WhatsApp Group Join Now
Telegram Group Join Now

SDA General knowledge Previous Paper (K) 2011

KPSC : ದ್ವಿತೀಯ ದರ್ಜೆ ಸಹಾಯಕ : ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆ

 

1.ಸೌರಶಕ್ತಿ ಹೇಗೆ ಉಂಟಾಗುತ್ತದೆ?
 (1)ನ್ಯೂಕ್ಲಿಯರ್ ವಿದಳನ
 (2)ನ್ಯೂಕ್ಲಿಯರ್ ಸಂಲಯನ
 (3)ದಹನ
 (4)ರಾಸಾಯನಿಕ ಪ್ರತಿಕ್ರಿಯೆ
CORRECT ANSWER

(2) ನ್ಯೂಕ್ಲಿಯರ್ ಸಂಲಯನ


2.ಹಸಿರುಮನೆ ಪರಿಣಾಮವನ್ನು ಉಂಟುಮಾಡುವುದಕ್ಕೆ ಮುಖ್ಯವಾಗಿ ಕಾರಣವಾಗುವ ಅನಿಲ ಯಾವುದು?
 (1)ಆಮ್ಲಜನಕ
 (2)ಸಾರಜನಕ
 (3)ಓಜೋನ್
 (4)ಇಂಗಾಲದ ಡಯಾಕ್ಸೈಡ್
CORRECT ANSWER

(4) ಇಂಗಾಲದ ಡಯಾಕ್ಸೈಡ್


3.ಭೂಕಂಪನದ ತೀವ್ರತೆಯ ವ್ಯಾಪ್ತಿಯನ್ನು ಈ ಕೆಳಕಂಡ ಅಳತೆಪಟ್ಟಿಯಿಂದ ಮಾಪನ ಮಾಡಲಾಗುತ್ತದೆ.
 (1)ರಿಕ್ಟರ್
 (2)ಕೆಲ್ವಿನ್
 (3)ಪ್ಯಾಸ್ಕಲ್
 (4)ನ್ಯೂಟನ್
CORRECT ANSWER

(1) ರಿಕ್ಟರ್


4.ಈ ಕೆಳಗಿನ ಯಾವ ಪದಾರ್ಥವು ಅರೆವಾಹಕವಾಗಿದೆ?
 (1)ಮರ
 (2)ತಾಮ್ರ
 (3)ಸಿಲಿಕಾನ್
 (4)ವಜ್ರ
CORRECT ANSWER

(3) ಸಿಲಿಕಾನ್


5.ದೂರದರ್ಶನದ ಕಾರ್ಯಾಚರಣೆಗಾಗಿ ರಿಮೋಟ್ ಕಂಟ್ರೋಲ್ಅನ್ನು ಬಳಸಿದಾಗ ಪ್ರಸರಣಗೊಳ್ಳುವ ವಿಕಿರಣ ಯಾವ ಬಗೆಯದು?
 (1)ಅತಿರಕ್ತ ವಿಕಿರಣ
 (2)ಅತಿನೇರಳೆ ವಿಕಿರಣ
 (3)X- ಕಿರಣ
 (4)ಗಾಮಾ ಕಿರಣ
CORRECT ANSWER

(1) ಅತಿರಕ್ತ ವಿಕಿರಣ


6.ಕಬ್ಬಿಣಾಂಶದ ಕೊರತೆಯಿಂದ ಯಾವ ರೀತಿಯ ತೊಂದರೆ ಉಂಟಾಗುತ್ತದೆ
 (1)ರಕ್ತ ಹೀನತೆ
 (2)ಇರುಳು ಗಣ್ಣು (ರಾತ್ರಿ ದೃಷ್ಟಿಮಾಂದ್ಯ)
 (3)ಸ್ಕರ್ವಿ
 (4)ಬೆರಿ-ಬೆರಿ
CORRECT ANSWER

(1) ರಕ್ತ ಹೀನತೆ


7.ಮನುಷ್ಯನ ಶರೀರದಲ್ಲಿರುವ ಅತಿ ದೊಡ್ಡ ಗ್ರಂಥಿ ಯಾವುದು?
 (1)ಥೈರಾಯಿಡ್
 (2)ಪಿಟ್ಯುಟರಿ
 (3)ಪೀನಿಯಲ್
 (4)ಲಿವರ್
CORRECT ANSWER

(4) ಲಿವರ್


8.ವಾತಾವರಣದ ಯಾವ ಪದರದಲ್ಲಿ ಓಜೋನ್ ಇರುತ್ತದೆ?
 (1)ಟ್ರೋಪೊಸ್ಫಿಯರ್
 (2)ಸ್ಟ್ರಾಟೊಸ್ಫಿಯರ್
 (3)ಮೀಸೊಸ್ಫಿಯರ್
 (4)ಥರ್ಮೋಸ್ಫಿಯರ್
CORRECT ANSWER

(2) ಸ್ಟ್ರಾಟೊಸ್ಫಿಯರ್


9.ಸರ್ ಸಿ.ವಿ.ರಾಮನ್ ಅವರಿಗೆ ಭೌತಶಾಸ್ತ್ರದಲ್ಲಿ ಅವರು ಈ ಕೆಳಕಂಡದ್ದನ್ನು ಕುರಿತು ಮಾಡಿದ ಅಧ್ಯಯನಕ್ಕಾಗಿ ನೊಬೆಲ್ ಬಹುಮಾನ ನೀಡಲಾಯಿತು.
 (1)ಚದುರಿಕೆ
 (2)ವ್ಯತಿಕರಣ
 (3)ವಿವರ್ತನೆ
 (4)ಧ್ರುವೀಕರಣ
CORRECT ANSWER

(1) ಚದುರಿಕೆ


10.ತುಂಬ ಬಿಸಿಲಿನ ದಿನಗಳಲ್ಲಿ ಗೋಚರಿಸುವ ಮರೀಚಿಕೆಗಳಿಗೆ ಕಾರಣವಾಗುವ ಪ್ರಕ್ರಿಯೆ
 (1)ಪ್ರತಿಫಲನ
 (2)ವಕ್ರೀಭವನ
 (3)ಸಂಪೂರ್ಣ ಆಂತರಿಕ ಪ್ರತಿಫಲನ
 (4)ಪ್ರತಿಫಲನ ಹಾಗೂ ವಕ್ರೀಭವನಗಳೆರಡೂ
CORRECT ANSWER

(3) ಸಂಪೂರ್ಣ ಆಂತರಿಕ ಪ್ರತಿಫಲನ


11.ಭೂಮಿಯ ಸುತ್ತ ಕಕ್ಷೆಯಲ್ಲಿರುವ ಉಪಗ್ರಹವು ಕೆಳಕಂಡ ಸಂದರ್ಭಗಳಲ್ಲಿ ಸ್ಥಬ್ಧವಾಗಿರುವಂತೆ ತೆೋರುತ್ತದೆ.
 (1)ಅದರ ಕಾಲಾವರ್ತವು ಒಂದು ದಿನವಾಗಿದ್ದು ಅದು ಭೂಮಿಯಂತೆಯೇ ಪರಿಭ್ರಮಿಸುತ್ತಿರುವಾಗ
 (2)ಅದರ ಕಾಲಾವರ್ತವು ಒಂದು ದಿನವಾಗಿದ್ದು ಅದರ ಪರಿಭ್ರಮಣವು ಭೂಮಿಯ ದಿಕ್ಕಿಗೆ ಅಭಿಲಂಬವಾಗಿದ್ದಾಗ (Normal)
 (3)ಅದರ ಕಾಲಾವರ್ತವು 12 ಗಂಟೆಗಳಾಗಿದ್ದು ಅದು ಭೂಮಿಯ ದಿಕ್ಕಿನಲ್ಲಿಯೇ ಪರಿಭ್ರಮಿಸುತ್ತಿದ್ದಾಗ
 (4)ಅದರ ಕಾಲಾವರ್ತವು 12 ಗಂಟೆಗಳಾಗಿದ್ದು ಅದು ಭೂಮಿಗೆ ಅಧಿಲಂಬವಾಗಿ ಪರಿಭ್ರಮಿಸುತ್ತಿರುವಾಗ
CORRECT ANSWER

(1) ಅದರ ಕಾಲಾವರ್ತವು ಒಂದು ದಿನವಾಗಿದ್ದು ಅದು ಭೂಮಿಯಂತೆಯೇ ಪರಿಭ್ರಮಿಸುತ್ತಿರುವಾಗ


12.ಇಂಗಾಲದ ಯಾವ ರೂಪವು ಉತ್ತಮ ವಾಹಕವಾಗಿದೆ?
 (1)ಅಸ್ಫಟಿಕರೂಪ
 (2)ವಜ್ರ
 (3)ಗ್ರಾಫೈಟ್
 (4)ಕಲ್ಲಿದ್ದಲು
CORRECT ANSWER

(3) ಗ್ರಾಫೈಟ್


13.ಒಂದು ಅಡುಗೆಯ ಪಾತ್ರೆಗೆ ಈ ಕೆಳಕಂಡ ಯಾವ ಗುಣಧರ್ಮಗಳ ಸಂಯೋಜನೆಯು ಹೆಚ್ಚು ಅಪೇಕ್ಷಣೀಯ?
 (1)ಅಧಿಕವಾದ ವಿಶಿಷ್ಟ ಉಷ್ಣತೆ ಮತ್ತು ಕಡಿಮೆ ಶಾಖ ವಹನತ್ವ
 (2)ಕಡಿಮೆ ವಿಶಿಷ್ಟ ಉಷ್ಣತೆ ಮತ್ತು ಅಧಿಕ ಶಾಖ ವಹನತ್ವ
 (3)ಅಧಿಕ ವಿಶಿಷ್ಟ ಉಷ್ಣತೆ ಮತ್ತು ಅಧಿಕ ಶಾಖ ವಹನತ್ವ
 (4)ಕಡಿಮೆ ವಿಶಿಷ್ಟ ಉಷ್ಣತೆ ಮತ್ತು ಕಡಿಮೆ ಶಾಖ ವಹನತ್ವ
CORRECT ANSWER

(2) ಕಡಿಮೆ ವಿಶಿಷ್ಟ ಉಷ್ಣತೆ ಮತ್ತು ಅಧಿಕ ಶಾಖ ವಹನತ್ವ


14.ಒಂದು 220 ವೋಲ್ಟ್ ಸಾಲಿನ ಮೇಲೆ ಒಂದು 25 ವ್ಯಾಟ್ 220 ವೋಲ್ಟ್ ಬಲ್ಬನ್ನು ಮತ್ತು 100 ವ್ಯಾಟ್ 220 ವೋಲ್ಟ್ ಬಲ್ಬನ್ನು ಸರಣಿಯಲ್ಲಿ ಸಂಪರ್ಕಿಸಲಾಗಿದೆ. ಹೀಗಿದ್ದಾಗ
 (1)25 ವ್ಯಾಟ್‌ನ ಬಲ್ಬು ಪ್ರಖರವಾಗಿ ಪ್ರಕಾಶಿಸುತ್ತದೆ
 (2)100 ವ್ಯಾಟ್‌ನ ಬಲ್ಬು ಪ್ರಖರವಾಗಿ ಪ್ರಕಾಶಿಸುತ್ತದೆ
 (3)ಎರಡೂ ಸಹ ಸಮಾನ ಪ್ರಖರತೆಯಿಂದ ಪ್ರಕಾಶಿಸುತ್ತವೆ
 (4)ಇವೆರಡರಲ್ಲಿ ಯಾವುದೂ ಪ್ರಕಾಶಮಾನವಾಗಿರುವುದಿಲ್ಲ
CORRECT ANSWER

(1) 25 ವ್ಯಾಟ್‌ನ ಬಲ್ಬು ಪ್ರಖರವಾಗಿ ಪ್ರಕಾಶಿಸುತ್ತದೆ


15.ರಾಷ್ಟ್ರಪತಿಯವರ ಹುದ್ದೆಗೆ ನಿಗದಿಪಡಿಸಲಾದ ಅರ್ಹತೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಲ್ಲ?
 (1)ಅವರು ಭಾರತದ ಪ್ರಜೆಯಾಗಿರತಕ್ಕದ್ದು
 (2)ಅವರು ಸಂಸತ್ತಿನ ಹಾಲಿ ಸದಸ್ಯರಾಗಿರತಕ್ಕದ್ದು
 (3)ಅವರ ವಯಸ್ಸು 35 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟಿರಬೇಕು
 (4)ಅವರು ಭಾರತ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರತಕ್ಕದ್ದಲ್ಲ
CORRECT ANSWER

(2) ಅವರು ಸಂಸತ್ತಿನ ಹಾಲಿ ಸದಸ್ಯರಾಗಿರತಕ್ಕದ್ದು


16.ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
ಎಲ್ಲ ಪ್ರಜೆಗಳಿಗೂ
 (1)ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇರುತ್ತದೆ
 (2)ತಮ್ಮ ವಾಕ್ ಮತ್ತು ಅಭಿವ್ಯಕ್ತಿಯಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇರುವುದಿಲ್ಲ
 (3)ಭಾರತದಾದ್ಯಂತ ಮುಕ್ತವಾಗಿ ಸಂಚರಿಸುವ ಹಕ್ಕು ಹೊಂದಿರುತ್ತಾರೆ
 (4)ಯಾವುದೇ ವೃತ್ತಿಯನ್ನು ಕೈಗೊಳ್ಳುವ ಅಥವಾ ಯಾವುದೇ ವ್ಯಾಪಾರವನ್ನು ನಡೆಸುವ ಹಕ್ಕು ಹೊಂದಿರುತ್ತಾರೆ.
CORRECT ANSWER

(2) ತಮ್ಮ ವಾಕ್ ಮತ್ತು ಅಭಿವ್ಯಕ್ತಿಯಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇರುವುದಿಲ್ಲ


17.ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ಕೆಳಗಿನವರಲ್ಲಿ ಯಾರನ್ನು ಸಂಬೋಧಿಸಿ ಸ್ವ ಹಸ್ತಾಕ್ಷರದಲ್ಲಿ ತಮ್ಮ ರಾಜೀನಾಮೆಯನ್ನು ಸಲ್ಲಿಸಬಹುದು
 (1)ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ
 (2)ಭಾರತದ ಮುಖ್ಯ ನ್ಯಾಯಾಧೀಶರಿಗೆ
 (3)ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರಿಗೆ
 (4)ಭಾರತದ ರಾಷ್ಟ್ರಪತಿಯವರಿಗೆ
CORRECT ANSWER

(4) ಭಾರತದ ರಾಷ್ಟ್ರಪತಿಯವರಿಗೆ


18.ಈ ಕೆಳಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸತಕ್ಕದ್ದು
 (1)ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲದಂತಹ ಯಾವುದೇ ಹಿಂದುಳಿದ ವರ್ಗಗಳ ಪ್ರಜೆಗಳ ಪರವಾಗಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಯಾವ ರೀತಿ ಮೀಸಲಾತಿಯ ಅವಕಾಶಗಳನ್ನು ಮಾಡಬಹುದು ಎಂಬ ಬಗ್ಗೆ
 (2)ಒಂದು ಸೇವೆಯಿಂದ ಇನ್ನೊಂದಕ್ಕೆ ಪದೋನ್ನತಿ ಮತ್ತು ವರ್ಗಾವಣೆಗಳನ್ನು ಮಾಡಲು ಯಾವ ತತ್ವಗಳನ್ನು ಅನುಸರಿಸಬೇಕು ಎಂಬ ಬಗ್ಗೆ
 (3)ಸಿವಿಲ್ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವಾಗ ಯಾವ ತತ್ವಗಳನ್ನು ಅನುಸರಿಸಬೇಕು ಎಂಬ ಬಗ್ಗೆ
 (4)ಸಿವಿಲ್ ಸೇವೆಗಳು ಮತ್ತು ಸಿವಿಲ್ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವ ವಿಧಾನಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ
CORRECT ANSWER

(2) ಒಂದು ಸೇವೆಯಿಂದ ಇನ್ನೊಂದಕ್ಕೆ ಪದೋನ್ನತಿ ಮತ್ತು ವರ್ಗಾವಣೆಗಳನ್ನು ಮಾಡಲು ಯಾವ ತತ್ವಗಳನ್ನು ಅನುಸರಿಸಬೇಕು ಎಂಬ ಬಗ್ಗೆ
OR
(3) ಸಿವಿಲ್ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವಾಗ ಯಾವ ತತ್ವಗಳನ್ನು ಅನುಸರಿಸಬೇಕು ಎಂಬ ಬಗ್ಗೆ
OR
(4) ಸಿವಿಲ್ ಸೇವೆಗಳು ಮತ್ತು ಸಿವಿಲ್ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವ ವಿಧಾನಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ


19.ಭಾರತೀಯ ಸಂವಿಧಾನದ ಪ್ರಕಾರ ಈ ಕೆಳಕಂಡ ಯಾವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಭಾರತದ ಪ್ರಜೆ ಎಂದು ಪರಿಗಣಿಸಲಾಗುವುದಿಲ್ಲ?
ಸಂವಿಧಾನವು ಆರಂಭಗೊಂಡ ಕಾಲದಲ್ಲಿ
 (1)ಭಾರತ ಪ್ರದೇಶದೊಳಗೆ ಅಧಿವಾಸಿತವಾದಂತಹ ಮತ್ತು ಭಾರತ ಪ್ರದೇಶದೊಳಗೆ ಜನಿಸಿದಂತಹ ವ್ಯಕ್ತಿ
 (2)ಭಾರತದ ಪ್ರದೇಶದೊಳಗೆ ಅಧಿವಾಸಿತವಾದಂತಹ ಮತ್ತು ಆ ವ್ಯಕ್ತಿಯ ತಂದೆ-ತಾಯಿಗಳಲ್ಲಿ ಯಾರಾದರೊಬ್ಬರು ಭಾರತದ ಪ್ರದೇಶದೊಳಗೆ ಜನಿಸಿರುವಂತಹ ವ್ಯಕ್ತಿ
 (3)ಭಾರತದ ಪ್ರದೇಶದೊಳಗೆ ಅಧಿವಾಸಿತವಾದಂತಹ ಮತ್ತು 1947ರ ಆಗಸ್ಟ್ 15ರಿಂದ ಭಾರತದ ಪ್ರದೇಶದೊಳಗೆ ಸಾಮಾನ್ಯವಾಗಿ ನಿವಾಸಿಯಾಗಿರುವಂತಹ ವ್ಯಕ್ತಿ
 (4)ಭಾರತದ ಪ್ರದೇಶದೊಳಗೆ ಅಧಿವಾಸಿತವಾದಂತಹ ಮತ್ತು ಸಂವಿಧಾನವು ಆರಂಭಗೊಂಡಂತಹ ನಿಕಟ ಪೂರ್ವದಲ್ಲಿ ಕನಿಷ್ಠ ಐದು ವರ್ಷಗಳಿಗೆ ಕಡಿಮೆಯಿಲ್ಲದಂತೆ ಭಾರತದ ಪ್ರದೇಶದೊಳಗೆ ಸಾಮಾನ್ಯ ನಿವಾಸಿಯಾಗಿರುವಂತಹ ವ್ಯಕ್ತಿ
CORRECT ANSWER

(3) ಭಾರತದ ಪ್ರದೇಶದೊಳಗೆ ಅಧಿವಾಸಿತವಾದಂತಹ ಮತ್ತು 1947ರ ಆಗಸ್ಟ್ 15ರಿಂದ ಭಾರತದ ಪ್ರದೇಶದೊಳಗೆ ಸಾಮಾನ್ಯವಾಗಿ ನಿವಾಸಿಯಾಗಿರುವಂತಹ ವ್ಯಕ್ತಿ


20.ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಯಾವ ವಾಕ್ಯಾಂಗವು ಕಾಣಿಸಿಕೊಳ್ಳುತ್ತದೆ?
 (1)ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ
 (2)ಸಾರ್ವಭೌಮ ಸಮಾಜವಾದೀ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ
 (3)ಸಾರ್ವಭೌಮ ಸಮಾಜವಾದೀ ಗಣರಾಜ್ಯ
 (4)ಸಾರ್ವಭೌಮ ಸಮಾಜವಾದೀ ಪ್ರಜಾಸತ್ತಾತ್ಮಕ ಗಣರಾಜ್ಯ
CORRECT ANSWER

(2) ಸಾರ್ವಭೌಮ ಸಮಾಜವಾದೀ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ


21.ರಾಜ್ಯದ ನಿಧಿಗಳಿಂದ ಸಹಾಯಧನ ಪಡೆಯುತ್ತಿರುವ ಯಾವುದೇ ಶಿಕ್ಷಣ ಸಂಸ್ಥೆಗೆ, ಈ ಕೆಳಕಂಡ ಆಧಾರದ ಮೇಲೆ ಯಾವುದೇ ಪ್ರಜೆಗೂ ಪ್ರವೇಶವನ್ನು ನಿರಾಕರಿಸುವಂತಿಲ್ಲ
 (1)ಕೇವಲ ಧರ್ಮದ ಕಾರಣಕ್ಕೆ
 (2)ಕೇವಲ ಭಾಷೆಯ ಕಾರಣಕ್ಕೆ
 (3)ಕೇವಲ ಜಾತಿ ಅಥವಾ ಜನಾಂಗದ ಕಾರಣಕ್ಕೆ
 (4)ಕೇವಲ ಧರ್ಮ, ಭಾಷೆ, ಜನಾಂಗ ಅಥವಾ ಜಾತಿ ಅಥವಾ ಇವುಗಳಲ್ಲಿ ಯಾವುದೇ ಕಾರಣಕ್ಕೆ
CORRECT ANSWER

(4) ಕೇವಲ ಧರ್ಮ, ಭಾಷೆ, ಜನಾಂಗ ಅಥವಾ ಜಾತಿ ಅಥವಾ ಇವುಗಳಲ್ಲಿ ಯಾವುದೇ ಕಾರಣಕ್ಕೆ


22.ಧರ್ಮ ಅಥವಾ ಭಾಷೆಯನ್ನು ಆಧರಿಸಿದ ಎಲ್ಲ ಅಲ್ಪಸಂಖ್ಯಾತರಿಗೂ ಈ ಕೆಳಕಂಡ ಹಕ್ಕು ಇರತಕ್ಕದ್ದು
 (1)ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕು ಮಾತ್ರ
 (2)ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವ ಹಕ್ಕು ಮಾತ್ರ
 (3)ತಮಗೆ ಬೇಕಾದಂತಹ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಹಕ್ಕು
 (4)ಭಾರತ ಸರ್ಕಾರದ ನೀತಿಯ ಪ್ರಕಾರ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಹಕ್ಕು
CORRECT ANSWER

(3) ತಮಗೆ ಬೇಕಾದಂತಹ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಹಕ್ಕು


23.ಸಂವಿಧಾನವು ಖಾತರಿಪಡಿಸಿರುವಂಥ ಮೂಲಭೂತ ಹಕ್ಕುಗಳನ್ನು ಕೆಳಕಂಡ ನ್ಯಾಯಾಲಯಗಳು ಜಾರಿಗೊಳಿಸಬಹುದು.
 (1)ಸರ್ವೋಚ್ಚ ನ್ಯಾಯಾಲಯವು ಮಾತ್ರ
 (2)ಉಚ್ಚ ನ್ಯಾಯಾಲಯಗಳು ಮಾತ್ರ
 (3)ಭಾರತದಲ್ಲಿರುವ ಯಾವುದೇ ನ್ಯಾಯಾಲಯ
 (4)ಯಾವುದೇ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ
CORRECT ANSWER

(4) ಯಾವುದೇ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ


24.ಈ ಕೆಳಕಂಡ ವಯೋಮಾನದ ಎಲ್ಲ ಮಕ್ಕಳಿಗೂ ರಾಜ್ಯವು ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸತಕ್ಕದ್ದು.
 (1)ಆರರಿಂದ ಹದಿನೆಂಟು ವರ್ಷದ ವಯೋಮಾನದವರಿಗೆ
 (2)ಆರರಿಂದ ಹದಿನಾಲ್ಕು ವರ್ಷದ ವಯೋಮಾನದವರಿಗೆ
 (3)ಹತ್ತರಿಂದ ಹದಿನೆಂಟು ವರ್ಷದ ವಯೋಮಾನದವರಿಗೆ
 (4)ಹದಿನೆಂಟು ವರ್ಷದ ವಯಸ್ಸಿನವರೆಗೆ ಎಲ್ಲ ವಯೋಮಾನದ ಗಂಡು ಹಾಗೂ ಹೆಣ್ಣು ಮಕ್ಕಳಿಗೆ
CORRECT ANSWER

(2) ಆರರಿಂದ ಹದಿನಾಲ್ಕು ವರ್ಷದ ವಯೋಮಾನದವರಿಗೆ


25.ಉಪರಾಷ್ಟ್ರಪತಿಯವರನ್ನು
 (1)ಸಂಸತ್ತಿನ ಬಹುಮತವಿರುವ ಪಕ್ಷವು ಆಯ್ಕೆ ಮಾಡತಕ್ಕದ್ದು
 (2)ರಾಷ್ಟ್ರಪತಿಯವರು ನೇಮಕ ಮಾಡತಕ್ಕದ್ದು
 (3)ಸಂಸತ್ತಿನ ಎರಡೂ ಸದನಗಳು ಚುನಾಯಿಸತಕ್ಕದ್ದು
 (4)ಪ್ರಧಾನಮಂತ್ರಿ ಹಾಗೂ ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿಯವರು ನಾಮನಿರ್ದೇಶನ ಮಾಡತಕ್ಕದ್ದು
CORRECT ANSWER

(3) ಸಂಸತ್ತಿನ ಎರಡೂ ಸದನಗಳು ಚುನಾಯಿಸತಕ್ಕದ್ದು


26.ಸಂವಿಧಾನದ ಪ್ರಕಾರ ಈ ಕೆಳಗಿನ ಯಾವುದು ಮೂಲಭೂತ ಹಕ್ಕಾಗಿರುವುದಿಲ್ಲ?
 (1)ಸಮಾನತೆಯ ಹಕ್ಕು
 (2)ಆಸ್ತಿಯ ಹಕ್ಕು
 (3)ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
 (4)ಸಂವಿಧಾನಾತ್ಮಕ ಪರಿಹಾರಗಳ ಹಕ್ಕು
CORRECT ANSWER

(2) ಆಸ್ತಿಯ ಹಕ್ಕು


27.ವಿಧಾನ ಸಭಾ ಸ್ಪೀಕರ್‌ರವರು, ಈ ಕೆಳಕಂಡವರಿಗೆ ಸಂಬೋಧಿಸಿ ಸ್ವ ಹಸ್ತಾಕ್ಷರದಲ್ಲಿ ಬರೆದು ಕೊಡುವ ಮೂಲಕ ಯಾವಾಗ ಬೇಕಾದರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು.
 (1)ಮುಖ್ಯಮಂತ್ರಿಯವರಿಗೆ
 (2)ರಾಜ್ಯಪಾಲರಿಗೆ
 (3)ಚುನಾವಣಾ ಆಯೋಗಕ್ಕೆ
 (4)ಡೆಪ್ಯೂೂಟಿ ಸ್ಪೀಕರ್‌ರವರಿಗೆ
CORRECT ANSWER

(4) ಡೆಪ್ಯೂೂಟಿ ಸ್ಪೀಕರ್‌ರವರಿಗೆ


28.ಭಾರತದ ಪ್ರಜೆಯಾಗಿರುವ ಪ್ರತಿಯೊಬ್ಬ ತಂದೆ-ತಾಯಿಗಳೂ ತಮ್ಮ ಮಗುವಿಗೆ ಶಿಕ್ಷಣದ ಅವಕಾಶವನ್ನು ಒದಗಿಸಬೇಕು. ತಂದೆ-ತಾಯಿಗಳ ಈ ಕರ್ತವ್ಯವು
 (1)ಐಚ್ಛಿಕ
 (2)ನೈತಿಕ
 (3)ಮೂಲಭೂತ ಕರ್ತವ್ಯ
 (4)ಸಂವಿಧಾನಾತ್ಮಕವಲ್ಲ
CORRECT ANSWER

(3) ಮೂಲಭೂತ ಕರ್ತವ್ಯ


29.ಸಂವಿಧಾನದ ಪ್ರಕಾರ ಈ ಕೆಳಗಿನ ಯಾವುದು ಮೂಲಭೂತ ಕರ್ತವ್ಯವಲ್ಲ?
 (1)ಸಂವಿಧಾನಕ್ಕೆ ಬದ್ಧವಾಗಿರುವ ಕರ್ತವ್ಯ
 (2)ಭಾರತದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯುವ ಮತ್ತು ರಕ್ಷಿಸುವ ಕರ್ತವ್ಯ
 (3)ನಮ್ಮ ಮಿಶ್ರ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಗೌರವಿಸುವ ಕರ್ತವ್ಯ
 (4)ಕುಟುಂಬವನ್ನು ಪೋಷಿಸುವ ಕರ್ತವ್ಯ
CORRECT ANSWER

(4) ಕುಟುಂಬವನ್ನು ಪೋಷಿಸುವ ಕರ್ತವ್ಯ


30.ಬೌದ್ಧ ಧರ್ಮವು ಎರಡು ಶಾಖೆಗಳಾಗಿ ಇಬ್ಭಾಗವಾಯಿತು, ಅವುಗಳೆಂದರೆ
 (1)ಶ್ವೇತಾಂಬರ ಮತ್ತು ದಿಗಂಬರ
 (2)ನಯನಾರ್ ಮತ್ತು ಆಳ್ವಾರ್
 (3)ತೇರವಾದ ಮತ್ತು ಸರ್ವಾಸ್ತಿವಾದ
 (4)ಹೀನಯಾನ ಮತ್ತು ಮಹಾಯಾನ
CORRECT ANSWER

(4) ಹೀನಯಾನ ಮತ್ತು ಮಹಾಯಾನ


31.ಹರ್ಷಚರಿತವನ್ನು ರಚಿಸಿದವರು
 (1)ಹರ್ಷ
 (2)ಕಾಳಿದಾಸ
 (3)ಬಾಣಭಟ್ಟ
 (4)ಕಲ್ಹಣ
CORRECT ANSWER

(3) ಬಾಣಭಟ್ಟ


32.ಮಹಮ್ಮದನು ಆಳುತ್ತಿದ್ದ ಘಜ್ನಿ ಸಾಮ್ರಾಜ್ಯ ಎಲ್ಲಿದ್ದಿತು?
 (1)ಪಾಕಿಸ್ಥಾನ
 (2)ಇರಾನ್
 (3)ವಾಯುವ್ಯ ಭಾರತ
 (4)ಆಫ್ಘಾನಿಸ್ತಾನ
CORRECT ANSWER

(4) ಆಫ್ಘಾನಿಸ್ತಾನ


33.ರಾಜಾ ರಾಮ್‌ಮೋಹನ್‌ರಾಯ್‌ ಅವರು ಮುಖ್ಯವಾಗಿ ಈ ಕೆಳಕಂಡ ವಿಷಯದ ಬಗ್ಗೆ ಕಾಳಜಿ ಹೊಂದಿದ್ದರು
 (1)ವಿಧವಾ ಪುನರ್‌ ವಿವವಾಹ
 (2)ಹೆಣ್ಣು ಶಿಶು ಹತ್ಯೆ
 (3)ಸತಿ ಪದ್ಧತಿಯ ನಿರ್ಮೂಲನೆ
 (4)ಬಾಲ್ಯವಿವಾಹ
CORRECT ANSWER

(3) ಸತಿ ಪದ್ಧತಿಯ ನಿರ್ಮೂಲನೆ


34.ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಪಡೆಯಿಂದ ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣದಲ್ಲಿ ____________ ರಲ್ಲಿ ಕೊಲ್ಲಲ್ಪಟ್ಟನು
 (1)1784
 (2)1773
 (3)1799
 (4)1794
CORRECT ANSWER

(3) 1799


35.ಕನೌಜ್‌ನ ಹರ್ಷವರ್ಧನನನ್ನು ಈ ಕೆಳಕಂಡ ಬಾದಾಮಿ ಚಾಲುಕ್ಯ ಅರಸನು ಸೋಲಿಸಿದನು.
 (1)1ನೇ ಪುಲಿಕೇಶಿ
 (2)2ನೇ ಪುಲಿಕೇಶಿ
 (3)ಮಂಗಳೇಶ್
 (4)ಕೀರ್ತಿವರ್ಮನ್
CORRECT ANSWER

(2) 2ನೇ ಪುಲಿಕೇಶಿ


36.ಗೋಲ್ ಗುಂಬಜ್‌ನ್ನು ನಿರ್ಮಿಸಿದವರು
 (1)ಅಹಮದ್‌ನಗರದ ನಿಜಾಮ್‌ಶಾಹಿಗಳು
 (2)ಬೀದರಿನ ಬರಿದ್‌ಶಾಹಿಗಳು
 (3)ಬಿಜಾಪುರದ ಅದಿಲ್‌ಶಾಹಿಗಳು
 (4)ಬೇರಾರ್‌ನ ಇಮಾದ್‌ಶಾಹಿಗಳು
CORRECT ANSWER

(3) ಬಿಜಾಪುರದ ಅದಿಲ್‌ಶಾಹಿಗಳು


37.ಮುದ್ದೇನಹಳ್ಳಿಯಲ್ಲಿ ಜನಿಸಿದ ಸರ್.ಎಂ.ವಿಶ್ವೇಶ್ವರಯ್ಯನವರು ಈ ಕೆಳಕಂಡವರಿಗೆ ಮೈಸೂರಿನ ದಿವಾನರಾಗಿದ್ದರು.
 (1)ಜಯಚಾಮರಾಜ ಒಡೆಯರ್
 (2)ನಾಲ್ವಡಿ ಕೃಷ್ಣರಾಜ ಒಡೆಯರ್
 (3)ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
 (4)ಕಂಠೀರವ ನರಸಿಂಹರಾಜ ಒಡೆಯರ್
CORRECT ANSWER

(2) ನಾಲ್ವಡಿ ಕೃಷ್ಣರಾಜ ಒಡೆಯರ್


38.ಗ್ರಹಗಳ ಚಲನೆಯನ್ನು ಕುರಿತಂತೆ ವ್ಯಾಪಕವಾಗಿ ಅಧಿಚಕ್ರೀಯ ಅಧಿಕೇಂದ್ರೀಯ ಸಿದ್ಧಾಂತಗಳನ್ನು ಪ್ರತಿಪಾದಿಸುವ ಭಾಸ್ಕರ II ಇವರ ಕೃತಿಯ ಹೆಸರೇನು?
 (1)ಋಗ್‌ವಿನಿಶ್ಚಯ
 (2)ಸಿದ್ಧಾಂತ ಶಿರೋಮಣಿ
 (3)ಪಂಚಸಿದ್ಧಾಂತಿಕ
 (4)ಲೀಲಾವತಿ
CORRECT ANSWER

(2) ಸಿದ್ಧಾಂತ ಶಿರೋಮಣಿ


39.ಶೃಂಗೇರಿಯ ಶಾರದಾ ಮಂದಿರವನ್ನು ಮರಾಠ ಅಶ್ವಾರೋಹಿಗಳು ಲೂಟಿ ಮಾಡಿಕೊಂಡು ಹೋದ ಮೇಲೆ ಅಲ್ಲಿ ಶಾರದಾದೇವಿಯ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಿದ ಕರ್ನಾಟಕದ ಅರಸ ಯಾರು?
 (1)ನಾಲ್ವಡಿ ಕೃಷ್ಣರಾಜ ಒಡೆಯರ್
 (2)ಚಿಕ್ಕ ಕೃಷ್ಣರಾಜ ಒಡೆಯರ್
 (3)ಕೃಷ್ಣದೇವರಾಯ
 (4)ಟಿಪ್ಪು ಸುಲ್ತಾನ್
CORRECT ANSWER

(4) ಟಿಪ್ಪು ಸುಲ್ತಾನ್


40.ವೆಲ್ಲೆಸ್ಲಿಯ ಪೂರಕ ಮೈತ್ರಿ ವ್ಯವಸ್ಥೆಯನ್ನು ಒಪ್ಪಿಕೊಂಡ ಪ್ರಥಮ ಭಾರತೀಯ ದೊರೆ ಯಾರು?
 (1)ಅವಧ್‌ನ ನವಾಬ
 (2)ಟಿಪ್ಪು ಸುಲ್ತಾನ್
 (3)ಕರ್ನಾಟಕದ ನವಾಬ
 (4)ಹೈದರಾಬಾದ್‌ನ ನಿಜಾಮ
CORRECT ANSWER

(4) ಹೈದರಾಬಾದ್‌ನ ನಿಜಾಮ


41.ಭಾರತದ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ಸ್ಥಳಾಂತರಿಸಲಾದ ವರ್ಷ?
 (1)1935
 (2)1919
 (3)1911
 (4)1905
CORRECT ANSWER

(3) 1911


42.ಮೈಸೂರು ರಾಜ್ಯವು ಯಾವಾಗ ಅಸ್ತಿತ್ವಕ್ಕೆ ಬಂದಿತು?
 (1)ನವೆಂಬರ್ 1,1956
 (2)ಆಗಸ್ಟ್ 8, 1942
 (3)ಆಗಸ್ಟ್ 15, 1947
 (4)ಅಕ್ಟೋಬರ್ 31, 1947
CORRECT ANSWER

(1) ನವೆಂಬರ್ 1,1956


43.‘‘ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ಪಡೆಯುತ್ತೇನೆ’’ ಎಂದು ಘೊಷಿಸಿದವರು
 (1)ಲಾಲಾ ಲಜಪತ್‌ರಾಯ್
 (2)ಮಹಾತ್ಮಗಾಂಧಿ
 (3)ಬಾಲಗಂಗಾಧರ ತಿಲಕ್
 (4)ಸರ್ದಾರ್ ವಲ್ಲಭಭಾಯ್ ಪಟೇಲ್
CORRECT ANSWER

(3) ಬಾಲಗಂಗಾಧರ ತಿಲಕ್


44.ಭಾರತದ ರಾಷ್ಟ್ರೀಯ ಕಾಂಗ್ರೆಸ್ಅನ್ನು ಸ್ಥಾಪಿಸಿದವರು
 (1)ಎ.ಒ.ಹ್ಯೂಮ್
 (2)ಮಹಾತ್ಮಗಾಂಧಿ
 (3)ಮೋತಿಲಾಲ್ ನೆಹರು
 (4)ಸುರೇಂದ್ರನಾಥ್ ಬ್ಯಾನರ್ಜಿ
CORRECT ANSWER

(1) ಎ.ಒ.ಹ್ಯೂಮ್


45.ನೈವೇಲಿಯಲ್ಲಿ ದೊರೆಯುವ ಬೃಹತ್ ನಿಕ್ಷೇಪಗಳು
 (1)ಪೆಟ್ರೋಲಿಯಂ
 (2)ಅಭ್ರಕ
 (3)ಲಿಗ್ನೈಟ್
 (4)ಅಂತ್ರಾಸೈಟ್
CORRECT ANSWER

(3) ಲಿಗ್ನೈಟ್


46.ಭಾರತದಲ್ಲಿರುವ ಬಹುದೊಡ್ಡ ನದಿ ಮುಖಜ ಭೂಮಿ
 (1)ಕಾವೇರಿ ನದಿ ಮುಖಜ ಭೂಮಿ
 (2)ಸುಂದರ್‌ಬನ್ ನದಿ ಮುಖಜ ಭೂಮಿ
 (3)ಗೋದಾವರಿ ನದಿ ಮುಖಜ ಭೂಮಿ
 (4)ಮಹಾನದಿ ನದಿ ಮುಖಜ ಭೂಮಿ
CORRECT ANSWER

(2) ಸುಂದರ್‌ಬನ್ ನದಿ ಮುಖಜ ಭೂಮಿ


47.ಭಾರತದಲ್ಲಿ ಅತಿ ಹೆಚ್ಚು ಕಚ್ಚಾ ರೇಷ್ಮೆ ಉತ್ಪಾದಿಸುವ ರಾಜ್ಯ
 (1)ಆಂಧ್ರ ಪ್ರದೇಶ
 (2)ಕರ್ನಾಟಕ
 (3)ತಮಿಳುನಾಡು
 (4)ಮಹಾರಾಷ್ಟ್ರ
CORRECT ANSWER

(2) ಕರ್ನಾಟಕ


48.ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಯನ್ನು ಪಟ್ಟಿಗಳ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ:
  ಪಟ್ಟಿ I ಪಟ್ಟಿ II
 A.ಕಲ್ಪಕ್ಕಂ1.ನ್ಯೂಸ್‌ಪ್ರಿಂಟ್
 B.ಝರಿಯಾ2.ತೈಲ ಶುದ್ಧೀಕರಣಾಗಾರ
 C.ಮಥುರಾ3.ಕಲ್ಲಿದ್ದಲು ಗಣಿಗಾರಿಕೆ
 D.ನೇಪಾನಗರ್4.ನ್ಯೂಕ್ಲಿಯಾರ್ ವಿದ್ಯುತ್ ಸ್ಥಾವರ
ಸಂಕೇತಗಳು:
  ABCD
 (1)4213
 (2)4321
 (3)1234
 (4)3214
CORRECT ANSWER

(2) 4, 3, 2, 1


49.ಈ ಕೆಳಗಿನ ಯಾವುದು ಬೃಹತ್ ವೃತ್ತವಾಗಿದೆ ?
 (1)ಕರ್ಕಾಟಕ ಸಂಕ್ರಾಂತಿ ವೃತ್ತ
 (2)ಮಕರ ಸಂಕ್ರಾಂತಿ ವೃತ್ತ
 (3)ಸಮಭಾಜಕ ವೃತ್ತ (Equator)
 (4)ಅರ್ಕಾಟಿಕ್ ವೃತ್ತ
CORRECT ANSWER

(3) ಸಮಭಾಜಕ ವೃತ್ತ (Equator)


50.ಸುನಾಮಿ ಎನ್ನುವುದು
 (1)ಒಂದು ವಿಧದ ಭೂಕಂಪನ ತರಂಗ
 (2)ಭೂಕಂಪದಿಂದ ಉಂಟಾದ ಸಾಗರ ಅಲೆಗಳು
 (3)ಚಂಡಮಾರುತ
 (4)ಜ್ವಾಲಾಮುಖಿ
CORRECT ANSWER

(2) ಭೂಕಂಪದಿಂದ ಉಂಟಾದ ಸಾಗರ ಅಲೆಗಳು


51.ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ
 (1)ಕಾರ್ಡಮಮ್ ಬೆಟ್ಟಗಳು
 (2)ಅಣ್ಣಾಮಲೈ ಬೆಟ್ಟಗಳು
 (3)ನೀಲಗಿರಿ ಬೆಟ್ಟಗಳು
 (4)ಪಳನಿ ಬೆಟ್ಟಗಳು
CORRECT ANSWER

(3) ನೀಲಗಿರಿ ಬೆಟ್ಟಗಳು


52.ಈ ಕೆಳಕಂಡ ಯಾವ ಉಪನದಿಯು ಕರ್ನಾಟಕದಲ್ಲಿ ಉಗಮಿಸುತ್ತದೆ?
 (1)ಪಂಚಗಂಗಾ
 (2)ದೂಧಗಂಗಾ
 (3)ತುಂಗಭದ್ರಾ
 (4)ಕೊಯ್ನಾ
CORRECT ANSWER

(3) ತುಂಗಭದ್ರಾ


53.ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಾಫಿ ಬೆಳೆ ಯಾವುದು?
 (1)ಅರೇಬಿಕಾ
 (2)ರೋಬಸ್ಟಾ
 (3)ಲಿಬಿರಿಕಾ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(2) ರೋಬಸ್ಟಾ


54.ಕರ್ನಾಟಕದಲ್ಲಿ ರೇಷ್ಮೆ ಪಟ್ಟಣ ಎಂದು ಹೆಸರಾದ ಊರು?
 (1)ಚಾಮರಾಜನಗರ
 (2)ರಾಮನಗರ
 (3)ಚನ್ನಪಟ್ಟಣ
 (4)ಪಿರಿಯಾಪಟ್ಟಣ
CORRECT ANSWER

(2) ರಾಮನಗರ


55.ಶ್ರೀಗಂಧದ ಮರ ಹೆಚ್ಚಾಗಿ ಕಂಡುಬರುವ ರಾಜ್ಯ
 (1)ತಮಿಳುನಾಡು
 (2)ಕೇರಳ
 (3)ಕರ್ನಾಟಕ
 (4)ಆಂಧ್ರಪ್ರದೇಶ
CORRECT ANSWER

(3) ಕರ್ನಾಟಕ


56.ಭಾರತದಲ್ಲಿ ಮೊದಲ ಕೈಗಾರಿಕಾ ನೀತಿಯು ಘೋಷಣೆಯಾದ ವರ್ಷ
 (1)1948
 (2)1960
 (3)1956
 (4)1962
CORRECT ANSWER

(1) 1948


57.8ನೇ ಅನುಸೂಚಿಯಲ್ಲಿ ಈ ಕೆಳಕಂಡ ಯಾವ ಭಾಷೆಯು ಸೇರ್ಪಡೆಯಾಗಿಲ್ಲ?
 (1)ಹಿಂದಿ
 (2)ಇಂಗ್ಲಿಷ್
 (3)ಉರ್ದು
 (4)ಕೊಂಕಣಿ
CORRECT ANSWER

(2) ಇಂಗ್ಲಿಷ್


58.ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ
 (1)2005
 (2)2004
 (3)2006
 (4)2007
CORRECT ANSWER

(1) 2005


59.ಭಾರತದ ಮೊದಲ ಚುನಾಯಿತ ಲೋಕಸಭೆಯು ರಚನೆಯಾದ ವರ್ಷ
 (1)1950
 (2)1952
 (3)1949
 (4)1956
CORRECT ANSWER

(2) 1952


60.ಕೃಷ್ಣಾ ನದಿ ನೀರು ವಿವಾದಗಳ ನ್ಯಾಯ ಮಂಡಳಿಯು (KWDT-II) ಕರ್ನಾಟಕಕ್ಕೆ ನೀಡಿದ ತನ್ನ ಇತ್ತೀಚಿನ ತೀರ್ಪಿನಲ್ಲಿ ಆಲಮಟ್ಟಿ ಅಣೆಕಟ್ಟು ಪೂರ್ಣಜಲಾಶಯ ಮಟ್ಟದ (FRL) ಎಷ್ಟು ಮಟ್ಟದವರೆಗೆ ನೀರಿನ ಸಂಗ್ರಹಣ ಮಾಡಲು ಅನುಮತಿ ನೀಡಿದೆ?
 (1)524.256 ಮೀಟರ್‌ಗಳು
 (2)519.60 ಮೀಟರ್‌ಗಳು
 (3)556.356 ಮೀಟರ್‌ಗಳು
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) 524.256 ಮೀಟರ್‌ಗಳು


61.ಸುಖಮರಣಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ?
 (1)ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂಗಳೆರಡೂ ಕೆಲವೊಂದು ಷರತ್ತುಗಳಿಗೆ ಒಳಪಟ್ಟು ಸುಖಮರಣಕ್ಕೆ ಅನುಮತಿ ನೀಡಿವೆ
 (2)ಸ್ವಿಡ್ಜರ್‌ಲ್ಯಾಂಡ್ ದೇಶವು ನೆರವಿನ ಆತ್ಮಹತ್ಯೆಗೆ ಅನುಮತಿ ನೀಡಿದೆ. ಆದರೆ ಸುಖಮರಣಕ್ಕಲ್ಲ
 (3)ಸುಖಮರಣ ಮತ್ತು ವೈದ್ಯ ನೆರವಿನ ಆತ್ಮಹತ್ಯೆಗಳೆರಡೂ ಯುನೈಡೆಟ್ ಕಿಂಗ್‌ಡಮ್‌ನಲ್ಲಿ ನ್ಯಾಯಸಮ್ಮತವಲ್ಲ ಎಂದು ಪರಿಗಣಿಸಲ್ಪಟ್ಟಿವೆ
 (4)ಸಂಯುಕ್ತ ಸಂಸ್ಥಾನದ ಎಲ್ಲ ರಾಜ್ಯಗಳಲ್ಲಿಯೂ ಕ್ರಿಯಾಶೀಲ ಸುಖಮರಣವು (Active Euthanasia) ನ್ಯಾಯಸಮ್ಮತವೆಂದು ಪರಿಗಣಿತವಾಗಿದೆ.
CORRECT ANSWER

(4) ಸಂಯುಕ್ತ ಸಂಸ್ಥಾನದ ಎಲ್ಲ ರಾಜ್ಯಗಳಲ್ಲಿಯೂ ಕ್ರಿಯಾಶೀಲ ಸುಖಮರಣವು (Active Euthanasia) ನ್ಯಾಯಸಮ್ಮತವೆಂದು ಪರಿಗಣಿತವಾಗಿದೆ.


62.2011ರ ಜನಗಣತಿಯ ಪ್ರಕಾರ ಒಟ್ಟಾರೆ ರಾಷ್ಟ್ರವ್ಯಾಪಿ ಲೈಂಗಿಕ ಅನುಪಾತ ಎಷ್ಟಿದೆ?
 (1)1084
 (2)933
 (3)940
 (4)954
CORRECT ANSWER

(3) 940


63.Great Soul: Mahatma Gandhi And His Struggle With India ಎಂಬ ವಿವಾದಾತ್ಮಕ ಕೃತಿಯ ಕರ್ತೃ ಯಾರು?
 (1)ಜೋಸೆಫ್ ಲೆಲಿವೆಲ್ಡ್
 (2)ಅಲೆಕ್ಸ್ ವಾನ್ ಟಲ್‌ಮನ್‌
 (3)ಜಾನ್ ಗ್ರಿಶಮ್
 (4)ನಸ್ಸೀಂ ನಿಕೊಲಾಸ್ ತಾಲಿಬ್
CORRECT ANSWER

(1) ಜೋಸೆಫ್ ಲೆಲಿವೆಲ್ಡ್


64.CWG ಹಗರಣದಲ್ಲಿ ಬಂಧಿತರಾದ ವ್ಯಕ್ತಿ
 (1)ಆರ್.ಕೆ.ಚಂದೋಲಿಯಾ
 (2)ಸಿದ್ಧಾರ್ಥ್ ಬೆಹುರಾ
 (3)ಅಸಿಫ್ ಬಲ್ವಾ
 (4)ಲಲಿತ್ ಭಾನೋಟ್
CORRECT ANSWER

(4) ಲಲಿತ್ ಭಾನೋಟ್


65.2011ರಲ್ಲಿ ಪ್ರಪಂಚದಾದ್ಯಂತ ‘Earth Hour’ ಎಂದು ಆಚರಿಸಲಾದ ದಿನ ಯಾವುದು?
 (1)ಜನವರಿ 1
 (2)ಮಾರ್ಚ್ 26
 (3)ಫೆಬ್ರವರಿ 28
 (4)ಏಪ್ರಿಲ್ 5
CORRECT ANSWER

(2) ಮಾರ್ಚ್ 26


66.ಕರ್ನಾಟಕದಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈಗಿನ ಅಧ್ಯಕ್ಷರು ಯಾರು?
 (1)ಎಸ್.ಎಲ್.ಭೈರಪ್ಪ
 (2)ವಾಟಾಳ್ ನಾಗರಾಜ್
 (3)ಮುಖ್ಯಮಂತ್ರಿ ಚಂದ್ರು
 (4)ಪಾಟೀಲ ಪುಟ್ಟಪ್ಪ
CORRECT ANSWER

(3) ಮುಖ್ಯಮಂತ್ರಿ ಚಂದ್ರು


67.ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಆಸರೆ’ ಯಾವುದಕ್ಕೆ ಸಂಬಂಧಿಸಿದೆ?
 (1)ಉತ್ತರ ಕರ್ನಾಟಕಕ್ಕೆ 2009ರಲ್ಲಿನ ಪ್ರವಾಹದ ಹಾವಳಿಯಿಂದ ತೀವ್ರ ತೊಂದರೆಗೊಳಗಾದ ಜನರಿಗಾಗಿ ಮನೆಗಳನ್ನು ನಿರ್ಮಿಸುವುದು
 (2)ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಸತಿಯನ್ನು ಒದಗಿಸುವುದು
 (3)ಭಿಕ್ಷುಕರಿಗೆ ಹಾಗೂ ಮನೆ ಇಲ್ಲದವರಿಗೆ ವಸತಿಯನ್ನು ಒದಗಿಸುವುದು
 (4)ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ವಸತಿಯನ್ನು ಒದಗಿಸುವುದು
CORRECT ANSWER

(1) ಉತ್ತರ ಕರ್ನಾಟಕಕ್ಕೆ 2009ರಲ್ಲಿನ ಪ್ರವಾಹದ ಹಾವಳಿಯಿಂದ ತೀವ್ರ ತೊಂದರೆಗೊಳಗಾದ ಜನರಿಗಾಗಿ ಮನೆಗಳನ್ನು ನಿರ್ಮಿಸುವುದು


68.2011ರ ಮಾರ್ಚ್ ತಿಂಗಳಲ್ಲಿ ‘ಮಿಲಿಯನ್ ಮಾರ್ಚ್’ ಕಾರ್ಯಕ್ರಮದ ಕರೆಯನ್ನು ನೀಡಿದ್ದರ ಉದ್ದೇಶ
 (1)ಹೋಸ್ನಿ ಮುಬಾರಕ್ ಅವರನ್ನು ಉಚ್ಛಾಟಿಸುವುದು
 (2)ಯೆಮೆನ್‌ನ ಅಧ್ಯಕ್ಷರನ್ನು ವಿರೋಧಿಸುವುದು
 (3)ತೆಲಂಗಾಣ ರಾಜ್ಯ ಸ್ಥಾಪನೆಯ ಸಲುವಾಗಿ
 (4)ನಾಗರಿಕ ಸಮಾಜದ ಪ್ರೇರಣೆಯ ಮೂಲಕ ರೂಪಿಸಲಾದ ಜನಲೋಕಪಾಲ ವಿಧೇಯಕವನ್ನು ಜಾರಿಗೊಳಿಸುವಂತೆ ಆಗ್ರಹಿಸುವುದು
CORRECT ANSWER

(3) ತೆಲಂಗಾಣ ರಾಜ್ಯ ಸ್ಥಾಪನೆಯ ಸಲುವಾಗಿ


69.ದೇವದೂಷಣೆ ಪ್ರಕರಣ (Blasphemy issue)ಕ್ಕಾಗಿ ತೆಹ್ರೀಕ್-ಎ-ತಾಲಿಬಾನ್‌ನಿಂದಇತ್ತೀಚೆಗೆ ಹತ್ಯೆಗೀಡಾದ ಪಾಕಿಸ್ತಾನದ ಸಚಿವರ ಹೆಸರು
 (1)ವಾಜಿದ್ ದುರ್ರಾನಿ
 (2)ಶಹಬಾಜ್ ಭಟ್ಟಿ
 (3)ಶೆರ್ರಿ ರೆಹಮಾನ್
 (4)ಸಲ್ಮಾನ್ ತಾಸೀರ್
CORRECT ANSWER

(2) ಶಹಬಾಜ್ ಭಟ್ಟಿ


70.2011ರ ಕೇಂದ್ರ ಬಜೆಟ್‌ನಲ್ಲಿ ಮಂಡನೆಯಾದ ಭಾರತ್ ನಿರ್ಮಾಣ್ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಈ ಕೆಳಕಂಡ ಯಾವುದು ಸೇರ್ಪಡೆಯಾಗಿಲ್ಲ?
 (1)ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ
 (2)ಪ್ರಧಾನಮಂತ್ರಿಯವರ ಗ್ರಾಮ ಸಡಕ್ ಯೋಜನೆ
 (3)ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ
 (4)ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ
CORRECT ANSWER

(1) ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ


71.ಈ ಕೆಳಕಂಡ ಯಾವ ವಿದ್ಯುತ್ ಕಂಪೆನಿಯು ಭಾರತದ ಮೊಟ್ಟ ಮೊದಲ ತೇಲುವ ಸೌರಸ್ಥಾವರವನ್ನು ನಿರ್ಮಿಸಲಿದೆ?
 (1)NTPC
 (2)ಟಾಟಾ ಪವರ್
 (3)ರಿಲಯನ್ಸ್ ಪವರ್
 (4)ನಾಗಾರ್ಜುನ ಪವರ್ ಕಾರ್ಪೊರೇಷನ್
CORRECT ANSWER

(2) ಟಾಟಾ ಪವರ್


72.2011ರ ಮಾರ್ಚ್ ತಿಂಗಳಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಯಾವ ನಗರದಲ್ಲಿ ನಡೆಸಲಾಯಿತು?
 (1)ಬೆಂಗಳೂರು
 (2)ಬೆಳಗಾಂ
 (3)ಶಾರ್ಜಾ
 (4)ನ್ಯೂಯಾರ್ಕ್
CORRECT ANSWER

(2) ಬೆಳಗಾಂ


73.ಯುನೆಸ್ಕೋದ ‘‘ಸಾಂಸ್ಕೃತಿಕ ಭೂ ದೃಶ್ಯ’’ದಲ್ಲಿ ಸೇರ್ಪಡೆ ಮಾಡಿಕೊಳ್ಳುವಂತೆ ಈ ಕೆಳಕಂಡವುಗಳನ್ನು ನಾಮನಿರ್ದೇಶನ ಮಾಡಲು ಭಾರತ ಸರ್ಕಾರವು ಪ್ರಸ್ತಾಪಿಸಿದೆ.
 (1)ಗೋವಾ
 (2)ಕೇರಳದಲ್ಲಿರುವ ಕೋವಳಂ ಕಡಲ ಕಿನಾರೆ
 (3)ಮಜುಲಿ, ಅಸ್ಸೋಂನ ನದಿದ್ವೀಪ
 (4)ಮುಂಬೈನ ಮೆರೀನ್ ಡ್ರೈವ್
CORRECT ANSWER

(3) ಮಜುಲಿ, ಅಸ್ಸೋಂನ ನದಿದ್ವೀಪ


74.ಜಂಟಿ ಸಂಸದೀಯ ಸಮಿತಿಯೊಂದು (JPC) ಈ ಕೆಳಕಂಡದ್ದಕ್ಕೆ ಸಂಬಂಧಿಸಿದ ಹಗರಣವನ್ನು ಪ್ರಸ್ತುತದಲ್ಲಿ ತನಿಖೆ ಮಾಡುತ್ತದೆ
 (1)2G- ಸ್ಪೆಕ್ಟ್ರಮ್
 (2)3G ಸ್ಪೆಕ್ಟ್ರಮ್
 (3)ಕಾಮನ್‌ವೆಲ್ತ್ ಕ್ರೀಡೆಗಳು 2010
 (4)ಐಪಿಎಲ್ ಕ್ರಿಕೆಟ್
CORRECT ANSWER

(1) 2G- ಸ್ಪೆಕ್ಟ್ರಮ್


75.ಒಂದೆರಡು ಜಿಲ್ಲೆಗಳ ಅನುಕೂಲಕ್ಕಾಗಿ ಕರ್ನಾಟಕದ ಈ ಕೆಳಕಂಡ ನದಿಗಳ ಹರಿವನ್ನು ತಿರುವು ಮುರುವು ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ?
 (1)ಕಾವೇರಿ
 (2)ಹೇಮಾವತಿ
 (3)ಕಾಳಿ
 (4)ನೇತ್ರಾವತಿ
CORRECT ANSWER

(4) ನೇತ್ರಾವತಿ


76.ಭಾರತದ ಜನಸಂಖ್ಯಾ ಗಣತಿಯನ್ನು………ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಮತ್ತು ಇತ್ತೀಚಿನ ಜನಗಣತಿಯು……..ರಲ್ಲಿ ನಡೆಯಿತು. ಈ ತೆರಪು ಬಿಟ್ಟ ಜಾಗಗಳಿಗೆ ಸರಿಯಾಗಿ ತುಂಬಬೇಕಾದ ಅಂಕಿಅಂಶಗಳು ಕೆಳಕಂಡಂತಿವೆ.
 (1)(5,2011)
 (2)(10,2011)
 (3)(5,2010)
 (4)(10,2010)
CORRECT ANSWER

(2) (10,2011)


77.PAN ಎಂಬ ಸಂಕ್ಷೇಪಾಕ್ಷರಗಳ ವಿಸ್ತೃತ ರೂಪ ಹೀಗಿದೆ
 (1)Public Account Number
 (2) Personal Account Number
 (3) Permanent Account Number
 (4)Postal Account Number
CORRECT ANSWER

(3) Permanent Account Number


78.ನಕ್ಸಲೀಯ ಚಳುವಳಿಯು ಈ ಕೆಳಕಂಡ ರಾಜ್ಯದ ನಕ್ಸಲ್‌ಬಾರಿ ಪ್ರದೇಶದಲ್ಲಿ ಉಗಮಿಸಿತು.
 (1)ಅಸ್ಸೋಂ
 (2)ಆಂಧ್ರಪ್ರದೇಶ
 (3)ಕೇರಳ
 (4)ಪಶ್ಚಿಮ ಬಂಗಾಳ
CORRECT ANSWER

(4) ಪಶ್ಚಿಮ ಬಂಗಾಳ


79.ಕೆಳಕಂಡ ನದಿಯನ್ನು ಪುನರುಜ್ಜೀವಗೊಳಿಸಲು ಪ್ರಸ್ತಾವಿಸಲಾಗಿದೆ.
 (1)ಅರ್ಕಾವತಿ
 (2)ವೃಷಭಾವತಿ
 (3)ಹೇಮಾವತಿ
 (4)ಕುಮುದ್ವತಿ
CORRECT ANSWER

(1) ಅರ್ಕಾವತಿ


80.‘ಜೂಲಿಯನ್ ಅಸಾಂಜೆ’ಯವರ ಹೆಸರು ಯಾವುದಕ್ಕೆ ಸಂಬಂಧಿಸಿದೆ?
 (1)ನೊಬೆಲ್ ಬಹುಮಾನ
 (2)ಮಾನವ ಹಕ್ಕುಗಳ ಚಳುವಳಿ
 (3)ವಿಕಿಲೀಕ್ಸ್
 (4)ಸೈಬರ್ ಭದ್ರತೆ
CORRECT ANSWER

(3) ವಿಕಿಲೀಕ್ಸ್


81.ಅತ್ಯಧಿಕ ಪರಮಾಣು ವಿಕಿರಣಕ್ಕಾಗಿ 2011ರ ಮಾರ್ಚ್ ತಿಂಗಳಲ್ಲಿ ಈ ಕೆಳಕಂಡ ಪರಮಾಣು ರಿಯಾಕ್ಟರ್ ಸುದ್ದಿಯಲ್ಲಿದ್ದಿತು.
 (1)ಚೆರ್ನೊಬಿಲ್
 (2)ಫುಕುಶಿಮಾ-ಡಯಿಚಿ
 (3)ಜೈತಾಪುರ್
 (4)ತ್ರೀ ಮೈಲ್ ಐಲ್ಯಾಂಡ್
CORRECT ANSWER

(2) ಫುಕುಶಿಮಾ-ಡಯಿಚಿ


82.ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತಿ ನಗರವನ್ನಾಗಿ ಮಾಡುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರವು 2011ರ ಮಾರ್ಚ್ 15ರಿಂದ ಜಾರಿಗೆ ಬರುವಂತೆ ಈ ಕೆಳಕಂಡದ್ದಕ್ಕಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್‌ಗಳ ಬಳಕೆಯನ್ನು ನಿಷೇಧಿಸಿದೆ.
 (1)20 ಮೈಕ್ರಾನ್‌ಗಳಿಗಿಂತ ಕಡಿಮೆ
 (2)30 ಮೈಕ್ರಾನ್‌ಗಳಿಗಿಂತ ಕಡಿಮೆ
 (3)40 ಮೈಕ್ರಾನ್‌ಗಳಿಗಿಂತ ಕಡಿಮೆ
 (4)45 ಮೈಕ್ರಾನ್‌ಗಳಿಗಿಂತ ಕಡಿಮೆ
CORRECT ANSWER

(3) 40 ಮೈಕ್ರಾನ್‌ಗಳಿಗಿಂತ ಕಡಿಮೆ


83.ಇತ್ತೀಚೆಗೆ ನಡೆದ ಹುಲಿಗಳ ಸಂಖ್ಯಾಗಣತಿಯ ಪ್ರಕಾರ ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ (ಸುಮಾರು)
 (1)500
 (2)300
 (3)700
 (4)1200
CORRECT ANSWER

(2) 300


84.ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರು ಯಾರು?
 (1)ಮುಖೇಶ್ ಅಂಬಾನಿ
 (2)ಜಗ್‌ಮೊಹನ್‌ ದಾಲ್ಮಿಯಾ
 (3)ಶರದ್ ಪವಾರ್
 (4)ಸೈಮನ್ ಟಾಫೆಲ್
CORRECT ANSWER

(3) ಶರದ್ ಪವಾರ್


85.ಲಭ್ಯವಿರುವ 2011ರ ಜನಗಣತಿ ಅಂಕಿ ಸಂಖ್ಯೆಗಳ (ಪ್ರಾಥಮಿಕ) ಪ್ರಕಾರ, ಕರ್ನಾಟಕದ ಜನಸಂಖ್ಯೆ
 (1)7.5 ಕೋಟಿ
 (2)6.1 ಕೋಟಿ
 (3)8.2 ಕೋಟಿ
 (4)5.4 ಕೋಟಿ
CORRECT ANSWER

(2) 6.1 ಕೋಟಿ


86.2010ರ ಏಪ್ರಿಲ್‌ನಲ್ಲಿ ಬ್ರಿಟಿಷ್ ಪೆಟ್ರೋಲಿಯಂ ಕಂಪನಿಯಿಂದ ಅತಿ ಹೆಚ್ಚು ತೈಲ ಸೋರಿಕೆ ಯಾವ ಪ್ರದೇಶದಲ್ಲಿ ಆಯಿತು?
 (1)ಯು.ಎಸ್.ಎ.
 (2)ಗಲ್ಫ್ ಆಫ್ ಮೆಕ್ಸಿಕೋ
 (3)ಬಾಂಬೆ ಹೈ
 (4)ಪರ್ಶಿಯನ್ ಗಲ್ಫ್
CORRECT ANSWER

(2) ಗಲ್ಫ್ ಆಫ್ ಮೆಕ್ಸಿಕೋ


87.ಇತ್ತೀಚೆಗೆ ಅರೇಬಿಯನ್ ಸಮುದ್ರದಲ್ಲಿ ವರ್ತಕ ಹಡಗುಗಳ ಮೇಲೆ ಆಕ್ರಮಣ ಮಾಡಿ ನಾವಿಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋಗುತ್ತಿರುವ ದರೋಡೆಕೋರರು ಯಾವ ದೇಶಕ್ಕೆ ಸೇರಿದ್ದಾರೆ?
 (1)ಉಗಾಂಡ
 (2)ಬೊಲಿವಿಯಾ
 (3)ಸೊಮಾಲಿಯಾ
 (4)ಲಿಬಿಯಾ
CORRECT ANSWER

(3) ಸೊಮಾಲಿಯಾ


88.ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವವರು
 (1)ಸುಷ್ಮಾ ಸ್ವರಾಜ್
 (2)ಅರುಣ್ ಜೇಟ್ಲಿ
 (3)ಎಲ್.ಕೆ.ಅಡ್ವಾಣಿ
 (4)ಅನಂತ್‌ಕುಮಾರ್
CORRECT ANSWER

(2) ಅರುಣ್ ಜೇಟ್ಲಿ


89.ಇತ್ತೀಚೆಗೆ ಸುದ್ದಿಯಲ್ಲಿದ್ದಂಥ, ಬಾಂಗ್ಲಾದೇಶದ ನೊಬೆಲ್ ಬಹುಮಾನ ಪುರಸ್ಕೃತರ ಹೆಸರು
 (1)ಮುಜೀಬುರ್ ರೆಹ್ಮಾನ್
 (2)ಮೊಹಮ್ಮದ್ ಯೂನುಸ್
 (3)ಶೇಕ್ ಹಸೀನಾ
 (4)ಬೇಗಂ ನಜಾರಿತ್
CORRECT ANSWER

(2) ಮೊಹಮ್ಮದ್ ಯೂನುಸ್


90.2011ರ ಪ್ರಾಥಮಿಕ ಜನಗಣತಿ ಅಂಕಿಸಂಖ್ಯೆಗಳ ಪ್ರಕಾರ ಕರ್ನಾಟಕದ ಸಾಕ್ಷರತಾ ಪ್ರಮಾಣವು
 (1)70%
 (2)75.6%
 (3)66.6%
 (4)80%
CORRECT ANSWER

(2) 75.6%


91.2011ರ ಪ್ರಾಥಮಿಕ ಜನಗಣತಿ ಅಂಕಿಸಂಖ್ಯೆಗಳ ಪ್ರಕಾರ ಕೆಳಕಂಡ ಯಾವ ಗುಂಪಿನ ರಾಜ್ಯಗಳಲ್ಲಿನ ಜನಸಂಖ್ಯಾ ಸಾಂದ್ರತೆಯು ಪ್ರತಿ ಚದರ ಕಿಮೀಗೆ 500ಕ್ಕಿಂತ ಹೆಚ್ಚಾಗಿದೆ ?
 (1)ಕರ್ನಾಟಕ, ಆಂಧ್ರಪ್ರದೇಶ, ದೆಹಲಿ
 (2)ತಮಿಳುನಾಡು, ಕೇರಳ, ದೆಹಲಿ
 (3)ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ
 (4)ಪುದುಚೇರಿ, ಚಂಡೀಘರ್, ಗೋವಾ
CORRECT ANSWER

(2) ತಮಿಳುನಾಡು, ಕೇರಳ, ದೆಹಲಿ


92.ಕೇಂದ್ರ ಕೃಷಿ ಸಚಿವರು ಬಹಿರಂಗಪಡಿಸಿದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಈ ವರ್ಷ ಆಹಾರಧಾನ್ಯದ ಉತ್ಪಾದನೆಯು ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಮಟ್ಟವನ್ನು ತಲುಪಿದ್ದು ಅದು ಹೀಗಿದೆ:
 (1)400 ಮಿಲಿಯನ್ ಟನ್‌ಗಳು
 (2)150 ಮಿಲಿಯನ್ ಟನ್‌ಗಳು
 (3)235 ಮಿಲಿಯನ್ ಟನ್‌ಗಳು
 (4)275 ಮಿಲಿಯನ್ ಟನ್‌ಗಳು
CORRECT ANSWER

(3) 235 ಮಿಲಿಯನ್ ಟನ್‌ಗಳು


93.ಕಳಸಾ ಮತ್ತು ಬಂಡೂರಿ ಎಂಬುವು ಕೆಳಕಂಡದ್ದರ ಎರಡು ಉಪನದಿಗಳಾಗಿವೆ.
 (1)ಕೃಷ್ಣಾ ಜಲಾನಯನ
 (2)ಮಹಾದಾಯಿ ಜಲಾನಯನ
 (3)ಗೋದಾವರಿ ಜಲಾನಯನ
 (4)ಕಾವೇರಿ ಜಲಾನಯನ
CORRECT ANSWER

(2) ಮಹಾದಾಯಿ ಜಲಾನಯನ


94.ಮಾನವ ಅಭಿವೃದ್ಧಿ ಸೂಚಿಯು ಕೆಳಕಂಡವುಗಳ ಸಮ್ಮಿಶ್ರ ಸೂಚಿಯಾಗಿದೆ.
 (1)ಆದಾಯ, ವ್ಯಾಪಾರ ಮತ್ತು ಹೂಡಿಕೆ
 (2)ಬಡತನ, ಮಾನವ ಹಕ್ಕುಗಳು ಮತ್ತು ಲಿಂಗ
 (3)ಆದಾಯ, ಆರೋಗ್ಯ ಮತ್ತು ಶಿಕ್ಷಣ
 (4)ಆರೋಗ್ಯ, ಶಿಕ್ಷಣ ಮತ್ತು ಪೌಷ್ಠ್ಠಿಕತೆ
CORRECT ANSWER

(3) ಆದಾಯ, ಆರೋಗ್ಯ ಮತ್ತು ಶಿಕ್ಷಣ


95.‘ಟೆಲಿಡೆನ್ಸಿಟಿ’ ಎಂಬುದು ಈ ಕೆಳಕಂಡ ವ್ಯಾಪ್ತಿಯಲ್ಲಿರುವ ದೂರವಾಣಿಗಳ ಸಂಖ್ಯೆಗೆ ಸಂಬಂಧಿಸಿದೆ.
 (1)ಪ್ರತಿ ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿರುವ
 (2)10,000 ಕಿಲೋಮೀಟರ್ ವಿಸ್ತೀರ್ಣದಲ್ಲಿರುವ
 (3)ಪ್ರತಿ 100 ವ್ಯಕ್ತಿಗಳಿಗೆ
 (4)ಪ್ರತಿ ಒಂದು ಲಕ್ಷ ಜನಸಂಖ್ಯೆಗೆ
CORRECT ANSWER

(3) ಪ್ರತಿ 100 ವ್ಯಕ್ತಿಗಳಿಗೆ


96.2011-12ರ ಸಾಲಿಗೆ ಮಂಡಿತವಾದ ಕರ್ನಾಟಕ ಬಜೆಟ್‌ನಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಕೆಳಕಂಡದ್ದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಬಜೆಟ್ ರೂಪಿತವಾಗಿದೆ.
 (1)ಕೃಷಿ ಕ್ಷೇತ್ರ
 (2)ಕೈಗಾರಿಕಾ ಕ್ಷೇತ್ರ
 (3)ವ್ಯಾಪಾರ ಕ್ಷೇತ್ರ
 (4)ಸಾಗಾಣಿಕಾ ಕ್ಷೇತ್ರ
CORRECT ANSWER

(1) ಕೃಷಿ ಕ್ಷೇತ್ರ


97.ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನಿಯೋಗದ ಅವಧಿಯು
 (1)2005 ರಿಂದ 2011
 (2)2005 ರಿಂದ 2012
 (3)2005 ರಿಂದ 2013
 (4)2005 ರಿಂದ 2014
CORRECT ANSWER

(2) 2005 ರಿಂದ 2012


98.ಭಾರತ ಸರ್ಕಾರದ ರಾಷ್ಟ್ರೀಯ ಪಿಂಚಣಿ ಯೋಜನೆಯು ಕೆಳಕಂಡ ದಿನಾಂಕದಿಂದ ಜಾರಿಗೆ ಬರುವಂತೆ ಎಲ್ಲ ಪ್ರಜೆಗಳಿಗೂ ವ್ಯಾಪಿಸಿದೆ.
 (1)1 ಮೇ, 2008
 (2)1 ಮೇ, 2009
 (3)1 ಮೇ, 2010
 (4)1 ಮೇ, 2011
CORRECT ANSWER

(2) 1 ಮೇ, 2009


99.ನಮ್ಮ ದೇಶದಲ್ಲಿ ಕನ್ನಡ ಭಾಷೆಯು
 (1)ಎರಡನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
 (2)ಮೂರನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
 (3)ನಾಲ್ಕನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
 (4)ಐದನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
CORRECT ANSWER

(2) ಮೂರನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ


100.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವದ ಆಚರಣೆಯನ್ನು ಕೆಳಕಂಡ ವರ್ಷದ ಮಾರ್ಚ್ 8ರಂದು ಆಚರಿಸಲಾಯಿತು.
 (1)2008
 (2)2009
 (3)2010
 (4)2011
CORRECT ANSWER

(4) 2011

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment