಿಲ್ಲ ಎಂದರೆ | |
(1) | ಅರ್ಧ ನೀರಿರುವ ಕೊಡ ಶಬ್ದ ಮಾಡುತ್ತದೆ | |
(2) | ಅಲ್ಪ ವಿದ್ಯಾವಂತ ಗರ್ವದಿಂದ ವಿದ್ಯಾ ಪ್ರದರ್ಶನ ಮಾಡುತ್ತಾನೆ | |
(3) | ತುಂಬಿದ ಕೊಡ ತುಳುಕುವುದೇ ಇಲ್ಲ | |
(4) | ಪೂರ್ಣಜ್ಞಾನಿ ತನ್ನ ತೂಕ ಮತ್ತು ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುತ್ತಾನೆ |
CORRECT ANSWER
(4) ಪೂರ್ಣಜ್ಞಾನಿ ತನ್ನ ತೂಕ ಮತ್ತು ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುತ್ತಾನೆ
19. | ಕೊಡಲಿಯ ಕಾವು ಕುಲಕ್ಕೆ ಮೃತ್ಯು (ಕಾವು =ಹಿಡಿ) | |
(1) | ಕೊಡಲಿಯ ಜೊತೆಗೂಡಿದ ಮರದ ಹಿಡಿ, ಮರಗಳ ವಂಶನಾಶಕ್ಕೆ ಸಹಾಯ ಮಾಡುತ್ತದೆ | |
(2) | ಜೊತೆಗೂಡಿದ ವ್ಯಕ್ತಿಗಳು ಹಿತರೆನ್ನಿಸಿದರೂ ಎಚ್ಚರ ತಪ್ಪಬಾರದು | |
(3) | ನಮ್ಮ ಒಳಗಿನ ದುರ್ಗುಣ ನಮ್ಮ ನಾಶಕ್ಕೆ ಕಾರಣ | |
(4) | ಹಿತಶತ್ರುಗಳನ್ನು ದೂರವಿಡಬೇಕು |
CORRECT ANSWER
(3) ನಮ್ಮ ಒಳಗಿನ ದುರ್ಗುಣ ನಮ್ಮ ನಾಶಕ್ಕೆ ಕಾರಣ
20. | ಸೊಸೆಗೆ ಗೃಹ ಪ್ರವೇಶ, ಅತ್ತೆಗೆ ಪರವಾಸ | |
(1) | ಮನೆಗೆ ಬಂದ ಸೊಸೆ, ನಾಳೆ ಅತ್ತೆಯಾಗುತ್ತಾಳೆ | |
(2) | ಅತ್ತೆಗೆ, ಸೊಸೆಯಾಗಿ ಬಂದ ನೆನಪಿರಬೇಕು | |
(3) | ಅತ್ತೆ-ಸೊಸೆಯರಲ್ಲಿ ಅನ್ಯೋನ್ಯತೆ ಅತ್ಯವಶ್ಯಕ | |
(4) | ಸೊಸೆಗೆ ಅತ್ತೆಯ ಸ್ಥಾನ, ಅತ್ತೆಗೆ ಸೊಸೆಯ ಸ್ಥಾನ ಖಂಡಿತ |
CORRECT ANSWER
(3) ಅತ್ತೆ-ಸೊಸೆಯರಲ್ಲಿ ಅನ್ಯೋನ್ಯತೆ ಅತ್ಯವಶ್ಯಕ
21. | ಮಾತೇ ಮುತ್ತು, ಮಾತೇ ಮೃತ್ಯು | |
(1) | ಮಾತಿನಲ್ಲಿ ಮೆದುವಿರಬೇಕು | |
(2) | ಮಾತು ಸಿಡಿಲಾಗಬಾರದು | |
(3) | ಅಹಿತಕರ ಮಾತು ಅನರ್ಥಕ್ಕೆ ಕಾರಣ | |
(4) | ಹಿತ-ಮಿತವಾದ ಮಾತಿನಿಂದ ಅನಿಷ್ಟ ದೂರ |
CORRECT ANSWER
(3) ಅಹಿತಕರ ಮಾತು ಅನರ್ಥಕ್ಕೆ ಕಾರಣ
ಸೂಚನೆ: ಕೆಳಗೆ ಕೊಡಲಾಗಿರುವ ಶಬ್ದಗಳನ್ನು ಓದಿ ಸರಿಯಾದ ಅರ್ಥ ಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 22-26)
22. | ‘‘ಹೂಳು’’- ಎಂದರೆ | |
(1) | ಅಡಗಿಸು | |
(2) | ಮುಚ್ಚಿಡು | |
(3) | ಕೆಸರು ಮಣ್ಣು | |
(4) | ಇಂಗಿಸು |
CORRECT ANSWER
(3) ಕೆಸರು ಮಣ್ಣು
23. | ‘‘ಊಟಿಸು’’- ಎಂದರೆ | |
(1) | ಹೋಗಲಾಡಿಸು | |
(2) | ನಾಶ ಮಾಡು | |
(3) | ಊಟ ಮಾಡಿಸು | |
(4) | ನೀರು ಹರಿಯಿಸು |
CORRECT ANSWER
(1) ಹೋಗಲಾಡಿಸು
24. | ‘‘ಇಂಗಳಗಣ್ಣ’’ ಎಂದರೆ | |
(1) | ಸುಡು ದೃಷ್ಟಿವುಳ್ಳ | |
(2) | ಬೆಂಕಿಕಾರುವ ಕಣ್ಣಿನ | |
(3) | ಶಿವನ ಕಣ್ಣು | |
(4) | ಒಂದು ಬಗೆಯ ಮುಳ್ಳುಗಿಡ |
CORRECT ANSWER
(3) ಶಿವನ ಕಣ್ಣು
25. | ‘‘ಸ್ಥಾನಪಲ್ಲಟ’’- ಎಂದರೆ | |
(1) | ಬದಲಾಯಿಸು | |
(2) | ಸ್ಥಳಾಂತರ ಮಾಡು | |
(3) | ವರ್ಗ ಮಾಡು | |
(4) | ಅಗೌರವಿಸು |
CORRECT ANSWER
(2) ಸ್ಥಳಾಂತರ ಮಾಡು
26. | ‘‘ಒಕುಳಿಯಾಡು’’- ಎಂದರೆ | |
(1) | ಸ್ನಾನ ಮಾಡಿಸು | |
(2) | ನೀರು ಚೆಲ್ಲು | |
(3) | ಬಣ್ಣದ ನೀರು ಎರಚು | |
(4) | ಆರತಿ ನೀರು ಸುರಿ |
CORRECT ANSWER
(3) ಬಣ್ಣದ ನೀರು ಎರಚು
ಸೂಚನೆ: ಈ ಕೆಳಗಿನ ಪ್ರಶ್ನೆಗಳಿಗೆ ಓದಿ, ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 27-29)
27. | ‘‘ತ್ರಿಪದಿಯನ್ನು ಕನ್ನಡ ಜಾನಪದ ಗಾಯತ್ರಿ’’ – ಎಂದವರು ಯಾರು? | |
(1) | ಮಾಸ್ತಿ | |
(2) | ಬೇಂದ್ರೆ | |
(3) | ಸರ್ವಜ್ಞ | |
(4) | ಹಾ.ಮಾ.ನಾಯಕ |
CORRECT ANSWER
(2) ಬೇಂದ್ರೆ
28. | ‘ಷಟ್ಪದಿ’ ಯಲ್ಲಿ ಎಷ್ಟು ವಿಧ? | |
(1) | 8 | |
(2) | 4 | |
(3) | 6 | |
(4) | 10 |
CORRECT ANSWER
(3) 6
29. | ಖ್ಯಾತ ಕರ್ಣಾಟಕ ವೃತ್ತಗಳು ಎಷ್ಟು? | |
(1) | 5 | |
(2) | 6 | |
(3) | 7 | |
(4) | 8 |
CORRECT ANSWER
(2) 6
ಸೂಚನೆ: ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಅರ್ಥ ಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 30-36)
ಮಹಾ ಕವಿ -ರನ್ನನ ಕಾಲ ಕ್ರಿ.ಶ.949. ಈ ಶತಮಾನದಲ್ಲಿ ರತ್ನತ್ರಯರೆನಿಸಿದ ಪಂಪ, ಪೊನ್ನ, ರನ್ನ- ಈ ಮೂವರಲ್ಲಿ ಕೊನೆಯವನು ರನ್ನ. ವೀರ, ತ್ಯಾಗ, ದಾನ, ಗುಣಗಳನ್ನೇ ಬದುಕಿನ ಹಿರಿಯ ಮೌಲ್ಯಗಳೆಂದು ಸ್ವೀಕರಿಸಿದ್ದ ಯುಗ ಅದು. ಈ ಮೌಲ್ಯಗಳ ಉಳಿವು ಮತ್ತು ಉನ್ನತಿಗಾಗಿ ಶ್ರಮಿಸಿದವರು ಹಲವರು. ಈ ಮಹಾಮಹಿಮರ ಸಾಲಿನಲ್ಲಿ ದಾನಚಿಂತಾಮಣಿ ಎನ್ನಿಸಿಕೊಂಡ ಅತ್ತಿಮಬ್ಬೆಯ ಸ್ಥಾನ ಉನ್ನತವಾದದ್ದು. ರನ್ನ ಕವಿ ಅಜಿತನಾಥ ಪುರಾಣ ಕಾವ್ಯದಲ್ಲಿ ಅತ್ತಿಮಬ್ಬೆಯ ನಿರ್ಮಲ ಚರಿತ್ರೆಯನ್ನು ಅಮರಗೊಳಿಸಿದ್ದಾನೆ.
ಅತ್ತಿಮಬ್ಬೆಯ ದಾನದ ಗುಣಗಾನ ಮಾಡುವ ಕವಿ ರನ್ನ, ಕವಿ ವರಕಾಮಧೇನು, ದಾನಗುಣೈ ಕಾಂಬುಧಿ ಎಂದು ಕರೆದಿದ್ದಾನೆ. ಕವಿಗಳು ಬೇಡಿದ ಸರ್ವಸ್ವವನ್ನು ಅವಳು ದಾನ ಮಾಡಿ ತೃಪ್ತಿ ಪಡುತ್ತಿದ್ದಳಂತೆ. ಹೀಗಾಗಿ ಅವಳು ಅವರ ಪಾಲಿನ ಕಾಮಧೇನುವಾಗಿದ್ದಳು.
ಅವಳ ಜೈನ ಧರ್ಮದ ನಿಷ್ಠೆ ಅಪಾರವಾದದ್ದು. ಆ ಕಾಲಕ್ಕೆ ಅತ್ತಿಮಬ್ಬೆ ಜೈನಧರ್ಮದ ಪ್ರತಿಭೆ, ಧರ್ಮವನ್ನು ಬೆಳಗಿದ ದೀಪ ಎಂದೆಲ್ಲಾ ಹೆಸರು ಪಡೆದಿದ್ದವಳು. ಜೈನ ಧರ್ಮದ ಸಾರವನ್ನೇ ಮೈಗೂಡಿಸಿಕೊಂಡವಳು. ಮಹಾಸತಿ ಅತ್ತಿಮಬ್ಬೆ ದಂಡಾಪತಿ ಪಡೆವಲ ತೈಲನ ಜನನಿ ಮಾತ್ರವಲ್ಲ, ತೀರ್ಥಂಕರ ‘‘ಜಿನನ ಜನನಿ’’ ಎನ್ನಿಸಿಕೊಂಡವಳು.
ಜಿನನ ತಾಯಿ ಜಿನನನ್ನು ಗರ್ಭಧರಿಸಿ ಜನ್ಮಕೊಟ್ಟರೆ, ಅತ್ತಿಮಬ್ಬೆ ಜಿನನನ್ನು, ತನ್ನ ಮನಸ್ಸೆಂಬ ಗರ್ಭದಲ್ಲಿ ಸದಾ ಕಾಲವೂ ಧರಿಸಿಕೊಂಡು ಪೂಜಿಸುತ್ತಿದ್ದಳು. ಇದರಿಂದಾಗಿ ತೈಲನ ತಾಯಿಯೇ ಜಿನನ ತಾಯಿ ಎಂಬ ಕೀರ್ತಿಗೆ ಹೆಸರಾದವಳು. ಸುಮಾರು 1500 ಬಂಗಾರದ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿ, ಧರ್ಮ ಪ್ರಚಾರಕಿ ಆದಳು. ಗೊಮ್ಮಟೇಶ್ವರನನ್ನು ದರ್ಶಿಸಲು ಪರ್ವತವನ್ನು ಏರಿ, ಉಪವಾಸ ವ್ರತ ಕೈಗೊಂಡವಳು ಅವಳು.
ಮಾರ್ಗದ ಆಯಾಸ ಅವಳನ್ನು ಮೈದುಂಬಿದಾಗ, ಅಕಾಲ ವೃಷ್ಟಿ (ಮಳೆಗಾಲವಾಗದಿದ್ದರೂ) ಇದ್ದಕ್ಕಿದ್ದಂತೆ ಸುರಿದು ಆಯಾಸವನ್ನು ಕಳೆಯಿತಂತೆ. ಅವಳ ದೈವಭಕ್ತಿಯ ಮಹಿಮೆಗೆ ಇದು ಸಾಕ್ಷಿ. ಬುಧ ಜನವಂದಿತೆ, ಕವಿವರ ಕಾಮಧೇನು, ಜಿನಶಾಸನ ಜ್ಯೋತಿ ಜಿನನ ತಾಯಿ ಎಂದು ಕರೆಸಿಕೊಂಡು, ಜೈನಧರ್ಮವನ್ನು ಬೆಳಗಿ ಮೋಕ್ಷಕ್ಕೆ ಹತ್ತಿರವಾದ ಪದವಿ (ಆಸನ್ನ ಭವ್ಯೆ) ಗಳಿಸಿಕೊಂಡ, ಸಾರ್ಥಕ ಬದುಕಿನ ಶ್ರೇಣಿಯಲ್ಲಿ ಉನ್ನತ ಸ್ಥಾನ ಪಡೆದವಳು ಅತ್ತಿಮಬ್ಬೆ.
30. | ಹತ್ತನೆಯ ಶತಮಾನದ ಸಾಮಾಜಿಕ ಹಿರಿಯ ಮೌಲ್ಯ | |
(1) | ಕ್ಷಾತ್ರಧರ್ಮ | |
(2) | ದೇಶಪ್ರೇಮ | |
(3) | ಭಕ್ತಿಭಾವ | |
(4) | ವೀರ, ತ್ಯಾಗ, ದಾನ |
CORRECT ANSWER
(4) ವೀರ, ತ್ಯಾಗ, ದಾನ
31. | ಕವಿವರ ಕಾಮಧೇನು- ಎಂದರೆ | |
(1) | ಬೇಡಿದುದನ್ನು ಕೊಡುವ ಹಸು | |
(2) | ಬೇಡಿದ ಪ್ರಜೆಗಳಿಗೆ ದಾನದ ಕೈ | |
(3) | ಕವಿ ಶ್ರೇಷ್ಠರಿಗೆ ಗೌರವ ನೀಡಿ ದಾನ ಮಾಡುವ ಶ್ರೇಷ್ಠ ವ್ಯಕ್ತಿ | |
(4) | ಕವಿಗಳಿಗೆ ಶ್ರೇಷ್ಠ ದಾನ ನೀಡಿ ಪ್ರೋತ್ಸಾಹಿಸಿದ ಅತ್ತಿಮಬ್ಬೆ |
CORRECT ANSWER
(4) ಕವಿಗಳಿಗೆ ಶ್ರೇಷ್ಠ ದಾನ ನೀಡಿ ಪ್ರೋತ್ಸಾಹಿಸಿದ ಅತ್ತಿಮಬ್ಬೆ
32. | ಅತ್ತಿಮಬ್ಬೆ ಮಾಡಿಸಿದ ಜಿನ ಪ್ರತಿಮೆಗಳ ಸಂಖ್ಯೆ | |
(1) | 2500 | |
(2) | 6000 | |
(3) | 1500 | |
(4) | 3000 |
CORRECT ANSWER
(3) 1500
33. | ‘‘ಜಿನನ ತಾಯಿ’’ ಅತ್ತಿಮಬ್ಬೆ ಎನ್ನಲು ಕಾರಣ | |
(1) | ಜಿನನ ಪಾದದಲ್ಲಿ ಇಟ್ಟಿದ್ದ ಭಕ್ತಿ | |
(2) | ಮೋಕ್ಷ ಪದವಿಗೆ ಹತ್ತಿರವಾದದ್ದು | |
(3) | ಮನಸ್ಸಿನ ಗರ್ಭದಲ್ಲಿಟ್ಟು ಜಿನನನ್ನು ಪೂಜಿಸಿದವಳು | |
(4) | ಜೈನಧರ್ಮವನ್ನು ಬೆಳಗಿದವಳು |
CORRECT ANSWER
(3) ಮನಸ್ಸಿನ ಗರ್ಭದಲ್ಲಿಟ್ಟು ಜಿನನನ್ನು ಪೂಜಿಸಿದವಳು
34. | ಅತ್ತಿಮಬ್ಬೆ, ಪರ್ವತ ಏರುವಾಗ, ಪಥ ಶ್ರಮನಿವಾರಣೆಗೆ ನಡೆದ ಪವಾಡ | |
(1) | ಪುಷ್ಪ ವೃಷ್ಟಿಯಾದದ್ದು | |
(2) | ತಂಪು ಹಿಮವೃಷ್ಟಿ | |
(3) | ಅಕಾಲ ವೃಷ್ಟಿಯಾದದ್ದು | |
(4) | ಸಕಾಲ ವೃಷ್ಟಿಯಾದದ್ದು |
CORRECT ANSWER
(3) ಅಕಾಲ ವೃಷ್ಟಿಯಾದದ್ದು
35. | ಜಿನ ಶಾಸನ ದೀಪಿಕೆ- ಎಂದರೆ | |
(1) | ಜೈನ ಧರ್ಮವನ್ನು ಮೈಗೂಡಿಸಿಕೊಂಡಳು | |
(2) | ಭವ್ಯ ಜೀವನವನ್ನು ಬೆಳಗಿದವಳು | |
(3) | ತತ್ವಗಳಿಂದ ಪರಿಶುದ್ಧಳಾದವಳು | |
(4) | ಜೈನ ಧರ್ಮವನ್ನು ಪ್ರಕಾಶಗೊಳಿಸಿದವಳು |
CORRECT ANSWER
(4) ಜೈನ ಧರ್ಮವನ್ನು ಪ್ರಕಾಶಗೊಳಿಸಿದವಳು
36. | ರನ್ನಕವಿಗೆ ಆಶ್ರಯ ಕೊಟ್ಟವರು | |
(1) | ಅಬ್ಬಲಬ್ಬೆ | |
(2) | ಅತ್ತಿಮಬ್ಬೆ | |
(3) | ಜಾಕಬ್ಬೆ | |
(4) | ಹೊನ್ನಬ್ಬೆ |
CORRECT ANSWER
(2) ಅತ್ತಿಮಬ್ಬೆ
ಸೂಚನೆ: ಖಾಲಿ ಜಾಗದಲ್ಲಿರಬೇಕಾದ ಸೂಕ್ತ ಪದವನ್ನು ಸಂಖ್ಯೆಯ ಮೂಲಕ ಗುರುತಿಸಿರಿ. (ಪ್ರಶ್ನೆ ಸಂಖ್ಯೆ 37-41)
ಕನ್ನಡ ಭಾಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಡುವಂಥ ನಾಡಿನಲ್ಲಿ ಕನ್ನಡ ______ ಯಾಗಬೇಕಾದದ್ದು ಅತ್ಯವಶ್ಯಕ. ಕನ್ನಡ ಭಾಷೆ. ______ಮಾಧ್ಯಮವಾಗುವುದಾದರೆ, ಕನ್ನಡಿಗರಿಗೇ ನಾಡಿನ ಉದ್ಯೋಗ ಖಾತ್ರಿ. ಕನ್ನಡ ಮಾಧ್ಯಮ ಬಲವಂತದ ______ವಾಗಬಾರದು. ಆಡಳಿತಗಾರರು ಈ ಯೋಜನೆಯನ್ನು ತರಲು ಹಿಂದು ಮುಂದು ನೋಡುತ್ತಾರೆ. ಆದರೂ ಪ್ರಯತ್ನ ಮಾತ್ರ ಮುಂದುವರಿಯುತ್ತಿದ್ದು, ಆ ತತ್ವಕ್ಕೆ ______ಯನ್ನು ಬಿಡಬಾರದು. ಇಂಗ್ಲಿಷ್ ಪದ ಮತ್ತು ವಾಕ್ಯರಚನೆಗಳಿಗೆ ಖಚಿತವಾದ ಕನ್ನಡ ಪ್ರತಿರೂಪಗಳಿಲ್ಲದೆ ರಾಜ್ಯದ ನ್ಯಾಯಾಂಗ, ಕಾರ್ಯಾಂಗ ನಡೆಯುವುದು ಕಷ್ಟವೆಂಬ ದನಿಯೂ ಇದೆ. ಪ್ರಚಲಿತ ರೂಢಿಯನ್ನು ಬಿಟ್ಟು, ಹೊಸ ರೂಢಿಗೆ ಹೊಂದಿಕೊಳ್ಳದಿರುವುದು ಇವರ ______
37. | ||
(1) | ಕಲಿಕಾ ಭಾಷೆ | |
(2) | ರೂಢಿ ಭಾಷೆ | |
(3) | ನಾಡಿನ ಭಾಷೆ | |
(4) | ಆಡಳಿತ ಭಾಷೆ |
CORRECT ANSWER
(4) ಆಡಳಿತ ಭಾಷೆ
38. | ||
(1) | ಶಿಕ್ಷಣ | |
(2) | ಉಪದೇಶ | |
(3) | ಬರವಣಿಗೆ | |
(4) | ಪಾಠ ಪ್ರವಚನ |
CORRECT ANSWER
(1) ಶಿಕ್ಷಣ
39. | ||
(1) | ಒತ್ತಾಯದ ನಿಲುವು | |
(2) | ತಲೆಗೆ ಭಾರ | |
(3) | ಮಾಘಸ್ನಾನ | |
(4) | ಬೆದರಿಕೆಯ ಮಾತು |
CORRECT ANSWER
(3) ಮಾಘಸ್ನಾನ
40. | ||
(1) | ತ್ಯಾಜ್ಯವನ್ನು | |
(2) | ನಿರಪೇಕ್ಷತೆಯನ್ನು | |
(3) | ತಿಲಾಂಜಲಿಯನ್ನು | |
(4) | ಉಪೇಕ್ಷೆಯನ್ನು |
CORRECT ANSWER
(3) ತಿಲಾಂಜಲಿಯನ್ನು
41. | ||
(1) | ಮಲೇರಿಯಾ ಚಳಿ | |
(2) | ಹುಸಿ ಖಾಯಿಲೆ | |
(3) | ಮಾನಸಿಕ ಜಾಡ್ಯ | |
(4) | ರೋಗಾತಿರೋಗ |
CORRECT ANSWER
(3) ಮಾನಸಿಕ ಜಾಡ್ಯ
ಸೂಚನೆ: ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳವನ್ನು ತುಂಬಲು ನಾಲ್ಕು ರೂಪಗಳನ್ನು ನೀಡಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 42-46)
ಉದಾ : | ||
‘‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’’- ಈ ನಾಡಗೀತೆ ಯಾರ ರಚನೆ? | ||
(1) | ಕುವೆಂಪು | |
(2) | ಪುತಿನ | |
(3) | ಬಿಎಂಶ್ರೀ | |
(4) | ಹುಯಿಲಗೋಳ ನಾರಾಯಣ ರಾವ್ |
ಇಲ್ಲಿ ಹುಯಿಲಗೋಳ ನಾರಾಯಣ ರಾವ್ ಎಂಬುದು ಸರಿಯಾದದ್ದು. ಆದ್ದರಿಂದ (4)ನ್ನು ಗುರುತಿಸಬೇಕು.
42. | ‘ವಿಗಡ ವಿಕ್ರಮರಾಯ’- ಸಾಹಿತ್ಯದ ಯಾವ ಪ್ರಕಾರ | |
(1) | ಸಣ್ಣ ಕತೆ | |
(2) | ನಾಟಕ | |
(3) | ಕಾದಂಬರಿ | |
(4) | ವ್ಯಕ್ತಿಚಿತ್ರ |
CORRECT ANSWER
(2) ನಾಟಕ
43. | ಮೊದಲ ‘ರಾಷ್ಟ್ರಕವಿ’ ಪದವಿ ಪಡೆದ ಕವಿ ಯಾರು? | |
(1) | ಶಿವರುದ್ರಪ್ಪ | |
(2) | ಮಾಸ್ತಿ | |
(3) | ಗೋವಿಂದ ಪೈ | |
(4) | ವಿ.ಕೃ.ಗೋಕಾಕ್ |
CORRECT ANSWER
(3) ಗೋವಿಂದ ಪೈ
44. | ನಾಗಚಂದ್ರ ಬರೆದ ರಾಮಾಯಣದ ಹೆಸರು ಯಾವುದು? | |
(1) | ರಾಮಕಥಾಮೃತ | |
(2) | ಶ್ರೀರಾಮಪಟ್ಟಾಭಿಷೇಕ | |
(3) | ರಾಮಚಂದ್ರ ಚರಿತ ಪುರಾಣ | |
(4) | ಭುವನೈಕ ರಾಮಾಭ್ಯುದಯ |
CORRECT ANSWER
(3) ರಾಮಚಂದ್ರ ಚರಿತ ಪುರಾಣ
45. | ಇವುಗಳಲ್ಲಿ ‘ವಾರ್ಧಕಷಟ್ಪದಿ’ ಕಾವ್ಯ ಯಾವುದು? | |
(1) | ಯಶೋಧರ ಚರಿತ್ರೆ | |
(2) | ಗಿರಿಜಾ ಕಲ್ಯಾಣ | |
(3) | ಹರಿಶ್ಚಂದ್ರ ಕಾವ್ಯ | |
(4) | ಪ್ರಭುಲಿಂಗ ಲೀಲೆ |
CORRECT ANSWER
(3) ಹರಿಶ್ಚಂದ್ರ ಕಾವ್ಯ
46. | ‘ಹದಿಬದೆಯ ಧರ್ಮ’ ಕೃತಿಯ ಕವಯಿತ್ರಿ ಯಾರು? | |
(1) | ಅಕ್ಕಮಹಾದೇವಿ | |
(2) | ಸಂಚಿ ಹೊನ್ನಮ್ಮ | |
(3) | ಅತ್ತಿಮಬ್ಬೆ | |
(4) | ನೀಲಾಂಬಿಕೆ |
CORRECT ANSWER
(2) ಸಂಚಿ ಹೊನ್ನಮ್ಮ
ಸೂಚನೆ: ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ. ಭಿನ್ನವಾಗಿ ಉಳಿದಿರುವ ಪದವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 47-52)
ಉದಾ: | ||
(1) | ಚುನಾವಣೆ | |
(2) | ಆಸ್ಪತ್ರೆ | |
(3) | ಮುಖ್ಯಮಂತ್ರಿ | |
(4) | ಭಾಷಣ |
ಇವುಗಳಲ್ಲಿ (1), (3), (4) ರಾಜಕೀಯಕ್ಕೆ ಸಂಬಂಧಿಸಿದ ಪದಗಳು. ಭಿನ್ನರೂಪ (2) ಆಸ್ಪತ್ರೆ. ಆದ್ದರಿಂದ (2)ನ್ನು ಗುರುತಿಸಬೇಕು.
47. | ||
(1) | ಅಶ್ವತ್ಥಾಮನ್ | |
(2) | ಗಂಗಾವತರಣ | |
(3) | ಏಳು ಸುತ್ತಿನ ಕೋಟೆ | |
(4) | ಸಾವಿರಾರು ನದಿಗಳು |
CORRECT ANSWER
(1) ಅಶ್ವತ್ಥಾಮನ್
48. | ||
(1) | ಬರುತ್ತಾನೆ | |
(2) | ನೋಡುತ್ತಾನೆ | |
(3) | ಹೋಗುವನು | |
(4) | ಸಾಯುತ್ತಾನೆ |
CORRECT ANSWER
(3) ಹೋಗುವನು
49. | ||
(1) | ಮಹಾತ್ಮಗಾಂಧಿ | |
(2) | ಆರ್ಯಭಟ | |
(3) | ವಿವೇಕಾನಂದ | |
(4) | ರಾಧಾಕೃಷ್ಣ |
CORRECT ANSWER
(2) ಆರ್ಯಭಟ
50. | ||
(1) | ಅದು | |
(2) | ಇದು | |
(3) | ಓದು | |
(4) | ಏನು |
CORRECT ANSWER
(3) ಓದು
51. | ||
(1) | ವೈದೇಹಿ | |
(2) | ಮಧುರ ಚೆನ್ನ | |
(3) | ಚನ್ನವೀರ ಕಣವಿ | |
(4) | ಮುದ್ದಣ |
CORRECT ANSWER
(4) ಮುದ್ದಣ
52. | ||
(1) | ಅಕ್ಕಿ | |
(2) | ಗೋಧಿ | |
(3) | ಕಡಲೆ | |
(4) | ಸಕ್ಕರೆ |
CORRECT ANSWER
(4) ಸಕ್ಕರೆ
ಸೂಚನೆ: ಕೆಳಗೆ ಕೊಟ್ಟ ನಾಲ್ಕು ಪದಗಳಲ್ಲಿ ಒಂದು ಮಾತ್ರ ಅನ್ಯಭಾಷಾ ಪದ, ಅದನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 53-55)
ಉದಾ: | ||
(1) | ಕಿವಿ | |
(2) | ನೇತ್ರ | |
(3) | ಮೂಗು | |
(4) | ನಾಲಿಗೆ |
ಇವುಗಳಲ್ಲಿ ‘ನೇತ್ರ’ ಅನ್ಯಭಾಷಾ ಪದ. ಉಳಿದವು ಕನ್ನಡ ಪದಗಳಾಗಿವೆ. ಆದ್ದರಿಂದ (2)ನ್ನು ಗುರುತಿಸಬೇಕು.
53. | ||
(1) | ಊಟ | |
(2) | ತಿಂಡಿ | |
(3) | ಅಂಬಲಿ | |
(4) | ಥಾಲಿ |
CORRECT ANSWER
(4) ಥಾಲಿ
54. | ||
(1) | ಎಣ್ಣೆ | |
(2) | ಬತ್ತಿ | |
(3) | ಹಣತೆ | |
(4) | ಲಾಂದ್ರ |
CORRECT ANSWER
(4) ಲಾಂದ್ರ
55. | ||
(1) | ಧನ | |
(2) | ದನ | |
(3) | ಎಮ್ಮೆ | |
(4) | ಕೊಟ್ಟಿಗೆ |
CORRECT ANSWER
(1) ಧನ
ಸೂಚನೆ: ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಒಂದು ಮಾತ್ರ ಅಚ್ಚ ಕನ್ನಡ ಪದ, ಉಳಿದ ಮೂರು ಅನ್ಯಭಾಷಾ ಪದಗಳು. ಕನ್ನಡ ಪದವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 56 ಮತ್ತು 57)
ಉದಾ: | ||
(1) | ರೈಲು | |
(2) | ಬೆರಳು | |
(3) | ಕುಮಾರ | |
(4) | ಸಂಜೆ |
ಇಲ್ಲಿ ಬೆರಳು (2) ಎನ್ನುವುದು ಕನ್ನಡ, (2)ನ್ನು ಗುರುತಿಸಿ.
56. | ||
(1) | ಅರಸು | |
(2) | ಸಿಮೆಂಟ್ | |
(3) | ಕಚೇರಿ | |
(4) | ತಾಲೀಮು |
CORRECT ANSWER
(1) ಅರಸು
57. | ||
(1) | ಬ್ರಹ್ಮ | |
(2) | ವನ | |
(3) | ಮೇಷ್ಟ್ರು | |
(4) | ಊರು |
CORRECT ANSWER
(4) ಊರು
ಸೂಚನೆ: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳಿಗೆ ಅರ್ಥಗಳನ್ನೂ ಕೊಟ್ಟಿದೆ. ನುಡಿಗಟ್ಟಿನ ಸರಿಯಾದ ಅರ್ಥ ಯಾವುದೆಂದು ಗುರುತಿಸಿ. (ಪ್ರಶ್ನೆ ಸಂಖ್ಯೆ 58-61)
ಉದಾ: | ||
ಕಟ್ಟುಕತೆ | ||
(1) | ಸುಳ್ಳುಕತೆ | |
(2) | ಊಹಿಸಿದ ಕತೆ | |
(3) | ಕಟ್ಟಿದ ಕತೆ | |
(4) | ಇಲ್ಲದಿರುವುದರ ಸೃಷ್ಟಿಕತೆ |
ಇವುಗಳಲ್ಲಿ (2) ಸರಿಯಾದ ಅರ್ಥವಾಗಿದೆ. ಆದ್ದರಿಂದ (2)ನ್ನು ಗುರುತಿಸಿ.
58. | ವಿಷಕಾರು | |
(1) | ಕೆಟ್ಟದ್ದನ್ನು ಮಾಡು | |
(2) | ನಿಂದಿಸು | |
(3) | ದ್ವೇಷಿಸು | |
(4) | ವಿಷವನ್ನು ಉಗುಳು |
CORRECT ANSWER
(3) ದ್ವೇಷಿಸು
59. | ತಲೆಬಾಗು | |
(1) | ತಲೆ ತಗ್ಗಿಸು | |
(2) | ನಮಸ್ಕರಿಸು | |
(3) | ವಿಧೇಯನಾಗು | |
(4) | ನಾಚಿಕೆ ತೋರಿಸು |
CORRECT ANSWER
(2) ನಮಸ್ಕರಿಸು
60. | ಕಾಕ ದೃಷ್ಟಿ | |
(1) | ಕಾಗೆ ದೃಷ್ಟಿ | |
(2) | ವಕ್ರ ದೃಷ್ಟಿ | |
(3) | ನೆಟ್ಟ ದೃಷ್ಟಿ | |
(4) | ಕೋಪ ದೃಷ್ಟಿ |
CORRECT ANSWER
(2) ವಕ್ರ ದೃಷ್ಟಿ
61. | ಹಿತ್ತಾಳೆ ಕಿವಿ | |
(1) | ಸ್ವಂತ ವಿವೇಚನೆ ಇಲ್ಲದ | |
(2) | ಚಾಡಿ ಮಾತಿಗೆ ಬೆಲೆ ಕೊಡುವುದು | |
(3) | ಹಳದಿ ಬಣ್ಣದ ಕಿವಿ | |
(4) | ಹಿತ್ತಾಳೆ ಒಡವೆ ಕಿವಿ |
CORRECT ANSWER
(2) ಚಾಡಿ ಮಾತಿಗೆ ಬೆಲೆ ಕೊಡುವುದು
ಸೂಚನೆ: ಕೆಳಗೆ ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕವಾದ ಶಬ್ದಗಳನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 62-66)
ಉದಾ: | ||
ಅಂತರ್ವಾಣಿ | ||
(1) | ಹೊರವಾಣಿ | |
(2) | ದುರ್ವಾಣಿ | |
(3) | ಬಹಿರ್ವಾಣಿ | |
(4) | ಒಳಗಿನ ವಾಣಿ |
ಇಲ್ಲಿ (3) ‘ಬಹಿರ್ವಾಣಿ’ ಸರಿಯಾದ ಉತ್ತರ. ಆದ್ದರಿಂದ (3) ಎಂದು ಗುರುತಿಸಿ.
62. | ದುರ್ದೈವ | |
(1) | ದೈವ | |
(2) | ಸುದೈವ | |
(3) | ಅದೈವ | |
(4) | ನಿರ್ದೈವ |
CORRECT ANSWER
(2) ಸುದೈವ
63. | ಸಂಯೋಗ | |
(1) | ಸವಿಯೋಗ | |
(2) | ವಿಯೋಗ | |
(3) | ಅಯೋಗ | |
(4) | ಅನುಯೋಗ |
CORRECT ANSWER
(2) ವಿಯೋಗ
64. | ಕೃತಜ್ಞ | |
(1) | ಕ್ರುತಜ್ಞ | |
(2) | ಕೃತಜ್ಞ | |
(3) | ಸುಕೃತಜ್ಞ | |
(4) | ಕೃತಘ್ನ |
CORRECT ANSWER
(4) ಕೃತಘ್ನ
65. | ಸಾಮಾನ್ಯತೆ | |
(1) | ಅಸಮಾನ್ಯತೆ | |
(2) | ಅಸಫಲತೆ | |
(3) | ಸಹಜತೆ | |
(4) | ಅರಸಿಕತೆ |
CORRECT ANSWER
(1) ಅಸಮಾನ್ಯತೆ
66. | ಪ್ರಾಚೀನ | |
(1) | ಅಪ್ರಾಚೀನ | |
(2) | ನಿರ್ವಾಚೀನ | |
(3) | ಅರ್ವಾಚೀನ | |
(4) | ಅಪ್ರಚೀನ |
CORRECT ANSWER
(3) ಅರ್ವಾಚೀನ
ಸೂಚನೆ: ಈ ಶಬ್ದಗಳಿಗೆ ಸಮಾನಾರ್ಥಕವಾದ, ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 67-71)
ಉದಾ: | ||
‘ಕೆಂಗದಿರ’– ಎಂದರೆ | ||
(1) | ನಕ್ಷತ್ರ | |
(2) | ಧೂಮಕೇತು | |
(3) | ಚಂದ್ರ | |
(4) | ಸೂರ್ಯ |
ಇವುಗಳಲ್ಲಿ ಸೂರ್ಯ (4) ಸರಿಯಾದ ಅರ್ಥ ಹೇಳುವುದರಿಂದ (4)ನ್ನು ಗುರುತಿಸಬೇಕು.
67. | ‘ವೈಜ್ಞಾನಿಕ’ ಎಂದರೆ | |
(1) | ವಿಶೇಷ ಜ್ಞಾನವುಳ್ಳ | |
(2) | ವಿಚಾರ ಶೀಲವುಳ್ಳ | |
(3) | ವಿಜ್ಞಾನಕ್ಕೆ ಸಂಬಂಧಿಸಿದ | |
(4) | ಶಾಸ್ತ್ರಗಳನ್ನು ಹೀಗಳಿಯುವ |
CORRECT ANSWER
(3) ವಿಜ್ಞಾನಕ್ಕೆ ಸಂಬಂಧಿಸಿದ
68. | ‘ಹರಿ’– ಎಂಬುದರ ಅರ್ಥ | |
(1) | ಪ್ರವಹಿಸು | |
(2) | ಚೂರು ಮಾಡು | |
(3) | ಓಡಾಡು | |
(4) | ಸ್ವೇಚ್ಛೆ |
CORRECT ANSWER
(1) ಪ್ರವಹಿಸು
(2) ಚೂರು ಮಾಡು
69. | ‘ಸಹೃದಯ’ | |
(1) | ಸಮಾನ ಮನಸ್ಸುಳ್ಳ | |
(2) | ಕರುಣಾಮಯ | |
(3) | ಒಳ್ಳೆಯ ಭಾವನೆ | |
(4) | ಪ್ರೀತಿಯ ಮನಸ್ಸು |
CORRECT ANSWER
(1) ಸಮಾನ ಮನಸ್ಸುಳ್ಳ
70. | ‘ಚದುರ’ ಎಂದರೆ | |
(1) | ಸೊಗಸುಗಾರ | |
(2) | ಬುದ್ಧಿವಂತ | |
(3) | ಜಾಣ | |
(4) | ಚೆಲುವ |
CORRECT ANSWER
(2) ಬುದ್ಧಿವಂತ
(3) ಜಾಣ
71. | ‘ಮಹಲು’ ಎಂದರೆ | |
(1) | ಉಪ್ಪರಿಗೆ | |
(2) | ಸೌಧ | |
(3) | ಅರಮನೆ | |
(4) | ಮಹಡಿ |
CORRECT ANSWER
(2) ಸೌಧ
ಸೂಚನೆ: ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಮೂರು ಭಾಗಗಳಾಗಿ ವಿಭಜಿಸಿ ಪ್ರತಿಭಾಗದ ಕೆಳಗೆ ಗೆರೆ ಎಳೆಯಲಾಗಿದೆ. ಅವುಗಳಿಗೆ (1), (2) ಮತ್ತು (3) ಎಂಬ ಸಂಕೇತಗಳನ್ನು ಕೊಡಲಾಗಿದೆ. (4)ನೆಯದನ್ನು ತಪ್ಪಿಲ್ಲ ಎಂದು ಕರೆದು (4) ಎಂಬ ಸಂಕೇತ ಕೊಡಲಾಗಿದೆ. ಈಗ ತಪ್ಪಾದ ಭಾಗವನ್ನು ಗುರುತಿಸಿರಿ. ತಪ್ಪಿಲ್ಲದಿದ್ದರೆ (4)ನೇ ಸಂಕೇತವನ್ನು ಗುರುತಿಸಿರಿ.(ಪ್ರಶ್ನೆ ಸಂಖ್ಯೆ 72-76)
ಉದಾ: | ||
ಜೀವಸೃಷ್ಟಿಗೆ ಪ್ರಕೃತಿ | ||
(1) | ||
ಕಾರಣವಾದಂತೆ | ||
(2) | ||
ಜೀವನಾಶಕ್ಕೂ ಪ್ರಕೃತಿ ಕಾರಣವಾಗುತ್ತಿದೆ. | ||
(3) | ||
ತಪ್ಪಿಲ್ಲ | ||
(4) |
ಇದರ (3)ನೇ ಭಾಗದಲ್ಲಿ ಪುನರಾವರ್ತನೆಯಾಗಿರುವ ಪ್ರಕೃತಿ ಪದ ತಪ್ಪು. ಆದ್ದರಿಂದ (3) ತಪ್ಪೆಂದು ಭಾವಿಸಿ ಗುರುತಿಸಬಹುದು.
72. | ನಾಳೆ | |
(1) | ||
ಮಳೆ ಬರುತ್ತದೆಂದು | ||
(2) | ||
ಜೋಯಿಸರು ಹೇಳಿದರು. | ||
(3) | ||
ತಪ್ಪಿಲ್ಲ | ||
(4) |
CORRECT ANSWER
(2)
73. | ಮಳೆ ಬಿದ್ದ ಕಡೆ, | |
(1) | ||
ಹುಲ್ಲು | ||
(2) | ||
ಬೆಳೆಯುತ್ತಿದೆ. | ||
(3) | ||
ತಪ್ಪಿಲ್ಲ | ||
(4) |
CORRECT ANSWER
(4)
74. | ಸೂರ್ಯ | |
(1) | ||
ಕೆರೆಯ | ||
(2) | ||
ತಾವರೆ ಅರಳಿತು. | ||
(3) | ||
ತಪ್ಪಿಲ್ಲ | ||
(4) |
CORRECT ANSWER
(3)
75. | ಬೇಸಿಗೆಯ ಬಿಸಿಲಿನಿಂದ, | |
(1) | ||
ಹಿಮಗಾಲದ | ||
(2) | ||
ಮಂಜುಕರಗಿತು. | ||
(3) | ||
ತಪ್ಪಿಲ್ಲ | ||
(4) |
CORRECT ANSWER
(1)
76. | ಹಿರಿಯರ ಮಾತನ್ನು, | |
(1) | ||
ಕೇಳುವ ಮನುಷ್ಯನು, | ||
(2) | ||
ಮುಂದೆ ಬರುವನು. | ||
(3) | ||
ತಪ್ಪಿಲ್ಲ | ||
(4) |
CORRECT ANSWER
(4)
ಸೂಚನೆ: ಕೆಳಗಿನ ವಾಕ್ಯಗಳಲ್ಲಿ ಗೆರೆಯಿಂದ ಸೂಚಿಸಿದ ಭಾಗದಲ್ಲಿ ದೋಷವಿದ್ದರೆ, ಮುಂದೆ ಕೊಡಲಾದ ಮೂರು ರೂಪಗಳಲ್ಲಿ ಸರಿಯಾದುದನ್ನು ಗುರುತಿಸಿರಿ. ದೋಷವಿಲ್ಲದಿದ್ದರೆ ಸರಿಯಾಗಿದೆ ಎಂಬುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 77-81)
ಉದಾ: | ||
ಯೋಧರು ಶಿರಸ್ತ್ರಾಣವನ್ನು ಧರಿಸುವುದು ಉಚಿತ. | ||
(1) | ಶಿರಸ್ಥ್ರಾಣ | |
(2) | ಸಿರಸ್ತ್ರಾಣ | |
(3) | ಶಿರಶ್ತ್ರಾಣ | |
(4) | ಸರಿಯಾಗಿದೆ |
ಇಲ್ಲಿ (4) ಸರಿಯಾಗಿದೆ. ಆದ್ದರಿಂದ (4)ನ್ನು ಗುರುತಿಸಿರಿ.
77. | ಆಸ್ಪತ್ರೆಯ ಪಾರ್ಷ್ವದಲ್ಲಿ ಶಾಲೆಯೊಂದು ಬಂದಿತು. | |
(1) | ಪಾರ್ಶದಲ್ಲಿ | |
(2) | ಪಾರ್ಶ್ವದಲ್ಲಿ | |
(3) | ಪಾರ್ಸ್ವದಲ್ಲಿ | |
(4) | ಸರಿಯಾಗಿದೆ |
CORRECT ANSWER
(2) ಪಾರ್ಶ್ವದಲ್ಲಿ
78. | ಗಂದರ್ವರೆಂದರೆ ದೇವತೆಗಳ ಒಂದು ವರ್ಗ. | |
(1) | ಗಾಂಧರ್ವ | |
(2) | ಗಂಧರ್ವ | |
(3) | ಗಾಂದರ್ವ | |
(4) | ಸರಿಯಾಗಿದೆ |
CORRECT ANSWER
(2) ಗಂಧರ್ವ
79. | ‘ನಗರಿಕರಣ’ ಕ್ಕೂ ಕೈಗಾರಿಕೀಕರಣಕ್ಕೂ ನಿಕಟ ಸಂಬಂಧವಿದೆ. | |
(1) | ನಾಗರಿಕಾರಣ | |
(2) | ನಾಗರೀಕರಣ | |
(3) | ನಗರೀಕರಣ | |
(4) | ಸರಿಯಾಗಿದೆ |
CORRECT ANSWER
(3) ನಗರೀಕರಣ
80. | ‘ರುಜುವಾತು’ ಇಲ್ಲದೆ ಯಾವ ಕಾರ್ಯಸಾಧನೆಯೂ ಆಗದು. | |
(1) | ಋಜವಾತು | |
(2) | ರುಜುಮಾತು | |
(3) | ರೂಜುವಾತು | |
(4) | ಸರಿಯಾಗಿದೆ |
CORRECT ANSWER
(4) ಸರಿಯಾಗಿದೆ
81. | ಇಂಥದೊಂದು ಅವಸ್ಥೆ ಸಮಾಜ ವ್ಯವಸ್ಥೆಯ ಸೂಚಿ. | |
(1) | ವ್ಯವಸ್ಥೆ | |
(2) | ವೆವಸ್ಥೆ | |
(3) | ಯೆವಸ್ತೆ | |
(4) | ಸರಿಯಾಗಿದೆ |
CORRECT ANSWER
(4) ಸರಿಯಾಗಿದೆ
ಸೂಚನೆ: ಕೆಳಗೆ ಕೊಟ್ಟಿರುವ ಪದಗಳನ್ನು ಸುಧಾರಿಸಿ, ಸುಧಾರಣೆ ಇಲ್ಲದಿದ್ದರೆ ‘ಸುಧಾರಣೆ ಇಲ್ಲ’ ಎಂದು ಗುರುತಿಸಿ.(ಪ್ರಶ್ನೆ ಸಂಖ್ಯೆ 82-86)
82. | ಶಿಲೀಂದ್ರ | |
(1) | ಸಿಲೀಂದ್ರ | |
(2) | ಶಿಲಿಂದ್ರ | |
(3) | ಷಿಲೀಂದ್ರ | |
(4) | ಸುಧಾರಣೆ ಇಲ್ಲ |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
83. | ಜಾತ್ಯತೀತ | |
(1) | ಜೌತ್ಯತೀತ | |
(2) | ಜಾತ್ಯಾತಿತ | |
(3) | ಜತ್ಯಾತೀತ | |
(4) | ಸುಧಾರಣೆ ಇಲ್ಲ |
CORRECT ANSWER
(4) ಸುಧಾರಣೆ ಇಲ್ಲ
84. | ಯಶಶ್ಚಂದ್ರಿಕೆ | |
(1) | ಯಶಸ್ಚಂದ್ರಿಕೆ | |
(2) | ಯಶಚಂದ್ರಿಕೆ | |
(3) | ಯಸಶ್ಚಂದ್ರಿಕೆ | |
(4) | ಸುಧಾರಣೆ ಇಲ್ಲ |
CORRECT ANSWER
(4) ಸುಧಾರಣೆ ಇಲ್ಲ
85. | ಕೀರ್ತಿಶೇಷ | |
(1) | ಕೀರ್ತಿಷೇಶ | |
(2) | ಕೀರ್ತಿಸೇಷ | |
(3) | ಕೀರ್ತಿಶೇಸ | |
(4) | ಸುಧಾರಣೆ ಇಲ್ಲ |
CORRECT ANSWER
(4) ಸುಧಾರಣೆ ಇಲ್ಲ
86. | ಆಂಜಿನೇಯ | |
(1) | ಆಂಜನೇಯ | |
(2) | ಅಂಜನೇಯ | |
(3) | ಅಂಜನೀಯ | |
(4) | ಸುಧಾರಣೆ ಇಲ್ಲ |
CORRECT ANSWER
(1) ಆಂಜನೇಯ
ಸೂಚನೆ: ಖಾಲಿ ಇರುವ ಜಾಗಕ್ಕೆ ಸರಿಯಾದ ಉತ್ತರವನ್ನು ಸೂಚಿಸಿರಿ. ಪ್ರಶ್ನೆ ಸಂಖ್ಯೆ (87-91)
ಉದಾ: | ||
ನಾನು ಈಗ ಬಂದೆನು.- ಇಲ್ಲಿ ‘ನಾನು’ ಎಂಬುದು | ||
(1) | ಅಂಕಿತನಾಮ | |
(2) | ರೂಢನಾಮ | |
(3) | ಭಾವನಾಮ | |
(4) | ಸರ್ವನಾಮ |
ಇಲ್ಲಿ ಸರ್ವನಾಮ ಎಂಬುದು ಸರಿಯಾದ ಉತ್ತರ. ಆದ್ದರಿಂದ (4)ನ್ನು ಗುರುತಿಸಬೇಕು.
87. | ಬಂಡೆಗಲ್ಲು-ಎಂಬುದು | |
(1) | ಆಗಮಸಂಧಿ | |
(2) | ಆದೇಶಸಂಧಿ | |
(3) | ಗುಣಸಂಧಿ | |
(4) | ಯಾವುದೂ ಸರಿಯಲ್ಲ |
CORRECT ANSWER
(2) ಆದೇಶಸಂಧಿ
88. | ಮಳೆಯಲ್ಲಿ- ಎಂಬುದು | |
(1) | ಸಂಬೋಧನಾ ವಿಭಕ್ತಿ | |
(2) | ಚತುರ್ಥೀ ವಿಭಕ್ತಿ | |
(3) | ಸಪ್ತಮಿ ವಿಭಕ್ತಿ | |
(4) | ತೃತೀಯ ವಿಭಕ್ತಿ |
CORRECT ANSWER
(3) ಸಪ್ತಮಿ ವಿಭಕ್ತಿ
89. | ‘ತುದಿನಾಲಗೆ’- ಎಂಬುದು | |
(1) | ತತ್ಪುರುಷ ಸಮಾಸ | |
(2) | ಗಮಕ ಸಮಾಸ | |
(3) | ಕರ್ಮಧಾರಯ ಸಮಾಸ | |
(4) | ಅಂಶಿ ಸಮಾಸ |
CORRECT ANSWER
(4) ಅಂಶಿ ಸಮಾಸ
90. | ‘ಪರ್ವತ’ ಎಂಬುದು | |
(1) | ರೂಢನಾಮ | |
(2) | ಅನ್ವರ್ಥನಾಮ | |
(3) | ಸರ್ವನಾಮ | |
(4) | ಅಂಕಿತನಾಮ |
CORRECT ANSWER
(1) ರೂಢನಾಮ
91. | ‘ಮರದಿಂದ ಹಣ್ಣು ಬಿದ್ದಿತು’ – ಈ ವಾಕ್ಯದಲ್ಲಿ ಮರದಿಂದ ಎಂಬುದು | |
(1) | ತೃತೀಯ ವಿಭಕ್ತಿ | |
(2) | ಪಂಚಮಿ ವಿಭಕ್ತಿ | |
(3) | ಷಷ್ಠಿ ವಿಭಕ್ತಿ | |
(4) | ಪ್ರಥಮ ವಿಭಕ್ತಿ |
CORRECT ANSWER
(2) ಪಂಚಮಿ ವಿಭಕ್ತಿ
ಸೂಚನೆ: ಕೆಳಗಿನ ಖಾಲಿ ಸ್ಥಾನವನ್ನು ಸೂಕ್ತ ಉತ್ತರದಿಂದ ತುಂಬಿರಿ. (ಪ್ರಶ್ನೆ ಸಂಖ್ಯೆ 92-96)
92. | ‘ಚಂದ್ರೋದಯ’ ಎಂಬುದು….. | |
(1) | ವೃದ್ಧಿ ಸಂಧಿ | |
(2) | ಯಣ್ ಸಂಧಿ | |
(3) | ಗುಣ ಸಂಧಿ | |
(4) | ಸವರ್ಣ ದೀರ್ಘ ಸಂಧಿ |
CORRECT ANSWER
(3) ಗುಣ ಸಂಧಿ
93. | ‘ಕೈ ತಪ್ಪು’ ಎಂಬುದು…… | |
(1) | ಲೋಪ ಸಂಧಿ | |
(2) | ಆದೇಶ ಸಂಧಿ | |
(3) | ಸಂಧಿ ಕಾರ್ಯಂ ಇಲ್ಲ | |
(4) | ಆಗಮ ಸಂಧಿ |
CORRECT ANSWER
(3) ಸಂಧಿ ಕಾರ್ಯ ಇಲ್ಲ
94. | ‘ಸಂದೋನ್’ – ಈ ಕ್ರಿಯಾ ರೂಪ ಯಾವ ಕನ್ನಡದಲ್ಲಿ ಬಳಕೆಯಾಗಿತ್ತು. | |
(1) | ನಡುಗನ್ನಡ | |
(2) | ಪೂರ್ವ ಹಳಗನ್ನಡ | |
(3) | ಹಳಗನ್ನಡ | |
(4) | ಹೊಸಗನ್ನಡ |
CORRECT ANSWER
(2) ಪೂರ್ವ ಹಳಗನ್ನಡ
95. | ‘ಪಂಚೇಂದ್ರಿಯ’ ಎಂಬುದು….. | |
(1) | ದ್ವಂದ್ವ ಸಮಾಸ | |
(2) | ಅಂಶಿ ಸಮಾಸ | |
(3) | ದ್ವಿಗು ಸಮಾಸ | |
(4) | ಬಹುರ್ವೀಹಿ ಸಮಾಸ |
CORRECT ANSWER
(3) ದ್ವಿಗು ಸಮಾಸ
96. | ‘ಸುಮ್ಮನೆ’ ಎಂಬುದು………. | |
(1) | ಸಾಮಾನ್ಯ ಅವ್ಯಯ | |
(2) | ಅನುಕರಣ ಅವ್ಯಯ | |
(3) | ನಿಪಾತ ಅವ್ಯಯ | |
(4) | ಅವಧಾರಣ ಅವ್ಯಯ |
CORRECT ANSWER
(1) ಸಾಮಾನ್ಯ ಅವ್ಯಯ
ಸೂಚನೆ: ಕೆಳಗಿನ ಪ್ರಶ್ನೆಗಳಿಗೆ ಸಂಖ್ಯೆಗಳಿಂದ ಗುರುತಿಸಿರಿ. (ಪ್ರಶ್ನೆ ಸಂಖ್ಯೆ 97-100)
‘ಹಚ್ಚೇವು ಕನ್ನಡದ ದೀಪ’- ಈ ಗೀತೆಯ ರಚನೆ ಯಾರದು? | ||
(1) | ಕರ್ಕಿ | |
(2) | ಕುವೆಂಪು | |
(3) | ಕಾವ್ಯಾನಂದ | |
(4) | ರಾಜರತ್ನಂ |
ಈ ಗೀತ ರಚನೆಕಾರರು ಕರ್ಕಿಯವರು ಆದ್ದರಿಂದ (1)ನ್ನು ಗುರುತಿಸಿರಿ
97. | ‘ಕಾವ್ಯಾರ್ಥ ಪದಕೋಶ’- ಕೃತಿಯ ಕರ್ತೃ | |
(1) | ರಂ.ಶ್ರೀ. ಮುಗಳಿ | |
(2) | ಜಿ.ಎಸ್.ಶಿವರುದ್ರಪ್ಪ | |
(3) | ವಿ.ಎಲ್.ಇನಾಂದಾರ್ | |
(4) | ಟಿ.ವಿ.ವೆಂಕಟಾಚಲಶಾಸ್ತ್ರಿ |
CORRECT ANSWER
(2) ಜಿ.ಎಸ್.ಶಿವರುದ್ರಪ್ಪ
98. | ಟಿಂಗರಬುಡ್ಡಣ್ಣ- ಈ ನಾಟಕ ಯಾರದು? | |
(1) | ಪರ್ವತವಾಣಿ | |
(2) | ಚಂದ್ರಶೇಖರ ಕಂಬಾರ | |
(3) | ಚಂದ್ರಶೇಖರ ಪಾಟೀಲ | |
(4) | ಬರಗೂರು ರಾಮಚಂದ್ರಪ್ಪ |
CORRECT ANSWER
(3) ಚಂದ್ರಶೇಖರ ಪಾಟೀಲ
99. | ‘ಮಾನವ ಜನ್ಮ ದೊಡ್ಡದು’- ಯಾವ ದಾಸರ ಕೀರ್ತನೆಯ ಸಾಲು | |
(1) | ಪುರಂದರದಾಸರು | |
(2) | ಕನಕದಾಸರು | |
(3) | ವಿಜಯದಾಸರು | |
(4) | ಮೋಹನದಾಸರು |
CORRECT ANSWER
(1) ಪುರಂದರದಾಸರು
100. | ‘ಸಂಜೆ ಐದರ ಮಳೆ’ ಕವನ ಸಂಕಲನ ಯಾರದು? | |
(1) | ಎಚ್.ಎಸ್.ಶಿವಪ್ರಕಾಶ್ | |
(2) | ನಿಸಾರ್ ಅಹಮದ್ | |
(3) | ಗೋಪಾಲ ಕೃಷ್ಣ ಅಡಿಗ | |
(4) | ಚೆನ್ನವೀರ ಕಣವಿ |
CORRECT ANSWER
(2) ನಿಸಾರ್ ಅಹಮದ್