WhatsApp Group         Join Now
Telegram Group Join Now

KPSC GROUP C 11-06-2017 Paper-1 General Knowledge Question Paper

KPSC GROUP C Technical & Non Technical General Knowledge Paper-1 Questions with answers

KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ: ವಿವಿಧ ತಾಂತ್ರಿಕ/ ತಾಂತ್ರಿಕೇತರ (Below Degree Standard) ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 11-06-2017 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
    A.     ಇದನ್ನು 1911ರಲ್ಲಿ ನಿರ್ಮಿಸಲಾಯಿತು
    B.     ಕಿಂಗ್ ಜಾರ್ಜ್ V ಅವರ ಭೇಟಿಯನ್ನು ಈ ಸ್ಮಾರಕದೊಂದಿಗೆ ಜೋಡಿಸಲಾಗಿದೆ (ಸಂಬಂಧಿಸಲಾಗಿದೆ).
ಮೇಲೆ ನೀಡಿದ ಹೇಳಿಕೆಗಳು ಈ ಕೆಳಗಿನ ಯಾವುದನ್ನು ಕುರಿತದ್ದಾಗಿವೆ?


    (1)    ಭಾರತದ ಗೇಟ್ ವೇ
    (2)    ಇಂಡಿಯಾ ಗೇಟ್
    (3)    ದೆಹಲಿ ದರ್ಬಾರ್
    (4)    ದೆಹಲಿ ಗೇಟ್

ಸರಿ ಉತ್ತರ

(1) ಭಾರತದ ಗೇಟ್ ವೇ


2. ಈ ಪೈಕಿ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು?


    (1)    ಡಾ.ರಾಜೇಂದ್ರ ಪ್ರಸಾದ್
    (2)    ಜವಾಹರ್ಲಾಲ್ ನೆಹರು
    (3)    ಸರ್ದಾರ್ ವಲ್ಲಭಭಾಯಿ ಪಟೇಲ್
    (4)    ಜೆ.ಬಿ.ಕೃಪಲಾನಿ

ಸರಿ ಉತ್ತರ

(2) ಜವಾಹರ್ಲಾಲ್ ನೆಹರು


3. ‘‘ರೋಗನಿರೋಧಕ ಶಾಸ್ತ್ರದ ಪಿತಾಮಹ’’ ಎನಿಸಿದವರು ಯಾರು?

    (1)    ರಾಬರ್ಡ್ ಕೋಚ್
    (2)    ಲೂಯಿಸ್ ಪ್ಯಾಶ್ಚರ್
    (3)    ಎಡ್ವರ್ಡ್ ಜೆನ್ನರ್
    (4)    ಲ್ಯಾಂಡ್ ಸ್ಟೈನರ್

ಸರಿ ಉತ್ತರ

(2) ಲೂಯಿಸ್ ಪ್ಯಾಶ್ಚರ್


4. ಪಟ್ಟಿ I ರಲ್ಲಿನ ಕಪ್/ಟ್ರೋಫಿಗಳನ್ನು ಪಟ್ಟಿ IIರಲ್ಲಿರುವ ತತ್ಸಂಬಂಧಿ ಕ್ರೀಡೆಗಳೊಡನೆ ಹೊಂದಿಸಿರಿ:

 ಪಟ್ಟಿ I ಪಟ್ಟಿ II
A.ದೇವ್ಧರ್ ಟ್ರೋಫಿI.ಫುಟ್ಬಾಲ್
B.ಡ್ಯುರಾಂಡ್ ಕಪ್II.ಕ್ರಿಕೆಟ್
C.ಡೇವಿಸ್ ಕಪ್III.ಬ್ಯಾಡ್ಮಿಂಟನ್
D.ಥಾಮಸ್ ಕಪ್IV.ಲಾನ್ ಟೆನ್ನಿಸ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIIIV
(2)IIIIIIIV
(3)IIIIVIII
(4)IIIIVIII
ಸರಿ ಉತ್ತರ

(3) II I IV III


5. ಟ್ರಾನ್ಸ್ಪೆರೆನ್ಸಿ ಇಂಟರ್ ನ್ಯಾಷನಲ್ ಎಂಬುದು (ಅಂತರರಾಷ್ಟ್ರೀಯ ಪಾರದರ್ಶಕತೆ)

    (1)    ಜಾಗತಿಕ ನಾಗರಿಕ ಸಂಸ್ಥೆಯಾಗಿದ್ದು, ಭ್ರಷ್ಟಾಚಾರ ವಿರುದ್ಧ ಹೋರಾಡುವುದು
    (2)    ಮಾನವ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ
    (3)    ನಾಗರಿಕ ಯುದ್ಧಗಳಲ್ಲಿ ನಿರಾಶ್ರಿತರ ಸಹಾಯಕ್ಕಾಗಿ ಇರುವ ವಿಶ್ವಸಂಸ್ಥೆಯ ಏಜೆನ್ಸಿ
    (4)    ಪರಿಸರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ

ಸರಿ ಉತ್ತರ

(1) ಜಾಗತಿಕ ನಾಗರಿಕ ಸಂಸ್ಥೆಯಾಗಿದ್ದು, ಭ್ರಷ್ಟಾಚಾರ ವಿರುದ್ಧ ಹೋರಾಡುವುದು


6. ಕ್ಲೋರೋಫಾರಂಅನ್ನು ಬಣ್ಣದ ಬಾಟಲಿ ಅಥವಾ ಧಾರಕದಲ್ಲಿ ಸಂಗ್ರಹಿಸಿಡಲಾಗುವುದು. ಏಕೆಂದರೆ, ಅದು ಬೆಳಕು ಮತ್ತು ಗಾಳಿಯೊಂದಿಗೆ ನೇರವಾಗಿ ವರ್ತಿಸಿ ವಿಷಕಾರಿ ವಸ್ತುವನ್ನು ಉಂಟುಮಾಡುವುದು. ಆ ವಿಷಕಾರಿ ವಸ್ತು ಯಾವುದು?

    (1)    ಫಾಸ್ಫೀನ್
    (2)    ಫಾಸ್ಜೀನ್
    (3)    ಮಸ್ಟರ್ಡ್ ಅನಿಲ (ವಿಷಾನಿಲ)
    (4)    ಕಾರ್ಬನ್ ಮೊನೊಕ್ಸೈಡ್

ಸರಿ ಉತ್ತರ

(2) ಫಾಸ್ಜೀನ್


7. ದ್ರವದ ಮೇಲ್ಮೈ ಸೆಳೆತವು ಕಡಿಮೆ ಆಗಬೇಕಾದರೆ
    A.     ದ್ರವದ ತಾಪವನ್ನು ಹೆಚ್ಚಿಸಬೇಕು
    B.     ದ್ರವದಲ್ಲಿ ಡಿಟರ್ಜೆಂಟನ್ನು ಸೇರಿಸಬೇಕು
    C.     ದ್ರವದ ತಾಪವನ್ನು ತಗ್ಗಿಸಬೇಕು
ಈ ಮೇಲಿನ ಯಾವ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    B ಮತ್ತು C ಮಾತ್ರ
    (2)    A ಮತ್ತು B ಮಾತ್ರ
    (3)    A ಮಾತ್ರ
    (4)    B ಮಾತ್ರ

ಸರಿ ಉತ್ತರ

(2) A ಮತ್ತು B ಮಾತ್ರ


8. ಚಳಿಗಾಲದಲ್ಲಿ ಕಬ್ಬಿಣದ ತುಂಡು ಮತ್ತು ಮರದ ತುಂಡನ್ನು ಬೆಳಗಿನವೇಳೆ ಮುಟ್ಟಿದರೆ ಆಗ ಕಬ್ಬಿಣದ ತುಂಡು ಹೆಚ್ಚು ತಣ್ಣಗಿರಲು ಕಾರಣ

    (1)    ಕಬ್ಬಿಣದ ತುಂಡಿನ ತಾಪವು ಮರದ ತುಂಡಿನದಕ್ಕಿಂತ ಕಡಿಮೆ
    (2)    ಮರಕ್ಕೆ ಹೋಲಿಸಿದರೆ ಕಬ್ಬಿಣವು ಉಷ್ಣದ (ಹೀನ ವಾಹಕ) ಆವಾಹಕ
    (3)    ಮರಕ್ಕೆ ಹೋಲಿಸಿದರೆ ಮರಕ್ಕಿಂತಲೂ ಕಬ್ಬಿಣ ಉಷ್ಣದ ಉತ್ತಮ ವಾಹಕ
    (4)    ಕಬ್ಬಿಣದ ತುಂಡು ಮರದ ತುಂಡಿಗಿಂತಲೂ ಭಾರ

ಸರಿ ಉತ್ತರ

(3) ಮರಕ್ಕೆ ಹೋಲಿಸಿದರೆ ಮರಕ್ಕಿಂತಲೂ ಕಬ್ಬಿಣ ಉಷ್ಣದ ಉತ್ತಮ ವಾಹಕ


9. ಈ ಹೇಳಿಕೆಗಳನ್ನು ಪರಿಗಣಿಸಿ:
    A.     ಚಂಡಮಾರುತದಲ್ಲಿ ಕಡಿಮೆ ಒತ್ತಡ ಪ್ರದೇಶವು ಕೇಂದ್ರದಲ್ಲಿದ್ದು, ಅದರ ಸುತ್ತಲೂ ಅಧಿಕ ಒತ್ತಡ ಪ್ರದೇಶಗಳಿರುವುವು
    B.     ಚಂಡಮಾರುತದಲ್ಲಿ ಕಡಿಮೆ ಒತ್ತಡ ಪ್ರದೇಶವು ಅಧಿಕ ಒತ್ತಡ ಪ್ರದೇಶವನ್ನಾವರಿಸುವುವು
    C.     ಪ್ರತಿಕೂಲ ಚಂಡಮಾರುತದಲ್ಲಿ ಅಧಿಕ ಒತ್ತಡ ಪ್ರದೇಶವನ್ನು ಕಡಿಮೆ ಒತ್ತಡ ಪ್ರದೇಶಗಳಾವರಿಸುವುವು
    D.     ಪ್ರತಿಕೂಲ ಚಂಡಮಾರುತದಲ್ಲಿ ಕಡಿಮೆ ಒತ್ತಡ ಪ್ರದೇಶಗಳು ಹೆಚ್ಚು ಒತ್ತಡ ಪ್ರದೇಶಗಳಿಂದ ಸುತ್ತುವರಿದಿರುವುವು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    A ಮತ್ತು C ಮಾತ್ರ
    (3)    A ಮತ್ತು D ಮಾತ್ರ
    (4)    B ಮತ್ತು D ಮಾತ್ರ

ಸರಿ ಉತ್ತರ

(2) A ಮತ್ತು C ಮಾತ್ರ


10. ಭೂಮಿಯ ಭ್ರಮಣೆ ಇಲ್ಲದೇ ಹೋದರೆ ಆಗುವ ಪರಿಣಾಮವು
    A.     ಸೂರ್ಯೋದಯ ಮತ್ತು ಸೂರ್ಯಾಸ್ತವಿಲ್ಲ
    B.     ಹಗಲು-ರಾತ್ರಿಗಳ ಚಕ್ರ ಉಂಟಾಗುವುದಿಲ್ಲ
    C.     ಒಂದೇ ಒಂದು ಋತು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    A ಮತ್ತು B ಮಾತ್ರ
    (3)    B ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(2) A ಮತ್ತು B ಮಾತ್ರ


11. ಆಟಗಾರರು (ಪಟ್ಟಿ I) ಮತ್ತು ತತ್ಸಂಬಂಧಿ ಕ್ರೀಡೆಗಳು (ಪಟ್ಟಿ II) ಹೊಂದಿಸಿ:

 ಪಟ್ಟಿ I (ಆಟಗಾರರು) ಪಟ್ಟಿ II (ತತ್ಸಂಬಂಧಿ ಕ್ರೀಡೆಗಳು)
A.ಜೀವ್ ಮಿಲ್ಕಾಸಿಂಗ್I.ಕ್ರಿಕೆಟ್
B.ಯಜುವೇಂದ್ರ ಚಾಹಲ್II.ಗೋಲ್ಫ್
C.ಜಯಂತ ತಾಲ್ಲೂಕದಾರ್III.ಪವರ್ ಲಿಫ್ಟಿಂಗ್
D.ಎನ್.ಕುಂಜರಾಣಿ ದೇವಿIV.ಬಿಲ್ಲುವಿದ್ಯೆ
V.ಸಾಕರ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIIIV
(2)IIIIIIIV
(3)IIIIVIII
(4)IIIIVIII
ಸರಿ ಉತ್ತರ

(3) II I IV III


12. ಪ್ರತಿ 4 ವರ್ಷಕ್ಕೊಮ್ಮೆ ಅಧಿಕ ವರ್ಷ ಬರಲು ಕಾರಣವೇನು?

    (1)    ಭೂಮಿಯು ತನ್ನ ಕಕ್ಷೆಯಿಂದ ನಾಲ್ಕು ವರ್ಷಕ್ಕೊಮ್ಮೆ ವರ್ಗಾವಣೆ ಆಗುವುದು
    (2)    ಭೂ ಪರಿಭ್ರಮಣವು ನಾಲ್ಕು ವರ್ಷಗಳಿಗೊಮ್ಮೆ ತುಸು ನಿಧಾನವಾಗುವುದು
    (3)    ವರ್ಷದ ಅವಧಿಯು ದಿನಗಳ ಸಂಖ್ಯೆಯ ಪೂರ್ಣಾಂಕವಲ್ಲ
    (4)    ಇದೊಂದು ರೂಢಿ ಮಾತ್ರ

ಸರಿ ಉತ್ತರ

(3) ವರ್ಷದ ಅವಧಿಯು ದಿನಗಳ ಸಂಖ್ಯೆಯ ಪೂರ್ಣಾಂಕವಲ್ಲ


13. ಸೌರದಿನ ಮತ್ತು ನಾಕ್ಷತ್ರಿಕ ದಿನಗಳಿಗೂ ಇರುವ ಸಂಬಂಧವೇನು?

    (1)    ಸೌರದಿನವು ನಾಕ್ಷತ್ರಿಕ ದಿನಕ್ಕಿಂತ ಚಿಕ್ಕದು
    (2)    ಸೌರದಿನವು ನಾಕ್ಷತ್ರಿಕ ದಿನಕ್ಕಿಂತ ದೊಡ್ಡದು
    (3)    ಎರಡೂ ಒಂದೇ ಸಮ
    (4)    ಇವುಗಳ ನಡುವೆ ಯಾವುದೇ ಸಂಬಂಧವಿಲ್ಲ

ಸರಿ ಉತ್ತರ

(2) ಸೌರದಿನವು ನಾಕ್ಷತ್ರಿಕ ದಿನಕ್ಕಿಂತ ದೊಡ್ಡದು


14. ಇವನ್ನು ಹೊಂದಿಸಿ:

 ಪಟ್ಟಿ I ಪಟ್ಟಿ II
A.ಪೇಶ್ವೆಗಳುI.ನಾಗ್ಪುರ್
B.ಭೋಸ್ಲೆಗಳುII.ಗ್ವಾಲಿಯರ್
C.ಗಾಯಕ್ವಾಡ್ ಗಳುIII.ಬರೋಡಾ
D.ಹೋಳ್ಕರ್ ಗಳುIV.ಪೂನಾ
E.ಸಿಂಧಿಯಾಗಳುV.ಇಂದೋರ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCDE
(1)IIIIIIIVV
(2)IVIIIIIIV
(3)IVIVIIIII
(4)IVIIIIVII
ಸರಿ ಉತ್ತರ

(4) IV I III V II


15. ತಾಜ್ ಮಹಲ್ ಕುರಿತಂತೆ ಈ ಪೈಕಿ ಯಾವ ಹೇಳಿಕೆ ಸರಿಯಲ್ಲ?

    (1)    ಅದು ಭವ್ಯವಾದ ಗೋರಿ
    (2)    ಅದನ್ನು ಕಟ್ಟಿದ್ದು ಷಹಜಹಾನ್
    (3)    ಅದು ಆಗ್ರಾ ಕೋಟೆಯ ಹೊರಭಾಗದಲ್ಲಿದೆ
    (4)    ಅದನ್ನು ನಿರ್ಮಿಸಿದ ಕುಶಲ ಕರ್ಮಿಗಳ ಹೆಸರುಗಳನ್ನು ಅದರ ಮೇಲೆ ಕೆತ್ತಲಾಗಿದೆ

ಸರಿ ಉತ್ತರ

(4) ಅದನ್ನು ನಿರ್ಮಿಸಿದ ಕುಶಲ ಕರ್ಮಿಗಳ ಹೆಸರುಗಳನ್ನು ಅದರ ಮೇಲೆ ಕೆತ್ತಲಾಗಿದೆ


16. ಹದಿನೇಳನೇ ಶತಮಾನದಲ್ಲಿ ಸಿಖ್ಖರು ಧಾರ್ಮಿಕ ಪಂಗಡದಿಂದ ಉಗ್ರಗಾಮಿ ವಿರೋಧಿ ಮುಸ್ಲಿಂ ಸಹೋದರತ್ವಕ್ಕೆ ರೂಪಾಂತರಗೊಂಡರು. ಈ ರೂಪಾಂತರವನ್ನು ಪ್ರಾರಂಭಿಸಿದ ಸಿಖ್ ಗುರು

    (1)    ಗುರು ಅಮರ್ ದಾಸ್
    (2)    ಗುರು ಅರ್ಜುನ್ ದೇವ್
    (3)    ಗುರು ಹರ್ ಗೋವಿಂದ್
    (4)    ಗುರು ತೇಜ್ ಬಹಾದ್ದೂರ್

ಸರಿ ಉತ್ತರ

(3) ಗುರು ಹರ್ ಗೋವಿಂದ್


17. ಯಾವ ಅಂತರರಾಷ್ಟ್ರೀಯ ಪಂದ್ಯಾವಳಿಯ ಘಟನೆಯ ಆದರ್ಶ ಸೂಕ್ತಿಯಾದ ವೇಗಕರ, ಅಧಿಕ, ಶಕ್ತಿಯುತ ಎಂಬುದಕ್ಕೆ ಸಿಟಿಯಸ್, ಆಲ್ಟಿಯಸ್, ಪೋರ್ಟಿಯಸ್ ಎಂಬುದು ಲ್ಯಾಟಿನ್ ಆಗಿದೆ?

    (1)    ಫಿಫಾ ವಿಶ್ವಕಪ್
    (2)    ಒಲಿಂಪಿಕ್ಸ್
    (3)    ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್
    (4)    ಆಪ್ರೋ-ಏಶಿಯನ್ ಕ್ರೀಡೆಗಳು

ಸರಿ ಉತ್ತರ

(2) ಒಲಿಂಪಿಕ್ಸ್


18. ವ್ಯಕ್ತಿಗಳು (ಪಟ್ಟಿ I) ಮತ್ತು ಕ್ಷೇತ್ರಗಳೊಡನೆ (ಪಟ್ಟಿ II) ಹೊಂದಿಸಿ:

 ಪಟ್ಟಿ I (ವ್ಯಕ್ತಿಗಳು) ಪಟ್ಟಿ II (ಕ್ಷೇತ್ರ)
A.ಭಜನ ಸೂಪೋರಿI.ಭರತನಾಟ್ಯ
B.ಬಿರ್ಜು ಮಹಾರಾಜ್II.ಸಂತೂರ್ ವಾದಕರು
C.ಪ್ರಿಯದರ್ಶಿನಿ ಗೋವಿಂದ್III.ಮೃದಂಗ ಪಟು
D.ಟಿ.ವಿ.ಗೋಪಾಲ ಕೃಷ್ಣನ್IV.ಕಥಕ್ ನರ್ತಕರು

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIIIV
(2)IIIIIIIV
(3)IIIIVIII
(4)IIIVIIII
ಸರಿ ಉತ್ತರ

(4) II IV I III


19. ಭಾರತಕ್ಕೆ ಸಂಬಂಧಿಸಿದಂತೆ ಇವುಗಳನ್ನು ಪರಿಗಣಿಸಿ:
    A.     ಬ್ಯಾಂಕುಗಳ ರಾಷ್ಟ್ರೀಕರಣ
    B.     ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ರಚನೆ
    C.     ಬ್ಯಾಂಕು ಶಾಖೆಗಳಿಂದ ಗ್ರಾಮಗಳ ದತ್ತು
ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    A ಮತ್ತು C ಮಾತ್ರ
    (3)    B ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


20. ನ್ಯೂಟನ್ ನ ಗುರುತ್ವಾಕರ್ಷಣೆಯ ನಿಯಮವನ್ನು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಅನ್ವಯಿಸಲಾಗಿದೆ?

    (1)    ಭೂಮಿ ಮತ್ತು ಸೂರ್ಯನ ನಡುವಣ ಬಲ ಮಾತ್ರ
    (2)    ಭೂಮಿ ಮತ್ತು ಚಂದ್ರನ ನಡುವಣ ಬಲ ಮಾತ್ರ
    (3)    ಭೂಮಿ ಮತ್ತು ಇತರ ಕಾಯ ನಡುವಣ ಬಲ ಮಾತ್ರ
    (4)    ಬ್ರಹ್ಮಾಂಡದಲ್ಲಿರುವ ಯಾವುದೇ ಎರಡು ಕಾಯಗಳ ನಡುವಣ ಬಲ

ಸರಿ ಉತ್ತರ

(4) ಬ್ರಹ್ಮಾಂಡದಲ್ಲಿರುವ ಯಾವುದೇ ಎರಡು ಕಾಯಗಳ ನಡುವಣ ಬಲ


21. ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ‘‘ಅಷ್ಟ ದಿಗ್ಗಜ’’ರಲ್ಲಿ ಇದ್ದ ಕನ್ನಡ ಕವಿ ಯಾರು?

    (1)    ತೆನಾಲಿ ರಾಮ
    (2)    ಧೂರ್ಜಟಿ
    (3)    ನಂದಿ ತಿಮ್ಮಣ್ಣ
    (4)    ಅಲ್ಲಸಾನಿ ಪೆದ್ದನ್ನ

ಸರಿ ಉತ್ತರ

(3) ನಂದಿ ತಿಮ್ಮಣ್ಣ


22. ಸಂವಿಧಾನದಿಂದ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳ ಮೇಲೆ ಸಮಂಜಸವಾದ ನಿರ್ಬಂಧಕ್ಕೆ ಕಾರಣವಾಗುವ ಅಂಶವನ್ನು ನಿರ್ಧರಿಸುವ ಅಧಿಕಾರ ವನ್ನು ಈ ಕೆಳಗಿನ ಯಾರು ಹೊಂದಿದ್ದಾರೆ?

    (1)    ಭಾರತದ ಅಧ್ಯಕ್ಷರು
    (2)    ನ್ಯಾಯಾಲಯಗಳು
    (3)    ಸಂಸತ್ತಿನ ಕೆಳಮನೆಗಳಲ್ಲಿ ಸರಳ ಬಹುಮತ
    (4)    ಪಾರ್ಲಿಮೆಂಟ್ ನ ಎರಡೂ ಸದನಗಳಲ್ಲಿ 2/3 ಬಹುಮತ

ಸರಿ ಉತ್ತರ

(2) ನ್ಯಾಯಾಲಯಗಳು


23. ಈ ಕೆಳಗಿನವುಗಳಲ್ಲಿ ಯಾವ ನದಿಯು ಆಫ್ರಿಕಾ ಖಂಡದ ಪ್ರಮುಖ ನದಿಯಾಗಿಲ್ಲ?

    (1)    ನೈಲ್
    (2)    ಕಾಂಗೋ
    (3)    ವೋಲ್ಗಾ
    (4)    ಜಾಂಬೆಸಿ

ಸರಿ ಉತ್ತರ

(3) ವೋಲ್ಗಾ


24. ಜಪಾನ್ ನ ದ್ವೀಪಾವಳಿಗಳಲ್ಲಿರುವ ದೊಡ್ಡ ದ್ವೀಪ, ಕೆಳಗಿನವುಗಳಲ್ಲಿ ಯಾವುದು?

    (1)    ಹೊಕೈಡೊ
    (2)    ಹೊನ್ಷೂ
    (3)    ಶಿಕೊಕು
    (4)    ಕ್ಯುಶು

ಸರಿ ಉತ್ತರ

(2) ಹೊನ್ಷೂ


25. ಪಟ್ಟಿ I ರಲ್ಲಿನ ಸಾಂವಿಧಾನಿಕ ಸಭೆಗಳ ಸಮಿತಿಗಳನ್ನು ಪಟ್ಟಿ II ರಲ್ಲಿರುವ ಅಧ್ಯಕ್ಷರೊಂದಿಗೆ ಹೊಂದಿಸಿ:

 ಪಟ್ಟಿ I (ಸಮಿತಿಗಳು) ಪಟ್ಟಿ II (ಅಧ್ಯಕ್ಷರು)
A.ಕರಡು ಸಮಿತಿI.ವಲ್ಲಭಭಾಯ್ ಪಟೇಲ್
B.ಮೂಲಭೂತ ಮತ್ತು ಅಲ್ಪಸಂಖ್ಯಾತ ಹಕ್ಕುಗಳನ್ನು ಕುರಿತಾದ ಸಮಿತಿII.ಜವಾಹರಲಾಲ್ ನೆಹರೂ
C.ಕೇಂದ್ರ ಸಂವಿಧಾನ ಸಮಿತಿIII.ಕೆ.ಎಂ.ಮುನ್ಷಿ
D.ವ್ಯವಹಾರ ಸುವ್ಯವಸ್ಥಾಕ್ರಮದ ಸಮಿತಿIV.ಬಿ.ಆರ್.ಅಂಬೇಡ್ಕರ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIIIV
(2)IVIIIIII
(3)IVIIIIII
(4)IVIIIIII
ಸರಿ ಉತ್ತರ

(4) IV I II III


26. 2011ರ ಜನಗಣತಿಯ ಮೇರೆಗೆ ಸಾಕ್ಷರತಾ ಆಧಾರದ ಮೇರೆಗೆ ಕೆಳಗಿನ ಯಾವ ಗುಂಪು ರಾಜ್ಯಗಳ ಅವರೋಹಣ ಕ್ರಮವನ್ನು ಪ್ರತಿನಿ ಸುತ್ತದೆ?

    (1)    ಕೇರಳ, ಗೋವಾ, ಮಿಜೋರಾಂ ಮತ್ತು ತ್ರಿಪುರಾ
    (2)    ಕೇರಳ,ಮಿಜೋರಾಂ, ತ್ರಿಪುರಾ ಮತ್ತು ಗೋವಾ
    (3)    ಕೇರಳ,ತ್ರಿಪುರಾ, ಗೋವಾ ಮತ್ತು ಮಿಜೋರಾಂ
    (4)    ಕೇರಳ, ಗೋವಾ, ತ್ರಿಪುರಾ ಮತ್ತು ಮಿಜೋರಾಂ

ಸರಿ ಉತ್ತರ

(2) ಕೇರಳ,ಮಿಜೋರಾಂ, ತ್ರಿಪುರಾ ಮತ್ತು ಗೋವಾ


27. ಪಟ್ಟಿ Iರಲ್ಲಿನ ವೃಕ್ಷಗಳ ಬಗೆಗಳನ್ನು ಪಟ್ಟಿ II ರಲ್ಲಿರುವ ಅವು ದೊರೆಯುವ ಸ್ಥಳ/ಭೂಮಿಗಳು/ಕಾಡುಗಳೊಂದಿಗೆ ಹೊಂದಿಸಿ:

 ಪಟ್ಟಿ I (ವೃಕ್ಷದ ಬಗೆ) ಪಟ್ಟಿ II (ಸ್ಥಳಗಳು/ ಭೂಮಿಗಳು/ ಕಾಡುಗಳು)
A.ತೇಗI.ಕರ್ನಾಟಕ
B.ಶ್ರೀಗಂಧII.ಉಷ್ಣವಲಯದ ಭೂಮಿಗಳು
C.ದೇವದಾರು(ಡಿಯೋಡಾರ್)III.ಮಾನ್ಸೂನ್ ಅರಣ್ಯಗಳು
D.ಮಹಾಗನಿIV.ಜಮ್ಮು ಮತ್ತು ಕಾಶ್ಮೀರ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIVII
(2)IIIIIIIV
(3)IVIIIIII
(4)IIIVIIII
ಸರಿ ಉತ್ತರ

(1) III I IV II


28. ಚಕ್ರವರ್ತಿ ಹರ್ಷನ ದಕ್ಷಿಣದ ಮೆರವಣಿಗೆಯು ನರ್ಮದಾ ನದಿಯ ಮೇಲೆ ತಡೆಯಲ್ಪಟ್ಟಿದ್ದು ಇವನಿಂದ

    (1)    ವಿಕ್ರಮಾದಿತ್ಯ-I
    (2)    ವಿಕ್ರಮಾದಿತ್ಯ-II
    (3)    ಪುಲಕೇಶಿ-I
    (4)    ಪುಲಕೇಶಿ-II

ಸರಿ ಉತ್ತರ

(4) ಪುಲಕೇಶಿ-II


29. ಭಾರತದಲ್ಲಿ ಬ್ರಿಟಿಷರ ಸಾರ್ವಭೌಮತ್ವಕ್ಕೆ ಫ್ರೆಂಚರ ಸವಾಲು ಈ ಕೆಳಗಿನ ಯಾವ ಯುದ್ಧದೊಂದಿಗೆ ಕೊನೆಗೊಂಡಿತು?

    (1)    ವಾಂಡಿವಾಷ್ ಯುದ್ಧ
    (2)    ಬಕ್ಸಾರ್ ಯುದ್ಧ
    (3)    ಶ್ರೀರಂಗ ಪಟ್ಟಣಂ ಯುದ್ಧ
    (4)    ಪ್ಲಾಸಿ ಯುದ್ಧ

ಸರಿ ಉತ್ತರ

(1) ವಾಂಡಿವಾಷ್ ಯುದ್ಧ


30. ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿನ ಕಿತ್ತಳೆ ಟೋಪಿಯು ಈ ಕೆಳಗಿನ ಯಾವುದರೊಂದಿಗೆ ಸಂಬಂಧಿಸಿದೆ?

    (1)    ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಗಳಿಸಿರುವವರು
    (2)    ಪಂದ್ಯಾವಳಿಯಲ್ಲಿ ಅತ್ಯಧಿಕ ವಿಕೆಟ್ ಗಳನ್ನು ಗಳಿಸಿರುವವರು
    (3)    ಪಂದ್ಯಾವಳಿಯಲ್ಲಿ ಅತ್ಯಧಿಕ ಪಂದ್ಯದ ಪುರುಷೋತ್ತಮ ಬಿರುದನ್ನು ಗಳಿಸಿರುವವರು
    (4)    ಪಂದ್ಯಾವಳಿಯ ಅತ್ಯುತ್ತಮ ಕ್ಷೇತ್ರ ರಕ್ಷಕ (ಫೀಲ್ಡರ್)

ಸರಿ ಉತ್ತರ

(1) ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಗಳಿಸಿರುವವರು


31. ಈ ಕೆಳಗಿನ ಯಾವ ಹೇಳಿಕೆಯು ಕಾಂಗ್ರೆಸ್ ನಾಯಕರನ್ನು ಕುರಿತಾಗಿ ಸರಿಯಲ್ಲ?

    (1)    ಮೂರನೇ ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ಬದ್ರುದ್ದೀನ್ ತಯಾಬ್ಜಿಯವರನ್ನು ಮಾಡಿದ್ದು, ಮುಸ್ಲಿಮರ ಅಭಿಪ್ರಾಯಗಳನ್ನು ಸಾಂತ್ವನಗೊಳಿಸಲಿಕ್ಕಾಗಿ
    (2)    ಲಾಲಾ ಲಜಪಪತ್ ರಾಯ್ ರವರು ತಮ್ಮ ಪ್ರಾರಂಭದ ಜೀವನದಲ್ಲಿ ಆರ್ಯ ಸಮಾಜದಿಂದ ಆಳವಾಗಿ ಪ್ರಭಾವಿತಗೊಂಡಿದ್ದರು
    (3)    ತಿಲಕರು ಸಾಂಪ್ರದಾಯಿಕ ಹಿಂದೂ ಪುನರುದ್ಧಾರಕ ವಾದಗಳನ್ನು ಸಮರ್ಥಿಸಿದ್ದು, ಜಾರಿಯಾಗಲಿದ್ದ ಒಪ್ಪಿತ ಮಸೂದೆಯ ಪ್ರಾಯವನ್ನು ತಡೆಯುವ ಸಲುವಾಗಿ
    (4)    ಎಲ್ಲಾ ಗಲಭೆಗಳ ಕಾಂಗ್ರೆಸ್ ವ್ಯಕ್ತಿಗಳಿಂದಲೂ ಫಿರೋಜ್ ಷಾ ಮೆಹ್ತಾರವರು ಪ್ರೀತಿಸಲ್ಪಟ್ಟರು

ಸರಿ ಉತ್ತರ

(4) ಎಲ್ಲಾ ಗಲಭೆಗಳ ಕಾಂಗ್ರೆಸ್ ವ್ಯಕ್ತಿಗಳಿಂದಲೂ ಫಿರೋಜ್ ಷಾ ಮೆಹ್ತಾರವರು ಪ್ರೀತಿಸಲ್ಪಟ್ಟರು


32. ಈ ಕೆಳಗಿನ ಯಾವ ತೀರ್ಮಾನಗಳು ಮಂದಗಾಮಿಗಳು ಮತ್ತು ಉಗ್ರಗಾಮಿಗಳನ್ನು ಕುರಿತಾಗಿ ಸರಿಯಲ್ಲ?

    (1)    ಮಂದಗಾಮಿಗಳ (ಸೌಮ್ಯವಾದಿ) ಷರತ್ತುಗಳಿಗೆ ವಸಾಹತು ಸರ್ಕಾರವು ವಿಚಲಿತಗೊಳ್ಳಲಿಲ್ಲ
    (2)    ಮಂದಗಾಮಿ ನಾಯಕರು ತಮ್ಮ ಅಧಿಕಾರ ಸ್ಥಿತಿಯಲ್ಲಿ ಕಾಂಗ್ರೆಸ್ ನ ಒಳಗೇ ಮುಂದುವರಿಯುವುದನ್ನು, ಉಗ್ರಗಾಮಿಗಳು ಇಚ್ಛಿಸಿದರು
    (3)    ತಮ್ಮ ದೇಶದ ಜನರಿಗಿಂತಲೂ ಹೆಚ್ಚಾಗಿ ಬ್ರಿಟಿಷರಿಗೆ ಹೆಚ್ಚು ಆಪ್ತವಾಗಿದ್ದಾರೆಂಬ ಭಾವ
    (4)    ಹಿಂದೂ ಪುನರುದ್ಧಾರತ್ವದಿಂದ ಮುಸ್ಲಿಂರನ್ನು ಉಗ್ರಗಾಮಿಗಳು ಬೇರೆ ಮಾಡಿದ್ದು

ಸರಿ ಉತ್ತರ

(2) ಮಂದಗಾಮಿ ನಾಯಕರು ತಮ್ಮ ಅಧಿಕಾರ ಸ್ಥಿತಿಯಲ್ಲಿ ಕಾಂಗ್ರೆಸ್ ನ ಒಳಗೇ ಮುಂದುವರಿಯುವುದನ್ನು, ಉಗ್ರಗಾಮಿಗಳು ಇಚ್ಛಿಸಿದರು


33. ಈ ಕೆಳಗಿನ ಯಾವ ಕಾರಣದಿಂದಾಗಿ ಖಿಲಾಫತ್ ಚಳವಳಿಯ ತಗ್ಗಿಕೆಯಾಯಿತು?

    (1)    ಕಾಂಗ್ರೆಸ್ ನಿಂದ ಬೆಂಬಲದ ಹಿಂತೆಗೆದುಕೊಳ್ಳುವಿಕೆ
    (2)    ಬ್ರಿಟಿಷರಿಂದ ಮುಸ್ಲಿಮರ ವಿರುದ್ಧವಾಗಿ ಪಕ್ಷಪಾತೀಯ ನೀತಿಯ ಪರಿತ್ಯಾಗ
    (3)    ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗಳಲ್ಲಿ ಮುಸ್ಲಿಮರಿಗಾಗಿ ಸ್ಥಾನಗಳನ್ನು 1919ರ ಕಾಯ್ದೆಯಡಿಯಲ್ಲಿ ಕಾಯ್ದಿರಿಸುವಿಕೆ
    (4)    ಟರ್ಕಿಯಲ್ಲಿ ಮುಸ್ತಫಾ ಕಮಾಲ್ ಪಾಷರಿಂದ ಅಧಿಕಾರ ದ ಗ್ರಹಿಕೆ ಮತ್ತು ಖಲೀಫಾತ್ ನ ಉಚ್ಚಾಟನೆ

ಸರಿ ಉತ್ತರ

(4) ಟರ್ಕಿಯಲ್ಲಿ ಮುಸ್ತಾ ಕಮಾಲ್ ಪಾಷರಿಂದ ಅಧಿಕಾರ ದ ಗ್ರಹಿಕೆ ಮತ್ತು ಖಲೀಫಾತ್ ನ ಉಚ್ಚಾಟನೆ


34. ಪಂಚಾಯತ್ ರಾಜ್ ಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದನ್ನು 73ನೇ ಸಂವಿಧಾನದ ತಿದ್ದುಪಡಿಯಿಂದ ನೀಡಲಾಗಿಲ್ಲ?

    (1)    ಎಲ್ಲಾ ಹಂತಗಳಲ್ಲೂ ಸ್ತ್ರೀಯರಿಗಾಗಿ ಎಲ್ಲಾ ಚುನಾಯಿತ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ 1/3 ಭಾಗದಷ್ಟು ಸ್ಥಾನಗಳನ್ನು ಮೀಸಲಾಗಿರಿಸುವುದು
    (2)    ಪಂಚಾಯತ್ ರಾಜ್ ಸಂಸ್ಥೆಗಳಿಗಾಗಿ ಸಂಪನ್ಮೂಲಗಳ ಹಂಚಿಕೆಗಾಗಿ ರಾಜ್ಯಗಳು ಹಣಕಾಸು ಆಯೋಗಗಳನ್ನು ರಚಿಸುವುದು
    (3)    ಒಂದು ವೇಳೆ ಪಂಚಾಯತ್ ರಾಜ್ ನ ಸಂಸ್ಥೆಗಳು ಅತಿಕ್ರಮಿಸಲ್ಪಟ್ಟಲ್ಲಿ ಅಥವಾ ವಿಸರ್ಜಿತವಾದಲ್ಲಿ, 6 ತಿಂಗಳೊಳಗಾಗಿ ಚುನಾವಣೆಗಳನ್ನು ನಡೆಸುವುದು
    (4)    ಪಂಚಾಯತ್ ರಾಜ್ ನ ಆಯ್ಕೆಯಾಗಿರುವ ಕಾರ್ಯಕಾರಿಗಳು 2ಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದಿದ್ದಲ್ಲಿ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ನಿರ್ವಹಿಸದಂತೆ ಅನರ್ಹರನ್ನಾಗಿಸುವುದು

ಸರಿ ಉತ್ತರ

(4) ಪಂಚಾಯತ್ ರಾಜ್ನ ಆಯ್ಕೆಯಾಗಿರುವ ಕಾರ್ಯಕಾರಿಗಳು 2ಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದಿದ್ದಲ್ಲಿ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ನಿರ್ವಹಿಸದಂತೆ ಅನರ್ಹರನ್ನಾಗಿಸುವುದು


35. ಸಹವರ್ತಿ ಪಟ್ಟಿಯಲ್ಲಿನ ವಿಷಯದ ಕುರಿತಾದ ಕಾನೂನಿನ ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆ ಉಂಟಾದಾಗ ಈ ಕೆಳಗಿನವುಗಳಲ್ಲಿ ಯಾವುದು ಸರಿ?

    (1)    ಮೊದಲು ಜಾರಿಯಾದ ಕಾನೂನಿನ ಪ್ರಾಧಾನ್ಯತೆ
    (2)    ರಾಜ್ಯ ಪ್ರಾಧಾನ್ಯತೆಯ ಕಾನೂನು
    (3)    ಕೇಂದ್ರ ಪ್ರಾಧಾನ್ಯತೆಯ ಕಾನೂನು
    (4)    ಎರಡೂ ಕಾನೂನುಗಳ ನಿರರ್ಥಕತೆ

ಸರಿ ಉತ್ತರ

(3) ಕೇಂದ್ರ ಪ್ರಾಧಾನ್ಯತೆಯ ಕಾನೂನು


36. ರೂಪಾಂತರಿತ ಶಿಲೆಗಳು ಇವುಗಳಿಂದ ಉಗಮವಾಗುತ್ತವೆ

    (1)    ಅಗ್ನಿಜನ್ಯ
    (2)    ಸಂಚಿತ
    (3)    ಅಗ್ನಿಜನ್ಯ ಮತ್ತು ಸಂಚಿತ ಎರಡೂ
    (4)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(3) ಅಗ್ನಿಜನ್ಯ ಮತ್ತು ಸಂಚಿತ ಎರಡೂ


37. ಈ ಕೆಳಗಿನವುಗಳಲ್ಲಿನ ಯಾವ ಲಕ್ಷಣಗಳನ್ನು ಭಾರತೀಯ ಸಂಯುಕ್ತ ತತ್ವದಲ್ಲಿ ತಪ್ಪಾಗಿ ಪಟ್ಟಿ ಮಾಡಲಾಗಿದೆ?

    (1)    ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುತ್ತದೆ
    (2)    ಇದು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಒದಗಿಸುವುದು
    (3)    ಇದು ಲಿಖಿತ ಸಂವಿಧಾನವನ್ನು ಹೊಂದಿದೆ
    (4)    ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರಗಳನ್ನು ವಿಭಾಗಿಸುತ್ತದೆ

ಸರಿ ಉತ್ತರ

(1) ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುತ್ತದೆ


38. ಪ್ರಜಾಪ್ರಭುತ್ವ ಪರಿವರ್ತನೆಯ ಸಿದ್ಧಾಂತದ ಪ್ರಕಾರ 2011ರ ಜನಗಣತಿಯಂತೆ ರಾಜ್ಯಗಳು ಪರಿವರ್ತನೆಯ ನಾಲ್ಕನೇ ಹಂತದಲ್ಲಿವೆ ಎಂದು ಹೇಳಬಹುದು.

    (1)    ಕೇರಳ, ಮಹಾರಾಷ್ಟ್ರ, ಪಂಜಾಬ್ ಮತ್ತು ಆಂಧ್ರ ಪ್ರದೇಶ
    (2)    ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶ
    (3)    ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಒಡಿಶಾ
    (4)    ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಪಂಜಾಬ್

ಸರಿ ಉತ್ತರ

(2) ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶ


39. ಕೆಳಗಿನವುಗಳಲ್ಲಿ ಯಾವುದನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಕ್ಷೇತ್ರವ್ಯಾಪ್ತಿಯನ್ನಾಗಿ ತಪ್ಪಾಗಿ ಪಟ್ಟಿ ಮಾಡಲಾಗಿದೆ?

    (1)    ಮೂಲದ ಅಧಿಕಾರ ಕ್ಷೇತ್ರವ್ಯಾಪ್ತಿ
    (2)    ಮೇಲ್ಮನವಿ ಅಧಿಕಾರ ಕ್ಷೇತ್ರವ್ಯಾಪ್ತಿ
    (3)    ಸಲಹಾ ಅಧಿಕಾರ ಕ್ಷೇತ್ರವ್ಯಾಪ್ತಿ
    (4)    ಆಡಳಿತಾತ್ಮಕ ಸಂಘರ್ಷಗಳನ್ನು ಶಾಸನರೀತ್ಯಾ ತೀರ್ಮಾನಿಸುವುದು

ಸರಿ ಉತ್ತರ

(4) ಆಡಳಿತಾತ್ಮಕ ಸಂಘರ್ಷಗಳನ್ನು ಶಾಸನರೀತ್ಯಾ ತೀರ್ಮಾನಿಸುವುದು


40. ಕೈಗಾರಿಕಾ ಅನಾರೋಗ್ಯವನ್ನು ಕೆಲವೊಮ್ಮೆ ಮಾಲೀಕರು, ಪ್ರವರ್ತಕರು ದುರ್ಬಲ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸುತ್ತಾರೆ ಎಂದು ಆರೋಪಿಸಲಾಗಿದೆ. ಈ ಕೆಳಗಿನವುಗಳಲ್ಲಿ ಯಾವುದು ಅಂತಹ ಕಾಯಿಲೆಗೆ ಆಂತರಿಕ ಅಂಶವಲ್ಲ?

    (1)    ತಪ್ಪು ನಿರ್ವಹಣೆ
    (2)    ನಿಧಿಗಳ ತಿರುವು
    (3)    ತಾಂತ್ರಿಕ ಅವ್ಯವಸ್ಥೆ
    (4)    ತಪ್ಪು ಲಾಭಾಂಶ ನೀತಿ

ಸರಿ ಉತ್ತರ

(3) ತಾಂತ್ರಿಕ ಅವ್ಯವಸ್ಥೆ


41. ಆಕೆಯ ಹೆಸರನ್ನು ಮೊಘಲರ ಫರ್ಮಾನುಗಳ ಮೇಲೆ ಬರೆಯಲಾಗಿದ್ದು ಮತ್ತು ನಾಣ್ಯಗಳ ಮೇಲೆ ಕೆತ್ತಲಾಗಿದ್ದು, ಆ ಮೊಘಲ್ ರಾಣಿಯ ಹೆಸರೇನು?

    (1)    ನೂರ್ ಜಹಾನ್
    (2)    ಮೆರಿಯಂ ಮಕಾನಿ
    (3)    ಮಾಹಂ ಅನಗ
    (4)    ಮುಮ್ತಾಜ್ ಮಹಲ್

ಸರಿ ಉತ್ತರ

(1) ನೂರ್ ಜಹಾನ್


42. ತ್ರೈಪಾಕ್ಷಿಕ ಹೋರಾಟದಲ್ಲಿ ದಕ್ಷಿಣದ ಯಾವ ರಾಜಮನೆತನವು ಪ್ರಮುಖ ಪಾತ್ರವನ್ನು ವಹಿಸಿತು?

    (1)    ಚೋಳರು
    (2)    ರಾಷ್ಟ್ರಕೂಟರು
    (3)    ಯಾದವರು
    (4)    ಪಲ್ಲವರು

ಸರಿ ಉತ್ತರ

(2) ರಾಷ್ಟ್ರಕೂಟರು


43. ಪಶ್ಚಿಮದ ಜಲಯಾನದಿಂದ ಭಾರತವನ್ನು ತಲುಪಬಹುದೆಂದು ಮೊದಲು ಸಲಹೆಯನ್ನಿತ್ತವರಾರು?

    (1)    ಹಿಪ್ಪಾರ್ಚಸ್
    (2)    ಹಿಪ್ಪೊಕ್ರೇಟ್ಸ್
    (3)    ಅರಿಸ್ಟಾರ್ಚಸ್
    (4)    ಎರಾಟೊಸ್ತನೀಸ್

ಸರಿ ಉತ್ತರ

(4) ಎರಾಟೊಸ್ತನೀಸ್


44. ಒಬ್ಬ ಲೋಕಸಭಾ ಅಥವಾ ರಾಜ್ಯ ವಿಧಾನಸಭಾ ಸದಸ್ಯನು, ಪೂರ್ವಾನುಮತಿಯಿಲ್ಲದೆ ಅಧಿವೇಶನಕ್ಕೆ ಎಷ್ಟು ದಿನಗಳು ಗೈರು ಹಾಜರಿಯಾದಲ್ಲಿ ಅವರ ಸ್ಥಾನವನ್ನು ತೆರವಾಗಿದೆಯೆಂದು ಘೋಷಿಸಬಹುದು?

    (1)    30 ದಿನಗಳು
    (2)    60 ದಿನಗಳು
    (3)    90 ದಿನಗಳು
    (4)    120 ದಿನಗಳು

ಸರಿ ಉತ್ತರ

(2) 60 ದಿನಗಳು


45. ಸಸ್ಯಗಳು ಎರಡು ಬಗೆಯ ಸಾಗಾಣಿಕಾ ಅಂಗಾಂಶಗಳಾದ ಕ್ಸೈಲಂ ಮತ್ತು ಫ್ಲೋಯೆಂಗಳನ್ನು ಹೊಂದಿವೆ. ಅವುಗಳಲ್ಲಿ ಫ್ಲೋಯೆಂನ ಕಾರ್ಯವೇನು?

    (1)    ಬೇರುಗಳಿಂದ ಎಲೆಗಳಿಗೆ ನೀರು, ಖನಿಜಾಂಶಗಳು ಮತ್ತು ದ್ರಾವಣವನ್ನು ಸಾಗಿಸುವುದು
    (2)    ಎಲೆಗಳಿಂದ ಸಸ್ಯದ ಉಳಿದ ಭಾಗಗಳಿಗೆ ಆಹಾರವನ್ನು ಸಾಗಿಸುವುದು
    (3)    ನೀರಿನ ಭಾಷ್ಪೀಭವನಕ್ಕೆ ಸಹಾಯ ಮಾಡುವುದು
    (4)    ಮಣ್ಣಿನಿಂದ ಪೌಷ್ಟಿಕರವಾದ ನೈಟ್ರೋಜನ್ ನ್ನು (ಸಾರಜನಕವನ್ನು) ಪಡೆಯುವುದು

ಸರಿ ಉತ್ತರ

(2) ಎಲೆಗಳಿಂದ ಸಸ್ಯದ ಉಳಿದ ಭಾಗಗಳಿಗೆ ಆಹಾರವನ್ನು ಸಾಗಿಸುವುದು


46. ಭಾರತವು 9 ಕಡಲತೀರದ ರಾಜ್ಯಗಳನ್ನು ಹೊಂದಿದೆ. ಆದರೆ, ಹೆಚ್ಚಾಗಿ ಗುಜರಾತ್ ಕರಾವಳಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಉಪ್ಪು ತಯಾರಾಗುವುದು. ಇದಕ್ಕೆ ಕಾರಣವೇನು?

    (1)    ಗಾಂಧಿ ಜಿಯವರು ಇಲ್ಲಿಂದಲೇ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು
    (2)    ಸಮುದ್ರ ನೀರಿನ ಭಾಷ್ಪೀಭವನದ ಮೂಲಕ ಉಪ್ಪಿನ ತಯಾರಿಕೆಗೆ, ಕಡಿಮೆ ಮಳೆ ಮತ್ತು ಸಂಬಂಧಿಸಿದ ಆರ್ದ್ರತೆಗಳು ಸೂಕ್ತವಾಗಿರುವುದು
    (3)    ಉಪ್ಪನ್ನು ರಫ್ತು ಮಾಡಲು ಕಾಂಡ್ಲಾ ಬಂದರು ಸಹಾಯಕಾರಿಯಾಗಿದೆ
    (4)    ಗುಜರಾತ್ ಕರಾವಳಿಯ ಬಳಿಯಲ್ಲಿ ಸಮುದ್ರ ನೀರಿನ ಲವಣಾಂಶವು ಅತಿ ಅ ಕವಾಗಿದೆ

ಸರಿ ಉತ್ತರ

(2) ಸಮುದ್ರ ನೀರಿನ ಭಾಷ್ಪೀಭವನದ ಮೂಲಕ ಉಪ್ಪಿನ ತಯಾರಿಕೆಗೆ, ಕಡಿಮೆ ಮಳೆ ಮತ್ತು ಸಂಬಂಧಿಸಿದ ಆರ್ದ್ರತೆಗಳು ಸೂಕ್ತವಾಗಿರುವುದು


47. ಮಹಮದ್ ಘಜ್ನಿಯು ಭಾರತದ ಮೇಲೆ ಹದಿನೇಳು ಬಾರಿ ದಾಳಿ ಮಾಡಿದನು. ಈ ದಾಳಿಗೆ ಮುಖ್ಯ ಕಾರಣವು ಕೆಳಗಿನವುಗಳಲ್ಲಿ ಯಾವುದು?

    (1)    ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯುವುದು
    (2)    ಭಾರತದಲ್ಲಿ ಇಸ್ಲಾಂನ ಪ್ರಸಾರ
    (3)    ಭಾರತದಲ್ಲಿ ಅವನ ಸಾಮ್ರಾಜ್ಯವನ್ನು ಸ್ಥಾಪಿಸುವುದು
    (4)    ಭಾರತದ ಪ್ರಖ್ಯಾತ ಕರಕುಶಲಗಾರರನ್ನು ಪ್ರಲೋಭನಗೊಳಿಸುವುದು ಮತ್ತು ಆತನ ಆಸ್ಥಾನಕ್ಕೆ ಅವರನ್ನು ಒಯ್ಯುವುದು

ಸರಿ ಉತ್ತರ

(1) ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯುವುದು


48. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
ಪ್ರತಿಪಾದನೆ (A) : ಸಮಭಾಜಕ ವೃತ್ತದ ಬಳಿಯ ಪ್ರದೇಶಗಳು ವರ್ಷವಿಡೀ ಮಳೆಯನ್ನು ಪಡೆಯುತ್ತವೆ.
ಕಾರಣ (R) : ಅಧಿಕ ಉಷ್ಣಾಂಶಗಳು ಮತ್ತು ಅಧಿಕ ಆರ್ದ್ರತೆಗಳು ಸಮಭಾಜಕ ವೃತ್ತದ ಬಳಿ ಹೆಚ್ಚಿನ ಮಧ್ಯಾಹ್ನಗಳಲ್ಲಿ ಸಾಂಪ್ರದಾಯಿಕ ಮಳೆಗಳುಂಟಾಗಲು ಕಾರಣವಾಗುತ್ತದೆ.
ಈ ಕೆಳಗಿನವುಗಳಲ್ಲಿ ಯಾವುವು ಸರಿ?

    (1)    (A) ಮತ್ತು (R) ಗಳೆರಡೂ ಸರಿ ಮತ್ತು (R) , (A) ಯ ಸರಿಯಾದ ವಿವರಣೆಯಾಗಿದೆ
    (2)    (A) ಮತ್ತು (R) ಗಳೆರಡೂ ಸರಿ ಮತ್ತು (R) , (A) ಯ ಸರಿಯಾದ ವಿವರಣೆಯಾಗಿಲ್ಲ
    (3)    (A) ಮತ್ತು (R) ತಪ್ಪು
    (4)    (A) ತಪ್ಪು ಆದರೆ (R) ಸರಿ

ಸರಿ ಉತ್ತರ

(1) (A) ಮತ್ತು (R) ಗಳೆರಡೂ ಸರಿ ಮತ್ತು (R) , (A) ಯ ಸರಿಯಾದ ವಿವರಣೆಯಾಗಿದೆ


49. (ಪಟ್ಟಿ I) ರಲ್ಲಿನ ದೇಶಗಳನ್ನು ಅವುಗಳು ಖ್ಯಾತಿ ಪಡೆದಿರುವ (ಪಟ್ಟಿ II) ಬ್ರಾಂಡ್ ನ ಕಾರುಗಳೊಂದಿಗೆ ಹೊಂದಿಸಿ:

 ಪಟ್ಟಿ I (ದೇಶಗಳು) ಪಟ್ಟಿ II (ಕಾರ್  ಬ್ರಾಂಡ್)
A.ಜರ್ಮನಿI.ಫೋರ್ಡ್
B.ಇಟಲಿII.ಫಿಯಟ್
C.ಯುನೈಟೆಡ್ ಕಿಂಗ್ ಡಂIII.ಮರ್ಸಿಡಿಸ್
D.ಅಮೆರಿಕಾ ಸಂಯುಕ್ತ ಸಂಸ್ಥಾನIV.ರೋಲ್ಸ್ ರಾಯ್ಸ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIIVI
(2)IIIIIIIV
(3)IVIIIIII
(4)IVIIIIII
ಸರಿ ಉತ್ತರ

(1) III II IV I


50. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    A.     ಶಿಂಷಾವು ಕಾವೇರಿಯ ಎಡತೋಳುಭಾಗದ ಉಪನದಿಯಾಗಿದೆ
    B.     ಕಬಿನಿಯು ಕಾವೇರಿಯ ಬಲತೋಳುಭಾಗದ ಉಪನದಿಯಾಗಿದೆ
    C.     ತುಂಗಭದ್ರೆಯು ಕೃಷ್ಣಾನದಿಯ ಬಲತೋಳುಭಾಗದ ಉಪನದಿಯಾಗಿದೆ
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    A ಮತ್ತು B ಮಾತ್ರ
    (3)    A ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


51. ಪಟ್ಟಿ I ರಲ್ಲಿರುವ ಜಲಪಾತಗಳನ್ನು ಅವುಗಳಿರುವ ದೇಶಗಳೊಂದಿಗೆ ಪಟ್ಟಿ IIರಲ್ಲಿ ಹೊಂದಿಸಿ.

 ಪಟ್ಟಿ I (ಜಲಪಾತಗಳು) ಪಟ್ಟಿ II (ದೇಶಗಳು)
A.ಯೊಸೆಮೈಟ್I.ಜಿಂಬಾಬ್ವೆ
B.ವಿಕ್ಟೋರಿಯಾII.ಯು.ಎಸ್.ಎ.
C.ಪ್ಲಿಟ್ವೈಸ್III.ಐಸ್ ಲ್ಯಾಂಡ್
D.ಡೆಟ್ಟಿಫೊಸ್IV.ಕ್ರೊಯೇಶಿಯಾ
V.ಝೈರೆ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIVII
(2)IIIIVIII
(3)IVIIIIII
(4)IIVIIII
ಸರಿ ಉತ್ತರ

(2) II I IV III


52. ಪಟ್ಟಿ I ರಲ್ಲಿರುವ ರಾಷ್ಟ್ರೀಯ ಉದ್ಯಾನಗಳನ್ನು ಪಟ್ಟಿ IIರಲ್ಲಿರುವ ಅವು ನೆಲೆಯಾಗಿರುವ ರಾಜ್ಯಗಳೊಂದಿಗೆ ಹೋಲಿಸಿ

 

ಪಟ್ಟಿ I (ರಾಷ್ಟ್ರೀಯ ಉದ್ಯಾನ)

 

ಪಟ್ಟಿ II (ರಾಜ್ಯಗಳು)

A.

ಜಿಮ್ ಕಾರ್ಬೆಟ್

I.

ರಾಜಸ್ಥಾನ್

B.

ಬಾಂಧವ್ಗಢ

II.

ಅಸ್ಸೋಂ

C.

ಖಾಝಿರಂಗ

III.

ಜಾರ್ಖಂಡ್‌

D.

ಕಿಯೋಲೆಡೋ

IV.

ಉತ್ತರಾಖಂಡ್

 

 

V.

ಮಧ್ಯ ಪ್ರದೇಶ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIVII
(2)IIIIVIII
(3)VIIIIII
(4)IVVIII
ಸರಿ ಉತ್ತರ

(4) IV V II I


53. ಈ ಕೆಳಗಿನ ಯಾವ ಕಾರಣದಿಂದಾಗಿ ಇತಿಹಾಸದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಲಾಹೋರ್ ಅಧಿವೇಶನವು ಪ್ರಸಿದ್ಧವಾಗಿದೆ?
    A.     ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯ ನಿರ್ಣಯವನ್ನು ಕಾಂಗ್ರೆಸ್ ಹೊರಡಿಸಿತು
    B.     ಉಗ್ರಗಾಮಿಗಳು ಮತ್ತು ಮಂದಗಾಮಿಗಳ ನಡುವಿನ ಬಿರುಕು ಆ ಆಧಿವೇಶನದಲ್ಲಿ ಬಗೆಹರಿಯಿತು
    C.     ಈ ಅಧಿವೇಶನದಲ್ಲಿ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿದ ನಿರ್ಣಯವು ಹೊರಡಿಸಲ್ಪಟ್ಟಿತು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮತ್ತು C ಮಾತ್ರ
    (3)    A ಮತ್ತು C ಮಾತ್ರ
    (4)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(1) A ಮಾತ್ರ


54. ಅಸಹಕಾರ ಚಳುವಳಿಯನ್ನು ಆರಂಭಿಸುವ ಮುನ್ನ ಬಗೆಹರಿಸುವ ಷರತ್ತಾಗಿ ಈ ಕೆಳಗಿನ ಯಾವುದನ್ನು ಗಾಂಧೀಜಿಯವರು, ಸರ್ಕಾರದ ಮುಂದೆ ಬೇಡಿಕೆಯಾಗಿಟ್ಟಿರಲಿಲ್ಲ?

    (1)    ಸರ್ಕಾರವು ರೌಲತ್ ಕಾಯ್ದೆಯನ್ನು ಹಿಂತೆಗೆದುಕೊಳ್ಳುವುದು
    (2)    ಜಲಿಯನ್ ವಾಲಾಬಾಗ್ ನ ದುರಂತಕ್ಕಾಗಿ ಸರ್ಕಾರವು ವಿಷಾದ ವ್ಯಕ್ತಪಡಿಸುವುದು
    (3)    ಬ್ರಿಟಿಷ್ ಸರ್ಕಾರವು ಟರ್ಕಿಯವರೊಂದಿಗೆ ಉದಾರವಾಗಿ ವರ್ತಿಸುವುದು
    (4)    1919ಕ್ಕಿಂತಲೂ ಉತ್ತಮ ಯೋಜನೆಗಳ ಸುಧಾರಣೆಯನ್ನು ಸರ್ಕಾರವು ಮಾಡುವುದು

ಸರಿ ಉತ್ತರ

(4) 1919ಕ್ಕಿಂತಲೂ ಉತ್ತಮ ಯೋಜನೆಗಳ ಸುಧಾರಣೆಯನ್ನು ಸರ್ಕಾರವು ಮಾಡುವುದು


55. 1935ರ ಭಾರತ ಸರ್ಕಾರದ ಕಾಯ್ದೆಯ ಮೇಲೆ ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿದೆ/ವೆ?
    A.     ಇದು ಪ್ರಾಂತೀಯ ಸ್ವಾಯತ್ತತೆ ಅವಕಾಶವನ್ನು ನೀಡಿದೆ
    B.     ಫೆಡರಲ್ ಕೋರ್ಟ್ ಗಳ ಸ್ಥಾಪನೆಗೆ ಅವಕಾಶವನ್ನು ನೀಡಿದೆ
    C.     ಕೇಂದ್ರದಲ್ಲಿ ಅಖಿಲ ಭಾರತೀಯ ಫೆಡರೇಷನ್ ಗೆ ಅವಕಾಶವನ್ನಿತ್ತಿದೆ
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    B ಮತ್ತು C ಮಾತ್ರ
    (3)    A ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


56. ಚೈನಾದ ಬೃಹತ್ ಗೋಡೆ ಎನಿಸಿಕೊಂಡಿರುವ ಪುರಾತನ ಚೀನಾದ ಗೋಡೆಯ ನಿರ್ಮಾಣವನ್ನು ಉತ್ತರದಿಂದ ಬರುವ ದಾಳಿಗಳನ್ನು ತಡೆಯಲೋಸುಗ ಯಾರು ಆರಂಭಿಸಿದ್ದರು?

    (1)    ಚೂ ದೊರೆ
    (2)    ಚೀ ದೊರೆ
    (3)    ಕಿನ್ ದೊರೆ
    (4)    ಚೌ ದೊರೆ

ಸರಿ ಉತ್ತರ

(3) ಕಿನ್ ದೊರೆ


57. ಉತ್ಸವಗಳು ಮತ್ತು ಅವುಗಳಿಗೆ ಸಂಬಂಧಿಸಿರುವ ರಾಜ್ಯಗಳ ಜೋಡಿಯನ್ನು ಪರಿಗಣಿಸಿ:
    A.     ಸಿಯಾಂಗ್ ಉತ್ಸವ : ಜಮ್ಮು ಮತ್ತು ಕಾಶ್ಮೀರ
    B.     ಪಕ್ಷಿ ವೀಕ್ಷಣಾ ಉತ್ಸವ : ಹಿಮಾಚಲ ಪ್ರದೇಶ
    C.     ತೋಟದ ಉತ್ಸವ: ಚಂಡೀಗಢ
    D.     ಬೊನಾಲು ಜಾತ್ರೆ : ಆಂಧ್ರ ಪ್ರದೇಶ
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A, B ಮತ್ತು C ಮಾತ್ರ
    (2)    A ಮತ್ತು C ಮಾತ್ರ
    (3)    B ಮತ್ತು C ಮಾತ್ರ
    (4)    ಮೇಲಿನ ಎಲ್ಲವೂ

ಸರಿ ಉತ್ತರ

(3) B ಮತ್ತು C ಮಾತ್ರ


58. ಭಾರತೀಯ ರಾಜ್ಯ ಸರ್ಕಾರವೊಂದು ಇತ್ತೀಚೆಗೆ “T-wallet’’ ಎಂಬ ಡಿಜಿಟಲ್ ವ್ಯಾಲೆಟ್ಅನ್ನು ಯಾವುದೇ ವ್ಯವಹಾರ ಶುಲ್ಕವನ್ನು ವಿಧಿಸದ, ಮೊಬೈಲ್ ಉಳ್ಳ ಮತ್ತು ಮೊಬೈಲ್ ಫೋನ್ ರಹಿತ ಗ್ರಾಹಕರಿಗೆ ಅಧಿಕೃತವಾಗಿ ಪ್ರಾರಂಭಿಸಿತು. ಇದು ಭಾರತದಲ್ಲಿನ ಯಾವುದೇ ರಾಜ್ಯ ಸರ್ಕಾರದ ಪ್ರಥಮ ಅಧಿಕೃತ ವ್ಯಾಲೆಟ್ ಆಗಿದೆ ಮತ್ತು ಜಾಲ ಆವೃತ್ತಿಯನ್ನು ಸಹಾ ಉಪಯೋಗಿಸಬಹುದಾಗಿದೆ ಮತ್ತು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಅಥವಾ ನೆಟ್ ಬ್ಯಾಂಕಿಂಗ್ ಬಳಕೆಯಲ್ಲಿ ಉಚ್ಚ ಸ್ಥಾನದಲ್ಲಿದೆ. ಇದು ಯಾವ ರಾಜ್ಯದಲ್ಲಿ?

    (1)    ತಮಿಳುನಾಡು
    (2)    ತೆಲಂಗಾಣ
    (3)    ತ್ರಿಪುರ
    (4)    ಆಂಧ್ರ ಪ್ರದೇಶ

ಸರಿ ಉತ್ತರ

(2) ತೆಲಂಗಾಣ


59. ಪಟ್ಟಿ I ರಲ್ಲಿನ ಸಸ್ಯವನ್ನು ಅದು ದೊರೆಯುವ ಖಂಡಗಳೊಡನೆ ಪಟ್ಟಿ II ಹೋಲಿಸಿ:

 ಪಟ್ಟಿ I (ಸಸ್ಯವರ್ಗ) ಪಟ್ಟಿ II (ಭೂ ಖಂಡಗಳು)
A.ಸ್ಟೆಪ್ಪೀI.ಆಸ್ಟ್ರೇಲಿಯಾ
B.ಪ್ರೈರೀII.ಉತ್ತರ ಅಮೆರಿಕಾ
C.ಪಂಪಾಸ್III.ದಕ್ಷಿಣ ಅಮೆರಿಕಾ
D.ವೆಲ್ಡ್ಸ್IV.ಏಷ್ಯಾ
E.ಡೌನ್ಸ್V.ಆಫ್ರಿಕಾ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCDE
(1)IVIIIIIVI
(2)IIIIIIIVV
(3)IIIIIIIVV
(4)IIIIIIVIV
ಸರಿ ಉತ್ತರ

(1) IV II III V I


60. ವಿವಿಧ ಘಟನೆಗಳ ಪ್ರಖ್ಯಾತ ಸ್ಥಳಗಳು (ಪಟ್ಟಿ I) ಮತ್ತು ಅವುಗಳು ನೆಲೆಯಾಗಿರುವ ದೇಶಗಳೊಂದಿಗೆ (ಪಟ್ಟಿ II) ಹೋಲಿಸಿ:

 ಪಟ್ಟಿ I (ಪ್ರಖ್ಯಾತ ಸ್ಥಳ) ಪಟ್ಟಿ II (ದೇಶಗಳು)
A.ಕ್ಯಾನಿಸ್I.ಸ್ವಿಟ್ಜರ್ಲ್ಯಾಂಡ್
B.ಡಾವೂಸ್II.ಫ್ರಾನ್ಸ್
C.ದುಬೈIII.ಬ್ರೆಜಿಲ್
D.ರಿಯೋಡಿ ಜನೈರೋIV.ಯುನೈಟೆಡ್ ಅರಬ್ ಎಮಿರೇಟ್ಸ್
E.ಮ್ಯೂನಿಚ್V.ಜರ್ಮನಿ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCDE
(1)IIIIIVVII
(2)IIIIVIIIV
(3)IIIIVVIII
(4)IIVIIIIVI
ಸರಿ ಉತ್ತರ

(2) II I IV III V


61. ವ್ಯಾಪಕವಾಗಿ ಹರಡಿರುವ ತಂಬಾಕು ದುರುಪಯೋಗ ಮತ್ತು ಅದರಿಂದಾಗುವ ಆರೋಗ್ಯದ ಮೇಲಿನ ದುಷ್ಪರಿಣಾಮಗಳನ್ನು ಕುರಿತಾಗಿ ಮತ್ತು ತಂಬಾಕು ಕೈಗಾರಿಕೆಯ ಊರ್ಜಿತವಾಗಬಲ್ಲ ಅಭಿವೃದ್ಧಿಗಾಗಿ ಇರುವ ಮಾರಕಗಳ ನಿರೂಪಣೆ ಕುರಿತಂತೆ ಗಮನಿಸಲು ಪ್ರತಿ ವರ್ಷವೂ ಆಚರಿಸಲಾಗುವಂತೆ ಈ ವರ್ಷವೂ ಆಚರಿಸಲಾದ ‘‘ವಿಶ್ವ ತಂಬಾಕು ವಿರೋಧಿ ದಿನ’’ ದ ತಿರುಳೇನು?

    (1)    ತಂಬಾಕು- ಯಾವುದೇ ರೂಪದಲ್ಲಿ ಅಥವಾ ಛದ್ಮವೇಷದಲ್ಲಿ ಮಾರಣಾಂತಿಕ
    (2)    ತಂಬಾಕು- ಬೆಳವಣಿಗೆಗೆ ಒಂದು ಮಾರಕ
    (3)    ತಂಬಾಕು ಕೊಲ್ಲುತ್ತದೆ, ಇದು ನಿಜ
    (4)    ನಾವು ತಂಬಾಕು ರಹಿತ ವಿಶ್ವದಲ್ಲಿ ವಾಸಿಸೋಣ

ಸರಿ ಉತ್ತರ

(2) ತಂಬಾಕು- ಬೆಳವಣಿಗೆಗೆ ಒಂದು ಮಾರಕ


62. ಮುಂಬರುವ 72ನೇ ಅಧಿವೇಶನಕ್ಕಾಗಿ, ನ್ಯೂಯಾರ್ಕ್ ನಲ್ಲಿನ ವಿಶ್ವಸಂಸ್ಥೆಯ ಕೇಂದ್ರ ಸ್ಥಾನದಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ನೂತನ ಅಧ್ಯಕ್ಷರಾಗಿ ಮಿರೋಸ್ಲಾವ್ ಲಜ್ಕಕ್ ರು ಆಯ್ಕೆಯಾಗಿದ್ದಾರೆ. ಇವರು ಯಾವ ದೇಶಕ್ಕೆ ಸೇರಿದವರು?

    (1)    ಫಿಜಿ
    (2)    ಉರುಗ್ವೆ
    (3)    ಸ್ಲೊವಾಕಿಯಾ
    (4)    ಸ್ಲೊವೇನಿಯಾ

ಸರಿ ಉತ್ತರ

(3) ಸ್ಲೊವಾಕಿಯಾ


63. ಹೈದರಾಬಾದ್ ನಲ್ಲಿ ಇತ್ತೀಚೆಗಷ್ಟೇ ಅಗಲಿದ ಪ್ರಖ್ಯಾತ ವ್ಯಕ್ತಿಯಾದ ದಾಸರಿ ನಾರಾಯಣರಾವ್ ರವರು ಈ ಕೆಳಗಿನ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಹೊಂದಿದ್ದರು?

    (1)    ಪತ್ರಿಕೋದ್ಯಮ
    (2)    ಚಲನಚಿತ್ರ ಉದ್ಯಮ
    (3)    ರಾಜಕೀಯ
    (4)    ಮೇಲಿನ ಎಲ್ಲವೂ

ಸರಿ ಉತ್ತರ

(4) ಮೇಲಿನ ಎಲ್ಲವೂ


64. ಅಗ್ಗವಾದ ಮತ್ತು ಶೀಘ್ರವಾದ ಮತ್ತು ಮಾಲಿನ್ಯ ಮುಕ್ತವಾದ ಜೈವಿಕ ಇಂಧನದ ತಯಾರಿಕೆಯ ಮಣ್ಣಿನಿಂದ ಮಣ್ಣಿಗೆ ತಂತ್ರಜ್ಞಾನವು ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿದೆ. ಒಂದು ಸಂಪೂರ್ಣ ಹಸಿರು ಪ್ರಗತಿಯ ಬಳಕೆಯ, ಜೈವಿಕ ಇಂಧನದ ಶೀಘ್ರ ಉತ್ಪಾದನೆ ಕುರಿತು ಖಾತ್ರಿ ಪಡಿಸುವ ಈ ತಂತ್ರಜ್ಞಾನವನ್ನು ಯಾವ ಭಾರತೀಯ ತಂತ್ರಜ್ಞಾನ ಸಂಸ್ಥೆಯು (ಐಐಟಿ) ಅಭಿವೃದ್ಧಿಪಡಿಸಿದೆ?

    (1)    ಐ.ಐ.ಟಿ.ಕಾನ್ಪುರ್
    (2)    ಐ.ಐ.ಟಿ. ಮುಂಬೈ
    (3)    ಐ.ಐ.ಟಿ. ದೆಹಲಿ
    (4)    ಐ.ಐ.ಟಿ. ಕರಗ್ ಪುರ್

ಸರಿ ಉತ್ತರ

(4) ಐ.ಐ.ಟಿ. ಕರಗ್ ಪುರ್


65. ಒಂದು ರಾಜ್ಯ ಸರ್ಕಾರವು ಇತ್ತೀಚೆಗೆ ಒಂದು ಪೋರ್ಟಲ್ ನ್ನು ಆರಂಭಿಸಿದ್ದು, ಇದು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಿಗಳು ತಾವೇ ತಮ್ಮ ಹೆಸರನ್ನು ನೋಂದಣಿ ಮಾಡಲು ಸಾಧ್ಯವಾದ, ಕೆಲಸವನ್ನು ಹುಡುಕುವ ಮತ್ತು ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ, ತರಬೇತಿಯ ವಿಚಾರಣೆ ಕುರಿತಾದ ಮತ್ತು ಕೆಲಸ-ಕಾರ್ಯಗಳು ಮತ್ತು ತರಬೇತಿಯ ವಿಚಾರಣೆ ಕುರಿತಾದ ಮತ್ತು ಕೆಲಸ-ಕಾರ್ಯಗಳು ಮತ್ತು ತರಬೇತಿಯ ಕುರಿತಾದ ಮಾಹಿತಿಯನ್ನು ಪಡೆಯುವಂತಹುದಾಗಿದೆ. ಆ ಪೋರ್ಟಲ್ ನ ಹೆಸರೇನು?

    (1)    ಮಹಾಯೋಜನ್
    (2)    ಮಹಾಸ್ವಯಂ
    (3)    ಮಹಾಮಂಡನ್
    (4)    ಮಹಾನಿಯುಕ್ತಿ

ಸರಿ ಉತ್ತರ

(2) ಮಹಾಸ್ವಯಂ


66. ‘ಟೆಲಿಕಾಂ ಉದ್ಯಮ ಕಾಯ ಸೆಲ್ಯುಲರ್ ಆಪರೇಟರ್ಸ್’ ಅಸೋಸಿಯೇಷನ್ ಆಫ್ ಇಂಡಿಯಾವು ದೂರ ಸಂಪರ್ಕಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ-ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆಯ ಬೆಂಬಲದೊಂದಿಗೆ 2017ರಲ್ಲಿ ಈ ಕೆಳಗಿನ ಯಾವ ರಾಜ್ಯದಲ್ಲಿ ಭಾರತೀಯ ಮೊಬೈಲ್ ಕಾಂಗ್ರೆಸ್ ನ್ನು (ಐಎಂಸಿ) ಏರ್ಪಡಿಸುವುದು?

    (1)    ಬೆಂಗಳೂರು
    (2)    ಹೈದರಾಬಾದ್
    (3)    ಪುಣೆ
    (4)    ನವದೆಹಲಿ

ಸರಿ ಉತ್ತರ

(4) ನವದೆಹಲಿ


67. 2017ರ ಕೇನೆಸ್ ಚಲನಚಿತ್ರೋತ್ಸವದ 70ನೇ ಆವೃತ್ತಿಯಲ್ಲಿ, ರೂಬನ್ ಓಸ್ಟ್ಲಂಡ್ ರಿಂದ ನಿರ್ದೇಶಿತವಾದ ಸ್ವೀಡಿಶ್ ಚಲನಚಿತ್ರವು ಪಾಲ್ಮ್ ಡಿ.ಓ.ಆರ್. ನ್ನು ಗೆದ್ದಿದೆ?

    (1)    ಏಪ್ರಿಲ್ ಡಾಟರ್
    (2)    ಮಿಸ್ಟಿಕ್ ರಿವರ್
    (3)    ದಿ ಸ್ಕ್ವೇರ್
    (4)    ರೌಂಡ್ ದಿ ವರ್ಲ್ಡ್

ಸರಿ ಉತ್ತರ

(3) ದಿ ಸ್ಕ್ವೇರ್


68. ಪ್ರತಿವರ್ಷದ ಮೇ 29ರಂದು ಹುತಾತ್ಮರಾದ ಶಾಂತಿಕಾರರ ಸ್ಮರಣೆಯಲ್ಲಿ ಅಂತರರಾಷ್ಟ್ರೀಯ ವಿಶ್ವಸಂಸ್ಥಾ ಶಾಂತಿಕಾರರ ದಿನವನ್ನು ವಿಶ್ವಸಂಸ್ಥೆಯ ಶಾಂತಿ ಕಾಪಾಡುವಿಕೆಯ ಕಾರ್ಯಾಚರಣೆಗಳಲ್ಲಿ ತಮ್ಮ ಉನ್ನತ ಮಟ್ಟದ ವೃತ್ತಿಗರಿಮೆ, ತ್ಯಾಗ ಮತ್ತು ಶೌರ್ಯಗಳನ್ನು ಮೆರೆದಿರುವ, ಸೇವೆಯಲ್ಲಿ ಸಲ್ಲಿಸಿರುವ ಮತ್ತು ಇನ್ನೂ ಸೇವೆಯನ್ನು ಸಲ್ಲಿಸುತ್ತಿರುವವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಶಾಂತಿಕಾರಕ 2017ರ ಅಂತರರಾಷ್ಟ್ರೀಯ ದಿನದ ಆಚರಣೆಯ ತಿರುಳೇನು?

    (1)    ಶಾಂತಿ: ಭವಿಷ್ಯತ್ತಿಗೆ ಒಂದೇ ಪರಿಹಾರ
    (2)    ಸುಸ್ಥಿರ ಅಭಿವೃದ್ಧಿಯನ್ನು ಶಾಂತಿಯು ತರುತ್ತದೆ
    (3)    ನಾವು ಒಟ್ಟಾಗಿ ಶಾಂತಿಗಾಗಿ ಕೆಲಸ ಮಾಡೋಣ
    (4)    ಪ್ರಪಂಚದಾದ್ಯಂತ ಶಾಂತಿಯನ್ನು ಹರಡೋಣ

ಸರಿ ಉತ್ತರ

(4) ಪ್ರಪಂಚದಾದ್ಯಂತ ಶಾಂತಿಯನ್ನು ಹರಡೋಣ


69. ರಾಷ್ಟ್ರಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಬಳಕೆಯ ವೃದ್ಧಿಗಾಗಿ 2017ರ ಮೇ 30ರಂದು ಮುಂಬಯಿಯಲ್ಲಿ ಕೇಂದ್ರ ಸರ್ಕಾರವು ಒಂದು ಹೊಸ ರಾಷ್ಟ್ರವ್ಯಾಪಿ ವಿಶ್ವ ಬ್ಯಾಂಕ್ ಬೆಂಬಲಿತ ಚಳವಳಿಯಾದ ‘‘ದರ್ವಾಜಾ ಬಂದ್’’ಅನ್ನು ಆರಂಭಿಸಿತು. ಈ ಕೆಳಗಿನ ಯಾವ ಪ್ರತಿಮಾ ತಾರೆಯ ನೇತೃತ್ವದಲ್ಲಿ ಈ ಕಾರ್ಯಕ್ರಮವು ಜರುಗಿತು?

    (1)    ಮೇರಿ ಕೋಂ
    (2)    ಗೀತಾ ಪೋಗಟ್
    (3)    ಪ್ರಭಾಸ್
    (4)    ಅಮಿತಾಭ್ ಬಚ್ಚನ್

ಸರಿ ಉತ್ತರ

(4) ಅಮಿತಾಭ್ ಬಚ್ಚನ್


70. ಗ್ರೆಗ್ ಅಲ್ಮನ್ ಖ್ಯಾತ ಸಂಗೀತಗಾರ ಗಾಯಕ ಕೀಬೋರ್ಡಿಸ್ಟ್ ಮತ್ತು ಗೀತರಚನಕಾರರು ದಕ್ಷಿಣದ ರಾಕ್ನ ಪ್ರವರ್ತಕರಾಗಿದ್ದರು ಮತ್ತು ಆಲ್ಮನ್ ಬ್ರದರ್ಸ್ ಬ್ಯಾಂಡ್ ನ ಸಹ ಸ್ಥಾಪಕರೂ ಆಗಿದ್ದು, ಇತ್ತೀಚೆಗೆ ನಿಧನರಾದರು. ಅವರು ಯಾವ ದೇಶದಿಂದ ಬಂದವರು?

    (1)    ಅಮೆರಿಕ ರಾಜ್ಯಗಳ ಒಕ್ಕೂಟ
    (2)    ಬ್ರೆಜಿಲ್
    (3)    ನಾರ್ವೆ
    (4)    ಫ್ರಾನ್ಸ್

ಸರಿ ಉತ್ತರ

(1) ಅಮೆರಿಕ ರಾಜ್ಯಗಳ ಒಕ್ಕೂಟ


71. ಈ ಕೆಳಗಿನ ಕಣಿವೆಗಳು ಮತ್ತು ಅವುಗಳು ನೆಲೆಗೊಂಡಿರುವ ಸ್ಥಳಗಳ ಜೋಡಿಗಳನ್ನು ಪರಿಗಣಿಸಿ:

 ಕಣಿವೆಗಳು  ನೆಲೆಯಾಗಿರುವ ಸ್ಥಳಗಳ
A.ಜೊಜಿಲಾ ಮತ್ತು ಬುರ್ಜುಲಾ:ಜಮ್ಮು ಮತ್ತು ಕಾಶ್ಮೀರ
B.ಬರಾ ಲಾಪ್ ಚಾ ಲಾ ಮತ್ತು ಶಿಪ್ ಕಿ ಲಾ:ಉತ್ತರ ಪ್ರದೇಶ
C.ಥಾಗಾ ಲಾ, ನೀತಿ ಕಣಿವೆ ಮತ್ತು ಲಿಪು ಲೇಕ್ :ಹಿಮಾಚಲ ಪ್ರದೇಶ
D.ನಾಥು ಲಾ ಮತ್ತು ಜೆಲೆಪ್ ಲಾ : ಸಿಕ್ಕಿಂ

ಇವುಗಳಲ್ಲಿ ಯಾವುವು ತಪ್ಪಾಗಿ ಹೊಂದಿಸಲ್ಪಟ್ಟಿವೆ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    B ಮತ್ತು C ಮಾತ್ರ
    (3)    C ಮತ್ತು D ಮಾತ್ರ
    (4)    A, B ಮತ್ತು C ಮಾತ್ರ

ಸರಿ ಉತ್ತರ

(3) C ಮತ್ತು D ಮಾತ್ರ


72. ಈ ಕೆಳಗಿನ ಭಾರತೀಯ ರಾಜ್ಯಗಳನ್ನು ಪರಿಗಣಿಸಿ:
    A.     ತೆಲಂಗಾಣ
    B.     ತಮಿಳು ನಾಡು
    C.     ಪಶ್ಚಿಮ ಬಂಗಾಳ
    D.     ಅರುಣಾಚಲ ಪ್ರದೇಶ
    E.     ಜಾರ್ಖಂಡ್
ಈ ಎರಡರಲ್ಲಿ ಕ್ರಮವಾಗಿ ಅತಿ ದೊಡ್ಡ ಮತ್ತು ಅತಿ ಚಿಕ್ಕ ಭೌಗೋಳಿಕ ಪ್ರದೇಶವನ್ನು ಹೊಂದಿರುವುವು ಯಾವುವು?

    (1)    A ಮತ್ತು D ಮಾತ್ರ
    (2)    B ಮತ್ತು E ಮಾತ್ರ
    (3)    B ಮತ್ತು C ಮಾತ್ರ
    (4)    D ಮತ್ತು A ಮಾತ್ರ

ಸರಿ ಉತ್ತರ

(2) B ಮತ್ತು E ಮಾತ್ರ


73. ಒಬ್ಬ ಶ್ರೇಷ್ಠ ಕ್ರಾಂತಿಕಾರಿಯು ತನ್ನ ಜೀವನದ ಆದರ್ಶವನ್ನು ಈ ಕೆಳಗಿನ ಮಾತುಗಳಲ್ಲಿ ಸಾರಾಂಶೀಕರಿಸಿದ್ದಾನೆ:
‘‘ಭಾರತದಲ್ಲಿ ಪ್ರಸ್ತುತ ಕಲಿಯಬೇಕಾಗಿರುವ ಒಂದೇ ಆವಶ್ಯಕ ಪಾಠ ಎಂದರೆ ಹೇಗೆ ಸಾಯುವುದೆಂಬುದು ಮತ್ತು ಬೋಧನೆಯ ಒಂದೇ ಮಾರ್ಗವೆಂದರೆ ನಮಗೆ ನಾವೇ ಮಾಡುವುದು. ಆದ್ದರಿಂದ ನಾನು ಸಾಯುವೆ ಮತ್ತು ಇದು ನನ್ನ ಹುತಾತ್ಮತೆಯಲ್ಲಿನ ಘನತೆ’’. ಹೀಗೆಂದವರು ಯಾರು?

    (1)    ಭಗತ್ ಸಿಂಗ್
    (2)    ರಾಮ್ ಪ್ರಸಾದ್ ಬಿಸ್ಮಿಲ್
    (3)    ಮದನ್ ಲಾಲ್ ಢಿಂಗ್ರಾ
    (4)    ಸೂರ್ಯ ಸೇನ್

ಸರಿ ಉತ್ತರ

(3) ಮದನ್ ಲಾಲ್ ಢಿಂಗ್ರಾ


74. ಭಾರತೀಯ ರಾಷ್ಟ್ರೀಯತೆಯ ಚಳವಳಿಗೆ ಸಂಬಂಧಿಸಿದಂತೆ ಪಟ್ಟಿ I ರಲ್ಲಿನ ಘಟನೆಗಳು ಮತ್ತು ಪಟ್ಟಿ IIರಲ್ಲಿ ಅದಕ್ಕೆ ಸಂಬಂಧಿಸಿರುವ ವ್ಯಕ್ತಿಗಳೊಂದಿಗೆ ಸರಿ ಹೊಂದಿಸಿ:

 ಪಟ್ಟಿ I (ಘಟನೆ) ಪಟ್ಟಿ II (ಸಂಬಂಧಿಸಿದ ವ್ಯಕ್ತಿ)
A.ಚಿತ್ತಗಾಂಗ್ ಸಶಸ್ತ್ರ ದಾಳಿI.ಲಾಲಾ ಹರ್ ದಯಾಳ್
B.ಕಾಕೊರಿ ಪಿತೂರಿII.ಜತಿನ್ ದಾಸ್
C.ಲಾಹೋರ್ ಪಿತೂರಿIII.ಸೂರ್ಯಸೇನ್
D.ಘದರ್ ಪಕ್ಷIV.ರಾಂ ಪ್ರಸಾದ್ ಬಿಸ್ಮಿಲ್
V.ವಾಸುದೇವ್ ಫಾಡ್ಕೆ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIVIV
(2)IVIIIIIV
(3)IIIIVIII
(4)IIIVIIII
ಸರಿ ಉತ್ತರ

(3) III IV II I


75. ಒಂದು ವಸ್ತುವನ್ನು ಒಂದು ನಿಮ್ಮ ಕನ್ನಡಿಯ ಕೇಂದ್ರದಲ್ಲಿ ಇರಿಸಲಾಗುತ್ತದೆ. ಪ್ರತಿಬಿಂಬವು

    (1)    ನಿಜವಾದ, ತಲೆಕೆಳಗಾದ, ಕೇಂದ್ರದಲ್ಲಿರುವಷ್ಟೇ ಗಾತ್ರ
    (2)    ನಿಜವಾದ, ನೇರವಾಗಿ, ಕೇಂದ್ರದಲ್ಲಿರುವಷ್ಟೇ ಗಾತ್ರ
    (3)    ವರ್ಚುವಲ್, ತಲೆಕೆಳಗಾದ, ಅಪರಿಮಿತವಾಗಿ ಹೆಚ್ಚು ವಿಸ್ತರಿಸಿದ
    (4)    ನೈಜ, ತಲೆಕೆಳಗಾದ, ಅಪರಿಮಿತವಾಗಿ ವಿಸ್ತರಿಸಿದ

ಸರಿ ಉತ್ತರ

(4) ನೈಜ, ತಲೆಕೆಳಗಾದ, ಅಪರಿಮಿತವಾಗಿ ವಿಸ್ತರಿಸಿದ


76. ದಂಡಕಾಂತದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

    (1)    ದಂಡಕಾಂತದ ಉತ್ತರ ಧ್ರುವದ ಧ್ರುವ ಸಾಮರ್ಥ್ಯವು ದಕ್ಷಿಣ ಧ್ರುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ
    (2)    ದಂಡಕಾಂತದ ತುಂಡನ್ನು ಅದರ ಅಕ್ಷಕ್ಕೆ ಲಂಬಾಂತರವಾಗಿರುವಂತೆ ವಿಭಜಿಸಿದಾಗ, ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳು ಪ್ರತ್ಯೇಕಗೊಳ್ಳುತ್ತವೆ
    (3)    ದಂಡಕಾಂತದ ತುಂಡನ್ನು ಅದರ ಅಕ್ಷಕ್ಕೆ ಲಂಬಾಂತರವಾಗಿರುವಂತೆ ವಿಭಜಿಸಿದಾಗ, ಎರಡು ಹೊಸ ದಂಡಕಾಂತಗಳು ರೂಪುಗೊಳ್ಳುತ್ತವೆ
    (4)    ದಂಡಕಾಂತದ ಧ್ರುವಗಳು ಉಜ್ವಲತೆಯಲ್ಲಿ ಅಸಮ ಮತ್ತು ಸ್ವಭಾವದಲ್ಲಿ ವಿರುದ್ಧವಾಗಿರುತ್ತವೆ

ಸರಿ ಉತ್ತರ

(3) ದಂಡಕಾಂತದ ತುಂಡನ್ನು ಅದರ ಅಕ್ಷಕ್ಕೆ ಲಂಬಾಂತರವಾಗಿರುವಂತೆ ವಿಭಜಿಸಿದಾಗ, ಎರಡು ಹೊಸ ದಂಡಕಾಂತಗಳು ರೂಪುಗೊಳ್ಳುತ್ತವೆ


77. ಕೆಳಗಿನ ಬದಲಾವಣೆಗಳನ್ನು ಪರಿಗಣಿಸಿ
    A.     ಕೆಂಪು ಮತ್ತು ಹಸಿರು ಬಣ್ಣದ ಗೋಲಿಗಳನ್ನು ಮಿಶ್ರ ಮಾಡುವುದು
    B.     ಒಂದು ದ್ರವದ ಘನೀಕರಣ
    C.     ನೀರಿನಲ್ಲಿ ಸಕ್ಕರೆಯ ವಿಲೀನ
    D.     ಕ್ಯಾರಾಮೆಲ್ ಆಗಲು ಸಕ್ಕರೆಯನ್ನು ಬಿಸಿ ಮಾಡುವುದು (ಸಕ್ಕರೆಗಂದು)
    E.     ಕಬ್ಬಿಣದ ತುಕ್ಕು ಹಿಡಿಯುವಿಕೆ
    F.     ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಮಿಶ್ರ ಮಾಡುವುದು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?

    (1)    A, B ಮತ್ತು Cಗಳು ಭೌತ ಬದಲಾವಣೆಗಳಾದರೆ, D, E ಮತ್ತು Fಗಳು ರಾಸಾಯನಿಕ ಬದಲಾವಣೆಗಳು
    (2)    A, B ಮತ್ತು Dಗಳು ಭೌತ ಬದಲಾವಣೆಗಳಾದರೆ, C, E ಮತ್ತು Fಗಳು ರಾಸಾಯನಿಕ ಬದಲಾವಣೆಗಳು
    (3)    A, B, D ಮತ್ತು Eಗಳು ಭೌತ ಬದಲಾವಣೆಗಳಾದರೆ, D, ಮತ್ತು Fಗಳು ರಾಸಾಯನಿಕ ಬದಲಾವಣೆಗಳು
    (4)    A ಮತ್ತು B ಗಳು ಬದಲಾವಣೆಗಳಾದರೆ, C, D, E ಮತ್ತು Fಗಳು ರಾಸಾಯನಿಕ ಬದಲಾವಣೆಗಳು

ಸರಿ ಉತ್ತರ

(1) A, B ಮತ್ತು Cಗಳು ಭೌತ ಬದಲಾವಣೆಗಳಾದರೆ, D, E ಮತ್ತು Fಗಳು ರಾಸಾಯನಿಕ ಬದಲಾವಣೆಗಳು


78. ಕಂಚನ್ನು ವಿಗ್ರಹಗಳು ಮತ್ತು ಪದಕಗಳನ್ನು ತಯಾರಿಸಲು ಬಳಸಿದರೆ, ಹಿತ್ತಾಳೆಯನ್ನು ಪಾತ್ರೆಗಳು, ವೈಜ್ಞಾನಿಕ ಉಪಕರಣಗಳು ಮತ್ತು ತೋಟಾಗಳನ್ನು ತಯಾರಿಸಲು ಬಳಸುತ್ತಾರೆ. ಹಿತ್ತಾಳೆ ಮತ್ತು ಕಂಚು ಎರಡೂ ಸಹ ತಾಮ್ರದಿಂದ ಕೂಡಿದ ಮಿಶ್ರ ಲೋಹಗಳಾದರೂ, ಇವುಗಳ ಸಂಯೋಜನೆಯು, ಈ ಕೆಳಗಿನವುಗಳಲ್ಲಿ ಯಾವುದನ್ನು ಹೆಚ್ಚುವರಿಯಾಗಿ ಸೇರಿಸುವುದರಿಂದ ಭಿನ್ನವಾಗಿದೆ?

    (1)    ಹಿತ್ತಾಳೆಯಲ್ಲಿನ ಸತುವು ಮತ್ತು ಕಂಚಿನಲ್ಲಿನ ತವರ
    (2)    ಹಿತ್ತಾಳೆಯಲ್ಲಿನ ಕ್ರೋಮಿಯಂ ಮತ್ತು ಕಂಚಿನಲ್ಲಿನ ನಿಕ್ಕಲ್
    (3)    ಹಿತ್ತಾಳೆಯಲ್ಲಿನ ನಿಕ್ಕಲ್ ಮತ್ತು ಕಂಚಿನಲ್ಲಿನ ತವರ
    (4)    ಹಿತ್ತಾಳೆಯಲ್ಲಿನ ಕಬ್ಬಿಣ ಮತ್ತು ಕಂಚಿನಲ್ಲಿನ ನಿಕ್ಕಲ್

ಸರಿ ಉತ್ತರ

(1) ಹಿತ್ತಾಳೆಯಲ್ಲಿನ ಸತುವು ಮತ್ತು ಕಂಚಿನಲ್ಲಿನ ತವರ


79. ‘‘ಕ್ಯಾಪ್ಸ್ ಲಾಕ್’’ ಎಂಬುದನ್ನು ಕಂಪ್ಯೂಟರ್ ನಲ್ಲಿ ಕಣ್ಣಿಯ ಬೆಣೆ ಕೀಲಿ (ಟಾಗಲ್ ಕೀ) ಎಂಬುದಾಗಿ ಉಲ್ಲೇಖಿಸಲಾಗುವುದು?

    (1)    ಏಕೆಂದರೆ ಸಂಖ್ಯೆಗಳ ನಮೂದಿಕೆಗೆ ಇದನ್ನು ಬಳಸಲಾಗುವುದಿಲ್ಲ
    (2)    ಏಕೆಂದರೆ ಡಿಲೀಟ್ ಮಾಡಲು ಇದನ್ನು ಬಳಸಲಾಗುವುದಿಲ್ಲ
    (3)    ಏಕೆಂದರೆ ಇನ್ಸರ್ಟ್ ಮಾಡಲು ಇದನ್ನು ಬಳಸಲಾಗುವುದಿಲ್ಲ
    (4)    ಏಕೆಂದರೆ ಅದನ್ನು ಪ್ರತಿಸಾರಿ ಒತ್ತಿದಾಗಲೆಲ್ಲಾ ಅದರ ಕಾರ್ಯವು ಮುಂದಕ್ಕೆ ಮತ್ತು ಹಿಂದಕ್ಕೆ ಚಲನೆಯಾಗುವುದು

ಸರಿ ಉತ್ತರ

(4) ಏಕೆಂದರೆ ಅದನ್ನು ಪ್ರತಿಸಾರಿ ಒತ್ತಿದಾಗಲೆಲ್ಲಾ ಅದರ ಕಾರ್ಯವು ಮುಂದಕ್ಕೆ ಮತ್ತು ಹಿಂದಕ್ಕೆ ಚಲನೆಯಾಗುವುದು


80. ಈ ಕೆಳಗಿನವುಗಳಲ್ಲಿ ಯಾವುದು ಕಂಪ್ಯೂಟರ್ ಫೈರ್ ವಾಲ್ ನ ಗುಣಲಕ್ಷಣವಾಗಿವೆ?

    (1)    ಇದು ಒಂದು ತಂತ್ರಾಂಶ ಅಥವಾ ಯಂತ್ರಾಂಶ ಆಧಾರಿತವಾದ ಕಾರ್ಯಕ್ರಮವಾಗಿದ್ದು, ವಿಶೇಷ ಕಾರ್ಯಕ್ರಮಗಳ ನಡೆಸುವಿಕೆಯ ಸಹಾಯದಿಂದ ವೈಯಕ್ತಿಕ (ಪರ್ಸನಲ್) ಕಂಪ್ಯೂಟರ್ ನ ವೇಗ ಹೆಚ್ಚಾಗುವಂತೆ ಮಾಡುವುದು
    (2)    ಇದು ಒಂದು ತಂತ್ರಾಂಶ ಅಥವಾ ಯಂತ್ರಾಂಶ ಆಧರಿತವಾದ ಕಾರ್ಯಕ್ರಮವಾಗಿದ್ದು, ಹಾರ್ಡ್ ಡಿಸ್ಕ್ ಮೊರಿಯ ಅಧಿಕ ಬಳಕೆ ಅಥವಾ ಬಗ್ಸ್ ನಿದುಂಟಾದ ಹೊಡೆತದಿಂದ ವೈಯಕ್ತಿಕ ಕಂಪ್ಯೂಟರ್ ನ್ನು ರಕ್ಷಿಸುವುದು
    (3)    ಇದು ಒಂದು ಸುರಕ್ಷತಾ ವ್ಯವಸ್ಥೆಯಾಗಿದ್ದು, ಇದು ಯಂತ್ರಾಂಶ ಮತ್ತು ತಂತ್ರಾಂಶಗಳ ಸಂಯೋಜನೆಯನ್ನು ಹೊಂದಿದ್ದು, ಸ್ಫೋಟಕಗಳ ಹೊಡೆತಕ್ಕೊಳಗಾಗದಿರಲು ಕಂಪ್ಯೂಟರ್ ಒಡ್ಡುವಿಕೆಯನ್ನು ಮಿತಿಗೊಳಿಸುತ್ತದೆ ಮತ್ತು ಅಂತರ್ಜಾಲಕ್ಕೆ ಸಂಪರ್ಕಿಸಿರುವ ಸ್ಥಳೀಯ ಕ್ಷೇತ್ರದ ಜಾಲಕಾರ್ಯಗಳಿಗೆ ಸಾಮಾನ್ಯವಾಗಿ ಬಳಸಲಾಗುತ್ತದೆ
    (4)    ಈ ಮೇಲೆ ನೀಡಿರುವ ಎಲ್ಲಾ ಗುಣಧರ್ಮಗಳೂ ಕಂಪ್ಯೂಟರ್ನ ಫೈರ್ ವಾಲ್ ಗೆ ಸರಿಯಾಗಿವೆ.

ಸರಿ ಉತ್ತರ

(3) ಇದು ಒಂದು ಸುರಕ್ಷತಾ ವ್ಯವಸ್ಥೆಯಾಗಿದ್ದು, ಇದು ಯಂತ್ರಾಂಶ ಮತ್ತು ತಂತ್ರಾಂಶಗಳ ಸಂಯೋಜನೆಯನ್ನು ಹೊಂದಿದ್ದು, ಸ್ಫೋಟಕಗಳ ಹೊಡೆತಕ್ಕೊಳಗಾಗದಿರಲು ಕಂಪ್ಯೂಟರ್ ಒಡ್ಡುವಿಕೆಯನ್ನು ಮಿತಿಗೊಳಿಸುತ್ತದೆ ಮತ್ತು ಅಂತರ್ಜಾಲಕ್ಕೆ ಸಂಪರ್ಕಿಸಿರುವ ಸ್ಥಳೀಯ ಕ್ಷೇತ್ರದ ಜಾಲಕಾರ್ಯಗಳಿಗೆ ಸಾಮಾನ್ಯವಾಗಿ ಬಳಸಲಾಗುತ್ತದೆ


81. ಪಟ್ಟಿ I ರಲ್ಲಿ ಲೋಹಗಳು/ಧಾತುಗಳನ್ನು ಮತ್ತು ಪಟ್ಟಿ IIರಲ್ಲಿನ ಅದಿರುಗಳೊಡನೆ ಹೊಂದಿಸಿರಿ:

 ಪಟ್ಟಿ I (ಲೋಹಗಳು/ ಧಾತುಗಳು) ಪಟ್ಟಿ II (ಅದಿರುಗಳು)
A.ಕ್ಯಾಲ್ಷಿಯಂI.ಹೆಮಟೈಟ್, ಲಿಮೊನೈಟ್
B.ಕಬ್ಬಿಣII.ಡೊಲೊಮೈಟ್, ಫುವೋರ್ ಸ್ಟರ್
C.ಸೀಸIII.ಬಾಕ್ಸೈಟ್, ಕೋರಂಡಂ
D.ಅಲ್ಯೂಮಿನಿಯಂIV.ಗೆಲೀನಾ, ಲಾನಾರ್ಕೈಟ್
E.ಯುರೇನಿಯಂV.ಕಾರ್ನ್ ಟೈಟ್, ಪಿಚ್ ಬ್ಲೆಂಡ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCDE
(1)IIIIIVVII
(2)IIIIVIIIV
(3)IIIIVVIII
(4)IIVIIIIVI
ಸರಿ ಉತ್ತರ

(2) II I IV III V


82. ಈ ಕೆಳಗಿನ ಜಾನಪದ ನೃತ್ಯಗಳು ಮತ್ತು ರಾಜ್ಯಗಳ ಜೋಡಿಯನ್ನು ಪರಿಗಣಿಸಿ:

 ಜಾನಪದ ನೃತ್ಯ ರಾಜ್ಯ
A.ಬಿಡೇಸಿಯಾ:ಜಾರ್ಖಂಡ್
B.ಕಜ್ರಿ:ಉತ್ತರ ಪ್ರದೇಶ
C.ಡಂಗಿ:ಹಿಮಾಚಲ ಪ್ರದೇಶ
D.ಥುಳ್ಳಾಲ್:ಕೇರಳ

ಈ ಮೇಲಿನ ಜೋಡಿಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮತ್ತು B ಮಾತ್ರ
    (2)    A, B ಮತ್ತು C ಮಾತ್ರ
    (3)    B, C ಮತ್ತು D ಮಾತ್ರ
    (4)    A, B, C ಮತ್ತು D

ಸರಿ ಉತ್ತರ

(4) A, B, C ಮತ್ತು D


83. ಈ ಕೆಳಗಿನ ಭಾರತದ ಭಾಷೆಗಳನ್ನು ಪರಿಗಣಿಸಿ:
    A.     ಗುಜರಾತಿ
    B.     ತಮಿಳು
    C.     ತೆಲುಗು
    D.     ಕನ್ನಡ
    E.     ಮಲಯಾಳಂ
    F.     ಮರಾಠಿ
ಸರ್ಕಾರವು ಮೇಲ್ಕಂಡವುಗಳಲ್ಲಿ ಯಾವ ಭಾಷೆಗಳನ್ನು ಭಾರತದ ಶಾಸ್ತ್ರೀಯ ಭಾಷೆಗಳೆಂದು ಘೋಷಿಸಿದೆ?

    (1)    A, B ಮತ್ತು C ಮಾತ್ರ
    (2)    B, C, D ಮತ್ತು F ಮಾತ್ರ
    (3)    B, C, D ಮತ್ತು E ಮಾತ್ರ
    (4)    C, E ಮತ್ತು F ಮಾತ್ರ

ಸರಿ ಉತ್ತರ

(3) B, C, D ಮತ್ತು E ಮಾತ್ರ


84. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    A.     ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರುಗಳನ್ನು ಉತ್ಪಾದಿಸುವುದು
    B.     ಕರ್ನಾಟಕದಲ್ಲಿನ ಬಳ್ಳಾರಿ ಜಿಲ್ಲೆ ಮಾತ್ರವೇ ಕಬ್ಬಿಣದ ಅದಿರನ್ನು ಉತ್ಪಾದಿಸುವ ಸ್ಥಳ
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮಾತ್ರ
    (3)    A ಮತ್ತು B ಗಳೆರಡೂ
    (4)    A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(1) A ಮಾತ್ರ


85. ವಿಜಯನಗರದ ಬೆಳ್ಳಿಯ ನಾಣ್ಯವನ್ನು ಹೀಗೆಂದು ಕರೆಯಲಾಗುತ್ತಿತ್ತು?

    (1)    ಗದ್ಯಾಣ
    (2)    ಪಣ
    (3)    ಕಾಸು
    (4)    ತರ

ಸರಿ ಉತ್ತರ

(4) ತರ


86. ಪಟ್ಟಿ I ರಲ್ಲಿ ಕರ್ನಾಟಕದ ನದಿಗಳನ್ನು ಪಟ್ಟಿ II ರಲ್ಲಿರುವ ಅವುಗಳು ರೂಪಿಸುವ ಜಲಪಾತಗಳೊಂದಿಗೆ ಹೊಂದಿಸಿ:

 ಪಟ್ಟಿ I (ನದಿಗಳು) ಪಟ್ಟಿ II (ಜಲಪಾತಗಳು)
A.ಗಂಗವಳ್ಳಿI.ಊಂಚಳ್ಳಿ
B.ಅಘನಾಶಿನಿII.ಗೊಡಚಿನಮಲ್ಕಿ
C.ಕಾಳಿIII.ಲಾಲಗುಳಿ
D.ಮಾರ್ಕಂಡೇಯIV.ಮಾಗೋಡು

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 ABCD
(1)IIIIIIIV
(2)IVIIIIII
(3)IIVIIIII
(4)IIIIIIIV
ಸರಿ ಉತ್ತರ

(2) IV I III II


87. ವಿಜಯನಗರದ ಜನರನ್ನು ಕುರಿತಾದ ಕೆಳಗಿನ ಹೇಳಿಕೆಯನ್ನು ಯಾವ ಪ್ರವಾಸಿಗ ಹೇಳಿದ್ದಾನೆ? ‘‘ಗುಲಾಬಿಗಳು ಎಲ್ಲೆಡೆ ಮಾರಾಟವಾಗಿವೆ. ಈ ಜನರು ಗುಲಾಬಿಯಿಲ್ಲದೆ ಬದುಕಲಾರರು ಮತ್ತು ಅವರು ಅವುಗಳನ್ನು ಆಹಾರದಷ್ಟೇ ಆವಶ್ಯಕವೆಂಬುದಾಗಿ ನೋಡಿಕೊಳ್ಳುವರು……’’

    (1)    ನಿಕಿತಿನ್
    (2)    ಅಬ್ದುರ್ ರಜಾಕ್
    (3)    ನ್ಯೂನಿಜ್
    (4)    ಬಾರ್ಬೋಸ

ಸರಿ ಉತ್ತರ

(2) ಅಬ್ದುರ್ ರಜಾಕ್


88. ಹಂಪಿಯ ರಾಜವೈಭವದ ಆವರಣದೊಳಗೆ ಸುಂದರವಾದ ಕಲ್ಲಿನ ವೇದಿಕೆಯಾದ ಮಹಾನವಮಿ ದಿಬ್ಬವು ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿತವಾಗಿದ್ದು, ಅವನು ಈ ಕೆಳಕಂಡ ಯಾವ ಪ್ರದೇಶದ ಮೇಲೆ ಗಳಿಸಿದ ದಿಗ್ವಿಜಯದ ಸ್ಮರಣೆಗಾಗಿ ನಿರ್ಮಿಸಿದನು?

    (1)    ಉದಯಗಿರಿ
    (2)    ಆದಿಲ್ ಶಾಹಿ
    (3)    ಬಹಮನಿ
    (4)    ಶ್ರೀಲಂಕಾ

ಸರಿ ಉತ್ತರ

(1) ಉದಯಗಿರಿ


89. ಈ ಕೆಳಗಿನ ನಾಲ್ಕು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳನ್ನು ಪರಿಗಣಿಸಿ:
    A.     ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್
    B.     ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಲಿಮಿಟೆಡ್
    C.     ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್
    D.     ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್
ಈ ಮೇಲ್ಕಂಡ ಯಾವ ಕಂಪನಿಗಳು ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ (AICIL) ರಚನೆಯಲ್ಲಿ ಭಾಗವಹಿಸಿದ್ದವು?

    (1)    C ಮತ್ತು D ಮಾತ್ರ
    (2)    A, B ಮತ್ತು C ಮಾತ್ರ
    (3)    B, C ಮತ್ತು D ಮಾತ್ರ
    (4)    A, B, C ಮತ್ತು D

ಸರಿ ಉತ್ತರ

(4) A, B, C ಮತ್ತು D


90. ಈ ಕೆಳಕಂಡ ಯಾವ ಚಳವಳಿಗಳ ಅವಧಿಯಲ್ಲಿ ಮಹಾತ್ಮ ಗಾಂಧೀಜಿಯವರು ಈ ರೀತಿ ಬರೆದರು? ‘‘ವೈಯಕ್ತಿಕವಾಗಿ ನಾನು ದಾಸ್ಯದಿಂದ ಬಳಲಿದ್ದಾಗ್ಯೂ ಅರಾಜಕತ್ವದ ಅಪಾಯಕ್ಕೂ ಸಿದ್ಧನಾಗಿದ್ದೇನೆ’’.

    (1)    ಹೋಂ ರೂಲ್ ಚಳವಳಿ
    (2)    ಅಸಹಕಾರ ಚಳವಳಿ
    (3)    ನಾಗರಿಕ ಉಲ್ಲಂಘನಾ ಚಳವಳಿ
    (4)    ಕ್ವಿಟ್ ಇಂಡಿಯಾ ಚಳವಳಿ

ಸರಿ ಉತ್ತರ

(4) ಕ್ವಿಟ್ ಇಂಡಿಯಾ ಚಳವಳಿ


91. ಬೇಸೆಲ್ III ಶಿಷ್ಟಾಚಾರಗಳನ್ನು ಈ ಕೆಳಗಿನ ಯಾವುದರ ಸಲುವಾಗಿ ನಿಗದಿಪಡಿಸಲಾಯಿತು?

    (1)    ಹಣದ ಕ್ರಮಬದ್ಧಗೊಳಿಸುತ್ತಿರುವಿಕೆಯನ್ನು ಪತ್ತೆ ಹಚ್ಚುವುದು ಮತ್ತು ತಡೆಗಟ್ಟುವುದು
    (2)    ಆಹಾರ ಮತ್ತು ಮಿಠಾಯಿಗಾರಿಕೆ (ಕನ್ಕ್ಷನರಿ) ಯಲ್ಲಿನ ಕಲಬೆರಕೆಯನ್ನು ತಡೆಗಟ್ಟುವುದು
    (3)    ಬ್ಯಾಂಕುಗಳ ಆಘಾತಗಳನ್ನೆದುರಿಸುವ ಸಾಮರ್ಥ್ಯವನ್ನು ಸುಧಾರಿಸುವುದು
    (4)    ಭಯೋತ್ಪಾದನೆಯಿಂದ ನಾಗರಿಕ ವಾಯುಯಾನಕ್ಕೆ ಉಂಟಾಗಿರುವ ಬೆದರಿಕೆಗಳ ನಿವಾರಣೆ ಮಾಡುವುದು

ಸರಿ ಉತ್ತರ

(3) ಬ್ಯಾಂಕುಗಳ ಆಘಾತಗಳನ್ನೆದುರಿಸುವ ಸಾಮರ್ಥ್ಯವನ್ನು ಸುಧಾರಿಸುವುದು


92. ಭಾರತೀಯ ರಿಸರ್ವ್ ಬ್ಯಾಂಕ್ ನ ತೆರೆದ ಮಾರುಕಟ್ಟೆಯ ಕಾರ್ಯಾಚರಣೆಗಳು ಇದಕ್ಕೆ ಸಂಬಂಧಿಸಿದೆ:

    (1)    ಷೇರುಗಳನ್ನು ಕೊಳ್ಳುವುದು ಮತ್ತು ಮಾರುವುದು
    (2)    ವಿದೇಶೀ ವಿನಿಮಯ ಹರಾಜು
    (3)    ಭದ್ರತೆಗಳಲ್ಲಿ ವ್ಯಾಪಾರ
    (4)    ಚಿನ್ನದ ವ್ಯವಹಾರ

ಸರಿ ಉತ್ತರ

(3) ಭದ್ರತೆಗಳಲ್ಲಿ ವ್ಯಾಪಾರ


93. ಒಂದು ಶ್ರೇಷ್ಠ ನ್ಯಾಯಾಲಯದಿಂದ ಜಾರಿಯಾದ ‘ರಿಟ್ ಆಫ್ ಮ್ಯಾಂಡಮಸ್
(ಆಜ್ಞಾಪತ್ರ)ವು

    (1)    ಒಬ್ಬ ವ್ಯಕ್ತಿ ಅಥವಾ ಸಾರ್ವಜನಿಕ ಪ್ರಾ ಕಾರವನ್ನು ಸಾರ್ವಜನಿಕ ಕರ್ತವ್ಯದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವಂತೆ ಆಜ್ಞೆ ಮಾಡುವುದು
    (2)    ಕಾನೂನು ಬದ್ಧತೆಯಿಲ್ಲದೆ ವಶದಲ್ಲಿರಿಸಿಕೊಂಡಿರುವ ವ್ಯಕ್ತಿಯನ್ನು 24 ಗಂಟೆಗಳ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದು
    (3)    ರಾಷ್ಟ್ರೀಯ ಹಿತಾಸಕ್ತಿಯ ಪ್ರಕರಣವೊಂದರ ವಿಚಾರಣೆಯನ್ನು ನಿಲ್ಲಿಸಲು ಒಬ್ಬ ವ್ಯಕ್ತಿ ಅಥವಾ ಸಾರ್ವಜನಿಕ ಪ್ರಾ ಕಾರಕ್ಕೆ ಆಜ್ಞೆ ಮಾಡುವುದು
    (4)    ಮೇಲಿನ ಎಲ್ಲಾ ಪ್ರಕರಣಗಳಿಗೂ

ಸರಿ ಉತ್ತರ

(1) ಒಬ್ಬ ವ್ಯಕ್ತಿ ಅಥವಾ ಸಾರ್ವಜನಿಕ ಪ್ರಾಧಿಕಾರವನ್ನು ಸಾರ್ವಜನಿಕ ಕರ್ತವ್ಯದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವಂತೆ ಆಜ್ಞೆ ಮಾಡುವುದು


94. ಈ ಕೆಳಗಿನವುಗಳಲ್ಲಿ ಯಾವುದನ್ನು ಭಾರತೀಯ ಪೌರರ ಕರ್ತವ್ಯವೆಂದು ತಪ್ಪಾಗಿ ಪಟ್ಟಿ ಮಾಡಲಾಗಿದೆ?

    (1)    ರಾಷ್ಟ್ರದ ಸಾರ್ವಭೌಮತ್ವ ಐಕ್ಯತೆ ಮತ್ತು ಸಮಗ್ರತೆಗಳನ್ನು ಎತ್ತಿ ಹಿಡಿಯುವುದು ಮತ್ತು ರಕ್ಷಿಸುವುದು
    (2)    ಭಾರತೀಯ ಜನತೆಯಲ್ಲಿ ಸಾಮಾನ್ಯ ಭ್ರಾತೃತ್ವದ ಸ್ಪೂರ್ತಿಯನ್ನು ಮತ್ತು ಸಾಮರಸ್ಯವನ್ನು ವೃದ್ಧಿಸುವುದು
    (3)    ಕುಟುಂಬ ಯೋಜನೆಯ ಪಾಲಿಸುವಿಕೆ ಮತ್ತು ಜನಸಂಖ್ಯಾ ನಿಯಂತ್ರಣ
    (4)    ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಮತ್ತು ಕಾಪಾಡುವುದು

ಸರಿ ಉತ್ತರ

(3) ಕುಟುಂಬ ಯೋಜನೆಯ ಪಾಲಿಸುವಿಕೆ ಮತ್ತು ಜನಸಂಖ್ಯಾ ನಿಯಂತ್ರಣ


95. 2014ರ ಆಂಧ್ರ ಪ್ರದೇಶ್ ಪುನರ್ ರಚನೆ ಕಾಯ್ದೆಯ ಮೇರೆಗೆ ಹೈದರಾಬಾದ್ ಅನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳೆರಡಕ್ಕೂ (ಒಂದೇ) ಸಾಮಾನ್ಯ ರಾಜಧಾನಿಯೆಂದು ಎಷ್ಟು ವರ್ಷಗಳವರೆಗೆ ಗ್ರಹಿಸಲಾಗಿತ್ತು?

    (1)    5 ವರ್ಷಗಳು
    (2)    7 ವರ್ಷಗಳು
    (3)    10 ವರ್ಷಗಳು
    (4)    12 ವರ್ಷಗಳು

ಸರಿ ಉತ್ತರ

(3) 10 ವರ್ಷಗಳು


96. ರಾಷ್ಟ್ರಪತಿಗಳು ಈ ಸಂದರ್ಭಗಳಿದ್ದಾಗ ಮಾತ್ರ ಸುಗ್ರೀವಾಜ್ಞೆಯನ್ನು ಸಾರಬಹುದು?

    (1)    ಪಾರ್ಲಿಮೆಂಟ್ ನ ಎರಡೂ ಸದನಗಳ ನಡುವೆ ಒಮ್ಮತವಿಲ್ಲದಿದ್ದಾಗ
    (2)    ಒಂದು ವರ್ಷಕ್ಕೂ ಹೆಚ್ಚು ಕಾಲ ಮಸೂದೆಯು ಪಾರ್ಲಿಮೆಂಟ್ ನಲ್ಲಿ ತಡೆಹಿಡಿಯಲ್ಪಟ್ಟಿದ್ದರೆ
    (3)    ಪಾರ್ಲಿಮೆಂಟು ಅಧಿವೇಶನದಲ್ಲಿಲ್ಲದಿದ್ದರೆ
    (4)    ರಾಷ್ಟ್ರಪತಿಗಳಿಂದ ಮಸೂದೆಯು ಪ್ರಾಯೋಜಿತವಾಗಿದ್ದು, ಆದರೆ ಪಾರ್ಲಿಮೆಂಟ್ ನಿಂದ ಇದು ತಿರಸ್ಕೃತವಾಗಿದ್ದಲ್ಲಿ

ಸರಿ ಉತ್ತರ

(3) ಪಾರ್ಲಿಮೆಂಟು ಅಧಿವೇಶನದಲ್ಲಿಲ್ಲದಿದ್ದರೆ


97. ಹಣದುಬ್ಬರವನ್ನು ತೆರಿಗೆ ಪದ್ಧತಿಯ ಹಿಂಚಲನೆಯ ರೂಪ ಎನ್ನಲಾಗಿದೆ. ಏಕೆಂದರೆ?

    (1)    ಇದು ಆಮದುಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಆಮದುಗಳನ್ನು ಆಕರ್ಷಣೀಯಗೊಳಿಸುವುದು
    (2)    ಗುಣಮಟ್ಟದ ಖಚಿತತೆಗಾಗಿ, ರಫ್ತು ಸರಕುಗಳನ್ನು ಪರಿಶೀಲನೆ ಮಾಡುವುದು
    (3)    ವಿದೇಶೀ ರಾಜ್ಯಗಳಲ್ಲಿ ಜಂಟಿ ಸಾಹಸೋದ್ಯಮಗಳಿಗೆ ಹಣಕಾಸು
    (4)    ವಿದೇಶಿಗಳಲ್ಲಿ ಜಂಟಿ ಸಾಹಸೋದ್ಯಮಗಳ ಶೇರು ಬಂಡವಾಳಗಳಲ್ಲಿ ತೊಡಗಿಕೊಳ್ಳಲು ಭಾರತೀಯ ಪಕ್ಷಗಳಿಗೆ ಸಾಲಗಳನ್ನು ಒದಗಿಸುವುದು

ಸರಿ ಉತ್ತರ

(4) ವಿದೇಶಿಗಳಲ್ಲಿ ಜಂಟಿ ಸಾಹಸೋದ್ಯಮಗಳ ಶೇರು ಬಂಡವಾಳಗಳಲ್ಲಿ ತೊಡಗಿಕೊಳ್ಳಲು ಭಾರತೀಯ ಪಕ್ಷಗಳಿಗೆ ಸಾಲಗಳನ್ನು ಒದಗಿಸುವುದು


98. ಈ ಕೆಳಗಿನವುಗಳಲ್ಲಿ ಯಾವುದು ಭಾರತೀಯ ಎಕ್ಸಿಂ ಬ್ಯಾಂಕ್ ನ ಕಾರ್ಯವಲ್ಲ?

    (1)    ಸರಕು ಮತ್ತು ಸೇವೆಗಳ ರಫ್ತು ಮತ್ತು ಆಮದುಗಳಿಗಾಗಿ ಹಣಕಾಸು
    (2)    ಗುಣಮಟ್ಟದ ಭರವಸೆಗಾಗಿ, ರಫ್ತಾಗುವ ಸರಕುಗಳ ತಪಾಸಣೆ
    (3)    ವಿದೇಶಗಳಲ್ಲಿ ಜಂಟಿ ಉದ್ಯಮಗಳಿಗಾಗಿ ಹಣಕಾಸು
    (4)    ವಿದೇಶಗಳಲ್ಲಿ ಜಂಟಿ ಉದ್ಯಮಗಳ ಬಂಡವಾಳವನ್ನು ಹಂಚಿಕೊಳ್ಳಲು ಭಾರತೀಯ ಪಕ್ಷಗಳಿಗೆ ಸಾಲದು

ಸರಿ ಉತ್ತರ

(2) ಗುಣಮಟ್ಟದ ಭರವಸೆಗಾಗಿ, ರಫ್ತಾಗುವ ಸರಕುಗಳ ತಪಾಸಣೆ


99. ಕೆಳಗಿನ ಎರಡು ಹೇಳಿಕೆಗಳನ್ನು ಪರಿಗಣಿಸಿ:
    A.     ಭದ್ರಾವತಿ ಐರನ್ ಮತ್ತು ಸ್ಟೀಲ್ ಕಾರ್ಖಾನೆಯು ಖಾಸಗಿ ಕಂಪನಿಯಾಗಿ ಪ್ರಾರಂಭವಾಯಿತು.
    B.     ಇದನ್ನು ‘‘ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಕಂಪನಿ ಲಿಮಿಟೆಡ್ (ವಿ.ಐ.ಎಸ್.ಎಲ್.) ಎಂದು ಪ್ರಾರಂಭಿಸಲಾಯಿತು.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:

    (1)    A ಮಾತ್ರ
    (2)    B ಮಾತ್ರ
    (3)    A ಮತ್ತು B ಎರಡೂ
    (4)    A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(1) A ಮಾತ್ರ


100. ಕೆಳಗಿನ ಸಮಿತಿಗಳಲ್ಲಿ ಯಾವುದು ವಿವಿಧ ಸಚಿವಾಲಯಗಳ ಬಜೆಟ್ ಪ್ರಸ್ತಾವಗಳನ್ನು ಪರಿಶೀಲಿಸುತ್ತದೆ?

    (1)    ಅಂದಾಜು ಸಮಿತಿ
    (2)    ಪಬ್ಲಿಕ್ ಅಕೌಂಟ್ಸ್ ಕಮಿಟಿ
    (3)    ನಿಯಮಗಳ ಸಮಿತಿ
    (4)    ಸಾರ್ವಜನಿಕ ಉಸ್ತುವಾರಿಗಳ ಸಮಿತಿ

ಸರಿ ಉತ್ತರ

(1) ಅಂದಾಜು ಸಮಿತಿ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment